ವಿಷಯಕ್ಕೆ ಹೋಗು

ಗ್ರೇಟ್‌‌ ಎಕ್ಸ್‌‌ಪೆಕ್ಟೇಷನ್ಸ್‌‌‌‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗ್ರೇಟ್ ಎಕ್ಸ್‌ಪೆಕ್ಟೇಷನ್ಸ್
ಮೊದಲ ಆವೃತ್ತಿಯ ಮೊದಲ ಸಂಪುಟದ ಮುಖಪುಟ, ಜುಲೈ ೧೮೬೧
ಲೇಖಕರುಚಾರ್ಲ್ಸ್‌ ಡಿಕನ್ಸ್
ದೇಶಯುಕೆ
ಭಾಷೆಇಂಗ್ಲಿಷ್
ಸರಣಿಸಾಪ್ತಾಹಿಕ:
ಡಿಸೆಂಬರ್ ೧, ೧೮೬೦ – ಆಗಸ್ಟ್ ೩, ೧೮೬೧
ಪ್ರಕಾರಕಥಾಸಾಹಿತ್ಯ ಸಾಮಾಜಿಕ ಟೀಕೆ
ಪ್ರಕಾಶಕರುಚ್ಯಾಪ್ಮನ್ ಅಂಡ್ ಹಾಲ್
ಪ್ರಕಟವಾದ ದಿನಾಂಕ
೧೮೬೧ (ಮೂರು ಸಂಪುಟಗಳಲ್ಲಿ)
ಮಾಧ್ಯಮ ಪ್ರಕಾರಮುದ್ರಣ (ಸರಣಿ, ಗಟ್ಟಿರಟ್ಟು, ಮತ್ತು ಕಾಗದ ಹೊದಿಕೆ)
ಪುಟಗಳು೭೯೯ ಪುಟ (ಗಟ್ಟಿರಟ್ಟು)
ಐಎಸ್‍ಬಿಎನ್ಅನ್ವಯಿಸುವುದಿಲ್ಲ
ಮುಂಚಿನಅ ಟೇಲ್ ಆಫ್ ಟೂ ಸಿಟೀಸ್
ನಂತರದಆರ್ ಮ್ಯೂಚುವಲ್ ಫ಼್ರೆಂಡ್

ಗ್ರೇಟ್‌‌ ಎಕ್ಸ್‌‌ಪೆಕ್ಟೇಷನ್ಸ್‌‌‌‌ ಚಾರ್ಲ್ಸ್ ಡಿಕೆನ್ಸ್‌‌ ಬರೆದ ಒಂದು ಕಾದಂಬರಿ. ಇದು ಮೊದಲು ಆಲ್ ದಿ ಯಿಯರ್ ರೌಂಡ್‌ [] ಪತ್ರಿಕೆಯಲ್ಲಿ `೧೮೬೦ರ ಡಿಸೆಂಬರ್ ೧ರಿಂದ ೧೮೬೧ರ ಆಗಸ್ಟ್‌ವರೆಗೆ ಸರಣಿ ಕ್ರಮದಲ್ಲಿ ಪ್ರಕಟವಾಯಿತು. ಇದನ್ನು ನಾಟಕ ಮತ್ತು ಚಲನಚಿತ್ರಗಳಲ್ಲಿ ಸುಮಾರು ೨೫೦ ಬಾರಿ ಬಳಸಿಕೊಳ್ಳಲಾಗಿದೆ.[]

ಗ್ರೇಟ್‌‌ ಎಕ್ಸ್‌‌ಪೆಕ್ಟೇಷನ್ಸ್‌‌‌‌ ಅನ್ನು ಅನಾಥ ಹುಡುಗ ಪಿಪ್‌ನ ದೃಷ್ಟಿಕೋನದಲ್ಲಿ ವೈಯಕ್ತಿಕ ನೆಲೆಯಲ್ಲಿ ಬರೆಯಲಾಗಿದೆ. ಡಿಕೆನ್ಸ್‌ನ ಕೃತಿಗಳಲ್ಲಿ ಹೆಚ್ಚು ಪ್ರಸಿದ್ಧವಾದ ಈ ಕಾದಂಬರಿಯು ಆತನ ವ್ಯಕ್ತಿ ಮತ್ತು ಜೀವನಾನುಭವವನ್ನು ಚಿತ್ರಿಸುತ್ತದೆ.

ಕಥಾ ಸಾರಾಂಶ

[ಬದಲಾಯಿಸಿ]

೧೮೧೨ರ[] ಕ್ರಿಸ್‌ಮಸ್‌ನ ಹಿಂದಿನ ದಿನದಂದು, ಆರು ವರ್ಷದ ಹುಡುಗ ಪಿಪ್ ಹಳ್ಳಿಯ ಚರ್ಚಿನ ಸಮಾಧಿ ಭೂಮಿಯಲ್ಲಿನ ತನ್ನ ತಾಯಿ, ತಂದೆ ಮತ್ತು ತಮ್ಮಂದಿರ ಸಮಾಧಿಗಳಲ್ಲಿಗೆ ಹೋಗಿಬರುವಾಗ ತಪ್ಪಿಸಿಕೊಂಡು ಬಂದ ಒಬ್ಬ ಕೈದಿಯನ್ನು ಭೇಟಿಯಾಗುತ್ತಾನೆ. ಆ ಕೈದಿಯು ತನಗಾಗಿ ಆಹಾರವನ್ನು ಕದಿಯುವಂತೆ ಮತ್ತು ತನ್ನ ಕಾಲಿನ ಸಂಕೋಲೆಯನ್ನು ಬಿಡಿಸಲು ಒಂದು ನುಣುಚಿಗವನ್ನು ತರುವಂತೆ ಪಿಪ್‌ಅನ್ನು ಬೆದರಿಸುತ್ತಾನೆ. ಇದನ್ನು ಯಾರಿಗೂ ಹೇಳಬಾರದು ಮತ್ತು ತಾನು ಹೇಳುವಂತೆ ಕೇಳಬೇಕು, ಇಲ್ಲದಿದ್ದರೆ ತನ್ನ ಸ್ನೇಹಿತ ಪಿಪ್‌ನ ಹೃದಯ ಮತ್ತು ಪಿತ್ತಜನಕಾಂಗವನ್ನು ಕತ್ತರಿಸುತ್ತಾನೆಂದು ಪಿಪ್‌ಗೆ ಎಚ್ಚರಿಕೆ ನೀಡುತ್ತಾನೆ. ಪಿಪ್ ತನ್ನ ಮನೆಗೆ ಹಿಂದಿರುಗುತ್ತಾನೆ, ಆ ಮನೆಯಲ್ಲಿ ಆತನ ಅಕ್ಕ (ಆಕೆಯ ಹೆಸರು ನಂತರ ಜಾರ್ಜಿಯಾನ ಮರಿಯಾ ಎಂದು ಬಹಿರಂಗವಾಗುತ್ತದೆ) ಮತ್ತು ಆಕೆಯ ಗಂಡ ಜೋಯ್ ಗಾರ್ಗೆರಿ ಒಂದಿಗೆ ಪಿಪ್ ವಾಸಿಸುತ್ತಿರುತ್ತಾನೆ. ಆತನ ಅಕ್ಕ ತುಂಬಾ ಕೆಟ್ಟವಳಾಗಿದ್ದಳು ಹಾಗೂ ಪಿಪ್‌ಗೆ ಮಾತ್ರವಲ್ಲದೆ ಆಕೆಯ ಗಂಡನಿಗೂ ಅನೇಕ ವಿಷಯಗಳಿಗಾಗಿ ದಿನನಿತ್ಯ ಚೆನ್ನಾಗಿ ಹೊಡೆಯುತ್ತಿದ್ದಳು; ಆದರೂ ಜೋಯ್ ಪಿಪ್‌ಗೆ ತುಂಬಾ ಒಳ್ಳೆಯವನಾಗಿರುತ್ತಾನೆ. ಕಾದಂಬರಿಯಾದ್ಯಂತ ಶ್ರೀಮತಿ ಜೋಯ್ ಎಂದು ಕರೆಯಲ್ಪಡುವ ಪಿಪ್‌ನ ಅಕ್ಕ ತಾನೇ ಅವನನ್ನು ಕೈಹಾಲಿನಿಂದ ಬೆಳೆಸಿದ್ದೇನೆಂದು ಯಾವಾಗಲೂ ಪಿಪ್‌ಗೆ ನೆನೆಪಿಸುತ್ತಿರುತ್ತಾಳೆ. ಮರುದಿನ ಬೆಳಿಗ್ಗೆ ಪಿಪ್ ಆಹಾರ ಮತ್ತು ಗಾರ್ಗೆರಿಯ ಕಪಾಟಿನಿಂದ ಮದ್ಯವನ್ನು (ಕ್ರಿಸ್‌ಮಸ್ ಹಬ್ಬದೂಟಕ್ಕಾಗಿ ತಯಾರಿಸಿದ ಹೂರಣ ಕಡುಬನ್ನೂ ಒಳಗೊಂಡು) ಕದ್ದುಕೊಂಡು, ಸಮಾಧಿಯಲ್ಲಿಗೆ ಗುಟ್ಟಾಗಿ ಬರುತ್ತಾನೆ. ಪಿಪ್‌ನ ಜೀವನದಲ್ಲಿ ಅವನಿಗೆ ಮೊದಲ ಬಾರಿಗೆ ಅಪರಾಧಿ ಪ್ರಜ್ಞೆ ಕಾಡುತ್ತದೆ.

ಪಾದ್ರಿ ವೂಪ್ಸ್ಲ್, ಶ್ರೀ ಮತ್ತು ಶ್ರೀಮತಿ ಹಬಲ್ ಹಾಗೂ ಪಿಪ್ ಮತ್ತು ಶ್ರೀಮತಿ ಜೋಯ್‌ಳ ಸಾಕಷ್ಟು ಶ್ರೀಮಂತ ಅಂಕಲ್ ಪಂಬಲ್‌ಚುಕ್ ಮೊದಲಾದವರೊಂದಿಗೆ ಕ್ರಿಸ್‌ಮಸ್‌ ಹಬ್ಬದ ರಾತ್ರಿಯೂಟ ಮಾಡುತ್ತಿರುವಾಗ, ಕಾಣೆಯಾದ ಆಹಾರ ಅಥವಾ ಬ್ರ್ಯಾಂಡಿಯನ್ನು ಯಾರೂ ಗಮನಿಸುವುದಿಲ್ಲ, ಆದರೆ ಸ್ವಲ್ಪ ಸಮಯದ ನಂತರ ಅಂಕಲ್ ಪಂಬಲ್‌ಚುಕ್ ಬ್ರ್ಯಾಂಡಿಯನ್ನು ಕುಡಿದು ಉಗುಳಿಬಿಡುತ್ತಾರೆ. ಆಗ ಪೈಪ್ ಬ್ರ್ಯಾಂಡಿ ಹೂಜಿಗೆ ನೀರಿನ ಬದಲಿಗೆ ಟಾರು-ನೀರು (ಇದು ಹೆಚ್ಚಾಗಿ ಔಷಧೀಯ ಕಾರಣಗಳಿಗೆ ಬಳಸುವ ಪೈನ್ ಟಾರು ಮತ್ತು ನೀರಿನಿಂದ ತಯಾರಿಸಿದ ಕೆಟ್ಟ ರುಚಿಯ ಒಂದು ಟಾನಿಕ್) ತುಂಬಿಸಿದ್ದನ್ನು ನೆನಪಿಸಿಕೊಳ್ಳುತ್ತಾನೆ. ಅವನು ಸ್ವಲ್ಪ ಬ್ರ್ಯಾಂಡಿಯನ್ನು ಕೈದಿಗೆ ಕೊಂಡುಬಂದುದರಿಂದ, ಅದರ ಬದಲಿಗೆ ಏನಾದರೂ ತುಂಬಿಸಬೇಕಾಗಿತ್ತು, ಹಾಗಾಗಿ ಅವನು ಹಾಗೆ ಮಾಡಿದ್ದನು. ಪಿಪ್ ಎಲ್ಲಾ ಸಂಬಂಧಿಗಳು ಒಟ್ಟಿಗೆ ಕುಳಿತುಕೊಂಡು ಊಟಮಾಡುವಾಗ ಕಾಣೆಯಾದ ಹೂರಣ ಕಡುಬನ್ನು ಯಾರಾದರೂ ಗಮನಿಸಿದರೆ ಎಂಬ ಭೀತಿಯಲ್ಲಿ ಊಟಕ್ಕೆ ಕುಳಿತುಕೊಂಡಿರುತ್ತಾನೆ. ಆತನ ಅಕ್ಕ ಹೂರಣ-ಕಡುಬನ್ನು ತೆಗೆಯಲು ಕಪಾಟಿನ ಹತ್ತಿರ ಹೋದಾಗ, ಅದು ಕಾಣೆಯಾದುದನ್ನು ಗಮನಿಸುತ್ತಾಳೆ, ಆದರೆ ಅದೇ ಸಂದರ್ಭದಲ್ಲಿ ಸೈನಿಕರು ಮನೆಗೆ ಬಂದು, ತಮ್ಮ ಕೈಕೋಳವನ್ನು ರಿಪೇರಿ ಮಾಡುವಂತೆ ಜೋಯ್‌ನ ಹತ್ತಿರ ಕೇಳುತ್ತಾರೆ ಮತ್ತು ಸ್ಥಳೀಯ ಜೈಲಿನಿಂದ ತಪ್ಪಿಸಿಕೊಂಡ ಕೈದಿಗಳನ್ನು ಹಿಡಿಯಲು ಜೋಯ್, ಪಿಪ್ ಮತ್ತು ವೋಪ್ಸ್ಲ್‌ರನ್ನು ತಮ್ಮೊಂದಿಗೆ ಬರುವಂತೆ ಹೇಳುತ್ತಾರೆ. ಅವರು ಹಳ್ಳಿಯ ಹೊರಗಿನ ಜವುಗುಭೂಮಿಯಲ್ಲಿ ಹುಡುಕುತ್ತಿರುವಾಗ, ಇಬ್ಬರು ಕೈದಿಗಳು ಕಾದಾಟುತ್ತಿರುವುದನ್ನು ಕಂಡು ಅವರನ್ನು ಬಂಧಿಸುತ್ತಾರೆ. ಅವರಲ್ಲಿ ಒಬ್ಬ ಪಿಪ್ ಸಹಾಯ ಮಾಡಿದ ಕೈದಿಯಾಗಿರುತ್ತಾನೆ; ಆ ಕೈದಿಯು ಪಿಪ್ಅನ್ನು ರಕ್ಷಿಸಲು ನುಣುಚಿಗ ಮತ್ತು ಸ್ವಲ್ಪ ಪ್ರಮಾಣದ ಆಹಾರ ಕದ್ದಿದುದನ್ನು ಒಪ್ಪಿಕೊಳ್ಳುತ್ತಾನೆ. ಪೋಲೀಸರು ಇಬ್ಬರನ್ನೂ ಭಾರಿ ಜೈಲು ಹಡಗು ಹಲ್ಕ್‌ಗೆ ಕರೆದುಕೊಂಡು ಹೋಗುತ್ತಾರೆ ಮತ್ತು ಪಿಪ್‌ನನ್ನು ಜೋಯ್ ಮನೆಗೆ ಕರೆದುಕೊಂಡು ಬರುತ್ತಾನೆ, ಅಲ್ಲಿ ಅವರು ಕ್ರಿಸ್‌ಮಸ್ ರಾತ್ರಿಯೂಟವನ್ನು ಮುಗಿಸುತ್ತಾರೆ. ಪಿಪ್ ಕೈದಿಯನ್ನು ಭೇಟಿಯಾದ ಸ್ವಲ್ಪ ದಿನಗಳ ನಂತರ, ಪಿಪ್‌ನ ಜೀವನವು ಸಾಮಾನ್ಯ ಸ್ಥಿತಿಗೆ ಹಿಂದಿರುಗುತ್ತದೆ. ಅವನು ವೂಪ್ಸ್ಲ್‌ನ ಅಜ್ಜಿ ನಡೆಸುತ್ತಿದ್ದ ಸ್ಥಳೀಯ ಶಾಲೆಗೆ ಹೋಗುವುದನ್ನು ಮುಂದುವರಿಸುತ್ತಾನೆ ಮತ್ತು ವೂಪ್ಸ್ಲ್ ದತ್ತುತೆಗೆದುಕೊಂಡಿದ್ದ ಒಬ್ಬ ಅನಾಥ ಹುಡುಗಿ ಬಿಡ್ಡಿಯೊಂದಿಗೆ ಸ್ನೇಹ ಬೆಳೆಸಿಕೊಳ್ಳುತ್ತಾನೆ; ಕೈದಿಗೆ ಸಹಾಯ ಮಾಡಿದ ಘಟನೆಯ ಬಗ್ಗೆ ಯಾರಿಗೂ ತಿಳಿದಿರಲಿಲ್ಲದಿದ್ದರೂ ಮತ್ತು ತಪ್ಪು ಮಾಡಿದುದರಿಂದ ಬಿಡಿಸಿಕೊಂಡಿದ್ದರೂ, ಕಳ್ಳತನ ಮಾಡಿದುದಕ್ಕೆ ತಪ್ಪಿತಸ್ಥ ಭಾವನೆಯು ಅವನನ್ನು ಕಾಡುತ್ತಿರುತ್ತದೆ. ಹ್ಯಾವಿಶ್ಯಾಮ್ ಹೆಸರಿನ ಒಬ್ಬಳು ಶ್ರೀಮಂತ ಮುದುಕಿ ಒಬ್ಬ ಸಣ್ಣ ವಯಸ್ಸಿನ ಹುಡುಗನನ್ನು ಆಡಲು ತನ್ನ ಮನೆಗೆ ಕರೆದುಕೊಂಡು ಬರುವಂತೆ ಪಿಪ್‌ನ ಅಂಕಲ್ ಪಂಬಲ್‌ಚುಕ್‌ನ ಹತ್ತಿರ ಕೇಳುತ್ತಾಳೆ. ಪಂಬಲ್‌ಚುಕ್ ತಕ್ಷಣವೇ ಪಿಪ್‌ನನ್ನು ಆರಿಸಿ, ಹ್ಯಾವಿಶ್ಯಾಮ್‌ಳ ಮನೆಗೆ ಕರೆದುಕೊಂಡು ಬರುತ್ತಾನೆ, ಆಕೆ ಹಳ್ಳಿಯಲ್ಲಿ ಸ್ಯಾಟಿಸ್ ಮನೆಯಲ್ಲಿ ವಾಸಿಸುತ್ತಿರುತ್ತಾಳೆ. ಹ್ಯಾವಿಶ್ಯಾಮ್ ಒಬ್ಬ ವಿವಾಹವಾಗದ ವೃದ್ಧೆ, ಆಕೆ ಹಳೆಯ ಮದುವೆಯ ಉಡುಗೆ ಮತ್ತು ಒಂದು ಚಪ್ಪಲಿಯನ್ನು ಧರಿಸುತ್ತಿರುತ್ತಾಳೆ. ಮನೆಯಲ್ಲಿನ ಎಲ್ಲಾ ಗಡಿಯಾರಗಳು ಎಂಟು ಗಂಟೆ ನಲವತ್ತು ನಿಮಿಷಗಳಲ್ಲಿ ನಿಂತಿರುತ್ತವೆ. ಆಕೆ ಅನೇಕ ವರ್ಷಗಳಿಂದ ಸೂರ್ಯನ ಬೆಳಕನ್ನು ನೋಡಿರದಿದ್ದರೂ, ಪಿಪ್ ಆಕೆ ದತ್ತುತೆಗೆದುಕೊಂಡ ಸಣ್ಣ ಹುಡುಗಿ ಎಸ್ಟೆಲ್ಲಾಳೊಂದಿಗೆ ಇಸ್ಪೀಟಾಟ ಆಡುವುದನ್ನು ನೋಡಬೇಕೆಂದು ಹೇಳುತ್ತಿರುತ್ತಾಳೆ.

