ಆಂಥನಿ ಹಾಪ್ಕಿನ್ಸ್‌‌‌

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search
ಆಂಥನಿ ಹಾಪ್ಕಿನ್ಸ್‌‌‌
Anthony Hopkins-Tuscan Sun Festival.jpg
Hopkins at the Tuscan Sun Festival, Cortona, 2009
ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
Philip Anthony Hopkins
(1937-12-31) 31 December 1937 (age 83)
Port Talbot, Wales, UK
ವೃತ್ತಿ Actor
ವರ್ಷಗಳು ಸಕ್ರಿಯ 1967–present
ಪತಿ/ಪತ್ನಿ Petronella Barker
(1967–1972; divorced)
Jennifer Lynton
(1973–2002; divorced)
Stella Arroyave
(2003–present)

ಸರ್‌‌‌ ಆಂಥನಿ ಹಾಪ್ಕಿನ್ಸ್‌‌‌ ರವರು, CBE (ಜನ್ಮ ನಾಮ ಫಿಲಿಪ್‌‌‌‌ ಆಂಥನಿ ಹಾಪ್ಕಿನ್ಸ್ ‌‌‌; 31 ಡಿಸೆಂಬರ್‌ 1937) ಓರ್ವ ವೆಲ್ಷ್‌‌‌ ಭಾಷಿಕ ಚಲನಚಿತ್ರ, ರಂಗಭೂಮಿ ಮತ್ತು ಕಿರುತೆರೆ ನಟರಾಗಿದ್ದಾರೆ. ಚಲನಚಿತ್ರರಂಗದ ಜೀವಿತ ಶ್ರೇಷ್ಠ ನಟರಲ್ಲಿ,[೧][೨][೩] ಒಬ್ಬರೆಂದು ಪರಿಗಣಿಸಲಾದ ಅವರು ದ ಸೈಲೆನ್ಸ್‌‌ ಆಫ್‌‌ ದ ಲ್ಯಾಂಬ್ಸ್‌‌ ಚಿತ್ರದಲ್ಲಿನ ನರಭಕ್ಷಕ ಸರಣಿ ಕೊಲೆಗಾರ ಹ್ಯಾನ್ನಿಬಾಲ್‌‌‌‌ ಲೆಕ್ಟರ್‌‌‌ನ ಪಾತ್ರ ನಿರ್ವಹಣೆಗಾಗಿ ಪ್ರಸಿದ್ಧರಾಗಿದ್ದು, ಆ ಚಿತ್ರದ ಉತ್ತರ ಭಾಗವಾದ ಹ್ಯಾನ್ನಿಬಾಲ್ ‌‌‌‌ ಮತ್ತು ಅದರ ಕೃತಿ ಆಧಾರಿತ ಚಿತ್ರವಾದ ರೆಡ್‌‌ ಡ್ರಾಗನ್‌‌ ಗಳಲ್ಲಿ ಕೂಡಾ ನಟಿಸಿದ್ದಾರೆ. ಅವರು ನಟಿಸಿರುವ ಇತರ ಪ್ರಮುಖ ಚಿತ್ರಗಳಲ್ಲಿ ಮ್ಯಾಜಿಕ್ ‌‌‌, ದ ಎಲಿಫೆಂಟ್‌‌ ಮ್ಯಾನ್‌‌ , 84 ಚೇರಿಂಗ್‌ ಕ್ರಾಸ್‌‌ ರೋಡ್ ‌‌, ಡ್ರಾಕುಲಾ , ಲೆಜೆಂಡ್ಸ್‌‌ ಆಫ್‌‌ ದ ಫಾಲ್ ‌‌, ದ ರಿಮೇನ್ಸ್‌‌ ಆಫ್‌‌ ದ ಡೇ , ಅಮಿಸ್ಟಾಡ್‌‌‌ , ನಿಕ್ಸಾನ್‌‌‌ ಮತ್ತು ಫ್ರಾಕ್ಚರ್‌‌‌ ಸೇರಿವೆ. ವೇಲ್ಸ್‌‌ನಲ್ಲಿ ಹುಟ್ಟಿದ ಹಾಪ್ಕಿನ್ಸ್‌‌‌ರವರು ಅಲ್ಲಿಯೇ ಬೆಳೆದವರು. ತಮ್ಮ ಬ್ರಿಟಿಷ್‌‌‌ ಪೌರತ್ವವನ್ನು ಉಳಿಸಿಕೊಂಡೂ, 12 ಏಪ್ರಿಲ್‌ 2000ರಂದು ಅವರು U.S. ಪೌರತ್ವ ಪಡೆದುಕೊಂಡರು.[೪] 2003ರಲ್ಲಿ ಹಾಲಿವುಡ್‌ ವಾಕ್‌ ಆಫ್‌ ಫೇಮ್‌‌ನಲ್ಲಿ ಅವರು ನಕ್ಷತ್ರದ ಪ್ರಾತಿನಿಧಿತ್ವವನ್ನು ಪಡೆದುಕೊಂಡರಲ್ಲದೇ 2008ರಲ್ಲಿ ಬ್ರಿಟಿಷ್‌‌‌ ಅಕಾಡೆಮಿ ಆಫ್‌‌ ಫಿಲ್ಮ್‌‌‌‌ ಅಂಡ್‌‌ ಟೆಲಿವಿಷನ್‌‌‌ ಆರ್ಟ್ಸ್‌‌ನಲ್ಲಿ ಫೆಲೋ ಗೌರವ ಪಡೆದರು.

ಆರಂಭಿಕ ಜೀವನ[ಬದಲಾಯಿಸಿ]

ವೇಲ್ಸ್‌‌ನ ಟಾಲ್ಬಾಟ್‌‌ ಬಂದರು ನಗರಮಾರ್ಗಮ್‌‌ನಲ್ಲಿ, ಓರ್ವ ಬ್ರೆಡ್‌ ವ್ಯಾಪಾರಿಯಾಗಿದ್ದ ರಿಚರ್ಡ್‌‌ ಆರ್ಥರ್‌‌‌ ಹಾಪ್ಕಿನ್ಸ್‌‌‌ ಮತ್ತು ಮ್ಯೂರಿಯೆಲ್‌ ಆನ್ನೆರವರ (ನೀ ಯೀಟ್ಸ್‌‌‌) ಪುತ್ರನಾಗಿ ಹಾಪ್ಕಿನ್ಸ್‌‌‌ರು ಜನಿಸಿದರು.[೫] ಆತನ ಶಾಲಾದಿನಗಳು ಅಷ್ಟು ಪ್ರಯೋಜಕವಾಗಿರದಿದ್ದುದರಿಂದ ತಾನು ಪೇಂಟಿಂಗ್‌ ಮತ್ತು ಚಿತ್ರಕಲೆಗಳು ಅಥವಾ ಪಿಯಾನೋ ನುಡಿಸುವಿಕೆಯಂತಹಾ ಕಲಾ ಪ್ರಕಾರಗಳಲ್ಲಿ ಮುಳುಗುವುದು ಶಾಲೆಗೆ ಹಾಜರಾಗುವುದಕ್ಕಿಂತ ಹೆಚ್ಚು ಪ್ರಯೋಜನಕಾರಿ ಎಂದು ಆತನಿಗನಿಸಿತ್ತು. 1949ರಲ್ಲಿ, ಆತನ ಪೋಷಕರು ಆತನಿಗೆ ಶಿಸ್ತನ್ನು ರೂಢಿಸಲು ಪಾಂಟಿಪೂಲ್‌‌‌ನಲ್ಲಿದ್ದ ಜೋನ್ಸ್‌‌ ವೆಸ್ಟ್‌‌ ಮಾನ್‌‌ಮೌತ್‌‌‌‌ ಬಾಲಕರ ಶಾಲೆಗೆ ಹೋಗಲು ಆಗ್ರಹಿಸಿದ್ದರು. ಅವರು ಅಲ್ಲಿಯೇ ಐದು ಅವಧಿಗಳನ್ನು ಪೂರೈಸಿ ನಂತರ ವೇಲ್ಸ್‌‌ನಲ್ಲಿನ ವೇಲ್‌‌ ಆಫ್‌‌ ಗ್ಲಾಮಾರ್ಗನ್‌‌ನಲ್ಲಿರುವ ಕೌಬ್ರಿಡ್ಜ್‌‌ ಗ್ರಾಮರ್‌‌ ಶಾಲೆಯಲ್ಲಿ ವಿದ್ಯಾಭ್ಯಾಸ ಮುಂದುವರೆಸಿದರು. ತನ್ನ 15ನೇ ವಯಸ್ಸಿನಲ್ಲಿ ಅಲ್ಪಕಾಲೀನ ಭೇಟಿಯಲ್ಲಿ ಪರಿಚಿತರಾದ ದೇಶಬಾಂಧವ ರಿಚರ್ಡ್‌‌ ಬರ್ಟನ್‌‌‌ರಿಂದ ಹಾಪ್ಕಿನ್ಸ್‌‌‌ ಪ್ರಭಾವಿತನಾದನಲ್ಲದೇ, ಅವರ ಉತ್ತೇಜನದಿಂದ ನಟನಾದನು. ಆ ದಿಕ್ಕಿನೆಡೆಗೆ ಮುಂದುವರೆಯಲು ಕಾರ್ಡಿಫ್‌‌‌ನಲ್ಲಿನ ರಾಯಲ್‌‌‌‌ ವೆಲ್ಷ್‌‌‌ ಕಾಲೇಜ್‌ ಆಫ್‌‌ ಮ್ಯೂಸಿಕ್‌‌ & ಡ್ರಾಮಾ ಕಲಾಶಾಲೆಗೆ ಸೇರಿಕೊಂಡ ನಂತರ 1957ರಲ್ಲಿ ಪದವಿ ಪಡೆದನು. ಬ್ರಿಟಿಷ್‌‌‌ ಸೇನಾಪಡೆಯಲ್ಲಿ ರಾಷ್ಟ್ರೀಯ ಕರ್ತವ್ಯದಡಿ ಎರಡು ವರ್ಷ ಸೇವೆ ಸಲ್ಲಿಸಿದ ನಂತರ, ಲಂಡನ್‌‌‌ಗೆ ತೆರಳಿದ ಅವನು ಅಲ್ಲಿನ ರಾಯಲ್‌ ಅಕಾಡೆಮಿ ಆಫ್‌ ಡ್ರಾಮಾಟಿಕ್‌ ಆರ್ಟ್‌‌ನಲ್ಲಿ ತರಬೇತಿ ಪಡೆದನು.

ವೃತ್ತಿಜೀವನ[ಬದಲಾಯಿಸಿ]

