ವಿಷಯಕ್ಕೆ ಹೋಗು

ಇಸ್ಮಾಯಿಲ್‌ ಮರ್ಚೆಂಟ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Ismail Merchant
ಚಿತ್ರ:Ismail Merchant.jpg
ಜನನ
Ismail Noormohamed Abdul Rehman

(೧೯೩೬-೧೨-೨೫)೨೫ ಡಿಸೆಂಬರ್ ೧೯೩೬
ಮರಣ25 May 2005(2005-05-25) (aged 68)
ವೃತ್ತಿ(ಗಳು)producer, director, actor, screenwriter
ಸಕ್ರಿಯ ವರ್ಷಗಳು1960–2005

ಇಸ್ಮಾಯಿಲ್‌ ಮರ್ಚೆಂಟ್‌ (25 ಡಿಸೆಂಬರ್‌ 1936 – 25 ಮೇ 2005) ಭಾರತದಲ್ಲಿ ಹುಟ್ಟಿದ ಓರ್ವ ಚಲನಚಿತ್ರ ನಿರ್ಮಾಪಕರಾಗಿದ್ದರು. ಮರ್ಚೆಂಟ್‌ ಐವರಿ ಪ್ರೊಡಕ್ಷನ್ಸ್‌‌ ಜೊತೆಗಿನ ತಮ್ಮ ಭರ್ಜರಿಯಾದ ಸುದೀರ್ಘ ಸಹಯೋಗದ ಕಾರಣದಿಂದಾಗಿ ಹೊರಹೊಮ್ಮಿದ ಫಲಿತಾಂಶಗಳಿಗೆ ಸಂಬಂಧಿಸಿದಂತೆ ಅವರು ಸುಪರಿಚಿತರಾಗಿದ್ದಾರೆ. ಮರ್ಚೆಂಟ್‌ ಐವರಿ ಪ್ರೊಡಕ್ಷನ್ಸ್ ಸಂಸ್ಥೆಯು ನಿರ್ದೇಶಕ (ಮತ್ತು ಮರ್ಚೆಂಟ್‌ರ ದೀರ್ಘಕಾಲದ ವೃತ್ತಿಪರ ಮತ್ತು ವೈಯಕ್ತಿಕ ಪಾಲುದಾರ) ಜೇಮ್ಸ್‌‌ ಐವರಿಯನ್ನಷ್ಟೇ ಅಲ್ಲದೇ, ಚಿತ್ರಕಥೆಗಾರ್ತಿ ರುಥ್‌‌ ಪ್ರಾವರ್‌ ಝಾಬ್‌ವಾಲಾಳನ್ನೂ ಒಳಗೊಂಡಿತ್ತು ಎಂಬುದು ಗಮನಾರ್ಹ ಅಂಶ. ಅವರ ಚಲನಚಿತ್ರಗಳು ಆರು ಅಕಾಡೆಮಿ ಪ್ರಶಸ್ತಿಗಳನ್ನು ಗೆದ್ದವು. ಹಾಲಿವುಡ್‌ನಲ್ಲಿ 40 ವರ್ಷಗಳಿಗೂ ಹೆಚ್ಚಿನ ಅವಧಿಯವರೆಗೆ ಓರ್ವ ಸ್ವತಂತ್ರ ನಿರ್ಮಾಪಕರಾಗಿ ಮರ್ಚೆಂಟ್‌ ಯಶಸ್ಸು ಕಂಡರು. ತಮ್ಮ ಯೋಜನೆಗಳಿಗೆ ಹಣವಿನಿಯೋಗಿಸುವಲ್ಲಿ ಅವರ ಶಕ್ತಿ ಅಡಗಿತ್ತು. ಅದರಲ್ಲೂ ನಿರ್ದಿಷ್ಟವಾಗಿ, ಅವರ ಸಮಕಾಲೀನರು ತಮ್ಮ ಚಲನಚಿತ್ರಗಳಿಗೆ ಖರ್ಚುಮಾಡುತ್ತಿದ್ದುದಕ್ಕಿಂತಲೂ ಹಲವಾರು ದಶಲಕ್ಷ ಡಾಲರುಗಳಷ್ಟು ಕಡಿಮೆ ಮೊತ್ತದಲ್ಲಿ ಚಲನಚಿತ್ರಗಳನ್ನು ನಿರ್ಮಿಸುವ ಅವರ ಸಾಮರ್ಥ್ಯದಲ್ಲಿ ಅವರ ಶಕ್ತಿ ಅಡಗಿತ್ತು.[]

ಹಿನ್ನೆಲೆ

[ಬದಲಾಯಿಸಿ]

