ಅಪಾಚೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Apache
Apache portraits
ಜನಸಂಖ್ಯಾ ಬಾಹುಳ್ಯದ ಪ್ರದೇಶಗಳು
Arizona, New Mexico and Oklahoma
ಭಾಷೆಗಳು
Chiricahua, Jicarilla, Lipan Apache, Plains Apache, Mescalero, Western Apache
ಧರ್ಮ
Native American Church, Christianity, traditional shamanistic tribal religion
ಸಂಬಂಧಿತ ಜನಾಂಗೀಯ ಗುಂಪುಗಳು
Navajo, Athabaskans

ಅಪಾಚೆ (pronounced /əˈpætʃiː/)ಎನ್ನುವುದು ಸಾಂಸ್ಕೃತಿಕವಾಗಿ ಸಂಬಂಧವನ್ನು ಹೊಂದಿರುವ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿರುವ ಮೂಲನಿವಾಸಿ ಅಮೆರಿಕದವರ ಅನೇಕ ಗುಂಪುಗಳನ್ನು ಒಟ್ಟಾಗಿ ಹೇಳುವ ಸಾಮೂಹಿಕ ಪದ. ಇವರು ಮೂಲತಃ ಅಮೆರಿಕದ ನೈಋತ್ಯ ಭಾಗದವರು. ಉತ್ತರ ಅಮೆರಿಕದ ಈ ಮೂಲನಿವಾಸಿಗಳು ದಕ್ಷಿಣದ ಅಥಾಬಾಸ್ಕನ್ (ಅಪಾಚಿಯವರ) ಭಾಷೆಯನ್ನು ಮಾತನಾಡುತ್ತಾರೆ.ಇದು ಭಾಷಾಶಾಸ್ತ್ರೀಯವಾಗಿ ಅಲಾಸ್ಕಾದಲ್ಲಿ ಮತ್ತು ಮತ್ತು ಪಶ್ಚಿಮ ಕೆನಡಾದಲ್ಲಿ ಮಾತನಾಡುವ ಅಥಾಬಾಸ್ಕನ್ ಭಾಷೆಗಳಿಗೆ ಸೇರಿದೆ. ಆಧುನಿಕ ಪದ ಅಪಾಚೆಯು ಸಂಬಂಧಿ ನವಾಜೋ ಜನರನ್ನು ಹೊರಗಿಡುತ್ತದೆ. ಹೀಗಿದ್ದರೂ ನವಾಜೋ ಮತ್ತು ಇತರ ಅಪಾಚೆ ಗುಂಪುಗಳು ಸಂಪುಷ್ಟವಾಗಿ ಸಂಸ್ಕೃತಿ ಮತ್ತು ಭಾಷೆಯ ವಿಚಾರದಲ್ಲಿ ಸಂಬಂಧ ಹೊಂದಿರುವುದರಿಂದ ಅವರನ್ನೆಲ್ಲ ಅಪಾಚಿಯನ್ (ಅಪಾಚೆಯವರು) ಎಂದು ಪರಿಗಣಿಸಲಾಗಿದೆ. ಅಪಾಚಿಯನ್ ಜನರು ಮೊದಲು ಪೂರ್ವ ಅರಿಝೋನಾ, ಮೆಕ್ಸಿಕೋ, ನ್ಯೂ ಮೆಕ್ಸಿಕೋ, ಟೆಕ್ಸಾಸ್ ಮತ್ತು ದಕ್ಷಿಣದ ವಿಶಾಲ ಬಯಲುಗಳಲ್ಲಿ ವಾಸಿಸುತ್ತಿದ್ದರು. ಅಪಾಚಿಯನ್ ಗುಂಪುಗಳಲ್ಲಿ ಅತಿ ಕಡಿಮೆ ರಾಜಕೀಯ ಏಕತೆ ಇತ್ತು. ಈ ಗುಂಪುಗಳು ಏಳು ವಿವಿಧ ಭಾಷೆಗಳನ್ನು ಆಡುತ್ತಿದ್ದವು. ಪ್ರಸ್ತುತ ಅಪಾಚಿಯನ್ ಗುಂಪುಗಳ ವಿಭಾಗವು ನವಾಜೋ, ವೆಸ್ಟರ್ನ್ ಅಪಾಚೆ, ಚಿರಿಕಹುಆ , ಮೆಸ್ಕೆಲೆರೋ , ಜಿಕಾರಿಲ್ಲಾ , ಲಿಪಾನ್ ಮತ್ತು ಬಯಲು ಅಪಾಚೆ (ಹಿಂದೆ ಕಿಯೋವಾ- ಅಪಾಚೆ)ಗಳನ್ನು ಒಳಗೊಂಡಿದೆ. ಅಪಾಚೆ ಗುಂಪುಗಳು ಓಕ್ಲಹಾಮಾ ಮತ್ತು ಟೆಕ್ಸಾಸ್್ಗಳಲ್ಲಿ ಹಾಗೂ ಅರಿಝೋನಾ ಮತ್ತು ನ್ಯೂ ಮೆಕ್ಸಿಕೋಗಳ ಮೀಸಲು ಪ್ರದೇಶಗಳಲ್ಲಿ ವಾಸಿಸುತ್ತಿವೆ. ಕೆಲವು ಅಪಾಚಿಯನ್ನರು ದೊಡ್ಡ ಮಹಾನಗರ ಪ್ರದೇಶಗಳಿಗೆ ತೆರಳಿದ್ದಾರೆ. ಅಪಾಚೆಗಳ ಅತಿ ದೊಡ್ಡ ನಗರ ಸಮುದಾಯವು ಓಕ್ಲಹಾಮಾ ಸಿಟಿ, ಕನ್ಸಾಸ್ ಸಿಟಿ, ಫೋನಿಕ್ಸ್, ಡೆನ್ವೆರ್, ಸಾನ್್ಡಿಯಾಗೋ ಮತ್ತು ಲಾಸ್ ಏಂಜಿಲಸ್್ಗಳಲ್ಲಿದೆ. [ಸೂಕ್ತ ಉಲ್ಲೇಖನ ಬೇಕು]ಕೆಲವು ಅಪಾಚಿಯನ್ನರು ವಲಸೆ ತೋಟದ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ದಕ್ಷಿಣ ಕೆಲಿಫೋರ್ನಿಯಾ, ಕೋಚೆಲ್ಲಾ, ಇಂಪೀರಿಯಲ್ ಮತ್ತು ಕೋಲೋರೋಡೋ ನದಿ ಕಣಿವೆಯ ಪ್ರದೇಶಗಳಲ್ಲಿ ಕೃಷಿ ಪ್ರದೇಶಗಳಲ್ಲಿ ಪುನರ್ನೆಲೆಗೊಳಿಸಲಾಗಿದೆ. ಅಲ್ಲೆಲ್ಲ ಇಂದು ಸಾವಿವಾರು ಸಂಖ್ಯೆಯಲ್ಲಿ ಅಪಾಚೆಯವರು ವಾಸಿಸುತ್ತಿದ್ದಾರೆ. [ಸೂಕ್ತ ಉಲ್ಲೇಖನ ಬೇಕು] ಅಪಾಚೆಯವರ ಬುಡಕಟ್ಟಿನವರು ಐತಿಹಾಸಿಕವಾಗಿ ಅತ್ಯಂತ ಬಲಿಷ್ಠರು, ಸ್ಪೇನ್ ದೇಶದವರನ್ನು ಮತ್ತು ಯುರೋಪಿನಿಂದ ಬಂದ ಮೆಕ್ಸಿಕನ್ನರನ್ನು ಶತಮನಗಳಿಂದ ವಿರೋಧಿಸುತ್ತ ಬಂದಿದ್ದಾರೆ. ಸೋನೋರಾದ ಮೇಲೆ ಅಪಾಚಿಗಳು ನಡೆಸಿದ ಮೊದಲ ದಾಳಿ 17ನೆ ಶತಮಾನದ ಕೊನೆಯಲ್ಲಿ ನಡೆದಂತೆ ತೋರುತ್ತದೆ. 19ನೆ ಶತಮಾನದಲ್ಲಿ ನಡೆದ ಸಂಘರ್ಷಗಳಿಂದ ಅಪಾಚೆಗಳು ಭೀಷಣ ಯೋಧರು ಮತ್ತು ಪರಿಣತ ವ್ಯೂಹರಚನೆಕಾರರು ಎಂಬುದನ್ನು ಅಮೆರಿಕದ ಸೇನೆಯು ಅರಿತುಕೊಂಡಿತು.[೨]

ಇವತ್ತಿನ ಅಪಾಚೆ ಗುಂಪುಗಳು[ಬದಲಾಯಿಸಿ]

ಸಿಗೇಶ್, ಓರ್ವ ಅವಿವಾಹಿತ ಅಪಾಚೆ ಮಹಿಳೆ, ಸುಮಾರು1905ಅವಳ ಕೇಶವಿನ್ಯಾಸ ಮತ್ತು ಆಭರಣಗಳು ಆಗಿನ ಅಪಾಚೆ ಹುಡುಗಿಯರ ಲಕ್ಷಣಗಳಾಗಿದ್ದವು. ಎಡ್ವರ್ಡ್ ಎಸ್. ಕರ್ಟಿಸ್ ಫೋಟೊ.
ಅಪಾಚೆ ಬುಡಕಟ್ಟಿನವರು ಸುಮಾರು. 18 ನೆ ಶತಮಾನ: ಡಬ್ಲೂಎ – ವೆಸ್ತ್ರರ್ನ್ ಅಪಾಚೆ, ಎನ್ – ನವಾಜೋ, ಸಿಎಚ್ – ಚಿರಿಕಹುಆ, ಎಂ – ಮೆಸ್ಕಲೆರೋ, ಜೆ – ಜಿಕಾರಿಲ್ಲಾ, ಎಲ್ – ಲಿಪಾನ್, ಪಿಎಲ್ – ಪ್ಲೇನ್ಸ್ ಅಪಾಚೆ

ಇಂದಿನ ದಿನದ ಅಪಾಚೆ ಜನರಲ್ಲಿ ಜಿಕಾರಿಲ್ಲಾ ಮತ್ತು ನ್ಯೂಮೆಕ್ಸಿಕೋದ ಮೆಸ್ಕಲೆರೋ, ಅರಿಝೋನಾ- ನ್ಯೂ ಮೆಕ್ಸಿಕೋ ಗಡಿ ಪ್ರದೇಶದ ಚಿರಿಕಾಹುಆ, ನೈಋತ್ಯ ಟೆಕ್ಸಾಸ್್ನ ಲಿಪಾನ್ ಅಪಾಚೆ ಮತ್ತು ಓಕ್ಲಹಾಮಾದ ಬಯಲುಗಳ ಅಪಾಚೆ ಒಳಗೊಂಡಿದ್ದಾರೆ. ಇತರ ಅಪಾಚೆ ಗುಂಪುಗಳೂ ಅಸ್ತಿತ್ವದಲ್ಲಿ ಇವೆ ಎಂಬ ವಿಷಯದಲ್ಲಿ ಸಂದೇಹಕ್ಕೆ ಎಡೆ ಇಲ್ಲ. ಆದರೆ ಇವರ ಬಗ್ಗೆ ಆಧುನಿಕ ಮಾನವಶಾಸ್ತ್ರಜ್ಞರಿಗೆ ಮತ್ತು ಇತಿಹಾಸಕಾರರಿಗೆ ಗೊತ್ತಿಲ್ಲ. ಅರಿಝೋನಾದಲ್ಲಿರುವ ಏಕೈಕ ಅಪಾಚೆ ಗುಂಪು ಪಶ್ಚಿಮ ಅಪಾಚೆಗಳು. ಈ ಗುಂಪನ್ನು ಅನೇಕ ಮೀಸಲು ಪ್ರದೇಶಗಳಲ್ಲಿ ವಿಭಾಗಿಸಲಾಗಿದೆ. ಇದರಿಂದಾಗಿ ಸಾಂಸ್ಕೃತಿಕ ವಿಭಾಗಗಳು ಅಳಸಿಹೋಗಿವೆ. ಪಶ್ಚಿಮದ ಅಪಾಚೆ ಮೀಸಲು ಪ್ರದೇಶಗಳಲ್ಲಿ ಫೋರ್ಟ್ ಅಪಾಚೆ ವೈಟ್ ಮೌಂಟೇನ್, ಸಾನ್ ಕಾರ್ಲೋಸ್, ಯವಪೈ- ಅಪಾಚೆ, ಟೋಂಟೋ ಅಪಾಚೆ ಮತ್ತು ಫೋರ್ಟ್ ಮ್ಯಾಕ್್ಡೊವೆಲ್ ಮೊಹಾವೆ ಸೇರಿವೆ.

ಅಪಾಚೆ ಜನರ ಇಂದಿನ ದಿನಗಳ ಮೂಲ ಸ್ಥಳಗಳು

ಯುದ್ಧ ಕೈದಿಗಳಾಗಿದ್ದ ಚಿರಿಕಾಹುಆ ಗುಂಪಿನವರನ್ನು ಬಿಡುಗಡೆ ಮಾಡಿದ ಬಳಿಕ ಎರಡು ಗುಂಪುಗಳಲ್ಲಿ ವಿಭಜಿಸಲಾಯಿತು. ಇವರಲ್ಲಿ ಹೆಚ್ಚಿನವರು ಮೆಸ್ಕಲೆರೋ ಮೀಸಲು ಪ್ರದೇಶಕ್ಕೆ ತೆರಳಿದರು ಮತ್ತು ಈಗ ಲಿಪಾನ್ ಜೊತೆಯಲ್ಲಿ ವಿಶಾಲವಾದ ಮೆಸ್ಕಲೆರೋ ರಾಜಕೀಯ ಗುಂಪಿನಡಿ ಒಂದಾಗಿದ್ದಾರೆ. ಇತರ ಚಿರಿಕಾಹುಆದವರು ಓಕ್ಲಹಾಮಾದಲ್ಲಿಯೇ ಉಳಿದರು ಮತ್ತು ಅಂತಿಮವಾಗಿ ಫೋರ್ಟ್ ಸಿಲ್ಲ್ ಅಪಾಚೆ ಟ್ರೈಬ್ ಆಫ್ ಓಕ್ಲಹಾಮಾ ಸ್ಥಾಪಿಸಿದರು.

ಮೆಸ್ಕೆಲೆರೋಗಳು ನ್ಯೂಮೆಕ್ಸಿಕೋದ ಆಗ್ನೇಯಕ್ಕಿರುವ ಮೆಸ್ಕೆಲೆರೋ ಮೀಸಲು ಪ್ರದೇಶದಲ್ಲಿ ನೆಲೆಯಾದರು. ಇದು ಐತಿಹಾಸಿಕ ಫೋರ್ಟ್ ಸ್ಟೇಶನ್ ಬಳಿ ಇದೆ. ನ್ಯೂಮೆಕ್ಸಿಕೋದ ವಾಯವ್ಯಕ್ಕಿರುವ ರಿಯೋ ಅರಿಬಾ ಮತ್ತು ಸ್ಯಾಂಡೋವಲ್್ಗಳಲ್ಲಿಯ ಜಿಕಾರಿಲ್ಲಾ ಮೀಸಲು ನೆಲೆಯಲ್ಲಿ ಜಿಕಾರಿಲ್ಲಾಗಳು ನೆಲೆಯಾಗಿದ್ದಾರೆ. ಈಗ ಕೆಲವೇ ಸಂಖ್ಯೆಯಲ್ಲಿರುವ ಲಿಪಾನ್್ಗಳು ಪ್ರಾಥಮಿಕವಾಗಿ ಮೆಸ್ಕರೆಲೋ ಮೀಸಲು ಪ್ರದೇಶದಲ್ಲಿಯೇ ನೆಲೆಯಾಗಿದ್ದಾರೆ. ಉಳಿದ ಲಿಪಾನ್್ಗಳು ಟೆಕ್ಸಾಸ್್ನಲ್ಲಿ ಇರುತ್ತಾರೆ. ಬಯಲು ಅಪಾಚೆಗಳು ಓಕ್ಲಹಾಮಾದಲ್ಲಿ ನೆಲೆಯಾಗಿದ್ದು, ಅನಾಡಾರ್ಕೋ ಸುತ್ತಮುತ್ತಲೇ ಒಟ್ಟೈಸಿದ್ದಾರೆ.

ಹೆಸರು ಮತ್ತು ಸಮಾನಾರ್ಥಕಗಳು[ಬದಲಾಯಿಸಿ]

ಅಪಾಚೆ ಪದ ಸ್ಪ್ಯಾನಿಶ್ ಮೂಲಕ ಇಂಗ್ಲಿಷ್್ಗೆ ಪ್ರವೇಶ ಪಡೆಯಿತು. ಆದರೆ ಮೂಲಭೂತವಾಗಿ ಈ ಪದದ ಮೂಲ ಅನಿಶ್ಚಿತವಾಗಿದೆ. ಬಹುತೇಕ ಅಪಾಚೆಯವರು ತಮ್ಮನ್ನು ಅಪಾಚೆ ಎಂದು ಕರೆಯುವುದನ್ನು ಇಷ್ಟಪಡುವುದಿಲ್ಲ. ತಮ್ಮ ಭಾಷೆಯ ಪದದಿಂದ ತಮ್ಮೊಳಗೆ ಸಂಬೋಧಿಸಿಕೊಳ್ಳುತ್ತಾರೆ. (ಉದಾ.ಇಂಡೆ ಮೆಸ್ಕೆಲೆರೋದಲ್ಲಿ "ಅಪಾಚೆ, ವ್ಯಕ್ತಿ" ಎಂದು ಅರ್ಥ). ಈಗ ಗೊತ್ತಿರುವ ಮೊದಲ ಲಿಖಿತ ದಾಖಲೆ ಸ್ಪ್ಯಾನಿಶ್್ನಲ್ಲಿದ್ದು ಇದನ್ನು ಬರೆದವರು ಜುಆನ್ ಡೆ ಒನಾಟೆ, 1598ರಲ್ಲಿ. ಅತ್ಯಂತ ಹೆಚ್ಚು ಒಪ್ಪಿತವಾದ ಮೂಲ ಸಿದ್ಧಾಂತವು ಇದನ್ನು ಝುನಿ ಪದʔa·paču ದಿಂದ ತರಲಾಗಿದೆ ಎಂದು ಸೂಚಿಸುತ್ತದೆ. ಇದರ ಅರ್ಥ ನವಾಜೋಸ್ (ನವಾಜೋದ ಬಹುವಚನpaču ರೂಪ)[೩]

ಇನ್ನೊಂದು ಸಿದ್ಧಾಂತವು ಈ ಪದವು ಯವಾಪೈʔpačə ಅರ್ಥ ಶತ್ರು[೪] ವಿನಿಂದ ಬಂತು ಎಂದು ಸೂಚಿಸುತ್ತದೆ. ಝುನಿ ಮತ್ತು ಯವಾಪಿ ಮೂಲಗಳು ಕಡಿಮೆ ನಿರ್ದಿಷ್ಟವಾದವು, ಏಕೆಂದರೆ, ಒನಾಟೆ ಈ ಪದವನ್ನು ಬಳಸಿದ್ದು ಅವರು ಯಾವುದೇ ಝುನಿ ಅಥವಾ ಯವಪೈಗಳನ್ನು ಭೇಟಿಯಾಗುವ ಮೊದಲು.[೫]

ಕಡಿಮೆ ಸಂಭಾವ್ಯ ಮೂಲ ಬಹುಶಃ ಸ್ಪ್ಯಾನಿಶ್್ನ ಮಪಾಚೆ "ರಕೂನ್" (ಅಮೆರಿಕದ ನಸುಗಂದು ಬಣ್ಣದ ಪೊದೆ ಬಾಲದ ಮಾಂಸಾಹಾರಿ ಪ್ರಾಣಿ) ಇರಬಹುದು.[೫] ಸ್ಪ್ಯಾನಿಶ್ ಜನರು ಸಾನ್ ಜುಆನ್ ನದಿಯ ಪೂರ್ವಭಾಗಕ್ಕಿರುವ ಚಮಾ ಜನರನ್ನು ಉಲ್ಲೇಖಿಸುವಾಗ ಮೊದಲಬಾರಿಗೆ 1620ರಲ್ಲಿ "ಅಪಾಚು ದೆ ನಬಾಜೋ" (ನವಾಜೋ) ಪದವನ್ನು ಬಳಸಿದರು. 1640ರ ವೇಳೆಗೆ ಈ ಪದವನ್ನು ಪೂರ್ವದ ಚಮಾದಿಂದ ಪಶ್ಚಿಮದ ಸಾನ್ ಜುಆನ್ ವರೆಗಿನ ದಕ್ಷಿಣದ ಅಥಾಬಾಸ್ಕನ್ ಜನರಿಗೆ ಅನ್ವಯಿಸಲಾಯಿತು. ಈ ಬುಡಕಟ್ಟಿನವರ ಬದ್ಧತೆ ಮತ್ತು ಹೋರಾಟದಲ್ಲಿಯ ಪರಿಣತಿ ಬಹುಶಃ ಅಗ್ಗದ ಕೌತುಕ ಕಾದಂಬರಿಗಳಿಂದ ಪ್ರಚಾರ ಪಡೆದು ಯುರೋಪಿಯನ್ನರ ಮೇಲೆ ಪರಿಣಾಮ ಬೀರಿರಬಹುದು. 20ನೆ ಶತಮಾನದ ಆರಂಭದಲ್ಲಿ ಪ್ಯಾರಿಸಿಯನ್ ಸಮಾಜದಲ್ಲಿ ಅಪಾಚೆ ಅತ್ಯಗತ್ಯವಾಗಿ ಶಾಸನಬಾಹಿರವಾಗಿತ್ತು ಮತ್ತು ಫ್ರಾನ್ಸ್್ನಲ್ಲಿ ಫ್ರೆಂಚ್ ಭಾಷೆಯನ್ನು ಪ್ರವೇಶಿಸಿತು.

ಹೆಸರಿಡುವುದರಲ್ಲಿಯ ಕಷ್ಟಗಳು[ಬದಲಾಯಿಸಿ]

ಎಸ್ಸಾ-ಕ್ವೆಟಾ, ಪ್ಲೇನ್ಸ್ ಅಪಾಚೆ ಮುಖ್ಯಸ್ಥ

ಅಪಾಚಿಯನ್ ಅಲ್ಲದವರು ಬರೆದಿರುವ ಅಪಾಚಿಯನ್ ಗುಂಪುಗಳ ಐತಿಹಾಸಿಕ ಹೆಸರುಗಳ ದಾಖಲೆಯಲ್ಲಿ ಆಧುನಿಕ ಕಾಲದ ಬುಡಕಟ್ಟುಗಳು ಅಥವಾ ಅವುಗಳ ಉಪ ಗುಂಪುಗಳನ್ನು ಹೊಂದಿಸುವುದಕ್ಕೆ ಕಷ್ಟ. ಶತಮಾನಗಳ ಕಾಲ ಅನೇಕ ಸ್ಪ್ಯಾನಿಶ್, ಫ್ರೆಂಚ್ ಮತ್ತು / ಅಥವಾ ಇಂಗ್ಲಿಷ್ ಮಾತನಾಡುವ ಲೇಖಕರು ಅಪಾಚಿಯನ್ ಮತ್ತು ಅದೇ ಪ್ರದೇಶದಲ್ಲಿ ಹಾದು ಹೋದ ಇತರ ಅರೆ-ಅಲೆಮಾರಿ ಅಪಾಚಿಯನ್ ಅಲ್ಲದ ಜನರ ನಡುವೆ ಭಿನ್ನತೆಯನ್ನು ಗುರುತಿಸಲೇ ಇಲ್ಲ. ಯುರೋಪಿಯನ್ನರು ಹೆಚ್ಚಾಗಿ ಬುಡಕಟ್ಟಿನವರನ್ನು ಗುರುತಿಸುವುದು ಅವರ ಎಕ್ಸೋನಿಮ್್ಗಳನ್ನು ಅನುವಾದ ಮಾಡುವ ಮೂಲಕ, ಅವರು ಇನ್ನೊಂದು ಗುಂಪನ್ನು ಏನೆಂದು ಕರೆಯುತ್ತಾರೆ ಎಂದು ತಿಳಿಯುವ ಮೂಲಕ. ಆದರೆ ಮಾನವ ಶಾಸ್ತ್ರಜ್ಞರು ಅಪಾಚೆಗಳಲ್ಲಿಯ ಕೆಲವು ಸಾಂಪ್ರದಾಯಿಕ ಪ್ರಮುಖ ಉಪಗುಂಪುಗಳನ್ನು ಒಪ್ಪುತ್ತಾರೆ. ಅವರು ಇನ್ನಷ್ಟು ನಿಶ್ಚಿತವಾಗಿ ಉಪಗುಂಪುಗಳನ್ನು ಹೆಸರಿಸಲು ಬೇರೆಯೇ ಮಾನದಂಡವನ್ನು ಬಳಸುವರು. ಮತ್ತು ಇದು ಯಾವಾಗಲೂ ಆಧುನಿಕ ಅಪಾಚೆ ಗುಂಪುಗಳಿಗೆ ಹೊಂದಿಕೆಯಾಗುವುದಿಲ್ಲ. ಕೆಲವು ವಿದ್ವಾಂಸರು ಮೆಕ್ಸಿಕೋದಲ್ಲಿ ಈಗಿರುವ ಗುಂಪುಗಳನ್ನು ಅಪಾಚೆ ಎಂದು ಪರಿಗಣಿಸುವುದಿಲ್ಲ. ಹೊರಗಿನವರಿಗೆ ಗೊಂದಲ ಹುಟ್ಟಿಸುವಂತೆ ಒಬ್ಬ ಅಪಾಚೆಯ ವ್ಯಕ್ತಿ ಒಂದು ಗುಂಪಿನೊಂದಿಗೆ ಗುರುತಿಸಿಕೊಳ್ಳಲು ವಿಭಿನ್ನ ರೀತಿಗಳಿವೆ. ಗುಂಪು ಅಥವಾ ಕುಲ, ವಿಶಾಲವಾದ ಬುಡಕಟ್ಟು ಅಥವಾ ಭಾಷಿಕ ಗುಂಪುಗಳು ಇತ್ಯಾದಿ. ಉದಾಹರಣೆಗೆ, 1930ರಲ್ಲಿ ಗ್ರೀನ್್ವಿಲ್ಲೆ ಗುಡ್ವಿನ್ ಪಶ್ಚಿಮದ ಅಪಾಚಿಗಳನ್ನು (ಉಪಭಾಷೆ ಮತ್ತು ಸಾಂಸ್ಕೃತಿಕ ಭಿನ್ನತೆಯ ಮೇಲೆ ತಮ್ಮ ಅಸಾಂಪ್ರದಾಯಿಕ ವಿಚಾರಗಳನ್ನು ಆಧರಿಸಿ): ವೈಟ್ ಮೌಂಟೇನ್, ಸಿಬೆಕ್ಯು, ಸಾನ್ ಕಾರ್ಲೋಸ್, ನಾರ್ಥ್ ಟೋಂಟೋ ಮತ್ತು ಸೌಥ್ ಟೋಂಟೋ ಈ ಐದು ಗುಂಪುಗಳಲ್ಲಿ ವರ್ಗೀಕರಿಸಿದರು. ಇತರ ಮಾನವಶಾಸ್ತ್ರಜ್ಞರು (ಉದಾ: ಅಲ್ಬರ್ಟ್ ಶ್ರೋಡರ್) ಗುಡ್ವಿನ್್ರ ವರ್ಗೀಕರಣವನ್ನು ಮೀಸಲು ಪೂರ್ವ ಸಂಸ್ಕೃತಿಯ ವಿಭಾಗಗಳೊಂದಿಗೆ ಹೊಂದಾಣಿಕೆ ಇಲ್ಲದ್ದು ಎಂದು ಪರಿಗಣಿಸುತ್ತಾರೆ. ವಿಲ್ಲೆಮ್ ಡೆ ರೀಯುಸ್ ಭಾಷಿಕ ಪುರಾವೆಗಳು ಕೇವಲ ಮೂರು ಗುಂಪುಗಳಾದ ವೈಟ್ ಮೌಂಟೇನ್, ಸಾನ್ ಕಾರ್ಲೋಸ್ ಮತ್ತು ಡಿಲ್್ಜೀ (ಟೊಂಟೋ)ಗಳನ್ನು ಬೆಂಬಲಿಸುತ್ತವೆ ಎಂಬುದನ್ನು ಕಂಡುಹಿಡಿದರು. ಸಾನ್್ ಕಾರ್ಲೋಸ್ ಅತ್ಯಂತ ವೈವಿಧ್ಯಮಯ ಉಪಭಾಷೆ ಎಂದು ಅವರು ನಂಬುತ್ತಾರೆ. ಮತ್ತು ಡಿಲ್ಜೆ ಉಪಭಾಷಾ ಅವಿಚ್ಚಿನ್ನ ಸರಣಿಯ ಮಧ್ಯವರ್ತಿಯೊಂದರ ಅವಶೇಷ ಮತ್ತು ಇದು ಮೊದಲು ಪಶ್ಟಿಮ ಅಪಾಚೆ ಭಾಷೆಯಿಂದ ನವಾಜೋ ವರೆಗೆ ಪಸರಿಸಿತ್ತು ಎಂದು ನಂಬುತ್ತಾರೆ. ಜಾನ್ ಅಪ್ಟಾನ್ ಟೆರ್ರೆಲ್ ಅಪಾಚೆಯನ್ನು ಪಶ್ಚಿಮ ಮತ್ತು ಪೂರ್ವದ ಗುಂಪುಗಳಲ್ಲಿ ವರ್ಗೀಕರಿಸುತ್ತಾರೆ. ಪಶ್ಚಿಮದ ಗುಂಪಿನಲ್ಲಿ ಅವರು ಟೋಬೋಸೋ , ಕೋಲೋಮೆ , ಜೋಕೋಮೆ , ಸಿಬೋಲೋ ಅಥವಾ ಸಿಬೋಲಾ , ಪೆಲೋನೆ , ಮಾನ್ಸೋ ಮತ್ತು ಕಿವಾ ಅಥವಾ ಕೋಫಾ ವನ್ನು ಸೇರಿಸುತ್ತಾರೆ. ಅವರು ಚಿಕಾಮೆ ಯನ್ನು (ಮೊದಲು ಈ ಪದವನ್ನು ಹಿಸ್ಪಾನಿಜೆಡ್ ಚಿಕಾನೋ ಅಥವಾ ಸ್ಪ್ಯಾನಿಶ್/ಹಿಸ್ಪಾನಿಕ್್ನ ನ್ಯೂ ಮೆಕ್ಸಿಕನ್್ರಿಗೆ ಮತ್ತು ಅಪಾಚೆ ಡಿಸೆಂಟ್್ಗೆ ಬಳಸುತ್ತಿದ್ದರು.) ಅದು ನಿರ್ದಿಷ್ಟವಾಗಿ ಅಪಾಚೆ ಸಂಬಂಧ ಹೊಂದಿದೆಯೆಂದು ಅಥವಾ ಅಪಾಚೆಗಳು ಹೊಂದಿರುವ ಸ್ಪ್ಯಾನಿಶ್ ಸಂಬಂಧದ ಹೆಸರುಗಳ ಕಾರಣದಿಂದ ಅದರಲ್ಲಿ ಸೇರಿಸುವರು. ನ್ಯೂ ಮೆಕ್ಸಿಕೋ ಕೆಥೋಲಿಕ್ ಚರ್ಚ್ ದಾಖಲೆಗಳ ವಿಸ್ತೃತವಾದ ಅಧ್ಯಯನವೊಂದರಲ್ಲಿ ಡೇವಿಡ್ ಎಂ.ಬ್ರುಗ್ಗೆಯವರು ಸ್ಪ್ಯಾನಿಶ್್ನಲ್ಲಿ ಅಪಾಚೆಗಳು ಎಂದು ಕರೆಯುವ ಹದಿನೈದು ಬುಡಕಟ್ಟು ಹೆಸರುಗಳನ್ನು ಗುರುತಿಸಿದ್ದಾರೆ. ಇವುಗಳನ್ನು 1704ರಿಂದ 1862ರ ವರೆಗಿನ ಸುಮಾರು ಒಂದು ಸಾವಿರ ದೀಕ್ಷಾಸ್ನಾನದ ದಾಖಲೆಗಳಿಂದ ತೆಗೆದದ್ದು.

ಹೆಸರುಗಳ ಪಟ್ಟಿ[ಬದಲಾಯಿಸಿ]

ಕೆಳಗಿನ ಪಟ್ಟಿಯು ಫೋಸ್ಟರ್ ಆ್ಯಂಡ್ ಮೆಕೊಲಫ್ (2001) ಓಪ್ಲರ್ (1938 ಬಿ, 1983 ಸಿ, 2001), ಡೆ ರೆಯುಸೆ (1983) ಅವರನ್ನ ಆಧರಿಸಿದೆ.

  • ಅಪಾಚಿಯನ್ ಮಾತನಾಡುವ 7 ಪ್ರಮುಖ ಸಾಂಪ್ರದಾಯಿಕ ಗುಂಪುಗಳಲ್ಲಿ 6ನ್ನು ಪ್ರಸ್ತುತ ಅಪಾಚೆ ಪದವು ಒಳಗೊಂಡಿದೆ: ಚಿರಿಕಾಹುಆ, ಜಿಕಾರಿಲ್ಲಾ, ಲಿಪಾನ್ಸ್, ಮೆಸ್ಕಲೆರೋ, ಬಯ ಅಪಾಚೆ, ಮತ್ತು ವೆಸ್ಟರ್ನ್ ಅಪಾಚೆ.. ಐತಿಹಾಸಿಕವಾಗಿ ಈ ಪದವನ್ನು ಕೊಮಾಂಚೆಗಳು, ಮೊಹಾವೆಗಳು, ಹುಆಲಾಪೈಗಳು ಮತ್ತು ಯವಾಪೈಗಳಿಗೂ ಬಳಸುತ್ತಿದ್ದರು.
 • * ಅರಿವೈಪಾ (ಅರಾವೈಪಾ ಕೂಡ) ಪಶ್ಚಿಮ ಅಪಾಚೆಯ ಸಾನ್ ಕಾರ್ಲೋಸ್ ಸ್ಥಳೀಯ ಗುಂಪಿನೊಂದಿಗೆ ಸಂಬಂಧ ಹೊಂದಿದೆ. ಮೀಸಲು ಪೂರ್ವ ಕಾಲದಲ್ಲಿ ಅರಿವೈಪಾ ಪ್ರತ್ಯೇಕ ವಿಭಾಗವಾಗಿತ್ತು ಎಂದು ಅಲ್ಬರ್ಟ್ ಶ್ರೋಡರ್ ನಂಬುತ್ತಾರೆ. ಅರಿವೈಪಾ ವನ್ನು (ಸ್ಪ್ಯಾನಿಶ್ ಮೂಲಕ) ಓಧಮ್ ಭಾಷೆಯಿಂದ ಎರವಲು ತಂದದ್ದು.. ಪಶ್ಚಿಮ ಅಪಾಚೆ ಭಾಷೆಯಲ್ಲಿ ಅರಿವೈಪಾ "ತ್ಸೆಜಿನೆ" "ಬ್ಲಾಕ್ ರಾಕ್" ಎಂದು ಪ್ರಸಿದ್ಧ..
 • * ಕಾರ್ಲಾನಸ್ (ಕಾರ್ಲಾನೆಸ್ ಕೂಡ). ದಕ್ಷಿಣದ ಕೊಲೊರಾಡೋದಲ್ಲಿಯ ರಾಟೋನ್ ಮೆಸಾದಲ್ಲಿಯ ಒಂದು ಅಪಾಚೆ ಗುಂಪು. 1726ರಲ್ಲಿ ಅವರು ಕ್ವಾರ್ಟೆತೆಜೋಸ್ ಮತ್ತು ಪಲೋಮಾಸ್ ಜೊತೆ ಕೂಡಿಕೊಂಡರು. ಮತ್ತು 1730ರ ಸುಮಾರಿಗೆ ಅವರು ಜಿಕಾರಿಲ್ಲಾ ಜೊತೆ ಬದುಕುತ್ತಿದ್ದರು. ಆಧುನಿಕ ಜಿಕಾರಿಲ್ಲಾದ ಲಾನೆರೋ ಗುಂಪು ಅಥವಾ ಜೇಮ್ಸ್ ಮೂನಿಯ ಡಾಚಿ-ಓ-ಝಾ ಜಿಕಾರಿಲ್ಲಾ ವಿಭಾಗವು ಕಾರ್ಲಾನರು, ಕ್ವಾರ್ಟೆಲೆಜೋಗಳು ಮತ್ತು ಪಲೋಮಾಗಳ ವಂಶಸ್ಥರು ಎಂಬ ಸೂಚನೆಯನ್ನೂ ನೀಡಲಾಗಿದೆ. ಕಾರ್ಲಾನರನ್ನು ಇಡಿಯಾಗಿ ಸಿಯೆರ್ರಾ ಬ್ಲಾಂಕಾ ಎಂದೂ ಕರೆಯುತ್ತಾರೆ; ಇವುಗಳಲ್ಲಿಯ ಕೆಲವು ಗುಂಪುಗಳನ್ನು ಲಿಪಿಯಾನೆ ಗಳು ಅಥವಾ ಲಾನೆರೋ ಗಳು ಎನ್ನುವರು. ಇದರ ಹೊರತಾಗಿ, 1812ರಿಂದ ಈ ಪದವನ್ನು ಜಿಕಾರಿಲ್ಲಾ ಕ್ಕೆ ಸಮಾನಾರ್ಥಕವಾಗಿ ಬಳಸುವರು. ಫ್ಲೆಚಾಸ್ ಡೆ ಪಾಲೋ ಬಹುತೇಕ ಕಾರ್ಲಾನದ (ಅಥವಾ ಕ್ವಾರ್ಟೆಲೆಜೋಸ್) ಭಾಗವಾಗಿರಬೇಕು ಅಥವಾ ಅದರಿಂದ ಎತ್ತಿಕೊಂಡಿದ್ದು ಇರಬೇಕು.
 • ಚಿರಿಕಾಹುಆ. . ದಕ್ಷಿಣ ಅರಿಜೋನಾದಲ್ಲಿ ವಾಸಿಸುತ್ತಿರುವ ಏಳು ಪ್ರಮುಖ ಅಪಾಚಿಯನ್ ಗುಂಪುಗಳಲ್ಲಿ ಒಂದು.
  • ಓ ಚಿಶಿ (ಟಿಚಿಶಿ ಕೂಡ) ಎಂಬುದು ನವಾಜೋ ಪದ, ಇದರ ಅರ್ಥ "ಚಿರಿಕಹುಆ, (ಸಾಮಾನ್ಯವಾಗಿ ದಕ್ಷಿಣದ ಅಪಾಚಿಗಳು).[೬]

ಚುಕನೆನ್ (ಕೋಕನೆನ್ , ಕೋ-ಕನೆನ್ , ಚೋಕೋನ್ನಿ , ಚೋ-ಕೋ-ನೆನ್ , ಚೋ ಕುನೆ , ಚೋಕೋನೆನ್ ಕೂಡ ಹೌದು) ಮಾರಿಸ್ ಓಪ್ಲೆರ್ ಗುಂಪಿನ ಪೂರ್ವ ಚಿರಿಕಹುಆ ಗೆ ಸೇರುತ್ತದೆ. ಈ ಹೆಸರು ಚಿರಿಕಹುಆ ಭಾಷೆಯ ನಿಜನಾಮ.

