ವಿಷಯಕ್ಕೆ ಹೋಗು

ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಕಾಂಗೊ ಪ್ರಜಾಸತ್ತಾತ್ಮಕ ಗಣರಾಜ್ಯ ಇಂದ ಪುನರ್ನಿರ್ದೇಶಿತ)
Democratic Republic of the Congo
République démocratique du Congo (French)
Motto: Justice  Paix  Travail
("Justice  Peace  Work")
Anthem: Debout Congolais
("Arise, Congolese")ಟೆಂಪ್ಲೇಟು:Parabr
ರಾಜಧಾನಿ
and ಅತೀದೊಡ್ಡ ನಗರ
Kinshasa
4°19′S 15°19′E / 4.317°S 15.317°E / -4.317; 15.317
ಅಧಿಕೃತ ಭಾಷೆಗಳುFrench
Recognised national languages
ಧರ್ಮ
(2021)[]
Demonym(s)Congolese
ಸರ್ಕಾರUnitary semi-presidential republic
 President
Félix Tshisekedi
Judith Suminwa
ಶಾಸಕಾಂಗParliament
Senate
National Assembly
Formation
17 November 1879
1 July 1885
15 November 1908
30 June 1960[]
20 September 1960
 Democratic Republic
1 August 1964
27 October 1971
17 May 1997
18 February 2006
Area
 Total
Lua error in package.lua at line 80: module 'Module:ConvertIB/data' not found. (11th)
 Water (%)
3.32
ಜನಸಂಖ್ಯೆ
 2025 estimate
Neutral increase 114,388,160[] (15th)
 Density
Lua error in package.lua at line 80: module 'Module:ConvertIB/data' not found. (168th)
GDP (PPP)2025 estimate
 Total
Increase $200.76 billion[] (79th)
 Per capita
Increase $1,881[] (180th)
GDP (nominal)2025 estimate
 Total
Increase $79.120 billion[] (83rd)
 Per capita
Increase $742[] (182nd)
Gini (2012)positive decrease 42.1[]
medium
HDI (2023)Increase 0.522[]
low · 171st
CurrencyCongolese franc (CDF)
Time zoneUTC+1 to +2 (WAT and CAT)
Date formatdd/mm/yyyy
Driving sideright
Calling code+243
ISO 3166 codeCD
Internet TLD.cd


ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ ಆಫ್ರಿಕಾ ಖಂಡದ ಮಧ್ಯಭಾಗದಲ್ಲಿ ವಿಷುವದ್ರೇಖೆಯ ಮೇಲಿನ ಒಂದು ಸಾರ್ವಭೌಮ ರಾಷ್ಟ್ರ. ಹಿಂದೆ ಇದು ಬೆಲ್ಜಿಯಂ ನ ಒಂದು ವಸಾಹತಾಗಿದ್ದಿತು. ಈ ದೇಶವು ಡಿ.ಆರ್. ಕಾಂಗೋ, ಕಾಂಗೋ ಕಿನ್ಶಾಸಾ, ಜಾಯಿರ್ ಎಂಬ ಇತರ ಹೆಸರುಗಳಿಂದಲೂ ಸಹ ಗುರುತಿಸಲ್ಪಡುತ್ತದೆ. ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯವು ಆಫ್ರಿಕಾದ ಮೂರನೆಯ ಅತಿ ದೊಡ್ಡ ರಾಷ್ಟ್ರವಾಗಿದೆ. ಇದೇ ಹೆಸರಿನ ಇನ್ನೊಂದು ದೇಶ (ನೋಡಿ- ಕಾಂಗೋ-ಗಣರಾಜ್ಯ) ಇರುವುದರಿಂದ ಇದನ್ನು ಕಾಂಗೋ (ಕೀನ್ಷಾಸ) ಎಂದೂ ಕರೆಯುತ್ತಾರೆ

ಭೌಗೋಳಿಕ

[ಬದಲಾಯಿಸಿ]

ಇದರ ಉತ್ತರಕ್ಕೆ ಮಧ್ಯ ಆಫ್ರಿಕಾದ ಗಣರಾಜ್ಯ ಮತ್ತು ಸುಡಾನ್ ಗಳು; ದಕ್ಷಿಣದಲ್ಲಿ ಉಗಾಂಡಾ, ರುವಾಂಡಾ, ಬುರುಂಡಿ, ಜಾಂಬಿಯಾ ಮತ್ತು ಅಂಗೋಲಾ ಗಳು; ಪ್ಪಶ್ಚಿಮಕ್ಕೆ ಕಾಂಗೋ ಗಣರಾಜ್ಯಗಳಿವೆ. ಪೂರ್ವದಲ್ಲಿ ಈ ದೇಶ ಮತ್ತು ಟಾಂಜಾನಿಯಾಗಳ ನಡುವೆ ಟಾಂಗನ್ಯೀಕಾ ಸರೋವರವಿರುವುದು. ಪಶ್ಚಿಮದಲ್ಲಿ ಸುಮಾರು ೪೦ ಕಿ.ಮೀ. ಗಳಷ್ಟು ಅಟ್ಲಾಂಟಿಕ್ ಮಹಾಸಾಗರದ ಕಿನಾರೆ ಪ್ರದೇಶವಿರುವುದು. ಕಾಂಗೋ ನದಿಯ ಕೊಳ್ಳವು ಸಂಪೂರ್ಣವಾಗಿ ಈ ರಾಷ್ಟ್ರದಲ್ಲಿಯೇ ಇದೆ. ಅಲ್ಲದೇ ನಾಡಿನ ಗಣನೀಯ ಭಾಗವು ಗೊಂಡಾರಣ್ಯವಾಗಿದೆ. . ಕಾಂಗೋ ನದೀ ಜಲಾನಯನ ಪ್ರದೇಶದ ಬಹುಭಾಗವನ್ನೂ ನೈಲ್ ನದಿಯ ಮೇಲ್ಕಣಿವೆಯ ಕೊಂಚ ಭಾಗವನ್ನೂ ಆವರಿಸಿಕೊಂಡಿದೆ. ಕಾಂಗೋದ ವಿಸ್ತೀರ್ಣ ೨೩,೪೩,,೪೦೯ ಚ.ಕಿಮೀ. ಜನಸಂಖ್ಯೆ114,388,160 (೨೦೨೫). ರಾಜಧಾನಿ ಕೀನ್ಷಾಸ (ಲೀಯೊಪೋಲ್ಟ್‍ವಿಲ್). ಬಂಟುವಿನ ಉಪಭಾಷೆಗಳನ್ನು-ಮುಖ್ಯವಾಗಿ ಸ್ವಾಹೀಲಿ ಮತ್ತು ಲಿಂಗಾಲ ಇವನ್ನು -ಜನ ಆಡುತ್ತಾರೆ. ಅಧಿಕೃತ ಭಾಷೆ ಫ್ರೆಂಚ್.

ಮೇಲ್ಮೈ ಲಕ್ಷಣ

[ಬದಲಾಯಿಸಿ]

