ಐರನ್ ಜೂಲಿಯನ್ ಕ್ಯೂರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಐರಿನ್ ಜೂಲಿಯಟ್ ಕ್ಯೂರಿ
ಜನನ೧೨ ಸೆಪ್ಟಂಬರ್
ಪ್ಯಾರಿಸ್‌ನಲ್ಲಿ
ವೃತ್ತಿವಿಜ್ಞಾನಿ
ರಾಷ್ಟ್ರೀಯತೆಫ್ರೆಂಚ್

ಐರಿನ್ ಜೂಲಿಯಟ್ ಅವರು ೧೨ ಸೆಪ್ಟಂಬರ್ ೧೮೯೭ರಲ್ಲಿ ಜನಿಸಿದರು. ಇವರು ಮೇರಿ ಕ್ಯೂರಿ ಅವರ ಮಗಳು ಹಾಗು ಫ್ರೆಂಚ್ ದೇಶದ ವಿಜ್ಞಾನಿ. ಅವರ ಗಂಡ ಫ್ರೆಡ್ರಿಕ್ ಜೋಲಿಯಟ್ ಕ್ಯೂರಿ ಜೊತೆ ಇವರಿಗೆ ೧೯೩೫ರಲ್ಲಿ ರಾಸಾಯನ ಶಾಸ್ತ್ರದಲ್ಲಿ ಕೃತಕ ರೇಡಿಯೋ ಚಟುವಟಿಕೆ ಕಂಡು ಹಿಡಿದದ್ದಕಾಗಿ ನೋಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ಪ್ರಶಸ್ತಿಯಿಂದ ಕ್ಯೂರಿಯವರ ಕುಟುಂಬದ ಎಲ್ಲಾ ಸದಸ್ಯರಿಗೂ ನೂಬೆಲ್ ಪ್ರಶಸ್ತಿ ದೊರಕಿದಂತಾಯಿತು. ಇವರ ಮಕ್ಕಳಾದ ಹೆಲೀನ್ ಮತ್ತು ಪಿಯರೆ ಕೂಡ ವಿಜ್ಞಾನಿಗಳು.

ಜೀವನ ಚರಿತ್ರೆ[ಬದಲಾಯಿಸಿ]

ಕ್ಯೂರಿ ಅವರು ಪ್ಯಾರಿಸ್‌ನಲ್ಲಿ (ಫ್ರಾನ್ಸ್) ಜನಿಸಿದರು. ಅವರಿಗೆ ೧೦ ವರ್ಷ್ ಇರುವಾಗ ಅವರು ಶಾಲೆಗೆ ಹೋಗಲು ಆರಂಭಿಸಿದರು ಒಂದು ವರ್ಷ ಪ್ಯಾರಿಸ್‌ನಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರ ಅವರ ತಂದೆ ತಾಯಿಗಳು ಅವರಿಗಿರುವ ಗಣಿತದ ಪ್ರತಿಭೆಯನ್ನು ಗುರುತಿಸಿ ಉತ್ತಮ ಅವಕಾಶಗಳಿಗಾಗಿ ಫ್ರೆಂಚ್ ವಿದ್ವಾಂಸರು ಹಾಗು ಭೌತಶಾಸ್ತ್ರಜ್ಞರಾದ ಪಾಲ್ ಲಾಂಜೆವಿನ್ ಅವರ ಜೊತೆಗೂಡಿ "ದಿ ಕುಪರೆಟಿವಿ" ಎಂಬ ಕಾಸಗಿ ಸಭೆಯನ್ನು ಏರ್ಪಡಿಸಿ ಮಕ್ಕಳಿಗೆ ಕಲಿಯಲು ಅವಕಾಶ ಮಾಡಿ ಕೊಟ್ಟರು. ಎರಡು ವರ್ಷ ಹೀಗೆ ವಿದ್ಯಾಭ್ಯಾಸ ಮುಗಿಸಿದ ನಂತರ ಮತ್ತೆ ಸಾಂಪ್ರದಾಯಿಕವಾಗಿ ಪ್ಯಾರಿಸ್‌ನ ಸೆವಿಗ್ನೆ ಕಾಲೇಜಿನಲ್ಲಿ ೧೯೧೨ರಿಂದ ೧೯೧೪ರವರೆಗೆ ವಿದ್ಯಾಭ್ಯಾಸ ಮಾಡಿದರು ನಂತರ ಸೊರ್ಬೊನ್ನಲ್ಲಿ ಬ್ಯಕೆಲೌರಿಯೇಟ್ ಮುಗಿಸಿದರು. "ಫಾಕ್ಲ್‌ಟಿ ಅಫ್ ಸೈನ್ಸ್"ನಲ್ಲಿ ಓದುತ್ತಿರುವಾಗ ಮೊದಲನೇ ಮಹಾ ಯುದ್ಧದಿಂದ ಅವರ ವಿದ್ಯಾಭ್ಯಾಸಕ್ಕೆ ತೊಂದರೆಯಾಯಿತು. ಮೊದಲನೇ ಮಹಾಯುದ್ಧದ ಆರಂಭದಲ್ಲಿ ಅವರನ್ನು ಹಳ್ಳಿಗೆ ಕರೆದೊಯಲಾಯಿತು ನಂತರ ಅವರಿಗೆ ೧೮ ವರ್ಷ ತುಂಬಿದ ನಂತರ ಅವರ ಅಮ್ಮನ ಬಳಿಗೆ ಮರಳಿದರು. ಪ್ಯಾರಿಸ್‌‌ಗೆ ಹಿಂದಿರುಗಿದ ನಂತರ ಅವರ ತಂದೆ ತಾಯಿಯ ಸ್ವಂತ ಸಂಸ್ಥೆಯಾದ "ರೇಡಿಯಂ ಇನ್ಸ್‌ಟಿಟ್ಯುಟ್"ನಲ್ಲಿ ಕಲಿಯಲು ಮುಂದುವರಿಸಿದರು.[೧]

ಸಂಶೋಧನೆ[ಬದಲಾಯಿಸಿ]

ಅವರ ಡಾಕ್ಟೋರಲ್ ಮಹಾಪ್ರಬಂಧವನ್ನು "ಪೊಲೊನಿಯಮ್ ಆಲ್ಫಾ ಕಿರಣಗಳ"ಮೇಲೆ ಬರೆದರು. ಅವರು ೧೯೨೪ರಲ್ಲಿ ಡಾಕ್ಟರೇಟ್ ಪದವಿಯ ಕೊನೆಗೊಳಿಸುತಿರುವಾಗ ರೇಡಿಯೋ ರಾಸಾಯನಿಕ ಸಂಶೋಧನೆಗೆ ಅಗತ್ಯವಾದ ನಿಖರ ಪ್ರಯೋಗಶಾಲೆಯ ತಂತ್ರಜ್ಞಾನಗಳು ಯುವ ರಾಸಾಯನಿಕ ಎಂಜಿನಿಯರ್ ಆದ ಫೆಡೆರಿಕ್ ಜೂಲಿಯಟವರಿಗೆ ಕಲಿಸಲು ಹೇಳಲಾಯಿತು. ನಂತರ ಅವರು ಫೆಡೆರಿಕ್ ಅವರನೇ ವಿವಾಹವಾದರು. ೧೯೨೮ರಿಂದ ಜೂಲಿಯಟ್- ಕ್ಯೂರಿ ಮತ್ತು ಅವರ ಪತಿ ಫ್ರೆಡೆರಿಕ್ ಪರಮಾಣುವಿನ ನ್ಯೂಕ್ಲಿಯಸ್‌ಗಳ ಅಧ್ಯಯನ ಮತ್ತು ಸಂಶೋಧನೆಯ ಕಡೆಗೆ ತಮ್ಮ ಆಸಕ್ತಿಯನ್ನು ಬೆಳೆಸಿಕೊಂಡರು. ಅವರ ತಮ್ಮ ಸಂಶೋಧನೆಯಿಂದ ಪಾಸಿಟ್ರಾನ್ ಮತ್ತು ನ್ಯೂಟ್ರಾನ್ ಎರಡನ್ನು ಗುರುತಿಸದರು ಕೂಡ, ಅದರ ಫಲಿತಾಂಶಗಳನ್ನು ಅರ್ಥೈಸಿಕೊಳ್ಳಲು ವಿಫಲವಾದರು ನಂತರ ಕಾರ್ಲ್ ಡೇವಿಡ್ ಆಂಡರ್ಸನ್ ಮತ್ತು ಜೇಮ್ಸ್ ಚಾಡ್ ವಿಕ್ ಅವುಗಳನ್ನು ಆವಿಷ್ಕಾರಿಸಿದರು. ಈ ಆವಿಷ್ಕಾರಗಳು ೧೮೯೭ರಲ್ಲಿ ಜೆ.ಜೆ. ಥಾಮ್ಸನ್‌ರವರಿಗೆ ಎಲೆಕ್ಟ್ರಾನ್ ಕಂಡುಹಿಡಿಯಲು ಬಹಳ ಉಪಯೋಗವಾಗುತಿತ್ತೆನೋ, ಕೊನೆಗೆ ಪರಮಾಣು ಎಂಬುದು ಗೋಲಾಕಾರದ ಕಣ ಎಂಬ ಸಿಧಾಂತವನ್ನು ಬದಲಿಸಲು ಉಪಯೋಗವಾಯಿತು.

೧೯೩೪ರಲ್ಲಿ ಜೂಲಿಯಟ್ ಕ್ಯೂರಿಯವರು ಮಾಡಿದ ಆವಿಷ್ಕಾರದಿಂದ ವೈಜ್ಞಾನಿಕ ಹಿತಿಹಾಸದಲ್ಲಿ ಅವರ ಸ್ಥಾನ ಬದ್ರಗೊಂಡಿತು.ಪಿಯರೆ ಮತ್ತು ಮೇರಿಯವರು ಮಾಡುತ್ತಿದ ನೈಸರ್ಗಿಕವಾಗಿ ದೊರೆಯುವ ವಿಕಿರಣ ಮೂಲದಾತುವನ್ನು ಬೇರ್ಪಡಿಸುವ ಕೆಲಸವನ್ನು ಇವರು ಮುಂದುವರೆಸಿತಿರುವಾಗ,ಆಲ್ಕೆಮಿಸ್ಟ್‌ನ ಕನಸಾದ ಒಂದು ಮೂಲದಾತುವನ್ನು ಮತ್ತೊಂದು ಮೂಲದಾತುವಾಗಿ ಪರಿವರ್ತಿಸುವ ಮನವರಿಕೆ ಆಯಿತು, ವಿಕಿರಣ ಸಾರಜನಕದಿಂದ ಬೊರಾನ್‌ನನ್ನು ಸೃಷ್ಟಿಸುವುದು ಮತ್ತು ವಿಕಿರಣ ಫಾಸ್ಪರಸ್ ಸಮಸ್ಥಾಸಿಯಿಂದ ಅಲ್ಯೂಮಿನಿಯಂ ಅನ್ನು ಸೃಷ್ಟಿಸುವುದು ಹಾಗು ಸಿಲಿಕಾನ್ ಸಮಸ್ಥಾಸಿಯಿಂದ ಮೆಗ್ನೀಸಿಯಮ್ ಸೃಷ್ಟಿಸುವುದು. ಆ ಸಂದರ್ಭದಲ್ಲಿ ವಿಕಿರಣ ಮೂಲದಾತುಗಳನ್ನು ಔಷಧಗಳಲ್ಲಿ ಉಪಯೋಗಿಸಲಾಗುತ್ತಿತ್ತು ಇವರ ಆವಿಷ್ಕಾರದಿಂದ ವಿಕಿರಣ ಮೂಲದಾತುಗಳು ಸುಲಭವಾಗಿ ಕಡಿಮೆ ಬೆಲೆಗೆ ದೊರೆಯಲಾರಂಭಿಸಿತು. ಈ ಆವಿಷ್ಕಾರ ಅವರಿಗೆ ೧೯೩೫ರಲ್ಲಿ ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಲಭಿಸಿತು ಜೊತೆಗೆ ವೈಜ್ಞಾನಿಕ ಸಮುದಾಯ ಇದನ್ನು ಗುರುತಿಸಿತು. ಐರೆನ್ ಅವರ ತಂಡ ರೇಡಿಯಂ ನ್ಯೂಕ್ಲಿಯಸ್ ಅನ್ನು ಸಂಶೋಧನೆ ಪ್ರಾರಂಭ ಮಾಡಿ ನಂತರ ಜರ್ಮನ್ ಒಟ್ಟೊ ಹಾನ್ ಲಿಸ್ ದಿ ಮೈಟಿನಿರ್ ಮತ್ತು ಫ್ರಿಟ್ಜ್ ಸ್ಟ್ರಾಸ್‌ಮಾನ್ ನೇತೃತ್ವದ ಜರ್ಮನ್ ವಿಜ್ಞಾನಿಗಳ ನೇತೃತ್ವದಲ್ಲಿ ಪ್ರತ್ಯೇಕ ತಂಡವಾಗಿ ಪರಮಾಣು ವಿದಳನ ಕಂಡುಯಿಡಿಯಲು ಬೇರೆಯಾಯಿತು,ನ್ಯೂಕ್ಲಿಯಸ್ ಸ್ವತಃ ವಿಭಜಿಸುವುದು ಮತ್ತು ಅದರಿಂದ ಹೊರಸೂಸಲ್ಪಟ್ಟ ಅಗಾಧ ಪ್ರಮಾಣದ ವಿದ್ಯುತ್‌ಅನ್ನು ಲಿಸ್ ದಿ ಮೈಟಿನಿರ್ ಐರಿನ್ ಅವರು ಯೋಚಿಸಲು ಆರಂಭಿಸಿ ಕೊನೆಗೆ ಐರಿನ್ ಅವರ ಲೆಖಾಚಾರ ತಪ್ಪು ಎಂದು ನಿರೂಪಿಸಿ ಪರಮಾಣು ವಿದಳನ ಸಾಧ್ಯ ಎಂದು ತೋರಿಸಿ ಕೊಟ್ಟರು. ಪ್ರಾಣಾಂತಿಕ ವಸ್ತುಗಳ ಜೊತೆ ಹಲವಾರು ವರ್ಷಗಳ ಕಾಲ ಕೆಲಸ ಮಾಡಿದ ಕಾರಣಕ್ಕೆ ಜೂಲಿಯಟ್ ಕ್ಯೂರಿ ಅವರು ರಕ್ತದ ಕ್ಯಾನ್ಸರ್‌ಗೆ ತುತ್ತಾದರು. ೧೯೪೬ರಲ್ಲಿ ಪ್ರಯೋಗಾಲಯದ ಬೆಂಚ್ ಮೇಲೆ ಕ್ಯಾಪ್ಸುಲ್ ಸ್ಫೋಟಿಸಿದ್ದರಿಂದ ಪೊಲೊನಿಯಮ್‌ಗೆ ಆಕಸ್ಮಿಕವಾಗಿ ಒಡ್ಡಲಾಯಿತು. ಪ್ರತಿಜೀವಕಗಳ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಯಿಂದ ಅವರು ತಾತ್ಕಾಲಿಕವಾಗಿ ಗುಣಮುಖರಾದರು ದಿನ ದಿನ ಅವರ ಸ್ಥಿತಿ ಅದಗೆಡುತ್ತಾ ಬಂದಿತು. ಇಂತಹ ಸ್ಥಿತಿಯಲ್ಲೂ ಅವರು ಕೆಲಸವನ್ನು ಮುಂದುವರೆಸಿದರು ಮತ್ತು ೧೯೫೫ರಲ್ಲಿ ಡಿಒರ್ಸಯ್ ವಿಶ್ವವಿದ್ಯಾಲಯದ ಭೌತಶಾಸ್ತ್ರದ ಪ್ರಯೋಗಾಲದ ಜನೆಯನ್ನು ರೂಪಿಸಿದರು.

ರಾಜಕೀಯ ಚಿಂತನೆಗಳು[ಬದಲಾಯಿಸಿ]

ಜೂಲಿಯಟ್ ಕ್ಯೂರಿಯವರು ಫ್ಯಾಸಿಸ್ಟ್ ಚಳುವಳಿಯ ಬೆಳವಣಿಗೆಯನ್ನು ಅರಿತಿದ್ದರು.ಅವರು ಫ್ಯಾಸಿಸ್ಟ್ ಚಳುವಳಿಯ ಆದರ್ಶಗಳನ್ನು ವಿರೋಧಿಸಿ ೧೯೩೪ರಲ್ಲಿ ಸಮಾಜವಾದಿ ಪಕ್ಷವನ್ನು ಸೇರಿದರು ಮತ್ತು ೧೯೩೬ರಲ್ಲಿ ಸಕ್ರಿಯವಾಗಿ "ಸ್ಪ್ಯಾನಿಷ್ ಅಂತರ್ಯುದ್ಧದಲ್ಲಿ ರಿಪಬ್ಲಿಕನ್" ಪಕ್ಷವನ್ನು ಬೆಂಬಲಿಸಿದರು. ಅದೇ ವರ್ಷ ಫ್ರೆಂಚ್ ಸರ್ಕಾರವು ವೈಜ್ಞಾನಿಕ ಸಂಶೋಧನೆಗಾಗಿ ರಾಜ್ಯದ ಕಾರ್ಯದರ್ಶಿಯಾಗಿ ನೇಮಕ ಮಾಡಿತು. ಜೂಲಿಯಟ್ ಕ್ಯೂರಿಯವರು ಪಿಯರೆ ಮತ್ತು ಮೇರಿಯವರ ಪಾಲಿಸುತಿದ್ದ ಎಲ್ಲಾ ಸಂಶೋಧನೆಗಳನ್ನು ಪ್ರಕಟಿಸುವ ನೀತಿಯನ್ನು "ವಿಶ್ವ ವೈಜ್ಞಾನಿಕ ಸಮುದಾಯ"ದ ಅಭಿವೃದ್ದಿಗಾಗಿ ಮುಂದುವರೆಸಿದರು. ಸೇನೆಯಲ್ಲಿ ಅದನ್ನು ದುರುಪಯೋಗ ಪಡಿಸಿಕೊಳ್ಳುವ ಸಾದ್ಯತೆ ಇರುವುದರಿಂದ ನಂತರ ಪ್ರಕಟಿಸುವುದನ್ನು ನಿಲ್ಲಿಸಲಾಯಿತು. ೩೦ ಅಕ್ಟೋಬರ್ ೧೯೩೯ರಲ್ಲಿ ಪರಮಾಣು ವಿದಳನ ಕುರಿತ ಎಲ್ಲಾ ದಾಖಲೆಗಳನ್ನು "ಫ್ರೆಂಚ್ ಅಕಾಡೆಮಿ ಆಫ್ ಸಯಿನ್ಸ್"ಗೆ ಒಪ್ಪಿಸಿದರು, ೧೯೪೯ರ ತನಕ ಆ ದಾಖಲೆಗಳು ಅಲ್ಲಿ ಇದ್ದವು. ಜೂಲಿಯಟ್ ಕ್ಯೂರಿಯವರ ರಾಜಕೀಯ ಬದುಕು ಯುದ್ಧದ ನಂತರ ಮತ್ತೆ ಮುಂದುವರೆಯಿತು, ಆಯುಕ್ತರಾಗಿ ನೇಮಕವಾದರು. ರಾಜಕಿಯದಲ್ಲಿದ್ದರು, ವೈಜ್ಞಾನಿಕ ಸಂಶೋಧನೆಗಾಗಿ ಸಮಯವಿಟ್ಟುಕೊಂಡಿದ್ದರು ಹಾಗು ೧೯೪೬ರಲ್ಲಿ ಅವರ ತಾಯಿಯವರ ಸಂಸ್ಥೆಯಾದ "ರೇಡಿಯಂ ಸಂಸ್ಥೆಯ" ನಿರ್ದೇಶಕಿಯಾದರು. ಜೂಲಿಯಟ್ ಕ್ಯೂರಿಯವರು "ಫ್ರೆಂಚ್ ಮಹಿಳೆಯರು ಒಕ್ಕೂಟದ ರಾಷ್ಟ್ರೀಯ ಕಮಿಟಿ"ಯಗೆ ಸೇವೆ ಸಲ್ಲಿಸುತ್ತ ಮಹಿಳ ಶಿಕ್ಷಣವನ್ನು ಪ್ರಚಾರ ಮಾಡಿದರು ಹಾಗು ಮತ್ತೆ "ವೊರ್ಲ್ಡ್ ಪೀಸ್ ಕುನ್ಸಿಲ್"ನ ಸದಸ್ಯರಾದರು.

