ಕಾಂತಪುರಂ ಎ ಪಿ ಅಬೂಬಕ್ಕರ್ ಮುಸ್ಲಿಯಾರ್

ವಿಕಿಪೀಡಿಯ ಇಂದ
Jump to navigation Jump to search

ಕಾಂತಪುರಂ ಎ ಪಿ ಅಬೂಬಕ್ಕರ್ ಮುಸ್ಲಿಯಾರ್[ಬದಲಾಯಿಸಿ]

ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್[೧] ಇವರನ್ನು ಶೈಖ್ ಅಬೂಬಕ್ಕರ್ ಅಹ್ಮದ್, ಎ.ಪಿ ಉಸ್ತಾದ್ ಎಂಬ ಹೆಸರುಗಳಿಂದ ಕರೆಯುತ್ತಾರೆ. ಇವರು ಭಾರತದ ಎ. ಪಿ ಪಂಗಡ ಸುನ್ನಿಮುಸ್ಲಿಂ ಮುಖಂಡರಾಗಿದ್ದಾರೆ. ಭಾರತದ ಗ್ರಾಂಡ್ ಮುಫ್ತಿ ಎಂದು ಅನುಯಾಯಿಗಳಿಂದ ಕರೆಯಲ್ಪಡುತ್ತದೆ. (ಭಾರತೀಯ ಎ.ಪಿ ಸುನ್ನೀ ಮುಸ್ಲಿಮರ ಪರಮೋನ್ನತ ನಾಯಕ) ಅಖಿಲ ಭಾರತ ಮುಸ್ಲಿಂ ವಿದ್ವಾಂಸರ ಸಂಘದ ಪ್ರಧಾನ ಕಾರ್ಯದರ್ಶಿ (ಅಖಿಲ ಭಾರತ ಸುನ್ನಿ ಜಂ-ಇಯ್ಯತುಲ್ ಉಲಮಾ) ಸುನ್ನಿ ಯುವಜನ ಸಂಘ (ಎಸ್.ವೈ.ಎಸ್) ಮತ್ತು ಸುನ್ನೀ ಸ್ಟೂಡೆಂಟ್ ಫೆಡರೇಶನ್ (ಎಸ್.ಎಸ್.ಎಫ್) ಇದರ ನಿರ್ದೇಕರು. ಎರಡು ಸಾವಿರದಷ್ಟು ಮದ್ರಸಗಳಿಗೆ ನೇತೃತ್ವ ನೀಡುವ ಇಸ್ಲಾಮಿಕ್ ಎಜುಕೇಷನಲ್ ಬೋರ್ಡ್ ಆಫ್ ಇಂಡಿಯಾದ ಕೋಶಾಧಿಕಾರಿ ಹಾಗೂ ಕೇರಳದ ಕೋಯಿಕ್ಕೋಡಿನ ಕಾರಂದೂರಿನಲ್ಲಿರುವ ಮರ್ಕಝ್[೨] ವಿಶ್ವವಿದ್ಯಾನಿಲಯದ ಸ್ಥಾಪಕರು ಮತ್ತು ಕುಲಪತಿಯಾಗಿದ್ದಾರೆ.

ವೈಯುಕ್ತಿಕ ಮಾಹಿತಿ[ಬದಲಾಯಿಸಿ]

ಕಾಂತಪುರಂ ಎಪಿ ಅಬೂಬಕ್ಕರ್ ಮುಸ್ಲಿಯಾರ್[೩] ಕೇರಳ ರಾಜ್ಯದ ಕೋಝಿಕ್ಕೋಡ್ ಜಿಲ್ಲೆಯ ಕಾಂತಪುರಂ ಎಂಬಲ್ಲಿ 22 ಮಾರ್ಚ್ 1939ರಲ್ಲಿ ಜನಿಸಿದರು. ಇವರ ಪತ್ನಿ ಝೈನಬ. ಮಗ ಡಾ.ಎಪಿ ಅಬ್ದುಲ್ ಹಕೀಮ್ ಅಝ್ಹರಿ. ತಾಯಿಯ ಕುನ್ಹೀಮ ಹಜ್ಜುಮ್ಮ. ತಂದೆ ಮೌತರಯಿಲ್ ಅಹ್ಮದ್ ಹಾಜಿ. ತಮಿಳುನಾಡಿನ ವೆಲ್ಲೂರಿನ ಬಾಕಿಯಾತು ಸ್ವಾಲಿಯಾತು ಕಾಲೇಜಿನಿಂದ ಇಸ್ಲಾಮಿಕ್ ಅಧ್ಯಯನದಲ್ಲಿ ಇವರು ಬಾಖವಿ ಬಿರುದನ್ನು ಪಡೆದಿದ್ದಾರೆ.

