ಕನ್ವಾಲ್ ಸಿಂಗ್ ಚೌಹಾಣ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕನ್ವಾಲ್ ಸಿಂಗ್ ಚೌಹಾಣ್ ಹರಿಯಾಣದ ಒಬ್ಬ ಪ್ರಗತಿಪರ ರೈತ. ಇವರು ಕೃಷಿಯಲ್ಲಿನ ಬೆಳೆ ವೈವಿಧ್ಯೀಕರಣಕ್ಕೆ ನೀಡಿದ ಕೊಡುಗೆಗಳನ್ನು ಗಮನಿಸಿದ ಭಾರತ ಸರ್ಕಾರ ೨೦೧೯ ರಲ್ಲಿ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.[೧] ಆಗಸ್ಟ್ ೨೦೧೧ ರಲ್ಲಿ ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ ಮಂಡಳಿಯು 2010ರ ಎನ್. ಜಿ. ರಂಗ ಫಾರ್ಮರ್ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.[೨] [೩]


ಜೀವನ[ಬದಲಾಯಿಸಿ]

ಕನ್ವಾಲ್ ಸಿಂಗ್ ಹರಿಯಾಣದ ಸೋನಿಪತ್ ಜಿಲ್ಲೆಯ ಅಟೆರ್ನಾ ಎಂಬ ಹಳ್ಳಿಯವರು. ಇವರು ತಮ್ಮ 15ನೇ ವಯಸ್ಸಿನಲ್ಲಿಯೇ ಬೇಸಾಯವನ್ನು ಪ್ರಾರಂಭಿಸುತ್ತಾರೆ. ಭಾರತವು ಥಾಯ್ಲೆಂಡಿನಿಂದ ಕೆಜಿಗೆ 4000 ನೀಡಿ ಆಮದು ಮಾಡಿಕೊಳ್ಳುತ್ತಿದ್ದ ಸಂದರ್ಭವಾದ 1997ರಲ್ಲಿ ಬೇಬಿ ಕಾರ್ನ್ ಕೃಷಿಯನ್ನು ಪ್ರಾರಂಭಿಸುತ್ತಾರೆ, 2009ರಲ್ಲಿ ಸಮಯಕ್ಕೆ ಅವರು ಸಂಸ್ಕರಿಸಿದ ಬೇಬಿ ಕಾರ್ನ್ ಉತ್ಪಾದನೆ ಮತ್ತು ರಪ್ತುಮಾಡುವಷ್ಟು ವಿಸ್ತರಿಸುತ್ತಾರೆ. ಏಕವ್ಯಕ್ತಿ ಉದ್ಯಮವಾಗಿ ಆರಂಭವಾದ ಈ ಉದ್ಯಮವು 2019ರ ವೇಳೆಗೆ 200ಕ್ಕೂ ಹೆಚ್ಚು ಉದ್ಯೋಗಿಗಳನ್ನು ನೇಮಿಸಿಕೊಳ್ಳುವಷ್ಟು ಬೆಳೆಯುತ್ತದೆ. ಅವರು ಅಣಬೆ, ಬೇಬಿ ಕಾರ್ನ್ ಮತ್ತು ಟೊಮೇಟೊ ಬೆಳೆಯುವ ರೈತರಿಗೆ ನ್ಯಾಯಯುತ ಬೆಲೆ ಸಿಗುವಂತಹ ವ್ಯವಸ್ಥೆಯನ್ನು ಕಲ್ಪಿಸುತ್ತಾರೆ.[೪]

ಅವರು 2001ರಲ್ಲಿ ಗುಲಾಬ್ ಹಣ್ಣುಗಳು ಮತ್ತು ತರಕಾರಿ ಬೆಳೆಗಾರರು ಮತ್ತು ಮಾರಾಟಗಾರರ ಸಹಕಾರಿ ಸಂಘವನ್ನು ಸೋನಿಪತ್ನಲ್ಲಿ ಸ್ಥಾಪಿಸುತ್ತಾರೆ. ಈ ಸಂಘವು ಬೇಬಿ ಕಾರ್ನ್ ಸ್ವೀಟ್ ಕಾರ್ನ್, ಹಣಬೆ ಮತ್ತು ಕೋಸು, ಗಡ್ಡೆಯಂತಹ ತರಕಾರಿಗಳ ಉತ್ಪಾದನೆ, ಮಾರಾಟ ಮತ್ತು ರಫ್ತಿಗೆ ಮೀಸಲಾಗಿರುವ ಸಹಕಾರಿಯಾಗಿದ್ದು. ಭಾರತದಲ್ಲಿ ಕೃಷಿ ವೈವಿದ್ಯತೆಗೆ ಉತ್ತೇಜನ ನೀಡುವುದಕ್ಕಾಗಿ ಈ ಸಹಕಾರಿ ಸಂಘವು ವಿವಿಧ ತರಬೇತಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ. 2012ರಲ್ಲಿ ಈ ಸಂಘವು ಸಂಸ್ಕರಣಾ ಮತ್ತು ಮಾರಾಟ ಘಟಕವನ್ನು ಸ್ಥಾಪಿಸುತ್ತಾರೆ. 2008ರಲ್ಲಿ ಚೌಹಾಣ್ ಹಣಬೆ ಉದ್ಯಮವನ್ನು ಅಭಿವೃದ್ಧಿಪಡಿಸುವುದಕ್ಕಾಗಿ ಇವರು ಹಣಬೆ ಅಭಿವೃದ್ಧಿ ಘಟಕವನ್ನು ಸ್ಥಾಪಿಸುತ್ತಾರೆ.[೫]

