ಅಮೃತಾ ಶೇರ್ಗಿಲ್

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search
ಅಮೃತಾ ಶೇರ್ಗಿಲ್
Amrita Sher-Gil, painter, (1913-1941).jpg
Born(೧೯೧೩-೦೧-೩೦)೩೦ ಜನವರಿ ೧೯೧೩
DiedDecember 5, 1941(1941-12-05) (aged 28)
Occupationಮುದ್ರಕಿ, ಚಿತ್ರಕಾರಿಣಿ
Spouse(s)none

ಅಮೃತಾ ಶೇರ್ಗಿಲ್ (ಜನವರಿ ೩೦, ೧೯೧೩[೧], – ಡಿಸೆಂಬರ್ ೫, ೧೯೪೧) ಭಾರತದ ಪ್ರಸಿದ್ಧ ಕಲಾಕಾರರು ಹಾಗು ೨೦ನೆಯ ಶತಮಾನದ ಮಹಾನ್ ಮಹಿಳಾ ಚಿತ್ರಕಾರಿಣಿ ಎಂದು ಹೇಳಲಾಗುತ್ತದೆ. ಅಮೃತಾ ಶೇರ್ಗಿಲ್ ಅವರನ್ನು ಭಾರತದ ದುಬಾರಿ ಚಿತ್ರಕಾರಿಣಿ ಎಂದೂ ಹೇಳಲಾಗುತದೆ[೨].

ಬಾಲ್ಯ ಹಾಗು ವ್ಯಾಸಾಂಗ[ಬದಲಾಯಿಸಿ]

ಅಮೃತಾ ಶೇರ್ಗಿಲ್ ಅವರು ಬುಡಾಪೆಸ್ಟ್, ಹಂಗೇರಿಯಲ್ಲಿ ಜನಿಸಿದರು[೩]. ಅವರ ತಂದೆ ಉಂರಾವೊ ಸಿಂಹ ಶೇರ್ಗಿಲ್ ಒಬ್ಬ ಸಂಪನ್ನ ಸಂಸ್ಕೃತ ಹಾಗು ಪರ್ಶಿಯನ್ ಪಂಡಿತ ಹಾಗೂ ಅವರ ತಾಯಿ ಮೇರಿ ಅಂಟೋಯ್ನೆಟ್ಟೆ ಗೊಟ್ಟೆಸ್ಮಾನ್ನ್ ಒಬ್ಬ ಹಂಗೇರಿಯ ಯೆಹೂದಿ ಅಪೆರಾ ಗಾಯಕಿ. ಅಮೃತಾ ಇಬ್ಬರು ಸಹೋದರಿಯರಲ್ಲಿ ಹಿರಿಯರು. ಅವರ ಕಿರಿಯ ಸಹೋದರಿ ಇಂದಿರಾ ಸುಂದರಾಮ್. ೧೯೨೧ದಲ್ಲಿ ಅಮೃತಾ ಕುಟುಂಬದೊಂದಿಗೆ ಹಂಗೇರಿಯಿಂದ ಶಿಮ್ಲಾಕ್ಕೆ ವಲಸೆ ಬಂದರು. ಶಿಮ್ಲಾದಲ್ಲಿ ಅವರು ಪಿಯಾನೊ ಹಾಗೂ ವಾಯೊಲಿನ್ ಕಲಿಯಲು ಪ್ರಾರಂಭಿಸಿದರು. ತಮ್ಮ ೯ನೆಯ ವಯಸ್ಸಿನಲ್ಲಿ ತಂಗಿ ಇಂದಿರಾಜೊತೆಗೆ ಸೇರಿ ಸಂಗೀತ ಕಛೇರಿ ಹಾಗು ನಾಟಕಗಳಲ್ಲಿ ಪಾತ್ರವಹಿಸಲು ಪ್ರಾರಂಭಿಸಿದರು. ಅಮೃತಾ ಚಿಕ್ಕಂದಿನಿಂದಲೂ ಚಿತ್ರ ಬಿಡಿಸುತ್ತಿದ್ದರಾದರೂ ಶಾಸ್ತ್ರೋಕ್ತವಾಗಿ ತಮ್ಮ ೮ನೆಯ ವಯಸ್ಸಿನಲ್ಲಿ ಕಲಿಯಲು ಆರಂಭಿಸಿದರು[೪]. ಅಮೃತಾ ೧೯೨೪ರಲ್ಲಿ ತಾಯಿಯೊಂದಿಗೆ ಇಟಲಿಗೆ ಬಂದು ಅಲ್ಲಿನ ಪ್ರಸಿದ್ದ ಸಂತ ಅನುನ್ಙಿಟಾ ಚಿತ್ರಕಲಾ ಶಾಲೆಗೆ ಸೇರಿಸಿದರು. ತಮ್ಮ ೧೬ನೆಯ ವಯಸ್ಸಿನಲ್ಲಿ ತಾಯಿಯೊಂದಿಗೆ ಯುರೋಪ್ಗೆ ಬಂದು ಪ್ಯಾರಿಸ್ನಲ್ಲಿ ಉನ್ನತ ಅಬ್ಯಾಸಕ್ಕೆ ಸೇರಿದರು.

