ಉನ್ನತ ಕಾರ್ಯಸಾಮರ್ಥ್ಯದ ಲಿಕ್ವಿಡ್ ಕ್ರೊಮ್ಯಾಟೋಗ್ರಫಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
High performance liquid chromatography
An HPLC. From left to right: A pumping device generating a gradient of two different solvents, a steel enforced column and an apparatus for measuring the absorbance.
AcronymHPLC
ClassificationChromatography
Analytesorganic molecules
biomolecules
ions
polymers
ManufacturersAgilent Technologies
Beckman Coulter, Inc.
Cecil Instruments
Dionex Corp
Hitachi, Ltd.
PerkinElmer, Inc.
Shimadzu Scientific Instruments
Thermo Fisher Scientific
Varian, Inc.
Waters Corporation
Other techniques
RelatedChromatography
Aqueous Normal Phase Chromatography
Ion exchange chromatography
Size exclusion chromatography
Micellar liquid chromatography
HyphenatedLiquid chromatography-mass spectrometry
HPLC ಸಲಕರಣೆ.

ಉನ್ನತ ಕಾರ್ಯಸಾಮರ್ಥ್ಯದ ಲಿಕ್ವಿಡ್ ಕ್ರೊಮ್ಯಾಟೋಗ್ರಫಿ ಯ ಅಥವಾ (ಹೈ ಪ್ರೆಷರ್ ಲಿಕ್ವಿಡ್ ಕ್ರೊಮ್ಯಾಟೋಗ್ರಫಿ HPLC )ಯು ಲಂಬಸಾಲು ಕ್ರೊಮ್ಯಾಟೋಗ್ರಫಿಯ ರೂಪದಲ್ಲಿ ಇದ್ದು, ಇದನ್ನು ಸಾಧಾರಣವಾಗಿ ಜೀವರಸಾಯನ ಶಾಸ್ತ್ರ ಮತ್ತು ವಿಶ್ಲೇಷಣಾ ರಸಾಯನ ಶಾಸ್ತ್ರದಲ್ಲಿ ಸಂಯುಕ್ತಗಳನ್ನು ಅವುಗಳ ಇಡಿಯೊಸಿಂಕ್ರಾಟಿಕ್ ಪೊಲಾರಿಟಿಸ್ ಮತ್ತು ಪರಸ್ಪರ ಕ್ರಿಯೆಯ ಆಧಾರದ ಮೇಲೆ ಲಂಬಸಾಲು‌ಗಳ ಸ್ಥಾಯಿ ಹಂತದೊಂದಿಗೆ ಬೇರ್ಪಡಿಸಲು, ಗುರುತಿಸಲು ಮತ್ತು ಪ್ರಮಾಣಿಕರಣಗೊಳಿಸಲು ಉಪಯೋಗಿಸಲಾಗುತ್ತದೆ. HPLC ಯು (ಹೈಡ್ರೊಫೊಬಿಕ್ ಸ್ಯಾಚುರೇಟೆಡ್ ಕಾರ್ಬನ್ ಚೈನ್ ಮಾದರಿಯಂತಹ) ವಿವಿಧ ಮಾದರಿಯ ಸ್ಥಾಯಿ ಹಂತಗಳನ್ನು ಉಪಯೋಗಿಸಿಕೊಳ್ಳುತ್ತದೆ. ಅವುಗಳಲ್ಲಿ ಲಂಬಸಾಲು ಮುಖಾಂತರ ಮೊಬೈಲ್ ಹಂತ(ಗಳ)ವನ್ನು ಮತ್ತು ಅನಲೈಟ್‌ ಅನ್ನು ಚಲಿಸುವಂತೆ ಮಾಡುವ ಪಂಪ್, ಮತ್ತು ಆನಲೈಟ್‌ಗೆ ಧಾರಣಶಕ್ತಿಯ ಸಮಯನ್ನು ಪೂರೈಸುವ ಡಿಟೆಕ್ಟರ್ ಅನ್ನು ಉಪಯೋಗಿಸುತ್ತದೆ. ಡಿಟೆಕ್ಟರ್ ಇತರ ವಿಶಿಷ್ಟ ಗುಣಗಳ ಮಾಹಿತಿಯನ್ನು ಕೂಡ ಪೂರೈಸುತ್ತದೆ.(ಉದಾ: ಅನಲೈಟ್‌ನ UV/V ಸ್ಪೆಕ್ಟ್ರೊಸ್ಕೊಪಿಕ್ ದತ್ತಾಂಶವು ಅಷ್ಟೂ ಸನ್ನದ್ಧಗೊಳಿಸಲ್ಪಟ್ಟಿರುತ್ತದೆ.) ಆನಲೈಟ್‌ನ ಧಾರಣಶಕ್ತಿಯ ಸಮಯದಲ್ಲಿನ ವ್ಯತ್ಯಾಸವು, ಸ್ಥಾಯಿ ಹಂತದೊಂದಿಗಿನ ಅದರ ಹೊಂದಾಣಿಕೆ ಸಾಮರ್ಥ್ಯ, ಉಪಯೋಗಿಸಲಾದ ದ್ರಾವಣಗಳ ಪ್ರಮಾಣ/ಸಂರಚನೆ ಮತ್ತು ಮೊಬೈಲ್ ಹಂತದಲ್ಲಿನ ಹರಿವಿನ ಪ್ರಮಾಣದ ಮೇಲೆ ಅವಲಂಬಿಸಿ ಭಿನ್ನವಾಗಿರುತ್ತದೆ.

HPLC ಪಂಪ್ (ಗುರುತ್ವಾಕರ್ಷಣೆ ಬಿಟ್ಟು) ದಟ್ಟವಾಗಿ ಸಾಂದ್ರತೆಗೊಂಡಿರುವ ನಿರ್ಮಿಸಲಾಗಿರುವ ಲಂಬಸಾಲು‌ಗಳ ಮುಖಾಂತರ ಆನಲೈಟ್‌ ಮತ್ತು ಮೊಬೈಲ್ ಹಂತವನ್ನು ಮುನ್ನುಗ್ಗಿಸಲು ಅಗತ್ಯವಾದ ಹೆಚ್ಚಿನ ಒತ್ತಡವನ್ನು ಒದಗಿಸುತ್ತದೆ. ಸಣ್ಣ ಕಣಗಳ ಗಾತ್ರಗಳಿಂದ ಹೆಚ್ಚಿನ ಸಾಂದ್ರತೆ ಹುಟ್ಟುತ್ತದೆ. ಸಾಮಾನ್ಯ ಲಂಬಸಾಲು‌ಗಳ ಕ್ರೊಮ್ಯಾಟೋಗ್ರಫಿಗೆ ಹೋಲಿಸಿದಲ್ಲಿ ಕಡಿಮೆ ಉದ್ದವಿರುವ ಲಂಬಸಾಲು ಗಳ ಮೇಲೆ ಅತ್ಯುತ್ತಮವಾಗಿ ಪ್ರತ್ಯೇಕಿಸಲು ಅನುಕೂಲ ಮಾಡಿಕೊಡುತ್ತದೆ.

ಕಾರ್ಯಾಚರಣೆ[ಬದಲಾಯಿಸಿ]

ವಿಶ್ಲೇಷಣೆಗೆ ಒಳಪಡಬೇಕಾದ ಮಾದರಿಯನ್ನು ಸಣ್ಣ ಪ್ರಮಾಣದಲ್ಲಿ ಮೊಬೈಲ್ ಹಂತದಲ್ಲಿ ಪ್ರವಹಿಸಲಾಗುತ್ತದೆ. ಲಂಬಸಾಲು ಮುಖಾಂತರ ಆನಲೈಟ್‌ ಲಂಬಸಾಲು‌ನಲ್ಲಿ ಸಾಗುವ ಗತಿಯನ್ನು ಸ್ಥಾಯಿ ಹಂತದಲ್ಲಿ ಕ್ರಮಿಸುವ ಸಂದರ್ಭದಲ್ಲಿನ ನಿರ್ಧಿಷ್ಟ ರಾಸಾಯನಿಕ ಅಥವಾ ಭೌತಿಕ ಹೊಂದಾಣಿಕೆಯಿಂದ ನಿಧಾನಗೊಳಿಸಲಾಗುತ್ತದೆ. ಯಾವ ಪ್ರಮಾಣದಲ್ಲಿ ಆನಲೈಟ್‌ ಅನ್ನು ನಿಧಾನಗೊಳಿಸಲಾಗಿದೆ ಎನ್ನುವುದು ಆನಲೈಟ್‌‌ನ ಸ್ವರೂಪ ಮತ್ತು ಸ್ಥಾಯಿ ಹಂತ ಮತ್ತು ಮೊಬೈಲ್ ಹಂತದಲ್ಲಿನ ಸಂರಚನೆಯನ್ನು ಅವಲಂಬಿಸಿರುತ್ತದೆ. ಒಂದು ನಿರ್ಧಿಷ್ಟವಾದ ಆನಲೈಟ್‌ ನುಸುಳುವಿಕೆಯ (ಲಂಬಸಾಲು ತುದಿಯಿಂದ ಹೊರಬರುವ) ಸಮಯವನ್ನು ಧಾರಣ ಸಮಯ ಎಂದು ಕರೆಯುತ್ತಾರೆ. ನಿರ್ಧಿಷ್ಟಪಡಿಸಿದ ಪರಿಸ್ಥಿತಿಯಲ್ಲಿನ ಧಾರಣ ಸಮಯವು ನೀಡಲಾಗಿರುವ ಆನಲೈಟ್‌‌ನ ವಿಶಿಷ್ಟ ಅನನ್ಯತೆಯಾಗಿ ಗುರುತಿಸಲ್ಪಡುತ್ತದೆ. ಸಣ್ಣ ಪ್ರಮಾಣದ ಕಣಗಳ ಲಂಬಸಾಲು ಪ್ಯಾಕಿಂಗ್‌ಗಳ ಉಪಯೋಗವು (ಅದು ಹೆಚ್ಚಿನ ಹಿಮ್ಮುಖ ಒತ್ತಡವನ್ನು ರಚಿಸುತ್ತದೆ) ರೇಖಾತ್ಮಕವಾದ ವೇಗದ ಪ್ರಮಾಣವನ್ನು ಹೆಚ್ಚಿಸುವುದರಿಂದ ಲಂಬಸಾಲು‌ನೊಳಗೆ ಭಾಗಗಳು ಪ್ರಸರಿಸಲು ಕಡಿಮೆ ಸಮಯವನ್ನು ಕೊಡುವುದರಿಂದ ಅಂತಿಮವಾಗಿ ದೊರೆಯುವ ಕ್ರೊಮ್ಯಾಟೋಗ್ರಾಮ್‌ ನಲ್ಲಿ ಸುಧಾರಿತ ರೆಸಲ್ಯೂಷನ್ ಉಂಟಾಗುತ್ತದೆ. ಇದರಲ್ಲಿ ಬಳಸಲಾದ ಸಾಮಾನ್ಯ ದ್ರಾವಕಗಳಲ್ಲಿ ನೀರಿನ ಮಿಶ್ರಣಸಾಧ್ಯ ಸಂಯೋಗ ಅಥವಾ ವಿವಿಧ ಮಾದರಿಯ ಜೈವಿಕ ದ್ರಾವಣಗಳು (ಸಾಮಾನ್ಯವಾಗಿ ಬಹುತೇಕ ಮಿಥೆನಾಲ್ ಮತ್ತು ಅಸಿಟೊನೈಟ್ರೈಲ್) ಸೇರಿವೆ. ಆನಲೈಟ್‌ ಅಂಶಗಳನ್ನು ಪ್ರತ್ಯೇಕಿಸುವುದಕ್ಕೆ ಸಹಕರಿಸಲು ನೀರು ಬಫರ್ಸ್ ಅಥವಾ ಲವಣಾಂಶ, ಅಥವಾ ಐಯಾನ್ ಜೋಡಣೆ ಏಜೆಂಟ್ ಆಗಿ ಕಾರ್ಯನಿರ್ವಹಿಸುವ ಟ್ರಿಫ್ಲ್ಯೊಎಸೆಟಿಕ್ ಆ‍ಯ್‌ಸಿಡ್‌ ನಂತಹವುಗಳನ್ನು ಉಪಯೋಗಿಸಲಾಗುತ್ತದೆ.

HPLC ಯ ಮತ್ತಷ್ಟು ಶುದ್ಧೀಕರಣವನ್ನು ಮಾಡಲು ಮೊಬೈಲ್ ಹಂತದ ಸಂರಚನೆಯನ್ನು ವಿಶ್ಲೇಷಣೆಯ ಅವಧಿಯಲ್ಲಿ ಬದಲಾಯಿಸಬೇಕಾಗಿದ್ದು, ಇದನ್ನು ಗ್ರೇಡಿಯಂಟ್ ಎಲ್ಯೂಷನ್ ಎಂದು ಕರೆಯಲಾಗುತ್ತದೆ. ವಿರುದ್ಧ ದಿಕ್ಕಿನ ಹಂತಕ್ಕಾಗಿನ ಸಾಮಾನ್ಯ ಕ್ರೊಮ್ಯಾಟೋಗ್ರಫಿಯು ಶೇ. 5 ರಷ್ಟು ಮಿಥೆನಾಲ್‌ನಿಂದ ಪ್ರಾರಂಭವಾಗಬಹುದು ಮತ್ತು 25 ನಿಮಿಷಗಳ ಅವಧಿಯಲ್ಲಿ ಶೇ.50ಕ್ಕೆ ನಿಧಾನವಾಗಿ ಏರಿಕೆಯಾಗಬಹುದು. ಆನಲೈಟ್‌ ಎಷ್ಟು ಜಲಭೀತಿಯದಾಗಿದೆ ಅನ್ನುವುದರ ಮೇಲೆ ಆಯ್ಕೆ ಮಾಡಿರುವ ಗ್ರೇಡಿಯಂಟ್ ಅವಲಂಬಿಸಿರುತ್ತದೆ. ಸ್ಥಾಯಿ ಹಂತಕ್ಕೆ ಸಂಬಂಧಿಸಿದಂತೆ, ಸದ್ಯದ ಮೊಬೈಲ್ ಸಂರಚನೆಯ ಹಂತದಲ್ಲಿ ಆನಲೈಟ್‌ ಮಿಶ್ರಣವನ್ನು ಗ್ರೇಡಿಯಂಟ್ ಅನಲೈಟ್‌ನ ಆಕರ್ಷಣೆಯ ಕ್ರಿಯೆಯಾಗಿ ವಿಭಜಿಸುತ್ತದೆ. ಈ ಬೇರ್ಪಡುವ ಪ್ರಕ್ರಿಯೆಯು ದ್ರಾವಣದಿಂದ ದ್ರಾವಣ ತೆಗೆಯುವ ಪ್ರಕ್ರಿಯೆಯಂತೆಯೇ ಇರುತ್ತದೆ. ಆದರೆ, ಇದು ನಿರಂತರವಾಗಿದ್ದು, ಹಂತಹಂತವಾಗಿ ಇರುವುದಿಲ್ಲ. ಈ ಉದಾಹರಣೆಯಲ್ಲಿ, ಮೊಬೈಲ್ ಹಂತದಲ್ಲಿ ಮಿಥೆನಾಲ್ ಹೆಚ್ಚಾಗಿದ್ದಾಗ(ಸಾಪೇಕ್ಷವಾಗಿ ಜಲಭೀತಿಯ ಮೊಬೈಲ್ ಹಂತವನ್ನು ನೀಡಿದಾಗ), ನೀರು/ಮಿಥೆನಾಲ್ ಗ್ರೇಡಿಯಂಟ್ ಉಪಯೋಗಿಸಿದಾಗ ಹೆಚ್ಚಿನ ಜಲಭೀತಿಯ ಅಂಶಗಳು ಹರಿದು (ಲಂಬಸಾಲು‌ನಿಂದ ಹೊರಬಂದು)ಹೋಗುತ್ತವೆ. ಸಾಪೇಕ್ಷವಾಗಿ ಕಡಿಮೆ ಮಿಥೆನಾಲ್/ಹೆಚ್ಚು ನೀರು ಇರುವ ಪರಿಸ್ಥಿತಿಗಳಲ್ಲಿ ಜಲಾಕರ್ಷಣೆಯ ಅಂಶಗಳು ಹೆಚ್ಚಿನ ಪ್ರಮಾಣದಲ್ಲಿ ದ್ರಾವಣದಿಂದ ಹರಿದು ಹೋಗುತ್ತವೆ.

ಸ್ಥಾಯಿ ಹಂತದ ಸ್ವರೂಪ ಮತ್ತು ಆನಲೈಟ್‌‌ಗಳನ್ನು ಅವಲಂಬಿಸಿ ದ್ರಾವಕಗಳು, ಅಡಿಟಿವ್‌ಗಳು ಮತ್ತು ಗ್ರೇಡಿಯಂಟ್‌ಗಳನ್ನು ಆಯ್ಕೆಗೊಳಿಸಲಾಗುತ್ತದೆ. ಅನೇಕ ಬಾರಿ ಆನಲೈಟ್‌ಗಳ ಮೇಲೆ ಸರಣಿ ಪರೀಕ್ಷೆಗಳನ್ನು ಮಾಡಲಾಗಿದೆ ಮತ್ತು ಹಲವಾರು ಪ್ರಾಯೋಗಿಕ ಪರೀಕ್ಷೆಗಳನ್ನು ಅತ್ಯುತ್ತಮವಾದ ಪ್ರತ್ಯೇಕೀಕರಣದ ಉನ್ನತಿಯನ್ನು ನೀಡುವುದಕ್ಕೆ ಪ್ರಕ್ರಿಯೆಗೊಳಿಸಬಹುದಾಗಿದೆ.

ವಿಧಗಳು[ಬದಲಾಯಿಸಿ]

ವಿಭಜನೆ ಕ್ರೊಮ್ಯಾಟೋಗ್ರಫಿ[ಬದಲಾಯಿಸಿ]

ಎಚ್‌‍ಪಿಎಲ್ ಸಿನ ಹೊಸ ಸ್ವಸಂಪೂರ್ಣ ಚಿತ್ರ ಇದರಲ್ಲಿ ಸುಮಾರು 1200 ಕೈಯಲ್ಲಿ ಅರಳಿದ ಚಿತ್ರಗಳನ್ನು ಪಿಸಿಗೆ ಜೋಡಣೆ ಮಾಡಲಾಗಿದೆ.
ವಿಭಜನೆ ಕ್ರೊಮ್ಯಾಟೋಗ್ರಫಿಯು ಪ್ರಥಮ ಬಾರಿಯ ಕ್ರೊಮ್ಯಾಟೋಗ್ರಫಿಯನ್ನು ರಾಸಾಯನಿಕ ಶಾಸ್ತ್ರಜ್ಞರು ಅಭಿವೃದ್ಧಿಪಡಿಸಿದರು. ಪಾರ್ಟಿಷನ್ ಕೊಎಫಿಶಿಯಂಟ್ ತತ್ವವನ್ನು ಪೇಪರ್ ಕ್ರೊಮ್ಯಾಟೋಗ್ರಫಿ, ಥಿನ್ ಲೆಯರ್ ಕ್ರೊಮ್ಯಾಟೋಗ್ರಫಿ, ಗ್ಯಾಸ್ ಹಂತ ಮತ್ತು ಲಿಕ್ವಿಡ್-ಲಿಕ್ವಿಡ್ ಅಪ್ಲಿಕೇಷನ್‌ಗಳಿಗೆ ಅನ್ವಯಿಸಲಾಯಿತು. ರ‍ಸಾಯನ ಶಾಸ್ತ್ರದಲ್ಲಿ 1952ರಲ್ಲಿ ಅರ್ಚರ್ ಜಾನ್ ಪೊರ್ಟರ್ ಮಾರ್ಟಿನ್ ಮತ್ತು ರಿಚರ್ಡ್ ಲಾರೇನ್ಸ್ ಮಿಲಿಂಗ್ಟನ್ ಸಿಂಜ್ ಅವರಿಗೆ ಅಮೀನೋ ಆ‍ಯ್‌ಸಿಡ್‌ ಪ್ರತ್ಯೇಕಿಸುವುದಕ್ಕೆ ಉಪಯೋಗಿಸಲಾಗುತ್ತಿರುವ ತಂತ್ರದ ಅಭಿವೃದ್ಧಿಗೆ ನೋಬೆಲ್ ಬಹುಮಾನ ನೀಡಲಾಯಿತು.   ವಿಭಜನೆ ಕ್ರೊಮ್ಯಾಟೋಗ್ರಫಿಯು ಉಳಿಸಿದ ದ್ರಾವಕವನ್ನು ಮೇಲ್ಮೈ ಅಥವಾ ಧಾನ್ಯದೊಳಗೆ ಅಥವಾ "ಜಡ" ಘನವಾದ ಬೆಂಬಲಿತ ಮ್ಯಾಟ್ರಿಕ್ಸ್‌ನಲ್ಲಿನ ನಾರುಗಳ ಮೇಲೆ ಪೇಪರ್ ಕ್ರೊಮ್ಯಾಟೋಗ್ರಫಿ ರೀತಿಯಲ್ಲಿ ಉಪಯೋಗಿಸುತ್ತದೆ; ಅಥವಾ ಇತರ ಹೆಚ್ಚುವರಿ ಕೌಲೊಂಬಿಕ್ ಮತ್ತು/ಅಥವಾ ಘನ ಬೆಂಬಲವಿರುವ ಹೈಡ್ರೊಜನ್ ದಾನಿಯ ಪರಸ್ಪರ ಕ್ರಿಯೆಯ ಲಾಭವನ್ನು ಪಡೆಯುತ್ತದೆ.  ಒಂದು ದ್ರವ ಸ್ಥಿರ ಹಂತ ಮತ್ತು ಪ್ರೋದ್ಧಾವಕಗಳ ನಡುವೆ ಅಣುಗಳು ಸಮತೂಗಿಸುತ್ತವೆ (ವಿಭಜನೆ).  ಜಲಾಕರ್ಷಣೆಯ ಪರಿಣಾಮ ಕ್ರೊಮ್ಯಾಟೋಗ್ರಫಿ (HILIC) ಎಂದು HPLCನಲ್ಲಿ ಪರಿಚಿತವಾದ ಈ ಪದ್ಧತಿಯು ಅನಲೈಟ್‌ಗಳನ್ನು ದೃವ ಭಿನ್ನತೆಯ ಆಧಾರದ ಮೇಲೆ ವಿಭಾಜಿಸುತ್ತದೆ.  HILICಯು ಹೆಚ್ಚಾಗಿ ಒಂದು ಬಂಧವಿರುವ ದೃವ ಸ್ಥಾಯಿ ಹಂತವನ್ನು ಮತ್ತು ಒಂದು ದೃವ-ವಲ್ಲದ ನೀರಿನ ಮಿಶ್ರಣಸಾಧ್ಯವಾದ ಮೊಬೈಲ್ ಹಂತವನ್ನು ಉಪಯೋಗಿಸುತ್ತದೆ.  ವಿಭಜನೆ HPLCಯನ್ನು ಐತಿಹಾಸಿಕವಾಗಿ ಬಂಧವಿಲ್ಲದ ಸಿಲಿಕಾ ಅಥವಾ ಅಲ್ಯುಮಿನಾ ಬೆಂಬಲಗಳಲ್ಲಿ ಉಪಯೋಗಿಸಲಾಗಿದೆ.  ಈ ಎರಡೂ ತಮ್ಮದೇ ಆದ ದೃವೀಯ ವ್ಯತ್ಯಾಸಗಳ ಮೂಲಕ ಅನಲೈಟ್‌ಗಳನ್ನು ವಿಭಜಿಸಲು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ. ಆದರೂ, HILIC ಒಂದೇ ಕ್ರೊಮ್ಯಾಟೋಗ್ರಾಮ್‌ನಲ್ಲಿ ಆಮ್ಲೀಯ, ಮೂಲಭೂತ ಮತ್ತು ತಟಸ್ಥ ದ್ರವ್ಯಗಳನ್ನು ವಿಭಜಿಸುವ ಅನುಕೂಲತೆಯನ್ನು ಹೊಂದಿದೆ.
ದೃವೀಯ ಅನಲೈಟ್‌ಗಳು ದೃವೀಯ ಸ್ಥಾಯಿ ಹಂತದ ಒಂದು ಸ್ಥಾಯಿ ಜಲ ಪದರಕ್ಕೆ ಹರಡುತ್ತವೆ ಮತ್ತು ಹಾಗಾಗಿ ಅಲ್ಲಿ ಉಳಿಸಲ್ಪಡುತ್ತವೆ.  ಅನಲೈಟ್‌ಗಳ ದೃವೀಯತೆ ಹೆಚ್ಚಿದ ಹಾಗೆಯೇ ಧಾರಣ ಸಾಮರ್ಥ್ಯವೂ ಹೆಚ್ಚುತ್ತದೆ, ಮತ್ತು ದೃವೀಯ ಅನಲೈಟ್‌ಗಳು ಮತ್ತು ದೃವೀಯ ಸ್ಥಾಯಿ ಹಂತದ ನಡುವಿನ (ಮೊಬೈಲ್ ಹಂತಕ್ಕೆ ಸಂಬಂಧಿತಾಗಿ) ಪರಸ್ಪರ ಕ್ರಿಯೆಯು ಪ್ರೋದ್ಧಾವನ ಸಮಯವನ್ನು ಹೆಚ್ಚಿಸುತ್ತದೆ.  ಈ ಪರಸ್ಪರ ಕ್ರಿಯೆಯ ಸಾಮರ್ಥ್ಯವು ಅನಲೈಟ್ ಅಣುವಿನಲ್ಲಿರುವ ಕ್ರಿಯಾತ್ಮಕ ಗುಂಪುಗಳ ಮೇಲೆ ಅವಲಂಬಿತವಾಗಿದ್ದು, ಅದು ವಿಭಜನೆಯನ್ನು ಹೆಚ್ಚಿಸುತ್ತದೆ. ಆದರೆ ಅದು ಕೌಲುಂಬಿಕ್ (ಎಲೆಕ್ಟ್ರೋಸ್ಟ್ಯಾಟಿಕ್) ಕ್ರಿಯೆಯನ್ನು ಮತ್ತು ಜಲಜನಕ ದಾನ ಸಾಮರ್ಥ್ಯವನ್ನು ಸಹಾ ಹೊಂದಿರುವ ಸಾಧ್ಯತೆಯಿದೆ.  ಮೊಬೈಲ್ ಹಂತದಲ್ಲಿ ಹೆಚ್ಚಿನ ದೃವೀಯ ದ್ರಾವಕಗಳನ್ನು ಬಳಸಿದರೆ ಅದು ಅನಲೈಟ್‌ಗಳ ಧಾರಣ ಸಮಯವನ್ನು ಕಡಿಮೆಗೊಳಿಸುತ್ತದೆ. ಆದರೆ, ಹೆಚ್ಚಿನ ಜಲಭೀತಿಯುಳ್ಳ ದ್ರಾವಕಗಳು ಧಾರಣ ಸಮಯವನ್ನು ಕಡಿಮೆಗೊಳಿಸುತ್ತವೆ.
ವಿರುದ್ಧ ದಿಕ್ಕಿನ-ಹಂತದ HPLCಯ ಅಭಿವೃದ್ಧಿಯ ಕಾರಣದಿಂದಾಗಿ 1970ರಲ್ಲಿ ವಿಭಜನೆ ಮತ್ತು NP-HPLC ಮೆಚ್ಚಿನ ಬಳಕೆಯಿಂದ ಹೊರಬಿದ್ದಿತು. ಇದಕ್ಕೆ ಕಾರಣ, ನೀರು ಅಥವಾ ಪ್ರೋಟಿಕ್ ಜೈವಿಕ ದ್ರಾವಕಗಳು ಸಿಲಿಕಾ ಅಥವಾ ಅಲುಮಿನಾ ಕ್ರೋಮ್ಯಾಟೋಗ್ರಾಫಿಕ್ ಮಾಧ್ಯಮದ ಹೈಡ್ರೇಶನ್ ಸ್ಥಿತಿಯನ್ನು ಬದಲಿಸುತ್ತಿದ್ದ ಸಮಯದಲ್ಲಿ, ಇದರಲ್ಲಿ ಧಾರಣೆ ಸಮಯವನ್ನು ಮರುತ್ಪಾದನೆ ಮಾಡಲು ಸಾಧ್ಯವಿರಲಿಲ್ಲ.  ಮರುತ್ಪಾದನೆಯನ್ನು ಹೆಚ್ಚಿಸುವ HILIC ಬಾಂಡೆಡ್ ಹಂತಗಳ ಬೆಳವಣಿಗೆಯಿಂದಾಗಿ ಇತ್ತೀಚೆಗೆ  ಇದು ಮತ್ತೆ ಪ್ರಯೋಜನಕ್ಕೆ ಬಂದಿತು.

