ಪ್ಯೂಪಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಂದ್ರನುಸಿಯ ಕೋಶ ಮತ್ತು ಪ್ಯೂಪಾ

ಪ್ಯೂಪಾ ಎಂದರೆ ಪೂರ್ಣರೂಪಾಂತರ ಹೊಂದುವ ಕೀಟಗಳ ಜೀವನಚರಿತ್ರೆಯ ಒಂದು ಹಂತ. ಈ ಹಂತದಲ್ಲಿ ಕೀಟಚಟುವಟಿಕೆಯಿರುವುದಿಲ್ಲ: ಮರಿಯ ಅಂಗಗಳು ಪ್ರಬುದ್ಧಾವಸ್ಥೆಯ ಅಂಗಗಳಾಗಿ ಮಾರ್ಪಾಟಾಗುತ್ತವೆ. ಇವುಗಳ ಆಕಾರದಲ್ಲಿ ತುಂಬ ವ್ಯತ್ಯಾಸವನ್ನು ಕಾಣಬಹುದು. ಈ ಹಂತದಲ್ಲಿ ಕೆಲವು ಜಾತಿಯ ಕೀಟಗಳು ತಮ್ಮ ಸುತ್ತ ಒಂದು ಆವರಣ/ಕೋಶವನ್ನು ರಚಿಸಿಕೊಳ್ಳುತ್ತವೆ. ಮುಖ್ಯವಾದ ಪ್ಯೂಪಾಗಳು ಇಂತಿವೆ:

1 ಪ್ರಿಮಿಟಿವ್: ಪ್ಯೂಪಾ ಲೈಬೀರ ಎಂಬ ಹೆಸರಿನಿದು ಸರಳ. ಹೊದಿಕೆ ಇಲ್ಲ. ಉಪಾಂಗಗಳು ಕಾಣಿಸುತ್ತಿದ್ದು, ಪೌಢ ಕೀಟವನ್ನೇ ಹೋಲುತ್ತದೆ. ಕೆಲವು ಕುಟುಂಬಗಳಲ್ಲಿ ಕೊನೆಯ ಸಲ ಪೊರೆ ಬಿಡುವುದಕ್ಕೆ ಮುಂಚೆ ಇವು ಚುರುಕಾಗುವುವು. ಉದಾ: ನ್ಯೂರಾಪ್ಟೆರ, ಮೀಕಾಪ್ಟೆರ, ಟ್ರೈಕಾಪ್ಟೆರ, ಕೋಲಿಯಾಪ್ಟರ, ಡಿಪ್ಟರ, ಲೆಪಿಡಾಪ್ಟರ, ಹೈಮಿನಾಪ್ಟರ.

2. ಜಟಿಲ: ಅಪೂರ್ಣ ಕೋಶ. ಕೋಶದ ಹೊಟ್ಟೆ ಚಲಿಸಬಲ್ಲುದು: ಉಪಾಂಗಗಳು ಬೇರೆ ಬೇರೆ ಒರೆಗಳಲ್ಲಿರುತ್ತವೆ. ಉದಾ: ಸೊಳ್ಳೆಗಳ ಕೋಶ, ಟಂಬ್ಲರ್ ಮಶಕಗಳು, ಕೆಲವು ತೆರನ ಡಿಪ್ಟರ, ಲೆಪಿಡಾಪ್ಟರ ಮತ್ತು ಕೋಲಿಯಾಪ್ಟರ.

ಅ. ಪ್ಯೂಪ ಆಬ್ಟೆಕ್ಟ: ಉಪಾಂಗಗಳೆಲ್ಲ ಒಟ್ಟು ಸೇರಿರುತ್ತವೆ ಅಥವಾ ಕೋಶದ ಶರೀರಕ್ಕೆ ಒತ್ತಿಕೊಂಡಿರುತ್ತವೆ. ಇವುಗಳ ಮೇಲೆ ಚರ್ಮದ ಪೊರೆ ಇದೆ. ಚಲನೆ ಇಲ್ಲ. ಒಂದು ತುದಿಯಲ್ಲಿ ಕ್ರಿಮಾಸ್ಟರ್ ಎಂಬ ಮುಳ್ಳಿದೆ. ಉದಾ; ಲೆಪಿಡಾಪ್ಟರ.

ಆ: ಪ್ಯೂಪ ಕೊಆರ್ಕ್‌ಟೇಟ: ಕೊನೆಯ ಚರ್ಮದ ಪೋರೆಯಲ್ಲಿ ಪ್ರಾಯದ ಕೀಟ ಅಡಗಿದ್ದು ಹೊರಕ್ಕೆ ಬರುತ್ತದೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಪ್ಯೂಪಾ&oldid=1073870" ಇಂದ ಪಡೆಯಲ್ಪಟ್ಟಿದೆ