1965ರಲ್ಲಿ, ಅನೇಕ ವರ್ಷಗಳ ಕಾಲ ಸಿದ್ಧನಾಟಕ ಪ್ರದರ್ಶನಗಳಲ್ಲಿ ಪಳಗಿದ ನಂತರ, ಸರ್‌‌‌ ಲಾರೆನ್ಸ್‌‌ ಆಲಿವಿಯೆರ್‌‌‌ರ ಕಣ್ಣಿಗೆ ಬಿದ್ದಾಗ ಅವರು, ಆತನನ್ನು ರಾಯಲ್‌ ನ್ಯಾಷನಲ್‌ ಥಿಯೇಟರ್‌‌ಗೆ ಸೇರುವಂತೆ ಆಹ್ವಾನಿಸಿದರು. ಆಗ ಹಾಪ್ಕಿನ್ಸ್‌‌‌ನು ಆಲಿವಿಯೆರ್‌‌‌'ರ ಬದಲಿನಟನಾದನಲ್ಲದೇ ಆಗಸ್ಟ್‌ ಸ್ಟ್ರಿಂಡ್‌ಬರ್ಗ್‌‌‌'ರ ದ ಡಾನ್ಸ್‌‌ ಆಫ್‌ ಡೆತ್‌‌ ಚಿತ್ರದ ನಿರ್ಮಾಣದ ಸಂದರ್ಭದಲ್ಲಿ ಆಲಿವಿಯೆರ್‌ರು‌‌ ಕರುಳುತುದಿಯ ಉರಿಯೂತ/ಅಪೆಂಡಿಸೈಟಿಸ್‌‌ನಿಂದಾಗಿ ಅನಾರೋಗ್ಯಪೀಡಿತರಾದಾಗ ಅವರ ಜವಾಬ್ದಾರಿ ವಹಿಸಿಕೊಂಡನು. ನಂತರ ಆಲಿವಿಯೆರ್‌‌‌ರು ತಮ್ಮ ಆತ್ಮಚರಿತ್ರೆಯಾದ ಕನ್‌ಫೆಷನ್ಸ್‌‌‌ ಆಫ್‌‌ ಆನ್‌‌ ಆಕ್ಟರ್‌‌ ನಲ್ಲಿ, ಹೀಗೆ ಹೇಳುತ್ತಾರೆ, "ಕಂಪೆನಿಯ ಆಂಥನಿ ಹಾಪ್ಕಿನ್ಸ್‌‌‌ ಎಂಬ ಓರ್ವ ಉತ್ತಮ ಭರವಸೆಯ ಯುವ ನಟ ನನ್ನ ಬದಲಿನಟನಾಗಿದ್ದವನು, ಎಡ್ಗರ್‌ನ ಪಾತ್ರವನ್ನು ಇಲಿಯನ್ನು ಹಲ್ಲಿನ ನಡುವೆ ಬೆಕ್ಕು ಕಚ್ಚಿಕೊಂಡು ಹೋಗುವ ರೀತಿಯಲ್ಲಿ ಸಲೀಸಾಗಿ ಪಡೆದುಕೊಂಡುಬಿಟ್ಟನು."[೬] ನ್ಯಾಷನಲ್‌ನಲ್ಲಿ ತನ್ನ ಯಶಸ್ಸಿನ ಹೊರತಾಗಿಯೂ, ಯಾವಾಗಲೂ ಅದೇ ಪಾತ್ರಗಳನ್ನು ಮಾಡಿ ಬೇಸತ್ತಿದ್ದ ಹಾಪ್ಕಿನ್ಸ್‌‌‌ ಚಲನಚಿತ್ರಗಳಲ್ಲಿ ನಟಿಸಲು ಹಾತೊರೆಯತೊಡಗಿದನು. 1967ರಲ್ಲಿ A ಫ್ಲಿಯಾ ಇನ್‌ ಹರ್‌ ಇಯರ್‌‌ ನ BBCಯ ಪ್ರಸಾರದ ಮೂಲಕ ಆತ ಕಿರುತೆರೆಗೆ ಪ್ರವೇಶಿಸಿದರು. 1968ರಲ್ಲಿ, ಪೀಟರ್‌‌ ಓ'ಟೂಲೆ, ಕ್ಯಾಥರೀನ್‌ ಹೆಪ್‌ಬರ್ನ್‌‌‌ ಮತ್ತು ಫ್ರಾನ್ಸ್‌‌ನ ಫಿಲಿಪ್‌‌‌‌ II ಪಾತ್ರ ವಹಿಸಿದ್ದ ಭಾವೀ ಜೇಮ್ಸ್‌‌ ಬಾಂಡ್‌‌ ತಾರೆ ಟಿಮೊತಿ ಡಾಲ್ಟನ್‌‌ರವರುಗಳೊಂದಿಗೆ ದ ಲಯನ್‌‌ ಇನ್‌‌ ವಿಂಟರ್‌‌ ನಲ್ಲಿ ರಿಚರ್ಡ್‌‌ I ಪಾತ್ರ ವಹಿಸುವ ಮೂಲಕ ಜನಪ್ರಿಯರಾದರು. ರಂಗಭೂಮಿಯಲ್ಲಿ ನಟಿಸುವುದನ್ನು ಹಾಪ್ಕಿನ್ಸ್‌‌‌ ಮುಂದುವರೆಸಿದರೂ (ಗಮನಾರ್ಹವಾಗಿ ನ್ಯಾಷನಲ್‌ ಥಿಯೇಟರ್‌‌ನಲ್ಲಿ ಡೇವಿಡ್‌ ಹೇರ್‌‌ ಮತ್ತು ಹೋವರ್ಡ್‌ ಬ್ರೆಂಟನ್‌‌ಪ್ರಾವ್ಡಾ ದ ಲ್ಯಾಂಬರ್ಟ್‌ ಲೆ ರೌಕ್ಸ್‌‌ ಪಾತ್ರ ಮತ್ತು ಆಂಟನಿ ಅಂಡ್‌ ಕ್ಲಿಯೋಪಾತ್ರ ದಲ್ಲಿ ಜೂಡಿ ಡೆಂಚ್‌‌ರ ಎದುರು ಆಂಟನಿ ಪಾತ್ರದಲ್ಲಿ ಹಾಗೂ ಬ್ರಾಡ್‌ವೇ ನಿರ್ಮಾಣದ ಜಾನ್‌ ಡೆಕ್ಸ್‌ಟರ್‌‌ರ ನಿರ್ದೇಶನದ ಪೀಟರ್‌ ಷಾಫರ್‌‌'ರ ಈಕ್ವಸ್‌‌ ನಲ್ಲಿ) ಕಿರುತೆರೆ ಮತ್ತು ಚಲನಚಿತ್ರ ನಟನಾಗಿ ಹೆಚ್ಚು ಗುರುತಿಸಿಕೊಳ್ಳಲು ಆತ ಸಾವಕಾಶವಾಗಿ ಅದರಿಂದ ದೂರಸರಿದರು. ಆಗಿನಿಂದ ದೀರ್ಘ ವೃತ್ತಿಜೀವನವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದ ಆತ ತನ್ನ ಪಾತ್ರ ನಿರ್ವಹಣೆಗಳಿಗೆ ಪ್ರಶಂಸೆಗಳು ಹಾಗೂ ಪ್ರಶಸ್ತಿಗಳನ್ನು ಪಡೆದರು. ಕಮಾಂಡರ್‌ ಆಫ್‌‌ ಬ್ರಿಟಿಷ್‌‌‌ ಎಂಪೈರ್‌ (CBE) ಗೌರವ ಸ್ಥಾನವನ್ನು 1987ರಲ್ಲಿ ಮತ್ತು ಸಾಮಾನ್ಯ ನೈಟ್‌ ಪದವಿಯ ಗೌರವವನ್ನು 1993ರಲ್ಲಿ[೭] ಹಾಪ್ಕಿನ್ಸ್‌‌‌ರವರಿಗೆ ನೀಡಲಾಯಿತು. 1996ರಲ್ಲಿ ಲ್ಯಾಂಪೀಟರ್‌‌ನ ವೇಲ್ಸ್‌‌ ವಿಶ್ವವಿದ್ಯಾಲಯದಿಂದ ಗೌರವ ಫೆಲೋಶಿಪ್‌ ನೀಡಿ ಹಾಪ್ಕಿನ್ಸ್‌‌‌ರನ್ನು ಗೌರವಿಸಲಾಯಿತು. ತಮ್ಮ 2005ರ ಚಲನಚಿತ್ರ ದ ವರ್ಲ್ಡ್‌ಸ್‌‌ ಫಾಸ್ಟೆಸ್ಟ್‌ ಇಂಡಿಯನ್ ‌‌ನಲ್ಲಿನ ಬರ್ಟ್‌‌ ಮುನ್ರೋನ ಪಾತ್ರವು ತಮಗೆ ಪರಮಪ್ರಿಯವಾದುದು ಎಂದು ಹಾಪ್ಕಿನ್ಸ್‌‌‌ ಹೇಳಿಕೆ ನೀಡಿದ್ದಾರೆ. ತಾನು ನಿರ್ವಹಿಸಿದ ಪಾತ್ರಗಳಲ್ಲೇ ಮುನ್ರೋ ಪಾತ್ರವು ಅತೀ ಸುಲಭವಾದ ಪಾತ್ರವೆಂದೂ, ಇದಕ್ಕೆ ಕಾರಣ ಆ ಪಾತ್ರ ಹಾಗೂ ತಮ್ಮ ಜೀವನದೃಷ್ಟಿಗಳು ಒಂದೇ ಆಗಿತ್ತೆಂದು ಕೂಡಾ ಒತ್ತಿ ಹೇಳಿದರು.[೮] ತಮ್ಮ ಜೀವಮಾನದ ಸಾಧನೆಗಾಗಿ ಹಾಪ್ಕಿನ್ಸ್‌‌‌ರು 2006ರಲ್ಲಿ ಗೋಲ್ಡನ್‌ ಗ್ಲೋಬ್‌‌ ಸೆಸಿಲ್‌ B. ಡೆಮಿಲ್ಲೆ ಪ್ರಶಸ್ತಿಯನ್ನು ಪಡೆದರು. ಅವರು BAFTA ಅಕಾಡೆಮಿ ಫೆಲೋಷಿಪ್‌ ಪ್ರಶಸ್ತಿಯನ್ನು 2008ರಲ್ಲಿ ಪಡೆದರು. ಮಾರ್ವೆಲ್‌‌‌ ಕಾಮಿಕ್ಸ್‌‌‌‌‌‌'ನ ಥಾರ್‌ ‌‌‌ ಕಥೆಯ ಬರಲಿರುವ ಚಿತ್ರದ ಅವತರಣಿಕೆಯಲ್ಲಿ ಥಾರ್‌‌‌‌ನ ತಂದೆ ಓಡಿನ್‌‌ನ ಪಾತ್ರವನ್ನು ಹಾಪ್ಕಿನ್ಸ್‌‌‌ ವಹಿಸುತ್ತಿದ್ದಾರೆ.[೯] ಒಂದು ಉದ್ದೇಶಿಸಲಾಗಿರುವ ಅತಿಮಾನುಷ ಸಾಹಸ ಚಿತ್ರದಲ್ಲಿThe Rite: The Making of a Modern Day Exorcist ಹಾಪ್ಕಿನ್ಸ್‌‌‌ರು ನಟಿಸಲಿದ್ದಾರೆಂದು 24 ಫೆಬ್ರವರಿ 2010ರಂದು ಘೋಷಿಸಲಾಯಿತು. "ಓರ್ವ ಸಾಂಪ್ರದಾಯಿಕವಲ್ಲದ ವಿಧಾನಗಳನ್ನು ಬಳಸುವ ಮಂತ್ರವಾದದಲ್ಲಿ ನಿಪುಣನಾದ " ಪಾತ್ರವನ್ನು ಅವರು ಅದರಲ್ಲಿ ವಹಿಸಲಿದ್ದಾರೆ.[೧೦]

ನಟನಾ ಶೈಲಿ[ಬದಲಾಯಿಸಿ]

ದ ಇನ್ನೋಸೆಂಟ್‌‌ (1993) ಚಿತ್ರದ ಕೆಲ ದೃಶ್ಯಗಳನ್ನು ಚಿತ್ರಿಸುವಾಗ ಇಸಾಬೆಲ್ಲಾ ರೊಸ್ಸೆಲ್ಲಿನಿ ಮತ್ತು ಆಂಥನಿ ಹಾಪ್ಕಿನ್ಸ್‌‌‌ ಬರ್ಲಿನ್‌ನಲ್ಲಿರುವುದು

ಪಾತ್ರಗಳಿಗೆ ಸಂಬಂಧಪಟ್ಟ ಹಾಗೆ ನಡೆಸುವ ತಯಾರಿಗಳಿಗಾಗಿ ಹಾಪ್ಕಿನ್ಸ್‌‌‌ ಪ್ರಸಿದ್ಧರಾಗಿದ್ದಾರೆ. ತಾನೊಂದು ಚಿತ್ರವನ್ನು ಒಪ್ಪಿಕೊಂಡ ನಂತರ, ತಾನು "ಯೋಚಿಸದೇ ಹೇಳಬಹುದಾದಂತಹಾ" ಸಹಜತೆ ಬರುವವರೆಗೆ ತನ್ನ ಸಂಭಾಷಣೆಗಳನ್ನು ಸಾಕಷ್ಟು ಬಾರಿ (ಕೆಲವೊಮ್ಮೆ 200ಕ್ಕೂ ಹೆಚ್ಚು ಬಾರಿ) ತಾಲೀಮು ನಡೆಸುತ್ತೇನೆಂದು ಅನೇಕ ಸಂದರ್ಶನಗಳಲ್ಲಿ ಒಪ್ಪಿಕೊಂಡಿದ್ದಾರೆ. ಈ ಪ್ರವೃತ್ತಿಯು ಬಹುತೇಕ ಲೋಕಾಭಿರಾಮ ಎಂದೆನಿಸುವಂತಹಾ ಸಂಭಾಷಣೆಗೆ ಕಾರಣವಾಗಿ ಮುಂಚೆಯೇ ಈ ಬಗ್ಗೆ ನಡೆಸಿರುವ ತಯಾರಿಯ ಪ್ರಮಾಣವನ್ನು ತೋರಿಸುತ್ತದೆ. ಹೀಗೆ ಮಾಡುವುದು ಶ್ರದ್ಧಾತ್ಮಕ ಸುಧಾರಣೆಗೆ ಕಾರಣವಾದರೂ, ಅನೇಕ ವೇಳೆ ಸಂಭಾಷಣಾ ಪ್ರತಿಯನ್ನು ಯಥಾವತ್ತಾಗಿ ಅನುಸರಿಸದ ನಿರ್ದೇಶಕರೊಂದಿಗೆ ಭಿನ್ನಾಭಿಪ್ರಾಯವನ್ನು ಅಥವಾ ನಟನಿಗೆ ಹೆಚ್ಚುವರಿ ಎನಿಸುವಷ್ಟು ಬಾರಿ ದೃಶ್ಯಚಿತ್ರಣವನ್ನು ಬೇಡುತ್ತದೆ. ದೃಶ್ಯವೊಂದರ ಚಿತ್ರೀಕರಣ ಮುಗಿದ ತಕ್ಷಣ ಅದರ ಸಂಭಾಷಣೆಗಳನ್ನು ತೊರೆದುಬಿಡುತ್ತಿದ್ದುದರಿಂದ ನಂತರ ಹಾಪ್ಕಿನ್ಸ್‌‌‌ ಅದನ್ನು ನೆನಪಿಟ್ಟುಕೊಳ್ಳಲಾಗುತ್ತಿರಲಿಲ್ಲ. ಸಾಧಾರಣವಾಗಿ ವರ್ಷಗಳ ನಂತರವೂ ಚಿತ್ರಗಳಲ್ಲಿನ ತಮ್ಮ ಸಂಭಾಷಣೆಗಳನ್ನು ನೆನಪಿಟ್ಟುಕೊಳ್ಳಬಲ್ಲ ಇತರರಿಗಿಂತ ಈ ಪ್ರವೃತ್ತಿ ಭಿನ್ನವಾಗಿದೆ.[೧೧] ಹಾಪ್ಕಿನ್ಸ್‌‌‌ರ ಐದು ಚಿತ್ರಗಳನ್ನು ನಿರ್ದೇಶಿಸಿರುವ ನಿರ್ದೇಶಕ ರಿಚರ್ಡ್‌‌ ಅಟೆನ್‌ಬರೋರು, ಭಿನ್ನ ಪ್ರವೃತ್ತಿಯ ತಾರೆಗಳು (ಹಾಪ್ಕಿನ್ಸ್‌‌ ಮತ್ತು ಡೆಬ್ರಾ ವಿಂಗರ್‌‌) ಈರ್ವರೂ ಒಟ್ಟಿಗೇ ಭಾಗವಹಿಸಿದ್ದ ಅನೇಕ ದೃಶ್ಯಗಳಿದ್ದ ಷಾಡೋಲ್ಯಾಂಡ್ಸ್‌‌‌ (1993)ನ ಚಿತ್ರೀಕರಣದಲ್ಲಿ ಭಿನ್ನತೆಗಳನ್ನು ಸರಿದೂಗಿಸಲು ಬಹಳವೇ ಹೊಂದಾಣಿಕೆ ಮಾಡಬೇಕಾಗಿತ್ತು. ತಾಲೀಮುಗಳ ಸಂಖ್ಯೆಯನ್ನು ಕಡಿಮೆ ಮಾಡಲಿಚ್ಛಿಸುವ ಹಾಪ್ಕಿನ್ಸ್‌‌‌ರು ತಾಜಾ ಚಿತ್ರೀಕರಣದ ಸಹಜತೆಯನ್ನು ಇಷ್ಟಪಡುವವರಾದರೆ, ವಿಂಗರ್ ಸತತವಾಗಿ ತಾಲೀಮುಗಳನ್ನು ಮಾಡುವವರಾಗಿದ್ದರು. ಇದನ್ನು ಸರಿದೂಗಿಸಲು ವಿಂಗರ್'ರ ತಾಲೀಮುಗಳ ಸಮಯದಲ್ಲಿ ಅಟೆನ್‌ಬರೋರವರೇ ಹಾಪ್ಕಿನ್ಸ್‌‌‌ರ ಪಾತ್ರ ವಹಿಸಿ, ಚಿತ್ರೀಕರಣದ ಹಿಂದಿನ ತಾಲೀಮನ್ನು ಮಾತ್ರ ಹಾಪ್ಕಿನ್ಸ್‌‌‌ರೊಡನೆ ನಡೆಯುವಂತೆ ಮಾಡುತ್ತಿದ್ದರು. "ಸಂಭಾಷಣೆಯನ್ನು ಕೇಳಿದಾಗ ಆತ ಅದೇ ಮೊದಲ ಬಾರಿಗೆ ಆ ಸಂಭಾಷಣೆಯನ್ನು ಹೇಳುತ್ತಿದ್ದಾರೆಂದೆನಿಸುವ ಭಾವ ಮೂಡಿಸುವ ಆ ವಿಶೇಷ ಸಾಮರ್ಥ್ಯವನ್ನು ಹೊಂದಿದ್ದೀರಿ. ಇದು ನಿಮಗೆ ದೇವರು ನೀಡಿರುವ ಅದ್ಭುತ ಕೊಡುಗೆ" ಎಂದು ಹಾಪ್ಕಿನ್ಸ್‌‌‌ರನ್ನು ನಿರ್ದೇಶಕರು ಪ್ರಶಂಸಿಸಿದ್ದರು.[೬] ಇದರೊಂದಿಗೆ, ಹಾಪ್ಕಿನ್ಸ್‌‌‌ರು ಓರ್ವ ಅನುಕರಣೆಯ ನೈಸರ್ಗಿಕ ಕೌಶಲವನ್ನು ಹೊಂದಿದವರಾಗಿದ್ದು ತಮ್ಮ ಸ್ಥಳೀಯ ವೆಲ್ಷ್‌‌‌ ಭಾಷಿಕ ಉಚ್ಚಾರಣಾ ಶೈಲಿಯನ್ನು ಪಾತ್ರಕ್ಕೆ ಅಗತ್ಯವಾದ ಯಾವುದೇ ರೀತಿ ಪರಿವರ್ತಿಸಿಕೊಳ್ಳಬಲ್ಲ ನಿಪುಣತೆಯನ್ನು ಹೊಂದಿದ್ದರು. ಸ್ಪಾರ್ಟಾಕಸ್‌‌ ಚಿತ್ರ ವನ್ನು 1991ರಲ್ಲಿ ಪುನರ್ನಿರ್ಮಾಣ ಮಾಡಿದಾಗ ಹೆಚ್ಚುವರಿ ದೃಶ್ಯಗಳಲ್ಲಿ ತನ್ನ ದಿವಂಗತ ಗುರು ಲಾರೆನ್ಸ್‌‌ ಆಲಿವಿಯೆರ್‌‌‌ರ ಧ್ವನಿಯನ್ನು ನಕಲು ಮಾಡಿದ್ದರು. ಬ್ರಿಟಿಷ್‌‌‌ TVಯ ಸಂದರ್ಶನ ಕಾರ್ಯಕ್ರಮ ಪಾರ್ಕಿನ್‌ಸನ್‌‌ ನ 1998ರ ಪುನರಾರಂಭದ ಆವೃತ್ತಿಯಲ್ಲಿ ಪ್ರಸಾರವಾದ ಅವರ ಸಂದರ್ಶನದಲ್ಲಿ ಅವರು ಹಾಸ್ಯ ನಟ ಟಾಮ್ಮಿ ಕೂಪರ್‌‌ರಂತೆ ಅಭಿನಯಿಸಿ ತೋರಿಸಿದ್ದರು. ತಮ್ಮ ಸಾಹಸಪ್ರಧಾನ ಚಲನಚಿತ್ರಗಳಲ್ಲಿ ವಿಶ್ವಾಸಾರ್ಹ ಅಭಿನಯ ತೋರಲು ಕೃತಕ ನಟನೆಯು "ಜಲಾಂತರ್ಗಾಮಿಯಂತೆ" ಸಹಕಾರಿಯಾಗಿದೆ ಎಂದು ಹಾಪ್ಕಿನ್ಸ್‌‌‌ ಹೇಳಿದ್ದರು. ಅವರು "ಓರ್ವ ನಟನಿಗೆ ಕೃತಕ ನಟನೆಯನ್ನು ತಪ್ಪಿಸಲು ಕಷ್ಟಸಾಧ್ಯ, ಸ್ವಲ್ಪವಾದರೂ ನಟನೆ ಇರಲೇಬೇಕಾಗುತ್ತದೆ. ಆದರೆ ನನ್ನ ಪ್ರಕಾರ ಕೃತಕ ನಟನೆಯನ್ನು ಕಡಿಮೆ ಮಾಡಿದಷ್ಟೂ ಉತ್ತಮ" ಎಂದು ಹೇಳಿದ್ದರು."[೧೨]

ಹ್ಯಾನ್ನಿಬಾಲ್‌‌‌‌ ಲೆಕ್ಟರ್‌‌[ಬದಲಾಯಿಸಿ]

ಹಾಪ್ಕಿನ್ಸ್‌‌‌'ರ ಬಹು ಪ್ರಖ್ಯಾತ ಪಾತ್ರವೆಂದರೆ ದ ಸೈಲೆನ್ಸ್‌‌ ಆಫ್‌‌ ದ ಲ್ಯಾಂಬ್ಸ್‌‌ ಚಿತ್ರದಲ್ಲಿನ ನರಭಕ್ಷಕ ಸರಣಿ ಕೊಲೆಗಾರ ಹ್ಯಾನ್ನಿಬಾಲ್‌‌‌‌ ಲೆಕ್ಟರ್‌‌‌ನದು, ಕ್ಲಾರೀಸ್‌ ಸ್ಟಾರ್ಲಿಂಗ್‌‌‌ರ ಪಾತ್ರದ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ‌ಜೋಡೀ ಫಾಸ್ಟರ್‌‌ರ ಎದುರು ಅವರು ನಟಿಸಿದ ಈ ಪಾತ್ರಕ್ಕಾಗಿ ಅವರಿಗೆ 1992ರಲ್ಲಿ ಅತ್ಯುತ್ತಮ ನಟ ಅಕಾಡೆಮಿ ಪ್ರಶಸ್ತಿ ಕೂಡಾ ಸಿಕ್ಕಿತ್ತು. ಈ ಚಿತ್ರವು ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶಕ ಮತ್ತು ಅತ್ಯುತ್ತಮವಾಗಿ ಮೂಡಿಸಲಾದ ಕಥಾವಸ್ತುಗಳ ಪ್ರಶಸ್ತಿಗಳನ್ನೂ ಪಡೆದುಕೊಂಡಿದೆ. ಹಾಪ್ಕಿನ್ಸ್‌‌‌ರು ಪರದೆಯ ಮೇಲೆ ಕೇವಲ 24ಕ್ಕೂ ನಿಮಿಷಗಳಿಗೂ ಸ್ವಲ್ಪವೇ ಹೆಚ್ಚಿನ ಕಾಲ ಮಾತ್ರವೇ ಕಾಣಿಸಿಕೊಳ್ಳುವುದಾದ್ದರಿಂದ ಇದು ಆಸ್ಕರ್‌‌ ಪ್ರಶಸ್ತಿಯನ್ನು ಪಡೆದ ಪ್ರಮುಖ ಪಾತ್ರಗಳಲ್ಲಿ ಕನಿಷ್ಟ ಅವಧಿಯದ್ದಾಗಿದೆ. ಲೆಕ್ಟರ್‌‌‌ನ ಪಾತ್ರದಲ್ಲಿ ಹಾಪ್ಕಿನ್ಸ್‌‌‌ ಎರಡು ಬಾರಿ ನಟಿಸಿದ್ದಾರೆ (2001ರಲ್ಲಿ ಹ್ಯಾನ್ನಿಬಾಲ್ ‌‌‌‌, 2002ರಲ್ಲಿ ರೆಡ್‌‌ ಡ್ರಾಗನ್ ‌‌). ದ ಸೈಲೆನ್ಸ್‌‌ ಆಫ್‌‌ ದ ಲ್ಯಾಂಬ್ಸ್‌‌ ಚಿತ್ರದಲ್ಲಿನ ಅಭಿನಯದ ಅವರ ಮೂಲ ಪಾತ್ರವನ್ನು ಅಮೇರಿಕನ್‌ ಫಿಲ್ಮ್‌‌‌ ಇನ್‌ಸ್ಟಿಟ್ಯೂಟ್‌‌‌ ಸಂಸ್ಥೆಯು ಶ್ರೇಷ್ಠ ಚಲನಚಿತ್ರ ಖಳನಾಯಕ ಎಂದು ಹೆಸರಿಸಿದೆ.[೧೩] ಆ ಪಾತ್ರವನ್ನು ಅವರಿಗೆ ನೀಡಿದ ಸಮಯದಲ್ಲಿ, M. ಬಟರ್‌ಫ್ಲೈ ನಾಟಕ ದಲ್ಲಿ ನಟಿಸುತ್ತಾ ಹಾಪ್ಕಿನ್ಸ್‌‌‌ರು ಲಂಡನ್‌‌‌ ರಂಗಭೂಮಿಗೆ ಮರುಪ್ರವೇಶ ಮಾಡುತ್ತಿದ್ದರು. ಹಾಲಿವುಡ್‌‌ನಲ್ಲಿ ಅನೇಕ ವರ್ಷಗಳ ಕಾಲವಿದ್ದು ಬ್ರಿಟನ್‌‌‌ಗೆ ಮರಳಿದ್ದ ಅವರು, "ನನ್ನ ಜೀವನದ ಆ ಭಾಗವು ಮುಗಿಯಿತು ; ಅದೊಂದು ಮುಗಿದ ಅಧ್ಯಾಯ. ವೆಸ್ಟ್‌‌ ಎಂಡ್‌‌ನ ಬಳಿ ಸುತ್ತಾಡುವ ಗೌರವಾರ್ಹ ನಟನಾಗಿರಬೇಕೆಂದಿದ್ದೇನೆ ಮತ್ತು ಉಳಿದ ನನ್ನ ಜೀವನವನ್ನು ಗೌರವಾರ್ಹ BBCಯ ಉದ್ಯೋಗದಲ್ಲಿ ಕಳೆಯಲು ಉದ್ದೇಶಿಸಿದ್ದೇನೆ" ಎಂದು ಹೇಳುತ್ತಾ, ಎಲ್ಲವೂ ಇದ್ದರೂ ಅಲ್ಲಿನ ವೃತ್ತಿಜೀವನವನ್ನು ಕೈಬಿಟ್ಟು ಬಂದಿದ್ದರು."[೬] ಥಾಮಸ್‌‌ ಹ್ಯಾರಿಸ್‌‌‌ ವಿರಚಿತ ವಾಚನ ಕಾದಂಬರಿಗಳಲ್ಲಿನ ಮೊದಲ ಮೂರು ಕಾದಂಬರಿಗಳ ದೃಶ್ಯಅಳವಡಿಕೆಗಳಲ್ಲಿ ಪ್ರಾತಿನಿಧಿಕ ಖಳನಾಯಕನ ಪಾತ್ರವನ್ನು ಹಾಪ್ಕಿನ್ಸ್‌‌‌ ಮಾಡಿದ್ದರು. ತಮ್ಮ ಕಥೆಯ ಖಳ ಪಾತ್ರವನ್ನು ಹಾಪ್ಕಿನ್ಸ್‌‌‌'ರು ಅಭಿನಯಿಸಿದ ರೀತಿ ನೋಡಿ ಲೇಖಕರು ಬಹಳ ಸಂತೋಷಪಟ್ಟಿದ್ದರು ಎಂದು ವರದಿಯಾಗಿದೆ. ಆದಾಗ್ಯೂ, ಆ ಪಾತ್ರವನ್ನು ರೆಡ್‌‌ ಡ್ರಾಗನ್‌‌ ಚಿತ್ರದಲ್ಲಿ ಮಾತ್ರವೇ ಅಂತಿಮವಾಗಿ ಮಾಡುತ್ತಿರುವುದಾಗಿ ಸರಣಿಯ ಇತ್ತೀಚಿನ ಸೇರ್ಪಡೆ, ಹ್ಯಾನ್ನಿಬಾಲ್‌‌‌‌ ರೈಸಿಂಗ್ ‌‌‌ನಲ್ಲಿ ಆಖ್ಯಾಯಿಕೆಯ ಪಾತ್ರದಲ್ಲಿ ಕೂಡಾ ಆ ಪಾತ್ರವನ್ನು ಪುನರಾವರ್ತಿಸಲಾರೆ ಎಂದು ಹಾಪ್ಕಿನ್ಸ್‌‌‌ ಹೇಳಿದ್ದಾರೆ.