ಸಾಮಾನ್ಯ ಹಂತದ ಕ್ರೊಮ್ಯಾಟೋಗ್ರಫಿ[ಬದಲಾಯಿಸಿ]

ಸಾಮಾನ್ಯ ಹಂತದ HPLC (NP-HPLC) ಅಥವಾ ಅಧಿಶೋಷಣೆ ಕ್ರೊಮ್ಯಾಟೋಗ್ರಫಿ ಎಂದು ಕೂಡ ಕರೆಯಲಾಗುವ ಈ ಪದ್ಧತಿಯು, ಅನಲೈಟ್‌ಗಳನ್ನು ಸ್ಥಾಯಿ ಮೇಲ್ಮೈ ರಾಸಾಯನಿಕತೆ ಮತ್ತು ದೃವೀಯತೆಗೆ ಅಧಿಶೋಷಣೆಯ ಗುಣದ ಆಧಾರದ ಮೇಲೆ ವಿಭಜಿಸುತ್ತದೆ.  ಇದು ರಸಾಯನ ಶಾಸ್ತ್ರಜ್ಞರು ವೃದ್ಧಿಪಡಿಸಿದ HPCLನ ಮೊದಲ ತರಹದ ಪ್ರಕಾರಗಳಲ್ಲಿ ಒಂದಾಗಿತ್ತು.   NP-HPCL ಒಂದು ಧ್ರುವೀಯ ಸ್ಥಾಯಿ ಹಂತ ಹಾಗೂ ಒಂದು ಧ್ರುವೀಯಲ್ಲದ ಮತ್ತು ಜಲದಲ್ಲಿರದ ಚಲಿಸುವ ಹಂತಗಳನ್ನು ಬಳಸಿ ಧ್ರುವೀಯಲ್ಲದ ದ್ರಾವಕಗಳಲ್ಲಿ ಸುಲಭವಾಗಿ ಕರಗುವಂತಹ ವಿಶ್ಲೇಷಣದ ವಸ್ತುಗಳನ್ನು ಫಲಪ್ರದವಾಗಿ ವಿಭಜಿಸುವ ಕಾರ್ಯನಿರ್ವಹಿಸುತ್ತದೆ.  ಧ್ರುವೀಯ ಸ್ಥಾಯಿ ಹಂತದ ಜೊತೆ ವಿಶ್ಲೇಷಣದ ವಸ್ತು ಸಂಬಂಧ ಹೊಂದುತ್ತದೆ ಹಾಗೂ ಅದರಿಂದ ಉಳಿಸಲ್ಪಡುತ್ತದೆ.  ವಿಶ್ಲೇಷಣದ ವಸ್ತುವಿನ ಧ್ರುವೀಯತೆಯ ಜೊತೆ ಅಳವಡಿಸಿಕೊಳ್ಳುವ ಸಾಮರ್ಥ್ಯ ಕೂಡ ಹೆಚ್ಚಾಗುತ್ತದೆ ಮತ್ತು ಧ್ರುವೀಯ ವಿಶ್ಲೇಷಣದ ವಸ್ತು ಹಾಗೂ ಧ್ರುವೀಕ ಸ್ಥಾಯಿ ಹಂತದ ಮಧ್ಯದ ಸಂಪರ್ಕ (ಚಲಿಸುವ ಹಂತದ ಅನುಗಣವಾಗಿ) ಪ್ರೋದ್ಧಾವನದ ಸಮಯವನ್ನು ಹೆಚ್ಚಿಸುತ್ತದೆ.  ಸಂಪರ್ಕದ ಸಾಮರ್ಥ್ಯವು ಕೇವಲ ಕಾರ್ಯನಿರ್ವಾಹಕ ಗುಂಪುಗಳ ಮೇಲೆ ಅವಲಂಭಿಸದೇ ಸ್ಟೇರಿಕ್ ಅಂಶಗಳ ಮೇಲೂ ಅವಲಂಬಿಸುತ್ತದೆ.  ಸಂಪರ್ಕದ ಸಾಮರ್ಥ್ಯದ ಮೇಲೆ ಸ್ಟೇರಿಕ್‌ನ ಪರಿಣಾಮವು ಈ ಪ್ರಕ್ರಿಯೆಯನ್ನು ಬಳಸಿ ರಾಚನಿಕ ಸಮಾಂಗಿಗಳನ್ನು ಬಿಡಿಸಲು ಅವಕಾಶ ಮಾಡಿ ಕೊಡುತ್ತದೆ. 
ಚಾಲನೆಯ ಹಂತದಲ್ಲಿ ಹೆಚ್ಚಿನ ಧ್ರುವೀಯ ದ್ರಾವಕಗಳ ಬಳಕೆಯು ಅನಲೈಟ್‌ಗಳ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯದ ಸಮಯವನ್ನು ಕುಂದಿಸುತ್ತದೆ, ಆದರೆ ಹೆಚ್ಚು ಜಲಭೀತಿಯ ದ್ರಾವಕಗಳು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯದ ಸಮಯವನ್ನು ಹೆಚ್ಚಿಸುವ ಪ್ರವೃತ್ತಿಯನ್ನು ಹೊಂದಿರುತ್ತವೆ.  ಸ್ಥಾಯಿ ಹಂತದ ಮೆಲ್ಪದರದ ಮೇಲೆ ಒಂದು ಸ್ಥಾಯಿ ನೀರಿನ ಪರಿಮಿತಿಯ ಪದರವನ್ನು ಸೃಷ್ಟಿಸುವುದರಿಂದ ಒಂದು ಮಿಶ್ರಣದಲ್ಲಿ ಹಲವು ಧ್ರುವೀಯ ದ್ರಾವಕಗಳು ಸ್ಥಾಯಿ ಹಂತವನ್ನು ನಿಷ್ಕ್ರಿಯಗೊಳಿಸುತ್ತವೆ.  ಇದು ಸಾಮಾನ್ಯ ಹಂತದಲ್ಲಿನ ಒಂದು ವಿಚಿತ್ರ ರೀತಿಯ ವರ್ತನೆಯಾಗಿದೆ, ಏಕೆಂದರೆ ಇದು ಅಪ್ಪಟವಾಗಿ ಅಳವಡಿಸಿಕೊಳ್ಳುವ ಯಾಂತ್ರಿಕ ವ್ಯವಸ್ಥೆಯಾಗಿದೆ (ಸಂಪರ್ಕಗಳು ಮೆದುವಾದ ಮೇಲ್ಭಾಗದ ಪದರದಲ್ಲಿ ಅಲ್ಲದೇ ಗಟ್ಟಿ ಮೇಲ್ಭಾದ ಜೊತೆ ಇವೆ).
ವಿರುದ್ಧ ದಿಕ್ಕಿನ-ಹಂತದ HPLCಯ ಅಭಿವೃದ್ಧಿಯ ಕಾರಣದಿಂದಾಗಿ 1970ರಲ್ಲಿ ವಿಭಜನೆ ಮತ್ತು NP-HPLC ಮೆಚ್ಚಿನ ಬಳಕೆಯಿಂದ ಹೊರಬಿದ್ದಿತು. ಇದಕ್ಕೆ ಕಾರಣ, ನೀರು ಅಥವಾ ಪ್ರೋಟಿಕ್ ಜೈವಿಕ ದ್ರಾವಕಗಳು ಸಿಲಿಕಾ ಅಥವಾ ಅಲುಮಿನಾ ಕ್ರೋಮ್ಯಾಟೋಗ್ರಾಫಿಕ್ ಮಾಧ್ಯಮದ ಹೈಡ್ರೇಶನ್ ಸ್ಥಿತಿಯನ್ನು ಬದಲಿಸುತ್ತಿದ್ದ ಸಮಯದಲ್ಲಿ, ಇದರಲ್ಲಿ ಧಾರಣೆ ಸಮಯವನ್ನು ಮರುತ್ಪಾದನೆ ಮಾಡಲು ಸಾಧ್ಯವಿರಲಿಲ್ಲ.  ಮರುತ್ಪಾದನೆಯನ್ನು ಹೆಚ್ಚಿಸುವ HILIC ಬಾಂಡೆಡ್ ಹಂತಗಳ ಬೆಳವಣಿಗೆಯಿಂದಾಗಿ ಇತ್ತೀಚೆಗೆ ಇದು ಮತ್ತೆ ಪ್ರಯೋಜನಕ್ಕೆ ಬಂದಿತು.

ಸ್ಥಳಾಂತರಿಕ ಕ್ರೊಮ್ಯಾಟೋಗ್ರಫಿ[ಬದಲಾಯಿಸಿ]

ಸ್ಥಳಾಂತರಿಕ ಕ್ರೊಮ್ಯಾಟೋಗ್ರಫಿಯ ಮೂಲ ಸಿದ್ಧಾಂತ: ಕ್ರೊಮ್ಯಾಟೋಗ್ರಫಿ ವ್ಯೂಹಕ್ಕೆ ಹೆಚ್ಚು ಆಕರ್ಷಣೆ ಇರುವ ಒಂದು ಅಣು (ಸ್ಥಳಾಂತರಿಕ) ನಿರ್ಬಂಧಕ್ಕೊಳಪಡಿಸುವ ಸ್ಥಳಗಳೊಂದಿಗೆ ಫಲಪ್ರದವಾಗಿ ಸ್ಪರ್ಧಿಸುತ್ತದೆ ಹಾಗೂ ಈ ರೀತಿಯಲ್ಲಿ ಕಡಿಮೆ ಆಕರ್ಷಣೆ ಇರುವ ಎಲ್ಲಾ ಅಣುಗಳನ್ನು ಸ್ಥಳಾಂತರಿಸುತ್ತದೆ.[೧] ಸ್ಥಳಾಂತರ ಹಾಗೂ ಪ್ರೋದ್ಧಾವನ ಕ್ರೊಮ್ಯಾಟೋಗ್ರಫಿಗಳಲ್ಲಿ ವಿಶಿಷ್ಟ ವ್ಯತ್ಯಾಸಗಳಿವೆ. ಪ್ರೋದ್ಧಾವನ ಸ್ಥಿತಿಯಲ್ಲಿ, ವಸ್ತುಗಳು ವಿಶಿಷ್ಟವಾಗಿ ಕಿರಿದಾದ, ಗಾಸಿಯನ್ ಶೃಂಗಗಳ ಒಂದು ಲಂಬಸಾಲಿನಿಂದ ಹೊರಹೊಮ್ಮುತ್ತವೆ. ಹೆಚ್ಚಾಗಿ ತಳಹಾದಿಯ ಹೋಲಿಕೆಗೆ ಶೃಂಗಗಳ ವಿಸ್ತಾರವಾದ ಬೇರ್ಪಡಿಸುವಿಕೆ, ಹೆಚ್ಚು ಶುದ್ಧೀಕರಣವನ್ನು ಪಡೆಯಲು ಅಪೇಕ್ಷಿಸಿದೆ. ಪ್ರೋದ್ಧಾವನ ಸ್ಥಿತಿಯಲ್ಲಿ ಯಾವುದೇ ಮಿಶ್ರಣದ ಅಂಶವು ಎಷ್ಟು ವೇಗವಾಗಿ ಲಂಬಸಾಲಿನ ಕೆಳಗೆ ಚಲಿಸುತ್ತದೆ ಎಂಬುದು ಹಲವು ವಿಷಯಗಳ ಮೇಲೆ ಆಧಾರಿತವಾಗಿದೆ. ಆದರೆ ಎರಡು ವಸ್ತುಗಳು ವಿಭಿನ್ನ ವೇಗಗಳಲ್ಲಿ ಪ್ರಯಾಣಿಸಲು ಹಾಗೂ ಈ ರೀತಿ ಬೇರೆಯಾಗುವುದಕ್ಕೆ, ಬೈಯೋ ಅಣುಗಳ ಹಾಗೂ ಕ್ರೊಮ್ಯಾಟೋಗ್ರಫಿ ವ್ಯೂಹದ ಕೆಲವು ಸಂಪರ್ಕಗಳ ಮಧ್ಯೆ ಬೃಹತ್ ಪ್ರಮಾಣದ ವ್ಯತ್ಯಾಸಗಳಿರಬೇಕು. ಕಾರ್ಯನಿರ್ವಹಿಸುವ ಮಾನದಂಡನೆಗಳನ್ನು ಈ ವ್ಯತ್ಯಾಸದ ಪರಿಣಾಮವನ್ನು ಹೆಚ್ಚಿಸುವಂತೆ ಜೋಡಿಸಿರುತ್ತಾರೆ. ಹಲವು ಸಂದರ್ಭಗಳಲ್ಲಿ, ಶೃಂಗಗಳ ತಳಹಾದಿ ವಿಂಗಡನೆಯನ್ನು ಬರಿ ಇಳಿಜಾರಿನ ಪ್ರೋದ್ಧಾವನ ಹಾಗೂ ಕಡಿಮೆ ಲಂಬಸಾಲಿನ ಹೊರಿಕೆಗಳಿಂದ ಪಡೆಯಬಹುದು. ಹೀಗಾಗಿ, ಪ್ರೋದ್ಧಾವನ ಸ್ಥಿತಿ ಕ್ರೊಮ್ಯಾಟೋಗ್ರಫಿಯ ವಿಶೇಷವಾಗಿ ತಯಾರಿಯ ಮಾಪಕದಲ್ಲಿ ಎರಡು ಅಡಚಣೆಗಳಿವೆ, ಒಂದು ಇಳಿಜಾರು ದ್ರಾವಕದ ಪಂಪಿನ ಕಾರಣ ಕಾರ್ಯನಿರ್ವಾಹಣೆಯಲ್ಲಿ ಜಟಿಲತೆ ಹಾಗೂ ಮತ್ತೊಂದು ಕಡಿಮೆ ಲಂಬಸಾಲು ಹೋರಿಕೆಗಳಿಂದಾಗುವ ಕಡಿಮೆ ವಸ್ತುವಿನ ಒಟ್ಟು ಮೊತ್ತ. ಪ್ರೋದ್ಧಾವನ ಕ್ರೊಮ್ಯಾಟೋಗ್ರಫಿಯ ಹೋಲಿಕೆಯಲ್ಲಿ ಸ್ಥಳಾಂತರಿಕ ಕ್ರೊಮ್ಯಾಟೋಗ್ರಫಿಯಲ್ಲಿ ಹೆಚ್ಚು ಅನುಕೂಲತೆಗಳಿವೆ. ಅದರಲ್ಲಿ ಅಂಶಗಳು ಶುದ್ಧ ವಸ್ತುಗಳ ಕ್ರಮಬದ್ಧವಾದ ಕ್ಷೇತ್ರಗಳಲ್ಲಿ ವಿಂಗಡನೆಯಾಗುತ್ತವೆ "ಶೃಂಗ"ಗಳಲ್ಲಿ ಅಲ್ಲ.

