ವಿಷಯಕ್ಕೆ ಹೋಗು

ಅರ್ಮಾನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Giorgio Armani S.p.A.
ಸಂಸ್ಥೆಯ ಪ್ರಕಾರPrivate
ಸ್ಥಾಪನೆ1975
ಸಂಸ್ಥಾಪಕ(ರು)Giorgio Armani and Sergio Galeotti
ಮುಖ್ಯ ಕಾರ್ಯಾಲಯಇಟಲಿ Milan, Italy
ವ್ಯಾಪ್ತಿ ಪ್ರದೇಶWorldwide
ಪ್ರಮುಖ ವ್ಯಕ್ತಿ(ಗಳು)Giorgio Armani
ಉದ್ಯಮFashion and Leisure
ಆದಾಯ$1.69bn (2005)
ಉದ್ಯೋಗಿಗಳು4,700
ಜಾಲತಾಣwww.giorgioarmani.com

ಜಾರ್ಜಿಯೊ ಅರ್ಮಾನಿ S.P.A. ಅಂತಾರಾಷ್ಟ್ರೀಯ ಇಟಾಲಿಯನ್ ಫ್ಯಾಷನ್ ಸಂಸ್ಥೆಯಾಗಿದ್ದು, ಇದು ಉತ್ತಮ ಫ್ಯಾಷನ್ನಿನ ಉಡುಪು, ಸಿದ್ಧ ಉಡುಪುಗಳು, ಚರ್ಮದ ಸರಕುಗಳು, ಶೂಗಳು, ಕೈಗಡಿಯಾರಗಳು, ಆಭರಣಗಳು, ಉಪಸಾಮಾಗ್ರಿಗಳು, ಕಣ್ಣಿಗೆ ಬಳಸುವ ಪ್ರಸಾಧನಗಳು, ಸೌಂದರ್ಯವರ್ಧಕಗಳು ಮತ್ತು ಗೃಹ ಬಳಕೆಯ ವಸ್ತುಗಳು ಇತ್ಯಾದಿಗಳನ್ನು ವಿನ್ಯಾಸಗೊಳಿಸುತ್ತದೆ, ತಯಾರಿಸುತ್ತದೆ, ವಿತರಣೆ ಮಾಡುತ್ತದೆ ಮತ್ತು ಮಾರಾಟ ಮಾಡುತ್ತದೆ. ಇದು ಈ ಉತ್ಪನ್ನಗಳನ್ನು ಅನೇಕ ವಿಶೇಷ ಉಪ-ಹೆಸರುಗಳಡಿಯಲ್ಲಿ ಮಾರಾಟ ಮಾಡುತ್ತದೆ, ಅವುಗಳೆಂದರೆ - ಜಾರ್ಜಿಯೊ ಅರ್ಮಾನಿ , ಅರ್ಮಾನಿ ಕೊಲೆಜಿಯಾನಿ , ಎಂಪೋರಿಯೊ ಅರ್ಮಾನಿ , AJ | ಅರ್ಮಾನಿ ಜೀನ್ಸ್ , AX | ಅರ್ಮಾನಿ ಎಕ್ಸ್‌ಚೇಂಜ್‍‌‌‌ , ಅರ್ಮಾನಿ ಜೂನಿಯರ್ ಮತ್ತು ಅರ್ಮಾನಿ/ಕಾಸ . ಅರ್ಮಾನಿ ಹೆಸರು ಪ್ರಪಂಚದಾದ್ಯಂತ ಅತ್ಯಂತ ಫ್ಯಾಷನ್ ಮತ್ತು ನಯನಾಜೂಕಿನ ಉಡುಪುಗಳ ವಿನ್ಯಾಸ ಮತ್ತು ತಯಾರಿಕೆಗೆ ಪರ್ಯಾಯ ಪದವಾಗಿದೆ ಹಾಗೂ ಇದನ್ನು ಫ್ಯಾಷನ್ ಉದ್ಯಮದಲ್ಲಿ ಅಧಿಕ ಪ್ರಸಿದ್ಧಿಯುಳ್ಳ ಹೆಸರುಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. 2005ರ ಕೊನೆಯಲ್ಲಿ ಇದರ ಮಾರಾಟವು $1.69 ಶತಕೋಟಿಯಷ್ಟಿತ್ತು.[] ಅರ್ಮಾನಿಯು ಮಿಲನ್, ಪ್ಯಾರಿಸ್, ನ್ಯೂಯಾರ್ಕ್, ಲಂಡನ್, ಟೋಕಿಯೊ, ಶಾಂಘೈ ಮತ್ತು ದುಬೈ ಮೊದಲಾದವುಗಳನ್ನೂ ಒಳಗೊಂಡಂತೆ ಅನೇಕ ದೊಡ್ಡ ನಗರಗಳಲ್ಲಿರುವ ಅತ್ಯಂತ ಐಷಾರಾಮಿ ಹೋಟೆಲ್ ಮತ್ತು ರೆಸಾರ್ಟ್ಗಳ ಸರಣಿ ಎಮಾರ್ ಪ್ರೋಪರ್ಟೀಸ್ ಒಂದಿಗೆ ಸಹೋದ್ಯಮ ನಡೆಸಲು ಯೋಜಿಸುತ್ತಿದೆ. ಈ ಕಂಪೆನಿಯು ಈಗಾಗಲೇ ಬಾರ್, ರೆಸ್ಟಾರೆಂಟ್ ಮತ್ತು ರಾತ್ರಿಯ ಕ್ಲಬ್‌ಗಳನ್ನೂ ಒಳಗೊಂಡಂತೆ ಪ್ರಪಂಚದಾದ್ಯಂತ ಅನೇಕ ಕೆಫೆಗಳನ್ನು ನಡೆಸುತ್ತಿದೆ.

