ವಿಷಯಕ್ಕೆ ಹೋಗು

ಕಿಶೋರ್ (ನಟ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಕಿಶೋರ್‌ (ನಟ) ಇಂದ ಪುನರ್ನಿರ್ದೇಶಿತ)
ಕಿಶೋರ್‌

ಕಿಶೋರ್‌ ಕುಮಾರ್‌ ಜಿ. (ನಟ) ಹುಟ್ಟಿದ್ದು : ೧೪ ಆಗಸ್ಟ್‌ ೧೯೭೪ ೨೦೦೪ ರಲ್ಲಿ ಕಂಠಿ ಎಂಬ ಚಲನಚಿತ್ರದ ಮೂಲಕ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡಿದ ಕನ್ನಡದ ಈ ನಟ ಇದೀಗ ತೆಲುಗು, ತಮಿಳು ಮತ್ತು ಮಲಯಾಳಂಗಳಲ್ಲಿ ಪೋಷಕ ನಟರಾಗಿ ಮತ್ತು ನಾಯಕ ನಟರಾಗಿ ಸುಮಾರು ೫೦ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಹೀಗೆ ಹಲವಾರು ಚಿತ್ರಗಳಲ್ಲಿ ನಟಿಸುವ ಮೂಲಕ ಬಹುಭಾಷಾ ನಟರಾಗಿ ಹೆಸರು ಮಾಡಿದ್ದಾರೆ. ಹೀಗೆ ಕನ್ನಡ ಚಿತ್ರರಂಗದಿಂದ ಆರಂಭಿಸಿದ ತಮ್ಮ ನಟನಾ ಪ್ರಯಾಣವನ್ನು ದಕ್ಷಿಣ ಭಾರತದ ಹಲವಾರು ಭಾಷೆಗಳ ಚಿತ್ರರಂಗದವರೆಗೆ ವಿಸ್ತರಿಸಿಕೊಂಡಿರುವ ಅವರು, ಇಂದು ಬಹುಭಾಷಾ ಅಭಿನಯದ ಮೂಲಕ ಅಸಂಖ್ಯಾತ ಅಭಿಮಾನಿಗಳನ್ನು ಗಳಿಸಿದ್ದಾರೆ.

ಅಭಿನಯದಲ್ಲಿ ನಿಷ್ಠೆ ಮತ್ತು ಸರಳತೆಗೆ ಹೆಸರಾದ ಕಿಶೋರ್, ಚಿತ್ರರಂಗದಲ್ಲಿ ಮಿತಭಾಷಿ, ಗಂಭೀರ ವ್ಯಕ್ತಿತ್ವ ಹೊಂದಿರುವ ನಟನೆಂದು ಪರಿಗಣಿಸಲ್ಪಡುತ್ತಾರೆ. ಚಿತ್ರರಂಗದ ಹೊರಗೂ ಅವರು ಸಾಮಾಜಿಕ ವಿಚಾರಗಳಲ್ಲಿ ತೊಡಗಿಸಿಕೊಂಡು ಜನಜಾಗೃತಿ ಮೂಡಿಸುತ್ತಿರುವ ನಟರಾಗಿದ್ದಾರೆ.

ಪ್ರತಿಯೊಂದು ಚಿತ್ರದಲ್ಲಿಯೂ ವಿಭಿನ್ನ ಪಾತ್ರಗಳಲ್ಲಿ ನಟಿಸಿರುವ ಅವರು ತಾಯಿಪಾತ್ರದ ಮಗ, ನಾಯಕನ ಸ್ನೇಹಿತ, ನಕ್ಸಲ್ ನಾಯಕ, ಪೊಲೀಸಾಧಿಕಾರಿ, ರಾಜಕಾರಣಿಯ ಸಹಚರ ಹೀಗೆ ಎಲ್ಲಾ ವಿಧದ ಪಾತ್ರಗಳಲ್ಲಿ ಮೆರೆದಿದ್ದಾರೆ.

