ಆಷಾಢ ಏಕಾದಶಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶಯನಿ ಏಕಾದಶಿ , ಮಹಾ ಏಕಾದಶಿ , ಪ್ರಥಮ ಏಕಾದಶಿ , ಪದ್ಮ ಏಕಾದಶಿ , ದೇವಶಯನಿ  ಏಕಾದಶಿ , ದೇವಪೋಢಿ ಏಕಾದಶಿ ಎಂಬ ಹೆಸರುಗಳಿಂದ ಕರೆಯಲಾಗುವ ಈ ದಿನವು  ಹಿಂದೂ ತಿಂಗಳು ಆಷಾಢ (ಜೂನ್ - ಜುಲೈ)  ಶುಕ್ಲ ಪಕ್ಷದ   ಹನ್ನೊಂದನೇ  ದಿನ (ಏಕಾದಶಿ) ಆದ್ದರಿಂದ . ಇದನ್ನು ಆಷಾಢ ಏಕಾದಶಿ[೧] ಅಥವಾ ಆಷಾಢಿ  ಎಂದೂ ಕರೆಯಲಾಗುತ್ತದೆ. ಇದನ್ನು ತೆಲುಗು ಭಾಷೆಯಲ್ಲಿ  ತೊಲಿ ಏಕಾದಶಿ ಎಂದು ಕರೆಯುತ್ತಾರೆ.  ಈ ಪವಿತ್ರ ದಿನವು     ಹಿಂದೂ  ಸ್ಥಿತಿಕರ್ತ ದೇವರು ವಿಷ್ಣುವಿನ ಅನುಯಾಯಿಗಳಾದ ವೈಷ್ಣವರಿಗೆ ವಿಶೇಷ ಮಹತ್ವವುಳ್ಳದ್ದಾಗಿದೆ.   ಈ ದಿನ ವಿಷ್ಣು ಮತ್ತು ಲಕ್ಷ್ಮಿ  ಇವರ ಪೂಜೆ ಮಾಡಲಾಗುತ್ತದೆ, ಇಡೀ ರಾತ್ರಿಯನ್ನು  ಪ್ರಾರ್ಥನೆ, ಭಜನೆಗಳಲ್ಲಿ  ಕಳೆಯುತ್ತಾರೆ.  ಭಕ್ತರು  ಉಪವಾಸವಿದ್ದು , ಮುಂದಿನ ನಾಲ್ಕು ತಿಂಗಳ ಕಾಲ (ಚಾತುರ್ಮಾಸ) ದ ಆಚರಿಸಬೇಕಾದ ವ್ರತಗಳನ್ನು ಈ ದಿನ ಇಟ್ಟುಕೊಳ್ಳುತ್ತಾರೆ. ಇದು ಯಾವುದಾದರು ಆಹಾರಪದಾರ್ಥವನ್ನು ಬಿಡುವ  ಬಗ್ಗೆ   ಮತ್ತು ಪ್ರತಿ ಏಕಾದಶಿ ದಿನ ಉಪವಾಸವನ್ನು ಆಚರಿಸುವ ಬಗ್ಗೆ ಇರುತ್ತದೆ.[೨] ವಿಷ್ಣುವು ಕ್ಷೀರಸಾಗರದಲ್ಲಿ ಆದಿಶೇಷನ ಮೇಲೆಗೆ ಈದಿನ ಮಲಗಿ ನಿದ್ದೆ ಮಾಡುತ್ತಾನೆ ಎಂಬ ನಂಬಿಕೆ ಇದೆ. [೩]  ಈ ಕಾರಣದಿಂದ ಇದನ್ನು ದೇವಶಯನಿ ಏಕಾದಶಿ ಅಥವಾ ಹರಿ-ಶಯನಿ  ಎಂದು  ಕರೆಯಲಾಗುತ್ತದೆ. ವಿಷ್ಣುವು ನಾಲ್ಕು ತಿಂಗಳ ನಂತರ  ಬರುವ ಪ್ರಬೋಧಿನಿ ಏಕಾದಶಿಯಂದು ತನ್ನ ನಿದ್ದೆಯಿಂದ ಎಚ್ಚತ್ತುಕೊಳ್ಳುತ್ತಾನೆ.   ಈ ನಾಲ್ಕು ತಿಂಗಳ ಅವಧಿಯನ್ನು ಚಾತುರ್ಮಾಸ ಎಂದು ಕರೆಯುತ್ತಾರೆ.  ಈ ಹೊತ್ತಿಗೆ ಮಳೆಗಾಲ  ಇರುತ್ತದೆ. ಹೀಗಾಗಿ, ಶಯನಿ ಏಕಾದಶಿಯು ಚಾತುರ್ಮಾಸದ  ಆರಂಭ.  ಭಕ್ತರು ವಿಷ್ಣುವಿನ  ಪ್ರೀತ್ಯರ್ಥ ಚಾತುರ್ಮಾಸ ವ್ರತವನ್ನು ಆಚರಿಸಲು   ಈ ದಿನ  ಆರಂಭಿಸುತ್ತರೆ.[೪] ಈ ದಿನ ಉಪವಾಸವನ್ನು   ಆಚರಿಸಲಾಗುತ್ತದೆ. ಈ ಉಪವಾಸದಲ್ಲಿ  ಕೆಲವು ಅಹಾರಪದಾರ್ಥಗಳನ್ನು ಸೇವಿಸುವದಿಲ್ಲ.  

