ಖಪ್ರಜೀರುಂಡೆ
ಟ್ರೋಗೊಡರ್ಮ ಗ್ರನೇರಿಯಮ್ | |
---|---|
ಪ್ರೌಢ ಖಪ್ರಜೀರುಂಡೆ | |
ಖಪ್ರಜೀರುಂಡೆಯ ಡಿಂಬಗಳು | |
Scientific classification | |
ಕ್ಷೇತ್ರ: | Eukaryota |
ಸಾಮ್ರಾಜ್ಯ: | Animalia |
ವಿಭಾಗ: | ಆರ್ಥ್ರೊಪೋಡಾ |
ವರ್ಗ: | ಇನ್ಸೆಕ್ಟಾ |
ಗಣ: | ಕೋಲಿಯಾಪ್ಟೆರಾ |
ಕುಟುಂಬ: | ಡರ್ಮಸ್ಟಿಡೀ |
ಕುಲ: | ಟ್ರೋಗೊಡರ್ಮ |
ಪ್ರಜಾತಿ: | ಟ. ಗ್ರನೇರಿಯಮ್
|
Binomial name | |
ಟ್ರೋಗೊಡರ್ಮ ಗ್ರನೇರಿಯಮ್ Everts, 1898
|
ಖಪ್ರಜೀರುಂಡೆ ಕೀಟ ವರ್ಗದ ಕೋಲಿಯಾಪ್ಟರ ಗಣದ ಡರ್ಮಸ್ಟಿಡೀ ಕುಟುಂಬಕ್ಕೆ ಸೇರಿದ ಕೀಟ. ವೈಜ್ಞಾನಿಕ ಹೆಸರು ಟ್ರೋಗೊಡರ್ಮ ಗ್ರನೇರಿಯಮ್.
ದೇಹರಚನೆ
[ಬದಲಾಯಿಸಿ]ಪ್ರೌಢಾವಸ್ಥೆಯ ಜೀರುಂಡೆ ಅಂಡಾಕಾರದ ಮತ್ತು ಕೆಂಪು ಮಿಶ್ರಿತ ಕಂದುಬಣ್ಣದ ಇಲ್ಲವೆ ಕಪ್ಪುಬಣ್ಣದ ಕೀಟ.[೧] ರೆಕ್ಕೆಗಳ ಮೇಲೆ ಮಸುಕಾದ ಗುರುತುಗಳಿವೆ. ಹೆಣ್ಣು ಜೀರುಂಡೆ ಗಂಡಿಗಿಂತ ದೊಡ್ಡದು; ಸುಮಾರು 2.5 ಮಿ.ಮೀ. ಉದ್ದ ಇರುತ್ತದೆ. ಖಪ್ರ ಜೀರುಂಡೆ ಸುಮಾರು 125 ಮೊಟ್ಟೆಗಳನ್ನಿಡುತ್ತದೆ. ಇವು ಒಡೆದು ಬಹುರೋಮಮಯವಾದ ಡಿಂಬಗಳು ಹೊರಬರುತ್ತವೆ. ಡಿಂಬಗಳ ಕೂದಲಿನ ಬಣ್ಣ ಮಿಶ್ರಿತ ಕಂದು. ಕೂದಲುಗಳು ದೇಹದ ಮೇಲೆಲ್ಲ ಅಲ್ಲಲ್ಲಿ ಕುಚ್ಚುಗಟ್ಟಿರುತ್ತವಲ್ಲದೆ ದೇಹದ ಹಿಂತುದಿಯಲ್ಲಿ ಒಂದು ರೀತಿಯ ಬಾಲದಂತಹ ಅಂಗವನ್ನು ಹೊಂದಿದೆ.
ಕಾಲಕಾಲಕ್ಕೆ ಡಿಂಬಗಳು ಪೊರೆ ಕಳಚುತ್ತವೆ. ಹೀಗೆ ತ್ಯಜಿಸಲ್ಪಟ್ಟ ಪೊರೆಗಳಿಂದ ಜೀರುಂಡೆಯನ್ನು ಪತ್ತೆ ಹಚ್ಚಬಹುದು. ಅಲ್ಲದೆ ಇವುಗಳ ಸಂಖ್ಯೆ ಹೆಚ್ಚಾದಾಗ ಡಿಂಬಗಳು ಉಗ್ರಾಣಗಳ ಗೋಡೆಯ ಮೇಲೆ ಹರಿದುಹೋಗುವುದನ್ನು ಗಮನಿಸಬಹುದು. ಡಿಂಬಗಳು ಯಾವ ಬಗೆಯ ಕೀಟನಾಶಕಕ್ಕಾಗಲಿ, ಹೆಚ್ಚಿನ ಉಷ್ಣತೆ ಆರ್ದ್ರತೆಗಳಿಗಾಗಲೀ ಬಗ್ಗುವುದಿಲ್ಲ. ಅಲ್ಲದೆ ಹಲವಾರು ತಿಂಗಳುಗಳು ಆಹಾರವಿಲ್ಲದೆ ಇರಬಲ್ಲವು.[೨] ಹೀಗಾಗಿ ಇವುಗಳ ನಿವಾರಣೆ ಕಷ್ಟಸಾಧ್ಯ.
