ವಿಷಯಕ್ಕೆ ಹೋಗು

ಆಂಡಿಸೈಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಂಡಿಸೈಟ್
ಜ್ವಾಲಾಮುಖಿ ಶಿಲೆ rock
Photomicrograph of andesite in thin section (between crossed polars)
Composition
Intermediate

Major minerals: plagioclase (often andesine) and pyroxene and/or hornblende

Accessory minerals: magnetites, biotite, sphene, quartz
A sample of andesite (dark groundmass) with amygdaloidal vesicules filled with zeolite. Diameter of view is 8 cm.
Andesite Mount Žarnov (Vtáčnik), Slovakia
ಸ್ಲೊವಾಕಿಯಾದಲ್ಲಿರುವ ಆಂಡಿಸೈಟ್ ಶಿಲೆಯ ಕಂಬ

ಆಂಡಿಸೈಟ್ ಅಗ್ನಿಶಿಲೆಗಳ ಸಮುದಾಯದಲ್ಲಿ ಜ್ವಾಲಾಮುಖಜ ಶಿಲೆಯ (ವೋಲ್‍ಕೇನಿಕ್ ರಾಕ್ಸ್) ವಿಭಾಗಕ್ಕೆ ಸೇರಿದ ಒಂದು ಶಿಲೆ. ಶಿಲಾರಸ ಜ್ವಾಲಾಮುಖಿ ಅಥವಾ ಭೂಮಿಯ ಬಿರುಕುಗಳ ಮೂಲಕ ಭೂಮಿಯ ಮೇಲ್ಭಾಗದಲ್ಲಿ ಹೊರಹೊಮ್ಮಿ ಘನಿಸುವುದರಿಂದ ಉಂಟಾಗುವ ಬಹಿಸ್ಸರಣ ಶಿಲೆಗಳ ವರ್ಗಕ್ಕೆ ಸೇರಿದ ಈ ಶಿಲೆಯ ಒಳರಚನೆ ಸಾಮಾನ್ಯವಾಗಿ ಪಾರ್ ಫಿರಿಟಿಕ್ ಆಗಿದೆ. ಇವುಗಳಲ್ಲಿ ಫೆಲ್ಡ್‍ಸ್ಟಾರ್ ಮತ್ತು ಇತರ ಖನಿಜಗಳು ದೊಡ್ಡ ಹರಳುಗಳಾಗಿ ದೊರೆಯುತ್ತವೆ. ಈ ದೊಡ್ಡ ಹರಳುಗಳು ಬಹಳ ಸೂಕ್ಷ್ಮವಾದ ಇತರ ಖನಿಜಗಳ ಅಥವಾ ಗಾಜಿನಲ್ಲಿ ಎದ್ದುಕಾಣುತ್ತವೆ. ಗಾಜು ಅಧಿಕ ಪ್ರಮಾಣದಲ್ಲಿ ಇರುವ ಶಿಲೆಗಳನ್ನು ವಿಬ್ರೊ ಅಥವಾ ಹಯಲೊ ಆಂಡಿಸೈಟ್‍ಗಳೆಂದೂ ಕರೆಯುತ್ತಾರೆ.

ರಾಸಾಯನಿಕ ವಸ್ತುಗಳ ರಚನೆ ಮತ್ತು ಖನಿಜ ಸಂಯೋಗದ ಆಧಾರದ ಮೇಲೆ ಈ ಶಿಲೆಯನ್ನು ಮಧ್ಯವರ್ತಿ ಶಿಲೆ (ಇಂಟರ್ಮಿಡಿಯಟ್ ಟೈಪ್ ಆಫ್ ರಾಕ್) ಎಂದು ಕರೆಯುತ್ತಾರೆ.ರಾಸಾಯನಿಕ ವಸ್ತು ರಚನೆ ಮೇಲೆ ಈ ಶಿಲೆಯಲ್ಲಿ ಸಿಲಿಕಾ ಪ್ರಮಾಣ 55%-65%ವರೆಗೆ ಇರುತ್ತದೆ. ಇದರ ಖನಿಜ ಸಂಯೋಜನೆಯಲ್ಲಿ ಸೋಡಾ ಮತ್ತು ಲೈಮ್ ಫೆಲ್ಡ್‍ಸ್ಟಾರ್ ಖನಿಜಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಕೆಲವು ವೇಳೆ ಆಲ್ಕಲಿ ಫೆಲ್ಡ್‍ಸ್ಪಾರ್ ಅಲ್ಪ ಪ್ರಮಾಣದಲ್ಲಿರುತ್ತದೆ. ಬೆಣಚುಕಲ್ಲು ಸಾಮಾನ್ಯವಾಗಿ ಕಣ್ಣಿಗೆ ಕಾಣುವ ಕಣಗಳ ರೂಪದಲ್ಲಿ ಸಿಕ್ಕದಿದ್ದರೂ ಗಾಜಿನ ಒಳ ರಚನೆಯಲ್ಲಿ ಅಡಗಿಕೊಂಡಿರುತ್ತದೆ. ಇತರ ಖನಿಜಗಳು ಫೆರೊ ಮೆಗ್ನಿಸಿಯಂ ಖನಿಜ ರೂಪಗಳಾದ ಬಯೋಟೈಟ್, ಹಾರನ್‍ಬ್ಲೆಂಡ್, ಆಗೈಟ್, ಎನ್‍ಸ್ಟಟೈಟ್ ಅಥವಾ ಹೈಪರ್‍ಸ್ತೀನ್‍ಗಳನ್ನು ಕೂಡಿರುತ್ತದೆ[] .

