ಅಸಿಟನಿಲೈಡ್
| |||
ಹೆಸರುಗಳು | |||
---|---|---|---|
ಐಯುಪಿಎಸಿ ಹೆಸರುs
N-phenylacetamide
N-phenylethanamide | |||
Identifiers | |||
ECHA InfoCard | 100.002.864 | ||
ಗುಣಗಳು | |||
ಆಣ್ವಿಕ ಸೂತ್ರ | C8H9NO | ||
ಮೋಲಾರ್ ದ್ರವ್ಯರಾಶಿ | ೧೩೫.೧೬ g mol−1 | ||
ಸಾಂದ್ರತೆ | 1.219 g/cm3 | ||
ಕರಗು ಬಿಂದು |
114.3 °C, 387 K, 238 °F | ||
ಕುದಿ ಬಿಂದು |
304 °C, 577 K, 579 °F | ||
ಕರಗುವಿಕೆ ನೀರಿನಲ್ಲಿ | <0.56 g/100 mL (25 °C) | ||
ಕರಗುವಿಕೆ | Soluble in ethanol, diethyl ether, acetone, benzene | ||
log P | 1.16 (23 °C) | ||
ದ್ವಿಧ್ರುವ ಚಲನೆ | 2.71 | ||
Hazards[೧][೨] | |||
Safety data sheet | External MSDS | ||
545 °C (1,013 °F; 818 K) | |||
Except where otherwise noted, data are given for materials in their standard state (at 25 °C [77 °F], 100 kPa). > | |||
Infobox references | |||
ಅಸಿಟನಿಲೈಡ್[೩] ರಾಸಾಯನಿಕ ಆಂಟಿಫೆಬ್ರಿನ್ (ಜ್ವರಹರಿ) ಹೆಸರಿನಲ್ಲಿ ಅನಿಲೀನೊಂದಿಗೆ ಗ್ಲೇಸಿಯಲ್ (ಹಿಮಂದ) ಅಸಿಟಿಕ್‍ಆಮ್ಲ ವರ್ತಿಸಿದಾಗ ಬರುವ ಉತ್ಪನ್ನ.ಇದನ್ನು ಅಂಟಿಫೆಬ್ರಿನ್ ಹೆಸರಿನಲ್ಲಿ ಔಷಧವಾಗಿ ಬಳಸಲಾಗುತ್ತಿತ್ತು.[೪]
ತಯಾರಿ ಮತ್ತು ಗುಣಗಳು
[ಬದಲಾಯಿಸಿ]ಐಸಿಟನಿಲೈಡನ್ನು ಪ್ರಯೋಗ ಶಾಲೆಯಲ್ಲಿ ಅಸಿಟಿಕ್ ಅನ್‍ಹೈಡ್ರೇಡನ್ನು ಅನಿಲೀನ್‍ನೊಂದಿಗೆ ವರ್ತಿಸಿದಾಗ ಪಡೆಯಬಹುದು.[೫]
- C6H5NH2 + (CH3CO)2O → C6H5NHCOCH3 + CH3COOH
ಇದು ಬಣ್ಣವಿಲ್ಲದ ಅಥವಾ ತುಸುವೇ ಬಿಳಿಬಣ್ನದ ಹರಳು ಅಥವಾ ಪುಡಿಯಾಗಿ ದೊರೆಯುತ್ತದೆ</ref>[೨]. ನೀರಿನಲ್ಲಿ ತುಸು ಮತ್ತು ಈಥರಿನಲ್ಲಿ ಕರೆಗುತ್ತದೆ. ಬಿಳಿಯ ಹರಳುಗಳು ಇಲ್ಲವೇ ಪುಡಿಯಾಗಿರುವ ಅಸಿಟಿನಿಲೈಡಿನ ರಾಸಾಯನಿಕ ಸೂತ್ರಸಂಕೇತ C8H9NO 114.3 ಡಿ. ಸೆಂ. ಮಟ್ಟದಲ್ಲಿ ಕರಗಿ,304 ಡಿಗ್ರಿ ಸೆಂ. ಮಟ್ಟದಲ್ಲಿ ಕುದಿಯುತ್ತದೆ. ನೀರು, ಈಥರ್,ಮದ್ಯಸಾರಗಳಲ್ಲಿ ಕರಗುವುದು.ವಾಸನೆ ಇಲ್ಲ.
