ಅಮಿತ್ ಮಿಶ್ರಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಅಮಿತ್ ಮಿಶ್ರಾ, ಓರ್ವ ಭಾರತೀಯ ಕ್ರಿಕೆಟ್ ಆಟಗಾರ. ಇವರು ಬಲಗೈ ಲೆಗ್ ಸ್ಪಿನ್ನ್ ಬೌಲರ್ ಹಾಗು ಬಲಗೈ ಕೆಳ ಕ್ರಮಾಂಕದ ಬ್ಯಾಟ್ಸಮಾನ್. ರಣಜಿ ಟ್ರೋಫೀ‌‌ಯಲ್ಲಿ ಹರಿಯಾಣ ತಂಡಕ್ಕೆ ಆಡುತ್ತಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನ‌‌‍ಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ಪರ ಆಡುತ್ತಾರೆ.

ಅಮಿತ್ ಮಿಶ್ರಾ

ಆರಂಭಿಕ ಜೀವನ[ಬದಲಾಯಿಸಿ]

ಅಮಿತ್ ಮಿಶ್ರಾ ನವಂಬರ್ ೨೪, ೧೯೮೨ ರಂದು ದೆಹಲಿಯಲ್ಲಿ ಜನಿಸಿದರು. ೨೦೦೨ರಲ್ಲಿ ಇವರು ಭಾರತೀಯ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದರೂ ಆಡಲು ಅವಕಾಶ ಸಿಕ್ಕಿರಲಿಲ್ಲ. ನಂತರ ೨೦೦೩ರಲ್ಲಿ ಏಕದಿನ ಕ್ರಿಕೆಟ್‍ನಲ್ಲಿ ಇವರಿಗೆ ಅವಕಾಶ ಲಭಿಸಿತು. ನಂತರ ೨೦೦೮ರಲ್ಲಿ ಟೆಸ್ಟ್ ಕ್ರಿಕೆಟ್‍ನಲ್ಲಿ ಆಡಲೂ ಅವಕಾಶ ಲಭಿಸಿತು.[೧]

ವೃತ್ತಿ ಜೀವನ[ಬದಲಾಯಿಸಿ]

ಐಪಿಎಲ್ ಕ್ರಿಕೆಟ್[ಬದಲಾಯಿಸಿ]

ಮೇ ೧೧, ೨೦೦೮ರಂದು ಜೈಪುರ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ೩೩ನೇ ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ತಂಡದಿಂದ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಪಾದಾರ್ಪಣೆ ಮಾಡಿದರು. ಐಪಿಎಲ್‌ನಲ್ಲಿ ಇವರು ಮೂರು ಬಾರಿ ಹ್ಯಾಟ್ರಿಕ್ ವಿಕೇಟ್ ಪಡೆದ ಮೊದಲ ಬೌಲರ್.[೨][೩][೪]

ಅಂತರರಾಷ್ಟ್ರೀಯ ಕ್ರಿಕೆಟ್[ಬದಲಾಯಿಸಿ]

ಏಪ್ರಿಲ ೧೩, ೨೦೦೩ರಲ್ಲಿ ಢಾಕಾ ಬಾಂಗ್ಲಾದೇಶದಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ನಡೆದ ಎರಡನೇ ಏಕದಿನ ಪಂದ್ಯದ ಮೂಲಕ ಅಮಿತ್ ಮಿಶ್ರಾ ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು. ನಂತರ ಅಕ್ಟೋಬರ್ ೧೭, ೨೦೦೮ರಲ್ಲಿ ಮೊಹಾಲಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಎರಡನೇ ಟೆಸ್ಟ್ ಕ್ರಿಕೆಟ್ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪನೆ ಮಾಡಿದರು. ತಮ್ಮ ಪಾದಾರ್ಪನೆಯ ಪಂದ್ಯದಲ್ಲಿ ಇವರು ಐದು ಒಟ್ಟು ಏಳು ವಿಕೇಟ್‌ಗಳನ್ನು ಪಡೆದರು. ನಂತರ ಜೂನ್ ೧೩, ೨೦೧೦ರಲ್ಲಿ ಹರಾರೆಯಲ್ಲಿ ಜಿಂಬಾಬ್ವೆ ವಿರುದ್ಧ ನಡೆದ ಎರಡನೇ ಟಿ-೨೦ ಕ್ರಿಕೆಟ್ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಟಿ-೨೦ ಕ್ರಿಕೆಟ್ನಲ್ಲಿ ಪಾದಾರ್ಪನೆ ಮಾಡಿದರು.[೫][೬][೭]

ಪಂದ್ಯಗಳು[ಬದಲಾಯಿಸಿ]

  • ಟೆಸ್ಟ್ ಕ್ರಿಕೆಟ್ : ೨೨ ಪಂದ್ಯಗಳು.[೮]
  • ಏಕದಿನ ಕ್ರಿಕೆಟ್ : ೩೬ ಪಂದ್ಯಗಳು
  • ಟಿ-೨೦ ಕ್ರಿಕೆಟ್ : ೧೦ ಪಂದ್ಯಗಳು.
  • ಐಪಿಎಲ್ ಕ್ರಿಕೆಟ್ : ೧೩೬ ಪಂದ್ಯಗಳು

ವಿಕೇಟ್‍ಗಳು[ಬದಲಾಯಿಸಿ]

  • ಟೆಸ್ಟ್ ಪಂದ್ಯಗಳಲ್ಲಿ  : ೭೬
  • ಏಕದಿನ ಪಂದ್ಯಗಳಲ್ಲಿ  : ೬೪
  • ಟಿ-೨೦ ಪಂದ್ಯಗಳಲ್ಲಿ  : ೧೬
  • ಐಪಿಎಲ್ ಪಂದ್ಯಗಳಲ್ಲಿ  : ೧೪೬

ಉಲ್ಲೇಖಗಳು[ಬದಲಾಯಿಸಿ]

  1. https://www.cricbuzz.com/profiles/1454/amit-mishra
  2. "ಆರ್ಕೈವ್ ನಕಲು". Archived from the original on 2017-02-13. Retrieved 2018-09-30.
  3. https://www.cricbuzz.com/live-cricket-scorecard/10524/rajasthan-royals-vs-delhi-daredevils-33rd-match-indian-premier-league-2008
  4. https://sports.ndtv.com/indian-premier-league-2013/ipl-stats-amit-mishra-becomes-first-bowler-to-take-3-hat-tricks-in-the-tournament-1537995
  5. https://www.cricbuzz.com/live-cricket-scorecard/3642/india-vs-australia-2nd-test-australia-in-india-2008
  6. https://www.cricbuzz.com/live-cricket-scorecard/5045/india-vs-south-africa-2nd-match-bangladesh-india-south-africa-in-bangladesh-2003
  7. https://www.cricbuzz.com/live-cricket-scorecard/2301/zimbabwe-vs-india-2nd-t20i-zimbabwe-v-india-t20i-series-2010
  8. http://www.espncricinfo.com/india/content/player/31107.html