ವಿಷಯಕ್ಕೆ ಹೋಗು

ಕೆ. ಎಸ್. ನರಸಿಂಹಸ್ವಾಮಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಕೆ.ಎಸ್. ನರಸಿಂಹಸ್ವಾಮಿ ಇಂದ ಪುನರ್ನಿರ್ದೇಶಿತ)
ಕೆ. ಎಸ್. ನರಸಿಂಹಸ್ವಾಮಿ
ಜನನ(೧೯೧೫-೦೧-೨೬)೨೬ ಜನವರಿ ೧೯೧೫
ಕಿಕ್ಕೇರಿ, ಮಂಡ್ಯ ಜಿಲ್ಲೆ, ಮೈಸೂರು ಸಾಮ್ರಾಜ್ಯ, ಬ್ರಿಟಿಷ್ ಭಾರತ
ಮರಣ27 December 2003(2003-12-27) (aged 88)
ಬೆಂಗಳೂರು, ಭಾರತ
ವೃತ್ತಿಕವಿ
ರಾಷ್ಟ್ರೀಯತೆಭಾರತೀಯ
ಕಾಲನವೋದಯ, ರೊಮ್ಯಾಂಟಿಕ್ ಚಳುವಳಿ

ಪ್ರಭಾವಗಳು
  • ಜಾನಪದ, ರಾಬರ್ಟ್ ಬರ್ನ್ಸ್

ಕೆ. ಎಸ್. ನರಸಿಂಹಸ್ವಾಮಿ, ಕನ್ನಡಿಗರ ಪ್ರೇಮಕವಿ,ಕನ್ನಡಿಗರ ಅತ್ಯಂತ ಪ್ರೀತಿಯ ಕವನಸಂಕಲನಗಳಲ್ಲೊಂದಾದ, ಮೈಸೂರು ಮಲ್ಲಿಗೆಯ ಕರ್ತೃ.[](ಜನವರಿ ೨೬ ೧೯೧೫-ಡಿಸೆಂಬರ್ ೨೮ ೨೦೦೩) 'ಮೈಸೂರು ಮಲ್ಲಿಗೆ', ಕೆ.ಎಸ್.ನರಸಿಂಹಸ್ವಾಮಿಯವರ ಮೊದಲ ಕವನ ಸಂಕಲನವಾಗಿದೆ. ಇದು ಮನೆ ಮನೆಯ ಮಾತಾಗಿ, ಕಾವ್ಯವಾಗಿ, ಹಾಡಾಗಿ ಹರಿದಿದೆ. ಇದುವರೆವಿಗೂ ಇಪ್ಪತ್ತೈದಕ್ಕೂ ಹೆಚ್ಚು ಬಾರಿ ಮುದ್ರಣ ಭಾಗ್ಯ ಪಡೆದಿದೆ. ಕನ್ನಡದ ಕೆಲವೇ ಕೃತಿಗಳಿಗೆ ಇಂಥ ಮರು ಮುದ್ರಣದ ಭಾಗ್ಯ- ಆಧುನಿಕ ಕನ್ನಡ ಕಾವ್ಯ ಹಲವು ರೂಪಗಳನ್ನು ಪಡೆಯುತ್ತಾ ಬಂದಿದೆ. ಹಲವು ಸಾಹಿತ್ಯ ಚಳುವಳಿಗಳು ಬಂದುಹೋಗಿವೆ. ಕೆಎಸ್‌ನ ಎಲ್ಲ ಕಾಲಕ್ಕೂ ಸಲ್ಲುವ ಜನಪ್ರೀತಿಯ ಕಾವ್ಯ ಕೃಷಿಗೆ ದೊಡ್ಡ ಹೆಸರು. ಕವಿ ವಿಮರ್ಶಕ ಡಾ. ಎಚ್. ಎಸ್. ವೆಂಕಟೇಶಮೂರ್ತಿ ಅವರು ಕೆಎಸ್‌ನ ಬಗ್ಗೆ ಬರೆಯುತ್ತ ``ನವೋದಯದ ಕಾವ್ಯ ಸಂದರ್ಭದಲ್ಲಿ ಹೆಸರು ಮಾಡಿದ್ದ ಈ ಕವಿ ತಮ್ಮ ಸುಕುಮಾರ ಜಗತ್ತಿನಿಂದ, ನಿಷ್ಠುರವಾದ ಬದುಕಿನ ಸಂದರ್ಭಕ್ಕೆ ಹೊರಳಿದ್ದು `ಶಿಲಾಲತೆ'ಯಲ್ಲಿ. ಆದ್ದರಿಂದ ಸಂಗ್ರಹಕ್ಕೆ ಒಂದು ಐತಿಹಾಸಿಕ ಮಹತ್ವವಿದೆ" -ಎಂದು ದಾಖಲಿಸಿದ್ದಾರೆ. ಜೊತೆಗೆ ಮೈಸೂರು ಮಲ್ಲಿಗೆಯ ಕವಿತೆಯ ಭಾಷೆ, ವಸ್ತು, ಲಯಗಳ ಮೇಲೆ ಇಂಗ್ಲಿಷ್ ಗೀತೆಗಳ ಪ್ರಭಾವವನ್ನು ಗುರುತಿಸಬಹುದು ಎಂದು ಡಾ. ಹೆಚ್.ಎಸ್.ವಿ. ಗುರ್ತಿಸಿದ್ದಾರೆ.

