ಆರ್ಕಿಯನ್ ಕಲ್ಪ
ನಾಲ್ಕು ಕಲ್ಪಗಳು
೫೪೧ - ೦* | ಫನರೊಜೋಯಿಕ್ |
೨೫೦೦-೫೪೧* | ಪ್ರೊಟೆರೊಜೋಯಿಕ್ |
೪೦೦೦ -೨೫೦೦ * | ಆರ್ಕಿಯನ್ |
೪೬೦೦- ೪೦೦೦ * | ಹಡೇಯನ್ |
*ದಶಲಕ್ಷ ವರುಷಗಳ ಹಿಂದೆ
ಆರ್ಕಿಯನ್ ಕಲ್ಪದ[೧] ಕಾಲಮಾನ ೪೦೦೦ ದಿಂದ ೨೫೦೦ ದಶಲಕ್ಷ ವರುಷಗಳ ಹಿಂದೆ. ಭೂಚಿಪ್ಪು ಮತ್ತು ಪದರಗಳು ಇನ್ನೂ ಆಗತಾನೇ ರೂಪಗೊಂಡಿದ್ದವು. ಭೂಮಿಯು ಹಡೇಯನ್ ಕಾಲಮಾನಕ್ಕಿಂತ ಹೆಚ್ಚು ತಂಪಾಗಿದ್ದು, ಖಂಡಗಳು ರೂಪಗೊಳ್ಳಲು ಸಹಾಯಕವಾಯಿತು. ಈ ಕಲ್ಪದ ಆರಂಭದಲ್ಲಿ ಬಿಸುಪು ಈಗ ಇರುವದಕ್ಕಿಂತ ಮೂರರಷ್ಟು ಇತ್ತು ಮತ್ತು ಈ ಕಲ್ಪದ ಕೊನೆಗೆ (ಪ್ರೊಟೆರೊಜೋಯಿಕ್ ಕಲ್ಪದ ಆರಂಭಕ್ಕೆ ೨೫೦೦ ದವಹಿಂ) ಈ ಹರಿವು ಈಗಿರುವಷ್ಟರ ಎರಡರಷ್ಟಕ್ಕೆ ಕಡಿಮೆಯಾಯಿತು. ಹೆಚ್ಚುವರಿ ತಾಪಮಾನವು ಭೂಮಿಯ ತಣ್ಣಗಾಗುವಿಕೆ ಪ್ರಕ್ರಿಯೆಯಲ್ಲಿ ಉಳಿದ ಬಿಸುಪು, ಭೂಮಿಯ ತಿರುಳು ರೂಪಗೊಳ್ಳುವಿಕೆಯ ಬಿಸುಪು ಮತ್ತು ವಿಕಣಪಟುತ್ವದ ಧಾತುಗಳು ಉತ್ಪಾದಿಸಿದ ಬಿಸುಪುಗಳ ಮಿಶ್ರಣ. ಈ ಕಾಲಮಾನದ ಕಲ್ಲುಗಳು ರೂಪಾಂತರ ಕಲ್ಲುಗಳು ಅಥವಾ ಅಗ್ನಿಶಿಲೆಗಳು (ಭೂಗರ್ಭದ ತಾಪದಿಂದ ಉಂಟಾದ ಕಲ್ಲುಗಳು).
