ಖಾಂಡವಿ
ಮೂಲ | |
---|---|
ಮೂಲ ಸ್ಥಳ | ಭಾರತ |
ಪ್ರಾಂತ್ಯ ಅಥವಾ ರಾಜ್ಯ | ಗುಜರಾತ್, ಮಹಾರಾಷ್ಟ್ರ |
ವಿವರಗಳು | |
ಮುಖ್ಯ ಘಟಕಾಂಶ(ಗಳು) | ಕಡಲೆ ಹಿಟ್ಟು, ಮೊಸರು[೧] |
ಖಾಂಡವಿ (ಸುರಳೀಚಿ ವಡಿ) ಮಹಾರಾಷ್ಟ್ರ ಮತ್ತು ಗುಜರಾತ್ ನ ಪಾಕಶೈಲಿಯಲ್ಲಿನ ಒಂದು ಖಾರದ ಲಘು ಆಹಾರ.[೨][೩] ಇದು ಹಳದಿ, ಬಿಗಿಯಾಗಿ ಸುತ್ತಲಾದ ತುತ್ತು ಗಾತ್ರದ ತುಂಡುಗಳನ್ನು ಹೊಂದಿರುತ್ತದೆ ಮತ್ತು ಇದನ್ನು ಪ್ರಧಾನವಾಗಿ ಕಡಲೆಹಿಟ್ಟು ಮತ್ತು ಮೊಸರಿನಿಂದ ತಯಾರಿಸಲಾಗುತ್ತದೆ.
ಖಾಂಡವಿ ಭಾರತದಾದ್ಯಂತ ಸುಲಭವಾಗಿ ಲಭ್ಯವಿದೆ ಮತ್ತು ಸಾಮಾನ್ಯವಾಗಿ ಕ್ಷುಧಾವರ್ಧಕ ಅಥವಾ ಲಘು ಆಹಾರವಾಗಿ ತಿನ್ನಲ್ಪಡುತ್ತದೆ. ಅನೇಕ ಜನರು ಇದನ್ನು ಮನೆಯಲ್ಲಿ ತಯಾರಿಸುವ ಬದಲು ಸ್ಥಳೀಯ ಅಂಗಡಿಗಳಿಂದ ಖರೀದಿಸಲು ಇಷ್ಟಪಡುತ್ತಾರೆ. ಇದನ್ನು ಕೆಲವೊಮ್ಮೆ ಬೆಳ್ಳುಳ್ಳಿ ಚಟ್ನಿಯೊಂದಿಗೆ ಬಡಿಸಲಾಗುತ್ತದೆ.[೪]
ತಯಾರಿಕೆ
[ಬದಲಾಯಿಸಿ]ಖಾಂಡವಿಯನ್ನು ಸಾಮಾನ್ಯವಾಗಿ ಕಡಲೆಹಿಟ್ಟು ಮತ್ತು ಮೊಸರು ಸೇರಿಸಿದ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಇದಕ್ಕೆ ಶುಂಠಿ ಪೇಸ್ಟ್, ಉಪ್ಪು, ನೀರು, ಅರಿಶಿನ, ಮತ್ತು ಕೆಲವೊಮ್ಮೆ ಹಸಿರು ಮೆಣಸಿನಕಾಯಿಯನ್ನು ಸೇರಿಸಲಾಗುತ್ತದೆ. ಈ ಹಿಟ್ಟನ್ನು ಗಟ್ಟಿ ಪೇಸ್ಟ್ ಆಗುವವರೆಗೆ ಬೇಯಿಸಲಾಗುತ್ತದೆ ಮತ್ತು ಆಮೇಲೆ ಚಪ್ಪಟೆ ಮೇಲ್ಮೈ ಮೇಲೆ ತೆಳುವಾಗಿ ಹರಡಲಾಗುತ್ತದೆ.[೫] ಆಮೇಲೆ ಖಾಂಡವಿಗಳನ್ನು ೨-೩ ಸೆ.ಮಿ. ಗಾತ್ರದ ತುಂಡುಗಳಾಗಿ ಬಿಗಿಯಾಗಿ ಸುತ್ತಲಾಗುತ್ತದೆ.[೩] ಖಾಂಡವಿ ಸಾಮಾನ್ಯವಾಗಿ ತುತ್ತು ಗಾತ್ರದ್ದಾಗಿರುತ್ತದೆ. ಇದನ್ನು ಸಂಬಾರ ಪದಾರ್ಥಗಳು ಮತ್ತು ತುರಿದ ಗಿಣ್ಣು, ಚಟ್ನಿ, ಅಥವಾ ಕೆಚಪ್‍ನಂತಹ ವ್ಯಂಜನಗಳಿಂದ ಅಲಂಕರಿಸಬಹುದು. ಇದನ್ನು ಬಿಸಿಯಾಗಿ ಅಥವಾ ತಣ್ಣಗೆ ಬಡಿಸಬಹುದು.
ಉಲ್ಲೇಖಗಳು
[ಬದಲಾಯಿಸಿ]- ↑ Laveesh, Bhandari (1 January 2009). "Indian States at a Glance 2008-09: Performance, Facts and Figures - Gujarat". Pearson Education India. Retrieved 6 May 2017 – via Google Books.
- ↑ "Suralichi Vadi|Maharashtrian Recipes". Maharashtrian Recipes (in ಅಮೆರಿಕನ್ ಇಂಗ್ಲಿಷ್). 2016-04-14. Retrieved 2017-11-27.
- ↑ ೩.೦ ೩.೧ MySpicyKitchen. "A snack from Gujarat, Khandvi". MySpicyKitchen. Retrieved October 21, 2011.
- ↑ Laveesh, B. (2009). Indian States at a Glance 2008-09: Performance, Facts and Figures - Gujarat. Pearson Education. p. 36. ISBN 978-81-317-2342-5. Retrieved October 26, 2017.
- ↑ "Masala Cook:: Indian Food, Indian Cooking, Indian Recipes & More. (n.d.)". Retrieved April 1, 2014.