ಏಕೆಂದರೆ ಈ ಪ್ರಕ್ರಿಯೆಯು ಐಸೋಥರ್ಮ್‌ಗಳ ರೇಖಾತ್ಮಕವಲ್ಲದ ಗುಣದ ಲಾಭವನ್ನು ಪಡೆಯುತ್ತದೆ, ಫಲಪ್ರದವಾಗಿ ಹೆಚ್ಚಿನ ದಟ್ಟತನದಿಂದ ಒಂದು ದೊಡ್ಡ ಲಂಬಸಾಲಿನ ಒದಗಿಸುವಿಕೆಯನ್ನು ಕೊಟ್ಟಿರುವ ಲಂಬಸಾಲಿನಲ್ಲಿ ಶುದ್ಧಿಕರಿಸಿದ ಅಂಶಗಳೊಂದಿಗೆ ವಿಂಗಡಿಸಬಹುದು.

ವಿರುದ್ಧದಿಕ್ಕಿನ ಹಂತದ ಕ್ರೊಮ್ಯಾಟೋಗ್ರಫಿ (RPC)[ಬದಲಾಯಿಸಿ]

ವರ್ಣಲೇಖದ ಸಂಕೀರ್ಣಮಿಶ್ರಣ (ಸುಗಂಧ ದ್ರವ್ಯ)ವು ಎಚ್‌‍ಪಿಎಲ್ ಸಿನ ಹಿಂದಿನ ಹಂತದಿಂದ ಪಡೆದಿದೆ.
HPLC (RP-HPLC ಅಥವಾ RPC)ನ ವಿರುದ್ಧದಿಕ್ಕಿನ ಹಂತವು ಒಂದು ದೃವೀಯವಲ್ಲದ ಸ್ಥಿರ ಸ್ಥಿತಿಯನ್ನು ಹೊಂದಿದೆ ಮತ್ತು ಒಂದು ಜಲೀಯವಾದ, ಮಧ್ಯಮ ದೃವೀಯ ಮೊಬೈಲ್ ಹಂತವನ್ನು ಹೊಂದಿದೆ.  RMe2SiCl ಗಳೊಂದಿಗೆ ಸಂಸ್ಕರಣೆ ಮಾಡಲ್ಪಟ್ಟ ಸಿಲಿಕಾ ಒಂದು ಸಾಮಾನ್ಯ ಹಂತವಾಗಿದ್ದು, ಇದರಲ್ಲಿ R ಎಂಬುದು C18H37 ಅಥವಾ C8H17 ಗಳಂತಹ ನೇರ ಸರಪಳಿ ಅಲ್ಕೈಲ್ ಗುಂಪಾಗಿದೆ.  ಈ ಸ್ಥಾಯಿ ಹಂತಗಳೊಂದಿಗೆ, ಹೆಚ್ಚು ದೃವೀಯವಲ್ಲದ ಅಣುಗಳಿಗೆ ಈ ಧಾರಣ ಸಮಯವು ದೀರ್ಘವಾಗಿರುತ್ತದೆ, ಮತ್ತು ದೃವೀಯ ಅಣುಗಳು ಬಹಳ ಸುಲಭವಾಗಿ ಪ್ರೋದ್ಧಾವಿಸುತ್ತವೆ.  ಮೊಬೈಲ್ ಹಂತಕ್ಕೆ ಹೆಚ್ಚಿನ ನೀರನ್ನು ಸೇರಿಸುವ ಮೂಲಕ ಒಬ್ಬ ಸಂಶೋಧಕ ಅದರ ಧಾರಣೆ ಸಮಯವನ್ನು ಹೆಚ್ಚಿಸಬಹುದಾಗಿದೆ; ಮತ್ತು ಆ ಮೂಲಕ ಜಲಭೀತಿಯ ಸ್ಥಾಯಿ ಹಂತದ ಕಡೆಗೆ ಜಲಭೀತಿಯ ಅನಲೈಟ್‌ಗಳ ಆಕರ್ಷಣೆಯನ್ನು ಹೆಚ್ಚಿನ ಜಲಾಕರ್ಷಣೆಯ ಮೊಬೈಲ್ ಹಂತಕ್ಕೆ ಸಂಬಂಧಿಸಿ ಹೆಚ್ಚಿಸಬಹುದಾಗಿದೆ.  ಅದೇ ರೀತಿ, ಒಬ್ಬ ಸಂಶೋಧಕ ಪ್ರೋದ್ಧಾವಕಕ್ಕೆ ಹೆಚ್ಚಿನ ಜೈವಿಕ ದ್ರಾವಕವನ್ನು ಸೇರಿಸುವ ಮೂಲಕ ಅದರ ಧಾರಣೆ ಸಮಯವನ್ನು ಕಡಿಮೆಗೊಳಿಸಬಹುದಾಗಿದೆ.  RPCಯನ್ನು ಎಷ್ಟು ನಿರಂತರವಾಗಿ ಉಪಯೋಗಿಸಲಾಗುತ್ತಿದೆ ಎಂದರೆ ಅದನ್ನು ಕೆಲವೊಮ್ಮೆ ತಪ್ಪಾಗಿ "HPLC" ಎಂದು ಯಾವುದೇ ನಿರ್ಧಿಷ್ಟತೆಯಿಲ್ಲದೇ ಕರೆದುಬಿಡಲಾಗುತ್ತದೆ.  ಔಷಧಿಯ ಉದ್ದಿಮೆಯು ಔಷಧಿಗಳನ್ನು ಬಿಡುಗಡೆ ಮಾಡುವ ಮೊದಲು ಅವುಗಳ ಔತ್ತಮ್ಯವನ್ನು ಸ್ಷಷ್ಟಪಡಿಸಿಕೊಳ್ಳಲು ನಿಯಮಿತವಾಗಿ RPCಯನ್ನು ಬಳಸಿಕೊಳ್ಳುತ್ತದೆ.    
RPC ಯು ಜಲಭೀತಿಯ ಶಕ್ತಿಗಳ ನಿಯಮಗಳನ್ನು ಬಳಸಿಕೊಂಡು ಕೆಲಸ ಮಾಡುತ್ತದೆ. ಈ ಶಕ್ತಿಯು ಡೈಪೋಲಾರ್ ನೀರಿನ ರಚನೆಯಲ್ಲಿನ ಹೆಚ್ಚಿನ ಸಮಮಿತಿಯಿಂದ ಹುಟ್ಟುತ್ತದೆ ಮತ್ತು ಜೀವ ವಿಜ್ಞಾನದ ಎಲ್ಲಾ ಪ್ರಕ್ರಿಯೆಗಳಲ್ಲಿಯೂ ಅತ್ಯಂತ ಪ್ರಮುಖ ಕಾರ್ಯವನ್ನು ನಿರ್ವಹಿಸುತ್ತದೆ.   RPC ಯು ಈ ಪರಸ್ಪರ ವರ್ತಿಸುವ ಶಕ್ತಿಗಳ ಮಾಪನವನ್ನು ಅನುಮತಿಸುತ್ತದೆ.  ಅನಲೈಟ್‌ನನ್ನು ಸ್ಥಾಯಿ ಹಂತಕ್ಕೆ ಬಂಧಿಸುವುದು ಜಲೀಯ ಪ್ರೋದ್ಧಾವಕದಲ್ಲಿರುವ ಲಿಗ್ಯಾಂಡ್‌ ಅಣುವಿನ ಸಂಪರ್ಕ ಹೊಂದಿದಾಗ, ಅನಲೈಟ್‌ ಅಣುವಿನ ದೃವೀಯವಲ್ಲದ ಭಾಗದ ಸುತ್ತಲೂ ಇರುವ ಸ್ಪರ್ಶಕ್ಕೆ ಬರುವ ಮೇಲ್ಮೈಗೆ ಸಮಾನುಪಾತದಲ್ಲಿರುತ್ತದೆ.  ಈ ಸಾಲ್ವೋಫೋಬಿಕ್ ಪರಿಣಾಮವನ್ನು ಅನಲೈಟ್‌ನ ಸುತ್ತಲೂ ಇರುವ "ಕುಳಿ-ತಗ್ಗಿಸುವಿಕೆಯ" ನೀರಿನ ಶಕ್ತಿಯು ಮತ್ತು C18-ಚೈನ್ ಎದುರಾಗಿ ಈ ಎರಡರ ಸಂಕೀರ್ಣವು  ನಿಯಂತ್ರಿಸುತ್ತದೆ.  ಈ ಪ್ರಕ್ರಿಯೆಯಲ್ಲಿ ಉತ್ಪತ್ತಿಯಾಗುವ ಶಕ್ತಿಯು ಈ ಪ್ರೋದ್ಧಾವಕದ ಮೇಲ್ಮೈ ಒತ್ತಡಕ್ಕೆ  (ನೀರು: 7.3 × 10-6 J/cm², ಮಿಥೇನಾಲ್: 2.2 × 10-6 J/cm²) ಮತ್ತು ಅನಲೈಟ್‌ನ ಜಲಭೀತ ಮೇಲ್ಮೈ ಮತ್ತು ಲಿಗ್ಯಾಂಡ್‌ಗೆ ಅನುಕ್ರಮವಾಗಿ ಸಮಾನುಪಾತದಲ್ಲಿರುತ್ತದೆ.  ಕಡಿಮೆ ದೃವೀಯ ದ್ರಾವಕವನ್ನು (ಮಿಥೇನಾಲ್, ಅಸಿಟೋನೈಟ್ರೈಲ್) ಮೊಬೈಲ್ ಹಂತಕ್ಕೆ ಸೇರಿಸಿ ನೀರಿನ ಮೇಲ್ಮೈ ಒತ್ತಡವನ್ನು ಕಡಿಮೆ ಗೊಳಿಸುವ ಮೂಲಕ ಧಾರಣೆಯನ್ನು ಕಡಿಮೆಗೊಳಿಸಬಹುದಾಗಿದೆ.  ಈ ವಿಶ್ಲೇಷಣೆಯ ಸಮಯದಲ್ಲಿ ಜಲೀಯ ಮೊಬೈಲ್ ಹಂತದ ದೃವೀಯತೆ ಮತ್ತು ಮೇಲ್ಮೈ ಒತ್ತಡವನ್ನು ಕಡಿಮೆ ಮಾಡುವ ಮೂಲಕ ಗ್ರೇಡಿಯೆಂಟ್ ಪ್ರೋದ್ಧಾವನವು ಈ ಪರಿಣಾಮವನ್ನು ಬಳಸಿಕೊಳ್ಳುತ್ತದೆ.
ಧಾರಣೆಯ ಲಕ್ಷಣಗಳಲ್ಲಿ ಅನಲೈಟ್ ಅಣುಗಳ ರಾಚನಿಕ ಗುಣಗಳು ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತವೆ.  ಸಾಮಾನ್ಯವಾಗಿ, ಹೆಚ್ಚಿನ ಜಲಭೀತಿಯ ಮೇಲ್ಮೈ ಸ್ಥಳವನ್ನು (C-H, C-C, ಮತ್ತು ಸಾಮಾನ್ಯವಾಗಿ ದೃವೀಯವಲ್ಲದ S-S ದಂತಹ ಅಣು ಬಂಧಗಳು) ಹೊಂದಿದ ಒಂದು ಅನಲೈಟ್ ಹೆಚ್ಚಿನ ಧಾರಣೆ ಸಮಯವನ್ನು ಉಂಟುಮಾಡುತ್ತದೆ. ಏಕೆಂದರೆ ಅದು ಅಣುವಿನ ದೃವೀಯವಲ್ಲದ, ಮತ್ತು ನೀರಿನ ರಚನೆಯೊಂದಿಗೆ ಪ್ರತಿಕ್ರಿಯಿಸದಂತಹ, ಮೇಲ್ಮೈ ಸ್ಥಳವನ್ನು ಹೆಚ್ಚಿಸುತ್ತದೆ.  ಆದರೆ, -OH, -NH2, COO- ಅಥವಾ -NH3+ ಗಳಂತಹ ದೃವೀಯ ಗುಂಪುಗಳು ನೀರಿನೊಂದಿಗೆ ತುಂಬ ಚೆನ್ನಾಗಿ ಹೊಂದಿಕೊಳ್ಳುವುದರಿಂದಾಗಿ ಧಾರಣೆಯನ್ನು ಕಡಿಮೆಗೊಳಿಸುತ್ತವೆ.  ಹಾಗಿದ್ದರೂ, ಅತ್ಯಂತ ದೊಡ್ಡ ಅಣುಗಳು ದೊಡ್ಡ ಅನಲೈಟ್ ಮೇಲ್ಮೈ ಮತ್ತು ಲಿಗ್ಯಾಂಡ್‌ನ ಅಲ್ಕೈಲ್ ಸರಪಳಿಯೊಂದಿಗೆ ಉಂಟುಮಾಡುವ ವರ್ತನೆಗಳು ಪೂರ್ಣವಾಗದಿರಬಹುದು, ಮತ್ತು ಇದು ಸ್ಥಾಯಿ ಹಂತದ ರಂಧ್ರಗಳ ಒಳಗೆ ಸಾಗುವಾಗ ಸಮಸ್ಯೆಯುಂಟಾಗಬಹುದು. 