ವೃತ್ತಿಜೀವನ[ಬದಲಾಯಿಸಿ]

೧೯೩೭ರಲ್ಲಿ ಅಮೃತಾ ಭಾರತಕ್ಕೆ ಹಿಂತಿರುಗಲು ನಿರ್ಧರಿಸಿದರು. ಭಾರತಕ್ಕೆ ಬಂದಕೊಡಲೇ ಅವರಿಗೆ ಭಾರತೀಯ ಸಾಂಪ್ರದಾಯಿಕ ಕಲೆಯ ಪರಿಚಯವಾಯಿತು. ಅಂದು ಪ್ರಾರಂಭಗೊಂಡ ಭಾರತೀಯ ಸಾಂಪ್ರದಾಯಿಕ ಕಲೆಯ ಪ್ರೇಮ ಜೀವನದ ಕೊನೆಯವರೆಗೊ ಮುಂದುವರಿಯಿತು. ೧೯೩೬ರಲ್ಲಿ ವಿಮರ್ಶಕ ಹಾಗು ಸಂಗ್ರಹಕಾರ ಕಾರ್ಲ್ ಕಂಡಾಲವಾಲರವರು ಅಮೃತಾರಿಗೆ ಅವರ ಭಾರತೀಯ ಮೂಲದ ಹಾಗೂ ಅವರ ಕಲೆಯ ಬಗೆಗಿನ ಒಲವಿನ ಬಗ್ಗೆ ಪ್ರೋತ್ಸಾಹಿಸಿದರು[೫]. ಅಮೃತಾರ ಮೇಲೆ ಮೊಘಲಾಯಿ ಕಲೆ ಹಾಗೂ ಪಹಾರಿ ಕಲಾ ಶಾಲೆಗಳು ಪ್ರಭಾವ ಬೀರಿದವು ಜೊತೆಗೆ ಅಜಂತಾ ಗುಹೆಯ ಗೋಡೆಯ ಮೇಲಿನ ಚಿತ್ರಗಳು ಪ್ರಭಾವ ಬೀರಿದವು. ೧೯೩೭ರಲ್ಲಿ ಅವರು ದಕ್ಷಿಣ ಭಾರತದ ಪ್ರವಾಸ ಕೈಗೊಂಡರು[೫]. ೧೯೩೮ರಲ್ಲಿ ಅವರು ತಮ್ಮ ಪ್ರಥಮ ಸೋದರ ಬಾಂಧವ್ಯದ ಡಾ|| ವಿಕ್ಟರ್ ಇಗನ್ ರನ್ನು ಮದುವೆ ಆದರು. ನಂತರ ತಂದೆಯ ಊರಾದ ಉತ್ತರ ಪ್ರದೇಶಘೊರಕ್ ಪುರದಲ್ಲಿರುವ ಸರಯಾದಲ್ಲಿ ನೆಲಸಿದರು. ೧೯೪೧ರಲ್ಲಿ ದಂಪತಿಗಳು ಲಾಹೊರ್ ಗೆ ವಲಸೆ ಹೋದರು. ಅವರು ಲಾಹೊರ್ ನ ೨೩, ಗಂಗಾರಾಮ್ ಮಾಂಶನ್ಸ್, ದ ಮಾಲ್, ಲಾಹೊರಲ್ಲಿ ನೆಲೆಸಿದ್ದರು[೬]. ಅವರು ತಮ್ಮ ಗಂಡಸರ ಹಾಗೂ ಹೆಂಗಸರ ಜೊತೆಗಿನ ಸಂಬಂಧಕ್ಕಾಗಿ ಪ್ರಖ್ಯಾತರಗಿದ್ದರು[೭]. ೧೯೪೧ರಲ್ಲಿ ತಮ್ಮ ಮೊದಲನೆಯ ಪ್ರದರ್ಶನದ ಕೆಲವೇದಿನಗಳ ಮೊದಲು ಗಂಭೀರವಾಗಿ ಅಸ್ವಸ್ಥರಾದರು ಹಾಗೂ ಪ್ರಜ್ಞಾಶೂನ್ಯರಾದರು[೭] ಹಾಗೂ ಡಿಸೆಂಬರ್ ೬, ೧೯೪೧ರ ಮದ್ಯರಾತ್ರಿ ನಿಧನರಾದರು. ಅವರನ್ನು ಡಿಸೆಂಬರ್ ೭, ೧೯೪೧ರಂದು ಲಾಹೊರ್ನಲ್ಲಿ ಸಮಾಧಿ ಮಾಡಲಾಯಿತು[೮].

ಛಾಯಾಂಕಣ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

Paintings[ಬದಲಾಯಿಸಿ]