 • ಸಿಬೆಕ್ಯು. . ಗುಡ್ವಿನ್ ಅವರ ಪಶ್ಚಿಮ ಅಪಾಚೆ ಗುಂಪಿಗೆ ಸೇರಿದವುಗಳಲ್ಲಿ ಇದು ಒಂದು. ಸಾಲ್ಟ್ ರಿವರಿನ ಉತ್ತರಕ್ಕೆ ಟೋಂಟೋ ಮತ್ತು ವೈಟ್ ಮೌಂಟೇನ್ ಗುಂಪುಗಳ ನಡುವೆ ಬದುಕುತ್ತಾರೆ. ಇವರಲ್ಲಿ ಕನಿಯೋನ್, ಕ್ರೀಕ್, ಕಾರಿಝೋ ಮತ್ತು ಸಿಬೆಕ್ಯು (ಶುದ್ಧಾಂಗ) ಗುಂಪುಗಳು ಸೇರುತ್ತವೆ.
 • ಕೋಯೋಟೆರೋ , ಮೀಸಲು ಪೂರ್ವಪಶ್ಚಿಮ ಅಪಾಚೆಯ ಸ್ಥಳೀಯ ಗುಂಪು ವೈಟ್ ಮೌಂಟೇನ್್ ನ ದಕ್ಷಿಣ ವಿಭಾಗಕ್ಕೆ ಸಾಮಾನ್ಯವಾಗಿ ಉಲ್ಲೇಖಿಸುವರು. ಹೀಗಿದ್ದರೂ ಈ ಪದವನ್ನು ಹೆಚ್ಚು ವ್ಯಾಪಕವಾಗಿ ಅಪಾಚೆಗಳಿಗೆ, ಪಶ್ಚಿಮ ಅಪಾಚೆಗಳಿಗೆ ಅಥವಾ ದಕ್ಷಿಣ ಕೊಲರಾಡೋದ ಎತ್ತರದ ಬಯಲುಗಳ ಅಪಾಚಿಯನ್ ಗುಂಪಿನಿಂದ ಕನ್ಸಾಸ್ ವರೆಗೆ ಸಾಮಾನ್ಯವಾಗಿ ಬಳಸುವರು.
 • ಫರೋನೆಸ್ (ಫರೋನೆಜ್ , ಫರಾಓನ್ಸ್ , ತರಾಓನ್ಸ್ , ತರಾಕೋನ್ಸ್ , ಅಪಾಚೆಸ್ ಫರಾಓನ್ ಕೂಡ) ಸ್ಪ್ಯಾನಿಸ್್ನ ಫರೋನ್ "ಫರೋಹ್" ನಿಂದ ತಂದ್ದು. 1700ಕ್ಕೆ ಮೊದಲು ಈ ಶಬ್ದ ನಿರ್ದಿಷ್ಟ ಅರ್ಥವಿಲ್ಲದೆ ಅಸ್ಪಷ್ಟವಾಗಿತ್ತು. 1720 ಮತ್ತು 1726ರ ನಡುವೆ ಪೂರ್ವದಲ್ಲಿ ರಿಯೋ ಗ್ರಾಂಡೆ, ಪಶ್ಚಿಮದಲ್ಲಿ ಪೆಕೋಸ್ ನದಿ, ಉತ್ತರದಲ್ಲಿ ಸಂತಾ ಪೆ ಸುತ್ತಲಿನ ಪ್ರದೇಶ ಮತ್ತು ದಕ್ಷಿಣದಲ್ಲಿ ಕೊಂಚೋಸ್ ನದಿಯ ನಡುವಣ ಅಪಾಚೆಗಳನ್ನು ಉಲ್ಲೇಖಿಸಲು ಈ ಪದವನ್ನು ಬಳಸಲಾಯಿತು. 1726ರ ಬಳಿಕ ಈ ಪ್ರದೇಶದ ಉತ್ತರ ಮತ್ತು ಕೇಂದ್ರ ಭಾಗಗಳನ್ನು ಸೂಚಿಸಲು ಮಾತ್ರ ಫರೋನೆಸ್ ಬಳಸಲಾಯಿತು. ಫರೋನೆಸ್ ಬಹುಶಃ ಆಧುನಿಕ ಕಾಲದ ಮೆಸ್ಕೆಲೆರೋಸ್್ನ ಭಾಗವಾಗಿರಬೇಕು ಅಥವಾ ಕನಿಷ್ಠ ಅದರ ಅಂಶದಲ್ಲಿಯಾದರೂ ಇರಬೇಕು ಅಥವಾ ಮೆಸ್ಕೆಲೆರೋಸ್ ಜೊತೆ ವಿಲೀನಗೊಂಡಿರಬೇಕು. 1814ರ ಬಳಿಕ ಫರೋನೆಸ್ ಪದ ಮಾಯವಾಗಿ ಅದರ ಬದಲು ಮೆಸ್ಕೆಲೆರೋ ಪದ ಬಂತು.
 • ಗಿಲೆನೋ (ಅಪಾಚೆಸ್ ಡೆ ಗಿಲಾ , ಅಪಾಚೆಸ್ ಡೆ ಕ್ಸಿಲಾ , ಅಪಾಚೆಸ್ ಡೆ ಲಾ ಸಿಯೆರ್ರಾ ಡೆ ಗಿಲಾ , ಕ್ಸಿಲೆನೋಸ್ , ಗಿಲೆನಾಸ್ , ಗಿಲಾನ್ಸ್ , ಗಿಲಾನಿಯನ್ಸ್ , ಗಿಲಾ ಅಪಾಚೆ , ಗಿಲ್ಲೆನೋಸ್ ಕೂಡ) ವಿವಿಧ ಕಾಲಘಟ್ಟಗಳಲ್ಲಿ ಅನೇಕ ವಿಭಿನ್ನ ಅಪಾಚೆಯವರು ಮತ್ತು ಅಪಾಚೆಯವರು ಅಲ್ಲದ ಗುಂಪುಗಳನ್ನು ಉಲ್ಲೇಖಿಸುವುದಕ್ಕೆ ಬಳಸುತ್ತಿದ್ದರು. ಗಿಲಾ ಗಿಲಾ ನದಿ ಅಥವಾ ಗಿಲಾ ಪರ್ವತಗಳನ್ನು ಉಲ್ಲೇಖಿಸುತ್ತದೆ.[disambiguation needed] ಗಿಲಾ ಅಪಾಚೆಗಳಲ್ಲಿ ಕೆಲವರನ್ನು ನಂತರ ಬಹುಶಃ ಚಿರಿಕಾಹುಆದ ಉಪವಿಭಾಗವಾದ ಮೊಂಗೋಲ್ಲೊನ್ ಅಪಾಚೆಗಳು ಎಂದು ತಿಳಿದಿರಬೇಕು. ಉಳಿದವರು ಬಹುಶಃ ಚಿರಿಕಹುಆ ಶುದ್ಧಾಂಗದಲ್ಲಿ ಸೇರಿರಬೇಕು. ರಿಯೋ ಗ್ರಾಂಡೆ ಪಶ್ಚಿಮಕ್ಕೆ (ಅಂದರೆ, ಆಗ್ನೇಯ ಅರಿಝೋನಾ ಮತ್ತು ನ್ಯೂ ಮೆಕ್ಸಿಕೋ ಪೂರ್ವ ಭಾಗದಲ್ಲಿ) ತಾರತಮ್ಯವಿಲ್ಲದೆ ಎಲ್ಲ ಅಪಾಚೆಯವರ ಗುಂಪುಗಳಿಗೆ ಪ್ರಯೋಗಿಸುತ್ತಿರುವಾಗ ಉಲ್ಲೇಖ ಆಗಾಗ್ಗೆ ಅಸ್ಪಷ್ಟವಾಗಿದೆ. 1722ರ ಬಳಿಕ ಸ್ಪ್ಯಾನಿಶ್ ದಾಖಲೆಗಳುಈ ವಿಭಿನ್ನ ಗುಂಪುಗಳನ್ನು ಪ್ರತ್ಯೇಕಿಸಲು ಆರಂಭಿಸಿದವು. ಈ ಸಂದರ್ಭದಲ್ಲಿ ಅಪಾಚೆಸ್ ಡೆ ಗಿಲಾ ವನ್ನು ಗಿಲಾ ನದಿಯ ಉದ್ದಕ್ಕೂ ವಾಸಿಸುವ ಪಶ್ಚಿಮ ಅಪಾಚಿಗಳನ್ನು ಉಲ್ಲೇಖಿಸಲು ಬಳಸಲಾಯಿತು. (ಮತ್ತು ಈ ರೀತಿಯಲ್ಲಿ ಕೋಯೋಟೆರೋ ಜೊತೆ ಪರ್ಯಾಯ ನಾಮವಾಗಿ ಉಳಿದುಕೊಂಡಿತು) ಅಮೆರಿಕದ ಬರೆಹಗಾರರು ಈ ಪದವನ್ನು ಮಿಂಬ್ರೆಸ್್ ಗಳಿಗೆ (ಚಿರಿಕಹುಆದ ಮತ್ತೊಂದು ಉಪವಿಭಾಗ) ಬಳಸಿದರು. ಆದರೆ ಬಳಿಕ ಈ ಪದವನ್ನು ಗೊಂದಲದಿಂದ ಕೋಯೋಟೆರೋಸ್, ಮೊಗೋಲ್ಲೋನ್ಸ್, ಟೋಂಟೋಸ್, ಮಿಂಬ್ರೆನೋಸ್, ಪಿನಾಲೆನೋಸ್, ಚಿರಿಕಾಹುಆಗಳು ಮತ್ತು ಅಪಾಚೆಯವರು ಅಲ್ಲದ ಯವಾಪೈಗಳಿಗೂ ಬಳಸಲಾಯಿತು. (ಆಗ ಗಾರೋಟೆರೋಸ್ ಅಥವಾ ಯಬಿಪೈಸ್ ಗಿಲೆನೋಸ್ ಎಂದೂ ತಿಳಿಯಲಾಯಿತು) ಇನ್ನೊಂದು ಸ್ಪ್ಯಾನಿಶ್ ಪ್ರಯೋಗ (ಪಿಮಾಸ್ ಗಿಲೆನೋಸ್ ಮತ್ತು ಪಿಮಾಸ್ ಸಿಲೆನೋಸ್ ಜೊತೆಗೆ) ಅಪಾಚೆಯವರು ಅಲ್ಲದ ಗಿಲಾ ನದಿ ದಂಡೆಯಲ್ಲಿ ವಾಸಿಸುವ ಪಿಮಾದವರಿಗೂ ಬಳಕೆಯಾಯಿತು.
 • ಜಿಕಾರಿಲ್ಲಾ (ಸ್ಪ್ಯಾನಿಶ್್ ಅರ್ಥ "ಚಿಕ್ಕ ಬುರುಡೆ"). ಜಿಕಾರಿಲ್ಲಾ ಅಪಾಚೆ ಏಳು ಪ್ರಮುಖ ಅಪಾಚೆಯವರ ಗುಂಪುಗಳಲ್ಲಿ ಒಂದು ಮತ್ತು ಇವರು ಸದ್ಯ ಉತ್ತರ ನ್ಯೂ ಮೆಕ್ಸಿಕೋ, ದಕ್ಷಿಣದ ಕೊಲೋರೆಡೋ ಮತ್ತು ಟೆಕ್ಸಾಸ್ ಪನ್ಹಾಂಡೆಲ್್ಗಳಲ್ಲಿ ವಾಸಿಸುತ್ತಿದ್ದಾರೆ.
 • ಕಿಯೋವಾ-ಅಪಾಚೆ . ನೋಡಿ ಬಯಲು ಅಪಾಚೆ .
 • ಲಾನೆರೋ ಸ್ಪ್ಯಾನಿಶ್್ನಿಂದ ತಂದ ಪದ, ಅರ್ಥ "ಬಯಲಿನಲ್ಲಿ ವಾಸಿಸುವವರು". ಬಯಲುಗಳಲ್ಲಿ ಕೆಲವು ಶ್ರಾಯಗಳಲ್ಲಿ ಎಮ್ಮೆಗಳನ್ನು ಬೇಟೆಯಾಡುವ ವಿವಿಧ ಗುಂಪುಗಳನ್ನು ಉಲ್ಲೇಖಿಸಲು ಐತಿಹಾಸಿಕವಾಗಿ ಈ ಪದವನ್ನು ಬಳಸುತ್ತಿದ್ದಾರೆ. ಮತ್ತು ಪೂರ್ವದ ನ್ಯೂ ಮೆಕ್ಸಿಕೋ ಮತ್ತು ಪಶ್ಚಿಮದ ಟೆಕ್ಸಾಸ್್ನಲ್ಲಿಯೂ ಇದನ್ನು ಉಲ್ಲೇಖಿಸುವರು. (ಇದನ್ನೂ ನೋಡಿ ಕಾರ್ಲಾನಸ್ .)
 • ಲಿಪಿಯಾನ್ಸ್ (ಲಿಪಿಯನ್ , ಲಿಪಿಲ್ಲನ್ಸ್ ಕೂಡ). ಅನಿಶ್ಚಿತ ಪದ, ಬಹುಶಃ ಅಥಾಬಾಸ್ಕನ್ ಮೂಲದ್ದು ಇರಬಹುದು, ಇದು ಲನೆರೋ ಅಥವಾ ನಟಾಜೆಸ್ ಪದದ ಸಾದೃಶ್ಯ ಸಂಬಂಧ ಹೊಂದಿರಬಹುದು. ಈ ಪದ ಲಿಪಾನ್ ಪದದೊಂದಿಗೆ ಗೊಂದಲ ಹುಟ್ಟಿಸುವುದಿಲ್ಲ.
 • ಲಿಪಾನ್ ( ಯಪಂಡಿಸ್ , ಬಪೆಂಡೇಸ್ , ಇಂಪಾಂಡೆಸ್ , ಇಪಾಂಡಿ , ಲಿಪಾನೆಸ್ , ಲಿಪಾನೋಸ್ , ಲಿಪೈನೆಸ್ , ಲಿಪಾನೆ , ಲಿಪಾನಿಸ್ , ಇತ್ಯಾದಿ ಕೂಡ.). 7 ಪ್ರಮುಖ ಅಪಾಚಿಯನ್ ಗುಂಪುಗಳಲ್ಲಿ ಒಂದು ಒಂದು ಕಾಲದಲ್ಲಿ ಪೂರ್ವ ನ್ಯೂ ಮೆಕ್ಸಿಕೋ ಮತ್ತು ಆಗ್ನೇಯದಲ್ಲಿ ಟೆಕ್ಸಾಸ್್ನಿಂದ ಮೆಕ್ಸಿಕೋ ಕೊಲ್ಲಿಯ ವರೆಗೆ ಇದ್ದರು. ಲಿಪಿಯಾನೆಸ್ ಅಥವಾ ಲೆ ಪನಿಸ್ ( ಫ್ರೆಂಚ್್ನ ಪಾವ್ನಿ)ಗೆ ಜೊತೆ ಈ ಪದ ಗೊಂದಲ ಮೂಡಿಸಬಾರದು. ಟೆಕ್ಸಾಸ್್ನಲ್ಲಿ ಹೊಸದಾಗಿ ಸ್ಥಾಪನೆಯಾದ ಪಟ್ಟಣ ಸಾನ್ ಅಟಾನಿಯೋ ಸುತ್ತಮುತ್ತ 1718ರಲ್ಲಿ ಮೊದಲ ಬಾರಿಗೆ ಉಲ್ಲೇಖಗೊಂಡಿತು.
 • ಮೆಸ್ಕೆಲೆರೋ . 7 ಪ್ರಮುಖ ಅಪಾಚಿಯನ್ ಗುಂಪುಗಳಲ್ಲಿ ಮೆಸ್ಕೆಲೆರೋ ಒಂದು. ಈಗಿನ ಪೂರ್ವ ನ್ಯೂ ಮೆಕ್ಸಿಕೋ ಮತ್ತು ಪಶ್ಚಿಮದ ಟೆಕ್ಸಾಸ್್ನಲ್ಲಿ ಸಾಮಾನ್ಯವಾಗಿ ವಾಸಿಸುತ್ತಾರೆ.
 • ಮಿಂಬ್ರೆನೋಸ್ ಓಪ್ಲರ್ ಅವರ ಪೂರ್ವದ ಚಿರಿಕಹುಆ ಗುಂಪಿನ ಒಂದು ವರ್ಗವನ್ನು ಸೂಚಿಸುವ ಮತ್ತು ಆಲ್ಬರ್ಟ್ ಶ್ರೋಡರ್ ಅವರ ಮಿಂಬ್ರೆಸ್ ಮತ್ತು ಆಗ್ನೇಯ ಮೆಕ್ಸಿಕೋದಲ್ಲಿ ವಾರ್ಮ್ ಸ್ಪ್ರಿಂಗ್ಸ್ ಅವರ ಚಿರಿಕಹುಆ ಗುಂಪನ್ನು[೭] ಸೂಚಿಸುವ ಹಳೆಯ ಹೆಸರುಗಳಲ್ಲಿ ಇದು ಒಂದು.
 • ಮೊಗೋಲ್ಲೋನ್ ವನ್ನು ಶ್ರೋಡರ್ ಪ್ರತ್ಯೇಕ ಮೀಸಲು ಪೂರ್ವದ ಚಿರಿಕಹುಆ ಗುಂಪು ಎಂದು ಪರಿಗಣಿಸಿದ್ದಾರೆ. ಆದರೆ ಓಪ್ಲೆರ್ ಮೊಗೋಲ್ಲೋನ್ ನ್ಯೂ ಮೆಕ್ಸಿಕೋದಲ್ಲಿರುವ ತಮ್ಮ ಪೂರ್ವದ ಚಿರಿಕಹುಆ ಗುಂಪಿನ ಭಾಗ ಎಂದು ಪರಿಗಣಿಸುತ್ತಾರೆ.
 • ನಜ್ಜ್್ಶಾ (ನಯೆಶಾ , ನಇಶಾ , ನಾ ಇಶಾ , ನ ಇಶಾಂಡಿನೆ , ನ-ಇ-ಶಾ-ದಿನ , ನ-ಇಶಿ , ನ-ಎ-ಕ , ನʼiಇಸ್ಕ್ , ನಡೀಚಾ , ನರ್ಡಿಚಿಯಾ , ನಡಿಶಾ-ಡೆನಾ , ನʼಡಿʼಇಸ್ಕ್ʼ , ನಡಿʼಜಶಾ , ನೈಶಾ ಕೂಡ) ಎಲ್ಲವೂ ಬಯಲು ಅಪಾಚೆ ಬಗ್ಗೆ ಹೇಳುವುದು (ಕಿಯೋವಾ ನೋಡಿ).
 • ನಟಾಜೆಸ್ (ನಟಾಗೀಸ್ , ಅಪಾಚೆಸ್ ಡೆಲ್ ನಟಾಫೆ , ನಟಾಜಿಸ್ , ಯಬಿಪೈಸ್ ನಟಾಜೆ , ನಟಾಜೆಸೆಸ್ , ನಟಾಜೆಸ್ ಕೂಡ). ಆಗ್ನೇಯ ನ್ಯೂ ಮೆಕ್ಸಿಕೋದ ಫರೋನ್, ಸಿಯೆರ್ರಾ ಬ್ಲಾಂಕಾ ಮತ್ತು ಸಿಯೆಟೆ ರಿಯೋಸ್ ಅಪಾಚಿಗಳನ್ನು ಉಲ್ಲೇಖಿಸಲು ಈ ಪದವನ್ನು 1726-1820ರಲ್ಲಿ ಬಳಸಲಾಯಿತು. ನಟಾಜಿಸ್್ಗಳು ಮೆಸ್ಕೆಲೆರೋಸ್ ( ಎಲ್ ಪಾಸೋ ಮತ್ತು ಆರ್ಗನ್ ಪರ್ವತಗಳ ಸುತ್ತಮುತ್ತ) ಮತ್ತು ಸಾಲಿನೆರೋಸ್್ಗಳಿಂದ (ರಿಯೋ ಸಲಾಡೋ ಸುತ್ತಮುತ್ತ) ಆಗಿರಬಹುದು ಎಂದು 1745ರಲ್ಲಿ ವರದಿಯಾಗಿದೆ. ಆದರೆ ಇವು ಬಹುಶಃ ಒಂದೇ ಗುಂಪಿಗೆ ಸೇರಿದವು. 1749ರ ಬಳಿಕ ಈ ಪದವನ್ನು ಮೆಸ್ಕಲೆರೋ ಜೊತೆ ಸಮಾನಾರ್ಥಕವಾಗಿ ಬಳಸಲಾಯಿತು. ಅಕ್ಷರಶಃ ಇದು ಆ ಪದವನ್ನು ತೊಡೆದುಹಾಕಿತು.
 • ನವಾಜೋ . 7 ಪ್ರಮುಖ ಅಪಾಚಿಯನ್ ಗುಂಪುಗಳಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿರುವವರು. ಸಾಮಾನ್ಯ ಆಧುನಿಕ ಪ್ರಯೋಗವು ನವಾಜೋ ಜನರನ್ನು ಅಪಾಚಿಗಳಿಂದ ಪ್ರತ್ಯೇಕಿಸುತ್ತದೆ.
 • ಪಿನಲ್ (ಪಿನಲೆನೋಸ್ ಕೂಡ). ಗುಡ್ವಿನ್್ನ ಪಶ್ಚಿಮ ಅಪಾಚೆಯ ಸಾನ್ ಕಾರ್ಲೋಸ್ ಗುಂಪಿನ ಒಂದು ಪಡೆ ಇದು. ಪಶ್ಚಿಮ ಅಪಾಚೆಯ ಎರಡು ಪ್ರಮುಖ ವಿಭಾಗಗಳಲ್ಲಿ ಹೆಚ್ಚು ಸಾಮಾನ್ಯವಾಗಿ ಇದನ್ನು ಹೆಸರಿಸಲು ಕೋಯೋಟೆರೋ ಜೊತೆಯಲ್ಲಿಯೂ ಇದನ್ನು ಬಳಸುವರು. ಕೆಲವು ಪಿನಾಲೆನೋಗಳನ್ನು ಗಿಲಾ ಅಪಾಚೆಗಳೆಂದೂ ಉಲ್ಲೇಖಿಸುವರು.
 • ಬಯಲು ಅಪಾಚೆ . ಬಯಲು ಅಪಾಚೆ ( ಕಿಯೋವಾ- ಅಪಾಚೆ , ನೈಶಾ , ನಇಶಾನ್ಡಿನೆ ಎಂದೂ ಕರೆಯುತ್ತಾರೆ.) 7 ಪ್ರಮುಖ ಅಪಾಚಿಯನ್ ಗುಂಪುಗಳಲ್ಲಿ ಒಂದು. ಸಾಮಾನ್ಯವಾಗಿ ಈಗ ಓಕ್ಲಹಾಮಾದಲ್ಲಿ ವಾಸಿಸುತ್ತಿದ್ದಾರೆ. ಐತಿಹಾಸಿಕ ಕಾಲಗಳಲ್ಲಿ ಅವರು (ಸಂಬಂಧಪಡದ) ಕಿಯೋವಾಗಳ ಜೊತೆಗೆ ಬದುಕುತ್ತಿದ್ದುದು ಕಂಡಿದೆ. ಉತ್ತರ ಅಮೆರಿಕದ ಬಯಲುಗಳಲ್ಲಿ ಯಾವುದೇ ಸಂಭಾವ್ಯ ಅಪಾಚಿಯನ್ ಬುಡಕಟ್ಟಿನವರು ಕಂಡುಬಂದರೆ ಅಥವಾ (ಸಾಮಾನ್ಯವಾಗಿ ಸಾಂಸ್ಕೃತಿಕವಾಗಿ) ಜೊತೆಯಾಗಿದ್ದರೆ ಅವರನ್ನು ಉ್ಲೇಖಿಸುವುದಕ್ಕೂ ಈ ಪದವನ್ನು ಬಳಸುತ್ತಿದ್ದರು.
 • ರಾಮ್ಹ್ . ನವಾಜೋಗಳ ಒಂದು ಗುಂಪು. ಸದ್ಯ ನ್ಯೂ ಮೆಕ್ಸಿಕೋದ ರಾಮ್ಹ್ ನವಾಜೋ ಇಂಡಿಯನ್ ರಿಸರ್ವೇಶನ್್ನಲ್ಲಿ ವಾಸಿಸುತ್ತಿದೆ. (ರಾಮ್ಹ್ ನ್ಯೂ ಮೆಕ್ಸಿಕೋಗೆ ನವಾಜೋ ಹೆಸರು Tłʼohchiní ಟಿಯೋಚಿನಿ ಅರ್ಥ "ಕಾಡು ಈರುಳ್ಳಿ ಸ್ಥಳ").
 • ಕ್ವೆರೆಚೋಸ್ 1541ರಲ್ಲಿ ಕೊರೋನಡೋ ಉಲ್ಲೇಖಿಸಿದರು. ಬಯಲು ಅಪಾಚೆಗಳಾಗಿರುವ, ಕೆಲವು ವೇಳೆ ನವಾಜೋ ಆಗಿರಬಹುದಾದ ಸಾಧ್ಯತೆಗಳಿವೆ. ಸ್ಪ್ಯಾನಿಶ್್ನಲ್ಲಿ ಆರಂಭದಲ್ಲಿ ವಾಕ್ವೆರಿಯೋ ಅಥವಾ ಲನೆರೋ ಎಂದೂ ಕರೆದಿರಬಹುದು.
 • ಸಾನ್ ಕಾರ್ಲೋಸ್ . ಇದೊಂದು ಪಶ್ಚಿಮ ಅಪಾಚೆ ಗುಂಪು. ಗುಡ್ವಿನ್ ಪ್ರಕಾರ ಇವರು ಟಕ್ಸನ್್ಗೆ ಅತಿ ಹತ್ತಿರದಲ್ಲಿದ್ದಾರೆ. ಈ ಗುಂಪು ಅಪಾಚೆ ಪೀಕ್ಸ್, ಅರಿವೈಪಾ, ಪಿನಾಲ್, ಸಾನ್ ಕಾರ್ಲೋಸ್ (ಶುದ್ಧಾಂಗ) ಗುಂಪುಗಳನ್ನು ಒಳಗೊಂಡಿದೆ.
 • ಟೋಂಟೋ . ಗುಡ್ವಿನ್ ಉತ್ತರದ ಟೋಂಟೋ ಮತ್ತು ದಕ್ಷಿಣದ ಟೋಂಟೋ ಎಂದು ಈ ಗುಂಪನ್ನು ವಿಭಾಗಿಸಿದ. ಗುಡ್ವಿನ್ ಪ್ರಕಾರ ಪಶ್ಟಿಮ ಅಪಾಚೆ ಗುಂಪುಗಳು ಉತ್ತರ ಮತ್ತು ಪಶ್ಚಿಮ ಪ್ರದೇಶದಲ್ಲಿ ವಾಸಿಸುತ್ತವೆ. ಇದು ಫೋನಿಕ್ಸ್್ನ ಉತ್ತರಕ್ಕೆ ಮತ್ತು ವರ್ದೆ ನದಿಯ ಉತ್ತರಕ್ಕೆ. ಟೋಂಟೋಗಳು ಮೂಲತಃ ಯವಾಪೈಗಳು. ಅವರು ಪಶ್ಟಿಮ ಅಪಾಚೆ ಸಂಸ್ಕೃತಿಯನ್ನು ತಮ್ಮದನ್ನಾಗಿ ಮಾಡಿಕೊಂಡಿದ್ದಾರೆ ಎಂದು ಶ್ರೋಡರ್ ಸೂಚಿಸುತ್ತಾರೆ. ಪಶ್ಟಿಮ ಅಪಾಚೆ ಭಾಷೆಯಲ್ಲಿ ಟೋಂಟೋ ಒಂದು ಪ್ರಮುಖ ಉಪಭಾಷೆ. ಟೊಂಟೋ ಅಫಾಚೆಯನ್ನು ಮಾತನಾಡುವವರು ಸಾಂಪ್ರದಾಯಿಕವಾಗಿ ಪಶ್ಟಿಮ ಅಪಾಚೆ ಮತ್ತು ಯವಾಪೈಗಳಲ್ಲಿ ದುಭಾಷಿಗಳಾಗಿರುತ್ತಾರೆ. ಗುಡ್ವಿನ ಅವರ ಉತ್ತರದ ಟೋಂಟೋದಲ್ಲಿ ಬಾಲ್ಡ್ ಮೌಂಟೇನ್, ಫಾಸಿಲ್್ ಕ್ರೀಕ್, ಮೊರ್ಮನ್ ಲೇಕ್ ಮತ್ತು ಓಕ್ ಕ್ರೀಕ್ ಗುಂಪುಗಳು ಸೇರಿವೆ. ದಕ್ಷಿಣ ಟೋಂಟೋದಲ್ಲಿ ಮಝಾತ್ಜಲ್ ಗುಂಪು ಮತ್ತು ಗುರುತಿಸಿಲ್ಲದ "ಉಪ-ಗುಂಪು"ಗಳಿವೆ.
 • ವಾರ್ಮ್ ಸ್ಪ್ರಿಂಗ್ಸ್ ನ್ಯೂ ಮೆಕ್ಸಿಕೋದ ಗಿಲಾ ನದಿಯ ಒಳನಾಡಿನಲ್ಲ್ಲಿ ವಾಸಿಸುತ್ತಾರೆ. (ಗಿಲೆನೋ ಮತ್ತು ಮಿಂಬ್ರೆನೋಗಳನ್ನೂ ನೋಡಿ.)
 • ಪಶ್ಟಿಮ ಅಪಾಚೆ . ಅತ್ಯಂತ ಸಾಮಾನ್ಯ ಅರ್ಥದಲ್ಲಿ ಉತ್ತರದ ಟೋಂಟೋ, ದಕ್ಷಿಣದ ಟೋಂಟೋ, ಸಿಬೆಕ್ಯು, ವೈಟ್ ಮೌಂಟೇನ್ ಮತ್ತು ಸಾನ್ ಕಾರ್ಲೋಸ್ ಗುಂಪನ್ನು ಒಳಗೊಂಡಿದೆ. ಈ ಉಪಗುಂಪುಗಳು ಒಂದೇ ಭಾಷೆಯನ್ನು ಆಡುತ್ತವೆ ಮತ್ತು ರಕ್ತ ಸಂಬಂಧದ ಬಂಧನ ಹೊಂದಿವೆ. ಪಶ್ಟಿಮ ಅಪಾಚೆಗಳು ಗುಡ್ವಿನ್ ಪ್ರಕಾರ ತಮ್ಮಷ್ಟಕ್ಕೆ ತಾವು ಪ್ರತಿಯೊಬ್ಬರಿಂದ ಪ್ರತ್ಯೇಕ ಎಂದು ಪರಿಗಣಿಸಿಕೊಳ್ಳುತ್ತಾರೆ. ಇತರ ಲೇಖಕರು ರಿಯೋ ಗ್ರಾಂಡೆ ಪಶ್ಚಿಮಕ್ಕೆ ಬದುಕುವ ನವಾಜೋ ಅಪಾಚೆಯವರು ಅಲ್ಲದ ಎಲ್ಲರನ್ನು ಸೂಚಿಸಲು ಈ ಪದವನ್ನು ಬಳಸಿದರು. (ಈಮೂಲಕ ಇತರ ಅಪಾಚೆಯವರಿಂದ ಚಿರಿಕಹುಆವನ್ನು ಪ್ರತ್ಯೇಕವಾಗಿಸಲು ವಿಫಲರಾದರು. ಗುಡ್ವಿನ್ ಅವರ ಸೂತ್ರ: "ಇತಿಹಾಸ ಕಾಲದಿಂದಲೂ ಅರಿಜೋನಾದ ಈಗಿನ ಗಡಿಗಳ ಒಳಗೆ ಬದುಕುತ್ತಿರುವ ಎಲ್ಲರೂ ಅಪಾಚೆ ಜನರು. ಇದಕ್ಕೆ ಅಪವಾದ ಚಿರಿಕಹುಆ, ವಾರ್ಮ್ ಸ್ಪ್ರಿಂಗ್ಸ್, ಮತ್ತು ಒಟ್ಟು ಸೇರಿದ ಅಪಾಚೆಗಳು ಮತ್ತು ಮಾನ್ಸೋಸ್ ಎಂದು ಕರೆಯುವ ಟುಕ್ಸನ್ ಸಮೀಪ ವಾಸಿಸುವ ಅಪಾಚೆಗಳ ಸಣ್ಣ ಗುಂಪುಗಳು."[೮]
 • ವೈಟ್ ಮೌಂಟೇನ್ . ಗುಡ್ವಿನ್ ಪ್ರಕಾರ ಪಶ್ಟಿಮ ಅಪಾಚೆಯ ಪೂರ್ವದ ಕೊನೆಯ ಗುಂಪು. ಇದರಲ್ಲಿ ಪೂರ್ವದ ವೈಟ್ ಮೌಂಟೇನ್ ಮತ್ತು ಪಶ್ಚಿಮದ ವೈಟ್ ಮೌಂಟೇನ್ ಸೇರಿವೆ.

