ಅನ್ನಾ ಕುರ್ನಿಕೋವಾ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಅನ್ನಾ ಕುರ್ನಿಕೊವಾ-Bagram Airfield 2009
ಅನ್ನಾ ಕುರ್ನಿಕೋವಾ
Kournikova-SYD-2.jpg Kournikova playing doubles at Medibank International Sydney in 2002.
ದೇಶ  Russia
ವಾಸಸ್ಥಳ Miami Beach, Florida, United States
ಎತ್ತರ 1.72 m (5 ft 7 12 in)
ವೃತ್ತಿನಿರತ ಆಟಗಾರನಾಗಿದ್ದು October 1995
ಆಟಗಳು Right; Two-handed backhand
ಪ್ರಶಸ್ತಿಯ ಮೊತ್ತ US$3,584,662
ಸಿಂಗಲ್ಸ್
ವೃತ್ತಿಜೀವನ  ದಾಖಲೆ 209–129
ವೃತ್ತಿಜೀವನ ಪ್ರಶಸ್ತಿಗಳು 0 WTA, 2 ITF[೧]
ಉನ್ನತ  ಶ್ರೇಣಿ No. 8 (20 November 2000)
ಗ್ರ್ಯಾಂಡ್ ಸ್ಲ್ಯಾಮ್ ಸಿಂಗಲ್ಸ್ ಫಲಿತಾಂಶಗಳು
ಆಸ್ಟ್ರೇಲಿಯನ್  ಒಪನ್ QF (2001)
ಫ್ರೇಂಚ್ ಒಪನ್ 4R (1998, 1999)
ವಿಂಬಲ್ಡನ್ SF (1997)
ಯುಎಸ್ ಒಪನ್ 4R (1996, 2002)
ಇತರೆ ಪಂದ್ಯಾವಳಿಗಳು
ಡಬ್ಲೂಟಿಎ ಪಂದ್ಯಾವಳಿಗಳು SF (2000)
ಒಲಂಪಿಕ್ ಗೇಮ್ಸ್ 1R (1996)
ಡಬಲ್ಸ್
ವೃತ್ತಿಜೀವನ  ದಾಖಲೆ 200–71
ವೃತ್ತಿಜೀವನ ಪ್ರಶಸ್ತಿಗಳು 16 WTA[೧]
ಉನ್ನತ  ಶ್ರೇಣಿ No. 1 (22 November 1999)
ಗ್ರ್ಯಾಂಡ್ ಸ್ಲ್ಯಾಮ್ ಡಬಲ್ಸ್ ಫಲಿತಾಂಶಗಳು
ಆಸ್ಟ್ರೇಲಿಯನ್ ಒಪನ್ W (1999, 2002)
ಫ್ರೇಂಚ್ ಒಪನ್ F (1999)
ವಿಂಬಲ್ಡನ್ SF (2000, 2002)
ಯುಎಸ್ ಒಪನ್ QF (1996, 2002)
ಇತರೆ ಡಬಲ್ಸ್ ಪಂದ್ಯಾವಳಿಗಳು
ಡಬ್ಲೂಟಿಎ ವಿಶ್ವ ಟೂರ್ ಪಂದ್ಯಾವಳಿಗಳು W (1999, 2000)
ಕೊನೆಯ ಬದಲಾವಣೆ: 29 October 2008.

ಅನ್ನಾ ಸೆರ್ಗೆಯೆವ್ನೆವಾ ಕುರ್ನಿಕೋವಾ ರು (ರಷ್ಯನ್: About this sound Анна Сергеевна Ку́рникова; ಜನನ 7 ಜೂನ್‌ 1981) ಓರ್ವ ರಷ್ಯನ್‌/ರಷ್ಯಾದ ವೃತ್ತಿಪರ ಟೆನಿಸ್‌ ಆಟಗಾರ್ತಿ ಹಾಗೂ ರೂಪದರ್ಶಿ. ಆಕೆಯ ಗಣ್ಯತೆಯ ಸ್ಥಾನಮಾನವು ಅವರನ್ನು ವಿಶ್ವದಾದ್ಯಂತದ ಟೆನಿಸ್‌ ಆಟಗಾರರಲ್ಲಿ ಅತ್ಯಂತ ಪ್ರಸಿದ್ಧಿ ಪಡೆದವರಲ್ಲಿ ಒಬ್ಬರನ್ನಾಗಿಸಿದೆ. ಆಕೆಯ ಖ್ಯಾತಿಯು ಉತ್ತುಂಗದಲ್ಲಿದ್ದಾಗ, ಕುರ್ನಿಕೋವಾರ ಚಿತ್ರಗಳನ್ನು ಹುಡುಕುತ್ತಿದ್ದ ಅಭಿಮಾನಿಗಳ ಹಿಂಡು ಆಕೆಯ ಹೆಸರನ್ನು ಅಂತರ್ಜಾಲದ ಹುಡುಕು ತಾಣವಾದ Googleನಲ್ಲಿ ಪ್ರಧಾನ ಹುಡುಕು ಪದಗಳಲ್ಲಿ ಒಂದನ್ನಾಗಿ ಮಾಡಿತ್ತು.[೨][೩][೪] 2000ನೇ ಇಸವಿಯಲ್ಲಿ ವಿಶ್ವದ No. 8 ಸ್ಥಾನ ತಲುಪಿದ್ದ ಸಿಂಗಲ್ಸ್‌ ಪಂದ್ಯಗಳಲ್ಲಿ ಕೂಡಾ ಯಶಸ್ವಿಯಾಗಿದ್ದರೂ, ಕುರ್ನಿಕೋವಾ'ರ ವಿಶೇಷತೆಯು ಡಬಲ್ಸ್‌‌/ಜೋಡಿ/ಯುಗಳ ಪಂದ್ಯಗಳಾಗಿದ್ದವು. ಅದರಲ್ಲಿ ಅವರು ಕೆಲ ಕಾಲ ವಿಶ್ವದ No.1 ಆಟಗಾರ್ತಿಯಾಗಿದ್ದರು. ಅವರು ಮಾರ್ಟಿನಾ ಹಿಂಗಿಸ್‌ರನ್ನು ಜೊತೆಗಾತಿಯಾಗಿಟ್ಟುಕೊಂಡು 1999 ಹಾಗೂ 2002ರಲ್ಲಿ ಆಸ್ಟ್ರೇಲಿಯಾದಲ್ಲಿ ಗ್ರಾಂಡ್‌ ಸ್ಲಾಮ್‌ ಪ್ರಶಸ್ತಿಗಳನ್ನು ಗೆದ್ದಿದ್ದರು. ಕುರ್ನಿಕೋವಾರ ವೃತ್ತಿಪರ ಟೆನಿಸ್‌ನ ವೃತ್ತಿಜೀವನವು ಕಳೆದ ಅನೇಕ ವರ್ಷಗಳಿಂದ ಮೊಟಕುಗೊಂಡಿದೆಯಲ್ಲದೇ, ಗಂಭೀರ ಬೆನ್ನು ಹಾಗೂ ಬೆನ್ನುಹುರಿಗೆ ಸಂಬಂಧಿಸಿದ ತೊಂದರೆಗಳಿಂದಾಗಿ ಬಹುಶಃ ಕೊನೆಗೊಂಡಿದೆ. ಅವರು ಪ್ರಸ್ತುತ ಫ್ಲಾರಿಡಾದ ಮಿಯಾಮಿ ಕಡಲತೀರದಲ್ಲಿದ್ದು,[೧] ಪ್ರಾಸಂಗಿಕವಾದ ಪ್ರದರ್ಶನಪಂದ್ಯಗಳಲ್ಲಿ ಹಾಗೂ ವಿಶ್ವ ಟೀಮ್‌ ಟೆನಿಸ್‌St. ಲೂಯಿಸ್‌ ಏಸಸ್‌ನ ಪರವಾಗಿ ಡಬಲ್ಸ್‌‌/ಜೋಡಿ/ಯುಗಳ ಪಂದ್ಯಗಳಲ್ಲಿ ಆಡುತ್ತಿದ್ದಾರೆ.

ಆರಂಭಿಕ ಜೀವನ[ಬದಲಾಯಿಸಿ]

ಅನ್ನಾ 7 ಜೂನ್‌ 1981ರಂದು ಸೋವಿಯೆತ್‌ ಒಕ್ಕೂಟಮಾಸ್ಕೋದಲ್ಲಿ ಜನಿಸಿದರು. ಆಕೆಯ ತಂದೆ, ಸರ್ಗೇಯ್‌ ಕುರ್ನಿಕೋವ್‌ ಆ ಸಮಯದಲ್ಲಿ 20 ವರ್ಷದವರಾಗಿದ್ದರು.[೫] ಸರ್ಗೇಯ್‌, ಓರ್ವ ಮಾಜಿ ಗ್ರೆಕೋ-ರೋಮನ್‌ ಕುಸ್ತಿಪಟು ಚಾಂಪಿಯನ್‌ ಆಗಿದ್ದು, Ph.D ಪದವಿ ಪಡೆದಿದ್ದು ಮಾಸ್ಕೋದಲ್ಲಿ ದೈಹಿಕ ಸಂಸ್ಕೃತಿ ಹಾಗೂ ಕ್ರೀಡಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದರು. 2001ರ ಹಾಗೆ ಅವರು ಆಗಲೂ ಅಲ್ಲಿಯೇ ಅರೆ-ಕಾಲಿಕ, ಸಮರಕಲೆ ತರಬೇತುದಾರರಾಗಿದ್ದರು.[೫] ಓರ್ವ ದೃಢಕಾಯದ ಗೌರವರ್ಣೀಯ ಸುಂದರಿ ಹಾಗೂ 400-ಮೀಟರ್‌ ಸ್ಪರ್ಧೆಗಳ ಓಟಗಾರ್ತಿಯಾಗಿದ್ದ ಆಕೆಯ ತಾಯಿ ಅಲ್ಲಾ, ಅನ್ನಾ ಹುಟ್ಟಿದಾಗ 18 ವರ್ಷದವರಾಗಿದ್ದರು.[೫] "ನಾವು ಯೌವನದಲ್ಲಿದ್ದೆವು ಹಾಗೂ ನಮಗೆ ಸ್ವಚ್ಛ, ಭೌತಿಕ ಜೀವನವನ್ನು ಇಷ್ಟಪಡುತ್ತಿದ್ದೆವು, ಹಾಗಾಗಿ ಮೊದಲಿನಿಂದಲೂ ಅನ್ನಾಳು ಕ್ರೀಡೆಗಳಿಗೆ ಸೂಕ್ತವಾದ ವಾತಾವರಣದಲ್ಲಿಯೇ ಇದ್ದಳು" ಎಂದು ಸರ್ಗೇಯ್‌ ಹೇಳಿದರು.[೫] ಕುಟುಂಬ ನಾಮವನ್ನು ರಷ್ಯನ್ ಭಾಷೆಯಲ್ಲಿ "o" ಬಳಸದೇ ಉಚ್ಚರಿಸಲಾಗುತ್ತದೆ, ಹಾಗಾಗಿ ನೇರ ಭಾಷಾಂತರವು "ಕುರ್ನಿಕೋವಾ",ಎಂಬುದಾಗಿರುವುದಲ್ಲದೇ, ಅನೇಕ ಬಾರಿ ಅದನ್ನು ಹಾಗೆಯೇ ಬರೆಯಲಾಗುತ್ತದೆ. ಆದರೆ ಅದನ್ನು "Kournikova" ಎಂದೇ ಉಚ್ಚರಿಸಲಾಗುತ್ತದೆ, ಹಾಗಾಗಿ ಕುಟುಂಬವು ಅದನ್ನೇ ತಮ್ಮ ಆಂಗ್ಲ ಕಾಗುಣಿತವನ್ನಾಗಿ ಆಯ್ಕೆ ಮಾಡಿಕೊಂಡರು.[೫] ಅನ್ನಾ ತನ್ನ ಮೊದಲ ಟೆನಿಸ್‌ ರ್ರ್ಯಾಕೆಟ್‌ಅನ್ನು 1986ರಲ್ಲಿ ತನ್ನ 5ನೇ ವರ್ಷದ ವಯಸ್ಸಿನಲ್ಲಿ ಹೊಸ ವರ್ಷದ ಉಡುಗೊರೆಯಾಗಿ ಪಡೆದಿದ್ದಳು.[೫] ಅನ್ನಾ : "ನಾನು ಐದನೇ ವರ್ಷದಿಂದಲೇ ವಾರಕ್ಕೆ ಎರಡು ಬಾರಿ ಆಟವಾಡುತ್ತಿದ್ದೆ. ಅದೊಂದು ಮಕ್ಕಳಾಟದ ಕಾರ್ಯಕ್ರಮವಾಗಿತ್ತು. ಹಾಗೂ ಅದೆಲ್ಲಾ ಕೇವಲ ಮನೋರಂಜನೆಗಾಗಿ ಮಾತ್ರವಾಗಿತ್ತು; ನನ್ನ ಪೋಷಕರಿಗೆ ನಾನು ಭವಿಷ್ಯದಲ್ಲಿ ವೃತ್ತಿಪರವಾಗಿ ಆಡಬೇಕೆಂಬ ಯಾವುದೇ ಉದ್ದೇಶವಿರಲಿಲ್ಲ, ನಾನು ತುಂಬಾ ಉತ್ಸಾಹದವಳಾಗಿದ್ದುದರಿಂದ ಅವರಿಗೆ ನಾನು ಏನನ್ನಾದರೂ ಮಾಡುತ್ತಿರಬೇಕೆಂಬುದು ಅವರ ಮನೋಭಿಲಾಷೆಯಾಗಿತ್ತು. ನಾನು ಏಳನೆಯ ತರಗತಿಯಲ್ಲಿದ್ದಾಗ/ವರ್ಷದವಳಾಗಿದ್ದಾಗ ಉತ್ತಮವಾಗಿ ಆಡಲು ಪ್ರಾರಂಭಿಸಿದುದರಿಂದ ನಾನು ವೃತ್ತಿಪರ ತರಬೇತಿ ಕೇಂದ್ರಕ್ಕೆ ಹೋಗಲಾರಂಭಿಸಿದೆ. ಸಾಧಾರಣವಾಗಿ ನಾನು ಶಾಲೆಗೆ ಹೋಗುತ್ತಿದ್ದೆ ಹಾಗೂ ನಂತರ ನನ್ನ ಪೋಷಕರು ನನ್ನನ್ನು ಕ್ಲಬ್‌ಗೆ ಕರೆದೊಯ್ಯುತ್ತಿದ್ದರು, ಅಲ್ಲಿ ಕೇವಲ ನಾನು ಇತರ ಮಕ್ಕಳೊಡನೆ ನಲಿಯುತ್ತಾ ದಿನದ ಉಳಿದ ಭಾಗವನ್ನು ಕಳೆಯುತ್ತಿದ್ದೆ " ಎಂದು ಹೇಳುತ್ತಾರೆ.[೫] 1986ರಲ್ಲಿ, ಅನ್ನಾ ಲಾರಿಸ್ಸಾ ಪ್ರೆಯೋಬ್ರಾಝೆನ್‌ಸ್ಕಾಯ ಅವರಿಂದ ತರಬೇತಿ ಪಡೆಯುತ್ತಾ ಪ್ರತಿಷ್ಠಿತ ಸ್ಪಾರ್ಟಕ್‌ ಟೆನಿಸ್‌ ಕ್ಲಬ್‌ನ ಸದಸ್ಯೆಯಾದಳು.[೬] 1989ರಲ್ಲಿ, ತನ್ನ ಎಂಟನೇ ವರ್ಷದಲ್ಲಿ, ಅನ್ನಾ ಕಿರಿಯರ ಪಂದ್ಯಾವಳಿಗಳಲ್ಲಿ ಕಾಣಿಸಿಕೊಳ್ಳಲು ಆರಂಭಿಸಿದುದಲ್ಲದೇ, ಅದರ ಮುಂದಿನ ವರ್ಷ, ವಿಶ್ವದಾದ್ಯಂತದ ಟೆನಿಸ್‌ ಆಸಕ್ತರ/ಪ್ರತಿಭಾಶೋಧಕರ ಗಮನ ಸೆಳೆಯುತ್ತಿದ್ದಳು. ಅನ್ನಾ ತನ್ನ ಹತ್ತನೇ ವರ್ಷದಲ್ಲಿ ಒಂದು ನಿರ್ವಹಣೆಯ ಒಪ್ಪಂದಕ್ಕೆ ಸಹಿ ಹಾಕಿ ಫ್ಲಾರಿಡಾದ ಬ್ರಾಡೆಂಟನ್‌ಗೆ, ನಿಕ್‌ ಬಾಲ್ಲೆಟ್ಟೇರಿ'ರವರ ಹೆಸರಾಂತ ಟೆನಿಸ್‌ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆಯಲು ತೆರಳಿದಳು.[೬]

ಟೆನಿಸ್‌ ವೃತ್ತಿಜೀವನ[ಬದಲಾಯಿಸಿ]

1989–1997: ಮುಂಚಿನ ವರ್ಷಗಳು ಹಾಗೂ ಪ್ರಮುಖ ಪ್ರಗತಿ[ಬದಲಾಯಿಸಿ]