ಖಾಸಗಿ ಜೀವನ[ಬದಲಾಯಿಸಿ]

2005ರಲ್ಲಿ ಟೊರೊಂಟೋ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿರುವ ಹಾಪ್ಕಿನ್ಸ್‌‌‌

2007ರ ಹಾಗೆ, ಹಾಪ್ಕಿನ್ಸ್‌‌‌ರು ಯುನೈಟೆಡ್‌‌ ಸ್ಟೇಟ್ಸ್‌‌ನಲ್ಲಿ ವಾಸಿಸುತ್ತಿದ್ದಾರೆ. ಹಿಂದೊಮ್ಮೆ 1970ರ ದಶಕದಲ್ಲಿ ತಮ್ಮ ಚಿತ್ರ ವೃತ್ತಿಜೀವನವನ್ನು ಅರಸಿ ಅವರು ಈ ರಾಷ್ಟ್ರಕ್ಕೆ ಬಂದಿದ್ದರೂ, 1980ರ ದಶಕದ ಕೊನೆಯಲ್ಲಿ ಬ್ರಿಟನ್‌‌‌ಗೆ ಮರಳಿದ್ದರು. ಆದಾಗ್ಯೂ ತಮ್ಮ 1990ರ ದಶಕದಲ್ಲಿನ ಯಶಸ್ಸಿನ ನಂತರ ಅವರು U.S.ಗೆ ಮರಳಲು ನಿರ್ಧರಿಸಿದ್ದರು. 12 ಏಪ್ರಿಲ್‌ 2000ರಂದು ಅವರು ದೇಶೀಕರಿಸಿದ ಪೌರರಾದರಲ್ಲದೇ, ರಾಷ್ಟ್ರದಾದ್ಯಂತ 3,000-ಮೈಲುಗಳ ರಸ್ತೆ ಯಾತ್ರೆ ನಡೆಸಿ ಸಂತಸವನ್ನು ಹಂಚಿಕೊಂಡಿದ್ದರು. ಹಾಪ್ಕಿನ್ಸ್‌‌‌ರು ಮೂರು ಬಾರಿ ಮದುವೆಯಾಗಿದ್ದಾರೆ. ಪೆಟ್ರೋನೆಲ್ಲಾ ಬಾರ್ಕರ್‌‌‌ (1967–1972) ಮತ್ತು ಜೆನ್ನಿಫರ್‌ ‌ಲಿಂಟನ್‌‌ (1973–2002)ರವರುಗಳು ಅವರ ಮೊದಲ ಇಬ್ಬರು ಪತ್ನಿಯರಾಗಿದ್ದಾರೆ. ಅವರು ಈಗ ಕೊಲಂಬಿಯಾ-ಸಂಜಾತೆ ಸ್ಟೆಲ್ಲಾ ಅರ್ರೋಯಾವೆಯವರನ್ನು ಮದುವೆಯಾಗಿದ್ದಾರೆ. ತಮ್ಮ ಮೊದಲ ಮದುವೆಯಿಂದ, ನಟಿ ಹಾಗೂ ಗಾಯಕಿಯಾಗಿರುವ ಅಬಿಗೈಲ್‌‌ ಹಾಪ್ಕಿನ್ಸ್‌‌‌ (b. 20 ಆಗಸ್ಟ್‌ 1968) ಎಂಬ ಪುತ್ರಿಯನ್ನು ಅವರು ಹೊಂದಿದ್ದಾರೆ. ಅನೇಕ ದತ್ತಿನಿಧಿಗಳು ಮತ್ತು ಕೋರಿಕೆ ಸಂಸ್ಥೆಗಳಿಗೆ ಅವರು ತಮ್ಮ ಬೆಂಬಲವನ್ನು ನೀಡಿದ್ದಾರೆ, ಇದರಲ್ಲಿ ಗಮನಾರ್ಹವಾದುದೆಂದರೆ, ನ್ಯಾಷನಲ್‌ ಟ್ರಸ್ಟ್‌ನ ಸ್ನೋಡೊನಿಯಾ ಅಪೀಲ್‌‌ನ ಅಧ್ಯಕ್ಷರಾಗಿ, ಸ್ನೋಡೊನಿಯಾ ರಾಷ್ಟ್ರೀಯ ಉದ್ಯಾನದ ಸಂರಕ್ಷಣೆಗಾಗಿ ಮತ್ತು ಸ್ನೋಡಾನ್‌ನ ಭಾಗಗಳನ್ನು ಪ್ರತಿಷ್ಠಾನಕ್ಕಾಗಿ ಖರೀದಿಸುವ ಉದ್ದೇಶಗಳಿಗಾಗಿ ಮಾಡಿದ ನಿಧಿಸಂಗ್ರಹವಾಗಿದೆ. ಅವರ ಇಂತಹಾ ಚಟುವಟಿಕೆಗಳ ಕುರಿತ ಆಂಥನಿ ಹಾಪ್ಕಿನ್ಸ್‌‌‌' ಸ್ನೋಡೊನಿಯಾ , ಎಂಬ ಪುಸ್ತಕವನ್ನು ಗ್ರಹಾಂ ನೊಬೆಲ್ಸ್‌‌ನೊಂದಿಗೆ ಪ್ರಕಟಿಸಲಾಯಿತು. ಅನೇಕ ಮಾನವಪ್ರೇಮಿ ಸಂಘಟನೆಗಳಿಗೆ ಸಮಯ ಮತ್ತು ಬೆಂಬಲವನ್ನೂ ಕೂಡಾ ಹಾಪ್ಕಿನ್ಸ್‌‌‌ ನೀಡುತ್ತಾರೆ. ವೆನಿಸ್‌‌ ಮತ್ತು ಕ್ಯಾಲಿಫೋರ್ನಿಯಾ-ಮೂಲದ ಲಾಭೋದ್ದೇಶರಹಿತ ಮಾದಕವಸ್ತುಗಳ ಸೇವನೆಯಿಂದ ಹೊರಬರಲೆತ್ನಿಸುತ್ತಿರುವ ಮಹಿಳೆಯರಿಗೆ ಪುನರ್ವಸತಿ ಯೋಜನೆಯನ್ನು ಹಮ್ಮಿಕೊಂಡಿದ್ದ ವುಮನ್‌ ಇನ್‌ ರಿಕವರಿ, Inc. ಸಂಸ್ಥೆಯ ನಿಧಿಸಂಗ್ರಹ ಸಮಾರಂಭದಲ್ಲಿ ಗೌರವ ಅತಿಥಿಯಾಗಿದ್ದರು. ಅವರು, ಕ್ಯಾಲಿಫೋರ್ನಿಯಾದ ಮಾಲಿಬುನಲ್ಲಿ ವಾಸಿಸುತ್ತಿದ್ದರೂ ಕ್ಯಾಲಿಫೋರ್ನಿಯಾದ ಸಾಂಟಾ ಮೋನಿಕಾದಲ್ಲಿನ ರಸ್ಕಿನ್‌ ನಟನಾ ಶಾಲೆ/ಸ್ಕೂಲ್‌ ಆಫ್‌ ಆಕ್ಟಿಂಗ್‌ನಲ್ಲಿ ತರಬೇತಿಯನ್ನು ಸ್ವಯಂಪ್ರೇರಿತರಾಗಿ ನೀಡುತ್ತಿದ್ದಾರೆ. ಮದ್ಯಸೇವನೆಯಿಂದ ಹೊರಬರಲು 12-ಹಂತಗಳ ಸಲಹಾಸಭೆಗಳಿಗೆ ಹಾಜರಾಗಿದ್ದ,[೧೪] ಹಾಪ್ಕಿನ್ಸ್‌ರವರು‌‌ 1975ರಲ್ಲಿ ಇದ್ದಕ್ಕಿದ್ದಂತೆ ಮದ್ಯಪಾನವನ್ನು ತ್ಯಜಿಸಿದ್ದರು. 9 ಏಪ್ರಿಲ್‌ 2007ರಂದು ಪ್ರಸಾರವಾದ ಟುನೈಟ್‌ ಷೋ ಎಂಬ ಸಂದರ್ಶನ ಕಾರ್ಯಕ್ರಮದ ಪ್ರಕಾರ ಚಿತ್ರೀಕರಣದ ಸೆಟ್‌/ಸ್ಥಳನಲ್ಲಿದ್ದಾಗ ಹಾಪ್ಕಿನ್ಸ್‌‌‌ರು ತಮಾಷೆಯ ಪ್ರವೃತ್ತಿಯನ್ನು ಹೊಂದಿರುತ್ತಿದ್ದರಲ್ಲದೇ, ಚಿತ್ರನಿರ್ಮಾಣದ ವೇಳೆಯಲ್ಲಿ ದೃಶ್ಯವೊಂದನ್ನು ಚಿತ್ರೀಕರಿಸುವ ಮುನ್ನ ನಾಯಿಯಂತೆ ಬೊಗಳುವುದು ಹಾಗೂ ಇತರೆ ಚಟುವಟಿಕೆಗಳ ಮೂಲಕ ಮನಸ್ಸನ್ನು ಹಗುರಗೊಳಿಸಲು ಪ್ರಯತ್ನಿಸುತ್ತಿದ್ದರು. ಪರಿಸರ ಸಂರಕ್ಷಣಾ ಸಮೂಹ ಸಂಘಟನೆಯಾದ ಗ್ರೀನ್‌ಪೀಸ್‌ನ ಪ್ರಮುಖ ಸದಸ್ಯರೂ ಆಗಿರುವ ಹಾಪ್ಕಿನ್ಸ್‌‌‌, 2008ರ ಆದಿಯ ಮಟ್ಟಿಗೆ ಜಪಾನ್‌‌ನ ವಾರ್ಷಿಕ ವ್ಹೇಲ್‌ಗಳ ಬೇಟೆಯು ಇನ್ನೂ ಮುಂದುವರೆಯುತ್ತಿರುವುದರ ಬಗ್ಗೆ ದನಿಯೆತ್ತಲು ನಿರ್ಮಿಸಿದ ಕಿರುತೆರೆ ಜಾಹಿರಾತು ಅಭಿಯಾನದಲ್ಲಿ ಕಾಣಿಸಿಕೊಂಡಿದ್ದಾರೆ.[೧೫] RAPtನ (ರೀಹ್ಯಾಬಿಲಿಟೇಷನ್‌ ಫಾರ್‌ ಅಡಿಕ್ಟೆಡ್‌ ಪ್ರಿಸನರ್ಸ್‌‌ ಟ್ರಸ್ಟ್‌/ಮಾದಕವಸ್ತು ವ್ಯಸನ ಹೊಂದಿರುವ ಖೈದಿಗಳ ಪುನರ್ವಸತಿ ಪ್ರತಿಷ್ಠಾನ) ಪ್ರಾರಂಭದ ದಿನಗಳಿಂದಲೂ ಅದರ ಪೋಷಕರೂ ಆಗಿರುವ ಹಾಪ್ಕಿನ್ಸ್‌‌‌, ಅದರ ಪ್ರಥಮ ತುರ್ತು ನಿರ್ವಹಣೆಯ ಮಾದಕವಸ್ತು ಮತ್ತು ಮದ್ಯಪಾನ ಪುನರ್ವಸತಿ ಘಟಕವನ್ನು ಡೌನ್‌ವ್ಯೂನಲ್ಲಿ (HM ಬಂದೀಖಾನೆ) ತೆರೆಯಲು 1992ರಲ್ಲಿ ಸಹಾಯ ಮಾಡಿದ್ದರು. ಅವರು ಹಾಸ್ಯನಟ ಟಾಮ್ಮಿ ಕೂಪರ್‌‌ರ ಪ್ರಶಂಸಕರಲ್ಲಿ ಒಬ್ಬರು. 23 ಫೆಬ್ರವರಿ 2008ರಂದು, ಟಾಮ್ಮಿ ಕೂಪರ್‌‌ ಸಂಘದ ಪೋಷಕರಾಗಿ, ಕೇರ್‌ಫಿಲ್ಲಿಯಲ್ಲಿಯ ಹಾಸ್ಯರಂಜಕರ ತವರು ನಗರದಲ್ಲಿ ಸ್ಮಾರಕ ಪ್ರತಿಮೆಯನ್ನು ಅನಾವರಣಗೊಳಿಸಿದರು. ಈ ಸಮಾರಂಭಕ್ಕಾಗಿ, ಫೆಜ್‌ ಎಂಬ ಕೂಪರ್‌ರ ಛಾಪಿನ ವಸ್ತ್ರವನ್ನು ಧರಿಸಿದ್ದ ಹಾಪ್ಕಿನ್ಸ್‌‌‌ರವರು ಅವರ ವಾಡಿಕೆಯ ಹಾಸ್ಯಪ್ರಹಸನವೊಂದನ್ನು ಅಭಿನಯಿಸಿದ್ದರು.[೧೬]

ಇತರೆ ಸಾಧನೆಗಳು[ಬದಲಾಯಿಸಿ]

ಹಾಪ್ಕಿನ್ಸ್‌‌‌ರವರು ಓರ್ವ ಪ್ರತಿಭಾನ್ವಿತ ಪಿಯಾನೋ ವಾದಕರೂ ಹೌದು. 1986ರಲ್ಲಿ, ಅವರು "ಡಿಸ್ಟೆಂಟ್‌ ಸ್ಟಾರ್‌" ಎಂಬ ಹೆಸರಿನ ಏಕಗೀತೆಯನ್ನು ಬಿಡುಗಡೆಗೊಳಿಸಿದ್ದರು. UK ಗೀತೆಗಳ ಪಟ್ಟಿಯಲ್ಲಿ ಅದು #75ನೇ ಸ್ಥಾನ ಪಡೆದಿತ್ತು. 2007ರಲ್ಲಿ, ತಾವು ವಿಶ್ವದ ಸುತ್ತ ಪ್ರವಾಸ ಹೋಗಲು ತೆರೆಯಿಂದ ತಾತ್ಕಾಲಿಕ ನಿವೃತ್ತಿ ಪಡೆದಿರುವುದಾಗಿ ಅವರು ಘೋಷಿಸಿದರು.[೧೭] ಸ್ಟೀಫನ್‌ ಬಾರ್ಟನ್‌‌ರೊಂದಿಗೆ ವೃಂದವಾದ್ಯ ಸಂಯೋಜಕರಾಗಿ ಹಾಪ್ಕಿನ್ಸ್‌‌‌ರು ಸಂಗೀತ ಕಛೇರಿಯೊಂದಕ್ಕೆ ಸಂಗೀತ ಸಂಯೋಜನೆ ಕೂಡಾ ಮಾಡಿದ್ದಾರೆ. ಅಂತಹಾ ಸಂಯೋಜನೆಗಳೆಂದರೆ ಅಕ್ಟೋಬರ್‌‌ 2008ರಲ್ಲಿ ಡಲ್ಲಾಸ್‌ ಸಿಂಫನಿ ವಾದ್ಯಗೋಷ್ಠಿಯು ವಿಶ್ವ ಪ್ರದರ್ಶನ ನೀಡಿದ ದ ಮಾಸ್ಕ್ಯೂ ಆಫ್‌ ಟೈಮ್‌ ಮತ್ತು ಷಿಜಾಯಿಡ್‌ ಸಾಲ್ಸಾ ಆಗಿವೆ.[೧೮] 1996ರಲ್ಲಿ, ವೇಲ್ಸ್‌‌ನ ಪ್ರದೇಶದ ಕಥೆಯನ್ನು ಹೊಂದಿರುವ ಚೆಕೋವ್‌‌‌ಅಂಕಲ್‌ ವಾನ್ಯಾ ದ ದೃಶ್ಯ ಅಳವಡಿಕೆಯಾದ ತಮ್ಮ ಪ್ರಥಮ ಚಿತ್ರ ಆಗಸ್ಟ್ ‌ ಅನ್ನು ಹಾಪ್ಕಿನ್ಸ್‌‌ ನಿರ್ದೇಶಿಸಿದರು. ಅವರ ಪ್ರಥಮ ಚಿತ್ರಕಥಾ ರಚನೆಯನ್ನು ಹೊಂದಿದ್ದ ಅವರೇ ನಿರ್ದೇಶಿಸಿ ಸಂಗೀತ ಸಂಯೋಜಿಸಿದ ಪ್ರಾಯೋಗಿಕ ರೂಪಕ ಸ್ಲಿಪ್‌ಸ್ಟ್ರೀಮ್‌ ಚಿತ್ರವು 2007ರಲ್ಲಿನ ಸನ್‌ಡಾನ್ಸ್‌ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿತವಾಯಿತು. BBCಯ ಸಾಂದರ್ಭಿಕ ಹಾಸ್ಯ ಕಾರ್ಯಕ್ರಮ ಓನ್ಲೀ ಫೂಲ್ಸ್‌ ಅಂಡ್‌ ಹಾರ್ಸಸ್‌ ನ ಅಭಿಮಾನಿಯೂ ಆಗಿರುವ ಹಾಪ್ಕಿನ್ಸ್‌‌‌, ಸಂದರ್ಶನವೊಂದರಲ್ಲಿ ಆ ಸರಣಿಯಲ್ಲಿ ಕಾಣಿಸಿಕೊಳ್ಳಲು ತಾನು ಬಹಳ ಇಷ್ಟಪಡುತ್ತೇನೆ ಎಂದು ತಿಳಿಸಿದ್ದರು. ಈ ಸಂದರ್ಶನವನ್ನು ನೋಡಿದ ಅದರ ಲೇಖಕ ಜಾನ್‌ ಸುಲ್ಲಿವಾನ್‌, ಹಾಪ್ಕಿನ್ಸ್‌‌‌ರನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಡ್ಯಾನ್ನಿ ಡ್ರಿಸ್ಕಾಲ್‌ ಎಂಬ ಸ್ಥಳೀಯ ಖಳನಾಯಕನನ್ನು ಸೃಷ್ಟಿಸಿದರು. ಆದಾಗ್ಯೂ ನವೀನ ಸರಣಿಯ ಚಿತ್ರೀಕರಣವು ದ ಸೈಲೆನ್ಸ್‌ ಆಫ್‌ ದ ಲ್ಯಾಂಬ್ಸ್‌‌ ನ ಚಿತ್ರೀಕರಣದ ಸಮಯದಲ್ಲಿಯೇ ಆರಂಭವಾದುದರಿಂದ, ಹಾಪ್ಕಿನ್ಸ್‌‌‌ ಅದರಲ್ಲಿ ಪಾಲ್ಗೊಳ್ಳುವಂತಿರಲಿಲ್ಲ. ಆ ಪಾತ್ರವು ಅವರ ಬದಲಿಗೆ ಸ್ನೇಹಿತ ರಾಯ್‌ ಮಾರ್ಸ್‌‌ಡೆನ್‌ರಿಗೆ ಹೋಯಿತು.[೧೯] ಅನೇಕ ಪ್ರಖ್ಯಾತ ಐತಿಹಾಸಿಕ ಮತ್ತು ಕಾಲ್ಪನಿಕ ಪಾತ್ರಗಳನ್ನು ಹಾಪ್ಕಿನ್ಸ್‌‌‌ ಅಭಿನಯಿಸಿದ್ದು, ಅವುಗಳಲ್ಲಿ ಕೆಳಕಂಡವು ಸೇರಿವೆ:

ಪ್ರಶಸ್ತಿಗಳು[ಬದಲಾಯಿಸಿ]

ದ ಸೈಲೆನ್ಸ್‌‌ ಆಫ್‌‌ ದ ಲ್ಯಾಂಬ್ಸ್‌‌ ಚಿತ್ರಕ್ಕಾಗಿ ಪ್ರಶಸ್ತಿ ಗಳಿಸುವುದರೊಂದಿಗೆ, ಹಾಪ್ಕಿನ್ಸ್‌‌‌ರು ದ ರಿಮೇನ್ಸ್‌‌ ಆಫ್‌‌ ದ ಡೇ (1993), ನಿಕ್ಸಾನ್‌‌‌ (1995) ಮತ್ತು ಅಮಿಸ್ಟಾಡ್‌‌‌ (1997)ಗಳ ಪಾತ್ರ ನಿರ್ವಹಣೆಗೆ ಆಸ್ಕರ್‌‌ ಪ್ರಶಸ್ತಿ-ನಾಮಾಂಕಿತರೂ ಆಗಿದ್ದರು. BBC'ಯ ನಿರ್ಮಾಣದ ವಾರ್‌ ಅಂಡ್‌ ಪೀಸ್‌‌ ಚಿತ್ರದಲ್ಲಿನ ಪಿಯೆರ್ರೆ ಬೆಜುಖೊವ್‌‌‌ನ ಪಾತ್ರ ನಿರ್ವಹಣೆಗಾಗಿ 1973ರಲ್ಲಿ ಅತ್ಯುತ್ತಮ ನಟನಾಗಿ BAFTA ಪ್ರಶಸ್ತಿ ಪಡೆದ ಹಾಪ್ಕಿನ್ಸ್‌‌‌, ದ ಸೈಲೆನ್ಸ್‌‌ ಆಫ್‌‌ ದ ಲ್ಯಾಂಬ್ಸ್ ಮತ್ತು ಷಾಡೋಲ್ಯಾಂಡ್ಸ್ ಗಳಲ್ಲಿಯೂ ಕೂಡಾ ಪ್ರಶಸ್ತಿ ಪಡೆದಿದ್ದಾರೆ. ಮ್ಯಾಜಿಕ್ ‌‌‌ ಮತ್ತು ದ ರಿಮೇನ್ಸ್‌‌ ಆಫ್‌‌ ದ ಡೇ ಚಿತ್ರಗಳ ಅದೇ ವರ್ಗದಲ್ಲಿ ನಾಮಾಂಕಿತಗೊಂಡಿದ್ದ ಅವರು ದ ಲಯನ್‌‌ ಇನ್‌‌ ವಿಂಟರ್ ‌‌ ಚಿತ್ರದಲ್ಲಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದಿದ್ದಾರೆ. ದ ಲಿಂಡ್‌ಬರ್ಗ್ಹ್‌‌‌ ಕಿಡ್‌ನ್ಯಾಪಿಂಗ್‌ ಕೇಸ್‌‌ ಮತ್ತು ದ ಬಂಕರ್‌‌ ಚಿತ್ರಗಳಲ್ಲಿನ ತಮ್ಮ ಪಾತ್ರಗಳಿಗಾಗಿ ಎಮ್ಮಿ ಪ್ರಶಸ್ತಿಗಳನ್ನು ಗೆದ್ದಿರುವ ಅವರು, ದ ಹಂಚ್‌ಬ್ಯಾಕ್‌ ಆಫ್‌‌ ನೋಟ್ರೆ ಡೇಮ್‌‌ ಮತ್ತು ಗ್ರೇಟ್‌‌ ಎಕ್ಸ್‌‌ಪೆಕ್ಟೇಷನ್ಸ್‌‌‌‌ ಚಿತ್ರಗಳಿಗಾಗಿ ಎಮ್ಮಿ-ಪ್ರಶಸ್ತಿಗೆ ನಾಮಾಂಕಿತಗೊಂಡಿದ್ದರು.[೨೦] ಸ್ವಿಟ್ಜರ್‌ಲೆಂಡ್‌‌‌'ನ ಲೊಕಾರ್ನೋ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸ್ಲಿಪ್‌ಸ್ಟ್ರೀಮ್ ‌‌ ಚಿತ್ರದಲ್ಲಿನ ನಿರ್ದೇಶನ ಮತ್ತು ನಟನೆ ಎರಡಕ್ಕೂ ಅವರು ಪ್ರಶಸ್ತಿಗಳನ್ನು ಪಡೆದಿದ್ದರು. ಫೆಬ್ರವರಿ 2008ರಲ್ಲಿ ನಡೆದ ಆರೆಂಜ್‌‌ ಬ್ರಿಟಿಷ್‌‌‌ ಅಕಾಡೆಮಿ ಚಿತ್ರ ಪ್ರಶಸ್ತಿಗಳ ಸಮಾರಂಭದಲ್ಲಿ ಹಾಪ್ಕಿನ್ಸ್‌‌‌ರು ಬ್ರಿಟಿಷ್‌‌‌ ಅಕಾಡೆಮಿ ಆಫ್‌‌ ಫಿಲ್ಮ್‌‌‌‌ ಅಂಡ್‌‌ ಟೆಲಿವಿಷನ್‌‌‌ ಆರ್ಟ್ಸ್‌‌ (BAFTA)ನ ಫೆಲೋ ಸದಸ್ಯರಾದರು.[೨೧] 1979ರಲ್ಲಿ, ಆಂಥನಿ ಹಾಪ್ಕಿನ್ಸ್‌‌‌ರು ಲಂಡನ್‌‌‌ನ ರಾಯಲ್‌‌ ಅಕಾಡೆಮಿ ಆಫ್‌‌ ಮ್ಯೂಸಿಕ್‌‌‌ ಸಂಸ್ಥೆಯ ಗೌರವ ಸದಸ್ಯರೂ ಆದರು.[೨೨]

ಚಲನಚಿತ್ರಗಳ ಪಟ್ಟಿ[ಬದಲಾಯಿಸಿ]

ವರ್ಷ ಚಲನಚಿತ್ರ ಪಾತ್ರ ಟಿಪ್ಪಣಿಗಳು
1967 A ಫ್ಲಿಯಾ ಇನ್‌ ಹರ್‌ ಇಯರ್‌‌ ಎಟಿಯೆನ್ನೆ ಪ್ಲೂಚೆಯುಕ್ಸ್‌‌‌ TV
ದ ವೈಟ್‌ ಬಸ್‌‌ ಬ್ರೆಚ್ಟಿಯನ್‌‌
1968 ದ ಲಯನ್‌‌ ಇನ್‌‌ ವಿಂಟರ್ ರಿಚರ್ಡ್‌‌ ಅತ್ಯುತ್ತಮ ಪೋಷಕ ನಟ BAFTA ಪ್ರಶಸ್ತಿ‌ಗೆ ನಾಮಾಂಕಿತಗೊಂಡಿದ್ದರು
1969 ದ ಲುಕಿಂಗ್‌‌‌ ಗ್ಲಾಸ್‌‌‌ ವಾರ್‌‌‌ ಜಾನ್‌‌‌ ಅವೆರಿ
ಹ್ಯಾಮ್ಲೆಟ್‌ ಕ್ಲಾಡಿಯಸ್‌‌
ಡಿಪಾರ್ಟ್‌ಮೆಂಟ್‌‌ S ಗ್ರೆಗ್‌‌ ಹ್ಯಾಲಿಡೇ TV
1970 ದ ಗ್ರೇಟ್‌‌ ಇನಿಮಿಟೇಬಲ್‌‌ Mr. ಡಿಕನ್ಸ್‌‌ ಚಾರ್ಲ್ಸ್‌‌ ಡಿಕನ್ಸ್‌‌ ಕಿರುತೆರೆ ಚಿತ್ರ
ಹಾರ್ಟ್ಸ್‌‌ ಅಂಡ್‌ ಫ್ಲವರ್ಸ್‌‌‌ ಬಾಬ್‌‌ TV – ಪ್ಲೇ ಫಾರ್‌ ಟುಡೇ
ಬ್ರಿಟಿಷ್‌‌‌ ಅಕಾಡೆಮಿಯ ಅತ್ಯುತ್ತಮ ನಟ ಕಿರುತೆರೆ ಪ್ರಶಸ್ತಿಗೆ ನಾಮಾಂಕಿತಗೊಂಡಿದ್ದರು
1971 ವೆನ್‌ ಎಯ್ಟ್‌ ಬೆಲ್ಸ್‌ ಟಾಲ್‌‌ ಫಿಲಿಪ್‌‌‌‌ ಕಾಲ್‌ವರ್ಟ್‌‌
1972 ಯಂಗ್‌ ವಿನ್ಸ್‌ಟನ್ ಡೇವಿಡ್‌ ಲ್ಲಾಯ್ಡ್‌‌ ಜಾರ್ಜ್‌‌‌
ವಾರ್‌ ಅಂಡ್‌ ಪೀಸ್‌‌ ಪಿಯೆರ್ರೆ ಬೆಜುಖೊವ್‌‌‌ ಬ್ರಿಟಿಷ್‌‌‌ ಅಕಾಡೆಮಿಯ ಅತ್ಯುತ್ತಮ ನಟ ಕಿರುತೆರೆ ಪ್ರಶಸ್ತಿ
A ಡಾಲ್ಸ್‌‌ ಹೌಸ್‌‌‌ ಟೋರ್‌ವಾಲ್ಡ್‌‌ ಹೆಲ್ಮರ್‌‌
1974 ದ ಗರ್ಲ್‌‌ ಫ್ರಮ್‌‌ ಪೆಟ್ರೋವ್ಕಾ ಕೋಸ್ಟ್ಯಾ
QB VII Dr. ಆಡಮ್‌‌ ಕೆಲ್ನೋ
ಜಗ್ಗರ್‌‌ನಾಟ್‌‌‌ Supt. ಜಾನ್‌ ಮೆಕ್‌ಕ್ಲಿಯೊಡ್‌
ಆಲ್‌‌ ಕ್ರಿಯೇಚರ್ಸ್‌ ಗ್ರೇಟ್‌ ಅಂಡ್‌ ಸ್ಮಾಲ್‌‌ ಸೀಗ್‌ಫ್ರೀಡ್‌‌ ಫಾರ್ನನ್‌‌ TV
ದ ಚೈಲ್ಡ್‌ಹುಡ್‌‌ ಫ್ರೆಂಡ್‌‌ ಅಲೆಕ್ಸಾಂಡರ್‌‌ ಟಾಷ್‌ಕೋವ್‌‌ TV – ಪ್ಲೇ ಫಾರ್‌ ಟುಡೇ
1976 ಡಾರ್ಕ್‌‌ ವಿಕ್ಟರಿ Dr. ಮೈಕೆಲ್‌ ಗ್ರಾಂಟ್‌‌‌ TV
ದ ಲಿಂಡ್‌ಬರ್ಗ್ಹ್‌‌‌ ಕಿಡ್‌ನ್ಯಾಪಿಂಗ್‌ ಕೇಸ್‌ ಬ್ರೂನೋ ರಿಚರ್ಡ್‌‌ ಹಾಪ್ಟ್‌‌ಮನ್‌‌‌ ಶ್ರೇಷ್ಠ ಪ್ರಮುಖ ನಟ/ಪಾತ್ರದ ನಟ ಎಮ್ಮಿ ಪ್ರಶಸ್ತಿ – ಕಿರುಸರಣಿಚಿತ್ರ ಅಥವಾ ಚಲನಚಿತ್ರ ವಿಭಾಗದಲ್ಲಿ
ವಿಕ್ಟರಿ ಅಟ್‌ ಎಂಟೆಬ್ಬೆ ಪ್ರಧಾನ ಮಂತ್ರಿ ಯಿಟ್ಜ್‌ಹಾಕ್‌‌ ರಾಬಿನ್‌‌
1977 A ಬ್ರಿಡ್ಜ್‌ ಟೂ ಫಾರ್‌‌ Lt. Col. ಜಾನ್‌‌‌ D. ಫ್ರಾಸ್ಟ್‌‌
ಆಡ್ರೆ ರೋಸ್‌‌ ಎಲಿಯಟ್‌ ಹೂವರ್‌‌ ಅತ್ಯುತ್ತಮ ನಟನಾಗಿ ಸ್ಯಾಟರ್ನ್‌ ಪ್ರಶಸ್ತಿ‌ಗೆ ನಾಮಾಂಕಿತಗೊಂಡಿದ್ದರು
1978 ಮ್ಯಾಜಿಕ್ ಚಾರ್ಲ್ಸ್‌ "ಕಾರ್ಕಿ" ವಿದರ್ಸ್‌‌‌/ವಾಯ್ಸ್‌‌ ಆಫ್‌ ಫ್ಯಾಟ್ಸ್‌‌‌ ಪ್ರಧಾನ ಪಾತ್ರದಲ್ಲಿನ ಅತ್ಯುತ್ತಮ ನಟ BAFTA ಪ್ರಶಸ್ತಿಗೆ ನಾಮಾಂಕಿತಗೊಂಡಿದ್ದರು
ಅತ್ಯುತ್ತಮ ನಟ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿ – ಚಲನಚಿತ್ರ ರೂಪಕಕ್ಕೆ ನಾಮಾಂಕಿತಗೊಂಡಿದ್ದರು
ಇಂಟರ್‌‌ನ್ಯಾಷನಲ್‌‌ ವೆಲ್‌‌ವೆಟ್‌‌ ಕ್ಯಾಪ್ಟನ್‌‌ ಜಾನ್‌ಸನ್‌‌
1979 ಮೇಫ್ಲವರ್‌‌: ದ ಪಿಲ್‌ಗ್ರಿಮ್ಸ್‌‌ ಅಡ್ವೆಂಚರ್‌‌ Capt. ಜೋನ್ಸ್‌ TV
1980 ದ ಎಲಿಫೆಂಟ್‌‌ ಮ್ಯಾನ್‌‌ Dr. ಫ್ರೆಡೆರಿಕ್‌ ಟ್ರೆವೆಸ್‌‌
A ಚೇಂಜ್‌ ಆಫ್‌ ಸೀಸನ್ಸ್‌‌‌ ಆಡಮ್‌‌ ಇವಾನ್ಸ್‌‌‌‌
1981 ದ ಬಂಕರ್‌‌ ಅಡಾಲ್ಫ್‌‌‌ ಹಿಟ್ಲರ್‌‌ ಶ್ರೇಷ್ಠ ಪ್ರಮುಖ ನಟ/ಪಾತ್ರದ ನಟ ಎಮ್ಮಿ ಪ್ರಶಸ್ತಿ – ಕಿರುಸರಣಿಚಿತ್ರ ಅಥವಾ ಚಲನಚಿತ್ರ ವಿಭಾಗದಲ್ಲಿ
ಪೀಟರ್‌ ಅಂಡ್‌‌ ಪಾಲ್‌‌ ಟಾರ್ಸಸ್‌ನ ಪಾಲ್‌‌ TV
ಒಥೆಲ್ಲೋ ಒಥೆಲ್ಲೋ TV
1982 ದ ಹಂಚ್‌ಬ್ಯಾಕ್‌ ಆಫ್‌‌ ನೋಟ್ರೆ ಡೇಮ್‌‌ ಕ್ವಾಸಿಮೊಡೊ TV
[[ಶ್ರೇಷ್ಠ ಪ್ರಮುಖ ನಟ/ಪಾತ್ರದ ನಟ ಎಮ್ಮಿ ಪ್ರಶಸ್ತಿಗೆ ನಾಮಾಂಕಿತಗೊಂಡಿದ್ದರು – ಕಿರುಸರಣಿಚಿತ್ರ ಅಥವಾ ಚಲನಚಿತ್ರ ವಿಭಾಗದಲ್ಲಿ ]]
1983 A ಮ್ಯಾರೀಡ್‌ ಮ್ಯಾನ್‌‌ ಜಾನ್‌ ಸ್ಟ್ರಿಕ್‌ಲ್ಯಾಂಡ್‌‌ TV
1984 ದ ಬೌಂಟಿ ಲೆಫ್ಟಿನೆಂಟ್‌‌ ವಿಲಿಯಮ್‌‌ ಬ್ಲಿಘ್‌‌
1985 ಹಾಲಿವುಡ್‌‌ ವೈವ್ಸ್‌‌ ನೀಲ್‌ ಗ್ರೇ TV
ಆರ್ಚ್‌‌‌ ಆಫ್‌ ಟ್ರಯಂಫ್‌‌ Dr. ರಾವಿಕ್‌ TV
ಗಿಲ್ಟಿ ಕನ್‌ಸೈನ್ಸ್‌‌ ಅರ್ಥರ್‌‌ ಜ್ಯಾಮಿಸನ್‌‌‌ TV
ಮುಸ್ಸೋಲಿನಿ ಅಂಡ್‌‌ I ಕೌಂಟ್‌‌ ಗಲೇಜ್ಜೋ ಸಿಯಾನೋ TV
ಚಲನಚಿತ್ರ ಅಥವಾ ಕಿರುಸರಣಿಗಳಲ್ಲಿನ ನಟನೆಗಾಗಿ ಉತ್ತಮ ನಟ ಕೇಬಲ್‌ಏಸ್‌ ಪ್ರಶಸ್ತಿ
ದ ಗುಡ್‌ ಫಾದರ್‌‌ ಬಿಲ್‌ ಹೂಪರ್‌‌
1987 84 ಚೇರಿಂಗ್‌ ಕ್ರಾಸ್‌‌ ರೋಡ್‌ ಫ್ರಾಂಕ್‌ ಡೋಯೆಲ್‌‌ ಅತ್ಯುತ್ತಮ ನಟ ಮಾಸ್ಕೋ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ
1988 ದ ಡಾನಿಂಗ್‌‌ ಆಂಗಸ್‌‌ ಬಾರ್ರೀ
ಅಕ್ರಾಸ್‌‌ ದ ಲೇಕ್ ಡೊನಾಲ್ಡ್‌‌ ಕ್ಯಾಂಪ್‌ಬೆಲ್‌‌ CBE TV
A ಕೋರಸ್‌ ಆಫ್‌ ಡಿಸ್‌ಅಪ್ರೂವಲ್‌ ಡೇಫಿಡ್‌‌ ಅಪ್‌‌ ಲ್ಲೆವೆಲ್ಲಿನ್‌‌
ದ ಟೆಂತ್‌‌ ಮ್ಯಾನ್‌‌ ಜೀನ್‌ ಲೂಯಿಸ್‌ ಛಾವೆಲ್‌ ಅತ್ಯುತ್ತಮ ನಟ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿಗೆ ನಾಮಾಂಕಿತಗೊಂಡಿತ್ತು – ಕಿರುಸರಣಿ ಅಥವಾ ದೂರದರ್ಶನ ಚಿತ್ರ ವಿಭಾಗ
1989 ಗ್ರೇಟ್‌‌ ಎಕ್ಸ್‌‌ಪೆಕ್ಟೇಷನ್ಸ್‌‌‌‌ ಅಬೆಲ್‌ ಮ್ಯಾಗ್‌ವಿಚ್‌ TV ಕಿರುಸರಣಿಗಳು
ಕಿರುಸರಣಿಚಿತ್ರ ಅಥವಾ ಚಲನಚಿತ್ರ ವಿಭಾಗದಲ್ಲಿ ಶ್ರೇಷ್ಠ ಪೋಷಕ ನಟ/ಪಾತ್ರದ ನಟ ಎಮ್ಮಿ ಪ್ರಶಸ್ತಿಗೆ ನಾಮಾಂಕಿತಗೊಂಡಿತ್ತು
1990 ಡೆಸ್ಪರೇಟ್‌‌ ಅ/ಹವರ್ಸ್‌ ಟಿಮ್‌ ಕಾಮೆಲ್‌
1991 ದ ಸೈಲೆನ್ಸ್‌‌ ಆಫ್‌‌ ದ ಲ್ಯಾಂಬ್ಸ್ Dr. ಹ್ಯಾನ್ನಿಬಾಲ್‌‌‌‌ ಲೆಕ್ಟರ್‌‌‌ ಅತ್ಯುತ್ತಮ ನಟ ಅಕಾಡೆಮಿ ಪ್ರಶಸ್ತಿ‌
ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟ BAFTA ಪ್ರಶಸ್ತಿ‌
ಉತ್ತಮ ಪೋಷಕ ನಟ ಬೋಸ್ಟನ್ ಸೊಸೈಟಿ ಆಫ್ ಫಿಲ್ಮ್ ಕ್ರಿಟಿಕ್ಸ್ ಪ್ರಶಸ್ತಿ
ಅತ್ಯುತ್ತಮ ನಟ ಶಿಕಾಗೊ ಫಿಲ್ಮ್‌ ಕ್ರಿಟಿಕ್ಸ್‌ ಅಸೋಷಿಯೇಷನ್‌ ಪ್ರಶಸ್ತಿ‌
ಅತ್ಯುತ್ತಮ ನಟ ಡಲ್ಲಾಸ್‌-ಫೋರ್ಟ್‌ ವರ್ತ್‌ ಫಿಲ್ಮ್‌ ಕ್ರಿಟಿಕ್ಸ್‌ ಅಸೋಸಿಯೇಷನ್‌ ಪ್ರಶಸ್ತಿ
ಅತ್ಯುತ್ತಮ ನಟ ಕಾನ್ಸಾಸ್‌ ಸಿಟಿ ಫಿಲ್ಮ್‌ ಕ್ರಿಟಿಕ್ಸ್‌ ಸರ್ಕಲ್‌ ಪ್ರಶಸ್ತಿ
ಅತ್ಯುತ್ತಮ ಪೋಷಕ ನಟ ನ್ಯಾಷನಲ್‌ ಬೋರ್ಡ್‌ ಆಫ್‌ ರಿವ್ಯೂ ಪ್ರಶಸ್ತಿ
ಅತ್ಯುತ್ತಮ ನಟ ನ್ಯೂಯಾರ್ಕ್‌‌ ಫಿಲ್ಮ್‌ ಕ್ರಿಟಿಕ್ಸ್‌ ಸರ್ಕಲ್‌ ಪ್ರಶಸ್ತಿ
ಅತ್ಯುತ್ತಮ ವಿದೇಶಿ ನಟ ಸಾಂಟ್‌‌ ಜೋರ್ಡಿ ಪ್ರಶಸ್ತಿ
ಅತ್ಯುತ್ತಮ ನಟ ಸ್ಯಾಟರ್ನ್‌ ಪ್ರಶಸ್ತಿ‌
ಅತ್ಯುತ್ತಮ ನಟ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿ – ಚಲನಚಿತ್ರ ರೂಪಕಕ್ಕೆ ನಾಮಾಂಕಿತಗೊಂಡಿತ್ತು
ಅತ್ಯುತ್ತಮ ನಟ ಲಂಡನ್ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್ ಪ್ರಶಸ್ತಿಗೆ ನಾಮಾಂಕಿತಗೊಂಡಿತ್ತು
ಒನ್‌ ಮ್ಯಾನ್ಸ್‌ ವಾರ್‌‌ ಜೋಯೆಲ್‌‌ TV
1992 ಫ್ರೀಜ್ಯಾಕ್‌‌ ಇಯಾನ್‌ ಮೆಕ್‌ಕ್ಯಾಂಡ್ಲೆಸ್‌‌
ಸ್ಪೋಟ್ಸ್‌ವುಡ್‌‌ ಎರ್ರೋಲ್‌ ವಾಲ್ಲೇಸ್‌‌
ಹೋವರ್ಡ್ಸ್‌‌‌ ಎಂಡ್‌‌ ಹೆನ್ರಿ J. ವಿಲ್‌ಕಾಕ್ಸ್‌‌‌