ಇತಿಹಾಸ[ಬದಲಾಯಿಸಿ]

ನೈಋತ್ಯಕ್ಕೆ ಪ್ರವೇಶ[ಬದಲಾಯಿಸಿ]

ಉತ್ತರ ಅಮೆರಿಕದ ನೈಋತ್ಯಕ್ಕೆ ಇರುವ ಅಪಾಚೆ ಮತ್ತು ನವಾಜೋ (ಡಿನೆ) ಬುಡಕಟ್ಟು ಗುಂಪುಗಳು ಒಂದಕ್ಕೊಂದು ಸಂಬಂಧವಿರುವ ಭಾಷಿಕ ಕುಟುಂಬದ ಭಾಷೆಗಳನ್ನು ಮಾತನಾಡುತ್ತವೆ. ಇದಕ್ಕೆ ಅಥಾಬಾಸ್ಕನ್ ಎನ್ನುವರು. ಉತ್ತರ ಅಮೆರಿಕದಲ್ಲಿ ಅಥಾಬಾಸ್ಕನ್ ಮಾತನಾಡುವ ಇತರ ಜನರು ಅಲಾಸ್ಕಾದಿಂದ ಪಶ್ಟಿಮ ಕೇಂದ್ರ ಕೆನಡಾ ವರೆಗೆ ಮತ್ತು ಕೆಲವು ಗುಂಪುಗಳು ವಾಯವ್ಯ ಪೆಸಿಫಿಕ್ ಕರಾವಳಿಯ ಉದ್ದಕ್ಕೂ ಕಾಣಬಹುದು. ಈ ಭಾಷಿಕ ಸಾಮ್ಯತೆಗಳು ನವಾಜೋ ಮತ್ತು ಅಪಾಚೆಗಳು ಒಂದುಕಾಲದಲ್ಲಿ ಒಂದೇ ಜನಾಂಗಿಕ ಗುಂಪು ಎನ್ನುವುದನ್ನು ಸೂಚಿಸುತ್ತವೆ. ಕ್ರಿ.ಶ. 1000ದ ನಂತರ ಅಮೆರಿಕದ ನೈಋತ್ಯಕ್ಕೆ ದಕ್ಷಿಣದ ಅಥಾಬಾಸ್ಕನ್ ಪ್ರವೇಶವಾಯಿತು ಎಂಬುದನ್ನು ಪುರಾತತ್ವ ಮತ್ತು ಐತಿಹಾಸಿಕ ಪುರಾವೆಗಳು ಸೂಚಿಸುತ್ತವೆ. ಅವರ ಅಲೆಮಾರಿ ಬದುಕಿನ ರೀತಿ ನಿರ್ದಿಷ್ಟ ಕಾಲವನ್ನು ಅರಿಯುವಲ್ಲಿ ತೊಡಕಾಗಿದೆ. ಪ್ರಾಥಮಿಕವಾಗಿ ಅವರು ಇತರ ನೈಋತ್ಯ ಗುಂಪುಗಳಿಗಿಂತ ಕಡಿಮೆ ಬಂದೋಬಸ್ತಿನ ಮನೆಗಳನ್ನು ನಿರ್ಮಿಸುತ್ತಿದ್ದರು.[೯] ಹೀಗಿದ್ದರೂ ಇತ್ತೀಚಿನ ವರ್ಷಗಳಲ್ಲಿ ಕಾಲ ನಿರ್ಣಯ ಮತ್ತು ಅವರ ನಿವಾಸಗಳನ್ನು ಹಾಗೂ ಭೌತಿಕ ಸಂಸ್ಕೃತಿಯ ರೂಪಗಳನ್ನು ಗುರುತಿಸುವಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸಲಾಗಿದೆ.[೧೦] ಅವರು ಕೂಡ ಹೆಚ್ಚು ಆಡಂಬರವಿಲ್ಲದ ಸಾಧನಗಳನ್ನು ಮತ್ತು ಭೌತಿಕ ವಸ್ತುಗಳನ್ನು ಬಿಟ್ಟುಹೋಗಿದ್ದಾರೆ. ಬಹುಶಃ ಈ ಗುಂಪು ಸಮಕಾಲೀನ ವಸತಿ ಪ್ರದೇಶಗಳಲ್ಲಿ ನೆಲೆಯಾಗಿರಬೇಕು ಅಥವಾ ಇತರ ಸಂಸ್ಕೃತಿಯವರು ಅಥವಾ ಇತ್ತೀಚಿನ ದಿನಗಳಲ್ಲಿ ಇತರ ಸಂಸ್ಕೃತಿಗಳಿಗೆ ವಶವಾಗಿರಬಹುದು. ಬಹುಶಃ ದಕ್ಷಿಣದ ಅಥಾಬಾಸ್ಕನ್ ಸೇರಿದಂತೆ ಅಥಾಬಾಸ್ಕನ್ ಮಾತನಾಡುವ ಇತರರು ತಮ್ಮ ಸ್ವಂತ ಸಂಸ್ಕೃತಿಯಲ್ಲಿ ತಮ್ಮ ನೆರೆಯವರ ತಂತ್ರಜ್ಞಾನ ಮತ್ತು ಆಚರಣೆಗಳನ್ನು ಅಳವಡಿಸಿಕೊಂಡಿದ್ದಾರೆ. ಹೀಗಾಗಿ ಆರಂಭದ ದಕ್ಷಿಣದ ಅಥಾಬಾಸ್ಕನ್ನರು ಬದುಕಿದ್ದ ಸ್ಥಳಗಳನ್ನು ಪತ್ತೆಮಾಡುವುದು ಕಷ್ಟ. ಅಮೆರಿಕದ ನೈಋತ್ಯದ ದಕ್ಷಿಣ ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸಿದ್ದರೂ ಸಾಂಸ್ಕೃತಿಕವಾಗಿ ದಕ್ಷಿಣದ ಅತಾಬಾಸ್ಕನ್ನರನ್ನು ನಿರ್ದಿಷ್ಟವಾಗಿ ಗುರುತಿಸುವುದು ಇನ್ನೂ ಹೆಚ್ಚು ಕಷ್ಟವಾಗಿದೆ. ಅಪಾಚೆಯವರ ವಲಸೆಗೆ ಸಂಬಂಧಸಿದಂತೆ ಅನೇಕ ಊಹೆಗಳಿವೆ. ದೊಡ್ಡ ಬಯಲಿನಿಂದ (ಗ್ರೇಟ್ ಪ್ಲೇನ್ಸ್) ಅವರು ನೈಋತ್ಯಕ್ಕೆ ಚಲಿಸಿದರು ಎಂದು ಒಬ್ಬರು ಊಹಿಸುತ್ತಾರೆ. 16ನೆ ಶತಮಾನದ ಆರಂಭದಲ್ಲಿ ಈ ಚಲಿಸುವ ಗುಂಪುಗಳು ಟೆಂಟುಗಳಲ್ಲಿ ವಾಸಿಸುತ್ತಿದ್ದವು. ಕಾಡೆತ್ತುಗಳನ್ನು ಬೇಟೆಯಾಡುವುದು ಮತ್ತು ಇತರ ಆಟಗಳನ್ನು ಆಡುತ್ತಿದ್ದರು. ತಮ್ಮ ಸಾಮಾನುಗಳ ಗಾಡಿ(ಟ್ರಾವೈಸ್)ಯನ್ನು ಎಳೆಯುವುದಕ್ಕೆ ನಾಯಿಯನ್ನು ಬಳಸುತ್ತಿದ್ದರು. 16ನೆ ಶತಮಾನದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಮತ್ತು ವಿಶಾಲ ಶ್ರೇಣಿಯಲ್ಲಿ ಸ್ಪ್ಯಾನಿಶ್ ಜನರು ದಾಖಲಿಸಿದ್ದಾರೆ.

ದ ಕೊರೊನಡೊ ಎಕ್ಸ್ ಪೆಡಿಶನ್ 1540–1542

” 1541ರ ಏಪ್ರಿಲ್ ನಲ್ಲಿ ಪುಯೆಬ್ಲೋ ಪ್ರದೇಶದ ಪೂರ್ವದ ಬಯಲಿನಲ್ಲಿ ಫ್ರಾನ್ಸಿಸ್ಕೋ ಕೊರೋನಾಡೋ ಪ್ರಯಾಣ ಮಾಡುತ್ತಿದ್ದಾಗ ಇವರನ್ನು " ಡಾಗ್ (ನಾಯಿ) ನೊಮಾಡ್ಸ್ (ಅಲೆಮಾರಿಗಳು)" ಎಂದು ಕರೆದರು. ಈ ಕುರಿತು ಅವನು ಹೀಗೆ ಬರೆದ:

ಹದಿನೇಳು ದಿನಗಳ ಪ್ರವಾಸದ ಬಳಿಕ ಈ ಪಶು (ಕಾಡೆತ್ತು)ಗಳನ್ನು ಬೆಂಬತ್ತುವ ಇಂಡಿಯನ್ನರ ಕಡು ದ್ವೇಷವನ್ನು ಕಂಡೆನು. ಈ ಮೂಲನಿವಾಸಿಗಳನ್ನು ಕ್ವೆರೆಚೋಸ್ ಎಂದು ಕರೆಯುತ್ತಾರೆ. ಅವರು ಭೂಮಿಯನ್ನು ಕೃಷಿ ಮಾಡುವುದಿಲ್ಲ. ಆದರೆ ಹಸಿ ಮಾಂಸವನ್ನು ತಿನ್ನುತ್ತಾರೆ ಮತ್ತು ತಾವು ಕೊಂದ ಪಶುವಿನ ರಕ್ತವನ್ನು ಕುಡಿಯುತ್ತಾರೆ. ಅವರು ಪಶುವಿನ ಚರ್ಮದ ಉಡುಪನ್ನು ತೊಡುತ್ತಾರೆ, ಆ ಪ್ರದೇಶದಲ್ಲಿ ವಾಸಿಸುವ ಅವರೆಲ್ಲರೂ ಪ್ರಾಣಿಯ ಚರ್ಮದ ಉಡುಪನ್ನೇ ಧರಿಸುವುದು. ಮತ್ತು ಉಡುಪನ್ನು ತಾವೇ ತಯಾರಿಸಿಕೊಳ್ಳುವರು. ಅವರು ಚೆನ್ನಾಗಿ ನಿರ್ಮಿಸಿಕೊಂಡ ಟೆಂಟುಗಳನ್ನು ಹೊಂದಿದ್ದಾರೆ. ಹದಮಾಡಿ ಕಂದುಬಣ್ಣಕ್ಕೆ ತಂದ ಮತ್ತು ಗ್ರೀಸ್ ಹಚ್ಚಿದ ಆಕಳ ಚರ್ಮದಿಂದ ಅದನ್ನು ನಿರ್ಮಿಸಿರುತ್ತಾರೆ. ಅದರಲ್ಲಿ ಅವರು ವಾಸಿಸುತ್ತಾರೆ. ಪಶುವನ್ನು ಬೆಂಬತ್ತಿದಂತೆಲ್ಲ ಅವರು ಟೆಂಟನ್ನೂ ತಮ್ಮ ಜೊತೆ ಒಯ್ಯುತ್ತಾರೆ. ತಮ್ಮ ಟೆಂಟ್್ಗಳು, ಕಂಬಗಳು ಮತ್ತು ತಮ್ಮ ಇತರ ಸಾಮಾನುಗಳನ್ನು ಎಳೆಯಲು ಅವರು ನಾಯಿಗಳನ್ನು ಹೊಂದಿರುತ್ತಿದ್ದರು. [೧೧]

ಸ್ಪೇನಿಗರು ಬಯಲು ನಾಯಿಗಳನ್ನು ಅತ್ಯಂತ ಬಿಳಿ, ಅದರ ಮೇಲೆ ಕಪ್ಪು ಕಲೆಗಳು ಮತ್ತು ನೀರಿನ ಸ್ಪಾನಿಯಲ್ ಗಳಿಗಿಂತ ಬಹಳ ದೊಡ್ಡದ್ದಲ್ಲ ಎಂದು ವರ್ಣಿಸಿದ್ದಾರೆ. ಬಯಲುಗಳ ನಾಯಿಗಳು ಆಧುನಿಕ ಉತ್ತರದ ಕೆನೆಡಾ ಜನರು ಭಾರವನ್ನು ಎಳೆಯಲು ಬಳಸುವುದಕ್ಕಿಂತ ಸ್ವಲ್ಪ ಚಿಕ್ಕದಿದ್ದವು. ಈ ನಾಯಿಗಳು ದೂರ ಪ್ರಯಾಣದಲ್ಲಿ 50 ಫೌಂಡ್ (20 ಕೆಜಿ)ವರೆಗೆ ಪ್ರತಿತಾಸಿಗೆ ಎರಡು ಅಥವಾ ಮೂರು ಮ್ವಲುಗಳ (3ರಿಂದ 5 ಕಿ.ಮೀ. ಪ್ರತಿ ತಾಸಿಗೆ) ವೇಗದಲ್ಲಿ ನಡೆಯುತ್ತವೆ ಎಂದು ಇತ್ತೀಚಿನ ಪ್ರಯೋಗಗಳು ತೋರಿಸಿವೆ.[೧೨] ಡಿಸ್ಮಲ್ ನದಿ ದೃಷ್ಟಿಯಿಂದ ನೋಡಿದಾಗ ಅಪಾಚೆಯ ಜನರಿಗೂ ಬಯಲು ವಲಸೆ ಸಿದ್ಧಾಂತಕ್ಕೂ ಸಂಬಂಧ ಏರ್ಪಟ್ಟಿದೆ. ನೆಬ್ರಾಸ್ಕ, ಪೂರ್ವ ಕೊಲರಾಡೋ ಮತ್ತು ಪಶ್ಚಿಮದ ಕನ್ಸಾಸ್್ಗಳಲ್ಲಿ 1675-1725ರಲ್ಲಿ ನಡೆಸಿದ ಉತ್ಖನನದಿಂದ ಮಡಿಕೆಗಳು ಮತ್ತು ಮನೆಗಳ ಪಳೆಯುಳಿಕೆಗಳು ಪತ್ತೆಯಾಗಿದ್ದು ಅವುಗಳಿಂದ ಪುರಾತತ್ವ ಸಂಸ್ಕೃತಿ ಕಂಡುಬಂದಿದೆ. ಹೀಗಿದ್ದರೂ ಮೊದಲ ಸಾಕ್ಷ್ಯರೂಪದ ಮೂಲಗಳು ಅಪಾಚೆಗಳನ್ನು ಉಲ್ಲೇಖಿಸಿವೆ ಮತ್ತು ಇತಿಹಾಸಕಾರರು 16ನೆ ಶತಮಾನದಲ್ಲಿ ಉತ್ತರದಿಂದ ಪ್ರವೇಶ ಪಡೆದಂತೆ ಕೆಲವು ಮಾರ್ಗಗಳನ್ನು ಸೂಚಿಸುತ್ತಾರೆ. ಮೊದಲಬಾರಿಗೆ ಅವರು ಸಂಪರ್ಕಕ್ಕೆ ಬಂದುದಕ್ಕಿಂತ ಬಹಳ ಹಿಂದೆಯೇ ಅವರು ಬಯಲುಗಳಲ್ಲಿ ವಾಸಿಸುತ್ತಿದ್ದರು ಎಂಬುದನ್ನು ಪುರಾತತ್ವ ದಾಖಲೆಗಳು ಸೂಚಿಸುತ್ತವೆ. ಇದರೊಂದಿಗೆ ಸ್ಪರ್ಧಿಸುವ ಇನ್ನೊಂದು ಸಿದ್ಧಾಂತವೆಂದರೆ ಶಿಲೆಗಳ ಪರ್ವತದಿಂದ ದಕ್ಷಿಣಕ್ಕೆ ವಲಸೆ ಬಂದುದು ಹಾಗೂ ಬಹುಶಃ 14ನೆ ಶತಮಾನ ಅಥವಾ ಅದಕ್ಕಿಂತಲೂ ಪೂರ್ವದಲ್ಲಿಯೇ ಅಮೆರಿಕದ ನೈಋತ್ಯ ಭಾಗವನ್ನು ತಲುಪಿದ್ದು. ಈ ಅಪಾಚೆಗಳ ಪೂರ್ವಜರನ್ನು ಸೆರ್ರೋ ರೋಜೋ ಕಾಂಪ್ಲೆಕ್ಸ್್ಗೆ ಸಂಬಂಧಿಸಿ ಉಲ್ಲೇಖಿಸುತ್ತಿರುವಾಗಲೆ ಪುರಾತತ್ವ ಭೌತಿಕ ಸಂಸ್ಕೃತಿಯ ಸಂಗ್ರಹವನ್ನು ಈ ಪರ್ವತ ವಲಯದಲ್ಲಿ ಗುರುತಿಸಲಾಗಿದೆ.[೧೩] ಈ ಸಿದ್ಧಾಂತವು ಬಯಲು ದಾರಿಯಿಂದ ಆಗಮಿಸಿದ್ದು ಎಂಬುದನ್ನು ಅಲ್ಲಗಳೆಯುವುದಿಲ್ಲ. ಬಹುಶಃ ಏಕಕಾಲದಲ್ಲಿ ಇರಬಹುದು. ಆದರೆ ಪರ್ವತಮಯ ನೈಋತ್ಯ ಪ್ರದೇಶದಲ್ಲಿಯೇ ಅತ್ಯಂತ ಹಳೆಯ ಪುರಾವೆಗಳು ದೊರೆಕಿರುವುದು. ಕೇವಲ ಬಯಲು ಅಪಾಚೆ ಮಾತ್ರ ಗಮನಾರ್ಹವೆನ್ನುವಂಥ ಬಯಲು ಸಂಸ್ಕೃತಿಯ ಪ್ರಭಾವ ಹೊಂದಿರುವುದು. ಆದರೆ ಉಳಿದೆಲ್ಲ ಬುಡಕಟ್ಟಿನವರು ವಿಶಿಷ್ಟವಾದ ಅಥಾಬಾಸ್ಕನ್ ಗುಣಲಕ್ಷಣಗಳನ್ನು ಹೊಂದಿದ್ದಾರೆ. ಮೌಂಟೇನ್ ಕ್ವೆರೆಚೋಸ್ ಮತ್ತು ಅಪಾಚೆ ವಾಕ್ವೆರೋಸ್ ಜನರ ವಿವರಣೆಗಳು ಅಸ್ಪಷ್ಟವಾಗಿದ್ದು ಅದನ್ನು ಇನ್ನೂ ಇತರ ಬಯಲು ಬುಡಕಟ್ಟಿನವರಿಗೆ ಅನ್ವಯಿಸಬಹುದು; ಈ ಗುಂಪುಗಳ ವಿಶಿಷ್ಟವಾಗಿರುವ ಗುಣಗಳು ನಿರ್ದಿಷ್ಟವಾಗಿ ಅಪಾಚೆಗಳನ್ನು ಹೋಲುವುದಿಲ್ಲ. ಅಲ್ಲದೆ, ಹ್ಯಾರಿ ಹೋಜೆರ್ ಅವರು ಬಯಲು ಅಪಾಚೆಗಳನ್ನು ಅಪಾಚೆಯ ಭಾಷೆಯೆಂದು ವರ್ಗೀಕರಿಸಿದ್ದು ವಿವಾದಕ್ಕೆ ಗುರಿಯಾಗಿದೆ. ಸ್ಪ್ಯಾನಿಶರು ಈ ಪ್ರದೇಶಕ್ಕೆ ಬಂದಾಗ, ದೀರ್ಘಕಾಲದಿಂದ ನಡೆದು ಬಂದಿದ್ದ ಪ್ಯುಬ್ಲೋ ಜನರ ಮತ್ತು ದಕ್ಷಿಣದ ಅಥಾಬಾಸ್ಕನ್ನರ ನಡುವಿನ ವ್ಯಾಪಾರ ಚೆನ್ನಾಗಿ ಕುದುರಿತ್ತು. ಪ್ಯುಬ್ಲೋಗಳು ಮೆಕ್ಕೆ ಜೋಳ ಮತ್ತು ನೇಯ್ಗೆ ಮಾಡಿದ ಹತ್ತಿಯ ವಸ್ತುಗಳನ್ನು ಕಾಡೆತ್ತಿನ ಮಾಂಸ, ಚರ್ಮಕ್ಕೆ ಮತ್ತು ಕಲ್ಲಿನ ಉಪಕರಣಗಳ ವಸ್ತುಗಳಿಗೆ ವಿನಿಮಯಮಾಡಿಕೊಳ್ಳುತ್ತಿದ್ದರು ಎಂದು ಅವರು ವರದಿ ಮಾಡಿದ್ದಾರೆ. ಬಯಲು ಜನರು ಪ್ಯುಬ್ಲೋಗಳ ಸ್ಥಾಪಿತ ಶಿಬಿರಗಳಲ್ಲಿ ಚಳಿಗಾಲವನ್ನು ಕಳೆಯುತ್ತಿದ್ದುದನ್ನು ಕೊರೋನಾಡೋ ವೀಕ್ಷಿಸಿದ್ದಾನೆ. ನಂತರ ಸ್ಪ್ಯಾನಿಶ್ ಜನರ ಆಧಿಪತ್ಯ ಆ ಪ್ರದೇಶದ ಮೇಲೆ ಸ್ಥಾಪನೆಯಾದಾಗ ಪ್ಯುಬ್ಲೋಗಳು, ಚದುರಿಹೋಗುತ್ತಿದ್ದ ಅಪಾಚೆಗಳು ಮತ್ತು ನವಾಜೋ ಗುಂಪುಗಳ ನಡುವಿನ ವ್ಯಾಪಾರಕ್ಕೆ ವ್ಯತ್ಯಯ ತಲೆದೋರಿತು. ಅಪಾಚೆಗಳು ಬೇಗನೆ ಕುದುರೆಗಳನ್ನು ಪಡೆದುಕೊಂಡರು, ವಲಸಿಗರು ಬಂದು ನೆಲೆಸಿರುವ ಪ್ರದೇಶಗಳ ಮೇಲೆ ಮಿಂಚಿನ ದಾಳಿ ನಡೆಸಲು ತಮ್ಮ ಚಲನೆಯ ಸಾಮರ್ಥ್ಯವನ್ನು ಸುಧಾರಿಸಿಕೊಂಡರು. ಇದರ ಜೊತೆಗೆ, ಪ್ಯುಬ್ಲೋಗಳನ್ನು ಸ್ಪ್ಯಾನಿಶ್ ಧರ್ಮಪ್ರಚಾರಕ ಮಂಡಳಿಯ ಭೂಮಿಗಳಲ್ಲಿ ದುಡಿಯುವುದಕ್ಕೆ ಬಲವಂತಪಡಿಸಲಾಯಿತು. ಮತ್ತು ಧರ್ಮಪ್ರಚಾರಕ ಮಂಡಳಿಯ ಸಾಕುಪ್ರಾಣಿಗಳನ್ನು ಕಾಯುವುದಕ್ಕೆ ಹಚ್ಚಲಾಯಿತು. ಹೀಗಾಗಿ ನೆರೆಯವರೊಂದಿಗೆ ವ್ಯಾಪಾರ ಮಾಡುವುದಕ್ಕೆ ಅವರ ಬಳಿ ಕಡಿಮೆ ವಸ್ತುಗಳು ಉಳಿದವು.[೧೪] ಆಧುನಿಕ ಪಶ್ಟಿಮ ಅಪಾಚೆ ಪ್ರದೇಶವು ವಸತಿ ಇಲ್ಲದ ಸ್ಥಳವಾಗಿತ್ತು ಎಂದು 1540ರಲ್ಲಿ ಕೋರೋನಡೋ ಬರೆದಿದ್ದಾನೆ. ಹೀಗಿದ್ದರೂ ಆತ ಅವರನ್ನು ಸುಲಭವಾಗಿ ಕಂಡಿರಲಿಲ್ಲ ಎಂದು ವಾದಿಸಿದವರೂ ಇದ್ದಾರೆ. ಇತರ ಸ್ಪೇನಿಯಾರ್ಡರು ಮೊದಲಿಗೆ ಉಲ್ಲೇಖಿಸಿದ್ದು 1580ರಲ್ಲಿ ರಿಯೋ ಗ್ರಾಂಡೆಯ ಪಶ್ಚಿಮಕ್ಕೆ ಜೀವಿಸುತ್ತಿದ್ದ "ಕ್ವೆರೆಚೋಸ್"ಗಳನ್ನು. ಕೆಲವು ಇತಿಹಾಸಕಾರರು ಇದನ್ನು 16ನೆ ಶತಮಾನದ ಕೊನೆ ಮತ್ತು 17ನೆ ಶತಮಾನದ ಆರಂಭದಲ್ಲಿ ಅಪಾಚೆಗಳು ತಮ್ಮ ಈಗಿನ ನೈಋತ್ಯದ ನೆಲೆಗೆ ಚಲಿಸಿದ್ದಕ್ಕೆ ಅನ್ವಯಿಸುವರು. ಪ್ಯುಬ್ಲೋ ಮಹಿಳೆಯರು ಮತ್ತು ಮಕ್ಕಳು ಮೇಲಿಂದಮೇಲೆ ಸ್ಥಳಾಂತರಗೊಂಡದ್ದನ್ನು ಕೊರೋನಡೋ ವರದಿಮಾಡಿದ್ದಾನೆ. ಇದಕ್ಕೆ ಕಾರಣ ಆತನ ತಂಡವು ಕಾಲಕಾಲಕ್ಕೆ ಇವರ ವಸತಿಯ ಮೇಲೆ ದಾಳಿ ಮಾಡಿದ್ದು. ಕೆಲವು ವಸತಿ ನೆಲೆಗಳನ್ನು ಆತ ರಿಯೋ ಗ್ರಾಂಡೆಯತ್ತ ಚಲಿಸಿದ ನಂತರ ಇತ್ತೀಚೆಗೆ ಮರುನಿರ್ಮಿಸಲಾಗಿದೆ ಎಂದು ಇತರ ಇತಿಹಾಸಕಾರರು ಗುರುತಿಸಿದ್ದಾರೆ ಈತನ ದ್ವೇಷದ ದಾಳಿಯ ಬಗ್ಗೆ ಅರೆ ಅಲೆಮಾರಿಗಳಾದ ದಕ್ಷಿಣದ ಅಥಾಬಾಸ್ಕನ್್ಗಳಿಗೆ ಮುಂದಾಗಿಯೇ ಎಚ್ಚರಿಕೆ ದೊರೆಯುತ್ತಿತ್ತು. ಈ ಕಾರಣದಿಂದ ಅವರು ಇವರ ಕಣ್ಣಿಗೆ ಬೀಳಲಿಲ್ಲ ಮತ್ತು ಅದನ್ನು ವರದಿ ಮಾಡಲಿಲ್ಲ ಎಂಬುದನ್ನು ಇದು ಸೂಚಿಸುತ್ತಿದೆ. ಅದನ್ನೇ ಸ್ಪ್ಯಾನಿಶರು ಬರೆದಿರುವುದು. 15ನೆ ಶತಮಾನ ಮತ್ತು ಬಹುಶಃ ಅದಕ್ಕೂ ಪೂರ್ವದಲ್ಲಿ ಆರಂಭದ ಮೂಲ ಅಪಾಚೆಗಳ ಅಸ್ತಿತ್ವ ನೈಋತ್ಯ ಪರ್ವತ ವಲಯದಲ್ಲಿ ಇದ್ದ ಬಗ್ಗೆ ಪ್ರಬಲವಾದ ಪುರಾವೆಗಳನ್ನು ಪುರಾತತ್ವಶಾಸ್ತ್ರಜ್ಞರು ಕಂಡುಹಿಡಿದಿದ್ದಾರೆ. ಬಯಲು ಪ್ರದೇಶ ಮತ್ತು ನೈಋತ್ಯದ ಬೆಟ್ಟಪ್ರದೇಶ ಎರಡರಲ್ಲೂ ಅವರ ಅಸ್ತಿತ್ವವು ಆರಂಭ ಕಾಲದ ವಲಸೆಯ ಬಹುಮಾರ್ಗಗಳನ್ನು ಸೂಚಿಸುತ್ತದೆ.

ಮೆಕ್ಸಿಕೋ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನದೊಂದಿಗೆ ಸಂಘರ್ಷ[ಬದಲಾಯಿಸಿ]

ಒಟ್ಟಾರೆಯಾಗಿ, ಇತ್ತೀಚೆಗೆ ಆಗಮಿಸಿ ಗ್ರಾಮಗಳಲ್ಲಿ ನೆಲೆಯಾದ ಸ್ಪೇನಿನವರು ಮತ್ತು ಅಪಾಚೆ ಗುಂಪುಗಳ ನಡುವೆ ಕೆಲವು ಶತಮಾನಗಳಿಂದ ಒಂದು ಮೇಲ್ಪಂಕ್ತಿ ರೂಢಿಯಾಗಿರುವಂತೆ ಕಂಡುಬರುತ್ತಿದೆ. ಇಬ್ಬರೂ ಪರಸ್ಪರ ದಾಳಿಯನ್ನೂ ಮಾಡಿದ್ದಾರೆ ವ್ಯಾಪಾರವನ್ನೂ ಮಾಡಿದ್ದಾರೆ. ವಿಶಿಷ್ಟವಾದ ಹಳ್ಳಿಗಳು ಮತ್ತು ವಿಶಿಷ್ಟವಾದ ಗುಂಪುಗಳು ಪರಸ್ಪರ ಹೇಗೆ ಪಾಲ್ಗೊಳ್ಳುತ್ತಾರೆ ಎನ್ನುವುದರ ಮೇಲೆ ಈ ಸಂಬಂಧಗಳು ಅವಲಂಬಿಸಿದ್ದವು ಎಂಬುದನ್ನು ಆ ಅವಧಿಯ ದಾಖಲೆಗಳು ಸೂಚಿಸುವಂತೆ ತೋರುತ್ತವೆ. ಉದಾಹರಣೆಗೆ ಒಂದು ಗುಂಪು ಒಂದು ಹಳ್ಳಿಯೊಂದಿಗೆ ಸ್ನೇಹಿತರಾಗಿದ್ದುಕೊಂಡು ಇನ್ನೊಂದು ಗ್ರಾಮದ ಮೇಲೆ ದಾಳಿಮಾಡುತ್ತಿದ್ದವು. ಇಬ್ಬರ ನಡುವೆ ಯುದ್ಧ ಸಂಭವಿಸಿದಾಗ ಸ್ಪೇನಿನವರು ಪಡೆಗಳನ್ನು ಕಳುಹಿಸುತ್ತಿದ್ದರು, ಕದನದ ಬಳಿಕ ಎರಡೂ ಕಡೆಯವರು "ಒಪ್ಪಂದಕ್ಕೆ ಸಹಿ" ಹಾಕುತ್ತಿದ್ದರು. ಮತ್ತು ಎರಡೂ ಕಡೆಯವರು ಮನೆಗೆ ತೆರಳುತ್ತಿದ್ದರು. 1821ರಲ್ಲಿ ಮೆಕ್ಸಿಕೋದ ಸ್ವಾತಂತ್ರ್ಯದ ಜೊತೆಗೇ ಸಾಂಪ್ರದಾಯಿಕ ಮತ್ತು ಕೆಲವೊಮ್ಮೆ ವಿಶ್ವಾಸಘಾತುಕದ ಸಂಬಂಧಗಳು ಗ್ರಾಮಗಳು ಮತ್ತು ಗುಂಪುಗಳ ನಡುವೆ ಮುಂದುವರಿದವು. 1835ರ ವೇಳೆಗೆ ಮೆಕ್ಸಿಕೋ ಅಪಾಚೆ ಶಿರಗಳ ಮೇಲೆ ಪ್ರೋತ್ಸಾಹ ಧನದ ಮಳೆಗರೆಯಿತು. (ನೋಡಿ ಪ್ರೋತ್ಸಾಹ ಧನ -scalping) ಆದರೆ ಕೆಲವು ಗುಂಪುಗಳು ಸದ್ದಿಲ್ಲದೆ ನಿರ್ದಿಷ್ಟ ಗ್ರಾಮಗಳ ಜೊತೆ ವ್ಯಾಪಾರ ನಡೆಸುತ್ತಿದ್ದವು. 1837ರಲ್ಲಿ ಪ್ರೋತ್ಸಾಹ ಧನಕ್ಕಾಗಿ ಮಿಂಬ್ರೆನೋ ಅಪಾಚೆಗಳ ನಾಯಕ ಜುಆನ್ ಜೋಸ್ ಕೊಂಪಾಸ್್ನ ಕೊಲೆಯಾದಾಗ ಮಂಗಾಸ್ ಕೋಲೋರಡಾಸ್ ಅಥವಾ ದಸೋಡಾ-ಹೇ (ರೆಡ್ ಸ್ಲೀವ್ಸ್) ಪ್ರಧಾನ ಮುಖ್ಯಸ್ಥನಾಗುತ್ತಾನೆ ಮತ್ತು ಯುದ್ಧದ ನಾಯಕನಾಗುತ್ತಾನೆ ಮತ್ತು ಮೆಕ್ಸಿಕೋದವರ ವಿರುದ್ಧ ಪ್ರತೀಕಾರದ ದಾಳಿಯ ಸರಣಿಯನ್ನು ನಡೆಸುತ್ತಾನೆ.

ಜೆರೊನಿಮೊ

ಅಮೆರಿಕ ಸಂಯುಕ್ತ ಸಂಸ್ಥಾನವು ಮೆಕ್ಸಿಕೋದ ವಿರುದ್ಧ ಯುದ್ಧ ನಡೆಸಿದಾಗ ಅನೇಕ ಅಪಾಚೆ ಗುಂಪುಗಳು ಯು.ಎಸ್. ಸೈನಿಕರಿಗೆ ತಮ್ಮ ಭೂಮಿಯಲ್ಲಿ ಸುರಕ್ಷಿತ ದಾರಿಯನ್ನು ನೀಡುವ ಭರವಸೆ ನೀಡಿದವು. ಮೆಕ್ಸಿಕೋದ ಮೊದಲಿನ ಪ್ರದೇಶಗಳ ಮೇಲೆ 1846ರಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನವು ತನ್ನ ಹಕ್ಕನ್ನು ಘೋಷಿಸಿದಾಗ ಮಂಗಾಸ್ ಕೋಲೋರಡಾಸ್ ಒಂದು ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದನು. ಮೆಕ್ಸಿಕೋದ ಪ್ರದೇಶಗಳ ಮೇಲಿನ ವಿಜಯಿಗಳು ಅವರು ಎಂಬುದನ್ನು ಗೌರವಿಸಿದನು. ಅಪಾಚೆಗಳು ಮತ್ತು ಈಗಿನ ಅಮೆರಿಕ ಸಂಯುಕ್ತ ಸಂಸ್ಥಾನದ ನಾಗರಿಕರ ನಡುವೆ ಒಂದು ಆತಂಕಕಾರಿ ಶಾಂತಿ ಒಪ್ಪಂದ 1850ರ ವರೆಗೆ ಉಳಿದುಬಂತು. ಸಂತಾ ರಿಟಾ ಪರ್ವತಕ್ಕೆ ಚಿನ್ನದ ಗಣಿಗಾರಿಕೆಯವರ ಪ್ರವಾಹ ಹರಿದು ಬಂದಾಗ ಸಂಘರ್ಷಕ್ಕೆ ದಾರಿಯಾಯಿತು. ಈ ಅವಧಿಯನ್ನು ಕೆಲವೊಮ್ಮೆ ಅಪಾಚೆ ಯುದ್ಧಗಳು ಎಂದು ಕರೆಯುತ್ತಾರೆ. ಅಮೆರಿಕ ಸಂಯುಕ್ತ ಸಂಸ್ಥಾನದ ಮೀಸಲು ಪರಿಕಲ್ಪನೆಯನ್ನು ಸ್ಪೇನಿನವರು, ಮೆಕ್ಸಿಕೋದವರು ಮತ್ತು ಇತರ ಅಪಾಚೆ ನೆರೆಯನ್ನು ಹೊಂದಿದವರು ಮೊದಲು ಬಳಸಿರಲಿಲ್ಲ. ಈ ಕಾಯ್ದಿರಿಸುವಿಕೆಯನ್ನು ಮೇಲಿಂದಮೇಲೆ ಕೆಟ್ಟದ್ದಾಗಿ ನಿರ್ವಹಿಸಲಾಗಿತ್ತು. ರಕ್ತಸಂಬಂಧದ ಬಾಂಧವ್ಯ ಇಲ್ಲದ ಗುಂಪುಗಳನ್ನೂ ಒಟ್ಟಿಗೆ ವಾಸಿಸಲು ಬಲವಂತಪಡಿಸಲಾಗಿತ್ತು. ಜನರನ್ನು ಒಳಗೆ ಅಥವಾ ಹೊರಗೆ ಇರಿಸಲು ಬೇಲಿಗಳು ಇರಲಿಲ್ಲ. ಅಲ್ಪ ಕಾಲಾವಧಿಗೆ ಮೀಸಲು ನೆಲೆಯನ್ನು ಬಿಟ್ಟು ಬೇರೆಡೆ ತೆರಳುವುದಕ್ಕೆ ಗುಂಪುಗಳಿಗೆ ಅನುಮತಿಯನ್ನು ನೀಡುವುದು ಅಸಾಮಾನ್ಯವೇನೂ ಆಗಿರಲಿಲ್ಲ. ಇತರ ಸಮಯದಲ್ಲಿ ಒಂದು ಗುಂಪು ಅನುಮತಿ ಇಲ್ಲದೆ ತೆರಳಿ ದಾಳಿ ಮಾಡುವುದಕ್ಕೆ, ಕೊಳ್ಳೆ ಹೊಡೆಯಲು ತಮ್ಮ ಭೂಮಿಗೆ ಬರುವುದಕ್ಕೆ ಅಥವಾ ಸರಳವಾಗಿ ತಪ್ಪಿಸಿಕೊಂಡು ಹೋಗುವುದಕ್ಕೆ ಅವಕಾಶವಿತ್ತು. ಮಿಲಿಟರಿಯು ಸಾಮಾನ್ಯವಾಗಿ ಹತ್ತಿರದಲ್ಲೇ ಕೋಟೆಗಳನ್ನು ಹೊಂದಿರುತ್ತಿದ್ದವು. ಮೀಸಲು ಪ್ರದೇಶಗಳಲ್ಲಿ ಇರುವ ವಿವಿಧ ಗುಂಪುಗಳನ್ನು ನೋಡಿಕೊಂಡು ಬಿಟ್ಟು ಹೋದವರನ್ನು ಮರಳಿ ಕರೆತರುವ ಕೆಲಸ ಇದರದಾಗಿತ್ತು. ಅಮೆರಿಕ ಸಂಯುಕ್ತ ಸಂಸ್ಥಾನದ ಮೀಸಲು ನೀತಿಗಳು ಇನ್ನೊಂದು ಕಾಲು ಶತಮಾನದ ಕಾಲ ವಿವಿಧ ಅಪಾಚೆ ಗುಂಪುಗಳು (ಯುದ್ಧದಲ್ಲಿ) ಮೀಸಲು ನೆಲೆಗಳನ್ನು ಬಿಡುವಂತೆ ಮಾಡಿದವು. ಅಪಾಚೆ ಜನರು ಮತ್ತು ಯುರೋ-ಅಮೆರಿಕನ್ ನಡುವಿನ ಯುದ್ಧ ಸರಿಯಾಗಿ ಗ್ರಹಿಸದೆ ಅಪಾರ್ಥವನ್ನು ಕಲ್ಪಿಸಿದ ಅಪಾಚಿಯನ್ ಸಂಸ್ಕೃತಿಯ ಕೆಲವು ನೆಲೆಯ ಮೇಲೆ ಏಕರೂಪದಲ್ಲಿ ಬೆಳಕು ಚೆಲ್ಲಿದವು ಎಂದು ಮಾನವ ಶಾಸ್ತ್ರಜ್ಞ ಕೀಥ್ ಬಸ್ಸೋ ದಾಖಲಿಸಿದ್ದಾನೆ.

"ಉತ್ತರ ಅಮೆರಿಕದ ಮೂಲ ನೆಲೆಯಲ್ಲಿ ವಾಸಿಸುತ್ತಿದ್ದ ಮತ್ತು ಚೆನ್ನಾಗಿ ಅಭಿವೃದ್ಧಿ ಹೊಂದಿದ ನೂರಾರು ಜನರಲ್ಲಿ ಕೆಲವರು ಸತತವಾಗಿ ಅರಿಝೋನಾ ಮತ್ತು ನ್ಯೂ ಮೆಕ್ಸಿಕೋದ ಅಪಾಚಿಗಳು ಎಂದು ತಪ್ಪಾಗಿ ಪ್ರತಿನಿಧಿಸಿದರು. ಕಾದಂಬರಿಕಾರರಿಂದ ವೈಭವೀಕರಿಸಲಾದ, ಇತಿಹಾಸಕಾರರಿಂದ ಭಾವೋದ್ರೇಕಗೊಳಿಸಲಾದ ಮತ್ತು ವಾಣಿಜ್ಯಕ ಸಿನಿಮಾ ತಯಾರಕರಿಂದ ವಿಶ್ವಾಸಾರ್ಹತೆಯ ಆಚೆಗೆ ಅಪಾರ್ಥಬರುವಂತೆ ಮಾಡಿದ, ಅಪಾಚೆಗಳ ಜನಪ್ರಿಯ ವ್ಯಕ್ತಿತ್ವವೆಂದರೆ- ಒಬ್ಬ ಮೃಗೀಯ, ಸ್ವೇಚ್ಛಾಚಾರದ ಸಾವು ಮತ್ತು ವಿನಾಶದ ಮೇಲೆ ಬಾಗಿದ ಭಯ ಹುಟ್ಟಿಸುವ ಅರೆ ಮಾನವ- ಹೆಚ್ಚೂಕಡಿಮೆ ಇದೊಂದು ಸಂಪೂರ್ಣ ಬೇಜವಾಬ್ದಾರಿಯ ವ್ಯಕ್ತಿಚಿತ್ರಣದ ಉತ್ಪನ್ನ ಮತ್ತು ವೈಭವೀಕರಣ. ನಿಜಕ್ಕೂ, ಅಪಾಚೆ ಮೂಲನಿವಾಸಿ ಅಮೆರಿಕದವನು ಒಂದು ಅಮೆರಿಕದ ದಂತಕಥೆಯಾಗಿ, ಕಾಲ್ಪನಿಕ ಮತ್ತು ಮೋಸಗೊಳಿಸುವ ಇಂಡಿಯನ್ನೇತರ ಪೌರರಾಗಿ ಬದಲಾಗಿರುವ ಬಗ್ಗೆ ಸ್ವಲ್ಪ ಅನುಮಾನಕ್ಕೆ ಅವಕಾಶವಿದೆ. ಜನಾಂಗಿಕ ಮತ್ತು ಸಾಂಸ್ಕೃತಿಕ ಪಡಿಯಚ್ಚುಗಳನ್ನು ಗುರುತಿಸುವಲ್ಲಿಯ ಅಸಾಮರ್ಥ್ಯದ ಮಹಾ ವಿಶ್ವಾಸಘಾತುಕತನ ತೋರಿಸಿರುವುದಕ್ಕೆ ಅವುಗಳನ್ನು ಕಾಯ್ದುಕೊಳ್ಳುವ ಮತ್ತು ಅವನ್ನು ಹಿಗ್ಗಿಸುವ ಇಚ್ಛೆಯು ಮಾತ್ರ ಸಾಟಿಯಾಗಬಲ್ಲುದು"[೧೫]

ಬಲವಂತದ ತೆರವು[ಬದಲಾಯಿಸಿ]

1875ರಲ್ಲಿ ಅಂದಾಜು 1,500 ಯವಾಪೈ ಮತ್ತು ಡಿಲ್ಜೆ ಅಪಾಚಿಗಳನ್ನು ರಿಯೋ ವೆರ್ಡೆ ಇಂಡಿಯನ್ ರಿಸರ್ವ್್ನಿಂದ ಅಮೆರಿಕ ಸಂಯುಕ್ತ ಸಂಸ್ಥಾನದ ಸರ್ಕಾರ ಭರವಸೆ ನೀಡಿದ ಅನೇಕ ಸಾವಿರ ಎಕರೆ ಕರಾರು ಭೂಮಿಯಿಂದ ಎತ್ತಂಗಡಿ ಮಾಡಲಾಯಿತು. ಇಂಡಿಯನ್ ಕಮಿಶನರ್ ಎಲ್.ಇ.ಡೌಡ್ಲಿ ಮತ್ತು ಯು.ಎಸ್. ಸೇನಾ ಪಡೆಗಳು ಯುವಕರು ಮಕ್ಕಳೆನ್ನದೆ ಆ ಜನರನ್ನು ದೂರದ ಸಾನ್್ ಕಾರ್ಲೋಸ್್180 miles (290 km)ಗೆ ಇಂಡಿಯನ್ ಏಜೆನ್ಸಿ ತಲುಪಲು ಆ ಚಳಿಯಲ್ಲಿ- ನೆರೆ ತುಂಬಿದ ನದಿಗಳಲ್ಲಿ, ಪರ್ವತ ಕಣಿವೆಗಳಲ್ಲಿ ಮತ್ತು ಕಿರಿದಾದ ಆಳದ ಕಮರಿಯಲ್ಲಿ ಸಾಗುವಂತೆ ಮಾಡಿದರು. ಈ ಚಾರಣದಲ್ಲಿ ಅನೇಕ ನೂರು ಜನರು ಪ್ರಾಣ ಕಳೆದುಕೊಂಡರು. ಅಲ್ಲಿ ಅವರು 25 ವರ್ಷಗಳ ವರೆಗೆ ನಿರ್ಬಂಧಿತರಾಗಿ ಉಳಿದರು. ಈ ನಡುವೆ ಬಂದು ನೆಲೆಯಾದ ಬಿಳಿಯ ವಲಸೆಗಾರರು ಅವರ ಭೂಮಿಯನ್ನು ಸ್ವಾಧೀನಪಡಿಸಿಕೊಂಡರು. ತಮ್ಮ ಬಿಡುಗಡೆಯ ಬಳಿಕ ಕೇವಲ ಸುಮಾರು 200 ಜನರಷ್ಟೇ ತಮ್ಮ ಭೂಮಿಗೆ ಮರಳುವುದಕ್ಕೆ ಶಕ್ತರಾದರು.[ಸೂಕ್ತ ಉಲ್ಲೇಖನ ಬೇಕು]

ಸೋಲು[ಬದಲಾಯಿಸಿ]

ಈ ಕಾಲದ ಬಹುತೇಕ ಅಮೆರಿಕದ ಇತಿಹಾಸಕಾರರು ಅರಿಝೋನಾದ ಸ್ಕೆಲೆಟನ್ ಕೆನಿಯೋನ್್ನಲ್ಲಿ ಸೆಪ್ಟೆಂಬರ್ 4 1886ರಂದು 5000 ಪಡೆಗಳು ಗೆರೋನಿಮೋದ 30ರಿಂದ 50 ಜನ ಪುರುಷರು, ಮಹಿಳೆಯರು ಮತ್ತು ಮಕ್ಕಳು ಶರಣಾಗುವಂತೆ ಮಾಡಿದ್ದನ್ನೇ ಅಂತಿಮ ಸೋಲೆಂದು ಹೇಳುತ್ತಾರೆ.[೧೬] ಈ ಗುಂಪು ಮತ್ತು ಇವರನ್ನು ಪತ್ತೆಹಚ್ಚಿದ ಚಿರಿಕಹುಆ ಬೇಹುಗಾರರು ಎಲ್ಲರನ್ನೂ ಫ್ಲೋರಿಡಾದಲ್ಲಿ ಫೋರ್ಟ್ ಪಿಕೆನ್ಸ್್ನಲ್ಲಿ ಮತ್ತು ನಂತರ ಓಕ್ಲಹಾಮಾದ ಫೋರ್ಟ್ ಸಿಲ್ಲ್್ನಲ್ಲಿ ಸೇನೆಯ ನಿರ್ಬಂಧದಲ್ಲಿ ಇರಿಸಲಾಯಿತು. 19ನೆಶತಮಾನದ ಕೊನೆಯ ಭಾಗದಲ್ಲಿ ಬೇಟೆಯಾಡುವುದು, ಬೋನು ರೂಪಿಸುವ ಕಥೆಗಳ ಕುರಿತು ಅನೇಕ ಪುಸ್ತಕಗಳನ್ನು ಬರೆಯಲಾಯಿತು. ಇವುಗಳಲ್ಲಿ ಅನೇಕ ಕಥೆಗಳು ಅಪಾಚೆ ದಾಳಿಗಳು ಮತ್ತು ಅಮೆರಿಕದವರು ಮತ್ತು ಮೆಕ್ಸಿಕೋದವರ ಜೊತೆ ಅವರು ಮಾಡಿಕೊಂಡ ಒಪ್ಪಂದದ ಕುರಿತು ಇವೆ. ಯುದ್ಧ ನಂತರದ ಕಾಲದಲ್ಲಿ, ಅಪಾಚೆ ಮಕ್ಕಳನ್ನು ಬಿಳಿಯ ಅಮೆರಿಕದವರು, ಆಸ್ಟ್ರೇಲಿಯಾದಲ್ಲಿರುವ ಕಳೆದುಹೋದ ತಲೆಮಾರುಗಳ ರೀತಿಯ ಕಾರ್ಯಕ್ರಮದಲ್ಲಿ ದತ್ತುಪಡೆದರು.

ಮೀಸಲು ಪೂರ್ವ ಸಂಸ್ಕೃತಿ[ಬದಲಾಯಿಸಿ]

ಸಾಮಾಜಿಕ ಸಂಘಟನೆ[ಬದಲಾಯಿಸಿ]

ಅಪಾಚೆ ವಧು

ಸಾಮಾನ್ಯವಾಗಿ ಹತ್ತಿರಹತ್ತಿರ ಬದುಕುವ ಎಲ್ಲ ಅಪಾಚೆಯ ಜನರು ವಿಸ್ತೃತವಾದ ಕುಟುಂಬ ಘಟಕಗಳಲ್ಲಿ (ಅಥವಾ ಕುಟುಂಬ ಸಮುದಾಯ ಗಳಲ್ಲಿ) ಜೀವಿಸುತ್ತಾರೆ. ಇದರಲ್ಲಿ ಪ್ರತಿಯೊಂದು ಕುಟುಂಬಕ್ಕೂ ಪ್ರತ್ಯೇಕ ಮನೆ ಇರುತ್ತದೆ. ಒಂದು ವಿಸ್ತೃತ ಕುಟುಂಬವು ಸಾಮಾನ್ಯವಾಗಿ ಗಂಡ ಮತ್ತು ಹೆಂಡತಿ, ಅವರ ಅವಿವಾಹಿತ ಮಕ್ಕಳು ಮತ್ತು ಅವರ ಮದುವೆಯಾದ ಹೆಣ್ಣುಮಕ್ಕಳು, ಅವರ ವಿವಾಹಿತ ಮಗಳಂದಿರ ಗಂಡಂದಿರು ಮತ್ತು ಅವರ ವಿವಾಹಿತ ಹೆಣ್ಣುಮಕ್ಕಳ ಮಕ್ಕಳು ಇರುತ್ತಾರೆ. ಹೀಗೆ ವಿಸ್ತೃತ ಕುಟುಂಬವು ಮಹಿಳೆಯರ ಕುಲದ ಸಂಬಂಧದ ಮೂಲಕ ಒಟ್ಟಿಗೆ ಬದುಕುತ್ತಾರೆ. (ಅದೊಂದು ಅಳಿಯ ಸಂತಾನದ ನಿವಾಸ) ಇದರಲ್ಲಿ ಮದುವೆಯ ಬಳಿಕ ಪರುಷನ ಪ್ರವೇಶವಾಗುತ್ತದೆ. (ಆತ ತನ್ನ ಹೆತ್ತವರ ಕುಟುಂಬವನ್ನು ಬಿಟ್ಟುಬರುತ್ತಾನೆ.) ಮಗಳೊಬ್ಬಳ ಮದುವೆಯಾದಾಗ, ಅವಳಿಗೆ ಮತ್ತು ಅವಳ ಪತಿಗೆ ಹತ್ತಿರದಲ್ಲಿಯೇ ಮನೆಯೊಂದನ್ನು ಕಟ್ಟಿಕೊಡಲಾಗುತ್ತದೆ ನವಾಜೋಗಳಲ್ಲಿ ಮನೆಯ ಹಕ್ಕುಗಳು ಹಿರಿಯಳಾದ ತಾಯಿಯಿಂದ ಚಲಾವಣೆಯಾಗುತ್ತದೆ. ಹೀಗಿದ್ದರೂ ಪಶ್ಚಿಮದ ಅಪಾಚೆಗಳು ಅಳಿಯತನಕ್ಕೆ ಹೋಗಿ ನೆಲೆಯಾಗುವುದು ಸಾಮಾನ್ಯವಾದರೂ ಕೆಲವು ಸಲ ಹಿರಿಯ ಮಗನು ತನ್ನ ಪತ್ನಿಯನ್ನು ಮದುವೆಯ ಬಳಿಕ ತನ್ನ ಹೆತ್ತವರ ಮನೆಗೇ ಕರೆದುಕೊಂಡು ಬರುವುದನ್ನು ಆಯ್ಕೆಮಾಡಿಕೊಳ್ಳಬಹುದು. ಎಲ್ಲ ಬುಡಕಟ್ಟಿನವರು ಸೋದರ ಸಂಬಂಧಲ್ಲಿ ಮದುವೆ ಮತ್ತು ಅಣ್ಣ ಸತ್ತರೆ ಆತನ ಹೆಂಡತಿಯನ್ನು ತಮ್ಮ ಮದುವೆಯಾಗುವ ಪದ್ದತಿಯನ್ನು ಅನುಸರಿಸುತ್ತಾರೆ. ಎಲ್ಲ ಅಪಾಚೆ ಪುರುಷರು ತಮ್ಮ ಪತ್ನಿಯ ಅತಿ ಹತ್ತಿರದ ಸಂಬಂಧಿಗಳನ್ನು ದೂರವಿಡುವ ವಿವಿಧ ರೀತಿಗಳನ್ನು ರೂಢಿಸಿಕೊಂಡಿರುತ್ತಾರೆ. ಈ ಪರಿಪಾಠವು ಅತ್ತೆ ಮತ್ತು ಅಳಿಯನನ್ನು ಒಂದು ಅಂತರದಲ್ಲಿ ಇರಿಸುತ್ತದೆ. ಈ ದೂರವಿಡುವಿಕೆಯ ಪರಿಣಾಮ ತೀವ್ರತೆಯು ವಿವಿಧ ಅಪಾಚೆ ಗುಂಪುಗಳಲ್ಲಿ ಬೇರೆಬೇರೆಯಾಗಿರುತ್ತದೆ. ಇದರಲ್ಲಿ ಅತ್ಯಂತ ಪರ್ಯಾಲೋಚನೆಯಿಂದ ಮಾಡಿದ ವ್ಯವಸ್ಥೆ ಚಿರಿಕಹುಆಗಳಲ್ಲಿದೆ. ಇಲ್ಲಿ ಪುರುಷನು ಪರೋಕ್ಷವಾಗಿಯೇ ಮಾತನಾಡಬೇಕು ಮತ್ತು ತನ್ನ ಪತ್ನಿಯ ಸಂಬಂಧಿಗಳಲ್ಲಿ ತಾನು ಯಾರನ್ನು ದೂರವಿಡಬೇಕೋ ಅಂಥವರು ತನ್ನ ದೃಷ್ಟಿಗೆ ಬೀಳದಂತೆ ಇರಬೇಕು. ಆತನ ಮಹಿಳಾ ಚಿರಿಕಹುಆ ಸಂಬಂಧಿಗಳು ಮದುವೆಯ ಮೂಲಕವೂ ಅವನನ್ನು ದೂರವಿಡುತ್ತಾರೆ. ಅನೇಕ ವಿಸ್ತೃತ ಕುಟುಂಬಗಳು "ಸ್ಥಳೀಯ ಗುಂಪು" ಗಳಾಗಿ ಒಟ್ಟಿಗೆ ಕೆಲಸ ಮಾಡುತ್ತವೆ. ಇವು ನಿರ್ದಿಷ್ಟ ಸಮಾರಂಭಗಳನ್ನು ಮತ್ತು ಆರ್ಥಿಕ ಹಾಗೂ ಮಿಲಿಟರಿ ಚಟುವಟಿಕೆಗಳನ್ನು ನಡೆಸುತ್ತಾರೆ. ರಾಜಕೀಯ ನಿಯಂತ್ರಣವು ಸ್ಥಳೀಯ ಗುಂಪಿನ ಮಟ್ಟದಲ್ಲಿ ಬಹುತೇಕ ಇದ್ದವು. ಸ್ಥಳೀಯ ಗುಂಪುಗಳಿಗೆ ಒಬ್ಬ ಮುಖ್ಯಸ್ಥ ಇರುತ್ತಾನೆ. ಈತ ತನ್ನ ಪರಿಣಾಕಾರಿ ಕಾರ್ಯ ಮತ್ತು ಗೌರವದ ಮೂಲಕ ಗುಂಪಿನ ಉಳಿದವರ ಮೇಲೆ ಸಾಕಷ್ಟು ಪ್ರಭಾವವನ್ನು ಬೀರಿದವನಾಗಿರುತ್ತಾನೆ. ಅಪಾಚೆ ಸಂಸ್ಕೃತಿಯಲ್ಲಿ ಈ ಮುಖ್ಯಸ್ಥ ಅತ್ಯಂತ ನಿಕಟ ಸಾಮಾಜಿಕ ಪಾತ್ರವನ್ನು ಹೊಂದಿದ್ದ. ಈ ಪದವಿಯು ವಂಶಪಾರಂಪರ್ಯವಾಗಿ ಬರುವದಿಲ್ಲ. ಮತ್ತು ಈ ಪದವಿಯನ್ನು ಮೇಲಿಂದಮೇಲೆ ವಿವಿಧ ವಿಸ್ತೃತ ಕುಟುಂಬದ ಸದಸ್ಯರು ಭರ್ತಿ ಮಾಡುತ್ತಾರೆ. ಈ ಗುಂಪಿನ ಪ್ರತಿಯೊಬ್ಬ ಸದಸ್ಯನೂ ಈ ಮುಖ್ಯಸ್ಥನ ಮಾತನ್ನು ಮೀರುವುದಿಲ್ಲ ಎಂದಾದಾಗ ಮಾತ್ರ ಆತನ ನಾಯಕತ್ವವರು ಬಲಿಷ್ಠವಾದದ್ದು ಎಂದು ಮೌಲ್ಯಮಾಪನ ಮಾಡಲಾಗುತ್ತಿತ್ತು.

ಪಶ್ಚಿಮ ಅಪಾಚೆಯವರು ಉತ್ತಮ ಮುಖ್ಯಸ್ಥನನ್ನು ಆಯ್ಕೆಮಾಡುವ ಮೌಲ್ಯಮಾಪನ ಮಾನದಂಡಗಳಲ್ಲಿ ಇವು ಸೇರಿವೆ: ಔದ್ಯಮೀಕತೆ, ಉದಾರತೆ, ನಿಷ್ಪಕ್ಷಪಾತತನ, ಸಹನಶೀಲತೆ, ಆತ್ಮಸಾಕ್ಷಿಯಂತೆ ನಡೆಯುವ ಗುಣ ಮತ್ತು ಭಾಷೆಯಲ್ಲಿ ನಿರ್ಗಳವಾಗಿ ಮಾತನಾಡುವ ಸಾಮರ್ಥ್ಯ. 

ಅನೇಕ ಅಪಾಚೆ ಜನರು ಸ್ಥಳೀಯ ಗುಂಪುಗಳಲ್ಲಿ ಒಟ್ಟಿಗೆ ಸೇರುತ್ತಾರೆ. ಇದಕ್ಕೆ "ಬಾಂಡ್ಸ್ (ಗುಂಪುಗಳು)" ಎನ್ನುವರು. ಬಾಂಡ್ ಸಂಘಟನೆಯು ಚಿರಿಕಹುಆ ಮತ್ತು ಪಶ್ಚಿಮ ಅಪಾಚೆಯವರಲ್ಲಿ ಅತ್ಯಂತ ಬಲಿಷ್ಠವಾಗಿತ್ತು. ಆದರೆ ಲಿಪಾನ್ ಮತ್ತು ಮೆಸ್ಕಲೆರೋಗಳಲ್ಲಿ ಇದು ದುರ್ಬಲವಾಗಿತ್ತು. ನವಾಜೋದವರು ಸ್ಥಳೀಯ ಗುಂಪುಗಳನ್ನು ಬಾಂಡ್್ಗಳಾಗಿ ಸಂಘಟಿಸಿಲ್ಲ, ಬಹುಶಃ ಇದಕ್ಕೆ ಕಾರಣ ಆರ್ಥಿಕತೆಯನ್ನು ಕಾಯ್ದುಕೊಳ್ಳುವ ಅಗತ್ಯ. ಹೀಗಿದ್ದರೂ ನವಾಜೋಗಳು ವಿಸ್ತೃತ ಕುಟುಂಬಕ್ಕಿಂತ ದೊಡ್ಡದಾದ ಸಂಬಂಧಿಗಳಿಂದ ಕೂಡಿ ಒಂದು ಗುಂಪಾದ "ಚಿಕ್ಕ ಸಂಘಟನೆ" ಹೊಂದಿದೆ. ಆದರೆ ಇದು ಸ್ಥಳೀಯ ಗುಂಪು ಸಮುದಾಯ ಅಥವಾ ಒಂದು ಬಾಂಡ್್ನಷ್ಟು ದೊಡ್ಡದಲ್ಲ. ದೊಡ್ಡ ಮಟ್ಟದಲ್ಲಿ ಪಶ್ಚಿಮ ಅಪಾಚೆಗಳು ಬಾಂಡ್್ಗಳನ್ನು ಗ್ರೀನ್್ವಿಲ್ಲೆ ಗುಡ್ವಿನ್ ಹೇಳಿದ "ಗುಂಪುಗಳಾಗಿ (ಗ್ರುಪ್ಸ್)" ಸಂಘಟಿಸಿದ್ದಾರೆ. ಆತ ಪಶ್ಚಿಮ ಅಪಾಚೆಯ ಐದು ಗುಂಪುಗಳನ್ನು ವರದಿ ಮಾಡಿದ್ದಾನೆ: ನಾರ್ಥನ್ ಟೋಂಟೋ, ಸದರ್ನ್ ಟೋಂಟೋ, ಸಿಬೆಕ್ಯು, ಸಾನ್ ಕಾರ್ಲೋಸ್ ಮತ್ತು ವೈಟ್ ಮೌಂಟೇನ್. ಜಿಕಾರಿಲ್ಲಾ ತಮ್ಮ ಬಾಂಡ್್ಗಳನ್ನು "ಮೋಯಿಟಿಸ್್"ಗಳಲ್ಲಿ ಗುಂಪುಮಾಡಿದ್ದಾರೆ. ಬಹುಶಃ ಇವರು ಈಶಾನ್ಯ ಪೆಬ್ಲೋಗಳನ್ನು ಉದಾಹರಣೆಯಾಗಿ ತೆಗೆದುಕೊಂಡಿರಬೇಕು. ಪಶ್ಚಿಮ ಅಪಾಚೆ ಮತ್ತು ನವಾಜೋಗಳು ಕೂಡ ಮಾತೃಪ್ರಧಾನ ಕುಟುಂಬ ವ್ಯವಸ್ಥೆಯನ್ನು ಹೊಂದಿದ್ದಾರೆ. ಒಬ್ಬನೇ ಮೂಲ ಪುರುಷನನ್ನು ಹೊಂದಿರುವ "ಕುಲ"ಗಳನ್ನು ಮುಂದೆ ಪ್ರಾಟ್ರೀಸ್್ ಗಳಾಗಿ ಸಂಘಟಿಸಲಾಗಿದೆ. (ಬಹುಶಃ ಪಶ್ಚಿಮ ಪೆಬ್ಲೋಗಳ ಪ್ರಭಾವ ಇರಬಹುದು.) ಅಪಾಚೆ ಸಂಸ್ಕೃತಿಗಳಲ್ಲಿ ಟ್ರೈಬ್(ಬುಡಕಟ್ಟು)ನ ಕಲ್ಪನೆ ಅತ್ಯಂತ ದುರ್ಬಲವಾಗಿ ಬೆಳವಣಿಗೆ ಹೊಂದಿದ್ದು; ಅಗತ್ಯವಾಗಿ ಇದು ಒಂದೇ ಭಾಷೆ ಮಾತನಾಡುವ, ಒಂದೇ ರೀತಿ ಉಡುಪು ತೊಡುವ ಮತ್ತು ಒಂದೇ ರೀತಿಯ ಪದ್ಧತಿಗಳನ್ನು ಹೊಂದಿರುವವರನ್ನು ಅತ್ಯಲ್ಪ ಆತಿಥ್ಯಕ್ಕೆ ಕರೆದು ಋಣಸಂದಾಯಕ್ಕೆ ಅನುಕೂಲವಾಗಿಸುವ ಸಂಘಟನೆ.[೧೭] ಈ ಏಳು ಅಪಾಚೆ ಬುಡಕಟ್ಟುಗಳು ಯಾವುದೇ ರಾಜಕೀಯ ಸಂಘಟನೆಯನ್ನು ಹೊಂದಿಲ್ಲ. (ಇಂಥ ಚಿತ್ರಣಗಳು ಸಾಮಾನ್ಯ ಗ್ರಹಿಕೆಗೆ ನಿಲುಕುವಂತಿದ್ದಾಗಲೂ)[೧೮] ಮತ್ತು ಬಹಳ ಸಲ ಅವರು ಪರಸ್ಪರ ವೈರಿಗಳಾಗಿದ್ದಾಗಲೂ- ಉದಾಹರಣೆಗೆ, ಲಿಪಾನ್ ಮೆಸ್ಕಲೆರೋ ವಿರುದ್ಧ ಯುದ್ಧ ಮಾಡುತ್ತಿದ್ದರು, ಇದೇ ರೀತಿ ಕೊಮಾಂಚೆಗಳ ವಿರುದ್ಧವೂ ಯುದ್ಧಮಾಡುತ್ತಿದ್ದರು.

ರಕ್ತಸಂಬಂಧದ ವ್ಯವಸ್ಥೆ[ಬದಲಾಯಿಸಿ]

ಅಪಾಚೆ ಬುಡಕಟ್ಟಿನವರು ಮೂಲಭೂತವಾಗಿ ಎರಡು ಆಶ್ಚರ್ಯಕರ ವಿಭಿನ್ನ ರಕ್ತಸಂಬಂಧ ಮಿತಿವ್ಯವಸ್ಥೆಗಳನ್ನು ಹೊಂದಿದ್ದಾರೆ.: ಒಂದು ಚಿರಿಕಹುಆ ರೀತಿ ಮತ್ತು ಇನ್ನೊಂದು ಜಿಕಾರಿಲ್ಲಾ ರೀತಿ. [೧೯] ಚಿರಿಕಹುಆ-ರೀತಿ ಪದ್ಧತಿಯನ್ನು ಚಿರಿಕಹುಆ, ಮೆಸ್ಕರೆಲೋ ಮತ್ತು ಪಶ್ಚಿಮ ಅಪಾಚೆಯವರು ಅನುಸರಿಸುತ್ತಾರೆ. ಪಶ್ಚಿಮ ಅಪಾಚೆ ಪದ್ಧತಿ ಇತರ ಎರಡು ಪದ್ಧತಿಗಳಿಂದ ಸ್ವಲ್ಪ ಭಿನ್ನವಾಗಿದೆ ಮತ್ತು ಇದು ನವಾಜೋ ಪದ್ಧತಿಯೊಂದಿಗೆ ಕೆಲವು ಸಾಮ್ಯತೆಗಳನ್ನು ಹೊಂದಿದೆ. ಡಕೋಟಾ–ಇರೋಕೋಯಿಸ್ ರಕ್ತಸಂಬಂಧಿ ಪದ್ಧತಿಯಂತೆಯೇ ಇರುವ ಜಿಕಾರಿಲ್ಲಾ ರೀತಿಯನ್ನು ಜಿಕಾರಿಲ್ಲಾ, ನವಾಜೋ, ಲಿಪಾನ್ ಮತ್ತು ಪ್ಲೇನ್ಸ್ ಅಪಾಚೆ ಬಳಸುತ್ತಾರೆ. ನವಾಜೋ ಪದ್ಧತಿಯು ಹೆಚ್ಚು ವೈವಿಧ್ಯಮಯವಾಗಿದ್ದು ಚಿರಿಕಹುಆ ರೀತಿಯ ಪದ್ಧತಿಯೊಂದಿಗೆ ಸಾಮ್ಯತೆಗಳನ್ನು ಹೊಂದಿದೆ. ಲಿಪಾನ್ ಮತ್ತು ಪ್ಲೇನ್ ಅಪಾಚೆ ಪದ್ಧತಿಗಳು ಬಹುತೇಕ ಅದೇರೀತಿ ಇವೆ.

ಚಿರಿಕಹುಆ[ಬದಲಾಯಿಸಿ]
ಅಪಾಚೆ ಹುಡುಗಿಯೊಬ್ಬಳು ಮೈನೆರೆದ ಉತ್ಸವವನ್ನು ಚರ್ಮದ ಚಿತ್ರಕಲೆಯಲ್ಲಿ ರೇಖಿಸಿರುವುದು. ನೈಚೆಯವರಿಂದ (ಚಿರಿಕಹುಆ ಅಪಾಚೆ), ಸುಮಾರು.1900 ಓಕ್ಲಹಾಮ ಇತಿಹಾಸ ಕೇಂದ್ರ

ಚಿರಿಕಹುಆದವರು ನಾಲ್ಕು ವಿಭಿನ್ನ ಹೆಸರುಗಳನ್ನು ಹೊಂದಿದ್ದಾರೆ.ಗ್ರಾಂಡ್ ಪೇರಂಟ್ (ಅಜ್ಜ ಅಜ್ಜಿ): -ಚು [೨೦] "ತಾಯಿಮನೆಯಿಂದ ಅಜ್ಜಿ", -ತ್ಸುಯೆ "ತಾಯಿಮನೆಯಿಂದ ಅಜ್ಜ", -ಚಿನೆ "ತಂದೆಯ ಮನೆಯಿಂದ ಅಜ್ಜಿ", -ನಲೆ "ತಂದೆಯ ಮನೆಯಿಂದ ಅಜ್ಜ". ಹೆಚ್ಚವರಿಯಾಗಿ, ಒಬ್ಬ ಅಜ್ಜ ಅಜ್ಜಿಯ ಮಕ್ಕಳನ್ನು ಅದೇ ಪದದಿಂದ ಗುರುತಿಸುವರು., ಹೀಗೆ ಒಬ್ಬರ ತಾಯಿಕಡೆಯಿಂದ ಅಜ್ಜಿ, ಒಬ್ಬರ ತಾಯಿಕಡೆಯಿಂದ ಅಜ್ಜಿಯ ಸಹೋದರಿಯರು ಮತ್ತು ಒಬ್ಬರ ತಂದೆಕಡೆಯಿಂದ ಅಜ್ಜಿಯ ಸಹೋದರರನ್ನು -ಚು .ಎಂದು ಕರೆಯುವರು. ಇನ್ನೂ ಹೆಚ್ಚಿನದೆಂದರೆ ಅಜ್ಜ ಅಜ್ಜಿ ಪದಗಳು ಪರಸ್ಪರ ಬಳಕೆಯಲ್ಲಿವೆ. ಹೇಗೆಂದರೆ ಅಜ್ಜ ಅಜ್ಜಿಯಂದಿರು ಅದೇ ಪದವನ್ನು ತಮ್ಮ ಮೊಮ್ಮಕ್ಕಳನ್ನು ಆ ಸಂಬಂಧದಲ್ಲಿ ಕರೆಯಲು ಬಳಸುವರು. ಉದಾಹರಣೆಗೆ, ಒಬ್ಬ ವ್ಯಕ್ತಿಯ ತಾಯಿಕಡೆಯಿಂದ ಅಜ್ಜಿಯಾದವಳನ್ನು -ಚು ಎಂದು ಕರೆಯಬಹುದು. ಮತ್ತು ಆ ತಾಯಿಕಡೆಯಿಂದ ಅಜ್ಜಿಯಾದವಳು ಆ ಮೊಮ್ಮಗನನ್ನೂ -ಚು ಎಂದೇ ಕರೆಯಬಹುದು (ಅದು ಹೀಗೆ. -ಚು ಅಂದರೆ ಒಬ್ಬರ ವಿರುದ್ಧ- ಲಿಂಗಿ ಮಕ್ಕಳ ಮಗಳ ಮಗ). ಚಿರಿಕಹುಆ ಸೋದರ ಸಂಬಂಧಿಗಳ ಸಂತತಿಯನ್ನು ರಕ್ತಸಂಬಂಧಿ ಪದಗಳಿಂದ ಪ್ರತ್ಯೇಕಿಸಿಲ್ಲ. ಹೀಗಾಗಿ ಒಂದೇ ಪದವನ್ನು ಸಂತತಿಗಾಗಲಿ ಅಥವಾ ಸೋದರ ಸಂಬಂಧಿಗಾಗಲಿ ಬಳಸುತ್ತಾರೆ. ( ಸಮಾನಾಂತರ ಸೋದರ ಸಂಬಂಧಿಗೆ ಮತ್ತು ಅಡ್ಡ ಸಂಬಂಧದ ಸೋದರ ಸಂಬಂಧಿಗಳಿಗೆ ಕರೆಯುವುದಕ್ಕೆ ಪ್ರತ್ಯೇಕ ಪದಗಳು ಇಲ್ಲ.) ಇದಲ್ಲದೆ ಪದಗಳನ್ನು ಮಾತನಾಡುವವನ ಲಿಂಗಕ್ಕೆ ಅನುಗುಣವಾಗಿ ಬಳಸುತ್ತಾರೆ. (ಇಂಗ್ಲಿಷ್ ಪದಗಳಾದ ಸಹೋದರ ಮತ್ತು ಸಹೋದರಿ ಯಂತೆ ಅಲ್ಲ) -kʼis(ಕಿಸ್) "ಇದೇ ರೀತಿಯ- ಲಿಂಗ ಸಂತಾನ ಅಥವಾ ಅದೇ ರೀತಿಯ ಲಿಂಗದ ಸಹೋದರ ಸಂಬಂಧಿಗಳು", -´-ląh (ಅಹ್) "ವಿರುದ್ಧ ಲಿಂಗದ ಸಂತಾನ ವಿರುದ್ಧ ಲಿಂಗದ ಸಹೋದರ ಸಂಬಂಧಿ." ಇದರರ್ಥ ಒಬ್ಬ ಗಂಡಸು ಇದ್ದರೆ ಆತನ ಸಹೋದರನನ್ನು -kʼis ಕಿಸ್ ಎಂದು ಮತ್ತು ಆ ಒಬ್ಬ ಗಂಡಸಿನ ಸಹೋದರಿಯನ್ನು -´-ląh-`-ಅಹ್ ಎಂದು ಕರೆಯುವರು. ಒಬ್ಬಳು ಮಹಿಳೆಯಾಗಿದ್ದರೆ ಆಗ ಅವಳ ಸಹೋದರನನ್ನು -´-ląh ಅಹ್ ಎಂದು ಮತ್ತು ಅವಳ ಸಹೋದರಿಯನ್ನು -kʼis -ಕಿಸ್ ಎಂದು ಕರೆಯಲಾಗುವುದು. ಚಿರಿಕಹುಆ ಅಹ್ ಸಂಬಂಧದಲ್ಲಿ ಸಂಬಂಧಿ ಮತ್ತು ಸಹೋದರ ಸಂಬಂಧಿಗಳ ಬಗ್ಗೆ ಅತಿಯಾದ ನಿರ್ಬಂಧಮತ್ತು ಗೌರವಗಳಿವೆ. (ಆದರೆ ಸಂತತಿಯವರ ಬಗ್ಗೆಯಲ್ಲ). ಅಹ್ ಸಂಬಂಧದಲ್ಲಿ ಸಂಪೂರ್ಣ ಪರಿತ್ಯಾಗ ದ ಪದ್ಧತಿ ಇದೆ. ಪ್ರತಿಯೊಬ್ಬ ಪಾಲಕರಿಗೆ ಎರಡು ವಿಭಿನ್ನ ಪದಗಳನ್ನು ಲಿಂಗಕ್ಕೆ ಅನುಗುಣವಾಗಿ ಬಳಸುತ್ತಾರೆ: -ಮಾʼ "ಮದರ್(ತಾಯಿ)", -ತಾ "ಫಾದರ್(ತಂದೆ)". ಇದೇರೀತಿ, ಪಾಲಕರ ಮಕ್ಕಳಿಗೂ ಅವರ ಲಿಂಗಕ್ಕೆ ಅನುಗುಣವಾಗಿ ಎರಡು ಪದಗಳಿವೆ: -ಯಾಚ್ʼಇʼ "ಡಾಟರ್(ಮಗಳು)", -ಘೇʼ "ಸನ್ (ಪುತ್ರ)". ಒಬ್ಬ ಪಾಲಕರ ಸಂತಾನವನ್ನು ಲಿಂಗ ಭೇದವಿಲ್ಲೆ ಒಟ್ಟಿಗೆ ವರ್ಗೀಕರಿಸುತ್ತಾರೆ: -ಘುಯೇ "ತಾಯಿ ಕಡೆಯಿಂದ ಚಿಕ್ಕಮ್ಮ ಅಥವಾ ಸೋದರಮಾವ (ತಾಯಿಯ ಸಹೋದರ ಅಥವಾ ಸಹೋದರಿ)", -ಡೀಡೀʼ "ತಂದೆಯ ಕಡೆಯಿಂ ಅತ್ತೆ ಅಥವಾ ಚಿಕ್ಕಪ್ಪ (ತಂದೆಯ ಸಹೋದರ ಅಥವಾ ಸಹೋದರಿ)". ಈ ಎರಡು ಪದಗಳು ಅಜ್ಜಅಜ್ಜಿ/ಮೊಮ್ಮಕ್ಕಳು ಪದಗಳ ಹಾಗೆ ಪರಸ್ಪರ ಬಳಕೆಯಾಗುತ್ತವೆ. ಹೀಗೆ, -ಘುಯೇ ಇದನ್ನು ಒಬ್ಬರ ವಿರುದ್ಧ ಲಿಂಗಿ ಸಂತಾನದ ಮಗ ಅಥವಾ ಮಗಳನ್ನು ಕರೆಯಲೂ ಬಳಸುವರು (ಅದು ಹೀಗೆ, ಒಬ್ಬ ವ್ಯಕ್ತಿ ತನ್ನ ತಾಯಿ ಕಡೆಯ ಚಿಕ್ಕಮ್ಮನನ್ನು -ಘುಯೇ ಎಂದು ಕರೆಯಬಹುದು ಮತ್ತು ಆ ಚಿಕ್ಕಮ್ಮ ಪ್ರತಿಯಾಗಿ ಅವರನ್ನು -ಘುಯೇ ಎಂದು ಕರೆಯಬಹುದು).