ಇಸ್ಮಾಯಿಲ್‌ ನೂರ್‌ಮೊಹಮದ್‌ ಅಬ್ದುಲ್‌ ರೆಹ್‌ಮಾನ್‌ ಎಂಬ ಜನ್ಮನಾಮದೊಂದಿಗೆ ಮುಂಬಯಿಯಲ್ಲಿ ಜನಿಸಿದ ಅವರು ಹಾಜ್ರಾ (ಕನ್ಯಾನಾಮ ಮೆಮನ್‌) ಮತ್ತು ನೂರ್‌ಮೊಹಮದ್‌ ಹಾಜಿ ಅಬ್ದುಲ್‌ ರೆಹ್‌ಮಾನ್ ದಂಪತಿಗಳ ಮಗನಾಗಿದ್ದರು. ತಂದೆ ನೂರ್‌ಮೊಹಮದ್‌ ಹಾಜಿ ಅಬ್ದುಲ್‌ ರೆಹ್‌ಮಾನ್ ಮುಂಬಯಿಯ ಓರ್ವ ಮೆಮನ್‌ ಜವಳಿ ವ್ಯಾಪಾರಿಯಾಗಿದ್ದರು.[] ಗುಜರಾತಿ ಮತ್ತು ಉರ್ದು ಭಾಷೆಗಳಲ್ಲಿ ಮಾತಾಡಬಲ್ಲ ದುಭಾಷಿಯಾಗಿ ಅವರು ಬೆಳೆದರು, ಮತ್ತು ಶಾಲೆಯಲ್ಲಿ ಅರೇಬಿಕ್‌ ಮತ್ತು ಇಂಗ್ಲಿಷ್‌ ಭಾಷೆಗಳನ್ನು ಕಲಿತರು.[] ಅವರಿಗೆ 11 ವರ್ಷ ವಯಸ್ಸಾಗಿದ್ದಾಗ, 1947ರ ಭಾರತ ವಿಭಜನೆಯಲ್ಲಿ ಅವರು ಮತ್ತು ಅವರ ಕುಟುಂಬದ ಸದಸ್ಯರು ಸಿಕ್ಕಿಹಾಕಿಕೊಂಡರು. ಅವರ ತಂದೆಯು ಮುಸ್ಲಿಂ ಲೀಗ್‌ನ ಅಧ್ಯಕ್ಷರಾಗಿದ್ದರು, ಮತ್ತು ಪಾಕಿಸ್ತಾನಕ್ಕೆ ತೆರಳಲು ನಿರಾಕರಿಸಿದರು. ತಾವು ಪ್ರೌಢವಯಸ್ಸಿಗೆ ಅಡಿಯಿಟ್ಟಾಗ "ಕಗ್ಗೊಲೆ ಮತ್ತು ಹಿಂಸಾಚಾರಗಳ" ನೆನಪುಗಳನ್ನು ತಾವು ಒಯ್ದುದಾಗಿ ಮರ್ಚೆಂಟ್‌ ನಂತರದಲ್ಲಿ ಹೇಳಿಕೊಂಡಿದ್ದಾರೆ.[] ಮುಂಬಯಿಯ ಸೇಂಟ್‌ ಕ್ಸೇವಿಯರ್‌‌'ಸ್‌ ಕಾಲೇಜಿನಲ್ಲಿ[] ಅವರು ಅಧ್ಯಯನ ಮಾಡಿದರು ಮತ್ತು ಚಲನಚಿತ್ರದೆಡೆಗಿನ ತಮ್ಮ ಪ್ರೀತಿಯನ್ನು ಅವರು ಬೆಳೆಸಿಕೊಂಡಿದ್ದು ಇಲ್ಲಿಯೇ ಎಂದು ಹೇಳಬಹುದು.[] ಅವರಿಗೆ 22 ವರ್ಷ ವಯಸ್ಸಾಗಿದ್ದಾಗ, ನ್ಯೂಯಾರ್ಕ್‌ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಲೆಂದು ಅವರು ಅಮೆರಿಕಾ ಸಂಯುಕ್ತ ಸಂಸ್ಥಾನಕ್ಕೆ ಪ್ರಯಾಣ ಬೆಳೆಸಿದರು ಮತ್ತು ನಂತರದಲ್ಲಿ ಅಲ್ಲಿ MBA ಪದವಿಯೊಂದನ್ನು ಗಳಿಸಿದರು. ವಿಶ್ವಸಂಸ್ಥೆಗಾಗಿ ಓರ್ವ ಹರಿಕಾರನಾಗಿ ಕಾರ್ಯನಿರ್ವಹಿಸುವ ಮೂಲಕ ಅವರು ಸ್ವಂತ ಕಾಲಿನ ಮೇಲೆ ನಿಂತರು ಮತ್ತು ತಮ್ಮ ಚಲನಚಿತ್ರ ಯೋಜನೆಗಳಿಗೆ ಧನಸಹಾಯ ಮಾಡುವಂತೆ ಭಾರತೀಯ ನಿಯೋಗಿಗಳ ಮನವೊಲಿಸಲು ಈ ಸದವಕಾಶವನ್ನು ಬಳಸಿಕೊಂಡರು.[] ಈ ಅನುಭವದ ಕುರಿತಾಗಿ ಅವರು ಹೇಳಿಕೊಳ್ಳುತ್ತಾ, "ನನಗೆ ಯಾರಿಂದಲೂ, ಯಾವುದರಿಂದಲೂ ಭಯವಾಗುತ್ತಿರಲಿಲ್ಲ" ಎಂದಿದ್ದಾರೆ.[] 1961ರಲ್ಲಿ, ದಿ ಕ್ರಿಯೇಷನ್‌ ಆಫ್‌ ವುಮನ್‌ ಎಂಬ ಕಿರುಚಿತ್ರವೊಂದನ್ನು ಅವರು ನಿರ್ಮಿಸಿದರು. ಇದು ಕ್ಯಾನೆಸ್‌ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲ್ಪಟ್ಟಿತು ಹಾಗೂ ಅಕಾಡೆಮಿ ಪ್ರಶಸ್ತಿಯ ನಾಮನಿರ್ದೇಶನವೊಂದನ್ನೂ ಸ್ವೀಕರಿಸಿತು.

