ಎಥಿಲೀನ್ ಆಕ್ಸೈಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಎಥಿಲೀನ್ ಆಕ್ಸೈಡ್ (CH2.O.CH2) ಇದಕ್ಕೆ ಎಪಾಕ್ಸಿ ಈಥೇನ್, ಆಕ್ಸಿರಾನ್ ಎಂಬ ಹೆಸರುಗಳೂ ಇವೆ. ಕ್ಲೋರಿನ್ ಕರಗಿಸಿದ ನೀರಿಗೆ 0ಲಿ ಸೆ. ಉಷ್ಣತೆಯಲ್ಲಿ ಎಥಿಲೀನ್ ಅನಿಲವನ್ನು ಹಾಯಿಸಿ ಉತ್ಪತ್ತಿಯಾದ ಎಥಿಲೀನ್ ಕ್ಲೋರೊಹೈಡ್ರೀನನ್ನು ಸುಣ್ಣದೊಂದಿಗೆ ಬಟ್ಟಿ ಇಳಿಸಿ ಎಥಿಲೀನ್ ಆಕ್ಸೈಡ್ ತಯಾರಿಸುತ್ತಾರೆ. [೧]

CH2=CH2+HCIO→CICH2-CH2OH CICH2-CH2OHCH2.O.CH2

ಸುಣ್ಣ ಎಥಿಲೀನ್ ಮತ್ತು ಗಾಳಿಯ ಮಿಶ್ರಣವನ್ನು ಒತ್ತಡದಲ್ಲಿ 2000-4000 ಸೆ. ಉಷ್ಣತೆಗೆ ಕಾಯಿಸಿದ ಬೆಳ್ಳಿಯ ಮೇಲೆ ಹಾಯಿಸುವುದು ಈಚೆಗೆ ಬಳಕೆಗೆ ಬಂದಿರುವ ಇನ್ನೊಂದು ವಿಧಾನ. ಎಥಿಲೀನ್ ಆಕ್ಸೈಡ್ ಬಣ್ಣವಿಲ್ಲದ ಅನಿಲ. ಇದರ ಕುದಿಬಿಂದು ೧೪ಲಿ ಸೆ. ನೀರಿನಲ್ಲಿ ಆಲ್ಕೊಹಾಲಿನಲ್ಲಿ ಮತ್ತು ಈಥರಿನಲ್ಲಿ ಇದು ದ್ರಾವ್ಯ. ಇದು ಒಳ್ಳೆಯ ಕೀಟನಾಶಕ. ಅನೇಕ ಸಾವಯವ ಸಂಯುಕ್ತಗಳ ಸಂಶ್ಲೇಷಣೆಯಲ್ಲಿ ಇದನ್ನು ಬಳಸುತ್ತಾರೆ. ನೀರಿನೊಡನೆ 2000 ಸೆ. ಉಷ್ಣತೆಯಲ್ಲಿ ವರ್ತಿಸಿ ಇದು ಗ್ಲೈಕಾಲನ್ನು ಉತ್ಪತ್ತಿ ಮಾಡುತ್ತದೆ.[೨]

CH2.O.CH2HOCH2-CH2OH

ಮೀಥೈಲ್ ಅಥವಾ ಈಥೈಲ್ ಆಲ್ಕೊಹಾಲುಗಳೊಡನೆ ವರ್ತಿಸಿ ಇದು ಮೀಥೈಲ್ ಸೆಲೊಸಾಲ್ವ್ (HO.CH2-CH2-O-CH3) ಮತ್ತು ಈಥೈಲ್ ಸೆಲೊಸಾಲ್ವ್ (HO.CH2-CH2-O-C2H5) ಎಂಬ ದ್ರವ ಸಂಯುಕ್ತಗಳನ್ನು ಉತ್ಪತ್ತಿ ಮಾಡುತ್ತದೆ. ಈ ಸೆಲೊಸಾಲ್ವುಗಳಲ್ಲಿ ಸೆಲುಸೋಸ್ ಕರಗಬಲ್ಲದು. ಕೃತಕ ರಬ್ಬರ್ ತಯಾರಿಕೆಗೆ ಅಗತ್ಯವಾದ ರಾಸಾಯನಿಕಗಳಲ್ಲಿ ಒಂದಾದ ಅಕ್ರಿಲೊನೈಟ್ರಿಲ್(CH2=CH.CN) ಎಥಿಲೀನ್ ಆಕ್ಸೈಡಿನಿಂದ ತಯಾರಿಸುವ ಪ್ರಮುಖ ಉತ್ಪನ್ನಗಳಲ್ಲೊಂದು.

ಉಲ್ಲೆಖನಗಳು:[ಬದಲಾಯಿಸಿ]

  1. https://www.osha.gov/SLTC/ethyleneoxide/
  2. https://pubchem.ncbi.nlm.nih.gov/compound/Oxirane