ಇಲೀನಾ ಡಿ'ಕ್ರುಜ್

ವಿಕಿಪೀಡಿಯ ಇಂದ
Jump to navigation Jump to search

ಇಲೀನಾ ಡಿ'ಕ್ರುಜ್
Ileana D'Cruz grace the trailer launch of Raid (16) (cropped).jpg
ಇಲೀನಾ ರೈಡ್ ಚಿತ್ರದ ಪ್ರಚಾರ ಸಂದರ್ಬಾದಲ್ಲಿ(೨೦೧೮) .
ಜನನ (1987-11-01) 1 November 1987 (age 32)
ಮಾಹಿಮ್,ಮುಂಬೈ, ಭಾರತ
ವಾಸಿಸುವ ಸ್ಥಳಮುಂಬೈ
ರಾಷ್ಟ್ರೀಯತೆ= ಪೊರ್ಚುಗೀಸ್
ವೃತ್ತಿActress, model
Years active2006–ರಿಂದ
ತಂದೆ ತಾಯಿ
 • ರೊನಾಲ್ಡೊ ಡಿ'ಕ್ರುಜ್ (father)
 • ಸಮೀರಾ ಡಿ'ಚ್ರುಜ್ (mother)

ಇಲೀನಾ ಡಿ'ಕ್ರುಜ್, ಭಾರತೀಯ ನಟಿ ಆಗಿದ್ದು, ತೆಲುಗು ಚಲನಚಿತ್ರ ಹಾಗೂ ಬಾಲಿವುಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇವರು ನವೆಂಬರ್ ೧, ೧೯೮೭ರಲ್ಲಿ ಜನಿಸಿದರು. ಇಲೀನಾ ರವರ ತವರು ಗೊವಾ ರಾಜ್ಯದ ಪಾರ್ರಾ ಎಂಬ ಊರು. ಇವರ ತಂದೆ ರೊನಾಲ್ಡೊ ಡಿ'ಕ್ರುಜ್, ತಾಯಿ ಸಮೀರಾ ಡಿ'ಕ್ರುಜ್. ಇಲೀನಾ ರವರ ಅಡ್ಡಹೆಸರು ಇಲ್ಲು

೨೦೦೬ ರಲ್ಲಿ ದೇವದಾಸು ತೆಲುಗು ಚಲನಚಿತ್ರಕ್ಕೆ ಫಿಲ್ಮ್ಫೇರ್ ಪ್ರಶಸ್ತಿ ದೊರಕಿದೆ.[೧] ಪೋಕಿರಿ, ಜಾಲ್ಸ, ಕಿಕ್, ಜುಲಾಯಿ ಚಿತ್ರಗಳಲ್ಲಿ ನಟಿಸುವ ಮೂಲಕ ತೆಲುಗು ಚಿತ್ರರಂಗದಲ್ಲಿ ಪ್ರಮುಖ ನಟಿ ಆದರು. ೨೦೧೨ ರಲ್ಲಿ ಅನುರಾಗ್ ಬಾಸು ನಿರ್ದೇಶಿಸಿದ ಬರ್ಫಿ ಚಿತ್ರದ ಮೂಲಖ ಬಾಲಿವುಡ್ಅನ್ನು ಪ್ರವೆಶಿಸಿದರು. ಇವರಿಗೆ ತಮ್ಮ ಚೊಚ್ಚಲ ಚಿತ್ರಕ್ಕೆ ಅತ್ಯುತ್ತಮ ಮಹಿಳಾ ನಟಿ ಫಿಲ್ಮ್ಫೇರ್ ಪ್ರಶಸ್ತಿ ದೊರಕಿದೆ. ನಂತರ ಆಕ್ಸ್ಯನ್ ಹಾಸ್ಯಚಿತ್ರ ಫಟಾ ಪೊಸ್ಟರ್ ನಿಕ್ಳಾ ಹೀರೊ(೨೦೧೩)[೨], ಮೇ ತೆರಾ ಹೀರೊ(೨೦೧೪), ಅಪರಾಧಾ ತ್ರಿಲ್ಲರ್ ರುಸ್ತಮ್(೨೦೧೬)[೩] ಮತ್ತು ಬಾದ್ಷಾಹೊ (೨೦೧೭) ಚಿತ್ರಗಳಲ್ಲಿ ನಟಿಸಿದ್ದಾರೆ.