ಮರ್ಚೆಂಟ್‌ ಐವರಿ ಪ್ರೊಡಕ್ಷನ್ಸ್‌‌

[ಬದಲಾಯಿಸಿ]

1961ರಲ್ಲಿ, ಮರ್ಚೆಂಟ್‌ ಮತ್ತು ನಿರ್ದೇಶಕ ಜೇಮ್ಸ್‌‌ ಐವರಿ ಸೇರಿಕೊಂಡು ಮರ್ಚೆಂಟ್‌ ಐವರಿ ಪ್ರೊಡಕ್ಷನ್ಸ್‌‌ ಎಂಬ ಚಲನಚಿತ್ರ ನಿರ್ಮಾಣ ಕಂಪನಿಯನ್ನು ರೂಪಿಸಿದರು. ಮರ್ಚೆಂಟ್‌ರವರು ಐವರಿಯ ದೀರ್ಘಾವಧಿಯ ಜೀವನ ಸಂಗಾತಿಯೂ ಆಗಿದ್ದರು. 1960ರ ದಶಕದ ಆರಂಭದಲ್ಲಿ ಶುರುವಾದ ಅವರ ವೃತ್ತಿಪರವಾದ ಮತ್ತು ಪ್ರಣಯದ ಸಹಭಾಗಿತ್ವವು 2005ರಲ್ಲಿ ಮರ್ಚೆಂಟ್‌ರವರ ಸಾವು ಸಂಭವಿಸುವವರೆಗೂ ಮುಂದುವರೆಯಿತು.[] ಸ್ವತಂತ್ರ ಚಲನಚಿತ್ರ ಇತಿಹಾಸದಲ್ಲಿನ ಸುದೀರ್ಘವಾದ ಪಾಲುದಾರಿಕೆಗೆ ಸಂಬಂಧಿಸಿದಂತೆ ಅವರ ಸಹಭಾಗಿತ್ವವು ಗಿನ್ನೆಸ್‌ ವಿಶ್ವ ದಾಖಲೆಗಳ ಪುಸ್ತಕದಲ್ಲಿ ಸ್ಥಾನವೊಂದನ್ನು ಗಳಿಸಿಕೊಂಡಿದೆ. 2005ರಲ್ಲಿ ಮರ್ಚೆಂಟ್‌ರವರ ಸಾವು ಸಂಭವಿಸುವವರೆಗೂ, ಹಲವಾರು ಪ್ರಶಸ್ತಿ ವಿಜೇತ ಚಿತ್ರಗಳೂ ಸೇರಿದಂತೆ ಸರಿಸುಮಾರು 40 ಚಲನಚಿತ್ರಗಳನ್ನು ಅವರು ನಿರ್ಮಿಸಿದರು. ಅವರ ನಿರ್ಮಾಣದ ಬಹುತೇಕ ಚಲನಚಿತ್ರಗಳಿಗೆ ಕಾದಂಬರಿಗಾರ್ತಿ ರುಥ್‌‌ ಪ್ರಾವರ್‌ ಝಾಬ್‌ವಾಲಾ ಚಿತ್ರಕಥೆಗಾರ್ತಿಯಾಗಿದ್ದರು. 1963ರಲ್ಲಿ, MIPಯು ತನ್ನ ಮೊದಲ ನಿರ್ಮಾಣವಾದ ದಿ ಹೌಸ್‌ಹೋಲ್ಡರ್‌ ಚಿತ್ರದ ಪ್ರಥಮ ಪ್ರದರ್ಶನವನ್ನು ನೀಡಿತು; ಈ ಚಿತ್ರವು ಝಾಬ್‌ವಾಲಾರಿಂದ ಕಾದಂಬರಿಯೊಂದನ್ನು ಆಧರಿಸಿತ್ತು (ಆಕೆ ಚಿತ್ರದ ಚಿತ್ರಕಥೆಯನ್ನೂ ಬರೆದರು). ಈ ದೀರ್ಘಚಿತ್ರವು ಅಮೆರಿಕಾದ ಒಂದು ಪ್ರಮುಖ ಸ್ಟುಡಿಯೋ ಆಗಿರುವ ಕೊಲಂಬಿಯಾ ಪಿಕ್ಚರ್ಸ್‌ ವತಿಯಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿತರಿಸಲ್ಪಟ್ಟ ಮೊದಲ ಭಾರತೀಯ-ನಿರ್ಮಿತ ಚಲನಚಿತ್ರ ಎನಿಸಿಕೊಂಡಿತು. ಆದಾಗ್ಯೂ, 1970ರ ದಶಕವು ಬರುವವರೆಗೂ ಸದರಿ ಪಾಲುದಾರಿಕೆಯ ಯಶೋಗಾಥೆಗೆ ಹುರುಪು ಬಂದಿರಲಿಲ್ಲ; ಈ ಅವಧಿಯಲ್ಲಿ "ಅಧ್ಯಯನ ಮಾಡಲ್ಪಟ್ಟ, ನಿಧಾನವಾಗಿ-ಸಾಗುವ ಕೃತಿಗಳಿಗೆ ಸಂಬಂಧಿಸಿದಂತಿರುವ ಒಂದು ಯಶಸ್ವೀ ಸೂತ್ರವನ್ನು ಈ ಪಾಲುದಾರಿಕೆಯು ದಕ್ಕಿಸಿಕೊಂಡಿತು... ಚಿತ್ರಗಳ ಕಾಲಾವಧಿಯ ವಿವರ ಮತ್ತು ಅವುಗಳ ಸಜ್ಜಿಕೆಗಳ ವೈಭವದೆಡೆಗೆ ನೀಡಿದ ಗಮನಕ್ಕಾಗಿ ಮರ್ಚೆಂಟ್‌ ಐವರಿ ಪ್ರಸಿದ್ಧಿಯನ್ನು ಪಡೆದರು".[] ಹೆನ್ರಿ ಜೇಮ್ಸ್‌‌‌‌ನ ದಿ ಯುರೋಪಿಯನ್ಸ್‌ ಕೃತಿಯನ್ನು ಆಧರಿಸಿ ಝಾಬ್‌ವಾಲಾ ಸೃಷ್ಟಿಸಿದ ಚಿತ್ರದ ರೂಪಾಂತರವು ಈ ಶೈಲಿಯಲ್ಲಿನ ಅವರ ಮೊದಲ ಯಶಸ್ಸು ಎನಿಸಿಕೊಂಡಿತು. ಚಿತ್ರ ನಿರ್ಮಾಣದ ಜೊತೆಗೆ ಹಲವಾರು ಚಲನಚಿತ್ರಗಳು ಮತ್ತು ದೂರದರ್ಶನದ ಎರಡು ದೀರ್ಘಚಿತ್ರಗಳನ್ನು ಮರ್ಚೆಂಟ್‌ ನಿರ್ದೇಶಿಸಿದರು. ದೂರದರ್ಶನಕ್ಕಾಗಿ ಅವರು ಮಹಾತ್ಮ ಅಂಡ್‌ ದಿ ಮ್ಯಾಡ್‌ ಬಾಯ್‌ ಎಂಬ ಶೀರ್ಷಿಕೆಯನ್ನು ಹೊಂದಿದ ಕಿರುಚಿತ್ರವೊಂದನ್ನು ನಿರ್ದೇಶಿಸಿದರು, ಮತ್ತು ಬ್ರಿಟನ್‌ನ ಚಾನೆಲ್‌ ಫೋರ್‌‌‌‌‌ಗಾಗಿ ದಿ ಕೋರ್ಟಿಸಾನ್ಸ್‌ ಆಫ್‌ ಮುಂಬಯಿ ಎಂಬ ಹೆಸರಿನ ದೂರದರ್ಶನದ ಒಂದು ಸುದೀರ್ಘಚಿತ್ರವನ್ನು ನಿರ್ದೇಶಿಸಿದರು. 1993ರಲ್ಲಿ ಬಂದ ಇನ್‌ ಕಸ್ಟಡಿ ಎಂಬ ಚಿತ್ರದೊಂದಿಗೆ ತಮ್ಮ ಚಲನಚಿತ್ರ ನಿರ್ದೇಶನದ ಪ್ರಥಮ ಪ್ರವೇಶವನ್ನು ಮರ್ಚೆಂಟ್‌ ಕೈಗೊಂಡರು; ಅನಿತಾ ದೇಸಾಯಿಯವರ ಕಾದಂಬರಿಯೊಂದನ್ನು ಆಧರಿಸಿದ್ದ ಈ ಚಿತ್ರದಲ್ಲಿ ಬಾಲಿವುಡ್‌ ನಟ ಶಶಿ ಕಪೂರ್‌‌ ಮುಖ್ಯಪಾತ್ರದಲ್ಲಿದ್ದರು. ಭಾರತದ ಭೋಪಾಲ್‌‌ನಲ್ಲಿ ಚಿತ್ರೀಕರಿಸಲ್ಪಟ್ಟ ಈ ಚಲನಚಿತ್ರವು, ಅತ್ಯುತ್ತಮ ನಿರ್ಮಾಣ ವಿನ್ಯಾಸಕ್ಕಾಗಿ ಭಾರತ ಸರ್ಕಾರದ ವತಿಯಿಂದ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದುಕೊಂಡಿತು ಮತ್ತು ಈ ಚಿತ್ರದ ಪ್ರಮುಖ ನಟ ಶಶಿ ಕಪೂರ್‌‌ಗೆ ವಿಶೇಷ ಪ್ರಶಸ್ತಿಯೊಂದು ದಕ್ಕಿತು. ಅವರ ನಿರ್ದೇಶನದ ಎರಡನೇ ದೀರ್ಘಚಿತ್ರವಾದ "ದಿ ಪ್ರೊಪ್ರೈಟರ್‌"ನಲ್ಲಿ ಜಿಯಾನ್ನೆ ಮೊರಿಯು, ಸೀನ್‌ ಯಂಗ್‌, ಜೀನ್‌-ಪಿಯರೆ ಔಮಂಟ್‌ ಮತ್ತು ಕ್ರಿಸ್ಟೋಫರ್‌ ಕೆಜೆನೊವ್‌ ಮೊದಲಾದವರ ತಾರಾಗಣವಿತ್ತು ಮತ್ತು ಈ ಚಿತ್ರವನ್ನು ಪ್ಯಾರಿಸ್‌‌ನಲ್ಲಿನ ಹೊರಾಂಗಣದಲ್ಲಿ ಚಿತ್ರೀಕರಿಸಲಾಯಿತು. ಐವರಿ ಮತ್ತು ಝಾಬ್‌ವಾಲಾ ಜೊತೆಗಿನ ತಮ್ಮ ಪಾಲುದಾರಿಕೆಯ ಕುರಿತಾಗಿ ಮರ್ಚೆಂಟ್‌ ಒಮ್ಮೆ ಹೀಗೆ ವ್ಯಾಖ್ಯಾನಿಸಿದರು: "ಮರ್ಚೆಂಟ್‌ ಐವರಿಯಲ್ಲಿರುವ ನಮಗೆ ಇದೊಂದು ವಿಚಿತ್ರ ಮದುವೆಯಾಗಿದೆ... ನಾನೊಬ್ಬ ಭಾರತೀಯ ಮುಸ್ಲಿಂ ಆಗಿರುವೆ, ರುಥ್‌‌ ಓರ್ವ ಜರ್ಮನ್‌ ಯೆಹೂದಿಯಾಗಿದ್ದಾಳೆ, ಮತ್ತು ಜಿಮ್‌ ಓರ್ವ ಪ್ರಾಟೆಸ್ಟೆಂಟ್‌ ಅಮೆರಿಕನ್‌ ಆಗಿದ್ದಾನೆ. ಯಾರೋ ಒಬ್ಬರನ್ನು ನಮ್ಮನ್ನು ಒಮ್ಮೆ ಮೂರು-ತಲೆಗಳ ಒಂದು ದೇವರು ಎಂಬುದಾಗಿ ವರ್ಣಿಸಿದರು. ಪ್ರಾಯಶಃ ಅವರು ನಮ್ಮನ್ನು ಮೂರು-ತಲೆಗಳ ಒಂದು ಪೆಡಂಭೂತ! ಎಂದು ಕರೆಯಬೇಕಿತ್ತು ಎನಿಸುತ್ತದೆ"[]

ಅಡುಗೆ ಮತ್ತು ಬರಹಗಾರಿಕೆ

[ಬದಲಾಯಿಸಿ]

ತಮ್ಮ "ಅದ್ದೂರಿಯಾದ ಖಾಸಗಿ ಸಂತೋಷಕೂಟಗಳಿಗಾಗಿಯೂ" ಮರ್ಚೆಂಟ್‌ ಸುಪರಿಚಿತರಾಗಿದ್ದರು.[] ಅಡುಗೆ ಮಾಡುವುದು ಅವರ ಅಚ್ಚುಮೆಚ್ಚಿನ ಕೆಲಸವಾಗಿತ್ತು. ಈ ಕಲೆಯ ಕುರಿತಾಗಿ ಅವರು ಹಲವಾರು ಪುಸ್ತಕಗಳನ್ನು ಬರೆದಿದ್ದು, ಅವುಗಳಲ್ಲಿ ಇಸ್ಮಾಯಿಲ್‌ ಮರ್ಚೆಂಟ್‌'ಸ್ ಇಂಡಿಯನ್‌ ಕ್ವಿಸಿನ್‌ ; ಇಸ್ಮಾಯಿಲ್‌ ಮರ್ಚೆಂಟ್‌'ಸ್ ಫ್ಲಾರೆನ್ಸ್‌ ; ಇಸ್ಮಾಯಿಲ್‌ ಮರ್ಚೆಂಟ್‌'ಸ್ ಪ್ಯಾಷನೇಟ್‌ ಮೀಲ್ಸ್‌ ಮತ್ತು ಇಸ್ಮಾಯಿಲ್‌ ಮರ್ಚೆಂಟ್‌'ಸ್ ಪ್ಯಾರಿಸ್‌: ಫಿಲ್ಮಿಂಗ್‌ ಅಂಡ್ ಫೀಸ್ಟಿಂಗ್ ಇನ್‌ ಫ್ರಾನ್ಸ್‌ ಮೊದಲಾದವು ಸೇರಿವೆ. ಚಲನಚಿತ್ರವನ್ನು-ನಿರ್ಮಿಸುವುದರ ಕುರಿತಾಗಿಯೂ ಅವರು ಪುಸ್ತಕಗಳನ್ನು ಬರೆದರು. ದಿ ಡಿಸೀವರ್ಸ್‌ ಚಲನಚಿತ್ರದ ನಿರ್ಮಾಣದ ಕುರಿತಾಗಿ 1988ರಲ್ಲಿ ಬಂದ ಹಲ್ಲಾಬಲೂ ಇನ್‌ ಓಲ್ಡ್‌ ಜೆಯ್‌ಪುರ್‌ ಎಂಬ ಒಂದು ಪುಸ್ತಕ ಮತ್ತು ದಿ ಪ್ರೊಪ್ರೈಟರ್‌ ಚಲನಚಿತ್ರದ ನಿರ್ಮಾಣದ ಕುರಿತಾಗಿ ಬಂದ ಒನ್ಸ್‌ ಅಪಾನ್‌ ಎ ಟೈಮ್‌... ದಿ ಪ್ರೊಪ್ರೈಟರ್‌ ಎಂಬ ಪುಸ್ತಕಗಳು ಸದರಿ ಪುಸ್ತಕಗಳಲ್ಲಿ ಸೇರಿವೆ. ಮೈ ಪ್ಯಾಸೇಜ್‌ ಫ್ರಂ ಇಂಡಿಯಾ: ಎ ಫಿಲ್ಮ್‌ಮೇಕರ್‌'ಸ್‌ ಜರ್ನಿ ಫ್ರಂ ಮುಂಬಯಿ ಟು ಹಾಲಿವುಡ್‌ ಅಂಡ್ ಬಿಯಾಂಡ್‌ ಎಂಬ ಶೀರ್ಷಿಕೆಯನ್ನು ಹೊಂದಿದ್ದ ಪುಸ್ತಕವು ಅವರ ಕೊನೆಯ ಪುಸ್ತಕವಾಯಿತು.

ಪ್ರಶಸ್ತಿಗಳು

[ಬದಲಾಯಿಸಿ]

2002ರಲ್ಲಿ ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಯಿತು. ದಿ ಇಂಟರ್‌ನ್ಯಾಷನಲ್‌ ಸೆಂಟರ್‌ ಇನ್‌ ನ್ಯೂಯಾರ್ಕ್‌'ಸ್‌ ಅವಾರ್ಡ್‌ ಆಫ್‌ ಎಕ್ಸಲೆನ್ಸ್‌ ಎಂಬ ಪ್ರಶಸ್ತಿಯಿಂದಲೂ ಅವರು ಪುರಸ್ಕೃತರಾಗಿದ್ದಾರೆ.

ಕಿಬ್ಬೊಟ್ಟೆಯ ಹುಣ್ಣುಗಳಿಗಾಗಿ ನಡೆಸಲಾದ ಶಸ್ತ್ರಚಿಕಿತ್ಸೆಯ ನಂತರ, ತಮ್ಮ 68ನೇ ವಯಸ್ಸಿನಲ್ಲಿ ಲಂಡನ್‌‌ನ ವೆಸ್ಟ್‌ಮಿನಿಸ್ಟರ್‌‌‌‌‌ನಲ್ಲಿ[] ಮರ್ಚೆಂಟ್‌ ಮರಣಿಸಿದರು.[] ತಾವು ಚಿರನಿದ್ರೆಗೆ ಜಾರಿದಾಗ ತಮ್ಮ ಪೂರ್ವಜರೊಂದಿಗೇ ತಮ್ಮನ್ನು ಇರಿಸಬೇಕು ಎಂಬ ಅವರ ಬಯಕೆಯ ಅನುಸಾರ, ಮುಂಬಯಿಯ ಮೆರೀನ್‌ ಲೈನ್ಸ್‌ನಲ್ಲಿನ ಬಡಾ ಕಬ್ರೆಸ್ತಾನ್‌‌ನಲ್ಲಿ 2005ರ ಮೇ ತಿಂಗಳ 28ರಂದು ಅವರನ್ನು ದಫನು ಮಾಡಲಾಯಿತು.

