ವಿಷಯಕ್ಕೆ ಹೋಗು

ಅಮೀರ್‍ಬಾಯಿ ಕರ್ನಾಟಕಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಮೀರಬಾಯಿ ಕರ್ನಾಟಕಿ
ಜನನ1906
ಬೀಳಗಿ, ಬಿಜಾಪುರ(ಈಗ ಬಾಗಲಕೋಟೆ), ಕರ್ನಾಟಕ
ಮರಣ3 ಮಾರ್ಚ್, 1965(ವಯಸ್ಸು 59)
ಸಂಗೀತ ಶೈಲಿಸಿನಿಮಾ ಸಂಗೀತ, ಜನಪದ ಮತ್ತು ಶಾಸ್ತ್ರೀಯ ಸಂಗೀತ
ವೃತ್ತಿನಟಿ, ಗಾಯಕಿ
ಸಕ್ರಿಯ ವರ್ಷಗಳು1932- 1961

ಅಮೀರಬಾಯಿ ಕರ್ನಾಟಕಿ(೧೯೦೬-೧೯೬೫), ಕನ್ನಡ ಕೋಕಿಲ ಎಂದು ಪ್ರಸಿದ್ಧರಾಗಿದ್ದ ಹಿಂದಿ ಚಿತ್ರರಂಗದ ಖ್ಯಾತ ನಟಿ ಮತ್ತು ಗಾಯಕಿ. ಹಿಂದಿ ಮಾತ್ರವಲ್ಲದೆ, ಗುಜರಾತಿ ಹಾಗೂ ತಮ್ಮ ಮಾತೃಭಾಷೆ ಕನ್ನಡದಲ್ಲಿಯೂ ಹಾಡುಗಳನ್ನು ಹಾಡಿ ತಮ್ಮದೇ ಆದ ಅಭಿಮಾನಿವರ್ಗವನ್ನು ಹೊಂದಿದ್ದವರು.

ಹುಟ್ಟು ಮತ್ತು ಬಾಲ್ಯ[ಬದಲಾಯಿಸಿ]

ಅಮೀರಬಾಯಿ ಹುಟ್ಟಿದ್ದು ಅಂದಿನ ಬಿಜಾಪುರ ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ, ಮಧ್ಯಮವರ್ಗದ ಕುಟುಂಬವೊಂದರಲ್ಲಿ. ತಂದೆ ಹಸನ್ ಸಾಬ್, ತಾಯಿ ಅಮೀನ. ಐದು ಜನ ಅಕ್ಕತಂಗಿಯರಲ್ಲಿ ಅಕ್ಕ ಗೌಹರ್ ಬಾಯಿ ಮತ್ತು ತಂಗಿ ಅಮೀರಬಾಯಿ ಚಿತ್ರರಂಗದಲ್ಲಿ ಹೆಸರು ಮಾಡಿದರು.[೧] ತಮ್ಮ ೧೫ನೇ ವಯಸ್ಸಿನಲ್ಲಿ ಬಾಂಬೆಗೆ ಬಂದಿಳಿದ ಬಾಯಿ, ೧೯೪೦ರ ದಶಕದ ಪ್ರಮುಖ ತಾರೆಯಾಗಿ ಮುನ್ನೆಲೆಗೆ ಬಂದರು.

ನಟಿ-ಗಾಯಕಿ[ಬದಲಾಯಿಸಿ]

ಆಗೆಲ್ಲ ನಟಿಯಾಗಲು ಬಯಸುವವರು ಹಾಡಲು ತಿಳಿದಿರಬೇಕು ಎಂಬ ನಿಯಮ ಇದ್ದ ಕಾಲ. ಅಂತಹ ಮೊದಲ ಪ್ರತಿಭಾವಂತರ ಪಡೆಯಲ್ಲಿ ಅಮೀರಬಾಯಿ ಕೂಡ ಒಬ್ಬರಾಗಿದ್ದರು. ೧೯೩೪ರಲ್ಲಿ ಮೊದಲ ಬಾರಿಗೆ ವಿಷ್ಣುಭಕ್ತಿ ಎಂಬ ಚಿತ್ರದಲ್ಲಿ ನಟಿಸಿದರು. ಅನೇಕ ಚಿತ್ರಗಳಲ್ಲಿ ಹಾಡುವ ಅವಕಾಶಗಳೂ ಸಿಕ್ಕಿದವು. ಆದರೆ ಗಾಯಕಿಯಾಗಿ ಮೊದಲ ಬಾರಿಗೆ ಜನಪ್ರಿಯತೆಯ ಉತ್ತುಂಗಕ್ಕೇರಿದ ಚಿತ್ರವೆಂದರೆ ೧೯೪೩ರ "ಕಿಸ್ಮತ್". ಈ ಚಿತ್ರದ ಎಲ್ಲ ಹಾಡುಗಳನ್ನು ಬಾಯಿ ಅವರಿಂದಲೇ ಹಾಡಿಸಿದವರು ಸಂಗೀತ ನಿರ್ದೇಶಕ ಅನಿಲ್ ಬಿಸ್ವಾಸ್. ಈ ಚಿತ್ರ ಬಾಂಬೆ ಟಾಕೀಸ್ ಸಂಸ್ಥೆ ಮಾತ್ರವೇ ಅಲ್ಲ, ಹಿಂದಿ ಚಿತ್ರರಂಗದ ಮೊದಲ ಬ್ಲಾಕ್ ಬಸ್ಟರ್ ಎನಿಸಿತು. ಅಲ್ಲಿಂದ ಲತಾ ಮಂಗೇಶ್ಕರ್, ನೂರ್ ಜಹಾನ್ ರಿಂದ ಹಿನ್ನೆಲೆ ಗಾಯನ ವೃತ್ತಿಯಾಗಿ ನೆಲೆಗೊಳ್ಳುವವರೆಗೂ ಅಮೀರಬಾಯಿ 'ನಟಿಸುವ ಹಾಡುಹಕ್ಕಿ'ಯಾಗಿ ಮಿಂಚುತ್ತಿದ್ದರು.

ಉಲ್ಲೇಖಗಳು[ಬದಲಾಯಿಸಿ]