ದೀಪದ ಮಲ್ಲಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

Incomplete list.png This page or section is incomplete.

ದೀಪದ ಮಲ್ಲಿ ............. ಕವನ ಸಂಕಲನ- ದೀಪದ ಮಲ್ಲಿ


ಎಲೆಲೆ! ದೇಪದ ಮಲ್ಲಿ,

ಎದೆಯ ಕತ್ತಲೆಯಲ್ಲಿ

ಪದುಮ ದೀಪದ ಹಿಡಿದು

ಬಾಗಿ ನಿಂತು


ಕವಿಗಿನಿತೆ ಬೆಳಕಿನಲ್ಲಿ

ಎಂಬ ಕಿರುನಗೆಯಲ್ಲಿ

ಹಿಗ್ಗಿ ಹೂವಾಯ್ತಿಂತು

ಪ್ರಾಣ ತಂತು.


ನೀನೆ ಕಂಚಿನ ಬೊಂಬೆ ?

ಅಲ್ಲ ಮಿಂಚಿನ ಬೊಂಬೆ ?

ಹಂಬಲವನೆದೆಯೊಳಗೆ

ತುಂಬಿದೊಲುಮೆ.


ಎಲ್ಲಿತ್ತೊ ಒಂದು ದನಿ,

ಎಲ್ಲಿತ್ತೊ ಒಂದು ಬನಿ,

ನಿನ್ನಿಂದ ಹಾಡಾಯ್ತು

ಅಮೃತವಾಯ್ತು.


-ಕೆ ಎಸ್ ನರಸಿಂಹಸ್ವಾಮಿಯವರು