ಕಾಂಗೋ ದೇಶ ಸಾಮಾನ್ಯವಾಗಿ ಸಮುದ್ರಮಟ್ಟದಿಂದ 1,000`-3,000` ಎತ್ತರದ ಪ್ರಸ್ಥಭೂಮಿಯಾಗಿದೆ. ವಿಶಾಲ ಕಣಿವೆಯಂತಿರುವ ಈ ಪ್ರಸ್ಥಭೂಮಿಯ ನಡುವೆ ಹರಿಯುವ ಕಾಂಗೋ ನದಿಯ ಉದ್ದ 2,716 ಮೈ. ಇದರ ಜಲಾನಯನ ಪ್ರದೇಶ ಸುಮಾರು 14,25,000 ಚ.ಮೈ. ಇದರಲ್ಲಿ ಮೂರನೆಯೆರಡು ಭಾಗ ಕಾಂಗೋ ದೇಶದಲ್ಲಿದೆ. ಇದು ಈ ವಿಶಾಲ ಭೂಮಿಯನ್ನು ದಾಟುವಾಗ ಬಂಡೆಗಳನ್ನು ಕೊರೆದು ಕಮರಿಯಲ್ಲಿ ರಭಸವಾಗಿ ಮುನ್ನಡೆಯುತ್ತದೆ. ಇದರ ಬಲದಂಡೆಯ ಮೇಲಿರುವುದೇ ಮಯುಂಬೆಯ ಬೆಟ್ಟಪ್ರದೇಶ. ದಕ್ಷಿಣ ಕಾಂಗೋದಲ್ಲಿ ಕ್ವಾಂಗೋ (3,300`), ಕಾಸೈ ಮತ್ತು ಕಟಾಂಗ ಪ್ರಸ್ಥಭೂಮಿಗಳಿವೆ. ಕ್ವಾಂಗೋ ಇರುವುದು ಆಂಗೋಲದ ಗಡಿಯ ಬಳಿ. ಲುಬುಂಬಾಷಿ (3,600'), ಮಾನಿಕ(4,800'), ಕುಂಡೆ ಲುಂಗು (5,100') ಮತ್ತು ಕಿಬಾರ (5,600`) ಈ ಪ್ರದೇಶಗಳು ಕಾಸೈ ಮತ್ತು ಕಟಾಂಗಗಳಲ್ಲಿವೆ. ಕಮಲೆಂಡೊ-ಉಪೆಂಬ, ಲುಫೀರ ಮತ್ತು ಲೂವಪೂಲ ಕಣಿವೆಗಳು ಇವುಗಳ ನಡುವೆ ಇವೆ. ಉತ್ತರದಲ್ಲಿ ಕಾಂಗೋ ನದೀಪ್ರದೇಶವನ್ನೂ ಚಾದ್ ಮತ್ತು ನೈಲ್ ಪ್ರದೇಶವನ್ನೂ ಪ್ರತ್ಯೇಕಿಸುವ ಪ್ರಸ್ಥ ಭೂಮಿಗಳು ಸ್ವಲ್ಪ ತಗ್ಗು. ಪೂರ್ವದ ಕಾಂಗೋ ದಂಡೆಯ ನೆಲದ ಎತ್ತರ ಹೆಚ್ಚು. ಇಲ್ಲಿ ಉದ್ದಕ್ಕೂ ಹಬ್ಬಿರುವ ಪರ್ವತಶ್ರೇಣಿಗಳ ನಡುವೆ ಟಾಂಗನ್ಯೀಕ, ಕೀವೂ, ಎಡ್ವರ್ಡ್ ಮತ್ತು ಆಲ್ಬರ್ಟ್ ಸರೋವರಗಳಿವೆ. ಕೀವೂಗೆ ಉತ್ತರದಲ್ಲಿರುವುದು ವಿರುಂಗ ಅಗ್ನಿಪರ್ವತಶಿಖರ. ಎಡ್ವರ್ಡ್ ಮತ್ತು ಆಲ್ಬರ್ಟ್ ಸರೋವರಗಳ ನಡುವೆ ಇರುವ ರುವೆಂಜೋರಿ ಶ್ರೇಣಿ (ಚಂದ್ರಪರ್ವತ) ಅತ್ಯಂತ ಎತ್ತರ ಪ್ರದೇಶ. ಇಲ್ಲಿರುವ ಸ್ಟ್ಯಾನ್ಲಿ ಶಿಖರದ ಎತ್ತರ 16,763`. ಇದರ ತುದಿ ಹಿಮಾವೃತ. ಈ ಶ್ರೇಣಿಯಿಂದ ಆಚೆಗೆ ಉಗಾಂಡ ಇದೆ. ಕಾಂಗೋ ನದಿಯ ನಡುಪ್ರದೇಶ ತಗ್ಗುಪ್ರಸ್ಥಭೂಮಿಗಳಿಂದಲೂ ಮೆಟ್ಟಲುದಿಬ್ಬಗಳಿಂದಲೂ ಕೂಡಿದ್ದು. ಜೌಗು ಕಣಿವೆಗಳ ಅಂಚಿನಲ್ಲಿ ಕೋಡುಗಲ್ಲಿನ ಬಂಡೆಗಳೂ ಪ್ರಪಾತಗಳೂ ಕಾಣಸಿಗುತ್ತವೆ.

ವಾಯುಗುಣ

[ಬದಲಾಯಿಸಿ]
Ituri Rainforest
Masisi Territory
Lake Kivu in North Kivu province

ಸಮಭಾಜಕದ ಮೇಲಿರುವ ಈ ದೇಶದ್ದು ಉಷ್ಣವಲಯದ ವಾಯುಗುಣ. ವರ್ಷವೆಲ್ಲ ಸರಾಸರಿಯಲ್ಲಿ 70ಲಿ ಫ್ಯಾ.-80ಲಿ ಫ್ಯಾ. ಉಷ್ಣತೆ ಇರುತ್ತದೆ. ವರ್ಷವೆಲ್ಲ ಮಳೆ. ಗರಿಷ್ಠ ಉಷ್ಣತೆ ಫೆಬ್ರುವರಿಯಲ್ಲಿ. ಗರಿಷ್ಠ ಮಳೆ ಏಪ್ರಿಲ್-ಮೇ ಮತ್ತು ಅಕ್ಟೋಬರ್-ನವೆಂಬರ್‍ಗಳಲ್ಲಿ. ಜೂನ್, ಜುಲೈ, ಆಗಸ್ಟ್ ತಿಂಗಳುಗಳಲ್ಲಿ ಮಳೆ ಕನಿಷ್ಠ. ವಾರ್ಷಿಕ ಮಳೆ 48". ಕರಾವಳಿಯಲ್ಲಿ ಜೂನಿನಿಂದ ಅಕ್ಟೋಬರ್ ವರೆಗಿನ ಮಳೆ ಕನಿಷ್ಠ. ದಕ್ಷಿಣದಲ್ಲಿ ಕಟಾಂಗ ಪ್ರಸ್ಥಭೂಮಿಯಲ್ಲಿ ಉಷ್ಣತೆಯ ಅಂತರ ಹೆಚ್ಚು, ಮಳೆ ಕಡಿಮೆ.