ಉತ್ಪನ್ನಗಳು

[ಬದಲಾಯಿಸಿ]
ಚಿಕಾಗೊದಲ್ಲಿನ ಅರ್ಮಾನಿ ಬೂಟೀಕ್.

ಜಾರ್ಜಿಯೊ ಅರ್ಮಾನಿ

[ಬದಲಾಯಿಸಿ]

ಜಾರ್ಜಿಯೊ ಅರ್ಮಾನಿ ಯು ಪುರುಷರ ಮತ್ತು ಮಹಿಳೆಯರ ಸಿದ್ಧ ಉಡುಪುಗಳು, ಪರಿಕರಗಳು, ಕಣ್ಣಿನ ಪ್ರಸಾಧನಗಳು, ಸೌಂದರ್ಯವರ್ಧಕಗಳು ಮತ್ತು ಸುಗಂಧ ದ್ರವ್ಯಗಳಲ್ಲಿ ವಿಶೇಷವಾಗಿರುವ ಉತ್ಕೃಷ್ಟ ಹೆಸರಾಗಿದೆ. ಇದು ಪ್ರಪಂಚದಲ್ಲೇ ಹೆಚ್ಚು ದುಬಾರಿ ಬಟ್ಟೆಗಳ ಹೆಸರುಗಳಲ್ಲಿ ಒಂದಾಗಿದೆ ಹಾಗೂ ಇದು ಕೆಲವು ಆಯ್ದ ಉತ್ಕೃಷ್ಟ ವಿವಿಧ ಸರಕಿನ ಮಳಿಗೆಗಳಲ್ಲಿ ಮಾತ್ರ ಲಭ್ಯಯಿರುತ್ತದೆ.

ಅರ್ಮಾನಿ ಕೊಲೆಜಿಯಾನಿ

[ಬದಲಾಯಿಸಿ]

ಅರ್ಮಾನಿ ಕೊಲೆಜಿಯಾನಿ ಯು (ಹಿಂದೆ ಜಾರ್ಜಿಯೊ ಅರ್ಮಾನಿ ಲಿ ಕೊಲೆಜಿಯಾನಿ ) ಉತ್ಕೃಷ್ಟ ಅರ್ಮಾನಿಯ ಮತ್ತೊಂದು ಉಪ-ಹೆಸರಾಗಿದೆ. ಇದು ಎಂಪೋರಿಯೊ ಅರ್ಮಾನಿ , ಅರ್ಮಾನಿ ಜೀನ್ಸ್ , ಅರ್ಮಾನಿ ಎಕ್ಸ್‌ಚೇಂಜ್‍‌‌‌ ಇತ್ಯಾದಿಗಳಿಗಿಂತ ಹೆಚ್ಚು ದುಬಾರಿಯಾಗಿದೆ. ಆದರೆ ಉತ್ಕೃಷ್ಟ, ಸಿದ್ಧ ಉಡುಪುಗಳಾದ ಜಾರ್ಜಿಯೊ ಅರ್ಮಾನಿ ಮತ್ತು ಉತ್ತಮ ಫ್ಯಾಷನ್ನಿನ ಉಡುಪುಗಳಾದ ಅರ್ಮಾನಿ ಪ್ರೈವ್ ಗಿಂತ ಕಡಿಮೆ ದುಬಾರಿಯಾಗಿದೆ. ಸ್ವತಂತ್ರ ಬೂಟೀಕ್‌(ಬಟ್ಟೆ ಮತ್ತು ಇತರ ವಸ್ತುಗಳನ್ನು ಮಾರುವ ಚಿಕ್ಕ ಅಂಗಡಿ)ಗಳಲ್ಲಿ (ಪ್ರತ್ಯೇಕವಾಗಿ ಕೊಲೆಜಿಯಾನಿ ಉತ್ಪನ್ನಗಳಿಗೆ ಮಾತ್ರ ವೈಶಿಷ್ಟ್ಯವಾಗಿರುವ) ಮಾರಾಟವಾಗುವುದರೊಂದಿಗೆ ಅರ್ಮಾನಿ ಕೊಲೆಜಿಯಾನಿ ಯು ಹಾಲ್ಟ್ ರೆನ್‌ಫ್ರಿವ್, ಬ್ಲೂಮಿಂಗ್ಡಲೆಸ್, ಡೇವಿಡ್ ಜಾನ್ಸ್, ಹಾರ್ವೆ ನಿಕೋಲ್ಸ್, ಹ್ಯಾರಡ್ಸ್, ನೈಮ್ಯಾನ್ ಮಾರ್ಕಸ್, ನಾರ್ಡ್‌ಸ್ಟ್ರಾಮ್ ಮತ್ತು ಸ್ಯಾಕ್ಸ್ ಫಿಫ್ತ್ ಅನೆನ್ಯೂ ಮೊದಲಾದ ಉತ್ಕೃಷ್ಟ ವಿವಿಧ ಸರಕಿನ ಮಳಿಗೆಗಳಲ್ಲೂ ಮಾರಲ್ಪಡುತ್ತದೆ.

