ಕಿಸ್ (ಬ್ಯಾಂಡ್)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Kiss
Kiss in Hellfest in 2013.
ಹಿನ್ನೆಲೆ ಮಾಹಿತಿ
ಮೂಲಸ್ಥಳBrooklyn, New York
ಸಂಗೀತ ಶೈಲಿHard rock, heavy metal, glam metal
ಸಕ್ರಿಯ ವರ್ಷಗಳು1973–present
L‍abelsCasablanca, Mercury, Sanctuary, Columbia, Universal Music, Roadrunner, Kiss Records
Associated actsE.S.P., Frehley's Comet, Union, Vinnie Vincent Invasion, Wicked Lester, Black 'n Blue, Badlands, Grand Funk Railroad
ಅಧೀಕೃತ ಜಾಲತಾಣwww.kissonline.com
ಸಧ್ಯದ ಸದಸ್ಯರುPaul Stanley
Gene Simmons
Tommy Thayer
Eric Singer
ಮಾಜಿ ಸದಸ್ಯರುEric Carr
Bruce Kulick
Ace Frehley
Peter Criss
Mark St. John
Vinnie Vincent

ಕಿಸ್ ಇದು ಅಮೇರಿಕಾದ ಹಾರ್ಡ್ ರಾಕ್ ಬ್ಯಾಂಡಿನ ಹೆಸರು. ಇದನ್ನು ನ್ಯೂ ಯಾರ್ಕ್ ನಗರದಲ್ಲಿ ಜನವರಿ 1973 ರಲ್ಲಿ ರಚಿಸಲಾಯಿತು.[೧] (ಹಾರ್ಡ್ ರಾಕ್: ಗಂಭೀರ ಲಯದ ಸಂಗೀತ; ಬ್ಯಾಂಡ್:ವಾದ್ಯವೃಂದ/ವಾದ್ಯ ಗೋಷ್ಟಿ/ವಾದ್ಯಮೇಳ) ಈ ತಂಡವನ್ನು ಅದರ ಸದಸ್ಯರ ಮುಖಕ್ಕೆ ಬಣ್ಣ ಹಚ್ಚಿಕೊಳ್ಳುವ ಶೈಲಿಯಿಂದ ಹಾಗು ರಂಗದ (ಸ್ಟೇಜ್) ಮೇಲೆ ಇವರು ಧರಿಸುವ ಆಕರ್ಷಕ ಉಡುಗೆ ತೊಡುಗೆಗಳಿಂದ ಸುಲಭವಾಗಿ ಗುರುತು ಹಚ್ಚಬಹುದು. ಬೆಂಕಿಯುಗುಳುವುದು (ಫೈರ್ ಬ್ರಿತಿಂಗ್), ರಕ್ತ ಉಗುಳುವುದು (ಬ್ಲಡ್ ಸ್ಪಿಟ್ಟಿಂಗ್), ಬೆಂಕಿ ಕಾರುವ ಗಿಟಾರ್ (ಸ್ಮೋಕಿಂಗ್ ಗಿಟಾರ್), ಮತ್ತು ಹಲವಾರು ಪೈಅರೋಟೆಕ್ನಿಕ್ ಗಳಿರುತ್ತಿದ್ದ ಈ ತಂಡ ವ್ಯಾಪಕವಾದ ಲೈವ್ ಪ್ರದರ್ಶನಗಳಿಂದಾಗಿ 1970ರ ದಶಕದ ಮಧ್ಯಭಾಗದಿಂದ ಹಿಡಿದು ಕೊನೆಯ ತನಕ ಪ್ರಸಿದ್ಧರಾಗಿದ್ದರು. (ಪೈರೋಟೆಕ್ನಿಕ್: ಬಾಣಬಿರುಸಿನ ಪ್ರದರ್ಶನ; ಲೈವ್ ಪ್ರದರ್ಶನ: ರಂಗದ ಮೇಲೆ ನೀಡುವ ಪ್ರದರ್ಶನ) ಇಲ್ಲಿಯವರೆಗೆ ಕಿಸ್ ಗೆ USA(ಯು.ಎಸ್.ಎ) ಯಲ್ಲಿ 24 ಗೋಲ್ಡ್ ಆಲ್ಬಂಗಳಿಂದ ಪುರಸ್ಕರಿಸಲಾಗಿದೆ.[೨] (ಗೋಲ್ಡ್ ಆಲ್ಬಂ: ಇದೊಂದು ರೀತಿಯ ಪ್ರಮಾಣಪತ್ರ,ಇದು ವ್ಯಾಪಾರದ ಪ್ರಮಾಣವನ್ನು ಸೂಚಿಸುತ್ತದೆ; ಗೋಲ್ಡ್ ಅಲ್ಲದೆ ಪ್ಲಾಟಿನಂ, ಸಿಲ್ವರ್ ಪ್ರಮಾಣ ಪತ್ರಗಳು ಕೂಡ ಇದೆ.) ಈ ಬ್ಯಾಂಡ್ ಯುನೈಟೆಡ್ ಸ್ಟೇಟ್ಸ್ ನಲ್ಲಿ 19 ದಶಲಕ್ಷ ಆಲ್ಬಂಗಳನ್ನು ಮಾರಾಟ ಮಾಡಿದ್ದಾರೆ.[೩] ಪ್ರಪಂಚಾದ್ಯದಂತ ಇವರ ವ್ಯಾಪಾರ 100 ದಶಲಕ್ಷವನ್ನು ಮೀರಿದೆ.[೪]

ಪಾಲ್ ಸ್ಟಾನ್ಲಿ (ಗಾಯನ ಹಾಗು ರಿಥಂ ಗಿಟಾರ್), ಜೀನ್ ಸಿಮ್ಮನ್ಸ್ (ಗಾಯನ ಹಾಗು ಬ್ಯಾಸ್ ಗಿಟಾರ್), ಏಸ್ ಫ್ರೆಹ್ಲೆ (ಲೀಡ್ ಗಿಟಾರ್ ಹಾಗು ಗಾಯನ), ಮತ್ತು ಪೀಟರ್ ಕ್ರಿಸ್ (ಡ್ರಮ್ಸ್, ಪರ್ಕಷನ್ ಹಾಗು ಗಾಯನ) ಗಳು ಸದಸ್ಯರಾಗಿರುವ ಈ ಕ್ರಮಾಂಕವು ಬಹಳ ಯಶಸ್ವಿ ಹಾಗು ಚಿರಪರಿಚಿತವಾಗಿದೆ. (ರಿಥಂ ಗಿಟಾರ್: ಹಾಡುಗಾರನಿಗೆ/ವಾದ್ಯವೃಂದಕ್ಕೆ ಸಂಗೀತದಲ್ಲಿ ಲಯವನ್ನು ಒದಗಿಸುವುದು; ಬ್ಯಾಸ್ ಗಿಟಾರ್: ; ಲೀಡ್ ಗಿಟಾರ್: ಹಾಡಿನ ಪ್ರಮುಖ ಭಾಗವನ್ನು ನುಡಿಸುವವ; ಪರ್ಕಷನ್: ತಾಳವಾದ್ಯ) ಅವರುಗಳ ಮೇಕ್ ಅಪ್ (ಮೆಕ್ಅಪ್: ಸದಸ್ಯರ ತಮ್ಮ ಮುಖಗಳಿಗೆ ಆಕರ್ಷಕವಾಗಿ ಬಣ್ಣ ಬಳಿದುಕೊಂಡು ಮಾಡಿಕೊಳ್ಳುತ್ತಿದ್ದ ಅಲಂಕಾರ) ಮತ್ತು ವೇಷಭೂಷಣಗಳಿಂದಾಗ ಅವರುಗಳು ಕಾಮಿಕ್-ಪುಸ್ತಕಗಳ ಪಾತ್ರಗಳಾದ: ದಿ ಡೆಮನ್ (ಸಿಮ್ಮನ್ಸ್), ಸ್ಟಾರ್ ಚೈಲ್ಡ್ (ಸ್ಟಾನ್ಲಿ), ಸ್ಪೇಸ್ ಮ್ಯಾನ್(ಫ್ರೆಹ್ಲೆ) ಮತ್ತು ಕ್ಯಾಟ್ ಮ್ಯಾನ್ (ಕ್ರಿಸ್), ಹಾಗೆ ರೂಪ ಧರಿಸುತ್ತಿದ್ದರು. ಈ ಬ್ಯಾಂಡ್ ನಮ್ಮ ಮೇಕ್ಅಪ್ ಅನ್ನು ಅಂತಿಮವಾಗಿ ನಿರ್ಧರಿಸುತ್ತಿದ್ದುದು ಅವರ ಆಭಿಮಾನಿಗಳೇ ಎಂದು ವಿವರಿಸಿದೆ. ಸಿಮ್ಮನ್ಸ್ ನ "ಡೆಮನ್" ಮೇಕ್ಅಪ್, ಸಿಮನ್ಸ್ ನ ಸಿನಿಕತೆ ಮತ್ತು ಕೆಟ್ಟ ಗುಣಗಳ, ಜೊತೆಗೆ ಕಾಮಿಕ್ ಪುಸ್ತಕಗಳೊಂದಿಗೆ ಅವನ ಪ್ರೀತಿಯನ್ನು ತೋರಿಸುತ್ತದೆ. ಪಾಲ್ ಸ್ಟಾನ್ಲಿ ತನ್ನನು ತಾನು "ಸ್ಟಾರಿ-ಐಡ್ ಲವರ್" ಮತ್ತು "ಹೋಪೆಲೆಸ್ ರೋಮಾಂಟಿಕ್" ಎಂದು ಎಲ್ಲರಿಂದಲೂ ಕರೆಯಿಸಿಕೊಳ್ಳಲು ಇಷ್ಟಪಡುತ್ತಿದ್ದ ಕಾರಣ ಅವನು "ಸ್ಟಾರ್ ಚೈಲ್ಡ್" ಆಗುತ್ತಾನೆ. ಏಸ್ ಫ್ರೆಹ್ಲೆ ಯ "ಸ್ಪೇಸ್ ಮ್ಯಾನ್" ಮೇಕ್ಅಪ್, ಬ್ಯಾಹಾಕಾಶ ನೌಕೆಯಲ್ಲಿ ಪಯಣಿಸುವ ಆತನ ಆಸೆ ಮತ್ತು ಅವನು ಬೇರೆ ಗ್ರಹದವನು ಎನ್ನುವ ಆತನ ಕಲ್ಪನೆಗೆ ಕನ್ನಡಿಯಂತೆಯಿತ್ತು. ಪೀಟರ್ ಕ್ರಿಸ್ ರ 'ಕ್ಯಾಟ್ ಮ್ಯಾನ್' ಮೇಕ್ಅಪ್, ಬ್ರೂಕ್ಲಿನ್ನಿನಲ್ಲಿ ಕಳೆದ ಕಠಿಣವಾದ ಬಾಲ್ಯದ ದಿನಗಳನ್ನು ಕಳೆದಿದ್ದ ಕಾರಣ, ಕ್ರಿಸ್ ಒಳಗಡೆ ಒಂಬತ್ತು ಜನರಿದ್ದಾರೆ ಎನ್ನುವ ನಂಬಿಕೆಗೆ ಅನುಗುಣವಾಗಿತ್ತು. ಕಲೆಯ ವಿಷಯದಲ್ಲಿ ಉಂಟಾದ ಕೆಲವು ಭಿನ್ನಾಬಿಪ್ರಾಯಗಳಿಂದಾಗಿ, ಕ್ರಿಸ್ ಮತ್ತು ಫ್ರೆಹ್ಲಿ ಈ ತಂಡದಿಂದ 1982ರ ವೇಳೆಗೆ ಹೊರಬಂದರು. ಈ ಬ್ಯಾಂಡಿನ ವ್ಯಾಪಾರಿ ಮೌಲ್ಯವು ಕೂಡ ಅಲ್ಲಿಯ ವೇಳೆಗೆ ಕ್ಷೀಣಿಸಿದ್ದವು.

ಕಿಸ್ 1983ರಲ್ಲಿ ಮೇಕ್ಅಪ್ ಮಾಡಿಕೊಳ್ಳವುದನ್ನು ಬಿಟ್ಟಿತು. ಈ ದಶಕದ ಉಳಿದ ಭಾಗದಲ್ಲಿ ಅದರ ವ್ಯಾಪಾರವು ಸ್ವಲ್ಪ ಚೇತರಿಸಿಕೊಂಡ ಕಾರಣ ಕಿಸ್ ಲಾಭಗಳಿಸಿತು. ಕಿಸ್ ಬಗ್ಗೆ ಹಿಂದೆ ಇದ್ದ ಉತ್ಕಟವಾದ ಅಭಿಮಾನ 1990ರ ದಶಕದಲ್ಲಿ ಮರುಕಳಿಸಿದ್ದನ್ನು ಕಂಡು ಉತ್ತೇಜಿತರಾದ ಬ್ಯಾಂಡ್ ಅದರ ಮೊದಲಿನ ಸದಸ್ಯರೊಂದಿಗೆ(ಅವರ ಮೇಕ್ಅಪ್ ಒಂದಿಗೆ) ಮತ್ತೊಮ್ಮೆ ಸೇರುವುದಾಗಿ ಘೋಷಿಸಿತು. ಇದರ ಫಲವೇ, ಕಿಸ್ ಅಲೈವ್/ವರ್ಲ್ಡ್ ವೈಡ್/ಲಾಸ್ಟ್ ಸಿಟಿಸ್/ ರಿಯೂನಿಯನ್ ಟೂರ್ ಎನ್ನುವ ಪ್ರವಾಸ ಕಾರ್ಯಕ್ರಮ. ಇದು 1996 ಮತ್ತು 1997 ರ ಆತೀ ಹೆಚ್ಚು ಹಣ-ಸಂಪಾದಿಸಿದ ಕಾರ್ಯಕ್ರಮವಾಯಿತು. ಅಲ್ಲಿಂದಾಚೆಗೆ, ಕ್ರಿಸ್ ಮತ್ತು ಫ್ರೆಹ್ಲಿ ಮತ್ತೊಮ್ಮೆ ಬ್ಯಾಂಡ್‌ನ್ನು ಬಿಟ್ಟಿದ್ದಾರೆ. ಈ ಇಬ್ಬರ ಸ್ಥಾನವನ್ನು ಕ್ರಮವಾಗಿ ಎರಿಕ್ ಸಿಂಗರ್ ಮತ್ತು ಟಾಮಿ ಥಾಯರ್ ತುಂಬಿದ್ದಾರೆ. ಈ ಬ್ಯಾಂಡ್ ಮೇಕ್ಅಪ್ ಹಾಗು ವೇಷಭೂಷಣಗಳೊಂದಿಗೆ ಈಗಲೂ ಪ್ರದರ್ಶನಗಳನ್ನು ಮಾಡುತ್ತಿದೆ. ಬ್ಯಾಂಡ್ ಶುರುವಾದಾಗಿನಿಂದ ಈ ಬ್ಯಾಂಡಿನ ಖಾಯಂ ಸದಸ್ಯರಾಗಿ ಸ್ಟಾನ್ಲಿ ಮತ್ತು ಸಿಮ್ಮನ್ಸ್ ಮಾತ್ರ ಉಳಿದಿದ್ದಾರೆ.

"ಹಾರ್ಡ್ ರಾಕ್ ಸಂಗೀತದ 100 ಶ್ರೇಷ್ಟ ಕಲಾವಿದರು" ಎನ್ನುವ VH1 ಪಟ್ಟಿಯಲ್ಲಿ ಕಿಸ್ 10ನೇ ಸ್ಥಾನದಲ್ಲಿದೆ.[೫] ಇದಲ್ಲದೆ, MTV ಯವರ "ದಿ ಗ್ರೇಟೆಸ್ಟ್ ಮೆಟಲ್ ಬ್ಯಾಂಡ್ಸ್" ನ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿರಿಸಿದೆ.[೬][೬] ಕಿಸ್ ರಾಕ್ ಅಂಡ್ ರೊಲ್ ಹಾಲ್ ಆಫ್ ಫೇಮ್ ಗೆ ಆರ್ಹತೆಗಳಿಸಿದ ಹತ್ತುವರ್ಷದ ನಂತರ, ಸೆಪ್ಟೆಂಬರ್ 23, 2009 ರಂದು ನಾಮನಿರ್ದೇಶನ ಮಾಡಲ್ಪಟ್ಟಿತು.[೭] ನಂತರ, ಡಿಸೆಂಬರ್ 15, 2009 ರಂದು ಕಿಸ್ ರಾಕ್ ಅಂಡ್ ರೊಲ್ ಹಾಲ್ ಆಫ್ ಫೇಮ್ ಪಟ್ಟಿಗೆ ಆಯ್ಕೆಯಾಗಿಲ್ಲ ಎಂದು ಘೋಷಿಸಲಾಯಿತು.[೮]

ಇತಿಹಾಸ[ಬದಲಾಯಿಸಿ]

ಪ್ರಾರಂಭದ ದಿನಗಳು ಮತ್ತು ಹೋರಾಟ (1971–1975)[ಬದಲಾಯಿಸಿ]

ಕಿಸ್ ತನ್ನ ಮೂಲವನ್ನು ನ್ಯೂಯಾರ್ಕ್ ನಗರದ ಜೀನ್ ಸಿಮ್ಮನ್ಸ್ ಮತ್ತು ಪಾಲ್ ಸ್ಟಾನ್ಲಿ ಅವರು ಜೊತೆಯಲ್ಲಿ ಪ್ರಾರಂಭಿಸಿದ ರಾಕ್ ಅಂಡ್ ರೋಲ್ ಬ್ಯಾಂಡ್ ವಿಕೆಡ್ ಲೇಸ್ಟರ್ ನಲ್ಲಿ ಪಡೆದಿದೆ.

ವಿಕೆಡ್ ಲೇಸ್ಟರ್, ಮಾಡುತ್ತಿದ್ದ ಸಂಗೀತ ಶೈಲಿಗಳ ಹುಚ್ಚಾಪಟ್ಟೆ ಮಿಶ್ರಣದಿಂದಾಗಿ, ಅದು ಯಾವದೇ ರೀತಿಯ ಯಶಸ್ಸು ಗಳಿಸಲಿಲ್ಲ.  ಅವರು ತಯಾರಿಸಿದ ಒಂದು ಆಲ್ಬಂ ಅನ್ನು ಎಪಿಕ್ ರೆಕಾರ್ಡ್ಸ್ ಕೈಬಿಟ್ಟಿತು. ಇವರು ಕೆಲವೆ ಕೆಲವು ಪ್ರದರ್ಶನಗಳನ್ನು ಮಾಡಿದರು.  ಸಿಮನ್ಸ್ ಮತ್ತು ಸ್ಟಾನ್ಲಿ, ಹೊಸ ಸಂಗೀತ ಶೈಲಿಯ ಅವಶ್ಯಕತೆಯಿದೆ ಎಂದು ಮನಗೊಂಡು, ವಿಕೆಡ್ ಲೇಸ್ಟರ್ ಅನ್ನು 1972ರಲ್ಲಿ ನಿಲ್ಲಿಸಿ, ಹೊಸ ತಂಡ ರಚಿಸ ತೊಡಗಿದರು.[೯][೧೦][೧೧]

'

1972ರ ಕೊನೆಯ ವೇಳೆಗೆ ಸಿಮನ್ಸ್ ಮತ್ತು ಸ್ಟಾನ್ಲಿ, ಪೀಟರ್ ಕ್ರಿಸ್ ಎನ್ನುವವನ ರೋಲಿಂಗ್ ಸ್ಟೋನ್ಈಸ್ಟ್ ಕೋಸ್ಟ್ (ಪೂರ್ವ ತೀರಗಳ ಪ್ರದೇಶಗಳ) ಆವೃತ್ತಿಯ ಜಾಹಿರಾತನ್ನು ನೋಡಿದರು. ಪೀಟರ್ ಕ್ರಿಸ್, ನ್ಯೂಯಾರ್ಕ್ ಕ್ಲಬ್ ಗ ಳಲ್ಲಿ ಪ್ರದರ್ಶನ ಮಾಡುತ್ತಿದ್ದ ನುರಿತ ಡ್ರಮ್ ವಾದಕನಾಗಿದ್ದ(ಡ್ರಮ್ಮರ್), ಹಾಗು ಇದಕ್ಕೂ ಮೊದಲು ಲಿಪ್ಸ್ ಮತ್ತು ಚೆಲ್ಸಿಯ ಎನ್ನುವ ಬ್ಯಾಂಡ್ ಗಳಲ್ಲಿ ಇದ್ದ. ಕ್ರಿಸ್ ಪರೀಕ್ಷೆ ತಗೆದುಕೊಂಡು ಆಯ್ಕೆಯಾಗಿ, ಹೊಸ ರೂಪದ ವಿಕೆಡ್ ಲೇಸ್ಟರ್ ಗೆ ಸೇರಿದ.

ಈ ಮೂವರು ವಿಕೆಡ್ ಲೇಸ್ಟರ್ ನುಡಿಸುತ್ತಿದ್ದ ಶೈಲಿಗಿಂತ ಕಷ್ಟವಾಗಿದ್ದ ಹಾರ್ಡ್ ರಾಕ್ ಶೈಲಿಯ ಕಡೆ ಗಮನ ಕೊಟ್ಟರು. ಅಲೈಸ್ ಕೂಪರ್ ಮತ್ತು ನ್ಯೂಯಾರ್ಕ್ ಡಾಲ್ಸ್ ಗಳು ಮಾಡುತ್ತಿದ್ದ ರಂಗದ ಮೇಲೆ ಮಾಡುತ್ತಿದ ನಾಟಕೀಯ ವರ್ತನೆಗಳಿಂದ ಸ್ಪೂರ್ತಿಗೊಂಡ ಇವರು, ವಿವಿಧ ಮೇಕ್ಅಪ್ ಮತ್ತು ವೇಷಭೂಷಣಗಳನ್ನು ಹಾಕಿಕೊಂಡು ತಮ್ಮ ಇಮೇಜ್ (ರೂಪ) ಬದಲಾಯಿಸುವ ಪ್ರಯೋಗ ಮಾಡತೊಡಗಿದರು.[೧೨] ನವೆಂಬರ್ 1972ರಲ್ಲಿ, ಈ ಮೂವರು ಎಪಿಕ್ ರೆಕಾರ್ಡ್ಸ್ ನ A&R (ಎ ಅಂಡ್ ಆರ್) ನಿರ್ದೇಶಕರಾಗಿದ್ದ ಡಾನ್ ಎಲ್ಲಿಸ್ ರಿಗೆ, ತಮ್ಮ ಪ್ರತಿಭೆ ತೋರಿಸಿ ಧ್ವನಿಮುದ್ರಣ(ರೆಕಾರ್ಡ್) ಮಾಡುವ ಒಪ್ಪಂದವನ್ನು ಮಾಡುವ ಸಲುವಾಗಿ, ಪ್ರದರ್ಶನವೊಂದನ್ನು ಕೊಟ್ಟರು.  ಈ ಪ್ರದರ್ಶನವು ಯಶಸ್ವಿಯಾಗಿ ನಡೆಯಿತು, ಆದರೆ ಎಲ್ಲಿಸ್ ಆ ಗುಂಪಿನ ಇಮೇಜ್ (ನಮೂನೆ) ಮತ್ತು ಸಂಗೀತವನ್ನು ದ್ವೇಷಿಸುತ್ತಿದ್ದ.  ಇಷ್ಟೇ ಅಲ್ಲದೆ, ಅವನು ಹೊರಹೋಗುವಾಗ ಅವನ ಮೇಲೆ ಕ್ರಿಸ್ ನ ಸಹೋದರ ವಾಕರಿಕೆ ತೋರಿದನು.[೧೩][೧೪]

ಜನವರಿ 1973ರ ಪ್ರಾರಂಭದಲ್ಲಿ ಈ ತಂಡವು ಏಸ್ ಫ್ರೆಹ್ಲೆ ಅನ್ನು ಲೀಡ್ ಗಿಟಾರ್ ವಾದಕನಾಗಿ ಸೇರಿಸಿಕೊಂಡಿತು. ಫ್ರೆಹ್ಲಿ, ಕೆಂಪು ಮತ್ತು ಆರೆಂಜ್ ಬಣ್ಣದ ಎರಡು ಬೇರೆಬೇರೆ ಪಾದರಕ್ಷೆಗಳನ್ನು (ಸ್ನೀಕರ್) ತೊಟ್ಟಿದ್ದರೂ ಕೂಡ, ತಂಡದ ಮೇಲೆ ತನ್ನ ಮೊದಲ ಪರೀಕ್ಷೆಯಲ್ಲಿ (ಆಡಿಷನ್: ನಟನೆ/ಸಂಗೀತ/ನೃತ್ಯ ಗಾರರನ್ನು ಆಯ್ಕೆಮಾಡುವ ಪರೀಕ್ಷೆ) ಪ್ರಭಾವ ಬೀರಿದನು. ಫ್ರೆಹ್ಲಿ ಸೇರಿದ ಸ್ವಲ್ಪ ವಾರಗಳ ನಂತರ, ವಿಕೆಡ್ ಲೇಸ್ಟರ್ ಎಂಬ ಹೆಸರನ್ನು ಬಿಟ್ಟು, ಬ್ಯಾಂಡಿಗೆ ಕಿಸ್ ಎಂದು ಹೆಸರಿಡಲಾಯಿತು.[೧೫]

ದಿ ಕಿಸ್ ಲಾಂಛನ

ಸ್ಟಾನ್ಲಿಗೆ ಈ ಹೆಸರು ಸಿಮ್ಮನ್ಸ್ ಮತ್ತು ಕ್ರಿಸ್ ಜೊತೆ ನ್ಯೂಯಾರ್ಕ್ ನಗರದಲ್ಲಿ ತಿರುಗಾಡುತ್ತಿದ್ದ ಸಂದರ್ಭದಲ್ಲಿ ಹೊಳೆಯಿತು.

ಕ್ರಿಸ್ ತಾನು "ಲಿಪ್ಸ್" ಎನ್ನುವ ಬ್ಯಾಂಡಿನಲ್ಲಿದೆ ಎಂದು ಹೇಳಿದಾಗ, ಸ್ಟಾನ್ಲಿ "ಕಿಸ್ ಹೇಗಿರುತ್ತದೆ" ಎನ್ನುವ ಆರ್ಥ ಬರುವ ರೀತಿ ಎನೋ ಹೇಳಿದ.[೧೬]  ಫ್ರೆಹ್ಲಿ, ಅವರು ಪ್ರದರ್ಶನ ಮಾಡುತ್ತಿದ್ದ ಕ್ಲಬ್ ನ ಹೊರಗಡೆಯಿದ್ದ ವಿಕೆಡ್ ಲೇಸ್ಟರ್ ನ ಬಿತ್ತಿಪತ್ರದ (ಪೋಸ್ಟರ್) ಮೇಲೆ  ಬ್ಯಾಂಡಿನ ಹೊಸ ಹೆಸರನ್ನು ಬರೆಯುವಾಗ ಮಿಂಚುವ ಕೋಲುಗಳ ಹಾಗಿರುವ "SS"ನ, ಈಗ ಮನೆ ಮಾತಾಗಿರುವ, ಲಾಂಛನವನ್ನು ರಚಿಸಿದ.[೧೭] ಆತ ಬಳಸಿದ್ದ ರೂನ್ ಅಕ್ಷರಗಳು ನಾಜಿ(ನಾಟ್ಸಿ)ಯ ಲಾಂಛನ SS ವನ್ನೇ ಹೋಲುತ್ತಿದ್ದವು. ಇಂದು ಜರ್ಮನಿಯಲ್ಲಿ ಈ ಚಿನ್ಹೆಗಳನ್ನು ತೋರಿಸುವುದು ಕಾನೂನು ಬಾಹಿರ.  ಹೀಗಾಗಿ ವಿವಾದಗಳನ್ನು ತಪ್ಪಿಸುವ ಸಲುವಾಗಿ, ಜರ್ಮನಿಯಲ್ಲಿ 1979ರ ನಂತರದ ಬ್ಯಾಂಡಿನ ಆಲ್ಬಂ ಕವರ್(ರಕ್ಷಾಪುಟ) ಮತ್ತು ಮರ್ಚಂಡೈಸ್ ಗಳಲ್ಲಿ (ವ್ಯಾಪಾರದ ಸರಕು) ಸ್ವಲ್ಪ ಬದಲಾವಣೆಯಾಗಿರುವ ಲಾಂಛನ ಬಳಸುತ್ತಿದ್ದಾರೆ. ಈ ಲಾಂಛನವು "SS" ಅಕ್ಷರಗಳ ಬದಲು ಹಿಂದಕ್ಕೆ ತಿರುಗಿರುವ "ZZ" ಹಾಗೆ ಕಾಣಿಸುತ್ತದೆ.  ಈ ಬ್ಯಾಂಡಿನ ಹೆಸರಿನ ಹಿಂದೆ ಅನೇಕ ಆರ್ಥಗಳಿವೆ ಎಂದು ವದಂತಿಗಳಿವೆ. ಅವುಗಳಲ್ಲಿ ಇದು ನೈಟ್ಸ್ ಇನ್ ಸಾಟಾನ್ಸ್ ಸೆರ್ವಿಸ್ ಅಥವಾ ಕೀಪ್ ಇಟ್ ಸಿಂಪಲ್ ಸ್ಟುಪಿಡ್ ಎನ್ನುವದರ ಆಕ್ರನಿಮ್ (ಪದಗಳ ಪ್ರಥಮ ಆಕ್ಷರಗಳನ್ನು ಸೇರಿಸಿ ಮಾಡುವ ಒಂದು ಪದ) ಆಗಿರಬೇಕು ಎಂದು ಹೇಳಲಾಗುತ್ತದೆ.[೧೮]

ಕಿಸ್ ತಮ್ಮ ಮೊದಲ ಪ್ರದರ್ಶನವನ್ನು ಜನವರಿ 30, 1973ರಂದು, ಕ್ವೀನ್ಸ್ ನಲ್ಲಿದ ಪಾಪ್ಕಾರ್ನ್ ಕ್ಲಬಿನಲ್ಲಿ (ಇದಾದ ಸ್ವಲ್ಪ ದಿನಗಳಲ್ಲೆ ಇದನ್ನು ಕಾವೆಂಟ್ರಿ ಎಂದು ಮರುನಾಮಕರಣ ಮಾಡಲಾಗಿದೆ)ಮೂರು ಪ್ರೇಕ್ಷಕರ ಮುಂದೆ ಕೊಟ್ಟರು.

ಜನವರಿ 30, ಯಿಂದ ಫೆಬ್ರವರಿ 1, ರ ನಡುವೆ ನಡೆದ ಮೊದಲ ಮೂರು ಪ್ರದರ್ಶನಗಳಲ್ಲಿ ಇವರು ಬಹಳ ಕಡಿಮೆ ಮೇಕ್ಅಪ್ ತೊಟ್ಟಿದ್ದರು. ಆದರೆ, ಅಮಿಟವಿಲ್, NY ಯ ದಿ ಡೈಸಿ ಯಲ್ಲಿ ಮಾರ್ಚಿ 9-10 ರಂದು ನಡೆದ ಪ್ರದರ್ಶನದಲ್ಲಿ ಅವರು ವಿಶೇಷ ಮೇಕ್ಅಪ್ ತೊಟ್ಟರು. ನಂತರ, ಈ ಮೇಕ್ಅಪ್ ಈ ಬ್ಯಾಂಡನ್ನು ಗುರುತಿಸುವ ಜನಪ್ರಿಯ ನಮೂನೆಯಾಯಿತು. ಅದೇ ವರ್ಷ ಮಾರ್ಚಿ 13ರಂದು ಈ ಬ್ಯಾಂಡ್ ಎಡ್ಡಿ ಕ್ರಾಮೆರ್ ಎನ್ನುವ ನಿರ್ಮಾಪಕನೊಂದಿಗೆ ಐದು ಹಾಡುಗಳಿದ್ದ ಒಂದು ಪ್ರದರ್ಶಕ (ಡೆಮೋ) ಧ್ವನಿಸುರಳಿಯನ್ನು ತಯಾರಿಸಿತು. ಇವರು 1973ರ ಬೇಸಿಗೆಯಲ್ಲಿ ನಡೆಸಿದ್ದ ಕೆಲವು ಪ್ರದರ್ಶನಗಳನ್ನು ನೋಡಿದ್ದ ಬಿಲ್ ಅಕೊಯಿನ್ ಎನ್ನುವ ಮಾಜಿ TV (ಟಿವಿ) ನಿರ್ದೇಶಕ, ಆಕ್ಟೋಬರ್ ಮಧ್ಯದಲ್ಲಿ ಈ ಬ್ಯಾಂಡಿಗೆ ಮ್ಯಾನೇಜರ್(ನಿರ್ವಾಹಕ)ಆಗುವುದಾಗಿ ತಿಳಿಸಿದ.  ಆಕೊಯಿನ್ ಎರಡು ವಾರದೊಳಗೆ ಒಂದು ರೆಕಾರ್ಡಿಂಗ್ (ಧ್ವನಿಮುದ್ರಣ ಮಾಡಿಸುವ) ಒಪ್ಪಂದವನ್ನು ಮಾಡಿಸಿಕೊಡಬೇಕು ಎನ್ನುವ ನಿಬಂಧನೆಯೊಂದಿಗೆ ಕಿಸ್ ಒಪ್ಪಿಕೊಂಡಿತು.  ನವೆಂಬರ್ 1, 1973 ರಂದು ಕಿಸ್, ಮಾಜಿ ಟೀನ್ ಪಾಪ್ ಗಾಯಕ ಹಾಗು ಬುದ್ದಾ ರೆಕಾರ್ಡ್ಸ್ ನ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ನೀಲ್ ಬೋಗಾರ್ಟ್ ಪ್ರಾರಂಭಿಸಿದ ಹೊಸ ರೆಕಾರ್ಡಿಂಗ್ ಕಂಪನಿ(ಲೇಬಲ್) ಎಮೆರಾಲ್ಡ್ ಸಿಟಿ ರೆಕಾರ್ಡ್ಸ್ ನ (ಇದಾದ ಸ್ವಲ್ಪ ದಿನಗಳಲ್ಲೇ ಇದನ್ನು ಕಾಸಾಬ್ಲಾಂಕಾ ರೆಕಾರ್ಡ್ಸ್ ಎಂದು ಮರುನಾಮಕರಣ ಮಾಡಲಾಯಿತು)ಜೊತೆ ತಮ್ಮ ಮೊದಲ ಪ್ರದರ್ಶನ ಕೊಡುವುದಾಗಿ ಕರಾರು ಮಾಡಿಕೊಂಡರು.[೧೯]

ಈ ಬ್ಯಾಂಡ್ ತನ್ನ ಮೊದಲ ಆಲ್ಬಂ ಮುದ್ರಿಸಲು ಆಕ್ಟೋಬರ್ 10, 1973ರಂದು ನ್ಯೂಯಾರ್ಕ್ ನಗರದ ಬೆಲ್ ಸೌಂಡ್ ಸ್ಟೂಡಿಯೋ ಪ್ರವೇಶಿಸಿತು. ಈ ಬ್ಯಾಂಡ್, ಡಿಸೆಂಬರ್ 31ರಂದು ನ್ಯೂಯಾರ್ಕ್ ನಗರದಲ್ಲಿ ಅಕಾಡೆಮಿ ಆಫ್ ಮ್ಯೂಸಿಕಿನ ಬ್ಲೂ ಆಯಿಸ್ಟರ್ ಕಲ್ಟ್ ಎನ್ನುವ ಬ್ಯಾಂಡಿಗೆ ಪೂರ್ವಭಾವಿಯಾಗಿ(ಓಪನಿಂಗ್) ಪ್ರದರ್ಶನ ಕೊಟ್ಟರು. ಇದು ಸಂಗೀತೊದ್ಯಮದಲ್ಲಿ ಅವರ ಮೊದಲ ಅಧಿಕೃತ ಪ್ರದರ್ಶನ. ಈ ಗೋಷ್ಟಿ/ಸಂಗೀತ ಕಚೇರಿಯಲ್ಲಿ(ಕಾನ್ಸರ್ಟ್)ಸಿಮ್ಮನ್ಸ್ ಮೊದಲ ಬಾರಿಗೆ ಬೆಂಕಿ ಉಗಳುವ(ಫೈರ್ ಬ್ರೀತಿಂಗ್)ಸಾಹಸ ಮಾಡುತ್ತಿರುವಾಗ ಆಕಸ್ಮಿಕವಾಗಿ ಅತನ ಕೊದಲಿಗೆ (ಅವನ ಕೂದಲೂ ಹೇರ್ ಸ್ಪ್ರೆ ಯಿಂದ ಲೇಪನವಾಗಿತ್ತು)ಬೆಂಕಿ ತಗುಲಿತು. ಇದನ್ನು ಈತ ನಂತರದ ಪ್ರದರ್ಶನಗಳಲ್ಲಿ ಮುಂದುವರೆಸಿದ.[೨೦]