ಯುನೈಟೆಡ್‌ ಸ್ಟೇಟ್ಸ್‌ಗೆ ಆಕೆ ಆಗಮಿಸಿದ ನಂತರ, ಅನ್ನಾ ಟೆನಿಸ್‌ ಕಾರ್ಯಕ್ಷೇತ್ರದಲ್ಲಿ ಪ್ರಚಂಡ ಸಂಚಲನವನ್ನೆಬ್ಬಿಸಿದಳು, ಅದರಿಂದಾಗಿಯೇ ಆಕೆ ಈಗಿನ ತನ್ನ ಅಂತರರಾಷ್ಟ್ರೀಯವಾಗಿ ಮಾನ್ಯತೆ ಪಡೆದ ಟೆನಿಸ್‌ ತಾರೆಯ ಸ್ಥಾನಮಾನ ಪಡೆದಳು.[೬] 14ನೇ ವರ್ಷದ ವಯಸ್ಸಿನಲ್ಲಿ, ಆಕೆ ಐರೋಪ್ಯ ಚಾಂಪಿಯನ್‌ಶಿಪ್‌ಗಳನ್ನು ಹಾಗೂ ಇಟಾಲಿಯನ್‌ ಓಪನ್‌ ಕಿರಿಯರ ಪಂದ್ಯಾವಳಿಗಳನ್ನು ಗೆಲ್ಲುವ ಸಾಧನೆ ತೋರಿದಳು. ಅನ್ನಾ ಪ್ರತಿಷ್ಠಿತ ಕಿರಿಯರ ಆರೆಂಜ್‌ ಬೌಲ್‌ ಪಂದ್ಯಾವಳಿಯಲ್ಲಿದ್ದ ಸ್ಪರ್ಧೆಯಲ್ಲಿ ಗೆದ್ದು, 18 ಹಾಗೂ ಒಳಗಿನ ವಿಭಾಗದವರಲ್ಲಿ ಆ ಪಂದ್ಯಾವಳಿಯಲ್ಲಿ ಗೆದ್ದ ಆಟಗಾರ್ತಿಯರಲ್ಲಿ ಅತಿ ಕಿರಿಯರಾಗಿದ್ದಾರೆ. ಆ ವರ್ಷದ ಕೊನೆಗೆ, ಅನ್ನಾ ITF ಕಿರಿಯರ ವಿಶ್ವ ಚಾಂಪಿಯನ್‌ U-18 ಹಾಗೂ ಕಿರಿಯರ ಐರೋಪ್ಯ ಚಾಂಪಿಯನ್‌ U-18 ಪದಕಗಳನ್ನು ಗೆದ್ದರು.[೬] 1994ರಲ್ಲಿ, ಅನ್ನಾ ಕುರ್ನಿಕೋವಾ ಮಾಸ್ಕೋದ ಅರ್ಹತಾ ಪಂದ್ಯಗಳ ಮೂಲಕ ITF ಪಂದ್ಯಾವಳಿಗಳಿಗೆ ವೈಲ್ಡ್‌ ಕಾರ್ಡ್‌ ಪ್ರವೇಶ ಪಡೆದರೂ, ಮೂರನೇ ಕ್ರಮಾಂಕದ ಆಟಗಾರ್ತಿ ಸಬೈನ್‌ ಆಪಲ್‌ಮ್ಯಾನ್ಸ್‌ರೆದುರು ಸೋಲು ಕಂಡರು.[೭] ವೃತ್ತಿಪರ ಟೆನಿಸ್‌ಗೆ 14ನೇ ವರ್ಷದ ವಯಸ್ಸಿನಲ್ಲಿ ರಷ್ಯಾದ ಪರವಾಗಿ ಫೆಡ್‌ ಕಪ್‌ನಲ್ಲಿ ಭಾಗವಹಿಸುವ ಮೂಲಕ ಪದಾರ್ಪಣೆ ಮಾಡಿ, ಭಾಗವಹಿಸಿದ ಹಾಗೂ ಗೆದ್ದ ಆಟಗಾರ್ತಿಯರಲ್ಲೇ ಅತ್ಯಂತ ಕಿರಿಯಳೆಂಬ ಅಭಿದಾನಕ್ಕೆ ಆಕೆ ಪಾತ್ರಳಾದಳು.[೬] 1995ರಲ್ಲಿ, ವೃತ್ತಿಪರಳಾಗಿ ಭಾಗವಹಿಸಿದ ಆಕೆ, ಮಿಷಿಗನ್‌ನ ಮಿಡ್‌ಲೆಂಡ್‌ನಲ್ಲಿ ಹಾಗೂ ಇಲ್ಲಿನಾಯ್ಸ್‌ನ ರಾಕ್‌ಫರ್ಡ್‌ನಲ್ಲಿ ಎರಡು ITF ಪ್ರಶಸ್ತಿಗಳನ್ನು ಗೆದ್ದರು. ಅದೇ ವರ್ಷ ಕುರ್ನಿಕೋವಾ ತನ್ನ ಪ್ರಥಮ WTA ಪ್ರವಾಸೀ ಡಬಲ್ಸ್‌‌/ಜೋಡಿ/ಯುಗಳ ಕ್ರೆಮ್ಲಿನ್‌ ಕಪ್‌ನ ಫೈನಲ್‌ ಪಂದ್ಯವನ್ನು ತಲುಪಿದರು. 1995ರ ವಿಂಬಲ್ಡನ್‌ ಬಾಲಕಿಯರ' ಪಂದ್ಯಾವಳಿಯ ಚಾಂಪಿಯನ್‌ ಅಲೆಕ್ಸಾಂಡ್ರಾ ಓಲ್ಸ್‌ಝಾರ ಜೊತೆಗಾತಿಯಾಗಿ ಸಿಂಗಲ್ಸ್‌ ಪಂದ್ಯಗಳು ಹಾಗೂ ಡಬಲ್ಸ್‌‌/ಜೋಡಿ/ಯುಗಳ ಪಂದ್ಯಗಳೆರಡರಲ್ಲಿಯೂ ಭಾಗವಹಿಸಿದರು, ಆಕೆ ಮೆರೆಡಿತ್‌ ಮೆಕ್‌ಗ್ರಾತ್‌ ಹಾಗೂ ಲಾರಿಸಾ ನೀಲೆಂಡ್‌ರವರುಗಳ ಮುಂದೆ 6–0, 6–1 ಅಂಕಗಳೊಂದಿಗೆ ಸೋಲು ಕಂಡರು. ತನ್ನ 15ನೇ ವರ್ಷದ ವಯಸ್ಸಿನಲ್ಲಿ, 1996ರ U.S. ಓಪನ್‌ ಪಂದ್ಯಾವಳಿಯ ನಾಲ್ಕನೇ ಸುತ್ತಿನವರೆಗೂ ತಲುಪುವ ಮೂಲಕ ಆಕೆ ತನ್ನ ಗ್ರಾಂಡ್‌ ಸ್ಲಾಮ್‌ ಪದಾರ್ಪಣೆಯನ್ನು ಮಾಡಿದ್ದರು, ಆದರೆ ಅಂತಿಮವಾಗಿ ಚಾಂಪಿಯನ್‌ ಆದ ಆಗಿನ-ಉನ್ನತ ಶ್ರೇಯಾಂಕದ ಆಟಗಾರ್ತಿ ಸ್ಟೆಫಿ ಗ್ರಾಫ್‌ರೆದುರು ಸೋಲು ಕಂಡರು. ಈ ಪಂದ್ಯಾವಳಿಯ ನಂತರ, ಆಕೆಯ ಶ್ರೇಯಾಂಕವು No. 144ರಿಂದ No. 69ಕ್ಕೆ ಜಿಗಿದು ಅಗ್ರ 100ರ ಪಟ್ಟಿಯಲ್ಲಿ ಆಕೆಯ ಹೆಸರು ರಾರಾಜಿಸಿತು.[೭] ಜಾರ್ಜಿಯಾದ ಅಟ್ಲಾಂಟಾದಲ್ಲಿ ನಡೆದ 1996ರ ಒಲಿಂಪಿಕ್‌ ಪಂದ್ಯಾವಳಿಗಳಲ್ಲಿ ಕುರ್ನಿಕೋವಾ ರಷ್ಯಾ ನಿಯೋಗದ ಸದಸ್ಯರಾಗಿದ್ದರು. 1996ರಲ್ಲಿ, ಆಕೆಯನ್ನು ವರ್ಷದ WTA ಆರಂಭಿಕ ಆಟಗಾರ್ತಿಯಾಗಿ ಹೆಸರಿಸಲಾಯಿತಲ್ಲದೇ,[೬] ಕ್ರೀಡಾಋತುವಿನ ಕೊನೆಗೆ ಆಕೆ No. 57ರ ಶ್ರೇಯಾಂಕ ತಲುಪಿದ್ದರು.[೧] 1997ರ ಆಸ್ಟ್ರೇಲಿಯನ್‌ ಓಪನ್‌ ಪಂದ್ಯಾವಳಿಯನ್ನು ವಿಶ್ವ ಶ್ರೇಯಾಂಕ No. 67ರ ಆಟಗಾರ್ತಿಯಾಗಿ ಕುರ್ನಿಕೋವಾ ಪ್ರವೇಶಿಸಿದ್ದರು.[೮] ಆದಾಗ್ಯೂ, ವಿಶ್ವದ No. 12 ಶ್ರೇಯಾಂಕಿತೆ ಅಮಂಡಾ ಕೋಯೆಟ್ಜರ್‌ರೆದುರು 6–2, 6–2 ಅಂಕಗಳೊಂದಿಗೆ ಪ್ರಥಮ ಸುತ್ತಿನಲ್ಲಿಯೇ ಸೋಲು ಕಂಡರು. ಮಹಿಳೆಯರ ಡಬಲ್ಸ್‌‌/ಜೋಡಿ/ಯುಗಳ ಪಂದ್ಯದಲ್ಲಿ ತಮ್ಮ ರಷ್ಯನ್ ಒಡನಾಡಿ ಎಲೆನಾ ಲಿಖೋವ್ಟ್‌ತ್ಸೇವಾರ ಜೊತೆಗೂಡಿ ಆಡಿದ ಆಕೆ , ಪ್ರಥಮ ಸುತ್ತಿನಲ್ಲಿಯೇ, ಎಂಟನೇ ಕ್ರಮಾಂಕದ ಆಟಗಾರ್ತಿಯರಾದ ಚಂಡಾ ರೂಬಿನ್‌ ಹಾಗೂ ಬ್ರೆಂಡಾ ಷುಲ್ಟ್‌ಜ್‌ -ಮೆಕ್‌ಕಾರ್ಥಿಯವರುಗಳ ಎದುರು 6–2, 6–3 ಅಂಕಗಳೊಂದಿಗೆ ಸೋಲು ಕಂಡರು.[೮] ಪೆಟ್ರೀಷಿಯಾ ಹೈ-ಬೌಲಾಯ್ಸ್‌ರೆದುರು ಪ್ರಥಮ ಸುತ್ತಿನಲ್ಲಿ 1–6, 6–1, 6–4 ಅಂಕಗಳನ್ನು ಗಳಿಸಿ ಸೋಲಿಸುವ ಮೂಲಕ ಪೆಸಿಫಿಕ್‌ ಲೈಫ್‌ ಓಪನ್‌ ಪಂದ್ಯಾವಳಿಗಳಲ್ಲಿ ಎರಡನೇ ಸುತ್ತನ್ನು ತಲುಪಿದ ಕುರ್ನಿಕೋವಾ ವಿಶ್ವ No. 3 ಆಂಕೆ ಹೂಬರ್‌ರೆದುರು ಎರಡನೇ ಸುತ್ತಿನಲ್ಲಿ 3–6, 6–2, 6–2 ಅಂಕಗಳಲ್ಲಿ ಸೋತರು. ಡಬಲ್ಸ್‌‌/ಜೋಡಿ/ಯುಗಳ ಪಂದ್ಯದಲ್ಲಿ, ಕುರ್ನಿಕೋವಾ ಹಾಗೂ ಲಿಖೋವ್ಟ್‌ತ್ಸೇವಾ ಎರಡನೇ ಕ್ರಮಾಂಕದ ಲಾರಿಸಾ ನೀಲೆಂಡ್‌ ಹಾಗೂ ಹೆಲೆನಾ ಸುಕೋವಾರನ್ನು ಎರಡನೇ ಸುತ್ತಿನಲ್ಲಿ 7–5, 4–6, 6–3 ಅಂಕಗಳಿಂದ ಮಣಿಸಿ, ನಂತರ ಮೇರಿ ಜೋ ಫರ್ನಾಂಡಿಜ್‌ ಹಾಗೂ ಚಂಡಾ ರೂಬಿನ್‌ರವರುಗಳೆದುರು ಕ್ವಾರ್ಟರ್‌ಫೈನಲ್ಸ್‌‌ ಪಂದ್ಯಗಳಲ್ಲಿ 2–6, 6–4, 7–5/[೮] ಅಂಕಗಳೊಂದಿಗೆ ಸೋಲು ಕಂಡರು. ಮಿಯಾಮಿಯ ಓಪನ್‌ ಪಂದ್ಯಾವಳಿಗಳಲ್ಲಿ ಕುರ್ನಿಕೋವಾ No. 12 ಶ್ರೇಯಾಂಕಿತ ಅಮಂಡಾ ಕೋಯೆಟ್ಜರ್‌ರನ್ನು ಎರಡನೇ ಸುತ್ತಿನಲ್ಲಿ 6–1, 3–6, 6–3 ಅಂಕಗಳ ಮೂಲಕ ಸೋಲುಣಿಸಿದ ನಂತರ, No. 29 ಶ್ರೇಯಾಂಕಿತೆ ಕಥರೀನಾ ಸ್ಟುಡೆನಿಕೋವಾರನ್ನು 1–6, 6–4, 6–0 ಅಂಕಗಳೊಂದಿಗೆ ಮೂರನೇ ಸುತ್ತಿನಲ್ಲಿ ಪರಾಭವಗೊಳಿಸಿದ ನಂತರ, No. 3 ಶ್ರೇಯಾಂಕಿತ ಜಾನಾ ನವೋತ್ನಾರೆದುರು 6–3, 6–4 ಅಂಕಗಳೊಂದಿಗೆ ನಾಲ್ಕನೇ ಸುತ್ತಿನಲ್ಲಿ ಸೋಲು ಕಂಡರು. ಆಕೆ ಮತ್ತು ಲಿಖೋವ್ಟ್‌ತ್ಸೇವಾರನ್ನು 6–4, 6–3 ಅಂಕಗಳೊಂದಿಗೆ ಡಾಮಿನಿಕ್‌ ಮೊನಾಮಿ ಹಾಗೂ ಬಾರ್ಬರಾ ರಿಟ್ನರ್‌ರವರುಗಳು ಮಿಯಾಮಿ ಡಬಲ್ಸ್‌‌/ಜೋಡಿ/ಯುಗಳ ಪಂದ್ಯಾವಳಿಗಳ ಪ್ರಥಮ ಸುತ್ತಿನಲ್ಲಿ ಸೋಲಿಸಿದರು.[೮] ಷಿ-ಟಿಂಗ್‌ ವಾಂಗ್‌ರನ್ನು ಇಟಾಲಿಯನ್‌ ಓಪನ್‌ ಪಂದ್ಯಾವಳಿಗಳ ಪ್ರಥಮ ಸುತ್ತಿನಲ್ಲಿ 6–3, 6–4 ಅಂಕಗಳೊಂದಿಗೆ ಸೋಲಿಸಿದ ನಂತರ, ಕುರ್ನಿಕೋವಾ ಎರಡನೇ ಸುತ್ತಿನಲ್ಲಿ 6–2, 4–6, 6–1 ಅಂಕಗಳೊಂದಿಗೆ ಅಮಂಡಾ ಕೋಯೆಟ್ಜರ್‌ರೆದುರು ಸೋಲು ಕಂಡರು. ಪ್ರಥಮ ಕ್ರಮಾಂಕದ ನೀಲೆಂಡ್‌ ಹಾಗೂ ಸುಖೋವಾರನ್ನು 6(4)–7, 6–2, 7–5 ಅಂಕಗಳೊಂದಿಗೆ ಎರಡನೇ ಸುತ್ತಿನಲ್ಲಿ ಮಣಿಸಿ, ಬಾರ್ಬರಾ ಷೆಟ್ಟ್‌ ಹಾಗೂ ಪ್ಯಾಟ್ಟಿ ಷ್ನೈಡರ್‌ರವರನ್ನು 7–6(2), 6–4 ಅಂಕಗಳೊಂದಿಗೆ ಮೂರನೇ ಸುತ್ತಿನಲ್ಲಿ ಸೋಲಿಸಿದ ನಂತರ, ಅವರು ಸೆಮಿಫೈನಲ್ಸ್‌ ಪಂದ್ಯಗಳನ್ನು ಲಿಖೋವ್ಟ್‌ತ್ಸೇವಾರ ಜೊತೆಗೆ ತಲುಪಿದರೂ, ಆರನೇ ಕ್ರಮಾಂಕದ ಮೇರಿ ಜೋ ಫರ್ನಾಂಡಿಜ್‌ ಹಾಗೂ ಪೆಟ್ರೀಷಿಯಾ ತರಾಬಿನಿರವರುಗಳೆದುರು 7–6(5), 6–3 ಅಂಕಗಳೊಂದಿಗೆ ಸೋಲು ಕಂಡರು.[೮] ಮಾಜಿ ವಿಶ್ವ No. 1 ಶ್ರೇಯಾಂಕಿತೆ ಹಾಗೂ ಪ್ರಸ್ತುತ ವಿಶ್ವ No. 5 ಶ್ರೇಯಾಂಕಿತೆ ಅರಾಂತ್ಕ್ಸಾಸ್ಯಾಂಚೆಜ್‌ ವಿಕಾರಿಯೋರನ್ನು 3–6, 6–0, 6–3 ಅಂಕಗಳೊಂದಿಗೆ ಮೂರನೇ ಸುತ್ತಿನಲ್ಲಿ ಸೋಲಿಸಿದ ನಂತರ ಕುರ್ನಿಕೋವಾರನ್ನು ಜರ್ಮನ್‌ ಓಪನ್‌ ಪಂದ್ಯಾವಳಿಯ ಕ್ವಾರ್ಟರ್‌ಫೈನಲ್ಸ್‌ ಪಂದ್ಯಗಳಲ್ಲಿ ಮೇರಿ ಜೋ ಫರ್ನಾಂಡಿಜ್‌ರು 6–1, 6–4 ಅಂಕಗಳೊಂದಿಗೆ ಜಯಿಸಿದರು.[೮] ಲಿಖೋವ್ಟ್‌ತ್ಸೇವಾರ ಜೊತೆಗಾತಿಯಾಗಿ, ಆರನೇ ಕ್ರಮಾಂಕದ ಅಲೆಕ್ಸಾಂಡ್ರಾ ಫ್ಯೂಸೈ ಹಾಗೂ ನತಾಲೀ ತೌಜಿಯಾಟ್‌ರವರುಗಳನ್ನು 6–4,7–6(2) ಅಂಕಗಳಿಂದ ಎರಡನೇ ಸುತ್ತಿನಲ್ಲಿ ಜಯಿಸಿದ ನಂತರ ಡಬಲ್ಸ್‌‌/ಜೋಡಿ/ಯುಗಳ ಕ್ವಾರ್ಟರ್‌ಫೈನಲ್ಸ್‌ ಪಂದ್ಯಗಳನ್ನು ಕೂಡಾ ತಲುಪಿದ ಅವರು, ಪ್ರಥಮ ಕ್ರಮಾಂಕದ ಗಿಗಿ/ಜಿಜಿ ಫರ್ನಾಂಡಿಜ್‌ ಹಾಗೂ ನತಾಶಾ ಜ್ವೆವೇರಾರವರುಗಳೆದುರು 6–2, 7–5 ಅಂಕಗಳಿಂದ ಸೋಲು ಕಂಡರು. 1997ರ ಫ್ರೆಂಚ್‌ ಓಪನ್‌ ಪಂದ್ಯಾವಳಿಯಲ್ಲಿ ಕುರ್ನಿಕೋವಾ ರಾಡ್ಕಾ ಜ್ರುಬಾಕೋವಾರನ್ನು ಪ್ರಥಮ ಸುತ್ತಿನಲ್ಲಿ 6–3, 6–2 ಅಂಕಗಳಿಂದ ಹಾಗೂ ಸಾಂಡ್ರಾ ಸೆಕ್ಚಿನಿರನ್ನು ಎರಡನೇ ಸುತ್ತಿನಲ್ಲಿ 6–2, 6–2 ಅಂಕಗಳಿಂದ ಸೋಲಿಸಿದರು, ಆದರೆ ನಂತರ ವಿಶ್ವದ No.1 ಶ್ರೇಯಾಂಕಿತೆ ಮಾರ್ಟಿನಾ ಹಿಂಗಿಸ್‌ರೆದುರು ಮೂರನೇ ಸುತ್ತಿನಲ್ಲಿ 6–1, 6–3 ಅಂಕಗಳಿಂದ ಸೋತರು. ಡಬಲ್ಸ್‌‌/ಜೋಡಿ/ಯುಗಳ ಪಂದ್ಯದಲ್ಲಿ; ಲಿಖೋವ್ಟ್‌ತ್ಸೇವಾರೊಂದಿಗೆ ಮೂರನೇ ಸುತ್ತನ್ನು ಕೂಡಾ ತಲುಪಿದ ಅವರು, ಸ್ಥಳೀಯ ತಂಡವಾದ ಹಾಗೂ ಎಂಟನೇ ಕ್ರಮಾಂಕದ ಫ್ಯೂಸೈ ಹಾಗೂ ತೌಜಿಯಾಟ್‌ರೆದುರು ಸೋಲು ಕಂಡರು. 1997ರ ವಿಂಬಲ್ಡನ್‌ ಚಾಂಪಿಯನ್‌ಶಿಪ್‌ಗಳಲ್ಲಿ ಅನ್ನಾ ಕುರ್ನಿಕೋವಾ ಓಪನ್‌ ಪಂದ್ಯಾವಳಿಗಳ ಯುಗದಲ್ಲಿ ಸೆಮಿಫೈನಲ್ಸ್‌ ಪಂದ್ಯಗಳನ್ನು ತಲುಪಿದ ಕೇವಲ ಎರಡನೇ ಮಹಿಳೆಯಾದರಷ್ಟೇ ಅಲ್ಲ, ಅದು ಆಕೆಯ ವಿಂಬಲ್ಡನ್‌ ಪದಾರ್ಪಣೆಯಲ್ಲಿನ ಪ್ರಥಮ WTA ಪ್ರವಾಸೀ ಸೆಮಿಫೈನಲ್ಸ್‌ ಪಂದ್ಯ ಕೂಡಾ ಆಗಿತ್ತು, 1972ರಲ್ಲಿ ಹಾಗೆ ತಲುಪಿದ ಪ್ರಥಮರು ಕ್ರಿಸ್‌ ಎವರ್ಟ್‌.[೭] ಅವರು ಪ್ರಥಮ ಸುತ್ತಿನಲ್ಲಿ 6–1, 6–1, ಅಂಕಗಳಿಂದ ಚಂಡಾ ರೂಬಿನ್‌ರನ್ನು, ಎರಡನೇ ಸುತ್ತಿನಲ್ಲಿ 4–6, 7–6(7), 6–3 ಅಂಕಗಳಿಂದ ಬಾರ್ಬರಾ ರಿಟ್ನರ್‌ರನ್ನು, ಮೂರನೇ ಸುತ್ತಿನಲ್ಲಿ 3–6, 6–4, 6–4 ಅಂಕಗಳಿಂದ ಏಳನೆಯ ಕ್ರಮಾಂಕದ ಆಂಕೆ ಹೂಬರ್‌ರನ್ನು, ನಾಲ್ಕನೇ ಸುತ್ತಿನಲ್ಲಿ 2–6, 6–2, 6–3 ಅಂಕಗಳಿಂದ ಹೆಲೆನಾ ಸುಕೋವಾರನ್ನು, No. 4 ಶ್ರೇಯಾಂಕಿತೆ ಹಾಗೂ ಫ್ರೆಂಚ್‌ ಓಪನ್‌ ಪಂದ್ಯಾವಳಿಯ ಚಾಂಪಿಯನ್‌ ಇವಾ ಮಜೋಲಿಯವರನ್ನು 7–6(1), 6–4 ಅಂಕಗಳಿಂದ ಕ್ವಾರ್ಟರ್‌ಫೈನಲ್ಸ್‌ ಪಂದ್ಯಗಳಲ್ಲಿ ಸೋಲಿಸಿದ ನಂತರ ಅಂತಿಮವಾಗಿ 6–3, 6–2 ಅಂಕಗಳೊಂದಿಗೆ ಚಾಂಪಿಯನ್‌ ಮಾರ್ಟಿನಾ ಹಿಂಗಿಸ್‌ರೆದುರು ಸೋಲು ಕಂಡರು. ಐ ಸುಗಿಯಾಮಾರೊಡನೆ ಡಬಲ್ಸ್‌‌/ಜೋಡಿ/ಯುಗಳ ಸೆಮಿಫೈನಲ್ಸ್‌ ಪಂದ್ಯಗಳನ್ನು ತಲುಪುವಲ್ಲಿ ಯಶಸ್ವಿಯಾದರೂ ಕುರ್ನಿಕೋವಾಲಾಸ್‌ ಏಂಜಲೀಸ್‌ ಓಪನ್‌ ಪಂದ್ಯಾವಳಿಗಳ ಪ್ರಥಮ ಸುತ್ತಿನಲ್ಲಿ 6–0, 6–1 ಅಂಕಗಳೊಂದಿಗೆ ಆಂಕೆ ಹೂಬರ್‌ರೆದುರು ಸೋಲು ಕಂಡರು. 1997ರ US ಓಪನ್‌ ಪಂದ್ಯಾವಳಿಗಳಲ್ಲಿ ಆಕೆ ಎರಡನೇ ಸುತ್ತಿನಲ್ಲಿ ಹನ್ನೊಂದನೇ ಕ್ರಮಾಂಕದ ಐರಿನಾ ಸ್ಪಿರ್ಲಿಯಾರೆದೆರು 6–1, 3–6, 6–3 ಅಂಕಗಳಿಂದ ಸೋತರು. ಲಿಖೋವ್ಟ್‌ತ್ಸೇವಾರ ಜೊತೆಗಾತಿಯಾಗಿ, ಮಹಿಳೆಯರ ಡಬಲ್ಸ್‌‌/ಜೋಡಿ/ಯುಗಳ ಪಂದ್ಯಗಳ ಮೂರನೇ ಸುತ್ತನ್ನು ತಲುಪಿದ ಆಕೆ, ಎರಡನೇ ಕ್ರಮಾಂಕದ ಹಿಂಗಿಸ್‌ ಹಾಗೂ ಸ್ಯಾಂಚೆಜ್‌ ವಿಕಾರಿಯೋರೆದುರು 6–4, 6–4 ಅಂಕಗಳಿಂದ ಸೋಲು ಕಂಡರು.[೮] ಕುರ್ನಿಕೋವಾ ತಮ್ಮ ಕೊನೆಯ WTA ಪ್ರವಾಸೀ ಪಂದ್ಯವನ್ನು 1997ರಲ್ಲಿ ಫಿಲ್ಡರ್‌ಸ್ಟಾಟ್‌ನಲ್ಲಿ ನಡೆದ ಪೋರ್ಷೆ ಟೆನಿಸ್‌ ಗ್ರಾಂಡ್‌ ಪ್ರಿಕ್ಸ್‌ ಪಂದ್ಯಾವಳಿಯಲ್ಲಿ ಆಡಿದರಲ್ಲದೇ, ಸಿಂಗಲ್ಸ್‌ ಪಂದ್ಯಗಳ ಎರಡನೇ ಸುತ್ತಿನಲ್ಲಿ 3–6 6–3 6–4 ಅಂಕಗಳೊಂದಿಗೆ ಅಮಂಡಾ ಕೋಯೆಟ್ಜರ್‌ರೆದುರು ಸೋಲು ಕಂಡುದಲ್ಲದೇ, 6–2, 6–4 ಅಂಕಗಳಿಂದ ಡಬಲ್ಸ್‌‌/ಜೋಡಿ/ಯುಗಳ ಪಂದ್ಯಗಳ ಪ್ರಥಮ ಸುತ್ತಿನಲ್ಲಿ ಲಿಂಡ್ಸೆ ಡೆವನ್‌ಪೋರ್ಟ್‌ ಹಾಗೂ ಜಾನಾ ನವೋತ್ನಾರವರುಗಳೆದುರು ಲಿಖೋವ್ಟ್‌ತ್ಸೇವಾರ ಜೊತೆಗಾತಿಯಾಗಿ ಆಡಿ ಸೋಲು ಕಂಡರು. ಆಕೆ ಮೇ 19ರಂದು ಅಗ್ರ 50ರೊಳಗಿನ ಶ್ರೇಯಾಂಕಿತರಾದರಲ್ಲದೇ, ಆ ಋತುವಿನ ಕೊನೆಯ ಹೊತ್ತಿಗೆ ಸಿಂಗಲ್ಸ್‌ ಪಂದ್ಯಗಳಲ್ಲಿ No. 32ನೇ ಶ್ರೇಯಾಂಕ ಹಾಗೂ ಡಬಲ್ಸ್‌‌/ಜೋಡಿ/ಯುಗಳ ಪಂದ್ಯಗಳಲ್ಲಿ No. 41ನೇ ಶ್ರೇಯಾಂಕ ಪಡೆದರು.[೯]