ಶೈಕ್ಷಣಿಕ ಸೇವೆ[ಬದಲಾಯಿಸಿ]

ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ಮರ್ಕಝ್[೪] ವಿಶ್ವವಿದ್ಯಾನಿಯ ಕೇಂದ್ರವಾಗಿಟ್ಟುಕೊಂಡು ದೇಶ-ವಿದೇಶಗಳಲ್ಲಿ ಶೈಕ್ಷಣಿಕ ಸೇವೆಯನ್ನು ಮಾಡುತ್ತಿದ್ದಾರೆ. ಮರ್ಕಝ್ ನಾಲೆಡ್ಜ್ ಸಿಟಿ[೫], ಮರ್ಕಝ್ ಯುನಾನಿ ವೈದ್ಯಕೀಯ ಕಾಲೇಜು, ಮರ್ಕಝ್ ಕಾನೂನು ಮಹಾ ವಿದ್ಯಾಲಯ ಇವರ ಪ್ರಮುಖ ಸಂಸ್ಥೆಗಳು. ದೇಶ-ವಿದೇಶಗಳ ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ಉನ್ನತ ಶಿಕ್ಷಣ ಮತ್ತು ಸಂಶೋಧನೆಯೊಂದಿಗೆ ತೊಡಗಿಸಿಕೊಂಡಿದ್ದಾರೆ.

ಧಾರ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಕಾರ್ಯಾಚರಣೆಗಳು[ಬದಲಾಯಿಸಿ]