ಹ್ಯಾವಿಶ್ಯಾಮ್ ಮತ್ತು ಎಸ್ಟೆಲ್ಲಾ ಒಂದಿಗಿನ ಪಿಪ್‌ನ ಮೊದಲ ಭೇಟಿಯು ವಿಚಿತ್ರವಾಗಿದೆ. ಹ್ಯಾವಿಶ್ಯಾಮ್ ಒಬ್ಬ ಅಂತರ್ಮುಖಿಯಾಗಿಯೆಂಬುದನ್ನು ಅವನು ಕಂಡುಕೊಳ್ಳುತ್ತಾನೆ. ಆಕೆ ಬೆಳಕು ಒಳಗೆ ಬರಬಾರದೆಂದು ಮನೆಯ ಸುತ್ತಲಿರುವ ಕಿಟಕಿಗಳಿಗೆ ಹಲಗೆ ಮುಚ್ಚಿದ್ದಳು. ಆಕೆ ಚಿಂದಿಯಾದ ಕುರ್ಚಿಯಲ್ಲಿ ಕುಳಿತುಕೊಂಡು, ಪಿಪ್‌ಗೆ ಎಸ್ಟೆಲ್ಲಾಳೊಂದಿಗೆ ಇಸ್ಪೀಟಾಟ ಆಡುವಂತೆ ಸೂಚಿಸುತ್ತಾಳೆ. ಇಲ್ಲಿ ಎಸ್ಟೆಲ್ಲಾ ಪಿಪ್‌ಗೆ ತುಂಬಾ ಕೆಟ್ಟವಳಾಗಿದ್ದು, ಅವನ ಹೆಸರಿಡಿದು ಕರೆದು ಚೇಷ್ಟೆ ಮಾಡಿ ನಗುತ್ತಾಳೆ. ಪಿಪ್‌ನನ್ನು ಈ ರೀತಿ ಹಿಂಸಿಸುವುದರಿಂದ ಹ್ಯಾವಿಶ್ಯಾಮ್ ಸಂತೋಷಪಡುತ್ತಿದ್ದಳು ಮತ್ತು ಅವನು ಎಸ್ಟೆಲ್ಲಾಳ ಬಗ್ಗೆ ಏನು ಯೋಚಿಸುತ್ತಾನೆ ಎಂಬುದನ್ನು ಕೇಳಿ, ಅದನ್ನು ಆಕೆಯ ಕಿವಿಯಲ್ಲಿ ಪಿಸುಗುಡುತ್ತಿದ್ದಳು. ಹ್ಯಾವಿಶ್ಯಾಮ್ ಯಾವಾಗಲೂ ಎಸ್ಟೆಲ್ಲಾಳ ಅಭಿಮಾನ ಮತ್ತು ಸೌಂದರ್ಯವನ್ನು ಹೊಗಳುತ್ತಿರುತ್ತಾಳೆ. ನೋವು ಮತ್ತು ಕೋಪದಿಂದ ಪಿಪ್ ಸ್ಯಾಟಿಸ್ ಮನೆಯನ್ನು ಬಿಟ್ಟು ಬೇರೆಡೆಗೆ ಬಂದು ಅಳುತ್ತಾನೆ. ಎಸ್ಟೆಲ್ಲಾ ಅವನಿಗೆ ಊಟವನ್ನು ತಂದುಕೊಟ್ಟು, ಅವನು ಅಳುತ್ತಿದ್ದುದನ್ನು ನೋಡಿದುದರಿಂದ ಆಕೆ ಮತ್ತೆ ಅವನಿಗೆ ಚೇಷ್ಟೆ ಮಾಡಲು ಆರಂಭಿಸುತ್ತಾಳೆ.

ಎಸ್ಟೆಲ್ಲಾ ಮತ್ತು ಪಿಪ್ ಒಂದಿಗೆ ಹ್ಯಾವಿಶ್ಯಾಮ್.ಹೆಚ್. ಎಮ್. ಬ್ರೋಕ್‌ ಬರೆದ ಚಿತ್ರವಿದು.

ಈ ಮೊದಲ ಭೇಟಿಯ ನಂತರ, ಪಿಪ್ ಯಾವಾಗಲೂ ಹ್ಯಾವಿಶ್ಯಾಮ್ ಮತ್ತು ಎಸ್ಟೆಲ್ಲಾರನ್ನು ಭೇಟಿಯಾಗುತ್ತಾನೆ, ತಾನು ಎಸ್ಟೆಲ್ಲಾಳನ್ನು ಪ್ರೀತಿಸುತ್ತಿರುವುದನ್ನು ಅತಿ ಶೀಘ್ರದಲ್ಲಿ ಕಂಡುಕೊಳ್ಳುತ್ತಾನೆ. ಅವನು ಶಾಲೆಯಲ್ಲಿ ಬಿಡ್ಡಿಯಿಂದ ಸಾಧ್ಯವಾಗುವಷ್ಟನ್ನು ದೃಡ ಸಂಕಲ್ಪದಿಂದ ಕಲಿಯಲು ಆರಂಭಿಸುತ್ತಾನೆ, ಅವನನ್ನು 'ಸಾಮಾನ್ಯ ಕೂಲಿಕಾರ ಹುಡುಗ' ಎಂದು ಕರೆದ ಎಸ್ಟೆಲ್ಲಾಳ ಪ್ರೀತಿಯನ್ನು ಪಡೆಯುವ ಪ್ರಯತ್ನದಲ್ಲಿ ಹೆಚ್ಚು ಶಿಕ್ಷಿತ ಮತ್ತು ಸುಸಂಸ್ಕೃತ ವ್ಯಕ್ತಿಯಾಗಬೇಕೆಂಬ ಆಶಯವನ್ನು ಹೊಂದಿರುತ್ತಾನೆ. ಒಂದು ದಿನ ಪಿಪ್ ಜೋಯ್‌ನನ್ನು ಕರೆದುಕೊಂಡು ಬರಲು ನಗರದ ಪಬ್‌ಗೆ ಹೋಗುತ್ತಾನೆ. ಅಲ್ಲಿಂದ ಹೊರಡುವುದಕ್ಕಿಂತ ಮೊದಲು ಪಿಪ್‌ ಭೇಟಿಯಾದ ಕೈದಿಯು ಕಳುಹಿಸಿದ ಒಬ್ಬ ಸಂದೇಶ-ವಾಹಕನು ಅವನಿಗೆ ಎರಡು ಒಂದು-ಪೌಂಡ್ ನೋಟುಗಳನ್ನು ನೀಡುತ್ತಾನೆ. ನೋಟುಗಳನ್ನು ಪಡೆದುಕೊಂಡು ಮನೆಗೆ ಹಿಂದಿರುಗಿದ ನಂತರ ಶ್ರೀಮತಿ ಜೋಯ್ ಪಿಪ್‌ನಿಂದ ಆ ಹಣವನ್ನು ಪಡೆದುಕೊಂಡು, ಒಂದು ಹೂಜಿಯಲ್ಲಿರಿಸುತ್ತಾಳೆ. ಆಕೆ ಆ ಸಂದೇಶ-ವಾಹಕನು ತಪ್ಪಾಗಿ ಅಷ್ಟೊಂದು ದೊಡ್ಡ ಮೊತ್ತದ ಹಣವನ್ನು ಪಿಪ್‌ಗೆ ನೀಡಿದ್ದಾನೆಂದು ಭಾವಿಸಿ ಮರುದಿನ ಪಬ್‌ಗೆ ಸುದ್ದಿ ಕಳುಹಿಸಬೇಕೆಂಬ ಉದ್ದೇಶದಿಂದ ಆ ಹಣವನ್ನು ಎತ್ತಿಡುತ್ತಾಳೆ. ಆ ಸಂದೇಶ-ವಾಹಕನನ್ನು ಭೇಟಿಯಾದ ನಂತರ ಪಿಪ್ ಹ್ಯಾವಿಶ್ಯಾಮ್‌ಳನ್ನು ಭೇಟಿಯಾಗಿ ಜನ್ಮದಿನದ ಶುಭಾಷಯವನ್ನು ತಿಳಿಸಲು ಸ್ಯಾಟಿಸ್ ಮನೆಗೆ ಬರುತ್ತಾನೆ. ಅಲ್ಲಿ ಆಕೆ ಅವನಿಗೆ ಇಲಿಗಳು ಅರ್ಧ ತಿಂದು ಮುಗಿಸಿದ್ದ ಅವಳ ಮದುವೆಯ ಕೇಕ್ಅನ್ನು ಮತ್ತು ಆಕೆ ಎದುರುನೋಡುತ್ತಿದ್ದ ಸಾವು ಸಂಭವಿಸಿದರೆ ಅವಳು ಇರಬಹುದಾದ ಸ್ಥಳವನ್ನು ತೋರಿಸುತ್ತಾಳೆ. ಅವನು ಪಾಕೆಟ್ಸ್‌ನನ್ನು ಭೇಟಿಯಾಗುತ್ತಾನೆ, ಆತ ಪಿಪ್‌ಗೆ ಅನಾದರದ ಸ್ವಾಗತವನ್ನು ಕೋರುತ್ತಾನೆ. ಹೊರಗೆ ಪಿಪ್ ತನ್ನದೇ ವಯಸ್ಸಿನ ಒಬ್ಬ ಹುಡುಗನನ್ನು ಸಂಧಿಸುತ್ತಾನೆ. ಅವನು ಪಿಪ್‌ನನ್ನು ಕಾದಾಟಕ್ಕೆ ಆಹ್ವಾನಿಸುತ್ತಾನೆ. ಆದರೆ ಪಿಪ್ ಮೊದಲು ಅವನೊಂದಿಗೆ ಕಾದಾಡಲು ನಿರಾಕರಿಸುತ್ತಾನೆ. ಆದರೆ ಅವನು ಪಟ್ಟುಹಿಡಿದು ಕರೆದ ನಂತರ ಪಿಪ್ ಮುಷ್ಟಿ ಬೀಸಿ ಆ ಯುವಕನನ್ನು ಹೊಡೆದು, ನೆಲಕ್ಕೆ ಉರುಳಿಸುತ್ತಾನೆ. ಆ ಯುವಕನು ಸಂಪೂರ್ಣವಾಗಿ ಸೋಲುತ್ತಿದ್ದರೂ ಮತ್ತು ಹೊಡೆತದಿಂದ ರಕ್ತಸಿಕ್ತವಾಗಿದ್ದರೂ ಇನ್ನಷ್ಟು ಹೊಡೆಯುವಂತೆ ನಿರಂತರವಾಗಿ ಪಿಪ್‌ನನ್ನು ಉತ್ತೇಜಿಸುತ್ತಿರುತ್ತಾನೆ. ಕಾದಾಟವು ಮುಕ್ತಾಯಗೊಂಡ ನಂತರ ಇಬ್ಬರೂ ಹೊರಟುಹೋಗುತ್ತಾರೆ; ಎಸ್ಟೆಲ್ಲಾ ಇಬ್ಬರು ಯುವಕರು ತನಗಾಗಿ ಕಾದಾಡುತ್ತಿರುವುದನ್ನು ನೋಡಿ ಭಾವೋದ್ವೇಗಕ್ಕೊಳಗಾಗಿ, ಪಿಪ್ ಅವಳಿಗೆ ಚುಂಬಿಸಲು ಅನುಮತಿ ನೀಡುತ್ತಾಳೆ. ನಂತರ ಅವನು ಸಾಮಾನ್ಯ ಸ್ಥಿತಿಗೆ ಹಿಂದಿರುಗುತ್ತಾನೆ.

ಹ್ಯಾವಿಶ್ಯಾಮ್ ಜೋಯ್‌ನನ್ನು ಭೇಟಿಯಾಗಬೇಕೆಂದು ಕೇಳುತ್ತಾಳೆ. ಆಕೆ ಭೇಟಿಯ ಸಂದರ್ಭದಲ್ಲಿ ಪಿಪ್‌ ಆತನಿಗೆ ಕಮ್ಮಾರನಾಗಿ ಇನ್ನೂ ಸಹಾಯ ಮಾಡಬೇಕೆಂದು ಬಯಸುತ್ತಾನೆಯೇ ಎಂದು ವಿಚಾರಿಸುತ್ತಾಳೆ; ಜೋಯ್ ಹೌದೆಂದು ಒಪ್ಪುತ್ತಾನೆ. ಪಿಪ್‌ ತನಗೆ ಜೊತೆ ನೀಡಿದುದಕ್ಕಾಗಿ ಹ್ಯಾವಿಶ್ಯಾಮ್ ಜೋಯ್‌ಗೆ ೨೫ ಪೌಂಡ್‌ಗಳನ್ನು ನೀಡಿ, ಆತನಿಗೆ ಸಹಾಯ ಮಾಡಲೆಂದು ಪಿಪ್‌ನನ್ನು ತನ್ನ ಸೇವೆಯಿಂದ ಬಿಡುಗಡೆ ಮಾಡುತ್ತಾಳೆ. ಪಿಪ್ ಜೋಯ್ ಒಂದಿಗೆ ಕಮ್ಮಾರಸಾಲೆಯಲ್ಲಿ ಕೆಲವು ವರ್ಷಗಳ ಕಾಲ ಕೆಲಸ ಮಾಡುತ್ತಾನೆ. ಹೀಗೆ ಕೆಲಸ ಮಾಡುತ್ತಾ ಅವನಿಗೆ ಅದು 'ಸಾಮಾನ್ಯವಾದುದು' ಮತ್ತು 'ಕೀಳುಮಟ್ಟಿನದು' ಎಂಬ ಭಾವನೆ ಬರಲು ಆರಂಭವಾಗುತ್ತದೆ. ಜೋಯ್‌ನ ಅನುಮತಿ ಪಡೆದು ಪಿಪ್ ಅರ್ಧ ದಿನ ರಜೆ ತೆಗೆದುಕೊಂಡು, ಹ್ಯಾವಿಶ್ಯಾಮ್‌ಳನ್ನು ಅವಳ ಜನ್ಮದಿನದಂದು ಕೊನೆಯ ಬಾರಿಗೆ ಭೇಟಿಯಾಗುತ್ತಾನೆ. ಇದರಿಂದ ಜೋಯ್‌ನ ಆರ್ಲಿಕ್ ಹೆಸರಿನ ಮತ್ತೊಬ್ಬ ಕೂಲಿಕಾರ ಕೋಪಗೊಂಡು, ತನಗೂ ಅರ್ಧ ದಿನ ರಜೆ ಬೇಕೆಂದು ಕೇಳುತ್ತಾನೆ. ಜೋಯ್ ಇದಕ್ಕೆ ಒಪ್ಪಿ, 'ಎಲ್ಲರಿಗೂ ಅರ್ಧ ದಿನ ರಜೆ' ಘೋಷಿಸುತ್ತಾನೆ. ಇದನ್ನು ಕೇಳಿದ ಶ್ರೀಮತಿ ಜೋಯ್ ತೀವ್ರ ಕೋಪಗೊಂಡು, ಜೋಯ್ ಪಿಪ್ ಮತ್ತು ಆರ್ಲಿಕ್‌ಗೆ ರಜೆ ನೀಡುವ ಮೂಲಕ ಹಣವನ್ನು ಕಳೆದುಕೊಳ್ಳುತ್ತಿದ್ದಾನೆ ಮತ್ತು ಅತಿ ಶೀಘ್ರದಲ್ಲಿ ವ್ಯವಹಾರವನ್ನು ಮುಚ್ಚಿಬಿಡುತ್ತಾನೆಂದು ದೂರುತ್ತಾಳೆ. ಆರ್ಲಿಕ್ ಮತ್ತು ಶ್ರೀಮತಿ ಜೋಯ್ ಜಗಳವಾಡಲು ಆರಂಭಿಸುತ್ತಾರೆ, ಜಗಳದ ಮಧ್ಯೆ ಪರಸ್ಪರ ಬೆದರಿಕೆಯನ್ನು ಹಾಕಿಕೊಳ್ಳುತ್ತಾರೆ ಮತ್ತು ಆರ್ಲಿಕ್ ಆಕೆಯನ್ನು 'ಗಯ್ಯಾಳಿ'ಯೆಂದು ಕರೆಯುತ್ತಾನೆ. ಇದಕ್ಕಾಗಿ ಆರ್ಲಿಕ್‌ನಿಗೆ ಶಿಕ್ಷೆ ನೀಡಬೇಕೆಂದು ಆಕೆ ತನ್ನ ಗಂಡನಲ್ಲಿ ಹೇಳುತ್ತಾಳೆ. ಜೋಯ್ ಮತ್ತು ಆರ್ಲಿಕ್ ನಡುವೆ ಸಣ್ಣ ವಾಗ್ವಾದ ನಡೆದು, ಕೊನೆಗೆ ಜೋಯ್ ಆರ್ಲಿಕ್‌ಗೆ ಕೆಲಸ ಬಿಡುವಂತೆ ಆದೇಶಿಸುತ್ತಾನೆ. ಪಿಪ್ ಮನೆಗೆ ಹಿಂದಿರುಗಿದಾಗ, ಶ್ರೀಮತಿ ಜೋಯ್ ಮೇಲೆ ದಾಳಿ ನಡೆದಿರುವುದನ್ನು ಗಮನಿಸುತ್ತಾನೆ. ಆ ದಾಳಿಯಿಂದ ಆಕೆ ಗಂಭೀರವಾಗಿ ಗಾಯಗೊಂಡಿದ್ದಳು. ಆಕೆಯ ತಲೆಗೆ ಒಂದು ಮೊಂಡು ವಸ್ತುವಿನಿಂದ ಅನೇಕ ಬಾರಿ ಹೊಡೆದುದರಿಂದ, ತಲೆಗೆ ಉಂಟಾದ ಹಾನಿಯು ಆಕೆಯನ್ನು ನಿಶ್ಯಕ್ತಳನ್ನಾಗಿ ಮಾಡಿಸಿತ್ತು. ತಪ್ಪಿಸಿಕೊಂಡ ಅಪರಾಧಿಗಳು ಶ್ರೀಮತಿ ಜೋಯ್‌ಳ ಮೇಲೆ ದಾಳಿಯನ್ನು ಮಾಡಿದ್ದಾರೆಂದು ಪೋಲೀಸರು ಹೇಳಿದಾಗ ಪಿಪ್‌ಗೆ ಮತ್ತೆ ತಪ್ಪಿತಸ್ಥ ಭಾವನೆಯು ಕಾಡುತ್ತದೆ. ಲಂಡನ್‌ನ ಪತ್ತೆದಾರಿಗಳು ಶಂಕಿತ ದಾಳಿಕಾರರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಂಡುಹಿಡಿಯದ್ದರಿಂದ, ಯಾರನ್ನೂ ಬಂಧಿಸುವುದಿಲ್ಲ.

ದಾಳಿ ನಡೆದ ನಂತರ ಶ್ರೀಮತಿ ಜೋಯ್ ಯಾವಾಗಲೂ ಆರ್ಲಿಕ್‌ನ ಹೆಸರನ್ನು ಕರೆಯುತ್ತಾ, ಸ್ಲೇಟ್‌ನ ಮೇಲೆ 'T' ಅಕ್ಷರವನ್ನು ಬರೆಯುತ್ತಾ ದಿನಗಳನ್ನು ಕಳೆಯುತ್ತಾಳೆ. ಬಿಡ್ಡಿಯು "T" ಅಕ್ಷರವು ಸುತ್ತಿಗೆಯನ್ನು ಸೂಚಿಸುತ್ತದೆ ಮತ್ತು ಆರ್ಲಿಕ್ ದಾಳಿಕಾರನಾಗಿದ್ದಾನೆಂದು ನಂಬುತ್ತಾಳೆ. ಆದರೆ ಆರ್ಲಿಕ್ ಬಂದಾಗ ಶ್ರೀಮತಿ ಜೋಯ್ ಅವನನ್ನು ನೋಡಿ ತುಂಬಾ ಸಂತೋಷ ಪಡುತ್ತಾಳೆ. ನಂತರ ಆರ್ಲಿಕ್ ಆಕೆಗೆ ಜೊತೆ ನೀಡಲು ಮತ್ತು ಆಕೆಯನ್ನು ಆನಂದಪಡಿಸಲು ದಿನನಿತ್ಯ ಮನೆಗೆ ಬರಲು ಆರಂಭಿಸುತ್ತಾನೆ. ಅದೇ ಸಂದರ್ಭದಲ್ಲಿ ಶ್ರೀಮತಿ ಜೋಯ್‌ಳ ಆರೈಕೆಯನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಪಡೆದ ಬಿಡ್ಡಿಯು, ಪಿಪ್‌ಗೆ ಎಸ್ಟೆಲ್ಲಾಳ ಬಗೆಗಿರುವ ನಿಜವಾದ ಪ್ರೀತಿಯನ್ನು ಗಾರ್ಗೆರಿ ದಂಪತಿಗಳು ನಂಬುವಂತೆ ಮಾಡುತ್ತಾಳೆ. ವೂಪ್ಸ್ಲ್ ದಿನಪತ್ರಿಕೆಯಲ್ಲಿ ಒಂದು ಕೊಲೆ ಘಟನೆಯ ಬಗ್ಗೆ ಓದುತ್ತಿರುವುದನ್ನು ಪಿಪ್ ಮತ್ತು ಜೋಯ್ ಕೇಳುತ್ತಿರುವಾಗ, ಜ್ಯಾಗರ್ಸ್ ಹೆಸರಿನ ಒಬ್ಬ ಲಂಡನ್ ವಕೀಲ ಪಿಪ್‌ನಲ್ಲಿಗೆ ಬಂದು, ಒಂದು ಆಶ್ಚರ್ಯದ ಸುದ್ಧಿಯನ್ನು ತಿಳಿಸುತ್ತಾನೆ: ಪಿಪ್ ಒಬ್ಬ ಅಜ್ಞಾತ ದಾನಿಯಿಂದ ಒಂದು ಭಾರಿ ಮೊತ್ತದ ಹಣವನ್ನು ಪಡೆದಿದ್ದಾನೆ. ಆ ಹೇಳಿದ ಹಣವನ್ನು ಪಡೆಯಬೇಕಾದರೆ ಅವನು ತಕ್ಷಣವೇ ಲಂಡನ್‌ಗೆ ಹೊರಟು, ಹೊಸ ಬಟ್ಟೆಗಳನ್ನು ಖರೀದಿಸಿ, ಒಬ್ಬ ಶ್ರೀಮಂತ ವ್ಯಕ್ತಿಯಾಗಬೇಕಾಗಿತ್ತು.

