ಕ್ರಿಯಾಟಿನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕ್ರಿಯಾಟಿನ್
ಹೆಸರುಗಳು
Other names
ಗುಣಗಳು
ಆಣ್ವಿಕ ಸೂತ್ರ C4H7N3O
ಮೋಲಾರ್ ದ್ರವ್ಯರಾಶಿ ೧೧೩.೧೨ g mol−1
ಸಾಂದ್ರತೆ 1.09 g cm−3
ಕರಗು ಬಿಂದು

300 °C (decomposes)[೧]

ಕರಗುವಿಕೆ ನೀರಿನಲ್ಲಿ 1 part per 12[೧]
log P -1.76
ಅಮ್ಲತೆ (pKa) 12.309
ಪ್ರತ್ಯಾಮ್ಲತೆ (pKb) 1.688
Hazards
ಚಿಮ್ಮು ಬಿಂದು
(ಫ್ಲಾಶ್ ಪಾಯಿಂಟ್)
Except where otherwise noted, data are given for materials in their standard state (at 25 °C [77 °F], 100 kPa).

>

Infobox references


ಕ್ರೀಯಾಟ್ನಿನ್ (ಗ್ರೀಸ್‌ನ ಭಾಷೆಯ ಕ್ರೀಯಾಸ್ ಅಂದರೆ ಮಾಂಸ ಎಂಬ ಶಬ್ದದಿಂದ) ಸ್ನಾಯುವಲ್ಲಿನ ಕ್ರೀಯಟಿನ್ ಫಾಸ್ಫೇಟ್‌ನ ಒಂದು ವಿಭಜಿತ ಉತ್ಪನ್ನ, ಮತ್ತು ಸಾಮಾನ್ಯವಾಗಿ ಕ್ರಮಬದ್ಧವಾದ ಸ್ಥಿರ ಪ್ರಮಾಣದಲ್ಲಿ (ಸ್ನಾಯು ರಾಶಿಯನ್ನು ಅವಲಂಬಿಸಿ) ದೇಹದಿಂದ ಉತ್ಪತ್ತಿಯಾಗುತ್ತದೆ. ರಾಸಾಯನಿಕವಾಗಿ, ಕ್ರೀಯಾಟ್ನಿನ್ ಅಪ್ರಯತ್ನಿತವಾಗಿ ರಚನೆಯಾಗುವ ಕ್ರೀಯಟಿನ್‌ನ ಒಂದು ವರ್ತುಲಾಕಾರದ ನಿಷ್ಪನ್ನ. ಕ್ರೀಯಾಟ್ನಿನ್ ರಕ್ತದಿಂದಾಚೆಗೆ ಮುಖ್ಯವಾಗಿ ಮೂತ್ರಪಿಂಡಗಳಿಂದ ಬಸಿಯಲ್ಪಡುತ್ತದೆ, ಆದರೂ ಸಣ್ಣ ಪ್ರಮಾಣವು ಮೂತ್ರಪಿಂಡಗಳಿಂದ ಮೂತ್ರದಲ್ಲಿ ಸಕ್ರಿಯವಾಗಿ ಸ್ರವಿಸಲ್ಪಡುತ್ತದೆ.