ಬ್ರಾಮ್‌ ಸ್ಟೋಕರ್‌'ರ ಡ್ರಾಕುಲಾ ಪ್ರೊಫೆಸರ್‌/ಪ್ರಾಧ್ಯಾಪಕ ಅಬ್ರಹಾಂ ವಾನ್‌ ಹೆಲ್ಸಿಂಗ್‌ ಅತ್ಯುತ್ತಮ ಪೋಷಕನಟ ಸ್ಯಾಟರ್ನ್‌ ಪ್ರಶಸ್ತಿಗೆ ನಾಮಾಂಕಿತಗೊಂಡಿತ್ತು
ಚಾಪ್ಲಿನ್‌ ಜಾರ್ಜ್‌ ಹೇಡೆನ್‌
1993 ದ ಟ್ರಯಲ್‌ ದ ಪ್ರೀಸ್ಟ್‌
ದ ಇನ್ನೋಸೆಂಟ್‌‌ ಬಾಬ್‌ ಗ್ಲಾಸ್‌‌
ದ ರಿಮೇನ್ಸ್‌‌ ಆಫ್‌‌ ದ ಡೇ ಜೇಮ್ಸ್‌ ಸ್ಟೀವನ್ಸ್‌‌ ಅತ್ಯುತ್ತಮ ವಿದೇಶಿ ನಟ ಡೇವಿಡ್‌ ಡಿ ಡೊನೇಟೆಲ್ಲೋ ಪ್ರಶಸ್ತಿ
ಅತ್ಯುತ್ತಮ ನಟ ಕಾನ್ಸಾಸ್‌ ಸಿಟಿ ಫಿಲ್ಮ್‌ ಕ್ರಿಟಿಕ್ಸ್‌ ಸರ್ಕಲ್‌ ಪ್ರಶಸ್ತಿ
ಅತ್ಯುತ್ತಮ ನಟ ಲಂಡನ್‌ ಫಿಲ್ಮ್‌ ಕ್ರಿಟಿಕ್ಸ್‌ ಸರ್ಕಲ್‌ ಪ್ರಶಸ್ತಿ
ಲಾಸ್ ಏಂಜಲೀಸ್ ಫಿಲ್ಮ್‌ ಕ್ರಿಟಿಕ್ಸ್‌ ಸರ್ಕಲ್‌ ಅತ್ಯುತ್ತಮ ನಟ ಪ್ರಶಸ್ತಿ ಷಾಡೋಲ್ಯಾಂಡ್ಸ್‌‌‌ ಚಿತ್ರಕ್ಕೂ ಕೂಡಾ
ಅತ್ಯುತ್ತಮ ನಟ ನ್ಯಾಷನಲ್‌ ಬೋರ್ಡ್‌‌ ಆಫ್‌ ರಿವ್ಯೂ ಪ್ರಶಸ್ತಿ ಷಾಡೋಲ್ಯಾಂಡ್ಸ್ ಚಿತ್ರಕ್ಕೂ ಕೂಡಾ
ಸೌತ್‌ಈಸ್ಟರ್ನ್‌ ಫಿಲ್ಮ್‌ ಕ್ರಿಟಿಕ್ಸ್‌ ಅಸೋಸಿಯೇಷನ್‌ ಪ್ರಶಸ್ತಿ ಷಾಡೋಲ್ಯಾಂಡ್ಸ್ ಚಿತ್ರಕ್ಕೂ ಕೂಡಾ
ಅತ್ಯುತ್ತಮ ನಟ ಅಕಾಡೆಮಿ ಪ್ರಶಸ್ತಿ‌ಗೆ ನಾಮಾಂಕಿತಗೊಂಡಿತ್ತು
ಪ್ರಧಾನ ಪಾತ್ರದಲ್ಲಿನ ಅತ್ಯುತ್ತಮ ನಟ BAFTA ಪ್ರಶಸ್ತಿಗೆ ನಾಮಾಂಕಿತಗೊಂಡಿತ್ತು
ಅತ್ಯುತ್ತಮ ನಟ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿ – ಚಲನಚಿತ್ರ ರೂಪಕಕ್ಕೆ ನಾಮಾಂಕಿತಗೊಂಡಿತ್ತು
ಷಾಡೋಲ್ಯಾಂಡ್ಸ್ ಜ್ಯಾಕ್‌ ಲೂಯಿಸ್‌ ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟ BAFTA ಪ್ರಶಸ್ತಿ‌
ಅತ್ಯುತ್ತಮ ನಟ ಲಾಸ್ ಏಂಜಲೀಸ್ ಫಿಲ್ಮ್‌ ಕ್ರಿಟಿಕ್ಸ್‌ ಅಸೋಸಿಯೇಷನ್‌ ಪ್ರಶಸ್ತಿ ದ ರಿಮೇನ್ಸ್‌‌ ಆಫ್‌‌ ದ ಡೇ ಗೆ ಕೂಡಾ
ಅತ್ಯುತ್ತಮ ನಟ ನ್ಯಾಷನಲ್‌ ಬೋರ್ಡ್‌ ಆಫ್‌ ರಿವ್ಯೂ ಪ್ರಶಸ್ತಿ ದ ರಿಮೇನ್ಸ್‌‌ ಆಫ್‌‌ ದ ಡೇ ಗೆ ಕೂಡಾ
ಅತ್ಯುತ್ತಮ ನಟ ಸೌತ್‌ಈಸ್ಟರ್ನ್‌ ಫಿಲ್ಮ್‌ ಕ್ರಿಟಿಕ್ಸ್‌ ಅಸೋಸಿಯೇಷನ್‌ ಪ್ರಶಸ್ತಿ ದ ರಿಮೇನ್ಸ್‌‌ ಆಫ್‌‌ ದ ಡೇ ಗೆ ಕೂಡಾ
1994 ದ ರೋಡ್‌ ಟು ವೆಲ್‌ವಿಲ್ಲೆ Dr. ಜಾನ್‌ ಹಾರ್ವೆ ಕೆಲ್ಲಾಗ್‌‌
ಲೆಜೆಂಡ್ಸ್‌ ಆಫ್‌ ದಿ ಫಾಲ್‌ Col. ವಿಲಿಯಂ ಲುಡ್‌ಲೋ ವೆಸ್ಟರ್ನ್‌ ಹೆರಿಟೇಜ್‌ ಪ್ರಶಸ್ತಿಗಳು — ಎಡ್ವರ್ಡ್‌‌ ಝ್ವಿಕ್‌ (ನಿರ್ದೇಶಕ), ವಿಲಿಯಮ್‌‌ D. ವಿಟ್‌ಲಿಫ್‌‌ (ಲೇಖಕ/ನಿರ್ಮಾಪಕ) ಮತ್ತು ಬ್ರಾಡ್‌‌ ಪಿಟ್‌‌ (ಪ್ರಮುಖ ನಟ)ರೊಂದಿಗೆ ಹಂಚಿಕೊಂಡ ಬ್ರಾನ್ಜ್‌‌‌ ರಾಂಗ್ಲರ್‌ ಫಾರ್‌ ಥಿಯೇಟ್ರಿಕಲ್‌ ಮೋಷನ್‌ ಪಿಕ್ಚರ್‌ ಪ್ರಶಸ್ತಿ
1995 ನಿಕ್ಸಾನ್‌‌‌ ರಿಚರ್ಡ್‌ ನಿಕ್ಸೊನ್‌ ಅತ್ಯುತ್ತಮ ನಟ ಅಕಾಡೆಮಿ ಪ್ರಶಸ್ತಿ‌ಗೆ ನಾಮಾಂಕಿತಗೊಂಡಿತ್ತು
ಅತ್ಯುತ್ತಮ ನಟ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿ – ಚಲನಚಿತ್ರ ರೂಪಕಕ್ಕೆ ನಾಮಾಂಕಿತಗೊಂಡಿತ್ತು
ಪ್ರಧಾನ ಪಾತ್ರದ ಅತ್ಯುತ್ತಮ ನಟ ಸ್ಕ್ರೀನ್‌ ಆಕ್ಟರ್ಸ್‌ ಗಿಲ್ಡ್‌ ಪ್ರಶಸ್ತಿ‌ಗೆ ನಾಮಾಂಕಿತಗೊಂಡಿತ್ತು
ಚಲನಚಿತ್ರವೊಂದರಲ್ಲಿನ ಪಾತ್ರವರ್ಗದ ಅತ್ಯುತ್ತಮ ನಟನೆ ಸ್ಕ್ರೀನ್‌ ಆಕ್ಟರ್ಸ್‌ ಗಿಲ್ಡ್‌ ಪ್ರಶಸ್ತಿಗೆ ನಾಮಾಂಕಿತಗೊಂಡಿತ್ತು
1996 ಆಗಸ್ಟ್ ಇಯುವಾನ್‌ ಡೇವಿಸ್‌‌ ನಿರ್ದೇಶನ ಮತ್ತು ಸಂಗೀತ ಸಂಯೋಜನೆ ಎರಡನ್ನೂ ಮಾಡಿದ್ದರು
ಸರ್ವೈವಿಂಗ್‌ ಪಿಕಾಸೋ ಪಾಬ್ಲೋ ಪಿಕಾಸೋ
1997 ದ ಎಡ್ಜ್‌‌ ಚಾರ್ಲ್ಸ್‌‌ ಮಾರ್ಸ್‌‌
ಅಮಿಸ್ಟಾಡ್‌‌‌ ಜಾನ್‌ ಕ್ವಿನ್ಸಿ ಆಡಮ್ಸ್‌‌ ಅತ್ಯುತ್ತಮ ಪೋಷಕ ನಟ ಬ್ರಾಡ್‌ಕಾಸ್ಟ್‌ ಫಿಲ್ಮ್‌ ಕ್ರಿಟಿಕ್ಸ್‌ ಅಸೋಸಿಯೇಷನ್‌ ಪ್ರಶಸ್ತಿ
ಅತ್ಯುತ್ತಮ ಪೋಷಕ ನಟ ಅಕಾಡೆಮಿ ಪ್ರಶಸ್ತಿಗೆ ನಾಮಾಂಕಿತಗೊಂಡಿತ್ತು
ಅತ್ಯುತ್ತಮ ಪೋಷಕ ನಟ ಗೋಲ್ಡನ್ ಗ್ಲೋಬ್ ಪ್ರಶಸ್ತಿ‌ – ಚಲನಚಿತ್ರಕ್ಕೆ ನಾಮಾಂಕಿತಗೊಂಡಿತ್ತು
ಅತ್ಯುತ್ತಮ ಪೋಷಕ ನಟ ಆನ್‌ಲೈನ್ ಫಿಲ್ಮ್ ಕ್ರಿಟಿಕ್ಸ್ ಸೊಸೈಟಿ ಪ್ರಶಸ್ತಿಗೆ ನಾಮಾಂಕಿತಗೊಂಡಿದೆ
ಪ್ರಧಾನ ಪಾತ್ರದ ಅತ್ಯುತ್ತಮ ನಟ ಸ್ಕ್ರೀನ್‌ ಆಕ್ಟರ್ಸ್‌ ಗಿಲ್ಡ್‌ ಪ್ರಶಸ್ತಿ‌ಗೆ ನಾಮಾಂಕಿತಗೊಂಡಿತ್ತು
1998 ದ ಮಾಸ್ಕ್‌‌‌ ಆಫ್‌‌ ಜೊರ್ರೋ ಡಾನ್‌ ಡಿಯೆಗೋ ಡೆ ಲಾ ವೆಗಾ/ಜೊರ್ರೋ
ಮೀಟ್‌‌ ಜೋ ಬ್ಲ್ಯಾಕ್‌ ವಿಲಿಯಂ ಪಾರ್ರಿಷ್‌‌ ಅತ್ಯುತ್ತಮ ನಟ ಸ್ಯಾಟರ್ನ್‌ ಪ್ರಶಸ್ತಿ‌ಗೆ ನಾಮಾಂಕಿತಗೊಂಡಿತ್ತು
1999 ಇನ್‌ಸ್ಟಿಂಕ್ಟ್‌‌‌ ಇಥಾನ್‌ ಪೌವೆಲ್‌‌
ಟೈಟಸ್‌‌ ಟೈಟಸ್‌‌ ಆಂಡ್ರಾನಿಕಸ್‌‌ ವರ್ಷದ ಬ್ರಿಟಿಷ್‌ ನಟ ಲಂಡನ್‌ ಫಿಲ್ಮ್‌ ಕ್ರಿಟಿಕ್ಸ್‌ ಸರ್ಕಲ್‌ ಪ್ರಶಸ್ತಿಗೆ ನಾಮಾಂಕಿತಗೊಂಡಿತ್ತು
2000 Mission: Impossible II ಮಿಷನ್‌ ಕಮಾಂಡರ್‌‌ ಸ್ವಾನ್‌ಬೆಕ್‌‌ ಗೌರವಿಸಲಾಗಿಲ್ಲ
ದ ಗ್ರಿಂಚ್‌‌ ದ ನ್ಯಾರೇಟರ್‌ ಧ್ವನಿ ನೀಡಿಕೆ
2001 ಹ್ಯಾನ್ನಿಬಾಲ್ Dr. ಹ್ಯಾನ್ನಿಬಾಲ್‌‌‌‌ ಲೆಕ್ಟರ್‌‌‌ ಅತ್ಯುತ್ತಮ ನಟನಾಗಿ ಸ್ಯಾಟರ್ನ್‌ ಪ್ರಶಸ್ತಿ‌ಗೆ ನಾಮಾಂಕಿತಗೊಂಡಿತ್ತು
ಹಾರ್ಟ್ಸ್‌‌ ಇನ್‌ ಅಟ್ಲಾಂಟಿಸ್‌‌ ಟೆಡ್‌‌ ಬ್ರಾಟಿಗಾನ್‌‌
2002 ಬ್ಯಾಡ್‌‌ ಕಂಪೆನಿ ಆಫೀಸರ್‌ ಓಯೇಕ್ಸ್‌‌‌
ರೆಡ್‌‌ ಡ್ರಾಗನ್ Dr. ಹ್ಯಾನ್ನಿಬಾಲ್‌‌‌‌ ಲೆಕ್ಟರ್‌‌‌
2003 ದ ಹ್ಯೂಮನ್‌ ಸ್ಟೇಯ್ನ್‌ ಕೋಲ್‌ಮನ್‌‌ ಸಿಲ್ಕ್‌‌‌ ನಟನೆಯಲ್ಲಿನ ಅಸಾಧಾರಣ ಸಾಧನೆಗಾಗಿ ಹಾಲಿವುಡ್‌‌ ಚಿತ್ರೋತ್ಸವ ಪ್ರಶಸ್ತಿ – ನಟ/ಪುರುಷ ಸಾಧಕ
2004 ಅಲೆಕ್ಸಾಂಡರ್ ಪ್ಟಾಲೆಮಿ I ಸೋಟರ್‌‌
2005 ಪ್ರೂಫ್‌ ರಾಬರ್ಟ್‌‌‌
ದ ವರ್ಲ್ಡ್‌ಸ್‌‌ ಫಾಸ್ಟೆಸ್ಟ್‌ ಇಂಡಿಯನ್‌‌ ಬರ್ಟ್‌‌ ಮುನ್ರೋ ಪ್ರಧಾನಪಾತ್ರದಲ್ಲಿನ ನಟನ ಅತ್ಯುತ್ತಮ ಸಾಧನೆಗಾಗಿ ನ್ಯೂಜಿಲೆಂಡ್‌ ಸ್ಕ್ರೀನ್‌ ಪ್ರಶಸ್ತಿ
2006 ಬಾಬ್ಬಿ ಜಾನ್ ವರ್ಷದ ಸಮಗ್ರ ಸಂಯೋಜನೆಗಾಗಿ ಹಾಲಿವುಡ್‌‌ ಚಿತ್ರೋತ್ಸವ ಪ್ರಶಸ್ತಿ
ಚಲನಚಿತ್ರವೊಂದರಲ್ಲಿನ ಪಾತ್ರವರ್ಗದ ಅತ್ಯುತ್ತಮ ನಟನೆ ಸ್ಕ್ರೀನ್‌ ಆಕ್ಟರ್ಸ್‌ ಗಿಲ್ಡ್‌ ಪ್ರಶಸ್ತಿಗೆ ನಾಮಾಂಕಿತಗೊಂಡಿತ್ತು
ಆಲ್‌ ದಿ ಕಿಂಗ್ಸ್‌ ಮೆನ್‌ ನ್ಯಾಯಾಧೀಶ ಇರ್ವಿನ್‌
2007 ದ ಡೆವಿಲ್‌ ಅಂಡ್‌ ಡೇನಿಯೆಲ್‌ ವೆಬ್‌ಸ್ಟರ್‌ ಡೇನಿಯೆಲ್‌ ವೆಬ್‌ಸ್ಟರ್‌‌ TV
ಸ್ಲಿಪ್‌ಸ್ಟ್ರೀಮ್‌ ಫೆಲಿಕ್ಸ್‌‌ ಬಾನ್‌ಹೋಫರ್‌‌
ಫ್ರಾಕ್ಚರ್‌‌‌ ಥಿಯೋಡೋರ್‌ "ಟೆಡ್‌‌" ಕ್ರಾಫರ್ಡ್‌
ಬೀವೂಲ್ಫ್ ಹ್ರಾಥ್ಗರ್‌‌
ದ ಸಿಟಿ ಆಫ್‌ ಯುವರ್‌‌ ಫೈನಲ್‌ ಡೆಸ್ಟಿನೇಷನ್‌ ಆಡಮ್.
2008 Where I Stand: The Hank Greenspun Story ಹ್ಯಾಂಕ್‌ ಗ್ರೀನ್‌ಸ್ಪನ್‌ ಧ್ವನಿ ನೀಡಿಕೆ
ಇಮ್ಯೂಟಬಲ್‌‌ ಡ್ರೀಮ್‌ ಆಫ್‌ ಸ್ನೋ ಲಯನ್‌‌
2009 ಬೇರ್‌ ನಕಲ್ಸ್‌‌ ಕ್ಸೇವಿಯರ್‌‌ ಜೋನಾಸ್‌‌
2010 ದ ವೂಲ್ಫ್‌ಮ್ಯಾನ್‌ ಸರ್‌‌ ಜಾನ್‌ ಟಾಲ್‌ಬಾಟ್‌‌
ಯು ವಿಲ್‌‌ ಮೀಟ್‌ ಎ ಟಾಲ್‌ ಡಾರ್ಕ್‌‌ ಸ್ಟ್ರೇಂಜರ್‌‌ ಛಾಯಾಗ್ರಹಣ/ಚಿತ್ರೀಕರಣ
2011 ಥಾರ್‌‌‌‌ ಓಡಿನ್‌‌ ನಿರ್ಮಾಣಾನಂತರದ ಕೌಶಲ್ಯ
ದ ರೈಟ್‌‌ ಎಕ್ಸಾರ್ಸಿಸ್ಟ್ ಛಾಯಾಗ್ರಹಣ/ಚಿತ್ರೀಕರಣ

