ವಿಷಯಕ್ಕೆ ಹೋಗು

ಕಲ್ಯಾಣಿ ಪ್ರಿಯದರ್ಶನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಲ್ಯಾಣಿ ಪ್ರಿಯದರ್ಶನ್
೨೦೧೭ ರಲ್ಲಿ ಕಲ್ಯಾಣಿ
ಜನನ
ಕಲ್ಯಾಣಿ ನಾಯರ್

(1993-04-05) ೫ ಏಪ್ರಿಲ್ ೧೯೯೩ (ವಯಸ್ಸು ೩೧)
ವಿದ್ಯಾಭ್ಯಾಸಪಾರ್ಸನ್ಸ್ ಸ್ಕೂಲ್ ಆಫ್ ಡಿಸೈನ್, ನ್ಯೂಯಾರ್ಕ್ ನಗರ (ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್)
ವೃತ್ತಿನಟಿ
ಸಕ್ರಿಯ ವರ್ಷಗಳು೨೦೧೭-ಪ್ರಸ್ತುತ
ಪೋಷಕರು

ಕಲ್ಯಾಣಿ ಪ್ರಿಯದರ್ಶನ್ (ಜನನ ೫ ಏಪ್ರಿಲ್ ೧೯೯೩) ಇವರು ಭಾರತೀಯ ನಟಿಯಾಗಿದ್ದು, ಕೆಲವು ತಮಿಳು ಮತ್ತು ತೆಲುಗು ಚಿತ್ರಗಳ ಜೊತೆಗೆ ಮಲಯಾಳಂ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಲ್ಯಾಣಿಯವರು ಒಂದು ದಕ್ಷಿಣ ಫಿಲ್ಮ್‌ಫೇರ್ ಪ್ರಶಸ್ತಿ ಮತ್ತು ಮೂರು ದಕ್ಷಿಣ ಭಾರತೀಯ ಅಂತರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ.[][]

ಚಲನಚಿತ್ರ ನಿರ್ಮಾಪಕರಾದ ಪ್ರಿಯದರ್ಶನ್ ಮತ್ತು ನಟಿ ಲಿಸ್ಸಿ ಅವರಿಗೆ ಜನಿಸಿದ ಕಲ್ಯಾಣಿಯವರು ಸಹಾಯಕ ಪ್ರೊಡಕ್ಷನ್ ಡಿಸೈನರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ತೆಲುಗು ಚಿತ್ರವಾದ ಹಲೋ (೨೦೧೭) ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ಇದರಿಂದ ಅವರು ದಕ್ಷಿಣದ ಅತ್ಯುತ್ತಮ ಮಹಿಳಾ ಚೊಚ್ಚಲ ಫಿಲ್ಮ್ಫೇರ್ ಪ್ರಶಸ್ತಿಯನ್ನು ಗೆದ್ದರು. ನಂತರ, ಅವರು ಹೀರೋ (೨೦೧೯) ಚಿತ್ರದ ಮೂಲಕ ತಮಿಳು ಮತ್ತು ವರನೆ ಅಗತ್ಯಮುಂಡ್ (೨೦೨೦) ಚಿತ್ರದ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಸೇರಿದರು. ತದನಂತರ, ಚಿತ್ರಲಹರಿ (೨೦೧೯), ಮಾನಾಡು (೨೦೨೧), ಹೃದಯಂ (೨೦೨೨), ತಲ್ಲುಮಾಲಾ (೨೦೨೨) ಮತ್ತು ಬ್ರೋ ಡ್ಯಾಡಿ (೨೦೨೨) ಚಿತ್ರಗಳಲ್ಲಿ ನಟಿಸಿದ್ದಾರೆ. ಇವುಗಳಲ್ಲಿ ಅವರು ಮಲಯಾಳಂ ಚಿತ್ರದಲ್ಲಿ ಅತ್ಯುತ್ತಮ ನಟಿಗಾಗಿ ಸೈಮಾ ಪ್ರಶಸ್ತಿಯನ್ನು ಗೆದ್ದರು.[][]

ಆರಂಭಿಕ ಜೀವನ ಮತ್ತು ಕುಟುಂಬ

[ಬದಲಾಯಿಸಿ]

ಕಲ್ಯಾಣಿಯವರು ೫ ಏಪ್ರಿಲ್ ೧೯೯೩ ರಂದು ಚೆನ್ನೈನಲ್ಲಿ ಮಲಯಾಳಿ ಕುಟುಂಬದಲ್ಲಿ[][] ಭಾರತೀಯ ಚಲನಚಿತ್ರ ನಿರ್ಮಾಪಕರಾದ ಪ್ರಿಯದರ್ಶನ್ ಮತ್ತು ನಟಿ ಲಿಸ್ಸಿ ದಂಪತಿಗಳಿಗೆ ಮಗಳಾಗಿ ಜನಿಸಿದರು.[] ಕಲ್ಯಾಣಿಯವರು ಇಬ್ಬರು ಮಕ್ಕಳಲ್ಲಿ ಹಿರಿಯರಾಗಿದ್ದು, ಸಿದ್ಧಾರ್ಥ್ ಎಂಬ ಕಿರಿಯ ಸಹೋದರನನ್ನು ಹೊಂದಿದ್ದಾರೆ.[] ಅವರು ತಮ್ಮ ಆರಂಭಿಕ ಶಾಲಾ ಶಿಕ್ಷಣವನ್ನು ಚೆನ್ನೈನ[] ಲೇಡಿ ಆಂಡಾಲ್‌ನಲ್ಲಿ ಪೂರ್ಣಗೊಳಿಸಿ, ಸಿಂಗಾಪುರದಲ್ಲಿ ಅಧ್ಯಯನವನ್ನು ಮುಂದುವರಿಸಿದರು. ಅಲ್ಲಿ ಅವರು ರಂಗಭೂಮಿ ಗುಂಪುಗಳಲ್ಲಿಯೂ ಕೆಲಸ ಮಾಡಿದರು. ಅಲ್ಲಿಂದ, ನ್ಯೂಯಾರ್ಕ್‌ನ ಪಾರ್ಸನ್ಸ್ ಸ್ಕೂಲ್ ಆಫ್ ಡಿಸೈನ್‌ನಿಂದ ವಾಸ್ತುಶಿಲ್ಪವನ್ನು ಅಧ್ಯಯನ ಮಾಡಿದರು.[೧೦] ಕಲ್ಯಾಣಿಯವರು ಭಾರತಕ್ಕೆ ಮರಳಿದ ನಂತರ, ಅವರು ಪಾಂಡಿಚೆರಿಯ ಆದಿಶಕ್ತಿ ಥಿಯೇಟರ್‌ನಲ್ಲಿ ನಟನಾ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.[೧೧]