ವಾತಾವರಣ
[ಬದಲಾಯಿಸಿ]ಈ ಕಾಲಮಾನದಲ್ಲಿ ಬಹುತೇಕ ಆಮ್ಲಜನಕ ರಹಿತ ವಾತಾವರಣವಿತ್ತು ಎಂದು ಭಾವಿಸಲಾಗಿದೆ. ಖಗೋಳಶಾಸ್ತ್ರಜ್ಞರು ಸೂರ್ಯ ಅಂದು ಈಗಿರುವ ಬೆಳಕಿನ ಶೇ ೭೦ ರಿಂದ ೭೫ರಷ್ಟು ಕೊಡುತ್ತಿದ್ದೆ ಎಂದು ಅಂದಾಜಿಸಿದಾಗಲೂ ಭೂಮಿ ರೂಪಗೊಂಡ ೫೦೦ ದಶಲಕ್ಷ ವರುಷಗಳಲ್ಲಿಯೇ ಬಹುತೇಕ ಇಂದಿನ ತಾಪಮಾನ ಪಡೆಯುವುದು ಅಚ್ಚರಿ ಮೂಡಿಸುತ್ತದೆ. ನೀರಿನ ದ್ರವರೂಪದ ಇರುವಿಕೆಗೆ ಗ್ನೈಸ್‌ನ (ಪದರಗಳ ರೂಪಾಂತರ ಕಲ್ಲು) ರೂಪಾಂತರಗೊಂಡ ಗಷ್ಟು ಕಲ್ಲು ಪುರಾವೆ ನೀಡುತ್ತದೆ. ಒಂದೇ ರೀತಿಯ ತಾಪಮಾನ ಇರುವಿಕೆಯು ಭೂಮಿಯ ಇತಿಹಾಸದ ನಂತರದ ಕಾಲದಲ್ಲಿ ಇರುವದಕ್ಕಿಂತ ಹೆಚ್ಚು ಹಸಿರುಮನೆ ಅನಿಲಗಳ ಇರುವಿಕೆಯನ್ನು ಪ್ರತಿಬಿಂಬಿಸುತ್ತದೆ.[೨][೩] ಅಥವಾ ಬದಲೀ ವಿವರಣೆಯು ಕಡಿಮೆ ಭೂಮಿ ಮತ್ತು ಮೋಡಗಳ ಸುತ್ತುವರೆಯುವಿಕೆಯ ಕಾರಣಕ್ಕೆ ಪ್ರತಿಫಲನಾಂಕವು (ತಾನು ಪಡೆಯುವ ಎಲೆಕ್ಟ್ರೊಮಾಗ್ನಟಿಕ್ ಕಿರಣಗಳನ್ನು ಪ್ರತಿಪಲಿಸುವುದು) ಅಂದು ಕಡಿಮೆ ಇದ್ದಿರ ಬೇಕು.[೪]
ಭೂಗೋಳ
[ಬದಲಾಯಿಸಿ]ಈ ಕಾಲಮಾನದ ಕೊನೆಗೆ ೨೫೦೦ ದವಹಿಂ ಭೂಫಲಕಗಳ ಚಟುವಟಿಕೆ ಬಹುತೇಕ ಇಂದಿನಂತಯೇ ಇತ್ತು. ಕೆಲವು ಖನಿಜ ಕಾಳುಗಳು ಹಡೇಯನ್ ಕಲ್ಪದವು ದೊರತಾಗಲೂ ಭೂಮಿಯ ಮೇಲಿನ ತೀರ ಪುರಾತನ ಕಲ್ಲುಗಳು ರೂಪಗೊಂಡುದು ಈಕಲ್ಪದ ಅಥವಾ ತುಸು ನಂತರದ ಕಾಲಮಾನದಲ್ಲಿ. ಆರ್ಕಿಯನ್ ಕಾಲಮಾನದ ಕಲ್ಲುಗಳು ಗ್ರೀನ್‌ಲ್ಯಾಂಡ್, ಕೆನಡ ಗುರಾಣಿ (ಶೀಲ್ಡ್ -ಗಟ್ಟಿಯಾದ ಭೂಚಿಪ್ಪಿನ ಶಿಲಾ ಪ್ರದೇಶ), ಅಮೇರಿಕ ಸಂಯುಕ್ತ ಸಂಸ್ಥಾನದ ಪಶ್ಚಿಮದ ಪ್ರದೇಶಗಳಾದ ಮೊಂಟಾನ ಮತ್ತು ವೊಯಮಿಂಗ್, ಬಾಲ್ಟಿಕ್ ಗುರಾಣಿ, ಸ್ಕಾಟ್ಲೆಂಡ್, ಭಾರತ, ಬ್ರೆಜಿಲ್ ಮತ್ತು ಆಫ್ರಿಕಾದ ದಕ್ಷಿಣ ಭಾಗದಲ್ಲಿ ಕಂಡುಬರುತ್ತವೆ. ಮೊದಲ ಖಂಡಗಳು ಈ ಕಲ್ಪಗಳಲ್ಲಿ ರೂಪಗೊಂಡಾಗ್ಯೂ ಇಂದಿನ ಜಾಗತಿಕ ಕ್ರೆಟಾನ್‌ಗಳ ಶೇ ೭ರಷ್ಟು ಮಾತ್ರ ಅರ್ಕಿಯನ್ ಕಲ್ಲುಗಳಿಂದ ರೂಪಗೊಂಡಿವೆ. ಹಿಂದೆ ರೂಪಗೊಂಡುದರ ನಶಿಸುವಿಕೆ ಮತ್ತು ನಾಶಕ್ಕೆ ಅವಕಾಶ ಮಾಡಿಕೊಟ್ಟಾಗಲೂ ಭೂಚಿಪ್ಪಿನ ಶೇ ೫-೪೦ ರಷ್ಟು ಮಾತ್ರ ಈ ಕಾಲಮಾನದಲ್ಲಿ ರೂಪಗೊಂಡಿದೆ.[೫]: pp 301-302 ಪ್ರೊಟೆರೊಜೋಯಿಕ್ ಕಲ್ಲುಗಳಂತಲ್ಲದೆ ಈ ಕಲ್ಪದ ಕಲ್ಲುಗಳು ರೂಪಾಂತರ ಗೊಂಡ ಆಳವಾದ ನೀರಿನಲ್ಲಿನ ಗಷ್ಟಿನಿಂದ ಆದವು. ಇದಕ್ಕೆ ಮಣ್ಣುಕಲ್ಲು, ಜ್ವಾಲಾಮುಖಿಯ ಗಷ್ಟು ಮತ್ತು ಪಟ್ಟಿ ಕಬ್ಬಿಣ ಶಿಲೆಗಳು ಉದಾಹರಣೆಗಳು. ಕಾರ್ಬೊನೇಟ್ ಕಲ್ಲುಗಳು ವಿರಳ ಮತ್ತು ಇದು ಈ ಕಲ್ಪದಲ್ಲಿ ಪ್ರೊಟೆರೊಜೋಯಿಕ್ ಕಲ್ಪಕ್ಕಿಂತ ಹೆಚ್ಚು ಇಂಗಾಲ ಡೈಆಕ್ಸೈಡ್ ಸಾಗರ ನೀರಿನಲ್ಲಿ ಕರಗಿ ಅದನ್ನು ಆಮ್ಲೀಯವಾಗಿಸಿತ್ತು ಎಂದು ಸೂಚಿಸುತ್ತದೆ.[೬] ಹಸಿರುಕಲ್ಲಿನ ಪಟ್ಟಿ (ಗ್ರೀನ್‌ಸ್ಟೋನ್ ಬೆಲ್ಟ್) ಆರ್ಕಿಯಿನ್ ಕಾಲಮಾನದ ಮಾದರಿ ಕಲ್ಲು ಮತ್ತು ಇದರಲ್ಲಿ ಒಂದರ ನಂತರ ಒಂದು ಮಾಫಿಕ್ (ಮೆಗ್ನಿಸಿಯಂ ಮತ್ತು ಕಬ್ಬಿಣ ಹೆಚ್ಚು ಇರುವ ಸಿಲಿಕೇಟ್ ಖನಿಜ) ಅಗ್ನಿಶಿಲೆ ಮತ್ತು ಗಷ್ಟು ಶಿಲೆಗಳು ಬರುತ್ತವೆ.
ಜೀವಿಗಳು
[ಬದಲಾಯಿಸಿ]ಯಾವ ಪ್ರಕ್ರಿಯೆಯಿಂದ ಭೂಮಿಯ ಮೇಲೆ ಜೀವಿಗಳು ಉಂಟಾದವು ಎಂಬುದು ಸ್ಪಷ್ಟವಾಗಿ ತಿಳಿದಿಲ್ಲ. ಆದಾಗ್ಯೂ ಹಡೇಯನ್ ಕಲ್ಪದ ಕೊನೆಗೆ ಅಥವಾ ಆರ್ಕಿಯನ್ ಕಲ್ಪದ ಆರಂಭದಲ್ಲಿ ಜೀವಿಗಳ ಉಗಮ ಉಂಟಾಯಿತು ಎನ್ನಲು ಸಾಕಷ್ಟು ಪುರಾವೆಗಳಿವೆ. ಜೀವಿಗಳ ಇಂಗಾಲ ಉತ್ಪನ್ನ ಜಿರ್ಕಾನ್‌ನೊಂದಿಗೆ ೪೧೦೦ ದವಹಿಂ ಕಂಡು ಬಂದಿದೆ, ಆದರೆ ಈ ಪುರಾವೆ ಪ್ರಾಥಮಿಕವಾದುದು ಮತ್ತು ಇದು ಇನ್ನೂ ಅಂಗೀಕಾರ್ಹವಾಗ ಬೇಕಿದೆ.