ಕ್ರಿಯಾಟಿನ್ (ಮೀಥೈಲ್ ಗ್ವಾನಿಡಿನೋ ಅಸಿಟಿಕ್ ಆಮ್ಲ) ದೇಹದಲ್ಲಿ ಸಾರಜನಕದ ಚಯಾಪಚಯದ ಒಂದು ಅಂತಿಮ ವ್ಯುತ್ಪನ್ನ. ಆರೋಗ್ಯಶಾಲಿ ವಯಸ್ಕನ ಮೂತ್ರದಲ್ಲಿ ಬಹು ಸ್ವಲ್ಪ ಮೊತ್ತದಲ್ಲಿ ಮಾತ್ರ ಕಂಡುಬರುತ್ತದೆ. ಆದರೆ ಗರ್ಭಿಣಿಯರ ಮತ್ತು ಮಕ್ಕಳ ಮೂತ್ರದಲ್ಲಿ ಇದರ ಮೊತ್ತ ಹೆಚ್ಚು. ಆಹಾರ ಕೊರತೆಯಿಂದ ಮಾಂಸಖಂಡಗಳು ಜೀರ್ಣವಾಗಲು ಪ್ರಾರಂಭಿಸಿದಾಗ, ಇಲ್ಲವೇ ಜ್ವರಬಾಧೆ ಉಂಟಾದಾಗ, ಇಲ್ಲವೇ ಯಕೃತ್ತಿನ ಕ್ಯಾನ್ಸರಿನಲ್ಲಿ ಇದರ ಮೊತ್ತ ಮೂತ್ರದಲ್ಲಿ ಹೆಚ್ಚುತ್ತದೆ. ಇದು ಗಮನಾರ್ಹವಾಗಿ ಅಧಿಕವಾದ ಪರಿಸ್ಥಿತಿಗೆ ಕ್ರಿಯಾಟಿನೂರಿಯ ಎಂದು ಹೆಸರು. ದೇಹದಲ್ಲಿ ಕ್ರಿಯಾಟಿನಿನ ಸಂಶ್ಲೇಷಣೆ ಆಗುತ್ತದೆ. ಒಂದು ಕ್ರಿಯಾಶ್ರೇಣಿಯಲ್ಲಿ ಆರ್ಜಿನಿನ್ ತನ್ನ ಗ್ವಾನಿಡಿನೋ ಪುಂಜವನ್ನು ಗ್ಲೈಸಿನ್ನಿಗೆ ನೀಡುತ್ತದೆ. ಉತ್ಪತ್ತಿಯಾಗುವ ಮಧ್ಯವರ್ತಿ ಗ್ವಾನಿಡಿನೋ ಅಸಿಟಿಕ್ ಆಮ್ಲ ಕೋಲಿನ್ ಅಥವಾ ಮೆಥಿಯೋನ್ನಿನಿಂದ ಮೀಥೈಲ್ ಪುಂಜವನ್ನು ಪಡೆದು ಕ್ರಿಯಾಟನ್ನಿಗೆ ಪರಿವರ್ತನೆಯಾಗುತ್ತದೆ.

ಕ್ರಿಯಾಟಿನ್ ಫಾಸ್ಫೇಟ್ ರೂಪದಲ್ಲಿರುವ ಕ್ರಿಯಾಟಿನ್ ಮಾಂಸಖಂಡಗಳ ಸಂಕೋಚನ ಕ್ರಿಯೆಯಲ್ಲಿ ಶಕ್ತಿಯನ್ನು ಒದಗಿಸುವ ಒಂದು ಮೂಲ. ಜಡಮಾಂಸ ಖಂಡದಲ್ಲಿ ಕ್ರಿಯಾಟಿನ್ ಫಾಸ್ಫೇಟ್ ಸಂಯುಕ್ತದ ಮೊತ್ತ ಹೆಚ್ಚಾಗಿರುತ್ತದೆ. ಮಾಂಸ ಖಂಡದಲ್ಲಿ ಕ್ರಿಯಾಟಿನ್ ಕೈನೇಸ್ ಎಂಬ ಕಿಣ್ವವಿದೆ. ಶಕ್ತಿಯ ಅಗತ್ಯ ಉಂಟಾದಾಗ ಈ ಕಿಣ್ವ ಕೆಳಗಿನ ಕ್ರಿಯೆಯನ್ನು ವರ್ಧಿಸುತ್ತದೆ :

ಕ್ರಿಯಾಟಿನ್ ಫಾಸ್ಫೇಟ್ + ಎಡಿಪಿ ಕ್ರಿಯಾಟಿನ್ + ಎಟಿಪಿ ಉತ್ಪತ್ತಿಯಾಗುವ ಎಟಿಪಿ (ಅಡಿನೋಸಿನ್ ಟ್ರೈ ಫಾಸ್ಪೇಟ್) ಮಾಂಸಖಂಡಗಳ ಸಂಕೋಚನ ಕ್ರಿಯೆಗೆ ಬೇಕಾದ ಶಕ್ತಿಯನ್ನು ಒದಗಿಸುತ್ತದೆ.