ಆರಂಭಿಕ ಜೀವನ[ಬದಲಾಯಿಸಿ]

ಇಲೀನಾ ಗೋವಾ ಕ್ಯಾಥೊಲಿಕ್ ಕುಟುಂಬದಲ್ಲಿ, ಮುಂಬೈಯಲ್ಲಿ ಜನಿಸಿದರು. ಅವರ ಬಾಲ್ಯ ಭಾಗಶ್ಃ ಮುಂಬೈ ಮತ್ತು ಭಾಗಶ್ಃ ಗೊವದಲ್ಲಿ ಕಳೆಯಿತು. ಇಲೀನಾರಾ ಪ್ರಾಥಮಿಕ ಶಿಕ್ಶಣ ಸಂತ. ಸವೆರರ ಶಾಲೆ, ಮಪುಸದಲ್ಲಿ ಆಯಿತು.[೪] ಕಾಲೇಜು ಶಿಕ್ಶಣ ಮುಂಬೈ ವಿಶ್ವವಿದ್ಯಾನಿಲಯ, ಮುಂಬೈಯಲ್ಲಿ ಆಯಿತು. ಇವರ ಮಾತೃ ಭಾಷೆ ಕೊಂಕಣಿ. ಆ ಸಮಯದಲ್ಲಿ, ಇಲ್ಲೀನಾಳ ಅಮ್ಮ ಕೆಲಸ ಮಾಡುತಿದ್ದ ಹೋಟೆಲ್ ವ್ಯವಸ್ತಾಪಕ ಇವಳ ಕಿರುನಗೆಯನ್ನು ನೋಡಿ ಮೋಡೆಲ್ಲಿಂಗ್ ಕ್ಶೆತ್ರಕ್ಕೆ ಹೋಗಲು ಸೂಚಿಸಿದರು.ಇದು ಇವರಿಗೆ ಮೊದಲ ಬಂಡವಾಳವಾಯಿತು.[೫]೨೦೧೪ ರಲ್ಲಿ ಪೊರ್ಚುಗೀಸ್ ರಾಷ್ಟ್ರೀಯತೆ ಪಡೆದರು.

ವೃತ್ತಿ[ಬದಲಾಯಿಸಿ]

ಚಲಚಿತ್ರದಲ್ಲಿ ನಟಿಸುವ ಮೊದಲು ಅರುಣಾ ಭಿಕ್ಶೂರವರಲ್ಲಿ ನಟನಾ ತರಬೇತಿ ಪಡೆದರು. ೨೦೦೬ರಲ್ಲಿ ಬಂದ ದೆವದಾಸು ತೆಲುಗು ಚಿತ್ರ ಇವರು ಅಭಿನಯಿಸಿದ ಮೊದಲ ಚಿತ್ರ. ಈ ಚಿತ್ರ ಗಲ್ಲಾಪೆಟ್ತಿಗೆಯಲ್ಲಿ ಧೂಳ್ ಯೆಬ್ಬಿಸಿ ₹ 140 ಮಿಲಿಯನ್ ಬಾಚಿಸಿತು. ನಂತರ ಪೊಕಿರಿ ಚಿತ್ರದಲ್ಲಿ ಏರೋಬಿಕ್ಸ್ ಶಿಕ್ಷಕಿಯಾಗಿ ನಟಿಸಿ ಭ್ರಷ್ಟ ಪೋಲೀಸ್ ಅಧಿಕಾರಿ ಇಂದ ಹಿಂಸೆ ಒಳ ಪಡುವ ಪಾತ್ರವನ್ನು ಅಭಿನಯಿಸಿದರು. ಇ ಚಿತ್ರವು ಆ ಸಮಯದಲ್ಲಿ ಅತ್ಯಾಧಿಕ ಹಣ ಗಳಿಸಿದ ಚಿತ್ರವಾಗಿ ಹೊರಬಂತು ಹಾಗು ಇಲೀನರವರ ಪಾತ್ರವನ್ನು ಮೆಚ್ಚಿದರು. ೨೦೦೬ರಲ್ಲಿ ಕೆಡಿ ಚಿತ್ರದ ಮೂಲಖ ತಮಿಳು ಚಿತ್ರರಂಗವನ್ನು ಪ್ರವೇಶಿಸಿದರು. ೨೦೧೨ ರಲ್ಲಿ ಅನುರಾಗ್ ಬಾಸು ನಿರ್ದೇಶಿಸಿದ ಬರ್ಫಿ ಚಿತ್ರದ ಮೂಲಖ ಬಾಲಿವುಡ್ಅನ್ನು ಪ್ರವೆಶಿಸಿದರು. ೨೦೧೪ ರಲ್ಲಿ ವರುನ್ ದವಣ್ ಹಾಗು ನರ್ಗಿಸ್ ಫಕ್ರಿಯೊಡಣೆ ಮೇ ತೆರಾ ಹೀರೊ ಚಲನಚಿತ್ರದಲ್ಲಿ ನಟಿಸಿದರು. ಈ ಚಿತ್ರ ಸೆಮಿ-ಹಿಟ್ ಚಿತ್ರ ಆಗಿತ್ತು. ೨೦೧೪ ನವೆಂಬರಿನಲ್ಲಿ ಸೈಫ್ ಅಲಿ ಖಾನ್ ರವರೋಡನೆ ಹಾಪಿ ಎನ್ಡಿಂಗ್ ಚಿತ್ರದಲ್ಲಿ ನಟಿಸಿದರು. ಈ ಚಿತ್ರ ಋಣಾತ್ಮಕ ವಿಮರ್ಶೆಗಳನ್ನು ಎದುರಿಸಿತು ಹಾಗು ಫ್ಲಾಪ್ ಆಯಿತು. ೨ ವರ್ಷ ನಂತರ ಅಕ್ಶಯ್ ಕುಮಾರ್ ರ್ವರೊಡನೆ ರುಸ್ತಮ್ ಚಿತ್ರದಲ್ಲಿ ನಟಿಸಿ ಚಿತ್ರರಂಗಕ್ಕೆ ವಪಾಸ್ ಆದರು. ಜುಲೈ ೨೦೧೭ ರಲ್ಲಿ ಅರ್ಜುನ್ ಕಪೂರ್ ಹಾಗು ಅನಿಲ್ ಕಪೂರ್ ರವರೊಡನೆ ಮುಬಾರಕಾಂ ಚಿತ್ರದಲ್ಲಿ ಅಭಿನಯಿಸಿ ಸಕಾರಾತ್ಮಕ ವಿಮರ್ಶೆಯನ್ನು ಗಳಿಸಿದರು. ನಂತರ ಬಂದ, ಅಜಯ್ ದೇವ್ಗನ್ ರೊಡನೆ ನಟಿಸಿದ ಬಾದ್ಸ್ಕಾಹೊ ಚಿತ್ರ ವಾಣಿಜ್ಯಗಳಿಕೆಯನ್ನು ನೀಡಿತು.[೬]