ಜನನ,ವೃತ್ತಿಜೀವನ

[ಬದಲಾಯಿಸಿ]

ಕೆಎಸ್‌ನ,{"ಕಿಕ್ಕೇರಿ ಸುಬ್ಬರಾವ್ ನರಸಿಂಹಸ್ವಾಮಿ"}, ಮಂಡ್ಯ ಜಿಲ್ಲೆಯ ಕೃ‌ಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿಯಲ್ಲಿ ಜನಿಸಿದರು. ಮೈಸೂರಿನಲ್ಲಿ ಇಂಟರ್ ಮೀಡಿಯಟ್ ಹಾಗೂ ಬೆಂಗಳೂರಿನಲ್ಲಿ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ ; (ಅಪೂರ್ಣ) ವ್ಯಾಸಂಗ ಮಾಡಿದರು ೧೯೩೭ರಲ್ಲಿ ಸರಕಾರಿ ಸೇವೆಗೆ ಸೇರಿ ೧೯೭೦ರಲ್ಲಿ ನಿವೃತ್ತರಾದರು. ಮೈಸೂರು ಮಲ್ಲಿಗೆಯ ಕವಿತೆಗಳನ್ನು ಭಾವಗೀತೆಗಳ ಮೂಲಕ ಹಾಡಿ ಜನಪ್ರಿಯ ಮಾಡಿದಂತೆ ಆ ಕೃತಿಯನ್ನು ಅಪಾರ ಸಂಖ್ಯೆಯ ಓದುಗರೂ ಕೊಂಡು ಓದಿರುವುದು ಹೆಗ್ಗಳಿಕೆ. ಕೆಲವು ವರ್ಷಗಳ ಹಿಂದೆ ಇದೇ ಹೆಸರಿನಿಂದ ಚಲನಚಿತ್ರವೂ ನಿರ್ಮಾಣವಾಗಿದೆ. ನಾನು ಬರೆದ ಕವಿತೆಗಳು ಪ್ರೇಮ ಕವಿತೆಗಳಲ್ಲ, ದಾಂಪತ್ಯ ಕವಿತೆಗಳೆಂದು ಕೆಎಸ್‌ನ ಹೇಳಿಕೊಂಡಿದ್ದಾರೆ. ಮೈಸೂರು ಮಲ್ಲಿಗೆಯಲ್ಲಿ ಬಹುತೇಕ ಕವಿತೆಗಳು ದಾಂಪತ್ಯ ಗೀತೆಗಳೇ ಆಗಿವೆ. ನವಿಲೂರು, ಹೊನ್ನೂರು ಮೊದಲಾದವು ಗ್ರಾಮ ಬದುಕಿನ ನೆಲೆಗಳು. ಮಣ್ಣಿನ ವಾಸನೆಯ ಅಪ್ಪಟ ಕವಿತೆಗಳನ್ನು ಕೆಎಸ್‌ನ ನೀಡಿದ್ದಾರೆ. ಐರಾವತ, ದೀಪದ ಮಲ್ಲಿ, ಉಂಗುರ, ಇರುವಂತಿಗೆ, ಶಿಲಾಲತೆ, ಮನೆಯಿಂದ ಮನೆಗೆ, ತೆರೆದ ಬಾಗಿಲು, ನವಪಲ್ಲವ ಮುಂತಾದ ಕವನಗಳು ಹೊರಬಂದಿವೆ. "ಮಲ್ಲಿಗೆಯ ಮಾಲೆ" ಸಮಗ್ರ ಕವಿತೆಯ ಸಂಕಲನ. ಸಮಗ್ರ ಸಂಕಲನ ಬಂದರೂ ಈಚೆಗೆ `ಸಂಜೆ ಹಾಡು' ಎಂಬ ಹೊಸ ಕಾವ್ಯ ಹೊರಬಂದಿದೆ.

