ಕಾ. ತ. ಚಿಕ್ಕಣ್ಣ
ಗೋಚರ
ಕಾ. ತ. ಚಿಕ್ಕಣ್ಣ | |
---|---|
ಜನನ | ೩೦ ಮೇ, ೧೯೫೨ ಕಾಳಮ್ಮನ ಕೊಪ್ಪಲು ತಾಲ್ಲೂಕು, ಮೈಸೂರು ಜಿಲ್ಲೆ |
ಕಾವ್ಯನಾಮ | ಕಾತಚಿ |
ವೃತ್ತಿ | ಲೇಖಕ |
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆ | ಮೈಸೂರು ವಿಶ್ವವಿದ್ಯಾನಿಲಯ |
ಕಾಲ | ೨೧ನೆಯ ಶತಮಾನ |
ಪ್ರಕಾರ/ಶೈಲಿ | ಸಣ್ಣಕತೆ, ಕವಿತೆ, ಕಾದಂಬರಿ, ನಾಟಕ, ವಿಮರ್ಶೆ, |
ವಿಷಯ | ಸಂಸ್ಕೃತಿ |
ಸಾಹಿತ್ಯ ಚಳುವಳಿ | ಸಮಾಜವಾದ |
ಪ್ರಮುಖ ಪ್ರಶಸ್ತಿ(ಗಳು) | ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪುರಸ್ಕಾರ ಪ್ರಶಸ್ತಿ |
ಪ್ರಭಾವಗಳು |
ಕಾ.ತ.ಚಿಕ್ಕಣ್ಣರವರು ಸಾಹಿತಿ. ಕರ್ನಾಟಕ ಸರಕಾರದಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದವರು. ಬೆಂಗಳೂರಿನ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಮನ್ವಯಾಧಿಕಾರಿಯಾಗಿದ್ದರು. [೧]
ಬಾಲ್ಯ
[ಬದಲಾಯಿಸಿ]ಹುಟ್ಟೂರು ಕಾಳಮ್ಮನ ಕೊಪ್ಪಲು, ಮೈಸೂರು ಜಿಲ್ಲೆ. ತಂದೆ ತಮ್ಮೇ ಗೌಡ, ತಾಯಿ ಚೆನ್ನಮ್ಮ.
ವಿದ್ಯಾಬ್ಯಾಸ
[ಬದಲಾಯಿಸಿ]ಕಾಳಮ್ಮನ ಕೊಪ್ಪಲು ಹೈಸ್ಕೂಲ್ ಹರದಹಳ್ಳಿ. ಪಿಯುಸಿ ಸಾಲಿಗ್ರಾಮ. ಪದವಿ ಮಹಾರಾಜ ಕಾಲೇಜು ಮೈಸೂರು, ಸ್ನಾತಕೊತ್ತರ ಪದವಿ ಮೈಸೂರು ವಿಶ್ವವಿದ್ಯಾನಿಲಯ.
ಸೇವೆ
[ಬದಲಾಯಿಸಿ]ಭಾಷಾಂತರಕಾರನಾಗಿ ಸರ್ಕಾರಿ ಸೇವೆ ಪ್ರಾರಂಭ, ಕನ್ನಡ ಸಂಸ್ಕೃತಿ ಇಲಾಖೆಯ ಪ್ರಭಾರಿ ನಿದೇರ್ಶಕರಾಗಿ ಸೇವೆ ಸಲ್ಲಿಸಿದ್ದಾರೆ.
ಸಾಹಿತ್ಯ ಸೇವೆ
[ಬದಲಾಯಿಸಿ]ಕಥಾ ಸಂಕಲನ
[ಬದಲಾಯಿಸಿ]- ಬಿಳಲು ಬಿಟ್ಟ ಬದುಕು,
- ಒಡಲುರಿ ,
- ವಾಸನಾಮಯ ಬದುಕಿನ ಆಚೆ-ಈಚೆ,
- ಮನಸು ಮುಗಿಲು,
- ಅಗಾಂತರ, ಕಂಡೇರಿ,
- ಮೋಡ ನೆರಳ ನಿರಾಳ,
- ಕಾತಚಿ ಕಥಾರಂಗ[೨]
ಕಾದಂಬರಿ
[ಬದಲಾಯಿಸಿ]- ಮುಂಜಾವು(1989),
- ದಂಡೆ(1999).