ಎಂಪೋರಿಯೊ ಅರ್ಮಾನಿ

[ಬದಲಾಯಿಸಿ]
ಟೋಕಿಯೊದಲ್ಲಿನ ಎಂಪೋರಿಯೊ ಅರ್ಮಾನಿ ಮಳಿಗೆ.

ಎಂಪೋರಿಯೊ ಅರ್ಮಾನಿ ಯು "ಶ್ರೇಷ್ಠ-ದರ್ಜೆಯ" ಹೆಸರು-ಪಟ್ಟಿಯಾಗಿದ್ದು, ಇದು ಕಿರಿಯ ವಯಸ್ಕರಿಗಾಗಿ ಅವರ 20 ಮತ್ತು 30ರ ವಯಸ್ಸಿಗೆ ವಿನ್ಯಾಸಗೊಳಿಸುತ್ತದೆ. ಈ ಉತ್ಪನ್ನವು ಸಿದ್ಧ ಉಡುಪುಗಳು ಮತ್ತು ಪರಿಕರಗಳಿಗೆ ವೈಶಿಷ್ಟ್ಯವಾಗಿದೆ. ಎಂಪೋರಿಯೊ ಅರ್ಮಾನಿ ಯು U.S.ನಲ್ಲಿ ಅದರ 13 ಮಳಿಗೆಗಳಲ್ಲಿ ಮತ್ತು ಪ್ರಪಂಚದಾದ್ಯಂತ 140 ಮಳಿಗೆಗಳಲ್ಲಿ,

ಹಾಗೂ ಬ್ರ್ಯಾಂಡ್‌ನ ವೆಬ್‌ಸೈಟ್‌ನಲ್ಲಿ ಲಭ್ಯಯಿರುತ್ತದೆ. 2010ರ ಜನವರಿಯಲ್ಲಿ ಪ್ರಸಿದ್ಧ ಸಾಕರ್ ಆಟಗಾರ ಕ್ರಿಶ್ಚಿಯಾನೊ ರೊನಾಲ್ಡೊ ಮತ್ತು ಹಾಲಿವುಡ್ ಚಲನಚಿತ್ರ ನಟಿ ಮೇಗನ್ ಫಾಕ್ಸ್ ಎಂಪೋರಿಯೊ ಅರ್ಮಾನಿಯ ಪುರುಷ ಮತ್ತು ಮಹಿಳಾ ರೂಪದರ್ಶಿಗಳಾದರು.

ಅರ್ಮಾನಿ ಜೀನ್ಸ್

[ಬದಲಾಯಿಸಿ]