ಕಿಸ್ ತಮ್ಮ ಮೊದಲ ಪ್ರವಾಸ (ಟೂರ್/ಪ್ರವಾಸ: ಸಂಗೀತ/ನಾಟಕ ಮುಂತಾದವುಗಳನ್ನು ಪ್ರದರ್ಶಿಸುತ್ತಾ ಊರಿಂದ ಉರಿಗೆ ಮಾಡುವ ಯಾತ್ರೆ/ಪ್ರಯಾಣ) ಫೆಬ್ರವರಿ 5, 1974 ರಲ್ಲಿ ಕೆನಡಾದ ಎಡ್ಮಂಟನ್ ಆಲ್ಬೆರ್ಟಾ ದಲ್ಲಿರುವ ನಾರ್ತ್ರನ್ ಆಲ್ಬೆರ್ಟಾ ಜೂಬಿಲಿ ಆಡಿಟೋರಿಯಂ ಎನ್ನುವ ಸಭಾಂಗಣದಲ್ಲಿ ಪ್ರಾರಂಭಿಸಿದರು. ಈ ಬ್ಯಾಂಡ್, ಕಿಸ್ ಎನ್ನುವ ತನ್ನದೇ ಹೆಸರಿದ್ದ ಅದರ ಚೊಚ್ಚಲ ಆಲ್ಬಂ ಅನ್ನು ಫೆಬ್ರವರಿ 18 ರಂದು ಬಿಡುಗಡೆ ಮಾಡಿತು. ಕಾಸಾಬ್ಲಾಂಕಾ ಮತ್ತು ಕಿಸ್ 1974ರ ವಸಂತ(ಸ್ಪ್ರಿಂಗ್) ಮತ್ತು ಬೇಸಿಗೆಯ ಉದ್ದಕ್ಕೂ ಈ ಆಲ್ಬಂ ಅನ್ನು ಪ್ರಚಾರ ಮಾಡಿದರು. ಈ ಬ್ಯಾಂಡ್ ಫೆಬ್ರವರಿ 19ರಂದು "ನಥಿಂಗ್' ಟು ಲೂಸ್," "ಫೈರ್ ಹೌಸ್", ಮತ್ತು "ಬ್ಲಾಕ್ ಡೈಯಮಂಡ್" ಯನ್ನು ಪ್ರದರ್ಶಿಸಿದರು. ಇದನ್ನು ABC(ಎಬಿಸಿ)ಡಿಕ್ ಕ್ಲಾರ್ಕ್ಸ್ ಇನ್ ಕಾನ್ಸರ್ಟ್ " ಎನ್ನುವ ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಲಾಯಿತು (ಮಾರ್ಚಿ 29 ರಂದು ಬಿತ್ತರವಾಯಿತು). ಇದರೊಂದಿಗೆ ಇದು ಇವರ ರಾಷ್ಟ್ರೀಯ ದೂರದರ್ಶನದಲ್ಲಿ ಕಾಣಿಸಿಕೊಂಡ ಮೊದಲ ಕಾರ್ಯಕ್ರಮವಾಯಿತು. ಏಪ್ರಿಲ್ 29 ರಂದು ಬ್ಯಾಂಡ್ "ಫೈರ್ ಹೌಸ್" ಅನ್ನು "ದಿ ಮೈಕ್ ಡೋಗ್ಲಾಸ್ ಷೋ " ಎನ್ನುವ ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಿದರು. ಈ ಕಾರ್ಯಕ್ರಮದಲ್ಲಿ ಸಿಮ್ಮನ್ಸ್ ನ ದೂರದರ್ಶನಕ್ಕೆ ಕೊಟ್ಟ ಮೊದಲ ಸಂದರ್ಶನ ಕೂಡ ಇತ್ತು. ಇದರಲ್ಲಿ ಡೋಗ್ಲಾಸ್ ನೊಂದಿಗೆ ಮಾತನಾಡುವಾಗ ಸಿಮ್ಮನ್ಸ್ ತನ್ನನು ತಾನೆ ದುಷ್ಟ ಶಕ್ತಿಯ ಪ್ರತಿರೂಪ ಎಂದು ಬಣ್ಣಿಸಿಕೊಂಡ, ಅದು ಸ್ಟೂಡಿಯೋದಲ್ಲಿ ನೆರೆದಿದ್ದ ಪ್ರೇಕ್ಷಕರಲ್ಲಿ ಗಲಿಬಿಲಿಯನ್ನುಂಟು ಮಾಡಿತು. ಆ ಕಾರ್ಯಕ್ರಮದಲ್ಲಿದ ಮತ್ತೊಬ್ಬ ಆತಿಥಿ ಟೋಟಿ ಫೀಲ್ಡ್ಸ್, ಸಿಮ್ಮನ್ಸ್ ಆತನ ವಿಚಿತ್ರವಾದ ವೇಷಭೂಷಣಗಳ ಕಳಚಿದಾಗ ಅವನೊಳಗೊಬ್ಬ "ಕೇವಲ ಒಬ್ಬ ಒಳ್ಳೆಯ ಜ್ಯೂ ಹುಡುಗನಿದ್ದಾನೆ" ಎಂದರೆ ಅದು ಹಾಸ್ಯವಾದೀತು ಎಂದಳು. ಸಿಮ್ಮನ್ಸ್ ಈ ಹೇಳಿಕೆಗೆ "ಹೌದು" ಅಥವಾ ಇಲ್ಲ ಎನ್ನದೆ ನುಣಚಿಕೊಂಡು "ಅದು ನಿಮಗಷ್ಟೆ ಗೊತ್ತಿರಬೇಕು" ಎಂದು ಹೇಳಿದ. ಅದಕ್ಕೆ ಆಕೆ, "ನನಗೆ ಗೊತ್ತು. ನಿನ್ನ ಹೂಕ್ ಅನ್ನು ನೀನು ಮರೆಮಾಚಲು ಸಾಧ್ಯವಿಲ್ಲ," ಎಂದು ಸಿಮ್ಮನ್ಸ್ ನ ಮೂಗಿನ ಕುರಿತು ಹೇಳಿದಳು.[೨೧]

ಸತತ ಪ್ರಚಾರ ಹಾಗು ಎಡಬಿಡದೆ ಪ್ರವಾಸಗಳನ್ನು ಮಾಡಿದರೂ ಕೂಡ ಕಿಸ್ ಗೆ ಪ್ರಾರಂಭದಲ್ಲಿ ಕೇವಲ 75,000 ಪ್ರತಿಗಳನ್ನು ಮಾತ್ರವೇ ಮಾರಾಟ ಮಾಡಲು ಸಾಧ್ಯವಾಯಿತು. ಇದೇ ಸಂದರ್ಭದಲ್ಲಿ, ತಂಡ ಹಾಗು ಕಾಸಾಬ್ಲಾಂಕಾ ರೆಕಾರ್ಡ್ಸ್ ಇಬ್ಬರೂ ಬಹು ಬೇಗ ಹಣ ಕಳೆದುಕೊಳ್ಳುತ್ತಿದ್ದರು. ಈ ಬ್ಯಾಂಡ್ ಆಗಸ್ಟ್ 1974ರಲ್ಲಿ ಲಾಸ್ ಏಂಜಲಿಸ್ (ಪ್ರವಾಸದ ಸಂದರ್ಭದಲ್ಲಿ)ನಲ್ಲಿ ಹಾಟರ್ ಥಾನ್ ಹೆಲ್ ಎನ್ನುವ ಅದರ ಎರಡನೇ ಆಲ್ಬಂ ಅನ್ನು ಧ್ವನಿ ಮುದ್ರಿಸುಲು ನಿಂತಿತ್ತು. ಇದು ಆಕ್ಟೋಬರ್ 22, 1974 ರಂದು ಬಿಡುಗಡೆಯಾಯಿತು. ಇದರ "ಲೆಟ್ ಮಿ ಗೊ, ರಾಕ್ ಆಂಡ್ ರೋಲ್" ಎನ್ನುವ ಒಂದೇ ಒಂದು ಸಿಂಗಲ್ (ಹಾಡು)ಚಾರ್ಟಿನಲ್ಲಿ ಯಾವುದೆ ಸ್ಥಾನ ಸಿಗಲಿಲ್ಲ, ಹಾಗು ಆಲ್ಬಂ ನೂರನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.[೨೨]

250px|thumb|left|ಎಡದಿಂದ ಬಲಕ್ಕೆ: ಬಿಲ್ ಅಕೊಯಿನ್, ಪೀಟರ್ ಕ್ರಿಸ್, ಜೀನ್ ಸಿಮ್ಮನ್ಸ್, ಏಸ್ ಫ್ರೆಹ್ಲಿ, ಜಾಯ್ಸ್ ಮತ್ತು ನೀಲ್ ಬೊಗಾರ್ಟ್ ಹಾಟರ್ ಥಾನ್ ಹೆಲ್ ನ ಸ್ಥಾನವು ಚಾರ್ಟಿನಲ್ಲಿ ಇಳಿಮುಖವಾಗುತ್ತಿದ್ದ ಹಾಗೆಯೇ, ಕಿಸ್ ತಮ್ಮ ಪ್ರವಾಸ ಮೊಟಕುಗೊಳಿಸಿ, ಬೇಗನೆ ತಮ್ಮ ಇನ್ನೊಂದು ಹೊಸ ಆಲ್ಬಂ ಮುದ್ರಿಸ ತೊಡಗಿದರು. ಮುಂದಿನ ಆಲ್ಬಂ ತಯಾರಿಸಲು ಕಾಸಾಬ್ಲಾಂಕಾ ದ ಮುಖ್ಯಸ್ಥ ನೀಲ್ ಬೊಗಾರ್ಟ್ ಮುಂದೆ ಬಂದ. ಇವನು, ಹಾಟರ್ ಥಾನ್ ಹೆಲ್ ನ ಅಸ್ಷಷ್ಟವಾದ ಧ್ವನಿಗಿಂತಲೂ ಸ್ಷಷ್ಟವಾದ ಹಾಗು ಹೆಚ್ಚು ಜೀವಂತಿಕೆಯಿರುವ ಸಂಗೀತಕ್ಕೆ ಆದ್ಯತೆ ಕೊಟ್ಟ. ಡ್ರೆಸ್ಡ್ ಟು ಕಿಲ್ ಎನ್ನುವ ಈ ಆಲ್ಬಂ ಅನ್ನು ಮಾರ್ಚಿ 19, 1975 ರಂದು ಬಿಡುಗಡೆ ಮಾಡಲಾಯಿತು. ಇದು ಹಾಟರ್ ಥಾನ್ ಹೆಲ್ ಗಿಂತ ವ್ಯಾಪಾರಿ ದೃಷ್ಟಿಯಿಂದ ಸ್ವಲ್ಪ ಹೆಚ್ಚು ಯಶಸ್ವಿಯಾಯಿತು. ಈ ಆಲ್ಬಂನಲ್ಲಿ "ರಾಕ್ ಅಂಡ್ ರೋಲ್ ಆಲ್ ನೈಟ್" ಎನ್ನುವ ಹಾಡಿತ್ತು. ಈ ಹಾಡು ನಂತರದ ದಿನಗಳಲ್ಲಿ ಬ್ಯಾಂಡಿನ ವಿಶಿಷ್ಟ ಶೈಲಿಯ ಸಂಗೀತದ ಮುದ್ರೆಯ ಹಾಡು ಎಂದು ಗುರುತಿಸಲ್ಪಡುತ್ತದೆ (ಟ್ರೇಡ್ ಮಾರ್ಕ್ ಸಾಂಗ್).[೨೩]

ಕಿಸ್ ಆಲ್ಬಂಗಳು ದೊಡ್ಡ ಪ್ರಮಾಣದಲ್ಲಿ ವ್ಯಾಪಾರವಾಗಿರದ್ದಿದ್ದರೂ ಕೂಡ, ಈ ಬ್ಯಾಂಡ್ ತನ್ನ ವಿಶಿಷ್ಟವಾದ ಪ್ರದರ್ಶನಗಳಿಂದಾಗಿ ಲೈವ್ ಆಕ್ಟ್ ಗಳಲ್ಲಿ(ರಂಗ ಪ್ರದರ್ಶನ) ಹೆಸರುವಾಸಿ ಆಗ ತೊಡಗಿತು. ಕಿಸ್ ಸಂಗೀತ ಗೋಷ್ಟಿಗಳಲ್ಲಿ (ಕಾನ್ಸರ್ಟ್ಸ) ಸಿಮನ್ಸ್ "ರಕ್ತ" (ಮುಖ್ಯವಾಗಿ ಮೊಸರು (ಯಾಗರ್ಟ್) ಮತ್ತು ಬಣ್ಣ ಕೊಡುವ ರಸಾಯನಗಳು) ಉಗುಳುವುದು, ಆಥವಾ "ಬೆಂಕಿಯನ್ನು ಉಗುಳುವುದು"; ಫ್ರೆಹ್ಲಿ ಗಿಟಾರ್ ನುಡಿಸುತ್ತಿದ್ದ ಹಾಗೆಯೆ ಅದು ಬೆಂಕಿ ಹತ್ತಿಕೊಳ್ಳುವುದು; ಕ್ರಿಸ್ ಡ್ರಮ್ ಗಳನ್ನು ಹೊಡೆಯುವಾಗ ಅದು ಬೆಂಕಿಯ ಕಿಡಿಗಳನ್ನು ಕಾರುವುದು; ಸ್ಟಾನ್ಲಿಯ ಟೌನ್ ಶೆಂಡ್ ಶೈಲಿಯಲ್ಲಿ ಗಿಟಾರ್ ನುಡಿಸುವುದು ಹಾಗು ಪ್ರದರ್ಶನದ ಉದ್ದಕ್ಕೂ ಇತರೆ ಪೈರೊಟೆಕ್ನಿಕ್ ಗಳಿರುತ್ತಿದ್ದವು.[೨೪]

1975ರ ಅಂತ್ಯದ ವೇಳೆಗೆ, ಕಾಸಾಬ್ಲಾಂಕಾ ಬಹುತೇಕವಾಗಿ ದಿವಾಳಿಯಾಗುವ ಹಂತವನ್ನು ತಲುಪಿತ್ತು. ಕಿಸ್ ಅವರ ಧ್ವನಿಮುದ್ರಣ ಒಪ್ಪಂದವನ್ನು ಕಳೆದು ಕೊಳ್ಳುವ ಭೀತಿ ಎದುರಿಸುತ್ತಿತ್ತು. ಅವರುಗಳ ಅಸ್ತಿತ್ವವನ್ನು ಉಳಿಸಿಕೊಳ್ಳಲು ಇಬ್ಬರಿಗೂ ಯಶಸ್ಸಿನ ಅವಶ್ಯಕತೆಯಿತ್ತು. ಈ ಯಶಸ್ಸು ಅವರಿಗೆ, ಅವರು ಊಹಿಸದ ರೂಪದಲ್ಲಿ, ಡಬಲ್ ಲೈವ್ ಅಲ್ಬಂ ನ ಮೂಲಕ ದೊರೆಯಿತು.[೨೫]

ಪ್ರಸಿದ್ದಿಗೆ ಬಂದದ್ದು(1975-1978)[ಬದಲಾಯಿಸಿ]

ಕಿಸ್ ಅವರ ಗೋಷ್ಟಿಯಲ್ಲಿ ವ್ಯಕ್ತವಾಗುತ್ತಿದ ಸಂಭ್ರಮ ಸಡಗರವನ್ನು ಅವರ ಮೊದಲ ಲೈವ್ ಆಲ್ಬಂನಲ್ಲಿ ವ್ಯಕ್ತಪಡಿಸಲು ಇಷ್ಟ ಪಟ್ಟರು (ಇದು ಅವರ ಸ್ಟೂಡಿಯೋ ಆಲ್ಬಂಗಳಲ್ಲಿ ಆಭಿವ್ಯಕ್ತವಾಗಿರಲ್ಲಿಲ್ಲ). (ಲೈವ್ ಆಲ್ಬಂ: ಇದರಲ್ಲಿ ರಂಗದ ಮೇಲೆ ನೀಡುವ ಪ್ರದರ್ಶನಗಳನ್ನು ಮುದ್ರಿಸ ತಯಾರಿಸಲಾಗುತ್ತದೆ. ಲೈವ್ ಆಲ್ಬಂಗಳಲ್ಲಿ ಒಂದು ಗೋಷ್ಟಿ (ಕಾನ್ಸರ್ಟ್) ಅಥವಾ ಹಲಾವರು ಗೋಷ್ಟಿಗಳ ಮುದ್ರಣ ಒಳಗೊಂಡಿರಬಹುದು). ಸೆಪ್ಟಂಬರ್ 10, 1975 ರಂದು ಬಿಡುಗಡೆಯಾದ ಅಲೈವ್! ಗೋಲ್ಡ್ ಶ್ರೇಣಿಯನ್ನು ಪಡೆಯಿತು. ಈ ಆಲ್ಬಂನ "ರಾಕ್ ಅಂಡ್ ರೋಲ್ ಆಲ್ ನೈಟ್" ಎನ್ನುವ ಸಿಂಗಲ್ ನ ಲೈವ್ ಆವೃತ್ತಿ ಟಾಪ್ 40 ಸಿಂಗಲ್(40 ಯಶಸ್ವಿ ಹಾಡಿನ)ಪಟ್ಟಿಯನ್ನು ಪ್ರವೇಶಿಸಿದ ಕಿಸ್ ನ ಮೊದಲ ಹಾಡಾಯಿತು. ಈ ಅಲ್ಬಂನಲ್ಲಿದ "ರಾಕ್ ಅಂಡ್ ರೋಲ್ ಆಲ್ ನೈಟ್" ಹಾಡಿಗೆ ಗಿಟಾರ್ ಸೋಲೋವನ್ನು ಬಳಸಲಾಗಿತ್ತು. ಇದು ಈ ಹಾಡಿನ ಸ್ಪಷ್ಟವಾದ ಅಂತಿಮ ರೂಪವೆಂದು ಪರಿಗಣಿಸಲ್ಪಟ್ಟಿದೆ; ಇದು ಸ್ಟೂಡಿಯೋದ ಮೊಲ ಅವೃತ್ತಿಗೆ ಪೂರಕವಾಗಿದೆ. ಬ್ಯಾಂಡ್ ಆಲ್ಬಂಗೆ ಹೊಸದಾಗಿ ಧ್ವನಿಗಳನ್ನು ಸೇರಿಸಿದ್ದು, ಅಭಿಮಾನಿಗಳಗೆ ಮೋಸಮಾಡಲು ಅಲ್ಲ ಬದಲಾಗಿ ಹೆಚ್ಚಿನ ಉತ್ಸಾಹ ಮತ್ತು ನೈಜತೆಯನ್ನು ತುಂಬುವ ಸಲುವಾಗಿ ಮಾಡಲಾಯಿತು ಎಂದು ಇತ್ತೀಚಿನ ವರ್ಷಗಳಲ್ಲಿ ಹೇಳಿಕೊಂಡಿತು.[೨೬]

ಅಲೈವ್! ನ ಯಶಸ್ಸು , ಕಿಸ್ ಹುಡುಕುತ್ತಿದ್ದ ಮೊದಲ ಯಶಸ್ಸನ್ನು ಕೊಟ್ಟಿದಷ್ಟೆ ಅಲ್ಲದೆ ಇನ್ನೇನು ದಿವಾಳಿಯಾಗುತ್ತಿದ್ದ ಕಾಸಾಬ್ಲಾಂಕಾಗೆ ಮರುಜೀವ ನೀಡಿತು. ಈ ಯಶಸ್ಸಿನ ಬೆನ್ನಲ್ಲೆ ಕಿಸ್, ಹಿಂದೆ ಅಲೈಸ್ ಕೂಪರ್ ನೊಂದಿಗೆ ಕೆಲಸ ಮಾಡಿದ್ದ ನಿರ್ಮಾಪಕ, ಬಾಬ್ ಎಲರಿನ್ ರೊಂದಿಗೆ ಕೈಜೋಡಿಸಿತು. ಇದರ ಫಲಶ್ರುತಿಯೆ "ಡೆಸ್ಟ್ರಾಯರ್ " (ಮಾರ್ಚಿ 15, 1976 ರಲ್ಲಿ ಬಿಡುಗಡೆಗೊಂಡ), ಕಿಸ್ ನ ಇಲ್ಲಿಯವರೆಗಿನ ಅತ್ಯಂತ ಸಂಗೀತ ಮಹತ್ವಾಕಾಂಕ್ಷೆಯ ಸ್ಟೂಡಿಯೋ ಆಲ್ಬಂ. ಡೆಸ್ಟ್ರಾಯರ್ , ಅದರ ಸ್ವಲ್ಪ ಜಟಿಲವಾದ ರಚನೆಯಿಂದಾಗಿ(ಆರ್ಕೆಸ್ಟ್ರಾ, ಕ್ವೈರ್ ಮತ್ತು ಇತರೆ ಟೇಪ್ ಪರಿಣಾಮಗಳನ್ನು ಬಳಸಿಕೊಂಡ), ಕಿಸ್ ನ ಮೊದಲ ಮೂರು ಸ್ಟೂಡಿಯೋ ಆಲ್ಬಂಗಳ ಸಂಗೀತಕ್ಕಿಂತ ವಿಭಿನ್ನವಾಗಿತ್ತು.(ಸ್ಟೂಡಿಯೋ ಆಲ್ಬಂ: ಸ್ಟೂಡಿಯೋದ ನಿಯಂತ್ರಿತ ವಾತವರಣದಲ್ಲಿ ತಯಾರಿಸುವ ಆಲ್ಬಂ) ಈ ಆಲ್ಬಂ ಪ್ರಾರಂಭದಲ್ಲಿ ಚೆನ್ನಾಗಿ ಮಾರಾಟವಾಗಿ ತಂಡದ ಎರಡನೇ ಗೋಲ್ಡ್ ಆಲ್ಬಂ ಆಯಿತು. ಆದರೆ, ಇದು ಬಹಳ ಬೇಗನೆ ಚಾರ್ಟ್ ನಿಂದ ಇಳಿಯತೊಡಗಿತು. "ಬೆತ್" ಎಂಬ ಹಾಡನ್ನು (ಬ್ಯಾಲಡ್)"ಸಿಂಗಲ್" ಆಗಿ ಬಿಡುಗಡೆಯಾದ ನಂತರವಷ್ಟೆ, ಆಲ್ಬಂ ನ ವ್ಯಾಪಾರ ಪುನಃ ಹೆಚ್ಚಾಯಿತು. "ಬೆತ್" ಬ್ಯಾಂಡಿಗೆ #7ರ ಸ್ಥಾನಗಳಿಸಿ ಕೊಟ್ಟಿತು. ಈ ಹಾಡಿನ ಯಶಸ್ಸು ಆಲ್ಬಂ ಮಾರಾಟದ ಮೇಲೆ ಪ್ರಭಾವ ಬೀರಿತು(ಇದು 1976ರ ಅಂತ್ಯದ ವೇಳೆಗೆ ಪ್ಲಾಟಿನಂ ಶ್ರೇಣಿಯನ್ನು ಪಡೆಯಿತು)ಅಷ್ಟೇ ಅಲ್ಲದೆ, ಕಿಸ್ ನ ಟಿಕೇಟ್ ಮಾರಾಟವನ್ನು ಕೂಡ ಸುಧಾರಿಸಿತು.

ಆಕ್ಟೊಬರ್ 1976ರಲ್ಲಿ ಕಿಸ್ "ದಿ ಪಾಲ್ ಲಿಂಡ್ ಹಾಲೊವೀನ್ ಸ್ಪೆಷಲ್ " ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ಕಾರ್ಯಕ್ರಮದಲ್ಲಿ "ಡೆಟ್ರಾಯಿಟ್ ರಾಕ್ ಸಿಟಿ", "ಬೆತ್", ಮತ್ತು "ಕಿಂಗ್ ಆಫ್ ದಿ ನೈಟ್ ಟೈಮ್ ವರ್ಲ್ಡ್" ಹಾಡುಗಳಿಗೆ ತುಟಿ-ಅಲ್ಲಾಡಿಸಿದರು. ಬಹಳಷ್ಟು, ಹದಿಹರೆಯದವರಿಗೆ ಇದು ಕಿಸ್ ನ ನಾಟಕೀಯ ರೂಪದ ಮೊದಲ ಆನುಭವವಾಗಿತ್ತು. ಈ ಕಾರ್ಯಕ್ರಮವನ್ನು ಬಿಲ್ ಅಕೊಯಿನ್ ಸಹ ನಿರ್ಮಾಣ ಮಾಡಿದ. ಈ ಮೂರು ಹಾಡುಗಳ ಪ್ರದರ್ಶನದ ಜೊತೆಗೆ,ಸ್ವತಃ ಪಾಲ್ ಲಿಂಡ್ ನಡೆಸಿಕೊಟ್ಟ ಕಿಸ್ ಕುರಿತ ಒಂದು ಚಿಕ್ಕ ಹಾಸ್ಯಭರಿತ ಸಂದರ್ಶನವು ಇತ್ತು. ಇದರಲ್ಲಿ, ಲಿಂಡ್ ತಂಡದ ಸದಸ್ಯರ ಅಂಕಿತನಾಮವನ್ನು (ಫರ್ಸ್ಟ್ ನೇಮ್) ಕೇಳಿ, "ಓಹ್, ನನಗೆ ಒಳ್ಳೆಯ ಧಾರ್ಮಿಕ ತಂಡವೆಂದರೆ ಪ್ರೀತಿ" ಎಂದು ಉದ್ಗರಿಸುವ ಸಾಲುಗಳಿದ್ದವು.

ರಾಕ್ ಅಂಡ್ ರೋಲ್ ಓವರ್ (ನವೆಂಬರ್ 11, 1976) ಮತ್ತು ಲವ್ ಗನ್ (ಜೂನ್ 30, 1977) ಎಂಬ ಎರಡು ಯಶಸ್ವಿಯಾದ ಸ್ಟೂಡಿಯೋ ಆಲ್ಬಂಗಳು ಒಂದು ವರ್ಷದ ಅಂತರದಲ್ಲಿ ಬಿಡುಗಡೆಯಾದವು. ಆಲೈವ್ II , ಎನ್ನುವ ಎರಡನೇ ಲೈವ್ ಆಲ್ಬಂ, ಆಕ್ಟೋಬರ್ 14,1977 ರಂದು ಬಿಡುಗಡೆಯಾಯಿತು. ಈ ಎಲ್ಲಾ ಮೂರು ಆಲ್ಬಂಗಳು, ಅವುಗಳು ಬಿಡುಗಡೆಯಾಗಿತ್ತಿದ್ದ ಹಾಗೆಯೇ ಆಥವಾ ಸ್ವಲ್ಪ ದಿನಗಳಲ್ಲಿಯೇ, ಪ್ಲಾಟಿನಂ ಪ್ರಮಾಣಿಕರಣವನ್ನು ಪಡೆದೆವು. ಕಿಸ್, 1976ರಿಂದ 1978ರ ವರೆಗು ಹಾಡುಗಳ ಮುದ್ರಣ ಮತ್ತು ರಾಯಲ್ಟಿಗಳ ಮೂಲಕ ಸುಮಾರು $17.7 ದಶಲಕ್ಷ ಸಂಪಾದನೆ ಮಾಡಿತು.[೨೭] 1977ರಲ್ಲಿ ನಡೆಸಿದ ಗಾಲಪ್ ಪೋಲ್ ಕಿಸ್ ಅನ್ನು ಅಮೇರಿಕಾದ ಜನಪ್ರಿಯ ಬ್ಯಾಂಡ್ ಎಂದು ಆಯ್ಕೆ ಮಾಡಿತು. (ಗಾಲಪ್ ಪೋಲ್: ಗಾಲಪ್ ಎನ್ನುವ ಸಂಸ್ಥೆ ನಡೆಸುವ ಸಾರ್ವಜನಿಕ ಅಭಿಪ್ರಾಯಗಳ ಸಂಗ್ರಹಣೆ) ಕಿಸ್, ಜಪಾನಿನ ಬುಡೊಕಾನ್ ಹಾಲಿನಲ್ಲಿ ಸಂಪೂರ್ಣ ತುಂಬಿದ ಗೃಹಗಳ ಐದು ಪ್ರದರ್ಶನಗಳನ್ನು ನೀಡಿತು. ಇದು ಬೀಟಲ್ಸ್ ಮಾಡಿದ್ದ ನಾಲ್ಕು ಪ್ರದರ್ಶನಗಳ ದಾಖಲೆಯನ್ನು ಮುರಿದಿತ್ತು.

ಮೇ 1977 ರಲ್ಲಿ, ಮಾರ್ವೆಲ್ ಪ್ರಕಟಸಿದ ಹೊವಾರ್ಡ್ ದಿ ಡಕ್ ಸಂಚಿಕೆ 12 ಯಲ್ಲಿ ಕಿಸ್ ತಮ್ಮ ಮೊದಲ ಕಾಮಿಕ್ ನಲ್ಲಿ ಕಾಣಿಸಿಕೊಂಡರು.[೨೮]

 ಇದು ಕಿಸ್ ಸಂಬಂಧಿತ ಆನೇಕ ಕಾಮಿಕ್ಸ್ ಗಳಿಗೆ ನಾಂದಿ ಹಾಡಿತು. ಇದನ್ನು ಮೊದಮೊದಲು ಮಾರ್ವೆಲ್ ಪ್ರಕಟಿಸುತ್ತಿತ್ತು.

ಕಿಸ್ ನ ಯಶಸ್ವಿಯಾದ ಬಹಳ ಆಲ್ಬಂಗಳಲ್ಲಿ ಮೊದಲನೆಯದಾದ ಡಬಲ್ ಪ್ಲಾಟಿನಂ ಅನ್ನು ಏಪ್ರಿಲ್ 2, 1978 ರಂದು ಬಿಡುಗಡೆ ಮಾಡಲಾಯಿತು. ಈ ಡಬಲ್ ಆಲ್ಬಂನಲ್ಲಿ ಯಶಸ್ವಿಯಾದಂತಹ ಅವರ ಹಾಡುಗಳ ರೀಮಿಕ್ಸ್ ಆವೃತ್ತಿಗಳು ಹಾಗು "ಸ್ಟ್ರಟರ್ '78," ಎಂಬ ಹಾಡು ಕೂಡ ಇತ್ತು. ಈ ಹಾಡನ್ನು ಕಿಸ್ ನ ವೈಶಿಷ್ಟ್ಯ ಮಾದರಿಯ ಹಾಡು ಎಂದು ಪರಿಗಣಿಸಲ್ಪಡುತ್ತದೆ.(ಸಿಗ್ನೆಚರ್ ಹಾಡು). ನೀಲ್ ಬೋಗಾರ್ಟ್ ರ ಕೋರಿಕೆಯ ಮೇರೆಗೆ ಈ ಹಾಡನ್ನು ಆಗಿನ ಕಾಲದಲ್ಲಿ ಜನಪ್ರಿಯವಾಗಿದ್ದ ಡಿಸ್ಕೋ ಸಂಗೀತ ಶೈಲಿಯ ಮಾದರಿಯಲ್ಲಿ ಸಂಯೋಜಿಸಲಾಗಿತ್ತು.[೨೯]

ಈ ಕಾಲಾವಧಿಯಲ್ಲಿ, ಕಿಸ್ ಮರ್ಚಂಡೈಸ್ ಗಳ ವ್ಯಾಪಾರ ತಂಡದ ವರಮಾನದ ಇನ್ನೊಂದು ಬಹು ದೊಡ್ಡ ಭಾಗವಾಗ ತೊಡಗಿತು. (ಮರ್ಚಂಡೈಸ್: ವಿಶೇಷವಾದ ಸಮಾಗ್ರಿಗಳು; ಈ ಸಂದರ್ಭದಲ್ಲಿ ಕಿಸ್ ಗೆ ಸಂಬಂಧಪಟ್ಟ ವಿಶೇಷವಾದ ಸಾಮಗ್ರಿಗಳು- ಉದಾಹರಣೆಗೆ ಕಿಸ್ ಕಾಮಿಕ್ಸ್, ಸಂಗೀತ ಸಾಧನಗಳು) ಈ ಕಾಲಘಟ್ಟದಲ್ಲಿ ಬಿಡುಗಡೆಯಾದ ಕೆಲವು ಉತ್ಪನ್ನಗಳೆಂದರೆ: ಮಾರ್ವೆಲ್ ಪ್ರಕಟಿಸಿದ ಎರಡು ಕಾಮಿಕ್ ಪುಸ್ತಕಗಳು (ಇದರಲ್ಲಿ ಮೊದಲಿನ ಪುಸ್ತಕದಲ್ಲಿ ತಂಡದ ಸದಸ್ಯರು ಕೊಟ್ಟಿದ ರಕ್ತವನ್ನು ಮಿಶ್ರಣ ಮಾಡಿದ್ದ ಇಂಕ್ ಬಳಸಲಾಗಿತ್ತು), ಪಿನ್ ಬಾಲ್ ಯಂತ್ರ, ಕಿಸ್ ಗೊಂಬೆಗಳು, "ಕಿಸ್ ಯುವರ್ ಫೇಸ್ ಮೇಕ್ಅಫ್" ಸಮಾಗ್ರಿ, ಹಾಲೊವೀನ್ ಮುಖವಾಡಗಳು, ಬೋರ್ಡ್ ಆಟಗಳು, ಹಾಗು ಇನ್ನೂ ಇತರ ಅನೇಕ ನೆನಪಿನ ಕಾಣಿಕೆಗಳು. ಕಿಸ್ ಆರ್ಮಿ ಎನ್ನುವ ಈ ಬ್ಯಾಂಡಿನ ಆಭಿಮಾನ ಸಂಘದ ಸದಸ್ಯರ ಸಂಖ್ಯೆ ಆರು ಸಂಖ್ಯೆಗಳನ್ನು ದಾಟಿತ್ತು. 1977 ಮತ್ತು 1979 ರ ನಡುವೆ, ವಿಶ್ವದಾದ್ಯಂತ ಮರ್ಚೆಂಡೈಸ್ ಮಾರಾಟದಿಂದ (ಅಂಗಡಿಗಳಲ್ಲಿ ಮತ್ತು ಪ್ರವಾಸದ ಸಂದರ್ಭಗಳಲ್ಲಿ) ಅಂದಾಜು $100 ದಶಲಕ್ಷ ತಲುಪಿತು.[೩೦]

ಒಂದೇ ದಿನ ಬಿಡುಗಡೆಯಾದ ನಾಲ್ಕು ಸೋಲೋ ಆಲ್ಬಂಗಳು(1978)[ಬದಲಾಯಿಸಿ]

ಪಾಲ್ ಸ್ಟಾನ್ಲಿ

ಕಿಸ್ 1978ರ ವೇಳೆಗೆ ವ್ಯವಹಾರಿಕವಾಗಿ ತುತ್ತತುದಿಯಲ್ಲಿದ್ದರು. ಕೇವಲ ಎರಡು ವರ್ಷದ ಅವಧಿಯಲ್ಲಿ,ಅಲೈವ್ II - ಬ್ಯಾಂಡಿನ ನಾಲ್ಕನೇ ಪ್ಲಾಟಿನಂ ಆಲ್ಬಂ ಆಗಿತ್ತು. ಇದಾದ ನಂತರ, ಕೈಗೊಂಡ ಪ್ರವಾಸದಲ್ಲಿ ತಂಡದ ಇತಿಹಾಸದಲ್ಲೆ ಅತೀ ಹೆಚ್ಚಿನ ಸರಾಸರಿ ಹಾಜರಾತಿ ಪ್ರಮಾಣವಿತ್ತು(13,500). ಇದರ ಜೊತೆಗೆ, 1977ರಲ್ಲಿ ಕಿಸ್ ನ ನಿವ್ವಳ ಆದಾಯ US$10.2 ದಶಲಕ್ಷದಷ್ಟಿತ್ತು. ತಂಡ ಅದರ ಕ್ರಿಯಾತ್ಮಕ ಮ್ಯಾನೇಜರ್ ಬಿಲ್ ಅಕೊಯಿನ್ ಜೊತೆಗೂಡಿ, ಬ್ಯಾಂಡ್ ಅನ್ನು ಇನ್ನು ಹೆಚ್ಚಿನ ಕೀರ್ತಿಯ ಶಿಖರಕ್ಕೆ ತೆಗೆದುಕೊಂಡು ಹೋಗಲು ಯೋಚಿಸಿದರು. ಇದನ್ನು ಈಡೇರಿಸುವ ಸಲುವಾಗಿ, 1978ರಲ್ಲಿ ಕೈಗೊಳ್ಳಬೇಕಾದ ಮಹತ್ವಕಾಂಕ್ಷೆಯ,ಎರಡು ರೀತಿಯ ತಂತ್ರಗಾರಿಕೆಯನ್ನು ರೂಪಿಸಿದರು.[೩೧]

