ಮುಗ್ಧತೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮುಗ್ಧತೆ ಶಬ್ದವು ಸಾಮಾಜಿಕ ಸಮಾನಸ್ಕಂಧರ ಹೋಲಿಕೆಯ ದೃಷ್ಟಿಯಿಂದ, ಅಥವಾ ಹೆಚ್ಚು ಸಾಮಾನ್ಯ ಪ್ರಮಾಣಕ ಮಾಪಕಕ್ಕೆ ಸಂಪೂರ್ಣ ಹೋಲಿಕೆಯಿಂದ ಕಡಿಮೆ ಅನುಭವವನ್ನು ಸೂಚಿಸಬಹುದು. ಅಜ್ಞಾನಕ್ಕೆ ವ್ಯತಿರಿಕ್ತವಾಗಿ, ಈ ಶಬ್ದವನ್ನು ಸಾಮಾನ್ಯವಾಗಿ ಸಕಾರಾತ್ಮಕ ಪದವಾಗಿ ಕಾಣಲಾಗುತ್ತದೆ, ಮತ್ತು ಇದು ವಿಶ್ವದ ಆಶಾವಾದಿ ನೋಟವನ್ನು ಸೂಚಿಸುತ್ತದೆ, ವಿಶೇಷವಾಗಿ ಜ್ಞಾನದ ಅಭಾವವು ತಪ್ಪು ಕಾರ್ಯದ ಅಭಾವದಿಂದ ಉದ್ಭವಿಸುತ್ತದೆ, ಮತ್ತು ಹೆಚ್ಚಿನ ಜ್ಞಾನವು ತಪ್ಪು ಕಾರ್ಯ ಮಾಡುವುದರಿಂದ ಬರುತ್ತದೆ.

ತಮ್ಮ ಕ್ರಿಯೆಗಳ ಸ್ವರೂಪವನ್ನು ಅರ್ಥಮಾಡಿಕೊಳ್ಳುವ ಮಾನಸಿಕ ಸಾಮರ್ಥ್ಯಗಳನ್ನು ಹೊಂದಿರದ ವ್ಯಕ್ತಿಗಳನ್ನು, ಅವರ ವರ್ತನೆಯನ್ನು ಲೆಕ್ಕಿಸದೇ ಮುಗ್ಧರೆಂದು ಪರಿಗಣಿಸಬಹುದು. ಈ ಅರ್ಥದಿಂದ ವಿವೇಚನೆಯ ವಯಸ್ಸಿಗಿಂತ ಚಿಕ್ಕವನಾಗಿರುವ ಮಗುವನ್ನು, ಅಥವಾ ಗಂಭೀರವಾಗಿ ಮಾನಸಿಕವಾಗಿ ಅಸಮರ್ಥನಾದ ಯಾವುದೇ ವಯಸ್ಸಿನ ವ್ಯಕ್ತಿಯನ್ನು ಸೂಚಿಸಲು ಮುಗ್ಧ ಪದವನ್ನು ಬಳಸಲಾಗುತ್ತದೆ. ಆದಾಗ್ಯೂ, ವಯಸ್ಕರು ಸೃಷ್ಟಿಸಿ ನಿಯಂತ್ರಿಸುವ ಕಲ್ಪನೆಯಾಗಿ ಬಾಲ್ಯದ ಮುಗ್ಧತೆಯನ್ನು ವರ್ಣಿಸಲು ಮುಗ್ಧತೆ ಶಬ್ದವನ್ನು ಬಳಸಲಾಗುತ್ತದೆ.

ಸಂಕೇತ[ಬದಲಾಯಿಸಿ]

ಕುರಿಮರಿಯು ಮುಗ್ಧತೆಯ ಸ್ವರೂಪದ ಸಾಮಾನ್ಯವಾಗಿ ಬಳಸಲಾದ ಸಂಕೇತವಾಗಿದೆ. ಕ್ರೈಸ್ತ ಧರ್ಮದಲ್ಲಿ, ಯೇಸು ಕ್ರಿಸ್ತನನ್ನು "ದೇವರ ಕುರಿಮರಿ" ಎಂದು ಸೂಚಿಸಲಾಗುತ್ತದೆ, ಹಾಗಾಗಿ ಅವನ ಪಾಪರಹಿತ ಸ್ವಭಾವವನ್ನು ಒತ್ತಿ ಹೇಳುತ್ತದೆ.[೧] ಮುಗ್ಧತೆಯ ಇತರ ಸಂಕೇತಗಳಲ್ಲಿ ಮಕ್ಕಳು, ಕನ್ಯೆಯರು, ಅಕೇಶಿಯ ಶಾಖೆಗಳು, ಲೈಂಗಿಕವಲ್ಲದ ನಗ್ನತೆ ಮತ್ತು ಬಿಳಿ ಬಣ್ಣ ಸೇರಿವೆ.[೨]

ಉಲ್ಲೇಖಗಳು[ಬದಲಾಯಿಸಿ]

  1. Freemasonry: Its Symbolism, Religious Nature, and Law of Perfection (March 10, 2003). By Chalmers I. Paton (author). ISBN 978-0766142015.
  2. The Encyclopedia Americana: A Library of Universal Knowledge (1920). By Encyclopedia Americana Corporation. 1920. Retrieved February 25, 2013.
"https://kn.wikipedia.org/w/index.php?title=ಮುಗ್ಧತೆ&oldid=917090" ಇಂದ ಪಡೆಯಲ್ಪಟ್ಟಿದೆ