ಅರ್ಮಾನಿ ಜೀನ್ಸ್ 1981ರಲ್ಲಿ ಜಾರ್ಜಿಯೊ ಅರ್ಮಾನಿಯಿಂದ ರಚಿಸಲ್ಪಟ್ಟ ಡೆನಿಮ್-ಸಂಬಂಧಿತ ಬಟ್ಟೆಯ ಭಾರಿ-ಪ್ರಮಾಣದ ಸಂಗ್ರಹವಾಗಿದೆ. ಮಿಲನ್‌ನಲ್ಲಿರುವ ಅರ್ಮಾನಿ ಜೀನ್ಸ್ ಕೆಫೆ ಯನ್ನೂ ಒಳಗೊಂಡಂತೆ ಪ್ರಪಂಚದಾದ್ಯಂತ 15 ಅರ್ಮಾನಿ ಜೀನ್ಸ್ ಸ್ವತಂತ್ರ ಮಳಿಗೆಗಳಿದ್ದರೂ, ಅರ್ಮಾನಿ ಜೀನ್ಸ್ ಮುಖ್ಯವಾಗಿ ವಿವಿಧ ಸರಕಿನ ಮಳಿಗೆಗಳಲ್ಲಿ ಮಾರಲ್ಪಡುತ್ತದೆ. ಕೆಲವು ಅರ್ಮಾನಿ ಜೀನ್ಸ್ ಸರಕುಗಳು ಎಂಪೋರಿಯೊ ಅರ್ಮಾನಿ ಮಳಿಗೆಗಳಲ್ಲಿ ಮಾರಾಟವಾಗುತ್ತವೆ ಮತ್ತು ಅರ್ಮಾನಿ ಜೀನ್ಸ್ ಮಳಿಗೆಗಳು ಎಂಪೋರಿಯೊ ಅರ್ಮಾನಿ ಸರಕುಗಳನ್ನು ಏಷ್ಯಯನ್ ಮಾರ್ಕೆಟ್‌ನಲ್ಲಿ ಮಾರಾಟ ಮಾಡುತ್ತವೆ. ವಿನ್ಯಾಸದ ವಿಷಯದಲ್ಲಿ, ಈ ಉತ್ಪನ್ನದ ಬಟ್ಟೆಗಳು ಜಾರ್ಜಿಯೊ ಅರ್ಮಾನಿಯ ಸಹಿಯನ್ನು ಹೊಂದಿರುವುದಿಲ್ಲ ಹಾಗೂ ಹೆಚ್ಚಾಗಿ ಅವನ ಇತರ ಸಂಗ್ರಹಗಳಲ್ಲಿರುವ ಬಟ್ಟೆಗಳಿಗಿಂತ ದೊಡ್ಡ ಲೋಗೋಗಳನ್ನು ಒಳಗೊಂಡಿರುತ್ತವೆ. ಅರ್ಮಾನಿ ಜೀನ್ಸ್ ಗೆ ಬಳಸುವ ಬಣ್ಣಗಳು ಉತ್ಕೃಷ್ಟ ಮಟ್ಟದ ಉತ್ಪನ್ನಗಳಲ್ಲಿ, ಅಥವಾ ಏಕಬಣ್ಣ ಯೋಜನೆಗಳನ್ನು ಹೊಂದಿರುವ ಹಾಗೂ ಬಣ್ಣದ ಆಧಾರದಲ್ಲಿ ಕತ್ತರಿಸಲು ಮತ್ತು ಸರಕುಗಳನ್ನು ತಯಾರಿಸಲು ಅಧಿಕ ಕೇಂದ್ರೀಕರಿಸುವ ಅರ್ಮಾನಿ ಎಕ್ಸ್‌ಚೇಂಜ್‍‌‌‌ ನಲ್ಲಿ ಕಂಡುಬರುವ ಬಟ್ಟೆಗಳಿಗಿಂತ ಹೆಚ್ಚು ನಾನಾವಿಧಗಳಲ್ಲಿರುತ್ತವೆ.

ಅರ್ಮಾನಿ ಎಕ್ಸ್‌ಚೇಂಜ್‍‌‌‌

[ಬದಲಾಯಿಸಿ]
ಚಿತ್ರ:Armaniexchangelogo.JPG
ಅರ್ಮಾನಿ ಎಕ್ಸ್‌ಚೇಂಜ್‍‌‌

A|X ಅರ್ಮಾನಿ ಎಕ್ಸ್‌ಚೇಂಜ್‍‌‌‌ U.S.ನಲ್ಲಿ 1991ರಲ್ಲಿ ಮೊದಲು ಬಳಕೆಗೆ ಬಂದಿತು. ಇದು ಇಂದು ಪ್ರಪಂಚದ ಪ್ರಮುಖ ಫ್ಯಾಷನ್ ಬ್ರ್ಯಾಂಡ್‌ಗಳಲ್ಲಿ ಒಂದಾಗಿದೆ.

ಜಾರ್ಜಿಯೊ ಅರ್ಮಾನಿಯಿಂದ ರಚಿಸಲ್ಪಟ್ಟ ಈ ಉತ್ಪನ್ನವು ಅದರ ಉದ್ರೇಕಕರ ಜಾಹೀರಾತು ಕಾರ್ಯಾಚರಣೆಗಳಿಗೆ ಬಹು ಪ್ರಸಿದ್ಧವಾಗಿದೆ. ಅರ್ಮಾನಿ ಎಕ್ಸ್‌ಚೇಂಜ್‍‌‌‌ ಉಡುಪು, ಪರಿಕರಗಳು, ಕಣ್ಣಿನ ಪ್ರಸಾಧನಗಳು, ಕೈಗಡಿಯಾರಗಳು, ಆಭರಣಗಳು ಮತ್ತು ಸಂಗೀತ ಮೊದಲಾದ ಫ್ಯಾಷನ್ ಮತ್ತು ಜೀವನ ಶೈಲಿಯ ಉತ್ಪನ್ನಗಳನ್ನು ವಿನ್ಯಾಸಗೊಳಿಸುತ್ತದೆ, ತಯಾರಿಸುತ್ತದೆ, ವಿತರಣೆ ಮಾಡುತ್ತದೆ ಮತ್ತು ಮಾರಾಟ ಮಾಡುತ್ತದೆ. ಇದು ಷೋಕಿ ಸಂಸ್ಕೃತಿ ಮತ್ತು ಫ್ಯಾಷನ್‌ಗಾರಿಕೆಯ ನೃತ್ಯ ಸಂಗೀತದಿಂದ ಪ್ರೇರೇಪಿಸಲ್ಪಡುತ್ತದೆ. ಹೆಚ್ಚು ಸುಲಭಲಭ್ಯ ಅರ್ಮಾನಿ ಬ್ರ್ಯಾಂಡ್ ಎಂದು ಪರಿಗಣಿಸಲಾದರೂ, ಅರ್ಮಾನಿ ಎಕ್ಸ್‌ಚೇಂಜ್‍‌‌‌ ಸಾಮಾನ್ಯ ಮಾರುಕಟ್ಟೆಯಲ್ಲಿ $100 ಗಿಂತ ಕೆಳಗಿನ ಸರಾಸರಿ ದರಗಳೊಂದಿಗೆ ಸೌಮ್ಯವಾದ-ಬೆಲೆಗಳನ್ನು ಹೊಂದಿದೆ.

ಅರ್ಮಾನಿ ಎಕ್ಸ್‌ಚೇಂಜ್‍‌‌‌ ಉತ್ಪನ್ನಗಳು ಪ್ರತ್ಯೇಕವಾಗಿ ಪ್ರಪಂಚದಾದ್ಯಂತ 178 ಮಳಿಗೆಗಳಲ್ಲಿ ಮತ್ತು ಬ್ರ್ಯಾಂಡ್‌ನ ವೆಬ್‌ಸೈಟ್‌ನಲ್ಲಿ ಲಭ್ಯಯಿರುತ್ತದೆ.[]

ಅರ್ಮಾನಿ ಜೂನಿಯರ್

[ಬದಲಾಯಿಸಿ]

ಅರ್ಮಾನಿಯ ಮಕ್ಕಳ ಹೆಸರು-ಪಟ್ಟಿ 'ಅರ್ಮಾನಿ ಜೂನಿಯರ್' ಪ್ರಪಂಚದಾದ್ಯಂತ 15 ಬೂಟೀಕ್‌ಗಳಲ್ಲಿ ಲಭ್ಯಯಿರುತ್ತದೆ ಹಾಗೂ ಇದು ಮಾರಾಟಕ್ಕಾಗಿ ನೈಮ್ಯಾನ್ ಮಾರ್ಕಸ್ ಮತ್ತು ಸ್ಯಾಕ್ಸ್ ಫಿಫ್ತ್ ಅವೆನ್ನೂ ವಿವಿಧ ಸರಕಿನ ಮಳಿಗೆಗಳನ್ನು ಆರಿಸುತ್ತದೆ.

ಅರ್ಮಾನಿ/ಕಾಸ

[ಬದಲಾಯಿಸಿ]

ಅರ್ಮಾನಿ/ಕಾಸ (ಇಟಲಿಯಲ್ಲಿ "ಅರ್ಮಾನಿ ಹೋಮ್")ವು ಅರ್ಮಾನಿ ವೈಶಿಷ್ಟ್ಯದ ಪೀಠೋಪರಣಗಳು, ದೀಪಗಳು, ಲಿನೆನ್ ಮತ್ತು ಊಟದ ಪರಿಕರಗಳ ಉತ್ಕೃಷ್ಟ-ಮಟ್ಟದ ಗೃಹಬಳಕೆಯ ವಸ್ತುಗಳ ಸಂಗ್ರಹವಾಗಿದೆ. ಅರ್ಮಾನಿ/ಕಾಸವು ಪ್ರಪಂಚದಾದ್ಯಂತ 40 ಬೂಟೀಕ್‌ಗಳಲ್ಲಿ ಲಭ್ಯಯಿರುತ್ತದೆ ಮತ್ತು ಮಾರಾಟಕ್ಕಾಗಿ ನೈಮ್ಯಾನ್ ಮಾರ್ಕಸ್ ಮಳಿಗೆಗಳನ್ನು ಆಯ್ಕೆ ಮಾಡುತ್ತದೆ.

ಇತರ ಸಾಹಸೋದ್ಯಮಗಳು

[ಬದಲಾಯಿಸಿ]

ಅರ್ಮಾನಿ ಪ್ರೈವ್

[ಬದಲಾಯಿಸಿ]

ಅರ್ಮಾನಿಯ ಉತ್ತಮ ಫ್ಯಾಷನ್ನಿನ ಉಡುಪು ಉತ್ಪನ್ನವು, ನೇರವಾಗಿ ಆನ್‌ಲೈನ್‌ನಲ್ಲಿ ಪ್ರಸಾರವಾದ ಮೊದಲ ಉತ್ತಮ ಫ್ಯಾಷನ್ನಿನ ಉಡುಪಿನ ಪ್ಯಾರಿಸ್ ಫ್ಯಾಷನ್ ಪ್ರದರ್ಶನವಾಗಿ ಇತಿಹಾಸವನ್ನು ಸೃಷ್ಟಿಸಿತು. ಈ ಉತ್ಪನ್ನವನ್ನು ಕಟ್ಟುನಿಟ್ಟಾಗಿ ಆದೇಶ ನೀಡಿ, ಧರಿಸಲು ತಯಾರಿಸಲಾಗುತ್ತದೆ.