ಈ ತಂತ್ರದ ಮೊದಲ ಭಾಗವಾಗಿ ಕಿಸ್ ತಂಡದ ಪ್ರತಿಯೊಬ್ಬರಿಂದಲೂ ಒಂದು ಸೋಲೋ (ತನಿ) ಆಲ್ಬಂ ಬಿಡುಗಡೆ ಮಾಡುವುದನ್ನು ಒಳಗೊಂಡಿತು. (ಸೋಲೋ ಆಲ್ಬಂ: ಏಕವ್ಯಕ್ತಿ ನಡೆಸಿಕೊಡುವ ಪ್ರದರ್ಶನ) ಬ್ಯಾಂಡಿನ ಸದಸ್ಯರಲ್ಲಿ ಹೆಚ್ಚುತ್ತಿದ್ದ ಘರ್ಷನೆಗಳನ್ನು ಕಡಿಮೆ ಮಾಡುವ ಸಲುವಾಗಿ ಎಂದು ಈ ಸೋಲೋ ಆಲ್ಬಂಗಳನ್ನು ಮಾಡಿದಾಗಿ ಹೇಳಿಕೊಂಡರು ಸಹ, ಅವರ 1976ರ ಒಪ್ಪಂದದ ಪ್ರಕಾರ ನಾಲ್ಕು ಸೋಲೋ ಹಾಡುಗಳನ್ನು (ರೆಕಾರ್ಡ್)ರಚಿಸಬೇಕಿತ್ತು. ಇದಲ್ಲದೆ ತಂಡ ಒಪ್ಪಿಕೊಂಡಿದ್ದ ಐದು ಹಾಡುಗಳ ರಚನೆ ಮಾಡುವ ಒಪ್ಪಂದಕ್ಕೆ ಅನುಗುಣವಾಗಿ ತಂಡದ ಎಲ್ಲ ಸದಸ್ಯರು ಸೇರಿ ಐದನೇ ಹಾಡನ್ನು ಪೂರೈಸಬೇಕಿತ್ತು.[೩೨] ಸೋಲೋ ಆಲ್ಬಂ ಬಹುತೇಕವಾಗಿ ಒಬ್ಬರ ಪ್ರಯತ್ನವೇ ಆಗಿತ್ತು (ಒಬ್ಬರ ಆಲ್ಬಂನಲ್ಲಿ ತಂಡದ ಇತರ ಸದಸ್ಯರು ಕಾಣಿಸಿಕೊಳ್ಳಲಿಲ್ಲ), ಹೀಗ್ಗಿದ್ದರೂ ಅವುಗಳಲ್ಲೆವನ್ನು ಕಿಸ್ ಆಲ್ಬಂಗಳೆಂದೆ ಬಿಡುಗಡೆ ಮಾಡಿ ಮಾರಾಟ ಮಾಡಲಾಯಿತು (ಒಂದೆ ರೀತಿಯಾದ ರಕ್ಷಾಪುಟ(ಕವರ್ ಆರ್ಟ್) ಮತ್ತು ಪೋಸ್ಟರುಗಳಿದ್ದವು(ಪೋಸ್ಟರ್ ಇನಸರ್ಟ್ಸ್)). ಒಂದು ರಾಕ್ ಬ್ಯಾಂಡಿನ ಎಲ್ಲ ಸದಸ್ಯರು ಸೋಲೋ ಆಲ್ಬಂಗಳನ್ನು ಒಂದೇ ದಿನ ಬಿಡುಗಡೆ ಮಾಡಿದ್ದು ಇದೇ ಮೊದಲ ಬಾರಿಯಾಗಿತ್ತು.[೩೩]

ತಂಡದ ಸದಸ್ಯರಿಗೆ ಅವರ ವ್ಯಯಕ್ತಿಕ, ಕಿಸ್ ಆಭಿರುಚಿಗೆ ಹೊರತಾದ, ಸಂಗೀತ ಶೈಲಿಯನ್ನು ಪ್ರದರ್ಶಿಸಲು ಇದು ಅವಕಾಶವನ್ನು ಕಲ್ಪಿಸಿತು. ಇದಲ್ಲದೆ ಕೆಲವು ಸಂದರ್ಭಗಳಲ್ಲಿ, ಅವರ ಸಮಕಾಲಿನ ಕಲಾವಿದರ ಜೊತೆ ಕೆಲಸ ಮಾಡಲು ಸಾಧ್ಯವಾಯಿತು. ಸ್ಟಾನ್ಲಿ ಮತ್ತು ಫ್ರೆಹ್ಲಿಯ ಆಲ್ಬಂಗಳು ಕಿಸ್ ಬಳಸಿಕೊಂಡಿದ್ದ ಯಶಸ್ವಿಯಾದ ಹಾರ್ಡ್ ರಾಕ್ ಶೈಲಿಗೆ ಬಹು ಹತ್ತಿರವಾಗಿತ್ತು. ಇದೇ ವೇಳೆ, ಕ್ರಿಸ್ ರ ಆಲ್ಬಂ ಬ್ಯಾಲಾಡ್ ಗಳಿಂದ ತುಂಬಿದ್ದ, R&B ಶೈಲಿಯಲ್ಲಿತ್ತು. (ಬ್ಯಾಲಾಡ್: ಲಾವಣಿಗಳ ಹಾಗಿರುವ ಹಾಡು/ ಕಥೆಯನ್ನು ಹಾಡಿನ ರೂಪದಲ್ಲಿ ಹೇಳುವುದು). ನಾಲ್ಕು ಜನರ ಪೈಕಿ, ಸಿಮ್ಮನ್ಸಿನ ಆಲ್ಬಂ ಬಹಳ ವೈವಿಧ್ಯಮಯವಾಗಿತ್ತು. ಹಾರ್ಡ್ ರಾಕ್, ಬಾಲಾಡ್, ಬೀಟಲ್ಸ್ ನಿಂದ ಪ್ರಭಾವಿತವಾಗಿದ್ದ ಪಾಪ್ ಒಳಗೊಂಡಿದ್ದ ಈ ಆಲ್ಬಂನ ಕೊನೆಯಲ್ಲಿ "ವೆನ್ ಯು ವಿಶ್ ಅಪಾನ್ ಎ ಸ್ಟಾರ್"(ಪಿನೊಕಿಯೊ ಚಲನಚಿತ್ರದ) ಎನ್ನುವ ಕವರ್ ನಿಂದ ಹಾಡಿನಿಂದ ಮುಕ್ತಾಯಗೊಂಡಿತ್ತು. ಏರೊಸ್ಮಿತ್ಜೋ ಪೆರ್ರಿ, ಚೀಪ್ ಟ್ರಿಕ್ರಿಕ್ ನೀಲ್ಸೆನ್, ಡೂಬೀ ಬ್ರದರ್ಸ್ಜೆಫ್ "ಸ್ಕಂಕ್" ಬಾಕ್ಸಟರ್, ಪ್ರಮುಖ ಡಿಸ್ಕೋ ಕಲಾವಿದರಾದ ಡೊನಾ ಸಮ್ಮರ್, ಜಾನಿಸ್ ಇಯಾನ್, ಹೆಲೆನ್ ರೆಡ್ಡಿ, ಬಾಬ್ ಸೇಗೆರ್, ಹಾಗು ಆಗ ಗೆಳತಿಯಾಗಿದ್ದ ಚೆರ್, ಒಳಗೊಂಡಂತೆ ಆನೇಕರು ಸಿಮ್ಮನ್ಸ್ ಗೆ ಸಹಕರಿಸಿದರು.

ಕಿಸ್ ಸೋಲೋ ಆಲ್ಬಂಗಳು 18 ಸೆಪ್ಟೆಂಬರ್ 1978ರಲ್ಲಿ ಬಿಡುಗಡೆಯಾದವು. ಈ ಆಲ್ಬಂಗಳ ಮಾರಾಟ ಮಾಡಲು ಮಾಡಿದ ಪ್ರಚಾರದ ಭರಾಟೆ ಆಭೂತಪೂರ್ವವಾಗಿತ್ತು. ಕಾಸಾಬ್ಲಾಂಕಾ ಈ ಆಲ್ಬಂಗಳ ಐದು ದಶಲಕ್ಷ ಪ್ರತಿಗಳನ್ನು ತಯಾರಿಸುತ್ತಿರುವುದಾಗಿ ಹೇಳಿತು (ತಕ್ಷಣವೆ ಪ್ಲಾಟಿನಂ ಪ್ರಮಾಣವು ಖಚಿತವಾಯಿತು). ಅವರು ಅದನ್ನು ಮಾರಾಟ ಮಾಡುವ ಸಲುವಾಗಿ ಸುಮಾರು US$2.5 ದಶಲಕ್ಷ ಖರ್ಚುಮಾಡಿದರು.[೩೪] ಎಲ್ಲಾ ನಾಲ್ಕು ಸೋಲೋ ಆಲ್ಬಂಗಳು ಬಿಲ್ ಬೋರ್ಡ್ ಆಲ್ಬಂ ಚಾರ್ಟಿನ ಮೊದಲ 50ರ ಪಟ್ಟಿಗೆ ಸೇರ್ಪಡೆಯಾದವು. ಈ ಆಲ್ಬಂಗಳನ್ನು ಬಿಡುಗಡೆ ಆಗುವುದಕ್ಕೂ ಮುನ್ನವೆ ಈ ಆಲ್ಬಂಗಳನ್ನು ಮುಂಗಡವಾಗಿ ಕೋರಿಕೆಸಲ್ಲಿಸಿಲಾಗಿತ್ತು, ಆದರೆ ಈ ಆಲ್ಬಂ ಬಿಡುಗಡೆಯಾದಾಗ ಇದನ್ನು ವಾಪಸ್ಸು ರೆಕಾರ್ಡ್ ಕಂಪನಿಗೆ ಕಳುಹಿಸುವ ಪ್ರಯತ್ನ ಮಾಡಲಾಯಿತು, ಆಗ ಈ ಆಲ್ಬಂಗಳ ಮೇಲೆ ಭಾರಿ ರಿಯಾಯತಿಯನ್ನು ಘೋಷಿಸಲಾಯಿತು, ನಂತರ ಅಲ್ಬಂಗಳ ಮಾರಾಟ (ಬಹಳ ಬೇಗನೆ) ಜಾಸ್ತಿಯಾಯಿತು. "ಬಾರ್ಗಿನ್ ಬಿನ್" ನೋಡಿದ ಕಿಸ್ ಆಲ್ಬಂಗಳಲ್ಲಿ ಈ ಆಲ್ಬಂಗಳೆ ಮೊದಲುನೆವು.(ಬಾರ್ಗಿನ್ ಬಿನ್: ಮುಖ್ಯವಾಗಿ ಸಿಡಿ, ತಂತ್ರಾಂಶ, ಮತ್ತು ಇತರ ಯಂತ್ರೊಪಕರಣಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡುವುದು).

 ಎಲ್ಲಾ ನಾಲ್ಕು ಸೋಲೋ (ತನಿ)ಆಲ್ಬಂಗಳು ಲವ್ ಗನ್  ಎನ್ನುವ ಆಲ್ಬಂ ಎಷ್ಟೊ ವ್ಯಾಪಾರವಾಯಿತು ಅಷ್ಟೇ ಪ್ರಮಾಣದಲ್ಲಿ ಈ ನಾಲ್ಕು ಸೋಲೋ ಆಲ್ಬಂಗಳು ವ್ಯಾಪಾರವಾದವು. ಈ ನಾಲ್ಕರ ಪೈಕಿ, ಫ್ರೆಹ್ಲೆಯ ಆಲ್ಬಂ ಬಹಳ ಯಶಸ್ವಿಯಾಯಿತು (ಅಷ್ಟೇನು ಅಂತರವಿರಲಿಲ್ಲ). ಇದರಲ್ಲಿ ರೇಡಿಯೊ ಟಾಪ್ 20ರ ಯಶಸ್ವಿ ಗೀತೆ, ರುಸ್ ಬಲಾರ್ಡ್, ರ ರಚಿಸಿದ  ನ್ಯೂ ಯಾರ್ಕ್ ಗ್ರೂವ್, ಇದನ್ನು ಮೊದಲು ಪ್ರದರ್ಶನ ಮಾಡಿದ್ದು ಹೆಲೋ ಎನ್ನುವ ತಂಡ.[೩೫]

ಆಕೂಯಿನಿನ ಎರಡನೆಯ ಯೋಚನೆಯ ಪ್ರಕಾರ ಕಿಸ್ ಚಲನಚಿತ್ರವೊಂದರಲ್ಲಿ ನಟಿಸಬೇಕಿತ್ತು. ಹೀಗೆ ಮಾಡುವುದರಿಂದ, ಸೂಪರ್ ಹೀರೊಗಳು ಎನ್ನುವ ಅವರ ಇಮೇಜ್(ರೂಪ) ಇನ್ನಷ್ಟು ಬಲಗೊಳ್ಳುತ್ತದೆ ಎಂದು ನಂಬಲಾಯಿತು. ಚಲನಚಿತ್ರದ ಚಿತ್ರಿಕರಣವು 1978ರ ಸ್ಪ್ರಿಂಗ್‌ನಲ್ಲಿ (ವಸಂತದಲ್ಲಿ)ಪ್ರಾರಂಭವಾಯಿತು. ಈ ಯೋಜನೆಯು ಎ ಹಾರ್ಡ್ ಡೇಸ್ ನೈಟ್ ಮತ್ತು ಸ್ಟಾರ್ ವಾರ್ ಗಳ ಮಿಶ್ರಣವಾಗ ಬೇಕು ಎಂದು ಪ್ರಸ್ತಾಪಿಸಲಾಗಿತ್ತು. ಆದರೆ, ಕೊನೆಯಲ್ಲಿ ತಯಾರಾದ ಚಿತ್ರ ನಿರೀಕ್ಷಿಸಿದ ಮಟ್ಟವನ್ನು ತಲುಪಲಿಲ್ಲ. ಚಿತ್ರಕಥೆ ಆನೇಕ ಬದಲಾವಣೆಗಳನ್ನು ಕಂಡಿತ್ತು. ಬ್ಯಾಂಡ್ ನ ಸದಸ್ಯರು(ಅದರಲ್ಲೂ ಕ್ರಿಸ್ ಮತ್ತು ಫ್ರೆಹ್ಲಿ)ಚಲನಚಿತ್ರ ನಿರ್ಮಾಣದ ಪ್ರಕ್ರಿಯಿಂದ ನಿರಾಶೆಗೊಂಡರು(ಬೆಸತ್ತರು). ಕ್ರಿಸ್ ಚಿತ್ರ ನಿರ್ಮಾಣವಾದ ನಂತರ ಅದರ ಪೋಸ್ಟ್ ಪ್ರೊಡಕಷನ್ ಕೆಲಸಗಳಲ್ಲಿ ಭಾಗವಹಿಸಲು ಒಪ್ಪಲಿಲ್ಲ, ಹೀಗಾಗಿ ಅವನ ಮಾತುಗಳನ್ನು ಡಬ್ ಮಾಡಲು ಮತ್ತೊಬ್ಬ ಕಂಠದಾನ ಕಲಾವಿದನನ್ನು ನೇಮಿಸಿಲಾಯಿತು ಎಂದು ವರದಿಯಾಯಿತು. (ಕ್ರಿಸ್ ಈ ವರದಿಗಳನ್ನು ತಿರಸ್ಕರಿಸುತ್ತಾನೆ. ಅವನು ಚಿತ್ರ ನಿರ್ಮಾಣದ ಎಲ್ಲಾ ಹಂತಗಳಲ್ಲಿ ಭಾಗವಹಿಸಿರುವುದಾಗಿ ತಿಳಿಸುತ್ತಾನೆ.)[೩೬]

ಕೊನೆಗೆ, ಕಿಸ್ ಮೀಟ್ಸ್ ದಿ ಫಾಂಟಮ್ ಆಫ್ ದಿ ಪಾರ್ಕ್ ಎಂಬ ಹೆಸರಿನ ಚಿತ್ರವು NBC(ಎನ್.ಬಿ.ಸಿ) ಯಲ್ಲಿ ಆಕ್ಟೋಬರ್ 28, 1978 ರಂದು ಮೊದಲ ಬಾರಿಗೆ ಬಿಡುಗಡೆಯಾಯಿತು (ಹಾಲೊವೀನ್ ಗೆ ಸ್ವಲ್ಪ ಮುಂಚೆ). ಕಟು ಟೀಕೆಗಳ ನಡುವೆಯೂ, ಇದು ಆ ವರ್ಷದ ಅತಿ ದೊಡ್ಡ ಟಿವಿ ಚಿತ್ರವೆಂದು ಪರಿಗಣಿಸಲ್ಪಟ್ಟಿತು. ಆನೇಕ ಬದಲಾವಣೆಗಳ ನಂತರ, ಇದನ್ನು U.S.(ಯು.ಎಸ್.) ಹೊರಗಡೆ ಚಲನಚಿತ್ರಮಂದಿರಗಳಲ್ಲಿ 1979ರಲ್ಲಿ ಆಟ್ಯಾಕ್ ಆಫ್ ದಿ ಫಾಂಟಮ್ಸ್ ಎನ್ನುವ ಶೀರ್ಷಿಕೆಯಡಿಯಲ್ಲಿ ಬಿಡುಗಡೆ ಮಾಡಲಾಯಿತು. ಈ ಚಿತ್ರಬಿಡುಗಡೆಯಾದ ಮೇಲೆ ಬ್ಯಾಂಡ್ ಸದಸ್ಯರೊಂದಿಗೆ ನಡೆಸಿದ ಸಂದರ್ಶನಗಳಲ್ಲಿ, ಸದಸ್ಯರು ಚಿತ್ರ ತಯಾರಿಕೆಯ ಅನುಭವವನ್ನು ವ್ಯಂಗ್ಯ ಭರಿತವಾದ ಮಾತುಗಳಲ್ಲಿ ವ್ಯಕ್ತಪಡಿಸುತ್ತಿದ್ದರು. ಅವರಿಗೆ ಕೊನೆಯಲ್ಲಿ ಬಿಡುಗಡೆಗೊಂಡ ಚಿತ್ರದ ಬಗ್ಗೆ ಅಸಂತೋಷವಿತ್ತು, ಹಾಗು ಅಂತಹ ಚಿತ್ರ ತಯಾರಿಸಿದ್ದರ ಬಗ್ಗೆ ವಿಷಾದವಿತ್ತು. ಅವರಿಗೆ ಬಿಡುಗಡೆಯಾದ ಚಿತ್ರ ಅವರುಗಳನ್ನು ನಾಯಕರ (ಸೂಪರ್ ಹೀರೋಗಳ) ಬದಲಾಗಿ ಕೋಡಂಗಿಗಳ (ಕ್ಲೌನ್‌) ಹಾಗೆ ತೋರಿಸುತ್ತಿದೆ ಎನ್ನುವುದು ಅವರ ಭಾವನೆಯಾಗಿತ್ತು. ಚಿತ್ರದ ಕಲೆಯ ದೃಷ್ಟಿಯಿಂದ ಸೋಲು ಕಂಡಿತು. ಇದು ಬ್ಯಾಂಡ್ ಹಾಗು ಅಕೊಯಿನ್ ನಡುವೆ ಮನಸ್ಥಾಪ ಶುರುವಾಗಲು ಕಾರಣವಾಯಿತು.[೩೭]

 ಇದು ಎಲ್ಲೊ ಒಮ್ಮೊಮ್ಮೆ ಅಪರೂಪಕ್ಕೆ ಹೋಮ್ ವಿಡಿಯೋದಲ್ಲಿ ಸಿಗುತ್ತಿತ್ತು. ಪ್ರಸ್ತುತ, ಈ ಚಿತ್ರದ ಆವೃತ್ತಿಯು Kissology Volume Two: 1978-1991  ಎಂಬ ಹೆಸರಿನ DVD (ಡಿ.ವಿ.ಡಿ.) ಸಂಗ್ರಹದಲ್ಲಿ ಸಿಗುತ್ತದೆ.

ಮೇಕ್ಅಪ್ ನ ಕೊನೆಯ ವರ್ಷಗಳು ಹಾಗು ಇಳಿಕೆ ಕಂಡ ಕ್ಷಣ (1978-1983)[ಬದಲಾಯಿಸಿ]

ಎರಡು ವರ್ಷಗಳ ನಂತರ ಹೊಸ ವಸ್ತುಗಳನ್ನೊಳಗೊಂಡ ಡೈನಸ್ಟಿ (ಮೇ 22, 1979) ಎನ್ನುವ ಅಲ್ಬಂ, ಬ್ಯಾಂಡಿನ ಪ್ಲಾಟಿನಂ ಪರಂಪರೆಯನ್ನು ಮುಂದುವರೆಸಿತು.

ಇದರ  "ಐ ವಾಸ್ ಮೇಡ್ ಫಾರ್ ಲವಿಂಗ್ ಯು " ಎನ್ನುವ ಡಿಸ್ಕೋ ಶೈಲಿಯ ಹಾಡು, ಈ ಬ್ಯಾಂಡಿಗೆ ಇಲ್ಲಿಯವರೆಗಿನ ಅತಿ ಯಶಸ್ವಿ ಸಿಂಗಲ್ (ಹಾಡು) ಆಗಿದೆ.[೩೮]  ಕ್ರಿಸ್ ಒಂದು ಮೋಟಾರು ಅಪಘಾತದಿಂದ ಚೇತರಿಸಿಕೊಳ್ಳುತ್ತಿದ್ದ ಕಾರಣ, ಈ ಆಲ್ಬಂನ ಬಹುತೇಕ ತಾಳವಾದ್ಯವನ್ನು(ಪರ್ಕಷನ್)ಅನ್ಟೊನ್ ಫಿಗ್ ಎನ್ನುವ ಸೆಷನ್ ಡ್ರಮರ್ ನುಡಿಸಿದನು. (ಸೆಷೆನ್ ಡ್ರಮರ್:ಯಾವುದೇ ತಂಡಕ್ಕೆ ಸೇರದೆ ಸ್ವತಂತ್ರವಾಗಿ ದುಡಿಯುವವ- ಫ್ರೀಲಾನ್ಸರ್) ಕ್ರಿಸ್ "ಡರ್ಟಿ ಲಿವಿಂಗ್" ಎನ್ನುವ ಹಾಡಿಗೆ ಡ್ರಮ್ ನುಡಿಸಿ ಹಾಗು ಆ ಹಾಡಿನ ಪ್ರಧಾನ ಗಾಯಕನಾಗಿದ್ದನು.[೩೯]

"ದಿ ರಿಟರ್ನ್ ಆಫ್ ಕಿಸ್" ಎಂದೆ ಪ್ರಚಾರ ಮಾಡಲ್ಪಟ್ಟ "ಡೈನಸ್ಟಿ ಪ್ರವಾಸ", ಕಿಸ್ ಹಾಗು ಅವರ ತಂಡದಿಂದ ಅವರು ಹಿಂದಿನ ಪ್ರವಾಸಗಳಲ್ಲಿ ಗಳಿಸಿದ್ದ ಯಶಸ್ಸನ್ನು ಮುಂದುವರೆಸಿಕೊಂಡು ಹೋಗುತ್ತದೆ ಎಂದು ನಂಬಿದ್ದರು. ಕಿಸ್-ವಸ್ತುವಾಧರಿಸಿದ ಕಿಸ್ ವರ್ಲ್ಡ್ ಎಂಬ ಹೆಸರಿನ ಅಮ್ಯೂಸ್ಮೆಂಟ್ ಪಾರ್ಕ್(ವಿಹಾರ ಧಾಮ) ಅನ್ನು ಸ್ಥಾಪಿಸಲು ಯೋಚಿಸಲಾಯಿತು. ಆದರೆ, ಇದಕ್ಕೆ ಭಾರಿ ವೆಚ್ಚವಾಗುತ್ತಿದ್ದ ಕಾರಣ ಈ ಯೋಚನೆಯನ್ನು ಕೈಬಿಡಲಾಯಿತು.[೪೦] ಆದರೆ, "ದಿ ರಿಟರ್ನ್ ಆಫ್ ಕಿಸ್", ಪ್ರವಾಸದಲ್ಲಿ ಪ್ರೇಕ್ಷಕರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿತ್ತು.[೪೧]

ಈ ಪ್ರವಾಸಕ್ಕೆ ಬಂದ ಪ್ರೇಕ್ಷಕರು, ಹಿಂದಿನ ಪ್ರವಾಸಗಳಲ್ಲಿ ಬಂದಿದ್ದ ಪ್ರೇಕ್ಷಕರಿಗಿಂತ ಚಿಕ್ಕವಯಸ್ಸಿನವರಾಗಿದ್ದರು. ಬಹಳಷ್ಟು ಪ್ರದರ್ಶನಗಳಲ್ಲಿ ಕಿಸ್ ಮೇಕ್ಅಪ್ ತೊಟ್ಟಿದ್ದ ತಾರುಣ್ಯದ ಹೊಸ್ತಿಲಲ್ಲಿದ್ದ ಮಕ್ಕಳ ಜೊತೆಯಲ್ಲಿ ಅವರ ತಂದೆ-ತಾಯಂದಿರು(ಕೆಲವೊಂದು ಸಂದರ್ಭಗಳಲ್ಲಿ ಅವರೂ ಕೂಡ ಮೇಕ್ಅಪ್ ತೊಟ್ಟಿರುತ್ತಿದ್ದರು)ಬಂದಿರುತ್ತಿದ್ದರು. ಕಿಸ್ ಈ ಹೊಸ ಅಭಿಮಾನಿ ಬಳಗವನ್ನು ತಡೆಯಲು ಏನೂ ಮಾಡಲಿಲ್ಲ. ಇವರು ಬಣ್ಣಬಣ್ಣದ ವೇಷಭೂಷಣಗಳು ತೊಡುತ್ತಿದ್ದ ಕಾರಣ, ಇವರುಗಳು ಕಿರಿಯ ಅಭಿಮಾನಿಗಳ ಕಣ್ಣಿಗೆ ವ್ಯಂಗ್ಯ ಚಿತ್ರಗಳ ಹಾಗೆ (ಕಾರ್ಟೂನಿಷ್ ಇಮೇಜ್)ಕಾಣಿಸುತ್ತಿದ್ದರು.[೪೨]

ಬ್ಯಾಂಡಿನ ಆಭಿಮಾನಿಗಳಿಗೆ ಬ್ಯಾಂಡಿನ ಸದಸ್ಯರ ನಡುವೆಯಿದ್ದ ಭಿನ್ನಭಿಪ್ರಾಯಗಳ ಸುಳಿವಿರಲಿಲ್ಲ. ಆಕ್ಟೋಬರ್ 31, 1979 ರಂದು ಅಪರಾತ್ರಿಯಲ್ಲಿ (ಲೇಟ್ ನೈಟ್)ಪ್ರಸಾರವಾಗುವ ಟಾಮ್ ಸ್ನೈಡರ್ದಿ ಟುಮಾರೊ ಷೋ ಎನ್ನುವ ಸಂದರ್ಶನದಲ್ಲಿ ಬ್ಯಾಂಡಿನಲ್ಲಿ ಹೆಚ್ಚುತ್ತಿದ್ದ ಅಸಮಾಧಾನವು ಸಾರ್ವಜನಿಕವಾಗಿ ಮೊದಲ ಬಾರಿಗೆ ಬಹಿರಂಗವಾಯಿತು. ಈ ಕಾರ್ಯಕ್ರಮದ ಉದ್ದಕ್ಕೂ, ಕುಡಿತದ ಅಮಲಿನಲ್ಲಿದ್ದ ಫ್ರೆಹ್ಲಿಯ ವಾಗಾಂಡಬರ, ಎಡಬಿಡದ ನಗು ಹಾಗು ಹಾಸ್ಯ, ಸ್ನೈಡರ್ ಮತ್ತು ಬ್ಯಾಂಡಿನ ಇತರ ಸದಸ್ಯರ ನಡುವೆ ನಡೆಸುವ ಸಂಭಾಷಣೆಯನ್ನು ಕೇಳಿಸದ ಹಾಗೆ ಮಾಡುತ್ತಿದ್ದವು, ಇದರಿಂದ ಸಿಟ್ಟಾದ ಸಿಮ್ಮನ್ಸ್ ಮತ್ತು ಸ್ಟಾನ್ಲಿ ಇವನನ್ನು ತಡೆಯಲು ಬಹಳ ಪ್ರಯತ್ನ ಪಡುತ್ತಾರೆ. ಕ್ರಿಸ್ ಅನೇಕ ಬಾರಿ ತನ್ನ ಬಳಿಯಿದ್ದ ದೊಡ್ಡ ಬಂದೂಕು(ಗನ್)ಸಂಗ್ರಹದ ಬಗ್ಗೆ ಉಲ್ಲೇಖಿಸಿದನು,ಇದು ಸಿಮ್ಮನ್ಸ್ ಗೆ ಬಹಳ ಕಸಿವಿಸಿಯುಂಟು ಮಾಡಿತು.[೪೩]

ಡೈನಸ್ಟಿ ಪ್ರವಾಸ, ಡಿಸೆಂಬರ್ 1979 ರಲ್ಲಿ ಮುಗಿಯುವ ವೇಳೆಗೆ, ಕ್ರಿಸ್ ಮತ್ತು ಬ್ಯಾಂಡಿನ ಇತರ ಸದಸ್ಯರೊಂದಗಿನ ಮನಸ್ಥಾಪ ಮುಗಿಲುಮುಟ್ಟಿತು. ಆತನ ಡ್ರಮ್ ನುಡಿಸುವ ನೈಪುಣ್ಯವು ಕೂಡ ಗಣನೀಯವಾಗಿ ಕಡಿಮೆಯಾಗಿತ್ತು. ಇಷ್ಟೇ ಅಲ್ಲದೆ, ಇವನು ಕೆಲವು ಗೋಷ್ಟಿಯಲ್ಲಿ(ಕಾನ್ಸರ್ಟ್) ಬೇಕೆಂದೆ ನಿಧಾನವಾಗಿ ನುಡಿಸುತ್ತಿದ್ದ ಅಥವಾ ಸಂಪೂರ್ಣವಾಗಿ ನುಡಿಸುವುದನ್ನು ನಿಲ್ಲಿಸಿದ. ಈ ಪ್ರವಾಸದ ಕೊನೆಯ ಪ್ರದರ್ಶನ (ಡಿಸೆಂಬರ್ 16, 1979)ದಲ್ಲಿ ನುಡಿಸಿದ್ದು ಕ್ರಿಸ್ ಈ ತಂಡದೊಂದಿಗೆ ಪ್ರದರ್ಶಿಸಿದ ಕೊನೆಯ ಪ್ರದರ್ಶನವಾಯಿತು (ನಾಲ್ಕು ಮೂಲ ಸದಸ್ಯರು 1996ರಲ್ಲಿ ಒಂದಾಗುವವರೆಗೂ). ಇದಾಗಿ ಸುಮಾರು ಆರು ತಿಂಗಳ ತನಕ, ಈತ ಈ ತಂಡದ ಅಧಿಕೃತ ಸದಸ್ಯನಾಗಿ ಉಳಿದುಕೊಂಡ.[೪೪][೪೫]

ಅನ್ ಮಾಸ್ಕಡ್ ಎನ್ನುವ ಮುಂದಿನ ಆಲ್ಬಂಗೆ ಕೂಡ ಫಿಗ್ ಡ್ರಮ್ ನುಡಿಸಿದ. ಅದರೆ, ಇದರ ರಕ್ಷಾಪುಟದಲ್ಲಿ(ಕವರ್ ಆರ್ಟ್) ಫಿಗ್ ನ ಹೆಸರಿನ ಬದಲಾಗಿ ಕ್ರಿಸ್ ನ ಹೆಸರಿತ್ತು. ಸಮಕಾಲೀನ ಪಾಪ್ ಶೈಲಿಯಲ್ಲಿ ಚುರುಕಾದ ಸಂಗೀತವನ್ನು ಹೊಂದಿದ್ದ ಅನ್ ಮಾಸ್ಕಡ್ (ಮೇ 20,1980), ಡ್ರೆಸ್ಡ್ ಟು ಕಿಲ್ ಎನ್ನುವ ಆಲ್ಬಂ ಬಳಿಕ ಪ್ಲಾಟಿನಂ ಪ್ರಮಾಣವನ್ನು ಪಡೆಯಲು ವಿಫಲವಾದ ಮೊದಲ ಕಿಸ್ ಆಲ್ಬಂ ಎನ್ನುವ ಅಪಖ್ಯಾತಿಗೆ ಪಾತ್ರವಾಯಿತು. ಈ ಆಲ್ಬಂ ಬಿಡುಗಡೆಯಾದ ಸ್ವಲ್ಪ ದಿನಗಳಲ್ಲೆ, ಕ್ರಿಸ್ ನ ನಿರ್ಗಮನವನ್ನು ಅಧಿಕೃತವಾಗಿ ಘೋಷಿಸಲಾಯಿತು.[೪೬][೪೭]

ಕ್ರಿಸ್ ಸ್ಥಾನ ತುಂಬಲು ಕಿಸ್ ಹಲವಾರು ಜನರನ್ನು ಜೂನ್ 1980ರಲ್ಲಿ ಪರೀಕ್ಷೆ ಮಾಡಿತು. ಕೊನೆಗೆ, ಬ್ರೂಕ್ಲಿನ್ ನ ಅಷ್ಡೇನು ಪ್ರಸಿದ್ಧವಾಗಿರದ, ಪಾಲ್ ಕಾರವೆಲ್ಲೊ (ಜನನ: ಜೂಲೈ 12,1950)ಎನ್ನುವ ಡ್ರಮ್ ಹಾಗು ಗಿಟಾರ್ ನುಡಿಸುವ ಗಾಯಕನನ್ನು ಆಯ್ಕೆ ಮಾಡಿದರು. ಇವನಿಗೆ ಎರಿಕ್ ಕಾರ್ ಎನ್ನುವ ರಂಗನಾಮ (ಸ್ಟೇಜ್ ನೇಮ್) ನೀಡಲಾಯಿತು. ಇವನು ಕಿಸ್ ತಂಡದ ಸದಸ್ಯನ ಬದಲಿಗೆ ಸ್ಥಾನ ಪಡೆದ ಮೊದಲ ಸದಸ್ಯ. ಇವನನ್ನು, "ಫಾಕ್ಸ್" ಮೇಕ್ಅಪ್ ನೊಂದಿಗೆ, ಎ.ಬಿ.ಸಿ. ಯ (ABC)ಕಿಡ್ಸ್ ಆರ್ ಪೀಪಲ್ ಟೂ! ಎನ್ನುವ ಕಾರ್ಯಕ್ರಮದಲ್ಲಿ ಪರಿಚಯಿಸಲಾಯಿತು. ಈತ ಜೂಲೈ 25,1980 ರಂದು ನ್ಯೂಯಾರ್ಕ್ ನಗರದ ಪಲ್ಲಾಡಿಯಮ್ ಎನ್ನುವ ರಂಗಮಂದಿರದಲ್ಲಿ ತಂಡದ ಜೊತೆಯಲ್ಲಿ ಮೊದಲ ರಂಗಪ್ರದರ್ಶನ ಕೊಟ್ಟ. ಇದು, ಕಿಸ್ ಈ ಆಲ್ಬಂ ಮಾರಾಟದ ದೃಷ್ಟಿಯಿಂದ ನಡೆಸಿದ U.S.(ಯು.ಎಸ್) ನಲ್ಲಿ ಮಾಡಿದ ಏಕೈಕ ಪ್ರದರ್ಶನ. ಇದೇ ಸಮಯದಲ್ಲಿ, ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ಗೆ ಕೈಗೊಂಡ 1980 ರ ಪ್ರವಾಸ, ಈ ಬ್ಯಾಂಡಿನ ಇತಿಹಾಸದಲ್ಲಿಯೆ ಅತಿ ಯಶಸ್ವಿಯಾಯಿತು.ಈ ಪ್ರವಾಸದಲ್ಲಿ ನಡೆಸಿದ ಎಲ್ಲಾ ಪ್ರದರ್ಶನಗಳು ಪ್ರೇಕ್ಷಕರಿಂದ ತುಂಬಿದ್ದವು. ಅಷ್ಟೇ ಅಲ್ಲದೆ, ಇವರಿಗೆ ಮಾಧ್ಯಮದಲ್ಲಿ ಭಾರಿ ಒಳ್ಳೆಯ ಪ್ರಚಾರ ಸಿಕ್ಕಿತು.[೪೮][೪೯]

ಈ ಬ್ಯಾಂಡ್ ತನ್ನ ಮುಂದಿನ ಆಲ್ಬಂಗೆ, ನಿರ್ಮಾಪಕ ಬಾಬ್ ಎರ್ರಿನ್ ಜೊತೆ ಕೆಲಸ ಮಾಡುವುದಾಗಿ ತಿಳಿಸಿತು. ಇದಕ್ಕೂ ಹಿಂದೆ, ಕಿಸ್ ಇವನ ಜೊತೆ ಕೆಲಸಮಾಡಿದಾಗ ಡೆಸ್ಟ್ರಾಯರ್ ಎನ್ನುವ ಆಲ್ಬಂನಲ್ಲಿ ಯಶಸ್ಸು ಸಿಕ್ಕಿತ್ತು. ಈ ಆಲ್ಬಂ ಬಿಡುಗಡೆಯಾಗುವುದಕ್ಕೂ ಮುನ್ನ ಬಂದ ಪತ್ರಿಕಾ ವರದಿಗಳು, ಈ ಆಲ್ಬಂನಲ್ಲಿ, ಬ್ಯಾಂಡಿಗೆ ಈಗಾಗಲೆ ಯಶಸ್ಸು ತಂದುಕೊಟ್ಟಿದ್ದ ಹಾರ್ಡ್ ರಾಕ್ ಶೈಲಿಯ ಸಂಗೀತವಿರಬಹುದು ಎಂದು ಸೂಚಿಸಿದವು. ಆದರೆ 1981 ರಲ್ಲಿ ಬಿಡುಗಡೆಯಾದದ್ದು ಮ್ಯೂಸಿಕ್ಕ್ ಫ್ರಮ್ "ದಿ ಎಲ್ಡರ್" ಎನ್ನುವ ಕಾನ್ಸೆಪ್ಟ್ ಆಲ್ಬಂ. ಇದರಲ್ಲಿ ಮಧ್ಯಯುಗದ ಹಾರ್ನ್, ಸ್ಟ್ರಿಂಗ್, ಹಾರ್ಪ್ ಮತ್ತು ಸಿಂಥಸೈಸರ್ ಗಳನ್ನು ಬಳಸಲಾಗಿತ್ತು.[೫೦] (ಕಾನ್ಸೆಪ್ಟ್ ಆಲ್ಬಂ: ಯಾವುದಾದರು ವಿಷಯವನ್ನಾಧರಿಸಿ ತಯಾರಿಸಿದ ಆಲ್ಬಂ; ಹಾರ್ನ್: ತುತ್ತೂರಿಯಂತಹ ವಾದ್ಯ; ಸ್ಟ್ರಿಂಗ್ಸ್: ತಂತಿ ವಾದ್ಯಗಳು; ಹಾರ್ಪ್: ತಂತಿ ವಾದ್ಯ; ಸಿಂಥಸೈಸರ್: ಎಲೆಕ್ಟ್ರಾನಿಕ್ ಸಂಗೀತ ವಾದ್ಯ).