[೭] ಹೆಚ್ಚು ಖಚಿತ ಪರೋಕ್ಷ ಪುರಾವೆ ಕಬ್ಬಿಣ ಪಟ್ಟಿ ಶಿಲೆಗಳದು. ಈ ರೀತಿಯ ಪಟ್ಟಿಗಳಾಗ ಬೇಕಾದರೆ ಆಮ್ಲಜನಕವು ದೊರೆಯ ಬೇಕಿದ್ದು ಈ ಕಲ್ಪದಲ್ಲಿನ ಒಂದೇ ಒಂದು ಆಮ್ಲಜನಕದ ಮೂಲ ದ್ಯುತಿಸಂಶ್ಲೇಷಣೆ. ಇದು ಜೀವಿಯ ಇರುವಿಕೆಯನ್ನು ಸೂಚಿಸುತ್ತದೆ. ಮೊದಲ ಗುರುತಿಸ ಬಹುದಾದ ಜೀವಿಗಳ ಪಳೆಯುಳಿಕೆಗಳ ಪುರಾವೆ ಸೂಕ್ಷ್ಮಜೀವಿಗಳಿಂದಾದ ಸ್ಟ್ರೋಮೊಲೈಟ್‌ಗಳದು. ಇದರ ಕಾಲಮಾನ ೩೫೦೦ ದವಹಿಂ.[೮]
ಆರ್ಕಿಯನ್ ಯುಗಗಳು
[ಬದಲಾಯಿಸಿ]ಆರ್ಕಿಯನ್ ಕಲ್ಪವನ್ನು ನಾಲ್ಕು ಯುಗಗಳಾಗಿ ವಿಭಜಿಸಲಾಗಿದೆ. ಅವು ಇಯೊಆರ್ಕಿಯನ್, ಪಾಲಿಯೊಆರ್ಕಿಯನ್, ಮೀಸೊಆರ್ಕಿಯನ್ ಮತ್ತು ನಿಯೊಆರ್ಕಿಯನ್ ಯುಗಗಳು.
ಈ ಯುಗದ ಕಾಲಮಾನ ೪೦೦೦ – ೩೬೦೦ ದವಹಿಂ. ಭೂಮಿಯ ಮೊದಲ ಸಲ ಭೂಚಿಪ್ಪನ್ನು ಹೊಂದಿತು. ಈ ಚಿಪ್ಪು ಪೂರ್ಣವಾಗಿರಲಿಲ್ಲ ಮತ್ತು ಕೆಲವು ಭಾಗಗಳಲ್ಲಿ ಶಿಲಾದ್ರವ ಇನ್ನೂ ಇತ್ತು. ಉಲ್ಕೆಗಳ ದೊಡ್ಡ ಮಟ್ಟದ ಪಾತವು ಇದರ ಒಂದು ಲಕ್ಷಣ. ಗ್ರೀನ್‌ಲ್ಯಾಂಡಿನ ನೈರುತ್ಯ (ದಕ್ಷಿಣ ಪಶ್ಚಿಮ) ಕರಾವಳಿಯಲ್ಲಿ ಇಸುವ ಹಸಿರುಕಲ್ಲಿನ ಪಟ್ಟಿಯು ಈ ಕಾಲಮಾನದಲ್ಲಿಯೇ (ಸುಮಾರು ೩೮೦೦ ದವಹಿಂ) ಉಂಟಾಯಿತು.
ಈ ಯುಗದ ಕಾಲಮಾನ ೩೬೦೦ ರಿಂದ ೩೨೦೦ ದವಹಿಂ. ಮೊದಲ ಸ್ಪಷ್ಟ ಜೀವಿದ ಕುರುಹು ಸೂಕ್ಷ್ಮಜೀವಿಗಳ ಹಾಸು ಪಶ್ಟಿಮ ಆಸ್ಟ್ರೇಲಿಯದಲ್ಲಿ ಪತ್ತೆಯಾಗಿದ್ದು ಇದರ ಕಾಲಮಾನ ೩೪೮೦ ದವಹಿಂ. ಮೊದಲ ಮಹಾ ಖಂಡ ವಾಲ್‌ಬಾರ ಈ ಕಾಲಮಾನದಲ್ಲಿ ರೂಪಗೊಂಡಿತು. ೩೭ ರಿಂದ ೫೮ ಕಿಮೀನಷ್ಟು ಅಗಲವಾದ ಉಲ್ಕೆ ಭೂಮಿಯನ್ನು ೩೨೬೦ ದವಹಿಂ ಅಪ್ಪಳಿಸಿ ಬಾರ್ಬಟನ್ ಹಸಿರುಕಲ್ಲಿನ ಪಟ್ಟಿ ರೂಪಗೊಳ್ಳುವಂತೆ ಮಾಡಿತು.
