ಅಜಿಲರು

ವಿಕಿಪೀಡಿಯ ಇಂದ
Jump to navigation Jump to search
ವೇಣೂರಿನಲ್ಲಿ ವೀರ ತಿಮ್ಮಣ್ಣಾಜಿಲರಿಂದ ಸ್ಥಾಪಿತವಾದ ಏಕಶಿಲಾ ಬಾಹುಬಲಿಯ ವಿಗ್ರಹ

ಅಜಿಲರು ತುಳುನಾಡಿನ ಅರಸುಮನೆತನಗಳಲ್ಲಿ ಒಂದು.ಇವರು ದಕ್ಷಿಣ ಕನ್ನಡಜಿಲ್ಲೆಯ ವೇಣೂರನ್ನು ಕೇಂದ್ರವನ್ನಾಗಿಸಿಕೊಂಡು ಆಡಳಿತ ನಡೆಸಿದರು.ಈ ವಂಶದ ಮೊದಲ ಉಲ್ಲೇಖ ಕಂಡುಬರುವುದು ೧೩೪೦ರ ತೆಂಕಕಾರಂದೂರು ಎಂಬಲ್ಲಿಯ ಶಾಸನದಲ್ಲಿ. ಹೊಯ್ಸಳ ರ ಆಳ್ವಿಕೆಯ ಅಧೀನದಲ್ಲಿದ್ದ ಇವರು ಮುಂದೆ ವಿಜಯನಗರ ದ ಆಡಳಿತವನ್ನು ಒಪ್ಪಿಕೊಂಡಿದ್ದರು ಎಂದು ತಿಳಿದುಬರುತ್ತದೆ.

ಇತಿಹಾಸ[ಬದಲಾಯಿಸಿ]

ಈಗ ತಿಳಿದಿರುವಂತೆ ೧೩೪೦ರ ಶಾಸನ ಈ ವಂಶಜರ ಬಗೆಗಿನ ಮೊದಲ ಉಲ್ಲೇಖ. ಅಲ್ಲಿಂದ ಮುಂದೆ ೧೭೫೦ರ ತನಕ ಸುಮಾರು ೧೩ಮಂದಿ ಅರಸರ ಹೆಸರುಗಳು ವಿವಿಧ ಶಾಸನಗಳಲ್ಲಿ ಉಲ್ಲೇಖಗೊಂಡಿವೆ. ಈ ಪೈಕಿ ೧೬೦೦ರಿಂದ ೧೬೨೦ರ ತನಕ ರಾಜ್ಯವನ್ನಾಳಿದ ತಿಮ್ಮಾಣ್ಣಾಜಿಲ ಹೆಸರುವಾಸಿಯಾಗಿದ್ದಾನೆ. ಇವನು ೧೬೦೪ರಲ್ಲಿ ವೇಣೂರಿನಲ್ಲಿ ೩೫ ಅಡಿ ಎತ್ತರದ ಬಾಹುಬಲಿಯ ಏಕಶಿಲಾ ವಿಗ್ರಹವನ್ನು ಸ್ಥಾಪಿಸಿದ್ದಾನೆ.ಕಾಲಾನಂತರ ಇವರು ತಮ್ಮ ರಾಜಧಾನಿಯನ್ನು ಸಮೀಪದ ಅಳದಂಗಡಿ ಎಂಬಲ್ಲಿಗೆ ಸ್ಥಳಾಂತರಿಸಿದರು.

ಅಚರಣೆಗಳು[ಬದಲಾಯಿಸಿ]

ಅಜಿಲರು ಜೈನ ಧರ್ಮಾವಲಂಬಿಗಳು.ಇವರಲ್ಲಿ ಅಳಿಯ ಸಂತಾನ ಪದ್ಧತಿ ರೂಢಿಯಲ್ಲಿತ್ತು.ಇವರು ಜೈನರಾಗಿದ್ದರೂ ಇವರ ಕುಲದೇವರು ಹಿಂದೂ ಧರ್ಮದ ಮಹಾಲಿಂಗೇಶ್ವರ.ಇವರು ವೀರಶೈವ ಧರ್ಮ ಕ್ಕೂ ತಕ್ಕ ಆಶ್ರಯ ಕೊಟ್ಟಿದ್ದರು,

ಇವನ್ನೂ ನೋಡಿ[ಬದಲಾಯಿಸಿ]

"https://kn.wikipedia.org/w/index.php?title=ಅಜಿಲರು&oldid=713936" ಇಂದ ಪಡೆಯಲ್ಪಟ್ಟಿದೆ