ಕ್ರಿಯಾಟಿನ್ ನೀರಿನಲ್ಲಿ ವಿಲೀನವಾಗುತ್ತದೆ. ದ್ರಾವಣ ಅಸ್ಥಿರ ಮತ್ತು ನಿಧಾನವಾಗಿ ಅಣುವಿನಲ್ಲಿರುವ ಜಲಾಂಶದ ನಷ್ಟದಿಂದ ಅದರ ಅಜಲರೂಪ (ಅನ್‍ಹೈಡ್ರಸ್) ಕ್ರಿಯಾಟಿನ್ನಿಗೆ ಪರಿವರ್ತನೆಯಾಗುತ್ತದೆ. ದ್ರಾವಣವನ್ನು ಕಾಯಿಸಿದಾಗ ಇಲ್ಲವೆ ಆಮ್ಲದ ಇರವಿನಲ್ಲಿದ್ದಾಗ ಈ ಬದಲಾವಣೆ ಶೀಘ್ರವಾಗಿ ಜರುಗುತ್ತದೆ. ಈ ಕ್ರಿಯೆಯ ಆಧಾರದ ಮೇಲೆ ಕ್ರಿಯಾಟಿನ್ನನ್ನು ಪರಿಮಾಣಾತ್ಮಕವಾಗಿ ನಿರ್ಧರಿಸುವ ವಿಧಾನವೊಂದನ್ನು ರೂಪಿಸಲಾಗಿದೆ.

ಕ್ರಿಯಾಟಿನಿನ್ ಕ್ರಿಯಾಟಿನ್ನಿನ ಅಜಲ. ಮಾನವನ ಮೂತ್ರದಲ್ಲಿ ತಪ್ಪದೆ ಕಂಡು ಬರುವ ವಸ್ತು. ಸಾಧಾರಣ ಪರಿಸ್ಥಿತಿಯಲ್ಲಿ ಒಬ್ಬ ವಯಸ್ಕ ವ್ಯಕ್ತಿ 24 ಗಂಟೆಯ ಅವಧಿಯಲ್ಲಿ ಸುಮಾರು 1-1.8 ಗ್ರಾಮ್ ಕ್ರಿಯಾಟಿನಿನನ್ನು ವಿಸರ್ಜಿಸುತ್ತಾನೆ. ಈ ಮೊತ್ತ ಆತ ಸ್ವೀಕರಿಸುವ ಆಹಾರವನ್ನು ಸ್ವಲ್ಪಮಟ್ಟಿಗೆ ಅವಲಂಬಿಸುತ್ತದೆ. ಏಕೆಂದರೆ ತಿನ್ನುವ ಆಹಾರದಲ್ಲಿರಬಹುದಾದ ಕ್ರಿಯಾಟಿನಿನ್ ದೇಹದಲ್ಲಿ ಯಾವ ಬದಲಾವಣೆಗೂ ಒಳಗಾಗದೆ ಮೂತ್ರದಲ್ಲಿ ವಿಸರ್ಜಿತವಾಗುತ್ತದೆ. ಕ್ರಿಯಾಟಿನಿನ್ ನಿರ್ವರ್ಣವಾದ ಮತ್ತು ಹೊಳೆಯುವ ಹರಳುಗಳಂತೆ ಸ್ಫಟೀಕರಿಸುತ್ತದೆ. ಇದು ತಣ್ಣನೆಯ ನೀರಿಗಿಂತ ಬಿಸಿನೀರಿನಲ್ಲಿ ಹೆಚ್ಚಿಗೆ ವಿಲೀನವಾಗುತ್ತದೆ. ಸಾರ ಆಮ್ಲಗಳೊಂದಿಗೆ ವರ್ತಿಸಿ ಲವಣಗಳನ್ನೂ ಪಿಕ್ರಿಕ್ ಆಮ್ಲದೊಂದಿಗೆ ವರ್ತಿಸಿ ಕೆಂಪು ಬಣ್ಣವನ್ನೂ ಕೊಡುತ್ತದೆ. ಈ ಕ್ರಿಯೆಯ ಆಧಾರದ ಮೇಲೆ ಮೂತ್ರದಲ್ಲಿ ಕ್ರಿಯಾಟನಿನ್ ಮೊತ್ತವನ್ನು ಪರಿಮಾಣಾತ್ಮಕವಾಗಿ ಅಳೆಯುವ ವಿಧಾನವನ್ನು ರೂಪಿಸಲಾಗಿದೆ.

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ Merck Index, 11th Edition, 2571

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: