ಕಲ್ಲಡ್ಕ ಟೀ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಲ್ಲಡ್ಕ ಟೀ
ಕಲ್ಲಡ್ಕ ಟೀ
ವಿಧಚಹಾ
ಮೂಲ ದೇಶಕಲ್ಲಡ್ಕ, ದಕ್ಷಿಣ ಕನ್ನಡ, ಕರ್ನಾಟಕ, ಭಾರತ
ಮೂಲ ಪ್ರದೇಶಕರ್ನಾಟಕ
ಮೊದಲು ತಯಾರಾದುದು೧೯೫೨
Flavourಚಹಾ
ಬೇಕಾಗುವ ಪದಾರ್ಥಗಳುಚಹಾ, ಹಾಲು, ಸಕ್ಕರೆ

ಕಲ್ಲಡ್ಕ, ರಾಷ್ಟ್ರೀಯ ಹೆದ್ದಾರಿ ೭೫ರಲ್ಲಿ ರುವ ಒಂದು ಊರು. ಕಲ್ಲಡ್ಕ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿದೆ. ಜಿಲ್ಲಾ ಕೇಂದ್ರವಾದ ಮಂಗಳೂರಿನಿಂದ ಪೂರ್ವದಲ್ಲಿ ೩೨ಕಿಲೋಮೀಟರ್ ದೂರದಲ್ಲಿದೆ.

ಕಲ್ಲಡ್ಕದಲ್ಲಿ ಲಭ್ಯವಿರುವ ವಿಭಿನ್ನ ಶೈಲಿಯ ಚಹಾ ಕಲ್ಲಡ್ಕ ಟೀ ಎಂದು ಹೆಸರುವಾಸಿಯಾಗಿದೆ


ವಿಶೇಷತೆ[ಬದಲಾಯಿಸಿ]

ಈ ಚಹಾದಲ್ಲಿ ಬೆರಸಿದ ಹಾಲು, ಟೀಯೊಂದಿಗೆ ಸೇರದೆ ಲೋಟದಲ್ಲಿ ಪ್ರತ್ಯೇಕವಾಗಿಯೇ ಇರುತ್ತದೆ. ಅಂದರೆ ಲೋಟದ ಅರ್ಧ ಭಾಗ ಹಾಲಿನಂತೆಯೂ, ಇನ್ನರ್ಧ ಭಾಗ ಟೀಯಂತೆ ಕಾಣುತ್ತದೆ.

ಇತಿಹಾಸ[ಬದಲಾಯಿಸಿ]

೧೯೫೨ರಲ್ಲಿ ಲಕ್ಷ್ಮಿನಾರಾಯಣ ಹೊಳ್ಳರು ಕಲ್ಲಡ್ಕದಲ್ಲಿ ತಾವು ಪ್ರಾರಂಭಿಸಿದ ಹೋಟೆಲಿನಲ್ಲಿ ಹೊಸ ಬಗೆಯ ಟೀ ತಯಾರಿಸಲು ಪ್ರಾರಂಭಿಸಿದರು.[೧] ಲಕ್ಷ್ಮಿನಾರಾಯಣ ಹೊಳ್ಳರ ಕುಟುಂಬದವರಿಗೆ ಸೇರಿದ ಹೋಟೆಲುಗಳಲ್ಲಿ ಕಲ್ಲಡ್ಕ ಟಿ ಈಗ ಲಭ್ಯವಿರವುದು.[೨] ಪ್ರಸಕ್ತ ೨೦೨೦ರಲ್ಲಿ, ಶ್ರೀ ಶಿವರಾಮ ಹೊಳ್ಳ, ಈ ಹೊಟೇಲನ್ನು ನಡೆಸುತ್ತಿದ್ದಾರೆ.[೩]

ತಯಾರಿಸುವ ವಿಧಾನ[ಬದಲಾಯಿಸಿ]

ಗಾಜಿನ ಲೋಟದಲ್ಲಿ ಸಕ್ಕರೆ ಮಿಶ್ರಿತ ಹಾಲು ಹಾಗೂ ಬೇರೆಯಾಗಿ ಕಾಣುವ ಡಿಕಾಕ್ಷನ್ ಟೀಯನ್ನು ತಯಾರಿಸಲು ವಿಶೇಷ ವಿಧಾನವನ್ನು ಅನುಸರಿಸುತ್ತಾರೆ

