ಆನಂದ್ ಕುಮಾರ್

ವಿಕಿಪೀಡಿಯ ಇಂದ
Jump to navigation Jump to search
ಆನಂದ್ ಕುಮಾರ್
AnandKumarJI1.jpg
ಜನನ
ಆನಂದ್ ಕುಮಾರ್

೧ ಜನವರಿ ೧೯೭೩
ಪಾಟ್ನಾ, ಬಿಹಾರ್, ಭಾರತ
ರಾಷ್ಟ್ರೀಯತೆಭಾರತ ಭಾರತೀಯ
ವೃತ್ತಿಶಿಕ್ಷಣ ತಜ್ಙ, ಗಣಿತಜ್ಞ
Years active೨೦೦೨ - ಪ್ರಸ್ತುತ
Known forಸೂಪರ್ ೩೦ ಕಾರ್ಯಕ್ರಮ
Notable work
ಭಾರತದ ಜೆಇಇ ಪರೀಕ್ಷೆಯನ್ನು ಎದುರಿಸಲು ಆರ್ಥಿಕವಾಗಿ ದುರ್ಬಲವಾದ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡುವುದು
ಸಂಗಾತಿ(ಗಳು)ರಿತು ರಶ್ಮಿ
ಮಕ್ಕಳುಜಗತ್ ಕುಮಾರ್ (ಮಗ)
Parent(s)ಜಯಂತಿ ದೇವಿ (ತಾಯಿ)
ಪ್ರಶಸ್ತಿಗಳುಎಸ್.ರಾಮಾನುಜನ್ ಅವಾರ್ಡ್ (೨೦೧೦)
ಜಾಲತಾಣSuper 30

ಆನಂದ್ ಕುಮಾರ್ (ಜನನ ೧ ಜನವರಿ ೧೯೭೩) ಒಬ್ಬ ಭಾರತೀಯ ಶಿಕ್ಷಣತಜ್ಙ ಮತ್ತು ಗಣಿತಜ್ಞ.[೧] ೨೦೦೨ ರಲ್ಲಿ ಪಾಟ್ನಾ, ಬಿಹಾರ್ ನಲ್ಲಿ ಪ್ರಾರಂಭವಾದ ಸೂಪರ್ ೩೦ ಎಂಬ ಕಾರ್ಯಕ್ರಮಕ್ಕೆ ಹೆಸರುವಾಸಿಯಾಗಿದ್ದಾರೆ. ಈ ಕಾರ್ಯಕ್ರಮವು ಆರ್ಥಿಕವಾಗಿ ದುರ್ಬಲವಾಗಿರುವ ವಿದ್ಯಾರ್ಥಿಗಳಿಗೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಗೆ ಸೇರ್ಪಡೆಯಾಗಲು ಅಗತ್ಯವಾದ ಐಐಟಿ - ಜೆಇಇ ಪ್ರವೇಶ ಪರೀಕ್ಷೆಗೆ ತರಬೇತಿಯನ್ನು ನೀಡುತ್ತದೆ.[೨] ಕುಮಾರ್ ರವರ ಜೀವನ ಹಾಗೂ ಕೆಲಸವನ್ನು ೨೦೧೯ರ ಚಲನಚಿತ್ರವಾದ ಸೂಪರ್ ೩೦ ನಲ್ಲಿ ಚಿತ್ರಿಸಲಾಗಿದೆ. ಈ ಚಲನಚಿತ್ರದಲ್ಲಿ ಕುಮಾರ್ ರವರ ಪಾತ್ರವನ್ನು ಹೃತಿಕ್ ರೋಶನ್ ರವರು ನಿರ್ವಹಿಸಿದ್ದಾರೆ.[೩] ಕುಮಾರ್ ರವರು ಭಾರತೀಯ ಸಮಾಜದ ದುರ್ಬಲ ವರ್ಗಗಳ ವಿದ್ಯಾರ್ಥಿಗಳಿಗೆ ಆಯೋಜಿಸಿದ ಸೂಪರ್ ೩೦ ಕಾರ್ಯಕ್ರಮದ ಬಗ್ಗೆ ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ ಮತ್ತು ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಮಾತನಾಡಿದ್ದಾರೆ.[೪]

ಆರಂಭಿಕ ಜೀವನ[ಬದಲಾಯಿಸಿ]