ವೃತ್ತಿಜೀವನ

[ಬದಲಾಯಿಸಿ]

ಚೊಚ್ಚಲ ಮತ್ತು ಆರಂಭಿಕ ಕೆಲಸ (೨೦೧೭–೨೦೨೦)

[ಬದಲಾಯಿಸಿ]

ಕಲ್ಯಾಣಿಯವರು ೨೦೧೩ ರಲ್ಲಿ, ಹಿಂದಿ ಚಿತ್ರವಾದ ಕ್ರಿಶ್ ೩ (೨೦೧೩) ರಲ್ಲಿ ಸಾಬು ಸಿರಿಲ್ ಅವರ ಅಡಿಯಲ್ಲಿ ಸಹಾಯಕ ನಿರ್ಮಾಣ ವಿನ್ಯಾಸಕಿಯಾಗಿ ತಮ್ಮ ಚಲನಚಿತ್ರ ವೃತ್ತಿಜೀವನವನ್ನು ಪ್ರಾರಂಭಿಸಿದರು. ೨೦೧೬ ರಲ್ಲಿ, ಅವರು ತಮಿಳು ಚಿತ್ರವಾದ ಇರು ಮುಗನ್ (೨೦೧೬) ರಲ್ಲಿ ಸಹಾಯಕ ಕಲಾ ನಿರ್ದೇಶಕರಾಗಿ ಕೆಲಸ ಮಾಡಿದರು. ಕಲ್ಯಾಣಿಯವರು ೨೦೧೭ ರ, ತೆಲುಗು ಚಿತ್ರವಾದ ಹಲೋ ಮೂಲಕ ಅಖಿಲ್ ಅಕ್ಕಿನೇನಿ ಜೊತೆಗಿನ ಮೊದಲ ನಟನೆಯನ್ನು ಮಾಡಿದರು.[೧೨] ಚಿತ್ರವು ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆಯಿತು. ಆದರೆ, ಗಲ್ಲಾಪೆಟ್ಟಿಗೆಯಲ್ಲಿ ಸರಾಸರಿಗಿಂತ ಕಡಿಮೆ ಗಳಿಕೆಯಾಯಿತು.[೧೩] "ಕಲ್ಯಾಣಿ ಪ್ರಿಯದರ್ಶನ್ ಅವರ ಪ್ರವೇಶವು ಚಲನಚಿತ್ರಕ್ಕೆ ಸ್ವಲ್ಪ ತಡವಾಗಿ ಸಂಭವಿಸುತ್ತದೆ. ಆದರೆ, ಇದು ಅಖಿಲ್ ಅವರೊಂದಿಗೆ ಉತ್ತಮ ಕೆಮಿಸ್ಟ್ರಿಯನ್ನು ಹಂಚಿಕೊಳ್ಳುವ ಪ್ರಶಂಸನೀಯ ಚೊಚ್ಚಲ ಚಿತ್ರವಾಗಿದೆ" ಎಂದು ದಿ ಹಿಂದೂ ಹೇಳಿದೆ.[೧೪]

ಕಲ್ಯಾಣಿಯವರು ೨೦೧೯ ರಲ್ಲಿ, ಮೂರು ಚಿತ್ರದ ಬಿಡುಗಡೆಗಳನ್ನು ಹೊಂದಿದ್ದರು. ಅವರು ಮೊದಲ ಚಿತ್ರಲಹರಿಯಲ್ಲಿ ಸಾಯಿ ಧರಮ್ ತೇಜ್ ಜೊತೆಗೆ ಕಾಣಿಸಿಕೊಂಡರು. ಈ ಚಲನಚಿತ್ರವು ಮಿಶ್ರಿತ ಸಕಾರಾತ್ಮಕ ವಿಮರ್ಶೆಗಳನ್ನು ಪಡೆದುಕೊಂಡಿತು ಮತ್ತು ವಾಣಿಜ್ಯಿಕವಾಗಿ ಯಶಸ್ವಿಯಾಯಿತು.[೧೫] ಫಸ್ಟ್‌ಪೋಸ್ಟ್ ಹೇಳುವಂತೆ, "ಕಲ್ಯಾಣಿ ಪ್ರಿಯದರ್ಶನ್‌ಯವರು ಮುಗ್ಧ, ನಿಷ್ಕಪಟ ಹುಡುಗಿಯಾಗಿ ಉತ್ತಮ ಕೆಲಸ ಮಾಡುತ್ತಾರೆ.[೧೬] ಆದರೆ, ಸಾಯಿ ಧರಮ್ ತೇಜ್ ಅವರೊಂದಿಗೆ ಅವರು ನಟಿಸಿದ್ದ ರೋಮ್ಯಾಂಟಿಕ್ ಹಾಡು ಅಷ್ಟು ನೈಜತೆಯನ್ನು ಹೊಂದಿರಲಿಲ್ಲ". ಅವರ ವರ್ಷದ ಇತರ ಎರಡು ಚಿತ್ರದ ಬಿಡುಗಡೆಗಳು ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾದವು. ನಂತರ, ಅವರು ರಣರಂಗಮ್ ಚಿತ್ರದಲ್ಲಿ ಶರ್ವಾನಂದ್ ಮತ್ತು ಹೀರೋ ಚಿತ್ರದಲ್ಲಿ ಶಿವಕಾರ್ತಿಕೇಯನ್ ಅವರ ಜೊತೆಗೆ ಕಾಣಿಸಿಕೊಂಡರು.[೧೭][೧೮]