ಔಷಧವಾಗಿ ಬಳಕೆ
[ಬದಲಾಯಿಸಿ]1886ರಲ್ಲಿ ತಯಾರಾಗಿ, 75 ವರ್ಷಗಳ ಕಾಲ ಜ್ವರಹರಿ, ನೋವಾರಿಕವಾಗಿ ಹಲವಾರು ಪೇಟೆ ಮದ್ದುಗಳಲ್ಲಿ ಬಳಕೆಯಲ್ಲಿತ್ತು. ಜ್ವರವನ್ನು ಇಳಿಸುವುದೇ ಹೊರತು ಇದು ಜ್ವರದ ಕಾರಣವನ್ನು ಕಳೆಯದು. ಕರುಳಿನ ಹುಳುಗಳನ್ನು ಕಳೆಯಲು ನ್ಯಾಫ್ತಲೀನ್ ಕೊಡಲೋಸುಗ, ಗೊತ್ತಿರದೆ ಕೈತಪ್ಪಾಗಿ ಅಸಿಟನಿಲೈಡನ್ನು ಜ್ವರವಿದ್ದ ರೋಗಿಗೆ ಕೊಟ್ಟಾಗ, ಅವನ ಜ್ವರ ಇಳಿದುದು ಸೋಜಿಗವೆನಿಸಿತ್ತು. ಇದರ ಸೇವನೆಯಿಂದ ಮೈಯಲ್ಲಿ ತುಸುಪಾಲು ವಿಷಕರವಾದ ಅನಿಲೀನಾಗುವುದರಿಂದ ಇದು ಒಳ್ಳೆಯದಲ್ಲ. ಮೇಲಿಂದ ಮೇಲೆ ಸೇವಿಸುತ್ತಿದ್ದಲ್ಲಿ ಆಕ್ಸಿಜನ್ ಹೊರುವ ಬಲ ರಕ್ತದಲ್ಲಿ ಕುಂದಿ ಓಕರಿಕೆ, ವಾಂತಿ, ಕುಟ್ಟುಸಿರು, ಜವಗುಂಡಿಗೆ, ಕಡುಬೆವರಿಕೆ ಉಂಟಾಗಿ ತುಟಿ ಉಗುರು ಮೈ ನೀಲಿಗಟ್ಟಿ ಸುಸ್ತಾಗಿ ಬೀಳಿಸುವುದು. ಈ ಮದ್ದಿಗೆ ಒಗ್ಗದವರಲ್ಲಿ ತುರುಚೆದದ್ದು (ಅರ್ಟಿಕೇರಿಯ). ಜ್ವರಗಳಂಥ ತೊಂದರೆ ಆಗಬಹುದು. ಆದ್ದರಿಂದ ಆಸ್ಪಿರಿನ್ನಿಗಿಂತಲೂ ಚೆನ್ನಾಗಿ ನೋವು ಕಳೆವಂತಿದ್ದರೂ, ಇದರ ಬಳಕೆ ಈಗ ಸರಿಯಲ್ಲ. ಇದನ್ನೀಗ ನೋವು ಕಳೆವ ಫಿನಸೆಟಿನ್ನಿನ ಇನ್ನೂ ವಿಷಕರ ಮದ್ದೆಂದು ಗಣಿಸಬಹುದು.
ಉಲ್ಲೇಖಗಳು
[ಬದಲಾಯಿಸಿ]- ↑ HSNO Chemical Classification Information Database, New Zealand Environmental Risk Management Authority, retrieved 2009-08-26.
- ↑ ೨.೦ ೨.೧ Safety data for acetanilide, Physical Chemistry Laboratory, University of Oxford, archived from the original on 2002-06-23, retrieved 2016-04-06. ಉಲ್ಲೇಖ ದೋಷ: Invalid
<ref>
tag; name "MSDS" defined multiple times with different content - ↑ Acetanilide.
- ↑ Cahn, A.; Hepp, P. (1886), "Das Antifebrin, ein neues Fiebermittel", Centralbl. Klin. Med., 7: 561–64.
- ↑ See, e.g., The preparation of acetanilide from aniline, Department of Chemistry, University of the West Indies at Mona, Jamaica, retrieved 2009-08-26; Reeve, Wilkins; Lowe, Valerie C. (1979), "Preparation of Acetanilide from Nitrobenzene", J. Chem. Educ., 56 (7): 488, doi:10.1021/ed056p488: the latter preparation includes the reduction of nitrobenzene to aniline.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Pages with reference errors
- Pages using the JsonConfig extension
- Orphaned articles from ಮಾರ್ಚ್ ೨೦೧೯
- All orphaned articles
- Chemical articles without CAS registry number
- Chemicals without a PubChem CID
- Articles without InChI source
- Chemical pages without ChemSpiderID
- Articles without EBI source
- Articles without KEGG source
- Articles without UNII source
- ECHA InfoCard ID from Wikidata
- Articles containing unverified chemical infoboxes
- ರಸಾಯನಶಾಸ್ತ್ರ
- ಔಷಧೀಯ ರಸಾಯನಶಾಸ್ತ್ರ
- ರಾಸಾಯನಿಕ ಸಂಯುಕ್ತಗಳು