ಆದರೆ ಪಿಪ್ ಸಮಾಜದಲ್ಲಿ ಕೆಟ್ಟದಾಗಿ ನಡೆದುಕೊಳ್ಳಲು ಆರಂಭಿಸುತ್ತಾನೆ (ಹೆಚ್ಚಾಗಿ ಎಸ್ಟೆಲ್ಲಾಳ ಬಗೆಗಿನ ಹೊಟ್ಟೆಕಿಚ್ಚಿನಿಂದ) ಮತ್ತು ಹಣವನ್ನು ದುಂದುವ್ಯಯ ಮಾಡಿ, ಸಾಲಗಾರನಾಗುತ್ತಾನೆ. ಅವನು ಅವನ ೨೧ನೇ ವರ್ಷದ ಜನ್ಮದಿನದಂದು, ಪಿಪ್ ೫೦೦ ಪೌಂಡ್‌ಗಳನ್ನು (ಇಂದಿನ £ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".ಗೆ ಸಮನಾದ) ಮತ್ತು ಒಂದು ಹೆಚ್ಚುವರಿ ನಿಗದಿಯಾದ-ಭತ್ಯವನ್ನು ಪಡೆದಿದ್ದಾನೆಂಬ ವಿಷಯವನ್ನು ಜ್ಯಾಗರ್ಸ್‌ನಿಂದ ಕೇಳಿದಂದು ಆ ಹಣವನ್ನು ನೀಡಿದವರ ಬಗ್ಗೆ ತಿಳಿಯುವವರೆಗೆ ಬಿಡುಗಡೆಯಾಗುತ್ತಾನೆ.

ಚಿತ್ರ:Pip-magwitch.jpg
ಮ್ಯಾಗ್‌ವಿಟ್ಚ್‌ ಪಿಪ್‌ಗೆ ತನ್ನನ್ನು ಪರಿಚಯಿಸಿಕೊಳ್ಳುತ್ತಿರುವುದು.

ಪಿಪ್ ಆರಂಭದಲ್ಲಿ ಅನೇಕ ವರ್ಷಗಳವರೆಗೆ ಹ್ಯಾವಿಶ್ಯಾಮ್‌ಳನ್ನೇ ಆ ಹಣವನ್ನು ನೀಡಿದವಳೆಂದು ಭಾವಿಸುತ್ತಾನೆ (ಓದುಗರೂ ಸಹ ಅದನ್ನೇ ನಂಬುತ್ತಾರೆ). ಹರ್ಬೆಟ್ ಪಾಕೆಟ್ (ಇವನನ್ನು ಪಿಪ್ ಸಣ್ಣವನಾಗಿದ್ದಾಗ ಸ್ಯಾಟಿಸ್ ಮನೆಯಲ್ಲಿ ತಾನು ಕಾದಾಡಿದ ಯುವಕನೆಂದು ತಿಳಿಯುತ್ತಾನೆ) ಜೊತೆಗಾರನಾಗಿ ಪಿಪ್‌ಗೆ ಸಹಾಯ ಮಾಡುತ್ತಾನೆ. ಪಿಪ್ ಆಗಾಗ ಹಳ್ಳಿಗೆ ಬರುತ್ತಿರುತ್ತಾನೆ, ಆದರೆ ವಿರಳವಾಗಿ ತನ್ನ ಕುಟುಂಬವನ್ನು ಸಂಧಿಸುತ್ತಿರುತ್ತಾನೆ. ಬದಲಿಗೆ ಹೆಚ್ಚಾಗಿ ಹ್ಯಾವಿಶ್ಯಾಮ್‌ಳನ್ನು ಭೇಟಿಯಾಗುತ್ತಿರುತ್ತಾನೆ. ಎಸ್ಟೆಲ್ಲಾ ಹಲವಾರು ವರ್ಷಗಳ ಕಾಲ ಯುರೋಪಿನಲ್ಲಿ ಓದುತ್ತಿರುತ್ತಾಳೆ (ಆ ಸಂದರ್ಭದಲ್ಲಿ ಶ್ರೀಮಂತ ಮಹಿಳೆಯರ ಶಿಕ್ಷಣದ ಒಂದು ಚಾಲ್ತಿಯಲ್ಲಿದ್ದ ರೂಢಿಯಾಗಿತ್ತು). ಅವಳು ಹಿಂದಿರುಗಿದಾಗ ಎಸ್ಟೆಲ್ಲಾ ತುಂಬಾ ಬದಲಾಗಿರುವುದನ್ನು ಮತ್ತು ಆಕೆಯ ನಡವಳಿಕೆಯು ಉತ್ತಮಗೊಂಡಿದುದನ್ನು ಪಿಪ್ ಗಮನಿಸುತ್ತಾನೆ. ಆಕೆ ತನ್ನ ಹಿಂದಿನ ಕ್ರೂರತೆಗಾಗಿ ಕ್ಷಮೆ ಯಾಚಿಸುತ್ತಾಳೆ ಮತ್ತು ಪಿಪ್‌ನ ಒಲವನ್ನು ಗಮನಿಸಿ, ಆತನು ತನ್ನನ್ನು ಪ್ರೀತಿಸಬಾರದೆಂದು ಎಚ್ಚರಿಸುತ್ತಾಳೆ. ಹ್ಯಾವಿಶ್ಯಾಮ್ (ಆತನಿಗೆ ಭಾರಿ ಮೊತ್ತದ ಹಣ ನೀಡುವ ಮೂಲಕ) ತಮ್ಮಿಬ್ಬರಿಗಾಗಿ ಸಹಾಯ ಮಾಡಿದ್ದಾಳೆಂಬ ನಂಬಿಕೆಯನ್ನು ಹೊಂದಿದ್ದರಿಂದ ಪಿಪ್ ಈ ಎಚ್ಚರಿಕೆಗಳನ್ನು ಅಲ್ಲಗಳೆಯುತ್ತಾನೆ. ಎಸ್ಟೆಲ್ಲಾ ತನ್ನ ಮನಸ್ಸು ಭಾವಶೂನ್ಯವಾಗಿದೆ ಮತ್ತು ಅವನನ್ನು ಪ್ರೀತಿಸಲು ಸಾಧ್ಯವಿಲ್ಲವೆಂದು ಹೇಳಿ ಆತನಿಗೆ ಯಾವಾಗಲೂ ಎಚ್ಚರಿಕೆ ನೀಡುತ್ತಿರುತ್ತಾಳೆ ಮತ್ತು ಇದನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ಬೇಡಿಕೊಳ್ಳುತ್ತಾಳೆ. ಆದರೆ ಅವನು ಅದನ್ನು ನಿರಾಕರಿಸಿ, ತಾವಿಬ್ಬರು ಮದುವೆಯಾಗುತ್ತೇವೆಂದು ಮತ್ತು ಅವಳು ಹೇಳಿದಂತೆ ಅವಳ ಮನಸ್ಸು ಭಾವಶೂನ್ಯವಾಗಿಲ್ಲವೆಂದು ನಂಬುತ್ತಾನೆ.

ಈ ಸಂದರ್ಭದಲ್ಲಿ ಶ್ರೀಮತಿ ಜೋಯ್ ಸಾವನ್ನಪ್ಪುತ್ತಾಳೆ. ಪಿಪ್ ಅವಳ ಶವಸಂಸ್ಕಾರಕ್ಕಾಗಿ ಮನೆಗೆ ಬರುತ್ತಾನೆ. ಆ ಸಂದರ್ಭದಲ್ಲಿ ಬಿಡ್ಡಿ ಆರ್ಲಿಕ್ ಅವಳಿಂದ ಅನೇಕ ಅನಗತ್ಯ ಅನುಕೂಲಗಳನ್ನು ಪಡೆದಿದ್ದಾನೆಂದು ಪಿಪ್‌ಗೆ ತಿಳಿಯಪಡಿಸುತ್ತಾಳೆ. ಇದರಿಂದ ಪಿಪ್ ಕೋಪೋದ್ರಿಕ್ತನಾಗಿ, ಆರ್ಲಿಕ್‌ಗೆ ಬಿಡ್ಡಿಯಿಂದ ದೂರ ಉಳಿಯುವಂತೆ ಎಚ್ಚರಿಕೆ ನೀಡುತ್ತಾನೆ. ಆದರೆ ಆರ್ಲಿಕ್ ಪಿಪ್ ಹೋದ ನಂತರ ಬಿಡ್ಡಿಗೆ ಹಿಂಸೆ ನೀಡುವುದನ್ನು ಮುಂದುವರಿಸುತ್ತಾನೆ.

ಪಿಪ್ ಲಂಡನ್‌ಗೆ ಹಿಂದಿರುಗುತ್ತಾನೆ, ಹೊಂದಿದ್ದ ಭಾರಿ ಸಾಲವು ಆ ಸಂದರ್ಭದಲ್ಲಿ ಇನ್ನಷ್ಟು ಹೆಚ್ಚಾಗಿರುತ್ತದೆ. ಹರ್ಬರ್ಟ್‌ನನ್ನೂ ಸಹ ಸಾಲಗಾರನಾಗಿಸಿದ ಪಿಪ್ ತನ್ನ ಜವಾಬ್ದಾರಿರಹಿತ ಕಾರ್ಯಗಳಿಗಾಗಿ ತೀವ್ರ ಪಶ್ಚಾತಾಪ ಪಡುತ್ತಾನೆ. ಡಿಕೆನ್ಸ್‌ನ ಪೇಟೆಂಟ್ ಪಡೆದ ಜಮೀನಿನ ಅನಿರೀಕ್ಷಿತ ತಿರುವಿನಲ್ಲಿ, ಪಿಪ್‌ಗೆ ಆ ಹಣವನ್ನು ನೀಡಿದವರು ಅಬೆಲ್ ಮ್ಯಾಗ್ವಿಟ್ಚ್ ಎಂದಾಗುತ್ತದೆ, ಅವನು ಪಿಪ್ ಸಹಾಯ ಮಾಡಿದ ಕೈದಿಯಾಗಿರುತ್ತಾನೆ. ಅವನನ್ನು ನ್ಯೂ ಸೌತ್ ವೇಲ್ಸ್‌ಗೆ ಗಡೀಪಾರು ಮಾಡಲಾಗಿರುತ್ತದೆ, ಅಲ್ಲಿ ಅವನು ಏಳಿಗೆ ಹೊಂದಿ ಬಹಳ ಶ್ರೀಮಂತನಾಗುತ್ತಾನೆ.

ಮ್ಯಾಗ್‍‌ವಿಟ್ಚ್ ತನ್ನ ಎಲ್ಲಾ ಹಣವನ್ನು ಉಪಕಾರ ಮಾಡಿದುದಕ್ಕಾಗಿ ಮತ್ತು ತನ್ನ ಸ್ವಂತ ಮಗಳನ್ನು ನೆನಪಿಸಿದುದಕ್ಕಾಗಿ ಪಿಪ್‌ಗೆ ನೀಡುತ್ತಾನೆ, ತನ್ನ ಮಗಳನ್ನು ತಾಯಿಯೇ ಎರಡು ದಶಕಗಳ ಹಿಂದೆ ಕೊಂದಿದ್ದಾಳೆಂದು ಅವನು ನಂಬಿರುತ್ತಾನೆ. ತನ್ನ ನಿಜವಾದ ದಾನಿಯ ಬಗ್ಗೆ ತಿಳಿದುದರಿಂದ ಪಿಪ್‌ಗೆ ತಲೆಯೆತ್ತದಂತಾಗುತ್ತದೆ. ಅವನು ಮ್ಯಾಗ್‌ವಿಟ್ಚ್‌ನ ಅಪರಾಧ ಹಿನ್ನೆಲೆಯಿಂದ ಅವಮಾನಕ್ಕೊಳಗಾಗುತ್ತಾನೆ ಮತ್ತು ಹ್ಯಾವಿಶ್ಯಾಮ್ ತನ್ನ ನಿರೀಕ್ಷೆಗಳಿಗೆ ಅವಳೇ ಮೂಲವಾಗಿರಬಹುದು ಎಂಬುದಕ್ಕೆ ಮಾತ್ರ ಅವಕಾಶ ನೀಡಿದ್ದಾಳೆ ಮತ್ತು ಎಸ್ಟೆಲ್ಲಾಳೊಂದಿಗೆ ತಾನು ಮದುವೆಯಾಗಲಿ ಎಂಬ ಉದ್ದೇಶವನ್ನು ಹೊಂದಿಲ್ಲವೆಂಬ ಸತ್ಯ ತಿಳಿದುದರಿಂದ ಪಿಪ್ ತೀವ್ರ ದುಃಖಿತನಾಗುತ್ತಾನೆ. ಆದರೆ ಮ್ಯಾಗ್‌ವಿಟ್ಚ್ ತನ್ನ ಉಳಿದ ದಿನಗಳನ್ನು ಪಿಪ್‌ನೊಂದಿಗೆ ಇಂಗ್ಲೆಂಡ್‌ನಲ್ಲಿ ಕಳೆಯಲು ಆಶಿಸುತ್ತಾನೆ. ಪಿಪ್ ಮನಸ್ಸಿಲ್ಲದ ಮನಸ್ಸಿನಿಂದ ಮ್ಯಾಗ್‌ವಿಟ್ಚ್‌ನೊಂದಿಗಿರಲು ಒಪ್ಪುತ್ತಾನೆ. ಪಿಪ್ ಸಿಕ್ಕಿದ ಹೊಸ ಪರಿಚಯದಿಂದ ಹಾಗೂ ಅದು ತರಬಹುದಾದ ಅಪಾಯ ಮತ್ತು ಅನಿಶ್ಚಿತತೆಯಿಂದ ಸಂತೋಷವಾಗಿರಲಿಲ್ಲ. ಪಿಪ್ ಒಮ್ಮೆ ಓಡಿ ಹೋಗಿ ಮಿಲಿಟರಿ ಸೇರಿಕೊಂಡು, ಮ್ಯಾಗ್‌ವಿಟ್ಚ್ ಮತ್ತು ಅವನ ನಿರೀಕ್ಷೆಗಳಿಂದ ದೂರ ಉಳಿಯಬೇಕೆಂದು ಯೋಚಿಸುತ್ತಾನೆ. ಇಂಗ್ಲೆಂಡ್‌ನಲ್ಲಿ ಮ್ಯಾಗ್‌ವಿಟ್ಚ್‌ನ ಬಂಧನಕ್ಕೆ ವಾರೆಂಟ್ ಹೊರಡಿಸಲಾಗಿತ್ತು ಮತ್ತು ದೇಶದಲ್ಲಿ ಅವನು ಸೆರೆಸಿಕ್ಕಿದರೆ ಅವನನ್ನು ಗಲ್ಲುಶಿಕ್ಷೆಗೆ ಒಳಪಡಿಸಲಾಗುತ್ತಿತ್ತು. ಪಿಪ್‌ನನ್ನು ಸಂಶಯದೃಷ್ಟಿಯಿಂದ ನೋಡುವುದು ಹೆಚ್ಚಾಯಿತು, ಆದ್ದರಿಂದ ಅವನು ತನ್ನ ಜಮೀನುದಾರರಿಗೆ ಮತ್ತು ಎಲ್ಲಾ ಹತ್ತಿರದ ಪರಿಚಯಸ್ಥರಿಗೆ (ಹರ್ಬರ್ಟ್‌ನನ್ನು ಉಳಿಸಲು) ಮ್ಯಾಗ್‌ವಿಟ್ಚ್‌ನನ್ನು ತನ್ನ ಅಂಕಲ್, ಆತನ ಹೆಸರು ಪ್ರೋವಿಸ್‌ ಎಂಬುದಾಗಿ ಪರಿಚಯಿಸುತ್ತಾನೆ. ಅಂತಿಮವಾಗಿ, ಮ್ಯಾಗ್‌ವಿಚ್‌ ಇಂಗ್ಲೆಂಡ್‌ನಲ್ಲಿ ಉಳಿಯುವಷ್ಟು ದಿನ ಅವನನ್ನು ಬಂಧಿಸುವ ಸಂಭಾವ್ಯತೆಯು ಹೆಚ್ಚುವುದರಿಂದ ಅವನು ದೇಶದಲ್ಲಿ ಉಳಿದುಕೊಳ್ಳಲು ಪ್ರಯತ್ನಿಸುವುದು ಅಸಾಧ್ಯವೆಂದು ತಿಳಿದುಬಂದಿತು. ಹರ್ಬರ್ಟ್ ಮತ್ತು ಪಿಪ್ ದೋಣಿಯನ್ನು ಬಳಸಿಕೊಂಡು ದೇಶವನ್ನು ಬಿಟ್ಟುಹೋಗುವ ಯೋಜನೆಯೊಂದನ್ನು ರೂಪಿಸುತ್ತಾರೆ.

ಈ ಸಂದರ್ಭದಲ್ಲಿ ಎಸ್ಟೆಲ್ಲಾ ಜ್ಯಾಗರ್ಸ್‌ನ ಮನೆಗೆಲಸದಾಕೆ ಮೋಲಿಯ ಮಗಳೆಂಬುದು ಪಿಪ್‌ಗೆ ತಿಳಿದುಬರುತ್ತದೆ. ಮೋಲಿಯನ್ನು ಜ್ಯಾಗರ್ಸ್ ಒಂದು ಕೊಲೆಯ ದಾಳಿಯಲ್ಲಿ ಉಳಿಸಿರುತ್ತಾನೆ ಮತ್ತು ತನ್ನನ್ನು ಕಾಪಾಡಿದುದಕ್ಕಾಗಿ ಆಕೆ ತನ್ನ ಮಗುವನ್ನು ಜ್ಯಾಗರ್ಸ್‌ನ ಮತ್ತೊಬ್ಬ ಕಕ್ಷಿಗಾರ ಹ್ಯಾವಿಶ್ಯಾಮ್‌ಗೆ ದತ್ತುತೆಗೆದುಕೊಳ್ಳುವಂತೆ ಕೊಟ್ಟಿರುತ್ತಾಳೆ. ಪಿಪ್ ನಂತರ ಮ್ಯಾಗ್‌ವಿಟ್ಚ್ ಎಸ್ಟೆಲ್ಲಾಳ ತಂದೆಯೆಂಬುದನ್ನು ಕಂಡುಕೊಳ್ಳುತ್ತಾನೆ. ಪಿಪ್ ತಾನು ಯೋಚಿಸಿದುದೇ ಸರಿ ಎಂದು ವಾದಿಸುವಾಗ, ಜ್ಯಾಗರ್ಸ್ ತಕ್ಷಣವೇ ಅದನ್ನು ಒಪ್ಪಿಕೊಳ್ಳುವುದಿಲ್ಲ. ಆದರೆ ಅವನು ಅಂತಹ ಘಟನೆಗಳು ನಡೆದಿರಬಹುದೆಂಬ ಒಂದು ಕಾಲ್ಪನಿಕ ಸ್ಥಿತಿಯನ್ನು ಪಿಪ್‌ಗೆ ನೀಡುತ್ತಾನೆ. ಅಲ್ಲದೆ ಎಸ್ಟೆಲ್ಲಾಳ ತಾಯಿ ಮೋಲಿ ಹೊಟ್ಟೆಕಿಚ್ಚುಳ್ಳ ಸ್ವಚ್ಛಂದವೃತ್ತಿಯ ಹೆಂಗಸಾಗಿದ್ದಳು ಮತ್ತು ಅವಳ ಈ ಸ್ವಚ್ಛಂದವೃತ್ತಿಯನ್ನು ನಿಗ್ರಹಿಸಲು ತಾನು ಯಾವಾಗಲೂ ತೀವ್ರವಾಗಿ ಹೊಡೆಯುತ್ತಿದ್ದೆನು ಎಂಬ ಸುಳಿವನ್ನೂ ಜ್ಯಾಗರ್ಸ್ ನೀಡುತ್ತಾನೆ. ಈ ಸುಳಿವುಗಳು ಮೋಲಿ ಮತ್ತು ಜ್ಯಾಗರ್ಸ್‌ರ ಪರಸ್ಪರ ವರ್ತನೆಯಿಂದ ನಿಜವೆಂಬುದು ಸಾಬೀತಾದವು. ಮೋಲಿ ತನ್ನ ಮಾಲೀಕನಿಗೆ ತುಂಬಾ ಹೆದರುತ್ತಿದ್ದಳೆಂಬುದು ತಿಳಿದುಬರುತ್ತದೆ.

