ಎನ್. ಚಲುವರಾಯ ಸ್ವಾಮಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎನ್. ಚಲುವರಾಯ ಸ್ವಾಮಿ ಅವರು ಕರ್ನಾಟಕದ ರಾಜಕಾರಣಿಯಾಗಿದ್ದಾರೆ. ಇವರು ಕರ್ನಾಟಕ ಸರ್ಕಾರದ ಸಂಪುಟ ಸಚಿವರಾಗಿದ್ದಾರೆ ಮತ್ತು ನಾಗಮಂಗಲವನ್ನು ಪ್ರತಿನಿಧಿಸುವ ಕರ್ನಾಟಕ ವಿಧಾನಸಭೆಯ ಸದಸ್ಯರಾಗಿದ್ದಾರೆ.[೧] ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷಕ್ಕೆ ಸೇರಿದವರು.[೨]

ವೈಯಕ್ತಿಕ ಜೀವನ[ಬದಲಾಯಿಸಿ]

ಚಲುವರಾಯ ಸ್ವಾಮಿಯವರು ಜೂನ್ ೧, ೧೯೬೦ ರಂದು ಶ್ರೀ ನರಸಿಂಹೇಗೌಡ ಮತ್ತು ಶ್ರೀಮತಿ ಸಾಕಮ್ಮ ದಂಪತಿಗಳ ಮಗನಾಗಿ ಜನಿಸಿದರು.[೩][೪] ಕರ್ನಾಟಕದ ಮಂಡ್ಯ ಜಿಲ್ಲೆಯ ಇಜ್ಜಲ-ಘಟ್ಟದಲ್ಲಿನ ನಾಗಮಂಗಲ ತಾಲ್ಲೂಕಿನ ಸಣ್ಣ ಹಳ್ಳಿಯ ಕೃಷಿ ಕುಟುಂಬದಲ್ಲಿ ಜನಿಸಿದ ಚಲುವರಾಯಸ್ವಾಮಿಯವರು ಗ್ರಾಮೀಣ ಭಾರತದ ಇತರ ಹುಡುಗರಂತೆ ಬೆಳೆದರು. ಇವರು ಶ್ರೀಮತಿ ಬಿ.ಕೆ.ಧನಲಕ್ಷ್ಮಿ ಅವರನ್ನು ವಿವಾಹವಾದರು ಮತ್ತು ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.[೫] ಇವರು ೧೯೭೮- ೧೯೮೩ ಸಾಲಿನಲ್ಲಿ ಮಂಡ್ಯದ ಕೆಆರ್ ಪೇಟೆಯಲ್ಲಿರುವ ಪಾಲಿಟೆಕ್ನಿಕ್ ಕಾಲೇಜ್‌ನಿಂದ ಸಿವಿಲ್ ಇಂಜಿನಿಯರಿಂಗ್ ಶಿಕ್ಷಣವನ್ನು ಪೂರೈಸಿದ್ದಾರೆ.[೬]

ರಾಜಕೀಯ ಜೀವನ[ಬದಲಾಯಿಸಿ]

ಎನ್. ಚೆಲುವರಾಯ ಸ್ವಾಮಿ ಅವರು ೧೯೯೪ ರಿಂದ ೧೯೯೯ ರವರೆಗೆ ಜಿಲ್ಲಾ ಪಂಚಾಯಿತಿಯ ಸದಸ್ಯರಾಗಿದ್ದರು. ಅವರು ೧೯೯೬ ರಿಂದ ೧೯೯೭ ರವರೆಗೆ ಅದರ ಉಪಾಧ್ಯಕ್ಷರಾದರು.[೭] ನಂತರ ಅವರು ೧೯೯೯ ಮತ್ತು ೨೦೦೮ರ ನಡುವೆ ಎರಡು ಅವಧಿಗೆ ಕರ್ನಾಟಕ ವಿಧಾನಸಭೆಗೆ ಆಯ್ಕೆಯಾದರು. ಅವರು ಕರ್ನಾಟಕ ಸರ್ಕಾರದ ಕ್ಯಾಬಿನೆಟ್ ಸಚಿವರಾಗಿದ್ದರು. ನಂತರ ೨೦೦೯ ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ೧೫ ನೇ ಲೋಕಸಭೆಗೆ ಆಯ್ಕೆಯಾದರು. ೨೦೧೩ ರಲ್ಲಿ ನಾಗಮಂಗಲ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕರ್ನಾಟಕ ವಿಧಾನಸಭೆಗೆ ಆಯ್ಕೆಯಾದಾಗ ಅವರು ಲೋಕಸಭೆಗೆ ರಾಜೀನಾಮೆ ನೀಡಿದ್ದರು. ಇವರು ೨೦೧೮ ರಲ್ಲಿ ಕಾಂಗ್ರೆಸ್‌ಗೆ ಸೇರಿದರು ಆದರೆ ನಾಗಮಂಗಲದಲ್ಲಿ ತಮ್ಮ ಹಿಂದಿನ ಪಕ್ಷವಾದ ಜೆಡಿಎಸ್ ನ ಸುರೇಶ್ ಗೌಡರ ವಿರುದ್ಧ ವಿಧಾನಸಭಾ ಸ್ಥಾನದಲ್ಲಿ ಸೋಲು ಕಂಡರು.[೮]

ಉಲ್ಲೇಖಗಳು[ಬದಲಾಯಿಸಿ]

  1. "N Chaluvaraya Swamy gets ministerial berth".
  2. https://vijaykarnataka.com/news/karnataka/n-chaluvaraya-swamy-profile-political-career-age-education-caste-net-worth-and-more/articleshow/100548027.cms
  3. https://vijaykarnataka.com/news/karnataka/n-chaluvaraya-swamy-profile-political-career-age-education-caste-net-worth-and-more/articleshow/100548027.cms
  4. https://kannada.oneindia.com/news/karnataka/karnataka-minister-n-chaluvaraya-swamy-profile-295960.html
  5. https://vijaykarnataka.com/news/karnataka/n-chaluvaraya-swamy-profile-political-career-age-education-caste-net-worth-and-more/articleshow/100548027.cms
  6. https://kannada.oneindia.com/news/karnataka/karnataka-minister-n-chaluvaraya-swamy-profile-295960.html
  7. https://vijaykarnataka.com/news/karnataka/n-chaluvaraya-swamy-profile-political-career-age-education-caste-net-worth-and-more/articleshow/100548027.cms
  8. https://vijaykarnataka.com/news/karnataka/n-chaluvaraya-swamy-profile-political-career-age-education-caste-net-worth-and-more/articleshow/100548027.cms