Climate data for Kinshasa, Democratic Republic of the Congo
ತಿಂಗಳು ಜನವರಿ ಫೆಬ್ರುವರಿ ಮಾರ್ಚ್ ಏಪ್ರಿಲ್ ಮೇ ಜೂನ್ ಜುಲೈ ಆಗಷ್ಟ್ ಸೆಪ್ಟೆಂಬರ್ ಅಕ್ಟೋಬರ್ ನವೆಂಬರ್ ಡಿಸೆಂಬರ್ ವರ್ಷ
Record high °C (°F) 36
(97)
36
(97)
38
(100)
37
(99)
37
(99)
37
(99)
32
(90)
33
(91)
35
(95)
35
(95)
37
(99)
34
(93)
38
(100)
Mean daily maximum °C (°F) 30.6
(87.1)
31.3
(88.3)
32.0
(89.6)
32.0
(89.6)
31.1
(88.0)
28.8
(83.8)
27.3
(81.1)
28.9
(84.0)
30.6
(87.1)
31.1
(88.0)
30.6
(87.1)
30.1
(86.2)
30.4
(86.7)
Daily mean °C (°F) 25.9
(78.6)
26.4
(79.5)
26.8
(80.2)
26.9
(80.4)
26.3
(79.3)
24.0
(75.2)
22.5
(72.5)
23.7
(74.7)
25.4
(77.7)
26.2
(79.2)
26.0
(78.8)
25.6
(78.1)
25.5
(77.9)
Mean daily minimum °C (°F) 21.2
(70.2)
21.6
(70.9)
21.6
(70.9)
21.8
(71.2)
21.6
(70.9)
19.3
(66.7)
17.7
(63.9)
18.5
(65.3)
20.2
(68.4)
21.3
(70.3)
21.5
(70.7)
21.2
(70.2)
20.6
(69.1)
Record low °C (°F) 18
(64)
20
(68)
18
(64)
20
(68)
18
(64)
15
(59)
10
(50)
12
(54)
16
(61)
17
(63)
18
(64)
16
(61)
10
(50)
Average precipitation mm (inches) 163
(6.4)
165
(6.5)
221
(8.7)
238
(9.4)
142
(5.6)
9
(0.4)
5
(0.2)
2
(0.1)
49
(1.9)
98
(3.9)
247
(9.7)
143
(5.6)
೧,೪೮೨
(58.4)
Average precipitation days 12 12 14 17 12 1 0 1 6 10 16 14 115
Average relative humidity (%) 83 82 81 82 82 81 79 74 74 79 83 83 80
Mean monthly sunshine hours 136 141 164 153 164 144 133 155 138 149 135 127 ೧,೭೩೯
Source 1: Climate-Data.org (temperature)[] Weatherbase (extremes)[]
Source 2: Danish Meteorological Institute (precipitation, sun, and humidity)[]
Climate data for Kisangani
ತಿಂಗಳು ಜನವರಿ ಫೆಬ್ರುವರಿ ಮಾರ್ಚ್ ಏಪ್ರಿಲ್ ಮೇ ಜೂನ್ ಜುಲೈ ಆಗಷ್ಟ್ ಸೆಪ್ಟೆಂಬರ್ ಅಕ್ಟೋಬರ್ ನವೆಂಬರ್ ಡಿಸೆಂಬರ್ ವರ್ಷ
Record high °C (°F) 36
(97)
36
(97)
36
(97)
35
(95)
34
(93)
34
(93)
33
(91)
33
(91)
34
(93)
34
(93)
35
(95)
35
(95)
36
(97)
Mean daily maximum °C (°F) 31
(88)
31
(88)
31
(88)
31
(88)
31
(88)
30
(86)
29
(84)
28
(82)
29
(84)
30
(86)
29
(84)
30
(86)
30.0
(86.0)
Daily mean °C (°F) 26
(79)
26
(79)
26
(79)
26
(79)
26
(79)
25.5
(77.9)
24
(75)
24
(75)
24.5
(76.1)
25
(77)
24.5
(76.1)
25
(77)
25.2
(77.4)
Mean daily minimum °C (°F) 21
(70)
21
(70)
21
(70)
21
(70)
21
(70)
21
(70)
19
(66)
20
(68)
20
(68)
20
(68)
20
(68)
20
(68)
20.4
(68.7)
Record low °C (°F) 17
(63)
18
(64)
17
(63)
18
(64)
18
(64)
18
(64)
17
(63)
17
(63)
17
(63)
18
(64)
18
(64)
16
(61)
16
(61)
Average rainfall mm (inches) 53
(2.1)
84
(3.3)
178
(7.0)
158
(6.2)
137
(5.4)
114
(4.5)
132
(5.2)
165
(6.5)
183
(7.2)
218
(8.6)
198
(7.8)
84
(3.3)
೧,೬೨೦
(63.8)
Mean monthly sunshine hours 187 170 187 180 187 150 124 125 150 186 150 155 ೧,೯೫೧
Source: BBC Weather Centre Kisangani[೧೦]
Climate data for Mbuji-Mayi
ತಿಂಗಳು ಜನವರಿ ಫೆಬ್ರುವರಿ ಮಾರ್ಚ್ ಏಪ್ರಿಲ್ ಮೇ ಜೂನ್ ಜುಲೈ ಆಗಷ್ಟ್ ಸೆಪ್ಟೆಂಬರ್ ಅಕ್ಟೋಬರ್ ನವೆಂಬರ್ ಡಿಸೆಂಬರ್ ವರ್ಷ
Mean daily maximum °C (°F) 30.4
(86.7)
30.6
(87.1)
31.4
(88.5)
31.6
(88.9)
32.6
(90.7)
32.5
(90.5)
32.2
(90.0)
31.5
(88.7)
31.4
(88.5)
30.9
(87.6)
30.7
(87.3)
30.3
(86.5)
31.3
(88.4)
Daily mean °C (°F) 25.2
(77.4)
25.3
(77.5)
25.9
(78.6)
25.9
(78.6)
26.1
(79.0)
25.1
(77.2)
24.9
(76.8)
25.3
(77.5)
25.5
(77.9)
25.3
(77.5)
25.3
(77.5)
25.2
(77.4)
25.4
(77.7)
Mean daily minimum °C (°F) 20.1
(68.2)
20.1
(68.2)
20.4
(68.7)
20.3
(68.5)
19.7
(67.5)
17.7
(63.9)
17.6
(63.7)
19.1
(66.4)
19.7
(67.5)
19.8
(67.6)
20
(68)
20.2
(68.4)
19.6
(67.2)
Average precipitation mm (inches) 150
(5.9)
133
(5.2)
202
(8.0)
161
(6.3)
66
(2.6)
20
(0.8)
9
(0.4)
32
(1.3)
140
(5.5)
157
(6.2)
233
(9.2)
207
(8.1)
೧,೫೧೦
(59.5)
Source: Climate-Data.org, altitude: 614m[೧೧]
Climate data for Lubumbashi
ತಿಂಗಳು ಜನವರಿ ಫೆಬ್ರುವರಿ ಮಾರ್ಚ್ ಏಪ್ರಿಲ್ ಮೇ ಜೂನ್ ಜುಲೈ ಆಗಷ್ಟ್ ಸೆಪ್ಟೆಂಬರ್ ಅಕ್ಟೋಬರ್ ನವೆಂಬರ್ ಡಿಸೆಂಬರ್ ವರ್ಷ
Mean daily maximum °C (°F) 26
(79)
26
(79)
26
(79)
27
(81)
26
(79)
25
(77)
25
(77)
27
(81)
30
(86)
31
(88)
28
(82)
26
(79)
27
(81)
Daily mean °C (°F) 21
(70)
21
(70)
21
(70)
20.5
(68.9)
18
(64)
16.5
(61.7)
16.5
(61.7)
18
(64)
21
(70)
23
(73)
22
(72)
21
(70)
20.0
(67.9)
Mean daily minimum °C (°F) 16
(61)
16
(61)
16
(61)
14
(57)
10
(50)
8
(46)
8
(46)
9
(48)
12
(54)
15
(59)
16
(61)
16
(61)
13
(55)
Average rainfall mm (inches) 253
(10.0)
257
(10.1)
202
(8.0)
60
(2.4)
4
(0.2)
1
(0.0)
0
(0)
0
(0)
4
(0.2)
37
(1.5)
163
(6.4)
257
(10.1)
೧,೨೩೮
(48.9)
Average rainy days 24 23 21 9 2 0 0 0 1 5 17 24 126
Source: https://www.weather2travel.com/climate-guides/congo-kinshasa/lubumbashi.php

ಸಸ್ಯ, ಪ್ರಾಣಿ ಪ್ರಕಾರಗಳು

[ಬದಲಾಯಿಸಿ]
The endangered mountain gorilla; half of its population live in the DRC's Virunga National Park, making the park a critical habitat for those animals.
Found in the Congolian rainforests, the okapi was unknown to science until 1901.