ಮ್ಯಾಗ್‌ವಿಚ್ ಮತ್ತು ಪಿಪ್ ದೇಶಬಿಟ್ಟು ಓಡಿಹೋಗಬೇಕೆಂದು ತಯಾರಿ ನಡೆಸುವುದಕ್ಕಿಂತ ಸ್ವಲ್ಪ ಮೊದಲು, ಪಿಪ್ ಅವನ ಮನೆಯಲ್ಲಿ ಅದೇ ದಿನ ರಾತ್ರಿ ೯ ಗಂಟೆಗೆ ಅವನ ಹಳೆ ಮನೆಯ ಹತ್ತಿರದ ಜವುಗು ಪ್ರದೇಶಕ್ಕೆ ಬರುವಂತೆ ಹೇಳಿ ಒಂದು ರುಜುಮಾಡದ ಪತ್ರವನ್ನು ಪಡೆಯುತ್ತಾನೆ. ಪಿಪ್ ಮೊದಲು ಗಾಬರಿಗೊಳ್ಳುತ್ತಾನೆ. ಆದರೆ ಆ ಪತ್ರವು ಅವನ 'ಅಂಕಲ್ ಪ್ರೋವಿಸ್'ನ ಬಗ್ಗೆ ಸೂಚಿಸಿ, ಅವನ ಸುರಕ್ಷತೆಯ ಬಗ್ಗೆ ಬೆದರಿಕೆಯನ್ನು ನೀಡುತ್ತದೆ. ತನ್ನ ದಾನಿಗೆ ನೀಡಿದ ಬೆದರಿಕೆಯಿಂದ ಆಮಿಷಕ್ಕೊಳಗಾಗಿ, ಪಿಪ್ ಕೂಡಲೇ ಗಾಡಿಯಲ್ಲಿ ಹಳ್ಳಿಗೆ ಹೊರಡುತ್ತಾನೆ. ಹಳ್ಳಿಯ ಜವುಗು ಪ್ರದೇಶಕ್ಕೆ ಬಂದಾಗ, ಪಿಪ್‌ನ ತಲೆಗೆ ಯಾರೊ ಒಂದು ಮೊಂಡು ಸಾಧನದಿಂದ ಹೊಡೆಯುತ್ತಾರೆ, ಅದರಿಂದ ಅವನು ಸ್ವಲ್ಪ ಸಮಯದವರೆಗೆ ಸ್ಮೃತಿ ಕಳೆದುಕೊಳ್ಳುತ್ತಾನೆ. ಎಚ್ಚರವಾದಾಗ ತಾನು ಇತರ ಯಾವುದೇ ಮನೆಗಳಿಂದ ತುಂಬಾ ದೂರವಿರುವ ಒಂದು ಸಣ್ಣ ಒಡ್ಡೊಡ್ಡಾದ ಮನೆಯಲ್ಲಿರುವುದನ್ನು ಗಮನಿಸುತ್ತಾನೆ. ಆ ಅಜ್ಞಾತ ಪತ್ರವನ್ನು ಬರೆದವನು ಮತ್ತು ತನಗೆ ದಾಳಿ ಮಾಡಿದವನು ಆರ್ಲಿಕ್ ಎಂಬುದು ತಿಳಿಯುತ್ತದೆ, ಅವನು ತಾನೇ ನಿಜವಾಗಿ ಶ್ರೀಮತಿ ಜೋಯ್‌ ಮೇಲೆ ದಾಳಿ ಮಾಡಿದವನೆಂಬುದನ್ನು ಒಪ್ಪಿಕೊಳ್ಳುತ್ತಾನೆ. ಆರ್ಲಿಕ್ ಜೋಯ್ ಒಂದಿಗೆ ಕೆಲಸ ಮಾಡುವಾಗ ಪಿಪ್‌ನ ಬಗ್ಗೆ ಯಾವಾಗಲೂ ಹೊಟ್ಟೆಕಿಚ್ಚನ್ನು ಹೊಂದಿದ್ದರಿಂದ ಮತ್ತು ಬಿಡ್ಡಿಯನ್ನು ತನ್ನಡೆಗೆ ಒಲಿಸಿಕೊಳ್ಳಲು ಪ್ರಯತ್ನಿಸುವಾಗ ಪಿಪ್ ಮಧ್ಯೆಪ್ರವೇಶಿಸಿದರಿಂದ, ಪಿಪ್‌ನನ್ನು ಕೊಲ್ಲಲು ಬಯಸುವುದಾಗಿ ಅವನು ಹೇಳುತ್ತಾನೆ. ಪಿಪ್‌ಗೆ ತಾನು ಸಾಯುತ್ತೇನೆಂದು ಖಚಿತವಾದರೂ, ಅವನು ಅಳಲು ಅಥವಾ ಕ್ಷಮಿಸುವಂತೆ ಬೇಡಲು ನಿರಾಕರಿಸುತ್ತಾನೆ.

ಆದರೆ ಆರ್ಲಿಕ್ ತನ್ನ ದ್ವೇಷವನ್ನು ತೀರಿಸುವುದಕ್ಕಿಂತ ಮೊದಲು, ಒಬ್ಬ ಹಳ್ಳಿಯ ಅಂಗಡಿ-ಹುಡುಗ ಮತ್ತು ಅವರ ಹಳೆಯ ಸ್ನೇಹಿತ ಹರ್ಬರ್ಟ್ ಪಿಪ್‌ನನ್ನು ಕಾಪಾಡುತ್ತಾನೆ. ಪಿಪ್ ಆಕಸ್ಮಿಕವಾಗಿ ಆ ರಹಸ್ಯ ಪತ್ರವನ್ನು ಅವರ ಮನೆಯಲ್ಲಿ ಬಿಟ್ಟುಬಂದಿದರಿಂದ, ಅವನು ಎಲ್ಲಿಗೆ ಹೋಗಿದ್ದಾನೆಂದು ತಿಳಿದುಬಂತು ಎಂದು ಹರ್ಬರ್ಟ್ ತಿಳಿಸುತ್ತಾನೆ. ಆರ್ಲಿಕ್ ಓಡಿಹೋಗುತ್ತಾನೆ ಆದರೆ ಅವರ ಮ್ಯಾಗ್‌ವಿಟ್ಚ್ ಒಂದಿಗಿನ ಸಂಪರ್ಕವು ತುಂಬಾ ಅಪಾಯಕಾರಿಯಾಗಿದ್ದುದರಿಂದ ಈ ವಿಷಯವನ್ನು ಪೋಲೀಸರಿಗೆ ತಿಳಿಸುವುದು ಬೇಡವೆಂದು ನಿರ್ಧರಿಸುತ್ತಾರೆ.

ಅಷ್ಟರಲ್ಲಿ, ಎಸ್ಟೆಲ್ಲಾ ಹ್ಯಾವಿಶ್ಯಾಮ್ ಒಂದಿಗಿನ ವೈರಬುದ್ಧಿಯಿಂದ ಬೆಂಟ್ಲೆ ಡ್ರಮ್ಲೆಯನ್ನು ಮದುವೆಯಾಗುತ್ತಾಳೆ. ಈತನು ಪಿಪ್‌ನ ಒಬ್ಬ ಜಂಬದ ಪ್ರತಿಸ್ಪರ್ಧಿಯಾಗಿರುತ್ತಾನೆ, ಆತನನ್ನು ಪಿಪ್ ಸ್ವಲ್ಪವೂ ಇಷ್ಟ ಪಡುತ್ತಿರಲಿಲ್ಲ. ಡ್ರಮ್ಲೆಯು ಮದುವೆಯಲ್ಲಿ ಯಾರು ಪ್ರಬಲರೆಂಬುದನ್ನು ಸಮರ್ಥಿಸಲು, ವಿನಯ ತೋರುವಂತೆ ಎಸ್ಟೆಲ್ಲಾಗೆ ಹೊಡೆಯಬಹುದು ಎಂದು ಜ್ಯಾಗರ್ಸ್ ಹೇಳುತ್ತಾನೆ. ಡ್ರಮ್ಲೆ ಆ ರೀತಿ ಮಾಡಬಹುದೆಂಬುದನ್ನು ನಂಬಲು ನಿರಾಕರಿಸಿದರೂ ಪಿಪ್ ಸಿಟ್ಟಿಗೇಳುತ್ತಾನೆ ಮತ್ತು ಖಿನ್ನತೆಗೊಳಗಾಗುತ್ತಾನೆ.

ಪಿಪ್ ಮ್ಯಾಗ್‌ವಿಟ್ಚ್ ಒಂದಿಗೆ ದೂರಹೋಗುವುದಕ್ಕಿಂತ ಮೊದಲು, ಹ್ಯಾವಿಶ್ಯಾಮ್‌ಳನ್ನು ಕೊನೆಯ ಬಾರಿಗೆ ಭೇಟಿಯಾಗುತ್ತಾನೆ. ಎಸ್ಟೆಲ್ಲಾಳ ಒಣ ಜಂಬ ಮತ್ತು ಇತರೆಡೆಗಿನ ವಿಶೇಷವಾಗಿ ಪಿಪ್‌ನೆಡೆಗಿನ ಅನಾದರಕ್ಕೆ ಪ್ರೋತ್ಸಾಹವನ್ನು ನೀಡುವ ಮೂಲಕ ತಾನು ಆಕೆಯನ್ನು ಕ್ರೂರಿಯಾಗಿಸಿದೆಯೆಂದು ಹ್ಯಾವಿಶ್ಯಾಮ್ ಅರಿತುಕೊಳ್ಳುತ್ತಾಳೆ. ತಾನು ಯುವತಿಯಾಗಿದ್ದಾಗ ಅನುಭವಿಸಿದ ಅಳಲು ಮತ್ತು ದುರದೃಷ್ಟವನ್ನು ಬೇರೆಯವರು ಅನುಭವಿಸದಿರಲೆಂಬ ಏಕೈಕ ಕಾರಣಕ್ಕಾಗಿ ಎಸ್ಟೆಲ್ಲಾಳನ್ನು ತಾನು ದತ್ತುತೆಗೆದುಕೊಂಡೆ ಎಂದು ಹ್ಯಾವಿಶ್ಯಾಮ್ ಸಮರ್ಥಿಸುತ್ತಾಳೆ. ಬದಲಿಗೆ ಆಕೆ ಎಸ್ಟೆಲ್ಲಾಳಿಗೆ ಕ್ರೂರಿ, ಜಂಬಗಾರ್ತಿ ಮತ್ತು ಅಹಂಕಾರಿಯಾಗುವಂತೆ ಕಲಿಸಿಕೊಟ್ಟಳು. ಹ್ಯಾವಿಶ್ಯಾಮ್‌ಳ ಮಲ-ತಮ್ಮನಿಂದ ಸ್ಯಾಟಿಸ್ ಮನೆಯಲ್ಲಿನ ಬ್ರೆವರಿಯ ಪಾಲನ್ನು ಹ್ಯಾವಿಶ್ಯಾಮ್‌ಳನ್ನು ಪ್ರೀತಿಸುತ್ತಿರುವುದಾಗಿ ಹೇಳಿದ ಒಬ್ಬ ಯುವಕನು ಖರೀದಿಸುವಂತೆ ಆಕೆಯ ಮನವೊಪ್ಪಿಸಲಾಗಿತ್ತೆಂದು ತಿಳಿದುಬರುತ್ತದೆ. ಆ ಯುವಕನು ಹ್ಯಾವಿಶ್ಯಾಮ್‌ಳೊಂದಿಗೆ ಮದುವೆ ಪ್ರಸ್ತಾಪ ಮಾಡಿದರಿಂದ, ಮದುವೆಗೆ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿರುತ್ತದೆ; ಆದರೆ ಮದುವೆಯ ದಿನದಂದು, ಸಮಾರಂಭಕ್ಕಿಂತ ಸ್ವಲ್ಪ ಮೊದಲು ಅವನು ಆಕೆಗೆ ಪ್ರೀತಿಯ ವಂಚನೆ ಮಾಡಿ ಓಡಿಹೋಗಿರುತ್ತಾನೆ. ಈ ದುಃಖದ ನಂತರ ಹ್ಯಾವಿಶ್ಯಾಮ್ ಕತ್ತಲುತುಂಬಿದ ಮನೆಯಲ್ಲಿ ಕಾಲ ಕಳೆಯಲು ಆರಂಭಿಸುತ್ತಾಳೆ, ಅಲ್ಲಿ ಆಕೆ ಅನೇಕ ವರ್ಷಗಳ ಕಾಲ ಮದುವೆ ಕೇಕ್ಅನ್ನು ಮುಂದಿಟ್ಟುಕೊಂಡು ಮದುವಣಗಿತ್ತಿಯ ಉಡುಗೆಯಲ್ಲಿ ಕುಳಿತುಕೊಂಡಿರುತ್ತಾಳೆ. ಹ್ಯಾವಿಶ್ಯಾಮ್ ಮತ್ತೆ ದುಃಖಕ್ಕೊಳಗಾಗಬಾರದೆಂದು ಮತ್ತು ಎಲ್ಲಾ ಪುರುಷರ ಮೇಲೆ ದ್ವೇಷವನ್ನು ಸಾಧಿಸಲು ಎಸ್ಟೆಲ್ಲಾಳನ್ನು ಸಾಧನವಾಗಿ ಬಳಸಿಕೊಳ್ಳಬೇಕೆಂದು ನಿರ್ಧರಿಸುತ್ತಾಳೆ, ಅದಕ್ಕಾಗಿ ಎಸ್ಟೆಲ್ಲಾಳ ಕ್ರೂರತೆಯನ್ನು ಹಾಗೂ ಪುರುಷರನ್ನು ತಪ್ಪುದಾರಿಗೆಳೆಯುವ ಆಕೆಯ ಕ್ಷುಲ್ಲಕ ನಡತೆ ಮತ್ತು ದೃಢತೆಯನ್ನು ಪ್ರೋತ್ಸಾಹಿಸುತ್ತಾಳೆ.

ಆದರೆ ಈ ರೀತಿ ಮಾಡಿದುದರಿಂದ ಎಸ್ಟೆಲ್ಲಾಳು ಎಷ್ಟೊಂದು ದುಷ್ಟಳಾಗಿದ್ದಾಳೆ ಮತ್ತು ಪಿಪ್‌ನ ಮನಸ್ಸನ್ನು ಒಡೆದಿದ್ದಾಳೆ ಎಂಬುದನ್ನು ತಿಳಿದ ಆಕೆ ಅವನಲ್ಲಿ ಕ್ಷಮೆಯನ್ನು ಕೇಳುತ್ತಾಳೆ. ಪಿಪ್ ಎಸ್ಟೆಲ್ಲಾಳ ಹಿನ್ನೆಲೆ ಮತ್ತು ಸಂತೋಷವಿಲ್ಲದ ಮದುವೆಯ ನಂತರದ ಈಗಿನ ಆಕೆಯ ಪರಿಸ್ಥಿತಿಯ ಬಗ್ಗೆ ಹ್ಯಾವಿಶ್ಯಾಮ್‌ಳಿಗೆ ವಿವರಿಸುತ್ತಾನೆ. ಎಸ್ಟೆಲ್ಲಾಳಿಗೆ ಭಾವಶೂನ್ಯವಾಗಿರುವಂತೆ ಮತ್ತು ಪ್ರೀತಿಸದಂತೆ ಕಲಿಸಿಕೊಟ್ಟಿದುದಕ್ಕಾಗಿ ಪಿಪ್ ಹ್ಯಾವಿಶ್ಯಾಮ್‌ಳನ್ನು ದೂರುತ್ತಾನೆ. ಈ ಭೇಟಿಯ ಪಿಪ್ ಮತ್ತೊಮ್ಮೆ ಆ ಮನೆಗೆ ಬರುತ್ತಾನೆ, ಆಗ ಹ್ಯಾವಿಶ್ಯಾಮ್ ಬೆಂಕಿಗೆ ತುಂಬಾ ಹತ್ತಿರದಲ್ಲಿ ನಿಂತುಕೊಂಡಿದ್ದು, ಆಕೆಯ ಬಟ್ಟೆಗೆ ಬೆಂಕಿ ತಗಲಿಕೊಂಡಿರುವುದನ್ನು ನೋಡುತ್ತಾನೆ. ಆಕೆಯನ್ನು ಉಳಿಸುವ ಪ್ರಯತ್ನದಲ್ಲಿ, ಅವನು ತನ್ನ ಮೇಲಂಗಿಯನ್ನು ಕಳಚಿ, ಹ್ಯಾವಿಶ್ಯಾಮ್‌ಳ ಸುತ್ತ ಎಸೆಯುತ್ತಾನೆ. ಅದರಿಂದ ಬೆಂಕಿಯು ನಂದಿಹೋಗುತ್ತದೆ, ಆದರೂ ಇಬ್ಬರಿಗೂ ತುಂಬಾ ಗಾಯಗಳಾಗುತ್ತವೆ. ಅದರಲ್ಲೂ ಹ್ಯಾವಿಶ್ಯಾಮ್‌ಳಿಗೆ ಅತೀ ಹೆಚ್ಚಿನ ಗಾಯಗಳಾದುದರಿಂದ, ಆಕೆ ಸಾವನ್ನಪ್ಪುತ್ತಾಳೆ.

ಪಿಪ್, ಹರ್ಬರ್ಟ್ ಮತ್ತು ಇನ್ನೊಬ್ಬ ಸ್ನೇಹಿತ ಸ್ಟಾರ್ಟಾಪ್ ಮೊದಲಾದವರು ಸೇರಿ ಮ್ಯಾಗ್‌ವಿಟ್ಚ್ ತಪ್ಪಿಸಿಕೊಳ್ಳಲು ಗಂಭೀರ ಪ್ರಯತ್ನವನ್ನು ಮಾಡುತ್ತಾರೆ. ಆದರೆ ಅವನು ಸಿಕ್ಕಿಬೀಳುತ್ತಾನೆ, ಅವನನ್ನು ಜೈಲಿಗೆ ಕೊಂಡೊಯ್ಯಲಾಗುತ್ತದೆ. ಈಗ ಪಿಪ್‌ಗೆ ಮ್ಯಾಗ್‍‌ವಿಟ್ಚ್‌ನ ಬಗ್ಗೆ ಅಭಿಮಾನ ಮೂಡುತ್ತದೆ. ಅವನು ಮ್ಯಾಗ್‍‌ವಿಟ್ಚ್‌ನಲ್ಲಿ ಒಬ್ಬ ಉತ್ತಮ ಮತ್ತು ಕುಲೀನ ವ್ಯಕ್ತಿಯನ್ನು ಗುರುತಿಸುತ್ತಾನೆ ಹಾಗೂ ತಾನು ಹಿಂದೆ ಮ್ಯಾಗ್‍‌ವಿಟ್ಚ್‌ನ ಬಗ್ಗೆ ಕೆಟ್ಟದಾಗಿ ಯೋಚಿಸಿದುದರ ಬಗ್ಗೆ ನಾಚಿಕೆ ಪಡುತ್ತಾನೆ. ಪಿಪ್ ಮ್ಯಾಗ್‍‌ವಿಟ್ಚ್‌ನನ್ನು ಸೆರೆಯಿಂದ ಬಿಡಿಸಲು ಪ್ರಯತ್ನಿಸುತ್ತಾನೆ, ಆದರೆ ಮ್ಯಾಗ್‍‌ವಿಟ್ಚ್‌ ಅವನನ್ನು ಗಲ್ಲಿಗೆ ಹಾಕುವುದಕ್ಕಿಂತ ಸ್ವಲ್ಪ ಮೊದಲು ಸಾವನ್ನಪ್ಪುತ್ತಾನೆ. ಇಂಗ್ಲಿಷ್ ಕಾನೂನಿನಡಿಯಲ್ಲಿ ಮ್ಯಾಗ್‌ವಿಟ್ಚ್‌ನ ಸಂಪತ್ತು ರಾಜನಿಗೆ ಮುಟ್ಟುಗೋಲು ಆಗುತ್ತದೆ. ಆದ್ದರಿಂದ ಪಿಪ್‌ನ "ಭಾರಿ ನಿರೀಕ್ಷೆಗಳು‌‌‌‌" ನಾಶವಾಗಿ ಹೋಗುತ್ತವೆ.