ಅರ್ಮಾನಿ ಸೌಂಧರ್ಯವರ್ಧಕಗಳು

[ಬದಲಾಯಿಸಿ]

ಅರ್ಮಾನಿಯ ಅಂದ ಹೆಚ್ಚಿಸುವ ಉತ್ಪನ್ನಗಳೆಂದರೆ ಸೌಂದರ್ಯವರ್ಧಕಗಳು, ಚರ್ಮ-ರಕ್ಷಿಸುವವುಗಳು, ಸುಗಂಧದ್ರವ್ಯಗಳು ಮತ್ತು ಸುಗಂಧಜಲಗಳು. ಇದನ್ನು ಅರ್ಮಾನಿಯು ದೀರ್ಘ-ಕಾಲದ ಪಾಲುದಾರಿಕೆಯ ಒಪ್ಪಂದವನ್ನು ಹೊಂದಿರುವ ಎಲ್ಓರಿಯಲ್ನ ಐಷಾರಾಮಿ ವಿಭಾಗದಿಂದ ತಯಾರಿಸಲಾಗುತ್ತದೆ ಮತ್ತು ಹಂಚಲಾಗುತ್ತದೆ. ಇದು ಪ್ರಪಂಚದಾದ್ಯಂತ ಅನೇಕ ವಿವಿಧ ಸರಕಿನ ಮಳಿಗೆಗಳಲ್ಲಿ ಮತ್ತು ಕೆಲವು ಬೂಟೀಕ್‌ಗಳಲ್ಲಿ ಲಭ್ಯಯಿರುತ್ತದೆ. ಅರ್ಮಾನಿಯು ಅತ್ಯುತ್ತತ್ತಮ ಭೋಜನದ ಉದ್ಯಮದಲ್ಲೂ ಬಂಡವಾಳ ತೊಡಗಿಸುತ್ತಾನೆ. ಪ್ರಪಂಚದಾದ್ಯಂತ ಅವನು 14 ಎಂಪೋರಿಯೊ ಅರ್ಮಾನಿ ಮತ್ತು ಅರ್ಮಾನಿ ಜೀನ್ಸ್ ಕೆಫೆಗಳನ್ನು ಹೊಂದಿದ್ದಾನೆ. ಅಲ್ಲದೆ ಹಾಂಕ್‌ಕಾಂಗ್‌ನಲ್ಲಿ ಒಂದು ಅರ್ಮಾನಿ ಬಾರ್ ಇದೆ ಹಾಗೂ ನೊಬು ಮತ್ತು ಪ್ರೈವ್ ಎಂಬ ಅವನ ಎರಡು ಹೊಸ ರೆಸ್ಟಾರೆಂಟ್‌ಗಳು ಪ್ರಪಂಚದಾದ್ಯಂತ ಕಂಡುಬರುತ್ತವೆ. ಅರ್ಮಾನಿಯು ಒಂದು ಪುಸ್ತಕದ ಅಂಗಡಿ (ಅರ್ಮಾನಿ ಲಿಬ್ರಿ) ಮತ್ತು ಹೂವಿನ ವ್ಯಾಪಾರವನ್ನು (ಅರ್ಮಾನಿ ಫಿಯೋರಿ) ಅರ್ಮಾನಿ ಹೆಸರಿನಡಿಯಲ್ಲಿ ಹಾಗೂ ಅರ್ಮಾನಿ ದೋಲ್ಕಿ ಎಂಬ ಮಿಠಾಯಿ ತಯಾರಿಕಾ ಕಂಪೆನಿಯನ್ನು ಹೊಂದಿದ್ದಾನೆ. ಈ ಸಣ್ಣ ಉತ್ಪನ್ನಗಳು ಹೆಚ್ಚಾಗಿ ಮಿಲನ್ ನೌಕಾಬಲಾಧಿಪತಿಯ ಹಡುಗಿಗನಂತಹ(ಫ್ಲ್ಯಾಗ್‌ಶಿಪ್) ದೊಡ್ಡ ಅರ್ಮಾನಿ ಮಳಿಗೆಗಳಲ್ಲಿ ಹಾಗೂ ಹಾಂಕ್‌ಕಾಂಗ್‌ನ ಸೆಂಟ್ರಲ್‌ನ 11 ಚಾಟರ್ ರೋಡ್‌ನ ಅರ್ಮಾನಿ/ಚಾಟರ್‌ನಲ್ಲಿ ಮಾರಲ್ಪಡುತ್ತವೆ. ಅಲ್ಲದೆ ಅವನು ಇಟಲಿಯ ಪ್ರಸಿದ್ಧ ಧ್ವನಿ-ವಿನ್ಯಾಸಗಾರ ಮ್ಯಾಟಿಯೊ ಸೆಸರಿನಿಯೊಂದಿಗೆ "ಎಂಪೋರಿಯೊ ಅರ್ಮಾನಿ ಕೆಫೆ" ಎಂಬ 4 ಲಕ್ಕಿ ಸಿಡಿಗಳನ್ನು ರಚಿಸಿದನು.