ದೊರೆಯುವಿಕೆ

[ಬದಲಾಯಿಸಿ]

ಜ್ವಾಲಾಮುಖಿ ಶಿಲೆಗಳಲ್ಲೆಲ್ಲ, ಬಸಾಲ್ಟ್ ಶಿಲೆಯಾದ ಮೇಲೆ ಆಂಡಿಸೈಟ್ ಶಿಲೆ ಅಧಿಕ ಪ್ರಮಾಣದಲ್ಲಿ ಭೂಮಿಯ ಪದರದಲ್ಲಿ ಸಿಗುತ್ತವೆ. ಇದು ಮಡಿಕೆ ಪರ್ವತಶ್ರೇಣಿಗಳೊಂದಿಗೆ (ಫೋಲ್ಡೆಡ್ ಮೌಂಟನ್ ಟೈನ್ಸ್) ಕೂಡಿರುತ್ತದೆ. ಆಂಡಿಸೈಟ್ ಮತ್ತು ಬಸಾಲ್ಟ್ ಇವೆರಡೂ ಜ್ವಾಲಾಮುಖಿ ಶಿಲೆಗಳು ಎಂಬ ಒಂದು ಮುಖ್ಯ ಶಿಲಾ ಸಮುದಾಯಕ್ಕೆ ಸೇರಿವೆ. ಆಂಡಿಸೈಟ್ ಶಿಲೆಯಲ್ಲಿ ಎಂಟನೆ ಐದು ಭಾಗದಷ್ಟು ಫಿಲ್‍ಸಿಕ್ ಖನಿಜಗಳಿದ್ದರೆ ಬಸಾಲ್ಟ್ ಶಿಲೆಯಲ್ಲಿ ಅದು ಅರ್ಧ ಭಾಗದಷ್ಟಿರುತ್ತದೆ. ಆಂಡಿಸೈಟ್ ಶಿಲೆಗಳಲ್ಲಿ ಪೆಸಿಫಿಕ್ ಮಹಾಸಾಗರದ ಚೌಕಟ್ಟಿನಲ್ಲಿರುವ ಹೈಪರ್‍ಸ್ತೀನ್ ಖನಿಜವಿದೆ. ಭೂ ಚರಿತ್ರೆಯಲ್ಲಿ ನಾನಾ ಕಾಲಗಳಲ್ಲಿ ಉದ್ಭವಿಸುವ ಈ ಶಿಲೆ, ಮುಖ್ಯವಾಗಿ ಹಂಗೇರಿ, ಬಾಲ್ಕನ್, ಕಾಕಸನ್, ಪರ್ಷಿಯ ದೇಶಗಳಲ್ಲಿ ಸಿಕ್ಕುವ ಶಿಲೆ, ಆಲ್‍ಪ್ಸ್, ಹಿಮಾಲಯ ಪರ್ವತಶ್ರೇಣಿಗಳ ಭೂಕಾಲಕ್ಕೆ ಸೇರಿದೆ. ಬಹಳ ಹಳೆಯ ಭೂಚರಿತ್ರೆಯ ಯುಗದ ಶಿಲೆಗಳು ಸ್ಕಾಟ್ಲೆಂಡ್, ವೇಲ್ಸ್ ಮತ್ತು ಲೇಕ್ ಡಿಸ್ಟ್ರಿಕ್ಟುಗಳಲ್ಲಿ ಸಿಕ್ಕುತ್ತವೆ.

ಉಲ್ಲೇಖಗಳು

[ಬದಲಾಯಿಸಿ]
  1. Blatt, Harvey and Robert J. Tracy, 1996, Petrology, Freeman, ISBN 0-7167-2438-3[page needed]


ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: