ಅಣ್ಣೆಸೊಪ್ಪು
Jump to navigation
Jump to search
ಅಣ್ಣೆಸೊಪ್ಪು | |
---|---|
![]() | |
Egg fossil classification | |
Kingdom: | Plantae
|
(unranked): | |
(unranked): | Eudicots
|
(unranked): | |
Order: | |
Family: | |
Genus: | |
Species: | C. argentea
|
Binomial nomenclature | |
Celosia argentea | |
Synonym (taxonomy)[೧] | |
|
ಈ ಮೂಲಿಕೆಯು ಹುಲ್ಲು ಗಾವಲಿನಲ್ಲಿ,ಬೀಳು ಭೂಮಿಯಲ್ಲಿ ಬೆಳೆಯುತ್ತದೆ.ರಾಗಿಯ ಹೊಲದಲ್ಲಿ ಕಳೆಯಂತೆ ಬೆಳೆಯುತ್ತದೆ.ಈ ಗಿಡವನ್ನು ಸೊಪ್ಪು ತರಕಾರಿಯಂತೆ ಬಳಸುತ್ತಾರೆ.ಇದು ೧-೩ ಅಡಿ ಎತ್ತರ ಬೆಳೆಯುತ್ತದೆ.ಕಾಂಡವು ವಿರಳವಾಗಿ ಕವಲೊಡೆದಿರುತ್ತದೆ. ಸರಳವಾದ, ನೀಳ ಅಥವಾ ಕರ್ನೆಯಾಕಾರದ ಎಲೆಗಳು ಪರ್ಯಾಯವಾಗಿ ಜೋಡಣೆಯಾಗಿರುತ್ತವೆ. ಉದ್ದನೆಯ ಪುಷ್ಪಮಂಜರಿಯು ಕಾಂಡದ ತುದಿ ಮತ್ತು ಎಲೆಯ ಕಂಕುಳಲ್ಲಿರುತ್ತವೆ.ಹೂಗಳು ಮೊದಲು ಕೆಂಪಾಗಿರುತ್ತವೆ ಬಲಿತಂತೆ ಬಿಳಿ ಬಣ್ಣಕ್ಕೆ ತಿರುಗುತ್ತವೆ.ಹೂಗಳನ್ನು ಕಾಪಾಡುವ ಹೂಸೂಚಿಗಳು ಬೆಳ್ಳಗೆ ಹೊಳಪಿರುವ ಪೊರೆಯಂತಿರುತ್ತವೆ.ಹಣ್ಣುಗಳಲ್ಲಿ ಕಪ್ಪಾದ ಹೊಳಪಿನಿಂದ ಕೂಡಿದ ಸಣ್ಣ ಬೀಜಗಳಿರುತ್ತವೆ.
ವೈಜ್ಞಾನಿಕ ಹೆಸರು[ಬದಲಾಯಿಸಿ]
ಸಿಲೊಶಿಯ ಅರ್ಜೆಂಶಿಯ (Celosia argentea L.)[೨]
ಸಸ್ಯದ ಕುಟುಂಬ[ಬದಲಾಯಿಸಿ]
ಅಮರಾಂಥೇಸಿ (Amaranthaceae)
ಕನ್ನಡದ ಇತರ ಹೆಸರುಗಳು[ಬದಲಾಯಿಸಿ]
- ಅನ್ನೆಸೊಪ್ಪು
- ಖಡಕತಿರಾ
- ಹಣ್ಣೆಸೊಪ್ಪು
ಇತರ ಭಾಷೆಯ ಹೆಸರುಗಳು[ಬದಲಾಯಿಸಿ]
- ಸಂಸ್ಕೃತ-ವಿತುನ
- ಹಿಂದಿ-ಸಫೇದ್ ಮುರ್ಘ,ಸರ್ವಾರಿ
- ತಮಿಳು-ಪನ್ನೈ
- ತೆಲುಗು-ಗುರುಗು,ಗುಲಗ್ ಕುರ,ಪಂಚಿಚೆಟ್ಟು
- ಇಂಗ್ಲೀಷ್-ವೈಟ್ ಸ್ಟೈಕ್ಡ್ ಕೂಂ,ವೈಟ್-ಕಾಕ್ಸ್-ಕೂಂ
ಉಪಯೋಗಗಳು[ಬದಲಾಯಿಸಿ]
- ಅಣ್ಣೆಸೊಪ್ಪು ಬೇರನ್ನು ಅರೆದು ಕುಡಿಸುವುದರಿಂದ ಭಂಗಿಸೊಪ್ಪಿನ ಸೇವನೆಯಿಂದುಂಟಾದ ದೋಷ ಪರಿಹಾರವಾಗುತ್ತದೆ.
- ಎಲೆಯ ರಸ,ಕಷಾಯ ಅಥವಾ ಚೂರ್ಣ ಸೇವನೆಯಿಂದ ಪಿತ್ತಕೋಶ(ಲಿವರ್) ಬಲಗೊಳ್ಳುತ್ತದೆ ಹಾಗೂ ಗೊನ್ಹೊರಿಯ ರೋಗವು ವಾಸಿಯಾಗುತ್ತದೆ.
- ಬೀಜಗಳನ್ನು ಅರೆದು ಕುಡಿಸಿದರೆ ಭೇದಿ ನಿಲ್ಲುತ್ತದೆ.
- ಬೀಜದ ಚೂರ್ಣ ಅಥವಾ ಬೀಜಗಳನ್ನು ಅರೆದು ಸೇವಿಸುವುದರಿಂದ ವೀರ್ಯವೃದ್ಧಿಯಾಗುತ್ತದೆ.
- ಬೀಜವನ್ನು ಅರೆದು ಗಂಧ ಮಾಡಿಕೊಂಡು ಕಣ್ಣಿಗೆ ಕಣ್ಕಪ್ಪಿನಂತೆ ಹಚ್ಚುವುದರಿಂದ ಕಣ್ಣಿನ ರೋಗಗಳು ವಾಸಿಯಾಗುತ್ತವೆ.[೩]
ಉಲ್ಲೇಖ[ಬದಲಾಯಿಸಿ]
- ↑ "The Plant List: A Working List of All Plant Species".
- ↑ http://www.theplantlist.org/tpl/record/kew-2707791
- ↑ ಕರ್ನಾಟಕದ ಔಷಧಿಯ ಸಸ್ಯಗಳು ಡಾ|| ಮಾಗಡಿ ಆರ್. ಗುರುದೇವ,ದಿವ್ಯಚಂದ್ರ ಪ್ರಕಾಶನ ಬೆಂಗಳೂರು,ಮುದ್ರಣ:೨೦೧೦,ಪುಟ ಸಂಖ್ಯೆ ೧೧,೧೨
![]() |
ವಿಕಿಮೀಡಿಯ ಕಣಜದಲ್ಲಿ Celosia argentea ವಿಷಯಕ್ಕೆ ಸಂಬಂಧಿಸಿದ ಮಾಧ್ಯಮಗಳಿವೆ . |