ಅರ್ಮಾನಿಯ ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳು

[ಬದಲಾಯಿಸಿ]

ಅರ್ಮಾನಿ ಮತ್ತು ಎಮಾರ್ ಪ್ರೋಪರ್ಟೀಸ್ 2004ರಲ್ಲಿ ಅರ್ಮಾನಿ ಹೆಸರಿನಡಿಯಲ್ಲಿ ಕನಿಷ್ಠ ಏಳು ಐಷಾರಾಮಿ ಹೋಟೆಲ್‌ಗಳನ್ನು ಮತ್ತು ಮೂರು ರಜಾದಿನದ-ರೆಸಾರ್ಟ್‌ಗಳನ್ನು ನಿರ್ಮಿಸುವ ಒಪ್ಪಂದವೊಂದಕ್ಕೆ ಸಹಿಹಾಕಿದರು. ಹೋಟೆಲ್‌ಗಳ ಒಳಾಂಗಣ ವಿನ್ಯಾಸ ಮತ್ತು ಶೈಲಿಯ ಎಲ್ಲಾ ವಿಷಯಗಳ ಮೇಲ್ವಿಚಾರಣೆಗೆ ಅರ್ಮಾನಿಯು ಜವಾಬ್ದಾರನಾಗಿದ್ದನು. ಈ ಹೋಟೆಲ್‌ಗಳಲ್ಲಿ ಒಂದು ದುಬೈನಲ್ಲಿದೆ.[] ಯುನೈಟೆಡ್ ಅರಬ್ ಎಮಿರೇಟ್ಸ್ ದುಬೈಯಲ್ಲಿರುವ 39 ಮಹಡಿಗಳನ್ನು ಹೊಂದಿದ ಬುರ್ಜ್ ಖಲಿಫ ಗಗನಚುಂಬಿ ಕಟ್ಟಡವು 160 ಅತಿಥಿ ಕೊಠಡಿಗಳನ್ನು ಮತ್ತು 144 ವಸತಿಗಳನ್ನು ಒಳಗೊಂಡು ಪ್ರಪಂಚದಲ್ಲೇ ಮೊದಲ ಅರ್ಮಾನಿ ಹೋಟೆಲ್ ಆಗಿದೆ[]. ಜಾರ್ಜಿಯೊ ಅರ್ಮಾನಿಯೂ ಅರ್ಮಾನಿ ವಸತಿ ಗೃಹಗಳ ಒಳಾಂಗಣವನ್ನು ಮತ್ತು ಗಗನಚುಂಬಿ ಕಟ್ಟಡಗಳೊಳಗೂ ವಿನ್ಯಾಸ ಮಾಡುತ್ತದೆ ಹಾಗೂ ಅದರ ವಿಶೇಷವಾಗಿ ರೂಪಿಸಲಾದ ಉತ್ಪನ್ನಗಳು ಅರ್ಮಾನಿ/ಕಾಸ ಗೃಹಬಳಕೆಯ ಸಂಗ್ರಹದಿಂದಾಗಿದೆ.[] ಬುರ್ಜ್ ಖಲಿಫ ಅರ್ಮಾನಿ ರೆಸಿಡೆನ್ಸಸ್ ರೋಡ್ ಶೊ ಮಿಲನ್, ಲಂಡನ್, ಜೆದಾಹ್, ಮೋಸ್ಕೊ ಮತ್ತು ದೆಹಲಿ ಮೊದಲಾದ ಕಡೆಗಳಿಗೆ ಪ್ರವಾಸ ಮಾಡಿತು. ಬ್ರ್ಯಾಶ್ ಬ್ರ್ಯಾಂಡ್ಸ್ ರೂಪಿಸಿದ ಪ್ರದರ್ಶನವು[] ಅದರ ಸೈನ್ಸ್, ಎಕ್ಸಿಬಿಟ್ಸ್ ಮತ್ತು ಪಾಯಿಂಟ್ ಆಫ್ ಪರ್ಚೇಸ್ (POP) ಡಿಸ್‌ಪ್ಲೇಸ್‌ನಿಂದಾಗಿ ಇಂಟರ್‌ನ್ಯಾಷನಲ್ ಡಿಸೈನ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.[] ಲಂಡನ್ ಈವೆಂಟ್ಅನ್ನು ನ್ಯೂ ಬಾಂಡ್ ಸ್ಟ್ರೀಟ್‌ನಲ್ಲಿ ಅರ್ಮಾನಿ ಕಾಸ ಶೊರೂಮ್‌ನಲ್ಲಿ ನಡೆಸಲಾಯಿತು.[] ಅರ್ಮಾನಿ ಹೋಟೆಲ್ ಬುರ್ಜ್ ಖಲಿಫದಲ್ಲಿ 2010ರ ಎಪ್ರಿಲ್ 27ರಂದು ಉದ್ಘಾಟಿಸಲ್ಪಟ್ಟಿತು.[]

ತುಪ್ಪುಳದ ವಿವಾದ

[ಬದಲಾಯಿಸಿ]