ಚಲನಚಿತ್ರಗಳ ಪಟ್ಟಿ

[ಬದಲಾಯಿಸಿ]

ನಿರ್ದೇಶಕರಾಗಿ

[ಬದಲಾಯಿಸಿ]
  • ಮಹಾತ್ಮ ಅಂಡ್‌ ದಿ ಮ್ಯಾಡ್‌ ಬಾಯ್‌ (1974, ಕಿರುಚಿತ್ರ)
  • ದಿ ಕೋರ್ಟಿಸಾನ್ಸ್‌ ಆಫ್‌ ಮುಂಬಯಿ (1983, ಸಾಕ್ಷ್ಯಚಿತ್ರ)
  • ಇನ್‌ ಕಸ್ಟಡಿ (1993) (ದೀರ್ಘಚಿತ್ರ ಪ್ರಥಮ ಪ್ರವೇಶ)
  • ಲೂಮಿಯೇರ್‌ ಅಂಡ್‌ ಕಂಪನಿ (1995, ವಿಭಾಗ "ಮರ್ಚೆಂಟ್‌ ಐವರಿ, ಪ್ಯಾರಿಸ್‌") ಸಹ-ನಿರ್ದೇಶಕ with ಜೇಮ್ಸ್‌‌ ಐವರಿ
  • ದಿ ಪ್ರೊಪ್ರೈಟರ್‌ (1996)
  • ಕಾಟನ್‌ ಮೇರಿ (1999)
  • ದಿ ಮಿಸ್ಟಿಕ್‌ ಮ್ಯಾಸರ್‌ (2002)

ನಿರ್ಮಾಪಕರಾಗಿ

[ಬದಲಾಯಿಸಿ]
  • ದಿ ಕ್ರಿಯೇಷನ್‌ ಆಫ್‌ ವುಮನ್‌ (1960, ಕಿರುಚಿತ್ರ)
  • ದಿ ಹೌಸ್‌ಹೋಲ್ಡರ್ (1963)
  • ಷೇಕ್ಸ್‌ಪಿಯರ್ ವಲ್ಲಾಹ್‌ (1965)
  • ದಿ ಗುರು (1969)
  • ಮುಂಬಯಿ ಟಾಕೀ (1970)
  • ಅಡ್ವೆಂಚರ್ಸ್‌ ಆಫ್‌ ಎ ಬ್ರೌನ್‌ ಮ್ಯಾನ್‌ ಇನ್‌ ಸರ್ಚ್‌ ಆಫ್‌ ಸಿವಿಲಿಸೇಷನ್‌ (1972, TV)
  • Helen: Queen of the Nautch Girls (1973, ಕಿರುಚಿತ್ರ)
  • ಸ್ಯಾವೇಜಸ್‌ (1973)
  • ಮಹಾತ್ಮ ಅಂಡ್‌ ದಿ ಮ್ಯಾಡ್‌ ಬಾಯ್‌ (1974, ಕಿರುಚಿತ್ರ) - ನಿರ್ದೇಶಕರೂ ಸಹ
  • ದಿ ವೈಲ್ಡ್‌ ಪಾರ್ಟಿ (1975)
  • ‌ಆಟೋಬಯಾಗ್ರಫಿ ಆಫ್‌ ಎ ಪ್ರಿನ್ಸಸ್ (1975)
  • ಸ್ವೀಟ್‌ ಸೌಂಡ್ಸ್‌ (1976, ಕಿರುಚಿತ್ರ)
  • ರೋಸ್‌ಲ್ಯಾಂಡ್‌ (1977)
  • ಹಲ್ಲಾಬಲೂ ಓವರ್‌ ಜಾರ್ಜೀ ಅಂಡ್‌ ಬೋನಿ'ಸ್‌ ಪಿಕ್ಚರ್ಸ್‌ (1976)
  • ದಿ ಯುರೋಪಿಯನ್ಸ್‌ (1979)
  • ಜೇನ್‌ ಆಸ್ಟೆನ್‌ ಇನ್‌ ಮ್ಯಾನ್‌ಹಾಟನ್‌ (1980)
