ವಿಷಯಕ್ಕೆ ಹೋಗು

ಅರುಣ್ ಯೋಗಿರಾಜ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅರುಣ್ ಯೋಗಿರಾಜ್
Born1983
Nationalityಭಾರತೀಯ
Occupation(s)ಶಿಲ್ಪಿ, ಕಲಾವಿದ
Notable work
Spouseವಿಜೇತಾ
Relativesಸೂರ್ಯಪ್ರಕಾಶ್ ಯೋಗಿರಾಜ್ (ಸಹೋದರ)
Awards
  • ಮೈಸೂರು ಜಿಲ್ಲಾಡಳಿತದಿಂದ ರಾಜ್ಯೋತ್ಸವ ಪ್ರಶಸ್ತಿ
  • ಕರ್ನಾಟಕ ಸರ್ಕಾರದಿಂದ ಜಕಣಾಚಾರಿ ಪ್ರಶಸ್ತಿ
  • ಶಿಲ್ಪಿಗಳ ಸಂಘದಿಂದ ಶಿಲ್ಪಾ ಕೌಸ್ತುಭ ಸನ್ಮಾನ
Websitehttps://arunyogiraj.com/
ರಾಮಲಲ್ಲಾ, ರಾಮಮಂದಿರದಲ್ಲಿ ಪ್ರತಿಷ್ಠಾಪನೆಯಾದ ಮುಖ್ಯ ದೇವತೆಯ 5 ಅಡಿಯ ಮೂರ್ತಿ.

ಅರುಣ್ ಯೋಗಿರಾಜ್ (ಜನನ 1983) ಮೈಸೂರಿನ ಒಬ್ಬ ಭಾರತೀಯ ಶಿಲ್ಪಿ. ಅವರು ಕೆತ್ತಿದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಮೂರ್ತಿಯನ್ನು ನವದೆಹಲಿಯ ಇಂಡಿಯಾ ಗೇಟ್[]ನ ಅಮರ್ ಜವಾನ್ ಜ್ಯೋತಿಯ ಹಿಂಭಾಗದಲ್ಲಿ ಸ್ಥಾಪಿಸಲಾಗಿದೆ. ಇವರು ಕೆತ್ತಿದ ಹಿಂದೂ ದೇವರು ರಾಮನ ಬಾಲ ರೂಪವಾದ ರಾಮ ಲಲ್ಲಾ ವಿಗ್ರಹವನ್ನು ಅಯೋಧ್ಯೆಯ ರಾಮಮಂದಿರದಲ್ಲಿ ಪ್ರತಿಷ್ಠಾಪಿಸಲಾಗಿದೆ.[][]

ಶಿಕ್ಷಣ ಮತ್ತು ಹಿನ್ನೆಲೆ

[ಬದಲಾಯಿಸಿ]

ಇವರು ಮೈಸೂರಿನ ಅಗ್ರಹಾರದವರು.[] ಕರ್ನಾಟಕ ರಾಜ್ಯದ ಮೈಸೂರು ನಗರದ ಐದು ತಲೆಮಾರಿನ ಶಿಲ್ಪಿಗಳ ಕುಟುಂಬದಿಂದ ಬಂದವರು. ಅರುಣ್ ಅವರ ತಂದೆ ಯೋಗಿರಾಜ್ ಮತ್ತು ತಾತ ಬಸವಣ್ಣ ಶಿಲ್ಪಿ ಕೂಡ ಪ್ರಸಿದ್ಧ ಶಿಲ್ಪಿಗಳು.[] 2008 ರಿಂದ ಪೂರ್ಣ ಶಿಲ್ಪಕಲೆಯಲ್ಲಿ ತೊಡಗಿಸಿಕೊಳ್ಳುವ ಮೊದಲು ಅರುಣ್ ತನ್ನ ಎಂಬಿಎ ಶಿಕ್ಷಣವನ್ನು ಪೂರ್ಣಗೊಳಿಸಿದ್ದರು ಮತ್ತು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿದ್ದರು ಅಕ್ಟೋಬರ್ 2021 ರಲ್ಲಿ ಅರುಣ್ ಸುಭಾಷ್ ಚಂದ್ರ ಬೋಸ್ ಪ್ರತಿಮೆಯನ್ನು ಕೆತ್ತುವ ಸಂದರ್ಭದಲ್ಲೇ ಅವರ ತಂದೆ ಯೋಗಿರಾಜ್ ಶಿಲ್ಪಿ ನಿಧನರಾದರು[] ಅರುಣ್ ಅವರಿಗೆ ಒಬ್ಬ ಸಹೋದರ ಮತ್ತು ಸಹೋದರಿ ಇದ್ದಾರೆ. ಅರುಣ್ ಅವರ ಪತ್ನಿ ವಿಜೇತಾ.[] ಶಿಲ್ಪಿಯೂ ಆಗಿರುವ ಅವರ ಸಹೋದರ ಸೂರ್ಯಪ್ರಕಾಶ್ ರೊಂದಿಗೆ ಅರುಣ್ ಕುಟುಂಬ ಮೈಸೂರಿನಲ್ಲಿ ವಾಸವಾಗಿದ್ದಾರೆ.