ಕಾಂತಪುರಂ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಕೇರಳಮುಸಲ್ಮಾನರ ಪ್ರಭಾವಿ ನಾಯಕ. ಅವರು ದೇಶ ಮತ್ತು ವಿದೇಶಗಳಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ. ಕೇರಳದ ಕೋಯಿಕ್ಕೋಡಿನ ಕಾರಂದೂರ್ ಮರ್ಕಝ್ ಸಂಸ್ಥೆಯನ್ನು ಎಪಿ ಅಬೂಬಕ್ಕರ್ ಮುಸ್ಲಿಯಾರ್ ಸ್ಥಾಪಿಸಿದ್ದಾರೆ. ಮರ್ಕಝ್ ಸಂಸ್ಥೆಯಲ್ಲಿ 2,000 ವಿದ್ಯಾರ್ಥಿಗಳು ವ್ಯಾಸಂಗ ಮಾಡುತಿದ್ದಾರೆ. ಮರ್ಕಝ್ ಅಧೀನದಲ್ಲಿ ದೇಶದ ಪ್ರಮುಖ ರಾಜ್ಯಗಳಾದ ಕೇರಳ, ಕರ್ನಾಟಕ, ತಮಿಳುನಾಡು, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಗುಜರಾತ್, ಮಧ್ಯಪ್ರದೇಶ, ಉತ್ತರಾಖಂಡ್, ಜಮ್ಮು ಮತ್ತು ಕಾಶ್ಮೀರ, ಮಣಿಪುರ ಮತ್ತು ಅರಬ್ ಸಂಯುಕ್ತ ಸಂಸ್ಥಾನದ ದುಬೈನಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆದಿದ್ದಾರೆ. ಮರ್ಕಝ್ ಅಧೀನದಲ್ಲಿ ಮರ್ಕಝ್ ಯುನಾನಿ ಮೆಡಿಕಲ್ ಕಾಲೇಜು[೬] (ಕೇರಳದ ಪ್ರಥಮ ಯುನಾನಿ ಮೆಡಿಕಲ್ ಕಾಲೇಜು) ಮರ್ಕಝ್ ಕಾನೂನು ಮಹಾ ವಿದ್ಯಾಲಯ ಕಾರ್ಯಾಚರಿಸುತ್ತಿದೆ. ಮರ್ಕಝ್ ಕಲ್ಯಾಣ ಸೇವೆಗಳಿಗೂ ಒತ್ತು ನೀಡುತ್ತಿದೆ. ವಿವಿಧ ರೀತಿಯಲ್ಲಿ ಜನರಿಗೆ ಸೇವೆಯನ್ನು ಒದಗಿಸುತ್ತದೆ. ಉನ್ನತ ಅಧ್ಯಯನಗಳಿಗಾಗಿ ಬಡ ವಿದ್ಯಾರ್ಥಿಗಳಿಗೆ ಮರ್ಕಝ್ ಆರ್ಥಿಕ ಸಹಾಯವನ್ನು ಒದಗಿಸುತ್ತದೆ. ದೇಶದಲ್ಲಿ ಮತ್ತು ವಿದೇಶದಲ್ಲಿ ಅಧ್ಯಯನ ಮಾಡಲು ಆಸಕ್ತರಾಗಿರುವ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಸಂಸ್ಥೆಯಲ್ಲಿ ವಿಶೇಷ ನಿಧಿಯನ್ನು ಸ್ಥಾಪಿಸಲಾಗಿದೆ. ಉನ್ನತ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಈಜಿಪ್ಟ್, ರಷ್ಯಾ ರಾಷ್ಟ್ರಗಳ ಉನ್ನತ ವಿಶ್ವವಿದ್ಯಾನಿಲಯಗಳಲ್ಲಿ ಶಿಕ್ಷಣವನ್ನು ಮುಂದುವರೆಸಲು ಮರ್ಕಝ್ ಧನ ಸಹಾಯವನ್ನು ಒದಗಿಸುತ್ತದೆ. ಕೇರಳ ಮತ್ತು ಇತರ ರಾಜ್ಯಗಳಲ್ಲಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮರ್ಕಝ್ ಪ್ರಾಯೋಜಕತ್ವದಲ್ಲಿ ಶಿಕ್ಷಣದ ವ್ಯವಸ್ಥೆಯನ್ನು ಮಾಡಲಾಗಿದೆ. ಕರ್ನಾಟಕ, ಉತ್ತರಪ್ರದೇಶ ಮತ್ತು ದೆಹಲಿಯಲ್ಲಿ ಮರ್ಕಝ್ ವಿಶೇಷ ಸೇವಾ ಕೇಂದ್ರಗಳನ್ನು ತೆರೆದಿದೆ. ಇಸ್ಲಾಮಿಕ್ ಅಧ್ಯಯನದಲ್ಲಿ ಮರ್ಕಝ್ ಉನ್ನತ ವಿದ್ಯಾಭ್ಯಾಸವನ್ನು ನೀಡುತ್ತಿದೆ. ಮೌಲವೀ ಫಾಝಿಲ್ ಸಖಾಫಿ ಮತ್ತು ಮೌಲವೀ ಫಾಝಿಲ್ ಖಾಮಿಲ್ ಸಖಾಫಿ ಎಂಬ ಬಿರುದನ್ನು ನೀಡುತ್ತಿದೆ. ಇದು ಇಸ್ಲಾಮಿಕ್ ಅಧ್ಯಯನದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಮರ್ಕಝ್ ಅಧೀನದಲ್ಲಿ ಇಸ್ಲಾಮಿಕ್ ಧಾರ್ಮಿಕ ಪದವಿಯನ್ನು ಪಡೆದ ಸುಮಾರು 15,000ದಷ್ಟು ಧಾರ್ಮಿಕ ವಿದ್ವಾಂಸರು ಜಗತ್ತಿನ ವಿವಿಧ ರಾಷ್ಟ್ರಗಳಾದ ಆಫ್ರಿಕಾ, ಯುಕೆ, ನ್ಯೂಜಿಲೆಂಡ್, ಸೌದಿ ಅರೇಬಿಯಾ, ಈಜಿಫ್ಟ್ ಮುಂತಾದ ಕಡೆಗಳಲ್ಲಿ ಸೇವೆಯಲ್ಲಿ ನಿರತರಾಗಿದ್ದಾರೆ. ಉದ್ದೇಶಿತ ಮರ್ಕಝ್ ನಾಲೆಡ್ಜ್ ಸಿಟಿ ಅಥವಾ ಜ್ಞಾನ ನಗರ ಕೇರಳದ ಕೋಝಿಕೋಡಿನಲ್ಲಿರುವ ಮರ್ಕಝ್ ವಿಶ್ವವಿದ್ಯಾನಿಲಯದ ಒಂದು ಯೋಜನೆಯಾಗಿದೆ. ಯೋಜನಾ ಅಡಿಪಾಯವನ್ನು ಡಿಸೆಂಬರ್ 24, 2012 ರಂದು ಸಮಸ್ತ ಕೇರಳ ಸುನ್ನಿ ಜಂ-ಇಯತುಲ್ ಉಲಮಾ ಅಧ್ಯಕ್ಷರಾಗಿದ್ದ ತಾಜುಲ್ ಉಲಮಾ ಅಸ್ಸಯ್ಯದ್ ಅಬ್ದುರ್ರಹ್ಮಾನ್ ಅಲ್ ಬುಖಾರಿ ತಂಙಳ್ ಹಾಕಿದರು. ಯೋಜನೆಯ ವೆಚ್ಚವು 10 ಮಿಲಿಯನ್ ಎಂದು ಅಂದಾಜಿಸಲಾಗಿದೆ. ಇದಕ್ಕಾಗಿ 40 ಕೋಟಿ ಎಂದು ಅಂದಾಜಿಸಿ ದೇಶ ವಿದೇಶಗಳಿಂದ ವ್ಯಾಪಕವಾಗಿ ಹಣ ಸಂಗ್ರಹಿಸಲಾಗಿತ್ತು.