ಕಾಂಗೋ ನದೀ ಜಲಾನಯನ ಪ್ರದೇಶದ ಉತ್ತರದ ನಡುಭಾಗ ನಿಬಿಡಾರಣ್ಯ. ಇದರ ಉತ್ತರ ದಕ್ಷಿಣಗಳಲ್ಲೂ ವ್ಯಾಪಕವಾದ ಕಾಡುಗಳಿವೆ. ಸಮಭಾಜಕೀಯ ಕಾಡುಗಳಲ್ಲಿಯ ಮರುಗಳು ವೈವಿಧ್ಯಮಯ. ಅವು ನಿತ್ಯ ಹಸುರಿನವು. ಅರಣ್ಯ ಗರ್ಭದಲ್ಲಿ ಸೂರ್ಯಕಿರಣಕ್ಕಾಗಿ ಹೋರಾಟ ನಿರಂತರವಾಗಿ ಸಾಗಿದೆ. ಎಲ್ಲ ಸಸ್ಯಕ್ಕೂ ನಭೋಗಮನ ಪ್ರವೃತ್ತಿ. ಕತ್ತಲು ತುಂಬಿದ ನೆಲದ ಮೇಲೆ ಸಸ್ಯಗಳೇ ಇಲ್ಲವೆನ್ನಬಹುದು. ಕಾಡು ಕಡಿದಲ್ಲಿ ಮತ್ತೆ ಮರಗಳು ಶೀಘ್ರವಾಗಿ ಬೆಳೆದಿವೆ.ಕ್ವಾಂಗೋದ ದಕ್ಷಿಣಕ್ಕೆ ಇರುವ ಮತ್ತು ಕಟಾಂಗದಲ್ಲಿಯ ಕಾಡುಗಳು ಅಷ್ಟು ದಟ್ಟವಲ್ಲ; ಮರಗಳ ಎತ್ತರ ಕಡಿಮೆ. ಪೂರ್ವದ ಪರ್ವತ ಪ್ರದೇಶದಲ್ಲಿ ಎತ್ತರಕ್ಕನುಗುಣವಾಗಿ ಸಸ್ಯ ಪ್ರಭೇದಗಳಿವೆ: ಕೆಳಗೆ ನಿತ್ಯ ಹಸುರಿನ ದಟ್ಟಗಾಡು; ಅದರ ಮೇಲೆ ಎಲೆ ಉದುರುವ ಮರಗಳ ಕಾಡು; ಇನ್ನೂ ಮೇಲೆ ಹುಲ್ಲು; ಅದಕ್ಕಿಂತ ಎತ್ತರದಲ್ಲಿ ಆಲ್ಪೈನ್ ಸಸ್ಯ ಮತ್ತು ಹುಲ್ಲು-ಇದು ಅಲ್ಲಿಯ ಸಸ್ಯ ವಿಂಗಡಣೆ.ಸಮಭಾಜಕೀಯ ಕಾಡುಗಳ ಸುತ್ತ ಎತ್ತರ ಹುಲ್ಲು ಬೆಳೆಯುವ ನೆಲವಿದೆ. ಇದರ ನಡುನಡುವೆ ಮರಗಳೂ ಪೊದೆಗಳೂ ಇರುವುದುಂಟು.ಕಾಂಗೋದ ಪ್ರಾಣಿಗಳು ಮುಖ್ಯವಾಗಿ ಎರಡು ಬಗೆಯವು: ಸಮಭಾಜಕೀಯ ಕಾಡುಗಳವು ಮತ್ತು ಹುಲ್ಲುಗಾವಲಿನವು. ಒತ್ತಾದ ಕಾಡಿನ ಮೃಗಗಳಲ್ಲಿ ಮುಖ್ಯವಾದವು ವಾನರಗಳು, ಕೋತಿಗಳು ಮತ್ತು ಚಿಂಪಾಂಜಿಗಳು. ಮಯೂಂಬೆ ಮತ್ತು ಕೀವೂ ಪರ್ವತಗಳಲ್ಲಿ ಗೊರಿಲ್ಲಾಗಳಿವೆ. ಒಕಾಪಿ, ಕಾಡುಹಂದಿ, ಆನೆ, ಬಿಳಿಯ ಘೇಂಡಾಮೃಗ ಮತ್ತು ಜಿರಾಫೆ ಇತರ ಮೃಗಗಳು. ಕಟಾಂಗದಲ್ಲಿ ತೆರವಾದ ಪ್ರದೇಶಗಳಲ್ಲೂ ಕಾಡಿನ ಸುತ್ತ ಇರುವ ಪೊದೆ ಪ್ರದೇಶದಲ್ಲೂ ಸಿಂಹಗಳಿವೆ. ಆನೆ, ಹುಲಿ, ಕಾಡೆಮ್ಮೆ, ಜಿಂಕೆ-ಇವು ಕಾಡುಗಳಲ್ಲೂ ಬಯಲುಗಳಲ್ಲೂ ಉಂಟು. ಕಿರುಬ, ಗುಳ್ಳೆನರಿ ಮುಂತಾದವು ಪೂರ್ವದಲ್ಲಿ ವಿಶೇಷ. ನೀರಾನೆಗಳೂ ಮೊಸಳೆಗಳೂ ನದಿಗಳಲ್ಲಿ ಅಧಿಕ ಸಂಖ್ಯೆಯಲ್ಲಿವೆ. ಪಕ್ಷಿಸಂಕುಲವೂ ವೈವಿಧ್ಯಮಯ. ಕೊಕ್ಕರೆ, ಬಾತು, ಹದ್ದು, ಗೂಬೆ ಇವು ಸಾಮಾನ್ಯ. ಕೋಗಿಲೆ, ಪಾರಿವಾಳ, ಗಿಣಿ-ಇವೂ ಉಂಟು. ಹೆಬ್ಬಾವೂ ಸೇರಿ ಬಗೆಬಗೆಯ ಹಾವುಗಳು, ಆಮೆ, ಹಲ್ಲಿ, ಗೋಸುಂಬೆ, ದುಂಬಿ, ಚಿಟ್ಟೆ, ನೊಣ, ಚೇಳು, ಜೇಡ, ಗೆದ್ದಲು, ಇರುವೆ, ಉಣ್ಣಿ, ಸೊಳ್ಳೆ-ಇವೆಲ್ಲ ವ್ಯಾಪಕವಾಗಿವೆ. ನಿದ್ರಾರೋಗ ತರುವ ಟ್ಸೆಟ್ಸಿ ನೊಣ ಇಲ್ಲಿಯ ವೈಶಿಷ್ಟ್ಯ.

=ವ್ಯವಸಾಯ, ಕೈಗಾರಿಕೆ

[ಬದಲಾಯಿಸಿ]
Rough diamonds ≈1 to 1.5 mm in size from the DR Congo

ರಬ್ಬರ್, ದಂತ ಮತ್ತು ದಿಮ್ಮಿ-ಇವು ಕಾಂಗೋದ ಮುಖ್ಯ ಉತ್ಪನ್ನಗಳು. ಮಲಯ ಮತ್ತು ಈಸ್ಟ್ ಇಂಡೀಸ್‍ಗಳಲ್ಲಿ ರಬ್ಬರ್ ತೋಟಗಳು ಅಭಿವೃದ್ಧಿ ಹೊಂದಿದ ಮೇಲೆ ಕಾಂಗೋದ ಕಾಡು ರಬ್ಬರಿಗೆ ಬೇಡಿಕೆ ತಗ್ಗಿತು. ಇಲ್ಲೂ ರಬ್ಬರ್ ತೋಟಗಳ ಸ್ಥಾಪನೆಯಾಯಿತು. ಮಟಾಡಿ ಮತ್ತು ಸ್ಟ್ಯಾನ್ಲಿ ಪೂಲ್‍ಗಳ ನಡುವಣ ಪ್ರದೇಶದಲ್ಲಿ 1926ರಲ್ಲಿ ಆರಂಭವಾದ ಕಬ್ಬು ಬೆಳೆಯುವ ಪ್ರಯೋಗ ಯಶಸ್ವಿಯಾಗಿದೆ. ಕೀವೂ ಮತ್ತು ಯೂಲ್ ಜಿಲ್ಲೆಗಳಲ್ಲಿ 1920 ರಿಂದ ಕಾಫಿ ಬೆಳೆಯಲಾಗುತ್ತಿದೆ. ತಾಳೆ ಎಣ್ಣೆ, ಬಾಳೆ, ನೆಲಗಡಲೆ, ಇತರ ಬೆಳೆಗಳು. ಕಟಾಂಗ, ಕಾಸೈ ಮತ್ತು ಉತ್ತರ ಪ್ರದೇಶದಲ್ಲಿ ಹತ್ತಿ ಬೆಳೆಯನ್ನು ವೃದ್ಧಿಪಡಿಸಲಾಗಿದೆ. ಕಸಾವ, ಮುಸುಕಿನ ಜೋಳ, ಅಕ್ಕಿ, ಬಟಾಣಿ, ಬಾಳೆ ಮತ್ತು ಹುರುಳಿ ಅವರ ಆಹಾರ ಬೆಳೆ. ಪಶುಪಾಲನೆಯನ್ನು ಕಟಾಂಗದಲ್ಲಿ ಆರಂಭಿಸಲಾಯಿತು. ಈಗ ಇದು ಕಾಸೈ ಮತ್ತು ಕಾಂಗೋ ಕೆಳನಾಡುಗಳಿಗೂ ಹಬ್ಬಿದೆ. ದನಗಳ ಜೊತೆಗೆ ಆಡು, ಕುರಿಗಳನ್ನೂ ಇಲ್ಲಿ ಸಾಕುತ್ತಾರೆ. ಕಾಂಗೋ ಖನಿಜಸಮೃದ್ಧ ದೇಶ. ಕಟಾಂಗದಲ್ಲಿ ತಾಮ್ರನಿಕ್ಷೇಪ ಹೇರಳವಾಗಿದೆ. ಅಲ್ಲದೆ ತವರ, ಯುರೇನಿಯಂ, ಮ್ಯಾಂಗನೀಸ್, ಸತು, ಕೋಬಾಲ್ಟ್ ಧಾರಾಳವಾಗಿ ದೊರಕುತ್ತವೆ. ಅದು ವಿದ್ಯುಚ್ಛಕ್ತಿಯ ನೆಲೆಯೂ ಹೌದು. ಸುಡ್-ಕಾಸೈನಲ್ಲಿ ವಜ್ರವೂ ಕೀವೂನಲ್ಲಿ ತವರ, ಚಿನ್ನಗಳೂ ದೊರಕುತ್ತವೆ. ಸಿಮೆಂಟ್, ಬಂದೂಕದ ಮದ್ದು, ಸ್ಫೋಟಕ, ಸಲ್ಫ್ಯೂರಿಕ್ ಆಮ್ಲ, ಬೀರ್, ಕಡಲೆ ಕಾಯಿ ಎಣ್ಣೆ, ಬೆಣ್ಣೆ, ಜವಳಿ, ಚರ್ಮದ ಪಾದರಕ್ಷೆ, ಸಿಗರೇಟ್, ಇಟ್ಟಿಗೆ, ಹೆಂಚು, ಸೀಸೆ, ಡಬ್ಬ, ಉಡುಪು, ಚೀನಿ ಸರಕು (ಹೇಬರ್‍ಡ್ಯಾಷರಿ)-ಇವು ಕೆಲವು ಕೈಗಾರಿಕಾ ಸರಕುಗಳು.