೨೦೧೭ ರಲ್ಲಿ ಅಜಯ್ ದೇವ್ಗನ್ ರೊಡನೆ ರೈಡ್ ಚಿತ್ರದಲ್ಲಿ ನಟಿಸಲಿದ್ದರೆ.[೭]

ಪ್ರಶಸ್ತಿ[ಬದಲಾಯಿಸಿ]

೨೦೦೭-ದೇವದಾಸು ತೆಲುಗು ಚಲನಚಿತ್ರಕ್ಕೆ ಫಿಲ್ಮ್ಫೇರ್ ಪ್ರಶಸ್ತಿ ದೊರಕಿದೆ.[೮]

೨೦೦೯ ಜಲ್ಸ ಚಲನಚಿತ್ರಕ್ಕೆ ಸಂತೊಷಂ ಚಲನಚಿತ್ರ ಪ್ರಶಸ್ತಿ ಹಾಗೂ ಸೌಥ್ ಸ್ಕೊಪ್ ಸ್ಟೈಲ್ ಪ್ರಶಸ್ತಿ ಲಭಿಸಿದೆ.

೨೦೧೨-ನಾನ್ಬನ್ ಚಲನಚಿತ್ರಕ್ಕೆ ವೋಗ್ ಬ್ಯುಟಿ ಪ್ರಶಸ್ತಿ ಹಾಗು ಇಟಿಸಿ ಬಾಲಿವುಡ್ ಪ್ರಶಸ್ತಿ ಸಿಕ್ಕಿದೆ.[೯]

೨೦೧೩-ಬರ್ಫಿ ಚಿತ್ರಕ್ಕೆ ಫಿಲ್ಮ್ಫೆರ್ ಪ್ರಶಸ್ತಿಯನ್ನು ಬಾಚಿದ್ದಾರೆ. ಇದರೊಡನೆ ಸ್ಟಾರ್ ಡಸ್ಟ್ ಪ್ರಶಸ್ತಿ, ಜೀ ಸಿನೆ ಪ್ರಸಸ್ತಿ, ಸ್ಕ್ರೀನ್ ಅವರ್ಡ್, ಸ್ಟಾರ್ ಗಿಲ್ಡ್ ಪ್ರಶಸ್ತಿ ಲಭಿಸಿದೆ.[೧೦]

ಉಲ್ಲೆಖ[ಬದಲಾಯಿಸಿ]

 1. https://www.indiaglitz.com/channels/telugu/review/8001.html
 2. https://timesofindia.indiatimes.com/entertainment/hindi/movie-reviews/phata-poster-nikhla-hero/movie-review/22807611.cms
 3. https://timesofindia.indiatimes.com/entertainment/hindi/bollywood/news/Akshay-Kumar-begins-Rustom-with-a-strong-ensemble-cast/articleshow/50706361.cms
 4. https://starsunfolded.com/ileana-dcruz-height-weight-age/
 5. http://specials.rediff.com/movies/2008/apr/25slid1.htm
 6. http://www.dnaindia.com/entertainment/report-check-pic-ileana-d-cruz-wraps-up-baadshaho-shoot-2343372
 7. https://mumbaimirror.indiatimes.com/entertainment/bollywood/ileana-dcruz-and-ajay-devgn-eunite-for-raj-kumar-guptas-raid/articleshow/60128254.cms
 8. https://www.indiaglitz.com/channels/telugu/review/8001.html
 9. https://www.filmibeat.com/tamil/movies/nanban/awards.html
 10. http://www.imdb.com/event/ev0000245/2012/1