ವಿಷಯಕ್ಕೆ ಹೋಗು

ಆ ದೃಶ್ಯ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

 


ಆ ದೃಶ್ಯ [] -2019 ರ ಭಾರತೀಯ ಕನ್ನಡ ಭಾಷೆಯ ನಿಯೋ-ನಾಯರ್ ಕ್ರೈಮ್ ಥ್ರಿಲ್ಲರ್ ಆಗಿದ್ದು ಕಾರ್ತಿಕ್ ನರೇನ್ ಬರೆದಿದ್ದಾರೆ ಮತ್ತು ಶಿವ ಗಣೇಶ್ ನಿರ್ದೇಶಿಸಿದ್ದಾರೆ. [] [] ಕೆ ಮಂಜು ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಕೆ. ಮಂಜು [] ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇದರಲ್ಲಿ ವಿ. ರವಿಚಂದ್ರನ್ [] [] ಪ್ರಮುಖ ಪಾತ್ರದಲ್ಲಿ ಅಚ್ಯುತ್ ಕುಮಾರ್, ರಮೇಶ್ ಭಟ್ ಮತ್ತು ಚೈತ್ರಾ ಆಚಾರ್ ಇದ್ದಾರೆ. ಚಿತ್ರಕ್ಕೆ ಸಂಗೀತ ಗೌತಮ್ ಶ್ರೀವಾಸ್ತ ಅವರದ್ದು , ಛಾಯಾಗ್ರಹಣ ಎ. ವಿನೋದ್ ಭಾರತಿ ಅವರದ್ದು . ಚಿತ್ರದ ಸಂಕಲನವನ್ನು ಸುರೇಶ್ ಅರುಮುಗಂ ಮಾಡಿದ್ದಾರೆ. ಈ ಚಿತ್ರವು 2016 ರ ತಮಿಳಿನ ಧುರುವಂಗಲ್ ಪಥಿನಾರು ಚಿತ್ರದ ರೀಮೇಕ್ ಆಗಿದ್ದು, ಅದರಲ್ಲಿ ರೆಹಮಾನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.

ಪಾತ್ರವರ್ಗ

[ಬದಲಾಯಿಸಿ]

ಬಿಡುಗಡೆ

[ಬದಲಾಯಿಸಿ]

ಚಲನಚಿತ್ರವನ್ನು ಮೊದಲು 18 ನವೆಂಬರ್ 2019 ರಂದು ಬಿಡುಗಡೆ ಮಾಡಲು ಯೋಜಿಸಲಾಗಿತ್ತು, ಆದರೆ ಹಿಂದಿನ ದಿನಾಂಕವನ್ನು ನವೆಂಬರ್ 8 ಕ್ಕೆ ಸ್ಥಳಾಂತರಿಸಲಾಯಿತು. [೧೦] [೧೧]

ಹಿನ್ನೆಲೆ ಸಂಗೀತ

[ಬದಲಾಯಿಸಿ]

ಚಿತ್ರದ ಹಿನ್ನೆಲೆ ಸಂಗೀತವನ್ನು ಗೌತಮ್ ಶ್ರೀವಸತಾ ಅವರು ಸಂಯೋಜಿಸಿದ್ದಾರೆ ಮತ್ತು ವಿ. ನಾಗೇಂದ್ರ ಪ್ರಸಾದ್ ಬರೆದಿದ್ದಾರೆ. ಸಂಗೀತದ ಹಕ್ಕುಗಳನ್ನು ಡಿ-ಬೀಟ್ಸ್ ಪಡೆದುಕೊಂಡಿದೆ

ವಿಮರ್ಶೆಗಳು

[ಬದಲಾಯಿಸಿ]

ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯು 3.5/5 ರೇಟಿಂಗ್ ಅನ್ನು ನೀಡಿತು ಮತ್ತು "ಈ ಚಿತ್ರವು ಮೂಲವನ್ನು ನೋಡದವರನ್ನು ಮನರಂಜಿಸುತ್ತದೆ ಅಷ್ಟೇ ಅಲ್ಲದೆ ಧ್ರುವಂಗಲ್ ಪತ್ತಿನಾರು ನೋಡಿದವರಿಗೆ ಕೂಡ ಇದು ನೋಡಲು ಯೋಗ್ಯವಾದ ಚಿತ್ರವಾಗಿದೆ. ಇಲ್ಲಿ ಚಿತ್ರದ ನಿರ್ಮಾಪಕರು ಯಶಸ್ವಿಯಾಗಿದ್ದಾರೆ. ಇತರ ಇಂಡಸ್ಟ್ರಿಗಳಿಂದ ಉತ್ತಮ ಚಲನಚಿತ್ರಗಳ ರೀಮೇಕ್‌ಗಳನ್ನು ಈ ರೀತಿ ಒದಗಿಸಿದರೆ, ಪ್ರೇಕ್ಷಕರು ಆತ್ಮವಿಶ್ವಾಸದಿಂದ ಹೆಚ್ಚಿನದನ್ನು ಬಯಸಬಹುದು." [೧೨]