ಜಿಕಾರಿಲ್ಲಾ[ಬದಲಾಯಿಸಿ]

ಚಿರಿಕಹುಆ ವ್ಯವಸ್ಥೆಯಂತೆ ಅಲ್ಲದ, ಜಿಕಾರಿಲ್ಲಾ ಅಜ್ಜಅಜ್ಜಿಯರಿಗೆ ಲಿಂಗಕ್ಕೆ ಅನುಗುಣವಾಗಿ ಕೇವಲ ಎರಡು ಪದಗಳನ್ನು ಹೊಂದಿದೆ: -ಚೂ "ಅಜ್ಜಿ", -ತ್ಸೋಯೀ "ಅಜ್ಜ". ತಾಯಿಕಡೆ ಅಥವಾ ತಂದೆ ಕಡೆ ಅಜ್ಜಅಜ್ಜಿಗೆ ಪ್ರತ್ಯೇಕ ಪದಗಳು ಇಲ್ಲ. ಒಬ್ಬ ಅಜ್ಜಅಜ್ಜಿಯರ ಸಂತಾನದ ಲಿಂಗಕ್ಕೆ ಅನುಗುಣವಾಗಿ ಈ ಪದಗಳನ್ನು ಬಳಸುತ್ತಾರೆ. ಹೀಗೆ, -ಚೂ ಪದವು ಒಬ್ಬರ ಅಜ್ಜಿ ಅಥವಾ ಒಬ್ಬರ ಅಜ್ಜನ ತಂಗಿಗೆ ಬಳಕೆಯಾಗುತ್ತದೆ. (ತಾಯಿಕಡೆಯಿಂದ ಅಥವಾ ತಂದೆ ಕಡೆಯಿಂದ ಇರಬಹುದು); -ತ್ಸೋಯಿ ಯೆಂದು ಒಬ್ಬರ ಅಜ್ಜ, ಅಜ್ಜನ ಸಹೋದರಿಗೆ ಕರೆಯುತ್ತಾರೆ. ಈ ಪದಗಳು ಪರಸ್ಪರ ಬಳಕೆಯಾಗುವುದಲ್ಲ. ಮೊಮ್ಮಗುವಿಗೆ ಒಂದೇಒಂದು ಪದವಿದೆ (ಲಿಂಗವನ್ನು ಗಮನಕ್ಕೆ ತಾರದೆ): -tsóyí̱í (ತ್ಸೋಯಿ)̱ . ಪ್ರತಿ ಪಾಲಕರಿಗೂ ಎರಡು ಪದಗಳಿವೆ ಈ ಪದಗಳನ್ನು ಆ ಪಾಲಕರ ಅದೇ ಲಿಂಗದ ಸಂತಾನಕ್ಕೂ ಬಳಸುವರು: -ʼnííh (ನಿಹ್) "ತಾಯಿ ಅಥವಾ ತಾಯಿ ಕಡೆಯ ಚಿಕ್ಕಮ್ಮ (ತಾಯಿಯ ಸಹೋದರಿ)", -kaʼéé(ಕಾಯೀ) "ತಂದೆ ಅಥವಾ ತಂದೆ ಕಡೆಯಿಂದ ಚಿಕ್ಕಪ್ಪ (ತಂದೆಯ ಸಹೋದರ)". ಇದರ ಜೊತೆಗೆ, ಪಾಲಕರ ವಿರುದ್ಧ ಲಿಂಗಿ ಸಂತಾನಕ್ಕೆ ಅವರ ಲಿಂಗವನ್ನು ಅನುಸರಿಸಿ ಎರಡು ಪದಗಳು ಬಳಕೆಯಲ್ಲಿವೆ: -daʼá̱á̱(ದಾಆ) "ತಾಯಿ ಕಡೆಯಿಂದ ಮಾವ (ತಾಯಿಯ ಸಹೋದರ)", -béjéé(ಬೀಜಿ) "ತಂದೆ ಕಡೆಯಿಂದ ಅತ್ತೆ (ತಂದೆಯ ಸಹೋದರಿ). ಒಂದೇ ಲಿಂಗದ ಮತ್ತು ವಿರುದ್ಧ ಲಿಂಗದ ಸಂತಾನಕ್ಕೆ ಎರಡು ಪದಗಳನ್ನು ಬಳಸುತ್ತಾರೆ. ಈ ಪದಗಳನ್ನು ಸಮಾನಾಂತರ-ಸೋದರಸಂಬಂಧಿಗಳಿಗೆ: -kʼisé (ಕಿಸೆ) "ಒಂದೇ ರೀತಿ ಲಿಂಗದ ಸಂತಾನ ಅಥವಾ ಒಂದೇ ರೀತಿಯ ಲಿಂಗದ ಸಮಾನಾಂತರ ಸಹೋದರ ಸಂಬಂಧಿಗಳಿಗೆ (ಅದು. ಒಂದೇ-ಲಿಂಗಿ ತಂದೆಯ ಸಹೋದರನ ಮಗು ಅಥವಾ ತಾಯಿಯ ಸಹೋದರಿಯ ಮಗು)", -´-láh (ಲಾಹ್) "ವಿರುದ್ಧ-ಲಿಂಗಿ ಸಂತಾನ ಅಥವಾ ವಿರುದ್ಧ ಸಮಾನಾಂತರ ಸೋದರ ಸಂಬಂಧಿ (ಅದು. ವಿರುದ್ಧ-ಲಿಂಗಿ ತಂದೆಯ ಸಹೋದರನ ಮಗು ಅಥವಾ ತಾಯಿಯ ಸಹೋದರಿಯ ಮಗು)" ಇವರಿಗೂ ಬಳಸುತ್ತಾರೆ. ಈ ಎರಡು ಪದಗಳನ್ನು ಕತ್ತರಿ-ಸೋದರಸಂಬಂಧಿಗಳಿಗೂ ಬಳಸುತ್ತಾರೆ. ಇವಲ್ಲದೆ ಇನ್ನೂ ಮೂರು ಸಂತಾನದ ಪದಗಳು ಮಾತನಾಡುವವನ ವಯಸ್ಸಿಗೆ ಅನುಗುಣವಾಗಿ ಇವೆ: -ndádéé (ಎನ್ಡಾಡೀ) "ಹಿರಿಯ ಸಹೋದರಿ", -´-naʼá̱á̱ (ನಆ "ಹಿರಿಯ ಸಹೋದರ", -shdá̱zha (ಶ್ದಝಾ) "ಕಿರಿಯ ಸಂತಾನ (ಅದು. ಕಿರಿಯ ಸಹೋದರಿ ಅಥವಾ ಸಹೋದರ)". ಇದರ ಜೊತೆಯಲ್ಲಿ, ಕತ್ತರಿ-ಸೋದರಸಂಬಂಧಿಗಳಿಗೆ ಪ್ರತ್ಯೇಕ ಪದಗಳಿವೆ: -zeedń(ಝೀದ್ನ್ "ಕತ್ತರಿ-ಸೋದರ ಸಂಬಂಧಿ (ಮಾತನಾಡುವವನದೇ-ಲಿಂಗದವರಿರಬಹುದು ಅಥವಾ ವಿರುದ್ಧ ಲಿಂಗದವರು ಇರಬಹುದು)", -iłnaaʼaash(ಇನಾಆಶ್ "ಪುರುಷ ಕತ್ತರಿ-ಸೋದರ ಸಂಬಂಧಿ" (ಪುರುಷರು ಮಾತನಾಡುವಾಗ ಮಾತ್ರ ಬಳಸುವರು). ಒಬ್ಬ ಪಾಲಕರ ಮಗುವನ್ನು ಅವರ ಅದೇ ಲಿಂಗದ ಸಂತಾನದೊಂದಿಗೆ ವರ್ಗೀಕರಿಸುವರು. ಅಥವಾ ಅದೇ ಲಿಂಗದ ಸೋದರ ಸಂಬಂಧಿಯ ಮಗುವಿನೊಂದಿಗೆ: -zhácheʼe (ಝಾಚೆ) "ಮಗಳು, ಅದೇ-ಲಿಂಗಿ ಸಂತಾನದ ಮಗಳು, ಅದೇ-ಲಿಂಗಿ ಸೋದರ ಸಂಬಂಧಿಯ ಮಗಳು", -gheʼ(ಘೇ) "ಮಗ, ಅದೇ-ಲಿಂಗಿ ಸಂತಾನದ ಮಗ, ಅದೇ-ಲಿಂಗಿ ಸೋದರ ಸಂಬಂಧಿಯ ಮಗ". ವಿರುದ್ಧ-ಲಿಂಗಿ ಸಂತಾನದ ಮಗುವಿಗೆ ವಿವಿಧ ಪದಗಳಿವೆ: -daʼá̱á̱(ದಆ) "ವಿರುದ್ಧ-ಲಿಂಗಿ ಸಂತಾನದ ಮಗಳು", -daʼ(ದ) "ವಿರುದ್ಧ-ಲಿಂಗಿ ಸಂತಾನದ ಮಗ".

ವಸತಿ[ಬದಲಾಯಿಸಿ]

ಅಪಾಚೆ ಗುಡಿಸಲಿನ ಚೌಕಟ್ಟು

ಎಲ್ಲ ಅಪಾಚೆ ಬುಡಕಟ್ಟಿನ ಜನರು ಮೂರು ರೀತಿಯ ಮನಗಳಲ್ಲಿ ಒಂದರಲ್ಲಿ ವಾಸಿಸುವರು. ಇವುಗಳಲ್ಲಿ ಮೊದಲಿನದು ಟೀಪೀ, ಇದರಲ್ಲಿ ಬಯಲುಸೀಮೆ ವಾಸಿಗಳು ವಾಸಿಸುವರು. ಇನ್ನೊಂದು ರೀತಿಯ ಮನೆ ವಿಕಿಅಪ್, ಇದು ಎಂಟು ಅಡಿ ಎತ್ತರದ ಕಟ್ಟಿಗೆಯ ಚೌಕಟ್ಟನ್ನು ಹೊಂದಿದ್ದು ಕತ್ತಾಳೆಯನ್ನು ಹೋಲುವ ಯಕ ಮರದ ನಾರು ಬಳಸಿ ಕಟ್ಟಿರುತ್ತಾರೆ. ಇದಕ್ಕೆ ಇದಕ್ಕೆಕುರುಚಲು ಪೊದೆಗಳ ಮುಚ್ಚಿಗೆ ಮಾಡಿರುತ್ತಾರೆ. ಪ್ರಸ್ಥಭೂಮಿಗಳಲ್ಲಿ ಇರುವ ಅಪಾಚೆ ಗುಂಪಿನವರು ಇದನ್ನು ಬಳಸುತ್ತಾರೆ. ವಿಕಿಅಪ್್ನಲ್ಲಿ ವಾಸಿಸುವ ಕುಟುಂಬದ ಸದಸ್ಯರಲ್ಲಿ ಒಬ್ಬರು ನಿಧನರಾದರೆ ಆ ವಿಕಿಅಪ್್ಅನ್ನು ಸುಟ್ಟುಹಾಕುವರು. ಕೊನೆಯ ಮನೆ ಹೋಗನ್, ಮರುಭೂಮಿ ಪ್ರದೇಶದಲ್ಲಿ ಕಟ್ಟುವ ಮಣ್ಣಿನ ರಚನೆ. ಇದು ಉತ್ತರ ಮೆಕ್ಸಿಕೋದ ಬಿಸಿಯಾದ ವಾತಾವರಣದಲ್ಲಿ ತಂಪನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ. ಇದು ನೆರವಾಗುತ್ತದೆ. ಮಾನವಶಾಸ್ತ್ರಜ್ಞ ಮೊರಿಸ್ ಓಪ್ಲರ್ ದಾಖಲಿಸಿದ ಚಿರಿಕಹುಆ ವಿಕಿಅಪ್್ಗಳ ವಿವರಣೆಯು ಕೆಳಗಿದೆ:

ಕುಟುಂಬವು ವಾಸಿಸುವ ಮನೆಯನ್ನು ಮಹಿಳೆಯರು ನಿರ್ಮಿಸುತ್ತಾರೆ. ಇದು ಸಾಮಾನ್ಯವಾದ ವರ್ತುಳವಾಗಿರುವ, ಗುಂಬಜಾಕಾರದ, ಪೊದೆಗಳಿಂದ ಮುಚ್ಚಿದ ಮನೆ, ಮನೆಯ ನೆಲವು ಭೂಮಿ ಮಟ್ಟದಲ್ಲಿ ಇರುವುದು. ಇದು ಮಧ್ಯದಲ್ಲಿ ಏಳು ಅಡಿ ಎತ್ತರವಾಗಿರುತ್ತದೆ. ಮತ್ತು ಸುಮಾರು ಎಂಟು ಅಡಿ ಸುತ್ತಳತೆಯದಾಗಿರುತ್ತದೆ. ಇದನ್ನು ನಿರ್ಮಿಸಲು ಓಕ್ ಅಥವಾ ವಿಲ್ಲೋ ಮರಗಳ ಉದ್ದವಾದ ಹೊಸ ಕಂಬಗಳನ್ನು ಬಳಸುತ್ತಾರೆ. ಅವನ್ನು ಎಳೆದು ತಂದು ಅಗೆಯುವ ಕೋಲುಗಳಿಂದ ಕುಣಿಗಳನ್ನು ಮಾಡಿ ನಿಲ್ಲಿಸುತ್ತಾರೆ. ಈ ಕಂಬಗಳು ಚೌಕಟ್ಟನ್ನು ರೂಪಿಸುತ್ತವೆ. ಇವನ್ನು ಪ್ರತಿ ಒಂದು ಅಡಿ ಅಂತರದಲ್ಲಿ ಮಾಡುವರು. ತುದಿಯಲ್ಲಿ ಇವನ್ನು ಯಕ-ಎಲೆಯ ಹಗ್ಗದಿಂದ ಬಂಧಿಸುವರು ಅವುಗಳ ಮೇಲೆ ದೊಡ್ಡ ನೀಲಿದಂಟಿನ ಹುಲ್ಲನ್ನು ಅಥವಾ ಕರಡಿ ಹುಲ್ಲನ್ನು ಮುಚ್ಚಿ ಕಟ್ಟಿ ಚಾವಣಿ ಮಾಡುವರು. ಹಂಚಿನ ಹಲಗೆಗಳನ್ನು ಮುಚ್ಚುವರು, ಯಕದ ಹಗ್ಗದಿಂದ ಕಟ್ಟುವರು. ಮನೆಯಲ್ಲಿ ಬೆಂಕಿ ಉರಿಸುವ ಸ್ಥಳದ ಮಧ್ಯದಲ್ಲಿ ಹೊಗೆಗಂಡಿಯನ್ನು ಇರಿಸುವರು. ಒಂದು ಚರ್ಮವನ್ನು ಬಾಗಿಲ್ಲಿ ತೂಗುವರು. ಇದನ್ನು ಕತ್ತರಿ ದಂಡದ ಮೇಲೆ ಅಂಟಿಸುವರು. ಹೀಗೆ ಮಾಡುವುದರಿಂದ ಅದು ಮುಂದೆ ಹಿಂದೆ ತೂಗಾಡುತ್ತದೆ. ಬಾಗಿಲು ಮುಖ ಯಾವ ದಿಕ್ಕಿನಲ್ಲೂ ಇರಬಹುದು. ನೀರು ಸೋರದಂತೆ ಮಾಡಲು ಚರ್ಮದ ಚೂರುಗಳನ್ನು ಚಾವಣಿಯ ಹೊರಭಾಗದ ಮೇಲೆ ಎಸೆಯುವರು. ಮಳೆಗಾಲದಲ್ಲಿ ಬೆಂಕಿಯು ಅಗತ್ಯವಿಲ್ಲ ಎಂದಾದರೆ ಹೊಗೆಗಂಡಿಯನ್ನೂ ಮುಚ್ಚುವರು. ಬೆಚ್ಚಗಿನ ಮತ್ತು ಒಣ ಹವಾಮಾನದಲ್ಲಿ ಹೊರ ಚಾವಣಿಯ ಬಹುಭಾಗವನ್ನು ಸೀಳಿಹಾಕುವರು. ಈ ರೀತಿಯ ಗಟ್ಟಿಮುಟ್ಟಾದ ಮನೆಯನ್ನು ನಿರ್ಮಿಸಲು ಹೆಚ್ಚುಕಡಿಮೆ ಮೂರು ದಿನಗಳು ಬೇಕಾಗುತ್ತವೆ. ‘ಭಾರೀ ಮಂಜು ಇದ್ದರೂ ಈ ಮನೆಗಳು ಬೆಚ್ಚಗಿದ್ದು ಅನುಕೂಲಕರವಾಗಿರುತ್ತವೆ.’ ಮನೆಯ ಒಳಗೆ ಪೊದೆ ಮತ್ತು ಹುಲ್ಲುಗಳಿಂದ ಮಾಡಿದ ಹಾಸುಗೆ, ಅದರ ಮೇಲೆ ತುಪ್ಪಳಿನ ಕಂಬಳಿಯನ್ನು ಹಾಸಿರುತ್ತಾರೆ...."
ಚಿರಿಕಹುಆ ವೈದ್ಯಕೀಯ ವ್ಯಕ್ತಿ ಹುಲ್ಲು ಹೊದೆಸಿದ ಗುಡಿಸಿಲಿನಲ್ಲಿ ಕುಟುಂಬದೊಂದಿಗೆ.
"ಮಹಿಳೆಯರು ಮನೆಯನ್ನು ವಾಸಯೋಗ್ಯವಾಗಿ ಸಜ್ಜುಗೊಳಿಸುವುದಷ್ಟೇ ಅಲ್ಲ, ಅದನ್ನು ನಿರ್ಮಿಸುವುದಕ್ಕೂ, ನಿರ್ವಹಿಸುವುದಕ್ಕೂ ಮತ್ತು ದುರಸ್ತಿ ಮಾಡುವುದಕ್ಕೂ ಹೊಣೆಯಾಗಿರುತ್ತಾರೆ. ಮತ್ತು ಅದರಲ್ಲಿಯ ಎಲ್ಲ ವ್ಯವಸ್ಥೆಗೂ ಅವರೇ ಹೊಣೆ. ಅವಳು ಹುಲ್ಲು ಮತ್ತು ಪೊದೆಗಳ ಹಾಸುಗೆಯನ್ನು ಒದಗಿಸುತ್ತಾಳೆ ಮತ್ತು ಅವು ಬಹಳ ಹಳೆಯವು ಮತ್ತು ಒಣಗಿದವೂ ಆದಾಗ ಅವನ್ನು ಬಲಿಸುತ್ತಾಳೆ... ಏನಿದ್ದರೂ, ಹಿಂದಿನ ಕಾಲದಲ್ಲಿ ‘ಅವರಿಗೆ ಶಾಶ್ವತ ಮನೆಗಳು ಇರಲಿಲ್ಲ. ಹೀಗಾಗಿ ಅವರು ಸ್ವಚ್ಛಗೊಳಿಸುವ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ.’ ಗುಮ್ಮಟಾಕಾರದ ವಸತಿ ಅಥವಾ ವಿಕಿಅಪ್, ಚಿರಿಕಹುಆ ಬ್ಯಾಂಡ್್ನವರಿಗೆ ಅದೇ ಸಾಮಾನ್ಯವಾದ ಮನೆಯ ರೀತಿ ಈಗಾಗಲೆ ವರ್ಣಿಸಲಾಗಿದೆ.... ಕೇಂದ್ರ ಚಿರಿಕಹುಆ ಮಾಹಿತಿದಾರ ಹೇಳಿದ:
ಟೇಪೀ ಮತ್ತು ಮೊಟ್ಟೆಯಾಕಾರದ ಮನೆಗಳು ನಾನು ಹುಡುಗನಾಗಿದ್ದಾಗ ಬಳಕೆಯಲ್ಲಿದ್ದವು. ಮೊಟ್ಟೆಯಾಕಾರದ ಗುಡಿಸಲನ್ನು ಚರ್ಮದಿಂದ ಮುಚ್ಚಿರುತ್ತಿದ್ದರು ಮತ್ತು ಅವು ಅತ್ಯುತ್ತಮ ಮನೆಗಳಾಗಿದ್ದವು. ಹೆಚ್ಚು ಚೆನ್ನಾಗಿರಬೇಕೆನ್ನುವವರು ಈ ರೀತಿಯವನ್ನು ಹೊಂದಿರುತ್ತಿದ್ದರು. ಟೇಪೀ ರೀತಿಯವನ್ನು ಕೇವಲ ಕುರುಚಲು ಪೊದೆಗಳಿಂದ ಮಾಡುತ್ತಿದ್ದರು. ಇದರ ಮಧ್ಯದಲ್ಲಿ ಬೆಂಕಿಗೆ ಒಂದು ಸ್ಥಳ ಇರುತ್ತಿತ್ತು. ಇದನ್ನು ಸುಮ್ಮನೆ ಒಟ್ಟಿಗೆ ಎಸೆಯುವಂಥದ್ದು. ನನ್ನ ಕಾಲಕ್ಕಿಂತಲೂ ಮೊದಲು ಇವೆರಡೂ ರೀತಿಯವು ಸಾಮಾನ್ಯವಾಗಿದ್ದವು.....
"ಹೆಚ್ಚು ಸಾಮಾನ್ಯವಾಗಿರುವ ಗುಮ್ಮಟಾಕಾರದ ವೈವಿಧ್ಯಕ್ಕಿಂತ ಭಿನ್ನವಾಗಿರುವ ಒಂದು ಮನೆಯ ರೀತಿಯು ದಕ್ಷಿಣದ ಚಿರಿಕಹುಆದವರದು ಹೀಗೆ ದಾಖಲಾಗಿದೆ:
... ನಾವು ಒಂದು ಕಡೆ ನೆಲೆನಿಂತ ಮೇಲೆ ನಾವು ವಿಕಿಅಪ್್ಗಳನ್ನು ರೂಡಿಸಿಕೊಂಡೆವು. ನಾವು ಒಂದೆಡೆಯಿಂದ ಇನ್ನೊಂದೆಡೆ ಸಂಚರಿಸುತ್ತಿದ್ದಾಗ ಬೇರೆರೀತಿಯದನ್ನು ಬಳಸುತ್ತಿದ್ದೆವು. "[೨೧]

ಇತ್ತೀಚಿನ ಸಂಶೋಧನೆಗಳು ಚಿರಿಕಹುಆ ಅಪಾಚೆಯವರ ವಿಕಿಅಪ್್ಗಳ ಪುರಾತತ್ವ ಅವಶೇಷಗಳನ್ನು ದಾಖಲುಮಾಡಿಕೊಂಡಿವೆ. ಇತಿಹಾಸ ಪೂರ್ವಕಾಲದ ಮತ್ತು ಇತಿಹಾಸ ಕಾಲದ ಸ್ಥಳಗಳಾದ ಕನನ್ ಡೆ ಲಾಸ್ ಎಂಬುಡೋಸ್ ಮೊದಲಾದೆಡೆ ಸಿ.ಎಸ್. ಫ್ಲೈ ಗೆರೆನಿಮೋ, ಆತನ ಜನರು ಮತ್ತು 1886ರಲ್ಲಿ ಶರಣಾಗತಿಯ ಮಾತುಕತೆಗಳು ನಡೆ ವಸತಿಗಳ ಫೋಟೋಗಳನ್ನು ತೆಗೆದಿದ್ದಾರೆ. ಇವು ಅವರ ಅಡೆತಡೆ ಒಡ್ಡದ ಮತ್ತು ಸುಧಾರಿಸಿದ ಸ್ವಭಾವವನ್ನು ಪ್ರದರ್ಶಿಸುತ್ತದೆ. "[೨೨]

ಆಹಾರ[ಬದಲಾಯಿಸಿ]

ಅಪಾಚೆಯವರ ವಿವಿಧ ಸಂಗ್ರಹ ಸಾಧನ: ಬುಟ್ಟಿಗಳು, ಬೊಗಾಣಿಗಳು ಮತ್ತು ಭರಣಿಗಳು.ಮಹಿಳೆಯರು ಮಾಡಿದ ಬುಟ್ಟಿ, ಭಾರವಾದ ವಸ್ತುಗಳನ್ನೂ ತಾಳಿಕೊಳ್ಳುವುದು. ಇದನ್ನು ಮುಖ್ಯವಾಗಿ ಕತ್ತಾಳೆಯನ್ನು ಹೋಲುವ (yucca)ಸಸ್ಯದಿಂದ ಅಥವಾ ವಿಲೋ ಮರದ (ನೀರು ಹಬ್ಬೆ ಗಿಡ)ಎಲೆಗಳಿಂದ ಅಥವಾ ಜೂನಿಪೆರ್ ತೊಗಟೆಯಿಂದ ತಯಾರಿಸುವರು. ದಿ ಅಪಾಚೆ , ಮಾರ್ಶಲ್ ಕಾವೆನ್ದಿಶ್ , 2006, ಪು. 18</ಉಲ್ಲೇಖ>

ಅಪಾಚೆ ಜನರು ಆಹಾರವನ್ನು ನಾಲ್ಕು ಪ್ರಮುಖ ಮೂಲಗಳಿಂದ ಪಡೆದು ಕೊಳ್ಳುತ್ತಿದ್ದರು.[೨೩]

 • ಕಾಡುಪ್ರಾಣಿಗಳನ್ನು ಬೇಟೆಯಾಡುವುದು
 • ಕಾಡುಸಸ್ಯಗಳನ್ನು ಒಟ್ಟುಹಾಕುವುದು,
 • ಒಗ್ಗಿಸಿದ ಸಸ್ಯಗಳನ್ನು ಬೆಳೆಯುವುದು
 • ಜಾನುವಾರು ಮತ್ತು ಕೃಷಿ ಉತ್ಪನ್ನಕ್ಕಾಗಿ ನೆರೆಯ ಬುಡಕಟ್ಟಿನವರ ಜೊತೆ ವ್ಯಾಪಾರ ಅಥವಾ ದಾಳಿ.

ಪಶ್ಚಿಮದ ಅಪಾಚೆಯವರ ಆಹಾರದಲ್ಲಿ ಶೇ.35-4೦ ಮಾಂಸ ಮತ್ತು ಶೇ.60-65 ಸಸ್ಯಾಹಾರವು ಸೇರಿದೆ. ಬೇರೆಬೇರೆ ಅಪಾಚೆಯ ಬುಡಕಟ್ಟಿನವರು ವಿಭಿನ್ನ ವಾತಾವರಣದಲ್ಲಿ ಬದುಕುತ್ತಿರುವುದರಿಂದ ಅವರ ನಿರ್ದಿಷ್ಟವಾದ ಆಹಾರ ತಿನ್ನುವ ಕ್ರಮವು ಆಯಾ ವಾತಾವರಣಕ್ಕೆ ಅನುಗುಣವಾಗಿ ಭಿನ್ನವಾಗಿರುತ್ತವೆ.

ಬೇಟೆ[ಬದಲಾಯಿಸಿ]

ಮೂಲತಃ ಪುರುಷರೇ ಬೇಟೆಯಾಡುವುದು. ಹೀಗಿದ್ದರೂ ಪ್ರಾಣಿ ಮತ್ತು ಸಂಸ್ಕೃತಿಗೆ ಅನುಗುಣವಾಗಿ ಅಪವಾದಗಳು ಇವೆ. (ಉದಾ- ಲಿಪಾನ್ ಮಹಿಳೆಯರು ಮೊಲಗಳ ಬೇಟೆಯಾಡುವುದರಲ್ಲಿ ನೆರವಾದರೆ ಚಿರಿಕಹುಆ ಹುಡುಗರಿಗೂ ಮೊಲಗಳ ಬೇಟೆಗೆ ಅವಕಾಶ ಇದೆ.) ಬೇಟೆಗೂ ಭಾರೀ ಎನ್ನುವಂಥ ಸಿದ್ಧತೆಗಳಿವೆ. ಬೇಟೆಗೆ ಮೊದಲು ಮತ್ತು ನಂತರ ವೈದ್ಯ ವ್ಯಕ್ತಿ ಉಪವಾಸ ಮತ್ತು ಧಾರ್ಮಿಕ ಪದ್ಧತಿಗಳನ್ನು ನಡೆಸುತ್ತಾನೆ. ಲಿಪಾನ್ ಸಂಸ್ಕೃತಿಯಲ್ಲಿ ಜಿಂಕೆಗಳನ್ನು ಪರ್ವತ ಶಕ್ತಿಗಳು ಕಾಪಾಡುತ್ತವೆ. ಜಿಂಕೆಗಳ ಬೇಟೆ ಸುರಕ್ಷಿತವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಪರ್ವತ ಶಕ್ತಿಯ ಧಾರ್ಮಿಕ ವಿಧಿಗಳನ್ನು ಅತ್ಯಂತ ಎಚ್ಚರಿಕೆಯಿಂದ ನಡೆಸುತ್ತಾರೆ. ನಿರ್ದಿಷ್ಟ ಧಾರ್ಮಿಕ ನಿಯಮಗಳಿಗೆ ಅನುಗುಣವಾಗಿ ಪ್ರಾಣಿಬಲಿಯನ್ನೂ ಕೊಡಲಾಗುತ್ತದೆ. (ಅವುಗಳಲ್ಲಿ ಹಲವು ಧಾರ್ಮಿಕ ಕತೆಗಳಲ್ಲಿ ದಾಖಲಾಗಿದೆ.) ಪ್ರಾಣಿಗಳನ್ನು ಹೇಗೆ ಕತ್ತರಿಸಬೇಕು, ಯಾವ ಪ್ರಾರ್ಥನೆಯನ್ನು ಪಠಿಸಬೇಕು ಮತ್ತು ಯಾವ ಕ್ರಮದಲ್ಲಿ ಎಲುಬುಗಳನ್ನು ವಿಲೆ ಮಾಡಬೇಕು ಎಂಬುದಕ್ಕೂ ನಿಯಮಗಳಿವೆ. ದಕ್ಷಿಣದ ಅಥಾಬಾಸ್ಕನ್ ಬೇಟೆಗಾರರಲ್ಲಿರುವ ಸಾಮಾನ್ಯವಾದ ಪರಿಪಾಠವೆಂದರೆ ಯಶಸ್ವಿಯಾಗಿ ಹತ್ಯೆ ಮಾಡಿದ್ದನ್ನು ವಿತರಿಸುವ ಆಟ. ಉದಾಹರಣೆಗೆ ಮೆಸ್ಕಲೆರೋಗಳಲ್ಲಿ ಒಬ್ಬ ಬೇಟೆಗಾರ ತನ್ನ ಜೊತೆ ಬೇಟೆಗಾರನೊಂದಿಗೆ ಮತ್ತು ಶಿಬಿರದಲ್ಲಿರುವ ಇತರ ಆಹಾರ ಅಗತ್ಯವಿರುವ ಜನರೊಂದಿಗೆ ಬೇಟೆಯಲ್ಲಿ ಸಮಪಾಲನ್ನು ಮಾಡಿಕೊಳ್ಳುತ್ತಾರೆ. ವೈಯಕ್ತಿಕ ಕಾಳಜಿಯ ಭಾವನೆಯು ಸಾಮಾಜಿಕ ಹೊಣೆಗಾರಿಕೆಯ ಪರಿಪಾಠವನ್ನು ಮತ್ತು ತನ್ನಿಂದತಾನೆ ಉಕ್ಕುವ ಔದಾರ್ಯವನ್ನು ಹೇಳುತ್ತದೆ. ಯುರೋಪಿನ ಬಂದೂಕುಗಳ ಪರಿಚಯವಾಗುವುದಕ್ಕೆ ಮೊದಲು ಅತ್ಯಂತ ಸಾಮಾನ್ಯವಾದ ಬೇಟೆಯ ಆಯುಧ ಬಿಲ್ಲು ಮತ್ತು ಬಾಣ. ವಿವಿಧ ಬೇಟೆಗಾರಿಕೆಯ ತಂತ್ರಗಳನ್ನು ಬಳಸುತ್ತಿದ್ದರು. ಮಾರುವೇಷದಲ್ಲಿ ಪ್ರಾಣಿಗಳ ತಲೆಗಳ ಮುಖವಾಡವನ್ನು ಧರಿಸುವುದು ಕೆಲವು ತಂತ್ರಗಳಲ್ಲಿ ಸೇರಿದೆ. ಪ್ರಾಣಿಗಳನ್ನು ಹತ್ತಿರಕ್ಕೆ ಸೆಳೆಯಲು ಸಿಳ್ಳುಗಳನ್ನು ಕೆಲವುಸಲ ಹಾಕುವುದೂ ಇತ್ತು. ಇನ್ನೊಂದು ತಂತ್ರ ರಿಲೇ ಪದ್ಧತಿ, ಇದರಲ್ಲಿ ಬೇಟೆಗಾರರು ವಿವಿಧ ಸ್ಥಳಗಳಲ್ಲಿ ನಿಂತುಕೊಂಡು ಬೇಟೆಯ ಪ್ರಾಣಿಯನ್ನು ಓಡಿಸುತ್ತಿದ್ದರು. ಹೀಗೆ ಮಾಡಿ ಆ ಪ್ರಾಣಿ ಆಯಾಸಗೊಳ್ಳುವಂತೆ ಮಾಡುತ್ತಿದ್ದರು. ಬಲಿ ಪ್ರಾಣಿಯನ್ನು ಇಕ್ಕಟ್ಟಾದ ಬಂಡೆಯ ಸಂದಿಗೆ ಬೆನ್ನಟ್ಟಿಕೊಂಡು ಹೋಗುವುದರಲ್ಲಿಯೂ ಇದೇ ರೀತಿಯ ಪದ್ಧತಿ ಇತ್ತು. ನಿರ್ದಿಷ್ಟ ಪ್ರಾಣಿಗಳನ್ನು ತಿನ್ನುವುದಕ್ಕೆ ನಿಷೇಧವಿತ್ತು. ಹೀಗಿದ್ದರೂ ಬೇರೆಬೇರೆ ಸಂಸ್ಕೃತಿಯಲ್ಲಿ ಬೇರೆಬೇರೆ ನಿಷೇಧವಿದೆ. ನಿಷೇಧದ ಪ್ರಾಣಿಯ ಕೆಲವು ಸಾಮಾನ್ಯ ಉದಾಹರಣೆಯಲ್ಲಿ ಜಿಂಕೆಗಳು, ಹಿಂಡಿನಲ್ಲಿ ವಾಸಿಸುವ ಸಣ್ಣ ಕಾಡುಹಂದಿಗಳು, ಟರ್ಕಿಗಳು, ಮೀನು, ಹಾವುಗಳು, ಕೀಟಗಳು, ಗೂಬೆಳು ಮತ್ತು ಹುಲ್ಲುಗಾವಲಿನ ಚಿಕ್ಕ ತೋಳ ಸೇರಿವೆ. ನಿಷೇಧದಲ್ಲಿಯೂ ಭಿನ್ನತೆ ಇರುವುದಕ್ಕೆ ಒಂದು ಉದಾಹರಣೆ: ಕಪ್ಪು ಜಿಂಕೆ ಲಿಪಾನರ ಭಕ್ಷ್ಯಗಳಲ್ಲಿ ಒಂದು. (ಹೀಗಿದ್ದರೂ ಎಮ್ಮೆಗಳು, ಜಿಂಕೆ ಅಥವಾ ಎರಳೆಯಷ್ಟು ಸಾಮಾನಯವಲ್ಲ) ಆದರೆ ಜಿಕಾರಿಲ್ಲಾ ಕರಡಿಯನ್ನು ಯಾವತ್ತೂ ತಿನ್ನುವುದಿಲ್ಲ, ಏಕೆಂದರೆ ಅದನ್ನು ಕೆಟ್ಟ ಪ್ರಾಣಿಯೆಂದು ಪರಿಗಣಿಸಿದ್ದಾರೆ. ಕೆಲವು ನಿಷೇಧಗಳು ಪ್ರಾದೇಶಿಕ ಪ್ರಕ್ರಿಯೆಗಳು. ಮೀನು ತಿನ್ನುವುದು, ಇದಕ್ಕೆ ನೈಋತ್ಯ ಭಾಗದಲ್ಲೆಲ್ಲ ನಿಷೇಧವಿದೆ. (ಉದಾ: ಕೆಲವು ಪೆಬ್ಲೋ ಸಂಸ್ಕೃತಿಗಳಾದ ಹೋಪಿ ಮತ್ತು ಝುನಿಗಳಲ್ಲಿ) ದೈಹಿಕ ಸ್ವರೂಪದಲ್ಲಿ ಹಾವಿನಂಥ (ಒಂದು ಕೆಟ್ಟ ಪ್ರಾಣಿ)ದ್ಧು ಎಂದು ಪರಿಗಣಿಸುತ್ತಾರೆ.[೨೪][೨೫] ಪಶ್ಚಿಮ ಅಪಾಚೆಗಳು ಜಿಂಕೆಯನ್ನು ಮತ್ತು ಪ್ರಾಂಗ್ಹಾರ್ನ್(ಜಿಂಕೆಯಂಥ ಕೂದಲಿರುವ ಪ್ರಾಣಿ)ಗಳನ್ನು ಹೆಚ್ಚು ಪ್ರಶಸ್ತವಾದ ಋತುವಿನ ಕೊನೆಯಲ್ಲಿ ಬೇಟೆಯಾಡುತ್ತಾರೆ. ನವೆಂಬರ್ ಸುಮಾರಿಗೆ ಮಾಂಸವು ಒಣಗಿ ಸುಕ್ಕುಗಟ್ಟಿದಾಗ ಕೃಷಿ ಪ್ರದೇಶದಿಂದ ಪರ್ವತದ ತೊರೆಗಳ ತೀರಕ್ಕೆ ವಲಸೆ ಆರಂಭವಾಗುತ್ತದೆ. ಚಳಿಗಾಲದ ಶಿಬಿರಗಳು ಸಾಲ್ಟ್, ಬ್ಲಾಕ್, ಗಿಲಾ ನದಿ ಮತ್ತು ಕೋಲೋರಡೋ ನದಿಕಣಿವೆಗಳಲ್ಲಿ ಶಿಬಿರ ತಲೆಎತ್ತುವುದು. ಚಿರಿಕಹುಆಗಳ ಮೊದಲ ಆಟವೆಂದರೆ ಜಿಂಕೆಯನ್ನು ಫ್ರಾಂಗ್ಹಾರ್ನ್ ಬೆನ್ನಟ್ಟುವುದು. ಇತರ ಆಟಗಳು ಸೇರಿರುವುದು: ಹತ್ತಿಬಾಲದ ಮೊಲಗಳು (ಆದರೆ ಜಾಕ್ ರಾಬಿಟ್ಸ್ ಅಲ್ಲ), ಓಪೋಸಮ್್(ಹೊಟ್ಟೆಯ ಮೇಲೆ ಚೀಲ ಇರುವ ಪ್ರಾಣಿ)ಗಳು, ಅಳಿಲುಗಳು, ಉಳಿಕೆ ಕುದುರೆಗಳು, ಉಳಿಕೆ ಹೇಸರಗತ್ತೆಗಳು, ಸಾರಂಗ (ಎಲ್ಕ್), ಕಾಡು ಹಸು, ಕಾಡು ಇಲಿಗಳು. ಮೆಸ್ಕಲೆರೋ ಮೊತ್ತಮೊದಲಿಗೆ ಜಿಂಕೆಯನ್ನು ಬೇಟೆಯಾಡುವರು. ಅವರು ಬೇಟೆಯಾಡುವ ಇತರ ಪ್ರಾಣಿಗಳು: ದೊಡ್ಡ ಕೊಂಬಿನ ಕುರಿ, ಎಮ್ಮೆಗಳು (ಬಯಲಿಗೆ ಹತ್ತಿರದಲ್ಲಿ ವಾಸಿಸುವವು), ಹತ್ತಿಬಾಲದ ಮೊಲ, ಎಲ್ಕ್, ಕುದುರೆಗಳು, ಹೇಸರಗತ್ತೆಗಳು, ಹೊಟ್ಟೆಯಲ್ಲಿ ಚೀಲ ಇರುವ ಪ್ರಾಣಿ ಒಪೋಸಮ್ಸ್, ಫ್ರಾಂಗ್ಹಾರ್ನ್, ಕಾಡು ಹೋರಿಗರು ಮತ್ತು ಕಾಡು ಇಲಿಗಳು. ಬೀವರ್್ಗಳು, ಮಿನ್ಕ್್ಗಳು (ಮಂಗಸಿಯಂಥ ಪ್ರಾಣಿ), ಮಸ್ಕ್ ರಾಟ್ (ಕಸ್ತೂರಿ ಇಲಿ), ಮತ್ತು ವೀಸೆಲ್ಸ್ (ಮುಂಗಸಿಯಂಥ ಪ್ರಾಣಿ)ಗಳನ್ನು ಅವುಗಳ ಚರ್ಮಕ್ಕಾಗಿ ಮತ್ತು ಅವುಗಳ ಶರೀರದ ಭಾಗಗಳಿಗಾಗಿ ಬೇಟೆಯಾಡುತ್ತಾರೆ. ಆದರೆ ಅವುಗಳನ್ನು ತಿನ್ನುವುದಿಲ್ಲ. ಜಿಕಾರಿಲ್ಲಾಗಳ ಪ್ರಮುಖ ಶಿಕಾರಿ ಪ್ರಾಣಿಗಳು ದೊಡ್ಡಕೊಂಬಿನ ಕುರಿ, ಎಮ್ಮೆಗಳು, ಜಿಂಕೆ, ೆಲ್ಕ್ ಮತ್ತು ಪ್ರಾಂಗ್ಹಾರ್ನ್. ಇತರ ಆಟದ ಪ್ರಾಣಿಗಳಲ್ಲಿ ಬೀವರ್, ದೊಡ್ಡಕೊಂಬಿನ ಕುರಿಗಳು, ಚೀಫ್ ಹೇರ್ಸ್, ಚಿಪ್್ಮಂಕ್ಸ್, ಡೋವ್ಸ್, ಗ್ರೌಂಡ್ ಹಾಗ್ಸ್, ಗ್ರೌಸ್, ಪೆಕರೀಸ್, ಪೋರ್ಕುಪಿನ್ಸ್, ಪ್ರೈರಿ ಡಾಗ್, ಕ್ವಿಲ್, ಮೊಲಗಳು, ಸ್ಕಂಕ್ಸ್, ಸ್ನೋಬರ್ಡ್, ಅಳಿಲು, ಕೋಳಿಗಳು ಮತ್ತು ಕಾಡು ಇಲಿಗಳು ಸೇರಿವೆ. ಕತ್ತೆ ಮತ್ತು ಕುದುರೆಗಳನ್ನು ತುರ್ತುಪರಿಸ್ಥಿತಿಗಳಲ್ಲಿ ಮಾತ್ರ ತಿನ್ನುವರು. ಮಿಂಕ್ಸ್, ವೀಸೆಲ್ಸ್, ಕಾಡುಬೆಕ್ಕು ಮತ್ತು ತೋಳಗಳನ್ನು ತಿನ್ನುವುದಿಲ್ಲ. ಆದರೆ ಅವಗಳ ಶರೀರದ ಭಾಗಗಳಿಗಾಗಿ ಅವುಗಳನ್ನು ಬೇಟೆಯಾಡುತ್ತಾರೆ. ಲಿಪಾನ್್ಗಳ ಪ್ರಮುಖ ಆಹಾರ ಎಮ್ಮೆಗಳು. ಬೇಸಿಗೆಯಲ್ಲಿ ನಡೆಯುವ ಮುಂದುವರಿಯುವ ದೊಡ್ಡ ಮತ್ತು ಸಣ್ಣ ಬೇಟೆಗಳಲ್ಲಿ ಇದನ್ನು ಬೇಟೆಯಾಡುವರು. ಎರಡನೆ ಅತ್ಯಧಿಕ ಬಳಕೆಗೆ ಬರುವ ಪ್ರಾಣಿ ಜಿಂಕೆಗಳು. ಉತ್ತಮ ಆರೋಗ್ಯಕ್ಕಾಗಿ ಜಿಂಕೆಯ ತಾಜಾ ರಕ್ತವನ್ನು ಕುಡಿಯುತ್ತಿದ್ದರು. ಇತರ ಪ್ರಾಣಿಗಳಲ್ಲಿ ಬೀವರ್್ಗಳು, ಬಿಗ್್ಹಾರ್ನ್ಸ್, ಕಪ್ಪು ಕರಡಿ, ಬರ್ರೋಸ್, ಡಕ್ಸ್, ಎಲ್ಕ್, ಮೀನು, ಕುದುರೆಗಳು, ಪರ್ವತ ಸಿಂಹಗಳು, ಮೌರ್ನಿಂಗ್ ಡೋವ್ಸ್, ಹೇಸರಗತ್ತೆ, ಪ್ರೇರಿ ಡಾಗ್ಸ್, ಪ್ರಾಂಗ್ಹಾರ್ನ್, ಕ್ವಿಲ್, ಮೊಲಗಳು, ಅಳಿಲುಗಳು, ಕೋಳಿಗಳು, ಆಮೆಗಳು ಮತ್ತು ಕಾಡು ಇಲಿಗಳು ಸೇರಿವೆ. ಸ್ಕಂಕ್್ಗಳನ್ನು ತುರ್ತುಪರಿಸ್ಥಿತಿಗಳಲ್ಲಿ ಮಾತ್ರ ತಿನ್ನುವರು. ಬಯಲು ಅಪಾಚೆಗಳು ಬೇಟೆಗಾರರು ಮೊದಲಿಗೆ ಹುಡುಕುವುದು ಎಮ್ಮೆಗಳು ಮತ್ತು ಜಿಂಕೆಗಳನ್ನು ಬೇಟೆಯಾಡುವ ಇತರ ಪ್ರಾಣಿಗಳು ಬಾಡ್ಗರ್್ಗಳು, ಕರಡಿಗಳು, ಬೀವರುಗಳು, ಫೌಲ್್ಗಳು, ಬಾತುಕೋಳಿಗಳು, ಒಪೋಸ್ಯುಮ್್ಗಳು, ಒಟ್ಟರ್್ಗಳು, ಮೊಲಗಳು ಮತ್ತು ಆಮೆಗಳು.

