ಎಚ್. ಕೆ. ರಂಗನಾಥ್
ಆಗಸ್ಟ್ ೮, ೧೯೨೪ - ಮಾರ್ಚ್ ೨೬, ೨೦೦೭)
ವೃತ್ತಿ ಮತ್ತು ಪ್ರವೃತ್ತಿ
[ಬದಲಾಯಿಸಿ]ಡಾ. ರಂಗನಾಥ್, ಪ್ರಸಕ್ತ ಭಾರತೀಯ ವಿದ್ಯಾಭವನದ, ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಕೆಲಸಮಾಡುತ್ತಿದ್ದರು. ತಮ್ಮ ಪ್ರಭಾವೀ, ಬರಹಗಳ ಮೂಲಕ ಗಾಂಧಿಯವರನ್ನು, ಓದುಗರಮುಂದೆ ಪ್ರತ್ಯಕ್ಷವಾಗಿ ತಂದು ನಿಲ್ಲಿಸುತ್ತಿದ್ದರು. ಬೇರೆಯವರಿಗಿಂತ ಅವರು ವಿಭಿನ್ನರಾಗಿ ಕಂಡಿದ್ದು ಈ ಕ್ಷೇತ್ರದಲೇ ! ತಮ್ಮ ವೃತ್ತಿ ಜೀವನಕ್ಕೆ ಅವರು ಪಾದಾರ್ಪಣೆಮಾಡಿದ್ದು, ಆಕಾಶವಾಣಿಯ ಮೂಲಕವೇ. ರಂಗನಾಥರು, ಬೆಂಗಳೂರು ವಿಶ್ವವಿದ್ಯಾನಿಲಯದ, ನೃತ್ಯ, ನಾಟಕ, ಮತ್ತು ಸಂಸ್ಕೃತಿ, ನಾಟಕ ಇಲಾಖೆಗಳ, ಸಂಗೀತ ಮತ್ತು ನಾಟಕ ವಿಭಾಗದ ನಿರ್ದೇಶಕರಾಗಿ, ಮುಖ್ಯಸ್ತರಾಗಿದ್ದು, ಮಾಡಿದ ಕೆಲಸ-ಕಾರ್ಯಗಳು, ಪ್ರಮುಖವಾದವುಗಳಾಗಿದ್ದವು. ಬರೆಯುವುದು, ಮಾತಾಡುವುದು, ಲೋಕ ಸುತ್ತುವುದು, ಅವರ ಅವಿಭಾಜ್ಯ ಅಂಗವಾಗಿತ್ತು. ಅವರ ಗದ್ಯಲೇಖನಗಳನ್ನು ಓದುವಾಗ ನಮಗೆ, ಅವರ ಲಲಿತ-ಪ್ರಬಂಧಗಳಲ್ಲಿ ಹುದುಗಿ ಇಣಿಕಿನೋಡುವ ಹಾಸ್ಯದ ಲೇಪ ಚೆನ್ನಾಗಿ ಅರಿವಾಗುತ್ತಿತ್ತು ; ಮತ್ತು ಅವರ ಅಪಾರ ಅನುಭವದ ಸ್ಪರ್ಶದ ಹಿತವಾದ ಹಿನ್ನೆಲೆಯಲ್ಲಿ, ಹೊಸತನ ಮತ್ತು ತಾಜಾತನಗಳು, ಸ್ಪ್ರಿಂಗಿನಂತೆ, ಪುಟಿದೆದ್ದು ಬರುತ್ತಿದ್ದವು.