ಪಿಡುಗಾಗಿ
[ಬದಲಾಯಿಸಿ]ಭಾರತದ ಧಾನ್ಯಾಗಾರಗಳಲ್ಲಿ ಕಾಣಿಸಿಕೊಳ್ಳುವ ಮುಖ್ಯ ಕೀಟಪಿಡುಗುಗಳಲ್ಲೊಂದು.[೩] ಭಾರತದ ಎಲ್ಲ ಪ್ರದೇಶಗಳಲ್ಲಿ ಇದೆಯಾದರೂ ಕಡಲತೀರ ಪ್ರದೇಶಗಳಿಗೆ ಹೋಲಿಸಿದರೆ ಒಳನಾಡಿನಲ್ಲಿ ಇದರ ಹಾವಳಿ ಹೆಚ್ಚು. ಇದರ ವಿಚಿತ್ರ ಲಕ್ಷಣವೆಂದರೆ ಪ್ರೌಢಾವಸ್ಥೆಯಲ್ಲಿ ಇವು ನಿರಪಾಯಕಾರಿ. ಡಿಂಬ ಮಾತ್ರ ಧಾನ್ಯವನ್ನು ನಾಶಪಡಿಸುತ್ತದೆ.
ನಿವಾರಣೆ
[ಬದಲಾಯಿಸಿ]ಡಿಂಬಾವಸ್ಥೆಯಿಂದ ಕೋಶಾವಸ್ಥೆಯನ್ನು ಸೇರುವ ಸಮಯದಲ್ಲಿ ಇವುಗಳ ನಿರೋಧಶಕ್ತಿ ಅಳಿದು ಹೋಗುತ್ತದೆ. ಈ ಹಂತದಲ್ಲಿ ಇವನ್ನು ನಿವಾರಿಸಬಹುದು. 1-3 ವಾರಗಳ ಕೋಶಾವಸ್ಥೆಯ ನಂತರ ಡಿಂಬಗಳು ಪ್ರೌಢ ಜೀರುಂಡೆಗಳಾಗುತ್ತವೆ. ಡಿಂಬಗಳು ಧಾನ್ಯಗಳ ಮೊಳಕೆ ಭಾಗವನ್ನು ತಿನ್ನುವುದೇ ಹೆಚ್ಚು. ಆದ್ದರಿಂದ ಧಾನ್ಯದ ಆಹಾರಾಂಶವೇನೂ ಕಡೆಮೆಯಾಗದಾದರೂ ಕಾಳು ಬಿತ್ತುವುದಕ್ಕೆ ಅನುಪಯುಕ್ತವಾಗುತ್ತದೆ. ಬೇರೆ ಜೀರುಂಡೆಗಳಿಗೆ ಹೋಲಿಸಿದರೆ ಖಪ್ರಜೀರುಂಡೆಯ ಹತೋಟಿ ಕಷ್ಟವಾದರೂ ಉಗ್ರಾಣದಲ್ಲಿನ ಆಕ್ಸಿಜನ್ ಪ್ರಮಾಣವನ್ನು ಕಡಿಮೆ ಮಾಡುವುದರಿಂದ ಇದನ್ನು ನಾಶಪಡಿಸಬಹುದು.
ಉಲ್ಲೇಖಗಳು
[ಬದಲಾಯಿಸಿ]- ↑ Canadian Food Inspection Agency Trogoderma Granarium Factsheet (http://www.inspection.gc.ca/plants/plant-pests-invasive-species/insects/khapra-beetle/fact-sheet/eng/1328541793480/1328541924086)
- ↑ University of Florida Food & Agricultural Services
- ↑ Stibick, J. (2007) New Pest Response Guidelines: Khapra Beetle Archived 2008-09-20 ವೇಬ್ಯಾಕ್ ಮೆಷಿನ್ ನಲ್ಲಿ. APHIS–PPQ–Emergency and Domestic Programs, United States Department of Agriculture, Riverdale, Maryland, p. 1-1
ಹೊರಗಿನ ಕೊಂಡಿಗಳು
[ಬದಲಾಯಿಸಿ]- Dermestidae of the World Habitus of male and female, genitalia of male.
- Khapra beetle at Pestproducts.com Archived 2013-09-24 ವೇಬ್ಯಾಕ್ ಮೆಷಿನ್ ನಲ್ಲಿ.
- PestTracker Invasive Insect: Khapra beetle at Center for Environmental and Regulatory Information Systems
- Trogoderma granarium (TROGGA)[Documents]| EPPO Global Database Documents from EPPO (European and Mediterranean Plant Protection Organization)