1998–2000: ಯಶಸ್ಸು ಹಾಗೂ ತಾರಾ ಪಟ್ಟ[ಬದಲಾಯಿಸಿ]

1998ರಲ್ಲಿ ಕುರ್ನಿಕೋವಾ No. 16ನೇ ಶ್ರೇಯಾಂಕ ಪಡೆದಾಗ ಆಕೆ WTA'ಯ ಅಗ್ರ 20 ಶ್ರೇಯಾಂಕಿತರ ಪಟ್ಟಿಯಲ್ಲಿ ಪ್ರಥಮ ಬಾರಿಗೆ ಸ್ಥಾನ ಪಡೆದರು. ಮಾರ್ಟಿನಾ ಹಿಂಗಿಸ್‌, ಲಿಂಡ್ಸೆ ಡೆವನ್‌ಪೋರ್ಟ್‌, ಸ್ಟೆಫಿ ಗ್ರಾಫ್‌ ಹಾಗೂ ಮೋನಿಕಾ ಸೆಲೆಸ್‌ರವರುಗಳ ಮೇಲೆ ಅತ್ಯಾಕರ್ಷಕ ಗೆಲುವುಗಳನ್ನು ಕೂಡಾ ಪಡೆದರು. ಕುರ್ನಿಕೋವಾ ತಮ್ಮ 1998ರ ಕ್ರೀಡಾಋತುವನ್ನು ಹ್ಯಾನ್ನೋವರ್‌ನಲ್ಲಿ ಆರಂಭಿಸಿ, 6–3, 6–3 ಅಂಕಗಳೊಂದಿಗೆ ಸೆಮಿಫೈನಲ್ಸ್‌ ಪಂದ್ಯಗಳಲ್ಲಿ ಪ್ರಥಮ ಕ್ರಮಾಂಕದ ಜಾನಾ ನವೋತ್ನಾರೆದುರು ಸೋಲು ಕಂಡರು. ಆಕೆ ಡಬಲ್ಸ್‌‌/ಜೋಡಿ/ಯುಗಳ ಪಂದ್ಯಗಳಲ್ಲಿ ಲಾರಿಸಾ ನೀಲೆಂಡ್‌ರ ಜೊತೆಗಾತಿಯಾದುದಲ್ಲದೇ, ಎಲೆನಾ ಲಿಖೋವ್ಟ್‌ತ್ಸೇವಾ ಹಾಗೂ ಕೆರೋಲಿನ್‌ ವಿಸ್‌ರವರುಗಳೆದುರು ಕ್ವಾರ್ಟರ್‌ಫೈನಲ್ಸ್‌ ಪಂದ್ಯಗಳಲ್ಲಿ 3–6, 6–2, 7–5 ಅಂಕಗಳಿಂದ ಸೋಲು ಕಂಡರು.[೮] ಅವರು ನಂತರ ಸಿಂಗಲ್ಸ್‌ ಹಾಗೂ ಡಬಲ್ಸ್‌‌/ಜೋಡಿ/ಯುಗಳ ಪಂದ್ಯಗಳೆರಡರಲ್ಲೂ ಎರಡನೇ ಸುತ್ತನ್ನು ತಲುಪಿದರು ಹಾಗೂ ಸಿಡ್ನಿಮೆಡಿಬ್ಯಾಂಕ್‌ ಇಂಟರ್‌ನ್ಯಾಷನಲ್‌ನಲ್ಲಿ, ಸಿಂಗಲ್ಸ್‌ ಪಂದ್ಯಗಳ ಎರಡನೇ ಸುತ್ತಿನಲ್ಲಿ 6–2, 6(4)–7, 6–3 ಅಂಕಗಳೊಂದಿಗೆ ಲಿಂಡ್ಸೆ ಡೆವನ್‌ಪೋರ್ಟ್‌ರೆದುರು ಸೋಲು ಕಂಡರು. 1998ರ ಆಸ್ಟ್ರೇಲಿಯನ್‌ ಓಪನ್‌ ಪಂದ್ಯಾವಳಿಗಳಲ್ಲಿ ಕುರ್ನಿಕೋವಾ ಮೂರನೇ ಸುತ್ತಿನಲ್ಲಿ ವಿಶ್ವದ No. 1 ಆಟಗಾರ್ತಿ ಮಾರ್ಟಿನಾ ಹಿಂಗಿಸ್‌ರೆದುರು 6–4, 4–6, 6–4 ಅಂಕಗಳಿಂದ ಸೋಲು ಕಂಡರು. ಅವರು ಮಹಿಳೆಯರ ಡಬಲ್ಸ್‌‌/ಜೋಡಿ/ಯುಗಳ ಪಂದ್ಯಗಳಲ್ಲಿ ಲಾರಿಸಾ ನೀಲೆಂಡ್‌ರ ಜೊತೆಗೂ ಆಡಿದ್ದು, ಅಂತಿಮ ಚಾಂಪಿಯನ್‌ಗಳಾದ ಹಿಂಗಿಸ್‌ ಹಾಗೂ ಮಿರ್ಜಾನಾ ಲ್ಯೂಕಿಕ್‌ರವರುಗಳೆದುರು 7–5, 6–2 ಅಂಕಗಳಿಂದ ಎರಡನೇ ಸುತ್ತಿನಲ್ಲಿ ಸೋಲು ಕಂಡರು.[೮] ಅವರು ಪ್ಯಾರಿಸ್‌‌ ಓಪನ್‌ ಪಂದ್ಯಾವಳಿಗಳ ಸಿಂಗಲ್ಸ್‌ ಪಂದ್ಯಗಳ ಎರಡನೇ ಸುತ್ತಿನಲ್ಲಿ ಆಂಕೆ ಹೂಬರ್‌ರೆದುರು ಪರಾಭವ ಹೊಂದಿದರೂ, ಕುರ್ನಿಕೋವಾ ಲಾರಿಸಾ ನೀಲೆಂಡ್‌ರ ಜೊತೆಗೂಡಿ ತಮ್ಮ ಎರಡನೇ ಡಬಲ್ಸ್‌‌/ಜೋಡಿ/ಯುಗಳ WTA ಪ್ರವಾಸೀ ಫೈನಲ್‌ ಪಂದ್ಯವನ್ನು ತಲುಪಿದರು. ಅವರು ಸಬೈನ್‌ ಆಪಲ್‌ಮ್ಯಾನ್ಸ್‌ ಹಾಗೂ ಮಿರಿಯಮ್‌‌ ಓರ್‌ಮನ್ಸ್‌ರವರುಗಳೆದುರು 1–6, 6–3, 7–6(3) ಅಂಕಗಳಿಂದ ಸೋಲು ಕಂಡರು. ಕುರ್ನಿಕೋವಾ ಹಾಗೂ ನೀಲೆಂಡ್‌ ಲಿನ್ಜ್‌‌ ಓಪನ್‌ ಪಂದ್ಯಾವಳಿಗಳಲ್ಲಿ ತಮ್ಮ ಸತತ ಎರಡನೇ ಫೈನಲ್‌ ಪಂದ್ಯವನ್ನು ತಲುಪಲು ಸಾಧ್ಯವಾದರೂ, ಅಲೆಕ್ಸಾಂಡ್ರಾ ಫ್ಯೂಸೈ ಹಾಗೂ ನತಾಲೀ ತೌಜಿಯಾಟ್‌ ರವರುಗಳೆದುರು 6–3, 3–6, 6–4 ಅಂಕಗಳಿಂದ ಸೋಲು ಕಂಡರು. ಸಿಂಗಲ್ಸ್‌ ಪಂದ್ಯಗಳಲ್ಲಿ, ಕುರ್ನಿಕೋವಾ ಮೂರನೇ ಸುತ್ತನ್ನು ಕೂಡಾ ತಲುಪಿದ್ದರು. ಪೆಸಿಫಿಕ್‌ ಲೈಫ್‌ ಓಪನ್‌ ಪಂದ್ಯಾವಳಿಯಲ್ಲಿ, ಅವರು ಮೂರನೇ ಸುತ್ತನ್ನು ತಲುಪಿದರೂ 1994ರ ವಿಂಬಲ್ಡನ್‌ ಚಾಂಪಿಯನ್‌ ಕೊಂಚಿತಾ ಮಾರ್ಟಿನೆಜ್‌‌ರೆದುರು 6–3, 6–4 ಅಂಕಗಳಿಂದ ಸೋಲು ಕಂಡರು, ಜೊತೆಗೆ ನೀಲೆಂಡ್‌ರೊಂದಿಗೆ ಡಬಲ್ಸ್‌‌/ಜೋಡಿ/ಯುಗಳ ಕ್ವಾರ್ಟರ್‌ಫೈನಲ್ಸ್‌ ಪಂದ್ಯಗಳನ್ನು ಕೂಡಾ ತಲುಪಿದ್ದರು. ನೀಲೆಂಡ್‌ರೊಂದಿಗೆ ಡಬಲ್ಸ್‌‌/ಜೋಡಿ/ಯುಗಳ ಕ್ವಾರ್ಟರ್‌ಫೈನಲ್ಸ್‌ ಪಂದ್ಯಗಳನ್ನು ಮಾತ್ರವೇ ತಲುಪಿದರೂ, ಕುರ್ನಿಕೋವಾ ಮಿಯಾಮಿ ಓಪನ್‌ ಪಂದ್ಯಾವಳಿಗಳ ಸಿಂಗಲ್ಸ್‌ ಪಂದ್ಯಗಳಲ್ಲಿ, ತಮ್ಮ ಪ್ರಥಮ WTA ಪ್ರವಾಸೀ ಸಿಂಗಲ್ಸ್‌ ಪಂದ್ಯಗಳಲ್ಲಿನ ಫೈನಲ್‌ ಪಂದ್ಯವನ್ನು ತಲುಪುವ ಮೂಲಕ ಹೆಚ್ಚಿನ ಉತ್ತಮ ಯಶಸ್ಸು ಪಡೆದರು. ಮಿರ್ಜಾನಾ ಲ್ಯೂಕಿಕ್‌ರನ್ನು 6–4, 6–2 ಅಂಕಗಳಿಂದ ಪ್ರಥಮ ಸುತ್ತಿನಲ್ಲಿ ಪರಾಭವಗೊಳಿಸಿ, ಮಾಜಿ ವಿಶ್ವ No. 1 ಶ್ರೇಯಾಂಕಿತೆ ಮೋನಿಕಾ ಸೆಲೆಸ್‌ರನ್ನು ಎರಡನೇ ಸುತ್ತಿನಲ್ಲಿ 7–5, 6–4 ಅಂಕಗಳಿಂದ, ಕೊಂಚಿತಾ ಮಾರ್ಟಿನೆಜ್‌ರನ್ನು ಮೂರನೇ ಸುತ್ತಿನಲ್ಲಿ ‌ 6–3, 6–0 ಅಂಕಗಳಿಂದ, ಲಿಂಡ್ಸೆ ಡೆವನ್‌ಪೋರ್ಟ್‌ರನ್ನು 6–4, 2–6, 6–2 ಅಂಕಗಳಿಂದ ಕ್ವಾರ್ಟರ್‌ಫೈನಲ್ಸ್‌ ಪಂದ್ಯಗಳಲ್ಲಿ, ಹಾಗೂ ಮಾಜಿ No. 1 ಶ್ರೇಯಾಂಕಿತೆ ಅರಾಂತ್ಕ್ಸಾ ಸ್ಯಾಂಚೆಜ್‌ ವಿಕಾರಿಯೋರನ್ನು 3–6, 6–1, 6–3 ಅಂಕಗಳಿಂದ ಸೆಮಿಫೈನಲ್ಸ್‌ ಪಂದ್ಯಗಳಲ್ಲಿ, ಪರಾಭವಗೊಳಿಸಿದ ನಂತರ ಫೈನಲ್‌ ಪಂದ್ಯದಲ್ಲಿ 2–6, 6–4, 6–1 ಅಂಕಗಳೊಂದಿಗೆ ವೀನಸ್‌ ವಿಲಿಯಮ್ಸ್‌‌ರೆದುರು ಪರಾಭವಗೊಂಡರು.[೭] ಕುರ್ನಿಕೋವಾ ನಂತರ ಎರಡು ಸತತ ಕ್ವಾರ್ಟರ್‌ಫೈನಲ್ಸ್‌ ಪಂದ್ಯಗಳನ್ನು, ಅಮೆಲಿಯಾ ದ್ವೀಪ ಹಾಗೂ ಇಟಾಲಿಯನ್‌ ಓಪನ್‌ ಪಂದ್ಯಾವಳಿಗಳನ್ನು ಪ್ರವೇಶಿಸಿದರೂ, ಅನುಕ್ರಮವಾಗಿ, 7–5, 6–3 ಅಂಕಗಳಿಂದ ಲಿಂಡ್ಸೆ ಡೆವನ್‌ಪೋರ್ಟ್‌ರೆದುರು, ಹಾಗೂ 6–2, 6–4 ಅಂಕಗಳಿಂದ ಮಾರ್ಟಿನಾ ಹಿಂಗಿಸ್‌ರೆದುರು ಸೋಲು ಕಂಡರು. ಜರ್ಮನ್‌ ಓಪನ್‌ ಪಂದ್ಯಾವಳಿಗಳಲ್ಲಿ, ಅವರು ಸಿಂಗಲ್ಸ್‌ ಹಾಗೂ ಲಾರಿಸಾ ನೀಲೆಂಡ್‌ರೊಂದಿಗಿನ ಡಬಲ್ಸ್‌‌/ಜೋಡಿ/ಯುಗಳ ಪಂದ್ಯಗಳೆರಡರಲ್ಲೂ ಸೆಮಿಫೈನಲ್ಸ್‌ ಪಂದ್ಯಗಳನ್ನು ಪ್ರವೇಶಿಸಿದರೂ ಅನುಕ್ರಮವಾಗಿ ಕೊಂಚಿತಾ ಮಾರ್ಟಿನೆಜ್‌ರೆದುರು 6–0, 6–1 ಅಂಕಗಳಿಂದ ಹಾಗೂ 6–1, 6–4 ಅಂಕಗಳಿಂದ ಅಲೆಕ್ಸಾಂಡ್ರಾ ಫ್ಯೂಸೈ ಹಾಗೂ ನತಾಲೀ ತೌಜಿಯಾಟ್‌ರವರುಗಳೆದುರು ಸೋಲು ಕಂಡರು. 1998ರ ಫ್ರೆಂಚ್‌ ಓಪನ್‌ ಪಂದ್ಯಾವಳಿಗಳಲ್ಲಿ ಕುರ್ನಿಕೋವಾ ನಾಲ್ಕನೇ ಸುತ್ತಿನಲ್ಲಿ 6(2)–7, 6–3, 6–3 ಅಂಕಗಳಿಂದ ಜಾನಾ ನವೋತ್ನಾರೆದುರು ಪರಾಭವಗೊಳ್ಳುವ ಮೂಲಕ ಆ ಪಂದ್ಯಾವಳಿಗಳಲ್ಲೇ ತಮ್ಮ ಅತ್ಯುತ್ತಮ ಫಲಿತಾಂಶವನ್ನು ನೀಡಿದರು. ಅವರು ತಮ್ಮ ಪ್ರಥಮ ಗ್ರಾಂಡ್‌ ಸ್ಲಾಮ್‌ ಡಬಲ್ಸ್‌‌/ಜೋಡಿ/ಯುಗಳ ಸೆಮಿಫೈನಲ್ಸ್‌ ಪಂದ್ಯಗಳಲ್ಲಿ ನೀಲೆಂಡ್‌ರೊಂದಿಗೆ ಭಾಗವಹಿಸಿ, ಲಿಂಡ್ಸೆ ಡೆವನ್‌ಪೋರ್ಟ್‌ ಹಾಗೂ ನತಾಶಾ ಜ್ವೆವೇರಾರವರುಗಳೆದುರು 6–3, 6–2 ಅಂಕಗಳಿಂದ ಸೋಲು ಕಂಡರು. ಆಕೆ ಈಸ್ಟ್‌ಬೌರ್ನ್‌ ಓಪನ್‌ ಪಂದ್ಯಾವಳಿಗಳ ಕ್ವಾರ್ಟರ್‌ಫೈನಲ್ಸ್‌ ಪಂದ್ಯದಲ್ಲಿ ಆಡುತ್ತಿದ್ದಾಗ ಸ್ಟೆಫಿ ಗ್ರಾಫ್‌ ವಿರುದ್ಧ, ಕುರ್ನಿಕೋವಾ ತನ್ನ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದು, ಅಂತಿಮವಾಗಿ 1998ರ ವಿಂಬಲ್ಡನ್‌ ಚಾಂಪಿಯನ್‌ಶಿಪ್‌ಗಳಿಂದಲೇ ಆಕೆ ಹಿಂತೆಗೆಯುವಂತೆ ಮಾಡಿತು.[೭] ಆದರೂ, ಆ ಪಂದ್ಯವನ್ನು 6(4)–7, 6–3, 6–4 ಅಂಕಗಳಿಂದ ಆಕೆ ಗೆದ್ದರು, ಆದರೆ ನಂತರ ಅರಾಂತ್ಕ್ಸಾ ಸ್ಯಾಂಚೆಜ್‌ ವಿಕಾರಿಯೋ ವಿರುದ್ಧದ ಸೆಮಿಫೈನಲ್ಸ್‌ ಪಂದ್ಯಗಳಿಂದ ಹಿಂತೆಗೆದರು.[೭] ಡು ಮೌರಿಯರ್‌ ಓಪನ್‌ ಪಂದ್ಯಾವಳಿಗಳಲ್ಲಿ ಭಾಗವಹಿಸಲು ಮರಳಿ ಬಂದ ಕುರ್ನಿಕೋವಾ, ಅಲೆಕ್ಸಾಂಡ್ರಾ ಫ್ಯೂಸೈ ಹಾಗೂ ರುಕ್ಸಾಂಡ್ರಾ ಡ್ರಾಗೊಮಿರ್‌ರವರುಗಳನ್ನು ಸೋಲಿಸಿ, ನಂತರ ಕೊಂಚಿತಾ ಮಾರ್ಟಿನೆಜ್‌‌ರೆದುರು ಮೂರನೇ ಸುತ್ತಿನಲ್ಲಿ 6–0, 6–3 ಅಂಕಗಳಿಂದ ಪರಾಭವಗೊಂಡರು. ನ್ಯೂ ಹೆವೆನ್‌ನಲ್ಲಿನ ಪೈಲಟ್‌ ಪೆನ್‌ ಟೆನಿಸ್‌ ಪಂದ್ಯಾವಳಿಯಲ್ಲಿ ಅಮಂಡಾ ಕೋಯೆಟ್ಜರ್‌ರೆದುರು ಎರಡನೇ ಸುತ್ತಿನಲ್ಲಿ 1–6, 6–4, 7–5 ಅಂಕಗಳಿಂದ ಪರಾಭವಗೊಂಡರು. 1998ರ US ಓಪನ್‌ ಪಂದ್ಯಾವಳಿಗಳಲ್ಲಿ ನಾಲ್ಕನೇ ಸುತ್ತನ್ನು ತಲುಪಿದ ಕುರ್ನಿಕೋವಾ ಅರಾಂತ್ಕ್ಸಾ ಸ್ಯಾಂಚೆಜ್‌ ವಿಕಾರಿಯೋರೆದುರು ಸೋಲು ಕಂಡರು. ಆ ನಂತರ ಅವರು ಟೊಯೊಟಾ ಪ್ರಿನ್ಸೆಸ್‌ ಕಪ್‌, ಪೋರ್ಷೆ ಟೆನಿಸ್‌ ಗ್ರಾಂಡ್‌ ಪ್ರಿಕ್ಸ್‌ ಪಂದ್ಯಾವಳಿ, ಜ್ಯೂರಿಚ್‌ ಓಪನ್‌ ಪಂದ್ಯಾವಳಿಗಳು ಹಾಗೂ ಕ್ರೆಮ್ಲಿನ್‌ ಕಪ್‌ಗಳಲ್ಲಿ, ಅಲ್ಪ ಫಲಿತಾಂಶದ ಸರಣಿಯನ್ನೇ ನೀಡಿದರು, ಆದರೆ ಆ ವರ್ಷದ ಅವಧಿಯಲ್ಲಿ ಉತ್ತಮ ಫಲಿತಾಂಶಗಳ ಕಾರಣ 1998ರ WTA ಪ್ರವಾಸೀ ಚಾಂಪಿಯನ್‌ಶಿಪ್‌ಗಳಿಗೆ ಅರ್ಹತೆ ಪಡೆದುಕೊಂಡರು. ಮೋನಿಕಾ ಸೆಲೆಸ್‌ರೆದುರು ಪ್ರಥಮ ಸುತ್ತಿನಲ್ಲಿ 6–4, 6–3 ಅಂಕಗಳಿಂದ ಸೋಲು ಕಂಡರು. ಆದಾಗ್ಯೂ, ಸೆಲೆಸ್‌ರೊಂದಿಗೆಯೇ, ಅವರು ಟೋಕ್ಯೋ/ಟೋಕಿಯೋದಲ್ಲಿ, ಮೇರಿ ಜೋ ಫರ್ನಾಂಡಿಜ್‌ ಹಾಗೂ ಅರಾಂತ್ಕ್ಸಾ ಸ್ಯಾಂಚೆಜ್‌ ವಿಕಾರಿಯೋರವರುಗಳೆದುರು ಫೈನಲ್‌ ಪಂದ್ಯದಲ್ಲಿ 6–4, 6–4 ಅಂಕಗಳಿಂದ ಜಯ ಗಳಿಸಿ ತಮ್ಮ ಪ್ರಥಮ ಡಬಲ್ಸ್‌‌/ಜೋಡಿ/ಯುಗಳ ಪ್ರಶಸ್ತಿಯನ್ನು ಪಡೆದರು. ಆ ಕ್ರೀಡಾಋತುವಿನ ಕೊನೆಗೆ, ಡಬಲ್ಸ್‌‌/ಜೋಡಿ/ಯುಗಳ ಪಂದ್ಯಗಳಲ್ಲಿ ಆಕೆಗೆ No. 10ನೇ ಶ್ರೇಯಾಂಕ ನೀಡಲಾಯಿತು.