ಕಾವ್ಯ ಇವರ ಪ್ರಮುಖ ಕೃಷಿ ಆದರೂ ಗದ್ಯದಲ್ಲೂ ಕೃಷಿ ಮಾಡಿದ್ದಾರೆ. ಮಾರಿಯಕಲ್ಲು, ಉಪವನ, ದಮಯಂತಿ ಪ್ರಮುಖ ಕೃತಿಗಳು. ಅಲ್ಲದೆ ಹಲವು ಅನುವಾದಿತ ಕೃತಿಗಳೂ ಬಂದಿವೆ. ಮೋಹನ ಮಾಲೆ, ನನ್ನ ಕನಸಿನ ಭಾರತ, ಪ್ರಪಂಚದ ಬಾಲ್ಯದಲ್ಲಿ, ಮೀಡಿಯಾ, ಸುಬ್ರಮಣ್ಯ ಭಾರತಿ, ಮಾಯಾಶಂಖ ಮತ್ತು ಇತರ ಕತೆಗಳು, ಅನುವಾದಿತ ಕೃತಿಗಳು.

ಸಾಹಿತ್ಯ ಜೀವನ ಮತ್ತು ಪ್ರಶಸ್ತಿಗಳು

[ಬದಲಾಯಿಸಿ]
  • ೧೯೩೩ - ಕಬ್ಬಿಗನ ಕೂಗು ಮೊದಲ ಕವನ.
  • ೧೯೪೨- ಮೈಸೂರು ಮಲ್ಲಿಗೆ ಪ್ರಸಿದ್ಧ ಕವನ ಸಂಕಲನ ಪ್ರಕಟ.
  • ೧೯೪೩- ದೇವರಾಜ್ ಬಹದ್ದೂರ್ ಬಹುಮಾನ.
  • ೧೯೫೭ರಲ್ಲಿ `ಶಿಲಾಲತೆ'ಗೆ ರಾಜ್ಯ ಸಂಸ್ಕೃತಿ ಇಲಾಖೆ ಪ್ರಶಸ್ತಿ,
  • ೧೯೭೨- ಚಂದನ ಅಭಿನಂದನ ಗ್ರಂಥ ಸಮರ್ಪಣೆ
  • ೧೯೭೭- ತೆರೆದ ಬಾಗಿಲು ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ .
  • ೧೯೮೬- ಮೈಸೂರು ಮಲ್ಲಿಗೆ ಧ್ವನಿ ಸುರುಳಿ.
  • ೧೯೮೭- ಕೇರಳದ ಕವಿ ಕುಮಾರ್ ಆಶಾನ್ ಪ್ರಶಸ್ತಿ .
  • ೧೯೯೦- ಮೈಸೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯಾ ಸಮ್ಮೇಳನದ ಅಧ್ಯಕ್ಷತೆ.
  • ೧೯೯೧- ಮೈಸೂರು ಮಲ್ಲಿಗೆ ಚಲನಚಿತ್ರ ಬಿಡುಗಡೆ.
  • ೧೯೯೨- ಉತ್ತಮ ಗೀತರಚನೆಗೆ ರಾಷ್ಟ್ರಪತಿ ಪ್ರಶಸ್ತಿ .
  • ೧೯೯೨- ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಿಲಿಟ್.
  • ೧೯೯೬- ಮಾಸ್ತಿ ಪ್ರಶಸ್ತಿ .
  • ೧೯೯೭- ಪಂಪ ಪ್ರಶಸ್ತಿ .
  • ೧೯೯೯- ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ ಫೆಲೋಷಿಪ್.
  • ೨೦೦೦- ಗೊರೂರು ಪ್ರಶಸ್ತಿ .
  • ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಪ್ರಮುಖ ಕೃತಿಗಳು

