ವಿಷಯಕ್ಕೆ ಹೋಗು

ಕ್ಯಾಸ್ಸಿಟರೈಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕ್ಯಾಸ್ಸಿಟರೈಟ್
Cassiterite with muscovite, from Xuebaoding, Huya, Pingwu, Mianyang, Sichuan, China (size: 100 x 95 mm, 1128 g)
General
ವರ್ಗOxide minerals
ರಾಸಾಯನಿಕ ಸೂತ್ರSnO2
ಸ್ಟ್ರೋಂಝ್ ವರ್ಗೀಕರಣ04.DB.05
ಸ್ಫಟಿಕ ಸಮರೂಪತೆTetragonal 4/m 2/m 2/m
ಏಕಕೋಶa = 4.7382(4) Å, c = 3.1871(1) Å; Z=2
Identification
ಬಣ್ಣBlack, brownish black, reddish brown, red, yellow, gray, white; rarely colorless
ಸ್ಫಟಿಕ ಗುಣಲಕ್ಷಣPyramidic, prismatic, radially fibrous botryoidal crusts and concretionary masses; coarse to fine granular, massive
ಸ್ಫಟಿಕ ಪದ್ಧತಿTetragonal - Ditetragonal Dipyramidal 4/m 2/m 2/m
ಅವಳಿ ಸಂಯೋಜನೆVery common on {011}, as contact and penetration twins, geniculated; lamellar
ಸೀಳು{100} imperfect, {110} indistinct; partings on {111} or {011}
ಬಿರಿತSubconchoidal to uneven
ಜಿಗುಟುತನBrittle
ಮೋಸ್ ಮಾಪಕ ಗಡಸುತನ6–7
ಹೊಳಪುAdamantine to adamantine metallic, splendent; may be greasy on fractures
ಪುಡಿಗೆರೆWhite to brownish
ಪಾರದರ್ಶಕತೆTransparent when light colored, dark material nearly opaque; commonly zoned
ವಿಶಿಷ್ಟ ಗುರುತ್ವ6.98 - 7.1
ದ್ಯುತಿ ಗುಣಗಳುUniaxial (+)
ವಕ್ರೀಕರಣ ಸೂಚಿnω = 1.990 - 2.010 nε = 2.093 - 2.100
ದ್ವಿವಕ್ರೀಭವನδ = 0.103
ಬಹುವರ್ಣಕತೆPleochroic haloes have been observed. Dichroic in yellow, green, red, brown, usually weak, or absent, but strong at times
ಕರಗು ಗುಣinfusible
ಕರಗುವಿಕೆinsoluble
ಉಲ್ಲೇಖಗಳು[][][][]


ಕ್ಯಾಸ್ಸಿಟರೈಟ್ ತವರದ ಅದುರುಗಳಲ್ಲಿ ಅತಿಮುಖ್ಯವಾದುದು. ಇದರ ರಾಸಾಯನಿಕ ಸೂತ್ರ SnO2. ಇದರಲ್ಲಿ ತವರದ ಅಂಶ 78.7%.

ಲಕ್ಷಣಗಳು

[ಬದಲಾಯಿಸಿ]

ಇದು ಚತುಷ್ಕೋಣಾಕಾರದ ಹರಳುಗಳಂತೆ ಸಿಕ್ಕುತ್ತದೆ. ಸಾಮಾನ್ಯವಾಗಿ ಇದರ ಬಣ್ಣ ಅಚ್ಚ ಕಂದು, ಕಪ್ಪು; ಆಗಾಗ್ಗೆ ಹಸಿರು ಅಥವಾ ಕೆಂಪುಬಣ್ಣದ್ದೂ ದೊರೆಯಬಹುದು. ಒರೆಯ ಬಣ್ಣ ಬಿಳುಪು. ಹೊಳಪು ವಜ್ರದಂತಿದೆ. ಇದರ ಕಾಠಿಣ್ಯ 6.5-7 ಮತ್ತು ಸಾಪೇಕ್ಷಸಾಂದ್ರತೆ 3. ಖನಿಜ ತೂಕವಾಗಿರುವುದರಿಂದ ಮೆಕ್ಕಲು ನಿಕ್ಷೇಪಗಳಲ್ಲಿ ಸಂಚಿತವಾಗಿರುತ್ತದೆ.

ದೊರೆಯುವುದು

[ಬದಲಾಯಿಸಿ]

ಗ್ರಾನೈಟ್, ನೈಸ್, ಅಪ್ಲೈಟ್ ಅಥವಾ ಶಿಲಾಪಾಕದಿಂದ ಬೆಣಚುಕಲ್ಲಿನ ಸಿರಗಳು ಈ ಖನಿಜಕ್ಕೆ ತವರು. ಈ ಶಿಲೆಗಳು ಕ್ಷಯಿಸಿದಾಗ ಶಿಲೆಗಳಿಂದ ಖನಿಜ ಬೇರ್ಪಟ್ಟು ಮರಳಿನ ಆಕಾರದಲ್ಲಿ ಮೆಕ್ಕಲು ನಿಕ್ಷೇಪಗಳಲ್ಲಿ ಶೇಖರವಾಗುತ್ತದೆ. ಖನಿಜ ಸಿರಗಳಲ್ಲಿ ತವರದ ಪ್ರಮಾಣ ಸಾಮಾನ್ಯವಾಗಿ 1%-8% ಮತ್ತು ಮೆಕ್ಕಲು ನಿಕ್ಷೇಪಗಳಲ್ಲಿ ಪ್ರತಿ ಚದರ ಗಜಕ್ಕೆ 0.4-5 ಪೌಂಡುಗಳು ಇರುತ್ತದೆ.

