ಎಸ್. ಆರ್. ವಿಜಯಶಂಕರ

ವಿಕಿಪೀಡಿಯ ಇಂದ
Jump to navigation Jump to search
ಎಸ್. ಆರ್ ವಿಜಯಶಂಕರ್
ಚಿತ್ರ:S-s.jpg
ಎಸ್. ಆರ್. ವಿಜಯಶಂಕರ್, ಡಾ. ಸುನಿತಾ ಶೆಟ್ಟಿ ಸಾಹಿತ್ಯ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವುದು. ಸಾಹಿತ್ಯ, ಸಂಸ್ಕೃತಿ,ವಿಮರ್ಶಾ ಬರಹಗಳಿಂದ ಕನ್ನಡ ಓದುಗರಿಗೆ ಪರಿಚಿತರಾಗಿದ್ದಾರೆ
ಜನ್ಮನಾಮ
ವಿಜಯ ಶಂಕರ,
ವೃತ್ತಿ'ಇಂಟೆಲ್ ಟೆಕ್ನಾಲಜಿ ಬಹುರಾಷ್ಟ್ರೀಯ ಕಂ.ಕಂಪ್ಯೂಟರ್ ಚಿಪ್ ತಯಾರಿಕಾ ಸಂಸ್ಥೆ'ಯಲ್ಲಿ ದಕ್ಷಿಣ ಏಷ್ಯಾದ ಸಂವಹನ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸಕ್ರಿಯ ವರ್ಷಗಳುಇದುವರೆವಿಗೂ
ಪುರಸ್ಕಾರಗಳುಪ್ರಶಸ್ತಿಗಳು : ೨೦೦೮ ರಲ್ಲಿ, 'ವಿ. ಎಂ. ಇನಾಂದಾರ್ ವಿಮರ್ಶಾ ಪ್ರಶಸ್ತಿ' * ೨೦೧೩ ರ, ಡಾ, ಸುನೀತಾ ಶೆಟ್ಟಿ ಸಾಹಿತ್ಯ ಪ್ರಶಸ್ತಿ'. * ಮಿತ್ರಾ ವೆಂಕಟ್ರಾಜ್ ಸಾಹಿತ್ಯ ಸಂಭ್ರಮ.

ಎಸ್. ಆರ್ ವಿಜಯಶಂಕರ್, ಕರ್ನಾಟಕದ ವಿಮರ್ಶಕ, ಮುಂಬಯಿನಗರದವರಾದ ಅವರು, ಸಾಹಿತ್ಯ, ಸಂಸ್ಕೃತಿ,ವಿಮರ್ಶಾ ಬರಹಗಳಿಂದ ಕನ್ನಡ ಓದುಗರಿಗೆ ಪರಿಚಿತರಾಗಿದ್ದಾರೆ. 'ಇಂಟೆಲ್ ಟೆಕ್ನಾಲಜಿ ಯಲ್ಲಿ ದಕ್ಷಿಣ ಏಷ್ಯಾದ ಸಂವಹನ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಾ ಇದ್ದಾರೆ. ಇವರು, ಜನಪ್ರಿಯ ನಿಯತಕಾಲಿಕಗಳಲ್ಲಿ ಲೇಖನಗಳನ್ನೂ ಅಂಕಣಗಳನ್ನೂ ಬರೆಯುತ್ತಾ ಬಂದಿದ್ದಾರೆ. ಇತ್ತೀಚೆಗೆ ಅವರು ತಮ್ಮ ಹೆಚಿನ ಬರಹಗಳನ್ನು ಸಾಹಿತ್ಯಿಕ ಕಿರುಪತ್ರಿಕೆಯಲ್ಲಿ ಪ್ರಕಟಿಸುತ್ತಿದ್ದಾರೆ. ಪರ್ಯಟನೆಯಲ್ಲಿ ಆಸಕ್ತರು ; ದೇಶ ವಿದೇಶಗಳಿಗೆ ಪ್ರವಾಸ ಕೈಗೊಂಡಿದ್ದಾರೆ. ಮುಂಬೈನ ಕರ್ನಾಟಕ ಸಂಘದಲ್ಲಿ ೨೦೧೩ ರ ಫೆಬ್ರವರಿ ೧೬ ನೇ ಶನಿವಾರದಂದು ಆಯೋಜಿಸಲಾಗಿದ್ದ ೮ ನೇ ಸಾಹಿತ್ಯ ಸಂಸ್ಕೃತಿ ಸಮಾವೇಶದಲ್ಲಿ ಶ್ರೀ ವಿಜಯಶಂಕರ್ ರವರಿಗೆ 'ಡಾ.ಸುನೀತಾ ಶೆಟ್ಟಿ ಸಾಹಿತ್ಯ ಪ್ರಶಸ್ತಿ'ಯನ್ನು ಪ್ರದಾನಮಾಡಲಾಯಿತು. . ಹಿಂದಿನ ಕೃತಿಗಳ ಮರು ಓದುಗರಿಗೆ ಗಮನ ಕೊಡುತ್ತಿರುವ ವಿಜಯ ಶಂಕರ್, ಕವಿ ಗೋಪಾಲಕೃಷ್ಣ ಅಡಿಗರ ಮರು ಓದಿನ 'ಪ್ರತಿಮಾ ಲೋಕ', ಕೃತಿಯನ್ನು ಸಂಪಾದಿಸಿದ್ದಾರೆ.