ವಿದೇಶಿ ವ್ಯಾಪಾರ, ಹಣಕಾಸು, ಸಾರಿಗೆ

[ಬದಲಾಯಿಸಿ]

ಖನಿಜಗಳು ಮತ್ತು ವ್ಯವಸಾಯೋತ್ಪನ್ನಗಳು ಕಾಂಗೋದ ಮುಖ್ಯ ನಿರ್ಯಾತಗಳು. ಯಂತ್ರ, ಇಂಧನ, ಜವಳಿ ಮತ್ತು ಆಹಾರ ಆಯಾತವಾಗುತ್ತವೆ. ಎರಡನೆಯ ಮಹಾಯುದ್ಧದಿಂದೀಚೆಗೆ ಆಯಾತಕ್ಕಿಂತ ನಿರ್ಯಾತವೇ ಹೆಚ್ಚು. ಬೆಲ್ಜಿಯಂ ಮತ್ತು ಅಮೆರಿಕ ಸಂಯುಕ್ತಸಂಸ್ಥಾನ-ಇವು ಈ ದೇಶದೊಂದಿಗೆ ವ್ಯಾಪಾರಮಾಡುವ ಮುಖ್ಯ ದೇಶಗಳು.

ಕಾಂಗೋದಲ್ಲಿರುವ ಸಂಚಾರ ಮಾರ್ಗಗಳಿವು: ಜಲಮಾರ್ಗ 8,518 ಮೈ.; ರೈಲ್ವೆ 3,016 ಮೈ.; ರಸ್ತೆ 90,430 ಮೈ. ನದೀಮಾರ್ಗಗಳಿಗೆ ಎಲ್ಲೆಲ್ಲಿ ತಡೆಯಾಗಿದೆಯೋ ಅಲ್ಲೆಲ್ಲ ಸಾಮಾನ್ಯವಾಗಿ ರೈಲ್ವೆ ನಿರ್ಮಿಸಲಾಗಿದೆ. ಬನಾನ, ಬೋಮ, ಆಂಗೊ ಆಂಗೊ ಮತ್ತು ಮಟಾಡಿ ಇವು ಸಾಗರಗಾಮಿ ಹಡಗುಗಳಿಗೆ ನಿಲುಕುವ ಬಂದರುಗಳು. ಕೀನ್ಷಾಸ, ಸ್ಟ್ಯಾನ್ಲಿವಿಲ್, ಎಲಿಸóಬೆತ್‍ವಿಲ್ ಮುಖ್ಯ ವಿಮಾನ ನಿಲ್ದಾಣಗಳು. ಕಾಂಗೋ ನದಿಯ ಮುಖದ ಒಳಗಿರುವ ಬನಾನ ಕಾಂಗೋದ ಅತ್ಯಂತ ಹಳೆಯ ವ್ಯಾಪಾರಕೇಂದ್ರ. ಐರೋಪ್ಯ ವರ್ತಕರು 16ನೆಯ ಶತಮಾನದಲ್ಲೇ ಇಲ್ಲಿ ನೆಲಸಿದ್ದರು. ನದೀಮುಖದ ಉತ್ತರ ದಂಡೆಯಲ್ಲಿ ಬೋಮ ಇದೆ. ಇದು ಹಿಂದೆ ಆಡಳಿತಕೇಂದ್ರವಾಗಿತ್ತು. ಈಗ ಮಯುಂಬೆ ಪ್ರದೇಶದ ಬಂದರು. ಇಲ್ಲಿಂದ ರೈಲುಮಾರ್ಗವಿದೆ. ನದಿಯ ಮೇಲೆ ಬನಾನಕ್ಕೆ 93 ಮೈ. ದೂರದಲ್ಲಿರುವುದು ಮಟಾಡಿ. ಇಲ್ಲಿಯ ವರೆಗೂ ಸಾಗರಗಾಮಿ ಹಡಗುಗಳು ಬರುತ್ತವೆ. ಈ ಬಳಿ ಜಲಪಾತವಿರುವುದರಿಂದ ಇಲ್ಲಿಂದ ಮುಂದೆ ಸ್ಟ್ಯಾನ್ಲಿ ಮಡುವಿನ ವರೆಗೆ ರೈಲುಮಾರ್ಗವುಂಟು. ಕಾಂಗೋದ ರಾಜಧಾನಿ ಕೀನ್ಷಾಸ ಇರುವುದು ಅಲ್ಲಿ. ಅದರ . ಲುಬುಂಬಾಷಿ ಮತ್ತು ಕೀಸಾಂಗಾನಿ ಇತರ ಮುಖ್ಯ ನಗರಗಳು. ಕಾಂಗೋದ ಶಿಕ್ಷಣ ಬಹಳ ಕಾಲದ ವರೆಗೆ ಕ್ರೈಸ್ತ ಸಂಸ್ಥೆಗಳ ಕೈಯಲ್ಲಿಯೇ ಇತ್ತು. ಈ ವಿಚಾರದಲ್ಲಿ ಇದು ಬಹಳ ಹಿಂದುಳಿದ ದೇಶ. ಸ್ವಾತಂತ್ರ್ಯ ಪೂರ್ವದಲ್ಲಿ ಪ್ರಾಥಮಿಕ ಶಿಕ್ಷಣ ಸಂಸ್ಥೆಗಳನ್ನು ಬಿಟ್ಟರೆ ಬೇರೆ ಯಾವುವೂ ಇರಲಿಲ್ಲ. ಉಚ್ಚಶಿಕ್ಷಣವಂತೂ ಕನಸಿನ ಗಂಟಾಗಿತ್ತು. ಕಾಂಗೋ ಸ್ವಾತಂತ್ರ್ಯ ಪಡೆದಾಗ ಅಲ್ಲಿ ಒಬ್ಬ ಕಾಂಗೋಲಿ ಡಾಕ್ಟರಾಗಲಿ ಎಂಜಿನಿಯರಾಗಲಿ ಇರಲಿಲ್ಲ. ಮೊದಲು ಸುಮಾರು 20,000 ಶಾಲೆಗಳನ್ನು ಕೆಥೊಲಿಕ್ ಸಂಸ್ಥೆಗಳು ನಡೆಸುತ್ತಿದ್ದುವು. ಎರಡನೆಯ ಮಹಾಯುದ್ಧದ ಅನಂತರ ಶಿಕ್ಷಣ ಕ್ಷೇತ್ರದಲ್ಲಿ ಸ್ವಲ್ಪಮಟ್ಟಿನ ಪ್ರಗತಿ ಕಂಡುಬಂತು. ಈಗ ಈ ದೇಶದಲ್ಲಿ ಮೂರು ವಿಶ್ವವಿದ್ಯಾನಿಲಯಗಳಿವೆ: 1 ಸ್ಟೇಟ್ ವಿಶ್ವವಿದ್ಯಾನಿಲಯ; 2 ಕೆಥೊಲಿಕ್ ವಿಶ್ವವಿದ್ಯಾನಿಲಯ ಮತ್ತು 3 ಫ್ರೀ ವಿಶ್ವವಿದ್ಯಾನಿಲಯ.