ಶಅರೇ ಮುಬಾರಕ್ ಗ್ರ್ಯಾಂಡ್ ಮಸ್ಜಿದ್[ಬದಲಾಯಿಸಿ]

ಶಅರೇ ಮುಬಾರಕ್ ಮಸೀದಿ[೭] ಅಥವಾ ಶಅರೇ ಮುಬಾರಕ್ ಗ್ರ್ಯಾಂಡ್ ಮಸ್ಜಿದ್. ಕೇರಳ ರಾಜ್ಯದ ಕ್ಯಾಲಿಕಟ್‍ನಲ್ಲಿ ಮರ್ಕಝ್ ಅಧೀನದಲ್ಲಿ ಕಾಂತಪುರಂ ಎಪಿ ಅಬೂಬಕ್ಕರ್ ಅಹ್ಮದ್ ಅವರು ಪ್ರಸ್ತಾಪಿಸಿದ ಮಸೀದಿಯಾಗಿದೆ. 12ಎಕರೆ ಭೂಮಿಯಲ್ಲಿ ನಾಲೆಡ್ಜ್ ಸಿಟಿ ಜೊತೆಗೆ ಇದನ್ನು ಪ್ರಸ್ತಾಪಿಸಲಾಗಿದೆ. ಸುಮಾರು 40 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಮಸೀದಿಯು ಭಾರತದ ಅತ್ಯಂತ ದೊಡ್ಡ ಮಸೀದಿಯಾಗಲಿದೆ. ಈ ಮಸೀದಿಯಲ್ಲಿ ಸುಮಾರು 25000 ಜನರು ಒಂದೇ ಸಮಯಕ್ಕೆ ನಮಾಝ್ ಮಾಡಬಹುದಾಗಿದೆ. ಮೊಘಲ್ ವಾಸ್ತುಶೈಲಿಯಲ್ಲಿ ಮಸೀದಿಯು ನಿರ್ಮಾಣಗೊಳ್ಳುತ್ತಿದೆ. ಮತ್ತು ಹಸಿರು ಕಟ್ಟಡದ ಪರಿಕಲ್ಪನೆಯನ್ನು ಅನುಸರಿಸಲಾಗುತ್ತಿದೆ. ವಿಶಾಲವಾದ ಪ್ರಾರ್ಥನಾ ಸಭಾಂಗಣದ ಜೊತೆಗೆ ಸೆಮಿನಾರ್ ಮತ್ತು ಇತರ ಕಾರ್ಯಕ್ರಮಗಳನ್ನು ಆಯೋಜಿಸಲು ವಿಶಾಲವಾದ ಸಭಾಂಗಣವನ್ನು ಹೊಂದಿದೆ. ಒಂದೇ ಸಮಯಕ್ಕೆ 1000 ಕ್ಕಿಂತಲೂ ಹೆಚ್ಚಿನ ಜನರಿಗೆ ಉಪಯೋಗಿಸಲು ಸಾಧ್ಯವಾಗುವ ಸ್ಥಳಾವಕಾಶವನ್ನು ಹೊಂದಿರುವ ದೊಡ್ಡ ಗ್ರಂಥಾಲಯ ಮತ್ತು ಇತರ ಸೌಲಭ್ಯಗಳು ಶಅರೇ ಮುಬಾರಕ್ ಮಸೀದಿಯಲ್ಲಿ ಇರಲಿದೆ. ಮಸೀದಿ ಕಟ್ಟಡವು ಎಂಟು ಎಕರೆಗಳನ್ನು ಒಳಗೊಂಡಿದೆ ಮತ್ತು ನಾಲ್ಕು ಎಕರೆ ಹಸಿರು ಬೆಲ್ಟ್ ಮತ್ತುತೋಟದಿಂದ ಸುತ್ತುವರಿದಿದೆ. ಶಅರೇ ಮುಬಾರಕ್ ಮಸೀದಿಯು ಮರ್ಕಝ್ ವಿದ್ಯಾಸಂಸ್ಥೆಯಲ್ಲಿರುವ ಪ್ರವಾದಿ ಮುಹಮ್ಮದರ ಕೇಶವೆಂದು ಆಧಾರ ರಹಿತವಾಗಿ ವಾದಿಸುವ ಕೇಶವನ್ನು ಸಂರಕ್ಷಿಸಿಡುವ ಸಲುವಾಗಿ ನಿರ್ಮಾಣವಾಗುತ್ತಿದೆ.

ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ರಚಿಸಿದ ಕೃತಿಗಳು[ಬದಲಾಯಿಸಿ]

ಅರಬಿಕ್ ಕೃತಿಗಳು[ಬದಲಾಯಿಸಿ]

• ಇಸ್ಮತುಲ್ ಅಂಬಿಯಾ • ಅಸ್ಸಿಯಾಸತುಲ್ ಇಸ್ಲಾಮಿಯ್ಯಾ • ಅಲ್-ವಹದತುಲ್ ಇಸ್ಲಾಮಿಯ್ಯಾ • ಅಲ್-ಇತಿಬಾಹು ವಲ್-ಇಬತಿದಾಹು • ರಿಯಾಲಹುತ್ತ್ವಾಲಿಬೀನ್ • ಇದ್ಹಾರುಲ್ ಫರ್ರ್ಹಾ ವಸುರ್ರೂರ್ ಬಿ ಮೀಲಾದಿನ್ನಬಿಯ್ಯಿ ಮಬ್ರೂರ್ • ಅಲ್-ಮೌಲಿದು ರವಿಯ್ಯ್ • ದಹ್‍ದೀಮುಲ್ ಅಖಾಬಿರ್ ವಹತಿರಾಮು ಶಾಹಿರ್ • ಫೈದಾನುಲ್ ಮುಸಾಲಾತ್ ಫೀ ಬಯಾನಿ ಇಜಾಝತ್ ಅಲ್-ಮತದಾವಿಲಿಯ್ಯಾ • ತರ್ಕೀಕತು ತಸವ್ವುಫ್ • ಅಲ್-ಬರಾಹಿನುಲ್ ಕ್ವತಿಯ್ಯಾ ಫಿರ್ ರಾದ್ದಿ ಅಲಲ್ ಖ್ವಾದಿಯಾನಿಯ್ಯಾ • ಅದೀಲತು ಸಲಾಲತಿ ತರಾವೀಹ್ • ಇಯಾಸುತ್ತವಾಬಿಲ್ ಇಂಕಾಝಿಲ್ ಮಿನ್ ಅಲ್ ಇಕಾಬ್