ಈ ಆಲ್ಬಂ ಅನ್ನು ಚಲನಚಿತ್ರವೊಂದರ ಧ್ವನಿವಾಹಿನಿಯಾಗಿ(ಸೌಂಡ್ ಟ್ರ್ಯಾಕ್) ಬಿಡುಗಡೆ ಮಾಡಲಾಯಿತು. ಆದರೆ ಈ ಚಲನಚಿತ್ರವನ್ನು ತಯಾರಿಸಲಾಗಲಿಲ್ಲ, ಹೀಗಾಗಿ ಇದರ ಕಥಾಹಂದರವನ್ನು ಆರ್ಥಮಾಡಿಕೊಳ್ಳುವುದು ಆಸಾಧ್ಯವಲ್ಲದಿದ್ದರೂ ಬಹಳ ಕಷ್ಟವಾಗಿತ್ತು. ಇದರ ಜೊತೆಗೆ ಪರಿಸ್ಥಿತಿಯನ್ನು ಇನ್ನೂ ಹದಗೆಡಿಸಲು,ಆಲ್ಬಂ ಬಗ್ಗೆ ರೆಕಾರ್ಡ್ ಕಂಪನಿಗಳಿಂದ ನಕಾರಾತ್ಮಕ ಅಭಿಪ್ರಾಯಗಳು ಬಂದ ನಂತರ, ಕಿಸ್ ಈ ಧ್ವನಿಸುರಳಿಯ (ರೆಕಾರ್ಡಿನ)ಹಾಡುಗಳ ಸರಣಿಯನ್ನು ಬದಲಾಯಿಸಿ, "ದಿ ಓತ್" ಮತ್ತು "ಎ ವರ್ಲ್ಡ್ ವಿತ್ಔಟ್ ಹೀರೋಸ್" ಎನ್ನುವ ಹಾಡಿಗಳಿಗೆ ಪ್ರಾಮುಖ್ಯತೆ ಕೊಟ್ಟು, ಇತರ ದೇಶಗಳಲ್ಲಿ ಬಿಡುಗಡೆ ಮಾಡಿದರು, ಈ ನಡೆಯಿಂದಾಗಿ ಗೊಂದಲಮಯವಾದ ಕಥಾಹಂದರವನ್ನು ಅರ್ಥಮಾಡಿಕೊಳ್ಳುವುದು ಕಷ್ಟ ಎಂದು ಇವರುಗಳೇ ಒಪ್ಪಿಕೊಂಡ ಹಾಗೆ ಆಯಿತು. ದಿ ಎಲ್ಡರ್ ಬಿಡುಗಡೆಯಾದಾಗ, ಇದು ಮೊದಲಿನ ಹಾಗೆ ಅಭಿಮಾನಿಗಳುನ್ನು ಆಕರ್ಷಿಸಲಿಲ್ಲ. ಇದು ಗೋಲ್ಡ್ ಪ್ರಮಾಣವನ್ನು ಪಡೆಯುವಲ್ಲಿ ವಿಫಲವಾಯಿತು, ಹಾಗು ಬಿಲ್ ಬೋರ್ಡ್ ಆಲ್ಬಂ ಚಾರ್ಟಿನಲ್ಲಿ #75 ಸ್ಥಾನ ಗಳಿಸಿತು.[೫೧]

ಬ್ಯಾಂಡ್, ಈ ಹೊಸ ಆಲ್ಬಂನ ಪ್ರಚಾರಕ್ಕಾಗಿ ಕೇವಲ ಎರಡು ಪ್ರದರ್ಶನಗಳನ್ನು ಮಾತ್ರ ಮಾಡಿತು. ಈ ಎರಡು ಪ್ರದರ್ಶನಗಳು ಜನವರಿ 1982ರಲ್ಲಿ ನಡೆದವು. ಮೊದಲನೆಯದು ABC (ಎ.ಬಿ.ಸಿ) ಯಲ್ಲಿ ಅಪರಾತ್ರಿ ಪ್ರಸಾರವಾಗುವ ಫ್ರೈಡೇಸ್ ಎನ್ನುವ ವೈವಿಧ್ಯ ಕಾರ್ಯಕ್ರಮದ (ಲೇಟ್ ನೈಟ್ ವೈರೆಟಿ ಪ್ರೊಗ್ರಾಂ)ಪ್ರದರ್ಶನ. ಎರಡನೆಯ, ಇವರು ಲಿಪ್ ಸಿಂಕ್ (ತುಟಿ ಅಲ್ಲಾಡಿಸುವುದು) ಮಾಡಿದ ಪ್ರದರ್ಶನವನ್ನು ಇಟಲಿಯ ಸಾನ್ರೇಮೊ ಹಬ್ಬ (ಸಾನ್ರೇಮೊ ಫೆಸ್ಟಿವಲ್)ಸಂದರ್ಭದಲ್ಲಿ ಉಪಗ್ರಹದ (ಸ್ಯಾಟಲೈಟ್)ಮೂಲಕ ಬಿತ್ತಿರಿಸಲಾಯಿತು.[೫೨]

ಕಿಸ್ "ಐ" ಮತ್ತು "ಎ ವರ್ಲ್ಡ್ ವಿತ್ಔಟ್ ಹೀರೋಸ್" ಅನ್ನು ಸಾಲಿಡ್ ಗೋಲ್ಡ್  ನಲ್ಲಿ ಪ್ರದರ್ಶನ ಮಾಡಿದರು.

ಏಸ್ ಫ್ರಿಹ್ಲಿಗೆ ಕಿಸ್ ಹೊಸದಾಗಿ ಅಳವಡಿಸಿಕೊಂಡ ಸಂಗೀತ ಶೈಲಿಯ ಬಗ್ಗೆ ಅಸಮಾಧಾನ ದಿನೇದಿನೆ ಜಾಸ್ತಿಯಾಗುತ್ತಾ ಇತ್ತು, ಹೀಗಾಗಿ ಅವನು ಎರಡನೇ ಪ್ರದರ್ಶನದಲ್ಲಿ ಭಾಗವಹಿಸುವುದಿಲ್ಲ. ಮ್ಯೂಸಿಕ್ ಫ್ರಮ್ "ದಿ ಎಲ್ಡರ್" ಎನ್ನುವ ಕಾನ್ಸೆಪ್ಟ್ ಆಲ್ಬಂ ಅನ್ನು ಮುದ್ರಿಸ ಬೇಕು ಎನ್ನುವ ಬ್ಯಾಂಡಿನ ನಿರ್ಧಾರದಿಂದ ಇವನಿಗೆ ಅಸಮಾಧಾನವಾಗಿತ್ತದೆ. ಈತ ಆಲ್ಬಂನ ತಯಾರಿಕೆಯಲ್ಲಿ ಸರಿಯಾಗಿ ತೊಡಗಿಸಿಕೊಳ್ಳುವುದಿಲ್ಲ, ಕೇವಲ "ಡಾರ್ಕ್ ಲೈಟ್" ಎನ್ನುವ ಹಾಡನ್ನು ಹಾಡುತ್ತಾನೆ. ಫ್ರೆಹ್ಲಿ, ಅವನು ನುಡಿಸಬೇಕಿದ್ದ ಗೀಟಾರ್ ಭಾಗವನ್ನು ವಿಲ್ಟನ್, ಕನೆಕ್ಟಿಕಟ್ನಲ್ಲಿದ ತನ್ನ ಮನೆಯ ಸ್ಟೂಡಿಯೋದಲ್ಲಿ ಧ್ವನಿಮುದ್ರಿಣ ಮಾಡಿ ಎರಿನ್ ಗೆ ಕಳುಹಿಸುತ್ತಾನೆ. ಫ್ರೆಹ್ಲಿ ಹತಾಶನಾಗಲೂ ಇನ್ನೊಂದು ಕಾರಣವೆಂದರೆ ಪೀಟರ್ ಕ್ರಿಸ್ ನ ನಿರ್ಗಮನದಿಂದಾಗಿ ಅವನ ಬದಲಿಗೆ ಬಂದ ಕಾರ್ ಬ್ಯಾಂಡಿನ ಸಮನಾದ ಸದಸ್ಯನಾಗಿರಲಿಲ್ಲ, ತಂಡದ ನಿರ್ಣಯಗಳಲ್ಲಿ ಫ್ರೆಹ್ಲಿಯ ಅಭಿಪ್ರಾಯಗಳನ್ನು 2-1 ಮತಗಳಿಂದ ಸೋಲಿಸಲಾಗುತ್ತಿತ್ತು. ಜೂನ್ 1982ರಲ್ಲಿ ಬ್ಯಾಂಡಿನಿಂದ ಫ್ರೆಹ್ಲಿಯ ನಿರ್ಗಮನದ ಬಗ್ಗೆ ಒಪ್ಪಂದಕ್ಕೆ ಬರಲಾಯಿತು. ಆದರೂ, ಇವನು ಬ್ಯಾಂಡನ್ನು ಆ ವರ್ಷದ ಡಿಸೆಂಬರ್ ತನಕ ಅಧಿಕೃತವಾಗಿ ಬಿಡಲಿಲ್ಲ. ಇವನು 1985ರ ತನಕವೂ ಸಿಮ್ಮನ್ಸ್ ಮತ್ತು ಸ್ಟಾನ್ಲಿಯ ಜೊತೆಯಲ್ಲಿ ವ್ಯವಹಾರದಲ್ಲಿ ಪಾಲುದಾರನಾಗಿದ್ದ.

ಸಿಮ್ಮನ್ಸ್ ಕಿಸ್ ಅಂಡ್ ಮೇಕ್-ಅಪ್ ಎನ್ನುವ ಅವನ ಆತ್ಮಕಥೆಯಲ್ಲಿ, ಫ್ರೆಹ್ಲಿಯ ಸ್ಥಾನವನ್ನು ಎಡ್ಡಿ ವಾನ್ ಹಲೆನ್ ತುಂಬಲು ಇಷ್ಟಪಟ್ಟಿದಾಗಿ ಹೇಳಿದ್ದಾನೆ. ಆದರೆ, ಸಿಮ್ಮನ್ಸ್ ಮತ್ತು ಎಡ್ಡಿಯ ಸಹೋದರ ಅಲೆಕ್ಸ್ ಸೇರಿ, ಎಡ್ಡಿ ವಾನ್ ಹಲೆನ್ ಜೊತೆಯಲ್ಲಿಯೇ ಇರುವ ಹಾಗೆ ಮನದಟ್ಟಮಾಡಿಕೊಡುತ್ತಾರೆ.[೫೩][page needed] (ಎಡ್ಡಿ ಡೇವಿಡ್ ಲೀ ರಾತ್ ಎನ್ನುವ ಪ್ರಮುಖ ಗಾಯಕನ ಜೊತೆಯಲ್ಲಿ ಹೆಚ್ಚುತ್ತಿದ್ದ ಘರ್ಷಣೆಗಳಿಂದಾಗಿ ವಾನ್ ಹಲೆನ್ ನೊಂದಿಗೆ ಬೇರೆಯಾಗಲು ಉತ್ಸುಕನಾಗಿದ್ದನು. ಇದಾದ ಸ್ವಲ್ಪದಿನಗಳಲ್ಲಿಯೇ ಡೇವಿಡ್ ಆ ಬ್ಯಾಂಡ್ ಅನ್ನು ಬಿಟ್ಟನು).[೫೪][೫೫]

ಇದಾದ ಕೆಲವೆ ದಿನಗಳಲ್ಲಿ, ಕಿಸ್ ಅದರ ವ್ಯಾಪಾರ(ವಹೀವಾಟು) ಮಾಡುವ ರೀತಿಯಲ್ಲಿ ಭಾರಿ ಬದಲಾವಣೆ ತಂದಿತು. ಇದರಲ್ಲಿ ಪ್ರಮುಖವಾದದ್ದು ಒಂಬತ್ತು ವರ್ಷಗಳಿಂದ ಮ್ಯಾನೇಜರ್(ನಿರ್ವಾಹಕ) ಆಗಿದ್ದ ಬಿಲ್ ಆಕೊಯಿನ್‌ಯೊಂದಿಗಿನ ಸಂಬಂಧವನ್ನು ಕಡಿದುಕೊಂಡಿತು. ಅಷ್ಟೆ ಅಲ್ಲದೆ, ಹೇಗೆಗೊ ಇದ್ದ ಅದರೆ ಆಡಳಿತ ವ್ಯವಸ್ಥೆಯನ್ನು ಸರಿಪಡಿಸಲು ಮುಂದಾಯಿತು. ಫ್ರೆಹ್ಲಿ ಬ್ಯಾಂಡ್ ಅನ್ನು ಬಿಡಲು ನಿರ್ಧಾರ ಮಾಡಿದ ಮೇಲೆ ಕೂಡ 1982ರ ಕಿಲ್ಲರ್ಸ್ ಮತ್ತು ಕ್ರಿಯೇಚರ್ಸ್ ಆಫ್ ದಿ ನೈಟ್ ನ ರಕ್ಷಾಪುಟಗಳ(ಕವರ್) ಮೇಲೆ ಅವನ ಚಿತ್ರವಿತ್ತು. ಆದರೆ, ಈ ಎರಡೂ ಅಲ್ಬಂಗಳ ಧ್ವನಿಮುದ್ರಣ ಕಾರ್ಯದಲ್ಲಿ ಅವನು ಭಾಗವಹಿಸಿರಲಿಲ್ಲ.[೫೬]

ಜೀನ್ ಸಿಮ್ಮನ್ಸ್

ಕ್ರಿಯೇಚರ್ಸ್ ಆಫ್ ದಿ ನೈಟ್ (ಆಕ್ಟೋಬರ್ 13,1982), ಕಿಸ್ ಇದುವರೆಗಿನ ಅತಿ ಗಂಭೀರ ಲಯದ (ಹೆವಿಯಸ್ಸ್) ಆಲ್ಬಂ. ಇದು ಮ್ಯೂಸಿಕ್ ಫ್ರಮ್ "ದಿ ಎಲ್ಡರ್" ಆಲ್ಬಂಗಿಂತ ಸ್ವಲ್ಪ ಉತ್ತಮ ರೀತಿಯಲ್ಲಿ ಮಾರಾಟವಾಯಿತು. ಇದಕ್ಕೆ ಚಾರ್ಟುಗಳಲ್ಲಿ #45 ಸ್ಥಾನ ಸಿಕ್ಕಿತ್ತು. ಇದಕ್ಕೆ ಗೋಲ್ಡ್ ಪ್ರಮಾಣವು ಸಿಗಲು 1994ರ ತನಕ ಕಾಯಬೇಕಾಯಿತು. ಫ್ರೆಹ್ಲಿಯ ಅನುಪಸ್ಥಿತಿಯಲ್ಲಿ, ಕಿಸ್ ಆಲ್ಬಂ ಧ್ವನಿಮುದ್ರಣ (ರೆಕಾರ್ಡ್)ಮಾಡಲು ವಿನ್ನಿ ವಿನ್ಸೆಂಟ್(ಮೂಲ ಹೆಸರು: ವಿನ್ಸೆಂಟ್ ಜಾನ್ ಕುಸಾನೊ; ಜನನ: ಆಗಸ್ಟ್ 6, 1952) ಒಳಗೊಂಡಂತೆ ಹಲವಾರು ಗಿಟಾರ್ ವಾದಕರನ್ನು ಬಳಸಿಕೊಂಡಿತು.

ಫ್ರೆಹ್ಲಿ ಬ್ಯಾಂಡಿನೊಂದಿಗೆ "ಐ ಲವ್ ಇಟ್ ಲೌಡ್" ಎನ್ನುವ, ವಿನ್ಸೆಂಟ್ ಸಹ-ರಚನೆ ಮಾಡಿದ್ದ ಹಾಡಿನ (ಸಿಂಗಲ್)ವಿಡೀಯೋದಲ್ಲಿ (1996ರಲ್ಲಿ ಮೊದಲಿನ ನಾಲ್ಕು ಸದಸ್ಯರು ಪುನ:ಒಂದಾಗುವವರೆಗೂ)ಕೊನೆಯದಾಗಿ ಕಾಣಿಸಿಕೊಂಡ. ಫ್ರೆಹ್ಲಿ "ಕ್ರಿಯೇಚರ್ಸ್ ಆಫ್ ದಿ ನೈಟ್ " ಅಲ್ಬಂನ ಮೊದಲಿನ ರಕ್ಷಾಪುಟದಲ್ಲಿ ಕೂಡ ಇದ್ದ.

(ಈ ಆಲ್ಬಂ ಅನ್ನು ರೀಮಿಕ್ಸ್ ಮಾಡಿ 1985ರಲ್ಲಿ ಪುನ:ಬಿಡುಗಡೆ ಮಾಡಿದಾಗ ಇದರ ರಕ್ಷಾಪುಟದ ಮೇಲೆ ಮೇಕ್ಅಪ್ ಇಲ್ಲದ ಚಿತ್ರವಿತ್ತು. ಅಲ್ಬಂನ ಹಾಡುಗಳ ಸಂಖ್ಯೆ ಕೂಡ ಬದಲಾಗಿದ್ದವು. ಇದು ಬ್ಯಾಂಡ್  ಮೇಕ್ಆಪ್ ಮತ್ತು ವೇಷಭೂಷಣ ತ್ಯಜಿಸಿದರ ಸಂಕೇತವಾಗಿತ್ತು. ಆಗಲೂ ಕೂಡ ರಕ್ಷಾಪುಟದ ಮೇಲೆ ವಿನ್ಸೆಂಟ್ ಇರಲಿಲ್ಲ ಏಕೆಂದರೆ, ಆಗ ಬ್ಯಾಂಡಿನ ಲೀಡ್ ಗಿಟಾರ್ ವಾದಕನಾಗಿದ್ದ ಬ್ರೂಸ್ ಕುಲಿಕ್ ಇದ್ದ.  ಕ್ರಿಯೇಚರ್ಸ್ ಆಫ್ ದಿ ನೈಟ್  ಅಲ್ಬಂನ ರೀಮಿಕ್ಸ್ ಮಾಡಿದ LP (ಎಲ್.ಪಿ) ರೆಕಾರ್ಡುಗಳ ಜೊತೆಯಲ್ಲಿ ಬರುವ ಟಿಪ್ಪಣಿಗಳು ಏಸ್ ಫ್ರೆಹ್ಲಿ ಮತ್ತು ವಿನ್ನಿ ವಿನ್ಸೆಂಟ್ ಇಬ್ಬರನ್ನೂ ಈ ಆಲ್ಬಂನ ಲೀಡ್ ಗಿಟಾರ್ ವಾದಕರು ಎಂದು ಮನ್ನಣೆ ನೀಡಿದೆ.)

ಬ್ಯಾಂಡ್ ಡಿಸೆಂಬರ್ 1982ರಲ್ಲಿ, ತನ್ನ 10ನೇ ವಾರ್ಷಿಕೋತ್ಸವದ ಪ್ರವಾಸವನ್ನು ಪ್ರಾರಂಭಿಸುತ್ತಿದ್ದ ಹಾಗೆಯೆ ಫ್ರೆಹ್ಲಿಯ ಜಾಗಕ್ಕೆ ಲೀಡ್ ಗಿಟಾರ್ ವಾದಕನಾಗಿ ಅಧಿಕೃತವಾಗಿ ವಿನ್ಸೆಂಟ್ ನೇಮಕವಾದ.[೫೭][೫೮]

ವಿನ್ಸೆಂಟ್ ಬ್ಯಾಂಡಿನಲ್ಲಿ ತನ್ನ ಮೊದಲಿನ ಹೆಸರನ್ನೇ ಉಳಿಸಿಕೊಳ್ಳ ಬಯಸಿದ್ದ, ಆದರೆ ಈ ಹೆಸರು ಯಾವುದೋ ಜನಾಂಗದ ಹೆಸರಿನ ಹಾಗಿದೆ ಎನ್ನುವ ಕಾರಣ ನೀಡಿ ಜೀನ್ ಸಿಮ್ಮನ್ಸ್ ಇದನ್ನು ತಿರಸ್ಕರಿಸಿದ. ಅದರಲ್ಲೂ ಸಿಮ್ಮನ್ಸ್ ಪ್ರಕಾರ "ಅದು ಹಣ್ಣು ಮಾರುವವನ ಹಾಗೆ ಕೇಳಿಸುತ್ತದೆ"; ಸಿಮ್ಮನ್ಸ್ ಮುಂದುವರೆದು "ಸರಿಯೊ ತಪ್ಪೊ, ರಾಕ್ ಅಂಡ್ ರೋಲ್ ಇಮೇಜ್ (ರೂಪ) ಮೇಲೆ ಆಧಾರಿತವಾಗಿದೆ" ಎಂದು ಹೇಳುತ್ತಾನೆ.[೫೯] ವಿನ್ಸೆಂಟ್ "ಮೈಕ್ ಫ್ಯೂರಿ" ಎನ್ನುವ ಹೆಸರನ್ನು ಸೂಚಿಸಿದ, ಅದರೆ ಇದು ಕೂಡ ತಿರಸ್ಕರಿಸಲ್ಪಟ್ಟಿತ್ತು. ನಂತರ, ಸಿಮ್ಮನ್ಸ್ ವಿನ್ನಿ ವಿನ್ಸೆಂಟ್ ಎಂಬ ಹೆಸರನ್ನು ಸೂಚಿಸಿದ. ಕಿಸ್ ನ ಪೂರ್ಣ ಸದಸ್ಯನಾಗುವ ಸಲುವಾಗಿ ವಿನ್ಸೆಂಟ್ ಸಕ್ರಿಯವಾಗಿ ಭಾಗವಹಿಸತೊಡಗಿದ. ಸಿಮ್ಮನ್ಸ್ ಮತ್ತು ಸ್ಟಾನ್ಲಿ ಇಬ್ಬರಿಗೂ ವಿನ್ಸೆಂಟಿನ ವ್ಯಕ್ತಿತ್ವದ ಬಗ್ಗೆ ಆನೇಕ ಶಂಕೆಗಳಿದ್ದರೂ ಕೂಡ, ಅವನನ್ನು ಬ್ಯಾಂಡಿಗೆ ಸೇರಿಸಿಕೊಳ್ಳಲಾಯಿತು. ಸ್ಟಾನ್ಲಿ, ವಿನ್ಸೆಂಟ್ ಗೆಂದು ಇಜಿಪ್ಷನ್ ಅಂಕ್ ಅನ್ನು ಆಧರಿಸಿ "ದಿ ವಾರಿಯರ್" ಎನ್ನುವ ಪಾತ್ರವೊಂದನ್ನು ರಚಿಸಿದ.[೫೯]

ಕಿಸ್ ನ ಕ್ರಮಾಂಕ 1982-83ರ ಹೀಗಿತ್ತು: ಸಿಮ್ಮನ್ಸ್ (ದಿ ಡೆಮನ್), ಸ್ಟಾನ್ಲಿ (ದಿ ಸ್ಟಾರ್ ಚೈಲ್ಡ್), ಎರಿಕ್ ಕಾರ್ (ದಿ ಫಾಕ್ಸ್ ಮ್ಯಾನ್) ಮತ್ತು ವಿನ್ಸೆಂಟ್ (ದಿ ವಾರಿಯರ್). ಕಿಸ್ ನ ಈ ರೂಪವು ಮೊದಲಿನ ಮೇಕ್ಅಪ್ ಯುಗದ ಕೊನೆ ರೂಪವಾಗಿತ್ತು..

ಕ್ರಿಯೇಚರ್ಸ್ ಆಫ್ ದಿ ನೈಟ್  ಪ್ರವಾಸದ ಕೊನೆಯ ವೇಳೆಗೆ, ಬ್ಯಾಂಡ್ ತನ್ನ ಮೇಕ್ಅಪ್ ಅನ್ನು ತೆಗೆಯಿತು.

ವಿನ್ಸೆಂಟ್, ಲಿಕ್ ಇಟ್ ಅಪ್ ಎನ್ನುವ ಅಲ್ಬಂನ ರಕ್ಷಾಪುಟದ ಮೇಲೆ ಕಾಣಿಸಿಕೊಂಡಿದ್ದಾನೆ. ಇದಕ್ಕೆ ಅವನಿಗೆ ಲೀಡ್ ಗಿಟಾರ್ ವಾದಕನೆಂಬ ಮನ್ನಣೆ ಕೂಡ ನೀಡಲಾಗಿದೆ. ವಿನ್ಸೆಂಟ್ ಆ ಆಲ್ಬಂನ 10 ಹಾಡುಗಳಲ್ಲಿ 8 ಹಾಡಿನ ಸಾಹಿತ್ಯ ರಚಿಸಲು ಸಹಾಯ ಮಾಡಿದ. "ಫಿಟ್ಸ್ ಲೈಕ್ ಎ ಗ್ಲೊವ್" ಮತ್ತು "ಡಾನ್ಸ್ ಆಲ್ ಒವರ್ ಯುವರ್ ಫೇಸ್" ಎಂಬ ಗೀತೆಗಳನ್ನು ಸಿಮ್ಮನ್ಸ್ ಸಂಪೂರ್ಣವಾಗಿ ಬರೆದ. ವಿನ್ಸೆಂಟ್ ಈ ಆಲ್ಬಂನ ಎಲ್ಲಾ ಹಾಡುಗಳ ಪ್ರಮುಖ ಭಾಗವನ್ನು ವಿನ್ಸೆಂಟ್ ಧ್ವನಿಮುದ್ರಿಸಿದ್ದ (ರೆಕಾರ್ಡ್ ಮಾಡಿದನೆಂದು)ಎಂದೂ, ಆದರೆ ಸಿಮ್ಮನ್ಸ್ ಆ ಧ್ವನಿಮುದ್ರಣದಲ್ಲಿ ಹಾಡಿಗೆ ಸರಿಹೊಂದುತ್ತದೆ ಎಂದು ತನಗೆ ಅನ್ನಿಸಿದ ಭಾಗಳನಷ್ಟೆ ಉಳಿಸಿಕೊಂಡನೆಂದು, ಹೀಗೆ ವಿನ್ಸೆಂಟ್ ನ ಕ್ರಿಯಾಶೀಲತೆಯನ್ನು ಮೊಟಕುಮಾಡಿದ ಎಂದು ವದ್ದಂತಿಗಳಿದೆ. ಫ್ರೆಹ್ಲಿಯ ಗಿಟಾರ್ ವಾದನಕ್ಕೆ ಒಗ್ಗಿದ ಕಿಸ್ ನ ಆಭಿಮಾನಿಗಳ ಸಲುವಾಗಿ ಮಾಧುರ್ಯವಿರುವ ಧ್ವನಿ ಮತ್ತು ಆನುಭವ ಬೇಕು ಎನ್ನುವುದು, ಸಿಮ್ಮನ್ಸ್ ನ ಸ್ಪಷ್ವ ಆಭಿಪ್ರಾಯವಾಗಿತ್ತು. ಇಷ್ಟೆ ಅಲ್ಲದೆ, ಸಿಮ್ಮನ್ಸ್ ಮತ್ತು ಸ್ಟಾನ್ಲಿ ಇಬ್ಬರಿಗೂ ವಿನ್ಸೆಂಟ್ ನ ಲೀಡ್ ತುಂಬಾ ದೊಡ್ಡದಾಯಿತು ಎನ್ನುವ ಅಭಿಪ್ರಾಯ ಹೊಂದಿದ್ದ ಕಾರಣ, ವಿನ್ಸೆಂಟ್ ತನ್ನ ಗಿಟಾರ್ ಸೋಲೋ ಲೈವ್ ಪ್ರದರ್ಶನದ ಸಂದರ್ಭಗಳಲ್ಲಿ ಅರ್ಧಕ್ಕೆ ನಿಲ್ಲಿಸದ ಅನುಭವಗಳಾಗುತ್ತಿದ್ದವು.

ವಿನ್ಸೆಂಟ್ ನ ವ್ಯಕ್ತಿತ್ವ, ಸ್ಟಾನ್ಲಿ ಮತ್ತು ಸಿಮ್ಮನ್ಸ್ ಇಬ್ಬರಿಗೂ ಇಷ್ಟವಾಗುತ್ತಿರಲಿಲ್ಲ. ಇವನನ್ನು ಕ್ರಿಯೇಚರ್ಸ್ ಪ್ರವಾಸ ಮುಗಿಯುತ್ತಿದ್ದ ಹಾಗೆ ಕಿಸ್ ನಿಂದ ಹೊರಹಾಕಲಾಯಿತು. ಇವನನ್ನು ಲಿಕ್ ಇಟ್ ಅಪ್ ನ ಮುದ್ರಣ ಪ್ರಾರಂಭವಾಗುವ ಮುನ್ನ ಮತ್ತೆ ಸೇರಿಸಿಕೊಳ್ಳಲಾಯಿತು, ಏಕೆಂದರೆ ಸಿಮ್ಮನ್ಸ್ ಮತ್ತು ಸ್ಟಾನ್ಲಿಗೆ ಅಷ್ಟು ಕಡಿಮೆ ಕಾಲಾವಕಾಶದಲ್ಲಿ ಇನ್ನೊಬ ಲೀಡ್ ಗಿಟಾರ್ ವಾದಕ ಸಿಗಲಿಲ್ಲ. ಆದರೆ ವ್ಯಕ್ತಿತ್ವದ ಸಮಸ್ಯೆಗಳು ಮತ್ತೊಮ್ಮೆ ಕಾಣಿಸಿಕೊಂಡಿತು, ಲಿಕ್ ಇಟ್ ಅಪ್ ಪ್ರವಾಸದ ಬಳಿಕ ವಿನ್ಸೆಂಟ್ ಅನ್ನು ಪುನಃ ಕೈಬಿಡಲಾಯಿತು. ಇವನ ಸ್ಥಾನಕ್ಕೆ ಮಾರ್ಕ್ ಸೆಂಟ್ ಜಾನ್(ಮೊದಲ ಹೆಸರು ಮಾರ್ಕ್ ನಾರ್ಟನ್) ಅನ್ನು ಸೇರಿಸಿಕೊಳ್ಳಲಾಯಿತು. ಕ್ರಿಯೇಚರ್ಸ್ ಆಫ್ ದಿ ನೈಟ್ ಆಲ್ಬಂಗೆ ವಿನ್ಸೆಂಟ್ ನೀಡಿದ ಕೊಡುಗೆಯನ್ನು 1997ರಲ್ಲಿ ಈ ಆಲ್ಬಂ ರೀಮಾಸ್ಟರ್ ಮಾಡುವವರೆಗೂ ಅಧಿಕೃತವಾಗಿ ಗುರುತಿಸಲಾಗಿರಲಿಲ್ಲ.

ವಿನ್ಸೆಂಟ್ ಅನ್ನು ಇದಾದ ನಂತರ, ಕಿಸ್ 1992ರ ರಿವೆಂಜ್ ಆಲ್ಬಂಗೆ ಗೀತರಚನಕಾರನಾಗಿ ಬಳಸಿಕೊಂಡಿತು. ಇದರ "ಅನ್ ಹೋಲಿ", "ಹಾರ್ಟ್ ಆಫ್ ಕ್ರೋಮ್" ಮತ್ತು "ಐ ಜಸ್ಟ್ ವಾನ್ನ" ಎನ್ನುವ ಹಾಡುಗಳನ್ನು ಬರೆದನು. ಇದು ಬಹಳ ಕಾಲ ಮುಂದುವರೆಯಲಿಲ್ಲ, ವಿನ್ಸೆಂಟ್, ಸಿಮ್ಮಂನ್ಸ್ ಮತ್ತು ಸ್ಟಾನ್ಲಿ ಮೂರನೇ ಬಾರಿ ದೂರವಾಗಿ,ಶಾಶ್ವತವಾಗಿ ಅವರ ಸಂಬಂಧಗಳನ್ನು ಮುರಿದುಕೊಂಡರು.

ಕಿಸ್ ಆಭಿಮಾನಗಳ ಬಳಗದಲ್ಲಿ ವಿನ್ಸೆಂಟ್ ಅನ್ನು ವಜಾ ಮಾಡಿದ್ದರ ಹಿಂದೆ ನಿಜವಾದ ಕಾರಣಗಳ ಬಗ್ಗೆ ಅನೇಕ ಊಹಾಪೋಹಗಳಿವೆ. ಕಿಸ್ ತಂಡದ ಒಬ್ಬ ಸದಸ್ಯ ಇದರ ಬಗ್ಗೆ ಏನೂ ಪ್ರತಿಕ್ರಿಯೆ ಮಾಡುವುದಿಲ್ಲ, ಅದರೆ ಈ ವಿಷಯ ಚರ್ಚೆಗೆ ಬರಲಿಲ್ಲ ಎಂದು ತಿಳಿಸಿದ್ದಾನೆ. ಇದಾದ ಹಲವು ವರ್ಷಗಳ ನಂತರ, ಸಿಮ್ಮನ್ಸ್ ಸಂದರ್ಶನವೊಂದರಲ್ಲಿ ವಿನ್ಸೆಂಟ್ ಅನ್ನು ಅವನ "ಅಸಮಂಜಸ ನಡೆವಳಿಕೆಗಳಿಗಾಗಿ" ವಜಾ ಮಾಡಲಾಯಿತು ಎಂದು ಹೇಳಿದ ಅದರೆ ಅದರ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಲಿಲ್ಲ.

"I named Vincent Cusano, "Vinnie Vincent." That's the only gift he's allowed. It's interesting that Vinnie hasn't changed his name back to Vinnie Cusano. Vinnie, for the record, was fired for unethical behavior, not because of lack of talent. The guy is very talented. He was unethical. He was fired." -Gene Simmons[೬೦]

ಮೇಕ್ಅಪ್ ತೆಗೆದದ್ದು ಹಾಗು ಪುನ:ಯಶಸ್ಸುಗಳಿಸಿದ್ದು (1983-1996)[ಬದಲಾಯಿಸಿ]

ತಾವು ಕೂಡ ಕಾಲ ಬದಲಾದ ಹಾಗೆ ತಾವು ಬದಲಾಗಬೇಕೆಂದು ಮನಗೊಂಡ ಕಿಸ್, ಅವರ ಗುರುತಾಗಿದ್ದ ಮೇಕ್ಅಪ್ ಮತ್ತು ವೇಷಭೂಷಣಗಳನ್ನು ತ್ಯಜಿಸಲು ನಿರ್ಧಾರ ಮಾಡಿದರು. ಅವರು ಸೆಪ್ಟೆಂಬರ್ 18, 1983 ರಂದು MTV (ಎಂ.ಟಿ.ವಿ) ಯಲ್ಲಿ ಮೊದಲ ಬಾರಿಗೆ ಅಧಿಕೃತವಾಗಿ ಮೇಕ್ಅಪ್ ಇಲ್ಲದೆ ಕಾಣಿಸಿಕೊಂಡರು, ಇದರ ಜೊತೆಯಲ್ಲಿ ಇವರ ಲಿಕ್ ಇಟ್ ಅಪ್ ಎನ್ನುವ ಹೊಸ ಗ್ಲಾಮ್ ಮೆಟಲ್ ಆಲ್ಬಂ ಕೂಡ ಬಿಡುಗಡೆಯಾಯಿತು.[೬೧] ಹೊಸ ಆಲ್ಬಂ ಮತ್ತು ಬ್ಯಾಂಡಿನ ಸದಸ್ಯರ ನಿಜರೂಪವನ್ನು ಪ್ರದರ್ಶಿಸುವ ಪ್ರವಾಸ ಪೋರ್ಚುಗಲಿನ ಲಿಸ್ಬನಿನ ಪಾವಿಲಾಹೊ ಡ್ರಾಮಾಟಿಕೊ ಡೆ ಕಾಸಕಿಸ್ ನಲ್ಲಿ ಆಕ್ಟೋಬರ್ 11, 1983 ರಿಂದ ಪ್ರಾರಂಭವಾಯಿತು. ಇದು ಬ್ಯಾಂಡ್ ಅದರ ಮಾಮೂಲಿನ ಮೇಕಅಪ್ ಇಲ್ಲದೆ ಮಾಡಿದ ಮೊದಲ ಗೋಷ್ಟಿ(ಕಾನ್ಸರ್ಟ್)ಆಗಿದೆ.

ಮೂರು ವರ್ಷಗಳ ನಂತರ ಲಿಕ್ ಇಟ್ ಅಪ್ ಕಿಸ್ ನ ಮೊದಲ ಗೋಲ್ಡ್ ಆಲ್ಬಂಯಾಯಿತು. ಆದರೆ, ಈ ಪ್ರವಾಸಕ್ಕೆ ಕ್ರಿಯೇಚರ್ಸ್ ಆಫ್ ದಿ ನೈಟ್ ಗೆ ನೆರೆದಿದ್ದ ಪ್ರೇಕ್ಷಕರಿಗಿಂತ ಕಡಿಮೆ ಸಂಖ್ಯೆಯ ಪ್ರೇಕ್ಷಕರು ಬಂದರು.

ವಿನ್ಸೆಂಟ್ ಗೆ ಸಿಮ್ಮನ್ಸ್ ಮತ್ತು ಸ್ಟಾನ್ಲಿಯ ನಡುವೆ  ಹೊಂದಾಣಿಕೆ ಆಗಲಿಲ್ಲ, ಹಾಗು ವಿನ್ಸೆಂಟ್ ಈ ಪ್ರವಾಸದ ಕೊನೆಯ ವೇಳೆಗೆ ಮಾರ್ಚಿ 1984ರಲ್ಲಿ ಬ್ಯಾಂಡನ್ನು ಬಿಟ್ಟ.  ವಿನ್ಸೆಂಟ್ ಬದಲಿಗೆ ಸೆಷನ್ ವಾದಕ ಮತ್ತು ಗಿಟಾರ್ ನುಡಿಸುವುದನ್ನು ಹೇಳಿಕೊಡುತ್ತಿದ್ದ ಮಾರ್ಕ್ ಸೇಂಟ್ ಜಾನ್, (ಮೂಲ ಹೆಸರು: ಮಾರ್ಕ್ ನಾರ್ಟನ್; ಜನನ: ಫೆಬ್ರವರಿ 17,1956; ಹುಟ್ಟಿದ್ದು: ಹಾಲಿವುಡ್,ಕ್ಯಾಲಿಫೋರ್ನಿಯ), ಎನ್ನುವವ ಬಂದ.[೬೨]

ಸೇಂಟ್ ಜಾನ್ ತಂಡಕ್ಕೆ ಸೇರಿದ ಮೇಲೆ, ಕಿಸ್ ಅನಿಮಲೈಸ್ ಎನ್ನುವ ಗ್ಲಾಮ್ ಮೆಟಲ್ ಆಲ್ಬಂ ಅನ್ನು ಸೆಪ್ಟೆಂಬರ್ 13, 1984 ರಂದು ಬಿಡುಗಡೆ ಮಾಡಿತು. ಲಿಕ್ ಇಟ್ ಅಪ್ ನ ಯಶಸ್ಸನ್ನು ಅನಿಮಲೈಸ್ ಮುಂದುವರೆಸಿತು. ಇದರ ಹೆವನ್ಸ್ ಆನ್ ಫೈರ್ ಎನ್ನುವ ವೀಡಿಯೊವನ್ನು MTVಯಲ್ಲಿ ಬಹಳ ಸಲ ಬಿತ್ತರಮಾಡಿತು. ಅನಿಮಲೈಸ್ ಆ ದಶಕದಲ್ಲಿ ಅಮೇರಿಕಾದಲ್ಲಿ ಈ ಬ್ಯಾಂಡಿನ ಅತಿ ಹೆಚ್ಚು ಮಾರಟವಾದ ಆಲ್ಬಂ ಆಯಿತು. ಆಲ್ಬಂನ ಹಾಗು ಇದರ ತರುವಾಯ ನಡೆಸಿದ ಪ್ರವಾಸ ಯಶಸ್ವಿಯಾದವು. ಇದರೊಂದಿಗೆ ಕಿಸ್ ಅದರ ಗತಕಾಲದ ವೈಭವವನ್ನು ಮತ್ತೆ ಪಡೆದಂತೆಯಾಯಿತು (70ರ ದಶಕದ ಉಚ್ಚ್ರಾಯ ಸ್ಥಿತಿಯಷ್ಟಿಲ್ಲದಿದ್ದರು). ಆದರೆ, ಸೇಂಟ್ ಜಾನ್ ಪ್ರವಾಸದ ಆಭ್ಯಾಸದ ಸಂದರ್ಭದಲ್ಲಿ ರೀಯಾಕ್ಟಿವ್ ಆರ್ತ್ರೈಟಿಸ್ ನಿಂದ ಬಳಲತೊಡಗಿದನು. ಹೀಗಾಗಿ ಈತನಿಗೆ ಕೆಲವೇಕೆಲವು ಪ್ರದರ್ಶನಗಳನ್ನು ಕೊಡಲು ಸಾಧ್ಯವಾಯಿತು. ಸೇಂಟ್ ಜಾನ್ ನನ್ನು ಕಿಸ್ ನಿಂದ ಡಿಸೆಂಬರ್ 1984ರಲ್ಲಿ ವಜಾಮಾಡಲಾಯಿತು. ಇವನ ಸ್ಥಾನಕ್ಕೆ ಬ್ರೂಸ್ ಕುಲಿಕ್‌ನನ್ನು (ಜನನ: ಡಿಸೆಂಬರ್ 12,1953; ಹುಟ್ಟಿದ್ದು: ಬ್ರೂಕ್ಲಿನ್) ನೇಮಿಸಿಕೊಳ್ಳಲಾಯಿತು. ಕುಲಿಕ್ ಮೂರು ವರ್ಷಗಳ ಅಂತರದಲ್ಲಿ ಈ ಬ್ಯಾಂಡಿನ ನಾಲ್ಕನೇ ಲೀಡ್ ಗೀಟಾರ್ ವಾದಕನಾಗಿದ್ದ. ಅದರೆ, ಇವನು ಹನ್ನೆರಡು ವರ್ಷಗಳ ಕಾಲ ಬ್ಯಾಂಡ್ ಜೊತೆಯಲ್ಲಿದ್ದನು.[೬೩] ಬ್ಯಾಂಡಿನಲ್ಲಿ ಅತಿ ದೀರ್ಘವಾಗಿ ಕೆಲಸ ಮಾಡಿದ ಸದಸ್ಯರಲ್ಲಿ ಕುಲಿಕ್ ಒಬ್ಬನು. ಸಿಮ್ಮನ್ಸ್ ಮತ್ತು ಸ್ಟಾನ್ಲಿಯ ಮಾತ್ರವೇ ಇವನಗಿಂತ ಜಾಸ್ತಿ ಅವಧಿಗೆ ಬ್ಯಾಂಡ್ ಸದಸ್ಯರಾಗಿದ್ದಾರೆ. ಇದಾಗ್ಯೂ, ಕುಲಿಕ್ ಬ್ಯಾಂಡಿನ ಮೇಕ್ಅಪ್ ಧರಿಸಲಿಲ್ಲ.

ಡೆಟ್ರಾಯಿಟ್, ಮಿಷಿಗನ್ ನಲ್ಲಿರುವ ಕೊಬೊ ಹಾಲ್ ನಲ್ಲಿ ನಡೆದ ಗೋಷ್ಟಿಯಲ್ಲಿ (ಕಾನ್ಸರ್ಟ್)ಮೊದ ಮೊದಲು ಕುಲಿಕ್ ಭಾಗವಿಹಿಸಿದ. ಇದನ್ನು MTV(ಎಂ.ಟಿ.ವಿ) ಸ್ಪೇಷಲ್ ಅನಿಮಲೈಸ್ ಲೈವ್ ಗೆ ಚಿತ್ರಿಸಿಕೊಳ್ಳಲಾಯಿತು. ಇದನ್ನು ನಂತರ ಬ್ಯಾಂಡಿನ ಮೊದಲ ಹೋಮ್ ವೀಡಿಯೋವಾಗಿ (Animalize Live: Uncensored ) ಬಿಡುಗಡೆ ಮಾಡಲಾಯಿತು.

ಸ್ಟಾನ್ಲಿ, ಸಿಮ್ಮನ್ಸ್, ಕಾರ್, ಮತ್ತು ಕುಲಿಕ್ ರು ಸದಸ್ಯರಾಗಿದ್ದ ಈ ಕ್ರಮಾಂಕವು ಬ್ಯಾಂಡಿನ ಮೊದಲ ಮೊಲದ ಸದಸ್ಯರ ನಂತರದ ಅತಿ ಸ್ಥಿರವಾದ ತಂಡವೆನ್ನಿಸಿಕೊಂಡಿತು. 1980ರ ದಶಕ ಉಳಿದ ಭಾದದಲ್ಲಿ ಕಿಸ್ ಪ್ಲಾಟಿನಂ ಪ್ರಮಾಣ ಪಡೆದ ಹಲವು ಆಲ್ಬಂಗಳನ್ನು ಬಿಡುಗಡೆ ಮಾಡಿತು. ಇವುಗಳು: 1985ರಲ್ಲಿ ಅಸೈಲಮ್ , 1987ರಲ್ಲಿ ಕ್ರೇಚಿ ನೈಟ್ಸ್ ಮತ್ತು 1988 ರ ಅತ್ಯಂತ ಯಶಸ್ವಿ ಹಾಡುಗಳ ಸಂಗ್ರಹ-ಸ್ಮಾಶಸ್. ಥ್ರಾಶಸ್ ಅಂಡ್ ಹಿಟ್ಸ್ . ಅದರಲ್ಲೂ ವಿಶೇಷವಾಗಿ, ಕ್ರೇಚಿ ನೈಟ್ಸ್ ಹೊರದೇಶಗಳ್ಲಿ ಅತಿ ಯಶಸ್ವಿಯಾದ ಕಿಸ್ ಆಲ್ಬಂ ಆಯಿತು. "ಕ್ರೇಚಿ, ಕ್ರೇಚಿ ನೈಟ್ಸ್" ಎನ್ನುವ ಹಾಡು (ಸಿಂಗಲ್), ಬ್ರಿಟೆನ್ನಿನ ಸಿಂಗಲ್ಸ್ ಚಾರ್ಟಿನಲ್ಲಿ #4 ಸ್ಥಾನವನ್ನು ಗಳಿಸಿತು. ಇದು ಇಲ್ಲಿಯವೆರೆಗಿನ, ಕಿಸ್ ನ ಹಾಡುಗಳ ಮಟ್ಟಿಗೆ ಅತಿ ಸಿಕ್ಕಿರುವ ದೊಡ್ಡ ಸ್ಥಾನ.

ಕಿಸ್ 80ರ ದಶಕವನ್ನು 1989ರಲ್ಲಿ ಬಿಡುಗಡೆಯಾದ ಹಾಟ್ ಇನ್ ದಿ ಶೇಡ್ ನೊಂದಿಗೆ ಅಂತ್ಯಮಾಡಿತು. ಈ ಆಲ್ಬಂಗೆ ಪ್ಲಾಟಿನಂ ಪ್ರಮಾಣ ಸಿಗುಲಿಲ್ಲವಾದರೂ ಇದು 1990 ರ ಪ್ರಾರಂಭದಲ್ಲಿ ಯಶಸ್ವಿಯಾದ ಮೈಕಲ್ ಬಾಲ್ಟನ್ ಸಹಯೋಗದೊಂದಿಗೆ ಬರೆದಿದ್ದ "ಫಾರ್ಎವರ್" ಎನ್ನುವ ಬ್ಯಾಲಡ್ (ಗೀತೆ)ಗೆ ನಾಂದಿ ಹಾಡಿತು. ಇದು #8 ರ ಸ್ಠಾನವನ್ನು ಪಡೆಯಿತು. ಇದು ಬೆತ್ ನಂತರದ ಚಾರ್ಟಿನಲ್ಲಿ ಅತಿ ಎತ್ತರವಾದ ಸ್ಥಾನ ಮತ್ತು ಬ್ಯಾಂಡಿನ ಮೊದಲ 10 ಸಿಂಗಲ್‌ಗಳಲ್ಲಿ ಇದು ಎರಡನೆಯ ಸ್ಥಾನಗಳಿಸಿದೆ.[೬೪]

ಮೇಕ್ಅಪ್ ಕಳಚಿದ ಈ ವರ್ಷಗಳಲ್ಲಿ, ಕಿಸ್ ಅವರ ವೈಶಿಷ್ಟ್ಯವನ್ನು ಕಂಡುಕೊಳ್ಳಲು ಮತ್ತು ಆಭಿಮಾನಿಗಳನ್ನು ಕಾಪಾಡಿಕೊಳ್ಳಲು ಶ್ರಮಪಟ್ಟರು. ಸಿಮ್ಮನ್ಸ್ 70ರ ದಶಕದ ಉದ್ದಕ್ಕೂ ಕಿಸ್ ನ ಪ್ರಭಾವಶಾಲಿ ಸದಸ್ಯನಾಗಿದ್ದ. ಆದರೆ ಈತ 80ರ ದಶಕದಲ್ಲಿ, ಆತನ ಇತರ ಹವ್ಯಾಸಗಳಾದ ಮುಖ್ಯವಾಗಿ ಚಲನಚಿತ್ರಗಳಲ್ಲಿ ತೊಡಗಿಸಿಗೊಂಡ ಕಾರಣ ತಂಡದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರಲ್ಲಿಲ್ಲ. ಬ್ಯಾಂಡ್ ವೇಷಭೂಷಣಗಳನ್ನು ಕಳುಚಿದರ ಪರಿಣಾಮ ಡೆಮನ್ ರೂಪವನ್ನು ಕಳೆದುಕೊಂಡ ಈತ ಬಹಳ ಕಷ್ಟಪಟ್ಟ. ಈ ಕಾಲಘಟ್ಟದಲ್ಲಿ ಸ್ಟಾನ್ಲಿ ಕಿಸ್ ನ ಕ್ರಿಯಾಶೀಲವಷ್ಟೆ ಅಲ್ಲದೆ ಅದರ ಪ್ರಮುಖ ಸದಸ್ಯನಾಗಿ ಮಾರ್ಪಟ್ಟ.[೬೫][೬೬]

ಬ್ಯಾಂಡ್ 1990ರ ಮೊದಲ ಆಲ್ಬಂ ನಿರ್ಮಿಸಲು ಪುನಃ ಬಾಬ್ ಎರ್ರಿನ್ ನನ್ನು ನೇಮಿಸಿ ಕೊಳ್ಳುವ ನಿರ್ಧಾರ ಮಾಡಿತು.

ಎಲ್ಲವು ಸರಿಯಾಗಿದೆ, ಧ್ವನಿಮುದ್ರಣ(ರೆಕಾರ್ಡಿಂಗ್) ಕಾರ್ಯ ಇನ್ನೇನು ಪ್ರಾರಂಭವಾಗ ಬೇಕು ಎನ್ನುವಷ್ಟರಲ್ಲಿ ದುರಂತವೊಂದು ಕಾದಿತ್ತು.  ಎರಿಕ್ ಕಾರ್ ನ ಹೃದಯದಲ್ಲಿ ಗೆಡ್ಡೆಯಿದೆ (ಟ್ಯೂಮರ್) ಎಂದು ಮಾರ್ಚಿ 1991ರಲ್ಲಿ ಪತ್ತೆಯಾಯಿತು.  ಏಪ್ರಿಲ್ ನಲ್ಲಿ ನಡೆಸಿದ ಶಸ್ತ್ರಚಿಕಿತ್ಸೆಯಲ್ಲಿ ಇದನ್ನು ತೆಗೆಯಲಾಯಿತು. ಆದರೆ ಆತನ ಶ್ವಾಸಕೋಶದಲ್ಲಿ ಕೂಡ ಕೆಲವು ಗೆಡೆಗಳು ಪತ್ತೆಯಾದವು.  ಕಾರ್ ಗೆ ಕೀಮೊಥೆರಪಿಯನ್ನು ನೀಡಲಾಗಿ, ಇವನನ್ನು  ಜೂಲೈವೇಳೆಗೆ ಕ್ಯಾನ್ಸರ್ ಮುಕ್ತನೆಂದು ಘೋಷಿಸಲಾಯಿತು.  ಆದರೆ, ಆತನಿಗಾದ ಎರಡು ಸೆರಿಬ್ರಲ್ ಹೆಮರಿಜ್ ಗಳ ಪೈಕಿ ಒಂದು ಸೆಪ್ಟೆಂಬರ್ನಲ್ಲಿ ಆಯಿತು.  ಈತ ನವೆಂಬರ್ 24, 1991 ರಂದು ಅವನ 41 ವಯಸ್ಸಿನಲ್ಲಿ ಮೃತನಾದನು(ಫ್ರೆಡ್ಡಿ ಮೆರ್ಕುರಿ ಸತ್ತ ದಿನದಂದೆ).[೬೭][೬೮]

ಇದರಿಂದ ಎದೆಗುಂದಿದರೂ, ಕಿಸ್ ಅನುಭವಿ ಡ್ರಮ್ ವಾದಕ ಎರಿಕ್ ಸಿಂಗರ್ ನನ್ನು (ಮೂಲ ಹೆಸರು: ಎರಿಕ್ ಮೆನ್ ಸಿಂಗರ್, ಹುಟ್ಟಿದ್ದು:ಕ್ಲೀವ್ ಲ್ಯಾಂಡ್ಓಹಿಯೊ ಜನನ:ಮೇ 12,1958) ನೇಮಿಸಿಕೊಂಡು ಮುಂದುವರೆಯಿತು. ಸಿಂಗರ್ ಇದಕ್ಕೂ ಮುಂಚೆ ಪಾಲ್ ಸ್ಟಾನ್ಲಿಯ ಜೊತೆಯಲ್ಲಿ, ಸ್ಟಾನ್ಲಿಯ 1989ರ ಸೋಲೋ ಪ್ರವಾಸದ ಸಂದರ್ಭದಲ್ಲಿ ನುಡಿಸಿದ್ದ. ಸಿಂಗರ್ ಗೆ ಬ್ಲ್ಯಾಕ್ ಸಾಬಾತ್, ಲಿಟಾ ಫೋರ್ಡ್, ಬ್ಯಾಡ್ ಲ್ಯಾಂಡ್ಸ್ ಮತ್ತು ಅಲೈಸ್ ಕೂಪರ್ ರಂತಹ ಪ್ರದರ್ಶಕರೊಂದಿಗೆ ಕೂಡ ನುಡಿಸಿದ್ದ.

ಕಿಸ್ ರೀವೆಂಜ್ ಅನ್ನು ಮೇ 19,1992ರಂದು ಬಿಡುಗಡೆ ಮಾಡಿತು. ಇದು ಸ್ವಲ್ಪ ತೀಕ್ಷ್ಣವಾದ ಹಾರ್ಡ್ ಆಗಿದ್ದ ಧ್ವನಿಯನ್ನು ಹೊಂದಿತ್ತು. ಇದನ್ನು ಅದರ ಮೊದಲ ಸಿಂಗಲ್ (ಹಾಡು) "ಅನ್ ಹೋಲಿ" ಸ್ಷಷ್ಟಪಡಿಸಿತು. ಅನಿರೀಕ್ಷಿತ ನಡೆಯಲ್ಲಿ, ಕಿಸ್ ವಿನ್ನಿ ವಿನ್ಸೆಂಟ್ ನನ್ನು ಹಾಡು ಬರೆಯಲು ನೇಮಿಸಿಕೊಂಡಿತು. ಈ ಆಲ್ಬಂ ಟಾಪ್ 10ರಲ್ಲಿ ಸ್ಥಾನಗಳಿಸಿ, ಗೋಲ್ಡ್ ಪ್ರಮಾಣ ಪತ್ರವನ್ನು ಗಳಿಸಿತು. ಕಿಸ್ U.S.(ಯು.ಎಸ್) ಕ್ಲಬ್ ಗಳಿಗೆ ಸೀಮಿತವಾದ ಒಂದು ಪುಟ್ಟ ಪ್ರವಾಸವನ್ನು 1992ರ ಸ್ಪ್ರಿಂಗ್‌ನಲ್ಲಿ(ವಸಂತದಲ್ಲಿ)ನಡೆಸಿತು. ಇದಾದ ಬಳಿಕ, ಸೆಪ್ಟೆಂಬರ್ 1992ರಲ್ಲಿ ಅಮೇರಿಕನ್ ಅರೇನಾ ಟೂರ್ (ಸಭಾಂಗಣಗಳಲ್ಲಿ ಪ್ರದರ್ಶನ ಮಾಡುವುದನ್ನು ಒಳಗೊಂಡ ಪ್ರವಾಸ)ಕೈಗೊಂಡಿತ್ತು. ಕಿಸ್ ಇದರ ಬೆನ್ನಲ್ಲೆ ರೀವೆಂಜ್ ಪ್ರವಾಸದ ಸಂದರ್ಭದಲ್ಲಿ ರೆಕಾರ್ಡ್ ಮಾಡಿದ್ದ ಅಲೈವ್ III ಯನ್ನು ಬಿಡುಗಡೆ (ಮೇ 14 1993) ಮಾಡಿತು. ನಾಲ್ಕು ದಿನಗಳ ನಂತರ, ಹಾಲಿವುಡ್ಡಿನ ರಾಕ್ ವಾಕ್ ಆಫ್ ಫೇಮ್ ಪಟ್ಟಿಗೆ ಕಿಸ್ ಅನ್ನು ಸೇರಿಸಲಾಯಿತು.[೬೯]

ಈ ಕಾಲಘಟ್ಟದಲ್ಲಿ, ಕಿಸ್ ಬಗ್ಗೆ ಹಿಂದೆ ಇದ್ದ ಉತ್ಕಟವಾದ ಆಭಿಮಾನ ಮುಂಚಿನ ಹಾಗೆ ಗರಿಗದೆರತೊಡಗಿತು. ಜೂನ್ 1994 ರಲ್ಲಿ Kiss My Ass: Classic Kiss Regrooved ಬಿಡುಗಡೆಯಾಯಿತು. ಈ ಸಂಗ್ರಹದಲ್ಲಿ ಆ ಕಾಲದ ಜನಪ್ರಿಯ ಕಲಾವಿದರು ಕಿಸ್ ಹಾಡುಗಳನ್ನು ತಮ್ಮ ಶೈಲಿಯಲ್ಲಿ ಹಾಡಿದ್ದರು. ಹೀಗಾಗಿ, ಇದೊಂದು ಬಹಳ ವೈವಿಧ್ಯಮಯವಾದ ಪ್ರಯತ್ನವಾಗಿತ್ತು. ಇದರಲ್ಲಿ ಲೆನ್ನಿ ಕ್ರಾವಿಟ್ಸ್ ನ ಡ್ಯೂಸ್ ನ ಆಕರ್ಷಕ ರೂಪ (ಹಾರ್ಮೊನಿಕ ವಾದಕನಾಗಿ ಸ್ಟೀವಿ ವಂಡರ್ ಜೊತೆಯಲ್ಲಿ), ಮೈಟಿ ಮೈಟಿ ಬೂಸ್ಟೊನ್ಸ್ ಪ್ರಸ್ತುತ ಪಡಿಸಿದ "ಡೆಟ್ರಾಯಿಟ್ ರಾಕ್ ಸಿಟಿ" ಹಾಡಿನ ಸ್ಕಾ ಪಂಕ್ ಆವೃತ್ತಿಯಿತ್ತು. ಗಾರ್ಥ್ ಬ್ರೂಕ್ಸ್ ರ "ಹಾರ್ಡ್ ಲಕ್ ವ್ಯೂಮನ್" ಹಾಡನ್ನು ನೇರವಾಗಿ ರೂಪಿಸಿದ್ದರು, ಇವರ ಬ್ಯಾಕ್ಅಪ್ ಬ್ಯಾಂಡ್ ಆಗಿ ಕಿಸ್ ಇದ್ದರು.

ನಂತರ, 1995ರಲ್ಲಿ ತಂಡವು ಕಿಸ್ ಸ್ಟೋರಿ ಎನ್ನುವ 440 ಪುಟಗಳ, ಒಂಬತ್ತು ಪೌಂಡ್ ಬೆಲೆಯ ಪುಸ್ತಕವನ್ನು ಬಿಡುಗಡೆ ಮಾಡಿತು. ಈ ಪುಸ್ತಕದಲ್ಲಿ ಅಲ್ಲಿಯವರೆಗಿನ ತಂಡದ ಇತಿಹಾಸವನ್ನು ದಾಖಲಿಸಲಾಗಿತ್ತು. ಅದೇ ವರ್ಷ, ಬ್ಯಾಂಡ್ ವಿಶಿಷ್ಟವಾದ ವರ್ಲ್ಡ್ ವೈಡ್ ಕಿಸ್ ಕನ್ವೆನ್ಷನ್ ಟೂರ್ ಎನ್ನುವ ಪ್ರವಾಸ ಕಾರ್ಯಕ್ರಮವನ್ನು ಶುರುಮಾಡಿತು (ಪ್ರಪಂಚದ ಸುತ್ತಲೂ ನಡೆಸುವ ಪ್ರದರ್ಶನಗಳು). ಇದಕ್ಕೆ ಪ್ರೇಕ್ಷಕರಿಂದ ಒಳ್ಳೆಯ ಪ್ರೋತ್ಸಾಹ ಸಿಕ್ಕಿತು. ಈ ಕನ್ವೆನ್ಷನ್ ಗಳು(ಸಮ್ಮೇಳನ)ದಿನವಿಡಿ ಕಾರ್ಯಕ್ರಮವಾಗಿದ್ದವು. ಇವುಗಳಲ್ಲಿ ಹಳೆಯ ಕಿಸ್ ವೇಷಭೂಷಣ, ವಾದ್ಯ, ಮತ್ತು ನೆನಪಿನ ಕಾಣಿಕೆಗಳ ಪ್ರದರ್ಶನವಿತ್ತು. ಇದರ ಜೊತೆಯಲ್ಲಿ ಕಿಸ್ ಕವರ್ ಬ್ಯಾಂಡ್ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ವ್ಯಾಪಾರಿಗಳು ಈ ಬ್ಯಾಂಡಿನ ವೃತ್ತಿಜೀವನದ ಪ್ರತಿಯೊಂದು ಘಟ್ಟದ ಮರ್ಚಂಡೈಸ್ ಗಳನ್ನು ಮಾರುತ್ತಿದ್ದರು. ಈ ಕನ್ವೆನ್ಷನ್(ಸಮ್ಮೇಳನ)ಗಳಲ್ಲಿ ಕಿಸ್ ಕಾಣಿಸಿಕೊಳ್ಳುವುದಷ್ಟೆ ಅಲ್ಲದೆ ಪ್ರಶ್ನೋತ್ತರ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಆಟೋಗ್ರಾಫ್ ಗಳಿಗೆ ಸಹಿಮಾಡುತ್ತಿದ್ದರು. ಅಷ್ಟೆ ಅಲ್ಲದೆ, ಎರಡು ತಾಸುಗಳ ಕಾಲ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು. ಇದರಲ್ಲಿ ಅಭಿಮಾನಿಗಳು ಕೋರಿದ್ದ ಹಾಡುಗಳನ್ನು ಪ್ರಸ್ತುತಪಡಿಸುತ್ತಿದ್ದರು. ಪೀಟರ್ ಕ್ರಿಸ್ U.S.(ಯು.ಎಸ್) ನ ಮೊದಲ ಕಾರ್ಯಕ್ರಮದಲ್ಲಿ (ಜೂನ್ 17,1995) ಕಿಸ್ ಜೊತೆಯಲ್ಲಿ ರಂಗದ ಮೇಲೆ ಕಾಣಿಸಿಕೊಂಡು "ಹಾರ್ಡ್ ಲಕ್ ವ್ಯೂಮನ್" ಮತ್ತು "ನಥಿಂಗ್ ಟು ಲೂಸ್" ಹಾಡುಗಳನ್ನು ಪ್ರದರ್ಶಿಸಿದ. ಕ್ರಿಸ್ ಬ್ಯಾಂಡಿನೊಂದಿಗೆ ಸುಮಾರು 16 ವರ್ಷಗಳಲ್ಲಿ ಸಾರ್ವಜನಿಕವಾಗಿ ಪ್ರದರ್ಶಸಿದ್ದು ಇದೇ ಮೊದಲ ಬಾರಿ.[೭೦][೭೧]

ಆಗಸ್ಟ್ 9, 1995 ರಂದು MTV (ಎಂ.ಟಿ.ವಿ) ಅನ್ ಪ್ಲಗ್ಡ್ ಎನ್ನುವ ಕಾರ್ಯಕ್ರಮದಲ್ಲಿ ಪ್ರದರ್ಶನ ನಡೆಸಿ ಕೊಟ್ಟ ಅನೇಕ ಸಂಗೀತಗಾರರ ಪಟ್ಟಿಗೆ ಕಿಸ್ ಕೂಡ ಸೇರಿತು. ಬ್ಯಾಂಡ್ ಕ್ರಿಸ್ ಮತ್ತು ಫ್ರೆಹ್ಲಿಯರನ್ನು ಸಂಪರ್ಕಿಸಿ, ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಮಂತ್ರಿಸಿದರು. ಈ ಆಮಂತ್ರಣದ ಮೇರೆಗೆ ಇಬ್ಬರು ಕಿಸ್ ಜೊತೆಯಲ್ಲಿ ಸೇರಿಕೊಂಡು "ಬೆತ್", "2000 ಮ್ಯಾನ್", "ನಥಿಂಗ್‌ ಟು ಲೂಸ್", "ರಾಕ್ ಅಂಡ್ ರೋಲ್ ಆಲ್ ನೈಟ್" ಒಳಗೊಂಡ ಹಲವಾರು ಹಾಡುಗಳನ್ನು ಪ್ರಸ್ತುತ ಪಡಿಸಿದರು.[೭೦]ಅನ್ ಪ್ಲಗ್ಡ್ ಕಾರ್ಯಕ್ರಮವು ಮೊದಲಿನ ಕಿಸ್ ಪುನಃ ಒಂದಾಗುತ್ತಾರೆ ಎನ್ನುವ ಉಹಾಪೋಹಗಳಿಗೆ ಕಾರಣವಾಯಿತು. ಆದರೆ, ಅನ್ ಪ್ಲಗ್ಡ್ ಗೋಷ್ಟಿಯ(ಕಾನ್ಸರ್ಟ್) ನಂತರ, ಈ ಬ್ಯಾಂಡ್ (ಕುಲಿಕ್ ಮತ್ತು ಸಿಂಗರ್ ಜೊತೆಯಲ್ಲಿ),ರಿವೆಂಜ್ ನ ಮುಂದುವರಿದ ಭಾಗವನ್ನು ಧ್ವನಿಮುದ್ರಣ ಮಾಡಲು, ಮೂರು ವರ್ಷಗಳ ಬಳಿಕ ಸ್ಟೂಡಿಯೋಗೆ ಮರಳಿದರು. Carnival of Souls: The Final Sessions ಅನ್ನು ಫೆಬ್ರವರಿ 1996ರಲ್ಲಿ ಪೂರ್ಣಮಾಡಲಾಯಿತಾದರೂ, ಅದರ ಬಿಡುಗಡೆ ಸುಮಾರು ಎರಡು ವರ್ಷಗಳ ತಡವಾಯಿತು. ಈ ಆಲ್ಬಂನ ಕಳ್ಳತನದಿಂದ ತಯಾರಿಸಲಾದ (ಬೂಟ್ಲೆಗ್) ಪ್ರತಿಗಳು ಅಭಿಮಾನಗಳ ನಡುವೆ ವ್ಯಾಪಕವಾಗಿ ಪ್ರಸಾರವಾದವು.[೭೨]

ಕಿಸ್ ಸಾರ್ವಜನಿಕವಾಗಿ ಸಿಮ್ಮನ್ಸ್, ಸ್ಟಾನ್ಲಿ, ಕುಲಿಕ್ ಮತ್ತು ಸಿಂಗರ್ ಸದಸ್ಯ ರೂಪದಲ್ಲಿಯೆ ಇದ್ದರೂ ಕೂಡ, ಮೊದಲಿನ ಸದಸ್ಯರನ್ನು ಒಂದುಗೂಡಿಸುವ ಪ್ರಯತ್ನಗಳು ತೆರೆಮರೆಯಲ್ಲಿ ನಡೆಯುತ್ತಿದ್ದವು. ಈ ಪ್ರಯತ್ನಗಳು, ಬ್ಯಾಂಡ್ MTVಗೆ 1983ರಲ್ಲಿ ಮೇಕ್ಅಪ್ ಇಲ್ಲದೆ ಮಾಡಿದ ಪ್ರದರ್ಶನದ ನಂತರದ ಆತ್ಯಂತ ನಾಟಕೀಯವಾದ ಸಾರ್ವಜನಿಕ ಪ್ರದರ್ಶನದೊಂದಿಗೆ ಮುಕ್ತಾಯವಾಯಿತು.

ಪುನರ್ಮಿಲನ (1996–2000)[ಬದಲಾಯಿಸಿ]

You know how the Grammys used to be, all straight-looking folks with suits. Everybody looking tired. No surprises. We tired of that. We need something different ...something new... we need to shock the people... so let's shock the people!