2020-2021ರಲ್ಲಿ ತಂದ ರೈತ ಕಾನೂನಿನ ವಿರುದ್ಧ ಭಾರತೀಯ ರೈತರು ಪ್ರತಿಭಟನೆಗಳನ್ನು ಮಾಡುವಾಗ ಚೌಹಾಣ್ ಅವರು ರೈತರು ಈ ಕಾನೂನುಗಳನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಸರ್ಕಾರದ ಕ್ರಮಗಳು ಮತ್ತು ಕಾನೂನಿನ ಪರವಾಗಿ ಮಾತನಾಡುತ್ತಾರೆ. ಹೊಸ ಕೃಷಿ ಕಾನೂನುಗಳನ್ನು ಸಮರ್ಥನೆ ಮಾಡಿಕೊಂಡ ನಂತರ ಅವರಿಗೆ ಅಪರಿಚಿತರಿಂದ ಅನೇಕ ಬೆದರಿಕೆ ಕರೆಗಳು ಬಂದವು. ಇವರು ಸೋನಿಪತ್ನಲ್ಲಿ ಪ್ರಗತಿಪರ ರೈತರ ಕ್ಲಬ್ಬಿನ ಅಧ್ಯಕ್ಷರಾಗಿದ್ದಾರೆ.

ಪ್ರಶಸ್ತಿಗಳು ಮತ್ತು ಮನ್ನಣೆ[ಬದಲಾಯಿಸಿ]

  • ೨೦೧೯ ರಲ್ಲಿ ಭಾರತದ ನಾಲ್ಕನೆ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದರು.
  • ೨೦೧೦ ರಲ್ಲಿ ಭಾರತ ಸರ್ಕಾರದ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯ ಭಾರತೀಯ ಕೃಷಿ ಸಂಶೋಧನಾ ಮಂಡಳಿಯಿಂದ (ಐಸಿಎಆರ್) ಕೃಷಿಯಲ್ಲಿನ ವೈವಿಧ್ಯೀಕರಣಕ್ಕಾಗಿ ಎನ್.ಜಿ. ರಂಗ ರೈತ ಪ್ರಶಸ್ತಿಯನ್ನು ಪಡೆದರು.
  • ೨೦೧೫ ರಲ್ಲಿ ಇವರು ಮಹೀಂದ್ರಾ ಟ್ರಾಕ್ಟರ್ಸ್ನ ಮಹಿಂದ್ರ ಕೃಷಿ ಸಾಮ್ರಾಟ್ ಪ್ರಶಸ್ತಿಯ್ನನು ಪಡೆದರು
  • ೨೦೧೭ ರಲ್ಲಿ ಇವರಿಗೆ ಆಲ್ ಇಂಡಿಯಾ ಫಾರ್ಮರ್ಸ್ ಅಲೈಯನ್ಸ್ (ಎಐಎಫ್ಎ) ಎಐಎಫ್ಎ ಪ್ರಗತಿಪರ ರೈತ ಪ್ರಶಸ್ತಿಯನ್ನು ಪಡೆದರು.

ಸಹ ನೋಡಿ[ಬದಲಾಯಿಸಿ]

ಪದ್ಮಶ್ರೀ ಪ್ರಶಸ್ತಿ ಪುರಸ್ಕ್ರತರ ಪಟ್ಟಿ ಪದ್ಮಶ್ರೀ ಪ್ರಶಸ್ತಿ (2010-2019)

ಉಲ್ಲೇಖಗಳು[ಬದಲಾಯಿಸಿ]