ಮಹತ್ವ[ಬದಲಾಯಿಸಿ]

ಭವಿಷ್ಯೋತ್ತರಪುರಾಣ ಗ್ರಂಥದಲ್ಲಿ ದೇವ ಕೃಷ್ಣ ನು ಈ ದಿನದ ಮಹತ್ವವನ್ನು  ಯುಧಿಷ್ಠಿರನಿಗೆ , ಸೃಷ್ಟಿಕರ್ತ-ದೇವರ ಬ್ರಹ್ಮನು ತನ್ನ ಮಗ ನಾರದನಿಗೆ ಹೇಳಿದಂತೆ ,   ವಿವರಿಸಿದ್ದಾನೆ .   

ಪಂಢರಪುರ ಯಾತ್ರೆ[ಬದಲಾಯಿಸಿ]

ಪಂಢರಾಪುರದ ವಿಠ್ಠಲನ ಚಿತ್ರ

ಈ ದಿನ  ಭಕ್ತರ  ಯಾತ್ರೆಯು ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆಯ  ಪಂಢರಪುರದಲ್ಲಿ ಕೊನೆಗೊಳ್ಳುತ್ತದೆ.  ಪಂಢರಪುರವು ವಿಷ್ಣುವಿನ ಸ್ಥಳೀಯ ರೂಪವಾದ ವಿಠ್ಠಲನ ಆರಾಧನೆಯ ಕೇಂದ್ರವಾಗಿದ್ದು ಚಂದ್ರಭಾಗಾ ನದಿಯ ದಂಡೆಯಮೇಲಿದೆ.  ಮಹಾರಾಷ್ಟ್ರ ಮತ್ತು ನೆರೆಯ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಈ ದಿನ ಇಲ್ಲಿಗೆ ಬರುತ್ತಾರೆ. 

References[ಬದಲಾಯಿಸಿ]

  1. 'ಧರ್ಮಗ್ರಂಥ', ಆಷಾಢ ಏಕಾದಶಿ
  2. Bhargava, Gopal K; S. C. Bhatt. Land and people of Indian states and union territories. Vol. 8. p. 506.
  3. Fasts and Festivals of India (2002) By Manish Verma.
  4. Shayana Ekadashi Archived 2009-03-04 ವೇಬ್ಯಾಕ್ ಮೆಷಿನ್ ನಲ್ಲಿ. ISKCON