Tupac Shakur

ಈ ಘೋಷಣೆಯೊಂದಿಗೆ ಟುಪಾಕ್ ಶಾಕುರ್, ಮುಂಚಿನ ಕಿಸ್ ಸದಸ್ಯರನ್ನು (ಅವರ ಮೇಕ್ಅಪ್ ಮತ್ತು ಲವ್ ಗನ್ ಕಾಲದ ವೇಷಭೂಷಣಗಳೊಂದಿಗೆ), ಫೆಬ್ರವರಿ 28, 1996 ರಂದು ನಡೆದ 38ನೇ ವಾರ್ಷಿಕ ಗ್ರ್ಯಾಮಿ ಪ್ರಶಸ್ತಿ ಸಮಾರಂಭದಲ್ಲಿ ಪರಿಚಿಯಿಸಿದನು.[೭೩] ಈ ಬ್ಯಾಂಡ್ ಏಪ್ರಿಲ್ 16ರಂದು ನ್ಯೂಯಾರ್ಕಿನ USS Intrepid (CV-11) ಮೇಲೆ ಪತ್ರಿಕಾಗೋಷ್ಟಿ ನೆಡೆಸಿತು. ಇದರಲ್ಲಿ ಅವರೆಲ್ಲಾ ಮತ್ತೆ ಒಂದಾದರ ಸಂಕೇತವಾಗಿ, ಹೊಸ ಮ್ಯಾನೆಜರ್ ಡಾಕ್ ಮೆಕ್ ಗೀ ಯ ಸಹಾಯದೊಂದಿಗೆ ಪರಿಪೂರ್ಣ ಪುನರ್ ಮಿಲನದ ಪ್ರವಾಸವನ್ನು ಕೈಗೊಳ್ಳುವುದಾಗಿ ಘೋಷಿಸಿತು. ಕಾನನ್ ಓ'ಬ್ರಿಯನ್ ನಡೆಸಿಕೊಟ್ಟ ಈ ಗೋಷ್ಟಿಯನ್ನು 58 ದೇಶಗಳಿಗೆ ಬಿತ್ತರ ಮಾಡಲಾಯಿತು. ಪ್ರವಾಸದ ಮೊದಲ ಪ್ರದರ್ಶನಕ್ಕೆ ಸುಮಾರು 40,000 ಟಿಕೆಟುಗಳು ಏಪ್ರಿಲ್ 20 ರಂದು, 47ನಿಮಷದಲ್ಲಿ ಮಾರಾಟವಾಯಿತು.[೭೪]

ಪುನರ್ಮಿಲನದ ನಂತರ ಕಿಸ್ ಸದಸ್ಯರ ತಮ್ಮ ಮೊದಲ ಸಾರ್ವಜನಿಕ ಗೋಷ್ಟಿಯನ್ನು ಜೂನ್ 15, ರಂದು ನೀಡಿದರು. ಇವರು ಇರ್ವೈನ್, ಕ್ಯಾಲಿಪೊರ್ನಿಯದಲ್ಲಿ ನಡೆದ ವಾರ್ಷಿಕ KROQ (ಕೆ.ಅರ್.ಒ.ಕ್ಯೂ) ವೀನಿ ರೋಸ್ಟ್ ಕಾರ್ಯಕ್ರಮದ ಮುಂಚಿನ (ಪೂರ್ವಭಾವಿ) ಒಂದು ಗಂಟೆಯ ಪ್ರದರ್ಶನ ಪ್ರಸ್ತುತ ಪಡಿಸಿದರು. ತಮ್ಮ ಈ ಪ್ರದರ್ಶನದ ಮೊಲಕ ಇರ್ವೈನ್ ಮೆಡೋಸ್ ಆಮ್ಪಿಥಿಯೆಟರ್ ಎನ್ನುವ ರಂಗಮಂದಿರದಲ್ಲಿ ಸಂಚಲನ ಉಂಟುಮಾಡಿದರು.[೭೫] ಕಿಸ್ ತಮ್ಮ ಆಲೈವ್/ವರ್ಲ್ಡ್ ವೈಡ್ ಟೂರ್ ಎನ್ನುವ ಪ್ರವಾಸವನ್ನು ಜೂನ್ 28ರಂದು ಡೆಟ್ರಾಯಿಟ್, ಮಿಷಿಗನ್ಟೈಗರ್ ಸ್ಟೇಡಿಯಂ ನಲ್ಲಿ 39,867 ಪ್ರೇಕ್ಷಕರ ಎದರು ತುಂಬಿದ ಗೃಹದ ಪ್ರದರ್ಶದೊಂದಿಗೆ ಪ್ರಾರಂಭಿಸಿದರು. ಈ ಪ್ರವಾಸವು(ಟೂರ್)11 ತಿಂಗಳಿಗು ಸ್ವಲ್ಪ ಹೆಚ್ಚು ಕಾಲ ನಡೆಯಿತು. ಇದರಲ್ಲಿ 192 ಪ್ರದರ್ಶನಗಳನ್ನು ನಡೆಸಿದರು. ಇದರಿಂದ $43.6 ದಶಲಕ್ಷ ಅದಾಯಗಳಿಸಿ, ಕಿಸ್ ಅನ್ನು 1996 ರ ಅತಿ ಹೆಚ್ಚು ಸಂಪಾದಿಸಿದ ಗೋಷ್ಟಿಯನ್ನಾಗಿಸಿತು.[೭೬] ಸರಾಸರಿ ಹಾಜರಿ ಪ್ರಮಾಣ 13,737 ತಂಡದ ಇತಿಹಾಸದಲ್ಲೆ ಅತಿ ದೊಡ್ಡದು.[೭೪]

ಸೆಪ್ಟೆಂಬರ್ 1998ರಂದು ಪುನಃ ಒಂದುಗೂಡಿದ್ದ ತಂಡ ಸೈಕೊ ಸರ್ಕಸ್ ಎನ್ನುವ ಆಲ್ಬಂ ಬಿಡುಗಡೆ ಮಾಡಿತು. ಇದು, 1980ರಲ್ಲಿ ಬಿಡುಗಡೆಗೊಂಡ ಅನ್ ಮ್ಯಾಸ್ಕಡ್ ನಂತರ, ಬ್ಯಾಂಡಿನ ಮೂಲ ಸದಸ್ಯರ, ಮೊದಲ ಆಲ್ಬಂ ಎಂದು ಪರಿಗಣಿಸಲ್ಪಟ್ಟರೂ, ಇದಕ್ಕೆ ಫ್ರೆಹ್ಲಿ ಮತ್ತು ಕ್ರಿಸ್ ರ ಕೊಡುಗೆ ಬಹಳ ಕಡಿಮೆಯಿತ್ತು. ಫ್ರೆಹ್ಲಿ ಮತ್ತು ಕ್ರಿಸ್ ರ ಚಿತ್ರಗಳು ಆಲ್ಬಂ ಗಳ ರಕ್ಷಾಪುಟದ ಮೇಲೆ ಎದ್ದುಕಾಣುವ ಹಾಗಿತ್ತು, ಅದರೆ ಈ ಆಲ್ಬಂನ ಬಹುತೇಕ ಲೀಡ್ ಗಿಟಾರ್ ಭಾಗವನ್ನು ನುಡಿಸಿರುವುದು ಈ ಬ್ಯಾಂಡಿಗೆ ನಂತರ ಸೇರಿಕೊಂಡ ಟಾಮಿ ಥಾಯರ್ ಮತ್ತು ಬ್ಯಾಂಡಿನ ಮಾಜಿ ಸದಸ್ಯ ಬ್ರೂಸ್ ಕುಲಿಕ್ ಎಂದು ನಂತರ ಬಹರಿಂಗಪಡಿಸಲಾಯಿತು. ಬಹಳಷ್ಟು ಭಾಗಗಳಲ್ಲಿ, ಡ್ರಮ್ ನುಡಿಸಿದ್ದು ಕೆವಿನ್ ವಾಲೆಂಟೈನ್ ಎನ್ನುವ ಸೆಷೆನ್ ವಾದಕ . ಈ ವಿವಾದದ ಹೊರತಾಗಿಯೂ, ಬಿಡುಗಡೆಯಾದ ಕೂಡಲೆ ಆಲ್ಬಂ ಚಾರ್ಟ್ ನಲ್ಲಿ #3 ಸ್ಥಾನಗಳಿಸಿ, ಕಿಸ್ ಆಲ್ಬಂಗಳ ಪೈಕಿ ಚಾರ್ಟಿನಲ್ಲಿ ಅತಿ ದೊಡ್ಡ ಸ್ಥಾನಗಳಿಸಿದ ಆಲ್ಬಂಯಾಯಿತು. ಆದರೆ, 2009ರಲ್ಲಿ ಬಿಡುಗಡೆಯಾದ ಸೋನಿಕ್ ಬೂಮ್ ಆಲ್ಬಂ #2 ಸ್ಥಾನವನ್ನು ಗಳಿಸಿ ಅದರ ದಾಖಲೆಯನ್ನು ಮುರಿಯಿತು.[೭೭] ಇದರ ಶೀರ್ಷಿಕೆಯ ಹಾಡು, ಉತ್ತಮ ಹಾರ್ಡ್ ರಾಕ್ ಪ್ರದರ್ಶನದ ಅಡಿಯಲ್ಲಿ ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನವಾಯಿತು.[೭೮] ಲಾಸ್ ಏಜಂಲೀಸ್, ಕ್ಯಾಲಿಫೋರ್ನಿಯಾ ದಲ್ಲಿರುವ ಡಾಡ್ಜರ್ ಸ್ಟೇಡಿಯಂ ನಲ್ಲಿ 1998ರ ಹಾಲೊವೀನ್ ರ ರಾತ್ರಿಯಂದು ಇವರ ಸೈಕೋ ಸರ್ಕಸ್ ಪ್ರವಾಸ (ಟೂರ್) ಪ್ರಾರಂಭವಾಯಿತು. ಇದನ್ನು U.S.(ಯು.ಎಸ್)ನಾದ್ಯಾಂತ FM(ಎಫ್.ಎಂ.) ರೇಡಿಯೊದಲ್ಲಿ ಬಿತ್ತರವಾಯಿತು. ಇದರ ಮೂಲಕ ಇವರು ಮೊದಲ ಬಾರಿಗೆ ರಂಗ ಪ್ರದರ್ಶನದಲ್ಲಿ 3-D ಚಿತ್ರಣಗಳನ್ನು ಬಳಸಿಕೊಂಡು ಇತಿಹಾಸ ಬರೆದರು.[೭೯][೮೦]

ಹಾಲಿವುಡ್ ವಾಕ್ ಆಫ್ ಫೇಮ್ ನ "ರೆಕಾರ್ಡಿಂಗ್ ಇಂಡಸ್ಟ್ರಿ" (ಧ್ವನಿಸುರಳಿ ಉದ್ಯಮ) ವಿಭಾಗದಡಿಯಲ್ಲಿ, ಕಿಸ್ ಅನ್ನು ಆಗಸ್ಟ್ 11,1999 ರಂದು ಸೇರಿಸಿಕೊಳ್ಳಲಾಯಿತು. ಕಿಸ್ ವಿಷಯವನ್ನು ಆಧರಿಸಿದ ಡೆಟ್ರಾಯಿಟ್ ರಾಕ್ ಸಿಟಿ ಎನ್ನುವ ಚಲನಚಿತ್ರ ಆಗಸ್ಟ್ 13 ರಂದು ದೇಶಾದ್ಯಂತ ಬಿಡುಗಡೆಯಾಯಿತು. ಈ ಚಿತ್ರವು 1978ರಲ್ಲಿ ನಡೆಯುವ ಹಾಗೆ ಚಿತ್ರಿತವಾಗಿದ್ದು, ಇದರ ಕಥೆ ನಾಲ್ಕು ಯುವಕರ(ಮುಖ್ಯಭೂಮಿಕೆಯಲ್ಲಿ ಎಡ್ವರ್ಡ್ ಫರ್ಲಾಂಗ್ ಒಳಗೊಂಡಂತೆ) ಡೆಟ್ರಾಯಿಟ್ ನಲ್ಲಿ ತುಂಬಿದ ಗೃಹಗಳ ಕಿಸ್ ಪ್ರದರ್ಶನಕ್ಕೆ ಟಿಕೇಟು ಸ್ಕೋರ ಮಾಡಲು ನಡೆಸುವ ಪ್ರಯತ್ನಗಳ ಕುರಿತಂತೆಯಿದೆ.

ಇದಾದ ಮುಂದಿನ ತಿಂಗಳು, ವರ್ಲ್ಡ್ ಚ್ಯಾಂಪಿಯನ್ಷಿಪ್ ವ್ರೆಸ್ಲಿಂಗ್, ಸಹಯೋಗದೊಂದಿಗೆ ದಿ ಕಿಸ್ ಡೆಮನ್ ಎನ್ನುವ ಕಿಸ್ ವಿಷಯವಾಧರಿಸಿದ ವ್ರೆಸ್ಲರ್‌ನನ್ನು (ಕುಸ್ತಿ ಪಟು)ರೂಪಿಸಿದರು. ಇವನ ಮುಖವನ್ನು ಸಿಮ್ಮನ್ಸ್ ಹೋಲುವ ಹಾಗೆ ರೂಪಿಸಲಾಗಿತ್ತು. ಈ ಪಾತ್ರವನ್ನು ಪರಿಚಯಿಸುವ ಸಲುವಾಗಿ ತಂಡ WCW ಮಂಡೆ ನೈಟ್ರೊ ಎನ್ನುವ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು "ಗಾಡ್ ಆಫ್ ತಂಡರ್" ಪ್ರದರ್ಶನ ನಡೆಸಿಕೊಟ್ಟರು. ಒಂದು ಹಾಡಿನ ಒಂದು-ರಾತ್ರಿ ಪ್ರದರ್ಶನದಿಂದ ಬ್ಯಾಂಡ್ $500,000 ಸಂಪಾದಿಸಿತು.[೮೧] WCW ರ ಮುಖ್ಯಸ್ಥ ಎರಿಕ್ ಬಿಶ್ಚಾಫ್, ನನ್ನು ಅದೆ ವರ್ಷ ಸೆಪ್ಟೆಂಬರ್ ನಲ್ಲಿ ವಜಾಮಾಡಿದ ಮೇಲೆ, ಕಿಸ್ ಜೊತೆಯಿದ್ದ ಎಲ್ಲಾ ಸಂಬಂಧವನ್ನು WCW ಕಡಿದುಕೊಂಡಿತು, ಹೀಗಾಗಿ ಈ ಪಾತ್ರ ಅಲ್ಪ ಕಾಲ ಜೀವಿಸಿತು.

ಕಿಸ್ 2000ರ ಪ್ರಾರಂಭದಲ್ಲಿ U.S. ಫೇರ್ವೆಲ್ ಟೂರ್ ಎನ್ನುವ ತಮ್ಮ ಕೊನೆಯ ಪ್ರವಾಸವನ್ನು ಬೇಸಿಗೆಯಲ್ಲಿ ಆಯೋಜಿಸುವುದಾಗಿ ಘೋಷಿಸಿದರು. ಇದು ಬ್ಯಾಂಡಿನ ಕೊನೆಯ ಪ್ರವಾಸ ಎಂದು ಹೇಳಲಾದರೂ, ಇದು ಬ್ಯಾಂಡಿನ ಮೂಲ ಸದಸ್ಯರು ಒಟ್ಟಗೆ ಮಾಡಿದ ಕೊನೆಯ ಪ್ರವಾಸ. ಈ ಪ್ರವಾಸ ಮಾರ್ಚಿ 12, 2000ರಲ್ಲಿ ಪ್ರಾರಂಭವಾಯಿತು.[೮೨]

ಈ ತಂಡ, ತಮ್ಮ ಪ್ರವಾಸಕ್ಕೆ ಹೆಚ್ಚಿನ ಕಾರ್ಯಕ್ರಮಗಳನ್ನು ಘೋಷಿಸಿದರು. ಇದು ಏಪ್ರಿಲ್ 2001 ರ ವರೆಗೆ ನಡೆಯಿತು. ಅದೇ ವರ್ಷದಲ್ಲಿ  ಕಂಪ್ಯೂಟರ್ ಗೇಮ್ ಕೂಡ ಬಿಡುಗಡೆಯಾಯಿತು.Kiss: Psycho Circus: The Nightmare Child

ಪುನರ್ಮಿಲನದ ಬಳಿಕ (2001-2008)[ಬದಲಾಯಿಸಿ]

2004ರಲ್ಲಿ ಕಿಸ್ ತಂಡ

ಫೇರ್ವೆಲ್ ಪ್ರವಾಸದ ಅಂಗವಾಗಿ ಬ್ಯಾಂಡ್ ಜಪಾನ್ ಮತ್ತು ಆಸ್ಟ್ರೀಲಿಯಾ ಪ್ರವಾಸ ಕೈಗೊಳ್ಳುವ ಸ್ವಲ್ಪ ಮುನ್ನ, ಜನವರಿ 31,2001ರಂದು ಕ್ರಿಸ್, ಸಂಬಳ ಕಡಿಮೆ ಎನ್ನುವ ನೆಪವೊಡ್ಡಿ ಬ್ಯಾಂಡಿನ್ನಿಂದ ಮತ್ತೊಮ್ಮೆ ಹೊರಬಂದನು. ಇವನ ಸ್ಥಾನವನ್ನು, ಈ ಹಿಂದೆ ಕಿಸ್ ನಲ್ಲಿ ಡ್ರಮ್ ವಾದಕನಾಗಿದ್ದ ಎರಿಕ್ ಸಿಂಗರ್ ತುಂಬಿದ. ಫೇರ್ವೆಲ್ ಪ್ರವಾಸ ಮುಂದುವರೆದ ಹಾಗೆ ಸಿಂಗರ್ ಕ್ರಿಸ್ ನ ಕ್ಯಾಟ್ ಮ್ಯಾನ್ ವೇಷವನ್ನು ಧರಿಸಿದ. ಈತನ ಈ ನಡೆವಳಿಕೆ ಬಹಳ ವರ್ಷಗಳಿಂದ ಅಭಿಮಾನಿಗಳಾಗಿದ್ದವರಲ್ಲಿ ಚರ್ಚೆಗೆ ಗ್ರಾಸವಾಗುತ್ತದೆ.[೮೩] ಕ್ರಿಸ್ ನ ಮೇಕ್ಅಪ್ ವಿನ್ಯಾಸಗಳ (ಫ್ರೆಹ್ಲಿಯ ವಿನ್ಯಾಸ ಕೂಡ) ಸ್ವಾಮ್ಯತೆಯನ್ನು ಸಿಮ್ಮನ್ಸ್ ಮತ್ತು ಸ್ಟಾನ್ಲಿ ಹೊಂದಿದ್ದಾರೆ , ಹೀಗಾಗಿ ಕ್ರಿಸ್ ಅಥವಾ ಫ್ರೆಹ್ಲಿಗೆ ಇದನ್ನು ತಡೆಯಲು ಯಾವುದೆ ಮಾರ್ಗವಿರಲಿಲ್ಲ.[ಸೂಕ್ತ ಉಲ್ಲೇಖನ ಬೇಕು]

ಈ ಬ್ಯಾಂಡ್ ಅನ್ನು 2001ರ ಪ್ರಾರಂಭದಲ್ಲಿ ವಿಸರ್ಜಿಸಲು ನಿರ್ಧರ ಮಾಡಲಾಗಿತ್ತು. ಇವರ ಸಂಪೂರ್ಣ ವೃತ್ತಿ ಜೀವನ ಒಳಗೊಂಡ "ದಿ ಬಾಕ್ಸ್ ಸೆಟ್ " ಎಂಬ ಶೀರ್ಷಿಕೆಯಿದ್ದ (ಐದು ಸಿ.ಡಿ. ಗಳಲ್ಲಿ 94 ಹಾಡುಗಳು)ಆಲ್ಬಂಗಳ ಸಂಗ್ರಹವನ್ನು ನವೆಂಬರ್ ನಲ್ಲಿ ಬಿಡುಗಡೆಯಾಯಿತು. ಆ ವರ್ಷದ ಬೇಸಿಗೆಯಲ್ಲಿ ಕಿಸ್ ಮರ್ಚಂಡೈಸ್ ನ ಭಾಗವಾಗಿ ಕಿಸ್ ಕಾಸ್ಕೆಟ್ ಎನ್ನುವ ವಸ್ತುವನ್ನು ಬಿಡುಗಡೆ ಮಾಡಲಾಯಿತು. ಇದನ್ನು ಇಲ್ಲಿಯವರೆಗಿನ ಕಿಸ್ ಮರ್ಚಂಡೈಸ್ ಗಳಲ್ಲಿಯೆ ಅತಿರೇಕದ ವಸ್ತು ಎಂದು ಅಭಿಪ್ರಾಯಪಡಲಾಗುತ್ತಿದೆ. ಕಿಸ್ ಕಾಸ್ಕೆಟ್ ಅನ್ನು ಪರಿಚಯಿಸುತ್ತಾ, ಸಿಮ್ಮನ್ಸ್ " ನನಗೆ ಬದುಕಲು ಇಷ್ಟ, ಆದರೆ ಇದು ಇದರ ಪರ್ಯಾಯ ಬಹಳ ಚೆನ್ನಾಗಿರುವ ಹಾಗೆ ತೋರಿಸುತ್ತದೆ" ಎಂದು ವ್ಯಂಗ್ಯವಾಗಿ ನುಡಿದನು.[೮೪]

ಡಿಸೆಂಬರ್ 4, 2001 ರಂದು, ನ್ಯಾಷನಲ್ ಅಕಾಡೆಮಿ ಆಫ್ ರೆಕಾರ್ಡಿಂಗ್ ಆರ್ಟ್ಸ್ ಅಂಡ್ ಸೈಅನ್ಸ್ ("ದಿ ರೆಕಾರ್ಡಿಂಗ್ ಅಕಾಡೆಮಿ") ಹೀರೊಸ್ ಆವಾರ್ಡ್, NARAS ನ್ಯೂಯಾರ್ಕ್ ವಿಭಾಗದಲ್ಲಿ ನಡೆಸಿದ ಸಮಾರಂಭದಲ್ಲಿ ಸನ್ಮಾನಿತರಾದವರಲ್ಲಿ ಕಿಸ್ ಕೂಡ ಒಬ್ಬರು. NARAS ಯುನೈಟೆಡ್ ಸ್ಟೇಟ್ಸ್ ನಾದ್ಯಂತ 12 ವಿಭಾಗಗಳನ್ನು ಹೊಂದಿದೆ. ಹೀಗಾಗಿ ವರ್ಷವಿಡಿ 12 ಸಮಾರಂಭಗಳು ನಡೆಯುತ್ತದೆ. ಅಯಾ ವಿಭಾಗಕ್ಕೆ ಹತ್ತಿರವಾಗಿರುವ ಶ್ರೇಷ್ಟರನ್ನು ಗುರುತಿಸಿ ಸನ್ಮಾನಿಸಲಾಗುತ್ತದೆ.

ಈ ಸನ್ಮಾನವನ್ನು NARAS "ರೆಕಾರ್ಡಿಂಗ್ ಆಕಾಡೆಮಿ ಹಾನರ್ಸ್" ಎಂದು ಮರುನಾಮಕಾರಣ ಮಾಡಿದೆ. ಈ ಸನ್ಮಾನವನ್ನು ಪಡೆಯುವುದರೊಂದಿಗೆ, ಗ್ರ್ಯಾಮಿ ಪ್ರಶಸ್ತಿಗಳ ಜೀವಮಾನ ಸಾಧನೆಯ ಪ್ರಶಸ್ತಿಯ ನಂತರ NARAS ನ ಎರಡನೇ ಅತೀ ಶ್ರೇಷ್ಟ ಸನ್ಮಾನವೆಂದು ಪರಿಗಣಿಸಲ್ಪಡುವ ಸನ್ಮಾನವನ್ನು ಪಡೆದ ಹಾಗೆ ಆಯಿತು.[೮೫][೮೬]

ಇದಾದ ನಂತರ ಕಿಸ್ ಆ ವರ್ಷವನ್ನು ಯಾವುದೆ ಸದ್ದು ಮಾಡದೆ ಕಳೆಯಿತು. ಆದರೆ 2002 ಅನ್ನು, ಕಿಸ್ ವಿವಾದದೊಂದಿಗೆ ಬರಮಾಡಿಕೊಂಡಿತು. ಸಿಮ್ಮನ್ಸ್ ನ್ಯಾಷಿನಲ್ ಪಬ್ಲಿಕ್ ರೇಡಿಯೊವಿನ ಸಂದರ್ಶನದಲ್ಲಿ ಭಾಗವಹಿಸಿ NPR ಯನ್ನು ಟೀಕಿಸಿದ. ಈ ಸಂದರ್ಶನದಲ್ಲಿ ಸಿಮ್ಮನ್ಸ್ ಕೀಳು ಆಭಿರುಚಿಯುಳ್ಳ ಟೀಕೆಗಳನ್ನು ಮಾಡಿ, ತನ್ನನು ತಾನೆ ಬುದ್ದಿವಂತ ಎನ್ನುವ ಹಾಗೆ ಉತ್ತರಗಳನ್ನು ಕೊಟ್ಟು ಸಂದರ್ಶನವನ್ನು ನಡೆಸಿಕೊಡುವ ಟೆರ್ರಿ ಗ್ರಾಸ್ ರಿಗೆ ಛೀಮಾರಿ ಹಾಕಿದ.[೮೭] ಫೆಬ್ರವರಿ 2002ರಲ್ಲಿ ಕಿಸ್ (ಡ್ರಮ್ಸ್ ವಾದಕನಾಗಿ ಸಿಂಗರ್, ಮತ್ತು ಲೀಡ್ ಗಿಟಾರ್ ವಾದಕನಾಗಿ ಫ್ರೆಹ್ಲಿ) ಸಾಲ್ಟ್ ಲೇಕ್ ಸಿಟಿ, ಉತಾಃ ದಲ್ಲಿ ನಡೆದ 2002ರ ಚಳಿಗಾಲದ ಒಲಿಂಪಿಕ್ ಸ್ಪರ್ಧೆಗಳ (ವಿಂಟರ್ ಒಲಂಪಿಕ್ಸ್) ಮುಕ್ತಾಯ ಸಮಾರಂಭದಲ್ಲಿ ಪಾಲ್ಗೊಂಡಿತು. ಇದು ಕಿಸ್ ಯೊಂದಿಗೆ ಫ್ರೆಹ್ಲಿ ನಡೆಸಿರುವ ಇಲ್ಲಿಯವರೆಗಿನ ಕೊನೆಯ ಪ್ರದರ್ಶನ.

ಮಾರ್ಚಿ 6, 2002ರಂದು ಕಿಸ್ ಜಮೈಕಾದ ಟ್ರೆಲಾನಿಯ ವಿಹಾರಧಾಮವೊಂದರಲ್ಲಿ ಖಾಸಗಿ ಗೋಷ್ಟಿಯನ್ನು(ಕಾನ್ಸರ್ಟ್) ನಡೆಸಿದರು. ಬ್ಯಾಂಡಿನೊಂದಿಗೆ ಫ್ರೆಹ್ಲಿಯ ಒಪ್ಪಂದವು ಮುಗಿದಿದ್ದ ಕಾರಣ,ಅವನು ಪ್ರದರ್ಶನದಲ್ಲಿ ಪಾಲ್ಗೊಲಿಲ್ಲ. ಆತನ ಸ್ಥಾನಕ್ಕೆ ಟಾಮಿ ಥಾಯರ್ ನನ್ನು ನೇಮಿಸಿಕೊಳ್ಳಲಾಯಿತು. ಈತ, ಫ್ರೆಹ್ಲಿಯ ಸ್ಪೇಸ್ ಮ್ಯಾನ್ ಮೇಕ್ಅಪ್ ಮತ್ತು ವೇಷಭೂಷಣವನ್ನು ಕಿಸ್ ನೊಂದಿಗಿನ ತನ್ನ ಮೊದಲ ಲೈವ್ ಪ್ರದರ್ಶನಕ್ಕೆ ಹಾಕಿಕೊಂಡ.[೮೮]

ಅದೇ ತಿಂಗಳು, ಬ್ಯಾಂಡ್ (ಥಾಯರ್ ಜೊತೆಯಲ್ಲಿ) ಅಮೇರಿಕಾದ ದಟ್ 70ಸ್ ಷೋ  ಎನ್ನುವ ಅಮೇರಿಕನ್ ಸಿಟ್ಕಾಂ ಗೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡರು.[೮೯] (ಸಿಟ್ಕಾಂ: ಹಾಸ್ಯಭರಿತ ದೊರದರ್ಶನ/ರೇಡಿಯೊ ಸರಣಿ)   "ದಟ್ 70ಸ್ ಕಿಸ್ ಷೋ", ಆಗಸ್ಟ್ 2002 ರಲ್ಲಿ ಬಿತ್ತರವಾಯಿತು.  ಥಾಯರ್, ಪುನಃ ಏಪ್ರಿಲ್ 2002ರಲ್ಲಿ  ಕಿಸ್ ಜೊತೆಯಲ್ಲಿ ಡಿಕ್ ಕ್ಲಾರ್ಕ್ಸ್ ಅಮೇರಿಕನ್ ಬ್ಯಾಂಡ್ ಸ್ಟಾಂಡ್ 50ಥ್ ಆನಿವರ್ಸರಿ  ಎನ್ನುವ ಕಾರ್ಯಕ್ರಮದಲ್ಲಿ "ಡೆಟ್ರಾಯಿಟ್ ರಾಕ್ ಸಿಟಿ" ಯನ್ನು (ಮೊದಲೆ ಮುದ್ರಣವಾಗಿದ್ದ  ಸಂಗೀತಕ್ಕೆ ಧ್ವನಿಗೂಡಿಸಿ)ಪ್ರದರ್ಶನವನ್ನು ಕೊಟ್ಟನು. ಈ ಕಾರ್ಯಕ್ರಮವನ್ನು ಮೇ 3ರಂದು ಪ್ರಸಾರಮಾಡಲಾಯಿತು.[೯೦]

ಕಿಸ್, ಫ್ರೆಬ್ರವರಿ 2003ರಲ್ಲಿ ಅಸ್ಟ್ರೇಲಿಯಾಗೆ ಪ್ರಯಾಣ ಮಾಡಿ,ಅಲ್ಲಿ ಮೇಲ್ಬೊರ್ನಿನ ಎಥಿಹಾಡ್ ಸ್ಟೇಡಿಯಂನಲ್ಲಿ(ಮುಂಚೆ ಟೆಲ್ ಸ್ಟ್ರಾ ಡೋಮ್ ಎಂದು ಕೆರಯಲಾಗುತ್ತಿತ್ತು) ಮೇಲ್ಬೊರ್ನ್ ಸಿಂಫನಿ ಆರ್ಕೆಸ್ಟ್ರಾ ಜೊತೆಯಲ್ಲಿ ಧ್ವನಿಮುದ್ರಣ (ರೆಕಾರ್ಡ್) ನಡೆಸಿದರು.Kiss Symphony: Alive IV ಥಾಯರ್ ಪುನಃ ಫ್ರೆಹ್ಲಿಯ ಬದಲು ನುಡಿಸಿದ. ಇದೇ ವೇಳೆಯಲ್ಲಿ ಪೀಟರ್ ಕ್ರಿಸ್ ತಂಡಕ್ಕೆ ಮರಳಿದ್ದ. ಈ ಆಲ್ಬಂ ಅನ್ನು ಮೊದಲು ಸ್ಯಾಂಕ್ಚುರಿ ರೆಕಾರ್ಡ್ಸ್ ಬಿಡುಗಡೆ ಮಾಡಿತು. ತರುವಾಯ, ಇದನ್ನು ಕಿಸ್ ನ ಇತರ ಹಾಡುಗಳ ಸ್ವಾಮ್ಯವನ್ನು ಹೊಂದಿರುವ ಯುನಿವರ್ಸಲ್ ಮ್ಯೂಸಿಕ್ ಗ್ರೂಪ್ ಗೆ ಮಾರಲಾಗಿದೆ.

ಫೇರ್ವೆಲ್ ಪ್ರವಾಸವ ಮುನ್ನ ಇದು ತಂಡದ ಕೊನೆಯ ಪ್ರವಾಸವೆಂದು ಹೇಳಿಕೊಂದರು ಸಹ, ಕಿಸ್ 2003ರಲ್ಲಿ ಏರೋಸ್ಮಿತ್ ಜೊತೆಯಲ್ಲಿ ಕೊ-ಹೆಡ್ ಲೈನಿಂಗ್ ಪ್ರವಾಸ ಮಾಡುವುದಾಗಿ ಘೋಷಿಸಿತು. ಫ್ರೆಹ್ಲಿ ಬ್ಯಾಂಡಿನಿಂದ ಶಾಶ್ವತವಾಗಿ ಹೊರಬರುತಿರುವುದಾಗಿ ಘೋಷಿಸಿದ. ಫೇರ್ವೆಲ್ ಪ್ರವಾಸ ನಿಜಕ್ಕೂ ಕಿಸ್ ನ ಕೊನೆಯ ಪ್ರವಾಸ ಎಂದು ತಾನು ನಂಬುವುದಾಗಿ ತಿಳಿಸಿದ.[೯೧] ಮೇಲಾಗಿ, ತಾನು ಏರೋಸ್ಮಿತ್ ಜೊತೆಯಲ್ಲಿ ಪ್ರದರ್ಶನ ಮಾಡುಲು ಇಷ್ಟಪಡುವುದಿಲ್ಲ ಎಂದು ಹೇಳಿದ.[೯೨] ಫ್ರೆಹ್ಲಿಯ ಸ್ಥಾನಕ್ಕೆ ಶಾಶ್ವತವಾಗಿ ಥಾಯರ್ ಅನ್ನು ನೇಮಿಸಿಕೊಳ್ಳಲಾಯಿತು. ಕಿಸ್ ಪುನರ್ಮಿಲನದ ಘಟ್ಟದ ನಂತರದ ದಿನಗಳನ್ನು ಪ್ರವೇಶಿಸುತ್ತಿದ್ದ ಹಾಗೆಯೆ, ಬ್ಯಾಂಡ್ ತನ್ನ ಹೊಸ ಕ್ರಮಾಂಕಕ್ಕೆ ಹೊಂದಿಕೊಳ್ಳತೊಡಗಿತು. ಇದರಲ್ಲಿ "ಸ್ಪೇಸ್ ಏಸ್" ಆಗಿ ಥಾಯರ್, "ದಿ ಕ್ಯಾಟ್ ಮ್ಯಾನ್" ಆಗಿ ಸಿಂಗರ್ ಕಾಣಿಸಿಕೊಳ್ಳತೊಡಗಿದರು. ಈ ಪ್ರವಾಸದಲ್ಲಿ ಪೀಟರ್ ಕ್ರಿಸ್ ಇರುವಾಗಲೆ, ತಂಡ USD $1,000 ಮೌಲ್ಯದ "ಪ್ಲಾಟಿನಂ" ಟಿಕೇಟ್ ಪ್ಯಾಕೇಜ್ ಎನ್ನುವ ಅತೀ ದುಬಾರಿ ಪ್ಯಾಕೇಜ್ ಅನ್ನು ಬಿಡುಗಡೆ ಮಾಡಿತು. ಈ ಪ್ಯಾಕೇಜ್ ಅಡಿಯಲ್ಲಿ ಆಭಿಮಾನಿಗಳಿಗೆ ಮೊದಲ ಐದು ಸಾಲುಗಳ ಆಸನವಷ್ಟೆ ಅಲ್ಲದೆ ಕಿಸ್ ತಂಡದೊಂದಿಗೆ ಭೇಟಿ ಮಾಡಿ ಮಾತನಾಡ ಬಹುದಿತ್ತು. ಇದರ ಜೊತೆಗೆ ಬ್ಯಾಂಡಿನ ಜೊತೆಗೆ ಪೋಟೊ ಕೂಡ ತೆಗೆಸಿಕೊಳ್ಳಬಹುದಿತ್ತು.[೯೩] ಈ ಪ್ರವಾಸದಿಂದ 2003ರಲ್ಲಿ US$64 ದಶಲಕ್ಷಗಳಷ್ಟು ಅದಾಯ ಗಳಿಸಿತು, ಇದು ಆ ವರ್ಷದಲ್ಲಿ #7 ರ ಸ್ಠಾನವನ್ನು ಪಡೆಯಿತು.[೯೪]

ಕ್ರಿಸ್ ಸ ಒಪ್ಪಂದ ಮಾರ್ಚಿ 2004ರಲ್ಲಿ ಮುಗಿದಾಗ ಸಿಮ್ಮನ್ಸ್ ಮತ್ತು ಸ್ಟಾನ್ಲಿ ಅದನ್ನು ನವೀಕರಿಸಲಿಲ್ಲ. ಕ್ರಿಸ್, ತನ್ನ ವೆಬ್ ಸೈಟ್ ನಲ್ಲಿ, "ಮುಂಬರುವ ಪ್ರವಾಸಗಳಲ್ಲಿ ನಾನು ಭಾಗವಹಿಸುವುದರ ಬಗ್ಗೆ ಯಾರು ನನ್ನನಾಗಲಿ, ನನ್ನ ವಕೀಲರನ್ನಾಗಲಿ ಸಂಪರ್ಕಿಸಲಿಲ್ಲ. ತಂಡವನ್ನು ಸ್ಥಾಪಿಸಿದ ಸದಸ್ಯರಲ್ಲಿ ಒಬ್ಬನಾದ ನನಗೆ ಹಾಗು ಬ್ಯಾಂಡನ್ನು ಜಗತ್ತಿನ ಅತೀ ದೊಡ್ಡ ಬ್ಯಾಂಡ್ ಆಗಿಸಿರುವ ನಮ್ಮ ಅಭಿಮಾನಿಗಳಿಗೆ ಈ ವಿಷಯವು ಅವಮಾರ್ಯದೆಯ ಹಾಗೆ ತೋರುತ್ತದೆ." [೯೫] ಎಂದು ಹೇಳಿದ್ದಾನೆ. ಕ್ರಿಸ್ 2004ರಲ್ಲಿ ಎಡ್ಡಿ ಟ್ರಂಕ್ ರೊಂದಿಗಿನ ರೇಡಿಯೋ ಸಂದರ್ಶನದಲ್ಲಿ ಸಿಮ್ಮನ್ಸ್ ಮತ್ತು ಸ್ಟಾನ್ಲಿ ಇಬ್ಬರು ಸೇರಿ ಹೊಸ ಕಿಸ್ ಪ್ರಾರಂಭಿಸುತ್ತಾರೆ ಎಂದು ತಿಳಿಸಿದನು. ಮುಂದುವರೆದು, ಕ್ರಿಸ್ ತನಗೆ ವಯಸ್ಸಾಗಿದೆಯೆಂದು(ಕ್ರಿಸ್ ಸಿಮ್ಮನ್ಸ್ ಗಿಂತ ಕೇವಲ ನಾಲ್ಕು ವರ್ಷ ದೊಡ್ಡವನಾದರೂ ಕೂಡ) ಎರಡು ಗಂಟೆಗಳ ಕಾಲ ನುಡಿಸಲು ಸಾಧ್ಯವಿಲ್ಲ ಎಂದು ಕೂಡ ಹೇಳಿದನು. ಇದಾದ ಬಳಿಕ, ಕ್ರಿಸ್ ಸ್ಥಾನಕ್ಕೆ ಸಿಂಗರ್ ಅನ್ನು ಶಾಶ್ವತವಾಗಿ ನೇಮಿಸಲಾಯಿತು.