ಇಂಗ್ಲಿಷ್ ಕೃತಿಗಳು[ಬದಲಾಯಿಸಿ]

• ತಾಟ್ಸ್ ಆಫ್ ಮುಸ್ಲಿಂ ವರ್ಲ್ • ಆನ್ ಇಂಟ್ರಡಕ್ಷನ್ ಟು ದಿ ಸ್ಡಡೀ ಆಫ್ ಇಸ್ಲಾಂ • ದಿ ಹಜ್ಜ್ • ದಿ ಅಮೇರಿಕನ್ ಡೈರಿ • ದಿ ಹೋಲಿ ಪ್ರೊಫೆಟ್ಸ್ • ಕಾಂಗ್ರೆಗೇಶನಲ್ ಪ್ರೆಯರ್ ಇನ್ ಇಸ್ಲಾಂ • ಉಮೆನ್ ಅಂಡ್ ಫ್ರೈಡೇ ಪ್ರೆಯರ್ • ತರೀಕತ್- ಅ ಸ್ಟಡೀ

ಗೌರವಗಳು, ಪ್ರಶಸ್ತಿಗಳು ಮತ್ತು ಅಂತರಾಷ್ಟ್ರೀಯ ಮನ್ನಣೆ[ಬದಲಾಯಿಸಿ]

ಇಸ್ಲಾಮಿಕ್ ಪರಂಪರೆ ಮತ್ತು ಸಂಸ್ಕøತಿಯ ಸಂರಕ್ಷಣೆಯ ಸೇವೆಗಾಗಿ ಜಿದ್ದಾ ಮೂಲದ ಇಸ್ಲಾಮಿಕ್ ಪಾರಂಪರಿಕ ಸಂಸ್ಥೆ 2008 ಜನವರಿಯಲ್ಲಿ ಇಸ್ಲಾಮಿಕ್ ಪಾರಂಪರಿಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಜೋರ್ಡಾನಿನ ಓಐಸಿ ಟುಡೇ ಸಂಸ್ಥೆಯು 2016ರಲ್ಲಿ “ಜ್ಯುವೆಲ್ ಆಫ್ ಮುಸ್ಲಿಂ ವರ್ಲ್ ಬಿಝ್” ಪ್ರಶಸ್ತಿಯನ್ನು ನೀಡಿದೆ.

ಜೋರ್ಡಾನಿನ ಪ್ರತಿಷ್ಠಿತ “ರೋಯಲ್ ಇಸ್ಲಾಮಿಕ್ ಸ್ಟ್ರಾಟಜಿಕ್ ಸ್ಟಡೀಸ್ ಸೆಂಟರ್” ಪ್ರಕಟಿಸಿದ ವಿಶ್ವದ ಐನೂರು ಪ್ರಭಾವಿ ಮುಸ್ಲಿಂ ನಾಯಕರ ಪಟ್ಟಿಯಲ್ಲಿ ಸ್ಥಾನವನ್ನು ಪಡೆದಿದ್ದಾರೆ.

  1. https://en.wikipedia.org/wiki/Kanthapuram_A.P._Aboobacker_Musliyar
  2. https://www.markaz.in/
  3. https://en.wikipedia.org/wiki/Kanthapuram_A.P._Aboobacker_Musliyar
  4. https://www.markaz.in/
  5. https://en.wikipedia.org/wiki/Markaz_Knowledge_City
  6. http://markazunanimedicalcollege.org/
  7. https://en.wikipedia.org/wiki/Shahre_Mubarak_Grand_Masjid