ಉಡುಪು[ಬದಲಾಯಿಸಿ]

ಬಯಲು ಇಂಡಿಯನ್ನರಿಂದ ಪ್ರಭಾವಿತರಾದ ಪಶ್ಚಿಮದ ಅಪಾಚೆಗಳು ಪ್ರಾಣಿಗಳ ಚರ್ಮವನ್ನು ಬೀಜಗಳ ಮಣಿಗಳಿಂದ ಅಲಂಕರಿಸಿ ಉಡುಪನ್ನಾಗಿ ಮಾಡಿಕೊಂಡು ಧರಿಸುವರು. ಈ ಮಣಿಗಳಿಂದ ಮಾಡುವ ವಿನ್ಯಾಸವು ಐತಿಹಾಸಿಕವಾಗಿ ಗ್ರೇಟ್ ಬಾಸಿನ್ ಪೈಯುಟೆಗೆ ಹೋಲುತ್ತದೆ ಮತ್ತು ರೇಖಾತ್ಮಕ ವಿನ್ಯಾಸದ ಮಾದರಿಯನ್ನು ಹೊಂದಿದೆ. ಅಪಾಚೆಯ ಮಣಿಗಳನ್ನು ಕೂಡಿಸಿದ ಬಟ್ಟೆಯ ಅಂಚು ಪಟ್ಟಿಯನ್ನು ಗಾಜಿನ ಮಣಿಸಾಲನ್ನು ಕತ್ತರಿಯಾಕಾರದಲ್ಲಿ ಜೋಡಿಸಿ ಒಂದು ಬಣ್ಣದ ಬಳಿಕ ಇನ್ನೊಂದು ಬಣ್ಣ ಬರುವಂತೆ ಮಾಡಿರುತ್ತಾರೆ. ಇದು ಅವರ ಬಯಲು ಪ್ರದೇಶದ ಮೂಲನಿವಾಸಿ ನೆರೆಯವರ ರೀತಿಗೆ ಸಮನಾಗಿ ಇರುತ್ತದೆ. ಜಿಂಕೆ, ಮೋಲ, ಹಿಮಸಾರಂಗ, ಇಲಿ ಮೊದಲಾದವುಗಳ ಚರ್ಮದಿಂದ ಅವರು ಅಂಗಿಗಳನ್ನು, ನಿಲುವಂಗಿಗಳನ್ನು, ಸ್ಕರ್ಟ್್ಗಳನ್ನು ಮತ್ತು ಪಾದರಕ್ಷೆಗಳು ಮತ್ತು ತಯಾರಿಸುತ್ತಿದ್ದರು ಮತ್ತು ಅವುಗಳಿಗೆ ಅಂಚುಗಳನ್ನು ಮಾಡಿ ಸಿಂಗರಿಸುತ್ತಿದ್ದರು.[೨೬]

ದೇಶೀಯವಲ್ಲದ ಸಸ್ಯಗಳು ಮತ್ತು ಇತರ ಆಹಾರ ಮೂಲಗಳು[ಬದಲಾಯಿಸಿ]

ಬಾಸ್ಕೆಟ್ ಜೊತೆ ಅಪಾಚೆ ಹುಡುಗಿ, 1902

ಸಸ್ಯಗಳನ್ನು ಮತ್ತು ಇತರ ಆಹಾರಗಳನ್ನು ಸಂಗ್ರಹಿಸುವುದು ಮೂಲತಃ ಮಹಿಳೆಯರ ಕೆಲಸ ಹೀಗಿದ್ದರೂ ಭಾರವಾದ ಅಗಾವೆ ತಲೆ ಸಂಗ್ರಹಿಸುವಂಥ ಕೆಲವು ಚಟುವಟಿಕೆಗಳಲ್ಲಿ ಗಂಡಸರು ನೆರವಾಗುತ್ತಾರೆ. ಅನೇಕ ಸಸ್ಯಗಳನ್ನು ಅವುಗಳ ಪೌಷ್ಠಿಕತೆಗಾಗಿಯ ಬಳೆಯಿಂದ ಹೊರತು ಪಡಿಸಿ ಔಷಧಕ್ಕಾಗಿ ಮತ್ತು ಧಾರ್ಮಿಕ ಸಮಾರಂಭಗಳಲ್ಲಿ ಬಳಸುತ್ತಾರೆ. ಇತರ ಸಸ್ಯಗಳನ್ನು ಅವುಗಳ ಧಾರ್ಮಿಕ ಮತ್ತು ಔಷಧೀಯ ಮೌಲ್ಯಕ್ಕಾಗಿ ಮಾತ್ರ ಬಳಸುತ್ತಾರೆ. ಮೇ ತಿಂಗಳಿನಲ್ಲಿ ಪಶ್ಚಿಮ ಅಪಾಚೆಯವು ಕತ್ತಾಳೆ ತಲೆಗಳನ್ನು ಸುಟ್ಟು ಒಣಗಿಸುತ್ತಾರೆ. ಅವುಗಳನ್ನು ಪುಡಿಯಾಗುವ ಹಾಗೆ ಕುಟ್ಟುತ್ತಾರೆ. ಮತ್ತು ಚೌಕಾಕಾರದ ಕೇಕ್ ಮಾಡುತ್ತಾರೆ. ಜೂನ್ ಕೊನೆ ಮತ್ತು ಜುಲೈ ಆರಂಭದಲ್ಲಿ ಸಗುರಾವೋ, ಮುಳ್ಳು ಪೇರಲೆ, ಮತ್ತು ಚೊಲ್ಲ ಹಣ್ಣುಗಳನ್ನು ಸಂಗ್ರಹಿಸುತ್ತಾರೆ. ಜುಲೈ ಮತ್ತು ಆಗಸ್ಟ್್ನಲ್ಲಿ, ಮೆಸ್ಕೀಟ್ ಬೀನ್ಸ್, ಸ್ಪಾನೀಶ್ ಬೇಯೋನೆಟ್ [disambiguation needed] ಹಣ್ಣು, ಮತ್ತು ಎಮೋರಿ ಓಕ್ ಓಕ್ ಮರದ ಹಣ್ಣುಗಳನ್ನು ಸಂಗ್ರಹಿಸುತ್ತಾರೆ. ಸೆಪ್ಟೆಂಬರ್ ಕೊನೆಯಲ್ಲಿ, ಸಂಗ್ರಹಿಸುವ ಕಾರ್ಯವನ್ನು ನಿಲ್ಲಿಸುತ್ತಾರೆ ಮತ್ತು ಅವರ ಗಮನ ಬೇಸಾಯ ಮತ್ತು ಕೃಷಿ ಬೆಳೆಯ ಕಡೆ ತಿರುಗುತ್ತದೆ. ಋತುವಿನ ಕೊನೆಯಲ್ಲಿ, ಶಂಕುಫಲಿ ಸಸ್ಯವರ್ಗದ ಹಣ್ಣುಗಳು ಮತ್ತು ಪಿನಿಯೋನ್ ಕಾಯಿ ಗಳನ್ನು ಸಂಗ್ರಹಿಸುವರು. ಚಿರಿಕಹುಆಗಳು ಬಳಸುವ ಬಹು ಮುಖ್ಯವಾದ ಆಹಾರ ಸಸ್ಯವೆಂದರೆ ಸೆಂಚುರಿ ಪ್ಲಾಂಟ್ (ಇದನ್ನುಮೆಸ್ಕಲ್ (ಕಳ್ಳಿಗಿಡ) ಅಥವಾ ಕತ್ತಾಳೆ ಎಂದೂ ಕರೆಯುತ್ತಾರೆ). (ಲಾಳಿಕೆ ಗಿಡದ ತಳ ಭಾಗವನ್ನು) ಈ ಸಸ್ಯದ ತಲೆಯನ್ನು (ಇವನ್ನು ಭೂಗತ ಒಲೆಗಳಲ್ಲಿ ಇವರು ಸುಡುತ್ತಾರೆ ಮತ್ತು ಸೂರ್ಯನ ಬಿಸಿಲಿನಲ್ಲಿ ಒಣಗಿಸುತ್ತಾರೆ.) ಮತ್ತು ಇದರ ಕುಡಿಗಳನ್ನೂ ಬಳಸುತ್ತಾರೆ. ಚಿರಿಕಹುಆಗಳು ಬಳಸಿಕೊಳ್ಳುವ ಇತರ ಸಸ್ಯಗಳಲ್ಲಿ ಇವೂ ಸೇರಿವೆ. : ಅಗಾರಿಟಾ (ಅಥವಾ ಅಲ್ಗೆರಿಟಾ) ಹಣ್ಣುಗಳು, ಅಲಿಗೇಟರ್ ಜುನಿಪರ್ ಹಣ್ಣುಗಳು, ಏಂಜೆಲ್್ಪೋಡ್ ಬೀಜಗಳು, ಬನಾನಾ ಯುಕ್ಕಾ (ಅಥವಾ ಡಾಟಿಲ್, ಅಗಲ ಎಲೆಯ ಯುಕ್ಕಾ) ಹಣ್ಣು, ಕಾಳು ಮೆಣಸು, ಚೋಕೆಚೆರಿಸ್, ಕೋಟಾ (ಚಹಾಕ್ಕೆ ಬಳಸುವರು), ಕರಂಟ್್ಗಳು[disambiguation needed], ಡ್ರಾಪ್್ ಸೀಡ್ ಗ್ರಾಸ್ ಸೀಡ್್ಗಳು, ಗಂಬೆಲ್ ಓಕ್ ಓಕ್್ಮರದ ಹಣ್ಣು, ಗಂಬೆಲ್ ಓಕ್ ಬಾರ್ಕ್ (ಚಹಾಕ್ಕೆ ಬಳಸುವರು), ಗ್ರಾಸ್ ಸೀಡ್ಸ್ (ವಿಭಿನ್ನ ಬಗೆಯವು), ಗ್ರೀನ್ಸ್ (ವಿಭಿನ್ನ ಬಗೆಯವು), ಹ್ಯಾವ್್ಥ್ರೋನ್ ಹಣ್ಣು, ಲ್ಯಾಂಬ್ಸ್-ಕ್ವಾರ್ಟರ್ಸ್ ಎಲೆಗಳು, ಲಿಪ್ ಫೆರ್ನ್ಸ್ (ಚಹಾಕ್ಕೆ ಬಳಸುತ್ತಾರೆ), ಲಿವ್ ಓಕ್ ಓಕ್ ಹಣ್ಣುಗಳು, ಲೋಕಸ್ಟ್ ಹೂವುಗಳು, ಲೋಕಸ್ಟ್ ಕೋಡುಗಳು, ಮೆಕ್ಕೆಜೋಳದ ಕುಂಡಗಳು ( ಟಿಸ್ವಿನ್್ಗೆಬಳಸುತ್ತಾರೆ) ,ಮೆಸ್ಕಿಟೋ ಬೀನ್್ಗಳು, ಮುಲ್್ಬೆರ್ರಿಯರ್, ಸಪೂರು ಎಲೆಯ ಯುಕ್ಕಾ ಹೂಗಳು, ಸಪೂರು ಎಲೆಯ ಯುಕ್ಕಾದ ಕಾಂಡ, ಮೊಲೆತೊಟ್ಟಿನಾಕಾರದ ಕಳ್ಳಿ ಹಣ್ಣು, ಒಂದೇ-ಬೀಜದಜುನಿಪರ್ ಹಣ್ಣುಗಳು, ಈರುಳ್ಳಿಗಳು, ಪಿಗ್್ವೀಡ್[disambiguation needed] ಬೀಜಗಳು, ಪಿನ್ಯೋನ್ ಕಾಯಿಗಳು, ಪಿಟಾಹಯಾ ಹಣ್ಣು, ಮಳ್ಳಿನಿಂದ ಕೂಡಿದ ಪೇರಲೆ ಹಣ್ಣು, ಮುಳ್ಳು ಪೇರಲೆಹಣ್ಣಿನ ರಸ, ರಾಸ್್ಬೆರ್ರಿಗಳು, ಸ್ಕ್ರೂ ಬೀನ್ (ಅಥವಾ ಟೋರ್ನಿಲೋ)ಹಣ್ಣು, ಸಗುರಾವೋ ಹಣ್ಣು, ಸ್ಪರ್ಜ್ ಬೀಜಗಳು, ಸ್ಟ್ರಾಬೆರ್ರಿಗಳು, ಸುಮಾಕ್ (ರುಸ್ ಮೈಕ್ರೋಕಾರ್ಪಿಯಾ ) ಹಣ್ಣುಗಳು, ಸೂರ್ಯಕಾಂತಿ ಬೀಜಗಳು, ತುಲೆ ರೂಟ್ಸ್ ಸ್ಟಾಕ್ಗಳು, ತುಲೆ ಶೂಟ್ಸ್, ಪಿಗ್್ವೀಡ್ ಟಂಬಲ್್ವೀಡ್ ಬೀಜಗಳು, ಯುನಿಕಾರ್ನ್ ಪ್ಲಾಂಟ್ ಬೀಜಗಳು, ವಾಲ್್ನಟ್ಸ್, ವೆಸ್ಟರ್ನ್ ಯೆಲ್ಲೋ ಪಿನೆಯ ಒಳ ಚರ್ಮ (ಸಿಹಿ ಸ್ವಾದಕ್ಕೆ ಬಳಸುತ್ತಾರೆ), ವೆಸ್ಟರ್ನ್ ಯೆಲ್ಲೋ ಪಿನೆ ನಟ್ಸ್, ವೈಟ್್ಸ್ಟಾರ್ ಆಲೂಗಡ್ಡೆ (ಇಪೊಮೋಯಾ ಲಕುನೋಸಾ ), ಕಾಡು ದ್ರಾಕ್ಷಿಗಳು[disambiguation needed], ಕಾಡು ಬಟಾಟೆಗಳು (ಸೋನಲಾನಂ ಜಮೆಸಿ ), ವುಡ್ ಸೋರೆಲ್ ಎಲೆಗಳು, ಮತ್ತು ಯುಕ್ಕಾ ಮೊಗ್ಗುಗಳು (ಗೊತ್ತಿಲ್ಲದ ಸಾಂಬಾರುಪದಾರ್ಥಗಳು). ಇದರಲ್ಲಿರುವ ಇತರ ವಸ್ತುಗಳು: ನೆಲದಲ್ಲಿರುವ ಜೇನು ಮತ್ತು ಕತ್ತಾಳೆಯಲ್ಲಿ ಕಟ್ಟಿದ ಜೇನುಗೂಡುಗಳಿಂದ ಸಂಗ್ರಹಿಸಿದ್ದು, ಸೋಟೋಲ್, ಮತ್ತು ಸಪೂರು ಎಲೆಯ ಯುಕ್ಕಾ ಗಿಡಗಳು. ಸಮೃದ್ಧವಾದ ಕತ್ತಾಳೆ (ಮೆಸ್ಕಲ್) ಕೂಡ [೨೭] ಮೆಸ್ಕಲೆರೋಗೆ ಮುಖ್ಯ. ಅವರು ಇದರ ತಲೆಗಳನ್ನು ಹಳದಿ ಹೂವಿನ ದಂಟುಗಳು ಮೇಲೆದ್ದ ಬಳಿಕ ವಸಂತಋತುವಿನ ನಂತರ ಸಂಗ್ರಹಿಸುವರು. ಚಿಕ್ಕದಾದ ಸೋಟೋಲ್ ತಲೆಗಳೂ ಪ್ರಮುಖವಾದವೇ ಎರಡೂ ಸಸ್ಯಗಳ ೆರಡೂ ತಲೆಗಳನ್ನು ಸುಟ್ಟು ಒಣಗಿಸುತ್ತಾರೆ. ಇದರಲ್ಲಿ ಸೇರಿರುವ ಇತರ ಸಸ್ಯಗಳು: ಓಕ್್ ಮರದ ಹಣ್ಣುಗಳು, ಅಗಾರಿಟಾ ಹಣ್ಣುಗಳು, ಅಮೋಲ್ ಕಾಂಡಗಳು (ಹುಲಿಯುತ್ತಾರೆ ಮತ್ತು ಸಿಪ್ಪೆ ಸುಲಿಯುತ್ತಾರೆ), ಆಸ್ಪೆನ್ ಒಳ ತೊಗಟೆ (ಸಿಹಿಗೋಸ್ಕರ ಬಳಸುವರು), ಕರಡಿಹುಲ್ಲು ಕಟ್ಟಿಗಳು (ಹುರಿಯುತ್ತಾರೆ ತ್ತು ಸಿಪ್ಪೆ ಸುಲಿಯುತ್ತಾರೆ), ಬಾಕ್ಸ್ ಎಲ್ಡರ್ ಒಳ ತೊಗಟೆ (ಸಿಹಿಗೋಸ್ಕರ ಬಳಸುವರು), ಬಾಳೆಹಣ್ಣಿನ ಯುಕ್ಕಾ ಹಣ್ಣು, ಬಾಳೆಹಣ್ಣಿನ ಯುಕ್ಕಾ ಹೂಗಳು, ಬಾಕ್ಸ್ ಎಲ್ಡರ್ ಸ್ಯಾಪ್ (ಸಿಹಿಗೋಸ್ಕರ ಬಳಸುವರು), ಕಳ್ಳಿ ಹಣ್ಣುಗಳು (ವಿಭಿನ್ನ ವೈವಿಧ್ಯದವು), ಕಾಕ್್ಟೇಲ್ ರೂಟ್ಸ್್ ಸ್ಟಾಕ್ಸ್, ಚೋಕೆಚೆರಿಸ್, ಕರಂಟ್ಸ್, ಡ್ರಾಪ್ ಸೀಡ್ ಗ್ರಾಸ್ ಸೀಡ್ಸ್ (ಫ್ಲ್ಯಾಟ್ ಬ್ರೆಡ್ಗೆ ಬಳಸುತ್ತಾರೆ), ಎಲ್ಡರ್್ಬೆರ್ರಿಸ್, ಗೂಸ್್ಬೆರ್ರಿಸ್, ದ್ರಾಕ್ಷಿಗಳು, ಹ್ಯಾಕರ್್ಬೆರ್ರಿಸ್, ಹಾವ್್ಥ್ರೋನ್ ಫ್ರುಟ್, ಹೋಪ್ಸ್ (ವ್ಯಂಜನ ಪದಾರ್ಥದಂತೆ ಬಳಸುವರು), ಹಾರ್ಸ್್ಮಿಂಟ್ (ವ್ಯಂಜನ ಪದಾರ್ಥದಂತೆ ಬಳಸುವರು), ಜುನಿಪರ್ ಹಣ್ಣುಗಳು, ಲ್ಯಾಂಬ್ಸ್-ಕ್ವಾರ್ಟರ್ಸ್ ಲೀವ್ಸ್, ಲೋಕಸ್ಟ್ ಹೂಗಳು, ಲೋಕಸ್ಟ್ ಮೊಗ್ಗುಗಳು, ಮೆಸ್ಕ್ವಿಟ್ ಮೊಗ್ಗುಗಳು, ಪುದಿನ (ವ್ಯಂಜನ ಪದಾರ್ಥದಂತೆ ಬಳಸುವರು), ಮುಲ್ಬೆರಿಸ್, ಪೆನಿರೋಯಾಲ್ (ವ್ಯಂಜನದಂತೆ ಬಳಸುವರು), ಪಿಗ್್ವೀಡ್ ಸೀಡ್ಸ್ (ಫ್ಲ್ಯಾಟ್ ಬ್ರೆಡ್್ಗೆ ಬಳಸುವರು), ಪೈನ್ ಒಳ ತೊಗಟೆ (ಸಿಹಿಗೋಸ್ಕರ ಬಳಸುವರು), ಪಿನಿಯೋನ್ ಪೈನ್ ಕಾಯಿ, ಮುಳ್ಲು ಪೇರಲೆ ಹಣ್ಣು (ಮುಳ್ಳು ತೆಗೆಯುವರು ಮತ್ತು ಹುರಿಯುವರು), ಪರ್್ಸ್ಲೇನ್[disambiguation needed] ಎಲೆಗಳು, ರಾಸ್್ಬೆರ್ರಿಸ್, ಸೇಜ್ (ವ್ಯಂಜನ ಪದಾರ್ಥದಂತೆ ಬಳಸುವರು), ಸ್ಕ್ರ್ಯೂ ಬೀನ್ಸ್, ಸೆಡ್ಜ್ ಟ್ಯೂಬರ್ಸ್, ಶೆಪರ್ಡ್ಸ್ ಪರ್ಸ್ ಎಲೆಗಳು, ಸ್ಟ್ರಾಬೆರ್ರಿಸ್, ಸೂರ್ಯಕಾಂತಿ ಬೀಜಗಳು, ಟ್ರಂಬಲ್್ವೀಡ್ ಸೀಡ್ಸ್ (ಫ್ಲ್ಯಾಟ್ ಬ್ರೆಡ್್ನಲ್ಲಿ ಬಳಸುವರು), ವೆಟ್ಚ್ ಮೊಗ್ಗುಗಳು, ವಾಲ್್ನಟ್ಸ್, ವೆಸ್ಟರ್ನ್ ವೈಟ್ ಪೈನ್ ನಟ್ಸ್, ವೆಸ್ಟರ್ನ್ ಯೆಲ್ಲೋ ಪೈನ್ ನಟ್ಸ್, ವೈಟ್ ಇವನಿಂಗ್ ಪ್ರಿಮ್್ರೋಸ್ ಫ್ರುಟ್, ವೈಲ್ಡ್್ ಸೆಲರಿ (ವ್ಯಂಜನ ಪದಾರ್ಥದಂತೆ ಬಳಸುವರು), ಕಾಡು ಈರುಳ್ಳಿ[disambiguation needed] (ವ್ಯಂಜನ ಪದಾರ್ಥದಂತೆ ಬಳಸುವರು), ಕಾಡು ಪಿಯಾ ಮೊಗ್ಗು, ಕಾಡು ಬಟಾಟೆಗಳು, ಮತ್ತು ವುಡ್ ಸೊರೆಲ್ ಎಲೆಗಳು. ಜಿಕಿರಾಲ್ಲಾ ಓಕ್ ಮರದ ಹಣ್ಣುಗಳನ್ನು, ಚೋಕೆಚೆರಿಸ್, ಜುನಿಪರ್ ಹಣ್ಣುಗಳನ್ನು, ಮೆಸ್ಕ್ವಿಟ್ ಬೀನ್ಸ್, ಪಿನಿಯೋನ್ ನಟ್ಸ್, ಮುಳ್ಳು ಪೇರಲ ಹಣ್ಣು ಮತ್ತು ಯುಕ್ಕಾ ಹಣ್ಣುಗಳನ್ನು ಮತ್ತು ಇನ್ನೂ ಅನೇಕ ವಿವಿಧ ರೀತಿಯ ಹಣ್ಣುಗಳನ್ನು, ಓಕ್ ಹಣ್ಣುಗಳನ್ನು, ಸೊಪ್ಪುಗಳನ್ನು, ಕಾಯಿಗಳನ್ನು ಮತ್ತು ಹುಲ್ಲಿನ ಬೀಜಗಳನ್ನು ಬಳಸುತ್ತಾರೆ. ಲಿಪಾನ್್ಗಳು ಬಳಸುತ್ತಿದ್ದ ಅತ್ಯಂತ ಮಹತ್ವದ ಸಸ್ಯ ಆಹಾರವೆಂದರೆ ಕತ್ತಾಲೆ(ಮೆಸ್ಕಲ್) ಆಗಿತ್ತು. ಮತ್ತೊಂದು ಪ್ರಮುಖ್ಯ ಸೋಟೋಲ್ ಲಿಪಾನ್್ಗಳು ಬಳಸುತ್ತಿದ್ದ ಇತರ ಪ್ರಮುಖ ಸಸ್ಯಗಳಲ್ಲಿ ಇವು ಸೇರಿದ್ದವು: ಅಗಾರಿಟಾ, ಬ್ಲಾಕ್್ಬೆರ್ರಿ,, ಕಾಟೇಲ್ಸ್, ಡೆವಿನ್ಲಸ್ ಕ್ಲೋ, ಎಲ್ಡರ್್ಬೆರ್ರಿಸ್, ಗೂಸ್್ಬೆರ್ರಿಸ್, ಹ್ಯಾಕ್್ಬೆರ್ರಿಸ್, ಹಾವ್್ಥ್ರೋನ್, ಜುನಿಪರ್, ಲಿಂಬ್ಸ್-ಕ್ವಾರ್ಟರ್ಸ್, ಲೋಕಸ್ಟ್, ಮೆಸ್ಕ್ವಿಟೆ, ಮುಲ್್ಬೆರ್ರಿಸ್, ಓಕ್, ಪಾಮ್್ಲೆಟ್ಟೋ, ಪೆಕಾನ್, ಪಿನಿಯೋನ್, ಮುಳ್ಳುಪೇರಲೆ, ರಾಸ್ಪ್್ಬೆರ್ರಿಸ್, ಸ್ಕ್ರೂಬೀನ್ಸ್, ಸೀಡ್್ ಗ್ರಾಸಸ್, ಸ್ಟ್ರೋಬೆರ್ರಿಸ್, ಸುಮಾಕ್, ಸೂರ್ಯಕಾಂತಿ, ಟೆಕ್ಸಾಸ್ ಪ್ರಸಿಮೋನ್ಸ್, ವಾಲ್್ನಟ್ಸ್, ವೆಸ್ಟರ್ನ್ ಯಲ್ಲೋ ಪೈನ್, ಕಾಡು ಚೆರ್ರಿಗಳು, ಕಾಡು ದ್ರಾಕ್ಷಿ, ಕಾಡು ಈರುಳ್ಳಿ, ಕಾಡು ಪ್ಲಮ್ಸ್, ಕಾಡು ಬಟಾಟೆ, ಕಾಡು ಗುಲಾಬಿಗಳು[disambiguation needed], ಯುಕ್ಕಾ ಹೂಗಳು, ಮತ್ತು ಯುಕ್ಕಾ ಹಣ್ಣು. ಇತರ ವಸ್ತುಗಳಲ್ಲಿ ಇವು ಸೇರಿವೆ: ಗುಹೆಗಳಿಂದ ಪಡೆದ ಉಪ್ಪು ಮತ್ತು ಜೇನು. ಬಯಲು ಅಪಾಚೆಗಳು ಬಳಸುತ್ತಿದ್ದ ಸಸ್ಯಗಳಲ್ಲಿ ಇವು ಸೇರಿವೆ: ಚೋಕೆಚೆರ್ರಿಸ್, ಬ್ಲ್ಯಾಕ್್ಬೆರ್ರಿಗಳು, ದ್ರಾಕ್ಷಿಗಳು, ಪ್ರೇ ರಿ ಟರ್ನಿಪ್್ಗಳು ಮತ್ತು ಕಾಡು ಈರುಳ್ಳಿ ಮತ್ತು ಕಾಡು ಪ್ಲಮ್ಸ್. ಅನೇಕ ಇತರ ಹಣ್ಣುಗಳು, ತರಕಾರಿಗಳು ಮತ್ತು ಗಡ್ಡೆಸಸ್ಯಗಳ ಬೇರುಗಳನ್ನೂ ಬಳಸುತ್ತಿದ್ದರು.

ಬೆಳೆ ಕೃಷಿ[ಬದಲಾಯಿಸಿ]

ನವಾಜೋಗಳು ಹೆಚ್ಚು ಬೆಳೆ ಕೃಷಿಯನ್ನು ರೂಢಿಸಿಕೊಂಡಿದ್ದರು. ಪಶ್ಚಿಮ ಅಪಾಚೆಗಳು, ಜಿಕಾರಿಲ್ಲಾ ಮತ್ತು ಲಿಪಾನ್ ಕಡಿಮೆ ಪ್ರಮಾಣದಲ್ಲಿ. ಚಿರಿಕಹುಆದ ಒಂದು ಬ್ಯಾಂಡ್ (ಒಪ್ಲರ್) ಮತ್ತು ಮೆಸ್ಕೆರೆಲೋ ಬಹಳ ಕಡಿಮೆ ಕೃಷಿಯನ್ನು ರೂಢಿಸಿಕೊಂಡಿದ್ದರು. ಚಿರಿಕಹುಆದ ಇನ್ನೆರಡು ಬ್ಯಾಂಡ್ ಮತ್ತು ಬಯಲು ಅಪಾಚೆಯವರು ಯಾವುದೇ ಬೆಳೆಯನ್ನು ಬೆಳೆಯುತ್ತಿರಲಿಲ್ಲ.