ಬೆಂಗಳೂರು ಮಿರರ್ 3.5/5 ರೇಟಿಂಗ್ ನೀಡಿ "ರವಿಚಂದ್ರನ್ ಅವರ ಪಾತ್ರಗಳು ಒಟ್ಟಾರೆ ಕಥೆಯಲ್ಲಿ ನಿರೂಪಣೆಯನ್ನು ತುಂಬುತ್ತದೆ" ಎಂದು ಬರೆದಿದೆ [೧೩]

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ 3/5 ರೇಟಿಂಗ್ ನೀಡಿತು ಮತ್ತು "ಕ್ರೇಜಿ ಸ್ಟಾರ್ ರವಿಚಂದ್ರನ್ ಅವರನ್ನು ಗಮನದಲ್ಲಿಟ್ಟುಕೊಂಡು ರಹಸ್ಯಮಯ ಚಿತ್ರವನ್ನು ನೋಡಲು ಬಯಸುವ ಎಲ್ಲರಿಗೂ ಈ ಚಿತ್ರವು ರೋಮಾಂಚಕ ಆಗಬಹುದು" ಎಂದು ಬರೆದಿದೆ. [೧೪]

ಉಲ್ಲೇಖಗಳು

[ಬದಲಾಯಿಸಿ]
  1. "Ravichandran's upcoming film named 'Aa Drishya'". The New Indian Express. Retrieved 2019-11-16.
  2. "ಹಿರೋಯಿನ್ ಇಲ್ಲದ 'ಆ ದೃಶ್ಯ'ದಲ್ಲಿ ರವಿಚಂದ್ರನ್ ಅಸಾಮಾನ್ಯ ಪಾತ್ರ- ನಿರ್ದೇಶಕ ಶಿವ ಗಣೇಶ್". Kannadaprabha. Retrieved 2019-11-16.
  3. "Viewers can expect an unusual character from Ravichandran in Aa Drushya, says director Shiva Ganesh". The New Indian Express. Retrieved 2019-11-16.
  4. "K Manju talks about his film, Aa Drushya". The Times of India (in ಇಂಗ್ಲಿಷ್). Retrieved 2019-11-16.
  5. "Ravichandran has two looks in new murder mystery". The Times of India (in ಇಂಗ್ಲಿಷ್). Retrieved 2019-11-16.
  6. "Ravichandran returns with a murder mystery". The Times of India (in ಇಂಗ್ಲಿಷ್). Retrieved 2019-11-16.
  7. "Crazy Star Ravichandran has two different age group looks in his next!". in.com (in ಇಂಗ್ಲಿಷ್). Archived from the original on 2019-02-22. Retrieved 2019-11-16.
  8. "'I don't have a heroine or a song in Aa Drushya'". The Times of India (in ಇಂಗ್ಲಿಷ್). Retrieved 2019-11-16.
  9. "Ravichandran: My vision is too extensive for contemporary directors to understand". The New Indian Express. Retrieved 2019-11-16.
  10. "Ravichandran's 'Aa Drushya' to release ahead of Aayushman Bhava". The Times of India (in ಇಂಗ್ಲಿಷ್). Retrieved 2019-11-16.
  11. "ಆ ದೃಶ್ಯ' ನೋಡೋಕೆ ಮೊದಲೇ ಬೇಡಿಕೆ". Udayavani - ಉದಯವಾಣಿ. Retrieved 2019-11-16.
  12. "Aa Drushya Movie Review: A gripping whodunnit tale". Retrieved 2019-11-16.
  13. Prasad, Shyam (November 8, 2019). "Aa Drushya movie review: Ravichandran's parade of characters fill up the narrative in overall story". Bangalore Mirror (in ಇಂಗ್ಲಿಷ್). Retrieved 2019-11-16.
  14. "'Aa Drushya' movie review: A narrative that captivates the viewer". The New Indian Express. Retrieved 2019-11-16.

ಬಾಹ್ಯ ಕೊಂಡಿಗಳು

[ಬದಲಾಯಿಸಿ]