ಕನ್ನಡ ತಿಂಗಳುಗಳು
ಗೋಚರ
ಒಂದು ಏಡಿಗೆ ಹನ್ನೆರಡು ತಿಂಗಳುಗಳು ಅನ್ನುವುದು ಗ್ರೀಕರಿಂದ ಬಂದ ಬಳುವಳಿ. ಅದನ್ನು ಗ್ರೆಗೋರಿಯನ್ ಕ್ಯಾಲೆಂಡರ್ ಎಂಬುದಾಗಿ ಅವರು ಕರೆದರು. ಅವುಗಳನ್ನು ಬೇರೆ ಬೇರೆ ನಾಡಿನವರು ತಮ್ಮದೇ ನುಡಿಯಲ್ಲಿ ಮಾರ್ಪಡಿಸಿಕೊಂಡರು. ಆದರೆ ಕನ್ನಡಿಗರು ಮಾತ್ರ ತಮ್ಮದೇ ನುಡಿಯಲ್ಲಿ ಈ ತಿಂಗಳುಗಳ ಹೆಸರನ್ನು ಕಟ್ಟಿಕೊಳ್ಳದೆ, ತಮ್ಮದಲ್ಲದ ಆಂಗ್ಲ ನುಡಿಯವರು ಕಟ್ಟಿದ ಜನೆವರಿ, ಫೆಬ್ರವರಿಗಳನ್ನೇ ಎಲ್ಲೆಡೆ ಬಳಸುತ್ತಾ ಬಂದಿದ್ದಾರೆ. ಇನ್ನು ಕೆಲವರು ಕನ್ನಡದ್ದು ಎಂಬ ಹೆಸರಲ್ಲಿ ಚೈತ್ರ ವೈಶಾಖ ಎಂಬ ಸಂಸ್ಕೃತ ತಿಂಗಳುಗಳ ಹೆಸರನ್ನು ಬರೆಯುತ್ತಾರೆ. ಹೀಗಾಗಿ ಕನ್ನಡಿಗರಿಗೆ ತಮ್ಮದೇ ಆದ ತಿಂಗಳುಗಳನ್ನು ಡಿ. ಎನ್. ಶಂಕರ ಭಟ್ಟ ಅವರು ಕಟ್ಟಿ ಕೊಟ್ಟಿದ್ದಾರೆ. ಅವುಗಳು ಈ ಕೆಳಗಿನಂತಿವೆ.
ಕ್ರ. ಸಂ. | ಕನ್ನಡ ತಿಂಗಳು | ಸಂಸ್ಕೃತ ಮಾಸ | ಋತು | ಆಂಗ್ಲ ತಿಂಗಳು |
೧ | ಇಬ್ಬೇಸಿಗೆ | ಚೈತ್ರ | ವಸಂತ | ಏಪ್ರಿಲ್/ಮೇ |
೨ | ಮುಬ್ಬೇಸಿಗೆ | ವೈಶಾಖ | ವಸಂತ | ಮೇ/ಜೂನ್ |
೩ | ಮೊಮ್ಮಳೆ | ಜ್ಯೇಷ್ಠ | ಗ್ರೀಷ್ಮ | ಜೂನ್/ಜುಲೈ |
೪ | ಇಮ್ಮಳೆ | ಆಷಾಢ | ಗ್ರೀಷ್ಮ | ಜುಲೈ/ಆಗಸ್ಟ್ |
೫ | ಮುಮ್ಮಳೆ | ಶ್ರಾವಣ | ವರ್ಷ | ಆಗಸ್ಟ್/ಸೆಪ್ಟೆಂಬರ್ |
೬ | ನಾಲ್ಮಳೆ | ಭಾದ್ರಪದ | ವರ್ಷ | ಸೆಪ್ಟೆಂಬರ್/ಅಕ್ಟೋಬರ್ |
೭ | ಮೊಚ್ಚಳಿ | ಆಶ್ವಯುಜ(ಆಶ್ಲೇಷ) | ಶರದ್ | ಅಕ್ಟೋಬರ್/ನವೆಂಬರ್ |
೮ | ಇಚ್ಚಳಿ | ಕಾರ್ತಿಕ | ಶರದ್ | ನವೆಂಬರ್/ಡಿಸೆಂಬರ್ |
೯ | ಮುಚ್ಚಳಿ | ಮಾರ್ಗಶಿರ | ಹೇಮಂತ | ಡಿಸೆಂಬರ್/ಜನವರಿ |
೧೦ | ನಾಲ್ಚಳಿ | ಪುಷ್ಯ | ಹೇಮಂತ | ಜನವರಿ/ಫೆಬ್ರವರಿ |
೧೧ | ಅಯ್ಚಳಿ | ಮಾಘ | ಶಿಶಿರ | ಫೆಬ್ರವರಿ/ಮಾರ್ಚ್ |
೧೨ | ಮೊಬ್ಬೇಸಿಗೆ | ಫಾಲ್ಗುಣ | ಶಿಶಿರ | ಮಾರ್ಚ್/ಏಪ್ರಿಲ್ |