ಎಂ. ಜಿ. ಕೆ. ಮೆನನ್

ವಿಕಿಪೀಡಿಯ ಇಂದ
Jump to navigation Jump to search
ಎಂ. ಜಿ. ಕೆ. ಮೆನನ್
ಜನನMambillikalathil Govind Kumar Menon
28 ಆಗಸ್ಟ್ 1928
ಮಂಗಳೂರು, ಕರ್ನಾಟಕ, ಭಾರತ
ಮರಣ22 ನವೆಂಬರ್ 2016(2016-11-22) (ವಯಸ್ಸು 88)
ರಾಷ್ಟ್ರೀಯತೆಭಾರತೀಯ
ಕಾರ್ಯಕ್ಷೇತ್ರಭೌತಶಾಸ್ತ್ರ
ಸಂಸ್ಥೆಗಳುಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಭಾರತ ಸರ್ಕಾರ
ಅಭ್ಯಸಿಸಿದ ವಿದ್ಯಾಪೀಠಮುಂಬೈ ವಿಶ್ವವಿದ್ಯಾಲಯ
ಬ್ರಿಸ್ಟಲ್ ವಿಶ್ವವಿದ್ಯಾಲಯ
ಡಾಕ್ಟರೇಟ್ ಸಲಹೆಗಾರರುಸೆಸಿಲ್ ಫ್ರಾಂಕ್ ಪೊವೆಲ್
ಪ್ರಸಿದ್ಧಿಗೆ ಕಾರಣKGF ಪ್ರಯೋಗಗಳು ,ಕೋಲಾರ್ ಗೋಲ್ಡ್ ಫೀಲ್ಡ್ಸ್ ನಲ್ಲಿ ಪಾರ್ಟಿಕಲ್ ಪ್ರಯೋಗಗಳು
ಗಮನಾರ್ಹ ಪ್ರಶಸ್ತಿಗಳುವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ (1960), ರಾಯಲ್ ಸೊಸೈಟಿಯ ಫೆಲೋ ( FRS) (1970)
ಅಬ್ದುಸ್ ಸಲಾಮ್ ಮೆಡಲ್ (1996)

ಎಂ.ಜಿ. ಕೆ. ಮೆನನ್ (ಮಾಂಬಿಲ್ಲಿಕಾಳಲ್ಲಿ ಗೋವಿಂದ್ ಕುಮಾರ್ ಮೆನನ್), FRS (28 ಆಗಸ್ಟ್ 1928 - 22 ನವೆಂಬರ್ 2016), ಭಾರತಭೌತಶಾಸ್ತ್ರಜ್ಞ ಮತ್ತು ನೀತಿ ತಯಾರಕರಾಗಿದ್ದರು.ಅವರು ನಾಲ್ಕು ದಶಕಗಳ ಕಾಲ ಭಾರತದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದರು.ಅವರ ಪ್ರಮುಖ ಕೊಡುಗೆಗಳಲ್ಲಿ ಒಂದಾದ ಮುಂಬೈನ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ಅನ್ನು ಪೋಷಿಸಿದರು,ಇದು ಅವರ ಮಾರ್ಗದರ್ಶಕ ಹೋಮಿ ಜೆ ಭಾಭಾ 1945 ರಲ್ಲಿ ಸ್ಥಾಪನೆಯಾಯಿತು.[೧]

ಪ್ರಯೋಗ[ಬದಲಾಯಿಸಿ]

ಮೂಲಭೂತ ಕಣಗಳ ಗುಣಗಳನ್ನು ಅನ್ವೇಷಿಸಲು ಅವರು ಕಾಸ್ಮಿಕ್ ಕಿರಣಗಳೊಂದಿಗೆ ಪ್ರಯೋಗಗಳನ್ನು ಕೈಗೊಂಡರು.ಆಕಾಶಬುಟ್ಟಿ ಹಾರಾಟದ ಪ್ರಯೋಗಗಳನ್ನು ಸ್ಥಾಪಿಸುವಲ್ಲಿ ಅವರು ಸಕ್ರಿಯವಾಗಿ ತೊಡಗಿದ್ದರು, ಜೊತೆಗೆ ಕೋಲಾರ್ ಗೋಲ್ಡ್ ಫೀಲ್ಡ್ಸ್ನಲ್ಲಿನ ಗಣಿಗಳಲ್ಲಿ ಕಾಸ್ಮಿಕ್ ಕಿರಣ ನ್ಯೂಟ್ರಿನೊಗಳ ಆಳವಾದ ಭೂಗರ್ಭದ ಪ್ರಯೋಗಗಳನ್ನು ಮಾಡಿದರು.[೨][೩]

ಪ್ರಮುಖ ಹುದ್ದೆಗಳು[ಬದಲಾಯಿಸಿ]

 • ಇಂಡಿಯಾ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್, ಇಂಡಿಯಾ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ನ ಅಧ್ಯಕ್ಷ,
 • ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಘಟನೆಯ ವಿಕ್ರಮ್ ಸಾರಾಭಾಯಿ ಫೆಲೋ ಅವರು,
 • ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್, ಮುಂಬೈ (1966-1975) ನ ನಿರ್ದೇಶಕರಾಗಿದ್ದರು,
 • ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಶನ್ ಟೆಕ್ನಾಲಜಿ, ಅಲಹಾಬಾದ್ನ ಗವರ್ನರ್ಗಳ ಮಂಡಳಿ,
 • ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬಾಂಬೆ ಮತ್ತು ಚೇರ್ಮನ್ ಬೋರ್ಡ್ ಆಫ್ ಗವರ್ನರ್ಸ್.
 • ಅವರು ಅಬ್ದುಸ್ ಸಲಾಮ್ ಪ್ರಶಸ್ತಿಯನ್ನು ಗೆದ್ದರು ಮತ್ತು ಪಾಂಟಿಫಿಕಲ್ ಅಕಾಡೆಮಿ ಆಫ್ ಸೈನ್ಸಸ್ನ ಸದಸ್ಯರಾಗಿದ್ದರು. ಮೇ 1970 ರಲ್ಲಿ ರಾಯಲ್ ಸೊಸೈಟಿಯ ಫೆಲೋ ಆಗಿ ಆಯ್ಕೆಯಾದರು.
 • ಕ್ಷುದ್ರಗ್ರಹ 7564 ಗೊಕುಮೆನಾನ್ 2008 ರ ಅಂತ್ಯದಲ್ಲಿ ಅವರ ಗೌರವಾರ್ಥ ಹೆಸರಿಡಲಾಯಿತು .

ಆರಂಭಿಕ ಜೀವನ[ಬದಲಾಯಿಸಿ]

ಎಂ.ಜಿ. ಕೆ. ಮೆನನ್ ಅವರು ಜೋಧ್ಪುರ ಜಸ್ವಂತ್ ಕಾಲೇಜಿನಲ್ಲಿ ಮತ್ತು ಬಾಂಬೆ ರಾಯಲ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನಲ್ಲಿ ಶಿಕ್ಷಣ ಪಡೆದರು. ಅವರು 1953 ರಲ್ಲಿ.ತಮ್ಮ ಪಿಎಚ್ಡಿಗಾಗಿ ಬ್ರಿಸ್ಟಲ್ ವಿಶ್ವವಿದ್ಯಾಲಯಕ್ಕೆ ತೆರಳಿದರು . ನೊಬೆಲ್ ಪ್ರಶಸ್ತಿ ವಿಜೇತ ಸೆಸಿಲ್ ಎಫ್ ಪೊವೆಲ್ ಮಾರ್ಗದರ್ಶನದಲ್ಲಿ ಪ್ರಾಥಮಿಕ ಕಣ ಭೌತಶಾಸ್ತ್ರದಲ್ಲಿ ಪಿಎಚ್ಡಿ ಪಡೆದರು.[೪]

ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್[ಬದಲಾಯಿಸಿ]

ಅವರು 1955 ರಲ್ಲಿ ಹೋಮಿ ಜೆ. ಭಾಭಾ ಕಾರಣದಿಂದಾಗಿ" ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ಸೇರಿದರು, ಮತ್ತು ಈ ಸಂಘವು ಸುಮಾರು ಐದು ದಶಕಗಳ ಕಾಲ ನಡೆಯಿತು.ಭಾಭಾ ಅವರ ಅಕಾಲಿಕ ಮರಣದ ನಂತರ ಅವರು 38 ನೇ ವಯಸ್ಸಿನಲ್ಲಿ 1966 ರಲ್ಲಿ ಇನ್ಸ್ಟಿಟ್ಯೂಟ್ನ ನಿರ್ದೇಶಕರಾಗಿದ್ದರು.[೫]

ಹುದ್ದೆಗಳು[ಬದಲಾಯಿಸಿ]

 • M.G.K. ಮೆನನ್ 1972 ರಲ್ಲಿ ISRO ಅಧ್ಯಕ್ಷರಾಗಿದ್ದರು.
 • ಯೋಜನಾ ಆಯೋಗದ ಸದಸ್ಯರಾಗಿದ್ದರು (1982-1989),
 • ಪ್ರಧಾನಿಗೆ ವಿಜ್ಞಾನ ಸಲಹೆಗಾರ (1986-1989) ಮತ್ತು
 • ಉಪಾಧ್ಯಕ್ಷರು ಕೌನ್ಸಿಲ್ ಆಫ್ ಸೈಂಟಿಫಿಕ್ & ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್ಐಆರ್) (1989-1990).
 • 1990-96ರ ಅವಧಿಯಲ್ಲಿ ಸಂಸತ್ ಸದಸ್ಯರಾಗಿ (ರಾಜ್ಯಸಭೆ) ಆಯ್ಕೆಯಾದರು.
 • ವಿ.ಪಿ. ಸಿಂಗ್ ಅವರನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಶಿಕ್ಷಣಕ್ಕಾಗಿ ರಾಜ್ಯ ಸಚಿವನ್ನಾಗಿ ನೇಮಿಸಿದರು. (1989).[೬]

ಪ್ರಶಸ್ತಿಗಳು[ಬದಲಾಯಿಸಿ]

ಅವರು 1968 ರಲ್ಲಿ ಪದ್ಮಭೂಷಣ ಮತ್ತು 198 ರಲ್ಲಿ ಪದ್ಮ ವಿಭೂಷಣವನ್ನು ಪಡಿದಿದ್ದಾರೆ.[೭]

ಉಲ್ಲೇಖಗಳು[ಬದಲಾಯಿಸಿ]