ವ್ಯಾಪಾರ, ದಾಳಿ ಮತ್ತು ಯುದ್ಧ[ಬದಲಾಯಿಸಿ]

ಅಪಾಚೆ ಮತ್ತು ಯುರೋಪಿನಿಂದ ಬಂದು ಒಳಗಿಳಿದು ಪರಿಶೋಧ ನಡೆಸುವವರು ಹಾಗೂ ಅಲ್ಲಿಯೇ ನೆಲೆಯಾದವರ ನಡುವೆ ವ್ಯಾಪಾರಕ್ಕೆ ಸಂಬಂಧಿಸಿದಂತೆ ಕೆಲವು ಆಂತರಿಕ ಬದಲಾವಣೆಗಳಾದವು. ತಾವು ಯುರೋಪಿನ ಮತ್ತು ಅಮೆರಿಕದ ವಸ್ತುಗಳನ್ನು ಬಳಸಬಹುದು ಎಂಬುದನ್ನು ಅಪಾಚೆಗಳು ಕಂಡುಕೊಂಡರು. ತಮಗೆ ಬ್ಕಾದುದನ್ನು ಪಡೆದುಕೊಳ್ಳುವುದನ್ನು ಅವರು ನಂಬಿದರು. ಉದಾಹರಣೆಗೆ ಕುದುರೆಗಳು. ಹೀಗಿದ್ದರೂ ಈ ಮುಂದಿನ ಚಟುವಟಿಕೆಗಳು ಯುರೋಪದವರು ಮತ್ತು ಅಮೆರಿಕದವರಿಂದ ಮರೆಯಾಗಲಿಲ್ಲ. ಎಲ್ಲ ಅಪಾಚೆ ಬುಡಕಟ್ಟಿನವರಿಗೆ (ಲಾಭಕ್ಕಾಗಿ) ದಾಳಿ ಮಾಡುವುದು ಮತ್ತು ಯುದ್ಧದ ನಡುವಿನ ಅಂತರವನ್ನು ಮನದಟ್ಟು ಮಾಡಿಕೊಟ್ಟರು. ದಾಳಿಗಳನ್ನು ಚಿಕ್ಕ ಗುಂಪುಗಳೊಂದಿಗೆ ವಿಶಿಷ್ಟ ಆರ್ಥಿಕ ಗುರಿಯೊಂದಿಗೆ ನಡೆಸಲಾಗುತ್ತಿತ್ತು. ಅಪಾಚೆಗಳು ಯುದ್ಧವನ್ನು ದೊಡ್ಡ ತಂಡಗಳೊಂದಿಗೆ (ಬಹಳ ಸಲ ಕುಲದ ಸದಸ್ಯರನ್ನು ಬಳಸಿಕೊಂಡು) ನಡೆಸುತ್ತಿದ್ದರು. ಸಾಮಾನ್ಯವಾಗಿ ಪ್ರತೀಕಾರ ಸಾಧಿಸಲೆಂದೇ ಈ ದಾಳಿಗಳು ನಡೆಯುತ್ತಿದ್ದವು. ದಾಳಿ ನಡೆಸುವುದು ಅಪಾಚೆಗಳ ಸಾಂಪ್ರದಾಯಿಕ ಜೀವನಕ್ರಮವಾಗಿದ್ದರೂ ಮೆಕ್ಸಿಕೋದಲ್ಲಿ ನೆಲೆ ನಿಂತವರು ತಮ್ಮ ಜಾನುವಾರನ್ನು ಕಳವು ಮಾಡುವುದಕ್ಕೆ ವಿರೋಧಿಸಿದರು. ಅಪಾಚೆಗಳು ಮತ್ತು ನೆಲೆಯಾದವರ ನಡುವೆ ತ್ವೇಷ ಮುಂದುವರಿದಂತೆ ಮೆಕ್ಸಿಕೋದ ಸರ್ಕಾರವು ಕಾಯಿದೆಯನ್ನು ಪಾಸು ಮಾಡಿ ಅಪಾಚೆಗಳ ತಲೆಬುರುಡೆಗೆ ಬಹುಮಾನವನ್ನು ಘೋಷಿಸಿತು.[೨೮]

ಧರ್ಮ[ಬದಲಾಯಿಸಿ]

ಅಪಾಚೆಯ ಧಾರ್ಮಿಕ ಕಥೆಗಳು ಎರಡು ಸಾಂಸ್ಕೃತಿಕ ಕಥಾಪುರುಷರಿಗೆ ಸಂಬಂಧಿಸಿದೆ. (ಇವುಗಳಲ್ಲಿ ಒಂದು ಸೂರ್ಯ/ಅಗ್ನಿ:"ಶತ್ರು-ಸಂಹಾರಕ/ಅತಿಮಾನುಷ ಹಂತಕ", ಮತ್ತು ಇನ್ನೊಂದು ನೀರು/ಚಂದ್ರ/ಗುಡುಗು: "ನೀರಿನ ಮಗು/ನೀರಿಗೋಸ್ಕರ ಜನಿಸಿದ್ದು") ಅದು ಮಾನವಕುಲಕ್ಕೆ ಹಾನಿಕರವಾದ ಅನೇಕ ಜೀವಿಗಳನ್ನು ನಾಶಮಾಡುತ್ತದೆ.[೨೯] ಚೆಂಡು ಅಡಗಿಸುವ ಆಟದ ಇನ್ನೊಂದು ಕಥೆ, ಇಲ್ಲಿ ಒಳ್ಳೆಯ ಮತ್ತು ಕೆಟ್ಟ ಪ್ರಾಣಿಗಳು ಜಗತ್ತಿನಲ್ಲಿ ಅನುಗಾಲವೂ ಕತ್ತಲೆ ಇರಬೇಕೋ ಬೇಡವೋ ಎನ್ನುವುದನ್ನು ನಿರ್ಧರಿಸುತ್ತವೆ. ಕೋಯೋಟೆ, ಒಬ್ಬ ದಗಾಕೋರ, ಆಗಾಗ್ಗೆ ಅಸಮರ್ಪಕ ವರ್ತನೆಯನ್ನು ಹೊಂದಿದ ಒಬ್ಬ ಮಹತ್ವದ ವ್ಯಕ್ತಿ (ತನ್ನ ಮಗಳನ್ನೇ ಮದುವೆಯಾಗುವುದು ಇತ್ಯಾದಿ.) ಇದರಲ್ಲಿ ಆತ ಸಾಮಾಜಿಕ ಸಂಪ್ರದಾಯಗಳನ್ನೆಲ್ಲ ಬುಡಮೇಲು ಮಾಡುತ್ತಾನೆ. ನವಾಜೋ, ಪಶ್ಚಿಮ ಅಪಾಚೆ, ಜಿಕಾರಿಲ್ಲಾ, ಮತ್ತು ಲಿಪಾನ್ ತಾನಾಗೇ ಉದ್ಭವವಾದ ಇಲ್ಲವೆ ಸೃಷ್ಟಿಸಿದ ಕಥೆಯನ್ನು ಹೊಂದಿದ್ದರೆ ಚಿರಿಕಹುಆ ಮತ್ತು ಮೆಸ್ಕರೆಲೋಗಳಲ್ಲಿ ಇದು ಇಲ್ಲ.[೨೯] ಬಹಳಷ್ಟು ದಕ್ಷಿಣ ಅಪಾಚೆಯ “ದೇವರುಗಳು” ಈ ವಿಶ್ವವನ್ನು ಮುನ್ನೆಡೆಸುವ ಶಕ್ತಿಗಳ ವ್ಯಕ್ತೀಕರಣ ಮಾಡಿದವು. ಅವರನ್ನು ಧಾರ್ಮಿಕ ಸಮಾರಂಭಗಳ ಮೂಲಕ ಮಾನವನ ಉದ್ದೇಶಕ್ಕೆ ಬಳಸಿಕೊಳ್ಳಬಹುದಿತ್ತು. ಮಾನವಶಾಸ್ತ್ರಜ್ಞ ಬಸ್ಸೋ ಪಶ್ಚಿಮ ಅಪಾಚೆಯ ಪರಿಕಲ್ಪನೆಯ diyí’(ಡಿಯಿ) ಯನ್ನು ಹೀಗೆ ಸೂತ್ರೀಕರಿಸುತ್ತಾರೆ:

diyí’(ಡಿಯಿ) ಪದವು ಒಂದು ಅಥವಾ ಎಲ್ಲ ಅಸಂಗತ ಮತ್ತು ಅದೃಶ್ಯ ಶಕ್ತಿಗಳ ಗುಂಪನ್ನು ಪ್ರತಿನಿಧಿಸುತ್ತದೆ. ಇವನ್ನು ನಿರ್ದಿಷ್ಟ ವರ್ಗದ ಪ್ರಾಣಿಗಳು, ಸಸ್ಯಗಳು, ಖನಿಜಗಳು, ಭೂಗರ್ಭದ ಪ್ರಕ್ರಿಯೆಗಳು ಮತ್ತು ಪಶ್ಚಿಮ ಅಪಾಚೆ ವಿಶ್ವದಲ್ಲಿನ ಪೌರಾಣಿಕ ಆಕೃತಿಗಳಿಂದ ರೂಪುಪಡೆದದ್ದು. ವಿವಿಧ ಶಕ್ತಿಗಳಲ್ಲಿ ಯಾವುದನ್ನಾದರೂ ಮನುಷ್ಯನು ಸ್ವಾಧೀನಪಡಿಸಿಕೊಳ್ಳಬಹುದು ಮತ್ತು ಅದನ್ನು ಸರಿಯಾಗಿ ನಿರ್ವಹಿಸಿದರೆ ವಿವಿಧ ಉದ್ದೇಶಕ್ಕೆ ಬಳಸಿಕೊಳ್ಳಬಹುದು.[೩೦]

ಔಷಧ ಮನುಷ್ಯ (ಶಮನ್್ರು) ಧಾರ್ಮಿಕಕ್ರಿಯೆಗಳನ್ನು ಕಲಿತುಕೊಳ್ಳುವರು, ಇವನ್ನು ನೇರವಾಗಿ ವ್ಯಕ್ತಿಯ ಜ್ಞಾನಪ್ರಕಾಶನದಿಂದಲೂ ಪಡೆದುಕೊಳ್ಳಬಹುದು (ಇವನ್ನೂ ನೋಡಿ ಅತೀಂದ್ರಿಯವಾದ). ವಿವಿಧ ಅಪಾಚೆಯ ಸಂಸ್ಕೃತಿಗಳು ಧಾರ್ಮಿಕ ಕ್ರಿಯೆಗಳ ಆಚರಣೆಗಳ ವಿಷಯಗಳಲ್ಲಿ ವಿಭಿನ್ನ ವಿಚಾರಗಳನ್ನು ಹೊಂದಿದ್ದಾರೆ. ಹೆಚ್ಚಿನ ಚಿರಿಕಹುಆ ಮತ್ತು ಮೆಸ್ಕಲೆರೋ ಧಾರ್ಮಿಕ ಕ್ರಿಯೆಗಳು ವೈಯಕ್ತಿಕ ಧಾರ್ಮಿಕ ದರ್ಶನಗಳನ್ನು ಪ್ರಸರಿಸುವ ಮೂಲಕ ನಡೆಯುವುದೆಂದು ತಿಳಿಯುತ್ತದೆ. ಆದರೆ ಜಿಕಾರಿಲ್ಲಾ ಮತ್ತು ಪಶ್ಚಿಮ ಅಪಾಚೆಗಳು ಹೆಚ್ಚು ಕೇಂದ್ರೀಯ ಧಾರ್ಮಿಕ ಆಚರಣೆಗಳ ರೂಢಿಯ ಮೂಲಕ ಪದ್ಧತಿಗಳಿಗೆ ನಿಷ್ಕೃಷ್ಟತೆ (ಪ್ರಮಾಣಕವಾಗಿಸಲು) ತರಲು ಯತ್ನಿಸಿದ್ದಾರೆ. ಪ್ರಮಾಣಕತೆಗೊಳಿಸಲಾದ ಪ್ರಮುಖ ಧಾರ್ಮಿಕ ಆಚರಣೆಗಳಲ್ಲಿ ಯುವತಿ ಋತುಮತಿಯಾದಾಗ ನಡೆಸುವ ಧಾರ್ಮಿಕ ಕ್ರಿಯೆ (ಸೂರ್ಯ ಮೂಡುವ ನೃತ್ಯ), ನವಾಜೋ ಮಂತ್ರಗಳು, ಜಿಕಾರಿಲ್ಲಾ "long-life" (ದೀರ್ಘ-ಬದುಕಿನ) ಧಾರ್ಮಿಕ ಕ್ರಿಯೆಗಳು ಮತ್ತು ಬಯಲು ಅಪಾಚೆಯ "sacred-bundle" (ಪವಿತ್ರ -ಮೂಟೆ) ಧಾರ್ಮಿಕ ಕ್ರಿಯೆಗಳು ಸೇರಿವೆ. ನಿರ್ದಿಷ್ಟ ಪ್ರಾಣಿಗಳನ್ನು ಆಧ್ಯಾತ್ಮಿಕವಾಗಿ ಕೆಟ್ಟದ್ದು ಮತ್ತು ಮಾನವನ ಅನಾರೋಗ್ಯಕ್ಕೆ ಕಾರಣವಾಗುವಂಥದ್ದು ಎಂದು ಪರಿಗಣಿಸುತ್ತಾರೆ: ಗೂಬೆಗಳು, ಹಾವುಗಳು, ಕರಡಿಗಳು ಮತ್ತು ಹುಲ್ಲುಗಾವರು ತೋಳಗಳು. ಧಾರ್ಮಿಕ ಶಕ್ತಿಗಳನ್ನು ಪ್ರತಿನಿಧಿಸುವ ಮುಖವಾಡಗಳನ್ನು ಅನೇಕ ಅಪಾಚೆಯ ಧಾರ್ಮಿಕ ಕ್ರಿಯೆಗಳಲ್ಲಿ ಬಳಸುತ್ತಾರೆ. ಮರಳು ಚಿತ್ರಕಲೆ ನವಾಜೋ, ಪಶ್ಚಿಮ ಅಪಾಚೆ ಮತ್ತು ಜಿಕಾರಿಲ್ಲಾ ಸಂಪ್ರದಾಯಗಳಲ್ಲಿ ಒಂದು ಮಹತ್ವದ ಧಾರ್ಮಿಕ ಆಚರಣೆ. ಇದರಲ್ಲಿ ಶಮನ್ನರು ತಾತ್ಕಾಲಿಕವಾದ ಪವಿತ್ರ ಕಲೆಯನ್ನು ಬಣ್ಣದ ಮರಳಿನಿಂದ ಸೃಷ್ಟಿಸುತ್ತಾರೆ. ಮುಖವಾಡಗಳು ಮತ್ತು ಮರಳು ಚಿತ್ರಕಲೆಯು ನೆರೆಯ ಪೆಬ್ಲೋ ಸಂಸ್ಕೃತಿಗಳಿಂದಾದ ಸಾಂಸ್ಕೃತಿಕ ಪ್ರಸರಣದ ಉದಾಹರಣೆಗಳೆಂದು ಮಾನವಶಾಸ್ತ್ರಜ್ಞರು ನಂಬುತ್ತಾರೆ.[೩೧] ಅಪಾಚೆಗಳು ನೇಕ ದೈವಿಕ ನೃತ್ಯಗಳಲ್ಲಿ ಭಾಗವಹಿಸುತ್ತಾರೆ. ಇದರಲ್ಲಿ ಮಳೆ ನೃತ್ಯ, ಬೆಳೆ ಮತ್ತು ಸುಗ್ಗಿಗಾಗಿ ನೃತ್ಯ ಮತ್ತು ದೈವೀನೃತ್ಯಗಳು ಸೇರಿವೆ. ಈ ನೃತ್ಯಗಳು ಬಹುತೇಕ ವಾತಾವರಣವನ್ನು ಪ್ರಭಾವಿಸುವ ಮತ್ತು ಅವರ ಆಹಾರ ಮೂಲವನ್ನು ಶ್ರೀಮಂತಗೊಳಿಸುವ ಉದ್ದೇಶದ್ದು.

ಭಾಷೆಗಳು[ಬದಲಾಯಿಸಿ]

ಅಪಾಚೆ ಜನರು ಏಳು ದಕ್ಷಿಣದ ಅಥಾಬಾಸ್ಕನ್ ಭಾಷೆಗಳಲ್ಲಿ ಒಂದು ಅಥವಾ ಹೆಚ್ಚು ಭಾಷೆಗಳನ್ನು ಆಡುತ್ತಾರೆ. ಇವು ವ್ಯಾಕರಣದ ಸ್ವರೂಪ ಮತ್ತು ಧ್ವನಿ ವ್ಯವಸ್ಥೆಯಲ್ಲಿ ಸಾದೃಶ್ಯದ ಹೋಲಿಕೆಯನ್ನು ಹೊಂದಿವೆ. ದಕ್ಷಿಣದ ಅಥಾಬಾಸ್ಕನ್ (ಅಥವಾ ಅಪಾಚೆ) ದೊಡ್ಡದಾದ ಅಥಾಬಾಸ್ಕನ್ ಕುಟುಂಬದ ಉಪ-ಕುಟುಂಬ, ಇವು ನದೆನೆಯ ಒಂದು ಶಾಖೆ. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ದೇಶೀಯ ಭಾಷೆಯನ್ನು ಅತಿ ದೊಡ್ಡ ಪ್ರಮಾಣದಲ್ಲಿ ಮಾತನಾಡುವ ಮೂಲನಿವಾಸಿ ಭಾಷಿಕರನ್ನು ಹೊಂದಿದೆ ಎಂಬ ಕಾರಣಕ್ಕೆ ನವಾಜೋ ಗಮನಾರ್ಹವಾಗಿದೆ. ಹೀಗಿದ್ದರೂ ನವಾಜೋ ಸೇರಿದಂತೆ ಎಲ್ಲ ಅಪಾಚೆ ಭಾಷೆಗಳೂ ಅಪಾಯವನ್ನು ಎದುರಿಸುತ್ತಿವೆ. ಲಿಪಾನ್ ಭಾಷೆನಾಶವಾಗಿದೆ. ದಕ್ಷಿಣದ ಅಥಾಬಾಸ್ಕನ್ ಶಾಖೆಯನ್ನು ಮೊದಲಿಗೆ ಅದರ ಪ್ರಕೃತಿ (ಮೂಲಧಾತು)-ಮೂಲ ವ್ಯಂಜನಗಳು ಮೂಲ ಅಥಾಬಾಸ್ಕನ್ ಸರಣಿಯಲ್ಲಿ *k̯ and (ಮತ್ತು) *c (into) ಒಳಗೆ *c ವಿಲೀನವಾಗಿರುವುದನ್ನು ಅವರು ಆಧಾರವಾಗಿಟ್ಟುಕೊಂಡು (ವ್ಯಾಪಕವಾಗಿ ವಿಲೀನವಾಗಿರುವ and *čʷ into ಗೆ ಹೆಚ್ಚುವರಿಯಾಗಿ, ಅಲ್ಲದೆ ಅನೇಕ ಉತ್ತರ ಅಥಾಬಾಸ್ಕನ್ ಭಾಷೆಗಳಲ್ಲಿಯೂ ಕಂಡುಬುರುವುದು) ಹ್ಯಾರಿ ಹೊಯ್ಜೆರ್ ವ್ಯಾಖ್ಯಾನಿಸಿದ್ದಾರೆ.

ಮೂಲ-
ಅಥಾಬಾಸ್ಕನ್

! ನವಾಜೋ ! ಪಾಶ್ಚಾತ್ಯ
ಅಪಾಚೆ ! ಚಿರಿಕಹುಆ ! ಮೆಸ್ಕಲೆರೋ ! ಜಿಕಾರಿಲ್ಲಾ ! ಲಿಪಾನ್ ! ಪ್ಲೇನ್ಸ್
ಅಪಾಚೆ |- | *k̯uʔs | "ಹಿಡಿಕೆ ಹೆಣಿಗೆಯಂಥ ವಸ್ತು" | -tsooz(ತ್ಸೂಝ್) | -tsooz (ತ್ಸೂಝ್) | -tsuuz (ತ್ಸುಉಜ್) | -tsuudz (ತ್ಸುಡ್ಜ್) | -tsoos (ತ್ಸೂಸ್) | -tsoos (ತ್ಸೂಸ್) | -tsoos (ತ್ಸೂಸ್) |- | *ce· Stone.(ಕಲ್ಲು) | tsé (ತ್ಸೆ) | tséé (ತ್ಸೀ) | tsé (ತ್ಸೆ) | tsé (ತ್ಸೆ) | tsé (ತ್ಸೆ) | tsí (ತ್ಸಿ) | tséé ತ್ಸೀ |} ಹೊಯ್ಜರ್(1938) ಅಪಾಚೆ ಉಪ-ಕುಟುಂಬವನ್ನು ಜಿಕಾರಿಲ್ಲಾ, ಲಿಪಾನ್ ಮತ್ತು ಬಯಲು ಅಪಾಚೆ ಒಳಗೊಂಡಿರುವ ಪೂರ್ವ ಶಾಖೆಯೆಂದೂ ನವಾಜೋ, ಪಶ್ಚಿಮದ ಅಪಾಚೆ (ಸಾನ್ ಕಾರ್ಲೋಸ್), ಚಿರಿಕಹುಆ ಮತ್ತು ಮೆಸ್ಕಲೆರೋ ಇರುವ ಪಶ್ಚಿಮದ ಶಾಖೆಯೆಂದೂ ಮೂಲ-ಅಪಾಚೆಯವರಲ್ಲಿಯ*t and *k to k ಪೂರ್ವ ಶಾಖೆಯಲ್ಲಿ ವಿಲೀನವಾಗಿರುವುದನ್ನು ಆಧಾರವಾಗಿಟ್ಟುಕೊಂಡು ವಿಭಜಿಸುತ್ತಾನ. ಹೀಗೆ, ಕೆಳಗಿನ ಉದಾಹರಣೆಯಲ್ಲಿ ಹೇಗೆಂದು ನೋಡಬಹುದು, ಪಶ್ಚಿಮದ ಭಾಷೆಗಳು ನಾಮಪದ ಮತ್ತು ಕ್ರಿಯಾಪದದ ಪ್ರಕೃತಿಯನ್ನು t ದಿಂದ ಆರಂಭಿಸಿದರೆ, ಇದಕ್ಕೆ ಸಂಬಂಧಿಸಿದ ರೂಪಗಳು ಪೂರ್ವದ ಭಾಷೆಯಲ್ಲಿ k ದಿಂದ ಆರಂಭವಾಗುತ್ತವೆ:

! colspan="4" | ಪಶ್ಚಿಮದ್ದು ! colspan="3" | ಪೂರ್ವದ್ದು |- ಸ್ಟೈಲ್="ಲೈನ್-ಹೈಟ್:1.2ಇಎಂ" ! ! ನವಾಜೊ ! ಪಶ್ಚಿಮದ್ದು
ಅಪಾಚೆ ! ಚಿರಿಕಹುಆ ! ಮೆಸ್ಕಲೆರೊ ! ಜಿಕಾರಿಲ್ಲಾ ! ಲಿಪಾನ್ ! ಪ್ಲೇನ್ಸ್
ಅಪಾಚೆ |- ನೀರು | tó (ತೋ) | tū (ತು) | tú (ತು) | tú (ತು) | kó (ಕೋ) | kó (ಕೋ){{/0} | kóó (ಕೂ) |- ಬೆಂಕಿ | kǫʼ(ಕ್್ಕ್ಯೂ) | kǫʼ(ಕ್್ಕ್ಯೂ) | kųų(ಕ್್ಯು) | kų(ಕ್್ಯು) | ko̱ʼ(ಕೋ) | kǫǫʼ(ಕ್್ಕ್ಯೂಕ್ಯೂ) | kǫʼ(ಕ್್ಕ್ಯು) |} ನಂತರ ಆತನು ತನ್ನ ಪ್ರಸ್ತಾವವನ್ನು 1971ರಲ್ಲಿ ಪರಿಷ್ಕರಿಸಿದ. ಕಾರಣ ಅವನು, ಬಯಲು ಅಪಾಚೆಗಳು ಈ ವಿಲೀನದಲ್ಲಿ ಭಾಗವಹಿಸದೆ ಇದ್ದದ್ದು ಆತನ ಗಮನಕ್ಕೆ ಬಂತು.*k̯/*c ಬಯಲು ಅಪಾಚೆ ಇತರ ಭಾಷೆಗಳಿಂದ ಸಮಾನ ದೂರವನ್ನು ಕಾಯ್ದುಕೊಂಡಿತ್ತು. ಈಗ ಅದನ್ನು ನೈಋತ್ಯ ಅಪಾಚೆ ಎಂದು ಕರೆಯುತ್ತಾರೆ.

ಹೀಗೆ, ಪ್ರೋಟೋ ಅಥಾಬಾಸ್ಕನ್್ನಲ್ಲಿ ಕೆಲವು ಪ್ರಕೃತಿಗಳು ಮೂಲದಲ್ಲಿ ಆರಂಭಗೊಂಡಿದ್ದು *k̯ ಬಯಲು ಅಪಾಚೆಯಲ್ಲಿ ch ದಿಂದ ಆರಂಭಕೊಳ್ಳುತ್ತವೆ ಮತ್ತು ಇತರ ಭಾಷೆಗಳಲ್ಲಿ ts ದಿಂದ ಆರಂಭವಾಗುತ್ತವೆ.
ಪ್ರೋಟೊ-
ಅಥಾಬಾಸ್ಕನ್

! ನವಾಜೊ ! ಚಿರಿಕಹುಆ ! ಮೆಸ್ಕಲೆರೋ ! ಜಿಕಾರಿಲ್ಲಾ ! ಪ್ಲೇನ್ಸ್
ಅಪಾಚೆ |- 67* | "big" (ಬಿಗ್) | -tsaa(-ತ್ಸಾ) | -tsaa(-ತ್ಸಾ) | -tsaa(-ತ್ಸಾ) | -tsaa(-ತ್ಸಾ) | -cha(-ಚ) |} ಹೊಯ್ಜೆರ್್ನ ಮೂಲಸೂತ್ರ ಜಿಕಾರಿಲ್ಲಾ ಮತ್ತು ಲಿಪಾನ್ ಪೂರ್ವ ಶಾಖೆಯಲ್ಲಿ ಇದೆ ಎಂದು ಹೇಳಿದ್ದು ಈ ಎರಡು ಗುಂಪುಗಳ ನಡುವಿನ ಸಾಂಸ್ಕೃತಿಕ ಸಾಮ್ಯತೆ ಮತ್ತು ಇತರ ಪಶ್ಚಿಮದ ಅಪಾಚೆ ಗುಂಪುಗಳ ನಡುವೆ ಇರುವ ಭಿನ್ನತೆಯ ಕಾರಣದಿಂದಾಗಿ ಒಪ್ಪಬಹುದಾದದ್ದು ಎಂದು ಮೊರಿಸ್ ಒಪ್ಲರ್ (1975) ಸೂಚಿಸುತ್ತಾನೆ. ಇತರ ಭಾಷಾಶಾಸ್ತ್ರಜ್ಞರು, ನಿರ್ದಿಷ್ಟವಾಗಿ ಮೈಕೆಲ್ ಕ್ರೌಸ್ಸ್ (1973) ನಾಮಪದ ಮತ್ತು ಕ್ರಿಯಾಪದದ ಮೂಲ ಪ್ರಕೃತಿಯ ವ್ಯಂಜನಗಳ ಆಧಾರದ ಮೇಲೆ ವಿಭಾಗಿಸಿರುವುದು ಯಾದೃಚ್ಛಿಕವಾಗಿದೆ. ಮತ್ತು ಯಾವಾಗ ಇತರ ಧ್ವನಿ ವ್ಯವಹಾರಗಳನ್ನು ಪರಿಗಣಿಸಿದಾಗ ಭಾಷೆಗಳ ನಡುವಿನ ಸಂಬಂಧಗಳು ಹೆಚ್ಚು ಸಂಕೀರ್ಣವಾಗಿರುವಂತೆ ತೋರುತ್ತವೆ ಎಂಬುದನ್ನು ಗಮನಿಸುತ್ತಾರೆ.. ಇದಕ್ಕೆ ಹೆಚ್ಚುವರಿಯಾಗಿ, ಮಾರ್ಟಿನ್ ಹುಡ್ (1983) ಗುರುತಿಸುವುದೇನೆಂದರೆ ಬಯಲು ಅಪಾಚೆಗಳು ಮೂಲ-ಅಥಾಬಾಸ್ಕನ್*k̯/*c ಜೊತೆ ವಿಲೀನ ಹೊಂದದೆ ಇರುವಾಗ, ಬಯಲು ಅಪಾಚೆಗಳನ್ನು ಹೊಯ್ಜೆರ್ ವ್ಯಾಖ್ಯಾನಿಸಿದಂತೆ ಅಪಾಚೆ ಪರಿವಾರದ ಭಾಷೆಯೆಂದು ಪರಿಗಣಿಸಲು ಬಾರದು. ಅಪಾಚೆಯವನ ಭಾಗಳು ಧ್ವನಿಯ ಭಾಷೆಗಳು. ಧ್ವನಿಯ ಬೆಳವಣಿಗೆಗೆ ಸಂಬಂಧಿಸಿದಂತೆ, ಎಲ್ಲ ಅಪಾಚೆಯವರ ಭಾಷೆಗಳು ಕೆಳ-ಒತ್ತಡದ ಭಾಷೆಗಳು, ಇದರರ್ಥ ಆ ಮೂಲ ಭಾಷೆಯಲ್ಲಿ ಪ್ರಕೃತಿಯು ಒಂದು "ಸಂಕುಚಿತಗೊಳಿಸಲಾದ" ಉಚ್ಚಾರಾಂಶ ಪ್ರಾಸವಾಗಿದ್ದು ಕೆಳ ಧ್ವನಿಯನ್ನು ಅಭಿವೃದ್ಧಿಪಡಿಸಿದೆ. ಮತ್ತು ಉಳಿದೆಲ್ಲ ಪ್ರಾಸಗಳು ಎತ್ತರದ ಧ್ವನಿಯನ್ನು ಅಭಿವೃದ್ಧಿಪಡಿಸಿವೆ. ಇತರ ಉತ್ತರ ಅಥಾಬಾಸ್ಕನ್ ಭಾಷೆಗಳು ಮೇಲ್-ಒತ್ತಡದ ಭಾಷೆಗಳು. ಇದರಲ್ಲಿ ಧ್ವನಿ ಬೆಳವಣಿಗೆಯು ಉಲ್ಟಾ ಆಗಿರುತ್ತದೆ. ಈ ಕೆಳಗಿನ ಉದಾಹರಣೆಯಲ್ಲಿ, ಕೆಳ-ಒತ್ತಡದ ನವಾಜೋ ಮತ್ತು ಚಿರಿಕಹುಆ ಕೆಳ ಧ್ವನಿಯನ್ನು ಹೊಂದಿದ್ದರೆ, ಆಗ ಮೇಲ್-ಒತ್ತಡದ ಉತ್ತರ ಅಥಾಬಾಸ್ಕನ್ ಭಾಷೆಗಳಾದ ಸ್ಲೇವಿ ಮತ್ತು ಚಿಲ್ಕೋಟಿನ್, ಅಧಿಕ ಧ್ವನಿಯನ್ನು ಹೊಂದಿರುತ್ತವೆ, ಮತ್ತು ನವಾಜೋ ಹಾಗೂ ಚಿರಿಕಹುಆ ಅಧಿಕ ಧ್ವನಿಯನ್ನು ಹೊಂದಿದ್ದರೆ ಆಗ ಸ್ಲೇವಿ ಮತ್ತು ಚಿಲ್ಕೋಟಿನ್ ಕೆಳೆ ಧ್ವನಿಯನ್ನು ಹೊಂದಿರುತ್ತವೆ.

! ಕೋಲ್್ಸ್ಪಾನ್="2" | ಕೆಳ-ಒತ್ತಡದ್ದು ! ಕೋಲ್್ಸ್ಪಾನ್="2" | ಅಧಿಕ-ಒತ್ತಡದ್ದು |- ಶೈಲಿ="ಗೆರೆ-ಎತ್ತರ:1.2ಇಎಂ" ! ಮೂಲ-
ಅಥಾಬಾಸ್ಕನ್ ! ! ನವಜೋ, ನವಾಜೋ ! ಚಿರಿಕಹುಆ ! ಸ್ಲೇವಿ ! ಚಿಲ್ಕೋಟಿನ್ |- | *taʔ | "father" ("ತಂದೆ") | -taaʼ (-ತಾʼ) | {0-taa (-ತಾ){/0} | -tá (-ತ)ʔ | -tá (-ತ) |- | *tu· "water" (ನೀರು) | tó (ತೋ) | tú (ತು) | tù (ತು) | tù (ತು) |}

ಪ್ರಖ್ಯಾತ ಅಪಾಚೆ[ಬದಲಾಯಿಸಿ]

ಕಾಥಿ ಕಿಚೆಯನ್, ಸಾನ್ ಕಾರ್ಲೊಸ್ ಅಪಾಚೆಯ ಅಧ್ಯಕ್ಷೆ
 • ಕೋಚಿಸ್, ಅಪಾಚೆ ಮುಖ್ಯಸ್ಥ
 • ಮಂಗಾಸ್ ಕೋಲೋರಡಾಸ್, ಅಪಾಚೆ ಮುಖ್ಯಸ್ಥ
 • ಲೋಕೋ, ಅಪಾಚೆ ಮುಖ್ಯಸ್ಥ
 • ತಾಜಾ, ಅಪಾಚೆ ಮುಖ್ಯಸ್ಥ
 • ನಾನಾ, ಅಪಾಚೆ ಮುಖ್ಯಸ್ಥ
 • ಮಗಾಸ್, ಅಪಾಚೆ ಮುಖ್ಯಸ್ಥ
 • ಜೆರೋನಿಮೋ, ಅಪಾಚೆ ಮುಖಂಡ
 • ದಾತೆಸ್ತೆ, ಅಪಾಚೆ ಮಹಿಳಾ ಯೋಧೆ
 • ಅಲ್ಚೆಸೇ, ಅಪಾಚೆ ಸ್ಕೌಟ್ ಮತ್ತು ಮುಖ್ಯಸ್ಥ
 • ನೈಚೇ, ಅಪಾಚೆ ಮುಖ್ಯಸ್ಥ
 • ವಿಕ್ಟೋರಿಯೋ, ಅಪಾಚೆ ಮುಖ್ಯಸ್ಥ
 • ಗೌಯೆನ್, ಅಪಾಚೆ ಮಹಿಳಾ ಯೋಧೆ
 • ಲೋಜೆನ್, ಮಹಿಳಾ ಅಪಾಚೆ ಯೋಧೆ
 • ಚಟ್ಟೋ, ಅಪಾಚೆ ಸ್ಕೌಟ್
 • ಜೈ ತವಾರೆ, ನಟ
 • ರೌಲ್ ತ್ರುಜಿಲ್ಲೋ, ನೃತ್ಯಪಟು, ನೃತ್ಯ ನಿದೇಶಕ, ನಟ
 • ಮೇರಿ ಕಿಮ್ ಟಿಟ್ಲಾ, ಪ್ರಕಾಶಕಿ, ಪತ್ರಕರ್ತೆ, ಮಾಜಿ ಟೀವಿ ರಿಪೋರ್ಟರ್, ಮತ್ತು 2008 ರಲ್ಲಿ ಅರಿಝೋನಾದ ಪ್ರಥಮ ಕಾಂಗ್ರೆಸ್ಸನಲ್ ಡಿಸ್ಟ್ರಿಕ್ಟ್್ನ ಒಬ್ಬ ಅಭ್ಯರ್ಥಿ.