೨೦೨೦ ರಲ್ಲಿ, ಅವರು ದುಲ್ಕರ್ ಸಲ್ಮಾನ್ ಜೊತೆಗೆ ವರನೆ ಅಗತ್ಯಮುಂಡ್ ಚಿತ್ರದ ಮೂಲಕ ಮಲಯಾಳಂಗೆ ಪಾದಾರ್ಪಣೆ ಮಾಡಿದರು.[೧೯] ದಿ ನ್ಯೂಸ್ ಮಿನಿಟ್ ಪ್ರಕಾರ, "ಕಲ್ಯಾಣಿಯವರು ಯುವತಿಯಾಗಿ ತಮ್ಮ ಪಾತ್ರವನ್ನು ಸುಲಭವಾಗಿ ನಿರ್ವಹಿಸುತ್ತಾರೆ. ಕುತೂಹಲಕಾರಿಯಾಗಿ, ತಾಯಿ ಮತ್ತು ಮಗಳ ನಡುವೆ ಅವರು ಹೆಚ್ಚು ಸಾಂಪ್ರದಾಯಿಕವಾಗಿದ್ದಾರೆ.[೨೦] ನಂತರ, ಅವರು ಪುಥಮ್ ಪುದು ಕಾಲೈ ಚಿತ್ರದ ಒಂದು ಭಾಗದಲ್ಲಿ ಊರ್ವಶಿಯ ಕಿರಿಯ ಆವೃತ್ತಿಯಲ್ಲಿ ಅಭಿನಯಿಸಿದರು.[೨೧] "ಕಲ್ಯಾಣಿ ಪ್ರಿಯದರ್ಶನ್‌ರವರು ವರ್ತಮಾನ ಮತ್ತು ಭೂತಕಾಲದ ಘಟನೆಗಳನ್ನು ಪರಿಪೂರ್ಣವಾಗಿ ನಟಿಸಿದ್ದಾರೆ" ಎಂದು ಎನ್‌ಡಿಟಿವಿ ಇಂಡಿಯಾ ಪ್ರಕಟಿಸಿದ್ದಾರೆ.[೨೨]

ವೃತ್ತಿಜೀವನದ ಪ್ರಗತಿ ಮತ್ತು ಯಶಸ್ಸು (೨೦೨೧-ಪ್ರಸ್ತುತ)

[ಬದಲಾಯಿಸಿ]

೨೦೨೧ ರ ಮೊದಲ ಚಿತ್ರದಲ್ಲಿ, ಕಲ್ಯಾಣಿಯವರು ತಮಿಳು ಚಿತ್ರವಾದ ಮಾನಾಡುನಲ್ಲಿ ಸಿಲಂಬರಸನ್ ಜೊತೆಗೆ ಕಾಣಿಸಿಕೊಂಡರು.[೨೩] ಇದು ವಿಮರ್ಶಕರಿಂದ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು ಮತ್ತು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು. ಹಿಂದೂಸ್ತಾನ್ ಟೈಮ್ಸ್ ಪ್ರಕಾರ, "ಕಲ್ಯಾಣಿ ಪ್ರಿಯದರ್ಶನ್‌ರವರು ಉತ್ತಮ ಮತ್ತು ಅವರು ಪಡೆಯುವ ಸೀಮಿತ ಪರದೆಯ ಜಾಗದಲ್ಲಿ ಮಿಂಚುತ್ತಾರೆ" ಎಂಬುದಾಗಿದೆ.[೨೪] ಅದೇ ವರ್ಷದಲ್ಲಿ ಅವರ ಮುಂದಿನ ಚಿತ್ರ ಮರಕ್ಕರ್: ಲಯನ್ ಆಫ್ ದಿ ಅರೇಬಿಯನ್ ಸೀ ಪ್ರಣವ್ ಮೋಹನ್‌ಲಾಲ್ ಅವರೊಂದಿಗೆ ಬಿಡುಗಡೆಯಾಯಿತು.[೨೫] ಈ ಚಿತ್ರವು ಮಿಶ್ರ ಮತ್ತು ನಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು ಮತ್ತು ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾಯಿತು.[೨೬]

