ವಿಷಯಕ್ಕೆ ಹೋಗು

ಆಳಿಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಳಿಕೆ ಎಂದರೆ ಆಡಳಿತ ನಡೆಸುವ ಎಲ್ಲ ಪ್ರಕ್ರಿಯೆಗಳು. ಕುಟುಂಬ, ಬುಡಕಟ್ಟು, ವಿಧ್ಯುಕ್ತ ಅಥವಾ ಅನೌಪಚಾರಿಕ ಸಂಸ್ಥೆ ಅಥವಾ ಪ್ರಾಂತದ ಮೇಲೆ ಆಳಿಕೆಯನ್ನು ಸರ್ಕಾರ, ಮಾರುಕಟ್ಟೆ ಅಥವಾ ಜಾಲ ಕೈಗೊಳ್ಳಬಹುದು. ಆಳಿಕೆಯನ್ನು ಒಂದು ಸಂಘಟಿತ ಸಮಾಜದ ಕಾನೂನುಗಳು, ರೂಢಿಗಳು, ಅಧಿಕಾರ ಅಥವಾ ಭಾಷೆಯಿಂದ ಕೈಗೊಳ್ಳಬಹುದು.[೧] ಇದು ಒಂದು ಸಾಮೂಹಿಕ ಸಮಸ್ಯೆಯಲ್ಲಿ ಒಳಗೊಂಡ ಕಾರ್ಯಭಾಗಿಗಳ ನಡುವಿನ ಪರಸ್ಪರ ಕ್ರಿಯೆ ಮತ್ತು ನಿರ್ಧಾರ ಮಾಡುವಿಕೆಯ ಪ್ರಕ್ರಿಯೆಗಳಿಗೆ ಸಂಬಂಧಿತವಾಗಿದೆ. ಇದರಿಂದ ಸಾಮಾಜಿಕ ರೂಢಿಗಳು ಅಥವಾ ಸಂಸ್ಥೆಗಳ ಸೃಷ್ಟಿ, ಬಲವರ್ಧನೆ ಅಥವಾ ಪುನರುತ್ಪಾದನೆ ಉಂಟಾಗುತ್ತದೆ. ಸಾಮಾನ್ಯ ಶಬ್ದಗಳಲ್ಲಿ, ಇದನ್ನು ವಿಧ್ಯುಕ್ತ ಸಂಸ್ಥೆಗಳ ನಡುವೆ ಇರುವ ರಾಜಕೀಯ ಪ್ರಕ್ರಿಯೆಗಳು ಎಂದು ವಿವರಿಸಬಹುದು.

(ಸಾಮಾನ್ಯವಾಗಿ ಆಡಳಿತ ಸಮಿತಿಗಳು ಎಂದು ಕರೆಯಲ್ಪಡುವ) ವಿವಿಧ ಘಟಕಗಳು ಆಡಳಿತ ನಡೆಸಬಹುದು. ಸರ್ಕಾರವು ಅತ್ಯಂತ ವಿಧ್ಯುಕ್ತವಾದುದಾಗಿದೆ. ಸರ್ಕಾರವು ಕಾನೂನುಗಳನ್ನು ರಚಿಸುವ ಮೂಲಕ (ರಾಜ್ಯದಂತಹ) ಒಂದು ನಿರ್ದಿಷ್ಟ ಭೂರಾಜ್ಯಶಾಸ್ತ್ರೀಯ ವ್ಯವಸ್ಥೆಯಲ್ಲಿ ಬಂಧನಕಾರಕ ನಿರ್ಧಾರಗಳನ್ನು ಮಾಡುವ ಏಕೈಕ ಜವಾಬ್ದಾರಿ ಮತ್ತು ಅಧಿಕಾರ ಹೊಂದಿರುವ ಒಂದು ಸಂಸ್ಥೆ. ಆಡಳಿತದ ಇತರ ಬಗೆಗಳಲ್ಲಿ ಸಂಸ್ಥೆ (ಸರ್ಕಾರದಿಂದ ಕಾನೂನುಬದ್ಧ ಘಟಕವೆಂದು ಗುರುತಿಸಲ್ಪಟ್ಟಿರುತ್ತದೆ), ಸಮಾಜ-ರಾಜಕೀಯ ಗುಂಪು (ರಾಜತ್ವ, ಬುಡಕಟ್ಟು, ಕುಟುಂಬ, ಧಾರ್ಮಿಕ ಪಂಥ, ಇತ್ಯಾದಿ), ಅಥವಾ ಜನರ ಮತ್ತೊಂದು ಅನೌಪಚಾರಿಕ ಗುಂಪು ಸೇರಿವೆ. ವ್ಯಾಪಾರ ಮತ್ತು ಹೊರಗುತ್ತಿಗೆ ಸಂಬಂಧಗಳಲ್ಲಿ, ಆಡಳಿತ ಚೌಕಟ್ಟುಗಳನ್ನು ಸಂಬಂಧಾತ್ಮಕ ಒಪ್ಪಂದಗಳಲ್ಲಿ ರೂಪಿಸಲಾಗಿರುತ್ತದೆ. ಇವು ದೀರ್ಘಕಾಲೀನ ಸಹಯೋಗ ಮತ್ತು ನಾವೀನ್ಯತೆಗಳನ್ನು ಪೋಷಿಸುತ್ತವೆ. ದುರ್ಬಲ ಆಡಳಿತವು ಒಪ್ಪಂದ ವೈಫಲ್ಯಕ್ಕೆ ಕಾರಣವಾಗಬಲ್ಲದು.

