ಕಮಲಾ ಕೇಸ್ವಾನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


  ಕಮಲಾ ಕೇಸ್ವಾನಿ ([ ಸಿಂಧಿ : ڪملا ڪيسواڻي], ೨೭ ಆಗಸ್ಟ್ ೧೯೩೪ - ೯ ಮೇ ೨೦೦೯) ಒಬ್ಬ ಭಾರತೀಯ ಜಾನಪದ ಮತ್ತು ಹಿನ್ನೆಲೆ ಗಾಯಕಿ. ಅವರು ಭಾರತದ ಜನಪ್ರಿಯ ಸಿಂಧಿ ಭಾಷೆಯ ಗಾಯಕರಲ್ಲಿ ಒಬ್ಬರು.

ಆರಂಭಿಕ ಜೀವನ[ಬದಲಾಯಿಸಿ]

ಕಮಲಾ ಅವರು ೨೭ ಆಗಸ್ಟ್ ೧೯೩೪ ರಂದು ಕರಾಚಿ, ಸಿಂಧ್, ಬ್ರಿಟಿಷ್ ಇಂಡಿಯಾ (ಈಗಿನ ಪಾಕಿಸ್ತಾನ ) ನಲ್ಲಿ ಜನಿಸಿದರು. ಆಕೆಯ ಪೋಷಕರು ಸುಕ್ಕೂರಿಗೆ ಸೇರಿದವರು. ಆಕೆಯ ತಂದೆ ಗೋಬಿಂದ್ ರಾಮ್ ಮದ್ನಾನಿ ಟೆಲಿಫೋನ್ ಆಪರೇಟರ್ ಆಗಿದ್ದರು. ಕಮಲಾ ಕೇಸ್ವಾನಿ ಅವರು ಸುಕ್ಕೂರಿನಲ್ಲಿ ಶಾಲಾ ಶಿಕ್ಷಣ ಪಡೆದರು. [೧] ಬ್ರಿಟೀಷ್ ಭಾರತವನ್ನು ಭಾರತ ಮತ್ತು ಪಾಕಿಸ್ತಾನ ಎಂದು ವಿಂಗಡಿಸಿದಾಗ ಆಕೆಗೆ ಕೇವಲ ೧೩ ವರ್ಷ. ಇತರ ಹಿಂದೂ ಸಿಂಧಿಗಳಂತೆ, ಅವರು ೧೯೪೭ ರಲ್ಲಿ ಭಾರತಕ್ಕೆ ವಲಸೆ ಬಂದರು ಮತ್ತು ಮೊದಲು ಜೋಧ್‌ಪುರದಲ್ಲಿ, ನಂತರ ಬಿಕಾನೇರ್‌ನಲ್ಲಿ ಮತ್ತು ಅಂತಿಮವಾಗಿ ಜೈಪುರದಲ್ಲಿ ನೆಲೆಸಿದರು. ಅವರು ಜೈಪುರದಲ್ಲಿ ತಮ್ಮ ಶಿಕ್ಷಣವನ್ನು ಮುಂದುವರೆಸಿದರು ಮತ್ತು ಜೈಪುರ ವಿಶ್ವವಿದ್ಯಾಲಯದಿಂದ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿಯನ್ನು ಪಡೆದರು. ಇವರು ಶಾಲಾ ವಯಸ್ಸಿನಿಂದಲೂ ಸಂಗೀತ ಮತ್ತು ಗಾಯನದಲ್ಲಿ ಆಸಕ್ತಿ ಹೊಂದಿದ್ದರು.