ದೀರ್ಘಕಾಲದ ಅನಾರೋಗ್ಯದ ಸಂದರ್ಭದಲ್ಲಿ, ಪಿಪ್ ಹಲವಾರು ಸಾಲಗಾರರಿಗೆ ನೀಡಬೇಕಿದ್ದ ಅನೇಕ ಸಾಲಗಳಿಗಾಗಿ ಬಂಧನಕ್ಕೆ ಒಳಗಾಗುವ ಪರಿಸ್ಥಿತಿಯು ಎದುರಾಗುತ್ತದೆ. ಆದರೆ ಅವನ ಆಗಿನ ಸ್ಥಿತಿಯಿಂದಾಗಿ, ಅವನು ಬಂಧಿಸಲ್ಪಡುವುದಿಲ್ಲ. ಈ ಅನಾರೋಗ್ಯದ ಸಮಯದಲ್ಲಿ ಅವನನ್ನು ಜೋಯ್ ನೋಡಿಕೊಳ್ಳುತ್ತಾನೆ. ಅಂತಿಮವಾಗಿ ಪಿಪ್ ಚೇತರಿಸಿಕೊಂಡು, ಆರೋಗ್ಯವಂತನಾಗುತ್ತಾನೆ. ಒಂದು ದಿನ ಬೆಳಗಿನ ಜಾವ ಜೋಯ್ ತನ್ನನ್ನು ಅನೇಕ ವರ್ಷಗಳ ಕಾಲ ಭೇಟಿಯಾಗದಿದ್ದುದರಿಂದ, ಮುಂದೆಯೂ ಭೇಟಿಯಾಗುವುದು ಬೇಡ ಮತ್ತು ಪಿಪ್‌ನನ್ನು ಮತ್ತೆ ನೋಡಲು ಬಯಸುವುದಿಲ್ಲ ಎಂಬ ವಿಷಯವನ್ನೊಳಗೊಂಡ ಮತ್ತು ಶುಭಹಾರೈಕೆಗಳ ಒಂದು ಪತ್ರವನ್ನು ಬರೆದಿಟ್ಟು ಪಿಪ್‌ನನ್ನು ಬಿಟ್ಟು ಹೋಗುತ್ತಾನೆ. ಪಿಪ್ ಈ ಘಟನೆಯ ತಿರುವಿನಿಂದ ತುಂಬಾ ದುಃಖಿತನಾಗುತ್ತಾನೆ ಮತ್ತು ಕಳೆದ ಅನೇಕ ವರ್ಷಗಳಿಂದ ತಾನು ಎಷ್ಟೊಂದು ಕೃತಘ್ನನಾಗಿದ್ದೆನೆಂಬುದನ್ನು ಕಂಡುಕೊಳ್ಳುತ್ತಾನೆ. ಪೋಲೀಸರು ಪಿಪ್‌‌ಗೆ ಚೇತರಿಸಿಕೊಳ್ಳಲೂ ಸಮಯ ನೀಡದೆ ಹಣದ ವಾಪಸಾತಿಗಾಗಿ ಪೀಡಿಸಿದರಿಂದ, ಜೋಯ್ ಅವನ ಎಲ್ಲಾ ಸಾಲಗಳನ್ನು ತೀರಿಸಿದ್ದಾನೆ ಎಂಬುದು ತಿಳಿದುಬರುವುದರಿಂದ ಪಿಪ್‌ನ ಅಪರಾಧಿ ಪ್ರಜ್ಞೆಯು ಇನ್ನಷ್ಟು ಹೆಚ್ಚುತ್ತದೆ. ಪಿಪ್ ಬಿಡ್ಡಿ ಮತ್ತು ಜೋಯ್ ಹತ್ತಿರ ಕ್ಷಮೆ ಕೇಳಲು, ಜೋಯ್‌ನ ಅಪ್ರಚೋದಿತ ಉಪಕಾರಕ್ಕಾಗಿ ಮತ್ತು ತಾನು ಅದಕ್ಕೆ ಅನರ್ಹವಾಗಿದ್ದರೂ ವಿಶ್ವಾಸನೀಯ ಪ್ರೀತಿಯನ್ನು ತೋರಿದುದಕ್ಕಾಗಿ ಜೋಯ್‌ಗೆ ಧನ್ಯವಾದ ಹೇಳಲು ಮನೆಗೆ ಹಿಂದಿರುಗುತ್ತಾನೆ. ಅವನು ಹಳ್ಳಿಗೆ ಹಿಂದಿರುಗಿದಾಗ, ಅಂದು ಬಿಡ್ಡಿ ಮತ್ತು ಜೋಯ್‌ರ ಮದುವೆಯೆಂಬುದನ್ನು ತಿಳಿಯುತ್ತಾನೆ. ಅವನು ದಂಪತಿಗಳಿಗೆ ಅಭಿನಂದನೆಯನ್ನು ಸೂಚಿಸಿ, ತನ್ನ ಈ ಭೇಟಿಯು ಕೇವಲ ತಾತ್ಕಾಲಿಕ, ಜೋಯ್ ಸಾಲಗಾರರಿಗೆ ಪಾವತಿಸಿದ ಎಲ್ಲಾ ಹಣವನ್ನು ಹಿಂದಿರುಗಿಸಲು ತಾನು ಬಯಸುವುದರಿಂದ ಮತ್ತೊಮ್ಮೆ ಬರುವುದಾಗಿ ಹೇಳುತ್ತಾನೆ. ನಂತರ ಪಿಪ್ ಹರ್ಬರ್ಟ್ ಒಂದಿಗೆ ವ್ಯಾಪಾರಕ್ಕಾಗಿ ಪರದೇಶಕ್ಕೆ ಹೋಗುತ್ತಾನೆ. ಪರದೇಶದಲ್ಲಿ ಸುಮಾರು ಹನ್ನೊಂದು ವರ್ಷಗಳ ಯಶಸ್ವಿ ವ್ಯಾಪಾರದ ನಂತರ, ಪಿಪ್ ಜೋಯ್‌ನನ್ನು ಮತ್ತು ಉಳಿದ ಕುಟುಂಬದವರನ್ನು ಭೇಟಿಯಾಗಲು ಹಳ್ಳಿಗೆ ಹಿಂದಿರುಗುತ್ತಾನೆ.

ಮೂಲ ಕಾದಂಬರಿಯ ಕೊನೆ

[ಬದಲಾಯಿಸಿ]

ಪಿಪ್ ಎಸ್ಟೆಲ್ಲಾಳನ್ನು ದಾರಿಯಲ್ಲಿ ಭೇಟಿಯಾಗುತ್ತಾನೆ. ಆಕೆಯನ್ನು ಯಾವಾಗಲೂ ಬೈಯುತ್ತಿದ್ದ ಆಕೆಯ ಗಂಡ ಡ್ರಮ್ಲೆ ಸತ್ತಿರುತ್ತಾನೆ. ಎಸ್ಟೆಲ್ಲಾ ಮತ್ತು ಪಿಪ್ ಸ್ವಲ್ಪ ಹೊತ್ತು ತಮಾಷೆಯ ಮಾತುಗಳನ್ನಾಡುತ್ತಾರೆ. ನಂತರ ಪಿಪ್ ಒಂದು ವೇಳೆ ಕೊನೆಯಲ್ಲಿ ತನಗೆ ಆಕೆ ಸಿಕ್ಕಿಲ್ಲದಿದ್ದರೆ, ಆಕೆಯು ಒಬ್ಬ ಭಿನ್ನ ಹುಡುಗಿಯಾಗಿದ್ದಿರಬಹುದೆಂದು ತಾನು ಸಂತೋಷಿಸುತ್ತಿದ್ದೆ ಎಂದು ಹೇಳುತ್ತಾನೆ. ಹ್ಯಾವಿಶ್ಯಾಮ್ ಬೆಳೆಸಿದ ಕಲ್ಲು-ಮನಸ್ಸಿನ ಹುಡುಗಿ ಎಸ್ಟೆಲ್ಲಾ ಸಂಪೂರ್ಣವಾಗಿ ಬದಲಾಗಿರುತ್ತಾಳೆ. 'ಆಕೆ ಅನುಭವಿಸಿದ ನೋವು ಹ್ಯಾವಿಶ್ಯಾಮ್‌ ಕಲಿಸಿದುದಕ್ಕಿಂತ ಪ್ರಬಲವಾಗಿದೆ ಮತ್ತು ಅದು ನನ್ನ ಮನಸ್ಸನ್ನು ಅರ್ಥೈಸಿಕೊಳ್ಳುವ ಮನಸ್ಸನ್ನು ಆಕೆಗೆ ನೀಡಿದೆ' ಎಂದು ಪಿಪ್ ಹೇಳುವುದರೊಂದಿಗೆ ಕಾದಂಬರಿಯು ಕೊನೆಗೊಳ್ಳುತ್ತದೆ.

ಮೂಲ ಕಾದಂಬರಿಯ ಕೊನೆಯ ಸಂಪೂರ್ಣ ಪಠ್ಯವು ಈ ಕೆಳಗಿನಂತಿದೆ:

'It was two years more before I saw herself. I had heard of her as leading a most unhappy life, and as being separated from her husband, who had used her with great cruelty, and who had become quite renowned as a compound of pride, brutality, and meanness. I had heard of the death of her husband from an accident consequent on ill-treating a horse, and of her being married again to a Shropshire doctor who, against his interest, had once very manfully interposed on an occasion when he was in professional attendance upon Mr. Drummle, and had witnessed some outrageous treatment of her. I had heard that the Shropshire doctor was not rich, and that they lived on her own personal fortune. I was in England again – in London, and walking along Piccadilly with little Pip – when a servant came running after me to ask would I step back to a lady in a carriage who wished to speak to me. It was a small pony carriage, which the lady was driving; and the lady and I looked sadly enough on one another.

"I am greatly changed, I know; but I thought you would like to shake hands with Estella, too, Pip. Lift up that pretty child and let me kiss it!" (She supposed the child, I think, to be my child.)

I was very glad afterwards to have had the interview; for in her face and in her voice, and in her touch, she gave me the assurance that suffering had been stronger than Miss Havisham's teaching, and had given her a heart to understand what my heart used to be.

— New American Classics edition published by New American Library, copyright ೧೯೬೩

ಕಥೆಯು ೧೮೪೧ರಲ್ಲಿ ಕೊನೆಗೊಳ್ಳುತ್ತದೆ.

ಪರಿಷ್ಕೃತ ಕೊನೆ

[ಬದಲಾಯಿಸಿ]

ಪಿಪ್ ಮತ್ತು ಎಸ್ಟೆಲ್ಲಾ ಮತ್ತೆ ಪಾಳುಬಿದ್ದ ಸ್ಯಾಟಿಸ್ ಮನೆಯಲ್ಲಿ ಭೇಟಿಯಾಗುತ್ತಾರೆ.

"We are friends," said I, rising and bending over her, as she rose from the bench.

"And will continue friends apart," said Estella. I took her hand in mine, and we went out of the ruined place; and, as the morning mists had risen long ago when I first left the forge, so the evening mists were rising now, and in all the broad expanse of tranquil light they showed to me, I saw no shadow of another parting from her.[]

— Charles Dickens, Great Expectations

ಗ್ರೇಟ್‌‌ ಎಕ್ಸ್‌‌ಪೆಕ್ಟೇಷನ್ಸ್‌‌‌‌ ‌ನಲ್ಲಿರುವ ಪ್ರಮುಖ ಪಾತ್ರಗಳು

[ಬದಲಾಯಿಸಿ]

ಪಿಪ್ ಮತ್ತು ಆತನ ಕುಟುಂಬ

[ಬದಲಾಯಿಸಿ]
  • ಫಿಲಿಪ್ ಪಿರಿಪ್ - ಪಿಪ್ ಎಂಬ ಅಡ್ಡ ಹೆಸರು ಹೊಂದಿದ ಒಬ್ಬ ಅನಾಥ ಹುಡುಗ ಮತ್ತು ಗ್ರೇಟ್‌‌ ಎಕ್ಸ್‌‌ಪೆಕ್ಟೇಷನ್ಸ್‌‌‌‌ ‌ನ ನಾಯಕ. ಬಾಲ್ಯದಲ್ಲಿ ಪಿಪ್ ಮುಂದೆ ತಾನೊಬ್ಬ ಕಮ್ಮಾರನಾಗಬಹುದೆಂದು ಯೋಚಿಸಿರುತ್ತಾನೆ. ಆದರೆ ಅಜ್ಞಾತ ಮ್ಯಾಗ್‌ವಿಟ್ಚ್‌‌ನ ಸಹಾಯದಿಂದ, ಪಿಪ್ ಲಂಡನ್‌ಗೆ ಹೋಗುತ್ತಾನೆ ಮತ್ತು ಒಬ್ಬ ಶ್ರೀಮಂತನಾಗುತ್ತಾನೆ.
  • ಜೋಯ್ ಗಾರ್ಗೆರಿ - ಪಿಪ್‌ನ ಭಾವ ಮತ್ತು ಆತನ ತಂದೆಯ ನಂತರ ಜವಾಬ್ದಾರಿ ವಹಿಸಿಕೊಂಡವನು. ಕಮ್ಮಾರನಾದ ಅವನು ಪಿಪ್‌ನೊಂದಿಗೆ ಯಾವಾಗಲೂ ಸ್ನೇಹದಿಂದಿರುತ್ತಾನೆ ಮತ್ತು ಇವನೊಂದಿಗೆ ಮಾತ್ರ ಪಿಪ್ ಯಾವಾಗಲೂ ಪ್ರಾಮಾಣಿಕವಾಗಿರುತ್ತಾನೆ. ಪಿಪ್ ಕಮ್ಮಾರನಾಗುವ ಬದಲಿಗೆ ಮನೆಬಿಟ್ಟು ಲಂಡನ್‌ಗೆ ಹೋಗಿ ಶ್ರೀಮಂತನಾಗಲು ನಿರ್ಧರಿಸುವುದರಿಂದ ಜೋಯ್ ತುಂಬಾ ದುಃಖಿತನಾಗುತ್ತಾನೆ.
  • ಶ್ರೀಮತಿ ಜೋಯ್ ಗಾರ್ಗೆರಿ - ಪಿಪ್‌ನ ಸಿಡುಕು-ಸ್ವಭಾವದ ಅಕ್ಕ, ಈಕೆ ಅವರ ಹೆತ್ತವರು ಮಡಿದ ನಂತರ ಪಿಪ್‌ನನ್ನು ನೋಡಿಕೊಳ್ಳುತ್ತಾಳೆ. ಆದರೆ ಅವನು ಆಕೆಗೆ ಒಂದು ಹೊರೆ ಎಂಬಂತೆ ಯಾವಾಗಲೂ ದೂರುತ್ತಿರುತ್ತಾಳೆ. ಆಕೆಯ ಗಂಡನ ಕೂಲಿಕಾರ ಆರ್ಲಿಕ್ ಆಕೆಯ ಮೇಲೆ ದಾಳಿ ನಡೆಸುತ್ತಾನೆ ಮತ್ತು ಸಾಯುವವರೆಗೆ ಆಕೆ ನಿಷ್ಕ್ರಿಯಳಾಗಿರುತ್ತಾಳೆ.
  • ಪಂಬಲ್‌ಚುಕ್' - ಜೋಯ್ ಗಾರ್ಗೆರಿಯ ಅಂಕಲ್, ಈತ ಒಬ್ಬ ಅಧಿಕಪ್ರಸಂಗಿ ಅವಿವಾಹಿತ ಮತ್ತು ಜೋಳ ವ್ಯಾಪಾರಿ. ಪಿಪ್‌ನನ್ನು ಅಸಡ್ಡೆಯಿಂದ ನೋಡಿ, ಪಿಪ್‌ನನ್ನು ಬೆಳೆಸಲು ಶ್ರೀಮತಿ ಜೋಯ್‌ ಎಷ್ಟೊಂದು ಉದಾತ್ತ ಗುಣದವಳಾಗಿರಬೇಕೆಂದು ಆಕೆಗೆ ಹೇಳುತ್ತಿರುತ್ತಾನೆ. ಪಿಪ್‌ನನ್ನು ಹ್ಯಾವಿಶ್ಯಾಮ್‌ಗೆ ಪರಿಚಯಿಸಿದ ಮೊದಲ ವ್ಯಕ್ತಿಯಾದುದರಿಂದ ಅವನು ಪಿಪ್‌ನ ಅಮೂಲ್ಯ ಭವಿಷ್ಯದ ಮೂಲಭೂತ ಸೃಷ್ಟಿಕರ್ತನ ತಾನಾಗಿದ್ದೇನೆಂದು ಹೇಳುತ್ತಿರುತ್ತಾನೆ. ಪಂಬಲ್‌ಚುಕ್‌ ಯಾವಾಗಲೂ ನಿಜವಾಗಿ ಇರುವುದಕ್ಕಿಂತ ಹೆಚ್ಚು ಶ್ರೇಷ್ಠ ವ್ಯಕ್ತಿಯೆಂಬಂತೆ ನಡೆದುಕೊಳ್ಳುತ್ತಿದ್ದುದರಿಂದ ಪಿಪ್ ಅವನನ್ನು ತಿರಸ್ಕಾರದಿಂದ ನೋಡುತ್ತಿರುತ್ತಾನೆ. ಅವನೊಬ್ಬ ಕುತಂತ್ರ ಮೋಸಗಾರ. ಪಿಪ್ ಅಂತಿಮವಾಗಿ ಅವನನ್ನು ಧೈರ್ಯದಿಂದ ಎದುರಿಸಿದಾಗ, ಪಂಬಲ್‌ಚುಕ್ ಪಿಪ್‌ನ ವಿರುದ್ಧ ಕೆಟ್ಟದಾಗಿ ಮಾತನಾಡಲು ಮತ್ತು ವಾರಸುದಾರಿಕೆಯನ್ನು ಅವನ ಲಾಭದಾರಿಕೆಗೆ ಬಳಸುತ್ತಿದ್ದಾನೆಂದು ಹೇಳಲು ಆರಂಭಿಸುತ್ತಾನೆ.