ಉಪಯೋಗಗಳು

[ಬದಲಾಯಿಸಿ]

ಲೋಹಗಳಿಗೆ ಕಲಾಯ ಮಾಡಲು ತವರದ ಇನ್ನೊಂದು ಉಪಯೋಗ ಉಂಟು. ತವರ ಮಿಶ್ರಿತ ಲೋಹಗಳ ಉತ್ಪತ್ತಿ ತವರದ ಇನ್ನೊಂದು ಉಪಯೋಗ. ಅವುಗಳಲ್ಲಿ ಕಂಚು, ಹಿತ್ತಾಳೆ, ಬ್ಯಾಬಿಟ್‍ಲೋಹ, ಬ್ರಿಟಾನಿಯಂ ಲೋಹ ಮತ್ತು ಫಾಸ್‍ಫರ್ ಬ್ರಾಂಜ್ ಮುಖ್ಯವಾದವು. ಬಹಳವಾಗಿ ಕಲಾಯಿಮಾಡುವ ಮಿಶ್ರಲೋಹದ ತಯಾರಿಕೆಯಲ್ಲಿ ತವರವನ್ನು ಉಪಯೋಗಿಸುತ್ತಾರೆ. ಇದರ ಕ್ಲೋರೈಡ್‍ಗಳನ್ನು ನೇಯ್ಗೆ ಉದ್ಯಮಗಳಲ್ಲಿ ಬಟ್ಟೆಗಳಿಗೆ ಬಣ್ಣಹಾಕುವುದಕ್ಕೂ ಬಟ್ಟೆಗಳ ಮೇಲೆ ಅಚ್ಚು ಹಾಕುವುದಕ್ಕೂ ಬಳಸುತ್ತಾರೆ. ತವರದ ಆಮ್ಲವನ್ನು ಪಿಂಗಾಣಿ ಉದ್ಯಮಗಳಲ್ಲಿ ಉಪಯೋಗಿಸುತ್ತಾರೆ.

ಭಾರತದಲ್ಲಿ

[ಬದಲಾಯಿಸಿ]

ಕ್ಯಾಸ್ಸಿಟರೈಟ್ ಬಿಹಾರಿನ ಹಜಾರಿಬಾಗ್, ಗಯಾ, ರಾಂಚಿ ಜಿಲ್ಲೆಗಳಲ್ಲಿಯೂ ಗುಜರಾತಿನ ಬನಸ್‍ಕಾಂಧ ಜಿಲ್ಲೆಯಲ್ಲಿಯೂ ರಾಜಸ್ಥಾನದ ಬಿಲ್‍ವಾರಿ ಜಿಲ್ಲೆಯಲ್ಲಿಯೂ ಸ್ವಲ್ಪ ಮೊತ್ತದಲ್ಲಿ ಸಿಗುತ್ತದೆ. ಕರ್ನಾಟಕ ರಾಜ್ಯದ ಧಾರವಾಡ ಜಿಲ್ಲೆಯ ಕಪ್ಪತಗುಡ್ಡದ ಉತ್ತರಭಾಗದ ಮೆಕ್ಕಲು ಮಣ್ಣಿನಲ್ಲಿ ಕ್ಯಾಸ್ಸಿಟರೈಟ್ ದೊರೆಯುವುದೆಂದು ವರದಿಯಾಗಿದೆ. ಆದರೆ ಸಾಕಾದಷ್ಟು ಮೊತ್ತದಲ್ಲಿ ಶೇಖರವಾಗಿಲ್ಲ. ಈಗ ಭಾರತಕ್ಕೆ ಬೇಕಾಗುವ ತವರ ಆಮದಾಗುತ್ತಿದೆ. ಪ್ರಪಂಚದ ಮುಖ್ಯವಾದ ತವರದ ಗಣಿಗಳಿರುವ ಪ್ರದೇಶಗಳಿವು: ಮಲಯ ಸಂಸ್ಥಾನಗಳು (30%). ಮಲಯದ ದಕ್ಷಿಣಕ್ಕೆ ಇರುವ ಬಂಕ, ಬಿಲ್ಲಿಟನ್ ಮತ್ತು ಸಿಂಗ್‍ಕೆಪ್ ದ್ವೀಪಗಳು (24%). ಬೊಲಿವಿಯ, ನೈಜೀರಿಯ ಮತ್ತು ಯುನ್ನಾರ್ (23%).

ಉಲ್ಲೇಖಗಳು

[ಬದಲಾಯಿಸಿ]
  1. Handbook of Mineralogy
  2. Mindat
  3. Webmineral
  4. Hurlbut, Cornelius S.; Klein, Cornelis (1985). Manual of Mineralogy (20th ed.). New York: John Wiley and Sons. pp. 306–307. ISBN 0-471-80580-7.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: