ಅಲಾಸ್ಟೇರ್ ಕುಕ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಲಾಸ್ಟೇರ್ ಕುಕ್

CBE
Alastair Nathan Cook in 2016
ವಯಕ್ತಿಕ ಮಾಹಿತಿ
ಪೂರ್ಣ ಹೆಸರು
ಅಲಾಸ್ಟೇರ್ ನಾಥನ್ ಕುಕ್
ಹುಟ್ಟು (1984-12-25) ೨೫ ಡಿಸೆಂಬರ್ ೧೯೮೪ (ವಯಸ್ಸು ೩೯)
ಗ್ಲೌಸೆಸ್ಟರ್, ಗ್ಲೌಸೆಸ್ಟರ್ಷೈರ್, ಇಂಗ್ಲೆಂಡ್
ಅಡ್ಡಹೆಸರುCookie, Chef
ಎತ್ತರ6 ಅಡಿ 2 ಇಂಚು
ಬ್ಯಾಟಿಂಗ್ಎಡಗೈ
ಬೌಲಿಂಗ್ಬಲಗೈ ಮಧ್ಯಮ
ಪಾತ್ರOpening batsman
ಅಂತಾರಾಷ್ಟ್ರೀಯ ಮಾಹಿತಿ
ರಾಷ್ಟೀಯ ತಂಡ
ಟೆಸ್ಟ್ ಚೊಚ್ಚಲ (ಕ್ಯಾಪ್ ೬೩೦)೧ ಮಾರ್ಚ್ ೨೦೦೬ v ಭಾರತ
ಕೊನೆಯ ಟೆಸ್ಟ್೧ ಜೂನ್ ೨೦೧೮ v ಪಾಕಿಸ್ತಾನ
ಅಂ. ಏಕದಿನ​ ಚೊಚ್ಚಲ (ಕ್ಯಾಪ್ ೧೯೬)೨೮ ಜೂನ್ ೨೦೦೬ v ಶ್ರೀಲಂಕಾ
ಕೊನೆಯ ಅಂ. ಏಕದಿನ​೧೬ ಡಿಸೆಂಬರ್ ೨೦೧೪ v ಶ್ರೀಲಂಕಾ
ಅಂ. ಏಕದಿನ​ ಅಂಗಿ ನಂ.೨೬
ದೇಶೀಯ ತಂಡದ ಮಾಹಿತಿ
ವರ್ಷಗಳುತಂಡ
೨೦೦೨Bedfordshire
೨೦೦೩Essex Cricket Board
2003-ಪ್ರಸ್ತುತEssex (squad no. 26)
೨೦೦೪-೨೦೦೭Marylebone Cricket Club (MCC)
ವೃತ್ತಿ ಅಂಕಿಅಂಶಗಳು
ಸ್ಪರ್ಧೆ ಟೆಸ್ಟ್ ODI FC LA
ಪಂದ್ಯಗಳು ೧೫೬ ೯೨ ೨೮೦ ೧೫೯
ಗಳಿಸಿದ ರನ್ಗಳು ೧೨,೧೪೫ ೩,೨೦೪ ೨೧,೮೯೩ ೫,೮೪೦
ಬ್ಯಾಟಿಂಗ್ ಸರಾಸರಿ ೪೫.೬೫ ೩೬.೪೦ ೪೭.೫೯ ೪೦.೦೦
೧೦೦/೫೦ ೩೨/೫೬ ೫/೧೯ ೬೧/೧೦೪ ೧೨/೩೪
ಉನ್ನತ ಸ್ಕೋರ್ ೨೯೪ ೧೩೭ ೨೯೪ ೧೩೭
ಎಸೆತಗಳು ೧೮ ೨೮೨ ೧೮
ವಿಕೆಟ್‌ಗಳು
ಬೌಲಿಂಗ್ ಸರಾಸರಿ ೭.೦೦ ೩೦.೧೪
ಐದು ವಿಕೆಟ್ ಗಳಿಕೆ
ಹತ್ತು ವಿಕೆಟ್ ಗಳಿಕೆ n/a n/a
ಉನ್ನತ ಬೌಲಿಂಗ್ ೧/೬ ೩/೧೩
ಹಿಡಿತಗಳು/ ಸ್ಟಂಪಿಂಗ್‌ ೧೬೨/- ೩೬/- ೨೮೮/- ೬೬/-
ಮೂಲ: Cricinfo, ೭ ಜೂನ್ ೨೦೧೮