ಜಲಭೀತ (ದೃವೀಯವಲ್ಲದ) ಮೇಲ್ಮೈ ಸ್ಥಳದೊಂದಿಗೆ ಧಾರಣೆ ಸಮಯವು ಹೆಚ್ಚಾಗುತ್ತದೆ.  ಶಾಖೆಗಳುಳ್ಳ ಸರಪಳಿ ಸಂಯುಕ್ತಗಳು ಅವುಗಳ ಲೀನಿಯರ್ ಐಸೋಮರ್‌‍ಗಳಿಗಿಂತ ಹೆಚ್ಚು ವೇಗವಾಗಿ ಪ್ರೋದ್ಧಾವಿಸುತ್ತವೆ. ಏಕೆಂದರೆ, ಒಟ್ಟಾರೆ ಮೇಲ್ಮೈ ಸ್ಥಳವು ಕಡಿಮೆಯಾಗಿರುತ್ತದೆ.  ಅದೇ ರೀತಿ ಒಂಟಿ C-C-ಬಂಧಗಳಿರುವ ಜೈವಿಕ ಸಂಯುಕ್ತಗಳು C=C ಅಥವಾ C-C-ತ್ರಿಬಂಧಗಳಿಗಿಂತ ಕಡಿಮೆ ವೇಗದಲ್ಲಿ ಪ್ರೋದ್ಧಾವಿಸುತ್ತವೆ. ಏಕೆಂದರೆ ದ್ವಿಬಂಧ ಅಥವಾ ತ್ರಿಬಂಧವು ಒಂಟಿ C-C-ಬಂಧಕ್ಕಿಂತ ಚಿಕ್ಕವಾಗಿರುತ್ತವೆ.
ಮೊಬೈಲ್ ಹಂತದ ಮೇಲ್ಮೈ ಒತ್ತಡದ (ಪ್ರೋದ್ಧಾವಕಗಳ ರಚನೆಯಲ್ಲಿ ಸಾಂಘಿಕ ಶಕ್ತಿ) ಹೊರತಾಗಿ, ಇತರ ಮೊಬೈಲ್ ಹಂತದ ಪರಿವರ್ತಕಗಳು ಅನಲೈಟ್ ಧಾರಣೆಯ ಮೇಲೆ ಪರಿಣಾಮ ಬೀರಬಹುದು.  ಉದಾಹರಣೆಗೆ, ಅಜೈವಿಕ ಲವಣಗಳನ್ನು ಸೇರಿಸಿದರೆ ಅದು ಜಲೀಯ ದ್ರಾವಣಗಳಲ್ಲಿನ ಮೇಲ್ಮೈ ಒತ್ತಡವನ್ನು ಮಧ್ಯಮವಾದ ರೇಖಾತ್ಮಕವಾದ ಹೆಚ್ಚಳವನ್ನು ಉಂಟುಮಾಡುತ್ತದೆ (ca. 1.5 × 10-7 J/cm² ಪ್ರತಿ Mol ಗೆ NaCl ಗೆ, 2.5 × 10-7 J/cm² ಪ್ರತಿ Mol ಗೆ (NH4ಗೆ)2SO4), ಮತ್ತು ಅನಲೈಟ್-ದ್ರಾವಕ ಮಧ್ಯಮಕ್ಷೇತ್ರದ ಎಂಟ್ರೋಪಿಯನ್ನು ಮೇಲ್ಮೈ ಒತ್ತಡವು ನಿರ್ವಹಿಸುವುದರಿಂದ, ಲವಣದ ಸೇರ್ಪಡೆಯು ಧಾರಣೆಯ ಸಮಯವನ್ನು ಹೆಚ್ಚಿಸುತ್ತದೆ. ಈ ತಂತ್ರವನ್ನು ಪ್ರೋಟೀನ್‌ಗಳ ಮೃದು ಬೇರ್ಪಡಿಸುವಿಕೆ ಮತ್ತು ಮರಳಿಪಡೆಯುವಿಕೆಗೆ ಹಾಗೂ ಪ್ರೋಟೀನ್ ವಿಶ್ಲೇಷಣೆಯಲ್ಲಿ (ಹೈಡ್ರೋಫೋಬಿಕ್ ಇಂಟರ್‌ಆ‍ಯ್‌ಕ್ಷನ್ ಕ್ರೋಮ್ಯಾಟೋಗ್ರಫಿ, HIC) ಅವುಗಳ ಜೈವಿಕ ಕ್ರಿಯೆಗಳನ್ನು ರಕ್ಷಿಸಲು ಬಳಸಲಾಗುತ್ತದೆ. 
ಇದರಲ್ಲಿ ಮತ್ತೊಂದು ಪ್ರಮುಖ ಅಂಶವೆಂದರೆ pHನ ಪ್ರಭಾವ, ಏಕೆಂದರೆ ಇದು ಅನಲೈಟ್‌ನ ಜಲಭೀತತೆಯನ್ನು ಬದಲಿಸಬಲ್ಲದು.  ಈ ಕಾರಣಕ್ಕಾಗಿ ಹೆಚ್ಚಿನ ವಿಧಾನಗಳು pHನ್ನು ನಿಯಂತ್ರಿಸಲು ಸೋಡಿಯಂ ಫಾಸ್ಫೇಟ್‌ನಂತಹ ಒಂದು ಬಫರಿಂಗ್ ಏಜೆಂಟ್‌ನ್ನು ಉಪಯೋಗಿಸುತ್ತವೆ. ಈ ಬಫರ್‌ಗಳು ಅನೇಕ ಕೆಲಸಗಳನ್ನು ನಿರ್ವಹಿಸುತ್ತವೆ: ಅವು pHನ್ನು ನಿಯಂತ್ರಿಸುತ್ತವೆ, ಸ್ಥಾಯಿ ಹಂತದಲ್ಲಿನ ಯಾವುದೇ ಬಹಿರಂಗಗೊಳಿಸಿದ ಸಿಲಿಕಾದ ಶೇಷದ ಮೇಲಿರಬಹುದಾದ ವಿದ್ಯುದಾವೇಶವನ್ನು ತಟಸ್ಥಗೊಳಿಸುತ್ತದೆ ಮತ್ತು ಅನಲೈಟ್ ಮೇಲಿನ ವಿದ್ಯುದಾವೇಶವನ್ನು ತಟಸ್ಥಗೊಳಿಸಲು ಐಯಾನ್ ಪೇರಿಂಗ್ ಏಜೆಂಟ್ ಆಗಿ ಕಾರ್ಯ ನಿರ್ವಹಿಸುತ್ತದೆ.  ಮಾಸ್ ಸ್ಪೆಕ್ಟೋಮೆಟ್ರಿಯಲ್ಲಿ ಅಮೋನಿಯಮ್ ಅಡಕ್ಟ್‌ಗಳನ್ನು ರಚಿಸುವ ಮೂಲಕ ಕೆಲವು ಅನಲೈಟ್‌ಗಳ ಕಂಡುಹಿಡಿಯುವಿಕೆಯನ್ನು ಅಭಿವೃದ್ಧಿಪಡಿಸಲು ಅಮೋನಿಯಮ್ ಫಾರ್ಮೇಟ್ ಅನ್ನು ಸಾಮಾನ್ಯವಾಗಿ ಸೇರಿಸಲಾಗುತ್ತದೆ.  ಮಾಸ್ ಸ್ಪೆಕ್ಟೋಮೆಟ್ರಿಯನ್ನು ಲಂಬಸಾಲು ಪ್ರೋದ್ಧಾವಕವನ್ನು ವಿಶ್ಲೇಷಿಸಲು ಬಳಸಿದರೆ, ಎಸಿಟಿಕ್ ಆಮ್ಲ ಅಥವಾ ಅತ್ಯಂತ ಸಾಮಾನ್ಯವಾಗಿ ಫಾರ್ಮಿಕ್ ಆಮ್ಲದಂತಹ ಒಂದು ಬಾಷ್ಪಶೀಲ ಜೈವಿಕ ಆಮ್ಲವನ್ನು ಹೆಚ್ಚಾಗಿ ಮೊಬೈಲ್ ಹಂತಕ್ಕೆ ಸೇರಿಸಲಾಗುತ್ತದೆ.   ಟ್ರೈಫ್ಲೋರೋಎಸಿಟಿಕ್ ಆಮ್ಲವನ್ನು ಡಿಟೆಕ್ಟರ್ ಮತ್ತು ದ್ರಾವಕ ಬಿಡುಗಡೆ ಪದ್ಧತಿಯಲ್ಲಿನ ಅದರ ದೃಢತೆಯ ಕಾರಣಕ್ಕಾಗಿ ಕೆಲವೊಮ್ಮೆ ಮಾಸ್ ಸ್ಪೆಕ್ಟೋಮೆಟ್ರಿಯ ಅಪ್ಲಿಕೇಶನ್‌ಗಳಲ್ಲಿ ಬಳಸಲಾಗುತ್ತದೆ. ಆದರೆ ಇದನ್ನು ಇತರ ಡಿಟೆಕ್ಟರ್‌ಗಳನ್ನು ಬಳಸಿರುವ ಅಪ್ಲಿಕೇಶನ್‌ಗಳಲ್ಲಿ ಕಾರ್ಬೋಕ್ಸಿಲಿಕ್ ಆಮ್ಲದಂತಹ ಅನಲೈಟ್‌ಗಳ ಧಾರಣೆಯನ್ನು ಹೆಚ್ಚಿಸಲು ಪರಿಣಾಮಕಾರಿಯಾಗಿ ಬಳಸಬಹುದಾಗಿದೆ. ಏಕೆಂದರೆ ಇದು ಅತ್ಯಂತ ಗಟ್ಟಿಯಾದ ಜೈವಿಕ ಆಮ್ಲವಾಗಿದೆ.  ಪ್ರತೀ ಸಾಧನದಲ್ಲಿಯೂ ಆಮ್ಲಗಳು ಮತ್ತು ಬಫರ್‌ಗಳ ಪರಿಣಾಮವು ಬೇರೆಯೇ ಆಗಿರುತ್ತದೆ ಆದರೆ ಅವು ಕ್ರೋಮ್ಯಾಟೋಗ್ರಫಿಯನ್ನು ಸಾಮಾನ್ಯವಾಗಿ ಅಭಿವೃದ್ಧಿಪಡಿಸುತ್ತವೆ.
ವಿರುದ್ಧ ದಿಕ್ಕಿನ ಹಂತದ ಲಂಬಸಾಲುಗಳನ್ನು ಸಾಮಾನ್ಯ ಸಿಲಿಕಾ ಲಂಬಸಾಲುಗಳಿಗೆ ಹೋಲಿಸಿದರೆ ಒಡೆದುಹಾಕುವುದು ಸುಲಭವಲ್ಲ; ಆದರೂ, ಅನೇಕ ವಿರುದ್ಧದಿಕ್ಕಿನ ಹಂತದ ಲಂಬಸಾಲುಗಳು ಅಲ್ಕೈಲ್‌ನಿಂದ ವ್ಯುತ್ಪನ್ನಗೊಂಡ ಸಿಲಿಕಾ ಅಣುಗಳನ್ನು ಹೊಂದಿರುತ್ತವೆ ಮತ್ತು ಅವುಗಳನ್ನು ಯಾವತ್ತೂ ಜಲೀಯ ಮೂಲಗಳೊಂದಿಗೆ ಬಳಸಲೇಬಾರದು . ಏಕೆಂದರೆ, ಇವು ಕೆಳಗಿರುವ ಸಿಲಿಕಾ ಅಣುಗಳನ್ನು ನಾಶಮಾಡುತ್ತವೆ.  ಅವುಗಳನ್ನು ಜಲೀಯ ಆಮ್ಲಗಳೊಂದಿಗೆ ಬಳಸಬಹುದಾಗಿದೆ, ಆದರೆ ಲಂಬಸಾಲುಗಳನ್ನು ಆಮ್ಲದೊಡನೆ ಹೆಚ್ಚು ಸಮಯದವರೆಗೆ ಸಂಪರ್ಕದಲ್ಲಿಡಬಾರದು. ಏಕೆಂದರೆ ಅದು HPLC ಸಾಧನದಲ್ಲಿನ ಲೋಹ ಭಾಗಗಳನ್ನು ತುಕ್ಕುಹಿಡಿಸಬಹುದು. RP-HPLC ಲಂಬಸಾಲುಗಳನ್ನು ಬಳಸಿದ ನಂತರ ಅದರಲ್ಲಿನ ಉಳಿದ ಆಮ್ಲ ಅಥವಾ ಬಫರ್‌ಗಳನ್ನು ತೆಗೆಯಲು ಶುದ್ಧವಾದ ದ್ರಾವಕಗಳಿಂದ ತೊಳೆಯಬೇಕು, ಮತ್ತು ಸರಿಯಾದ ದ್ರಾವಕಗಳ ಮಿಶ್ರಣದಲ್ಲಿ ಶೇಖರಿಸಿಡಬೇಕು.  ವಸ್ತುಗಳನ್ನು ವಿಂಗಡಿಸುವ ಅತ್ಯಂತ ಉತ್ತಮವಾದ ಸಾಧ್ಯತೆಯನ್ನು ಉಳಿಸಿಕೊಳ್ಳಬೇಕೆಂದಾದರೆ HPLC ಲಂಬಸಾಲುಗಳ ಲೋಹ ಭಾಗವನ್ನು ಕೆಳಭಾಗದಲ್ಲಿರಿಸಬೇಕು.   ಒಂದು ಲಂಬಸಾಲಿನ ಲೋಹ ಅಂಶಗಳ ಮೇಲೆ ಒಂದು ಒಳ್ಳೆಯ ಪರೀಕ್ಷೆಯೆಂದರೆ ಅದಕ್ಕೆ ಒಂದು 2,2'- ಮತ್ತು 4,4'- ಬೈಪಿರಿಡಿನ್ಗಳ ಮಿಶ್ರಣವನ್ನು ಸೇರಿಸುವುದು.  ಏಕೆಂದರೆ 2,2'-bipy ಯು ಲೋಹವನ್ನು ಕೊಂಡಿಯಾಗಿಸುತ್ತದೆ. ಸಿಲಿಕಾದ ಮೇಲ್ಮೈ ಮೇಲೆ ಲೋಹದ ಐಯಾನುಗಳು ಇರುವಾಗ 2,2'-bipy ಗೆ ಅದರ ಉನ್ನತಿಯ ಆಕಾರವು ಹಾಳಾಗುತ್ತದೆ (ಬಾಲವುಂಟಾಗುತ್ತದೆ).[ಸಾಕ್ಷ್ಯಾಧಾರ ಬೇಕಾಗಿದೆ]..