ಇವನ್ನೂ ಗಮನಿಸಿ[ಬದಲಾಯಿಸಿ]

ಕಚ್ಚಾ ತೊಗಲಿನ ಕಾರ್ಡ್ ಆಡುತ್ತಿರುವ ಅಪಾಚೆ, ಸುಮಾರು 1875-1885 NMAI ಸಂಗ್ರಹ
 • ಅಥಾಭಾಸ್ಕನ್ ಭಾಷೆಗಳು
 • ಅಪಾಚೆ ಪಾಸ್ ಯುದ್ದ
 • ಸಿಯೆನ್ನೆಗುಲ್ಲಾ ಯುದ್ಧ
 • ಕ್ಯಾಂಪ್ ಗ್ರಾಂಟ್ ಹತ್ಯಾಕಾಂಡ
 • ಚಿರಿಕಹುಆ
 • ಫೋರ್ಟ್ ಅಪಾಚೆ , ಐತಿಹಾಸಿಕ ಕಥಾಚಿತ್ರ ಅಮೆರಿಕದ ಸೇನೆ ಮತ್ತು ಕೋಚಿಸೆ'ಯ ಬಾಂಡ್ ನಡುವಿನ ಯುದ್ಧಗಳ ಚಿತ್ರಣವಿರುವ ಸಿನಿಮಾ
 • ಜಿಕಾರಿಲ್ಲಾ ಅಪಾಚೆ
 • ಲಿಪಾನ್ ಅಪಾಚೆ ಜನರು
 • ಮೆಸ್ಕಲೆರೋ
 • ಮೂಲನಿವಾಸಿ ಅಮೆರಿಕದ ಬುಡಕಟ್ಟುಜನ
 • ಯುನೈಟೆಡ್‌ ಸ್ಟೇಟ್ಸ್‌ನ ಸ್ಥಳೀಯ ಅಮೆರಿಕನ್ನರು
 • ನವಾಜೋ ಜನರು
 • ಪ್ಲೇನ್ಸ್ ಅಪಾಚೆ
 • ಸಕ್ಷಿಣದ ಅಥಾಬಾಸ್ಕನ್ ಭಾಷೆಗಳು
 • ಪಶ್ಚಿಮದ ಅಪಾಚೆ

ಟಿಪ್ಪಣಿಗಳು[ಬದಲಾಯಿಸಿ]

 1. Census.gov Census 2000 PHC-T-18. American Indian and Alaska Native Tribes in the United States: 2000. US Census Bureau 2000 (retrieved December 28, 2009)
 2. "ಅಪಾಚೆ ಇಂಡಿಯನ್ ಸೌಥ್್ವೆಸ್ಟ್" Archived 2011-08-16 ವೇಬ್ಯಾಕ್ ಮೆಷಿನ್ ನಲ್ಲಿ., ಇಪಿ ಕಮ್ಯೂನಿಟಿ ಕಾಲೇಜ್, ಲಭ್ಯ 21 ಜನವರಿ 2010
 3. ವಿಶಿಷ್ಟ ಅಪಾಚೆ ಗುಂಪುಗಳನ್ನು ಗುರುತಿಸುವ ಇತರ ಝೂನಿ ಪದಗಳು wilacʔu·kʷe "ವೈಟ್ ಮೌಂಟೇನ್ ಅಪಾಚೆ" ಮತ್ತು čišše·kʷe "ಸಾನ್ ಕಾರ್ಲೋಸ್ ಅಪಾಚೆ" (ನ್ಯೂಮನ್, ಪುಟಗಳು.32, 63, 65; ಡೆ ರುಸೆ, ಪುಟ.385). ಜೆ.ಪಿ. ಹಾರಿಂಗ್ಟನ್ವರದಿ ಮಾಡುವ ಪ್ರಕಾರ ಅವನ್ನು čišše·kʷe ಸಾಮಾನ್ಯವಾಗಿ ಇತರ ಅಪಾಚೆಗಳನ್ನು ಸೂಚಿಸಲೂ ಬಳಸಬಹುದು.
 4. "K12tn.net". Archived from the original on 2012-09-04. Retrieved 2010-09-22.
 5. ೫.೦ ೫.೧ ಡೆ ರುಸೆ, ಪುಟ.385
 6. ಇದೇ ರೀತಿಯ ಪದಗಳು ಜಿಕಾರಿಲ್ಲಾ ಚಿಶಿನ್ ಮತ್ತು ಲಿಪಾನ್ ಚಿಶ್į́į́ಹ್į́į́ "ಫಾರೆಸ್ಟ್ ಲಿಪಾನ್"ಗಳಲ್ಲೂ ಹೊರಡುತ್ತವೆ.
 7. ಓಪ್ಲರ್ ಮೂರು ಚಿರಿಕಹುಓ ಗುಂಪುಗಳನ್ನು ಪಟ್ಟಿಮಾಡಿದರೆ ಶ್ರೋಡರ್ ಐದನ್ನು ಪಟ್ಟಿ ಮಾಡುವರು.
 8. {0/ಗುಡ್ವಿನ್, ಪುಟ.55
 9. ಕೋರ್ಡೆಲ್, ಪುಟ. 148
 10. ಸೇಮೌರ್ 2004, 2009ಎ, 2009ಬಿ, 2010
 11. ಹ್ಯಾಮಂಡ್ ಮತ್ತು ರೇ
 12. ಹೆಂಡರ್್ಸನ್
 13. ಸೇಮೌರ್ 2004, 2009ಬಿ, 2010
 14. ಕೋರ್ಡೆಲ್, ಪುಟ.151
 15. ಬಾಸ್ಸೊ, ಪುಟ. 462
 16. ಮಿಲೆಸ್, ಪುಟ 526
 17. ಓಪ್ಲರ್ 1983ಎ, ಪುಟ.369
 18. ಬಾಸ್ಸೋ1983
 19. ಓಪ್ಲರ್ 1936ಬಿ
 20. ಅಪಾಚೆ ಭಾಷೆಯಲ್ಲಿ ಎಲ್ಲ ರಕ್ತ ಸಂಬಂಧಿ ಪದಗಳು ಅಂತರ್ಗತವಾಗಿ ಒಳಗೊಂಡಿರುತ್ತವೆ. ಇದರ ಅರ್ಥ ಅವುಗಳ ಹಿಂದೆ ಒಂದು ಅಂತರ್ಗತ ಪೂರ್ವ ಪ್ರತ್ಯಯ ಇರುತ್ತದೆ. ಅದರ ಮುಂದೆ ಕೂಡು ಗೆರೆ ಹಾಕಿ ಇದನ್ನು ಸೂಚಿಸುತ್ತಾರೆ.
 21. ಓಪ್ಲರ್, 1941, ಪುಟಗಳು.22–23, 385–386
 22. ಸೇಮೌರ್ 2009ಎ, 2010ಬಿ
 23. ಅಪಾಚೆ ವಾಸ್ತವಾಂಶದ ಮಾಹಿತಿ ಬಾಸ್ಸೋದಲ್ಲಿದೆ.(1983: 467–470), ಫೋಸ್ಟರ್ ಮತ್ತು ಮೆಕ್ ಕೊಲ್ ಮತ್ತು ಮೆಕೊಲಫ್ (2001: 928–929), ಓಪ್ಲರ್ (1936b: 205–210; 1941: 316–336, 354–375; 1983b: 412–413; 1983c: 431–432; 2001: 945–947), ಮತ್ತು ಟಿಲ್ಲರ್ (1983: 441–442).
 24. ಬ್ರುಗ್ಗೆ, ಪು.494
 25. ಲ್ಯಾಂಡರ್
 26. "ಆರ್ಕೈವ್ ನಕಲು". Archived from the original on 2010-09-17. Retrieved 2010-09-22.
 27. ಮೆಸ್ಕಲೆರೋ ಹೆಸರು ವಾಸ್ತವವಾಗಿ ಮೆಸ್ಕಲ್ ಹೆಸರಿನಿಂದ ತಂದಿದ್ದು.ಅವರು ಆಹಾರವಾಗಿ ಬಳಸುವ ಸಸ್ಯವೊಂದಕ್ಕೆ ಅದನ್ನು ಹೇಳುವರು.
 28. "We Shall Remain: Geronimo, The American Experience". PBS. Archived from the original on ಡಿಸೆಂಬರ್ 9, 2009. Retrieved November 10, 2009.
 29. ೨೯.೦ ೨೯.೧ ಓಪ್ಲರ್ 1983ಎ, ಪುಟಗಳು.368–369
 30. ಬಾಸ್ಸೋ, 1969, ಪು.30
 31. ಓಪ್ಲರ್ 1983ಎ, ಪುಟಗಳು.372–373

ಗ್ರಂಥಸೂಚಿ[ಬದಲಾಯಿಸಿ]

 • ಸೋಲೆದಾದ್, ನೆಲ್ ಡೇವಿಡ್ ಎಸ್ (2009). "ಈಸ್ಟರ್ನ್ ಅಪಾಚೆ ವಿಜಾರ್ಡ್ ಕ್ರಾಫ್ಟ್", ಮಿಥಿಕಲ್ ಪೇಪರ್ಸ್ ಆಫ್ ದಿ ಯುನಿವರ್ಸಿಟಿ ಆಫ್ ಸೇಬು (ನಂ.14). ಫಿಲಿಪ್ಪೈನ್ಸ್: ಯುನಿವರ್ಸಿಟಿ ಆಫ್ ಸೇಬು ಪ್ರೆಸ್,
 • ಬಾಸ್ಸೋ, ಕೀಥ್ ಎಚ್. (1969). " ವೆಸ್ಟರ್ನ್ ಅಪಾಚೆ ವಿಟ್ಚ್ ಕ್ರಾಫ್ಟ್", ಆಂಥ್ರೋಪೋಲಾಜಿಕಲ್ ಪೇಪರ್ಸ್ ಆಫ್ ದಿ ಯುನಿವರ್ಸಿಟಿ ಆಫ್ ಅರಿಝೋನಾ (ನಂ. 15). ಟಕ್ಸನ್: ಅರಿಜೋನಾ ವಿಶ್ವವಿದ್ಯಾಲಯ ಮುದ್ರಣಾಲಯ ಪ್ರೆಸ್ .
 • Brugge, David M. (1968). Navajos in the Catholic Church Records of New Mexico 1694 - 1875. Window Rock, Arizona: Research Section, The Navajo Tribe. {{cite book}}: Cite has empty unknown parameter: |coauthors= (help)
 • ಬ್ರಗ್ಗೆ, ಡೇವಿಡ್ ಎಂ. (1983). "ನವಾಜೋ ಪ್ರಿಹಿಸ್ಟರಿ ಆಂಡ್ ಹಿಸ್ಟರಿ ಟು 1850", ಎ. ಒರ್ಟಿಜ್ (ಆನೃತ್ತಿ.)ನಲ್ಲಿ, ಹ್ಯಾಂಡ್ ಬುಕ್ ಆಫ್ ನಾರ್ಥ್ ಅಮೆರಿಕನ್ ಇಂಡಿಯನ್ಸ್: ನಾರ್ಥ್ ವೆಸ್ಟ್ (ಸಂಪುಟ. 10, ಪುಟಗಳು. 489–501). ವಾಷಿಂಗ್ಟನ್, ಡಿ.ಸಿ.: ಸ್ಮಿಥ್ ಸೋನಿಯನ್ ಇನ್್ಸ್ಟಿಟ್ಯೂಶನ್.
 • ಕೋರ್ಡಲ್, ಲಿಂಡಾ ಎಸ್. ಏನ್ಸಿಯಂಟ್ ಪ್ಯುಬ್ಲೋ ಪೀಪಲ್ಸ್ . ಸೇಂಟ್ ರೆಮಿ ಪ್ರೆಸ್ ಆಂಡ್ ಸ್ಮಿಥ್್ಸೋನಿಯನ್ ಇನ್್ಸ್ಟಿಟ್ಯೂಶನ್, 1994. ISBN 0-8065-2201-1
 • ಎಟುಲಾನ್, ರಿಚರ್ಡ್ ಡಬ್ಲು. ನ್ಯೂ ಮೆಕ್ಸಿಕನ್ ಲೈವ್ಸ್: ಒಂದು ಜೀವನ ಚರಿತ್ರಾತ್ಮಕ ಇತಿಹಾಸ , ಯುನಿವರ್ಸಿಟಿ ಆಫ್ ನ್ಯೂ ಮೆಕ್ಸಿಕೋ ಸೆಂಟರ್ ಫಾರ್ ದಿ ಅಮೆರಿಕನ್ ವೆಸ್ಟ್, ಯುನಿವರ್ಸಿಟಿ ಆಫ್ ನ್ಯೂ ಮೆಕ್ಸಿಕೋ ಪ್ರೆಸ್, 2002. ISBN 0-8065-2201-1
 • ಫೋಸ್ಟರ್, ಮೊರಿಸ್ ಡಬ್ಲು; ಮತ್ತು ಮೆಕ್ ಕಲ್ಲೊಫ್, ಮಾರ್ಥಾ. (2001). "ಪ್ಲೇನ್ಸ್ ್ಪಾಚೆ", ಆರ್.ಜೆ. ಡೆಮಲ್ಲೆ (ಆವೃತ್ತಿ.)ಯಲ್ಲಿ, ಹ್ಯಾಂಡ್ ಬುಕ್ ಆಫ್ ನಾರ್ಥ್ ಅಮೆರಿಕನ್ ಇಂಡಿಯನ್ಸ್: ಪ್ಲೇನ್ಸ್ (ಸಂಪುಟ. 13, ಪುಟಗಳು. 926–939). ವಾಷಿಂಗ್ಟನ್ ಡಿ.ಸಿ.: ಸ್ಮಿಥ್ ಸೋನಿಯನ್ ಇನ್್ಸ್ಟಿಟ್ಯೂಶನ್.
 • Goodwin, Greenville (1969). The Social Organization of the Western Apache. Tucson, Arizona: University of Arizona Press. LCCN 76-75453.
 • ಗುನ್ನರ್ಸನ್ ಜೇಮ್ಸ್ ಎಚ್. (1979). "ಸದರ್ನ್ ಅಥಾಪಾಸ್ಕನ್ ಆರ್ಕಿಯೋಲಜಿ", ಎ. ಒರ್ಟಿಜ್ (ಆವೃತ್ತಿ.)ಯಲ್ಲಿ, ಹ್ಯಾಂಡ್ ಬುಕ್ ಆಫ್ ನಾರ್ಥ್ ಅಮೆರಿಕನ್ ಇಂಡಿಯನ್ಸ್: ನೈಋತ್ಯ (ಸಂಪುಟ. 9, ಪುಟಗಳು. 162–169). ವಾಷಿಂಗ್ಟನ್, ಡಿ.ಸಿ.: ಸ್ಮಿಥ್್ಸೋನಿಯನ್ ಇನ್್ಸ್ಟಿಟ್ಯೂಶನ್
 • ಹಲೀ, ಜೇಮ್ಸ್ ಎಲ್. ಅಪಾಚೆಸ್: ಎ ಹಿಸ್ಟರಿ ಆಂಡ್ ಕಲ್ಚರ್ ಪೋರ್್ಟ್ರೇಟ್ . ಒಕ್ಲಹೋಮಾ ಯುನಿವರ್ಸಿಟಿ ಮುದ್ರಣಾಲಯ, 1997. ISBN 0-8065-2201-1
 • ಪ್ಯಾಮಂಡ್, ಜಾರ್ಜ್ ಪಿ., ಮತ್ತು ರೇ, ಅಗಾಪಿಟೋ (ಆವೃತ್ತಿಗಳು.). (1940). ನೆರೇಶನ್ಸ್ ಆಫ್ ದಿ ಕೋರೋನಡೋ ಎಕ್ಷ್್ಪಿಡಿಶನ್ 1540-1542. ಅಲ್ಬುಕರ್ಕ್: ನ್ಯೂ ಮೆಕ್ಸಿಕೋ ಯುನಿವರ್ಸಿಟಿ ಮುದ್ರಣಾಲಯ.
 • ಹೆಂಡರ್ಸನ್, ರಿಚರ್ಡ್. (1994). "ರಿಪ್ಲಿಕೇಟ್ಂಗ್ ಡಾಗ್ 'ಟ್ರಾವೈಸ್' ಟ್ರಾವೆಲ್ ಆನ್ ದಿ ನಾರ್ಥನ್ ಪ್ಲೇನ್ಸ್", ಬಯಲು ಮಾನವಶಾಸ್ತ್ರಜ್ಞ , 39 , 145–59.
 • ಹೋಡ್ಜ್, ಎಫ್. ಡಬ್ಲ್ಯೂ. (ಆವೃತ್ತಿ). (1907). ಹ್ಯಾಂಡ್ ಬುಕ್ ಆಫ್ ಅಮೆರಿಕನ್ ಇಂಡಿಯನ್ಸ್ . ವಾಷಿಂಗ್ಟನ್‌
 • ಹೊಯ್ಜೆರ್, ಹ್ಯಾರಿ. (1938). "ದಿ ಸದರ್ನ್ ಅಥಾಪಾಸ್ಕನ್ ಲ್ಯಾಂಗ್ವೇಜಸ್", ಅಮೆರಿಕನ್ ಆಂಥ್ರಾಪೋಲೋಜಿಸ್ಟ್ , 40 (1), 75–87.
 • ಹೊಯ್ಜರ್, ಹ್ಯಾರಿ. (1971). "ದಿ ಪೋಸಿಸನ್ ಆಫ್ ದಿ ಅಪಾಚಿನ್ ಲ್ಯಾಂಗ್ವೇಜಸ್ ಇನ್ ದಿ ಅಥಾಪಾಸ್ಕನ್ ಸ್ಟಾಕ್", ಕೆ.ಎಚ್. ಬಾಸ್ಸೋ ಮತ್ತು ಎಂ.ಇ. ಓಪ್ಲರ್ (ಆವೃತ್ತಿ)ಗಳಲ್ಲಿ, ಅಪಾಚಿಯನ್ ಕಲ್ಚರ್ ಹಿಸ್ಟರಿ ಆ್ಯಂಡ್ ಎತ್ನೋಲಜಿ (ಪುಟಗಳು. 3–6). ಅಂಥ್ರಾಪೋಲಜಿ ಪೇಪರ್ಸ್ ಆಫ್ ದಿ ಯುನಿವರ್ಸಿಟಿ ಆಫ್ ಅರಿಝೋನಾ (ನಂ. 21). ಟಕ್ಸನ್: ಅರಿಜೋನಾ ವಿಶ್ವವಿದ್ಯಾಲಯ ಮುದ್ರಣಾಲಯ ಪ್ರೆಸ್ .
 • ಹುಲ್ಡ್, ಮಾರ್ಟಿನ್ ಇ. (1983). "ಅಥಾಪಾಸ್ಕನ್ ಬಿಯರ್ಸ್", ಇಂಟರ್್ನ್ಯಾಶನಲ್ ಜರ್ನಲ್ ಆಫ್ ಅಮೆರಿಕನ್ ಲಿಂಗ್ವಿಸ್ಟಿಕ್ಸ್ , 49 (2), 186–195.
 • ಕ್ರೌಸ್ಸ್, ಮೈಕೆಲ್ ಇ. (1973). "ನ-ಡೆನೆ", ಟಿ.ಎ. ಸೆಬೆಯೋಕ್ (ಆವೃತ್ತಿ.)ಯಲ್ಲಿ, ಲಿಂಗ್ವಿಸ್ಟಿಕ್ಸ್ ಇನ್ ನಾರ್ಥ್ ಅಮೆರಿಕ (ಪುಟಗಳು. 903–978). ಕರೆಂಟ್ ಟ್ರೆಂಡ್ಸ್ ಇನ್ ಲಿಂಗ್ವಿಸ್ಟಿಕ್ಸ್ (ಸಂಪುಟ. 10). ದಿ ಹಗ್ಯು: ಮೌಂಟನ್. (ಮರುಮುದ್ರಣ 1976).
 • ಲ್ಯಾಂಡರ್, ಹರ್ಬರ್ಟ್ ಜೆ. (1960). "ದಿ ಲಾಸ್ ಆಫ್ ದಿ ಅಥಾಪಾಸ್ಕನ್ ವರ್ಡ್ಸ್ ಫಾರ್ ಫಿಶ್ ಇನ್ ದಿ ಸೌಥ್ ವೆಸ್ಟ್", ಇಂಟರ್್ನ್ಯಾಶನಲ್ ಜರ್ನಲ್ ಆಫ್ ಅಮೆರಿಕನ್ ಲಿಂಗ್ವಿಸ್ಟಿಕ್ಸ್, , 26 (1), 75–77.
 • ಮೈಲ್ಸ್, ಜನರಲ್ ನೆಲ್ಸನ್ ಅಪ್ಲೀಟನ್. (1897). ಜನರಲ್ ನೆಲ್ಸನ್ ಎ.ಮಿಲ್ಸ್ ಅವರ ವೈಯಕ್ತಿಕ ಸ್ಮರಣೆಗಳು ಮತ್ತು ನಿರೀಕ್ಷಣೆಗಳು ಯಾದವಿಕಲಹ ಕುರಿತು ಸಂಕ್ಷಿಪ್ತ ವಿಚಾರಗಳನ್ನು ಒಳಗೊಂಡಿದೆ. ಅಥವಾ ಫ್ರಾಂ ನ್ಯೂ ಇಂಗ್ಲಂಡ್ ಟು ಗೋಲ್ಡನ್ ಗೇಟ್: ಆ್ಯಂಡ್ ದಿ ಸ್ಟೋರಿ ಆಫ್ ಹಿಸ್ ಇಂಡಿಯನ್ ಕ್ಯಾಂಪೇನ್ಸ್, ನಮ್ಮ ಮಹಾನ್ ಪಶ್ಚಿಮ ಸಾಮ್ರಾಜ್ಯದ ಬಗ್ಗೆ ಪರಿಶೋಧ, ಅಭಿವೃದ್ಧಿ ಮತ್ತು ಪ್ರಗತಿಯ ಕುರಿತು ವಿವರಣೆಗಳೊಂದಿಗೆ. ಚಿಕಾಗೋ: ದಿ ವೆರ್ನರ್ ಕಂಪನಿ.
 • ನ್ಯೂಮನ್, ಸ್ಟ್ಯಾನ್ಲಿ. (1958). ಝುನಿ ಡಿಕ್ಷನರಿ . ಬ್ಲೂಮಿಂಗ್ಟನ್: ಇಂಡಿಯಾನಾ ಯುನಿವರ್ಸಿಟಿ.
 • ನ್ಯೂಮನ್, ಸ್ಟ್ಯಾನ್ಲಿ. (1965). ಝುನಿ ಗ್ರಾಮರ್ . ಅಲ್ಬುಕರ್ಕ್: ನ್ಯೂ ಮೆಕ್ಸಿಕೋ ಯುನಿವರ್ಸಿಟಿ ಮುದ್ರಣಾಲಯ.
 • ಒಪ್ಲರ್, ಮೊರಿಸ್ ಇ. (1936ಎ). "ಎ ಸಮ್ಮರಿ ಆಫ್ ಜಿಕಾರಿಲ್ಲಾ ಅಪಾಚೆ ಕಲ್ಚರ್", ಅಮೆರಿಕನ್ ಅಂಥ್ರಾಪೋಲಜಿಸ್ಟ್ , 38 (2), 202–223.
 • ಒಪ್ಲರ್ ಮೊರಿಸ್ ಇ. (1936ಬಿ). "ದಿ ಕಿನ್ಶಿಪ್ ಸಿಸ್ಟಮ್ಸ್ ಆಫ್ ದಿ ಸದರ್ನ್ ಅಥಾಪಾಸ್ಕನ್-ಸ್ಪೀಕಿಂಗ್ ಟ್ರೈಬ್ಸ್", ಅಮೆರಿಕನ್ ಅಂಥ್ರಾಪೋಲಜಿಸ್ಟ್ , 38 (4), 620–633.
 • ಒಪ್ಲರ್, ಮೊರಿಸ್ ಇ. (1941). ಆ್ಯನ್ ಅಪಾಚೆ ಲೈಪ್-ವೇ: ದಿ ಇಕಾನಾಮಿಕ್, ಸೋಶಿಯಲ್, ಆ0ಡ್ ರಿಲಿಜಿಯಸ್ ಇನ್್ಸ್ಟಿಟ್ಯೂಶನ್ಸ್ ಆಫ್ ದಿ ಚಿರಿಕಹುಓ ಇಂಡಿಯನ್ಸ್ ಚಿಕಾಗೊ: ಚಿಕಾಗೊ ಯುನಿವರ್ಸಿಟಿ ಮುದ್ರಣಾಲಯ‌.
 • ಒಪ್ಲರ್, ಮೊರಿಸ್ ಇ.(1975). "ಪ್ರಾಬ್ಲೆಮ್ಸ್ ಇನ್ ಅಪಾಚಿಯನ್ ಕಲ್ಚರಲ್ ಹಿಸ್ಟರಿ, ವಿಥ್ ಸ್ಪೆಶಿಯಲ್ ರೆಫರೆನ್ಸ್ ಟು ದಿ ಲಿಪಾನ್ ಅಪಾಚೆ", ಮಾನವಿಕ ತ್ರೈಮಾಸಿಕ , 48 (3), 182–192.
 • ಒಪ್ಲರ್, ಮೊರಿಸ್ ಇ. (1983ಎ). "ದಿ ಅಪಾಚಿಯನ್ ಕಲ್ಚರ್ ಪ್ಯಾಟರ್ನ್ ಆಂಡ್ ಇಟ್ಸ್ ಒರಿಜಿನ್ಸ್", ಎ. ಒರ್ಟಿಜ್ (ಆವೃತ್ತಿ.), ಹ್ಯಾಂಡ್್ಬುಕ್ ಆಫ್ ನಾರ್ಥ್ ಅಮೆರಿಕನ್ ಇಂಡಿಯನ್ಸ್: ಸೌಥ್್ವೆಸ್ಟ್ (ಸಂಪುಟ. 10, ಪುಟಗಳು. 368–392). ವಾಷ್ಟಿಂಗ್ಟನ್, ಡಿ.ಸಿ.: ಸ್ಮಿಥ್್ಸೋನಿಯನ್ ಇನ್ಸ್್ಟಿಟ್ಯೂಶನ್.
 • ಓಪ್ಲರ್, ಮೊರಿಸ್ ಇ. (1983ಬಿ). "ಚಿರಿಕಹುಆ ಅಪಾಚೆ", ಎ. ಒರ್ಟಿಜ್ (ಆವೃತ್ತಿ.)ಯಲ್ಲಿ, ಹ್ಯಾಂಡ್್ಬುಕ್ ಆಫ್ ನಾರ್ಥ್ ಅಮೆರಿಕನ್ ಇಂಡಿಯನ್ಸ್: ಸೌಥ್್ವೆಸ್ಟ್ (ಸಂಪುಟ. 10, ಪುಟಗಳು. 401–418). ವಾಷಿಂಗ್ಟನ್, ಡಿ.ಸಿ.: ಸ್ಮಿಥ್್ಸೋನಿಯನ್ ಇನ್ಸ್್ಟಿಟ್ಯೂಶನ್.
 • ಒಪ್ಲರ್, ಮೊರಿಸ್ ಇ. (1983ಸಿ). "ಮೆಸ್ಕಲೆರೋ ಅಪಾಚೆ", ಎ. ಒರ್ಟಿಜ್ (ಆವೃತ್ತಿ.ಯಲ್ಲಿ), ಹ್ಯಾಂಡ್್ಬುಕ್ ಆಫ್ ನಾರ್ಥ್ ಅಮೆರಿಕನ್ ಇಂಡಿಯನ್ಸ್: ಸೌಥ್್ವೆಸ್ಟ್ (ಸಂಪುಟ. 10, ಪುಟಗಳು. 419–439). ವಾಷ್ಟಿಂಗ್ಟನ್, ಡಿ.ಸಿ.: ಸ್ಮಿಥ್್ಸೋನಿಯನ್ ಇನ್ಸ್್ಟಿಟ್ಯೂಶನ್.
 • ಒಪ್ಲರ್, ಮೊರಿಸ್ ಇ. (2001). "ಲಿಪಾನ್ ಅಪಾಚೆ", ಆರ್.ಜೆ. ಡೆಮಲ್ಲಿ (ಆವೃತ್ತಿ.), ಹ್ಯಾಂಡ್್ಬುಕ್ ಆಫ್ ನಾರ್ಥ್ ಅಮೆರಿಕನ್ ಇಂಡಿಯನ್ಸ್: ಪ್ಲೇನ್ಸ್ (ಸಂಪುಟ. 13, ಪುಟಗಳು. 941–952). ವಾಷ್ಟಿಂಗ್ಟನ್, ಡಿ.ಸಿ.: ಸ್ಮಿಥ್್ಸೋನಿಯನ್ ಇನ್ಸ್್ಟಿಟ್ಯೂಶನ್.
 • ಪ್ಲಾಗ್, ಸ್ಟೆಫೆನ್. 1997 ಏನ್ಸಿಯಂಟ್ ಪೀಪಲ್ಸ್ ಆಫ್ ದಿ ಅಮೆರಿಕನ್ ಸೌಥ್್ವೆಸ್ಟ್. ಲಂಡನ್: ಥೇಮ್ಸ್ ಆ್ಯಂಡ್ ಲಂಡನ್, LTD. ISBN 0-500-27939-X.
 • ರಿಯೂಸ್, ವಿಲ್ಲೆಮ್ ಜೆ., ಡೆ. (1983). "ದಿ ಅಪಾಚಿಯನ್ ಕಲ್ಚರ್ ಪ್ಯಾಟರ್ನ್ ಆಂಡ್ ಇಟ್ಸ್ ಒರಿಜಿನ್ಸ್: ಸಿನೋನಿಮಿ", ಎ. ಒರ್ಟಿಜ್ (ಆವೃತ್ತಿ.)ಯಲ್ಲಿ, ಹ್ಯಾಂಡ್್ಬುಕ್ ಆಫ್ ನಾರ್ಥ್ ಅಮೆರಿಕನ್ ಇಂಡಿಯನ್ಸ್: ಸೌಥ್್ವೆಸ್ಟ್ (ಸಂಪುಟ. 10, ಪುಟಗಳು. 385–392). ವಾಷ್ಟಿಂಗ್ಟನ್, ಡಿ.ಸಿ.: ಸ್ಮಿಥ್್ಸೋನಿಯನ್ ಇನ್ಸ್್ಟಿಟ್ಯೂಶನ್.
 • ಶ್ರೋಡರ್, ಆಲ್ಬರ್ಟ್ ಎಚ್.(1963). "ನವಾಜೋ ಆಂಡ್ ಅಪಾಚೆ ರಿಲೇಶನ್್ಶಿಪ್ಸ್ ವೆಸ್ಟ್ ಆಫ್ ದಿ ರಿಯೋ ಗ್ರಾಂಡೆ", ಎಲ್ ಪಲಾಶಿಯೋ , 70 (3), 5–23.
 • ಶ್ರೋಡರ್, ಆಲ್ಬರ್ಟ್ ಎಚ್.. (1974ಎ). "ಎ ಸ್ಟಡಿ ಆಫ್ ದಿ ಅಪಾಚೆ ಇಂಡಿಯನ್: ಪಾರ್ಟ್ಸ್ 1–3", ಅಮೆರಿಕನ್ ಇಂಡಿಯನ್ ಎತ್ನಾಲಜಿ:ಇಂಡಿಯನ್ಸ್ ಆಫ್ ದಿ ಸೌಥ್್ವೆಸ್ಟ್ ನಲ್ಲಿ. ನ್ಯೂಯಾರ್ಕ್: ಗಾರ್ಲಂಡ್.
 • ಶ್ರೋಡರ್, ಆಲ್ಬರ್ಟ್ ಎಚ್. (1974ಬಿ). "ಎ ಸ್ಟಡಿ ಆಫ್ ದಿ ಅಪಾಚೆ ಇಂಡಿಯನ್: ಪಾರ್ಟ್ಸ್ 4–5", ಅಮೆರಿಕನ್ ಇಂಡಿಯನ್ ಎತ್ನೋಲಜಿ: ಇಂಡಿಯನ್ಸ್ ಆಫ್ ದಿ ಸೌಥ್್ವೆಸ್ಟ್ . ನ್ಯೂಯಾರ್ಕ್: ಗಾರ್ಲಂಡ್.
 • ಶ್ರೋಡರ್, ಆಲ್ಬರ್ಟ್. (1974ಸಿ). "ದಿ ಜಿಕಾರಿಲ್ಲಾ ಅಪಾಚೆ", ಅಮೆರಿಕನ್ ಇಂಡಿಯನ್ ಎತ್ನೋಲಜಿ: ಇಂಡಿಯನ್ಸ್ ಆಫ್ ದಿ ಸೌಥ್್ವೆಸ್ಟ್. . ನ್ಯೂಯಾರ್ಕ್: ಗಾರ್ಲಂಡ್.
 • ಸೆಮೌರ್, ಡೆನಿ ಜೆ. (2004) "ಎ.ರಾಂಚೇರಿಯಾ ಇನ್ ದಿ ಗ್ರಾನ್ ಅಪಾಚೆರಿಯಾ: ಎವಿಡನ್ಸ್ ಆಫ್ ಇಂಟರ್್ಕಲ್ಚರಲ್ ಇಂಟೆರ್ಯಾಕ್ಸನ್ ಆ್ಯಟ್ ದಿ ಸೆರ್ರೋ ರೋಜೋ ಸೈಟ್", ಬಯಲು ಮಾನವಶಾಸ್ತ್ರಜ್ಞ 49(190):153-192.
 • ಸೇಮೌರ್, ಡೆನಿ ಜೆ. (2009ಎ) "ನೈಂಟೀಂತ್-ಸೆಂಚುರ್ ಅಪಾಚೆ ವಿಕಿಅಪ್ಸ್: ಹಿಸ್ಟಾರಿಕಲ್ ಡಾಕ್ಯುಮೆಂಟೆಡ್ ಮಾಡೆಲ್ಸ್ ಫಾರ್ ಆರ್ಕಿಯಾಜಿಕಲ್ ಸಿಗ್ನೇಚರ್ಸ್ ಆಫ್ ದಿ ಡ್ವೆಲಿಂಗ್ಸ್ ಆಫ್ ಮೊಬೈಲ್ ಪೀಪಲ್", ಎಂಟಿಕ್ವಿಟಿ 83(319):157-164.
 • ಸೇಮೌರ್r, ಡೆನಿ ಜೆ.(2009ಬಿ) "ಇವಾಲ್ಯುಯೇಟಿಂಗ್ ಐ ವಿಟ್ನೆಸ್ ಅಕೌಂಟ್ಸ್ ಆಫ್ ನೇಟಿವ್ ಪೀಪಲ್ಸ್ ಅಲಾಂಗ್ ದಿ ಕೊರೊನಡೋ ಟ್ರೇಲ್ ಫ್ರಾಂ ದಿ ಇಂಟರ್್ನ್ಯಾಶನಲ್ ಬಾರ್ಡರ್ ಟು ಸಿಬೋಲ", ನ್ಯೂ ಮೆಕ್ಸಿಕೋ ಹಿಸ್ಟಾರಿಕಲ್ ರಿವ್ಯೂ 84(3):399-435.
 • ಸೇಮೌರ್, ಡೆನಿ ಜೆ. (2010ಎ) "ಕಾನ್ಟೆಕ್ಷುಅಲ್ ಇನ್ಕಾಗ್ರುಯಿಟಿಸ್ ಸ್ಟಾಟಿಸ್ಟಿಕಲ್ ಔಟ್್ಲೈಯರ್ಸ್ ಆಂಡ್ ಅನೋಮಲಿಸ್: ಟಾರ್ಗೆಟಿಂಗ್ ಇನ್್ಕಾನ್ಸ್್ಪಿಕ್ಯುಅಸ್ ಅಕ್ಯುಪೇಶನಲ್ ಇವೆಂಟ್ಸ್", ಅಮೆರಿಕನ್ ಅಂಟಿಕ್ವಿಟಿ 75(1):158–176.
 • ಸೇಮೌರ್, ಡೆನಿ ಜೆ. (2010ಬಿ) "ಸೈಕಲ್ಸ್ ಆಫ್ ರಿನ್ಯುವಲ್, ಟ್ರಾನ್ಸ್್ಪೋರ್ಟೇಬಲ್ ಅಸೆಟ್ಸ್: ಆಸ್ಪೆಕ್ಟ್ಸ್ ಆಫ್ ಅನ್ಸೆಸ್ಟರಲ್ ಅಪಾಚೆ ಹೌಸಿಂಗ್", ಪ್ಲೇನ್ಸ್ ಅಂಥ್ರಾಪೌಲಜಿಸ್ಟ್ (ಸ್ಪ್ರಿಂಗ್ ಆಱ್ ಸಮ್ಮರ್ ಇಶ್ಯು)
 • ಸ್ವೀನೀ, ಎಡ್ವಿನ್ ಆರ್. (1998). ಮಂಗಾಸ್ ಕೊಲೋರಡಾಸ್: ಚೀಫ್ ಆಫ್ ದಿ ಚಿರಿಕಹುಆ ಅಪಾಚೆಸ್ . ಒಕ್ಲಹಾಮಾ ಯುನಿವರ್ಸಿಟಿ ಮುದ್ರಣಾಲಯ ISBN 0-8065-2201-1
 • ಟೆರೆಲ್, ಜಾನ್ ಅಪ್ಟಾನ್. (1972). ಅಪಾಚೆ ಕ್ರೋನಿಕಲ್ . ವರ್ಲ್ಡ್ ಪಬ್ಲಿಶಿಂಗ್. ISBN 0-8065-2201-1
 • ಟಿಲ್ಲರ್, ವೆರೋನಿಕಾ ಇ. (1983). "ಜಿಕಾರಿಲ್ಲಾ ಅಪಾಚೆ", ಎ. ಒರ್ಟಿಜ್ (ಆವೃತ್ತಿ.)ಯಲ್ಲಿ, ಹ್ಯಾಂಡ್ ಬುಕ್ ಆಫ್ ನಾರ್ಥ್ ಅಮೆರಿಕನ್ ಇಂಡಿಯನ್ಸ್: ಸೌಥ್್ವೆಸ್ಟ್ (ಸಂಪುಟ. 10, ಪುಟಗಳು. 440–461). ವಾಷ್ಟಿಂಗ್ಟನ್, ಡಿ.ಸಿ.: ಸ್ಮಿಥ್್ಸೋನಿಯನ್ ಇನ್ಸ್್ಟಿಟ್ಯೂಶನ್.
 • ವಿಥರ್್ಸ್ಪೂನ್, ಗ್ಯಾರಿ. (1983). "ನವಾಜೋ ಸೋಶಿಯಲ್ ಆರ್ಗನೈಜೇಶನ್", ಎ. ಒರ್ಟಿಜ್ (ಆವೃತ್ತಿ)ಯಲ್ಲಿ., ಹ್ಯಾಂಡ್್ಬುಕ್ ಆಫ್ ನಾರ್ಥ್ ಅಮೆರಿಕನ್ ಇಂಡಿಯನ್ಸ್: ಸೌಥ್್ವೆಸ್ಟ್. (ಸಂಪುಟ. 10, ಪುಟಗಳು. 524–535). ವಾಷ್ಟಿಂಗ್ಟನ್, ಡಿ.ಸಿ.: ಸ್ಮಿಥ್್ಸೋನಿಯನ್ ಇನ್ಸ್್ಟಿಟ್ಯೂಶನ್.
 • ವೋರ್ಸೆಸ್ಟರ್, ಡೊನಾಲ್ಡ್ ಇ. (1992). ದಿ ಅಪಾಚೆ ಈಗಲ್ಸ್ ಆಫ್ ದಿ ಸೌಥ್್ವೆಸ್ಟ್, ಒಕ್ಲಹಾಮಾ ಯುನಿವರ್ಸಿಟಿ ಮುದ್ರಣಾಲಯ ISBN 0-8065-2201-1

ಬಾಹ್ಯ ಕೊಂಡಿಗಳು[ಬದಲಾಯಿಸಿ]

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

ಓಕ್ಲಹಾಮಾ ಇತಿಹಾಸ ಮತ್ತು ಸಂಸ್ಕೃತಿಯ ವಿಶ್ವಕೋಶ- ಅಪಾಚೆ, ಫೋರ್ಟ್ ಸಿಲ್

"https://kn.wikipedia.org/w/index.php?title=ಅಪಾಚೆ&oldid=1207074" ಇಂದ ಪಡೆಯಲ್ಪಟ್ಟಿದೆ