[೯] ಕುರ್ನಿಕೋವಾ ತನ್ನ 1999ರ ಕ್ರೀಡಾಋತುವನ್ನು ಅಡಿಡಾಸ್‌ ಓಪನ್‌ ಪಂದ್ಯಾವಳಿಗಳಲ್ಲಿ ಆರಂಭಿಸಿ, ಎರಡನೇ ಸುತ್ತಿನಲ್ಲಿ ಅದರಲ್ಲಿ ಡಾಮಿನಿಕ್‌ ವಾನ್‌ ರೂಸ್ಟ್‌ರೆದುರು ಸೋಲು ಕಂಡರು.[೯] ಅವರು ನಂತರ ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಆಡಿ, 6–0, 6–4 ಅಂಕಗಳಿಂದ ನಾಲ್ಕನೇ ಸುತ್ತಿನಲ್ಲಿ ಮೇರಿ ಪಿಯೆರ್ಸ್‌ರೆದುರು ಸೋಲು ಕಂಡರು. ಆದಾಗ್ಯೂ, ಕುರ್ನಿಕೋವಾ ತಮ್ಮ ಪ್ರಥಮ ಡಬಲ್ಸ್‌‌/ಜೋಡಿ/ಯುಗಳ ಗ್ರಾಂಡ್‌ ಸ್ಲಾಮ್‌ ಪ್ರಶಸ್ತಿಯನ್ನು, ಮಾರ್ಟಿನಾ ಹಿಂಗಿಸ್‌ರೊಡಗೂಡಿ ಗೆದ್ದರು. ಇವರೀರ್ವರೂ ಲಿಂಡ್ಸೆ ಡೆವನ್‌ಪೋರ್ಟ್‌ ಹಾಗೂ ನತಾಶಾ ಜ್ವೆವೇರಾರವರನ್ನು ಫೈನಲ್‌ ಪಂದ್ಯದಲ್ಲಿ ಸೋಲಿಸಿದರು. ಕುರ್ನಿಕೋವಾ ನಂತರ ಟೋರೆ ಸರ್ವ ಪೆಸಿಫಿಕ್‌ ಓಪನ್‌ ಪಂದ್ಯಾವಳಿಗಳ ಕ್ವಾರ್ಟರ್‌ಫೈನಲ್ಸ್‌ ಪಂದ್ಯಗಳಲ್ಲಿ ಮೋನಿಕಾ ಸೆಲೆಸ್‌ರೆದುರು 7–5, 6–3 ಅಂಕಗಳಲ್ಲಿ ಸೋಲುಂಡರು. ಅವರನ್ನು 6–4, 6–2 ಅಂಕಗಳಿಂದ ಓಕ್ಲಾಹಾಮ ನಗರದ ಸೆಮಿಫೈನಲ್ಸ್‌ ಪಂದ್ಯಗಳಲ್ಲಿ ಅಮಂಡಾ ಕೋಯೆಟ್ಜರ್‌, ಸಿಲ್ವಿಯಾ ಫರೀನಾ ಎಲಿಯಾ ಎವರ್ಟ್‌ ಕಪ್‌ನ ಪ್ರಥಮ ಸುತ್ತಿನಲ್ಲಿ, ಹಾಗೂ ಲಿಪ್ಟನ್‌ ಚಾಂಪಿಯನ್‌ಶಿಪ್‌ಗಳಲ್ಲಿ ಬಾರ್ಬರಾ ಷೆಟ್ಟ್‌ ಸೋಲಿಸಿದರು. ಫ್ಯಾಮಿಲಿ ಸರ್ಕಲ್‌ ಕಪ್‌ಹಂತ Iರಲ್ಲಿ, ಕುರ್ನಿಕೋವಾ ತಮ್ಮ ಎರಡನೇ WTA ಪ್ರವಾಸೀ ಫೈನಲ್‌ ಪಂದ್ಯವನ್ನು ತಲುಪಿದರೂ, ಮಾರ್ಟಿನಾ ಹಿಂಗಿಸ್‌ರೆದುರು 6–4, 6–3 ಅಂಕಗಳಿಂದ ಸೋಲು ಕಂಡರು.[೯] ಅವರು ನಂತರ ಜೆನ್ನಿಫರ್‌ ಕ್ಯಾಪ್ರಿಯಾಟಿ, ಲಿಂಡ್ಸೆ ಡೆವನ್‌ಪೋರ್ಟ್‌ ಹಾಗೂ ಪ್ಯಾಟ್ಟಿ ಷ್ನೈಡರ್‌ರವರುಗಳನ್ನು ಬಾಷ್‌‌ & ಲಾಂಬ್‌ ಚಾಂಪಿಯನ್‌ಶಿಪ್‌ಗಳ ಸೆಮಿಫೈನಲ್ಸ್‌ ಪಂದ್ಯಗಳನ್ನು ತಲುಪುವ ಹಾದಿಯಲ್ಲಿ ಸೋಲಿಸಿದರೂ, ರುಕ್ಸಾಂಡ್ರಾ ಡ್ರಾಗೊಮಿರ್‌ರೆದುರು 6–3, 7–5 ಅಂಕಗಳಿಂದ ಸೋಲನ್ನೊಪ್ಪಿದರು. ಇಟಾಲಿಯನ್‌ ಓಪನ್‌ ಹಾಗೂ ಜರ್ಮನ್‌ ಓಪನ್‌ ಪಂದ್ಯಾವಳಿಗಳಲ್ಲಿನ ಸುತ್ತು ಸರದಿಯ ಫಲಿತಾಂಶಗಳ ನಂತರ, 1999ರ ಫ್ರೆಂಚ್‌ ಓಪನ್‌ ಪಂದ್ಯಾವಳಿಯ ನಾಲ್ಕನೇ ಸುತ್ತನ್ನು ತಲುಪಿದ ಕುರ್ನಿಕೋವಾ, ಅಂತಿಮ ಚಾಂಪಿಯನ್‌ ಆದ ಸ್ಟೆಫಿ ಗ್ರಾಫ್‌ರೆದುರು 6–3, 7–6 ಅಂಕಗಳಿಂದ ಸೋಲನ್ನೊಪ್ಪಿದರು.[೯] ಅವರು ನಂತರ 6–4, 4–6, 8–6 ಅಂಕಗಳಿಂದ ಈಸ್ಟ್‌ಬೌರ್ನ್‌ನ ಸೆಮಿಫೈನಲ್ಸ್‌ ಪಂದ್ಯಗಳಲ್ಲಿ ನತಾಲೀ ತೌಜಿಯಾಟ್‌ರೆದುರು ಸೋಲೊಪ್ಪಿದರು. 1999ರ ವಿಂಬಲ್ಡನ್‌ ಚಾಂಪಿಯನ್‌ಶಿಪ್‌ಗಳಲ್ಲಿ, ಕುರ್ನಿಕೋವಾ ವೀನಸ್‌ ವಿಲಿಯಮ್ಸ್‌‌ರೆದುರು ನಾಲ್ಕನೇ ಸುತ್ತಿನಲ್ಲಿ 3–6, 6–3, 6–2 ಅಂಕಗಳೊಂದಿಗೆ ಸೋಲು ಕಂಡರು. ಜೋನಾಸ್‌ ಜಾರ್ಕ್‌ಮನ್‌ರ ಜೊತೆಗಾತಿಯಾಗಿ ಮಿಶ್ರ ಡಬಲ್ಸ್‌‌/ಜೋಡಿ/ಯುಗಳ ಪಂದ್ಯಗಳಲ್ಲಿ, 1999ರ ವಿಂಬಲ್ಡನ್‌ ಫೈನಲ್‌ ಪಂದ್ಯಕ್ಕೂ ಪ್ರವೇಶಿಸಿದ ಅವರು ಲಿಯಾಂಡರ್‌ ಪೇಸ್‌ ಹಾಗೂ ಲೀಸಾ ರೇಮಂಡ್‌ರವರುಗಳೆದುರು 6–4, 3–6, 6–3 ಅಂಕಗಳಿಂದ ಸೋತರು. ಕುರ್ನಿಕೋವಾ 1999ರ WTA ಪ್ರವಾಸೀ ಚಾಂಪಿಯನ್‌ಶಿಪ್‌ಗಳಿಗೆ ಅರ್ಹತೆ ಪಡೆದುಕೊಂಡರೂ, ಮೇರಿ ಪಿಯೆರ್ಸ್‌ರೆದುರು 6(3)–7, 7–6(5), 6–0 ಅಂಕಗಳಿಂದ ಪ್ರಥಮ ಸುತ್ತಿನಲ್ಲಿಯೇ, ಸೋತು ಹೊರಬಿದ್ದು ಕ್ರೀಡಾಋತುವನ್ನು ವಿಶ್ವದ No. 12 ಶ್ರೇಯಾಂಕಿತೆಯಾಗಿ ಕೊನೆಗೊಳಿಸಿದರು.[೯] 1999ರ ಕೆಲ ಅವಧಿಗಳಲ್ಲಿ, ಆಕೆಯು ವಿಶ್ವದಲ್ಲಿಯೇ ಅಂದಿನ ಪ್ರಮುಖ ಹುಡುಕು ತಾಣವಾದ Yahoo!ನಲ್ಲಿ, ಅತ್ಯಂತ ಹೆಚ್ಚು ಹುಡುಕಲ್ಪಟ್ಟ ಕ್ರೀಡಾಪಟುವಾಗಿದ್ದರು.[೧೦] ಕುರ್ನಿಕೋವಾರು ಆ ಕ್ರೀಡಾಋತುವಿನಲ್ಲಿ ಡಬಲ್ಸ್‌‌/ಜೋಡಿ/ಯುಗಳ ಪಂದ್ಯಗಳಲ್ಲಿಯೇ ಹೆಚ್ಚು ಯಶಸ್ವಿಯಾಗಿದ್ದರು. ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಅವರ ವಿಜಯದ ನಂತರ, ಆಕೆ ಮತ್ತು ಮಾರ್ಟಿನಾ ಹಿಂಗಿಸ್‌ ಇಂಡಿಯನ್‌ ವೆಲ್ಸ್‌, ರೋಮ್‌, ಈಸ್ಟ್‌ಬೌರ್ನ್‌ ಹಾಗೂ 1999ರ WTA ಪ್ರವಾಸೀ ಚಾಂಪಿಯನ್‌ಶಿಪ್‌ಗಳ ಪಂದ್ಯಾವಳಿಗಳನ್ನು ಗೆದ್ದುದಲ್ಲದೇ, 1999ರ ಫ್ರೆಂಚ್‌ ಓಪನ್‌ ಪಂದ್ಯಾವಳಿಯ ಫೈನಲ್‌ ಪಂದ್ಯವನ್ನು ತಲುಪಿದರೂ, 3–6, 7–6(2), 6–8 ಅಂಕಗಳಿಂದ ಸೆರೆನಾ ಹಾಗೂ ವೀನಸ್‌ ವಿಲಿಯಮ್ಸ್‌‌ರವರುಗಳೆದುರು ಸೋಲೊಪ್ಪಬೇಕಾಯಿತು. ಎಲೆನಾ ಲಿಖೋವ್ಟ್‌ತ್ಸೇವಾರೊಂದಿಗಿನ ಜೊತೆಯಾಟದಲ್ಲಿ ಕೂಡಾ, ಕುರ್ನಿಕೋವಾ ಸ್ಟಾನ್‌ಫೋರ್ಡ್‌ನಲ್ಲಿ ಫೈನಲ್‌ ಪಂದ್ಯವನ್ನು ತಲುಪಿದರು. 22 ನವೆಂಬರ್‌ 1999ರಂದು ಆಕೆ ವಿಶ್ವದ No. 1 ಶ್ರೇಯಾಂಕವನ್ನು ಪಡೆದು ಡಬಲ್ಸ್‌‌/ಜೋಡಿ/ಯುಗಳ ಪಂದ್ಯಗಳಲ್ಲಿ, ಕ್ರೀಡಾಋತುವನ್ನು ಅದೇ ಶ್ರೇಯಾಂಕದೊಂದಿಗೆ ಕೊನೆಗೊಳಿಸಿದರು. ಅನ್ನಾ ಕುರ್ನಿಕೋವಾ ಹಾಗೂ ಮಾರ್ಟಿನಾ ಹಿಂಗಿಸ್‌ರವರುಗಳಿಗೆ ವರ್ಷದ ಡಬಲ್ಸ್‌‌/ಜೋಡಿ/ಯುಗಳ ಪಂದ್ಯ ತಂಡಕ್ಕೆ ನೀಡಲಾಗುವ WTA ಪ್ರಶಸ್ತಿಯನ್ನು ನೀಡಲಾಯಿತು. ಕುರ್ನಿಕೋವಾ ತನ್ನ 2000ರ ಕ್ರೀಡಾಋತುವಿನ ವಿಜಯ ದುಂದುಭಿಯನ್ನು ಜ್ಯೂಲೀ ಹಲಾರ್ಡ್‌ರೊಡನೆಯ ಜೊತೆಯಾಟದಲ್ಲಿ ಗೋಲ್ಡ್‌‌ ಕೋಸ್ಟ್‌‌ ಓಪನ್‌ ಪಂದ್ಯಾವಳಿಗಳನ್ನು ಗೆಲ್ಲುವ ಮೂಲಕ ಮೊಳಗಿಸಿದರು. ನಂತರ ಆಕೆ ಸಿಡ್ನಿಯ ಮೆಡಿಬ್ಯಾಂಕ್‌ ಇಂಟರ್‌ನ್ಯಾಷನಲ್‌ ಸಿಂಗಲ್ಸ್‌ ಪಂದ್ಯಗಳ ಸೆಮಿಫೈನಲ್ಸ್‌ಅನ್ನು ತಲುಪಿದರೂ, ಲಿಂಡ್ಸೆ ಡೆವನ್‌ಪೋರ್ಟ್‌ರೆದುರು 6–3, 6–2 ಅಂಕಗಳೊಂದಿಗೆ ಸೋಲು ಕಂಡರು. 2000ರ ಆಸ್ಟ್ರೇಲಿಯನ್‌ ಓಪನ್‌ ಪಂದ್ಯಾವಳಿಯಲ್ಲಿ, ಸಿಂಗಲ್ಸ್‌ ಪಂದ್ಯಗಳ ನಾಲ್ಕನೇ ಸುತ್ತನ್ನು ಹಾಗೂ ಡಬಲ್ಸ್‌‌/ಜೋಡಿ/ಯುಗಳ ಪಂದ್ಯಗಳಲ್ಲಿ ಸೆಮಿಫೈನಲ್ಸ್‌ಅನ್ನೂ ಪ್ರವೇಶಿಸಿದರು. ಬಾರ್ಬರಾ ಷೆಟ್ಟ್‌ರೊಂದಿಗಿನ ಜೊತೆಯಾಟದಲ್ಲಿ, ಅವರು ಲೀಸಾ ರೇಮಂಡ್‌ ಹಾಗೂ ರೆನ್ನೆ ಸ್ಟಬ್ಸ್‌‌ರವರುಗಳೆದುರು ಸೋತರು. ಆ ಕ್ರೀಡಾಋತುವಿನಲ್ಲಿ, ಕುರ್ನಿಕೋವಾ ಎಂಟು ಸೆಮಿಫೈನಲ್ಸ್‌ ಪಂದ್ಯಗಳನ್ನು (ಸಿಡ್ನಿ, ಸ್ಕಾಟ್ಸ್‌ಡೇಲ್‌, ಸ್ಟಾನ್‌ಫೋರ್ಡ್‌, ಸ್ಯಾನ್‌ ಡಿಯಾಗೋ, ಲಕ್ಸೆಂಬರ್ಗ್‌, ಲೇಪ್‌ಜಿಗ್‌‌ ಹಾಗೂ 2000ರ WTA ಪ್ರವಾಸೀ ಚಾಂಪಿಯನ್‌ಶಿಪ್‌ಗಳು), ಏಳು ಕ್ವಾರ್ಟರ್‌ಫೈನಲ್ಸ್‌ ಪಂದ್ಯಗಳನ್ನೂ (ಗೋಲ್ಡ್‌‌ ಕೋಸ್ಟ್‌‌, ಟೋಕ್ಯೋ/ಟೋಕಿಯೋ, ಅಮೆಲಿಯಾ ದ್ವೀಪ, ಹ್ಯಾಂಬರ್ಗ್‌‌, ಈಸ್ಟ್‌ಬೌರ್ನ್‌, ಜ್ಯೂರಿಚ್‌ ಹಾಗೂ ಫಿಲಡೆಲ್ಫಿಯಾ) ಹಾಗೂ ಒಂದು ಫೈನಲ್‌ ಪಂದ್ಯವನ್ನು ತಲುಪಿದರು. ದೇಶೀಯ ಆಟಗಾರ್ತಿಯಾದ ಹೊರತೂ, ಕುರ್ನಿಕೋವಾರು ಮಾರ್ಟಿನಾ ಹಿಂಗಿಸ್‌ರೆದುರು 6–3, 6–1 ಅಂಕಗಳಿಂದ ಕ್ರೆಮ್ಲಿನ್‌ ಕಪ್‌ನ ಫೈನಲ್‌ ಪಂದ್ಯದಲ್ಲಿ ಸೋಲುಕಂಡರು. 20 ನವೆಂಬರ್‌ 2000ರಂದು ಆಕೆ ಅಂತಿಮವಾಗಿ ಅಗ್ರ 10 ಶ್ರೇಯಾಂಕಿತರ ಪಟ್ಟಿಗೆ ಪ್ರಥಮ ಬಾರಿಗೆ, No. 8ನೇ ಶ್ರೇಯಾಂಕ ಪಡೆಯುವ ಮೂಲಕ ಜಿಗಿದರು.[೯] ಡಬಲ್ಸ್‌‌/ಜೋಡಿ/ಯುಗಳ ಪಂದ್ಯಗಳಲ್ಲಿ ಕ್ರೀಡಾಋತುವಿನ ಕೊನೆಯ ಹೊತ್ತಿಗೆ #4ನೇ ಶ್ರೇಯಾಂಕವನ್ನು ಕೂಡಾ ಆಕೆ ಪಡೆದರು.[೯] ಕುರ್ನಿಕೋವಾ ಮತ್ತೊಮ್ಮೆ ಡಬಲ್ಸ್‌‌/ಜೋಡಿ/ಯುಗಳ ಪಂದ್ಯಗಳಲ್ಲಿಯೇ ಹೆಚ್ಚು ಯಶಸ್ವಿಯಾದರು. 2000ರ US ಓಪನ್‌ ಪಂದ್ಯಾವಳಿಗಳ ಮಿಶ್ರ ಡಬಲ್ಸ್‌‌/ಜೋಡಿ/ಯುಗಳ ಪಂದ್ಯಗಳಲ್ಲಿ, ಮ್ಯಾಕ್ಸ್‌ ಮಿರ್ನೈಯಿರ ಜೊತೆಗಾತಿಯಾಗಿ ಆಕೆ ಫೈನಲ್‌ ಪಂದ್ಯವನ್ನು ತಲುಪಿದರೂ, ಜೇರ್ಡ್‌ ಪಾಲ್ಮರ್‌ ಹಾಗೂ ಅರಾಂತ್ಕ್ಸಾ ಸ್ಯಾಂಚೆಜ್‌ ವಿಕಾರಿಯೋರವರುಗಳೆದುರು ಅವರು 6–4, 6–3 ಅಂಕಗಳಿಂದ ಸೋಲು ಕಂಡರು. ಆರು ಡಬಲ್ಸ್‌‌/ಜೋಡಿ/ಯುಗಳ ಪ್ರಶಸ್ತಿಗಳನ್ನು — ಗೋಲ್ಡ್‌‌ ಕೋಸ್ಟ್‌‌ (ಜ್ಯೂಲೀ ಹಲಾರ್ಡ್‌ರೊಂದಿಗೆ), ಹ್ಯಾಂಬರ್ಗ್‌‌ (ನತಾಶಾ ಜ್ವೆವೇರಾರೊಂದಿಗೆ), ಫಿಲ್ಡರ್‌ಸ್ಟಾಟ್‌, ಜ್ಯೂರಿಚ್‌, ಫಿಲಡೆಲ್ಫಿಯಾ ಹಾಗೂ 2000ರ WTA ಪ್ರವಾಸೀ ಚಾಂಪಿಯನ್‌ಶಿಪ್‌ಗಳನ್ನು ಕೂಡಾ (ಮಾರ್ಟಿನಾ ಹಿಂಗಿಸ್‌ರೊಂದಿಗೆ) ಆಕೆ ಗೆದ್ದರು.