ಕುಮಾರ್ ರವರು ಪಾಟ್ನಾ, ಬಿಹಾರ್ ನಲ್ಲಿ ಜನಿಸಿದರು. ತಮ್ಮ ಆರಂಭಿಕ ಶಿಕ್ಷಣವನ್ನು ಹಿಂದಿ ಮಾಧ್ಯಮ ಸರ್ಕಾರಿ ಶಾಲೆಯಲ್ಲಿ ಮಾಡಿದರು ಮತ್ತು ಗಣಿತಶಾಸ್ತ್ರದಲ್ಲಿ ಆಳವಾದ ಆಸಕ್ತಿಯನ್ನು ಬೆಳೆಸಿದ್ದರು. ಪದವಿಯ ಸಮಯದಲ್ಲಿ ಕುಮಾರ್ ರವರು ಸಂಖ್ಯೆ ಸಿದ್ದಾಂತದ ಮೇಲೆ ಪೇಪರ್ ಸಲ್ಲಿಸಿದ್ದರು. ಕುಮಾರ್ ರವರು ಕೇಂಬ್ರಿಡ್ಜ್‌‌‌‌‌‌‌‌‌‌‌ ವಿಶ್ವವಿದ್ಯಾನಿಲಯದಲ್ಲಿ ಪ್ರವೇಶವನ್ನು ಪಡೆದಿದ್ದರು, ಆದರೆ ತಂದೆಯ ಮರಣ ಹಾಗೂ ಆರ್ಥಿಕ ಸ್ಥಿತಿಯಿಂದಾಗಿ ಹೋಗಲು ಸಾಧ್ಯವಾಗಲಿಲ್ಲ.[೫][೬]

ಬೋಧನಾ ವೃತ್ತಿ ಮತ್ತು ಸೂಪರ್ ೩೦[ಬದಲಾಯಿಸಿ]

೧೯೯೨ ರಲ್ಲಿ ಕುಮಾರ್ ರವರು ಗಣಿತಶಾಸ್ತ್ರವನ್ನು ಕಲಿಸಲು ಪ್ರಾರಂಭಿಸಿದರು. ೫೦೦ ರೂಪಾಯಿಗೆ ಒಂದು ತರಗತಿಯನ್ನು ಬಾಡಿಗೆಗೆ ಪಡೆದು ರಾಮಾನುಜನ್ ಸ್ಕೂಲ್ ಆಫ್ ಮ್ಯಾಥಮ್ಯಾಟಿಕ್ಸ್ (ಆರ್ ಎಸ್ ಎಮ್) ಎಂಬ ಸ್ವಂತ ಇನ್ಸ್ಟಿಟ್ಯೂಟ್ ಅನ್ನು ಆರಂಭಿಸಿದರು. ಒಂದು ವರ್ಷದೊಳಗೆ ಎರಡು ವಿದ್ಯಾರ್ಥಿಯಿಂದ ಮೂವತ್ತಾರು ವಿದ್ಯಾರ್ಥಿವರೆಗೆ ಸಂಸ್ಥೆಯು ಬೆಳೆಯಿತು ಮತ್ತು ಮೂರು ವರ್ಷದ ನಂತರ ಸುಮಾರು ೫೦೦ ವಿದ್ಯಾರ್ಥಿಗಳು ಈ ಸಂಸ್ಥೆಯನ್ನು ಸೇರಿದರು. ನಂತರ ೨೦೦೦ರದ ಆರಂಭದಲ್ಲಿ ಐಐಟಿ - ಜೆಇಇ ತರಬೇತಿಯನ್ನು ಪಡೆಯಲು ಬಂದ ಬಡ ವಿದ್ಯಾರ್ಥಿಯು ತನ್ನ ಪ್ರವೇಶ ಶುಲ್ಕವನ್ನು ಕಟ್ಟಲು ಸಾ‍ಧ್ಯವಾಗದ ಸಂದರ್ಭದಲ್ಲಿ ಕುಮಾರ್ ರವರು ಈ ಸನ್ನಿವೇಶದಿಂದ ಪ್ರೇರಣೆಗೊಂಡು ಸೂಪರ್ ೩೦ ಎಂಬ ಕಾರ್ಯಕ್ರಮವನ್ನು ಪ್ರಾರಂಭಿಸಿದರು.[೭][೮] ೨೦೦೨ ರಿಂದ ಪ್ರತೀ ವರ್ಷವು ಮೇ ತಿಂಗಳಲ್ಲಿ ರಾಮಾನುಜನ್ ಸ್ಕೂಲ್ ಆಫ್ ಮ್ಯಾಥಮ್ಯಾಟಿಕ್ಸ್ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಿ ೩೦ ಮಕ್ಕಳನ್ನು ಸೂಪರ್ ೩೦ ಪ್ರೋಗ್ರಾಮ್ ಗೆ ಆಯ್ಕೆಯನ್ನು ಮಾಡುತ್ತದೆ.[೯][೧೦]

ಪ್ರಶಸ್ತಿ[ಬದಲಾಯಿಸಿ]