ವಿಶಿಷ್ಟ ಕಾರ್ಯಗಳು

[ಬದಲಾಯಿಸಿ]
ನವದೆಹಲಿಯ ಇಂಡಿಯಾ ಗೇಟ್‌ನಲ್ಲಿರುವ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆ

ಅರುಣ್ ಯೋಗಿರಾಜ್ ಜನವರಿ ೨೨ ೨೦೨೪ರಲ್ಲಿ ಪ್ರತಿಷ್ಠಾಪನೆಗೊಂಡ ರಾಮಮಂದಿರದಲ್ಲಿನ ಬಾಲರಾಮನ ವಿಗ್ರವನ್ನು ಕೆತ್ತಿದ ಶಿಲ್ಪಿ. . 51 ಇಂಚು ಎತ್ತರದ ವಿಗ್ರಹವನ್ನು ಅಯೋಧ್ಯೆಯ ರಾಮಮಂದಿರದಲ್ಲಿ ಸ್ಥಾಪಿಸಲಾಗಿದೆ.[]

ಅವರ ಇತರ ಶಿಲ್ಪಕೃತಿಗಳೆಂದರೆ,

  • ಕೇದಾರನಾಥದಲ್ಲಿ ೧೨ ಅಡಿ ಎತ್ತರದ ೩-ಡಿ ಆದಿ ಶಂಕರಾಚಾರ್ಯರ ಪ್ರತಿಮೆ,[]
  • ಮೈಸೂರು ಜಿಲ್ಲೆಯ ಚುಂಚನಕಟ್ಟೆಯಲ್ಲಿರುವ ೨೧ ಅಡಿ ಎತ್ತರದ ಹನುಮಾನ್ ಪ್ರತಿಮೆ,
  • ಮೈಸೂರಿನಲ್ಲಿ ಬಿ. ಆರ್ ಅಂಬೇಡ್ಕರ್ ಅವರ 15 ಅಡಿ ಎತ್ತರದ ಶಿಲ್ಪ
  • ಮೈಸೂರಿನಲ್ಲಿ ಸ್ವಾಮಿ ರಾಮಕೃಷ್ಣ ಪರಮಹಂಸರ ಬಿಳಿ ಅಮೃತಶಿಲಾ ಪ್ರತಿಮೆ,
  • ನಂದಿಯ ಆರು ಅಡಿ ಏಕಶಿಲಾ ಪ್ರತಿಮೆ
  • ಬನಶಂಕರಿ ದೇವಿಯ ಆರು ಅಡಿ ಎತ್ತರದ ಪ್ರತಿಮೆ.
  • ೨೦೧೬ ರಲ್ಲಿ ಅನಾವರಣಗೊಂಡ ಜಯಚಾಮರಾಜೇಂದ್ರ ಒಡೆಯರ್ ಅವರ ೧೪.೫ ಅಡಿ ಎತ್ತರದ ಬಿಳಿ ಅಮೃತಶಿಲೆ ಪ್ರತಿಮೆ
  • ಮೈಸೂರು ರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 5 ಅಡಿ ಪ್ರತಿಮೆ[೧೦]

ಪ್ರಶಸ್ತಿಗಳು

[ಬದಲಾಯಿಸಿ]

೨೦೧೪ ರಲ್ಲಿ ಭಾರತ ಸರ್ಕಾರದಿಂದ ದಕ್ಷಿಣ ವಲಯ ಯುವ ಕಲಾವಿದ ಪ್ರಶಸ್ತಿ[೧೧] ಮತ್ತು ಮೈಸೂರು ಜಿಲ್ಲಾಡಳಿತದಿಂದ ರಾಜ್ಯೋತ್ಸವ ಪ್ರಶಸ್ತಿ,[೧೨] ೨೦೨೧ ರಲ್ಲಿ ಕರ್ನಾಟಕ ಸರ್ಕಾರದ ಜಕಣಾಚಾರಿ ಪ್ರಶಸ್ತಿಯನ್ನು ಪಡೆದರು.[೧೩] [೧೪] ಶಿಲ್ಪಿಗಳ ಸಂಘದಿಂದ ಶಿಲ್ಪಾ ಕೌಸ್ತುಭ ಸನ್ಮಾನವನ್ನೂ ಪಡೆದಿದ್ದಾರೆ[೧೩]

ಉಲ್ಲೇಖಗಳು

[ಬದಲಾಯಿಸಿ]
  1. "Arun Yogiraj: Meet the MBA-turned sculptor whose Ram idol has been selected for Ayodhya temple". The Economic Times. 2024-01-02. ISSN 0013-0389. Retrieved 2024-01-02.
  2. "Who is Arun Yogiraj, sculptor whose Ram Lalla idol selected for grand temple in Ayodhya?". Hindustan Times. 2024-01-02. Retrieved 2024-01-02.
  3. "Renowned sculptor Arun Yogiraj's idol of Ram Lalla chosen for Ayodhya's grand temple". Hindustan Times. 2024-01-02. Retrieved 2024-01-02.
  4. "City sculptor carves 12-ft. statue of 'Adi Shankaracharya'". Star of Mysore. 2021-06-13. Retrieved 2024-01-02.
  5. "Ayodhya's grand temple: Who is sculptor Arun Yogiraj whose Ram Lalla idol got selected for Garbha Griha". Business Today. 2024-01-02. Retrieved 2024-01-02.
  6. Correspondent, Special (2021-10-02). "Sculptor Yogiraj Shilpi dead". The Hindu. ISSN 0971-751X. Retrieved 2024-01-02. {{cite news}}: |last= has generic name (help)
  7. "Sculptor Arun Yogiraj's Ram Lalla will now be Ayodhya Ram Mandir's cynosure". Moneycontrol. 2024-01-03. Retrieved 2024-01-03.
  8. "Ayodhya Ram Mandir: Facts And Details You Must Know". Retrieved 2024-01-21.
  9. Jaiswal, Arushi (2024-01-01). "Ayodhya Temple: Mysuru sculptor Arun Yogiraj's Ram Lalla idol selected for January 22 installation". www.indiatvnews.com. Retrieved 2024-01-02.
  10. "His deft hands shaping Nalwadi's five-feet bust". Star of Mysore. 2022-02-04. Retrieved 2024-01-02.
  11. "Who is Arun Yogiraj, 5th Generation Sculptor Whose Idol Has Been Selected for Ayodhya's Ram Temple". News18. 2024-01-02. Retrieved 2024-01-02."Who is Arun Yogiraj, 5th Generation Sculptor Whose Idol Has Been Selected for Ayodhya's Ram Temple". News18. 2024-01-02. Retrieved 2024-01-02.
  12. Kumar, R. Krishna (2021-11-06). "Meet the man who sculpted the statue in Kedarnath unveiled by Modi". The Hindu. ISSN 0971-751X. Retrieved 2024-01-02.
  13. ೧೩.೦ ೧೩.೧ Mehrotra, Puja (2022-09-13). "MBA to master sculptor — Arun Yogiraj's journey to pulling off 28-ft Netaji statue at India Gate". ThePrint. Retrieved 2024-01-02.Mehrotra, Puja (2022-09-13). "MBA to master sculptor — Arun Yogiraj's journey to pulling off 28-ft Netaji statue at India Gate". ThePrint. Retrieved 2024-01-02.
  14. "ಆರ್ಕೈವ್ ನಕಲು". Archived from the original on 2024-01-02. Retrieved 2024-01-23.