೨೦೨೨ ವರ್ಷವು ಕಲ್ಯಾಣಿ ಅವರ ವೃತ್ತಿಜೀವನದಲ್ಲಿ ಒಂದು ತಿರುವು ನೀಡಿತು. ಅವರ ಎಲ್ಲಾ ಮೂರು ಚಿತ್ರದ ಬಿಡುಗಡೆಗಳು ಯಶಸ್ವಿಯಾದವು ಮತ್ತು ಸಕಾರಾತ್ಮಕ ವಿಮರ್ಶೆಗಳನ್ನು ಗಳಿಸಿದವು.[೨೭] ಅವರ ಮೊದಲ ಹೃದಯಂ ಚಿತ್ರದಲ್ಲಿ ಪ್ರಣವ್ ಮೋಹನ್‌ಲಾಲ್ ಜೊತೆಗೆ ಕಾಣಿಸಿಕೊಂಡರು. ಇದು ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆಯಿತು ಮತ್ತು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು. "ಕಲ್ಯಾಣಿಯವರು ಸೂಕ್ತವಾಗಿ ನಟಿಸಿದ್ದಾರೆ ಮತ್ತು ಹೃದಯಂ ಚಿತ್ರವು ಅವರ ಅತ್ಯುತ್ತಮ ಸಮಯ" ಎಂದು ಸಿನೆಮಾ ಎಕ್ಸ್‌ಪ್ರೆಸ್ ಹೇಳಿದೆ.[೨೮][೨೯] "ಕಲ್ಯಾಣಿಯವರು ನಿತ್ಯಾ ಪಾತ್ರದಲ್ಲಿ ಪರಿಣಾಮಕಾರಿಯಾಗಿದ್ದರು ಮತ್ತು ಪ್ರಣವ್ ಅವರೊಂದಿಗಿನ ಅವರ ಕೆಮಿಸ್ಟ್ರಿ ಚಿತ್ರದ ಉನ್ನತ ಅಂಶಗಳಲ್ಲಿ ಒಂದಾಗಿದೆ" ಎಂದು ಮನೋರಮಾ ಆನ್ಲೈನ್ ಗಮನಿಸಿದೆ. ನಂತರ, ಅವರು ಪೃಥ್ವಿರಾಜ್ ಸುಕುಮಾರನ್ ಜೊತೆಗೆ ಬ್ರೋ ಡ್ಯಾಡಿ ಚಿತ್ರದಲ್ಲಿ ಕಾಣಿಸಿಕೊಂಡರು. ಇದು ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ನೇರವಾಗಿ ಬಿಡುಗಡೆಯಾಯಿತು.[೩೦] ಇಂಡಿಯಾ ಟುಡೇ ಗಮನಿಸಿದಂತೆ, "ಅನ್ನಾ ಪಾತ್ರವು ಕಲ್ಯಾಣಿಯವರಿಗೆ ಒಂದು ಬಹಿರಂಗವಾಗಿದೆ. ಅವರ ಸಹಜವಾದ ಅಭಿವ್ಯಕ್ತಿಗಳು ಪ್ರತಿ ಸನ್ನಿವೇಶಕ್ಕೂ ಸೂಕ್ತವಾಗಿವೆ".[೩೧] ಅವರು ತಮ್ಮ ವರ್ಷದ ಅಂತಿಮ ಚಿತ್ರವಾದ, ತಲ್ಲುಮಾಲಾದಲ್ಲಿ ಟೊವಿನೋ ಥಾಮಸ್ ಜೊತೆಗೆ ಕಾಣಿಸಿಕೊಂಡರು. ಇದು ವಿಮರ್ಶಕರಿಂದ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು ಮತ್ತು ಇದುವರೆಗೆ ಅತಿ ಹೆಚ್ಚು ಹಣ ಗಳಿಸಿದ ಮಲಯಾಳಂ ಚಲನಚಿತ್ರಗಳಲ್ಲಿ ಒಂದಾಯಿತು.[೩೨][೩೩] ದಿ ವೀಕ್ ಗಮನಿಸಿದಂತೆ, "ಕಲ್ಯಾಣಿಯ ಬೆಪಾತು ಒಂದು ಬಲವಾದ ಪಾತ್ರವಾಗಿದ್ದು, ಅವರು ದೊಡ್ಡ ಸಾಮಾಜಿಕ ಮಾಧ್ಯಮದ ಅನುಯಾಯಿಗಳನ್ನು ಹೇಳಿಕೊಳ್ಳುತ್ತಾರೆ. ಪಾತು ಪಾತ್ರವು ಕಲ್ಯಾಣಿಯವರ ಕೈಯಲ್ಲಿ ಸುರಕ್ಷಿತವಾಗಿದ್ದಾರೆ" ಎಂಬುದಾಗಿದೆ.[೩೪]

ಕಲ್ಯಾಣಿಯವರು ೨೦೨೩ ರಲ್ಲಿ, ಎರಡು ಚಿತ್ರದ ಬಿಡುಗಡೆಗಳನ್ನು ಹೊಂದಿದರು. ಅವರು ಮೊದಲು ಶೇಷಮ್ ಮೈಕ್-ಇಲ್ ಫಾತಿಮಾದಲ್ಲಿ ಫುಟ್‌ಬಾಲ್ ನಿರೂಪಕರಾಗಲು ಬಯಸುವ ಮುಸ್ಲಿಂ ಮಹಿಳೆಯ ಪಾತ್ರವನ್ನು ನಿರ್ವಹಿಸಿದರು.[೩೫] ದಿ ಹಿಂದೂ ಪತ್ರಿಕೆಯ ಪ್ರಕಾರ, "ಕಲ್ಯಾಣಿಯವರು ತಮ್ಮ ಪರದೆಯ ಉಪಸ್ಥಿತಿಯೊಂದಿಗೆ ಶ್ರದ್ಧೆಯಿಂದ ಅಭಿನಯಿಸಿದ್ದಾರೆ. ಅವರು ಫಾತಿಮಾ ಪಾತ್ರವನ್ನು ಸುಲಭವಾಗಿ ನಿರ್ವಹಿಸಿದ್ದಾರೆ.[೩೬] ಆದರೆ, ಕೆಲವು ದೃಶ್ಯಗಳಲ್ಲಿನ ಭಾರವಾದ ಸಂಭಾಷಣೆಗಳಿಂದ ತೂಕವನ್ನು ಕಡಿಮೆ ಮಾಡಲಾಗಿದೆ. ಇದರಿಂದಾಗಿ ಅವರನ್ನು ನಟಿಯಾಗಿ ನಿರ್ಬಂಧಿಸಲಾಗಿದೆ". ನಂತರ, ಅವರು ಆಂಟೋನಿ ಚಿತ್ರದಲ್ಲಿ ಜೋಜು ಜಾರ್ಜ್ ಅವರೊಂದಿಗೆ ಆಕ್ರಮಣಕಾರಿ ಕಾಲೇಜು ವಿದ್ಯಾರ್ಥಿಯಾಗಿ ಅಭಿನಯಿಸಿದರು. ಕಲ್ಯಾಣಿಯವರಿಗೆ ಮೊದಲಾರ್ಧದಲ್ಲಿ ಕೆಲವು ಅದ್ಭುತ ಹೋರಾಟದ ದೃಶ್ಯಗಳು ಸಿಗುತ್ತವೆ. ಆದರೆ, ಅವರ ಪಾತ್ರದ ಮೊದಲ ಆಯಾಮದ ಚಿತ್ರಣವು ಸಹಾಯ ಮಾಡುವುದಿಲ್ಲ ಮತ್ತು ಅದು ಸಂಪರ್ಕವನ್ನು ಕಳೆದುಕೊಳ್ಳುತ್ತದೆ.[೩೭][೩೮]

೨೦೨೪ ರ ಮೊದಲ ಬಿಡುಗಡೆಯಲ್ಲಿ, ಕಲ್ಯಾಣಿಯವರು ಪ್ರಣವ್ ಮೋಹನ್‌ಲಾಲ್ ಅವರೊಂದಿಗೆ ವರ್ಷಂಗಲ್ಕು ಶೇಷಮ್[೩೯] ಚಿತ್ರಕ್ಕಾಗಿ ಮತ್ತೆ ಒಂದಾದರು.[೪೦] ಹಿಂದೂಸ್ತಾನ್ ಟೈಮ್ಸ್ ಪ್ರಕಾರ, "ಕಲ್ಯಾಣಿಯವರು ಮುಂದಿನ ಜೀನಿ ತಮಿಳು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ".[೪೧]