 • ೨೦೧೦ ರಲ್ಲಿ ಇನ್ಸ್ಟಿಟ್ಯೂಟ್ ಫಾರ್ ರಿಸರ್ಚ್ ಆಂಡ್ ಡಾಕ್ಯುಮೆಂಟೇಶನ್ ಇನ್ ಸೋಶಿಯಲ್ ಸೈನ್ಸಸ್ ಅವರಿಂದ ಎಸ್. ರಾಮನುಜನ್ ಪ್ರಶಸ್ತಿಯನ್ನು ಕುಮಾರ್ ಅವರಿಗೆ ನೀಡಲಾಯಿತು.[೧೧]
 • ನವಂಬರ್ ೨೦೧೦ ರಲ್ಲಿ ಬಿಹಾರ್ ಸರ್ಕಾರದ ಉನ್ನತ ಪ್ರಶಸ್ತಿಯಾದ 'ಮೌಲಾನಾ ಅಬ್ದುಲ್ ಕಲಾಂ ಆಜಾದ್ ಶಿಕ್ಷಾ ಪುರಸ್ಕಾರ'ವನ್ನು ಕುಮಾರ್ ಅವರಿಗೆ ನೀಡಲಾಯಿತು.[೧೨]
 • ೨೦೧೦ ರಲ್ಲಿ ಬೆಂಗಳೂರಿನ 'ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್' ಪ್ರೊ. ಯಶವಂತ್ರಾವ್ ಕೇಲ್ಕರ್ ಯುವ ಪುರಸ್ಕಾರ ಪ್ರಶಸ್ತಿಯನ್ನು ಅವರಿಗೆ ನೀಡಿದೆ.[೧೩]
 • ಆನಂದ್ ಕುಮಾರ್ ರವರು ಭಾರತದ ಅಧ್ಯಕ್ಷರಾದ ರಾಮ್ ನಾಥ್ ಕೋವಿಂದರಿಂದ 'ರಾಷ್ಟ್ರೀಯ ಬಾಲ ಕಲ್ಯಾಣ ಪ್ರಶಸ್ತಿ'ಯನ್ನು ಪಡೆದಿದ್ದಾರೆ.[೧೪]
 • ೮ ನವಂಬರ್ ೨೦೧೮ ರಂದು ದುಬೈನಲ್ಲಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ನವರು ಗ್ಲೋಬಲ್ ಎಜುಕೇಶನ್ ಅವಾರ್ಡ್ ನೀಡಿದ್ದಾರೆ.[೧೫]

ಸೂಪರ್ ೩೦ ಚಲನಚಿತ್ರ[ಬದಲಾಯಿಸಿ]

ಬಾಲಿವುಡ್ ನಿರ್ದೇಶಕ ವಿಕಾಸ್ ಬಹ್ಲ್ ರವರು ಆನಂದ್ ಕುಮಾರ್ ರವರ ಜೀವನ ಮತ್ತು ಕೆಲಸದ ಬಗ್ಗೆ ೨೦೧೯ರ ಸೂಪರ್ ೩೦ ಚಲನಚಿತ್ರದಲ್ಲಿ ಚಿತ್ರಿಸಿದ್ದಾರೆ.[೧೬]

ಉಲ್ಲೇಖಗಳು[ಬದಲಾಯಿಸಿ]

 1. https://www.tribuneindia.com/2009/20090614/spectrum/main2.htm
 2. https://www.thehindu.com/arts/Mr.-Cent-Per-Cent/article16892121.ece
 3. https://www.indiatoday.in/movies/bollywood/story/super-30-trailer-out-hrithik-roshan-stuns-as-math-wizard-anand-kumar-in-new-film-1542286-2019-06-04
 4. https://economictimes.indiatimes.com/magazines/panache/super-30-founder-anand-kumar-invited-to-speak-at-mit-and-harvard/articleshow/43795140.cms
 5. https://www.telegraphindia.com/india/living-the-vilayat-dream-at-home-teacher-who-failed-to-study-abroad-coaches-students-to-do-so/cid/675903
 6. https://www.thefamouspeople.com/profiles/anand-kumar-21694.php
 7. http://getahead.rediff.com/report/2009/dec/15/meet-anand-kumar-of-super-30.htm
 8. http://news.bbc.co.uk/2/hi/south_asia/5345100.stm
 9. https://www.hindustantimes.com/education/jee-advanced-result-2017-it-is-30-30-for-anand-kumar-s-super-30/story-ZcXXIfQfg20qqHtyXgwERN.html
 10. https://www.telegraphindia.com/states/bihar/anand-focus-on-teachers-for-excellence/cid/1313150#.VD3V8-nCWcw
 11. https://www.jagranjosh.com/current-affairs/anand-kumar-the-founder-of-super30-got-ramanujan-mathematics-award-1391057355-1
 12. https://web.archive.org/web/20130518231054/http://www.biharfoundation.in/bihar-honours-super-30-founder-with-top-award/2010/
 13. https://timesofindia.indiatimes.com/Akhil-Bharatiya-Vidyarthi-Parishad-ABVP-has-decided-to-award-Yashwantrao-Kelkar-Yuva-Puraskar-to-mathematician-Anand-Kumar-of-Super-30-fame-for-his-outstanding-work-in-empowering-underprivileged-section-of-the-society-/articleshow/7112335.cms
 14. https://www.thehindu.com/todays-paper/tp-national/tp-otherstates/rashtriya-bal-kalyan-award-presented-to-super-30-founder/article20447452.ece
 15. https://indianexpress.com/article/education/super-30-founder-anand-kumar-to-be-honoured-with-global-education-award-in-dubai/
 16. https://timesofindia.indiatimes.com/topic/Super-30