ಕಿಸ್ ರಾಕ್ ದಿ ನೇಷನ್ 2004 ವರ್ಲ್ಡ್ ಟೂರ್ ಎನ್ನುವ ಪ್ರವಾಸವನ್ನು ಪಾಯಿಸನ್ ಎನ್ನುವ ಮೊದಲ ಪ್ರದರ್ಶನನೊಂದಿಗೆ 2004ರ ಬೇಸಿಗೆಯಲ್ಲಿ ಪ್ರಾರಂಭಿಸಿದರು. ಈ ಪ್ರವಾಸ ಆಗಸ್ಟನಲ್ಲಿ ಮೆಕ್ಸಿಕೋ ನಗರದ ತುಂಬಿದ ಗೃಹಗಳ ಪ್ರದರ್ಶನ ಕೊಟ್ಟ ಬಳಿಕ ಮುಕ್ತಾಯವಾಯಿತು. ಈ ಪ್ರವಾಸದ ಕೆಲವು ಆಯ್ದು ದಿನಗಳ ಪ್ರದರ್ಶನಗಳನ್ನು ರಾಕ್ ದಿ ನೇಷನ್ ಲೈವ್! ಗೋಷ್ಟಿಯ DVD(ಡಿ.ವಿ.ಡಿ)ಗಾಗಿ ಚಿತ್ರಿಸಿಕೊಳ್ಳಲಾಯಿತು. ಇದನ್ನು ಡಿಸೆಂಬರ್ 13, 2005 ರಂದು ಬಿಡುಗಡೆ ಮಾಡಲಾಯಿತು.[೯೬] ಈ ಪ್ರವಾಸದ ಸಮಯದಲ್ಲಿ ಸ್ಟಾನ್ಲಿಯ ಸೊಂಟದ ನೋವು ಉಲ್ಬಣಿಸಿತು, ಹೀಗಾಗಿ ಈ ಪ್ರವಾಸದಲ್ಲಿ ಅತನ ಚಟುವಟಿಕೆಗಳು ಕಡಿಮೆಯಾಯಿತು. ಆತನಿಗೆ ಈಗಾಗಲೇ, ಎರಡು ಬಾರಿ ಸೊಂಟದ ಶಸ್ತ್ರಚಿಕಿತ್ಸೆಯಾಗಿದೆ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಶಸ್ತ್ರಚಿಕಿತ್ಸೆಯಾಗುವ ಸಾಧ್ಯತೆಯಿದೆ.[೯೭]

ರಾಕ್ ದಿ ನೇಷನ್ ಟೂರ್ ಮುಗಿದ ಬಳಿಕ ಕಿಸ್ ಕೆಲವು ವರ್ಷಗಳ ಕಾಲ ಆಗೊಮ್ಮೆಈಗೊಮ್ಮೆ ಕೆಲವು ಪ್ರದರ್ಶನಗಳನ್ನು ಮಾತ್ರ ಕೊಟ್ಟಿತು. ಈ ತಂಡ 2005ರಲ್ಲಿ ಎರಡು ಪ್ರದರ್ಶನವನ್ನು, 2006ರಲ್ಲಿ ಆರು ಪ್ರದರ್ಶನವನು ಕೊಟ್ಟಿತು. 2006ರ ಆರು ಪ್ರದರ್ಶನಗಳ ಪೈಕಿ, 2006ರ ಉಡೊ ಮ್ಯೂಸಿಕ್ ಫೆಸ್ಟಿವಲ್ ನ(ಉಡೊ ಸಂಗೀತ ಹಬ್ಬ)ಎರಡು ಹೆಡ್ ಲೈನಿಂಗ್ ಪ್ರದರ್ಶನಗಳನ್ನು(ಜೂಲೈ 22 ಮತ್ತು 23), ಒಳಗೊಂಡಂತೆ ನಾಲ್ಕು ಪ್ರದರ್ಶನಗಳನ್ನು ಜೂಲೈನಲ್ಲಿ ನಡೆಸಿಕೊಟ್ಟಿತು. ಕಿಸ್ 2007ರಲ್ಲಿ ನಾಲ್ಕು ಗೋಷ್ಟಿಗಳನ್ನು ಜೂಲೈನಲ್ಲಿ ನಡೆಸಿತು(ಜೂಲೈ ಕಾನ್ಸರ್ಟ್). ಇವುಗಳ ಪೈಕಿ ಮೂರಕ್ಕೆ ಹಿಟ್ ಅಂಡ್ ರನ್ ಟೂರ್ ಎಂದು ಕರೆಯಲಾಯಿತು. ಜೂಲೈ 27 ರ ಕೊನೆಯ ಪ್ರದರ್ಶನಕ್ಕಿಂತ ಮುಂಚೆ ಸ್ಟಾನ್ಲಿಗೆ ಹೃದಯದ ಬಡಿತ ಹೆಚ್ಚಾದ ಕಾರಣ, ಆಸ್ಟತ್ರೆಗೆ ಸೇರಿಸಲಾಯಿತು. ಅವನ ಗೈರುಹಾಜರಿಯಲ್ಲಿ, ಕಿಸ್ ಗೋಷ್ಟಿಯನ್ನು(ಕಾನ್ಸರ್ಟ್), ಅದೆ ಮೊದಲ ಬಾರಿಗೆ ಮೂರು ಜನ ಪ್ರಸ್ತುತ ಪಡಿಸಿದರು. ಸ್ಟಾನ್ಲಿ ತಂಡದೊಂದಿಗಿನ 34 ವರ್ಷದ ಅವಧಿಯಲ್ಲಿ, ಗೋಷ್ಟಿಯನ್ನು (ಕಾನ್ಸರ್ಟ್) ತಪ್ಪಿಸಿಕೊಂಡದ್ದು ಇದೇ ಮೊದಲು.[೯೮]

ಕಿಸ್ (ಕ್ವೀನ್, ಡೆಪ್ ಲೆಪ್ಪಾರ್ಡ್, ಮತ್ತು ಜೂಡಾಸ್ ಪ್ರೀಸ್ಟ್ ಜೊತೆಯಲ್ಲಿ), ಲಾಸ್ ವೇಗಾಸ್ ನಲ್ಲಿ ಮೇ 25 ರಂದು ನಡೆದ "VH1 ರಾಕ್ ಹಾನರ್ಸ್" ನ ಮೊದಲ ವಾರ್ಷಿಕ ಸಮಾರಂಭದಲ್ಲಿ ಸನ್ಮಾನಿಸಲ್ಪಟ್ಟರು. ಏಪ್ರಿಲ್ 9, 2006 ರ ಆಸೋಸಿಯೆಟೆಡ್ ಪ್ರೆಸ್ ಈ ಸಮಾರಂಭದ ಕುರಿತು ಹೀಗೆ " ರಾಕ್ ಅಂಡ್ ರೋಲ್ ಆಫ್ ಫೇಮ್ ಗೆ ಒಂದು ಪ್ರತಿಸ್ಪರ್ಧಿ ಬಂದ ಹಾಗೆ ತೋರುತ್ತದೆ" ಬರೆಯಿತು.[೯೯] ರಾಬ್ ಸಾಂಬಿ(ಗಾಯನ),ಸ್ಲಾಶ್ (ಗಿಟಾರ್), ಸ್ಕಾಟ್ ಐಯಾನ್(ಬ್ಯಾಸ್) ಮತ್ತು ಸೂಪರ್ ನೋವಾದ ಸದಸ್ಯರಾಗಿದ್ದ ಟಾಮಿ ಲೀ(ಡ್ರಮ್ಸ್) ಮತ್ತು ಗಿಲ್ಬಿ ಕಾರ್ಲ್ಕ್ (ಗಿಟಾರ್) - ಇವರೆಲ್ಲಾ ಇದ್ದ ಟ್ರಿಬ್ಯೂಟ್ ಬ್ಯಾಂಡ್, ಏಸ್ ಫ್ರೆಹ್ಲಿ ಜೊತೆಯಲ್ಲಿ "ಗಾಡ್ ಆಫ್ ಥಂಡರ್" ಅನ್ನು ಪ್ರದರ್ಶಿಸಿದರು.

ಜೂನ್ 2006ರಲ್ಲಿ ಜೀನ್ ಸಿಮ್ಮನ್ಸ್ ಮತ್ತು ಪಾಲ್ ಸ್ಟಾನ್ಲಿ, ಸೌತ್ ಕ್ಯಾರೋಲಿನಾದ ಮೈರಟಲ್ ಬೀಚಿನಲ್ಲಿರುವ ಕಿಸ್ ಕಾಫಿಹೌಸ್ ನ ಪ್ರಾರಂಭೊತ್ಸವದಲ್ಲಿ ಭಾಗವಹಿಸಿದರು. ಆಕ್ಟೊಬರ್ 15, 2006ರಂದು ಲಾಂಗ್ ಐಲಾಂಡ್ ಮ್ಯೂಸಿಕ್ ಹಾಲ್ ಆಫ್ ಫೇಮ್ ಪಟ್ಟಿಗೆ ಮೊದಲು ಸೇರಿಸಲ್ಪಟ್ಟ ಕಲಾವಿದಲ್ಲಿ ಸಿಮ್ಮನ್ಸ್, ಸ್ಟಾನ್ಲಿ ಮತ್ತು ಕ್ರಿಸ್ ಕೂಡ ಇದ್ದರು. ಇವರ ಜೊತೆಯಲ್ಲಿ ಕಲಾವಿದರಾದ ನೀಲ್ ಡೈಯಮಂಡ್, ಬಿಲ್ಲಿ ಜೊಯಲ್, ಲೂಯಿಸ್ ಆರ್ಮ್ ಸ್ಟ್ರಾಂಗ್, ದಿ ರಾಮೊನ್ಸ್, ಮತ್ತು ಟೊನಿ ಬೆನೆಟ್ ಕೂಡ ಈ ಪಟ್ಟಿಯಲ್ಲಿ ಹೆಸರನ್ನು ಪಡೆದರು.[೧೦೦]

ಸ್ಟಾನ್ಲಿ ಲೈವ್ ಟು ವಿನ್ ಎನ್ನುವ ಅವನ ಎರಡನೇ ಸೋಲೋ ಆಲ್ಬಂ ಅನ್ನು ಆಕ್ಟೋಬರ್ 24, 2006 ರಂದು ಬಿಡುಗಡೆ ಮಾಡಿದ. ಇದರ ವ್ಯಾಪಾರವನ್ನು ಉತ್ತೇಜಿಸುವ ಸಲುವಾಗಿ ತಾನೊಬ್ಬನೆ ಒಂದು ಚಿಕ್ಕ ಪ್ರವಾಸವನ್ನು ಕೂಡ ಕೈಗೊಂಡ. ಅದೇ ವರ್ಷ ಆಕ್ಟೋಬರ್ 31 ರಲ್ಲಿ ಈ ತಂಡ Kissology Volume One: 1974–1977 ಅನ್ನು ಬಿಡುಗಡೆ ಮಾಡಿತು. ಇದು, ಸುಮಾರು ಹತ್ತು DVD ಗಳಲ್ಲಿ ತರಬೇಕೆಂದಿರುವ ಸಂಗ್ರಹದ(ಸರಣಿ) ಮೊದಲನೆಯದು. ಇದರಲ್ಲಿ ಗೋಷ್ಟಿಗಳ(ಕಾನ್ಸರ್ಟ್) ದೃಶ್ಯವಾಳಿಗಳು, ಸಂದರ್ಶನಗಳು, ಇದುವರೆಗೂ ನೋಡಿರದ ದೃಶ್ಯಗಳನ್ನು ತೋರಿಸಲಾಗಿದೆ.[೧೦೧] ಜನವರಿ 2007ರ ವೇಳೆಗೆ ಈ ಸಂಗ್ರಹವನ್ನು ಯುನೈಟೆಡ್ ಸ್ಟೇಟ್ಸ್ ನಲ್ಲಿ 5X ಪ್ಲಾಟಿನಂನ ಪ್ರಮಾಣವನ್ನು ಪಡೆದಿದೆ.[೧೦೨] ಎರಡನೇ ಸಂಪುಟ ವನ್ನು ಆಗಸ್ಟ್ 14, 2007ರಲ್ಲಿ ಬಿಡುಗಡೆ ಮಾಡಲಾಯಿತು. ಇದಕ್ಕೆ 6X ಪ್ಲಾಟಿನಂ ಪ್ರಮಾಣವನ್ನು R.I.A.A. ಆಕ್ಟೋಬರ್ 24ರಂದು ಕೊಟ್ಟಿತು. ಬಹುಶಃ ಕೊನೆಯದು ಎಂದು ನಂಬಲಾಗಿರುವ "ಕಿಸ್ಸಾಲಜಿ ಸಂಪುಟ ಮೂರು: 1992-2001" ಅನ್ನು ಡಿಸೆಂಬರ್ 18,2007ರಂದು ಬಿಡುಗಡೆಯಾಯಿತು. ಇದಕ್ಕೆ R.I.A.A. ಯಿಂದ 8X ಪ್ಲಾಟಿನಂ ಪ್ರಮಾಣ ಕೊಟ್ಟಿದೆ. ಸ್ಟಾನ್ಲಿ ನಾರ್ವೆ ದೇಶಕ್ಕೆ ಸೇರಿದ ಪ್ರಸಾರಕನಿಗೆ (ನಾರ್ವಿಜಿಯನ್ ಬ್ರಾಡ್ಕಾಸ್ಟರ್)2008ರ ಬೇಸಿಗೆಯಲ್ಲಿ ಕೊಟ್ಟ ಸಂದರ್ಶನದಲ್ಲಿ ಇನ್ನೂ ಹೆಚ್ಚಿನ ಸಂಪುಟಗಳು ಬರುತ್ತದೆ ಎಂದು ಮತ್ತೊಮ್ಮೆ ಒತ್ತಿಹೇಳಿದ್ದಾನೆ. ಆದರೆ, ಅದರ ಬಗ್ಗೆ ಇತರ ವಿವರಗಳನ್ನು ಕೊಟ್ಟಿಲ್ಲ. ಏಪ್ರಿಲ್ 2007ರಲ್ಲಿ ಕಿಸ್ ಮತ್ತೊಂದು ಆಘಾತ ಕಾದಿತ್ತು. ಅದರ ಮಾಜಿ ಗಿಟಾರ್ ವಾದಕ, ಮಾರ್ಕ್ ಸೇಂಟ್ ಜಾನ್ ಸೆರೆಬ್ರಲ್ ಹೆಮ್ಮೊರೆಜ್ ನಿಂದ ತನ್ನ 51 ವಯಸ್ಸಿನಲ್ಲಿ ಮರಣಹೊಂದಿದ.[೧೦೩] ಕಿಸ್ ನಿಂದ 1984ರಲ್ಲಿ ವಜಾಗೊಂಡ ನಂತರ ಸೇಂಟ್ ಜಾನ್ ವೈಟ್ ಟೈಗರ್ ಎನ್ನುವ ಒಂದು ಗ್ಲಾಮ್ ಮೆಟಲ್ ತಂಡವನ್ನು ಕಟ್ಟಿದ್ದ. 1990ರಲ್ಲಿ ಪೀಟರ್ ಕ್ರಿಸ್ ಸಹಯೋದದೊಂದಿಗೆ ದಿ ಕೀಪ್ ಎನ್ನುವ ಬ್ಯಾಂಡ್ ಕಟ್ಟಿದ. ಈ ಬ್ಯಾಂಡ್ ಕೇವಲ ಒಂದೇಒಂದು ಬಾರಿ ಪ್ರದರ್ಶನವನ್ನು ನಡೆಸಿತು, ಹಾಗು ಯಾವುದೇ ಧ್ವನಿಮುದ್ರಣವನ್ನು ಮಾಡಲಿಲ್ಲ. ಸೇಂಟ್ ಜಾನ್ ತನ್ನ ಕೊನೆಯ ವರ್ಷಗಳಲ್ಲಿ ಸಾರ್ವಜನಿಕವಾಗಿ ಬಹಳ ಕಡಿಮೆಕಾಣಿಸಿಕೊಂಡ, ಆದರೆ ಕೆಲವೊಮ್ಮೆ ಕಿಸ್ ಆಭಿಮಾನಿಗಳ ಸಮ್ಮೇಳನಗಳಲ್ಲಿ(ಕನ್ವೆನ್ಷನ್)ಕಾಣಿಸಿಕೊಳ್ಳುತ್ತಿದ್ದ. ಕಿಸ್ ರಾಕ್ ಅಂಡ್ ರೋಲ್ ಹಾಲ್ ಆಫ್ ಫೇಮ್ ನ ಪಟ್ಟಿಗೆ ಸೇರಲು 1999/2000ರಲ್ಲೆ ಆರ್ಹತೆಯನ್ನುಗಳಿಸಿತ್ತಾದರೂ(ಇದರ ನಿಯಮಗಳ ಪ್ರಕಾರ ಬ್ಯಾಂಡ್ ತನ್ನ ಮೊದಲ ಬಿಡುಗಡೆಯ 25 ವರ್ಷಗಳ ನಂತರ ಅರ್ಹತೆಗಳಿಸುತ್ತದೆ), ಅವರು 2009ರ ವರೆಗೆ ನಾಮನಿರ್ದೇಶನಗೊಳಲಿಲ್ಲ.

ಈ ತಾತ್ಸರ ಆನೇಕ ಆಭಿಮಾನಿಗಳಿಗೆ ಅಸಾಮಧಾನವನ್ನು ತಂದಿತಾದರೂ, ಸ್ಟಾನ್ಲಿ ಮತ್ತು ಸಿಮ್ಮನ್ಸ್ ಇಬ್ಬರು ಇದು ಅವರಿಗೆ ಅಂತಹ ಮುಖ್ಯವಲ್ಲವೆಂದು ಹೇಳುತ್ತಾರೆ.  ಅದಾಗ್ಯೂ, ಸುಮಾರು 200 ಕಿಸ್ ಆಭಿಮಾನಗಳ ತಂಡವೊಂದು ಕ್ಲೀವ್ ಲ್ಯಾಂಡ್, ಓಹಿಯೋ ದಲ್ಲಿರುವ ಹಾಲ್ ಆಫ್ ಫೇಮ್ ನ ಎದರು ಆಗಸ್ಟ್, 5, 2006 ರಂದು ಪ್ರತಿಭಟನೆ ಮಾಡಿದರು. 

ಇದು ಬ್ಯಾಂಡ್ ಒಂದನ್ನು ಹಾಲ್ ಗೆ ಸೇರಿಸಿಕೊಳ್ಳುವ ಸಲುವಾಗಿ ನಡೆಸಿದ ಪ್ರತಿಭಟನೆಗಳ ಪೈಕಿ ಇದೇ ಮೊದಲನೆಯದು.[೧೦೪] ಡಿಸೆಂಬರ್ 15,2009ರಂದು ಘೋಷಿಸಲಾದ 2010ರ ಪಟ್ಟಿಯಲ್ಲಿ ಕಿಸ್ ಈ ಬಾರಿ ಈ ಪಟ್ಟಿಗೆ ಸೇರ್ಪಡೆಗೊಂಡವರ ಹೆಸರುಗಳ ಪೈಕಿ ಕಿಸ್ ಇರಲಿಲ್ಲ. ಆದರೆ ಅದೇ ಸಮಯ, ಈ ಪಟ್ಟಿಗೆ ABBA ವನ್ನು ಸೇರಿಸಿಕೊಂಡ ಬಗ್ಗೆ ಕಿಸ್ ಅಭಿಮಾನಿಗಳಲ್ಲಿ ಅಸಮಾಧಾನವಿತ್ತು, ಏಕೆಂದರೆ ಅವರ ಪ್ರಕಾರ ABBA ಒಂದು ರಾಕ್ ಬ್ಯಾಂಡ್ ಅಲ್ಲವೇ ಅಲ್ಲ. ಆಭಿಮಾನಗಳ ಆಕ್ಷೇಪಗಳ ನಡುವೆಯೂ, ಹಾಲ್ ತನ್ನ ನಿರ್ಧಾರಕ್ಕೆ ಅಂಟಿಕೊಂಡಿತ್ತು. 2007ರಲ್ಲಿ ಬ್ಯಾಂಡ್ ಮುಖ್ಯಭೂಮಿಕೆಯಲ್ಲಿದ್ದ ಹೊಸ ಕಾಮಿಕ್ ಪುಸ್ತಕ ಸರಣಿಯನ್ನು ಕಿಸ್ ಕಾಮಿಕ್ಸ್ ಗ್ರೂಪ್, ಪ್ಲಾಟಿನಂ ಸ್ಟೂಡಿಯೋಸ್ ನ ಸಹಯೋಗದಲ್ಲಿ ಬಿಡುಗಡೆ ಮಾಡಿತು. "ಕಿಸ್ 4ಕೆ: ಲೆಜೆಂಡ್ಸ್ ನೆವೆರ್ ಡೈ," ಎಂಬ ಹೆಸರಿನ ಇದರ ಮೊದಲ ಸಂಪುಟ, ಮಾಮೂಲು ಗಾತ್ರ(ರೂಪ), ಹಾಗು ಡೆಸ್ಟಾರಯರ್ ಆವೃತ್ತಿ ಎಂದು ಕರೆಯಲ್ಪಡುವ 1.5' x 2.5' ರ ಭಾರಿ ಗಾತ್ರದಲ್ಲಿ ಬಿಡುಗಡೆಯಾಯಿತು. ಕಿಸ್ ಸೆಪ್ಟೆಂಬರ್ ಮಧ್ಯದಲ್ಲಿ ವಿಸ್ಟಲರ್ ಎಂಬಲ್ಲಿ ಪ್ರದರ್ಶನ ಮಾಡಬೇಕಿತ್ತು, ಆದರೆ ಪಾಸ್ ಪೋರ್ಟ್ ತೊಂದರೆಗಳಿಂದಾಗಿ ಈ ಗೋಷ್ಟಿಯನ್ನು (ಕಾನ್ಸರ್ಟ್) ಆಗಸ್ಟ್ ಕೊನೆಯಲ್ಲಿ ರದ್ದು ಮಾಡಲಾಯಿತು.

Kiss in Stockholm in 2008

2008ರಲ್ಲಿ ಬ್ಯಾಂಡ್ ತನ್ನ ಮೊದಲಿನ ಉತ್ಸಾಹವನ್ನು ಪಡೆದ ಹಾಗೆ ತೋರಿತು, ಸುಮಾರು ಹತ್ತು ವರ್ಷಗಳ ನಂತರ, ಆ ವರ್ಷ ಯುರೋಪಿನ ಮೊದಲ ಪರಿಪೂರ್ಣ ಪ್ರವಾಸ ಕೈಗೊಂಡಿತ್ತು.

ಜನವರಿ 30, 2008ರಂದು ಗಿಟಾರ್ ವಾದಕ ಮತ್ತು ಹಾಡುಗಾರ ಪಾಲ್ ಸ್ಟಾನ್ಲಿ ಕಿಸ್ ಅಲೈವ್/35 ವರ್ಲ್ಡ್ ಟೂರ್ ಎನ್ನುವ ಪ್ರವಾಸವನ್ನು ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದನು. ಈ ಪ್ರವಾಸದಲ್ಲಿ ಯುರೋಪ್, ಆಸ್ಟ್ರೇಲಿಯ ಮತ್ತು ನ್ಯೂಜಿಲ್ಯಾಂಡ್ ಗಳ ಅರೀನ(ಸಭಾಂಗಣ) ಮತ್ತು ಸ್ಟೇಡಿಯಂಗಳಲ್ಲಿ(ಕ್ರೀಡಾಂಗಣ) ಕಾರ್ಯಕ್ರಮಗಳನ್ನು ನಡೆಸಿಕೊಡುವುದಾಗಿ ತಿಳಿಸಿದನು.  ಕಿಸ್, ಮಾರ್ಚಿ 16,2008ರಂದು ಆಸ್ಟ್ರೇಲಿಯಾದ ಮೆಲ್ಬೊರ್ನ್ ನಲ್ಲಿ ನಡೆದ ಫಾರ್ಮುಲಾ 1 ING ಆಸ್ಟ್ರೇಲಿಯನ್ ಗ್ರ್ಯಾಂಡ್ ಪ್ರಿಕ್ ನ ಮೆಲ್ಬೊರ್ನ್ ಗ್ರ್ಯಾಂಡ್ ಪ್ರಿಕ್ಸ್ ಸರ್ಕಿಟ್ ಅನ್ನು ಮುಕ್ತಾಯ ಮಾಡಿದರು. ಇದರ ಜೊತೆಯಲ್ಲಿ ಈ ಪ್ರವಾಸದ ಅಂಗವಾಗಿ ಕಿಸ್ ಬ್ರಿಸ್ಬೇನ್ ಮತ್ತು ಸಿಡ್ನಿ ಯಲ್ಲಿ ಕೂಡ ಪ್ರದರ್ಶನ ನಡೆಸಿದರು.
ಕಿಸ್ ನ್ಯೂಜಿಲ್ಯಾಂಡಿನ ವೆಲ್ಲಿಂಗ್ಟನ್ ನಲ್ಲಿ ನಡೆದ ಮಾರ್ಚಿ 22 ಮತ್ತು ಮಾರ್ಚಿ 23, 2008 ರಂದು ನಡೆದ ಎರಡು ದಿನಗಳ ಹಬ್ಬದಲ್ಲಿ ಪ್ರದರ್ಶನ ನಡೆಸಿಕೊಟ್ಟರು Rock2Wgtn Archived 2008-04-10 ವೇಬ್ಯಾಕ್ ಮೆಷಿನ್ ನಲ್ಲಿ.. ಈ ಹಬ್ಬದಲ್ಲಿ ಒಸ್ಸಿ ಒಸಬೋರ್ನ್,ವೈಟ್ ಸ್ನೇಕ್, [[ಪಾಯಿಸನ್[ಬ್ಯಾಂಡ್|ಪಾಯಿಸನ್]],ಅಲೈಸ್ ಕೂಪರ್, ಲಾರ್ಡಿ, ಸೋನಿಕ್ ಅಲ್ಟಾರ್ ಮತ್ತು "ಲಾರ್ಡ್ ಆಫ್ ದಿ ರಿಂಗ್ಸ್ " ಮತ್ತು "ಫಿಲ್ಮ್)ಕಿಂಗ್ ಕಾಂಗ್" ಚಿತ್ರಗಳ ಖ್ಯಾತಿಯ ವೇಟಾ ವರ್ಕ್ಷಾಪ್ ನ ವಿಶೇಷ ಪರಿಣಾಮಗಳನ್ನು ಆಳವಡಿಸಿದ ಸಿಂಫನಿ ಆಫ್ ಸ್ಕ್ರೀಮ್ಸ್ ಎನ್ನುವ ವಾದ್ಯಮೇಳವನ್ನು ನಡೆಸಿಕೊಡಲಾಯಿತು. 2008ರ ಬೇಸಿಗೆಯ ಉದ್ದಕೂ, ಕಿಸ್ ಆನೇಕ ಹಬ್ಬಗಳು ಹಾಗು ತಮ್ಮದೆ ಆದ ಆನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸುಮಾರು 400 000 ದಾಖಲೆ ಪ್ರಮಾಣದ ಪ್ರೇಕ್ಷರಿಗೆ ಪ್ರದರ್ಶನವನ್ನು ನೀಡಿತು.[೧೦೫] ಈ ಪ್ರವಾಸದ ಅಂಗವಾಗಿ ಕಿಸ್ ಜೂನ್ 13ರಂದು ಇಂಗ್ಲೆಂಡಿನ ಡಾನಿಂಗ್ಟನ್ ನಲ್ಲಿ ಡೌನ್ಲೋಡ್ ಫೆಸ್ಟಿವಲ್ ಎನ್ನುವ ಹಬ್ಬದ ಮೊದಲ ಪ್ರದರ್ಶನವನ್ನು ನಡೆಸಿಕೊಟ್ಟಿತು (ಹೈಡ್ ಲೈನಿಂಗ್). ಇದಾದ ಮೂರು ದಿನಗಳ ಬಳಿಕ ಅವರು ನೆಥೆರ್ಲ್ಯಾಂಡ್ಸಿನ ನಿಜಮೆಜೆನ್ ನಲ್ಲಿ ನಡೆದ ಅರೋ ರಾಕ್ ಫೆಸ್ಟಿವಲ್ ಹಬ್ಬದಲ್ಲಿ ಮೊದಲ ಪ್ರದರ್ಶನವನ್ನು ಕೊಟ್ಟರು.  ಜೂನ್ 28, ಬೆಲ್ಜಿಯಂ ನಲ್ಲಿರುವ ಡೆಸ್ಸೆಲ್ಗ್ರಾಸ್ಪಾಪ್ ಮೆಟಲ್ ಮೀಟಿಂಗ್ ಎನ್ನುವ ಕಾರ್ಯಕ್ರಮದ  ಮೊದಲ ಪ್ರದರ್ಶನವನ್ನು ಕೊಟ್ಟರು.   ಇದು ಯುರೋಪಿನಲ್ಲಿ "ಅಲೈವ್ 35" ಪ್ರವಾಸದ ಅಡಿಯಲ್ಲಿ ನಡೆದ ಕೊನೆಯ ಪ್ರದರ್ಶನ.  ಆಗಸ್ಟ್ 4 ರ ಸೋಮವಾರ, ಕಿಸ್ ಪ್ರವಾಸದ ಅಂಗವಾಗಿ ಸ್ಟುರ್ಗಿಸ್ ಮೋಟಾರ್ಸೈಕಲ್ ರಾಲಿಯ ರಾಕಿಂಗ್ ದಿ ರಾಲಿಯಲ್ಲಿ ಪ್ರದರ್ಶಿಸಿದರು. ಸೌತ್ ಡಕೋಟಾದ ಗವರ್ನರ್ ಮೈಕ್ ರೌಂಡ್ಸ್, ಸೌತ್ ಡಕೋಟಾದಲ್ಲಿ ಆಗಸ್ಟ್ 4 ಅನ್ನು "ಕಿಸ್ ರಾಕ್ ಅಂಡ್ ರೋಲ್ ಡೇ" ಎಂದು ಘೋಷಿಸಿದ. ಸೆಪ್ಟೆಂಬರ್ 2008ರಲ್ಲಿ, ಜೀನ್ ಸಿಮ್ಮನ್ಸ್ ಮತ್ತು ಪಾಲ್ ಸ್ಟಾನ್ಲಿ ಇಬ್ಬರೂ ಕಿಸ್ ಅಲೈವ್/35 ಟೂರ್ 2009ರಲ್ಲಿ ಉತ್ತರ ಅಮೇರಿಕಾದ ಇನ್ನೂ ದೊಡ್ಡ ಪ್ರವಾಸದೊಂದಿಗೆ ಮುಂದುವರೆಯುತ್ತದೆ ಎನ್ನುವ ನಿರ್ದಾರವನ್ನು ಪ್ರಕಟಿಸಿದರು.  ===ಸೋನಿಕ್ ಬೂಮ್ (2008–2010)===  2008ರ ಕೊನೆಯಲ್ಲಿ ಬ್ಯಾಂಡ್ ಇನ್ನೊಂದು ಅನಿರೀಕ್ಷತ ಹೆಚ್ಚೆಯನ್ನು ಇಟ್ಟಿತು. ಅವರ ಕೊನೆಯ ಸ್ಟೂಡಿಯೋ ಆಲ್ಬಂ ಮಾಡಿ ಹತ್ತು ವರ್ಷದ ನಂತರ, 

ತಮಗೆ ಇನ್ನೊಂದು ಸ್ಟೂಡಿಯೋ ಆಲ್ಬಂ ಮಾಡಲು ಇಷ್ಟವಿಲ್ಲವೆಂದು ಹಲವಾರು ವರ್ಷಗಳಿಂದಾ ಹೇಳುತ್ತಾ ಬಂದಿದ್ದ, ಸ್ಟಾನ್ಲಿ ಮತ್ತು ಸಿಮ್ಮನ್ಸ್ ಅನಿರೀಕ್ಷಿತವಾಗಿ ತಮ್ಮ ಮನಸ್ಸನ್ನು ಬದಲಾಯಿಸಿರುವುದಾಗಿ ತಿಳಿಸಿದರು.

ನವೆಂಬರ್ 2008ರಲ್ಲಿ, ಪಾಲ್ ಸ್ಟಾನ್ಲಿ ರಾಸ್ ಹಾಲ್ಪಿನ್ ಎನ್ನುವ ರಾಕ್ ಛಾಯಗ್ರಾಹಕನಿಗೆ(ಪೋಟೋಗ್ರಾಫರ್) ಹೊಸ ಆಲ್ಬಂನ ಕೆಲಸಗಳು ನಡೆಯುತ್ತಿರುವುದಾಗಿ ತಿಳಿಸಿದನು. ಈ ಆಲ್ಬಂ ಅನ್ನು ಸ್ವತಃ ಸ್ಟಾನ್ಲಿ ನಿರ್ಮಾಣ ಮಾಡುತ್ತಿರುವುದಾಗಿ, ಇದರಲ್ಲಿ "70ನೇ ದಶಕದ ನಿಜವಾದ ಕಿಸ್ ಶೈಲಿಯ ಸಂಗೀತವಿರುತ್ತದೆ" ಎಂದು ತಿಳಿಸಿದ. ನಂತರ ಅದೆ ತಿಂಗಳು ಹೊಸ ಕಿಸ್ ಆಲ್ಬಂ ಕುರಿತಂತೆ ಸಿಮ್ಮನ್ಸ್ ಮತ್ತು ಸ್ಟಾನ್ಲಿ ಒಪ್ಪಿಕೊಂಡರು.[೧೦೫][೧೦೬][೧೦೭]

"We have 4 tunes recorded. If you're a fan of our stuff from about 1977, you'll feel right at home. All of us have taken up the songwriting call to arms in the same spirit we once did -- without a care in the world and without outside writers. Nothing to prove to anyone. Just doing what comes naturally. Ignoring fashions, trends and with a personal vow from all of us: no rapping. There are plenty of people out there doing this and they don't need four palefaced guys pretending they're from the hood. Besides, I'm not sure how to correctly pronounce 'wassup.' See you all there...Or maybe later!"[೧೦೫]

ಈ ಬ್ಯಾಂಡ್ ಮೇ 2009ರಲ್ಲಿ ಅಮೇರಿಕನ್ ಐಡಲ್ ಕಾರ್ಯಕ್ರಮದಲ್ಲಿ ಅಡಮ್ ಲಾಂಬೆರ್ಟ್ ಜೊತೆಯಲ್ಲಿ "ಡೆಟ್ರಾಯಿಟ್ ರಾಕ್ ಸಿಟಿ" ಮತ್ತು "ರಾಕ್ ಅಂಡ್ ರೋಲ್ ಆಲ್ ನೈಟ್" ಹಾಡುಗಳನ್ನು ಪ್ರಸ್ತುತಪಡಿಸಿದರು.[೧೦೮] ಜೂಲೈ 2009ರಲ್ಲಿ ಪಾಲ್ ಸ್ಟಾನ್ಲಿ ಕಿಸ್ ನ ಹೊಸ ಆಲ್ಬಂ ಸೋನಿಕ್ ಬೂಮ್, ಆಕ್ಟೋಬರ್ 6,2009 ಬಿಡುಗಡೆಯಾಗುತ್ತದೆ ಎಂದು ತಿಳಿಸಿದ.[೧೦೯]

ಇದರಲ್ಲಿ ಹೊಸ ವಿಷಯಗಳಿದ್ದ CD(ಸಿಡಿ), ಜನಪ್ರಿಯ ಕಿಸ್ ಯಶಸ್ವಿ ಹಾಡುಗಳ ಪುನರ್ ಮುದ್ರಿಸಿದ ಆವೃತ್ತಿ (ಇದನ್ನು ಜಿಗೊಕು-ರೆಟ್ಸುಡನ್, ಎನ್ನುವ ಜಪಾನಿನ ವಿಶೇಷ ಆಲ್ಬಂ ಆಗಿ 2008ರಲ್ಲಿ ಬಿಡುಗಡೆ ಮಾಡಲಾಗಿತ್ತು) ಮತ್ತು ಅರ್ಜೆಂಟೈನಾದ ಬ್ಯೂನಸ್ ಏರಿಸ್ ನಲ್ಲಿ ನಡೆದ ಲೈವ್ ಕಾರ್ಯಕ್ರಮದ DVD(ಡಿವಿಡಿ)ಕೂಡ ಇತ್ತು.[೧೧೦] ಕಿಸ್ ಈ ಹೊಸ ಆಲ್ಬಂ ನ ಪ್ರಚಾರದ ಸಲುವಾಗಿ ಲೈವ್ ಷೋ ವಿತ್ ಡೇವಿಡ್ ಲೆಟರ್ಮನ್ ಎನ್ನುವ ಕಾರ್ಯಕ್ರಮದಲ್ಲಿ ಆಕ್ಟೋಬರ್ 6, 2009 ರಂದು ಪಾಲ್ಗೊಂಡಿತು. ಇದಲ್ಲದೆ, ಜಿಮ್ಮಿ ಕಿಮ್ಮಲ್ ಲೈವ್! ಕಾರ್ಯಕ್ರಮದಲ್ಲಿ

 ಆಕ್ಟೋಬರ್ 7, 2009 ರಂದು ಪಾಲ್ಗೊಂಡಿತು.  ಸೆಪ್ಟೆಂಬರ್ 25,2009ರಂದಯ ಕಿಸ್ ಅಲೈವ್/35 ಉತ್ತರ ಅಮೇರಿಕಾದ ಪ್ರವಾಸ ಕೊಬೊ ಅರೇನಾ ದಲ್ಲಿ ಡೆಟ್ರಾಯಿಟ್, MI ಯಲ್ಲಿ ಪ್ರಾರಂಭವಾಯಿತು. ಭವಿಷ್ಯದಲ್ಲಿ DVDರೂಪದಲ್ಲಿ ಬಿಡುಗಡೆ ಮಾಡುವ ಸಲುವಾಗಿ  ಎರಡೂ ಕಾರ್ಯಕ್ರಮಗಳನ್ನು ಚಿತ್ರಸಿಕೊಳ್ಳಲಾಗಿದೆ.  ಈ ಸಭಾಂಗಣವನ್ನು ಮುಚ್ಚುತ್ತಾರೆ ಎನ್ನುವ ಕಾರಣಕ್ಕೆ ಬ್ಯಾಂಡ್ ಈ ಸಭಾಂಗಣದಲ್ಲಿ ಇದನ್ನೆ ತನ್ನ ಕೊನೆಯ ಪ್ರದರ್ಶನವಾಗಿಸಿತು. ಆದರೆ ಈ ಸಭಾಂಗಣದಲ್ಲಿ ಇಂದಿಗೂ ಕಾರ್ಯಕ್ರಮಗಳು ನಡೆಯುತ್ತಿದೆ (ಸ್ಲೇಯರ್ ಮತ್ತು ಮೆಗಾಡೆತ್ ರ ಕಾರ್ನೇಜ್ ಪ್ರವಾಸ ಆಗಸ್ಟ 2010ರಲ್ಲಿ ನಡೆಯಿತು) ಈ ಪ್ರವಾಸ TX(ಟೆಕ್ಸಾಸ್) ಡಲ್ಲಾಸ್ ನಲ್ಲಿರುವ ಅಮೇರಿಕನ್ ಏರಲೈನ್ಸ್ ಸೆಂಟರ್ ನಲ್ಲಿ ಡಿಸೆಂಬರ್ 6,2009ರಂದು ಕೊನೆಯಾಗಬೇಕಿತ್ತು. ಆದರೆ ಈ ಪ್ರವಾಸಕ್ಕೆ ಆನೇಕ ಹೊಸ ಪ್ರದರ್ಶನ ದಿನಗಳನ್ನು ಸೇರಿಸಲಾಗಿದೆ, ಹಾಗು ಈಗ ಈ ಪ್ರವಾಸವು ಡಿಸೆಂಬರ್ 15ರಂದು ಮೇರಿಯ, ಸಾಲ್ಟ್ ಸ್ಟೆ ಯಲ್ಲಿ ಕೊನೆಯಾಗುವ ನಿರೀಕ್ಷೆಯಿದೆ.[೧೧೧]