  • ಕ್ವಾರ್ಟೆಟ್‌ (1981)
  • ಹೀಟ್ ಅ೦ಡ್ ಡಸ್ಟ್ (1982)
  • ದಿ ಕೋರ್ಟಿಸಾನ್ಸ್‌ ಆಫ್‌ ಮುಂಬಯಿ (1983) - ನಿರ್ದೇಶಕರಾಗಿಯೂ ಸಹ
  • ದಿ ಬಾಸ್ಟನಿಯನ್ಸ್‌ (1984)
  • ಎ ರೂಮ್‌ ವಿತ್‌ ಎ ವ್ಯೂ (1985)
  • ನೂನ್‌ ವೈನ್‌ (1985, TV) - ಕಾರ್ಯಕಾರಿ ನಿರ್ಮಾಪಕ (ಮರ್ಚೆಂಟ್‌ ಐವರಿ ಅಲ್ಲ)
  • ಮೈ ಲಿಟ್ಲ್‌ ಗರ್ಲ್‌ (1986) - ಕಾರ್ಯಕಾರಿ ನಿರ್ಮಾಪಕ
  • ‌ಮೌರಿಸ್ (1987)
  • ದಿ ಪರ್ಫೆಕ್ಟ್‌ ಮರ್ಡರ್‌‌ (1988) - ಕಾರ್ಯಕಾರಿ ನಿರ್ಮಾಪಕ
  • ದಿ ಡಿಸೀವರ್ಸ್ (1988)
  • ಸ್ಲೇವ್ಸ್‌ ಆಫ್‌ ನ್ಯೂಯಾರ್ಕ್‌ (1989)
  • ಮಿಸ್ಟರ್‌ & ಮಿಸೆಸ್‌ ಬ್ರಿಜ್‌ (1990)
  • ದಿ ಬ್ಯಾಲಡ್‌ ಆಫ್‌ ದಿ ಸ್ಯಾಡ್‌ ಕೆಫೆ (1990)
  • ಹೋವರ್ಡ್ಸ್ ಎಂಡ್‌ (1991)
  • ಸ್ಟ್ರೀಟ್‌ ಮ್ಯುಸಿಷಿಯನ್ಸ್‌ ಆಫ್‌ ಮುಂಬಯಿ (1991) - ಕಾರ್ಯಕಾರಿ ನಿರ್ಮಾಪಕ
  • ದಿ ರಿಮೇಯ್ನ್ಸ್‌ ಆಫ್‌ ದಿ ಡೇ (1993)
  • ಲೂಮಿಯೇರ್‌ ಅಂಡ್‌ ಕಂಪನಿ (1995, ವಿಭಾಗ)
  • ಜೆಫರ್‌ಸನ್‌ ಇನ್‌ ಪ್ಯಾರಿಸ್‌ (1995)
  • ಫೀಸ್ಟ್‌ ಆಫ್‌ ಜುಲೈ (1995) - ಕಾರ್ಯಕಾರಿ ನಿರ್ಮಾಪಕ
  • ಸರ್ವೈವಿಂಗ್‌ ಪಿಕಾಸೋ (1996)
  • ಎ ಸೋಲ್ಜರ್‌'ಸ್‌ ಡಾಟರ್‌ ನೆವರ್‌ ಕ್ರೈಸ್‌ (1998)
  • ಸೈಡ್‌ ಸ್ಟ್ರೀಟ್ಸ್‌ (1998) - ಕಾರ್ಯಕಾರಿ ನಿರ್ಮಾಪಕ
  • ಕಾಟನ್‌ ಮೇರಿ (2000)
  • ದಿ ಗೋಲ್ಡನ್‌ ಬೌಲ್‌ (2001)
  • ಮರ್ಸಿ ಡಾಕ್ಟಿಯರ್‌ ರೇ (2002)
  • ಲೆ ಡಿವೋರ್ಸ್‌ (2003)
  • ಹೈಟ್ಸ್‌ (2004)
  • ದಿ ವೈಟ್‌ ಕೌಂಟೆಸ್‌ (2005)