2001–2003: ಗಾಯಗಳು ಹಾಗೂ ಕೊನೆಯ ವರ್ಷಗಳು[ಬದಲಾಯಿಸಿ]

ಈ ಕ್ರೀಡಾಋತುವು ಫ್ರೆಂಚ್‌ ಓಪನ್‌ ಹಾಗೂ ವಿಂಬಲ್ಡನ್‌ ಪಂದ್ಯಾವಳಿಗಳೂ ಸೇರಿದಂತೆ ಹನ್ನೆರಡು ಪಂದ್ಯಾವಳಿಗಳಿಂದ ಹಿಂತೆಗೆಯುವಿಕೆ ಅನಿವಾರ್ಯವಾಗುವಂತೆ ಮಾಡಿದ ಎಡ ಕಾಲಿನ ಒತ್ತಡದ ಮೂಳೆ ಮುರಿತವೂ ಸೇರಿದಂತೆ ಗಾಯಗೊಳ್ಳುವಿಕೆಯ ಸಂದರ್ಭಗಳಿಂದಲೇ ಕೂಡಿತ್ತು.[೭] ಅವರು ಏಪ್ರಿಲ್‌ನಲ್ಲಿ ‌ಶಸ್ತ್ರಚಿಕಿತ್ಸೆಗೊಳಗಾದರು.[೭] ಆಕೆ ಆಸ್ಟ್ರೇಲಿಯನ್‌ ಓಪನ್‌ ಪಂದ್ಯಾವಳಿಗಳಲ್ಲಿ ತಮ್ಮ ವೃತ್ತಿಜೀವನದ ಎರಡನೇ ಗ್ರಾಂಡ್‌ ಸ್ಲಾಮ್‌ ಕ್ವಾರ್ಟರ್‌ಫೈನಲ್ಸ್‌ ಪಂದ್ಯಗಳಿಗೆ ಪ್ರವೇಶ ಪಡೆದರು. ಕುರ್ನಿಕೋವಾ ತನ್ನ ಎಡಗಾಲಿನ ಅನೇಕ ತೊಂದರೆಗಳು ಮುಂದುವರೆದ ಕಾರಣದಿಂದಾಗಿ ಅನೇಕ ಪಂದ್ಯಾವಳಿಗಳಿಂದ ಹಿಂತೆಗೆಯಬೇಕಾಗಿ ಬಂದುದರಿಂದ ಲೇಪ್‌ಜಿಗ್‌‌ನವರೆಗೆ ಮತ್ತೆ ಮರಳಲಿಲ್ಲ. ಬಾರ್ಬರಾ ಷೆಟ್ಟ್‌ರ ಜೊತೆಯಾಟದಲ್ಲಿ, ಅವರು ಸಿಡ್ನಿಯಲ್ಲಿ ಡಬಲ್ಸ್‌‌/ಜೋಡಿ/ಯುಗಳ ಪ್ರಶಸ್ತಿಯನ್ನು ಗೆದ್ದರು. ಇರೋಡಾ ಟುಲ್ಯಾಗನೋವಾರೊಂದಿಗಿನ ಜೊತೆಯಾಟದಲ್ಲಿ ಟೋಕ್ಯೋ/ಟೋಕಿಯೋದಲ್ಲಿ, ಹಾಗೂ ಸ್ಯಾನ್‌ ಡಿಯಾಗೋದಲ್ಲಿನ, ಮಾರ್ಟಿನಾ ಹಿಂಗಿಸ್‌ರೊಡನೆಯ ಫೈನಲ್‌ ಪಂದ್ಯಗಳಲ್ಲಿ ಸೋಲು ಕಂಡರು. ಹಿಂಗಿಸ್‌ ಹಾಗೂ ಕುರ್ನಿಕೋವಾರವರುಗಳು ಕ್ರೆಮ್ಲಿನ್‌ ಕಪ್‌ಅನ್ನು ಕೂಡಾ ಗೆದ್ದಿದ್ದಾರೆ. 2001ರ ಕ್ರೀಡಾಋತುವಿನ ಕೊನೆಗೆ, ಸಿಂಗಲ್ಸ್‌ ಪಂದ್ಯಗಳಲ್ಲಿ #74ನೇ ಹಾಗೂ ಡಬಲ್ಸ್‌‌/ಜೋಡಿ/ಯುಗಳ ಪಂದ್ಯಗಳಲ್ಲಿ #26ನೇ ಶ್ರೇಯಾಂಕ ಪಡೆದಿದ್ದರು.[೯]

ಅನ್ನಾ ಕುರ್ನಿಕೋವಾ 2002ರಲ್ಲಿ ಸಿಡ್ನಿಯ ಮೆಡಿಬ್ಯಾಂಕ್‌ ಇಂಟರ್‌ನ್ಯಾಷನಲ್‌ ಪಂದ್ಯಾವಳಿಯಲ್ಲಿ ಆಟವಾಡಿದರು.