ಚಮಚ ಚಹಾ ಪುಡಿಯನ್ನು ಶುಭ್ರವಾಗಿ ತೊಳೆದ ಬಟ್ಟೆಯಲ್ಲಿಟ್ಟು ಸುಮಾರು ೫೦೦ ಮಿಲಿ ಲೀಟರಿನಷ್ಟು ಕುದಿಯುವ ನೀರನ್ನು ಹಾಕಿ ಸರಿಯಾಗಿ ಹಿಂಡಿ ಸೋಸುತ್ತಾರೆ. ದೊರಕಿದ ಕಷಾಯದ ಪಾತ್ರೆಯನ್ನು ಕುದಿಯುವ ನೀರಿನಲ್ಲಿಟ್ಟು ಕಷಾಯದ ತಾಪಮಾನವನ್ನು ಸುಮಾರು ೯೦ ಡಿಗ್ರಿಗೆ ಮೀರುವಂತೆ ಕಾಪಾಡುತ್ತಾರೆ. ನಂತರ ಸುಮಾರು ಅರ್ಧ ಲೀಟರಿನಷ್ಟು ಕುದಿಯುತ್ತಿರುವ ಹಾಲನ್ನು ನಾಲ್ಕು ಚಮಚದಷ್ಟು ಸಕ್ಕರೆ ಹಾಕಿರುವ ಪಾತ್ರೆಯಲ್ಲಿ ಸುರಿಯುತ್ತಾರೆ. ಬಳಿಕ ಈಗಾಗಲೇ ಬಿಸಿ ನೀರಿನಲ್ಲಿ ಮುಳುಗಿಸಿಟ್ಟ ಗಾಜಿನ ಲೋಟವನ್ನು ಹೊರಗೆತ್ತಿ ಸಕ್ಕರೆ ಬೆರೆತ ಹಾಲನ್ನು ನೊರೆಯಾಗಿಸಿ ಲೋಟದ ಮುಕ್ಕಾಲು ಭಾಗದಷ್ಟು ತುಂಬುತ್ತಾರೆ. ಆನಂತರ ಚಮಚದಿಂದ ನಿಧಾನವಾಗಿ ಅದರ ಮೇಲೆ ಚಹಾ ಕಷಾಯವನ್ನು ಹಾಕುವರು. ಕಷಾಯದ ತಾಪಮಾನ ಹಾಲಿನ ತಾಪಮಾನಕ್ಕಿಂತಲೂ ಹೆಚ್ಚು ಇರುವಂತೆ ಕಾಪಾಡುತ್ತಾರೆ.

ಜನಪ್ರಿಯತೆ[ಬದಲಾಯಿಸಿ]

ರಾಷ್ಟ್ರೀಯ ಹೆದ್ದಾರಿ ೭೫ರಲ್ಲಿ ಇರುವ ಕಲ್ಲಡ್ಕಕ್ಕೆ ಕೆ.ಟಿ. ಸವಿಯಲು ಸುತ್ತಮುತ್ತಲಿನ ಊರಿನಿಂದಲೂ ಬರುತ್ತಾರೆ. ಕಲ್ಲಡ್ಕವನ್ನು ಹಾದು ಹೋದ ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿ,ಕರಾವಳಿ ಶಾಸಕರು, ಸಚಿವರು, ಸಂಸದರು, ಸಿನಿನಟರಾದ ಅಂಬರೀಶ್‌, ಜೂಹಿ ಚಾವ್ಲಾ, ಸುಮನ್‌, ರಾಧಿಕಾ ಮುಂತಾದವರು ಈ ಹೋಟೆಲ್‌ನ ಕಲ್ಲಡ್ಕ ಟೀಯ ರುಚಿ ಸವಿದಿದ್ದಾರೆ.[೪]

ಎನ್‍ಡಿಟಿವಿ ಗುಡ್ ಟೈಮ್ಸ್ ನಲ್ಲಿ ರಾಕಿ ಮತ್ತು ಮಯೂರ್ ನಡೆಸಿಕೊಟ್ಟ "ಹೈವೇ ಆನ್ ಮೈ ಪ್ಲೇಟ್" ಕಾರ್ಯಕ್ರಮದಲ್ಲಿ ಇದರ ವಿಶಿಷ್ಟತೆ ಪ್ರಸಾರವಾಗಿದೆ.[೫] ಹೆದ್ದಾರಿ ಬದಿಯ ಹೊಟೇಲೊಂದು ತನ್ನ ಚಹಾದ ವೈಶಿಷ್ಠತೆಯಿಂದ ಹೆಸರುವಾಸಿ ಆಗಿರುವುದು, ಹೆಚ್ಚುಗಾರಿಕೆಯೇ ಸರಿ.[೬]

ಉಲ್ಲೇಖ[ಬದಲಾಯಿಸಿ]

  1. https://timesofindia.indiatimes.com/city/coimbatore/layered-tea-anyone/articleshow/68440861.cms ಟೈಮ್ಸ್ ಆಫ್ ಇಂಡಿಯಾ ವರದಿ
  2. https://kannada.oneindia.com/news/mangaluru/don-t-miss-kalladka-tea-an-unique-blend-of-taste-style/articlecontent-pf69286-120860.html
  3. https://timesofindia.indiatimes.com/city/mangaluru/If-itamp39s-chai-it-should-be-Kalladka-KT/articleshow/11111348.cms
  4. https://www.udayavani.com/supplements/isiri/kt-hotel
  5. https://www.youtube.com/watch?v=0uJsGvK_5Xw
  6. https://www.tripadvisor.in/ShowUserReviews-g297630-d5326557-r472291972-Hotel_Laxmi_Nivas-Mangalore_Dakshina_Kannada_District_Karnataka.html

ಬಾಹ್ಯಕೊಂಡಿ[ಬದಲಾಯಿಸಿ]

ಕಲ್ಲಡ್ಕ ಟೀಯನ್ನು ತಯಾರಿಸುವ ದೃಶ್ಯಾವಳಿ

ದ ಹಿಂದು ಲೇಖನ