ಅಳತೆಗನುಗುಣವಾಗಿ ವಿಂಗಡಿಸುವ ಕ್ರೊಮ್ಯಾಟೋಗ್ರಫಿ[ಬದಲಾಯಿಸಿ]

ಸೈಝ್ ಎಕ್ಸ್‌ಕ್ಲೂಷನ್ ಕ್ರೊಮ್ಯಾಟೋಗ್ರಫಿ (SEC), ಜೆಲ್ ಪರ್ಮಿಯೇಶನ್ ಕ್ರೊಮ್ಯಾಟೋಗ್ರಫಿ ಅಥವಾ ಜೆಲ್ ಫಿಲ್ ಟ್ರೇಶನ್ ಕ್ರೊಮ್ಯಾಟೋಗ್ರಫಿ ಎಂದೂ ತಿಳಿಯಲ್ಪಟ್ಟಿದೆ. ಇದು ಅಳತೆಯ ಆಧಾರದ ಮೇಲೆ ಕಣಗಳನ್ನು ಪ್ರತ್ಯೇಕಿಸುತ್ತದೆ. ಇದು ಸಾಮಾನ್ಯವಾಗಿ ಕಡಿಮೆ ನಿರ್ಣಯದ ಕ್ರೊಮ್ಯಾಟೋಗ್ರಫಿ ಮತ್ತು ಅದಕ್ಕಾಗಿಯೇ ಇದನ್ನು ಅನೇಕ ಬಾರಿ ಪರಿಶುದ್ಧಗೊಳಿಸುವ ಕಾರ್ಯದಲ್ಲಿ ಹೊಳಪು ನೀಡುವ ಕೊನೆಯ ಕೆಲಸವಾಗಿ ಕಾಯ್ದಿರಿಸಿಕೊಂಡಿರುತ್ತಾರೆ. ಇದು ಪರಿಶುದ್ಧಗೊಂಡ ಪ್ರೋಟೀನಿನ ಮೂರನೇ ರಚನೆ ಹಾಗೂ ನಾಲ್ಕನೇ ರಚನೆಯನ್ನು ತಿಳಿಯಲು ಕೂಡ ಉಪಯುಕ್ತವಾಗಿದೆ. SEC ಯನ್ನು ಮೊದಲು ದೊಡ್ಡ ಅಣುಗಳಾದ ಪ್ರೋಟೀನ್‌ಗಳು ಅಥವಾ ಪಾಲೀಮರ್‌ಗಳ ವಿಂಗಡನೆಗೆ ಬಳಸಲಾಗುತ್ತಿತ್ತು. ಚಿಕ್ಕ ಅಣುಗಳಲ್ಲಿರುವ ಅತಿ ಸಣ್ಣ ಕಣಗಳ ಸೂಕ್ಷ್ಮ ರಂಧ್ರವನ್ನು ಪತ್ತೆಹಚ್ಚುವ ಮೂಲಕ SEC ಯು ತನ್ನ ಕೆಲಸವನ್ನು ಮಾಡುತ್ತದೆ. ದೊಡ್ಡ ಅಣುಗಳು ಯಾವುದೇ ತೊಡಕಿಲ್ಲದೆ ಸೂಕ್ಷ್ಮ ರಂಧ್ರಗಳಿಂದ ಸಾಗಬಲ್ಲದು, ಯಾಕೆಂದರೆ ಸೂಕ್ಷ್ಮ ರಂಧ್ರವು ಅವು ಪ್ರವೇಶಿಸುವಷ್ಟು ದೊಡ್ಡದಾಗಿರುತ್ತವೆ. ಅದಕ್ಕಾಗಿಯೇ ಚಿಕ್ಕ ಅಣುಗಳಿಗಿಂತ ವೇಗವಾಗಿ ದೊಡ್ಡ ಅಣುಗಳು ಲಂಬಸಾಲು ಮೂಲಕ ಸುಲಭವಾಗಿ ಸಾಗಬಲ್ಲವು, ಯಾಕೆಂದರೆ ಅಣುಗಳು ಚಿಕ್ಕದಾದಷ್ಟೂ ಅದನ್ನು ಹಿಡಿದಿಡುವ ಸಾಮರ್ಥ್ಯದ ವೇಳೆಯೂ ಹೆಚ್ಚಾಗಿರುತ್ತದೆ.

ಈ ಕಾರ್ಯವಿಧಾನವು ಹೆಚ್ಚಾಗಿ ಪಾಲಿಸ್ಯಾಕರೈಡ್‌ಗಳಲ್ಲಿರುವ ಅಣುಗಳ ತೂಕ ಅಳೆಯಲು ಬಳಸಲ್ಪಡುತ್ತದೆ.  ಅಣುವಿನ ತೂಕವನ್ನು ಮಾರುಕಟ್ಟೆಯಲ್ಲಿ ಸಿಗುವ ಹಲವು ಕಡಿಮೆ ತೂಕದ ಹ್ಯಾಪರಿನ್ಗಳ ಅಣುವಿನ ಜೊತೆ ಹೋಲಿಸುವುದು SEC ಯ ಅಧಿಕೃತ ಕಾರ್ಯವಿಧಾವಾಗಿದೆ(ಯುರೋಪಿಯನ್ ಔಷಧ ತಯಾರಕ ಒಕ್ಕೂಟದಿಂದ ಸೂಚಿಸಲ್ಪಟ್ಟದ್ದು). 

ಅಯಾನು ವಿನಿಮಯ ಕ್ರೊಮ್ಯಾಟೋಗ್ರಫಿ[ಬದಲಾಯಿಸಿ]

ಅಯಾನು ವಿನಿಮಯ ಕ್ರೊಮ್ಯಾಟೋಗ್ರಫಿಯಲ್ಲಿ ಹಿಡಿದಿಡುವ ಶಕ್ತಿಯು ದ್ರವ್ಯ ಅಯಾನುಗಳು ಮತ್ತು ನಿಶ್ಚಲ ಸ್ಥಿತಿಗೆ ಸೀಮಿತವಾದ ವಿದ್ಯುತ್ ಸಂಗ್ರಹಣಾ ಜಾಗಗಳ (ಚಾರ್ಜ್ಡ್ ಸೈಟ್) ಆಕರ್ಷಣೆಯನ್ನು ಅವಲಂಬಿಸಿರುತ್ತದೆ. ಏಕ ಪ್ರಕಾರದ ವಿದ್ಯುತ್ ಸಂಗ್ರಹಣಾ ಅಯಾನುಗಳನ್ನು ಹೊರತುಪಡಿಸಲಾಗುತ್ತದೆ.  ವಿವಿಧ ಪ್ರಕಾರದ ಅಯಾನು ವಿನಿಮಯಕಾರಗಳೆಂದರೆ:
  • ಪಾಲಿಸ್ಟೈರೀನ್‌ ರೆಸಿನ್ಸ್‌ – ಇವು ಸರಣಿಯಲ್ಲಿ ಅಡ್ಡಕೊಂಡಿ(ಕ್ರಾಸ್‌ ಲಿಂಕೇಜ್‌)ಗಳನ್ನು ಕೊಡುತ್ತವೆ, ಇದರಿಂದ ಸರಣಿಯ ದೃಢತೆ ಹೆಚ್ಚಾಗುತ್ತದೆ. ಹೆಚ್ಚಿನ ಅಡ್ಡಕೊಂಡಿ ಇದ್ದರೆ, ಚದುರುವುದನ್ನು ಕಡಿಮೆ ಮಾಡಬಹುದು, ಇದರಿಂದ ಸಮತ್ವಸಾಧನ ಸಮಯವನ್ನು ಹೆಚ್ಚಿಸುತ್ತದೆ ಮತ್ತು ಅಂತಿಮವಾಗಿ ಆಯ್ಕೆಯನ್ನು ಸುಧಾರಿಸುತ್ತದೆ.
  • ಕೋಶಗಳುಳ್ಳ ಅಯಾನು ಮತ್ತು ಡೆಕ್ಸ್‌ಟ್ರಾನ್‌ ಅಯಾನು ವಿನಿಮಯಕಾರಗಳು (ಜೆಲ್‌ಗಳು) – ಇವುಗಳಿಗೆ ದೊಡ್ಡ ರಂಧ್ರ ಗಾತ್ರವು ಮತ್ತು ಕಡಿಮೆ ವಿದ್ಯುತ್‌ ಸಂಗ್ರಹಣಾ ಸಾಂದ್ರತೆ ಇರುತ್ತದೆ, ಇದರಿಂದ ಇವುಗಳು ಪ್ರೋಟೀನ್‌ ಬೇರ್ಪಡಿಕೆಗೆ ಸಮರ್ಥವಾಗುತ್ತದೆ.
  • ನಿಯಂತ್ರಿತ-ರಂಧ್ರ ಗಾಜು ಅಥವಾ ಪೋರಸ್‌ ಸಿಲಿಕಾ

ಸಾಧಾರಣವಾಗಿ, ಅಯಾನು ವಿನಿಮಯಕಾರಗಳು ಅಧಿಕ ವಿದ್ಯುತ್‌ ಸಂಗ್ರಹಣೆ ಮತ್ತು ಕಡಿಮೆ ತ್ರಿಜ್ಯ ಇರುವ ಅಯಾನುಗಳನ್ನು ಕೂಡಿಸುವತ್ತ ವಾಲುತ್ತದೆ.

ಪ್ರತಿ ಅಯಾನು ಕ್ರೋಢೀಕರಣ (ರೆಸಿನ್ಸ್‌ನಲ್ಲಿರುವ ನಿರ್ವಾಹಕ ಗುಂಪುಗಳಿಗೆ ಸಂಬಂಧಿಸಿದಂತೆ) ಹೆಚ್ಚಾದಂತೆ ಹಿಡಿತದ ಸಮಯವು ಕಡಿಮೆಯಾಗುತ್ತದೆ. ಪಿಎಚ್‌ (pH) ಹೆಚ್ಚಾದಂತೆ ಕೇಷನ್‌ ವಿನಿಮಯದಲ್ಲಿ ಹಿಡಿತದ ಸಮಯವು ಕಡಿಮೆಯಾಗುತ್ತದೆ ಆದರೆ ಪಿಎಚ್‌ ಕಡಿಮೆಯಾದಂತೆ ಅಯಾನು ವಿನಿಮಯದಲ್ಲಿ ಹಿಡಿತದ ಸಮಯವು ಕಡಿಮೆಯಾಗುತ್ತದೆ.

ಈ ಬಗೆಯ ಕ್ರೊಮ್ಯಾಟೋಗ್ರಫಿಯನ್ನು ಕೆಳಗಿನ ಉಪಯೋಗಗಳಿಗಾಗಿ ಹೆಚ್ಚಾಗಿ ಬಳಸಲಾಗುತ್ತದೆ: ನೀರು ಶುದ್ಧೀಕರಣ, ಶೇಷಾಂಶಗಳ ಪೂರ್ವಸಂಗ್ರಹ, ಲಿಗಾಂಡ್‌- ವಿನಿಮಯ ಕ್ರೊಮ್ಯಾಟೋಗ್ರಫಿ, ಪ್ರೊಟೀನುಗಳ ಅಯಾನು-ವಿನಿಮಯ ಕ್ರೊಮ್ಯಾಟೋಗ್ರಫಿ, ಅಂಗಾರ ಮತ್ತು ಆಲಿಗೋಸಚರೈಡ್ಸ್‌ನ ಅಧಿಕ-ಪಿಎಚ್‌ ಅನಯಾನು-ವಿನಿಮಯ ಕ್ರೊಮ್ಯಾಟೋಗ್ರಫಿ, ಮತ್ತು ಇತರೆ.

ಬಯೊಅಫಿನಿಟಿ ಕ್ರೊಮ್ಯಾಟೋಗ್ರಫಿ[ಬದಲಾಯಿಸಿ]

ಈ ಕ್ರೊಮ್ಯಾಟೋಗ್ರಫಿ ಪ್ರಕ್ರಿಯೆಯು, ಸ್ಥಿರವಾದ, ನಿರ್ದಿಷ್ಟವಾದ ಮತ್ತು ವಿಪರ್ಯಸ್ತಗೊಳಿಸಲು ಸಾಧ್ಯವಾಗುವ ಸಂಕೀರ್ಣಗಳನ್ನು ಮಾಡಲು, ಜೈವಿಕವಾಗಿ ಸಕ್ರಿಯವಾಗಿರುವ ವಸ್ತುಗಳ ಲಕ್ಷಣಗಳ ಮೇಲೆ ಅವಲಂಬಿತವಾಗಿರುತ್ತದೆ. ಈ ಸಂಕೀರ್ಣಗಳನ್ನು ಮಾಡಲು, ವ್ಯಾನ್‌ ಡೆರ್‌ ವಾಲ್ಸ್‌ ಸಂವಹನ, ಎಲೆಕ್ಟ್ರೋಸ್ಟ್ಯಾಟಿಕ್‌ ಸಂವಹನ, ಡೈಪೋಲ್‌-ಡೈಪೋಲ್‌ ಸಂವಹನ, ಜಲಭೀತಿಯ‌ ಸಂವಹನ, ಮತ್ತು ಜಲಜನಕ ಬಂಧ ಮುಂತಾದ ಸಾಮಾನ್ಯ ಪರಮಾಣು ಶಕ್ತಿಗಳ ಭಾಗವಹಿಸುವಿಕೆಯೂ ಬೇಕಾಗುತ್ತದೆ. ಪೂರಕ ಬಂಧಕ ಕ್ಷೇತ್ರಗಳಲ್ಲಿನ ಇಂತಹ ಹಲವಾರು ಶಕ್ತಿಗಳ ಏಕಕಾಲಿಕ ಮತ್ತು ಗೋಷ್ಠಿ ಕಾರ್ಯದಿಂದ ಒಂದು ಸಮರ್ಥ ಮತ್ತು ಜೈವಿಕ-ನಿರ್ದಿಷ್ಟ ಬಂಧದ ಉತ್ಪಾದನೆಯಾಗುತ್ತದೆ.