ಆಕಾಶವಾಣಿ ಕಾರ್ಯಕ್ರಮಗಳಲ್ಲಿ ಹೊಸತನ, ಮತ್ತು ವೈವಿಧ್ಯತೆ
[ಬದಲಾಯಿಸಿ]ರಂಗನಾಥ್ ಆಕಾಶವಾಣಿಯಲ್ಲೇ ಕೆಲಸಮಾಡುತ್ತಿದ್ದಾಗ, ಶಾಂತಾರವರನ್ನು ಪ್ರೇಮಿಸಿ ಮದುವೆಯಾದರು. ಆಕಾಶವಾಣಿಯ ನಿರ್ದೇಶಕರಾಗಿ ಕೆಲಸದಲ್ಲಿದ್ದಾಗ ಧಾರವಾಡ, ಮೈಸೂರು, ಬೆಂಗಳೂರು ಶಾಖೆಗಳಿಗೆ ಕ್ರಮವಾಗಿ ವರ್ಗವಾಗುತ್ತಿತ್ತು. ಹಾಗೆ, ಅಖಂಡ ಕರ್ನಾಟಕವನ್ನು ಸುತ್ತಿ ಅನುಭವವನ್ನು ಪಡೆದಿದ್ದರು. ತಮ್ಮ ಸೃಜನಶೀಲ ವ್ಯಕ್ತಿತ್ವ ಹಾಗೂ ಕಾರ್ಯಾಚರಣೆಗಳ ಮೂಲಕ, ಆಕಾಶವಾಣಿ ಮನೋರಂಜನಾ-ಮಾಧ್ಯಮವನ್ನು, ತಮ್ಮ ಜೀವಿತದ ಅವಧಿಯಲ್ಲಿ ಒಂದು ಪ್ರಭಾವೀ ಮಾಧ್ಯಮವನ್ನಾಗಿ ಪರಿವರ್ತಿಸಿದರು. ಕನ್ನಡ ಸಾರಸ್ವತ ಲೋಕದ ಎಲ್ಲಾ ಆವರಣಗಳನ್ನೂ ಮುಚ್ಚುಮರೆಯಿಲ್ಲದೆ ಎಲ್ಲಾವರ್ಗದ ಶ್ರೋತೃಗಳಿಗೂ, ಅವಕಾಶಗಳನ್ನು ಕೊಡುವುದರ ಮೂಲಕ, ತೆರೆದಿಟ್ಟರು. ತಮ್ಮ ಜೀವನಾನುಭವ ಮತ್ತು ವೃತ್ತಿಯ ಅನುಭವಗಳ ಸಾರವನ್ನು, ಆಕಾಶವಾಣಿ ಮನರಂಜನಾ ಮಾಧ್ಯಮದ ಜೊತೆಗೆ ಹೊಸೆದು, ಕಳೆ ತಂದರು.
ಭಾರತೀಯ ವಿದ್ಯಾಭವನದಲ್ಲಿ ಕಾರ್ಯಚಟುವಟಿಕೆಗಳು
[ಬದಲಾಯಿಸಿ]ಪ್ರಸ್ತುತದಲ್ಲಿ ರಂಗನಾಥರು, ಗಾಂಧಿ ಅಧ್ಯಯನ ಕೇಂದ್ರದ, ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು. ಗಾಂಧೀಜಿಯವರ ಬದುಕು, ಬರಹಗಳನ್ನು ಸಾಮಾನ್ಯ ವರ್ಗದ ಜನರಿಗೆ ಮುಟ್ಟಿಸುವಲ್ಲಿ ತಮ್ಮ ಮಹತ್ವಾಕಾಂಕ್ಷೆಯ ದಾರಿಯಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡರು. ಅದಕ್ಕಾಗಿ ಅವರು ಗಾಂಧೀಜಿಯವರನ್ನು ಕುರಿತ ಪುಸ್ತಕ ಸರಣಿಯ ಯೋಜನೆಯನ್ನು ಹಮ್ಮಿಕೊಂಡಿದ್ದರು. ಜನಸಾಮಾನ್ಯರತ್ತ ಗಾಂಧೀಜಿಯವರನ್ನು ತಂದರು.ನಿರರ್ಗಳ ಬರವಣಿಗೆ, ಮತ್ತು ಉತ್ತಮ ಲೇಖಕರು ಕೂಡ. ಕನ್ನಡಪ್ರಭ ಪತ್ರಿಕೆಯ, ಸಾಪ್ತಾಹಿಕ ಪ್ರಭಾ, ಪುರವಣಿಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿದ್ದ, ನೆನಪಿನ ನಂದನಅಪಾರ ಜನಮನ್ನಣೆಯನ್ನು ಗಳಿಸಿತ್ತು. ಆತ್ಮಕಥೆಯ ಮಾದರಿಯಲ್ಲಿ ಮೂಡಿಬರುತ್ತಿದ್ದ ಆ ಧಾರಾವಾಹಿ, ವೈನೋದಿಕ, ವೈಚಾರಿಕಪ್ರಜ್ಞೆ ಹಾಗೂ ಅಪಾರ ಅನುಭವಗಳ ಅಭಿವ್ಯಕ್ತಿಯಂತಿತ್ತು.