ಹೆಚ್ಚಿನ ಓದಿಗಾಗಿ

[ಬದಲಾಯಿಸಿ]
  • "ಚೀಕ್‌ ಆಫ್‌ ದಿ ಡೆವಿಲ್‌, ಚಾರ್ಮ್‌ ಆಫ್‌ ಆನ್‌ ಏಂಜಲ್‌: ಇಸ್ಮಾಯಿಲ್‌ ಮರ್ಚೆಂಟ್‌, ಪ್ರೊಡ್ಯೂಸರ್‌‌, 1936–2005" (ಟೆಲಿಗ್ರಾಫ್‌, ಲಂಡನ್‌‌ ನಿಂದ ಮರುಮುದ್ರಿಸಲ್ಪಟ್ಟ ಮೃತವೃತ್ತಾಂತ); ದಿ ಸಿಡ್ನಿ ಮಾರ್ನಿಂಗ್‌ ಹೆರಾಲ್ಡ್‌‌‌ ನಲ್ಲಿರುವಂಥದ್ದು, 2005-05-30, ಪುಟ 41

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ ೧.೨ ೧.೩ ೧.೪ ೧.೫ ಚೀಕ್‌ ಆಫ್‌ ದಿ ಡೆವಿಲ್‌
  2. http://www.filmreference.com/film/73/Ismail-Merchant.html
  3. ೩.೦ ೩.೧ ಚೀಕ್‌ ಆಫ್‌ ದಿ ಡೆವಿಲ್‌ ನಲ್ಲಿ ಉಲ್ಲೇಖಿಸಿದ್ದು
  4. http://www.indobase.com/indians-abroad/ismail-merchant.html
  5. Horn, John (2005-05-26). "Obituaries; Ismail Merchant, 68; Producer of Stylish, Popular Period Dramas". Los Angeles Times. Archived from the original on 2012-07-25. Retrieved 2008-07-04.
  6. "Ismail Merchant". The Times. London. 26 May 2005. Archived from the original on 21 ನವೆಂಬರ್ 2008. Retrieved 30 ಜನವರಿ 2011.
  7. "ಡೆತ್ಸ್‌ ಇಂಗ್ಲೆಂಡ್‌ ಅಂಡ್‌ ವೇಲ್ಸ್‌ 1984–2006". Archived from the original on 2009-02-28. Retrieved 2011-01-30.
  8. http://us.rediff.com/movies/2005/may/25ismail.htm

ಬಾಹ್ಯ ಕೊಂಡಿಗಳು

[ಬದಲಾಯಿಸಿ]