ವೈಯಕ್ತಿಕ ಜೀವನ[ಬದಲಾಯಿಸಿ]

ಐರಿನ್ ಮತ್ತು ಫ್ರೆಡ್ರಿಕ್ ಅವರು ತಮ್ಮ ಸರ್ ಹೆಸರನ್ನು ೧೯೨೬ರಲ್ಲಿ ಮದುವೆಯಾದ ನಂತರ ಜೂಲಿಯಟ್ ಕ್ಯೂರಿ ಎಂದು ಬದಲಾಯಿಸಿಕೊಂಡರು. ಮದುವೆಯಾದ ಹನ್ನೊಂದು ತಿಂಗಳ ನಂತರ ಅವರ ಮಗಳು ಹೆಲೀನ್ ಅವರು ಜನಿಸಿದರು. ಅವರ ಮಗ ಪಿಯರೆ ೧೯೩೨ರಲ್ಲಿ ಜನಿಸಿದರು ಇವರು ಒಬ್ಬ ಜೀವಶಾಸ್ತ್ರಜ್ಞ. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಅವರು ಕ್ಷಯ ರೋಗದಿಂದ ಬಳಲುತ್ತಿದ್ದರಿಂದ ಸ್ವಿಟ್ಜರ್ ಲ್ಯಾಂಡ್‌ನಲ್ಲಿ ಕಾಲ ಕಳೆದರು. ೧೯೪೪ರಲ್ಲಿ ಜೂಲಿಯಟ್ ಅವರು ತಮ್ಮ ಕುಟುಂಬದ ಸದಸ್ಯರು ಜರ್ಮನ್‌ನಲ್ಲ್ಲಿ ಇರುವುದು ಅಪಾಯಕಾರಿ ಎಂದು ಅರಿತು ಅವರ ಮಕ್ಕಳನ್ನು ಸ್ವಿಟ್ಜರ್ ಲ್ಯಾಂಡ್‌ಗೆ ಕರೆದೊಯ್ದರು. ೧೯೫೬ರಲ್ಲಿ ಜೂಲಿಯಟ್ ಕ್ಯೂರಿಯವರನ್ನು ಪ್ಯಾರಿಸ್‌ನ ಕ್ಯೂರಿ ಆಸ್ಪತ್ರೆಗೆ ದಾಖಲಿಸಲಾಯಿತು ಅಲ್ಲೇ ಅವರು ಮಾರ್ಚ್ ೧೭ರಂದು ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿರುವಾಗ ಕೊನೆಯುಸಿರೆಳೆದರು.

ಪ್ರಶಸ್ತಿಗಳು[ಬದಲಾಯಿಸಿ]

  • ಫ್ರೆಡ್ರಿಕ್ ಜೋಲಿಯಟ್ ಕ್ಯೂರಿ ಜೊತೆ ಕೃತಕ ವಿಕಿರಣ ಕ್ರಿಯೆಗಳ ಸಂಶೋಧನೆ ೧೯೩೫ರಲ್ಲಿ ರಾಸಾಯನಶಾಸ್ತ್ರದ ನೊಬೆಲ್ ಬಹುಮಾನ.[೨]
  • ಫ್ರೆಡ್ರಿಕ್ ಜೋಲಿಯಟ್ ಕ್ಯೂರಿ ವಿಜ್ಞಾನದಲ್ಲಿ ೧೯೪೦ರಲ್ಲಿ ಶ್ಲಾಘನೀಯ ಸೇವೆಗಾಗಿ ಬರ್ನಾರ್ಡ್ ಕಾಲೇಜ್ ಚಿನ್ನದ ಪದಕ.
  • ಹಾನರ್ ಲೆಜಿಯನ್ ಆಫ್ ಅಧಿಕಾರಿ.

ಹೊರಗಿನ ಕೊಂಡಿಗಳು[ಬದಲಾಯಿಸಿ]

  1. ಮೊದಲನೇ ಮಹಾಯುದ್ಧದ ಸಂದರ್ಭ
  2. ೧೯೩೫ರಲ್ಲಿ ದೊರೆತ ನೊಬೆಲ್ ಪ್ರಶಸ್ತಿ

ಇದನ್ನೂ ನೋಡಿ[ಬದಲಾಯಿಸಿ]