ಕುರ್ನಿಕೋವಾ 2002ರಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾಗಿದ್ದರು. ಆಕ್‌ಲೆಂಡ್‌‌, ಟೋಕ್ಯೋ/ಟೋಕಿಯೋ, ಅಕಾಪುಲ್ಕೋ ಹಾಗೂ ಸ್ಯಾನ್‌ ಡಿಯಾಗೋಗಳಲ್ಲಿನ ಸೆಮಿಫೈನಲ್ಸ್‌ ಪಂದ್ಯಗಳನ್ನು ತಲುಪಿದರು ಹಾಗೂ ಚೀನಾ ಓಪನ್‌ ಪಂದ್ಯಾವಳಿಗಳ ಫೈನಲ್‌ ಪಂದ್ಯಗಳನ್ನು ತಲುಪಿದ ಆಕೆ, 6–2, 6–3 ಅಂಕಗಳಿಂದ ಅನ್ನಾ ಸ್ಮಾಷ್ನೋವಾರೆದುರು ಸೋಲು ಕಂಡರು. ಇದು ಕುರ್ನಿಕೋವಾ'ರ ಕೊನೆಯ ಸಿಂಗಲ್ಸ್‌ ಪಂದ್ಯಗಳ ಫೈನಲ್‌ ಪಂದ್ಯಗಳಾಗಿದ್ದು ಸಿಂಗಲ್ಸ್‌ ಪ್ರಶಸ್ತಿ ಗೆಲ್ಲುವ ಅಂತಿಮ ಅವಕಾಶವಾಗಿತ್ತು. ಮಾರ್ಟಿನಾ ಹಿಂಗಿಸ್‌ರೊಂದಿಗೆ, ಅನ್ನಾ ಕುರ್ನಿಕೋವಾ ಸಿಡ್ನಿಯ ಫೈನಲ್‌ ಪಂದ್ಯಗಳನ್ನು ಸೋತರೂ, ಆಸ್ಟ್ರೇಲಿಯನ್‌ ಓಪನ್‌ ಪಂದ್ಯಾವಳಿಯ ಮಹಿಳೆಯರ ಡಬಲ್ಸ್‌‌/ಜೋಡಿ/ಯುಗಳ ಪಂದ್ಯಗಳಲ್ಲಿ ತಮ್ಮ ಎರಡನೇ ಗ್ರಾಂಡ್‌ ಸ್ಲಾಮ್‌ ಪ್ರಶಸ್ತಿಗಳನ್ನು ಒಟ್ಟಿಗೆ ಗೆದ್ದರು. U.S. ಓಪನ್‌ ಪಂದ್ಯಾವಳಿಯ ಕ್ವಾರ್ಟರ್‌ಫೈನಲ್ಸ್‌ ಪಂದ್ಯಗಳಲ್ಲಿ ಕೂಡಾ ಅವರೀರ್ವರು ಸೋಲು ಕಂಡರು. ಚಂಡಾ ರೂಬಿನ್‌ರೊಡನೆ, ಅನ್ನಾ ಕುರ್ನಿಕೋವಾ ವಿಂಬಲ್ಡನ್‌ನ ಸೆಮಿಫೈನಲ್ಸ್‌ ಪಂದ್ಯಗಳನ್ನು ಆಡಿದರು, ಆದರೆ ಸೆರೆನಾ ಹಾಗೂ ವೀನಸ್‌ ವಿಲಿಯಮ್ಸ್‌‌ರೆದುರು ಸೋಲು ಕಂಡರು. ಜಾನೆಟ್‌ ಲೀಯವರೊಂದಿಗಿನ ಜೊತೆಯಾಟದಲ್ಲಿ, ಷಾಂಘಾಯ್‌‌ ಪ್ರಶಸ್ತಿಯನ್ನು ಆಕೆ ಗೆದ್ದರು. 2002ರ ಕ್ರೀಡಾಋತುವಿನ ಕೊನೆಗೆ, ಆಕೆಗೆ ಸಿಂಗಲ್ಸ್‌ ಪಂದ್ಯಗಳಲ್ಲಿ #35ನೇ ಶ್ರೇಯಾಂಕವನ್ನು ಹಾಗೂ ಡಬಲ್ಸ್‌‌/ಜೋಡಿ/ಯುಗಳ ಪಂದ್ಯಗಳಲ್ಲಿ #11ನೇ ಶ್ರೇಯಾಂಕವನ್ನು ನೀಡಲಾಯಿತು.[೯] 2003ರಲ್ಲಿ, ಅನ್ನಾ ಕುರ್ನಿಕೋವಾ ತನ್ನ ಎರಡು ವರ್ಷಗಳಲ್ಲಿನ ಪ್ರಥಮ ಗ್ರಾಂಡ್‌ ಸ್ಲಾಮ್‌ ಪಂದ್ಯದ ವಿಜಯಪತಾಕೆಯನ್ನು ಆಸ್ಟ್ರೇಲಿಯನ್‌ ಓಪನ್‌ ಪಂದ್ಯಾವಳಿಯಲ್ಲಿ ಹಾರಿಸಿದರು. ಆಕೆ ಹೆನ್ರಿಯೇಟಾ ನಗ್ಯೋವಾರನ್ನು 1ನೇ ಸುತ್ತಿನಲ್ಲಿ ಮಣಿಸಿದ ನಂತರ, ಜಸ್ಟೀನ್‌ ಹೆನಿನ್‌-ಹಾರ್ಡೆನ್‌ರೆದುರು 2ನೇ ಸುತ್ತಿನಲ್ಲಿ ಪರಾಭವಗೊಂಡರು. ಟೋಕ್ಯೋ/ಟೋಕಿಯೋ ಪಂದ್ಯಾವಳಿಗಳಿಂದ ಹಿಂತೆಗೆದ ಆಕೆ ಆಸ್ಟ್ರೇಲಿಯನ್‌ ಓಪನ್‌ ಪಂದ್ಯಾವಳಿಯಲ್ಲಿ ಬೆನ್ನು ಉಳುಕಿಸಿಕೊಂಡ ಕಾರಣದಿಂದ ಮಿಯಾಮಿಯವರೆಗೆ ಪ್ರವಾಸೀ ಪಂದ್ಯಕ್ಕೆ ಹಿಂತಿರುಗಲಿಲ್ಲ. ಎಡ ಅಭಿಕರ್ಷಕ ಸ್ನಾಯುವಿನ ಉಳುಕಿನಿಂದಾಗಿ ಚಾರ್ಲ್ಸ್‌ಟನ್‌ ಪಂದ್ಯಾವಳಿಯಿಂದ 1ನೇ ಸುತ್ತಿನಲ್ಲಿಯೇ ಕುರ್ನಿಕೋವಾ ನಿವೃತ್ತಿ ಹೊಂದಿದರು. ಸೀ ಐಲೆಂಡ್‌ ದ್ವೀಪದಲ್ಲಿನ ITF ಪಂದ್ಯಾವಳಿಯ ಸೆಮಿಫೈನಲ್ಸ್‌ ಪಂದ್ಯಗಳನ್ನು ತಲುಪಿದ ಆಕೆ, ಅಭಿಕರ್ಷಕ ಸ್ನಾಯುವಿನ ಗಾಯದಿಂದಾಗಿ ಮಾರಿಯಾ ಶರಪೋವಾ ವಿರುದ್ಧದ ಪಂದ್ಯದಿಂದ ಹಿಂತೆಗೆದಿದ್ದರು. ಆಕೆಯು ITF ಪಂದ್ಯಾವಳಿಯ ಚಾರ್ಲಾಟ್ಟೆಸ್‌ವಿಲ್ಲೆನಲ್ಲಿನ 1ನೇ ಸುತ್ತಿನಲ್ಲಿ ಸೋಲು ಕಂಡರು. ಮುಂದುವರಿದ ಬೆನ್ನಿನ ಗಾಯಗಳ ಬಾಧೆಯಿಂದಾಗಿ ಕ್ರೀಡಾಋತುವಿನ ಉಳಿದ ಭಾಗದಲ್ಲಿ ಅವರು ಸ್ಪರ್ಧಿಸಲಿಲ್ಲ. 2003ರ ಕ್ರೀಡಾಋತುವಿನ ಕೊನೆಗೆ ಹಾಗೂ ಆಕೆಯ ವೃತ್ತಿಜೀವನದ ಕೊನೆಯ ಹೊತ್ತಿಗೆ, ಸಿಂಗಲ್ಸ್‌ ಪಂದ್ಯಗಳಲ್ಲಿ #305ನೇ ಹಾಗೂ ಡಬಲ್ಸ್‌‌/ಜೋಡಿ/ಯುಗಳ ಪಂದ್ಯಗಳಲ್ಲಿ #176ನೇ ಶ್ರೇಯಾಂಕ ಪಡೆದಿದ್ದರು.[೯] ಕುರ್ನಿಕೋವಾ'ರ ಎರಡು ಗ್ರಾಂಡ್‌ ಸ್ಲಾಮ್‌ ಡಬಲ್ಸ್‌‌/ಜೋಡಿ/ಯುಗಳ ಪ್ರಶಸ್ತಿಗಳು 1999 ಹಾಗೂ 2002ರಲ್ಲಿ ಬಂದಿದ್ದು, 1999ರಿಂದ ಆರಂಭಿಸಿ ಆಗ್ಗಾಗ್ಗೆ ಜೊತೆಯಾಟವಾಡುತ್ತಿದ್ದ ಜೊತೆಗಾತಿ ಮಾರ್ಟಿನಾ ಹಿಂಗಿಸ್‌ರೊಡನೆಯ ಆಸ್ಟ್ರೇಲಿಯನ್‌ ಓಪನ್‌ ಪಂದ್ಯಾವಳಿಯ ಮಹಿಳೆಯರ ಡಬಲ್ಸ್‌‌/ಜೋಡಿ/ಯುಗಳ ಪಂದ್ಯಗಳಲ್ಲಿಯೇ ಎರಡೂ ಪ್ರಶಸ್ತಿಗಳನ್ನು ಗೆಲ್ಲಲಾಗಿತ್ತು. ಕುರ್ನಿಕೋವಾ ಎರಡು ಆಸ್ಟ್ರೇಲಿಯನ್‌ ಓಪನ್‌ ಪ್ರಶಸ್ತಿಗಳೂ ಸೇರಿದಂತೆ 16 ಪಂದ್ಯಾವಳಿ ಡಬಲ್ಸ್‌‌/ಜೋಡಿ/ಯುಗಳ ಪ್ರಶಸ್ತಿಗಳನ್ನು ಗೆದ್ದು, U.S. ಓಪನ್‌ ಪಂದ್ಯಾವಳಿ ಹಾಗೂ ವಿಂಬಲ್ಡನ್‌ ಪಂದ್ಯಾವಳಿಗಳಲ್ಲಿ ಮಿಶ್ರ ಡಬಲ್ಸ್‌‌/ಜೋಡಿ/ಯುಗಳ ಪಂದ್ಯಗಳ ಕಟ್ಟಕಡೆಯ ಸ್ಪರ್ಧಿಯಾಗಿದ್ದು ಡಬಲ್ಸ್‌‌/ಜೋಡಿ/ಯುಗಳ ಪಂದ್ಯಗಳ ಮಹಿಳೆಯರ ಟೆನಿಸ್‌ ಅಸೋಸಿಯೇಷನ್‌ ಪ್ರವಾಸೀ ಶ್ರೇಯಾಂಕಗಳಲ್ಲಿ No.1 ಶ್ರೇಯಾಂಕವನ್ನು ತಲುಪಿದ ಕ್ರೀಡಾಪಟುವಾಗಿ ವೃತ್ತಿಪರ ಪಂದ್ಯಾವಳಿಗಳಲ್ಲಿ ಯಶಸ್ವೀ ಡಬಲ್ಸ್‌‌/ಜೋಡಿ/ಯುಗಳ ಆಟಗಾರ್ತಿಯಾಗಿ ತಮ್ಮ ಸಾಮರ್ಥ್ಯ ದೃಢಪಡಿಸಿದರು. ಆಕೆಯ ವೃತ್ತಿಜೀವನದ ಡಬಲ್ಸ್‌‌/ಜೋಡಿ/ಯುಗಳ ಪಂದ್ಯದ ದಾಖಲೆಯು 200–71 ಆಗಿತ್ತು. ಆದಾಗ್ಯೂ, 1999ರ ನಂತರ ಸಿಂಗಲ್ಸ್‌ ಪಂದ್ಯಗಳ ಆಕೆಯ ವೃತ್ತಿಜೀವನ ಸ್ಥಿರಗೊಂಡಿತು. ಬಹಳ ಮಟ್ಟಿಗೆ ಆಕೆ ತನ್ನ ಶ್ರೇಯಾಂಕಗಳನ್ನು 10ರಿಂದ 15ರೊಳಗೆ ಇರಿಸಿಕೊಳ್ಳಲು (ಆಕೆಯ ವೃತ್ತಿಜೀವನದ ಉನ್ನತ ಸಿಂಗಲ್ಸ್‌ ಪಂದ್ಯಗಳ ಶ್ರೇಯಾಂಕವು No.8 ಆಗಿತ್ತು), ಯಶಸ್ವಿಯಾದರೂ ಆಕೆಯ ನಿರೀಕ್ಷೆಗೆ ಅನುಗುಣವಾಗಿ ಫೈನಲ್‌ ಪಂದ್ಯಗಳಲ್ಲಿನ ಪ್ರಧಾನ ಪ್ರಗತಿಯು ಆಗಲಿಲ್ಲ ; ಆಕೆ ಒಟ್ಟಾರೆ 130 ಸಿಂಗಲ್ಸ್‌ ಪಂದ್ಯಾವಳಿಗಳಲ್ಲಿ ಕೇವಲ ನಾಲ್ಕು ಫೈನಲ್‌ ಪಂದ್ಯಗಳನ್ನು ಮಾತ್ರವೇ ತಲುಪಿದ್ದು, ಯಾವುದೇ ಗ್ರಾಂಡ್‌ ಸ್ಲಾಮ್‌ ಪಂದ್ಯಾವಳಿಯ ಫೈನಲ್‌ ತಲುಪಿರಲಿಲ್ಲ, ಹಾಗೂ ಒಂದನ್ನೂ ಗೆದ್ದಿರಲಿಲ್ಲ. ಆಕೆಯ ಸಿಂಗಲ್ಸ್‌ ಪಂದ್ಯಗಳ ದಾಖಲೆಯು 209–129 ಆಗಿದೆ. ಆಕೆಯ ಫೈನಲ್‌ ಪಂದ್ಯವನ್ನಾಡಬಹುದಾಗಿದ್ದ ವರ್ಷಗಳ ಅವಧಿಯು ಗಾಯಗೊಳ್ಳುವಿಕೆಯ ಸಂದರ್ಭಗಳ ಸರಣಿಯಿಂದಾಗಿ, ವಿಶೇಷವಾಗಿ ಬೆನ್ನಿನ ಗಾಯಗೊಳ್ಳುವಿಕೆಗಳಿಂದಾಗಿ ನಾಶಗೊಂಡಿತಲ್ಲದೇ ಇದರಿಂದಾಗಿ ಆಕೆಯ ಶ್ರೇಯಾಂಕಗಳು ಸಾವಕಾಶವಾಗಿ ಕ್ಷಯಿಸಲು ಕಾರಣವಾದವು. ತನ್ನ ಏಳಿಗೆಯ ಕಾಲದಲ್ಲಿ ಓರ್ವ ಪ್ರಸಿದ್ಧ ವ್ಯಕ್ತಿಯಾಗಿ ಕುರ್ನಿಕೋವಾರು ಲೇಖನಗಳು ಹಾಗೂ ಚಿತ್ರಗಳ ಅಧಿಕ ಬೇಡಿಕೆಯ ಪ್ರಧಾನ ಹುಡುಕು ವ್ಯಕ್ತಿಯಾಗಿದ್ದರು.[೨][೩][೪] ಆಕೆ ಈಗಲೂ ವಿಶ್ವದಲ್ಲಿಯೇ ಹೆಚ್ಚು ಹುಡುಕಲ್ಪಡುವ ಕ್ರೀಡಾಪಟುವಾಗಿಯೇ ಮುಂದುವರೆದಿದ್ದಾರೆ.[೧೧][೧೨][೧೩][೧೪]

2004–ಪ್ರಸ್ತುತ: ಪ್ರದರ್ಶನ ಪಂದ್ಯಗಳು ಹಾಗೂ ವಿಶ್ವ ಟೀಮ್‌‌ ಟೆನಿಸ್‌[ಬದಲಾಯಿಸಿ]

