ಆನವಟ್ಟಿ
ಗೋಚರ
ಸೊರಬ ತಾಲ್ಲೂಕಿನ ಎರಡನೆ ಅತಿ ದೊಡ್ಡ ಪಟ್ಟಣ ಆನವಟ್ಟಿ ಸೊರಬ ಪಟ್ಟಣವನ್ನು ಹೊರತುಪಡಿಸಿದರೆ ತಾಲ್ಲೂಕಿನ ಎರಡನೆ ದೊಡ್ಡ ಪಟ್ಟಣ . ಅಡಿಕೆ ಮತ್ತು ಭತ್ತ ಬೆಳೆಗೆ ಮತ್ತು ಮರದ ಕೆತ್ತನೆ ಕೆಲಸಗಳಿಗೆ ಹೆಸರುವಾಸಿಯಾಗಿದೆ...
ಪರಿಚಯ
[ಬದಲಾಯಿಸಿ]- ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ವ್ಯಾಪ್ತಿಯಲ್ಲಿರುವ ಆನವಟ್ಟಿಯಲ್ಲಿ ಗ್ರಾಮ ಪಂಚಾಯಿತಿ ಬರುತ್ತದೆ. ಕುಬಟೂರು ಕುಂತಳರಾಜ ಚಂದ್ರಹಾಸ ರಾಜನು ಆನವಟ್ಟಿಯಲ್ಲಿ ಆನೆ ಕಟ್ಟುವ ಹಟ್ಟಿಯನ್ನು ಮಾಡಿದ್ದರಿಂದ ಇದನ್ನು ಮೊದಲು ಆನೆಹಟ್ಟಿ ಎಂದು ಕರೆಯುತ್ತಿದ್ದರು. ನಂತರ ಇದು ಆನವಟ್ಟಿ ಎಂದು ಪ್ರಸಿದ್ಧವಾಗಿದೆ. ಆನವಟ್ಟಿಯಿಂದ 1 ಕಿ.ಮಿ ದೂರದಲ್ಲಿ ಕೋಟಿಪುರದಲ್ಲಿ ಕೈಟಬೇಶ್ವರ ದೇವಸ್ಥಾನ ಇದ್ದು ಅದೂ ಸಹ ಪ್ರಸಿದ್ದವಾಗಿದೆ.
- ಶಿರಾಳಕೊಪ್ಪ ಸೊರಬ ಹಾನಗಲ್ ಮಧ್ಯದಲ್ಲಿ ಆನವಟ್ಟಿಯಿದ್ದು, ಪ್ರತೀ ಶನಿವಾರದಂದು ಸಂತೆಗೆ ಪ್ರಸಿದ್ಧವಾಗಿದೆ. ಸೊರಬ ತಾಲ್ಲೂಕಿನಲ್ಲಿ ಆನವಟ್ಟಿ ದೊಡ್ಡ ಗ್ರಾಮ ಪಂಚಾಯಿತಿಯಾಗಿದ್ದು ಹೋಬಳಿಯ ಕೇಂದ್ರ ಸ್ಥಾನವಾಗಿರುತ್ತದೆ. ಯಾವುದೇ ಉಪಗ್ರಾಮ ಇರುವುದಿಲ್ಲ. ಈ ಪಂಚಾಯತಿ 21 ಚುನಾಯಿತ ಸದಸ್ಯರನ್ನೊಳಗೊಂಡ ಅತೀ ದೊಡ್ಡ ಪಂಚಾಯತಿ ಆಗಿದೆ.
ಶಿಕ್ಷಣ ವ್ಯವಸ್ಥೆ
[ಬದಲಾಯಿಸಿ]ಊರಿನ ವ್ಯಾಪ್ತಿಯಲ್ಲಿ 1 ಉರ್ದು ಶಾಲೆ ಇದ್ದು, 2 ಸರ್ಕಾರಿ, 1 ಅನುದಾನಿತ, 3 ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ 2 ಸರ್ಕಾರಿ, 1ಖಾಸಗಿ ಪ್ರೌಢಶಾಲೆ ಮತ್ತು 1 ಪದವಿ ಪೂರ್ವ ಕಾಲೇಜು, 1 ಪ್ರಥಮ ದರ್ಜೆ ಕಾಲೇಜು ಹಾಗೂ 1 ಸರ್ಕಾರಿ ಡಿ.ಎಡ್ ಕಾಲೇಜು ಇರುತ್ತದೆ. ಅಲ್ಲದೇ 2 ಖಾಸಗಿ I.T.I ಕಾಲೇಜುಗಳಿವೆ.
ಕೃಷಿ ಜೀವನ
[ಬದಲಾಯಿಸಿ]ಇಲ್ಲಿಯ ಒಟ್ಟು ಜನಸಂಖ್ಯೆ 8161 ಇದ್ದು ಕೃಷಿಕರು ಹಚ್ಚಾಗಿರುತ್ತಾರೆ. ಇಲ್ಲಿ ಭತ್ತ, ಜೋಳ, ಹತ್ತಿ, ಅಡಿಕೆ ಮುಖ್ಯ ಬೆಳೆಯಾಗಿದೆ.
ಹತ್ತಿರದ ಪ್ರೇಕ್ಷಣೀಯ ಸ್ಥಳಗಳು
[ಬದಲಾಯಿಸಿ]ಉಲ್ಲೇಖನಗಳು
[ಬದಲಾಯಿಸಿ]