ಗಾಯನ ವೃತ್ತಿ[ಬದಲಾಯಿಸಿ]

ಅವರು ಅಖಿಲ ಭಾರತ ಬಾನುಲಿ ಕೇಂದ್ರದಿಂದ ತಮ್ಮ ಗಾಯನ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ಸಹೇರಾ ಅಥವಾ ಲಾಡಾ ಎಂಬ ಅನೇಕ ಮದುವೆ ಹಾಡುಗಳು, ಸೂಫಿ ಕಲಾಮ್‌ಗಳು ಮತ್ತು ಸಿಂಧಿ ಮತ್ತು ರಾಜಸ್ಥಾನಿ ಭಾಷೆಗಳಲ್ಲಿ ಜಾನಪದ ಹಾಡುಗಳನ್ನು ಹಾಡಿದರು. ಅವರ ಕೆಲವು ಜನಪ್ರಿಯ ಹಾಡುಗಳನ್ನು ಹಿಸ್ ಮಾಸ್ಟರ್ಸ್ ವಾಯ್ಸ್ ಕಂಪನಿ ಮತ್ತು ಅಖಿಲ ಭಾರತ ಬಾನುಲಿ ಕೇಂದ್ರ ರೆಕಾರ್ಡ್ ಮಾಡಿತು. [೨] ಅವರು ಮದುವೆ ಆರತಕ್ಷತೆಗಳು, ಸಾಮಾಜಿಕ ಸಮಾರಂಭಗಳು ಮತ್ತು ಭಾರತ ಮತ್ತು ವಿದೇಶಗಳಲ್ಲಿ ಸಂಗೀತ ಕಾರ್ಯಕ್ರಮಗಳಲ್ಲಿ ಹಾಡಿದರು. ಅವರು ಭಾರತೀಯ ಟಿವಿ ಚಾನೆಲ್‌ಗಳಲ್ಲೂ ಪ್ರದರ್ಶನ ನೀಡುತ್ತಿದ್ದರು. ಆಕೆಯ ಹಾಡುಗಳ ಹಲವಾರು ಕ್ಯಾಸೆಟ್‌ಗಳನ್ನು ಸಹ ಬಿಡುಗಡೆ ಮಾಡಲಾಯಿತು. [೩]

ಪ್ರಸಿದ್ಧ ಸಂಗೀತಗಾರ ಸಿ.ಅರ್ಜುನ್ ಅವರು ಕಮಲಾ ಕೇಸ್ವಾನಿಯನ್ನು ಸಿಂಧಿ ಸಿನಿಮಾದಲ್ಲಿ ಹಿನ್ನೆಲೆ ಗಾಯಕಿಯಾಗಿ ಪರಿಚಯಿಸಿದರು. [೪] ಅವರು ಕೆಳಗಿನ ಸಿಂಧಿ ಭಾಷೆಯ ಭಾರತೀಯ ಚಲನಚಿತ್ರಗಳಲ್ಲಿ ಹಿನ್ನೆಲೆ ಗಾಯಕಿಯಾಗಿ ಪ್ರದರ್ಶನ ನೀಡಿದರು: [೫]

ನಿಧನ[ಬದಲಾಯಿಸಿ]

ಕಮಲಾ ಕೇಸ್ವಾನಿ ೯ ಮೇ ೨೦೦೯ ರಂದು ಭಾರತದ ಜೈಪುರದಲ್ಲಿ ನಿಧನರಾದರು.

ಉಲ್ಲೇಖಗಳು[ಬದಲಾಯಿಸಿ]

  1. "ڪملا ڪيسواڻي : راڳ کي عروج بخشيندڙ گلوڪاره". SindhSalamat. Retrieved 2022-05-11.
  2. Malhi, Gobind (October 1991). ادب ۽ اديب (Literature and Literary Person) (in Sindhi). Ulhasnagar, India.: Sindhi Times Publication. p. 4.{{cite book}}: CS1 maint: unrecognized language (link)
  3. Ramchandani, Deepak (2013). Sindhis in Film Industry (PDF) (in English). p. 12.{{cite book}}: CS1 maint: unrecognized language (link)
  4. "چندناڻي ارجن (سي ارجن) : (Sindhianaسنڌيانا)". www.encyclopediasindhiana.org (in ಸಿಂಧಿ). Retrieved 2022-05-10.
  5. "Kamla Keswani - Encyclopedia of Sindhi". sindhiwiki.org. Retrieved 2022-05-11.