ಕುರ್ನಿಕೋವಾರು WTA ಪ್ರವಾಸೀ ಪಂದ್ಯಗಳಲ್ಲಿ 2003ರಿಂದ ಆಡಿಲ್ಲ, ಆದರೆ ಈಗಲೂ ಪ್ರದರ್ಶನ ಪಂದ್ಯಗಳಲ್ಲಿ ದಾನಶೀಲ ಉದ್ದೇಶಗಳಿಗಾಗಿ ಆಡುತ್ತಾರೆ. 2004ರ ಉತ್ತರ ಭಾಗದಲ್ಲಿ, ಎಲ್ಟನ್‌ ಜಾನ್‌ ಹಾಗೂ ಸಹ ಟೆನಿಸ್‌ ಆಟಗಾರರುಗಳಾದ ಸೆರೆನಾ ವಿಲಿಯಮ್ಸ್‌ ಹಾಗೂ ಆಂಡಿ ರಾಡಿಕ್‌‌ರವರುಗಳು ಆಯೋಜಿಸಿದ್ದ ಮೂರು ಅಂತಹಾ ಪಂದ್ಯಗಳಲ್ಲಿ ಅವರು ಭಾಗವಹಿಸಿದರು. ಜನವರಿ 2005ರಲ್ಲಿ, ಹಿಂದೂ ಮಹಾಸಾಗರದಲ್ಲೆದ್ದ ತ್ಸುನಾಮಿ ಪರಿಹಾರಕ್ಕೆಂದು ಆಯೋಜಿಸಿದ್ದ ಡಬಲ್ಸ್‌‌/ಜೋಡಿ/ಯುಗಳ ದತ್ತಿನಿಧಿ ಪಂದ್ಯದಲ್ಲಿ ಜಾನ್‌ ಮೆಕೆನ್ರೋ, ಆಂಡಿ ರಾಡಿಕ್‌‌, ಹಾಗೂ ಕ್ರಿಸ್‌ ಎವರ್ಟ್‌ರವರುಗಳೊಂದಿಗೆ ಆಡಿದರು. ನವೆಂಬರ್‌ 2005ರಲ್ಲಿ, ಅವರು ಮಾರ್ಟಿನಾ ಹಿಂಗಿಸ್‌ರೊಡಗೂಡಿ, ಲೀಸಾ ರೇಮಂಡ್‌ ಹಾಗೂ ಸಮಂತಾ ಸ್ಟೋಸರ್‌ರ ವಿರುದ್ಧ WTT ಫೈನಲ್‌ ಪಂದ್ಯಗಳನ್ನು ದತ್ತಿ ಉದ್ದೇಶಗಳಿಂದ ಆಡಿದರು. ಕುರ್ನಿಕೋವಾ ವಿಶ್ವ ಟೀಮ್‌ ಟೆನಿಸ್‌ (WTT)ನಲ್ಲಿನ St. ಲೂಯಿಸ್‌ ಏಸಸ್‌‌ನ ಸದಸ್ಯರೂ ಆಗಿರುವ ಅವರು, ಕೇವಲ ಡಬಲ್ಸ್‌‌/ಜೋಡಿ/ಯುಗಳ ಪಂದ್ಯಗಳನ್ನು ಮಾತ್ರ ಆಡುತ್ತಾರೆ. ಸೆಪ್ಟೆಂಬರ್‌ 2008ರಲ್ಲಿ, ಕುರ್ನಿಕೋವಾರು ಕ್ಯಾಲಿಫೋರ್ನಿಯಾದ ಮಾಲಿಬುನಲ್ಲಿನ ಝೂಮಾ ತೀರದಲ್ಲಿ ನಡೆದ 2008ರ ನಾಟಿಕಾ ಮಾಲಿಬು ಟ್ರಯಥ್ಲಾನ್‌ನಲ್ಲಿ ಕಾಣಿಸಿಕೊಂಡಿದ್ದರು.[೧೫] ಈ ಸ್ಪರ್ಧೆಯನ್ನು ಲಾಸ್‌ ಏಂಜಲೀಸ್‌ನಲ್ಲಿನ ಮಕ್ಕಳ ಚಿಕಿತ್ಸಾಲಯಕ್ಕೆ ನಿಧಿಯನ್ನು ಸಂಗ್ರಹಿಸಲು ಆಯೋಜಿಸಲಾಗಿತ್ತು. ಮಹಿಳೆಯರ K-ಸ್ವಿಸ್‌ ತಂಡದ ಪರವಾಗಿ ಆಕೆ ಆ ಓಟದ ಪಂದ್ಯವನ್ನು ಗೆದ್ದರು.[೧೫] 27 ಸೆಪ್ಟೆಂಬರ್‌ 2008ರಂದು, ಕುರ್ನಿಕೋವಾ ಉತ್ತರ ಕೆರೊಲಿನಾದ ಚಾರ್ಲೊಟ್‌ನಲ್ಲಿ ಪ್ರದರ್ಶನ ಪಂದ್ಯಗಳನ್ನಾಡಿದರು; ಅವರು ಎರಡು ಮಿಶ್ರ ಡಬಲ್ಸ್‌‌/ಜೋಡಿ/ಯುಗಳ ಪಂದ್ಯಗಳನ್ನಾಡಿದರು.[೧೬] ಅವರು ಟಿಮ್‌‌ ವಿಲ್ಕಿಸನ್‌ ಹಾಗೂ ಕರೆಲ್‌ ನೋವಾಸೆಕ್‌ರವರುಗಳ ಜೊತೆಗಾತಿಯಾಗಿ ಭಾಗವಹಿಸಿದ್ದರು.[೧೬] ಕುರ್ನಿಕೋವಾ ಹಾಗೂ ವಿಲ್ಕಿನ್‌ಸನ್‌, ಜಿಮ್ಮಿ ಅರಿಯಾಸ್‌ ಹಾಗೂ ಚಂಡಾ ರೂಬಿನ್‌ರವರುಗಳಿಗೆ ಸೋಲುಣಿಸಿದ್ದರು, ನಂತರ ಕುರ್ನಿಕೋವಾ ಹಾಗೂ ನೋವಾಸೆಕ್‌ರವರುಗಳು ಚಂಡಾ ರೂಬಿನ್‌ ಹಾಗೂ ಟಿಮ್‌‌ ವಿಲ್ಕಿಸನ್‌ರವರುಗಳನ್ನು ಸೋಲಿಸಿದ್ದರು.[೧೬] 12 ಅಕ್ಟೋಬರ್‌‌ 2008ರಂದು, ಅನ್ನಾ ಕುರ್ನಿಕೋವಾ ವಾರ್ಷಿಕ ದತ್ತಿಸಂಗ್ರಹಕ್ಕಾಗಿ ಒಂದು ಪ್ರದರ್ಶನಾತ್ಮಕ ಪಂದ್ಯವನ್ನು ಆಡಿದರು, ಬಿಲ್ಲೀ ಜೀನ್‌ ಕಿಂಗ್‌ ಹಾಗೂ ಸರ್‌ ಎಲ್ಟನ್‌ ಜಾನ್‌ರವರುಗಳು ಇದನ್ನು ಆಯೋಜಿಸಿದ್ದರು, ಇದರಲ್ಲಿ ಎಲ್ಟನ್‌ ಜಾನ್‌ AIDS ಪ್ರತಿಷ್ಠಾನ ಹಾಗೂ ಅಟ್ಲಾಂಟಾ AIDS ಸಹಭಾಗಿತ್ವ ನಿಧಿಗಳಿಗೆ $400,000ಗಳಿಗೂ ಹೆಚ್ಚಿನ ಮೊತ್ತವನ್ನು ಸಂಗ್ರಹಿಸಿದ್ದರು.[೧೭] ಅವರು ಡಬಲ್ಸ್‌‌/ಜೋಡಿ/ಯುಗಳ ಪಂದ್ಯಗಳನ್ನು ಆಂಡಿ ರಾಡಿಕ್‌‌ರೊಡನೆ (ಸರ್‌ ಎಲ್ಟನ್‌ ಜಾನ್‌ರಿಂದ ಅವರಿಗೆ ತರಬೇತಿ ನೀಡಲಾಗಿತ್ತು) ಮಾರ್ಟಿನಾ ನವ್ರಾಟಿಲೋವಾ ಹಾಗೂ ಜೆಸ್ಸೀ ಲೆವೀನ್‌ರವರುಗಳ ವಿರುದ್ಧ (ಬಿಲ್ಲೀ ಜೀನ್‌ ಕಿಂಗ್‌ರವರಿಂದ ತರಬೇತಿ ಪಡೆದಿದ್ದವರು) ಆಡಿದರು; ಕುರ್ನಿಕೋವಾ ಹಾಗೂ ರಾಡ್ಡಿಕ್‌ 5–4(3) ಅಂಕಗಳಲ್ಲಿ ಪಂದ್ಯವನ್ನು ಗೆದ್ದರು.[೧೭] ಕುರ್ನಿಕೋವಾ ಜಾನ್‌ ಮೆಕೆನ್ರೋರೊಡಗೂಡಿ, ಟ್ರೇಸಿ ಆಸ್ಟಿನ್‌ ಹಾಗೂ ಜಿಮ್‌‌ ಕೂರಿಯರ್‌ರ ವಿರುದ್ಧ NYನ ವೆರೋನಾದಲ್ಲಿನ, ಟರ್ನಿಂಗ್‌ ಸ್ಟೋನ್‌ ಈವೆಂಟ್‌ ಸೆಂಟರ್‌ನಲ್ಲಿ 2 ಮೇ 2009ರಂದು ಆಯೋಜಿಸಲಾಗಿದ್ದ ಲೆಜೆಂಡರಿ ನೈಟ್‌ ಪಂದ್ಯ ದಲ್ಲಿ ಸ್ಪರ್ಧಿಸಿದ್ದರು.[೧೮] ಲೆಜೆಂಡರಿ ನೈಟ್‌ ಆಫ್‌ ಟೆನಿಸ್‌ ಪಂದ್ಯವು ಸಿಂಗಲ್ಸ್‌ ಪಂದ್ಯಗಳಲ್ಲಿನ ಮೆಕೆನ್ರೋ ಹಾಗೂ ಕೂರಿಯರ್‌ ನಡುವಿನ ಛಲದ ಪಂದ್ಯವನ್ನು ಹೊಂದಿತ್ತಲ್ಲದೇ ನಂತರ ಕೂರಿಯರ್‌ ಹಾಗೂ ಕುರ್ನಿಕೋವಾರ ವಿರುದ್ಧ ಮೆಕೆನ್ರೋ ಹಾಗೂ ಆಸ್ಟಿನ್‌ರವರುಗಳ ಮಿಶ್ರ ಡಬಲ್ಸ್‌‌/ಜೋಡಿ/ಯುಗಳ ಪಂದ್ಯವಿತ್ತು. ಅವರು ಪ್ರಸ್ತುತ K-ಸ್ವಿಸ್‌ನ ವಕ್ತಾರೆಯಾಗಿದ್ದಾರೆ.[೧೯] ELLE ನಿಯತಕಾಲಿಕೆಯ ಜುಲೈ 2005ರ ಸಂಚಿಕೆಯಲ್ಲಿನ ಪ್ರಮುಖ ಲೇಖನವೊಂದರಲ್ಲಿ, ಕುರ್ನಿಕೋವಾ ಅವರು 100% ಸ್ಪರ್ಧಾಸಮರ್ಥಳಾದೆ ಎಂದೆನಿಸಿದರೆ, ಅವರು ಮರಳಿ ಸ್ಪರ್ಧೆಗಳಲ್ಲಿ ಭಾಗವಹಿಸಲು ಇಚ್ಛಿಸುವುದಾಗಿ ಹೇಳಿಕೆ ನೀಡಿದ್ದರು.

ಆಟದ ಶೈಲಿ[ಬದಲಾಯಿಸಿ]

ಓರ್ವ ಆಟಗಾರ್ತಿಯಾಗಿ, ಕುರ್ನಿಕೋವಾರು ತಮ್ಮ ಕಾಲಿನ ವೇಗದಿಂದ ಹಾಗೂ ಆಕ್ರಮಣಕಾರಿ ಎಲ್ಲೆಗೆರೆ ಆಟ ಹಾಗೂ ಅತ್ಯುತ್ತಮ ಕೋನಗಳು ಹಾಗೂ ಡ್ರಾಪ್‌ಶಾಟ್‌/ಬೀಳುಹೊಡೆತಗಳಿಗಾಗಿ ಹೆಸರಾಗಿದ್ದಾರೆ; ಆದಾಗ್ಯೂ, ಅವರ ಸಾಪೇಕ್ಷವಾಗಿ ಸಪಾಟಾದ, ಹೆಚ್ಚಿನ ಅಪಾಯದ ನೆಲಹೊಡೆತಗಳು ತಪ್ಪುಗಳು ಪುನರಾವರ್ತಿತವಾಗುವಂತೆ ಮಾಡುತ್ತಿದ್ದುದಲ್ಲದೇ ಅವರ ಸರ್ವ್‌ಗಳು ಕೆಲವೊಮ್ಮೆ ಸಿಂಗಲ್ಸ್‌ ಪಂದ್ಯಗಳಲ್ಲಿ ಅವಿಶ್ವಸನೀಯವಾಗಿರುತ್ತಿದ್ದವು. ಕುರ್ನಿಕೋವಾ ತಮ್ಮ ರ್ರ್ಯಾಕೆಟ್‌ಅನ್ನು ಸಾಮಾನ್ಯವಾಗಿ ಬಲಗೈಯಲ್ಲಿ ಹಿಡಿದಿರುತ್ತಾರಾದರೂ ಹಿಂಗೈ ಹೊಡೆತಗಳನ್ನು ಆಡಬೇಕಾದರೆ ಅವರು ಎರಡೂ ಕೈಗಳನ್ನು ಬಳಸುತ್ತಾರೆ.[೧] ಅವರು ನೆಟ್‌ನಲ್ಲಿ ಓರ್ವ ಉತ್ತಮ ಆಟಗಾರ್ತಿ.[೨೦] ಅವರು ಬಲಯುಕ್ತ ನೆಲಹೊಡೆತಗಳನ್ನು ಹಾಗೂ ಬೀಳು ಹೊಡೆತಗಳನ್ನು ಕೂಡಾ ಹೊಡೆಯಬಲ್ಲರು.[೨೧] ಅವರ ಆಟದ ಶೈಲಿಯು ಡಬಲ್ಸ್‌‌/ಜೋಡಿ/ಯುಗಳ ಆಟಗಾರ್ತಿಯ ವೈಶಿಷ್ಟ್ಯಗಳಿಗೆ ಸೂಕ್ತವಾಗಿದ್ದು,ಅವರ ಎತ್ತರಕ್ಕೆ ಪೂರಕವಾಗಿದೆ.[೨೨] ಪಾಮ್‌ ಶ್ರಿವರ್‌ ಹಾಗೂ ಪೀಟರ್‌ ಫ್ಲೆಮಿಂಗ್‌ರಂತಹಾ ಡಬಲ್ಸ್‌‌/ಜೋಡಿ/ಯುಗಳ ಪರಿಣತರೊಡನೆ ಅವರನ್ನು ಹೋಲಿಸಲಾಗುತ್ತದೆ.[೨೨]

ವೈಯಕ್ತಿಕ ಜೀವನ[ಬದಲಾಯಿಸಿ]

ಕುರ್ನಿಕೋವಾ'ರ ವೈವಾಹಿತ ಸ್ಥಿತಿಯು ಅನೇಕ ಸಂದರ್ಭಗಳಲ್ಲಿ ವಿವಾದಕ್ಕೀಡಾಗಿದೆ. ಮಂಜಿನ ಹಾಕಿ ಆಟಗಾರ ಪಾವೆಲ್‌ ಬೂರ್‌ರೊಡನೆ ಅವರ ವಿವಾಹ ನಿಶ್ಚಯವಾಗಿರಬಹುದೆಂಬುದರ ಬಗ್ಗೆ ಅಸಮಂಜಸ ವದಂತಿಗಳಿದ್ದವು. NHL ಮಂಜಿನ ಹಾಕಿ ತಾರೆ ಸರ್ಗೇಯ್‌ ಫೆಡೊರೊವ್‌ರನ್ನು ‌2001ರಲ್ಲಿ ಅವರು ಮದುವೆಯಾದರೆಂಬ ವರದಿಗಳು ಬಂದಿದ್ದವು. ಕುರ್ನಿಕೋವಾ'ರ ಪ್ರತಿನಿಧಿಗಳು ಇದನ್ನು ನಿರಾಕರಿಸಿದರೂ, ಫೆಡೊರೊವ್‌‌ 2003ರಲ್ಲಿ ಈರ್ವರೂ ಮದುವೆಯಾಗಿದ್ದು ಆನಂತರ ವಿಚ್ಛೇದನೆಯನ್ನೂ ಪಡೆದುಕೊಂಡಿದ್ದಾಗಿ ಹೇಳಿಕೆ ನೀಡಿದರು. ಕುರ್ನಿಕೋವಾ ಪಾಪ್‌ ತಾರೆ ಎನ್ರಿಕೇ ಇಗ್ಲೇಷಿಯಸ್‌ರೊಂದಿಗೆ 2001ರ (ಆಕೆ ಅವರ "ಎಸ್ಕೇಪ್‌" ಎಂಬ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದರು) ಉತ್ತರಭಾಗದಲ್ಲಿ ವಿಹರಿಸಲು ಆರಂಭಿಸಿದ್ದರು, ಇದರಿಂದಾಗಿ ಈ ಜೋಡಿಯು ರಹಸ್ಯವಾಗಿ ಮದುವೆಯಾದರೆಂಬ ವದಂತಿಯು 2003ರಲ್ಲಿ ಹಾಗೂ ಮತ್ತೆ 2005ರಲ್ಲಿ ಹರಿದಾಡಿತ್ತು. ಕುರ್ನಿಕೋವಾ ನೇರವಾಗಿ ತಮ್ಮ ಖಾಸಗಿ ಸಂಬಂಧಗಳ ಸ್ಥಿತಿಯ ಬಗ್ಗೆ ಸಮ್ಮತಿ ಅಥವಾ ನಿರಾಕರಣೆಯ ಹೇಳಿಕೆಯನ್ನು ನೀಡುವ ಬಗ್ಗೆ ನಿರಂತರವಾಗಿ ನಿರಾಕರಿಸುತ್ತಾ ಬಂದಿದ್ದಾರೆ. ಆದರೆ ಮೇ 2007ರಲ್ಲಿ, ಎನ್ರಿಕೆ ಇಗ್ಲೀಷಿಯಸ್‌ (ತಾವೇ ನಂತರ ಸ್ಪಷ್ಟನೆ ನೀಡಿರುವಂತೆ ತಪ್ಪಾಗಿ ಭಾವಿಸಿ) ನ್ಯೂಯಾರ್ಕ್‌ ಸನ್‌ ಪತ್ರಿಕೆ ಯಲ್ಲಿ ತಾವು ಅವರಿಂದ ಬೇರ್ಪಟ್ಟಿರುವುದರಿಂದ ಕುರ್ನಿಕೋವಾರನ್ನು ಮದುವೆಯಾಗುವ ಹಾಗೂ ನೆಲೆಗೊಳ್ಳುವ ಯಾವ ಉದ್ದೇಶವೂ ತಮಗಿಲ್ಲವೆಂದು ಹೇಳಿಕೆ ನೀಡಿದ್ದರೆಂಬುದು ವರದಿಯಾಗಿತ್ತು. ನಂತರ ಆ ಹಾಡುಗಾರ "ವಿಚ್ಛೇದನ" ಅಥವಾ ಸರಳವಾಗಿ ಬೇರ್ಪಡುವಿಕೆಯ ಬಗೆಗಿನ ವದಂತಿಗಳನ್ನು ಅಲ್ಲಗಳೆದರು. ಜೂನ್‌ 2008ರಲ್ಲಿ, ಇಗ್ಲೇಷಿಯಸ್‌ ಡೈಲಿ ಸ್ಟಾರ್‌ ಪತ್ರಿಕೆ ಗೆ ಹೇಳಿಕೆ ನೀಡಿ ತಾವು ಹಿಂದಿನ ವರ್ಷ ಕುರ್ನಿಕೋವಾರನ್ನು ಮದುವೆಯಾಗಿದ್ದಾಗಿ ಹಾಗೂ ಪ್ರಸ್ತುತ ಬೇರ್ಪಟ್ಟಿರುವುದಾಗಿ ತಿಳಿಸಿದ್ದರು.[೨೩] ಎನ್ರಿಕೆ ನಂತರದ ಸಂದರ್ಶನಗಳಲ್ಲಿ ಅದೊಂದು ಕೇವಲ ತಮಾಷೆಯ ಹೇಳಿಕೆಯಾಗಿತ್ತು,[೨೪] ಹಾಗೂ ತಾವಿಬ್ಬರೂ ಜೊತೆಯಾಗಿಯೇ ಇರುವುದಾಗಿ ಹೇಳಿಕೆ ನೀಡಿದ್ದರು. ಕುರ್ನಿಕೋವಾರಿಗೆ ಅಲನ್‌ ಎಂಬ ಓರ್ವ ಕಿರಿಯ ಸಹೋದರನಿದ್ದಾರೆ.[೨೫] ಅವರು 2009ರ ಕೊನೆಯ ಭಾಗದಲ್ಲಿ ಅಮೇರಿಕದ ನಾಗರಿಕ ಹಕ್ಕು ಪಡೆದರು.