ಆಳಿಕೆಯು ನಿಯಮಗಳು, ರೂಢಿಗಳು ಮತ್ತು ಕ್ರಿಯೆಗಳು ರೂಪಗೊಂಡಿರುವ, ಎತ್ತಿಹಿಡಿಯಲ್ಪಟ್ಟಿರುವ, ನಿಯಂತ್ರಿತವಾಗಿರುವ ಮತ್ತು ಜವಾಬ್ದಾರವಾಗಿರುವ ರೀತಿಯಾಗಿದೆ. ವಿಧ್ಯುಕ್ತತೆಯ ಪ್ರಮಾಣ ಒಂದು ನಿರ್ದಿಷ್ಟ ಸಂಸ್ಥೆಯ ಆಂತರಿಕ ನಿಯಮಗಳು ಮತ್ತು ಬಾಹ್ಯವಾಗಿ, ಅದರ ವ್ಯಾಪಾರ ಭಾಗೀದಾರರನ್ನು ಅವಲಂಬಿಸಿರುತ್ತದೆ. ಆಳಿಕೆಯು ಅನೇಕ ರೂಪಗಳನ್ನು ತೆಗೆದುಕೊಳ್ಳಬಹುದು ಮತ್ತು ಅನೇಕ ಭಿನ್ನ ಪ್ರೇರಣೆಗಳು ಮತ್ತು ಅನೇಕ ಭಿನ್ನ ಫಲಿತಾಂಶಗಳಿಂದ ಚಾಲಿತವಾಗಿರುತ್ತದೆ. ಉದಾಹರಣೆಗೆ, ಒಂದು ಸರ್ಕಾರವು ಪ್ರಜಾಪ್ರಭುತ್ವವಾಗಿ ಕಾರ್ಯನಿರ್ವಹಿಸಬಹುದು. ಇದರಲ್ಲಿ ಪ್ರಜೆಗಳು ಯಾರು ಆಡಳಿತ ನಡೆಸಬೇಕೆಂಬುದನ್ನು ಮತ ಚಲಾಯಿಸಿ ನಿರ್ಧರಿಸುತ್ತಾರೆ ಮತ್ತು ಸಾರ್ವಜನಿಕ ಹಿತ ಗುರಿಯಾಗಿರುತ್ತದೆ. ಒಂದು ಸರ್ಕಾರೇತರ ಸಂಸ್ಥೆಯ ಆಡಳಿತವನ್ನು ಒಂದು ನಿರ್ದೇಶಕರ ಒಂದು ಸಣ್ಣ ಮಂಡಳಿ ನಡೆಸಬಹುದು ಮತ್ತು ಇದು ಹೆಚ್ಚು ನಿರ್ದಿಷ್ಟ ಗುರಿಗಳನ್ನು ಬೆನ್ನಟ್ಟಿರಬಹುದು. ಜೊತೆಗೆ, ನಿರ್ಧಾರ ಮಾಡುವಿಕೆಯ ಶಕ್ತಿ ಇರದ ವಿವಿಧ ಬಾಹ್ಯ ಕಾರ್ಯಭಾಗಿಗಳು ಆಳಿಕೆ ಪ್ರಕ್ರಿಯೆ ಮೇಲೆ ಪ್ರಭಾವ ಬೀರಬಲ್ಲವು. ಇವುಗಳಲ್ಲಿ ಪ್ರಭಾವ ಗುಂಪುಗಳು, ವಿಚಾರ ವೇದಿಕೆಗಳು, ರಾಜಕೀಯ ಪಕ್ಷಗಳು, ಸರ್ಕಾರೇತರ ಸಂಸ್ಥೆಗಳು ಮತ್ತು ಮಾಧ್ಯಮಗಳು ಸೇರಿವೆ.

ಉಲ್ಲೇಖಗಳು[ಬದಲಾಯಿಸಿ]

  1. Bevir, Mark (2013). Governance: A very short introduction. Oxford, UK: Oxford University Press.
"https://kn.wikipedia.org/w/index.php?title=ಆಳಿಕೆ&oldid=815486" ಇಂದ ಪಡೆಯಲ್ಪಟ್ಟಿದೆ