ವಿಷಯಕ್ಕೆ ಹೋಗು

ಕರೆನ್ ರಾಜ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Kayin State
ကရင်ပြည်နယ်
Karen State
Myanma transcription(s)
 • Burmeseka.yang pranynai
Flag of Kayin State
Location of Kayin State in Myanmar
Location of Kayin State in Myanmar
Country Myanmar
RegionSouth
CapitalPa-an
Government
 • Chief MinisterBrigadier General Zaw Min[] (Military)
 • LegislatureKayin State Hluttaw
Area
 • Total೩೦,೩೮೨.೮ km (೧೧,೭೩೦.೯ sq mi)
Population
 • Total೧೫,೭೪,೦೭೯
 • Density೫೨/km (೧೩೦/sq mi)
Demographics
 • EthnicitiesKaren, Padaung, Bamar, Shan, Pa-O, Mon, Rakhine, Burmese-Thai
 • Religionsಬೌದ್ಧ ಧರ್ಮ, Christianity, Islam, Hinduism, animism
Time zoneUTC+06:30 (MST)
Websitewww.kayinstate.gov.mm

ಕರೆನ್ ರಾಜ್ಯ: ಮಯನ್ಮಾರ್ ದೇಶಕ್ಕೆ ಸೇರಿದ ಒಂದು ರಾಜ್ಯ. ೧೯೪೭ರ ಬರ್ಮೀ ಸಂವಿಧಾನದ ಪ್ರಕಾರ ಸಾಲ್ವೀನ್ ಜಿಲ್ಲೆ ಹಾಗೂ ಅದರ ಸುತ್ತಮುತ್ತಲಿನ ಕೆಲವು ಪ್ರದೇಶಗಳನ್ನು ಸೇರಿಸಿ ಅವುಗಳಿಗೆ ಕರೆನ್ ರಾಜ್ಯವೆಂದು ನಾಮಕರಣ ಮಾಡಲಾಗಿತ್ತು. ಆಗಿನ ಬರ್ಮ ಸ್ವತಂತ್ರವಾದರೂ ಕೇವಲ ಆಳರಸರ ಬದಲಾವಣೆ ಮಾತ್ರವೆಂದೂ ಇದರಿಂದ ತಮ್ಮ ಸ್ಥಿತಿ ಇನ್ನೂ ಹದಗೆಡುವುದೆಂದೂ ಅವರು ಭಾವಿಸಿದರು. ಕೇಂದ್ರಾಡಳಿತವನ್ನು ಬಲಪಡಿಸುವ ಸಲುವಾಗಿ ಬರ್ಮೀ ಸರ್ಕಾರ ಕೆಲವು ಕ್ರಮ ಕೈಕೊಂಡಾಗ (೧೯೪೮) ಸಶಸ್ತ್ರ ಕರೆನ್ ಜನರು ತಮ್ಮವೆನ್ನಲಾದ ಕೆಲವು ಪ್ರದೇಶಗಳನ್ನಾಕ್ರಮಿಸಿಕೊಂಡು ಬಂಡಾಯವೆದ್ದರು. ಸ್ವಯಮಾಡಳಿತ ರಾಜ್ಯವೇ ಅವರ ಗುರಿ. ೧೯೫೨ರಲ್ಲಿ ಬರ್ಮ ರಾಜ್ಯಾಂಗದಲ್ಲಿ ಸೂಕ್ತ ಬದಲಾವಣೆ ಮಾಡಿ ಕರೆನ್ ರಾಜ್ಯ ನಿರ್ಮಿಸಲಾಯಿತು. ಪಾ-ಅನ್ ಇದರ ರಾಜಧಾನಿ. ೧೯೫೭-೫೯ರ ವೇಳೆಗೆ ಪಾ-ಅನ್ ಸರ್ವತೋಮುಖವಾದ ಪ್ರಗತಿ ಪಡೆಯಿತು. ದೊಡ್ಡ ರಸ್ತೆಗಳು, ವಿಮಾನ ನಿಲ್ದಾಣ, ಸರ್ಕಾರಿ ಕಟ್ಟಡಗಳು, ಆಸ್ಪತ್ರೆ ಮುಂತಾದವೆಲ್ಲ ಅಲ್ಲಿವೆ.

ರಾಜ್ಯದ ವಿಸ್ತೀರ್ಣ ೩೦೩೮೩ ಚ.ಕಿಮೀ ಜನಸಂಖ್ಯೆ ೧,೪೩೧,೩೭೭ (೨೦೦೫). ಈ ರಾಜ್ಯದ ಸುತ್ತಮುತ್ತ ದಟ್ಟವಾದ ಕಾಡುಗಳು ಹಬ್ಬಿವೆ. ಸರ್ಕಾರ ಇತ್ತೀಚೆಗೆ ಸಾಲ್ವೀನ್ ನದೀತೀರದ ಪ್ರದೇಶಗಳನ್ನೆಲ್ಲ ವ್ಯವಸಾಯಯೋಗ್ಯವನ್ನಾಗಿ ಮಾಡಿದುದರ ಪರಿಣಾಮವಾಗಿ ಇಲ್ಲಿ ಹೇರಳವಾಗಿ ಬತ್ತವನ್ನು ಬೆಳೆಯಲಾಗುತ್ತಿದೆ. ರಬ್ಬರ್, ಹತ್ತಿ, ಕಾಫಿ, ಕಬ್ಬು ಮುಂತಾದ ಬೆಳೆಗಳನ್ನು ಇತ್ತೀಚಿಗೆ ಕಾಣಬಹುದು. ತೇಗ ಒಂದು ಮುಖ್ಯ ಅರಣ್ಯವಸ್ತು. ಇದು ಕರೆನ್ ರಾಜ್ಯದ ನಿರ್ಯಾತಗಳಲ್ಲಿ ಪ್ರಧಾನವಾದದ್ದು. *

ಉಲ್ಲೇಖಗಳು

[ಬದಲಾಯಿಸಿ]
  1. "Division and State Administrations". Alternative Asean Network on Burma. 8 July 2011. Archived from the original on 25 ಡಿಸೆಂಬರ್ 2018. Retrieved 21 August 2011.
  2. Census Report. The 2014 Myanmar Population and Housing Census. Vol. 2. Naypyitaw: Ministry of Immigration and Population. May 2015. p. 17.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]