ಹ್ಯಾವಿಶ್ಯಾಮ್ ಮತ್ತು ಆಕೆಯ ಕುಟುಂಬ

[ಬದಲಾಯಿಸಿ]
  • ಹ್ಯಾವಿಶ್ಯಾಮ್ - ಶ್ರೀಮಂತ ಅವಿವಾಹಿತ ವೃದ್ಧೆ, ಈಕೆ ಪಿಪ್‌ನನ್ನು ಒಡನಾಡಿಯಾಗಿ ಇರಿಸಿಕೊಂಡಿರುತ್ತಾಳೆ. ಇವಳನ್ನು ಪಿಪ್ ತನ್ನ ದಾನಿಯೆಂದು ಸಂಶಯಿಸುತ್ತಾನೆ. ಇದು ಹ್ಯಾವಿಶ್ಯಾಮ್‌ಳ ಸ್ವಂತ ಹಗೆತನದ ಯೋಜನೆಗಳಿಗೆ ಸರಿಹೊಂದುತ್ತಿದ್ದುದರಿಂದ ಆಕೆ ಇದಕ್ಕೆ ಅಸಮ್ಮತಿ ತೋರುವುದಿಲ್ಲ. ನಂತರ ಆಕೆ ತನಗೆ ಈಗ ತಪ್ಪಿನ ಅರಿವಾಗಿದೆಯೆಂದು ಹೇಳಿ ಅವನಲ್ಲಿ ಕ್ಷಮೆ ಯಾಚಿಸುತ್ತಾಳೆ. ಅವನು ಅವಳ ಕ್ಷಮೆ ಕೋರಿಕೆಯನ್ನು ಸ್ವೀಕರಿಸುತ್ತಾನೆ. ಆಕೆಯ ಉಡುಪಿಗೆ ಬೆಂಕಿಯಿಂದ ಹಾರಿದ ಕಿಡಿಯಿಂದ ಬೆಂಕಿಹತ್ತಿಕೊಂಡಾಗ ಆಕೆ ತೀವ್ರವಾಗಿ ಸುಟ್ಟುಹೋಗುತ್ತಾಳೆ. ಪಿಪ್ ಆಕೆಯನ್ನು ಉಳಿಸುತ್ತಾನೆ. ಆದರೆ ನಂತರ ಹೆಚ್ಚಿನ ಗಾಯಗಳಾದುದರಿಂದ ಆಕೆ ಸಾವನ್ನಪ್ಪುತ್ತಾಳೆ.
  • ಎಸ್ಟೆಲ್ಲಾ (ಹ್ಯಾವಿಶ್ಯಾಮ್) - ಹ್ಯಾವಿಶ್ಯಾಮ್‌ಳ ದತ್ತುತೆಗೆದುಕೊಂಡ ಮಗಳು. ಆಕೆಯನ್ನು ಪಿಪ್ ಕಾದಂಬರಿಯಾದ್ಯಂತ ರೊಮ್ಯಾಂಟಿಕ್ ಆಗಿ ಚಿತ್ರಿಸುತ್ತಾನೆ. ಆಕೆ ರಹಸ್ಯವಾಗಿ ಜ್ಯಾಗರ್ಸ್‌ನ ಮನೆಕೆಲಸದಾಕೆ ಮೋಲಿ ಮತ್ತು ಪಿಪ್ ಪಾರುಮಾಡಿದ ಕೈದಿ ಮ್ಯಾಗ್‌ವಿಟ್ಚ್‌‌ನ ಮಗಳಾಗಿದ್ದಾಳೆ. ಆದರೆ ಆಕೆಯನ್ನು ಒಂದು ಕೊಲೆಯ ದಾಳಿಯಲ್ಲಿ ಹ್ಯಾವಿಶ್ಯಾಮ್‌ಳಿಗೆ ನೀಡಲಾಗಿರುತ್ತದೆ. ಎಸ್ಟೆಲ್ಲಾ ಸಂಪತ್ತು ಮತ್ತು ಐಶ್ವರ್ಯದಿಂದ ಕೂಡಿದ ಜೀವನವನ್ನು ಮನವರಿಕೆ ಮಾಡುತ್ತಾಳೆ, ಮುಂದೆ ಅದಕ್ಕಾಗಿ ಪಿಪ್ ಸೆಣಸಾಡುತ್ತಾನೆ. ಆಕೆಯ ಪ್ರೀತಿಸುವ ಸಾಮರ್ಥ್ಯವನ್ನು ಹ್ಯಾವಿಶ್ಯಾಮ್ ನಾಶಗೊಳಿಸಿದುದರಿಂದ, ಆಕೆ ಪಿಪ್‌ನ ಪ್ರೇಮವನ್ನು ಹಿಂದಿರುಗಿಸಲು ಅಸಮರ್ಥಳಾಗುತ್ತಾಳೆ. ಆಕೆ ಪಿಪ್‌ಗೆ ಈ ಬಗ್ಗೆ ಅನೇಕ ಬಾರಿ ಎಚ್ಚರಿಕೆ ನೀಡುತ್ತಾಳೆ, ಆದರೆ ಅವನು ಅದನ್ನು ನಂಬಲು ಇಷ್ಟವಿಲ್ಲದೆ ಆಕೆಯನ್ನು ಮತ್ತೂ ಪ್ರೀತಿಸುತ್ತಾನೆ. ಒಮ್ಮೆ ಎಸ್ಟೆಲ್ಲಾ ಕಬ್ಬಿಣದ ಮೆಟ್ಟಿಲುಗಳನ್ನು ಏರುತ್ತಿರುತ್ತಾಳೆ, ಅದು ಆಕೆ ಪಿಪ್‌ಗಿಂತ, ನಿಜವಾಗಿ ಆಕೆ ಅದೇ ವರ್ಗದವಳಾಗಿದ್ದರೂ, ಎಷ್ಟು ಉನ್ನತ ವರ್ಗದವಳೆಂಬುದನ್ನು ಸೂಚಿಸುತ್ತದೆ.
  • ಆರ್ತುರ್ (ಹ್ಯಾವಿಶ್ಯಾಮ್) - ಹ್ಯಾವಿಶ್ಯಾಮ್‌ಳ ಮಲತಮ್ಮ. ಈತ ಅವರ ತಂದೆಯು ಪಿತ್ರಾರ್ಜಿತ ಆಸ್ತಿಯನ್ನು ನೀಡುವಾಗ ಆತನ ಮಗಳಿಗೆ ಹೆಚ್ಚಿನ ಭಾಗವನ್ನು ನೀಡಿದ್ದಾನೆಂದು ಭಾವಿಸುತ್ತಾನೆ. ಅವನು ಕಾಂಪೇಸನ್ ಒಂದಿಗೆ ಹ್ಯಾವಿಶ್ಯಾಮ್‌ಳ ಮದುವೆ ಮಾಡುವುದೆಂಬ ಭರವಸೆ ನೀಡಿ ಹ್ಯಾವಿಶ್ಯಾಮ್‌ಳ ನಂಬಿಕೆಯನ್ನು ಗಳಿಸುವ ಮೂಲಕ, ಕಾಂಪೇಸನ್ ಒಂದಿಗೆ ಸೇರಿ ಅವಳಿಗೆ ಹೆಚ್ಚಿನ ಮೊತ್ತದ ಹಣದ ಮೋಸ ಮಾಡುವ ಯೋಜನೆಯನ್ನು ಮಾಡುತ್ತಾನೆ. ಆರ್ತುರ್‌ನ ಮನಸ್ಸಿನಲ್ಲಿ ಈ ಯೋಜನೆಯು ಪದೇ ಪದೇ ಸುಳಿದಾಡುತ್ತಿರುತ್ತದೆ. ಅದರಿಂದಾಗಿ ಅವನು ಅನಾರೋಗ್ಯಕ್ಕೆ ಒಳಗಾಗಿ, ಜೀವಂತವಿರುವ ಹ್ಯಾವಿಶ್ಯಾಮ್ ಅವನ ಕೋಣೆಗೆ ಬಂದು ಅವನನ್ನು ಕೊಲ್ಲಲು ಪ್ರಯತ್ನಿಸುವಂತೆ ಊಹಿಸಿಕೊಂಡು ಸನ್ನಿಯಿಂದ ಸಾವನ್ನಪ್ಪುತ್ತಾನೆ. ಆರ್ತುರ್ ಕಾದಂಬರಿ ಆರಂಭವಾಗುವುದಕ್ಕಿಂತ ಮೊದಲೇ ಸತ್ತಿರುತ್ತಾನೆ ಮತ್ತು ಅವನು ಸಾಯುವುದಕ್ಕಿಂತ ಮೊದಲು ಹೆಚ್ಚಿಗೆ ಕುಡಿದು, ಜೂಜಾಡುತ್ತಿರುತ್ತಾನೆ.
  • ಮ್ಯಾಥಿವ್ ಪಾಕೆಟ್ - ಹ್ಯಾವಿಶ್ಯಾಮ್‌ಳ ಸೋದರಸಂಬಂಧಿ. ಅವನು ಪಾಕೆಟ್ ಕುಟುಂಬದ ಹಿರಿಯ. ಆದರೆ ಅವನು ಹ್ಯಾವಿಶ್ಯಾಮ್‌ಳ ಇತರ ಸಂಬಂಧಿಕರಂತೆ ಆಕೆಯ ಸಂಪತ್ತಿನ ಬಗ್ಗೆ ದುರಾಶೆಯನ್ನು ಹೊಂದಿರುವುದಿಲ್ಲ. ಮ್ಯಾಥಿವ್ ಪಾಕೆಟ್‌ನ ಕುಟುಂಬದಲ್ಲಿ ಒಂಬತ್ತು ಮಕ್ಕಳು, ಇಬ್ಬರು ನರ್ಸ್‌ಗಳು, ಒಬ್ಬಳು ಮನೆಗೆಲಸದಾಕೆ, ಒಬ್ಬ ಅಡುಗೆ ಮಾಡುವವನು ಮತ್ತು ಒಬ್ಬ ಸುಂದರವಾದ ಆದರೆ ಕೆಲಸಕ್ಕೆ ಬಾರದ ಹೆಂಡತಿ (ಬೆಲಿಂಡಾ ಹೆಸರಿನ) ಮೊದಲಾದವರಿರುತ್ತಾರೆ. ಅವನು ಬೆಂಟ್ಲೆ ಡ್ರಮ್ಲೆ, ಸ್ಟಾರ್ಟಾಪ್, ಪಿಪ್ ಮತ್ತು ಅವನ ಎಸ್ಟೇಟ್‌ನಲ್ಲಿ ವಾಸಿಸುವ ಅವನ ಮಗ ಹರ್ಬರ್ಟ್ ಮೊದಲಾದ ಕುಲೀನರಿಗೆ ಪಾಠ ಹೇಳಿಕೊಡುತ್ತಾನೆ.
  • ಹರ್ಬರ್ಟ್ ಪಾಕೆಟ್ - ಪಾಕೆಟ್ ಕುಟುಂಬದ ಒಬ್ಬ ಸದಸ್ಯ, ಹ್ಯಾವಿಶ್ಯಾಮ್‌ಳ ಆಸ್ತಿಯ ಹಕ್ಕುದಾರ. ಈತನನ್ನು ಪಿಪ್‌ ಮೊದಲು ಭೇಟಿಯಾದಾಗ ಇಬ್ಬರೂ ಸಣ್ಣವರಾಗಿರುತ್ತಾರೆ, ಅವನು ಹ್ಯಾವಿಶ್ಯಾಮ್‌ಳ ಮನೆಯಲ್ಲಿ ಪಿಪ್‌ನನ್ನು ಕಾದಾಟಕ್ಕೆ ಬರುವಂತೆ ಸವಾಲನ್ನು ಒಡ್ಡುತ್ತಾನೆ. ಅವನು ಸಭ್ಯತನವನ್ನು ಕಲಿಸಿದ ಪಿಪ್‌ ಮನೆಮೇಷ್ಟ್ರು ಮ್ಯಾಥಿವ್ ಪಾಕೆಟ್‌ನ ಮಗ. ಅವನು ಲಂಡನ್‌ನಲ್ಲಿ ಪಿಪ್‌ನೊಂದಿಗೆ ತನ್ನ ಕೋಣೆಯನ್ನು ಹಂಚಿಕೊಳ್ಳುತ್ತಾನೆ ಮತ್ತು ಪಿಪ್‌ನ ಮೊದಲ ಸ್ನೇಹಿತನಾಗುವ ಮೂಲಕ, ಅವನ ಸಂತೋಷದಲ್ಲಿ ಮಾತ್ರವಲ್ಲದೆ ಕಷ್ಟಗಳಲ್ಲೂ ಸಹಭಾಗಿಯಾಗುತ್ತಾನೆ. ಅವನು ಕ್ಲಾರ ಎಂಬ ಹೆಸರಿನ ಒಂದು ಹುಡುಗಿಯನ್ನು ಪ್ರೀತಿಸುತ್ತಿರುತ್ತಾನೆ. ಹರ್ಬರ್ಟ್‌ನ ತಾಯಿ ಆ ಹುಡುಗಿ ಅವನ 'ಸ್ಥಾನ'ಕ್ಕಿಂತ ಕೆಳಗಿನವಳೆಂದು ಹೇಳಬಹುದೆಂದು ಈ ವಿಷಯವನ್ನು ಅವನು ರಹಸ್ಯವಾಗಿ ಇಟ್ಟಿರುತ್ತಾನೆ.
  • ಕ್ಯಾಮಿಲ್ಲಾ - ಹ್ಯಾವಿಶ್ಯಾಮ್‌ಳ ವಯಸ್ಸಾದ ವಾಚಾಳಿ ಸಂಬಂಧಿ, ಈಕೆ ಹ್ಯಾವಿಶ್ಯಾಮ್‌ಳ ಬಗ್ಗೆ ಹೆಚ್ಚು ಕಾಳಜಿ ವಹಿಸುವುದಿಲ್ಲ ಮತ್ತು ಕೇವಲ ಅವಳ ಹಣದ ಆಸೆಯಲ್ಲಿರುತ್ತಾಳೆ. ಹ್ಯಾವಿಶ್ಯಾಮ್‌ಳ ಸಂಪತ್ತಿಗಾಗಿ ಅವಳ ಸುತ್ತ 'ಹುಳಗಳಂತೆ' ಸುತ್ತುತ್ತಿರುವ ಅನೇಕ ಸಂಬಂಧಿಕರಲ್ಲಿ ಈಕೆಯೂ ಒಬ್ಬಳು.
  • ಕಸಿನ್ ರೇಮಂಡ್ - ಹ್ಯಾವಿಶ್ಯಾಮ್‌ಳ ಮತ್ತೊಬ್ಬ ವಯಸ್ಸಾದ ಸಂಬಂಧಿಕ, ಈತನೂ ಸಹ ಅವಳ ಸಂಪತ್ತಿನ ಬಗ್ಗೆ ಆಸಕ್ತಿಯನ್ನು ಹೊಂದಿರುತ್ತಾನೆ. ಆತ ಕ್ಯಾಮಿಲ್ಲಾಳನ್ನು ಮದುವೆಯಾಗಿರುತ್ತಾನೆ.
  • ಜಾರ್ಜಿಯಾನ - ಹ್ಯಾವಿಶ್ಯಾಮ್‌ಳ ಆಸ್ತಿಯ ಬಗ್ಗೆ ಆಸಕ್ತಿಯನ್ನು ಹೊಂದಿದ್ದ ಒಬ್ಬ ವಯಸ್ಸಾದ ಸಂಬಂಧಿ.
  • ಸರಾಹ್ ಪಾಕೆಟ್ - "ಒಣಗಿದ, ಕಂದಾದ ಸುಕ್ಕುಗಟ್ಟಿದ ಚರ್ಮ, ವಾಲ್ನಟ್ ಸಿಪ್ಪೆಯಿಂದ ಮಾಡಿದಂತಹ ಸಣ್ಣ ಮುಖವನ್ನು ಹೊಂದಿರುವ ಒಬ್ಬ ಮುದುಕಿ. ಆಕೆ ಮೀಸೆಯಿಲ್ಲದ ಬೆಕ್ಕಿನಂತಹ ದೊಡ್ಡ ಬಾಯಿಯನ್ನು ಹೊಂದಿರುತ್ತಾಳೆ." ಹ್ಯಾವಿಶ್ಯಾಮ್‌ಳ ಆಸ್ತಿಯ ಬಗ್ಗೆ ಮಾತ್ರ ಆಸಕ್ತಿಯಿರುವ ಆಕೆಯ ಮತ್ತೊಬ್ಬ ಸಂಬಂಧಿ.

ಪಿಪ್‌ನ ತಾರುಣ್ಯದಲ್ಲಿ ಕಂಡುಬರುವ ಪಾತ್ರಗಳು

[ಬದಲಾಯಿಸಿ]
  • ಕೈದಿ - ಹಡಗಿನ ಜೈಲಿನಿಂದ ತಪ್ಪಿಸಿಕೊಂಡು ಬಂದ ಸೆರೆಯಾಳು. ಈತನನ್ನು ಪಿಪ್ ಸ್ನೇಹಪೂರ್ಣವಾಗಿ ಕಾಣುತ್ತಾನೆ. ಅವನು ನಂತರ ಪಿಪ್‌ನ ದಾನಿಯಾಗುತ್ತಾನೆ. ಆ ಸಂದರ್ಭದಲ್ಲಿ ಅವನ ನಿಜವಾದ ಹೆಸರು ಅಬೆಲ್ ಮ್ಯಾಗ್‌ವಿಟ್ಚ್‌ ಎಂದು ತಿಳಿದುಬರುತ್ತದೆ. ಆದರೆ ಕಥೆಯ ಕೆಲವು ಭಾಗಗಳಲ್ಲಿ ಅವನ ಗುರುತು ಸಿಗದಂತೆ ಮಾಡಲು ಅವನನ್ನು ಪ್ರೋವಿಸ್ ಮತ್ತು ಕ್ಯಾಂಪ್‌ಬೆಲ್ ಎಂಬ ಹೆಸರಿನಿಂದ ಸೂಚಿಸಲಾಗುತ್ತದೆ. ಈತನನ್ನು ಕೆಲವು ವರ್ಷಗಳ ಹಿಂದೆ ಆಸ್ಟ್ರೇಲಿಯಾಕ್ಕೆ ಕಳುಹಿಸಲಾದ ಕೈದಿಯೆಂಬುದನ್ನು ಯಾರೂ ಗುರುತಿಸಬಾರದೆಂದು ಪಿಪ್ ತನ್ನ ಅಂಕಲ್ ಎಂದೂ ಪರಿಚಯಿಸುತ್ತಾನೆ.
    • ಅಬೆಲ್ ಮ್ಯಾಗ್‌ವಿಟ್ಚ್‌ - ಕೈದಿಗೆ ನೀಡಿದ ಹೆಸರು, ಅವನು ಪಿಪ್‌ನ ದಾನಿಯೂ ಹೌದು.
    • ಪ್ರೋವಿಸ್ - ಇದು ಅಬೆಲ್ ಮ್ಯಾಗ್‌ವಿಟ್ಚ್‌ ತನ್ನ ಗುರುತನ್ನು ಗೋಪ್ಯವಾಗಿಡಲು ಲಂಡನ್‌ಗೆ ಹಿಂದಿರುಗುವಾಗ ಬಳಸುವ ಹೆಸರು. ಪಿಪ್ ನಗರದಿಂದ ಹೊರಗಿನ ಪ್ರದೇಶಗಳಿಗೆ ಭೇಟಿ ನೀಡುವಾಗ, 'ಪ್ರೋವಿಸ್' ತನ್ನ ಅಂಕಲ್ ಎಂದೂ ಹೇಳುತ್ತಾನೆ.
    • ಕ್ಯಾಂಪ್‌ಬೆಲ್ - ಇದು ಅಬೆಲ್ ಮ್ಯಾಗ್‌ವಿಟ್ಚ್‌ ಲಂಡನ್‌ನಲ್ಲಿ ಅವನ ಶತ್ರುಗಳಿಂದ ಕಂಡುಹಿಡಿಯಲ್ಪಟ್ಟಾಗ ಬಳಸಿದ ಹೆಸರು.
  • ಶ್ರೀ ಮತ್ತು ಶ್ರೀಮತಿ ಹಬಲ್ - ನಿಜವಾಗಿ ಇರುವುದಕ್ಕಿಂತ ತಾವು ಹೆಚ್ಚು ಪ್ರಾಮುಖ್ಯತೆಯನ್ನು ಪಡೆದಿದ್ದೇವೆಂದು ತಿಳಿಯುವ ಸರಳ ದಂಪತಿಗಳು. ಅವರು ಪಿಪ್‌ನ ಹಳ್ಳಿಯಲ್ಲಿ ವಾಸಿಸುತ್ತಾರೆ.
  • ಪೂಪ್ಸ್ಲ್ - ಪಿಪ್‌ನ ಹಳ್ಳಿಯ ಚರ್ಚಿನ ಪಾದ್ರಿ. ಅವನು ನಂತರ ಚರ್ಚಿನ ಕೆಲಸವನ್ನು ಬಿಟ್ಟುಬಿಟ್ಟು, ನೋಡಲು ಅಷ್ಟೊಂದು ಚೆನ್ನಾಗಿಲ್ಲದಿದ್ದರೂ ನಟನಾಗಬೇಕೆಂಬ ತನ್ನ ಆಸೆಯ ಬೆಂಬತ್ತಿ ಲಂಡನ್‌ಗೆ ಹೋಗುತ್ತಾನೆ.
    • ವಾಲ್ಡೆನ್‌ಗಾರ್ವರ್ - ಇದು ವೂಪ್ಸ್ಲ್ ಲಂಡನ್‌ನಲ್ಲಿ ನಟನಾಗಿ ಇಟ್ಟುಕೊಂಡ ರಂಗನಾಮ.
  • ಬಿಡ್ಡಿ - ವೂಪ್ಸ್ಲ್‌ನ ಎರಡನೇ ಸೋದರಸಂಬಂಧಿ; ಆಕೆ ಪಿಪ್‌ನ ಹಳ್ಳಿಯಲ್ಲಿ ತನ್ನ ಮನೆಯಲ್ಲಿ ಸಂಜೆ ಶಾಲೆಯನ್ನು ನಡೆಸುತ್ತಿರುತ್ತಾಳೆ ಮತ್ತು ಪಿಪ್‌ನ ಶಿಕ್ಷಕಿಯಾಗುತ್ತಾಳೆ. ಈಕೆ ಒಬ್ಬ ಸ್ನೇಹಮಯ ಮತ್ತು ಬುದ್ಧಿವಂತ ಬಡ ಯುವತಿ. ಪಿಪ್ ಮತ್ತು ಎಸ್ಟೆಲ್ಲಾರಂತೆ ಈಕೆಯೂ ಒಬ್ಬ ಅನಾಥೆ. ಈಕೆ ಎಸ್ಟೆಲ್ಲಾಳಿಗೆ ವಿರುದ್ಧವಾಗಿದ್ದಳು. ಪಿಪ್ ವ್ಯರ್ಥವಾಗಿ ಎಸ್ಟೆಲ್ಲಾಳನ್ನು ಹಿಂಬಾಲಿಸುತ್ತಿದ್ದುದರಿಂದ ಈಕೆಯ ಪ್ರೀತಿಯನ್ನು ನಿರಾಕರಿಸುತ್ತಾನೆ. ಅವನು ತನ್ನ ಜೀವನದ ಆಯ್ಕೆಯು ತಪ್ಪೆಂದು ಕಂಡುಕೊಂಡ ನಂತರ, ಬಿಡ್ಡಿಯ ಹತ್ತಿರ ತನ್ನನ್ನು ವಿವಾಹವಾಗುವಂತೆ ಕೇಳಲು ಬರುತ್ತಾನೆ. ಆದರೆ ಆಕೆ ಅದಾಗಲೇ ಜೋಯ್ ಗಾರ್ಗೆರಿಯನ್ನು ಮದುವೆಯಾಗಿರುವುದನ್ನು ಗಮನಿಸುತ್ತಾನೆ. ನಂತರ ಬಿಡ್ಡಿ ಮತ್ತು ಜೋಯ್‌ರಿಗೆ ಇಬ್ಬರು ಮಕ್ಕಳು ಜನಿಸುತ್ತಾರೆ. ಒಂದು ಮಗುವಿಗೆ ಪಿಪ್‌ನ ಹೆಸರನ್ನಿಡಲಾಗುತ್ತದೆ. ಮೂಲ ಕಾದಂಬರಿಯ ಕೊನೆಯಲ್ಲಿ ಆ ಮಗುವನ್ನು ಎಸ್ಟೆಲ್ಲಾ ಪಿಪ್‌ನ ಮಗುವೆಂದು ತಪ್ಪಾಗಿ ತಿಳಿಯುತ್ತಾಳೆ. ಆರ್ಲಿಕ್ ಆಕೆಯೆಡೆಗೆ ಆಕರ್ಷಿತನಾಗುತ್ತಾನೆ, ಆದರೆ ಅವನ ಪ್ರೀತಿಗೆ ಆಕೆ ಪ್ರತಿಸ್ಪಂದಿಸುವುದಿಲ್ಲ.