ಮಾಧ್ಯಮ ಜನಪ್ರಿಯತೆ[ಬದಲಾಯಿಸಿ]

ಕುರ್ನಿಕೋವಾ'ರ ಜನಪ್ರಿಯತೆಯ ಬಹಳಷ್ಟು ಆಕೆಯ ಖಾಸಗಿ ಜೀವನದ, ಹಾಗೂ ಅನೇಕ ರೂಪದರ್ಶಿ ಛಾಯಾಚಿತ್ರ ಪ್ರದರ್ಶಿಕೆಗಳ ಕುರಿತಾದ ಪ್ರಚಾರಗಳಿಂದ ಕೂಡಿದೆ. ತನ್ನ 15ನೇ ವರ್ಷದ ವಯಸ್ಸಿನಲ್ಲಿ 1996ರ U.S. ಓಪನ್‌ ಪಂದ್ಯಾವಳಿಯಲ್ಲಿ ಕುರ್ನಿಕೋವಾ'ರ ಪದಾರ್ಪಣೆಯಾದ ಅವಧಿಯಲ್ಲಿ, ವಿಶ್ವವು ಆಕೆಯ ಸೌಂದರ್ಯವನ್ನು ಗುರುತಿಸಿತು, ಅಲ್ಪಕಾಲದಲ್ಲೇ ವಿಶ್ವದಾದ್ಯಂತ ಅನೇಕ ನಿಯತಕಾಲಿಕೆಗಳಲ್ಲಿ ಆಕೆಯ ಚಿತ್ರಗಳು ರಾರಾಜಿಸತೊಡಗಿದವು. 2000ನೇ ಇಸವಿಯಲ್ಲಿ, ಕುರ್ನಿಕೋವಾ ಬರ್ಲೇ ಕಂಪೆನಿಯ ಆಘಾತರಕ್ಷಕ ಕ್ರೀಡಾ ಸ್ತ್ರೀಯರ ಒಳ ಉಡುಪುಗಳ/ಬ್ರಾಗಳ ಜಾಹಿರಾತಿನ ಹೊಸಮುಖವಾಗಿ ಪರಿಚಯವಾದ ಅವರು ಹಾಗೂ ವಿಪರೀತ ಯಶಸ್ವಿಯಾದ "ಕೇವಲ ಚೆಂಡು ಮಾತ್ರವೇ ಪುಟಿದೇಳಬೇಕು" ಎಂಬ ಜಾಹೀರಾತು ಫಲಕ ಅಭಿಯಾನದಲ್ಲಿ ಕಾಣಿಸಿಕೊಂಡರು. ಅಧಿಕ ಜನಪ್ರಿಯತೆ ಗಳಿಸಿದ ಆಕೆ ಬಿಕಿನಿಗಳು ಹಾಗೂ ಈಜುಡುಗೆಗಳಲ್ಲಿ ಕಾಣಿಸಿಕೊಂಡಿದ್ದ 2004ರ ಸ್ಪೋರ್ಟ್ಸ್‌ ಇಲ್ಲಸ್ಟ್ರೇಟೆಡ್‌ ಈಜುಡುಗೆ ಸಂಚಿಕೆ ಯೂ ಸೇರಿದಂತೆ, FHM ಹಾಗೂ ಮ್ಯಾಕ್ಸಿಮ್‌ ನಂತಹಾ ಇನ್ನಿತರ ಜನಪ್ರಿಯ ಪುರುಷರ ನಿಯತಕಾಲಿಕೆಗಳಲ್ಲಿ ಹಾಗೂ ಅನೇಕ ಪುರುಷರ ನಿಯತಕಾಲಿಕೆಗಳಲ್ಲಿ ಅಲ್ಪಬಟ್ಟೆ ಧರಿಸಿದ ಸ್ಥಿತಿಯಲ್ಲಿದ್ದ ಆಕೆಯ ಛಾಯಾಚಿತ್ರಗಳು ಕಾಣಿಸಿಕೊಂಡವು. ಕುರ್ನಿಕೋವಾರನ್ನು ಪೀಪಲ್ಸ್‌' 50 ಅತ್ಯಂತ ಸುಂದರ ವ್ಯಕ್ತಿಗಳ ಪಟ್ಟಿಯಲ್ಲಿ 1998, 2000, 2002, ಹಾಗೂ 2003ರ ಸಾಲುಗಳಲ್ಲಿ ಹೆಸರಿಸಲಾಯಿತಲ್ಲದೇ "ಕಾಮಪ್ರಚೋದಕ ಸ್ತ್ರೀ ಕೀಡಾಪಟು" ಹಾಗೂ "ಕಾಮಪ್ರಚೋದಕ ಜೋಡಿ" (ಇಗ್ಲೇಷಿಯಸ್‌ರೊಡನೆ) ಎಂದು ESPN.comನಲ್ಲಿ ಅವರನ್ನು ಆಯ್ಕೆ ಮಾಡಲಾಗಿತ್ತು. 2002ರಲ್ಲಿ FHM'ನ ವಿಶ್ವದ 100 ಅತ್ಯಂತ ಕಾಮಪ್ರಚೋದಕ ಮಹಿಳೆಯರಲ್ಲಿ ಮೊದಲಿಗರಾಗಿ U.S. ಹಾಗೂ UK ಆವೃತ್ತಿಗಳಲ್ಲಿ ಹೆಸರಿಸಲಾಯಿತು. ತದ್ವಿರುದ್ಧವಾಗಿ, ಸಿಂಗಲ್ಸ್‌ ಪಂದ್ಯಗಳ ಆಟಗಾರ್ತಿಯಾಗಿ ವಾಸ್ತವ ಸಾಧನೆಗೆ ಹೋಲಿಸಿದರೆ ನಡೆಸಿರುವ ಅತೀವ ಪ್ರಚಾರದ ಮಟ್ಟವನ್ನು ESPN ಕುರ್ನಿಕೋವಾ 18ನೇ ಶ್ರೇಯಾಂಕ ಪಡೆದಿರುವುದನ್ನು ತನ್ನ "ಕಳೆದ 25 ವರ್ಷಗಳಲ್ಲಿನ 25 ಅತಿ ದೊಡ್ಡಕ್ರೀಡಾ ಅಪಯಶಸ್ಸುಗಳು" ಎಂಬ ಪಟ್ಟಿಯಲ್ಲಿ ಹೆಸರಿಸುವ ಮೂಲಕ ಎತ್ತಿತೋರಿಸಿತು.[೨೬] ಕುರ್ನಿಕೋವಾರಿಗೆ ESPNನ ಶ್ರೇಷ್ಠ ಸರಣಿ "ಹೂ ಈಸ್‌ ನಂಬರ್‌ 1?" ಕ್ರೀಡೆಯ ಅಧಿಕ ಅತಿ ಪುರಸ್ಕೃತ ಕ್ರೀಡಾಪಟುಗಳ ಸರಣಿಯಲ್ಲಿ #1ನೇ ಶ್ರೇಯಾಂಕವನ್ನು ನೀಡಲಾಯಿತು. ಅನ್ನಾ'ರ ಜನಪ್ರಿಯತೆಯು ಟೆಕ್ಸಾಸ್‌ನ ಹೋಲ್ಡ್‌ ದೆಮ್‌ನ ಪರಿಭಾಷೆಯಲ್ಲಿ ಏಸ್‌-ಕಿಂಗ್‌ ಹೋಲ್‌-ಕಾರ್ಡ್‌ಗಳನ್ನು ಕೆಲವೊಮ್ಮೆ "ಅನ್ನಾ ಕುರ್ನಿಕೋವಾ," ಎಂದು ಕರೆಯಲ್ಪಡುವ ಮಟ್ಟಿಗೆ ವಿಸ್ತರಿಸಿದೆ, ಹಾಗೆ ಕರೆಯುವುದು ಅದು ಟೆನಿಸ್‌ ತಾರೆಯ AK ಅಂಕಿತಗಳನ್ನು ಹೊಂದಿದೆ ಎಂಬುದು ಮಾತ್ರವಲ್ಲ, ಬದಲಿಗೆ ಅದು ಚೆನ್ನಾಗಿ ಆಡದಿರುವ ಅಪಕೀರ್ತಿಯನ್ನೂ ಹೊಂದಿದೆ ಎಂಬುದಕ್ಕಾಗಿ ಕೂಡಾ. ಕುರ್ನಿಕೋವಾರ ಕೈ "ನೋಡಲಿಕ್ಕೆ ತುಂಬಾ ಚೆನ್ನಾಗಿ ಕಾಣುತ್ತದೆ, ಆದರೆ ಗೆಲ್ಲುವುದು ಅಪರೂಪ" ಎಂದೂ ಹೇಳಲಾಗುತ್ತದೆ."[೨೭][೨೮]

ವೃತ್ತಿಜೀವನದ ಅಂಕಿಅಂಶಗಳು ಹಾಗೂ ಪ್ರಶಸ್ತಿಗಳು[ಬದಲಾಯಿಸಿ]

ಇವನ್ನೂ ನೋಡಿ[ಬದಲಾಯಿಸಿ]

ಪುಸ್ತಕಗಳು[ಬದಲಾಯಿಸಿ]

 • ಅನ್ನಾ ಕುರ್ನಿಕೋವಾ ಸೂಸನ್‌ ಹೋಲ್ಡೆನ್‌ ವಿರಚಿತ (2001) (2001) (ISBN 9781842224168 / ISBN 1842224166)
 • ಅನ್ನಾ ಕುರ್ನಿಕೋವಾ (ವಿಮೆನ್‌ ಹೂ ವಿನ್‌) ಕಾನ್ನೀ ಬರ್ಮನ್‌ ವಿರಚಿತ (2001) (ISBN 0791065294 / ISBN 978-0791065297)

ಆಕರಗಳು[ಬದಲಾಯಿಸಿ]

 1. ೧.೦ ೧.೧ ೧.೨ ೧.೩ ೧.೪ Sony Ericsson WTA Tour | Players | Info | Anna Kournikova
 2. ೨.೦ ೨.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 3. ೩.೦ ೩.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 4. ೪.೦ ೪.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 5. ೫.೦ ೫.೧ ೫.೨ ೫.೩ ೫.೪ ೫.೫ ೫.೬ ಸ್ಪೋರ್ಟ್ಸ್‌ಮೇಟ್ಸ್‌ : ಎಬೌಟ್‌ ಅನ್ನಾ ಕುರ್ನಿಕೋವಾ
 6. ೬.೦ ೬.೧ ೬.೨ ೬.೩ ೬.೪ ೬.೫ ಅನ್ನಾ ಕುರ್ನಿಕೋವಾರ ಅಧಿಕೃತ ಜೀವನಚರಿತ್ರೆ
 7. ೭.೦ ೭.೧ ೭.೨ ೭.೩ ೭.೪ ೭.೫ ೭.೬ ೭.೭ ಸೋನಿ ಎರಿಕ್‌ಸನ್‌‌ WTA ಪ್ರವಾಸೀ ಪಂದ್ಯಗಳು | ಆಟಗಾರರರು | ಮಾಹಿತಿ (ವೃತ್ತಿಜೀವನದ ವಿಮರ್ಶೆ) | ಅನ್ನಾ ಕುರ್ನಿಕೋವಾ
 8. ೮.೦ ೮.೧ ೮.೨ ೮.೩ ೮.೪ ೮.೫ ೮.೬ ೮.೭ ೮.೮ ಸೋನಿ ಎರಿಕ್‌ಸನ್‌‌ WTA ಪ್ರವಾಸೀ ಪಂದ್ಯಗಳು | ಆಟಗಾರರರು | ಚಟುವಟಿಕೆ | ಅನ್ನಾ ಕುರ್ನಿಕೋವಾ
 9. ೯.೦೦ ೯.೦೧ ೯.೦೨ ೯.೦೩ ೯.೦೪ ೯.೦೫ ೯.೦೬ ೯.೦೭ ೯.೦೮ ೯.೦೯ ೯.೧೦ ಅನ್ನಾ ಕುರ್ನಿಕೋವಾ'ರ ಅಧಿಕೃತ ಜಾಲತಾಣ - ಟೆನಿಸ್‌ ಅಂಕಿಅಂಶಗಳು
 10. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 11. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 12. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 13. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 14. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 15. ೧೫.೦ ೧೫.೧ ಅನ್ನಾ ಕುರ್ನಿಕೋವಾ 2008ರ ನಾಟಿಕಾ ಮಾಲಿವು ಟ್ರಯಥ್ಲಾನ್‌ ಪಂದ್ಯಗಳಲ್ಲಿ ನೆನ್ನೆ ಕಾಣಿಸಿಕೊಂಡರು
 16. ೧೬.೦ ೧೬.೧ ೧೬.೨ ಸ್ಪೋರ್ಟ್ಸ್‌ಮೇಟ್ಸ್‌ ಚಿತ್ರಶಾಲೆ : ನಾರ್ಥ್‌ ಕೆರೊಲಿನಾದ ಚಾರ್ಲೊಟ್ಟೆಯ ಮಿಶ್ರ ಡಬಲ್ಸ್‌‌/ಜೋಡಿ/ಯುಗಳ ಪ್ರದರ್ಶನ ಪಂದ್ಯ
 17. ೧೭.೦ ೧೭.೧ ವಾರ್ಷಿಕ ದತ್ತಿಸಂಗ್ರಹವು ಎಲ್ಟನ್‌ ಜಾನ್‌ AIDS ಪ್ರತಿಷ್ಠಾನ ಹಾಗೂ ಅಟ್ಲಾಂಟಾ AIDS ಸಹಯೋಗಿತ್ವದ ನಿಧಿಗೆಂದು $400,000ಕ್ಕೂ ಮೀರಿದ ಮೊತ್ತ ಸಂಗ್ರಹಿಸಿತು
 18. CNYನಲ್ಲಿ ನಮೂದಾದ ವಿಶ್ವವಿಖ್ಯಾತ ಟೆನಿಸ್‌ ಹೆಸರುಗಳು
 19. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 20. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 21. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 22. ೨೨.೦ ೨೨.೧ ಸ್ವೀಟ್‌ ಅನ್ನಾ ಕುರ್ನಿಕೋವಾ - ಜೀವನಚರಿತ್ರೆ
 23. "Iglesias: 'Anna and I were married'". Digital Spy. 
 24. ಇಗ್ಲೇಷಿಯಸ್‌ ತಾನು ಡಯಾನಾ ವಾಲಿನಾಸ್‌ರನ್ನು ಮದುವೆಯಾಗಿದ್ದೇನೆ ಎಂದು ಹೇಳುತ್ತಾರೆ
 25. "Anna Kornikova's brother, Allan, 4, excels at three sports". Palm Beach Daily News. 
 26. "Biggest Sports Flop". ESPN. 
 27. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 28. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.

ಬಾಹ್ಯ ಕೊಂಡಿಗಳು[ಬದಲಾಯಿಸಿ]

Commons logo
ವಿಕಿಮೀಡಿಯ ಕಣಜದಲ್ಲಿ ಈ ವಿಷಯಕ್ಕೆ ಸಂಬಂಧಿಸಿದ ಮಾಧ್ಯಮಗಳಿವೆ:
 1. REDIRECT Template:WTA
 • This is a redirect from a title that is fully protected from editing for any of several possible reasons.
  • Please do not replace these redirected links with a link directly to the target page. For more information, see the category.
Awards and achievements
ಪೂರ್ವಾಧಿಕಾರಿ
Martina Hingis
ITF Junior World Champion
1995
ಉತ್ತರಾಧಿಕಾರಿ
Amélie Mauresmo
ಪೂರ್ವಾಧಿಕಾರಿ
Martina Hingis
WTA Newcomer of the Year
1996
ಉತ್ತರಾಧಿಕಾರಿ
Venus Williams
ಪೂರ್ವಾಧಿಕಾರಿ
Martina Hingis &
Jana Novotná
WTA Doubles Team of the Year
(with Martina Hingis)

1999
ಉತ್ತರಾಧಿಕಾರಿ
Serena Williams &
Venus Williams
ಪೂರ್ವಾಧಿಕಾರಿ
First Awarded
ESPN Hottest Female Athlete
2002
ಉತ್ತರಾಧಿಕಾರಿ
Jennie Finch