ಅಲಾಸ್ಟೇರ್ ನಾಥನ್ ಕುಕ್, CBE[೧] (ಜನನ: ೨೫ ಡಿಸೆಂಬರ್, ೧೯೮೪) ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸುವ ಕ್ರಿಕೆಟ್ ಆಟಗಾರ. ಇವರು ದೇಶಿ ಕ್ರಿಕೆಟ್ನಲ್ಲಿ ಎಸ್ಸೆಕ್ಸ್ ಕೌಂಟಿ ಕ್ರಿಕೆಟ್ ಕ್ಲಬ್ ಅನ್ನು ಪ್ರತಿನಿಧಿಸುತ್ತಾರೆ. ಮಾಜಿ ಏಕದಿನ ಹಾಗೂ ಟೆಸ್ಟ್ ತಂಡದ ನಾಯಕನಾಗಿದ್ದ ಇವರು ಅನೇಕ ದೇಶಿ ಹಾಗೂ ಅಂತಾರಾಷ್ಟ್ರೀಯ ದಾಖಲೆಗಳನ್ನು ಹೊಂದಿದ್ದಾರೆ. ಕುಕ್ ಇಂಗ್ಲೆಂಡ್ ಪರ ಆಡಿದ ಶ್ರೇಷ್ಠ ಆಟಗಾರರಲ್ಲಿ ಒಬ್ಬರು.

ಇಂಗ್ಲೆಂಡ್ ಪರ ಅತಿ ಹೆಚ್ಚು ಪಂದ್ಯಗಳನ್ನು ಆಡಿರುವ ಇವರು ೫೯ ಟೆಸ್ಟ್ ಮತ್ತು ೬೯ ಏಕದಿನ ಪಂದ್ಯಗಳಲ್ಲಿ ತಂಡದ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದಾರೆ.[೨]  ಪ್ರಸ್ತುತವಾಗಿ ಟೆಸ್ಟ್ ಕ್ರಕೆಟಿನಲ್ಲಿ ಇಂಗ್ಲೆಂಡ್ ಪರ ಅತಿ ಹೆಚ್ಚು ರನ್ ಗಳಿಸಿದ್ದಾರೆ ಮತ್ತು ೧೨೦೦೦ ಟೆಸ್ಟ್ ರನ್ ಗಳಿಸಿದ ಅತ್ಯಂತ ಕಿರಿಯ ಆಟಗಾರ (ಮೊದಲ ಇಂಗ್ಲೆಂಡ್ ಆಟಗಾರ ಮತ್ತು ವಿಶ್ವದ ೬ ನೇ ಆಟಗಾರ). ಇವರು ದಾಖಲೆಯ ೩೨ ಟೆಸ್ಟ್ ಶತಕಗಳು ಗಳಿಸಿದ್ದಾರೆ, ೫೦ ಟೆಸ್ಟ್ ಜಯಗಳಲ್ಲಿ ಭಾಗಿಯಾದ ಮೊದಲ ಇಂಗ್ಲೆಂಡ್ ಆಟಗಾರ. ಎಡಗೈ ಆರಂಭಿಕ ಬ್ಯಾಟ್ಸ್ಮನ್ ಹಾಗೂ ಸ್ಲೀಪ್ ಅಲ್ಲಿ ಕ್ಷೇತ್ರ ರಕ್ಷಣೆ ಮಾಡುತ್ತಾರೆ.

ಕುಕ್ ರವರು ಎಸ್ಸೆಕ್ಸ್ ಅಕಾಡೆಮಿ ಪರ ಆಡಿದರು, ೨೦೦೩ರಲ್ಲಿ ಮೊದಲ ಬಾರಿಗೆ ಆಡುವ ಹನೊಂದರಲ್ಲಿ ಸ್ಥಾನ ಪಡೆದರು. ೨೦೦೦ ರಿಂದ ಹಲವಾರು ಯುವಕರ ತಂಡಗಳಲ್ಲಿ ಆಡುತ್ತಿದ್ದ ಇವರು ೨೦೦೬ರಲ್ಲಿ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದರು. ಇಸಿಬಿ ನೇಷನಲ್ ಅಕಾಡೆಮಿಯೊಂದಿಗೆ ವೆಸ್ಟ್ ಇಂಡೀಸ್ ಪ್ರವಾಸದಲ್ಲಿದ್ದಾಗ, ಕುಕ್ ರವರನ್ನು ಭಾರತ ಪ್ರವಾಸದಲ್ಲಿದ ಇಂಗ್ಲೆಂಡ್ ತಂಡದ ಪರ ಮಾರ್ಕಸ್ ಟ್ರೆಸ್ಕೋಥಿಕ್ ಬದಲಿಗೆ ಆಡುವ ಅವಕಾಶ ದೊರೆಯಿತು. ೨೧ ವರ್ಷಕ್ಕೆ ಪಾದಾರ್ಪಣೆ ಮಾಡಿ ಮೊದಲ ಪಂದ್ಯದಲ್ಲೇ ಶತಕ ಸಿಡಿಸಿದರು. ಮೊದಲ ವರ್ಷದಲ್ಲೇ ೧೦೦೦ ರನ್ ಪೂರೈಸಿದರು ಹಾಗೂ ಭಾರತ, ಪಾಕಿಸ್ತಾನ, ವೆಸ್ಟ್ ಇಂಡೀಸ್ ಮತ್ತು ಬಾಂಗ್ಲಾದೇಶದ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸಿದರು.[೩]೨೦೦೯ರ ಆಷಸ್ ಸರಣಿಯನ್ನು ಗೆಲ್ಲಲು ಕುಕ್ ಪ್ರಮುಖ ಪಾತ್ರ ವಹಿಸಿದರು. 