ಈ ಯುಗದ ಕಾಲಮಾನ ೩೨೦೦ ರಿಂದ ೨೮೦೦ ದವಹಿಂ. ಆಸ್ಟ್ರೇಲಿಯದಲ್ಲಿ ಸ್ಟ್ರೊಮಾಟೊಲೈಟ್‌ಗಳು ಪತ್ತೆಯಾಗಿವೆ. ಪೊಂಗೋಲ ಹಿಮಯುಗವು ೨೯೦೦ ದವಹಿಂ ಉಂಟಾಯಿತು. ೨೮೦೦ ದವಹಿಂ ಸುಮಾರಿಗೆ ವಾಲ್‌ಬಾರ ಮಹಾ ಖಂಡ ವಿಘಟನೆಯಾಯಿತು.
ಈ ಯುಗದ ಕಾಲಮಾನ ೨೮೦೦ ರಿಂದ ೨೫೦೦ ದವಹಿಂ. ದ್ಯುತಿಸಂಶ್ಲೇಷಣೆ ಮೊದಲು ಈ ಕಾಲಮಾನದಲ್ಲಿ ಉಗಮವಾಯಿತು. ಇದರ ಪರಿಣಾಮವಾಗಿ ವಾತಾವರಣದಲ್ಲಿ ಆಮ್ಲಜನಕ ಹೆಚ್ಚಾಯಿತು ಮತ್ತು ಇದು ಮುಂದೆ ಪಾಲಿಯೊಪ್ರೊಟೆರೊಜೋಯಿಕ್ ಯುಗದಲ್ಲಿನ ಆಮ್ಲಜನಕ ಮಹಾನಾಶಕ್ಕೆ ಕಾರಣವಾಯಿತು.
ಉಲ್ಲೇಖಗಳು ಮತ್ತು ಟಿಪ್ಪಣಿಗಳು
[ಬದಲಾಯಿಸಿ]- ↑ ಇಂಗ್ಲೀಶ್ ವಿಕಿಪೀಡಿಯ “Archeon” ಪುಟದ ಭಾಗಶ ಅನುವಾದ, access date 2016-08-17
- ↑ Walker, James C. G. (June 1985). "Carbon dioxide on the early earth" (PDF). Origins of Life and Evolution of the Biosphere. 16 (2): 117–127. Bibcode:1985OLEB...16..117W. doi:10.1007/BF01809466. Retrieved 2010-01-30.
- ↑ Pavlov, Alexander A.; Kasting, James F.; Brown, Lisa L.; Rages, Kathy A.; Freedman, Richard (May 2000). "Greenhouse warming by CH4 in the atmosphere of early Earth". Journal of Geophysical Research. 105 (E5): 11981–11990. Bibcode:2000JGR...10511981P. doi:10.1029/1999JE001134
- ↑ Rosing, Minik T.; Bird, Dennis K.; Sleep, Norman H.; Bjerrum, Christian J. (April 1, 2010). "No climate paradox under the faint early Sun". Nature. 464 (7289): 744–747. Bibcode:2010Natur.464..744R. doi:10.1038/nature08955. PMID 20360739
- ↑ Stanley, Steven M. (1999). Earth System History. New York: W.H. Freeman and Company. pp. 297–301. ISBN 0-7167-2882-
- ↑ Cooper, John D.; Miller, Richard H.; Patterson, Jacqueline (1986). A Trip Through Time: Principles of Historical Geology. Columbus: Merrill Publishing Company. p. 180. ISBN 0675201403.
- ↑ Bell EA, Boehnke P, Harrison TM, Mao WL (2015). "Potentially biogenic carbon preserved in a 4.1 billion-year-old zircon". Proc. Natl. Acad. Sci. U.S.A. 112: 14518–21. doi:10.1073/pnas.1517557112. PMC 4664351. PMID 26483481
- ↑ Noffke N, Christian D, Wacey D, Hazen RM (2013). "Microbially induced sedimentary structures recording an ancient ecosystem in the ca. 3.48 billion-year-old Dresser Formation, Pilbara, Western Australia". Astrobiology. 13 (12): 1103–24. doi:10.1089/ast.2013.1030. PMC 3870916. PMID 24205812
- ↑ Wikipedia English “Eoarchean” access date 2016-08-17
- ↑ Wikipedia English “Paleoarchean” access date 2016-08-17
- ↑ Wikipedia English “Mesoarchean” access date 2016-08-17
- ↑ Wikipedia English “Neoarchean” access date 2016-08-17
ಮುಂದಿನ ಓದಿಗೆ
[ಬದಲಾಯಿಸಿ]- Egel, R.; Lankenau, D.-H.; Mulkidjanian, A. Y. (2011). Origins of Life: The Primal Self-Organization. Berlin Heidelberg: Springer-Verlag. pp. 1–366,. doi:10.1007/978-3-642-21625-1. ISBN 978-3-642-21624-4.