ಇತಿಹಾಸ

[ಬದಲಾಯಿಸಿ]

ಪ್ರಪಂಚದ ಭೂಪಟದಲ್ಲಿ ಕಾಂಗೋದ ಅಸ್ತಿತ್ವ ಹೊರಗಡೆಯ ಪ್ರಪಂಚಕ್ಕೆ ಗೊತ್ತಾದದ್ದು 19ನೆಯ ಶತಮಾನದಲ್ಲಿ. ಬೆಲ್ಜಿಯಮಿನ ದೊರೆ ಎರಡನೆಯ ಲೀಯೊಪೋಲ್ಡನ ಆಸಕ್ತಿಯಿಂದಾಗಿ. ಅದಕ್ಕೆ ಮುಂಚೆ ಅಲ್ಲಿ ನೆಲಸಿದ್ದ ಅನೇಕ ಗುಂಪುಗಳಲ್ಲಿ ಒಂದು ರಾಷ್ಟ್ರದ ಕಲ್ಪನೆ ಇರಲಿಲ್ಲ. ಅಲ್ಲಿದ್ದ ರಾಜ್ಯಗಳಲ್ಲಿ ಒಂದರ ಹೆಸರು ಕಾಂಗೋ. ಅಲ್ಲಿಯ ನದಿಗೂ ಅದೇ ಹೆಸರಿತ್ತು. ಆ ರಾಜ್ಯ ಅತ್ಯಂತ ವಿಸ್ತಾರವಾಗಿದ್ದದ್ದು 16ನೆಯ ಶತಮಾನದಲ್ಲಿ. ಆಗಲೂ ಅದು ಸ್ಟ್ಯಾನ್ಲಿ ಮಡುವಿನಿಂದ ಕೆಳಗಡೆಯ ಭಾಗವನ್ನೂ ಈಗಿನ ಅಂಗೋಲದ ಉತ್ತರಭಾಗವನ್ನೂ ಒಳಗೊಂಡಿತ್ತು. 19ನೆಯ ಶತಮಾನದ ವೇಳೆಗೆ ಆ ರಾಜ್ಯ ಅಳಿದಿತ್ತು. 19ನೆಯ ಶತಮಾನದಲ್ಲಿ ಎರಡನೆಯ ಲೀಯೊಪೋಲ್ಡ್ ದೊರೆ ತನ್ನ ದೇಶಕ್ಕೊಂದು ವಸಾಹತು ಸಂಪಾದಿಸಬೇಕೆಂಬ ಉದ್ದೇಶದಿಂದ ಈ ನಾಡಿನ ಮೇಲೆ ಕಣ್ಣಿಟ್ಟ. ಆದರೆ ಅವನ ಕನಸಿಗೆ ಅವನ ಸರ್ಕಾರ ಬೆಂಬಲ ನೀಡಲಿಲ್ಲ. ಆಗ ಅವನು ಖಾಸಗಿಯಾಗಿ ಪ್ರಯತ್ನ ನಡೆಸಿ, ತನ್ನ ಸ್ವಂತ ವೆಚ್ಚದಿಂದ ಈ ಕಾರ್ಯದಲ್ಲಿ ಉದ್ಯುಕ್ತನಾದ. 1876ರಲ್ಲಿ ಆಫ್ರಿಕನ್ ಅಂತರರಾಷ್ಟ್ರೀಯ ಸಂಘದ ಸ್ಥಾಪನೆಯಾಯಿತು. ಆಫ್ರಿಕನ್ ಪ್ರದೇಶದ ಪರಿಶೋಧನೆಯೂ ಅಲ್ಲಿಯ ಜನರನ್ನು ನಾಗರಿಕರನ್ನಾಗಿ ಮಾಡುವುದೂ ಆ ಸಂಘದ ಉದ್ದೇಶ. ಆ ಸಂಘ ಅಷ್ಟೇನೂ ಯಶಸ್ಸು ಗಳಿಸಲಿಲ್ಲ. ಆದರೆ ಅದರ ಮರೆಯಲ್ಲಿ ಲೀಯೊಪೋಲ್ಡ್ ದೊರೆ ತನ್ನ ವಸಾಹತಿನ ಆಶೆಯ ಸುರುಳಿ ಬಿಚ್ಚಿದ. 1874-77ರಲ್ಲಿ ಹೆನ್ರಿ ಎ. ಸ್ಟ್ಯಾನ್ಲಿ ಈ ಪ್ರದೇಶದಲ್ಲಿ ಸಂಚರಿಸಿ, ಕಾಂಗೋ ನದಿಯ ಜಾಡನ್ನು ಪತ್ತೆ ಹಚ್ಚಿದ. 1878ರಲ್ಲಿ ಸ್ಟ್ಯಾನ್ಲಿಯನ್ನು ದೊರೆ ತನ್ನ ಆಶೆಯ ಸಾಧನೆಗಾಗಿ ನೇಮಿಸಿಕೊಂಡ. 1879-84ರಲ್ಲಿ ಸ್ಟ್ಯಾನ್ಲಿ ಕೆಲವು ತರುಣ ಸಾಹಸಿಗಳೊಡಗೂಡಿ ಕಾಂಗೋ ನದಿಯ ಮೇಲ್ಭಾಗದಲ್ಲೂ ಪರಿಶೋಧನೆ ನಡಸುವುದು ಸಾಧ್ಯವಾಯಿತು. ಆ ಭಾಗದಲ್ಲೆಲ್ಲೂ ಸ್ಥಳೀಯರಾಗಲಿ ವಿದೇಶೀಯರಾಗಲಿ ಅವನನ್ನು ಪ್ರತಿಭಟಿಸಲಿಲ್ಲ. ಆದರೆ ಸ್ಟ್ಯಾನ್ಲಿ ಸರೋವರದ ಬಳಿಗೆ ಆ ವೇಳೆಗಾಗಲೇ ಬ್ಯ್ರಾಜûನ ಕಡೆಯವರು ಬಂದಿದ್ದರು. ಆದ್ದರಿಂದ ಸ್ಟ್ಯಾನ್ಲಿ ಅದರ ಉತ್ತರ ಭಾಗವನ್ನು ಫ್ರೆಂಚರಿಗೆ ಬಿಟ್ಟುಕೊಟ್ಟು ದಕ್ಷಿಣದ ದಡದಲ್ಲಿ ಲೀಯೊಪೋಲ್ಡ್‍ವಿಲ್ ಸ್ಥಾಪಿಸಿದ. ಅದೇ ಈಗಿನ ಕೀನ್ಷಾಸ ಸ್ಟ್ಯಾನ್ಲಿ ಅನೇಕ ಆಫ್ರಿಕನ್ ನಾಯಕರೊಂದಿಗೆ ಒಪ್ಪಂದ ಮಾಡಿಕೊಂಡು ಉಪಾಯದಿಂದ ಅವರನ್ನೆಲ್ಲ ಅಧೀನರನ್ನಾಗಿ ಮಾಡಿಕೊಂಡ. ಈತರ ಪಾಶ್ಚಾತ್ಯ ರಾಷ್ಟ್ರಗಳಿಗೂ ಈ ಪ್ರದೇಶದಲ್ಲಿ ವ್ಯಾಪಾರ ಮಾಡುವ ಸ್ವಾತಂತ್ರ್ಯ ದೊರಕಿಸಿಕೊಡುವ ಭರವಸೆ ನೀಡಿದ್ದರಿಂದ ಲೀಯೊಪೋಲ್ಡನ ಸ್ಥಾನ ಭದ್ರವಾಯಿತು. 1885ರಲ್ಲಿ ಲೀಯೊಪೋಲ್ಡ್ ದೊರೆ ಆ ಪ್ರದೇಶದ ಪ್ರಭುವಾದ. ಕಾಂಗೋ ಸ್ವತಂತ್ರ ರಾಜ್ಯ ಎಂದು ಅದಕ್ಕೆ ಹೆಸರಾಯಿತು. ರಾಜನ ಸ್ವಂತ ಆಸ್ತಿಯಾಗಿ ಇದನ್ನು ನಿರ್ವಹಿಸುವುದು ಕಷ್ಟವೆನಿಸಿದಾಗ ಆತ ಬೆಲ್ಜಿಯಂ ಸರ್ಕಾರವನ್ನು ಒಪ್ಪಿಸಿ 1908ರಲ್ಲಿ ಅದನ್ನು ಸರ್ಕಾರಕ್ಕೆ ವಶಪಡಿಸಿದ.