ಕಿಸ್ ಲೂಸಿಯಾನದ ನ್ಯೂ ಆರ್ಲಿಯಾನ್ಸ್ ನ ಸಿಟಿ ಪಾರ್ಕ್ ನಲ್ಲಿ ಹಾಲೊವೀನ್ ನೈಟ್ ಅಂದು ನಡೆದ ವೂಡೂ ಫೆಸ್ಟ್ 2009 ರ ಮೊದಲ ಪ್ರದರ್ಶನ ಕೊಟ್ಟರು.[೧೧೨] ಮಾನಿಟೊಬನಲ್ಲಿರುವ ವಿನ್ನಿಪೆಗ್MTS (ಎಂಟಿಎಸ್) ಸೆಂಟರ್ ಎನ್ನುವ ಸ್ಥಳದಲ್ಲಿ ಅವರು 9 ನವೆಂಬರ್ 2009ರಂದು ನಡೆಸಿದ ಕಾರ್ಯಕ್ರಮದಲ್ಲಿ, ಬೆಳಕು ನೀಡಲು ಇಟ್ಟಿದ ಸರಕಟ್ಟಿಗೆ(ಆಸರೆ) ಅಕಸ್ಮಿಕವಾಗಿ ಬೆಂಕಿತಗುಲಿತು. ಬೆಂಕಿಯನ್ನು ನಂದಿಸಲು ಈ ಸರಕಟ್ಟನ್ನು ಕೆಳಗಿಸಬೇಕಾಯಿತು. ಬೆಂಕಿ ನಂದಿಸಲು ಸುಮಾರು 5 ನಿಮಷವಾಯಿತು. ಈ ಸಮಯದಲ್ಲಿ ಬ್ಯಾಂಡ್ "ಫೈರ್ ಹೌಸ್" ಎನ್ನುವ ಹಾಡನ್ನು ಹಾಡತೊಡಗಿದರು. ಈ ಘಟನೆಯಲ್ಲಿ ಯಾರಿಗೂ ಪೆಟ್ಟಾಗಲಿಲ್ಲ, ಹಾಗು ಕಾರ್ಯಕ್ರಮವನ್ನು ಮುಂದುವರೆಸಲಾಯಿತು.[೧೧೩] ಕಿಸ್ "ಸೋನಿಕ್ ಬೂಮ್ ಒವರ್ ಯುರೋಪ್: ಫ್ರಮ್ ದಿ ಬಿಗಿನಿಂಗ್ ಟು ದಿ ಬೂಮ್" ಎನ್ನುವ ಪ್ರವಾಸದ ಯೂರೋಪಿನ ಪ್ರವಾಸವನ್ನು ಮೇ 2010 ರಲ್ಲಿ ಪ್ರಾರಂಭಿಸಿತು. ಈ ಪ್ರವಾಸದಲ್ಲಿ ಹನ್ನೊಂದು ವರ್ಷದ ಬಳಿಕ UK ಅರೀನ ಪ್ರದರ್ಶನವಿದೆ. ಅಷ್ಟೆ ಅಲ್ಲದೆ ಈ ಪ್ರವಾಸದಲ್ಲಿ ಅವರು ಮೊದಲು ಬಾರಿ ಸ್ಲೋವಾಕಿಯಾಗೆ ಭೇಟಿ ನೀಡುತ್ತಾರೆ. ಕಿಸ್ US (ಯುಎಸ್) ನಗರಗಳಾದ ಚೆಯಿನೆ,ವ್ಯೊಮಿಂಗ್ ಮತ್ತು ಮಿನೊಟ್,ನಾರ್ಥ್ ಡಕೋಟಾದಲ್ಲಿ ಜೂಲೈ 2010 ರಲ್ಲಿ ಎರಡು ಪ್ರದರ್ಶನವನ್ನು ನಡೆಸುತ್ತದೆ. ===ಮುಂದಿನ ಆಲ್ಬಂ (2010–ಇಲ್ಲಿಯವರೆಗೆ)=== ಮಾರ್ಚಿ 2010ರಲ್ಲಿ ಪಾಲ್ ಸ್ಟಾನ್ಲಿ, ಕಿಸ್ ಶೀಘ್ರದಲ್ಲಿಯೆ ತನ್ನ ಮುಂದಿನ ಆಲ್ಬಂನ ಕೆಲಸವನ್ನು ಶುರು ಮಾಡುತ್ತದೆ ಎಂದು ತಿಳಿಸಿದ. ಮುಂದುವರೆದು, ಈತ, ಈ ಆಲ್ಬಂ ಅನ್ನು ಮುಂದಿನ ಹನ್ನೆರಡರಿಂದ ಹದಿನೆಂಟು ತಿಂಗಳಲ್ಲಿ 2011 ರ ಮಧ್ಯಭಾಗದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾನೆ.[೧೧೪] ==ಸಂಗೀತ ಶೈಲಿ== ಹಾರ್ಡ್ ರಾಕ್ ಶೈಲಿಯ ಸಂಗೀತಕ್ಕೂ,[೧೧೫] "ಹೆವಿ ಮೆಟಲ್" ಸಂಗೀತ ಶೈಲಿಗಳ ವಾಖ್ಯಾನಗಳಲ್ಲಿ ಬಹಳಷ್ಟು ಸಾಮ್ಯತೆಗಳಿರುವ ಕಾರಣ(ಅವುಗಳ ನಡುವೆಯಿರುವ ಅಂತರ ಅಸ್ಪಷ್ಟವಾಗಿದೆ) [೧೧೬][೧೧೭][೧೧೮], ಕಿಸ್ ಸಂಗೀತವನ್ನು ಈ ಎರಡು ಶೈಲಿಗಳ ಪೈಕಿ ಒಂದರ ಗುಂಪಿಗೆ ಸೇರಿದೆ ಎಂದು ಗುರುತಿಸಲಾಗುತ್ತದೆ. ಆದರೆ, ಬ್ಯಾಂಡ್ ಹುಟ್ಟಿದ ಕೆಲ ದಿನಗಳ ನಂತರ ವಿಮರ್ಶಕರು ಇವರನ್ನು "ಥಂಡರ್ ರಾಕರ್ಸ್" ಎಂದು ಕರೆದರರು.[೧೧೯]. ಇವರ ಸಂಗೀತವನ್ನು ಆಲ್ ಮ್ಯೂಸಿಕ್ "ಸಲೀಸಾಗಿ ಹಾಡಿಸಿಕೊಳ್ಳುವ ಗುಣವಿರುವಂತಹ ಇವರ ಹಾರ್ಡ್ ರಾಕ್ ಸಂಗೀತಗಳಲ್ಲಿ ಬಲಾಡ್, ಕಾಡುವ ಮಾದುರ್ಯ ಗಿಟಾರ್ ಮತ್ತು ತಂತಿಗಳ ನಾದಗಳ ಮಿಶ್ರಣವಾಗಿತ್ತು. ಇವರ ಸಂಗೀತ 80ನೆ ದಶಕದ ಕೊನೆಯ ಭಾಗದಲ್ಲಿ ಪ್ರಬಲವಾದ ಪಾಪ್-ಮೆಟಲ್ ಮತ್ತು ಆರೀನ ರಾಕ್ ಸಂಗೀತ ಶೈಲಿಗಳಿಗೆ ಸ್ಪೂರ್ತಿ ನೀಡಿದವು."[೧೨೦] ಅದರ ಮೊದಲ ಗುಣಾತ್ಮಕ ವಿಮರ್ಶೆಯು ಕಿಸ್ ಅನ್ನು "ರೋಲಿಂಗ್ ಸ್ಟೋನ್" ನ "ಅಮೇರಿಕಾದ ಬ್ಲ್ಯಾಕ್ ಸಬಾತ್" ಎಂದು ಬಣ್ಣಿಸಿದರು.[೧೨೧] ಹಾಟರ್ ಥಾನ್ ಹೆಲ್ ನ ಸ್ಟೋನ್ "ಜೋಡಿ ಗಿಟಾರ್ ಗಳ ಧ್ವನಿಯ ಜೊತೆಗೆ ಡ್ರಮ್ ನಾದವು ಸೇರಿಕೊಂಡು ಆಕರ್ಷಕ ಲಯದ ಸಂಗೀತ ಹೊರಹೊಮ್ಮುತಿತ್ತು", "ಕಿಸ್ ಚಾಕಚಕ್ಯತೆಯಿಂದ ಪ್ರಸ್ತುತ ಪಡಿಸುತ್ತಿದ್ದ ಸಂಗೀತ, ಹಿಂದೊಮ್ಮೆ ಜರ್ಮನ್ ಪಾನ್ಸರ್ ಟ್ಯಾಂಕ್ ಡಿವಿಷನ್ ನಿಂದ ಜನಪ್ರಿಯಗೊಳಿಸಿದ ಸಂಗೀತಕ್ಕೆ ಹತ್ತಿರವಾಗಿತ್ತು." ಎಂದು ಹೇಳಿದ್ದಾನೆ. [೧೨೨]

ಅದೇ ಸಮಯ, "ರಾಕ್ ಮ್ಯೂಸಿಕ್" ಎನ್ನುವ ಪತ್ರಿಕೆಯ (ಮ್ಯಾಗಜೀನ್) ಬೆನ್ನಿಂಗ್ ಟನ್ ಬಾನ್ನರ್ "ಸದಸ್ಯರುಗಳ ವಿಚಿತ್ರ, ಕಾಬುಕಿ ರೀತಿಯ ಮೇಕ್ಅಪ್, ಕಪ್ಪು ಲೆಥರ್ ವೇಷಭೂಷಣಗಳು, ಹಾಗು ಸಂಗೀತದಲ್ಲಿ ಹಾಗು ರಂಗದ ಮೇಲೆ ಪ್ರದರ್ಶಸುತ್ತಿದ್ದ ಶಕ್ತಿ - ಕಿಸ್ 1974ರ ಹಾರ್ಡ್ ರಾಕ್‌ನ ಅತೀ ಗಂಭೀರವಾದ ಲಯದ ಶೈಲಿ ಸಂಗೀತವನ್ನು ಪ್ರತಿನಿಧಿಸುತ್ತದೆ. " ಎಂದು ಹೇಳಿದ್ದಾನೆ.[೧೨೩] ==Band members==

;Current members *Paul Stanley – lead and backing vocals, rhythm guitar (1972–present) *Gene Simmons – lead and backing vocals, bass guitar (1972–present) *Tommy Thayer – lead guitar, backing vocals (2002–present) *Eric Singer – drums, percussion, backing vocals (1991–1996, 2001–2002, 2004–present) ;Former members *Ace Frehley – lead guitar, vocals (1972–1982, 1996–2002) *Peter Criss – drums, percussion, vocals (1972–1979, 1996–2000, 2002-2004) *Bruce Kulick – lead guitar, backing vocals (1984–1996) *Eric Carr – drums, percussion, vocals (1980–1991) *Vinnie Vincent – lead guitar, backing vocals (1982–1984) *Mark St. John – lead guitar, backing vocals (1984) ==Makeup designs==

==Discography and filmography==

==Awards and nominations==

==References in popular culture== Kiss, its members, and look-alike parodies of the band have appeared in popular media of many types: :*The Comedy Central show Chocolate News presents a "former, all-black" fictional band from New Orleans called Kiss.[೧೨೪] :*Family Guy, playing themselves in the episodes "A Very Special Family Guy Freakin' Christmas" and "Road to Europe". :*The movie Role Models featured many instances where the band was referenced. In one scene, the characters dressed up like the band members. ==See also== *List of best-selling music artists ==References==

  1. "Kiss Chronology". The Official Kiss Website. Retrieved 29 October 2009.
  2. "ಆರ್ಟಿಸ್ಟ್ ಟಾಲಿಸ್". ಬಿಲ್ ಬೋರ್ಡ್ ಅಕ್ಟೋಬರ್ 1, 2007ರಂದು ಮರುಸಂಪಾದಿಸಲಾಗಿದೆ.
  3. "RIAA Top Selling Artists". Retrieved February 7, 2007.
  4. [7] ^ [6]
  5. "100 Greatest Artists of Hard Rock- Hour 5". VH1. Archived from the original on 29 ಜೂನ್ 2011. Retrieved 15 October 2009.
  6. ೬.೦ ೬.೧ http://www.mtv.com/bands/m/metal/greatest_metal_bands/071406/index10.jhtml
  7. Sisario, Ben (23 September 2009). "Kiss and Abba Nominated for Rock Hall of Fame". ದ ನ್ಯೂ ಯಾರ್ಕ್ ಟೈಮ್ಸ್. Retrieved 12 September 2009.
  8. "The Rock and Roll Hall of Fame Announces its Inductees for 2010". The Rock and Roll Hall of Fame. December 15, 2010. Retrieved 2010-02-08.
  9. ಗೂಚ್ ಅಂಡ್ ಸುಹ್ಸ್, ಕಿಸ್ ಅಲೈವ್ ಫಾರ್ಎವರ್ , pp. 14.
  10. ಗಿಲ್ , ಫೋಕಸ್ , pp. 68-71.
  11. ಲೀಪ್ ಅಂಡ್ ಶಾರ್ಪ್,ಬಿಹೈಂಡ್ ದಿ ಮಾಸ್ಕ್ , pp. 20–21.
  12. ಲೀಪ್ ಅಂಡ್ ಶಾರ್ಪ್,ಬಿಹೈಂಡ್ ದಿ ಮಾಸ್ಕ್ , pp. 33, 57–58.
  13. ಗೂಚ್ ಅಂಡ್ ಸುಹ್ಸ್, ಕಿಸ್ ಅಲೈವ್ ಫಾರ್ಎವರ್ , p. 15.
  14. Gill, Julian. "Kiss Chronology/Timeline". Archived from the original on 2002-02-04. Retrieved 2007-01-20.
  15. "Artist bio: Ace Frehley". Kayos Productions. Archived from the original on 4 ಮಾರ್ಚ್ 2016. Retrieved 6 January 2010.
  16. Gene Simmons (1987). Exposed (VHS). Mercury. {{cite AV media}}: |format= requires |url= (help)
  17. ಗೆಬೆರ್ಟ್ ಅಂಡ್ ಮಕ್ ಅಡಮ್ಸ್ , ಕಿಸ್ ಅಂಡ್ ಟೆಲ್, p. 41, 42.
  18. ಸಿಮ್ಮನ್ಸ್, ಜೀನ್ (2001). ಕಿಸ್ ಅಂಡ್ ಮೇಕ್ಅಪ್ . ಕ್ರೌನ್. ISBN 0-609-60855-X.
  19. ಲೀಪ್ ಅಂಡ್ ಶಾರ್ಪ್, ಬಿಹೈಂಡ್ ದಿ ಮಾಸ್ಕ್ , pp. 145–146.
  20. ಗೂಚ್ ಅಂಡ್ ಸುಹ್ಸ್, ಕಿಸ್ ಅಲೈವ್ ಫಾರ್ಎವರ್ , p. 27.
  21. Kissology Volume One: 1974–1977 (DVD). VH1 Classic. 31 October 2006. {{cite AV media}}: |format= requires |url= (help)
  22. ಗಿಲ್, ಫೋಕಸ್ , pp. 140-141.
  23. Prato, Greg. "Review Dressed to Kill". Allmusic. Retrieved 6 January 2010.
  24. ಲೀಪ್ ಅಂಡ್ ಶಾರ್ಪ್, ಬಿಹೈಂಡ್ ದಿ ಮಾಸ್ಕ್ , pp. 62–64.
  25. Prato, Greg. "Review Alive!". Allmusic. Retrieved 6 January 2010.
  26. ಗಿಲ್, ಫೋಕಸ್ , pp. 169-172.
  27. ಲೆಂಡ್ಟ್, ಕಿಸ್ ಅಂಡ್ ಸೆಲ್ , pp. 65–66.
  28. http://www.worthpoint.com/worthopedia/howard-the-duck-1-32-+-extras-first-kiss-in
  29. ಗಿಲ್, ಫೋಕಸ್ , pp. 272-273.
  30. ಲೆಂಡ್ಟ್, ಕಿಸ್ ಅಂಡ್ ಸೆಲ್ , p. 162.
  31. ಲೆಂಡ್ಟ್, ಕಿಸ್ ಅಂಡ್ ಸೆಲ್ , pp. 88–89.
  32. ಗಿಲ್, ಫೋಕಸ್ , p. 271.
  33. ಲೆಂಡ್ಟ್, ಕಿಸ್ ಅಂಡ್ ಸೆಲ್ , p. 92.
  34. ಲೆಂಡ್ಟ್, ಕಿಸ್ ಅಂಡ್ ಸೆಲ್ , p. 94.
  35. ಲೆಂಡ್ಟ್, ಕಿಸ್ ಅಂಡ್ ಸೆಲ್ , p. 95.
  36. ಅಲ್ಬಾನಿಸ್, ರೋನ್. ಮಾರ್ಚ್ 5, 2002. "ಈಸಿ ಕ್ಯಾಟ್‌ಮ್ಯಾನ್, ಥೆ ಆರ್ ಸಿರೀಯಸ್: ದಿ ಕಂಪ್ಲೀಟ್ ಗೈಡ್ ಟು ಕಿಸ್ ಮೀಟ್ಸ್ ದಿ ಫಾನಟಂ" Archived 2008-06-25 ವೇಬ್ಯಾಕ್ ಮೆಷಿನ್ ನಲ್ಲಿ. RonAlbanese.com. ಜೂನ್ 30, 2006ರಲ್ಲಿ ಮರುಸಂಪಾದಿಸಲಾಗಿದೆ.
  37. ಲೆಂಡ್ಟ್, ಕಿಸ್ ಅಂಡ್ ಸೆಲ್ , pp. 91–92.
  38. ಗಿಲ್, ಫೋಕಸ್ , p. 342.
  39. ಗಿಲ್, ಫೋಕಸ್ , pp. 346-347.
  40. ಲೆಂಡ್ಟ್, ಕಿಸ್ ಅಂಡ್ ಸೆಲ್ , pp. 102–105.
  41. ಗೂಚ್ ಅಂಡ್ ಸುಹ್ಸ್, ಕಿಸ್ ಅಲೈವ್ ಫಾರ್ಎವರ್ , p. 98.
  42. ಲೀಫ್ ಅಂಡ್ ಶಾರ್ಪ್, ಬಿಹೈಂಡ್ ದಿ ಮಾಸ್ಕ್ , p. 100.
  43. ಲೀಫ್ ಅಂಡ್ ಶಾರ್ಪ್, ಬಿಹೈಂಡ್ ದಿ ಮಾಸ್ಕ್ , pp. 170–171.
  44. ಗೂಚ್ ಅಂಡ್ ಸುಹ್ಸ್, ಕಿಸ್ ಅಲೈವ್ ಫಾರ್ಎವರ್ , pp. 97–98.
  45. ಲೆಂಡ್ಟ್, ಕಿಸ್ ಅಂಡ್ ಸೆಲ್ , pp. 150–151.
  46. ಗೂಚ್ ಅಂಡ್ ಸುಹ್ಸ್, ಕಿಸ್ ಅಲೈವ್ ಫಾರ್ಎವರ್ , p. 109.
  47. ಲೀಫ್ ಅಂಡ್ ಶಾರ್ಪ್, ಬಿಹೈಂಡ್ ದಿ ಮಾಸ್ಕ್ , pp. 101–102.
  48. ಗೂಚ್ ಅಂಡ್ ಸುಹ್ಸ್, ಕಿಸ್ ಅಲೈವ್ ಫಾರ್ಎವರ್ , p. 113.
  49. ಲೀಫ್ ಅಂಡ್ ಶಾರ್ಪ್, ಬಿಹೈಂಡ್ ದಿ ಮಾಸ್ಕ್ , p. 102.
  50. ಗಿಲ್, ಫೋಕಸ್ , p. 460.
  51. ಗಿಲ್, ಫೋಕಸ್ , pp. 462-463.
  52. ಗೂಚ್ ಅಂಡ್ ಸುಹ್ಸ್, ಕಿಸ್ ಅಲೈವ್ ಫಾರ್ಎವರ್ , p. 117.
  53. ಸಿಮ್ಮನ್ಸ್, ಕಿಸ್ ಅಂಡ್ ಮೇಕ್ಅಪ್ , p. 186.
  54. ಗಿಲ್, ಫೋಕಸ್ , p. 514.
  55. ಲೆಂಡ್ಟ್, ಕಿಸ್ ಅಂಡ್ ಸೆಲ್ , pp. 243–244.
  56. ಲೆಂಡ್ಟ್, ಕಿಸ್ ಅಂಡ್ ಸೆಲ್ , pp. 255–256.
  57. ಗಿಲ್, ಫೋಕಸ್ , pp. 493-495.
  58. ಗೂಚ್ ಅಂಡ್ ಸುಹ್ಸ್, ಕಿಸ್ ಅಲೈವ್ ಫಾರ್ಎವರ್ , pp. 118–120.
  59. ೫೯.೦ ೫೯.೧ ಸಿಮ್ಮನ್ಸ್, ಕಿಸ್ ಅಂಡ್ ಮೇಕ್ಅಪ್ , p. 187.
  60. ಜೀನ್ ಸಿಮ್ಮನ್ಸ್ ನೊಂದಿಗೆ ಸಂದರ್ಶನ
  61. ಲೆಂಡ್ಟ್, ಕಿಸ್ ಅಂಡ್ ಸೆಲ್ , p. 289.
  62. ಲೆಂಡ್ಟ್, ಕಿಸ್ ಅಂಡ್ ಸೆಲ್ , p. 294.
  63. ಗೂಚ್ ಅಂಡ್ ಸುಹ್ಸ್, ಕಿಸ್ ಅಲೈವ್ ಫಾರ್ಎವರ್ , pp. 139–140.
  64. ಉಲ್ಲೇಖ ದೋಷ: Invalid <ref> tag; no text was provided for refs named charts
  65. ಲೆಂಡ್ಟ್, ಕಿಸ್ ಅಂಡ್ ಸೆಲ್ , pp. 311–312.
  66. ಲೀಫ್ ಅಂಡ್ ಶಾರ್ಪ್, ಬಿಹೈಂಡ್ ದಿ ಮಾಸ್ಕ್ , p. 360–363.
  67. ಲೀಫ್ ಅಂಡ್ ಶಾರ್ಪ್, ಬಿಹೈಂಡ್ ದಿ ಮಾಸ್ಕ್ , p. 107.
  68. "ಎರಿಕ್ ಕಾರ್, 41, ಇಸ್ ಡೆಡ್; ರಾಕ್ ಬ್ಯಾಂಡ್ಸ್ ಡ್ರಮ್ಮರ್" (ನವೆಂಬರ್ 26, 1991). ದಿ ನ್ಯೂ ಯಾರ್ಕ್ ಟೈಮ್ಸ್. ಮರುಸಂಪಾದಿಸಿದ್ದು: ಏಪ್ರಿಲ್ 16, 2006.
  69. "ಗಿಟಾರ್ ಸೆಂಟೆರ್ಸ್ ಹಾಲಿವುಡ್ ರಾಕ್ ವಾಕ್". Archived from the original on 2010-09-28. Retrieved 2010-05-31.
  70. ೭೦.೦ ೭೦.೧ ಲೀಫ್ ಅಂಡ್ ಶಾರ್ಪ್, ಬಿಹೈಂಡ್ ದಿ ಮಾಸ್ಕ್ , pp. 108–110.
  71. ಗೂಚ್ ಅಂಡ್ ಸುಹ್ಸ್, ಕಿಸ್ ಅಂಡ್ ಅಲೈವ್ ಫಾರ್ಎವರ್ , p. 217.
  72. ಲೀಫ್ ಅಂಡ್ ಶಾರ್ಪ್, ಬಿಹೈಂಡ್ ದಿ ಮಾಸ್ಕ್ , pp. 403–404.
  73. "ಗ್ರ್ಯಾಮು ಫ್ಲಾಶ್ ಬ್ಯಾಕ್ 1996". MTV. ಮರುಸಂಪಾದಿಸಿದ್ದು ಜೂಲೈ 30, 2006.
  74. ೭೪.೦ ೭೪.೧ ಗೂಚ್ ಅಂಡ್ ಸುಹ್ಸ್, ಕಿಸ್ ಅಲೈವ್ ಫಾರ್ಎವರ್ , p. 224.
  75. ಗೂಚ್ ಅಂಡ್ ಸುಹ್ಸ್, ಕಿಸ್ ಅಲೈವ್ ಫಾರ್ಎವರ್ , p. 225.
  76. [10] ^ ಅಸೋಸಿಯೇಟೆಡ್‌ ಪ್ರೆಸ್‌. ಡಿಸೆಂಬರ್ 30, 1996 "ಕಿಸ್ ಇಸ್ ಟಾಪ್ ಕಾನ್ಸರ್ಟ್ ಡ್ರಾ ಆಫ್ 1996". USA ಟುಡೆ ಮರುಸಂಪಾದಿಸಿದ್ದು: ಏಪ್ರಿಲ್ 16, 2006.
  77. Caulfield, Keith (14 October 2009). "Michael Buble Beats Kiss On Billboard 200". Billboard. Retrieved 23 December 2009.
  78. "41st ಅನುಯಲ್ ಗ್ರ್ಯಾಮಿ ನಾಮಿನಿಸ್ ಅಂಡ್ ವಿನ್ನರ್ಸ್". CNN. ಮರುಸಂಪಾದಿಸಿದ್ದು ಜೂಲೈ 30, 2006.
  79. ಲೀಫ್ ಅಂಡ್ ಶಾರ್ಪ್, ಬಿಹೈಂಡ್ ದಿ ಮಾಸ್ಕ್ , p. 112, 115.
  80. ಗೂಚ್ ಅಂಡ್ ಸುಹ್ಸ್, ಕಿಸ್ ಅಲೈವ್ ಅಂಡ್ ಫಾರ್ಎವರ್ , p. 245.
  81. "ಫೈಟಿಂಗ್ ಸ್ಪಿರಿಟ್ ಮಾಗಜೀನ್ - ಆರ್ಟಿಕಲ್". Archived from the original on 2011-10-01. Retrieved 2010-05-31.
  82. ರೋಸನ್, ಕ್ರೇಗ್. ಫೆಬ್ರುವರಿ 14, 2000 "ಕಿಸ್ 'ಫೇರ್ವೆಲ್' ಟೂರ್ ಡೇಟ್ಸ್ ಅನೌಂನ್ಸಡ್" Archived 2007-06-17 ವೇಬ್ಯಾಕ್ ಮೆಷಿನ್ ನಲ್ಲಿ.. Yahoo! Music. ಜುಲೈ 30, 2006ರಲ್ಲಿ ಮರುಸಂಪಾದಿಸಲಾಗಿದೆ.
  83. ರೋಸನ್, ಕ್ರೇಗ್. ಜನವರಿ 31, 2001 "ಪೀಟರ್ ಕ್ರಿಸ್ ಲೀವ್ಸ್ ಕಿಸ್, ಎರಿಕ್ ಸ್ಟೇಪ್ಸ್ ಇನ್" Archived 2007-09-24 ವೇಬ್ಯಾಕ್ ಮೆಷಿನ್ ನಲ್ಲಿ.. Yahoo! Music . ಮರುಸಂಪಾದಿಸಿದ್ದು: ಏಪ್ರಿಲ್ 16, 2006.
  84. "ಕಿಸ್ ಇಂಟ್ರಡ್ಯೂಸ್ ದೆರ್ ಲೇಟಸ್ಟ್ ಮರ್ಚಂಡೈಸಿಂಗ್ ಇನ್ಡೆವರ್: ದಿ ಕಿಸ್ ಕಾಸ್ಕೆಟ್" Archived 2006-11-10 ವೇಬ್ಯಾಕ್ ಮೆಷಿನ್ ನಲ್ಲಿ.. NYRock. ಜುಲೈ 30, 2006ರಲ್ಲಿ ಮರುಸಂಪಾದಿಸಲಾಗಿದೆ.
  85. /https://music.yahoo.com/read/news/12046338 Archived 2006-12-16 ವೇಬ್ಯಾಕ್ ಮೆಷಿನ್ ನಲ್ಲಿ.
  86. "GRAMMY.com". Archived from the original on 2010-03-15. Retrieved 2010-05-31.
  87. "Terry Gross interview with Gene Simmons". Internet Archive. Retrieved 13 August 2009.
  88. ಗೂಚ್ ಅಂಡ್ ಸುಹ್ಸ್, ಕಿಸ್ ಅಲೈವ್ ಫಾರ್ಎವರ್ , p. 269.
  89. "About Tommy Thayer". Archived from the original on 2017-06-12. Retrieved 2007-01-27.
  90. ಗೂಚ್ ಅಂಡ್ ಸುಹ್ಸ್, ಕಿಸ್ ಅಲೈವ್ ಫಾರ್ಎವರ್ , p. 270.
  91. "ಫ್ರೆಹ್ಲಿ ಫ್ರೀಸ್ಟೈಲ್" Archived 2008-02-22 ವೇಬ್ಯಾಕ್ ಮೆಷಿನ್ ನಲ್ಲಿ.. ಜುಲೈ 15, 2003. ಇನ್ಫೋಪ್ಲೀಸ್ . ಮರುಸಂಪಾದಿಸಿದ್ದು: ಏಪ್ರಿಲ್ 17, 2006.
  92. YouTube - Broadcast Yourself
  93. "KissOnline Presale and Ticket Package Details". Retrieved 2007-01-27.
  94. "2003 ಟಾಪ್ 20 ಕಾನ್ಸರ್ಟ್ ಟೂರ್ಸ್". ಇನ್ಫೋಪ್ಲೀಸ್ . ಮರುಸಂಪಾದಿಸಿದ್ದು: ಏಪ್ರಿಲ್ 17, 2006.
  95. ಪೀಟರ್ ಕ್ರಿಸ್ ಸ್ಟೇಟ್ಮೆಂಟ್ ಆನ್ ಹಿಸ್ ಎಕ್ಸ್ಪೈರ್ಡ್ ಕಾಂಟ್ರಾಕ್ಟ್. ಮಾರ್ಚ್ 2, 2004 Petercriss.net . ಇಂಟರ್ನೆಟ್ ಆರ್ಕೈವ್ ನಿಂದ ಮರುಸಂಪಾದಿಸಿದ್ದು ಏಪ್ರಿಲ್ 17, 2006.
  96. ಪ್ರಾಟೊ,ಗ್ರೆಗ್. ನವೆಂಬರ್ 8, 2005 "ಕಿಸ್ ಕೀಪ್ಸ್ ರಾಕಿಂಗ್ ವಿತ್ ಲೈವ್ DVD". ಬಿಲ್ ಬೋರ್ಡ್ ಮರುಸಂಪಾದಿಸಿದ್ದು: ಏಪ್ರಿಲ್ 16, 2008.
  97. "ಕಿಸ್ ಫ್ರಂಟ್ ಮ್ಯಾನ್ ನೀಡ್ಸ್ ಮೋರ್ ಹಿಪ್ ಸರ್ಜರಿ" Archived 2012-03-25 ವೇಬ್ಯಾಕ್ ಮೆಷಿನ್ ನಲ್ಲಿ.. (ಡಿಸೆಂಬರ್ 14, 2005) ದಿ ರಾಕ್ ರೇಡಿಯೋ . ಮರುಸಂಪಾದಿಸಿದ್ದು: ಏಪ್ರಿಲ್ 16, 2008.
  98. "PAUL STANLEY Hospitalized Prior To California Gig; Kiss Performs As Three-Piece". Blabbermouth.net. 2007-07-28. Archived from the original on 2007-09-30. Retrieved 2007-07-28.
  99. ಕೊಹೆನ್, ಜೊನಾಥಾನ್. (ಏಪ್ರಿಲ್ 6, 2008). "VH1 ರಾಕ್ ಹಾನರ್ಸ್ ಟು ಸಲ್ಯೂಟ್ ಕಿಸ್,ಕ್ವೀನ್". ಬಿಲ್ ಬೋರ್ಡ್ ಮರುಸಂಪಾದಿಸಿದ್ದು: ಏಪ್ರಿಲ್ 16, 2006.
  100. (ಏಪ್ರಿಲ್ 22, 2006). "ಕಿಸ್ ಮೆಂಬರ್ಸ್ ಟು ಬಿ ಇಂಡಂಕ್ಟೆಡ್ ಇನ್ ಟು ಲಾಂಗ್ ಐಲಾಂಡ್ ಮ್ಯೂಸಿಕ್ ಹಾಲ್ ಆಫ್ ಫೇಮ್" Archived 2009-02-11 ವೇಬ್ಯಾಕ್ ಮೆಷಿನ್ ನಲ್ಲಿ.. Blabbermouth.net . ಮರುಸಂಪಾದಿಸಿದ್ದು: ಏಪ್ರಿಲ್ 23, 2006.
  101. Kiss To Continue Raiding Vaults For DVD Series. (ನವೆಂಬರ್ 16, 2006) ಬಿಲ್ ಬೋರ್ಡ್ ಡಿಸೆಂಬರ್‌‌ 7, 2006 ರಂದು ಮರುಸಂಪಾದಿಸಲಾಯಿತು.
  102. {{cite web}}: Empty citation (help)
  103. Prato, Greg (2007-04-08). "Ex-Kiss guitarist Mark St. John dies". ABC News. Retrieved 2007-04-09.
  104. "Kiss fans protest Rock Hall of Fame snub"[ಶಾಶ್ವತವಾಗಿ ಮಡಿದ ಕೊಂಡಿ]. August 16, 2006 "Associated Press". Retrieved August 6, 2006.
  105. ೧೦೫.೦ ೧೦೫.೧ ೧೦೫.೨ "ಆರ್ಕೈವ್ ನಕಲು". Archived from the original on 2010-03-27. Retrieved 2021-08-09.
  106. http://www.winnipegsun.com/Entertainment/Music/2008/11/26/7544541.html[ಶಾಶ್ವತವಾಗಿ ಮಡಿದ ಕೊಂಡಿ]
  107. Cohen, Jonathan. "Kiss Making First Album Since 1998". billboard.com December 10, 2008.
  108. Montgomery, James (20 May 2009). "Adam Lambert Gets Glammed Up With Kiss". MTV. Retrieved 17 October 2009.
  109. "ಆರ್ಕೈವ್ ನಕಲು". Archived from the original on 2009-09-11. Retrieved 2010-05-31.
  110. "Kiss to release new album at Wal-Mart, Sam's: Album will only be available through world's largest retailer". Associated Press. 17 August 2009. Archived from the original on 18 ಆಗಸ್ಟ್ 2009. Retrieved 17 August 2009.
  111. http://kissonline.com/tour/
  112. http://www.nme.com/news/eminem/45776
  113. Sterdan, Darryl (10 November 2009). "Kiss by the numbers". Winnipeg Sun. Retrieved 11 November 2009.
  114. Oz, Diamond (16 March 2010). "KISS Frontman Paul Stanley Says The Band Is Already Planning Next Studio Album". MetalUnderground.com. Retrieved 16 March 2010.
  115. http://80music.about.com/od/artistskp/p/kissprofile.htm
  116. "ಆರ್ಕೈವ್ ನಕಲು". Archived from the original on 2009-04-26. Retrieved 2010-05-31.
  117. "ಆರ್ಕೈವ್ ನಕಲು". Archived from the original on 2010-01-01. Retrieved 2010-05-31.
  118. "ಆರ್ಕೈವ್ ನಕಲು". Archived from the original on 2009-02-03. Retrieved 2010-05-31.
  119. "ಆರ್ಕೈವ್ ನಕಲು". Archived from the original on 2009-07-29. Retrieved 2010-05-31.
  120. http://www.allmusic.com/cg/amg.dll?p=amg&sql=11:fifoxqe5ldse~T1
  121. "ಆರ್ಕೈವ್ ನಕಲು". Archived from the original on 2013-01-03. Retrieved 2010-05-31.
  122. "ಆರ್ಕೈವ್ ನಕಲು". Archived from the original on 2013-01-03. Retrieved 2010-05-31.
  123. "ಆರ್ಕೈವ್ ನಕಲು". Archived from the original on 2013-01-03. Retrieved 2010-05-31.
  124. "Comedy Central, Chocolate News, "Kiss my ass"". Archived from the original on 13 ಮೇ 2009. Retrieved 14 May 2009.

===Literature===

* Gill, Julian (2005). The Kiss Album Focus, Volume 1 (3rd Edition). Xlibris Corporation. ISBN 1-4134-8547-2. * Gooch, Curt (2002). Kiss Alive Forever: The Complete Touring History. New York: Billboard Books. ISBN 0-8230-8322-5. {{cite book}}: Unknown parameter |coauthors= ignored (|author= suggested) (help) * Leaf, David (2003). Kiss: Behind the Mask: The Official Authorized Biography. New York: Warner Books. ISBN 0-446-53073-5. {{cite book}}: Unknown parameter |coauthors= ignored (|author= suggested) (help) * Lendt, C.K. (1997). Kiss and Sell: The Making of a Supergroup. New York: Billboard Books. ISBN 0-8230-7551-6. * Simmons, Gene (2001). Kiss and Make-Up. New York: Crown. ISBN 0-609-60855-X.

*Gebert, Gordon G.G. and McAdams, Bob (1997). Kiss & Tell. Pitbull Publishing LLC. ISBN 0-9658794-0-2. *Gebert, Gordon G.G. (1999). Kiss & Tell More!. Pitbull Publishing LLC. ISBN 0-9658794-1-0. *Gill, Julian (2005). The Kiss Album Focus (3rd Edition), Volume 2. Xlibris Corporation. ISBN 1-55439-006-0. *Gill, Julian (2005). The Kiss & Related Recordings Focus: Music! the Songs, the Demo, the Lyrics And Stories!. Xlibris Corporation. ISBN 1-55439-006-0. *Gill, Julian (2006). The Kiss Album Focus (3rd Edition), Volume 3. Booksurge Publishing. ISBN 0-14-130220-8. *Lendt, C.K. (1997). Kiss and Sell: The Making of a Supergroup. Billboard Books. ISBN 0-913580-99-6. *Sherman, Dale (1997). Black Diamond: The Unauthorized Biography of Kiss. Collectors Guide Publishing Inc. ISBN 1-896522-35-1. *Simmons, Gene, Paul Stanley, and Waring Abbott (2002). Kiss: The Early Years. Three Rivers Press. ISBN 0-913580-99-6. *Tomarkin, Peggy (1980). Kiss: The Real Story, Authorized. Delacorte Press. ISBN 0-913580-99-6. *Moore, Wendy (2004). Into the Void... With Ace Frehley. Pitbull Publishing LLC. ISBN 0-9658794-4-5. ==External links==