ಮಾಧ್ಯಮದಲ್ಲಿ

[ಬದಲಾಯಿಸಿ]

ಕಲ್ಯಾಣಿಯವರನ್ನು ಅತಿ ಹೆಚ್ಚು ಸಂಭಾವನೆ ಪಡೆಯುವ ಮಲಯಾಳಂ ನಟಿಯರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಅವರು ತಮ್ಮ ಹಲೋ ಚಿತ್ರದಲ್ಲಿ ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆದರು. ಈ ಚಿತ್ರವು ಅವರ ವೃತ್ತಿಜೀವನಕ್ಕೆ ಸಂಭವಿಸಿದ ಅತ್ಯುತ್ತಮ ಚಿತ್ರವಾಗಿದೆ.[೪೨] ೨೦೧೭ ರ ೧೨೩ತೆಲುಗಿನ "ಉನ್ನತ ನಟಿಯರ" ಪಟ್ಟಿಯಲ್ಲಿ "ಹಲೋ" ಚಿತ್ರದ ಮೂಲಕ ಕಲ್ಯಾಣಿಯವರು ಉತ್ತಮ ಸ್ಥಾನ ಪಡೆದುಕೊಂಡಿದ್ದಾರೆ.[೪೩] ಅವರ ಚಲನಚಿತ್ರ ವೃತ್ತಿಜೀವನದ ಬಗ್ಗೆ, ರೆಡಿಫ್.ಕಾಮ್‌ನ ಸುಭಾಷ್ ಕೆ.ಝಾ ಅವರು, "ಕಲ್ಯಾಣಿಯವರು ಮಲಯಾಳಂ ಚಿತ್ರರಂಗದಲ್ಲಿ ಹೆಸರುವಾಸಿಯಾಗಿದ್ದಾರೆ. ಸುಂದರ ಮತ್ತು ಅಪಾರ ಪ್ರತಿಭಾನ್ವಿತರಾದ ಅವರು ತಮ್ಮ ತಂದೆಯನ್ನು ಮೀರಿಸಿದ್ದಾರೆ" ಎಂದು ವ್ಯಕ್ತಪಡಿಸಿದರು.[೪೪]

ಕಲ್ಯಾಣಿ ಅವರು ಕಲ್ಯಾಣ್ ಜ್ಯುವೆಲರ್ಸ್ ಮತ್ತು ಅಜಿಯೊದಂತಹ ಹಲವಾರು ಬ್ರಾಂಡ್‌ಗಳಿಗೆ ಪ್ರಮುಖ ಸೆಲೆಬ್ರಿಟಿಯಾಗಿ ಅನುಮೋದಕರಾಗಿದ್ದಾರೆ.[೪೫][೪೬] ಅವರು "ರಿಟ್ಜ್" ಮತ್ತು "ಯು & ಐ" ಸೇರಿದಂತೆ ವಿವಿಧ ನಿಯತಕಾಲಿಕೆಗಳಿಗೆ ಮುಖಪುಟ ಮಾದರಿ ಆಗಿದ್ದಾರೆ.[೪೭][೪೮] ೨೦೨೦ ರಲ್ಲಿ, ಕಲ್ಯಾಣಿಯವರನ್ನು ಕೊಚ್ಚಿ ಟೈಮ್ಸ್‌ನ ಅತ್ಯಂತ ಅಪೇಕ್ಷಣೀಯ ಮಹಿಳೆ ಎಂದು ಹೆಸರಿಸಲಾಯಿತು.[೪೯] ಅದೇ ವರ್ಷ, ಅವರು ಚೆನ್ನೈ ಟೈಮ್ಸ್‌ನ ಅತ್ಯಂತ ಅಪೇಕ್ಷಣೀಯ ಮಹಿಳೆಯರ ಪಟ್ಟಿಯಲ್ಲಿ ೮ನೇ ಸ್ಥಾನ ಪಡೆದರು ಮತ್ತು ಟೈಮ್ಸ್ ಮೋಸ್ಟ್ ಅಪೇಕ್ಷಣೀಯ ಮಹಿಳೆಯರ ಪಟ್ಟಿಯಲ್ಲಿ ೪೧ನೇ ಸ್ಥಾನ ಪಡೆದರು.[೫೦][೫೧]

ಚಲನಚಿತ್ರಗಳು

[ಬದಲಾಯಿಸಿ]
ವರ್ಷ ಶೀರ್ಷಿಕೆ ಪಾತ್ರ ಭಾಷೆಗಳು ಟಿಪ್ಪಣಿಗಳು ಉಲ್ಲೇಖಗಳು
೨೦೧೭ ಹಲೋ (೨೦೧೭ ಚಲನಚಿತ್ರ) ಪ್ರಿಯಾ/ಜುನ್ನು ತೆಲುಗು ಭಾಷೆ
೨೦೧೯ ಚಿತ್ರಲಹರಿ (ಚಲನಚಿತ್ರ) ಲಹರಿ [೫೨]
ರಣರಂಗ ಗೀತಾ [೫೩]
ಹೀರೋ (೨೦೧೯ ತಮಿಳು ಚಲನಚಿತ್ರ) ಮೀರಾ ತಮಿಳು ಭಾಷೆ [೫೪]
೨೦೨೦ ವರನೆ ಅವಶ್ಯಮುಂದ್ ನಿಖಿತಾ "ನಿಕ್ಕಿ" ಮಲಯಾಳಂ [೫೫]
ಪೂತಮ್ ಪುದು ಕಾಲೈ ಯುವ ಲಕ್ಷ್ಮೀ ಕೃಷ್ಣನ್ ತಮಿಳು ವಿಭಾಗ: "ಇಲಮೈ ಇಧೋ ಇಧೋ" [೫೬]
೨೦೨೧ ಮಾನಾಡು ಸೀತಾಲಕ್ಷ್ಮಿ [೫೭]
ಮರಕ್ಕರ್: ಅರಬ್ಬೀ ಸಮುದ್ರದ ಸಿಂಹ ಆಯಿಷಾ ಮಲಯಾಳಂ [೫೮]
೨೦೨೨ ಹೃದಯಂ ನಿತ್ಯ ಬಾಲಗೋಪಾಲ್ [೫೯]
ಬ್ರೋ ಡ್ಯಾಡಿ ಅನ್ನಾ ಕುರಿಯನ್ [೬೦]
ತಳ್ಳುಮಾಲಾ ಫಾತಿಮಾ ಬೀವಿ "ಬೀಪಾತು" [೬೧]
೨೦೨೩ ಶೇಶಮ್ ಮೈಕ್-ಇಲ್ ಫಾತಿಮಾ ಫಾತಿಮಾ ನೂರ್ಜಹಾನ್ "ಪಾತು" [೬೨]
ಆಂಟೋನಿ (೨೦೨೩ ಚಲನಚಿತ್ರ) ಆನ್ ಮರಿಯಾ [೬೩]
೨೦೨೪ ವರ್ಷಂಗಳ್ಕು ಶೇಷಂ ಅನ್ನಿ [೬೪]
ಜಿನೀ (ಮುಂಬರುವ ಚಿತ್ರ) Not yet released ತಮಿಳು ಚಿತ್ರೀಕರಣ [೬೫]
ಓಡುಮ್ ಕುಥಿರಾ ಚದುಮ್ ಕುಥಿರಾ Not yet released ಮಲಯಾಳಂ ಚಿತ್ರೀಕರಣ [೬೬]

ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು

[ಬದಲಾಯಿಸಿ]
ವರ್ಷ ಪ್ರಶಸ್ತಿ ವರ್ಗ ಚಲನಚಿತ್ರ ಫಲಿತಾಂಶ ಉಲ್ಲೇಖಗಳು
೨೦೧೮ ಫಿಲ್ಮ್‌ಫೇರ್ ಅವಾರ್ಡ್ಸ್ ಸೌತ್ ಅತ್ಯುತ್ತಮ ಮಹಿಳಾ ಚೊಚ್ಚಲ ಚಿತ್ರಕ್ಕಾಗಿ ಫಿಲ್ಮ್‌ಫೇರ್ ಪ್ರಶಸ್ತಿ - ದಕ್ಷಿಣ ಹಲೋ (೨೦೧೭ ಚಲನಚಿತ್ರ) ಗೆಲುವು [೬೭]
೨೦೧೮ ದಕ್ಷಿಣ ಭಾರತೀಯ ಅಂತರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಅತ್ಯುತ್ತಮ ಮಹಿಳಾ ಪ್ರಥಮ ಪ್ರವೇಶಕ್ಕಾಗಿ ಸೈಮಾ ಪ್ರಶಸ್ತಿ - ತೆಲುಗು ಗೆಲುವು [೬೮]
೨೦೨೨ ಅತ್ಯುತ್ತಮ ಮಹಿಳಾ ಚೊಚ್ಚಲ ಚಿತ್ರಕ್ಕಾಗಿ ಸೈಮಾ ಪ್ರಶಸ್ತಿ - ಮಲಯಾಳಂ ವರನೆ ಅವಶ್ಯಮುಂದ್ ಗೆಲುವು [೬೯]
೨೦೨೩ ಅತ್ಯುತ್ತಮ ನಟಿಗಾಗಿ ಸೈಮಾ ಪ್ರಶಸ್ತಿ - ಮಲಯಾಳಂ ಬ್ರೋ ಡ್ಯಾಡಿ ಗೆಲುವು [೭೦]
೨೦೧೮ ಜೀ ತೆಲುಗು ವರ್ಷದ ಚೊಚ್ಚಲ ನಾಯಕಿ ಹಲೋ (೨೦೧೭ ಚಲನಚಿತ್ರ) ಗೆಲುವು [೭೧]