ಜಲೀಯ ಸಾಮಾನ್ಯ ಹಂತದ ಕ್ರೊಮ್ಯಾಟೋಗ್ರಫಿ[ಬದಲಾಯಿಸಿ]

ಜಲೀಯ ಸಾಮಾನ್ಯ ಹಂತದ ಕ್ರೊಮ್ಯಾಟೋಗ್ರಫಿ (ANP-ಎಎನ್‌ಪಿ) ಎನ್ನುವುದು, ವಿಲೋಮ-ಹಂತದ ಕ್ರೊಮ್ಯಾಟೋಗ್ರಫಿ (RP-ಆರ್‌ಪಿ) ಮತ್ತು ಜೈವಿಕ-ಹಂತದ ಕ್ರೊಮ್ಯಾಟೋಗ್ರಫಿ(ONP-ಒಎನ್‌ಪಿ)ಗಳ ನಡುವೆ ಮೊಬೈಲ್‌ ಹಂತದ ಕ್ಷೇತ್ರವನ್ನು ಸುತ್ತುವರೆಯುವಂತೆ ಮಾಡುವ ಒಂದು ಕ್ರೊಮ್ಯಾಟೋಗ್ರಫಿ ತಂತ್ರ. ವಿಲೋಮ-ಹಂತದ ವಿದ್ರಾವಕಗಳನ್ನು ಬಳಸಿಕೊಂಡು ಸಾಮಾನ್ಯ ಹಂತದ ಬೇರ್ಪಡೆಗಳನ್ನು ತೋರಿಸುವ ಹೈಡ್ರೊಫಿಲಿಕ್‌ ಸಂಯುಕ್ತಗಳಿಗೆ ವಿಶಿಷ್ಟ ಆಯ್ಕೆಯನ್ನು ಹೊಂದಲು ಈ ತಂತ್ರವನ್ನು ಬಳಸಲಾಗುತ್ತದೆ. [ಸಾಕ್ಷ್ಯಾಧಾರ ಬೇಕಾಗಿದೆ]

ಏಕಸಮಾನ ಹರಿವು ಮತ್ತು ಗ್ರೇಡಿಯಂಟ್‌ ಬೇರ್ಪಡೆ[ಬದಲಾಯಿಸಿ]

ಮೊಬೈಲ್ ಹಂತದ ಬಂಧವು ಪ್ರಕ್ರಿಯೆಯ ಪೂರ್ತಿ ಸ್ಥಿರವಾಗಿರುವ ಬೇರ್ಪಡೆಯನ್ನು ಏಕಸಮಾನ ಹರಿವು (ಎಂದರೆ ಸ್ಥಿರ ಬಂಧ ) ಎನ್ನುತ್ತಾರೆ. ಈ ಪದದ ಸೃಷ್ಟಿಕರ್ತ ಯಾಲೆ ವಿಶ್ವವಿದ್ಯಾನಿಲಯದ ಕ್ಸಾಬ ಹಾರ್ವತ್‌[ಸಾಕ್ಷ್ಯಾಧಾರ ಬೇಕಾಗಿದೆ], ಈತನು (HPLC) ಎಚ್‌ಪಿಎಲ್‌ಸಿಯ ಪ್ರವರ್ತಕರಲ್ಲಿ ಒಬ್ಬನು.

ಮೊಬೈಲ್‌ ಹಂತದ ಬಂಧವು ಸ್ಥಿರವಾಗಿ ಉಳಿಯಬೇಕಾಗಿಲ್ಲ. ಬೇರ್ಪಡೆಯ ಸಂದರ್ಭದಲ್ಲಿ ಮೊಬೈಲ್‌ ಹಂತದ ಬಂಧವನ್ನು ಬದಲಾಯಿಸುವ ಬೇರ್ಪಡೆಯನ್ನು ಗ್ರೇಡಿಯಂಟ್‌ ಬೇರ್ಪಡೆ ಎಂದು ಕರೆಯಲಾಗುತ್ತದೆ.[೨] ಒಂದು ಉದಾಹರಣೆಯೆಂದರೆ 10% ಮಿಥೆನಾಲ್‌ನಲ್ಲಿ ಶುರುವಾದ ಗ್ರೇಡಿಯಂಟ್‌ 20 ನಿಮಿಷಗಳ ನಂತರ 90% ಮಿಥೆನಾಲ್‌ನಲ್ಲಿ ಕೊನೆಯಾಗುವುದು. ಸಾಮಾನ್ಯವಾಗಿ ಮೊಬೈಲ್‌ ಹಂತದ ಎರಡು ಭಾಗಗಳೆಂದರೆ "ಎ" (A) ಮತ್ತು "ಬಿ" (B); ಎನ್ನುವುದು "ದುರ್ಬಲ" ವಿದ್ರಾವಕ, ಇದು ದ್ರವ್ಯವನ್ನು ನಿಧಾನವಾಗಿ ಬೇರ್ಪಡೆಯಾಗಲು ಬಿಡುತ್ತದೆ, ಆದರೆ ಬಿ ಎನ್ನುವುದು "ಬಲಶಾಲಿ" ದ್ರಾವಕ, ಇದು ದ್ರವ್ಯವನ್ನು ಕಾಲಮ್‌ನಿಂದ ವೇಗವಾಗಿ ಬೇರ್ಪಡಿಸುತ್ತದೆ. ದ್ರವ್ಯವು ಸಾಮಾನ್ಯವಾಗಿ ನೀರು ಆಗಿರುತ್ತದೆ, ಆದರೆ ಬಿ ದ್ರವ್ಯವು ನೀರಿನಲ್ಲಿ ಮಿಶ್ರಗೊಳ್ಳುವ ಜೈವಿಕ ದ್ರಾವಕವಾಗಿರುತ್ತದೆ , ಉದಾಹರಣೆಗೆ ಅಸೆಟಾನಿಟ್ರೈಲ್‌, ಮಿಥೆನಾಲ್‌, ಟಿಎಚ್‌ಎಫ್‌(THF), ಅಥವಾ ಐಸೊಪ್ರೊಪೆನೊಲ್‌.

ಏಕಸಮಾನ ಬೇರ್ಪಡೆಯಲ್ಲಿ, ಸೈದ್ಧಾಂತಿಕ ಪ್ಲೇಟ್‌ಗಳ ಸಂಖ್ಯೆ ಎನ್‌(N)ನ ಸಮೀಕರಣಕ್ಕೆ ತಕ್ಕಹಾಗೆ ಹಿಡಿತದ ಸಮಯಕ್ಕೆ ನೇರವಾಗಿ ಶೃಂಗದ ಅಗಲವು ಹೆಚ್ಚುತ್ತದೆ. ಇದರಿಂದಾಗುವ ಅನಾನುಕೂಲವೆಂದರೆ ನಿಧಾನ-ಬೇರ್ಪಡೆಯಾಗುವ ಶೃಂಗಗಳು ಬಹಳ ಚಪ್ಪಟೆ ಮತ್ತು ಅಗಲ ಆಗಿಬಿಡುತ್ತದೆ. ಅವುಗಳ ಆಕಾರ ಮತ್ತು ಅಗಲ ಅವುಗಳನ್ನು ಶೃಂಗಗಳೆಂದು ಗುರುತಿಸುವುದರಿಂದ ತಪ್ಪಿಸಿಬಿಡಬಹುದು.

ಗ್ರೇಡಿಯಂಟ್‌ ಬೇರ್ಪಡೆಯು ನಿಧಾನ-ಬೇರ್ಪಡೆಯಾಗುವ ಭಾಗಗಳು ಉಳಿದುಕೊಳ್ಳುವುದನ್ನು ಕಡಿಮೆ ಮಾಡುತ್ತದೆ, ಬಹುತೇಕ ಭಾಗಗಳಿಗೆ ಸಣ್ಣ (ಮತ್ತು ಉದ್ದದ) ಶೃಂಗಗಳನ್ನು ನೀಡುತ್ತದೆ. ಇದು ಬೆಳೆದ-ಶೃಂಗಗಳ ಆಕಾರವನ್ನು ಸುಧಾರಿಸುತ್ತದೆ, ಹೆಚ್ಚಾದ ಜೈವಿಕ ಎಲುಯೆಂಟ್‌ನ ಕ್ರೋಢೀಕರಣವು ಶೃಂಗದ ಬೆಳೆದ ಭಾಗವನ್ನು ಮುಂದಕ್ಕೆ ತಳ್ಳುವುದರಿಂದ. ಇದರಿಂದ ಶೃಂಗದ ಎತ್ತರವೂ ಹೆಚ್ಚಾಗುತ್ತದೆ (ಶೃಂಗವು "ತೀಕ್ಷ್ಣ"ವಾಗಿ ಕಾಣುತ್ತದೆ), ಇದು ಕುರುಹು ವಿಶ್ಲೇಷಣೆಗೆ ಅತಿ ಮುಖ್ಯ. ಗ್ರೇಡಿಯಂಟ್‌ ಕಾರ್ಯಕ್ರಮವು ಜೈವಿಕ ಭಾಗದ ಶೇಕಡಾವಾರಿನಲ್ಲಿ ಶೀಘ್ರ "ಹಂತ" ಹೆಚ್ಚುವರಿಯಾಗುವುದನ್ನು ಒಳಗೊಂಡಿರಬಹುದು, ಅಥವಾ ಬೇರೆ ಬೇರೆ ಸಮಯದಲ್ಲಿ ಬೇರೆ ಬೇರೆ ಇಳುಕಲುಗಳು - ಇವೆಲ್ಲವೂ ಕಡಿಮೆ ಸಮಯದಲ್ಲಿ ಹೆಚ್ಚು ಬೇರ್ಪಡೆಯ ಅಪೇಕ್ಷೆಗೆ ಅನುಗುಣವಾಗಿ. 

ಏಕಸಮಾನ ಬೇರ್ಪಡೆಯಲ್ಲಿ, ಲಂಬಸಾಲಿನ ಆಯಾಮವು (ಉದ್ದ ಅಥವಾ ಒಳವ್ಯಾಸ) ಬದಲಾದರೂ ಆಯ್ಕೆಯು ಬದಲಾಗುವುದಿಲ್ಲ - ಅಂದರೆ ಶೃಂಗವು ಒಂದೇ ಕ್ರಮದಲ್ಲಿ ಬೇರ್ಪಡೆಯಾಗುತ್ತದೆ. ಗ್ರೇಡಿಯಂಟ್‌ ಬೇರ್ಪಡೆಯಲ್ಲಿ, ಆಯಾಮಗಳು ಇಲ್ಲವೇ ಹರಿವಿನ ಗತಿ ಬದಲಾದರೆ ಬೇರ್ಪಡೆಯ ಕ್ರಮವೂ ಬದಲಾಗುತ್ತದೆ.[ಸಾಕ್ಷ್ಯಾಧಾರ ಬೇಕಾಗಿದೆ]

ಇದನ್ನು ನಡೆಸುವ ಶಕ್ತಿಯು ವಿರುದ್ಧ ದಿಕ್ಕಿಗೆ ತಿರುಗಿಸಿದ ಹಂತದ ಕ್ರೊಮ್ಯಾಟೋಗ್ರಫಿಯಲ್ಲಿ, ಹೆಚ್ಚಿನ ಮಟ್ಟದ ನೀರಿನ ರಚನೆಯಲ್ಲಿ ಹುಟ್ಟುತ್ತದೆ.  ಜೈವಿಕ ಮೊಬೈಲ್ ಹಂತದ ಪಾತ್ರವು ಜಲೀಯ ಘಟಕದ ಸಾಮರ್ಥ್ಯ ಕುಂಟಿತಗೊಳ್ಳುವಿಕೆಯನ್ನು ಕಡಿಮೆಗೊಳಿಸುವ ಮೂಲಕ ಈ ಹೆಚ್ಚಿನ ಕ್ರಮವನ್ನು ಕಡಿಮೆಗೊಳಿಸುವುದಾಗಿದೆ. 

ಮಾನದಂಡಗಳು[ಬದಲಾಯಿಸಿ]

ಆಂತರಿಕ ವ್ಯಾಸ[ಬದಲಾಯಿಸಿ]

