ಉಪಪರಮಾಣು ಕಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪ್ರಾಥಮಿಕ ಕಣಗಳ ಮಾದರಿ

ಉಪಪರಮಾಣು ಕಣ ಭೌತಶಾಸ್ತ್ರ ಅಥವಾ ರಸಾಯನಶಾಸ್ತ್ರದಲ್ಲಿ ಪರಮಾಣುವಿಗಿಂತ ಚಿಕ್ಕದಾದ ಕಣಗಳನ್ನು ಉಪಪರಮಾಣು ಕಣ ಎನ್ನುತ್ತ್ತಾರೆ.ಇದರಲ್ಲಿ ಪ್ರಾಥಮಿಕ ಹಾಗೂ ಮಿಶ್ರ ಎಂಬ ಎರಡು ವಿಧದ ಕಣಗಳಿವೆ.ಕಣ ಭೌತಶಾಸ್ತ್ರ ಮತ್ತು ಪರಮಾಣು ಭೌತಶಾಸ್ತ್ರ (Nuclear Physics) ಇವುಗಳ ಸ್ವರೂಪ ಮತ್ತು ಅವುಗಳ ಪರಸ್ಪರ ಸಂಬಂಧಗಳ ಅಧ್ಯಯನ ಮಾಡುತ್ತವೆ. ಪ್ರಾಥಮಿಕ ಉಪಪರಮಾಣು ಕಣಗಳ ಸಾಮಾನ್ಯ ಮಾದರಿಯಲ್ಲಿ ಈ ಕೆಳಗಿನವುಗಳು ಸೇರಿವೆ.

  • ಕ್ವಾರ್ಕ್ ಗಳ ಆರು ಬಗೆ: ಅಪ್, ಡೌನ್, ಬಾಟಮ್, ಟಾಪ್, ಸ್ಟ್ರೇಂಜ್ ಮತ್ತು ಚಾರ್ಮ್.
  • ಲೆಪ್ಟಾನ್ ಗಳ ಆರು ಬಗೆ: ಎಲೆಕ್ಟ್ರಾನ್, ಎಲೆಕ್ಟ್ರಾನ್ ನ್ಯುಟ್ರಿನೊ, ಮುವಾನ್, ಮುವಾನ್ ನ್ಯುಟ್ರಿನೊ, ತೌ ಮತ್ತು ತೌ ನ್ಯುಟ್ರಿನೊ.
  • ಗೇಜ್ ಬೊಸೊನ್‍ ಗಳು: ಗುರುತ್ವ ದ ಗ್ರಾವಿಟನ್,ವಿದ್ಯುತ್ಕಾಂತತೆ ಯ ಫೊಟಾನ್,ಕ್ಷೀಣ ಬಲ (Weak force)ದ ಮೂರು W ಮತ್ತು Z ಬೊಸೊನ್‍ಗಳು,ದೃಡ ಬಲ (strong force)ದ ಎಂಟು ಗ್ಲುವಾನ್‍ ಗಳು.

ಮಿಶ್ರ ಉಪಪರಮಾಣುಗಳು ಎರಡು ಅಥವಾ ಮೂರು ಪ್ರಾಥಮಿಕ ಉಪಪರಮಾಣುಗಳ ಬಂಧದಲ್ಲಿರುತ್ತವೆ.ಉದಾಹರಣೆಗ ಒಂದು ಪ್ರೋಟಾನ್ ಎರಡು ಅಪ್ ಮತ್ತು ಒಂದು ಡೌನ್ ಕ್ವಾರ್ಕ್ ಗಳಿಂದಾಗಿದೆ.ಅಂತೆಯೇ ಒಂದು ಹೀಲಿಯಮ್-೪ರ ಪರಮಾಣುವಿನಲ್ಲಿ ಎರಡು ಪ್ರೋಟಾನ್‍ಗಳು ಮತ್ತು ಎರಡು ನ್ಯೂಟ್ರಾನ್‍ ಗಳಿರುತ್ತವೆ. ಮಿಶ್ರ ಉಪಪರಮಾಣು ಕಣಗಳಲ್ಲಿ ಎಲ್ಲಾ ಹ್ಯಾಡ್ರನ್‍ ಗಳು,ಬಾರ್ಯಾನ್‍ ಗಳ ಗುಂಪು,ಮೆಸನ್‍ಗಳು ಸೇರಿರುತ್ತವೆ.