ವಿಷಯಕ್ಕೆ ಹೋಗು

ಅಷ್ಟದಿಗ್ಗಜ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಷ್ಟದಿಗ್ಗಜ ಪದದ ಅರ್ಥ ಎಂಟು ದಿಕ್ಕುಗಳಲ್ಲಿನ ಆನೆಗಳು. ಇದು ಎಂಟು ಆನೆಗಳು ಭೂಮಿಯನ್ನು ಎಂಟು ದಿಕ್ಕುಗಳಲ್ಲಿ ಹೊತ್ತಿವೆ ಎಂಬ ಹಳೆಯ ಹಿಂದೂ ನಂಬಿಕೆಯನ್ನು ಸೂಚಿಸುತ್ತದೆ. ಅಷ್ಟದಿಗ್ಗಜಗಳ ಹೆಸರುಗಳು ಇಂತಿವೆ: ಐರಾವತ, ಪುಂಡರೀಕ, ವಾಮನ, ಕುಮುದ, ಅಂಜನ, ಪುಷ್ಪದಂತ, ಸಾರ್ವಭೌಮ ಮತ್ತು ಸುಪ್ರತೀಕ. ಇವುಗಳ ಪತ್ನಿಯರು ಅನುಗುಣವಾಗಿ ಅಭ್ರ, ಕಪಿಲಾ, ಪಿಂಗಲಾ, ಅನುಪಮಾ, ತಾಮ್ರಪರ್ಣಿ, ಶುಭ್ರದಂತಿ, ಅಂಗನಾ ಮತ್ತು ಅಂಜನಾವತಿ.[]

೧೫೦೯ರಿಂದ ೧೫೨೯ರಲ್ಲಿ ಮರಣವಾಗುವವರೆಗೆ, ವಿಜಯನಗರ ಸಾಮ್ರಾಜ್ಯವನ್ನು ಆಳಿದ ಶ್ರೀ ಕೃಷ್ಣದೇವರಾಯನ ಆಸ್ಥಾನದಲ್ಲಿದ್ದ ಎಂಟು ತೆಲುಗು ಕವಿಗಳನ್ನು ಅಷ್ಟದಿಗ್ಗಜರು ಎಂಬ ಸಾಮೂಹಿಕ ಹೆಸರಿನಿಂದ ಕರೆಯಲಾಗುತ್ತಿತ್ತು. ಈ ಎಂಟು ಕವಿಗಳೆಂದರೆ ಅಲ್ಲಸಾನಿ ಪೆದ್ದನ, ನಂದಿ ತಿಮ್ಮನ, ಮಾದಯ್ಯಗಿರಿ ಮಲ್ಲನ, ಧೂರ್ಜತಿ, ಅಯ್ಯಲರಾಜು ರಾಮಭದ್ರುಡು, ಪಿಂಗಲಿ ಸುರನ, ರಾಮರಾಜಭೂಷಣ ಮತ್ತು ತೆನಾಲಿ ರಾಮಕೃಷ್ಣ. ಇವನ ಆಳ್ವಿಕೆಯ ಕಾಲದಲ್ಲಿ, ತೆಲುಗು ಸಾಹಿತ್ಯ ಮತ್ತು ಸಂಸ್ಕೃತಿಯು ತನ್ನ ಉತ್ತುಂಗವನ್ನು ತಲುಪಿತು. ಇವನ ಆಸ್ಥಾನದಲ್ಲಿ, ಎಂಟು ಕವಿಗಳನ್ನು ಅವನ ಸಾಹಿತ್ಯಿಕ ಕೂಟದ ಎಂಟು ಸ್ತಂಭಗಳು ಎಂದು ಪರಿಗಣಿಸಲಾಗಿತ್ತು. ಅಷ್ಟದಿಗ್ಗಜರ ಕಾಲವನ್ನು ಪ್ರಬಂಧ ಯುಗವೆಂದು ಕರೆಯಲಾಗುತ್ತದೆ.

ಟಿಪ್ಪಣಿಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]