HPLC ಲಂಬಸಾಲಿನ ಆಂತರಿಕ ವ್ಯಾಸ (ID)ವು ಗ್ರೇಡಿಯೆಂಟ್ ಎಲ್ಯೂಶನ್‌ನಲ್ಲಿನ ಸಂವೇದನೆ ಮತ್ತು ಅಗಲಿಕೆಯನ್ನು ಗುರುತಿಸುವುದರ ಮೇಲೆ ಪ್ರಭಾವ ಬೀರುವ ಒಂದು ಅತ್ಯಂತ ಪ್ರಮುಖವಾದ ಮಾನದಂಡವಾಗಿದೆ.  ಇದು ಒಂದು ಲಂಬಸಾಲಿನಲ್ಲಿ ತುಂಬಬಹುದಾದ ಒಂದು ಅನಲೈಟ್‌ನ ಪ್ರಮಾಣವನ್ನು ನಿರ್ಧರಿಸುತ್ತದೆ.  ದೊಡ್ಡ ಲಂಬಸಾಲುಗಳನ್ನು ಸಾಮಾನ್ಯವಾಗಿ ಔದ್ಯಮಿಕ ಅಪ್ಲಿಕೇಶನ್‌ಗಳಲ್ಲಿ ನೋಡಬಹುದಾಗಿದೆ. ಉದಾಹರಣೆಗೆ, ಡ್ರಗ್ ಉತ್ಪನ್ನವನ್ನು ಶುದ್ಧೀಕರಣಗೊಳಿಸಿ ಬಳಸಲು ಉಪಯೋಗಿಸಬಹುದಾಗಿದೆ.  ಕಡಿಮೆ-ID ಲಂಬಸಾಲುಗಳು ತುಂಬಿಸುವ ಸಾಮರ್ಥ್ಯದ ವೆಚ್ಚದಲ್ಲಿ ಸಂವೇದನೆ ಮತ್ತು ಕಡಿಮೆ ದ್ರಾವಕ ಬಳಕೆಯನ್ನು ಅಭಿವೃದ್ಧಿಗೊಳಿಸಿದೆ.
  • ದೊಡ್ಡ ID ಲಂಬಸಾಲುಗಳನ್ನು ಅವುಗಳ ಹೆಚ್ಚಿನ ತುಂಬಿಸುವ ಸಾಮರ್ಥ್ಯದಿಂದಾಗಿ (10 mmಗಿಂತ ಹೆಚ್ಚಿನವು) ಬಳಸಬಲ್ಲ ಗಾತ್ರದ ವಸ್ತುವಿನ ಶುದ್ಧೀಕರಣಕ್ಕೆ ಬಳಸಲಾಗುತ್ತದೆ.
  • ವಿಶ್ಲೇಷಣಾತ್ಮಕ ಅಳತೆಯ ಲಂಬಸಾಲುಗಳು (4.6 mm) ಅತ್ಯಂತ ಸಾಮಾನ್ಯವಾಗಿ ಬಳಸಲ್ಪಡುವ ಲಂಬಸಾಲುಗಳಾಗಿದ್ದು, ಚಿಕ್ಕವಾದರು ಅವು ಹೆಚ್ಚಿನ ಪ್ರಸಿದ್ಧಿಯನ್ನು ವೇಗದಲ್ಲಿ ಗಳಿಸುತ್ತಿವೆ. ಅವುಗಳನ್ನು ಸಾಂಪ್ರದಾಯಿಕ ಸ್ಯಾಂಪಲ್‌ಗಳ ಕ್ವಾಂಟಿಟೇಟಿವ್ ಅನಲೈಸಿಸ್‌ನಲ್ಲಿ ಬಳಸಲಾಗುತ್ತದೆ ಮತ್ತು ಅವು ಆಗಾಗ UV-Vis ಅಬ್ಸರ್ಬೆನ್ಸ್ ಡಿಟೆಕ್ಟರ್ ಅನ್ನು ಬಳಸುತ್ತವೆ.
  • ಕಿರು-ಕಂಡಿಯ ಲಂಬಕೋನಗಳನ್ನು (1-2 mm) ಹೆಚ್ಚಿನ ಸಂವೇದನಾತ್ಮಕವಾದ ಅಪ್ಲಿಕೇಶನ್‌ಗಳ ಅಗತ್ಯವಿದ್ದಾಗ ವಿಶೇಷ UV-vis ಡಿಟೆಕ್ಟರ್‌ಗಳೊಂದಿಗೆ, ಫ್ಲೋರೆಸೆನ್ಸ್ ಪತ್ತೆಹಚ್ಚುವಿಕೆಯಲ್ಲಿ ಅಥವಾ ಲಿಕ್ವಿಡ್ ಕ್ರೊಮ್ಯಾಟೋಗ್ರಫಿ-ಮಾಸ್ ಸ್ಪೆಕ್ಟೋಮೆಟ್ರಿಯಂತಹ ಇತರ ಪತ್ತೆಹಚ್ಚುವಿಕೆ ವಿಧಾನಗಳಲ್ಲಿ ಬಳಸಲಾಗುತ್ತದೆ.
  • ಕ್ಯಾಪಿಲ್ಲರಿ ಲಂಬಸಾಲುಗಳನ್ನು (0.3 mmಗಿಂತ ಕಡಿಮೆಯವು) ಅತ್ಯಂತ ಪ್ರತ್ಯೇಕವಾಗಿ ಮಾಸ್ ಸ್ಪೆಕ್ಟೋಮೆಟ್ರಿಯಂತಹ ಪರ್ಯಾಯ ಪತ್ತೆದಾರಿ ಪ್ರಕಾರಗಳಲ್ಲಿ ಬಳಸಲಾಗುತ್ತದೆ. ಅವುಗಳನ್ನು ದೊಡ್ಡ ಲಂಬಸಾಲುಗಳಲ್ಲಿ ಬಳಸುವ ಸ್ಟೇನ್‌ಲೆಸ್ ಸ್ಟೀಲ್ ಕೊಳವೆಗಳ ಬದಲಾಗಿ ಸಾಮಾನ್ಯವಾಗಿ ಸಂಯೋಜಿಸಿದ ಸಿಲಿಕಾ ಕಿರುಕೊಳವೆಗಳಿಂದ ಮಾಡಲಾಗಿರುತ್ತದೆ.

ಕಣ ಗಾತ್ರ[ಬದಲಾಯಿಸಿ]

ಅತ್ಯಂತ ಸಾಂಪ್ರದಾಯಿಕವಾದ HPLC ಯನ್ನು ಚಿಕ್ಕ ಗೋಲಾಕೃತಿಯ ಸಿಲಿಕಾ ಕಣಗಳಿಗೆ (ಅತ್ಯಂತ ಚಿಕ್ಕ ಕಣಗಳು) ಲಗತ್ತಿಸಿದ ಸ್ಥಾಯಿ ಹಂತದಲ್ಲಿ ಮಾಡಲಾಗುತ್ತದೆ.  ಈ ಕಣಗಳು ವಿಭಿನ್ನ ಗಾತ್ರಗಳಲ್ಲಿ ಬರುತ್ತಿದ್ದು, 5 m ಗಾತ್ರದ ಮಣಿಗಳು ಅತ್ಯಂತ ಸಾಮಾನ್ಯದ್ದಾಗಿವೆ.  ಚಿಕ್ಕದಾದ ಕಣಗಳು ಸಾಮಾನ್ಯವಾಗಿ ಹೆಚ್ಚಿನ ಮೇಲ್ಮೈ ಪ್ರದೇಶವನ್ನು ಮತ್ತು ಉತ್ತಮ ವಿಯೋಜನೆಯನ್ನು ನೀಡುತ್ತವೆ, ಆದರೆ ಅತ್ಯಂತ ಸಮರ್ಪಕವಾದ ರೇಖಾತ್ಮಕವಾದ ವೇಗಕ್ಕೆ ಅಗತ್ಯವಾದ ಒತ್ತಡವು ಈ ಕಣಗಳ ವ್ಯಾಸದ ಘಾತಕ್ಕೆ ವಿಲೋಮವಾಗಿ ಹೆಚ್ಚಾಗುತ್ತದೆ.[೩][೪][೫]
ಅಂದರೆ ಈ ಗಾತ್ರಕ್ಕಿಂತ ಅರ್ಧಗಾತ್ರದ ಕಣಗಳನ್ನು ಬಳಸಿ, ಲಂಬಸಾಲುಗಳ ಗಾತ್ರವನ್ನು ಅಷ್ಟಕ್ಕೇ ಇಟ್ಟುಕೊಂಡರೆ, ಅದು ಕಾರ್ಯವನ್ನು ದ್ವಿಗುಣಗೊಳಿಸುತ್ತದೆ, ಆದರೆ ಅಗತ್ಯವಾದ ಒತ್ತಡವನ್ನು ನಾಲ್ಕರ ಅಂಶದಷ್ಟು ಹೆಚ್ಚಿಸುತ್ತದೆ.   ದೊಡ್ಡ ಗಾತ್ರದ ಕಣಗಳನ್ನು ಪೂರ್ವ ಸಿದ್ಧತೆಯ HPLC (ಲಂಬಸಾಲು ವ್ಯಾಸ 5 cm ದಿಂದ >30 cm ವರೆಗೆ) ಗಳಲ್ಲಿ ಮತ್ತು ಘನ-ಹಂತದ ಪ್ರತಿಮಾಡುವಿಕೆಯಂತಹ HPLC ಅಲ್ಲದ ಅಪ್ಲಿಕೇಶನ್‌ಗಳಲ್ಲಿ ಬಳಸಲಾಗುತ್ತದೆ.

ರಂಧ್ರ ಗಾತ್ರ[ಬದಲಾಯಿಸಿ]

ಅನೇಕ ಸ್ಥಾಯಿ ಹಂತಗಳು ರಂಧ್ರಯುಕ್ತವಾದವುಗಳಾಗಿದ್ದು ಅವು ಹೆಚ್ಚಿನ ಮೇಲ್ಮೈ ಸ್ಥಳವನ್ನು ನೀಡುತ್ತವೆ.  ಸಣ್ಣ ರಂದ್ರಗಳು ಹೆಚ್ಚಿನ ಮೇಲ್ಮೈಯನ್ನು ನೀಡುತ್ತವೆ ಆದರೆ ದೊಡ್ಡ ರಂದ್ರಗಳು ಉತ್ತಮವಾದ ಚಲನಾತ್ಮಕತೆಯನ್ನು, ಅದರಲ್ಲಿಯೂ ದೊಡ್ಡ ಅನಲೈಟ್‌ಗಳಿಗೆ, ನೀಡುತ್ತವೆ.  ಉದಾಹರಣೆಗೆ, ಒಂದು ರಂದ್ರಕ್ಕಿಂತ ತುಸು ಚಿಕ್ಕದಾದ ಒಂದು ಪ್ರೋಟೀನ್ ಒಂದು ರಂದ್ರವನ್ನು ಪ್ರವೇಶಿಸಬಹುದು ಆದರೆ ಒಮ್ಮೆ ಒಳಹೋದ ನಂತರ ಸುಲಭದಲ್ಲಿ ಹೊರಬರುವುದಿಲ್ಲ. 

ಪಂಪ್ ಒತ್ತಡ[ಬದಲಾಯಿಸಿ]

ಒತ್ತಡ ಸಾಮರ್ಥ್ಯದಲ್ಲಿ ಪ್ರತೀ ಪಂಪ್‌‍ಗಳಲ್ಲಿ ವ್ಯತ್ಯಾಸವಿರುತ್ತದೆ, ಆದರೆ ಅವುಗಳ ಕಾರ್ಯ ಸಾಮರ್ಥ್ಯವನ್ನು ಅವುಗಳ ನಿರಂತರ ಮತ್ತು ಮರುಉತ್ಪಾದಿಸಬಹುದಾದ ಹರಿಯುವ ದರವನ್ನು ಸಾಧಿಸುವುದನ್ನು ಅಳೆಯುವ ಮೂಲಕ ಗುರುತಿಸಲಾಗುತ್ತದೆ.  ಒತ್ತಡವು 40 MPa (6000 lbf/in2)ವರೆಗೂ ಅಥವಾ ಸುಮಾರು 400 ಅಟ್ಮಾಸ್ಫಿಯರ್ ವರೆಗೆ ತಲುಪಬಹುದು.  ಆಧುನಿಕ HPLC ವ್ಯವಸ್ಥೆಗಳನ್ನು ಇನ್ನೂ ಹೆಚ್ಚಿನ ಒತ್ತಡದಲ್ಲಿ ಕಾರ್ಯನಿರ್ವಹಿಸುವಂತೆ ರೂಪಿಸಲಾಗಿದೆ, ಮತ್ತು ಆ ಕಾರಣಕ್ಕಾಗಿ ಅವುಗಳು ಲಂಬ ಸಾಲುಗಳಲ್ಲಿ (<2 m) ಇನ್ನೂ ಚಿಕ್ಕ ಅಣುಗಳನ್ನು ಬಳಸಲು ಸಾಧ್ಯವಾಗಿದೆ.  ಈ "ಅಲ್ಟ್ರಾ ಹೈ ಪರ್ಫಾರ್ಮೆನ್ಸ್ ಲಿಕ್ವಿಡ್ ಕ್ರೊಮ್ಯಾಟೋಗ್ರಫಿ" ಸಿಸ್ಟಮ್‌ಗಳು ಅಥವಾ RSLC/UHPLC ಗಳು ಸುಮಾರು 100 MPa (15,000 lbf/in²) ಅಥವಾ 1000 ಸುಮಾರು ಅಟ್ಮಾಸ್ಫಿಯರ್ ವರೆಗಿನ ಒತ್ತಡದವರೆಗೂ ಕೆಲಸ ಮಾಡಬಲ್ಲವು.  "UPLC" ಶಬ್ದವು ವಾಟರ್ಸ್ ಕಾರ್ಪೋರೇಶನ್‌ನ ಟ್ರೇಡ್‌ಮಾರ್ಕ್ ಆಗಿದೆ, ಆದರೆ ಕೆಲವೊಮ್ಮೆ ಇದನ್ನು ಸಾಮಾನ್ಯ ತಂತ್ರವನ್ನು ಸೂಚಿಸಲೂ ಬಳಸಲಾಗುತ್ತದೆ.

ಎಚ್‌‍ಪಿ‍ಎಲ್‌‍ಸಿ ಕ್ರೊಮ್ಯಾಟೋಗ್ರಾಫ್ಸ್‌ನ ತಯಾರಿಕೆ[ಬದಲಾಯಿಸಿ]

ಎಚ್‌‍ಪಿ‍ಎಲ್‌‍ಸಿ ಲಂಬಸಾಲುಗಳು ಮತ್ತು ಸಾಧನಗಳ ತಯಾರಕರು[ಬದಲಾಯಿಸಿ]

ಇದನ್ನೂ ಗಮನಿಸಿ[ಬದಲಾಯಿಸಿ]

ಆಕರಗಳು[ಬದಲಾಯಿಸಿ]

  1. ಡಿಸ್‌ಪ್ಲೇಸ್‌ಮೆಂಟ್ ಕ್ರೊಮ್ಯಾಟೋಗ್ರಫಿ 101. [೧] Archived 2008-09-15 ವೇಬ್ಯಾಕ್ ಮೆಷಿನ್ ನಲ್ಲಿ.ಸಚೆಮ್, Inc. ಆಸ್ಟಿನ್, TX 78737
  2. ಇತ್ತೀಚಿನ ಪುಸ್ತಕವು ಉನ್ನತ-ಸಾಮರ್ಥ್ಯದ ಗ್ರಾಡಿಯೆಂಟ್ ಕ್ರೊಮ್ಯಾಟೋಗ್ರಫಿ ಸಿದ್ಧಾಂತದ ವಿಸ್ತಾರ ವ್ಯವಹಾರವನ್ನು ಒದಗಿಸುತ್ತದೆ:Lloyd R. Snyder and John W. Dolan (2006). High-Performance Gradient Elution: The Practical Application of the Linear-Solvent-Strength Model. Wiley Interscience. ISBN 0471706469. {{cite book}}: Unknown parameter |ISBN status= ignored (help).
  3. ಫಾಸ್ಟ್ ಆ‍ಯ್೦ಡ್ ಆಲ್ಟ್ರಾಫಾಸ್ಟ್ HPLC ಆನ್ ಸಬ್-2 μm ಪೊರಸ್ ಪಾರ್ಟಿಕಲ್ಸ್ — ವೇರ್ ಡು ವಿ ಗೊ ಫ್ರಂ ಹಿಯರ್? - LC-GC ಯುರೋಪ್
  4. Xiang, Y. (2006). "Ultrahigh pressure liquid chromatography using elevated temperature". Journal of Chromatography A. 1104 (1–2): 198–202. doi:10.1016/j.chroma.2005.11.118. {{cite journal}}: Unknown parameter |coauthors= ignored (|author= suggested) (help)CS1 maint: date and year (link)
  5. Horváth, Cs. (1967). "Fast liquid chromatography. Investigation of operating parameters and the separation of nucleotides on pellicular ion exchangers". Analytical Chemistry. 39: 1422–1428. doi:10.1021/ac60256a003. {{cite journal}}: Unknown parameter |coauthors= ignored (|author= suggested) (help)CS1 maint: date and year (link)

ಬಾಹ್ಯ ಕೊಂಡಿಗಳು[ಬದಲಾಯಿಸಿ]