ಚಿತ್ರಗಳು

[ಬದಲಾಯಿಸಿ]
ಕ್ರ.ಸಂ. ವರ್ಷ ಚಿತ್ರ ಪಾತ್ರ ಭಾಷೆ Ref.
2004ಕಂಠಿಬೀರಕನ್ನಡ
2005ಆಕಾಶ್‌ಕನ್ನಡ
2005ಡೆಡ್ಲಿ ಸೋಮಕನ್ನಡ
2005ರಾಕ್ಷಸಶಬೀರ್‌ಕನ್ನಡ
2006ಹ್ಯಾಪಿಎಸಿಪಿ ರತ್ನಮ್‌ತೆಲುಗು
2006ಕನ್ನಡದ ಕಂದಕನ್ನಡ
2006ಕಲ್ಲರಳಿ ಹೂವಾಗಿಕನ್ನಡ
2007ಪೊಲ್ಲಾದವನ್‌ಸೆಲ್ವಮ್‌ತಮಿಳು
2007ಗೆಳೆಯಡಾನ್‌ ಬಂಡಾರಿಕನ್ನಡ
೧೦2007ಕ್ಷಣ ಕ್ಷಣಕಿಶೋರ್‌ಕನ್ನಡ
೧೧2007ದುನಿಯಾಕನ್ನಡ
೧೨2008ಗೋಲಿಕನ್ನಡ
೧೩2008ಜಯಮ್‌ಕೊಂಡಾನ್‌'ಗುಣತಮಿಳು
೧೪2008ಸಿಲಂಬಟ್ಟಮ್‌'ದುರೈಸಿಂಗಮ್‌ತಮಿಳು
೧೫2008ಅಕ್ಕ ತಂಗಿಹುಲಿಯಪ್ಪಕನ್ನಡ
೧೬2009ವೆನಿಲಾ ಕಬ್ಬಡಿ ಕುಳುಸೌದ ಮುತ್ತುತಮಿಳು
೧೭2009ಬಿರುಗಾಳಿಇನ್ಸ್‌ಪೆಕ್ಟರ್‌ಕನ್ನಡ
೧೮2009ಧೋರಣೈಗುರುತಮಿಳು
೧೯2009ಮುತಿರೈತಮಿಳು
೨೦2009ಬೀಮ್ಲಿ ಕಬ್ಬಡಿ ಜಟ್ಟುತೆಲುಗು
೨೧2009ಕಬ್ಬಡಿಬೀರೇಶ್‌ಕನ್ನಡ
೨೨2010ಪೊಕ್ಕಳಮ್‌ಕರ್ಮನ್‌ತಮಿಳು
೨೩2010ಭಯಮ್‌ ಆರಿಯಾನ್‌ಮಿತ್ರನ್‌ತಮಿಳು
೨೪2010ವಂಸಮ್‌ರತ್ನಮ್‌ತಮಿಳು
೨೫2010ಹುಲಿಚಂದಪ್ಪ ಹುಲಿಯಕನ್ನಡ
೨೬2011ಕಳ್ಳರ ಸಂತೆಕನ್ನಡ
೨೭2011ಬಿರುಗಾಳಿಕನ್ನಡ
೨೮2011ಅಡುಕಳಂದೊರೈತಮಿಳು
೨೯2011ಮುದಲ್‌ ಇಡಮ್‌ಕರುಪ್ಪು ಬಾಲುತಮಿಳು
೩೦2011ಪರಿಮಳ ತಿರೈಯರಂಗಮ್‌ತಮಿಳು
೩೧20119 To 12ಮುನ್ನಕನ್ನಡ
೩೨2012ಭಾಗೀರತಿಮಾಧವರಾಯಕನ್ನಡ
೩೩2012ದಮ್ಮುತೆಲುಗು
೩೪2012ತಿರುವಂಬಾಡಿ ತಂಬನ್‌ಶಕ್ತಿವೇಲ್‌ಮಲಯಾಳಂ
೩೫2012ಕೃಷ್ಣಂ ವಂದೇ ಜಗದ್ಗುರುಂತೆಲುಗು
೩೬2013ಅಟ್ಟಹಾಸವೀರಪ್ಪನ್‌ಕನ್ನಡ
೩೭2013ಹರಿದಾಸ್‌ಸಿವದಾಸ್‌ತಮಿಳು
೩೮2013ದಳಮ್‌ಶತ್ರುವುತೆಲುಗು
೩೯2013ಪೊನ್‌ಮಾಲೈ ಪೊಳುದುತಮಿಳು
೪೦2013ಜಟ್ಟಜಟ್ಟಕನ್ನಡ
೪೧2013ಆರಂಭಮ್‌ಪ್ರಕಾಶ್‌ತಮಿಳು
೪೨2014ಉಳಿದವರು ಕಂಡಂತೆಮುನ್ನಕನ್ನಡ
೪೩2014ರೌಡಿಭೂಷಣ್‌ತೆಲುಗು
೪೪2014ಚಂದಾಮಾಮ ಕಾತುಲುಸಾರಥಿತೆಲುಗು
೪೫2015ತಿಲಗರ್‌ಭೋಸ್‌ ಪಾಂಡಿಯನ್‌ತಮಿಳು
೪೬2015ಯಟ್ಚಾನ್‌ತಮಿಳು
೪೭2015ಅಚ್ಚಾ ದಿನ್‌ಅಂತೋನಿ ಇಸಾಕ್‌ಮಲಯಾಳಂ
೪೮2015ವಾಸ್ಕೊಡಿಗಾಮವಾಸು ಡಿ. ಗಮನಹಳ್ಳಿಕನ್ನಡ
೪೯2015ತೂಂಗಾವನಂದ್ರವ್ಯಂತಮಿಳು
೫೦2015ಆಕ್ಟೋಪಸ್‌ಕನ್ನಡ