ನಾಟಕ
[ಬದಲಾಯಿಸಿ]- ವಧೂಟಿ(1997),
- ಚದುರಂಗ(2012).
ಪ್ರಬಂಧ ಸಂಕಲನ
[ಬದಲಾಯಿಸಿ]- ಬಳ್ಳಿಸಾಲು(1996) ,
- ಉಕ್ಕೆ ಸಾಲು(2010)
ಕವನ ಸಂಕಲನ
[ಬದಲಾಯಿಸಿ]- ಗೋಚಲು (1997),
- ಮೆಕ್ಕೆ ಒಕ್ಕಲು(2010)
ಬಾಲ ಸಾಹಿತ್ಯ
[ಬದಲಾಯಿಸಿ]ಕನಕದಾಸರು,(1982)
ಸಂಪಾದನೆ
[ಬದಲಾಯಿಸಿ]- ಕನಕ ಕಿರಣ,
- ಪ್ರೈಸ್ಲೆಸ್ ಗೋಲ್ಡ್,
- ಭಾರತಿ ಪ್ರಿಯ,
- ನಯಸೇನ,
- ಹೊನ್ನಾರು,
- ಸಂಗೋಳ್ಳಿ ರಾಯಣ್ಣ,
- ದಿನಮಾನ,
- ಕನಕೋದು,
- ಕನಕಭಾರತಿ,[೩]
- ಮುತ್ತು ಬಂದಿದೆ ಕೇರಿಗೆ,
- ಮೈತ್ರಿ,
- ಸಂಯುಕ್ತ,
- ಸಂಪದ,
- ಸ್ವರ್ಣ ಸಂಚಯ.
ನಿಯತಕಾಲಿಕೆ ಸಂಪಾದನೆ
[ಬದಲಾಯಿಸಿ]- ಕನ್ನಡ ಸಂಸ್ಕಂತಿ ವಾರ್ತೆ.
- ಕನಕಸ್ಪೂರ್ತಿ.
ಪ್ರಧಾನ ಸಂಪಾದನೆ
[ಬದಲಾಯಿಸಿ]- ಕಾಳಿದಾಸ,
- ಕೋಳೂರುಮಲ್ಲಪ್ಪ,
- ಡಾ.ಆರ್.ನಾಗಮಗೌಡ,
- ಟಿ.ಮರಿಗಪ್ಪ,
- ಸಂತಕವಿ ಕನಕದಾಸರು,
- ಅರಿವಿನ ಅಡಿಗೆ,
- ಕನಕ ಮರುದರ್ಶನ,
- ಕನಕ ತರಂಗಿಣಿ,
- ಕನಕದಾಸರ ಕೃತಿಗಳ ಸಂಪಾದನೆಯ ಸಾಂಸ್ಕಂತಿಕ ರಾಜಾಕಾರಣ,
- ಜನಪದ ಲೋಕದೃಷ್ಟಿಯ ಮೂಲಕ ಕನಕಸಾಹಿತ್ಯ ಅಧ್ಯಯನ,
- ಕನಕದಾಸರ ಕಾವ್ಯ ಮತ್ತು ಸಂಗೀತ,
- ಕನಕ ಓದು,
- ಬಯಲು ಆಲಯದೊಳಗೊ,
- ಕನಕಲೋಕ.
ಕಾ.ತ.ಚಿ. ಕೃತಿಗಳ ಕುರಿತ ವಿಮರ್ಶಾ ಕೃತಿಗಳು
[ಬದಲಾಯಿಸಿ]- ಸೊಲ್ಲೆತ್ತಿ,
- ನೀರೋಳಗಣ ಬೆಳಕು,
- ಹೊತ್ತಿಗೆ
ದೃಶ್ಯರೂಪಕಗಳು
[ಬದಲಾಯಿಸಿ]ಕತೆಗಳು
[ಬದಲಾಯಿಸಿ]- ಒಡಲುರಿ,
- ಹುಚ್ಚೇರಿಯ ಎಸರಿನ ಪ್ರಸಂಗ,
- ದಾವರ,
- ಆಯಾಮ,
- ಕೊಂಡಿ ಮೂಳ್ಳುಗಳು,
- ಸಂತೆಮಾಳದ ಹಾದಿಗುಂಟ
ಕಥಾರಂಗ
[ಬದಲಾಯಿಸಿ]ನಾಟಕ
[ಬದಲಾಯಿಸಿ]- ಸತ್ಯವತಿ,
- ಕಟ್ಟುಗಳು,
- ವಂಶಸ್ಥರು,
- ಗಂಟಾದ ನಂಟು,
- ತಿರಿದುಣ್ಣವ ಜನರ ನಡುವೆ,
- ವಾಸನಾಮಯ ಬದುಕಿನ ಆಚೆ-ಈಚೆ,
- ಗದ್ದೆಗಮ್ಮ,
- ಹುಚ್ಚೀರಿಯ ಎಸರಿನ ಪ್ರಸಂಗ.