ನವ ಇತಿಹಾಸ

[ಬದಲಾಯಿಸಿ]

1960ರಲ್ಲಿ ಇತರ ಆಫ್ರಿಕನ್ ವಸಾಹತುಗಳು ಸ್ವತಂತ್ರ ರಾಷ್ಟ್ರಗಳಾದಂತೆ ಕಾಂಗೋವೂ ಸ್ವಾತಂತ್ರ್ಯ ಪಡೆಯಿತು. 1960ರ ಏಪ್ರಿಲ್ 26ರಿಂದ ಮೇ 16ರ ವರೆಗೆ ನಡೆದ ಆರ್ಥಿಕ ಪರಿಷತ್ತಿನಲ್ಲಿ ಸಾಮಾಜಿಕ ಮತ್ತು ಆರ್ಥಿಕ ವಿಷಯಗಳಲ್ಲಿ ಕಾಂಗೋ ದೇಶದೊಡನೆ ಸಹಕರಿಸಲು ಬೆಲ್ಜಿಯನ್ ಸರ್ಕಾರ ಒಪ್ಪಿತು. ಕಾಂಗೋದ ತಾತ್ಕಾಲಿಕ ಸಂವಿಧಾನಕ್ಕೆ ಸಹಿ ಬಿದ್ದದ್ದು 1960ರ ಮೇ 19ರಂದು. ಸಂವಿಧಾನಕ್ಕೆ ಸಹಿಬಿದ್ದ ಕೇವಲ ಒಂದು ತಿಂಗಳು ನಾಲ್ಕು ದಿನಗಳಲ್ಲಿ ಅಂದರೆ 1960ರ ಜೂನ್ 24ರಂದು ಪ್ಯಾಟ್ರಿಸ್ ಲುಮುಂಬನೇ ಪ್ರಧಾನ ಮಂತ್ರಿಯಾದ. ಆತನ ರಾಜಕೀಯ ಸ್ಪರ್ಧಿ ಕಸವುಬು ರಾಷ್ಟ್ರಾಧ್ಯಕ್ಷನಾದ. ಅಲ್ಲಿಂದ ಆರು ದಿನಗಳಲ್ಲಿ (ಜೂನ್ 30) ಕಾಂಗೋದ ಸ್ವಾತಂತ್ರ್ಯವನ್ನು ಸಾರಲಾಯಿತಾಗಿ ಅದೊಂದು ಪ್ರಜಾಸತ್ತಾತ್ಮಕ ಗಣರಾಜ್ಯವೆನಿಸಿತು. ಆ ಮುಂದೂ ಪ್ಯಾಟ್ರಿಸ್ ಲುಮುಂಬ ಪ್ರಧಾನಿಯಾಗಿಯೂ, ಕಸವುಬು ಅಧ್ಯಕ್ಷರಾಗಿಯೂ ಮುಂದುವರಿದರು. 1960ರ ಕೊನೆಯ ವೇಳೆಗೆ ಕಾಂಗೋ ಹಲವು ಭಾಗಗಳಾಗಿ ಒಡೆದಿತ್ತು. ಲೀಯೊಪೋಲ್ಡ್‍ವಿಲ್ ಮತ್ತು ಈಕ್ವೇಟರ್ ಪ್ರಾಂತ್ಯಗಳಲ್ಲಿ ಕಸವುಬು ಮತ್ತು ಮೊಬುಟುರ ಅಧಿಕಾರ ಅಲ್ಪ ಸ್ವಲ್ಪವಿತ್ತು. ಲುಮುಂಬನ ಉಪಪ್ರಧಾನಿಯಾಗಿದ್ದ ಗಿಜೆóಂಜೆಗೆ ಸ್ಟ್ಯಾನ್ಲಿವಿಲ್‍ನ ಈಸ್ಟರ್ನ್ ಮತ್ತು ಕೀವೂ ಪ್ರಾಂತ್ಯಗಳಲ್ಲೂ ಪ್ರಭಾವವಿತ್ತು. ಷೋಂಬೆ ಕಟಾಂಗ ಸ್ವತಂತ್ರ ರಾಜ್ಯದ ಅಧಿಪತಿಯೆಂದು 1960ರಲ್ಲಿ ಹೇಳಿಕೊಳ್ಳುತ್ತಿದ್ದ. ದಕ್ಷಿಣ ಕಾಸೈಯಲ್ಲಿದ್ದ ಆಲ್ಬರ್ಟ್ ಕಾಲೊಂಜಿಯೂ ತನ್ನ ಪ್ರತ್ಯೇಕತೆಯನ್ನು ವ್ಯಕ್ತಪಡಿಸುತ್ತಿದ್ದ. ಷೋಂಬೆಯದಂತೂ ಹೆಚ್ಚಿನ ತಕರಾರಾಗಿತ್ತು. ಬೆಲ್ಜಿಯನ್ ಸೇನೆ ನಿರ್ಗಮಿಸಿತ್ತಾದರೂ ಷೊಂಬೆಯ ಪಡೆಗಳಿಗೆ ಅದರದೇ ನಾಯಕತ್ತ್ವವಿತ್ತು. ಆ ಪ್ರಾಂತ್ಯದ ಗಣಿ ಕಂಪನಿಗಳ ಬೆಂಬಲವೂ ಅವನಿಗಿತ್ತು. ಬೆಲ್ಜಿಯಂ, ಬ್ರಿಟನ್ ಮತ್ತು ಫ್ರಾನ್ಸ್‍ಗಳ ಸಹಾನುಭೂತಿ ತನ್ನ ಕಡೆಗಿದೆಯೆಂಬುದು ಅವನ ಭರವಸೆ. ಅಧ್ಯಕ್ಷ ಕಸವುಬುವಿನ ಸಂಧಾನ ಫಲಿಸಲಿಲ್ಲ. ಅಂತರ್ಯುದ್ಧ ಆರಂಭವಾಯಿತು. ಲುಮುಂಬ ಕೊಲೆಗೀಡಾದ. ಷೋಂಬೆಯ ಅಧ್ಯಕ್ಷತೆಯಲ್ಲಿ ಕಟಾಂಗ ಸ್ವಲ್ಪಕಾಲ ಸ್ವತಂತ್ರವೆನಿಸಿಕೊಂಡಿತ್ತು. ಅಂತರ್ಯುದ್ಧವನ್ನು ಕೊನೆಗೊಳಿಸಿ ಕಾಂಗೋದಲ್ಲಿ ಶಾಂತಿಸ್ವಾತಂತ್ರ್ಯಗಳನ್ನು ಸ್ಥಾಪಿಸಲು ವಿಶ್ವಸಂಸ್ಥೆ ನಡುವೆ ಪ್ರವೇಶಿಸಿತು. 1963ರಲ್ಲಿ ಕಟಾಂಗ ಕೇಂದ್ರ ಸರ್ಕಾರದ ಅಧೀನಕ್ಕೆ ಬಂತು. ವಿಶ್ವಸಂಸ್ಥೆಯ ಕಾರ್ಯಾಚರಣೆ ಕೊನೆಗೊಂಡಿದ್ದು 1964ರಲ್ಲಿ. ಆಗ ಸ್ಥಾಪಿತವಾದ ಹೊಸ ಸರ್ಕಾರಕ್ಕೆ ಷೋಂಬೆ ಪ್ರಧಾನಿಯಾದ. ಅವನನ್ನು ಸರ್ಕಾರ ರಚಿಸಲು ಆಹ್ವಾನಿಸಿದ್ದರಿಂದ ಕಸವುಬು ಜನಪ್ರಿಯತೆ ಕಳೆದುಕೊಂಡ. ಮುಂದೆ ಷೋಂಬೆ ಪ್ರಬಲನಾಗುತ್ತಿದ್ದುದನ್ನು ಕಂಡು ಕಸವುಬು ಅವನನ್ನು ಪದಚ್ಯುತನನ್ನಾಗಿ ಮಾಡಿದ. 1965ರಲ್ಲಿ ಲೆ.ಜ. ಜೋಸೆಫ್ ಮೊಬುಟು ಪ್ರಬಲನಾದ. ಅವನಿಂದ ಕಸವುಬುವೇ ಅಧಿಕಾರ ಕಳೆದುಕೊಳ್ಳಬೇಕಾಯಿತು. ಸೈನಿಕ ವೃತ್ತಿಯ ಬಿಳಿಯರಿಂದ ಕೂಡಿದ ಸೇನೆಯ ಬಲದಿಂದ ಪೂರ್ವ ಪ್ರಾಂತ್ಯಗಳು 1967ರಲ್ಲಿ ಮತ್ತೆ ಬಂಡಾಯ ನಡೆಸಿದುವು. ಕೊನೆಗೆ ಈ ಸೈನ್ಯ ರುವಾಂಡಕ್ಕೆ ಹಿಂದೆಗೆಯಲಾಗಿ ಕಾಂಗೋಗೆ ಶಾಂತಿ ಬಂತು. 1968ರಲ್ಲಿ ಮಧ್ಯ ಆಫ್ರಿಕನ್ ಗಣರಾಜ್ಯ ಮತ್ತು ಚಾದ್‍ಗಳೊಂದಿಗೆ ಆರ್ಥಿಕ ಒಕ್ಕೂಟದ ಸ್ಥಾಪನೆಯಾಯಿತು. ಮಧ್ಯ ಆಫ್ರಿಕನ್ ಗಣರಾಜ್ಯ ಈ ಒಕ್ಕೂಟದಿಂದ ಅನಂತರ ವಾಪಸಾಯಿತು. 1967ರಲ್ಲಿ ಜನಮತಗಣನೆಯ ಆಧಾರದ ಮೇಲೆ ಜಾರಿಗೆ ಬಂದ ಸಂವಿಧಾನದ ಪ್ರಕಾರ ಅಲ್ಲಿ ಅಧ್ಯಕ್ಷೀಯ ಆಡಳಿತಕ್ಕೆ ಅವಕಾಶ ಕಲ್ಪಿಸಲಾಯಿತು. ಸಾರ್ವತ್ರಿಕ ಚುನಾವಣೆಯ ಮೂಲಕ ವಿಧಾನ ಸಭೆಯನ್ನು ರಚಿಸಲಾಗುತ್ತದೆ. ರಾಷ್ಟ್ರದ ಅಧ್ಯಕ್ಷನಿಗೆ ವಿಪುಲಾಧಿಕಾರವುಂಟು. ಕಾಂಗೋದಲ್ಲಿ ಎಂಟು ಪ್ರಾಂತ್ಯಗಳಿವೆ. 1966ರಲ್ಲಿ ಅಲ್ಲಿಯ ಅನೇಕ ಪಟ್ಟಣಗಳ ಐರೋಪ್ಯ ನಾಮಗಳನ್ನು ತೆಗೆದು ಅವಕ್ಕೆ ದೇಶೀಯ ಹೆಸರುಗಳನ್ನಿಡಲಾಯಿತು. ಲೀಯೊಪೋಲ್ಡ್‍ವಿಲ್ ಎಂಬುದು ಕೀನ್ಷಾಸ ಆಯಿತು. ಎಲಿಸóಬೆತ್‍ವಿಲ್‍ನ ಈಗಿನ ಹೆಸರು ಲುಬುಂಬಾಷಿ. ಸ್ಟ್ಯಾನ್ಲಿವಿಲ್ ಎಂಬುದು ಕೀಸಾಂಗಾನಿ ಆಗಿದೆ. ಆಲ್ಬರ್ಟ್‍ವಿಲ್‍ನ ನಾಮಧೇಯ ಕಾಲೆಮೀ. ಕಾಕೀಯವೀಲನ್ನು ಈಗ ಮಾಬಂಡಾಕ ಎಂದು ಕರೆಯಲಾಗುತ್ತಿದೆ. ಈಗಿನ ಇಸಿರೊ ಹಿಂದೆ ಪಾಲಿಸ್ ಆಗಿತ್ತು. ಬ್ಯಾನಿಂಗ್‍ವಿಲ್‍ನ ಹೆಸರನ್ನು ಹೊಡೆದು ಹಾಕಿ ಅದಕ್ಕೆ ಪ್ರತಿಯಾಗಿ ಬಾಂಡುಂಡು ಎಂದು ನಾಮಕರಣ ಮಾಡಲಾಗಿದೆ.


ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
  • Official website. Archived 3 November 2023 ವೇಬ್ಯಾಕ್ ಮೆಷಿನ್ ನಲ್ಲಿ.
  • Country Profile Archived 29 July 2018 ವೇಬ್ಯಾಕ್ ಮೆಷಿನ್ ನಲ್ಲಿ. from the BBC News
  • Democratic Republic of the Congo Archived 22 February 2021 ವೇಬ್ಯಾಕ್ ಮೆಷಿನ್ ನಲ್ಲಿ.. The World Factbook. Central Intelligence Agency.
  • Democratic Republic of the Congo from UCB Libraries GovPubs
  • Wikimedia Atlas of Democratic Republic of the Congo
  • Geographic data related to ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ at OpenStreetMap
  • The Democratic Republic of Congo from Global Issues Archived 15 November 2017 ವೇಬ್ಯಾಕ್ ಮೆಷಿನ್ ನಲ್ಲಿ.
  • Karen Fung (ed.). "Democratic Republic of the Congo". Africa South of the Sahara: Selected Internet Resources. Stanford University. Archived from the original on 4 October 2014. Retrieved 8 September 2014.

ಉಲ್ಲೇಖಗಳು

[ಬದಲಾಯಿಸಿ]
  1. The term "Kikongo" in the Constitution is actually referring to the Kituba language – which is known as Kikongo ya leta by its speakers – not the Kongo language proper. The confusion arises from the fact that the government of the DRC officially recognizes and refers to the language as "Kikongo".
ಉಲ್ಲೇಖ ದೋಷ: <ref> tags exist for a group named "lower-alpha", but no corresponding <references group="lower-alpha"/> tag was found
  1. "Democratic Republic of the Congo". United States Department of State. 2 June 2022. Archived from the original on 29 January 2023. Retrieved 23 March 2023.
  2. Central Intelligence Agency (2014). "Democratic Republic of the Congo". The World Factbook. Langley, Virginia: Central Intelligence Agency. Archived from the original on 22 February 2021. Retrieved 29 April 2014.
  3. "DR Congo Population (2025)". Worldometer. Archived from the original on 18 May 2024. Retrieved 30 April 2024.
  4. 1 2 3 4 "World Economic Outlook Database, April 2025" (in ಇಂಗ್ಲಿಷ್). Archived from the original on 28 April 2025. Retrieved 25 July 2025.
  5. "GINI index coefficient". CIA Factbook. Archived from the original on 7 July 2021. Retrieved 16 July 2021.
  6. "Human Development Report 2025" (PDF). United Nations Development Programme. 6 May 2025. Archived (PDF) from the original on 6 May 2025. Retrieved 6 May 2025.
  7. "Climate: Kinshasa". AmbiWeb GmbH. Archived from the original on 9 May 2016. Retrieved 7 June 2016.
  8. "KINSHASA, DEMOCRATIC REPUBLIC OF THE CONGO". Weatherbase. Archived from the original on 7 August 2016. Retrieved 7 June 2016.
  9. "STATIONSNUMMER 64210" (PDF). Danish Meteorological Institute. Archived from the original on 16 January 2013. Retrieved 7 June 2016.
  10. Archived 6 September 2010 ವೇಬ್ಯಾಕ್ ಮೆಷಿನ್ ನಲ್ಲಿ.
  11. "Climate: Mbuji-Mayi - Climate graph, Temperature graph, Climate table". Climate-Data.org. Retrieved 17 September 2013.