೨೯ ಆಗಸ್ಟ್ ೨೦೧೨ ರಂದು ಆಂಡ್ರ್ಯೂ ಸ್ಟ್ರಾಸ್ ಅವರ ನಿವೃತ್ತಿ ಪಡೆದ ನಂತರ ಕುಕ್ ರನ್ನು ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕನಾಗಿ ಘೋಷಿಸಲಾಯಿತು. ನಾಯಕನಾಗಿ ಇಂಗ್ಲೆಂಡ್ ತಂಡವನ್ನು ೧೯೮೪-೮೫ ನಂತರ ಭಾರತದಲ್ಲಿ ಪ್ರಥಮ ಸರಣಿ ಜಯದತ್ತ ಮುನ್ನಡೆಸಿದರು.[೪] ಈ ಸರಣಿಯಲ್ಲಿ ನಾಯಕನಾಗಿ ನೇಮಕವಾದ ಮೊದಲ ಐದೂ ಪಂದ್ಯದಲ್ಲಿ ಶತಕ ಸಿಡಿಸಿದ ಮೊದಲ ನಾಯಕನಾದರು.[೫]೩೦ ಮೇ ೨೦೧೫ರಂದು ಗ್ರಹಾಂ ಗೂಚ್(೮೯೦೦) ಅವರನ್ನು ಹಿಂದಿಕ್ಕಿ ಇಂಗ್ಲೆಂಡ್ ಪರ ಟೆಸ್ಟ್ ಕ್ರಿಕೆಟ್ಟಿನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾದರು.[೬] ೨೦೧೬ರ ಬಾಂಗ್ಲಾದೇಶ ಪ್ರವಾಸದ ಬಳಿಕ ಟೆಸ್ಟ್ ನಾಯಕನ ಸ್ಥಾನದಿಂದ ಕೆಳಗಿಳಿದರು.[೭][೮][೯][೧೦]

ಉಲ್ಲೇಖಗಳು[ಬದಲಾಯಿಸಿ]

 1. "Cook and Broad honoured | England and Wales Cricket Board (ECB) – The Official Website of the ECB". www.ecb.co.uk. Archived from the original on 12 June 2016. Retrieved 2016-06-10. {{cite web}}: Unknown parameter |dead-url= ignored (help)
 2. "England Test captain Alastair Cook steps down". ecb.co.uk. ecb.co.uk. 2017-02-06. Retrieved 6 February 2017.
 3. Brett, Oliver (9 June 2007). "Cook hundred keeps England on top". BBC. Archived from the original on 24 August 2007. Retrieved 26 August 2007. {{cite news}}: Unknown parameter |dead-url= ignored (help)
 4. "England end 28-year drought with 2–1 win". Wisden India. Archived from the original on 3 ಡಿಸೆಂಬರ್ 2013. Retrieved 17 December 2012.
 5. "India v England: record-breaker Alastair Cook scores 23rd Test century to put tourists firmly in control of third Test". Telegraph. Retrieved 6 December 2012.
 6. "Alastair Cook: Captain becomes England's leading Test run scorer". BBC. Retrieved 31 May 2015.
 7. You must specify issue=, startpage=, and date= when using {{London Gazette}}. Available parameters:

  {{London Gazette
  |issue= 
  |date=
  |startpage= 
  |endpage=
  |supp=
  |city=
  |accessdate=
  |nolink=
  |separator=
  |ps=
  }}
 8. "Andrew Strauss and Alastair Cook lead Birthday Honours list". BBC. 10 June 2011. Archived from the original on 11 June 2011. Retrieved 11 June 2011. {{cite news}}: Unknown parameter |dead-url= ignored (help)
 9. You must specify issue=, startpage=, and date= when using {{London Gazette}}. Available parameters:

  {{London Gazette
  |issue= 
  |date=
  |startpage= 
  |endpage=
  |supp=
  |city=
  |accessdate=
  |nolink=
  |separator=
  |ps=
  }}
 10. "Cook equals Border record" (in ಇಂಗ್ಲಿಷ್). Retrieved 24 May 2018.