ವಕೀಲ ಮತ್ತು ಆತನ ಸುತ್ತ

[ಬದಲಾಯಿಸಿ]
  • ಜ್ಯಾಗರ್ಸ್ - ಪ್ರಖ್ಯಾತ ಲಂಡನ್ ವಕೀಲ. ಈತ ಕ್ರಿಮಿನಲ್ ಮತ್ತು ಸಿವಿಲ್ ಎರಡೂ ರೀತಿಯ ವಿಭಿನ್ನ ಕಕ್ಷಿದಾರರ ಬಗ್ಗೆ ಆಸಕ್ತಿ ತೋರುತ್ತಾನೆ. ಅವನು ಪಿಪ್‌ನ ದಾನಿಯನ್ನು ಸೂಚಿಸುತ್ತಾನೆ ಮತ್ತು ಈತ ಹ್ಯಾವಿಶ್ಯಾಮ್‌ಳ ವಕೀಲನೂ ಹೌದು. ಕಥೆಯ ಕೊನೆಯಲ್ಲಿ, ಅವನ ಕಾನೂನು ಅಭ್ಯಾಸವು ಹೆಚ್ಚಿನ ಪಾತ್ರಗಳನ್ನು ಸೋಕುವ ಸಾಮಾನ್ಯ ಅಂಶವಾಗುತ್ತದೆ.
  • ಜಾನ್ ವೆಮ್ಮಿಕ್ - ಜ್ಯಾಗರ್ಸ್‌ನ ಸಹಾಯಕ. ಅವನ ತಂದೆಯನ್ನು ಹೊರತುಪಡಿಸಿ, ಅವನನ್ನು ಕೇವಲ 'ಶ್ರೀ ವೆಮ್ಮಿಕ್' ಮತ್ತು 'ವೆಮ್ಮಿಕ್' ಎಂದು ಕರೆಯಲಾಗುತ್ತದೆ. ಅವನು ತನ್ನನ್ನು ತಾನು 'ವಯಸ್ಸಾದ ಪೋಷಕ' 'ವಯಸ್ಸಾದ ಪಿ.' ಅಥವಾ ಕೇವಲ 'ವಯಸ್ಸಾದ' ಎಂದು ಸೂಚಿಸುತ್ತಿರುತ್ತಾನೆ. ವೆಮ್ಮಿಕ್ ಜ್ಯಾಗರ್ಸ್‌ನನ್ನು ಭೇಟಿಯಾಗುವಲ್ಲಿ ಪಿಪ್‌ನ ಮುಖ್ಯ ಮಧ್ಯಸ್ಥಗಾರನಾಗಿರುತ್ತಾನೆ ಮತ್ತು ಲಂಡನ್‌ನಲ್ಲಿರುವಾಗ ಪಿಪ್‌ನನ್ನು ನೋಡಿಕೊಳ್ಳುತ್ತಾನೆ.
  • ಮೋಲಿ - ಜ್ಯಾಗರ್ಸ್‌ನ ಮನೆಗೆಲಸದವಳು, ಈಕೆಯನ್ನು ಜ್ಯಾಗರ್ಸ್ ಕೊಲೆಯ ಆಪಾದನೆಯಲ್ಲಿ ಗಲ್ಲುಶಿಕ್ಷೆಯಾಗುವುದರಿಂದ ಪಾರು ಮಾಡಿರುತ್ತಾನೆ. ಈಕೆ ಮ್ಯಾಗ್‌ವಿಟ್ಚ್‌‌ನ ಮಾಜಿ ಪ್ರೇಯಸಿ ಮತ್ತು ಎಸ್ಟೆಲ್ಲಾಳ ತಾಯಿಯೆಂಬುದು ತಿಳಿದುಬರುತ್ತದೆ.

ಪಿಪ್‌ನ ಪ್ರತಿನಾಯಕರು

[ಬದಲಾಯಿಸಿ]
  • ಕಾಂಪೇಸನ್ (ಕುಲನಾಮ) - ಮತ್ತೊಬ್ಬ ಕೈದಿ ಮತ್ತು ಮ್ಯಾಗ್‌ವಿಟ್ಚ್‌ನ ಶತ್ರು‌. ಒಬ್ಬ ವೃತ್ತಿಪರ ಮೋಸಗಾರ. ಈತ ಆರ್ತುರ್ ಒಂದಿಗೆ ಜತೆಗೂಡಿ ಹ್ಯಾವಿಶ್ಯಾಮ್‌ಳಿಗೆ ಮದುವೆಯಾಗುವುದಾಗಿ ಹೇಳಿ ಮೋಸ ಮಾಡುತ್ತಾನೆ. ಅವನು ಅಬೆಲ್ ಮ್ಯಾಗ್‌ವಿಟ್ಚ್‌ ಲಂಡನ್‌ನಲ್ಲಿದ್ದಾನೆಂದು ತಿಳಿದುಬಂದಾಗ ಅವ‌ನನ್ನು ಹಿಂಬಾಲಿಸುತ್ತಾನೆ ಮತ್ತು ಮ್ಯಾಗ್‌ವಿಟ್ಚ್‌ ಒಂದಿಗೆ ಕಾದಾಡುವಾಗ ಆಯತಪ್ಪಿ ಥೇಮ್ಸ್ ನದಿಗೆ ಬಿದ್ದು ಸಾವನ್ನಪ್ಪುತ್ತಾನೆ. ಈ ಕಾದಂಬರಿಯ ಕೆಲವು ಆವೃತ್ತಿಗಳಲ್ಲಿ, ಇವನನ್ನು 'ಕಾಂಪೆ' ಎಂದು ಕರೆಯಾಗಿದೆ.
  • "ಡಾಲ್ಗೆ" ಆರ್ಲಿಕ್ - ಗಾರ್ಗೆರಿಯ ಕಮ್ಮಾರಸಾಲೆಯಲ್ಲಿನ ಒಬ್ಬ ಕೂಲಿಗಾರ ಕಮ್ಮಾರ. ಈತ ಗಟ್ಟಿಮುಟ್ಟಾದ, ನಯನಾಜೂಕಿಲ್ಲದ ಮತ್ತು ತೀವ್ರ ಮುನಿಸಿನ ವ್ಯಕ್ತಿ. ಜೋಯ್ ಎಷ್ಟು ಸ್ನೇಹಪರ ಮತ್ತು ಸಾಧುಸ್ವಭಾವದವನೊ ಇವನು ಅಷ್ಟೇ ಒರಟು. ಈತನ ಕೋಪವು ಅಪರಾಧಗಳನ್ನು ಮಾಡುವಂತೆ ಉತ್ತೇಜಿಸುತ್ತದೆ, ಇದು ಜೀವನದಲ್ಲಿನ ಅವನ ಆಸೆಗಳಿಗೆ ಅಪಾಯವನ್ನು ತಂದೊಡ್ಡುತ್ತದೆ. ಆದರೆ ಅದಕ್ಕಾಗಿ ಅವನು ಇತರರನ್ನು ದೂರುತ್ತಾನೆ. ಇವನು ಶ್ರೀಮತಿ ಜೋಯ್‌ಳನ್ನು ಮೂದಲಿಸಿದುದಕ್ಕಾಗಿ ಜೋಯ್ ಒಂದಿಗೆ ನಡೆದ ಮೊದಲ ಕಾದಾಟದಲ್ಲೇ ಸಂಪೂರ್ಣವಾಗಿ ಸೋಲುತ್ತಾನೆ. ಇದು ಹಂತಹಂತವಾಗಿ ಬೆಳೆದು ಅನೇಕ ಘಟನೆಗಳಿಗೆ ಕಾರಣವಾಗುತ್ತದೆ, ಅವನು ರಹಸ್ಯವಾಗಿ ಶ್ರೀಮತಿ ಜೋಯ್‌ಳನ್ನು ತೀವ್ರವಾಗಿ ಗಾಯಗೊಳಿಸುತ್ತಾನೆ ಮತ್ತು ಅಂತಿಮವಾಗಿ ಪಿಪ್‌ನ ಮೇಲೂ ದಾಳಿ ನಡೆಸುವ ಪ್ರಯತ್ನವನ್ನು ಮಾಡುತ್ತಾನೆ. ಕೊನೆಗೆ ಅವನನ್ನು ಪತ್ತೆಹಚ್ಚಿ, ಬಂಧಿಸಲಾಗುತ್ತದೆ.
  • ಬೆಂಟ್ಲೆ ಡ್ರಮ್ಲೆ - ಒಬ್ಬ ಒರಟು, ಬುದ್ಧಿವಂತನಲ್ಲದ ಯುವಕ. ಆದರೂ ಅವನು ಸಮಾಜದಲ್ಲಿ ಅಗ್ರಸ್ಥಾನ ಪಡೆಯಲು ಯಶಸ್ವಿಯಾಗಿರುತ್ತಾನೆ ಮತ್ತು ಶ್ರೀಮಂತ ಕುಟುಂಬಕ್ಕೆ ಸೇರಿರುತ್ತಾನೆ. ಪಿಪ್ ಇವನನ್ನು ಪಾಕೆಟ್‌ನ ಮನೆಯಲ್ಲಿ ಭೇಟಿಯಾಗುತ್ತಾನೆ, ಡ್ರಮ್ಲೆ ಸಹ ಅಲ್ಲಿ ಸಭ್ಯತನದ ಕೌಶಲಗಳ ತರಬೇತಿ ಪಡೆಯುತ್ತಿರುತ್ತಾನೆ. ಡ್ರಮ್ಲೆ ಪಿಪ್‌ಗೆ ಮಾತ್ರವಲ್ಲದೆ ಇತರ ಕೆಲವರಿಗೂ ಶತ್ರುವಿನ ಹಾಗಿರುತ್ತಾನೆ. ಇವನು ಎಸ್ಟೆಲ್ಲಾಳನ್ನು ಪ್ರೀತಿಸಿ ಮದುವೆಯಾಗುವ ಮೂಲಕ ಪಿಪ್‌ಗೆ ವಿರೋಧಿಯಾಗುತ್ತಾನೆ. ಮದುವೆಯಾದ ನಂತರ ಇವನು ಎಸ್ಟೆಲ್ಲಾಳನ್ನು ಹಿಂಸಿಸಲು ಆರಂಭಿಸುತ್ತಾನೆಂದು ಹೇಳಲಾಗುತ್ತದೆ. ಡ್ರಮ್ಲೆಯು ಅವನ ಕುದುರೆಯ ದುರ್ವರ್ತನೆಯಿಂದಾಗಿ ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪುತ್ತಾನೆಂದು ಸೂಚಿಸಲಾಗುತ್ತದೆ. "ದಿ ಸ್ಪೈಡರ್" ಎಂಬುದು ಜ್ಯಾಗರ್ಸ್ ಅವನಿಗೆ ನೀಡಿದ ಅಡ್ಡಹೆಸರು.

ಇತರೆ ಪಾತ್ರಗಳು:

[ಬದಲಾಯಿಸಿ]
  • ಕ್ಲಾರ ಬಾರ್ಲೆ - ಹರ್ಬರ್ಟ್ ಪಾಕೆಟ್‌ನಿಗೆ ಹೆಂಡತಿಯಾಗುವವಳು. ಬಡ ಹುಡುಗಿಯಾದ ಈಕೆ ಸಂಧಿವಾತದಿಂದ ನರಳುತ್ತಿರುವ ತನ್ನ ತಂದೆಯೊಂದಿಗೆ ವಾಸಿಸುತ್ತಿರುತ್ತಾಳೆ. ಆಕೆ ಪಿಪ್‌ನನ್ನು ಭೇಟಿಯಾಗುವುದಕ್ಕಿಂತ ಮೊದಲು ಅವನನ್ನು ಇಷ್ಟಪಡುತ್ತಿರುವುದಿಲ್ಲ ಏಕೆಂದರೆ ಅವನು ಹರ್ಬರ್ಟ್‌ನಿಂದ ಹೆಚ್ಚಿನ ಖರ್ಚು ಮಾಡಿಸುತ್ತಾನೆಂದು ಆಕೆ ಭಾವಿಸಿರುತ್ತಾಳೆ. ಆದರೆ ನಂತರ ಆಕೆ ಪಿಪ್‌ನ ಬಗ್ಗೆ ಸಹಾನುಭೂತಿ ತೋರುತ್ತಾಳೆ.
  • ಸ್ಕಿಫಿನ್ಸ್ - ಜಾನ್ ವೆಮ್ಮಿಕ್‌ನಿಗೆ ಹೆಂಡತಿಯಾಗುವವಳು. ಆಕೆ ಕಾದಂಬರಿಯ ಆರಂಭದಲ್ಲಿ ವೆಮ್ಮಿಕ್‌ಗೆ ಸೇರಿದ 'ಕ್ಯಾಸಲ್' ಎಂದು ಕರೆಯುವ ಸಣ್ಣಮನೆಯಲ್ಲಿ ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಳ್ಳುತ್ತಿರುತ್ತಾಳೆ ಮತ್ತು ಪಿಪ್‌ನ ಜತೆಯಲ್ಲಿ ತಮಾಷೆಯಲ್ಲಿ ತೊಡಗಿರುವಾಗ ಹಸಿರು ಕೈಗವಸುಗಳನ್ನು ಧರಿಸಿಕೊಂಡುರುತ್ತಾಳೆ. ಈ ಕೈಗವಸುಗಳು ಮದುವೆ ದೃಶ್ಯದಲ್ಲಿ ಮಾತ್ರ ಬಿಳಿ ಬಣ್ಣಕ್ಕೆ ಬದಲಾಗುತ್ತವೆ. ಆದರೂ ಪುಸ್ತಕದಲ್ಲಿ ಸೂಚಿಸಿದ ಅನೇಕ ಇತರೆ ಬಣ್ಣಗಳಿವೆ.

ಶೈಲಿ ಮತ್ತು ವಿಷಯವಸ್ತು

[ಬದಲಾಯಿಸಿ]

ಗ್ರೇಟ್‌‌ ಎಕ್ಸ್‌‌ಪೆಕ್ಟೇಷನ್ಸ್‌‌‌‌ ಅನ್ನು ವೈಯಕ್ತಿಕ ನೆಲೆಯಲ್ಲಿ ಬರೆಯಲಾಗಿದೆ ಮತ್ತು ಇದು ಗ್ರೇಟ್‌‌ ಎಕ್ಸ್‌‌ಪೆಕ್ಟೇಷನ್ಸ್‌‌‌‌ ‌ನ ಪ್ರಕಟನೆಯ ಸಂದರ್ಭದಲ್ಲಿ ಸಾಮಾನ್ಯ ಬಳಕೆಯಲ್ಲಿಲ್ಲದ ಭಾಷೆ ಮತ್ತು ವ್ಯಾಕರಣವನ್ನು ಬಳಸುತ್ತದೆ. ಗ್ರೇಟ್‌‌ ಎಕ್ಸ್‌‌ಪೆಕ್ಟೇಷನ್ಸ್‌‌‌‌ ಶೀರ್ಷಿಕೆಯು ಪಿಪ್ ತನ್ನ ದಾನಿಯ ಆಸ್ತಿಯ ಬಗ್ಗೆ ತಿಳಿದ ನಂತರ ಹೊಂದುವ ಮತ್ತು ಶ್ರೀಮಂತನಾಗುವ ತನ್ನ ಗುರಿಯನ್ನು ಸಾಧಿಸುವ ಬಗ್ಗೆ ಹೊಂದುವ 'ಶ್ರೇಷ್ಠ ನಿರೀಕ್ಷೆಗಳನ್ನು' ಸೂಚಿಸುತ್ತದೆ. ಗ್ರೇಟ್‌‌ ಎಕ್ಸ್‌‌ಪೆಕ್ಟೇಷನ್ಸ್‌‌‌‌ ಒಂದು ಬೆಳವಣಿಗೆ ಚಿತ್ರಣ ಕಾದಂಬರಿ ಅಂದರೆ ಬೆಳವಣಿಗೆ ಮತ್ತು ವೈಯಕ್ತಿಕ ಅಭಿವೃದ್ಧಿಯನ್ನು ಚಿತ್ರಿಸುವ ಒಂದು ಕಾದಂಬರಿ, ಈ ಕಾದಂಬರಿಯು ಪಿಪ್‌ನ ಬೆಳವಣಿಗೆಯನ್ನು ನಿರೂಪಿಸುತ್ತದೆ.

ಗ್ರೇಟ್‌‌ ಎಕ್ಸ್‌‌ಪೆಕ್ಟೇಷನ್ಸ್‌‌‌‌ ‌ನ ಕೆಲವು ಪ್ರಮುಖ ವಿಷಯಗಳೆಂದರೆ ಅಪರಾಧ, ಸಾಮಾಜಿಕ ವರ್ಗ, ಸರ್ವಾಧಿಕಾರ ಮತ್ತು ಮಹತ್ವಾಕಾಂಕ್ಷೆ. ಸಣ್ಣ ವಯಸ್ಸಿನಲ್ಲೇ ಪಿಪ್ ಅಪರಾಧಿ ಮನೋಭಾವನೆಯನ್ನು ಹೊಂದಿರುತ್ತಾನೆ; ಅವನು ಯಾರಾದರೂ ತನ್ನ ಅಪರಾಧದ ಬಗ್ಗೆ ತಿಳಿದು, ತನ್ನನ್ನು ಬಂಧಿಸುತ್ತಾರೆ ಎಂದೂ ಹೆದರುತ್ತಿರುತ್ತಾನೆ. ಪಿಪ್‌ ತನ್ನ ದಾನಿಯು ನಿಜವಾಗಿ ಒಬ್ಬ ಕೈದಿಯೆಂಬುದನ್ನು ತಿಳಿಯುವಾಗ, ಅಪರಾಧ ವಿಷಯವು ಇನ್ನಷ್ಟು ಪರಿಣಾಮಕಾರಿಯಾಗುತ್ತದೆ. ಪಿಪ್ ಕಾದಂಬರಿಯಾದ್ಯಂತ ತನ್ನ ಮನಸ್ಸಾಕ್ಷಿಯೊಂದಿಗೆ ಒಂದು ಆಂತರಿಕ ಸಂಘರ್ಷವನ್ನು ಹೊಂದಿರುತ್ತಾನೆ. ಗ್ರೇಟ್‌‌ ಎಕ್ಸ್‌‌ಪೆಕ್ಟೇಷನ್ಸ್‌‌‌‌ ಜಾರ್ಜಿಯನ್ ಯುಗದ ವಿವಿಧ ಸಾಮಾಜಿಕ ವರ್ಗಗಳನ್ನು ಚಿತ್ರಿಸುತ್ತದೆ. ಕಾದಂಬರಿಯಾದ್ಯಂತ, ಪಿಪ್ ಮ್ಯಾಗ್‌ವಿಟ್ಚ್‌‌ನಂತಹ ಅಪರಾಧಿಗಳಿಂದ ಹಿಡಿದು ಹ್ಯಾವಿಶ್ಯಾಮ್‌ಳಂತಹ ಭಾರೀ ಶ್ರೀಮಂತರವರೆಗೆ ಒಂದು ವ್ಯಾಪಕ ವರ್ಗಗಳೊಂದಿಗೆ ಸಿಕ್ಕಿಕೊಳ್ಳುತ್ತಾನೆ. ಕಾದಂಬರಿಯಾದ್ಯಂತ ನಿರಂತರವಾಗಿ ತೋರಿಸುವಂತೆ, ಪಿಪ್ ಶ್ರೇಷ್ಠ ಮಹತ್ವಾಕಾಂಕ್ಷೆಯನ್ನು ಹೊಂದಿರುತ್ತಾನೆ.

ಚಲನಚಿತ್ರ, ಟಿವಿ ಮತ್ತು ನಾಟಕೀಯ ಹೊಂದಾವಣೆಗಳು

[ಬದಲಾಯಿಸಿ]

ಡಿಕೆನ್ಸ್‌ನ ಇತರ ಅನೇಕ ಕಾದಂಬರಿಗಳಂತೆ, ಗ್ರೇಟ್‌‌ ಎಕ್ಸ್‌‌ಪೆಕ್ಟೇಷನ್ಸ್‌‌‌‌ ಅನ್ನು ಅನೇಕ ಬಾರಿ ಚಿತ್ರೀಕರಿಸಲಾಗಿದೆ, ಅವುಗಳೆಂದರೆ:

  • ೧೯೧೭ – ಒಂದು ನಿಶ್ಯಬ್ಧ ಚಿತ್ರ, ರಾಬರ್ಟ್ ಜಿ. ವಿಗ್ನೋಲ ನಿರ್ದೇಶದನ ಈ ಚಿತ್ರದಲ್ಲಿ ಜ್ಯಾಕ್ ಪಿಕ್‌ಫೋರ್ಡ್ ನಟಿಸಿದ್ದಾರೆ.
  • ೧೯೨೨ – ಒಂದು ನಿಶ್ಯಬ್ಧ ಚಿತ್ರ, ಡೆನ್ಮಾರ್ಕ್‌ನಲ್ಲಿ ತಯಾರಿಸಲಾದ ಎ. ಡಬ್ಲ್ಯೂ. ಸ್ಯಾಂಡ್‌ಬರ್ಗ್ ನಿರ್ದೇಶನದ ಈ ಚಿತ್ರದಲ್ಲಿ ಮಾರ್ಟಿನ್ ಹರ್ಜ್‌ಬರ್ಗ್ ನಟಿಸಿದ್ದಾರೆ.
  • ೧೯೩೪ – ಗ್ರೇಟ್‌‌ ಎಕ್ಸ್‌‌ಪೆಕ್ಟೇಷನ್ಸ್‌‌‌‌ ಚಿತ್ರ, ಸ್ಟ್ವಾರ್ಟ್ ವಾಕರ್ ನಿರ್ದೇಶನದ ಈ ಚಿತ್ರದಲ್ಲಿ ಫಿಲಿಪ್ಸ್ ಹೋಮ್ಸ್ ಮತ್ತು ಜಾನೆ ವ್ಯಾಟ್ ನಟಿಸಿದ್ದಾರೆ.
  • ೧೯೪೬ – ಗ್ರೇಟ್‌‌ ಎಕ್ಸ್‌‌ಪೆಕ್ಟೇಷನ್ಸ್‌‌‌‌ ಚಿತ್ರದಲ್ಲಿ ಜಾನ್ ಮಿಲ್ಸ್ ಪಿಪ್ ಆಗಿ, ವ್ಯಾಲೆರಿ ಹಾಬ್ಸನ್ ಎಸ್ಟೆಲ್ಲಾ ಆಗಿ ಮತ್ತು ಜೀನ್ ಸೈಮನ್ಸ್ ಎಳೆಯ ಎಸ್ಟೆಲ್ಲಾ ಆಗಿ ನಟಿಸಿದ್ದಾರೆ, ಇದನ್ನು ಡೇವಿಡ್ ಲೀನ್ ನಿರ್ದೇಶಿಸಿದ್ದಾರೆ.
  • ೧೯೫೪ – ಎರಡು ಭಾಗದ ದೂರದರ್ಶನ ಆವೃತ್ತಿ, ಇದರಲ್ಲಿ ರಾಡಿ ಮ್ಯಾಕ್‌ಡೊವಾಲ್ ಪಿಪ್ ಆಗಿ ಮತ್ತು ಎಸ್ಟೆಲ್ಲೆ ವಿನ್‌ವುಡ್ ಹ್ಯಾವಿಶ್ಯಾಮ್ ಆಗಿ ನಟಿಸಿದ್ದಾರೆ. ಇದು ರಾಬರ್ಟ್ ಮಾಂಟ್ಗೊಮೆರಿ ಪ್ರೆಸೆಂಟ್ಸ್ ಪ್ರದರ್ಶನ ಕಾರ್ಯಕ್ರಮದ ಎಪಿಸೋಡ್ ಆಗಿ ಪ್ರಸಾರವಾಯಿತು.
  • ೧೯೫೯ – BBC ದೂರದರ್ಶನ ಆವೃತ್ತಿ, ಇದರಲ್ಲಿ ಪಿಪ್ ಆಗಿ ಡಿನ್ಸ್‌ಡೇಲ್ ಲ್ಯಾಂಡೆನ್, ಎಸ್ಟೆಲ್ಲಾ ಆಗಿ ಹೆಲೆನ್ ಲಿಂಡ್ಸೇ ಮತ್ತು ಜಮೀನುದಾರನಾಗಿ ಡೆರೆಕ್ ಬೆನ್ಫೀಲ್ಡ್ ನಟಿಸಿದ್ದಾರೆ.
  • ೧೯೬೭ – ಒಂದು ದೂರದರ್ಶನ ಧಾರಾವಾಹಿ, ಇದರಲ್ಲಿ ಗ್ಯಾರಿ ಬಾಂಡ್ ಮತ್ತು ಫ್ರಾನ್ಸೆಸ್ಕಾ ಅನ್ನಿಸ್ ನಟಿಸಿದ್ದಾರೆ.
  • ೧೯೭೪ – ಗ್ರೇಟ್‌‌ ಎಕ್ಸ್‌‌ಪೆಕ್ಟೇಷನ್ಸ್‌‌‌‌ – ಈ ಚಲನಚಿತ್ರ ಮೈಕೆಲ್ ಯಾರ್ಕ್ ಮತ್ತು ಸರಾಹ್ ಮೈಲ್ಸ್ ನಟಿಸಿದ್ದಾರೆ, ಇದನ್ನು ಜಾಸೆಫ್ ಹಾರ್ಡಿ ನಿರ್ದೇಶಿಸಿದ್ದಾರೆ.
  • ೧೯೭೫ – ಸಂಗೀತ ನಾಟಕ (ಲಂಡನ್ ವೆಸ್ಟ್ ಎಂಡ್). ಸರ್ ಜಾನ್ ಮಿಲ್ಸ್ ನಟಿಸಿದ ಇದಕ್ಕೆ ಸಂಗೀತವನ್ನು ಸಿರಿಲ್ ಆರ್ನಡೆಲ್ ನೀಡಿದ್ದಾರೆ. ಇದು ಅತ್ಯುತ್ತಮ ಬ್ರಿಟಿಷ್ ಸಂಗೀತ ನಾಟಕಕ್ಕಾಗಿ ಐವರ್ ನಾವೆಲ್ಲೊ ಪ್ರಶಸ್ತಿಯನ್ನು ಪಡೆದುಕೊಂಡಿತು.
  • ೧೯೮೧ – ಗ್ರೇಟ್‌‌ ಎಕ್ಸ್‌‌ಪೆಕ್ಟೇಷನ್ಸ್‌‌‌‌ – BBC ಧಾರಾವಾಹಿ, ಇದರಲ್ಲಿ ಸ್ರ್ಟಾಟ್‌ಫರ್ಡ್ ಜಾನ್ಸ್, ಗೆರ್ರಿ ಸನ್‌ಕ್ವಿಸ್ಟ್, ಜೋನ್ ಹಿಕ್ಸನ್, ಪ್ಯಾಟ್ಸಿ ಕೆನ್ಸಿಟ್ ಮತ್ತು ಸರಾಹ್-ಜಾನೆ ವರ್ಲೆ ಮೊದಲಾದವರು ನಟಿಸಿದ್ದಾರೆ. ಇದನ್ನು ಬ್ಯಾರಿ ಲೆಟ್ಸ್ ನಿರ್ಮಿಸಿದರೆ, ಜುಲಿಯನ್ ಅಮ್ಯೆಸ್ ನಿರ್ದೇಶಿಸಿದ್ದಾರೆ.
  • ೧೯೮೩ – ಆನಿಮೇಟ್ ಮಾಡಿದ ಮಕ್ಕಳ ಆವೃತ್ತಿ, ಇದರಲ್ಲಿ ಫಿಲಿಪ್ ಹಿಂಟನ್, ಲಿಜ್ ಹಾರ್ನೆ, ರಾಬಿನ್ ಸ್ಟೆವರ್ಟ್ ಮತ್ತು ಬಿಲ್ ಕೆರ್ರ್ ಮೊದಲಾದವರು ಅಭಿನಯಿಸಿದ್ದಾರೆ.
  • ೧೯೮೯ – ಗ್ರೇಟ್‌‌ ಎಕ್ಸ್‌‌ಪೆಕ್ಟೇಷನ್ಸ್‌‌‌‌ – ಕೆವಿನ್ ಕಾನ್ನರ್ ನಿರ್ದೇಶನದ ಈ ಚಿತ್ರದಲ್ಲಿ ಮ್ಯಾಗ್‌ವಿಟ್ಚ್‌ ಆಗಿ ಆಂಥೋನಿ ಹಾಪ್ಕಿನ್ಸ್ ಮತ್ತು ಹ್ಯಾವಿಶ್ಯಾಮ್ ಆಗಿ ಜೀನ್ ಸೈಮನ್ಸ್ ನಟಿಸಿದ್ದಾರೆ.
  • ೧೯೯೮ – ಗ್ರೇಟ್‌‌ ಎಕ್ಸ್‌‌ಪೆಕ್ಟೇಷನ್ಸ್‌‌‌‌ - ಈ ಚಿತ್ರದಲ್ಲಿ ಎತಾನ್ ಹಾವ್ಕೆ ಮತ್ತು ಗ್ವಿನೆತ್ ಪಾಲ್ಟ್ರೊ ನಟಿಸಿದ್ದಾರೆ, ಇದನ್ನು ಆಲ್ಫೋನ್ಸೊ ಕ್ಯುರಾನ್ ನಿರ್ದೇಶಿಸಿದ್ದಾರೆ.
  • ೧೯೯೯ – ಗ್ರೇಟ್‌‌ ಎಕ್ಸ್‌‌ಪೆಕ್ಟೇಷನ್ಸ್‌‌‌‌ - ಈ ಚಿತ್ರದಲ್ಲಿ ಪಿಪ್ ಆಗಿ ಅಯೋನ್ ಗ್ರುಫ್ಫುಡ್, ಎಸ್ಟೆಲ್ಲಾ ಆಗಿ ಜಸ್ಟಿನ್ ವ್ಯಾಡೆಲ್ ಮತ್ತು ಹ್ಯಾವಿಶ್ಯಾಮ್ ಆಗಿ ಚಾರ್ಲೊಟ್ಟೆ ರಾಂಪ್ಲಿಂಗ್ ನಟಿಸಿದ್ದಾರೆ, (ಮಾಸ್ಟರ್‌ಪೀಸ್ ಥಿಯೇಟರ್—TV)
  • ೨೦೦೯ – 'ದಿ ಗ್ಯಾಂಟ್ರಿ'ಯಲ್ಲಿ ಸ್ಟೀವ್ ಈಗಲ್ಸ್ ನಿರ್ದೇಶಿಸಿದ ಇದರಲ್ಲಿ ಎಮಿಲಿ ಜೀನ್, ರೆಜಾ ರಾಜ್‌ರಾಜ್, ಹೋಲಿ ಗ್ರ್ಯಾಂಗರ್, ಹನ್ನಾಹ್ ಸ್ಕಾಟ್ ಮತ್ತು ಸ್ಯಾಮ್ ವಾಲ್ಶಾ ಮೊದಲಾದವರು ಅಭಿನಯಿಸಿದ್ದಾರೆ.
  • ೨೦೦೯ – ಥಿಯೇಟರ್ ಕ್ಲ್ವಿಡ್‌ನಲ್ಲಿ ನಡೆದ ಇದರಲ್ಲಿ ಗ್ರಹಮ್ ಬಿಕ್ಲೆ, ಎಲೀನರ್ ಹಾವೆಲ್, ಸ್ಟೀವನ್ ಮಿಯೊಸ ರಿಯನ್ನನ್ ಆಲಿವರ್, ಗ್ರೆಗ್ ಪಾಮರ್, ವಿವೈನ್ ಪ್ಯಾರಿ, ರಾಬರ್ಟ್ ಪರ್ಕಿನ್ಸ್, ಸ್ಟೆಫನ್ ರೋಡ್ರಿ, ಸೈಮನ್ ವ್ಯಾಟ್ಸ್ ಮೊದಲಾವರು ಅಭಿನಯಿಸಿದರು, ಇದನ್ನು ಟಿಮ್ ಬ್ಯಾಕರ್ ನಿರ್ದೇಶಿಸಿದರು.

ಸಾಂಸ್ಕೃತಿಕ ಉಲ್ಲೇಖಗಳು ಮತ್ತು ಉಪೋತ್ಪನ್ನಗಳು

[ಬದಲಾಯಿಸಿ]
  • ಗ್ರೇಟ್‌‌ ಎಕ್ಸ್‌‌ಪೆಕ್ಟೇಷನ್ಸ್‌‌‌‌, ದಿ ಅನ್‌ಟೋಲ್ಡ್ ಸ್ಟೋರಿ (೧೯೮೬) - ಜಾನ್ ಸ್ಟ್ಯಾಂಟನ್ ನಟಿಸಿದ ಟಿಮ್ ಬರ್ಸ್ಟಾಲ್ ನಿರ್ದೇಶಿಸಿದ ಇದು ಒಂದು ಉಪೋತ್ಪನ್ನ ಚಿತ್ರವಾಗಿದ್ದು, ಇದು ಆಸ್ಟ್ರೇಲಿಯಾದಲ್ಲಿ ಮ್ಯಾಗ್‌ವಿಟ್ಚ್‌‌ನ ಸಾಹಸಗಳನ್ನು ಚಿತ್ರಿಸುತ್ತದೆ.
  • ಪಿಪ್ ಪಿರಪ್ ಪಾತ್ರವನ್ನು ವಿವರಿಸುವ ನಿಟ್ಟಿನಲ್ಲಿ ಸೌತ್ ಪಾರ್ಕ್ ‌ಅನ್ನು ನಿರ್ಮಿಸಿದವರು "ಪಿಪ್" ಎಂಬ ಒಂದು ಅಣಕ ಬರಹ ಎಪಿಸೋಡ್ಅನ್ನು ರಚಿಸಿದರು. ಇದು ಆರಂಭದಲ್ಲಿ ಕಥಾವಸ್ತುವನ್ನು ಅನುಸರಿಸುತ್ತದೆ, ಆದರೆ ನಂತರ ಬೇರೊಂದು ರೀತಿಗೆ ಬದಲಾಗಿ (ಇದು ರೋಬೋಟ್ ಮಂಗಗಳನ್ನು ಒಳಗೊಳ್ಳುತ್ತದೆ), ಹ್ಯಾವಿಶ್ಯಾಮ್‌ಳನ್ನು ತೀರ ಕೆಟ್ಟವಳೆಂದು ನಿರೂಪಿಸುತ್ತದೆ. ಇದನ್ನು ಡಿಕೆನ್ಸ್‌‌ ತನ್ನ ಆ ಸಂದರ್ಭದ ವಿಶೇಷ ಒಲವಿಗೆ ಸರಿಹೊಂದಿಸಲು ಕೊನೆಯನ್ನು ಬದಲಾಯಿಸಿದನೆಂಬ ನಿಜಸಂಗತಿಗೆ ಅಣಕವಾಗಿ ಮಾಡಲಾಗಿದೆ.
  • ಪೀಟರ್ ಕ್ಯಾರಿಯ ಜ್ಯಾಕ್ ಮ್ಯಾಗ್ಸ್ ಚಾರ್ಲ್ಸ್ ಡಿಕೆನ್ಸ್‌‌ನ ಕಾಲ್ಪನಿಕ ಪಾತ್ರ ಮತ್ತು ಕಥಾವಸ್ತುವಿನೊಂದಿಗೆ ಮ್ಯಾಗ್‌ವಿಟ್ಚ್‌ ಇಂಗ್ಲೆಂಡ್‌ಗೆ ಹಿಂದಿರುಗುವುದರ ಪುನಃಊಹನೆಯಾಗಿದೆ.
  • ಲಾಯ್ಡ್ ಜೋನ್ಸ್‌ನ ಮಿಸ್ಟರ್ ಪಿಪ್ ಅನ್ನು ಬೌಗೈನ್‌ವಿಲ್ಲೆಯಲ್ಲಿ ರಚಿಸಲಾಯಿತು, ಅಲ್ಲಿ ನಾಗರಿಕರ ಗಲಭೆಯ ಸಂದರ್ಭದಲ್ಲಿ ಒಬ್ಬ ಬಿಳಿಯ ಗ್ರೇಟ್‌‌ ಎಕ್ಸ್‌‌ಪೆಕ್ಟೇಷನ್ಸ್‌‌‌‌ ಅನ್ನು ಸ್ಥಳೀಯ ಮಕ್ಕಳಿಗೆ ಕಲಿಸುವ ಪಾಠಕ್ಕೆ ಆಧಾರವಾಗಿ ಬಳಸುತ್ತಾನೆ.
  • ಗ್ರೇಟ್‌‌ ಎಕ್ಸ್‌‌ಪೆಕ್ಟೇಷನ್ಸ್‌‌‌‌ ‌ನ ಕಥಾವಸ್ತು ಮತ್ತು ಪಾತ್ರಗಳು ಜಾಸ್ಪರ್ ಫೋರ್ಡ್‌ನ ಥರ್ಸ್ಡೆ ನೆಕ್ಸ್ಟ್ ಸರಣಿಯಲ್ಲಿ ಮುಖ್ಯಲಕ್ಷಣವಾಗಿವೆ. ಇದರಲ್ಲಿ ಹ್ಯಾವಿಶ್ಯಾಮ್ ಥರ್ಸ್ಡೆಯ ಸ್ನೇಹಿತೆ ಮತ್ತು ಆಪ್ತ ಸಲಹಾಕಾರಳಾಗಿದ್ದಾಳೆ. ಫೋರ್ಡ್ ಈ ಪಾತ್ರವನ್ನು ಈ ಕೈಬರಹದ ಕಥೆಯಾದ್ಯಂತ ಚಿತ್ರಿಸಿದ್ದಾರೆ ಮತ್ತು ಗ್ರೇಟ್‌‌ ಎಕ್ಸ್‌‌ಪೆಕ್ಟೇಷನ್ಸ್‌‌‌‌ ‌ಅನ್ನು ಓದದವರಿಗೆ ಅದರಲ್ಲಿ ಏನಿದೆ ಎಂಬ ಬಗ್ಗೆ ಒಂದು ನಸುನೋಟವನನ್ನು ಒದಗಿಸುತ್ತಾರೆ.
  • BBC ರೇಡಿಯೊ ೪ರ ರೇಡಿಯೊ ಸರಣಿ ಬ್ಲೀಕ್ ಎಕ್ಸ್‌‌ಪೆಕ್ಟೇಷನ್ಸ್‌‌‌‌ ಸಾಮಾನ್ಯವಾಗಿ ಡಿಕೆನ್ಸ್‌‌ನ ಮತ್ತು ಇತರ ವಿಕ್ಟೋರಿಯನ್ ಕಾದಂಬರಿಗಳ ಹಾಗೂ ನಿರ್ದಿಷ್ಟವಾಗಿ ಬ್ಲೀಕ್ ಹೌಸ್ ಮತ್ತು ಗ್ರೇಟ್‌‌ ಎಕ್ಸ್‌‌ಪೆಕ್ಟೇಷನ್ಸ್‌‌‌‌ ‌ನ ಒಂದು ಅಣಕವಾಗಿದೆ. ಇದರ ನಾಯಕನ ಹೆಸರು ಪಿಪ್ ಬಿನ್.
  • ಗ್ರೇಟ್‌‌ ಎಕ್ಸ್‌‌ಪೆಕ್ಟೇಷನ್ಸ್‌‌‌‌ ದಿ ಗ್ಯಾಸ್‌ಲೈಟ್ ಆಂಥೆಮ್‌ನ ಆಲ್ಬಂ ದಿ '೫೯ ಸೌಂಡ್ ‌ನ ಮೊದಲ ಹಾಡಿನ ಹೆಸರಾಗಿದೆ ಮತ್ತು ಇದರ ಸಾಹಿತ್ಯವು ಎಸ್ಟೆಲ್ಲಾಳನ್ನು ಸೂಚಿಸುತ್ತದೆ.
  • ಅಲಾನಿಸ್ ಮೋರಿಸ್ಸೆಟ್ಟೆಯು ಆಕೆಯ ೧೯೯೫ರ ಆಲ್ಬಂ ಜ್ಯಾಗ್ಗೆಡ್ ಲಿಟಲ್ ಪಿಲ್ ‌ನ ಒಂದು ಹಾಡು "ಆಲ್ ಐ ರಿಯಲಿ ವಾಂಟ್"ನಲ್ಲಿ ತನ್ನನ್ನು ತಾನು ಎಸ್ಟೆಲ್ಲಾಳಿಗೆ ಹೋಲಿಸಿಕೊಳ್ಳುತ್ತಾರೆ.
  • ಪಿಪ್ ಆಂಡ್ ದಿ ಜಾಂಬಿಯನ್ ಗ್ರೇಟ್‌‌ ಎಕ್ಸ್‌‌ಪೆಕ್ಟೇಷನ್ಸ್‌‌‌‌ ಮತ್ತು ಲೂಯಿಸ್ ಸ್ಕಿಪ್ಪರ್‌ನ ಜಾಂಬಿ ಸಾಹಿತ್ಯದ ಕಲಬೆರಕೆಯಾಗಿದೆ.
  • ಪ್ಯಾರಾಸೋಮ್ನಿಯಾ ಚಿತ್ರದಲ್ಲಿ ಪ್ರತಿನಾಯಕನು ಮುಖ್ಯ ಪಾತ್ರಕ್ಕೆ ಗ್ರೇಟ್‌‌ ಎಕ್ಸ್‌‌ಪೆಕ್ಟೇಷನ್ಸ್‌‌‌‌ಅನ್ನು, ಅದು ಅವರ ಸಂಭಾಷಣೆಗೆ ಸಂಬಂಧಿಸಿದರಿಂದ, ಓದುವಂತೆ ಸೂಚಿಸುತ್ತಾನೆ.

ಟೆಂಪ್ಲೇಟು:Portal

ಉಲ್ಲೇಖಗಳು‌

[ಬದಲಾಯಿಸಿ]
  1. "ಹೌ ಗ್ರೇಟ್‌‌ ಎಕ್ಸ್‌‌ಪೆಕ್ಟೇಷನ್ಸ್‌‌‌‌". Archived from the original on 2009-05-02. Retrieved 2011-03-09.
  2. ಗ್ರೇಟ್‌‌ ಎಕ್ಸ್‌‌ಪೆಕ್ಟೇಷನ್ಸ್‌‌‌‌ ಕ್ರಿಟಿಕಲ್ ಔವರ್‌ವ್ಯೂ
  3. ಮೆಕಿಯರ್, ಜೆರೋಮ್ ಡೇಟಿಂಗ್ ದಿ ಆಕ್ಷನ್ ಇನ್ ಗ್ರೇಟ್‌‌ ಎಕ್ಸ್‌‌ಪೆಕ್ಟೇಷನ್ಸ್‌‌‌‌: ಎ ನ್ಯೂ ಕ್ರೋನಾಲಜಿ.
  4. http://www.dickens-literature.com/Great_Expectations/58.html

ಬಾಹ್ಯ ಕೊಂಡಿಗಳು

[ಬದಲಾಯಿಸಿ]
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
ಆನ್‌ಲೈನ್ ಆವೃತ್ತಿಗಳು
ಅಧ್ಯಯನ ಮಾರ್ಗದರ್ಶಕ
ಇತರೆ