2007ರ ಜುಲwನಲ್ಲಿ ಜಾರ್ಜಿಯೊ ಅರ್ಮಾನಿಯು ಟೈಮ್ ಪತ್ರಿಕೆಗೆ, ಪೀಪಲ್ ಫಾರ್ ದ ಎಥಿಕಲ್ ಟ್ರೀಟ್ಮೆಂಟ್ ಆಫ್ ಆನಿಮಲ್ಸ್ (PETA) ಅಂಶಗಳನ್ನು ಗಮನಿಸಿ “ನನಗೆ ತುಪ್ಪುಳವನ್ನು ಬಳಸಬಾರದೆಂಬುದು ಮನವರಿಕೆಯಾಯಿತು" ಎಂದು ಹೇಳಿದ್ದಾನೆ.[] ಆದರೆ PETA ಪ್ರಕಾರ, ಅರ್ಮಾನಿಯ ಫಾಲ್ 2008ರ ಸಂಗ್ರಹವು ಮಕ್ಕಳ ತುಪ್ಪುಳದ ಕೋಟುಗಳು, ಹೂಗಳನ್ನು ಚಿತ್ರಿಸಿರುವ ತುಪ್ಪುಳಗಳು, ತುಪ್ಪುಳದಿಂದ ಹೊಲಿದ ಸ್ಕರ್ಟುಗಳು ಮತ್ತು ತುಪ್ಪುಳದಿಂದ ಸಿದ್ಧಗೊಳಿಸಿದ ಜಾಕೆಟ್‌ಗಳು ಮೊದಲಾದವುಗಳನ್ನು ಒಳಗೊಂಡಿದೆ.[೧೦]

ಇವನ್ನೂ ಗಮನಿಸಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. [೧] Hoovers.com
  2. "ಡಿಸೈನರ್ ಕ್ಲೋತಿಂಗ್ ಅಟ್ ಅರ್ಮಾನಿ ಎಕ್ಸ್‌ಚೇಂಜ್‍‌‌‌". Archived from the original on 2010-01-06. Retrieved 2021-08-09.
  3. "ಉದ್ಘಾಟನೆಯಾದ ಅರ್ಮಾನಿ ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳು". Archived from the original on 2009-08-28. Retrieved 2010-06-22.
  4. ೪.೦ ೪.೧ ಅರ್ಮಾನಿ ಹೋಟೆಲ್‌ಗಳು, ರೆಸಾರ್ಟ್‌ಗಳು ಮತ್ತು ವಸತಿ ಗೃಹಗಳ ಅಧಿಕೃತ ವೆಬ್‌ಸೈಟ್
  5. "ಬ್ರ್ಯಾಶ್ ಬ್ರ್ಯಾಂಡ್‌ಗಳಲ್ಲಿ ಬುರ್ಜ್ ಖಲಿಫ ಅರ್ಮಾನಿ ವಸತಿ ಗೃಹಗಳ ಪ್ರದರ್ಶನ". Archived from the original on 2012-12-25. Retrieved 2010-06-22.
  6. "ಇಂಟರ್‌ನ್ಯಾಷನಲ್ ಡಿಸೈನ್ ಪ್ರಶಸ್ತಿಗಳನ್ನು ಪಡೆದುಕೊಂಡ ಬುರ್ಜ್ ಖಲಿಫ ಅರ್ಮಾನಿ ವಸತಿ ಗೃಹಗಳು". Archived from the original on 2013-06-18. Retrieved 2021-08-09.
  7. "ಬುರ್ಜ್ ಖಲಿಫ ಅರ್ಮಾನಿ ವಸತಿ ಗೃಹಗಳು". Archived from the original on 2012-10-28. Retrieved 2023-04-08.
  8. http://www.jpost.com/MiddleEast/Article.aspx?id=174074
  9. ಬೆಟ್ಸ್, ಕ್ಯಾಟೆ. "ಎ ಸ್ಟ್ಯಾಂಡಿಂಗ್ ಒ ಫಾರ್ ಲ್ಯಾಕ್ರೊಯಾಕ್ಸ್" Archived 2010-10-10 ವೇಬ್ಯಾಕ್ ಮೆಷಿನ್ ನಲ್ಲಿ.. ಟೈಮ್ , ಜುಲೈ 4, 2007. 2009ರ ಡಿಸೆಂಬರ್ 9ರಂದು ಸಂಕಲನಗೊಂಡಿತು.
  10. ಡೋರೆ, ಕ್ರಿಶ್ಟಿನ್. "PETA ಟು ಟಾಮ್‌ಕ್ಯಾಟ್: ಡೋಂಟ್ ಡ್ರೆಂಚ್ ಸೂರಿ ಇನ್ ಅರ್ಮಾನಿ ಫರ್!" ದ PETA ಫೈಲ್ಸ್, ಸೆಪ್ಟೆಂಬರ್ 24, 2008. 2009ರ ಡಿಸೆಂಬರ್ 9ರಂದು ಸಂಕಲನಗೊಂಡಿತು.


ಹೆಚ್ಚಿನ ಓದಿಗಾಗಿ

[ಬದಲಾಯಿಸಿ]

ಹೊರಗಿನ ಕೊಂಡಿಗಳು

[ಬದಲಾಯಿಸಿ]
"https://kn.wikipedia.org/w/index.php?title=ಅರ್ಮಾನಿ&oldid=1248147" ಇಂದ ಪಡೆಯಲ್ಪಟ್ಟಿದೆ