ಉಲ್ಲೇಖಗಳು

[ಬದಲಾಯಿಸಿ]
  1. "Happy Birthday, Kalyani Priyadarshan: Interesting Facts About The Actress". The Times of India. 5 April 2022. Archived from the original on 24 April 2024. Retrieved 4 September 2022.
  2. Winners: 65th Jio Filmfare Awards (South) 2018 Archived 17 June 2018 ವೇಬ್ಯಾಕ್ ಮೆಷಿನ್ ನಲ್ಲಿ.. Times of India (17 June 2018). Retrieved 14 August 2018.
  3. "I thought I belonged behind the camera: Kalyani Priyadarshan". Mathrubhumi (in ಇಂಗ್ಲಿಷ್). 5 July 2018. Archived from the original on 27 June 2021. Retrieved 22 November 2020.
  4. "SIIMA AWARDS 2018 winners". South Indian International Movie Awards. Archived from the original on 24 September 2018.
  5. ETimes. "Here's how Actress Kalyani Priyadarshan is celebrating her birthday month!". Times of India. Retrieved 21 April 2022.
  6. "Keerthy Suresh wishes birthday girl Kalyani Priyadarshan with some unseen throwback pictures". Zoom TV. 5 April 2021. Archived from the original on 9 February 2023. Retrieved 5 April 2022.
  7. Subramani, A. (16 September 2016). "Film director Priyadarshan – actor Lissy divorce formalities complete". The Times of India. Archived from the original on 10 January 2018. Retrieved 10 January 2018.
  8. "Priyadarshan's son and Kalyani's brother Siddharth gets married in Chennai; pics go viral". Pinkvilla. 4 February 2023. Archived from the original on 6 February 2023. Retrieved 8 February 2023.
  9. Lady Andal Venkatasubba Rao Matriculation Higher Secondary School - Official website Lady Andal Retrieved 29 September 2023
  10. "Design principles - Kalyani Priyadarshan". The Hindu. 9 April 2019. Archived from the original on 26 September 2023. Retrieved 22 January 2023.
  11. Nath, Dipanita (3 April 2022). "As Adishakti turns 40, remembering Veenapani Chawla who rescued theatre from the spoken word and gave the body full play". The Indian Express. Archived from the original on 17 January 2023. Retrieved 16 January 2023.
  12. "Kalyani Priyadarshan's debut movie with Akhil". The News Minute. Archived from the original on 15 December 2017. Retrieved 22 December 2017.
  13. "Hello: Five reasons to watch Akhil Akkineni and Kalyani Priyadarshan starrer". Times of India. Archived from the original on 23 December 2017. Retrieved 23 December 2017.
  14. Srivathsan Nadadhur (22 December 2017). "Hello Movie Review: A race against time". The Hindu. Archived from the original on 15 July 2021. Retrieved 22 December 2018.
  15. Dundoo, Sangeetha Devi (2019-04-09). "Design principles". The Hindu (in Indian English). ISSN 0971-751X. Archived from the original on 13 November 2023. Retrieved 2019-05-18.
  16. "Chitralahari movie review: Even Sai Dharam Tej's sincere performance can't save this dull drama". Firstpost. 2019-04-12. Archived from the original on 19 September 2023. Retrieved 2020-09-11.
  17. Dundoo, Sangeetha Devi. "Ranarangam review: A stylish battlefield". The Hindu. Archived from the original on 7 May 2021. Retrieved 17 August 2019.
  18. "Hero review: An-engaging-entertainer-for-families!!". Sify. 22 December 2019. Archived from the original on 20 December 2019. Retrieved 12 January 2020.
  19. "Varane Avashyamund: Five reasons why you should not miss Suresh Gopi, Shobana, Kalyani Priyadarshan and Dulquer Salmaan-starrer". The Times of India (in ಇಂಗ್ಲಿಷ್). 2020-02-06. Archived from the original on 18 October 2023. Retrieved 2021-07-17.
  20. "Varane Avashyamund movie review: This multistarrer is pleasant but shallow". The News Minute. Archived from the original on 29 September 2023. Retrieved 15 February 2020.
  21. "'Putham Pudhu Kaalai': Amazon Prime Video announces anthology of five Tamil short films". The New Indian Express. 30 September 2020. Archived from the original on 3 November 2020. Retrieved 5 October 2020.
  22. "Putham Pudhu Kaalai Review: Amazon Prime's Tamil Anthology Is Easy On The Mind And Eye". NDTV.com. Archived from the original on 9 November 2020. Retrieved 2021-02-06.
  23. Rajendran, Sowmya (29 December 2021). "Jai Bhim to Maanaadu: Best Tamil cinema of 2021". The News Minute. Archived from the original on 2 January 2022. Retrieved 1 March 2022.
  24. "'Maanaadu' Box Office Day 1: Silambarasan starrer mints approx Rs 8 crore in TN". The Times of India. 26 November 2021. Archived from the original on 1 March 2022. Retrieved 1 March 2022.
  25. Pudipeddi, Haricharan (25 November 2021). "Maanaadu movie review: Silambarasan TR's film is highly enjoyable, accessible time-loop thriller". Hindustan Times. Archived from the original on 25 November 2021. Retrieved 25 November 2021.
  26. "Kalyani Priyadarshan looks regal in these pictures from 'Marakkar – Arabikkadalinte Simham'". The Times of India. 13 March 2020. Archived from the original on 16 March 2020. Retrieved 15 March 2020.
  27. "Pranav and Kalyani teaming up for Vineeth Sreenivasan's 'Hridayam' excites Mohanlal-Priyadarshan-Sreenivasan fans". The Times of India. Archived from the original on 8 December 2019. Retrieved 13 December 2019.
  28. Shrijith, Sajin (21 January 2022). "Hridayam Movie Review: Vineeth Sreenivasan delivers two feel-good films for the price of one". Cinema Express. Archived from the original on 22 January 2022. Retrieved 22 January 2022.
  29. Tony (21 January 2022). "'Hridayam' movie review: Youthful charm, romance make it a memorable watch". Manorama Online. Archived from the original on 21 January 2022. Retrieved 21 January 2022.
  30. Express News Service (8 September 2021). "Prithviraj completes second directorial 'Bro Daddy'". The New Indian Express. Archived from the original on 6 February 2023. Retrieved 29 October 2021.
  31. K., Janani (26 January 2022). "Bro Daddy Movie Review: Mohanlal, Prithviraj's fun family drama is not Badhaai Ho, but better". India Today. Archived from the original on 26 January 2022. Retrieved 26 January 2022.
  32. "Tovino Thomas-Khalid Rahman's film Thallumaala completed". Cinema Express. 12 April 2022. Archived from the original on 11 August 2022. Retrieved 11 August 2022.
  33. "Tovino Thomas' biggest hit turns out to be Thallumaala". The Times of India (in ಇಂಗ್ಲಿಷ್). 17 August 2022. Archived from the original on 28 August 2022. Retrieved 2022-09-06.
  34. "'Thallumaala' review: Tovino Thomas, Kalyani Priyadarshan shine in this full-on entertainer". The Week. Archived from the original on 13 August 2022. Retrieved 13 August 2022.
  35. "Sesham Mike-il Fathima teaser: Kalyani Priyadarshan promises a fresh, colorful and fun film". Indian Express. 27 August 2023. Archived from the original on 1 November 2023. Retrieved 20 September 2023.