[ಬದಲಾಯಿಸಿ]

ಕವನ ಸಂಕಲನಗಳು

[ಬದಲಾಯಿಸಿ]
  • ೧೯೪೨- ಮೈಸೂರು ಮಲ್ಲಿಗೆ.
  • ೧೯೪೫- ಐರಾವತ
  • ೧೯೪೭- ದೀಪದ ಮಲ್ಲಿ
  • ೧೯೪೯- ಉಂಗುರ
  • ೧೯೫೪- ಇರುವಂತಿಗೆ
  • ೧೯೫೮- ಶಿಲಾಲತೆ
  • ೧೯೬೦- ಮನೆಯಿಂದ ಮನೆಗೆ
  • ೧೯೭೯- ತೆರೆದ ಬಾಗಿಲು
  • ೧೯೮೯- ನವ ಪಲ್ಲವ
  • ೧೯೯೩- ದುಂಡುಮಲ್ಲಿಗೆ
  • ೧೯೯೯- ನವಿಲದನಿ
  • ೨೦೦೦- ಸಂಜೆ ಹಾಡು
  • ೨೦೦೧- ಕೈಮರದ ನೆಳಲಲ್ಲಿ
  • ೨೦೦೨- ಎದೆ ತುಂಬ ನಕ್ಷತ್ರ
  • ೨೦೦೩- ಮೌನದಲಿ ಮಾತ ಹುಡುಕುತ್ತ
  • ೨೦೦೩- ದೀಪ ಸಾಲಿನ ನಡುವೆ
  • ೨೦೦೩- ಮಲ್ಲಿಗೆಯ ಮಾಲೆ
  • ೨೦೦೩- ಹಾಡು-ಹಸೆ
  • ಮಾರಿಯ ಕಲ್ಲು
  • ದಮಯಂತಿ
  • ಉಪವನ

ಅನುವಾದಗಳು

[ಬದಲಾಯಿಸಿ]
  • ಮೋಹನ'ಮಾಲೆ ( ಗಾಂಧೀಜಿ )
  • ನನ್ನ ಕನಸಿನ 'ಭಾರತ (ಗಾಂಧೀಜಿ)
  • ಮೀಡಿಯಾ '( ಯುರಿಪೀಡಿಸ್ ನಾಟಕ)

ಆಯ್ದ ಕವನಗಳು

[ಬದಲಾಯಿಸಿ]

ಚೆಲುವು

ಮಾತು ಮುತ್ತು

ನಿಲ್ಲಿಸದಿರೆನ್ನ ಪಯಣವನು

ಅಂಥಿಂಥ ಹೆಣ್ಣು ನೀನಲ್ಲ!!

ದೀಪದ ಮಲ್ಲಿ

ಅಕ್ಕಿ ಆರಿಸುವಾಗ ...

ನಿನ್ನೊಲುಮೆಯಿಂದಲೆ

ಬಾರೆ ನನ್ನ ಶಾರದೆ

ನಿನ್ನ ಹೆಸರು

ರಾಯರು ಬಂದರು

ಬಳೇಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹನು

ನಮ್ಮುರು ಚೆಂದವೋ ನಿಮ್ಮೂರು ಚೆಂದವೋ

ಸಿರಿಗಿರಿಯ ನೀರಿನಲಿ ಬಿರಿದ ತಾವರೆಯಲ್ಲಿ

ನಿನ್ನ ಪ್ರೇಮದ ಪರಿಯೆ

ಹಕ್ಕಿಯ ಹಾಡಿಗೆ ತಲೆದೂಗುವ ಹೂ

ಉಲ್ಲೇಖ

[ಬದಲಾಯಿಸಿ]
  1. "ಸಹಜ ಸರಳ ನಿರ್ಮಲ-ಇದೇ ಕೆ.ಎಸ್.ಎನ್.ರ ಕಾವ್ಯದ ಬೀಜಮಂತ್ರ.ಎಚ್ಚೆಸ್ವಿ.ಮಯೂರ,ಏಪ್ರಿಲ್, ೨೦೧೫, ಪು.೩೨-೩೫". Archived from the original on 2013-11-22. Retrieved 2015-04-02.

ಬಾಹ್ಯಸಂಪರ್ಕಗಳು

[ಬದಲಾಯಿಸಿ]