ವಿಮರ್ಶಾ ಸಂಕಲನಗಳು[ಬದಲಾಯಿಸಿ]

  • 'ಮನೋಗತ',
  • 'ಒಳದನಿ',
  • 'ನಿಜಗುಣ,'
  • 'ಒಡನಾಟ,'ವ್ಯಕ್ತಿ ಚಿತ್ರಗಳ ಸಂಗ್ರಹ.

ಇತರ ಪ್ರಕಟಿತ ಕೃತಿಗಳು[ಬದಲಾಯಿಸಿ]

  • 'ನಿಧಾನ ಶ್ರುತಿ'- ಪ್ರಬಂಧ ಸಂಕಲನ, ಯು.ಆರ್.ಅನಂತಮೂರ್ತಿಯವರ ಸಾಹಿತ್ಯ ವಿಮರ್ಶೆ. (ಸಂಪಾದಿತ)
  • ಕೆ. ಸದಾಶಿವ ಕತೆಗಳು. (ಸಂಪಾದಿತ)

ಸದ್ಯ ದಲ್ಲಿ, 'ವಿಜಯವಾಣಿ ಪತ್ರಿಕೆ'ಗೆ ಪ್ರತಿ ರವಿವಾರ, 'ನುಡಿ ಸಾಕ್ಷಿ ಅಂಕಣ' ಬರಹವನ್ನು ಬರೆಯುತ್ತಿದ್ದಾರೆ.

ಚಿತ್ರ:Vijays.jpg
'ವಿಜಯಶಂಕರ್ ಸಭೆಯನ್ನುದ್ದೇಶಿಸಿ ಮಾತಾಡುತ್ತಿರುವುದು'

ಪ್ರಶಸ್ತಿಗಳು[ಬದಲಾಯಿಸಿ]

[ಸೂಕ್ತ ಉಲ್ಲೇಖನ ಬೇಕು]

  • '. ೨೦೦೮ ರಲ್ಲಿ, 'ವಿ. ಎಂ. ಇನಾಂದಾರ್ ವಿಮರ್ಶಾ ಪ್ರಶಸ್ತಿ'
  • '. ೨೦೧೩ ರ, ಡಾ, ಸುನೀತಾ ಶೆಟ್ಟಿ ಸಾಹಿತ್ಯ ಪ್ರಶಸ್ತಿ'.

ಮಿತ್ರಾ ವೆಂಕಟ್ರಾಜ್ ಸಾಹಿತ್ಯ ಸಂಭ್ರಮ[ಬದಲಾಯಿಸಿ]

ವಿಜಯಶಂಕರರು,[೧] ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಆಯೋಜಿಸಿದ್ದ ಮಿತ್ರಾ ವೆಂಕಟ್ರಾಜ್ ಸಾಹಿತ್ಯಸಂಭ್ರಮ ಕಾರ್ಯಕ್ರಮದ ಅಧ್ಯಕ್ಷತೆ' ವಹಿಸಿದ್ದರು.

ಉಲ್ಲೇಖಗಳು[ಬದಲಾಯಿಸಿ]

  1. 'ಉದಯವಾಣಿ ದಿನ ಪತ್ರಿಕೆ, ಮುಂಬಯಿ'. ೦೨-೦೨-೨೦೧೬, ಪುಟ-೩ 'ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಮಿತ್ರಾವೆಂಕಟ್ರಾಜ್ ಸಾಹಿತ್ಯ ಸಂಭ್ರಮ. "ಮಾಗುತ್ತಾ ಹೊಸದಾಗುವುದು ಮಿತ್ರಾ ಕತೆಗಳ ಯಶಸ್ಸು'"; ವಿಜಯಶಂಕರ್ ಎಸ್.ಆರ್

ಬಾಹ್ಯ ಸಂಪರ್ಕಗಳು[ಬದಲಾಯಿಸಿ]