ದೂರದರ್ಶನದ ದಾರವಾಹಿಗಳು
[ಬದಲಾಯಿಸಿ]- ದಾವರ,
- ಆಯಾಮ,
- ಕಿವಿಮೇಲಿನ ಕೂದಲು,
- ಮುಂಗಾರು ಮಳೆಯ ಸಂಜೆ.
ದ್ವನಿಸುರುಳಿ
[ಬದಲಾಯಿಸಿ]- ಬೆಳ್ಳಕ್ಕಿ[೪] ಸಾಲು,
- ಕನಸು ಚೆಲ್ಲಾವೆ,
- ಇದೇನೆ ಸಖಿ.
ರಂಗ ನಿರ್ದೇಶನ
[ಬದಲಾಯಿಸಿ]- ಪಂಪಕಾವ್ಯ ವೈಭವ,
- ಮಾಯಾಲಾಸ್ಯ,
- ಮುತ್ತು ಬಂದಿದೆ ಕೇರಿಗೆ,
- ಬೆಳ್ಳಕ್ಕಿ ಸಾಲು,
- ಸಂತಕವಿ ಕನಕದಾಸರು,
- ತಲ್ಲಣಿಸದಿರು ಮನವೆ,
- ಕನಕ ಕಾವ್ಯ ವೈಭವ
ಪ್ರಶಸ್ತಿ
[ಬದಲಾಯಿಸಿ]- ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪುರಸ್ಕಾರ.
- ವರ್ಧಮಾನ ಪುರಸ್ಕಾರ,
- ಆರ್ಯಭಟ ಪುರಸ್ಕಾರ,
- ವೀಚಿ ಸಾಹಿತ್ಯ ಪುಸ್ತಕ ಪುರಸ್ಕಾರ,
- ವಿಶ್ವಕಮ್ಮಟ ಚೇತನ ಪ್ರಶಸ್ತಿ (2012),
- ಕನಕರತ್ನ ಪ್ರಶಸ್ತಿ(2012),
- ಕನಕಶ್ರೀ ಪ್ರಶಸ್ತಿ(2012),
- ಡಾ.ಹೆಚ್.ಡಿ. ಚೌಡಯ್ಯ ಸಾಹಿತ್ಯ ಪ್ರಶಸ್ತಿ(2014),
- ಕನ್ನಡ ಸಾಹಿತ್ಯ ಪರಿಷತ್ತು ಶತಮಾನೋತ್ಸವ ಗೌರವ ಪುರಸ್ಕಾರ(2014),
- ಕನ್ನಡ ತಮಿಳು ಸೌಹಾರ್ದ ಪ್ರಶಸ್ತಿ(2015),
- ಸಂಸ್ಕಂತಿ ದಾಮ ಸುವರ್ಣ ಶ್ರೀ ಪ್ರಶಸ್ತಿ(2016),
- ಇತರೆ ಸಾಂಸ್ಕಂತಿಕ ಸಂಘ ಸಂಸ್ಥೆಗಳಿಂದ ಗೌರವ.
ಆಡಳಿತ
[ಬದಲಾಯಿಸಿ]- ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತ,
- ಭಾಷಾಂತರ ಸರಲೀಕರಣ ಸಮಿತಿ ಸದಸ್ಯ.
- ರಾಜ್ಯದ ವಿವಿಧ ಸಮಿತಿಯಲ್ಲಿ ಅಧ್ಯಕ್ಷ, ಸದಸ್ಯ,
- ಅನೇಕ ಹುದ್ದೆಗಳನ್ನು ನಿರ್ವಹಿಸಿದ್ದಾರೆ.
- ಪ್ರಸ್ತುತ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಬೆಂಗಳೂರು ಸಮನ್ವಯಾಧಿಕಾರಿ.
ಉಲ್ಲೇಖ
[ಬದಲಾಯಿಸಿ]