ಆಕರಗಳು[ಬದಲಾಯಿಸಿ]

 1. "Hopkins 'greatest British actor'". London: News.bbc.co.uk. 16 August 2005. Retrieved 29 October 2008.
 2. "Anthony Hopkins Biography". Tiscali.co.uk. 29 October 2008. Retrieved 29 October 2008.
 3. "Anthony Hopkins". London: guardian.co.uk. Retrieved 29 October 2008.
 4. "Anthony Hopkins – A role to sink his teeth into". Retrieved 11 February 2010. I have dual citizenship, it just so happens I live in America.
 5. ಇನ್‌ಸೈಡ್‌ ದ ಆಕ್ಟರ್ಸ್‌‌ ಸ್ಟುಡಿಯೋ ನಲ್ಲಿನ ಸಂದರ್ಶನದಲ್ಲಿ ಹೇಳಿದ್ದು, 2007
 6. ೬.೦ ೬.೧ ೬.೨ Falk, Quentin (2004). Anthony Hopkins: The Biography (4th ed.). Virgin Books. ISBN 0-7535-0999-7.
 7. ನೈಟ್‌ಪದವಿಯ ಅಧಿಕೃತ ಘೋಷಣೆ[permanent dead link]. ದ ಲಂಡನ್‌‌ ಗೆಝೆಟ್‌. 23 ಏಪ್ರಿಲ್ 1993
 8. "The World's Fastest Indian". Solarnavigator.net. Retrieved 21 May 2007.
 9. Michael Fleming (30 October 2009). "Anthony Hopkins cast in 'Thor'". Variety. Retrieved 31 October 2009. Italic or bold markup not allowed in: |publisher= (help)
 10. "Anthony Hopkins takes demonic forces in 'The Rite'". HeatVision. The Hollywood Reporter. 24 February 2010. Retrieved 28 February 2010.
 11. "ಆಂಥನಿ ಹಾಪ್ಕಿನ್ಸ್‌‌‌: ಲೆಕ್ಟರ್‌‌‌ ಅಂಡ್‌ ಮೀ " — ರೆಡ್‌‌ ಡ್ರಾಗನ್ DVD ಸಂದರ್ಶನ
 12. "Sir Anthony Hopkins acts 'like a submarine'". London: BBC News. 12 February 2010. Retrieved 7 March 2010.
 13. "AFI's 100 Years...100 Heroes & Villains". AFI.com. Retrieved 21 May 2007.
 14. Close (5 December 1998). "Unlimited: A dark and stormy knight". The Guardian. London. Retrieved 17 October 2009.
 15. "Green Peace anti-whaling video". Greenpeace.org. 17 March 2003. Archived from the original on 5 ಅಕ್ಟೋಬರ್ 2009. Retrieved 17 October 2009. Check date values in: |archive-date= (help)
 16. "Tommy Cooper statue is unveiled". London: BBC News. 23 February 2008. Retrieved 17 October 2009.
 17. Associated Press (3 December 2007). "De gira como pianista".[permanent dead link]
 18. Chris Shull (19 October 2008). "Anthony Hopkins brings Hollywood to Dallas Symphony Orchestra". Dallas Star-Telegram. Retrieved 25 October 2008.[permanent dead link]
 19. Clark, Steve (1998). The Only Fools and Horses Story. BBC Books. p. 125. ISBN 0-563-38445-X.
 20. "Anthony Hopkins: Awards". IMDb. Retrieved 21 May 2007.
 21. "Orange British Academy Film Awards". BAFTA. Archived from the original on 11 ಜೂನ್ 2008. Retrieved 17 June 2008. Check date values in: |archive-date= (help)
 22. "Honorary Members of the Royal Academy of Music (Oct.14, 2009)". Royal Academy of Music. 14 October 2009. Retrieved 14 October 2009.

ಹೊರಗಿನ ಕೊಂಡಿಗಳು[ಬದಲಾಯಿಸಿ]