  36. M, Athira (18 November 2023). "'Sesham Mike-il Fathima' movie review: Kalyani Priyadarshan shines in this feel-good entertainer". The Hindu (in Indian English). ISSN 0971-751X. Archived from the original on 20 November 2023.
  37. "Kalyani Priyadarshan gets a fresh haircut for her next film Antony". The Times of India. 5 May 2023. Archived from the original on 13 June 2023. Retrieved 14 September 2023.
  38. Shrijith, Sajin (2 December 2023). "'Antony' movie review: Overfamiliarity breeds fatigue". The New Indian Express. Archived from the original on 2 December 2023. Retrieved 2 December 2023.
  39. "Vineeth Sreenivasan brings together an ensemble cast for his next". The Hindu. Archived from the original on 13 July 2023. Retrieved 10 December 2023.
  40. "Varshangalkku Shesham Review: Vineeth Sreenivasan's tale of friendship is earnest but melodramatic". Hindustan Times (in ಇಂಗ್ಲಿಷ್). 2024-04-12. Archived from the original on 13 April 2024. Retrieved 2024-04-14.
  41. "Jayam Ravi's next titled Genie: Krithi Shetty, Kalyani Priyadarshan, and Wamiqa Gabbi roped in for the project". The Indian Express. Archived from the original on 5 July 2023. Retrieved 9 January 2024.
  42. "Kalyani Priyadarshan on why Hello is the best film that has happened to her career". Firstpost. Archived from the original on 18 July 2018. Retrieved 12 January 2019.
  43. "2017 Recap: New talented actresses of the year". 123telugu (in ಇಂಗ್ಲಿಷ್). 30 December 2017. Retrieved 11 February 2021.
  44. "The biggest joy of Priyadarshan's life". Rediff.com. Archived from the original on 31 January 2024. Retrieved 17 February 2024.
  45. "Manju Warrier to Akkineni Nagarjuna: Kalyan jewellers sparkles with myriad regional stars". The New Indian Express. Archived from the original on 5 November 2019. Retrieved 12 May 2020.
  46. "On the campaign trail:Online fashion portal AJIO rings in Onam with a musical ode". The Hindu Business Line. Archived from the original on 23 August 2022. Retrieved 12 June 2021.
  47. "Sugar & Spice: Kalyani Priyadarshan". Ritz Magazine. Archived from the original on 17 July 2021. Retrieved 16 December 2021.
  48. "I thought I belonged behind the camera: Kalyani Priyadarshan". You & I. Archived from the original on 7 October 2023. Retrieved 16 July 2022.
  49. Soman, Deepa. "Meet Kochi Times Most Desirable Woman 2020: Kalyani Priyadarshan". Times of India (in ಇಂಗ್ಲಿಷ್). Archived from the original on 17 December 2023. Retrieved 27 July 2021.
  50. "Check Out The List of Chennai Times 30 Most Desirable Women 2020". Times of India (in ಇಂಗ್ಲಿಷ್). Archived from the original on 17 December 2023. Retrieved 4 August 2021.
  51. "Times Most Desirable Woman of 2020: Rhea Chakraborty – Living through a trial by fire, gracefully". Times of India (in ಇಂಗ್ಲಿಷ್). Archived from the original on 8 June 2021. Retrieved 9 August 2021.
  52. "Kalyani Priyadarshan and Nivetha Pethuraj to star in Sai Dharam Tej's 'Chitralahari'". The News Minute. 22 November 2018. Archived from the original on 18 May 2019. Retrieved 18 May 2019.
  53. R., Manoj Kumar (14 August 2019). "Ranarangam actor Kalyani Priyadarshan: I love gangster movies". The Indian Express. Archived from the original on 17 August 2019. Retrieved 17 August 2019.
  54. "Hero actress Kalyani Priyadarshan is all praise for co-star Sivakarthikeyan". The Times of India. Archived from the original on 30 December 2019. Retrieved 12 October 2020.
  55. Sanjith Sidhardhan (1 September 2019). "Anoop Sathyan ropes in Dulquer and Kalyani for a family-drama". The Times of India. Archived from the original on 10 February 2020. Retrieved 1 January 2020.
  56. "Kalyani Priyadarshan talks about Putham Pudhu Kaalai". Only Kollywood. 15 October 2020. Archived from the original on 22 October 2020. Retrieved 15 November 2020.
  57. "Kalyani Priyadarshan to be seen opposite Simbu in 'Maanaadu'". The News Minute. 31 March 2019. Archived from the original on 31 March 2019. Retrieved 21 November 2020.
  58. Sidhardhan, Sanjith (25 September 2018). "Kalyani Priyadarshan and Keerthy Suresh join Mohanlal's Marakkar". The Times of India. Archived from the original on 6 March 2021. Retrieved 15 June 2019.
  59. Sidhardhan, Sanjith (14 February 2021). "Pranav Mohanlal and Kalyani Priyadarshan wrap up their portions of Hridayam in Chennai". The Times of India. Archived from the original on 15 February 2021. Retrieved 18 February 2021.
  60. Palisetty, Ramya (18 June 2021). "Prithviraj Sukumaran announces his second directorial Bro Daddy with Mohanlal". India Today. Archived from the original on 19 June 2021. Retrieved 15 July 2021.
  61. Service, Express News (14 October 2021). "Tovino and Kalyani to share screen in 'Thallumaala'". The New Indian Express. Archived from the original on 27 October 2021. Retrieved 27 October 2021.
  62. "Kalyani Priyadarshan's film Sesham Mikeil Fathima commences filming". The New Indian Express. 16 September 2022. Archived from the original on 29 September 2022. Retrieved 17 September 2022.
  63. "Filming of Joju George, Kalyani Priyadarshan's Antony wraps up". Cinema Express. 4 August 2023. Archived from the original on 15 September 2023. Retrieved 14 September 2023.
  64. "First schedule of Varshangalkku Shesham completed". The New Indian Express. 21 November 2023. Archived from the original on 15 December 2023. Retrieved 27 November 2023.
  65. "Kalyani Priyadarshan is excited about being part of 'Genie'". The Times of India. 6 July 2023. Archived from the original on 8 July 2023. Retrieved 22 September 2023.
  66. "Fahadh Faasil and Kalyani Priyadarshan's 'Odum Kuthira Chadum Kuthira' goes on floors". The Hindu. 29 April 2024. Archived from the original on 5 June 2024. Retrieved 28 May 2024.
  67. "Winners: 65th Jio Filmfare Awards (South) 2018". The Times of India. 17 June 2018. Archived from the original on 17 June 2018. Retrieved 18 November 2019.
  68. "SIIMA 2018 Tamil and Malayalam Awards: Sivakartikeyan, Nivin Pauly, R Madhavan, Hansika Motwani win big". Hindustan Times. 15 September 2018. Archived from the original on 1 October 2019. Retrieved 19 January 2020.
  69. "SIIMA 2022: Kangana Ranaut, Arya, Tovino Thomas, Aishwarya Lekshmi win top acting honours". Daily News and Analysis. 12 September 2022. Archived from the original on 24 November 2022. Retrieved 2 March 2022.
  70. "SIIMA 2023 winners: Ponniyin Selvan I, Nna Thaan Case Kodu, R Madhavan, Trisha, Tovino Thomas and Kalyani Priyadarshan win big". Hindustan Times. Archived from the original on 28 September 2023. Retrieved 2023-09-16.
  71. "At Zee Telugu Apsara Awards 2018, Kajal Aggarwal and Tamannaah win honours". Hindustan Times. 2018-04-09. Archived from the original on 1 October 2023. Retrieved 2020-11-15.