ನಿಧನ
[ಬದಲಾಯಿಸಿ]ರಂಗನಾಥ್ ಹೃದಯಸಂಬಂಧೀ ಬೇನೆಯಿಂದ ನರರಳುತ್ತಿದ್ದು ವೊಹ್ಕಾರ್ಟ್ ಆಸ್ಪತ್ರೆಗೆ ಸೇರಿದರು. ಶಸ್ತ್ರ ಚಿಕಿತ್ಸೆ ಫಲಕಾರಿಯಾಗದೇ ಅಲ್ಲಿಯೇ ೨೬ ರ ಮಾರ್ಚ್ ೨೦೦೭ ಬುಧವಾರ, ಬೆಳಿಗ್ಯೆ, ೯-೩೦ ಕ್ಕೆ ಕೊನೆಯುಸಿರೆಳೆದರು. ಅವರಿಗೆ ೭೮ ವರ್ಷ ವಯಸ್ಸಾಗಿತ್ತು. ಪತ್ನಿ ಮತ್ತು ಮೂರುಜನ ಪುತ್ರಿಯರನ್ನು ಅಗಲಿದ್ದಾರೆ. ಒಬ್ಬ ಮಗಳು, ಮೆಕ್ಸಿಕೊ ನಗರದಲ್ಲಿ, ಇನ್ನೊಬ್ಬಳು ಅಮೆರಿಕದಲ್ಲಿ ಮತ್ತು ಮತ್ತೊಬ್ಬಳು ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಡಾ ಎಚ್.ಕೆ.ನಂಜುಂಡಸ್ವಾಮಿ ಯವರು, ಅವರ ಸೋದರ. ವೃತ್ತಿಯಲ್ಲಿ ವೈದ್ಯರಾದರೂ ಅಣ್ಣನಂತೆಯೇ ಒಳ್ಳೆಯ ಲೇಖಕರು ಕೂಡ.
ಕೃತಿಗಳು
[ಬದಲಾಯಿಸಿ]- 'ನೆನಪಿನ ನಂದನ'
- 'ಜೇನಹನಿ'
- 'Live Media for Development Journalism' - ಪ್ರಸಿದ್ಧ ಕೃತಿ.
- 'ಅಮೃತವರ್ಷ'
- 'ಕನ್ನಡ ನಾಟಕ ಕಲೆ'
- 'ಕರ್ನಾಟಕ ರಂಗಭೂಮಿ
- 'ಜಾಗೃತ ಭಾರತಿ'
- 'ಪಾಕಶಾಸ್ತ್ರ'
- 'ಬಣ್ಣ ಬೆಳಕು'
- 'ಮೂರು ಪ್ರಹಸನಗಳು'
- 'ವಿಷಕನ್ಯೆ'
ಪ್ರಶಸ್ತಿಗಳು :
[ಬದಲಾಯಿಸಿ]- ‘ವಿಷಕನ್ಯೆ’ ನಾಟಕಕ್ಕೆ ಕರ್ನಾಟಕ ಸರಕಾರದ ಪ್ರಶಸ್ತಿ ದೊರೆತಿದೆ.
- ‘ಜಾಗೃತ ಭಾರತಿ’ಗೆ ಮೋತೀಲಾಲ ಶತಮಾನೋತ್ಸವ ಪ್ರಶಸ್ತಿ ದೊರೆತಿದೆ.